Tag: ICC Women’s World Cup

  • ಜೆಮಿಮಾ ಶತಕದ ಮಿಂಚು – ಭಾರತಕ್ಕೆ ವಿಶ್ವದಾಖಲೆಯ ಜಯ; 3ನೇ ಬಾರಿ ಮಹಿಳಾ ವಿಶ್ವಕಪ್ ಫೈನಲ್‌ಗೆ ಲಗ್ಗೆ!

    ಜೆಮಿಮಾ ಶತಕದ ಮಿಂಚು – ಭಾರತಕ್ಕೆ ವಿಶ್ವದಾಖಲೆಯ ಜಯ; 3ನೇ ಬಾರಿ ಮಹಿಳಾ ವಿಶ್ವಕಪ್ ಫೈನಲ್‌ಗೆ ಲಗ್ಗೆ!

    -‌ ಪಂದ್ಯ ಗೆಲ್ಲಿಸಿ ಮೈದಾನದಲ್ಲೇ ಕಣ್ಣೀರಿಟ್ಟ ರೋಡ್ರಿಗ್ಸ್‌

    ಮುಂಬೈ: ಜೆಮಿಮಾ ರೋಡ್ರಿಗ್ಸ್‌ ಅವರ ಅಜೇಯ ಶತಕ ಮತ್ತು ನಾಯಕಿ ಹರ್ಮನ್ ಪ್ರೀತ್ ಕೌರ್ ಅವರ ಜವಾಬ್ದಾರಿಯುತ ಅರ್ಧಶತಕದ ಬ್ಯಾಟಿಂಗ್‌ ನೆರವಿನಿಂದ ಭಾರತ ತಂಡ ಹಾಲಿ ವಿಶ್ವಚಾಂಪಿಯನ್ ಆಸ್ಟ್ರೇಲಿಯಾವನ್ನ 5 ವಿಕೆಟ್‌ಗಳಿಂದ ಸೋಲಿಸಿದೆ. ಈ ಗೆಲುವಿನೊಂದಿಗೆ 3ನೇ ಬಾರಿಗೆ ಐಸಿಸಿ ಮಹಿಳಾ ವಿಶ್ವಕಪ್‌ ಫೈನಲ್ ಪ್ರವೇಶಿಸಿದೆ. 2008ರಲ್ಲಿ ಭಾರತ ಮೊದಲ ಬಾರಿ ಫೈನಲ್‌ ಪ್ರವೇಶಿಸಿದಾಗ ಆಸೀಸ್‌ ವಿರುದ್ಧವೇ 98 ರನ್‌ಗಳಿಂದ ಸೋತಿತ್ತು. 2017ರಲ್ಲಿ ಇಂಗ್ಲೆಂಡ್‌ ವಿರುದ್ಧ 9 ರನ್‌ಗಳ ವಿರೋಚಿತ ಸೋಲು ಕಂಡಿತ್ತು. ಇದೀಗ ಸೆಮಿಸ್‌ನಲ್ಲಿ ಸೋಲಿಸಿ ಆಸೀಸ್‌ ತಂಡವನ್ನ ಮನೆಗೆ ಕಳುಹಿಸಿದೆ.

    ಈ ಮೂಲಕ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅನುಭವಿಸಿದ್ದ ಆಘಾತಕಾರಿ ಸೋಲಿಗೆ ಇದೇ ಟೂರ್ನಿಯಲ್ಲಿ ಭಾರತ ತಕ್ಕ ಉತ್ತರ ನೀಡಿದೆ. ನವೆಂಬರ್ 2ರಂದು ನಡೆಯುವ ಫೈನಲ್ ನಲ್ಲಿ ಭಾರತ ತಂಡ ಪ್ರಶಸ್ತಿಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣೆಸಬೇಕಿದೆ.

    ವಿಶ್ವದಾಖಲೆಯ ಜಯ
    ಗುರುವಾರ ನವಿಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 49.5 ಓವರ್ ಗಳಲ್ಲಿ 338 ರನ್ ಗಳಿಗೆ ಆಲೌಟ್ ಆಯಿತು. ಇದನ್ನು ಭಾರತ ತಂಡ ಕೇವಲ 5 ವಿಕೆಟ್ ಕಳೆದುಕೊಂಡು ಇನ್ನೂ 48.3 ಓವರ್‌ಗಳಲ್ಲೇ 341 ರನ್‌ ಗಳಿಸಿ ಗೆಲುವು ಸಾಧಿಸಿತು. ವಿಶ್ವಕಪ್ ಇತಿಹಾಸದಲ್ಲೇ ಅತಿ ದೊಡ್ಡ ಮೊತ್ತ ಚೇಸಿಂಗ್‌ ಮಾಡಿ ಗೆಲುವು ಸಾಧಿಸಿದ ಹೆಗ್ಗಳಿಕೆ ಇದೀಗ ಭಾರತದ ವನಿತೆಯರ ಪಾಲಾಗಿದೆ.

    ಕಠಿಣ ಗುರಿ ಬೆನ್ನಟ್ಟಿದ ಭಾರತ ತಂಡ ಆರಂಭಿಕ 2 ವಿಕೆಟ್‌ ಕಳೆದುಕೊಂಡು ಆಘಾತಕ್ಕೆ ಸಿಲುಕಿತ್ತು. ಆದರೆ, ಜೆಮಿಮಾ ರೊಡ್ರಿಗಸ್‌ (127*) ಹಾಗೂ ಹರ್ಮನ್‌ಪ್ರೀತ್‌ ಕೌರ್‌ (89 ರನ್‌) ಅವರ 167 ರನ್‌ಗಳ ದೊಡ್ಡ ಜೊತೆಯಾಟದ ತಂಡಕ್ಕೆ ಬಲ ನೀಡಿತು.

    ಜೆಮಿಮಾ ರೋರಿಂಗ್‌ ಶತಕ
    ಭಾರತ ತಂಡ, 13 ರನ್‌ ಇದ್ದಾಗ ಶಫಾಲಿ ವರ್ಮಾ ಹಾಗೂ 59 ರನ್‌ಗೆ ಸ್ಮೃತಿ ಮಂಧಾನಾ ಅವರ ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಆದರೆ, 3ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು ಕೊನೆಯವರೆಗೂ ಅಜೇಯರಾಗಿ ಹೋರಾಡಿದ ಜೆಮಿಮಾ ರೊಡ್ರಿಗ್ಸ್‌ 134 ಎಸೆತಗಳಲ್ಲಿ 14 ಬೌಂಡರಿಗಳೊಂದಿಗೆ 127* ರನ್‌ ಗಳಿಸಿ ಭಾರತ ತಂಡವನ್ನ ಗೆಲುವಿನ ದಡ ಸೇರಿಸಿದರು. ಅಲ್ಲದೇ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಜೊತೆಗೂಡಿ 167 ರನ್‌ಗಳ ನಿರ್ಣಾಯಕ ಜೊತೆಯಾಟ ನೀಡಿದರು. ಇದರೊಂದಿಗೆ ದೀಪ್ತಿ ಶರ್ಮಾ 24 ರನ್‌, ರಿಚಾ ಘೋಷ್‌ 26 ರನ್‌, ಅಮನ್‌ ಜೋತ್‌ ಕೌರ್‌ 15 ರನ್‌ ಕೊಡುಗೆ ನೀಡಿದರು.

    338 ರನ್‌ ಕಲೆ ಹಾಕಿದ್ದ ಆಸ್ಟ್ರೇಲಿಯಾ
    ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದ ಆಸ್ಟ್ರೇಲಿಯಾ ತಂಡ ದೊಡ್ಡ ಮೊತ್ತವನ್ನೇ ಕಲೆ ಹಾಕಿತ್ತು. ಫೋಬೆ ಲಿಚ್‌ಫೀಲ್ಡ್‌ 119 ರನ್‌, ಎಲಿಸ್‌ ಪೆರ್ರಿ 77 ರನ್‌ ಹಾಗೂ ಆಶ್ಲೆ ಗಾರ್ಡ್ನರ್ ಸ್ಫೋಟಕ 63 ರನ್‌ಗಳ ನೆರವಿನಿಂದ ಆಸೀಸ್‌ ವನಿತಾ ತಂಡ 49.5 ಓವರ್‌ಗಳಿಗೆ 338 ರನ್‌ ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಭಾರತ ಮಹಿಳಾ ತಂಡಕ್ಕೆ 339 ರನ್‌ಗಳ ಕಠಿಣ ಗುರಿ ನೀಡಿತ್ತು.

    ಸಂಕ್ಷಿಪ್ತ ಸ್ಕೋರ್
    ಆಸ್ಟ್ರೇಲಿಯಾ
    49.5 ಓವರ್ ಗಳಲ್ಲಿ 338/10, ಲಿಚ್ ಫೀಲ್ಡ್ 119(93), ಎಸಿಸ್ ಪೆರ್ರಿ 77(88), ಆ್ಯಶ್ಲೆ ಗಾರ್ಡನರ್ 63 (45), ಶ್ರೀಚರಣಿ 49ಕ್ಕೆ 2, ದೀಪ್ತಿ ಶರ್ಮಾ 73ಕ್ಕೆ 2

    ಭಾರತ ತಂಡ
    48.3 ಓವರ್ ಗಳಲ್ಲಿ 341/1, ಜೆಮಿಮಾ ರೋಡ್ರಿಗಸ್ ಅಜೇಯ 127 (134), ಹರ್ಮನ್ ಪ್ರೀತ್ ಕೌರ್ 89(88), ಕಿಮ್ ಗರ್ಥ್ 46ಕ್ಕೆ 2, ಅನಾಬೆಲ್ ಸದರ್ ಲ್ಯಾಂಡ್ 69ಕ್ಕೆ 2

  • ಹಲವು ವಿಶ್ವದಾಖಲೆ ಬರೆದ ಸ್ಮೃತಿ ಮಂದಾನ: ಕ್ಯಾಲೆಂಡರ್ ವರ್ಷದಲ್ಲಿ 1,000 ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟರ್!

    ಹಲವು ವಿಶ್ವದಾಖಲೆ ಬರೆದ ಸ್ಮೃತಿ ಮಂದಾನ: ಕ್ಯಾಲೆಂಡರ್ ವರ್ಷದಲ್ಲಿ 1,000 ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟರ್!

    ವಿಶಾಖಪಟ್ಟಣಂ: ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ (ICC Women’s World Cup) ಕ್ರಿಕೆಟ್‌  ಟೂರ್ನಿಯಲ್ಲಿಂದು ತನ್ನ 4ನೇ ಪಂದ್ಯವಾಡಿದ ಭಾರತ ಮಹಿಳಾ ತಂಡ, ಆಸ್ಟ್ರೇಲಿಯಾ ಮಹಿಳಾ ತಂಡದ ಬಿರುದ್ಧ ಭರ್ಜರಿ ಬ್ಯಾಟಿಂಗ್‌ ಮಾಡಿದೆ. 48.5 ಓವರ್‌ಗಳಲ್ಲಿ 330 ರನ್‌ ಗಳಿಸಿ, ಆಸೀಸ್‌ಗೆ 331 ರನ್‌ಗಳ ಬೃಹತ್‌ ಗುರಿ ನೀಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಟೀಂ ಇಂಡಿಯಾ ಪರ ಸ್ಮೃತಿ ಮಂದಾನ (Smriti Mandhana) ಹಲವು ವಿಶ್ವದಾಖಲೆಗಳನ್ನ ಬರೆದಿದ್ದಾರೆ.

    ಆರಂಭಿಕ ಆಟಗಾರ್ತಿಯಾಗಿ ಕಣಕ್ಕಿಳಿದ ಮಂದಾನ 66 ಎಸೆತಗಳಲ್ಲಿ 80 ರನ್‌ (3 ಸಿಕ್ಸರ್‌, 9 ಬೌಂಡರಿ) ಚಚ್ಚಿದರು. ಈ ಮೂಲಕ ಹಲವು ವಿಶ್ವದಾಖಲೆಗಳನ್ನ ಮುಡಿಗೇರಿಸಿಕೊಂಡರು. ಅಲ್ಲದೇ ಕ್ಯಾಲೆಂಡರ್‌ ವರ್ಷದಲ್ಲಿ 1,000 ರನ್‌ ಪೂರೈಸಿದ ವಿಶ್ವದ ಮೊದಲ ಮಹಿಳಾ ಬ್ಯಾಟರ್‌ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಇನ್ನ ಹಲವು ವಿಶ್ವದಾಖಲೆಗಳ ಬಗ್ಗೆ ನೋಡೋಣ…

    ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್ಸ್‌
    * 1,068 – ಸ್ಮೃತಿ ಮಂಧಾನ (ಭಾರತ), 18 ಇನ್ನಿಂಗ್ಸ್‌ – 2025
    * 970 – ಬೆಲಿಂಡಾ ಕ್ಲಾರ್ಕ್ (ಆಸ್ಟ್ರೇಲಿಯಾ), 14 ಇನ್ನಿಂಗ್ಸ್‌ – 1997
    * 882 – ಲಾರಾ ವೋಲ್ವಾರ್ಡ್ಟ್ (ದಕ್ಷಿಣ ಆಫ್ರಿಕಾ), 18 ಇನ್ನಿಂಗ್ಸ್‌ – 2022
    * 880 – ಡೆಬ್ಬಿ ಹಾಕ್ಲಿ (ನ್ಯೂಜಿಲೆಂಡ್), 16 ಇನ್ನಿಂಗ್ಸ್‌ – 1997
    * 853 – ಆಮಿ ಸ್ಯಾಟರ್ತ್‌ವೈಟ್ (ನ್ಯೂಜಿಲೆಂಡ್), 14 ಇನ್ನಿಂಗ್ಸ್‌ – 2016

    5,000 ರನ್ನರ್ಸ್‌ ಕ್ಲಬ್‌ಗೆ ಮಂದಾನ
    ಅಷ್ಟೇ ಅಲ್ಲದೇ ಮಹಿಳಾ ಏಕದಿನ ಪಂದ್ಯಗಳಲ್ಲಿ ಸ್ಮೃತಿ ಮಂಧಾನ ಕೂಡ 5,000 ರನ್ ಪೂರೈಸಿದರು. ಈ ಸಾಧನೆ ಮಾಡಿದ 2ನೇ ಭಾರತೀಯ ಮತ್ತು ವಿಶ್ವದ 5ನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಸ್ಮೃತಿ ಕೇವಲ 112 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ಸಾಧಿಸಿದರು. 211 ಇನ್ನಿಂಗ್ಸ್‌ಗಳಲ್ಲಿ 7,805 ರನ್‌ ಗಳಿಸಿರುವ ಟೀಂ ಇಂಡಿಯಾದ ಮಾಜಿ ನಾಯಕಿ ಮಿಥಾಲಿ ರಾಜ್‌ ಮಹಿಳಾ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್‌ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

    ಮಹಿಳಾ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರು
    * 7,805 – ಮಿಥಾಲಿ ರಾಜ್ (ಭಾರತ), 211 ಇನ್ನಿಂಗ್ಸ್‌
    * 5,992 – ಷಾರ್ಲೆಟ್ ಎಡ್ವರ್ಡ್ಸ್ (ಇಂಗ್ಲೆಂಡ್), 180 ಇನ್ನಿಂಗ್ಸ್‌
    * 5,925 – ಸುಜಿ ಬೇಟ್ಸ್ (ನ್ಯೂಜಿಲೆಂಡ್), 167 ಇನ್ನಿಂಗ್ಸ್‌
    * 5.873 – ಸ್ಟೆಫಾನಿ ಟೇಲರ್ (ವೆಸ್ಟ್ ಇಂಡೀಸ್), 163 ಇನ್ನಿಂಗ್ಸ್‌
    * 5,022 – ಸ್ಮೃತಿ ಮಂಧಾನ (ಭಾರತ), 112 ಇನ್ನಿಂಗ್ಸ್‌

  • ಮಹಿಳಾ ವಿಶ್ವಕಪ್‌ನಲ್ಲೂ ನೋ ಹ್ಯಾಂಡ್‌ಶೇಕ್‌ – ಪಾಕ್‌ ತಂಡಕ್ಕೆ ಮತ್ತೆ ಮುಖಭಂಗ

    ಮಹಿಳಾ ವಿಶ್ವಕಪ್‌ನಲ್ಲೂ ನೋ ಹ್ಯಾಂಡ್‌ಶೇಕ್‌ – ಪಾಕ್‌ ತಂಡಕ್ಕೆ ಮತ್ತೆ ಮುಖಭಂಗ

    ಕೊಲಂಬೊ: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಪುರುಷರ ಟಿ20 ಏಷ್ಯಾಕಪ್‌ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳಲ್ಲಿ ಸಾಕಷ್ಟು ವಿವಾದಗಳು ಕಂಡುಬಂದಿತ್ತು. ಆದ್ರೆ ಟೀಂ ಇಂಡಿಯಾ (Team India) ಲೀಗ್‌, ಸೂಪರ್‌-4 ಹಾಗೂ ಫೈನಲ್‌ನಲ್ಲಿ ಪಾಕ್‌ಗೆ ಸೋಲುಣಿಸುವ ಮೂಲಕ ತಿರುಗೇಟು ಕೊಟ್ಟಿತು. ಇದೀಗ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಗೂ ವಿವಾದ ಕಾಲಿಟ್ಟಿದೆ.

    ಈ ಬಾರಿ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿ ಭಾರತದ ಆತಿಥ್ಯದಲ್ಲೇ ಇದ್ದರೂ, ಪಾಕ್‌ ಜೊತೆಗಿನ ಸಂಘರ್ಷದಿಂದಾಗಿ ಶ್ರೀಲಂಕಾದಲ್ಲಿ ನಡೆಸಲಾಗುತ್ತಿದೆ. ಇಂದು ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ಮತ್ತು ಪಾಕ್‌ ಮುಖಾಮುಖಿಯಾಗಿವೆ. ಟಾಸ್‌ ಗೆದ್ದ ಪಾಕ್‌ ನಾಯಕಿ ಫಾತಿಮಾ ಸನಾ (Fatima Sana) ಮೊದಲು ಫೀಲ್ಡಿಂಗ್‌ ಆಯ್ದುಕೊಂಡಿದ್ದು, ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಭಾರತಕ್ಕೆ ಬಿಟ್ಟುಕೊಟ್ಟಿದ್ದಾರೆ. ಆದ್ರೆ ಟಾಸ್‌ ವೇಳೆ ಟೀಂ ಇಂಡಿಯಾ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ (Harmanpreet Kaur) ಪಾಕ್‌ ನಾಯಕಿಯ ಕೈಕುಲುಕದೇ ಹಿಂದೆ ಸರಿದಿದ್ದಾರೆ. ಇದು ಪಾಕ್‌ ತಂಡಕ್ಕೆ ಮತ್ತೆ ಮುಜುಗರ ತರಿಸಿದೆ.

    ಟೀಂ ಇಂಡಿಯಾ ಪ್ಲೇಯಿಂಗ್‌-11
    ಪ್ರತೀಕಾ ರಾವಲ್, ಸ್ಮೃತಿ ಮಂಧಾನ, ಹರ್ಲಿನ್‌ ಡಿಯೋಲ್‌, ಹರ್ಮನ್‌ ಪ್ರೀತ್‌ ಕೌರ್‌ (ನಾಯಕಿ), ಜೆಮಿಮಾ ರೊಡ್ರಿಗ್ಸ್‌, ದೀಪ್ತಿ ಶರ್ಮಾ, ರಿಚಾ ಘೋಷ್‌, ಸ್ನೇಹ್‌ ರಾಣಾ, ರೇಣುಕಾ ಸಿಂಗ್‌, ಕ್ರಾಂತಿ ಗೌಡ್‌, ಶ್ರೀ ಚಾರಣಿ.

    ಪಾಕ್‌ ಪ್ಲೇಯಿಂಗ್‌-11
    ಮುನಿಬಾ ಅಲಿ, ಸದಾಫ್ ಶಮಾಸ್, ಸಿದ್ರ್ ಅಮೀನ್, ರಮೆನ್ ಶಮೀಮ್, ಆಲಿಯಾ ರಿಯಾಜ್, ಸಿದ್ಧ ನವಾಜ್, ಫಾತಿಮಾ ಸನಾ (ನಾಯಕಿ), ನಟಾಲಿಯಾ ಪರ್ವೈಜ್, ಡಯಾನಾ ಬೇಗ್, ನಶ್ರ್ ಸಂಧು, ಸಾಲಿಯಾ ಇಕ್ಬಾಲ್.

  • ನನ್ನ ದೇಶ ನನ್ನ ಕಣ್ಣೀರು ನೋಡಬಾರದು – ವಿಶ್ವಕಪ್ ಕನಸು ಭಗ್ನಗೊಂಡಿದ್ದಕ್ಕೆ ಕಣ್ಣೀರಿಟ್ಟ ಕೌರ್

    ನನ್ನ ದೇಶ ನನ್ನ ಕಣ್ಣೀರು ನೋಡಬಾರದು – ವಿಶ್ವಕಪ್ ಕನಸು ಭಗ್ನಗೊಂಡಿದ್ದಕ್ಕೆ ಕಣ್ಣೀರಿಟ್ಟ ಕೌರ್

    – ಕಣ್ಣೀರು ಮರೆಮಾಚಲು ಕನ್ನಡಕ ಧರಿಸಿ ಮಾತನಾಡಿದ ನಾಯಕಿ
    – ಮತ್ತೊಮ್ಮೆ ನನ್ನ ದೇಶ ಸೋಲಲು ಬಿಡುವುದಿಲ್ಲ

    ಕೇಪ್‌ಟೌನ್: ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ (ICC Womens World Cup) ಸೆಮಿಫೈನಲ್ ಪಂದ್ಯದ ವಿರೋಚಿತ ಸೋಲಿನ ಬಳಿಕ ಟೀಂ ಇಂಡಿಯಾ (Team India) ನಾಯಕಿ ಹರ್ಮನ್ ಪ್ರೀತ್ ಕೌರ್ (Harmanpreet Kaur) ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಪಂದ್ಯದ ಸೋಲಿನ ಸುಳಿವು ಕಾಣುತ್ತಿದ್ದಂತೆ ಮಾಜಿ ನಾಯಕಿ ಅಂಜುಂ ಚೋಪ್ರಾ ಅವರನ್ನು ಬಿಗಿದಪ್ಪಿಕೊಂಡು ಅತ್ತಿದ್ದಾರೆ. ಈ ವೇಳೆ ಅಂಜುಂ ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ.

    ಹೌದು, ಗುರುವಾರ ನಡೆದ ಮಹಿಳಾ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಆಸ್ಟ್ರೇಲಿಯಾ (Australia) ವಿರುದ್ಧ 5 ರನ್‌ಗಳ ವಿರೋಚಿತ ಸೋಲು ಕಂಡಿತು. ಇದರಿಂದ ಮೈದಾನದಲ್ಲಿ ಬ್ಯಾಟ್ ಬಿಸಾಡಿ ಬೇಸರ ಹೊರಾಕಿದ ಕೌರ್ ಮೈದಾನದಿಂದ ಹೊರಬರುತ್ತಿದ್ದಂತೆ ಕಣ್ಣೀರಿಟ್ಟಿದ್ದಾರೆ. ಪಂದ್ಯದ ಸೋಲಿನ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ, ಕೌರ್ ತಮ್ಮ ಕಣ್ಣೀರನ್ನು ಮರೆಮಾಚಲು ಕೂಲಿಂಗ್ ಗ್ಲಾಸ್ ಧರಿಸಿಯೇ ಮಾತನಾಡಿದ್ದಾರೆ.

    ಈ ವೇಳೆ ಕಾಮೆಂಟೇಟರ್ ಏಕೆ ಅಳುತ್ತಿದ್ದೀರಿ? ಎಂದು ಪ್ರಶ್ನಿಸಿದಾಗ ಹರ್ಮನ್‌ಪ್ರೀತ್ ತುಂಬಾ ಭಾವುಕರಾದರು. ತಾನು ಅಳುವುದನ್ನು ನನ್ನ ದೇಶ ನೋಡಬಾರದೆಂದು ಬಯಸುತ್ತೇನೆ. ಹಾಗಾಗಿ ನಾನು ಈ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಬಂದಿದ್ದೇನೆ ಎಂದು ನಾಯಕಿ ಹೇಳಿದ್ದಾರೆ. ಇದನ್ನೂ ಓದಿ: ಅಂದು ಧೋನಿ, ಇಂದು ಕೌರ್ – ವಿಶ್ವಕಪ್ ಕನಸು ಭಗ್ನಗೊಳಿಸಿದ ಆ ಒಂದು ರನೌಟ್

    ಮುಂದುವರಿದು, ನಾವು ಇನ್ನಷ್ಟು ಸುಧಾರಣೆ ಕಂಡುಕೊಳ್ಳುತ್ತೇವೆ. ಮತ್ತೊಮ್ಮೆ ಈ ರೀತಿ ಸೋಲಲು ಅನುವು ಮಾಡಿಕೊಡುವುದಿಲ್ಲ. ಆದರೆ ಈ ಪಂದ್ಯದಲ್ಲಿ ನಾವು ಸೋಲುತ್ತೇವೆಂದು ನಾನು ಖಂಡಿತವಾಗಿಯೂ ಭಾವಿಸಿರಲಿಲ್ಲ. ನಾನು ರನೌಟ್ ಆದ ಹಾದಿ ನೋಡುತ್ತಿದ್ದರೇ, ಇದಕ್ಕಿಂತ ದುರಾದೃಷ್ಟ ಬೇರೆ ಯಾವುದೂ ಇಲ್ಲ ಎಂದು ಭಾವಿಸುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಧಿವೇಶನ ಮುಗಿಸಿ ಸಿಸಿಎಲ್ ಪಂದ್ಯ ವೀಕ್ಷಣೆಗೆ ಬಂದ ಸಿಎಂ ಬೊಮ್ಮಾಯಿ

    Harmanpreet Kaur 2

    ಗುರುವಾರ ನಡೆದ ಮಹಿಳಾ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ (Australia) ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 172 ರನ್‌ಗಳಿಸಿತ್ತು. 173 ರನ್‌ಗಳ ಗುರಿ ಬೆನ್ನತ್ತಿದ ಭಾರತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 167 ರನ್‌ಗಳಿಸಲಷ್ಟೇ ಸಾಧ್ಯವಾಗಿ ಸೋಲೊಪ್ಪಿಕೊಂಡಿತು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಂದು ಧೋನಿ, ಇಂದು ಕೌರ್ – ವಿಶ್ವಕಪ್ ಕನಸು ಭಗ್ನಗೊಳಿಸಿದ ಆ ಒಂದು ರನೌಟ್

    ಅಂದು ಧೋನಿ, ಇಂದು ಕೌರ್ – ವಿಶ್ವಕಪ್ ಕನಸು ಭಗ್ನಗೊಳಿಸಿದ ಆ ಒಂದು ರನೌಟ್

    ಕೇಪ್‌ಟೌನ್: ಮಹಿಳಾ ವಿಶ್ವಕಪ್ ಟೂರ್ನಿಯ (ICC Womens World Cup) ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನಾಯಕಿ ಹರ್ಮನ್ ಪ್ರೀತ್‌ಕೌರ್ (Harmanpreet Kaur) ರನೌಟ್ ಭಾರೀ ಸದ್ದು ಮಾಡ್ತಿದೆ.

    ಹೌದು. ಸರಿಯಾಗಿ ಮೂರು ವರ್ಷಗಳ ಹಿಂದೆ ಇಂಗ್ಲೆಂಡ್ ನಲ್ಲಿ (England) ನಡೆದ ಏಕದಿನ ವಿಶ್ವಕಪ್ ವೇಳೆ ನೂಜಿಲ್ಯಾಂಡ್ (New Zealand) ವಿರುದ್ಧ ನಡೆದ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಮಾಜಿ ನಾಯಕ ಧೋನಿ (MS Dhoni) ರನೌಟ್ ಆಗಿದ್ದರಿಂದ ಭಾರತದ ವಿಶ್ವಕಪ್ ಕನಸು ಭಗ್ನಗೊಂಡಿತ್ತು.

    ಇದೀಗ 2023ರ ಮಹಿಳಾ ವಿಶ್ವಕಪ್ ಪಂದ್ಯದಲ್ಲಿಯೂ ಹರ್ಮನ್‌ಪ್ರೀತ್ ಕೌರ್ ರನೌಟ್ ಮತ್ತೆ ಎಂ.ಎಸ್ ಧೋನಿ ಅವರನ್ನ ನೆನಪಿಸಿದೆ. ಇದನ್ನೂ ಓದಿ: ವಿಶ್ವಕಪ್‌ ಕನಸು ಭಗ್ನ; ಭಾರತ ಮನೆಗೆ – ಆಸ್ಟ್ರೇಲಿಯಾ ಫೈನಲ್‌ಗೆ

    2019ರಲ್ಲಿ ನಡೆದ ಪುರುಷರ ಏಕದಿನ ವಿಶ್ವ ಕಪ್ (ODI WoldCup) ಸೆಮಿಫೈನಲ್ ಪಂದ್ಯದಲ್ಲಿ ಕೊನೆಯ 10 ಎಸೆತಗಳಲ್ಲಿ 25 ರನ್ ಬೇಕಿದ್ದಾಗಲೇ ಮಾರ್ಟಿನ್ ಗಪ್ಟಿಲ್ ಎಸೆದ ಡೈರೆಕ್ಟ್ ವಿಕೆಟ್ ಥ್ರೋ ಗೆ ಧೋನಿ ರನೌಟ್ ಆಗಿದ್ದರು. ಈ ಮೂಲಕ ಭಾರತದ ವಿಶ್ವಕಪ್ ಕನಸು ಭಗ್ನಗೊಂಡಿತ್ತು. ಅಲ್ಲದೇ ಅದು ಧೋನಿ ಅವರ ಕ್ರಿಕೆಟ್ ವೃತ್ತಿ ಜೀವನದ ಕೊನೆಯ ವಿಶ್ವಕಪ್ ಟೂರ್ನಿಯೂ ಆಗಿತ್ತು.

    ಇದೀಗ ಮಹಿಳಾ ಕ್ರಿಕೆಟ್‌ನಲ್ಲಿಯೂ ಭಾರತಕ್ಕೆ ಇದೇ ರೀತಿಯ ನಿರಾಸೆಯಾಗಿದೆ. ಹರ್ಮನ್‌ಪ್ರೀತ್ ಕೌರ್ ರನೌಟ್ ಟೀಂ ಇಂಡಿಯಾಗೆ ಮಾತ್ರಬಲ್ಲದೇ ಕ್ರಿಕೆಟ್ ಪ್ರೇಮಿಗಳಿಗೂ ಭಾರೀ ಆಘಾತವನ್ನುಂಟುಮಾಡಿದೆ. ಇದೀಗ ನೆಟ್ಟಿಗರು ಧೋನಿ ಮತ್ತು ಹರ್ಮನ್ ಪ್ರೀತ್ ಕೌರ್ ರನೌಟ್ ಆದ ವೀಡಿಯೋವನ್ನ ಜಾಲತಾಣದಲ್ಲಿ ಹಂಚಿಕೊಂಡು ಭಾವುಕರಾಗಿದ್ದಾರೆ. ಇದನ್ನೂ ಓದಿ: ಸೂರ್ಯಕುಮಾರ್ ದಂಪತಿ ಟೆಂಪಲ್ ರನ್ – ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಕ್ರಿಕೆಟಿಗ

    ಗುರುವಾರ ನಡೆದ ಮಹಿಳಾ ವಿಶ್ವಕಪ್ ಟೂರ್ನಿಯ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಟಾಸ್‌ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 172 ರನ್‌ಗಳಿಸಿತ್ತು. 173 ರನ್‌ಗಳ ಗುರಿ ಬೆನ್ನತ್ತಿದ ಭಾರತ ಆರಂಭದಲ್ಲೇ ವಿಕೆಟ್‌ಗಳನ್ನು ಕಳೆದುಕೊಂಡು ಆಘಾತ ಎದುರಿಸಿತು. ಮಧ್ಯಮ ಕ್ರಮಾಂಕದಲ್ಲಿ ಜೊತೆಯಾದ ಜೆಮಿಮಾ ರೋಡ್ರಿಗಸ್ ಹಾಗೂ ನಾಯಕಿ ಹರ್ಮನ್ ಪ್ರೀತ್‌ಕೌರ್ ಬೌಂಡರಿಗಳ ಸುರಿಮಳೆಯೊಂದಿಗೆ ಭರ್ಜರಿ ಬ್ಯಾಟಿಂಗ್ ನಡೆಸಿದ್ದರು.

    52 ರನ್‌ಗಳಿಸಿ ಆಟವಾಡುತ್ತಿದ್ದ ಹರ್ಮನ್ ಪ್ರೀತ್‌ಕೌರ್ 14.4ನೇ ಓವರ್‌ನಲ್ಲಿ ಎರಡು ರನ್ ಕದಿಯಲು ಯತ್ನಿಸಿ, ರನೌಟ್‌ಗೆ ತುತ್ತಾದರು. ಈ ಒಂದು ರನೌಟ್ ವಿಶ್ವಕಪ್ ಕನಸನ್ನು ಭಗ್ನಗೊಳಿಸಿತು. ವಿಕೆಟ್ ಕಳೆದುಕೊಂಡು ಭಾವುಕರಾದ ಕೌರ್ ಮೈದಾನದಲ್ಲೇ ಬ್ಯಾಟ್ ಬಿಸಾಡಿದರು, ಬಳಿಕ ಅಸಮಾಧಾನದಿಂದಲೇ ಹೊರನಡೆದರು.

    2017ರಲ್ಲಿಯೂ ಮಹಿಳಾ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಮಾಜಿ ನಾಯಕಿ ಮಿಥಾಲಿ ರಾಜ್ ಇದೇ ರೀತಿ ರನೌಟ್‌ಗೆ ತುತ್ತಾಗಿದ್ದರು. ಆದಾಗ್ಯೂ ಭಾರತ ಅಂದು 186 ರನ್‌ಗಳ ಭರ್ಜರಿ ಗೆಲುವಿನೊಂದಿಗೆ ಫೈನಲ್ ಪ್ರವೇಶಿಸಿತ್ತು. ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿತ್ತು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿಶ್ವಕಪ್‌ ಕನಸು ಭಗ್ನ; ಭಾರತ ಮನೆಗೆ – ಆಸ್ಟ್ರೇಲಿಯಾ ಫೈನಲ್‌ಗೆ

    ವಿಶ್ವಕಪ್‌ ಕನಸು ಭಗ್ನ; ಭಾರತ ಮನೆಗೆ – ಆಸ್ಟ್ರೇಲಿಯಾ ಫೈನಲ್‌ಗೆ

    ಕೇಪ್‌ಟೌನ್‌: ಮಹಿಳಾ ಟಿ20 ವಿಶ್ವಕಪ್​ ಟೂರ್ನಿಯ (ICC Womens World Cup) ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಭಾರತದ (India) ವಿರುದ್ಧ ಆಸ್ಟ್ರೇಲಿಯಾ (Australia Women) ಮಹಿಳಾ ತಂಡ 5 ರನ್​ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡ ಮಹಿಳಾ ಟಿ20 ವಿಶ್ವಕಪ್​ ಫೈನಲ್​ಗೆ ಪ್ರವೇಶಿಸಿದೆ. ಇದರಿಂದ ಮತ್ತೆ ಭಾರತದ ವಿಶ್ವಕಪ್‌ ಕನಸು ಭಗ್ನಗೊಂಡಿದೆ.

    ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 4 ವಿಕೆಟ್‌ಗೆ 172 ರನ್‌ಗಳಿಸಿತ್ತು. 173 ರನ್‌ಗಳ ಕಠಿಣ ಗುರಿ ಪಡೆದ ಭಾರತ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 167 ರನ್‌ಗಳಿಸಿ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ಸೂರ್ಯಕುಮಾರ್ ದಂಪತಿ ಟೆಂಪಲ್ ರನ್ – ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಕ್ರಿಕೆಟಿಗ

    ಆರಂಭಿಕರಾದ ಶಫಾಲಿ ವರ್ಮಾ, ಸ್ಮೃತಿ ಮಂದಾನ ಹಾಗೂ ಯಾಸ್ತಿಕ ಭಾಟಿಯಾ ಉತ್ತಮ ಶುಭಾರಂಭ ನೀಡುವಲ್ಲಿ ವಿಫಲರಾದರು. ಶಫಾಲಿ 9 ರನ್‌, ಮಂದಾನ 2, ಭಾಟಿಯಾ 4 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಜೆಮಿಮಾ ರೊಡ್ರಿಗಸ್‌ (Jemimah Rodrigues), ಹರ್ಮನ್‌ ಪ್ರೀತ್‌ ಕೌರ್‌ (Harmanpreet Kaur) ಭರ್ಜರಿ ಬ್ಯಾಟಿಂಗ್‌ ಮೂಲಕ ತಂಡಕ್ಕೆ ನೆರವಾದರು. ರೊಡ್ರಿಗಸ್‌ 24 ಎಸೆತಗಳಲ್ಲಿ ಭರ್ಜರಿ 43 (6 ಬೌಂಡರಿ) ಚಚ್ಚಿದರೆ, ಕೌರ್‌ 34 ಎಸೆತಗಳಲ್ಲಿ 52 ರನ್‌ (6 ಬೌಂಡರಿ, 1 ಸಿಕ್ಸರ್‌) ಬಾರಿಸಿ ಆಸ್ಟ್ರೇಲಿಯಾ ಬೌಲರ್‌ಗಳ ಬೆಂಡೆತ್ತಿದರು. ನಂತರ ಆಸ್ಟ್ರೇಲಿಯಾ ಮಹಿಳಾ ಮಣಿಗಳು ಇವರಿಬ್ಬರ ಆಟಕ್ಕೆ ಬ್ರೇಕ್‌ ಹಾಕಿದರು.

    ನಂತರ ಕ್ರೀಸ್‌ಗಿಳಿದ ರಿಚಾ ಘೋಷ್‌ 14 ರನ್‌, ಸ್ನೇಹ ರಾಣಾ 11 ರನ್‌ ಗಳಿಸಿದರೆ ರಾಧಾ ಯಾದವ್‌ ಶೂನ್ಯಕ್ಕೆ ನಿರ್ಗಮಿಸಿದರು. ದೀಪ್ತಿ ಶರ್ಮಾ 20 ರನ್‌ ಹಾಗೂ ಶಿಖಾ ಪಾಂಡೆ 1 ರನ್‌ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 167 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಇದನ್ನೂ ಓದಿ: ರೋಚಕ ಜಯದೊಂದಿಗೆ ಸೆಮಿಫೈನಲ್‌ಗೆ ಭರ್ಜರಿ ಎಂಟ್ರಿ ಕೊಟ್ಟ ಭಾರತ

    ಇದಕ್ಕೂ ಮುನ್ನ ಬ್ಯಾಟಿಂಗ್‌ಮಾಡಿದ ಆಸ್ಟ್ರೇಲಿಯಾ ಮಹಿಳಾ ತಂಡ ಉತ್ತಮ ಶುಭಾರಂಭ ಪಡೆದುಕೊಂಡಿತು. ಇನಿಂಗ್ಸ್ ಆರಂಭಿಸಿದ ಅಲಿಸ್ಸಾ ಹೀಲಿ ಮತ್ತು ಬೆತ್‌ ಮೂನಿ ಮೊದಲ ವಿಕೆಟ್‌ಗೆ 52 ರನ್‌ಗಳ ಜೊತೆಯಾಟವಾಡಿದರು. ಹೀಲಿ 25 ರನ್‌ಗಳಿಸಿದ್ರೆ, ಬೆತ್‌ ಮೂನಿ (Beth Mooney) 37 ಎಸೆತಗಳಲ್ಲಿ 54 ರನ್‌ ಚಚ್ಚಿ ಪೆವಿಲಿಯನ್‌ಗೆ ಮರಳಿದರು. ನಂತರ ಟೀಂ ಇಂಡಿಯಾ ಬೌಲರ್‌ಗಳು ಬಿಗಿ ಹಿಡಿತದಲ್ಲಿ ಆಸ್ಟ್ರೇಲಿಯಾ ತಂಡವನ್ನು ಕಟ್ಟಿಹಾಕಲು ಪ್ರಯತ್ನಿಸಿದ್ದರು.

    ನಂತರ 14 ಓವರ್‌ಗಳಲ್ಲಿ 2 ವಿಕೆಟ್‌ಗೆ 99 ರನ್‌ಗಳಿಸಿದ್ದ ಆಸ್ಟ್ರೇಲಿಯಾಗೆ ಲ್ಯಾನಿಂಗ್‌ ಹಾಗೂ ಆಶ್ಲೇ ಗಾರ್ಡ್ನರ್ (Ashleigh Gardner) ನೆರವಾದರು. ಈ ಜೋಡಿ ಮುರಿಯದ 3ನೇ ವಿಕೆಟ್‌ಗೆ 36 ಎಸೆತಗಳಲ್ಲಿ 53 ರನ್‌ ಕಲೆ ಹಾಕಿತು. ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್‌ಗೆ ಮುಂದಾದ ಆಶ್ಲೆ 18 ಎಸೆತಗಳಲ್ಲಿ 31 ರನ್‌ ಸಿಡಿಸಿದರು. ಕೊನೆವರೆಗೂ ಜವಾಬ್ದಾರಿಯುತ ಬ್ಯಾಟಿಂಗ್‌ ಮಾಡಿದ ಮೆಗ್‌ ಲ್ಯಾನಿಂಗ್‌ 34 ಎಸೆತಗಳಲ್ಲಿ ಅಜೇಯ 49 ರನ್ ಕಲೆಹಾಕಿದರು. ಅಂತಿಮವಾಗಿ ಆಸ್ಟ್ರೇಲಿಯಾ 4 ವಿಕೆಟ್‌ ಕಳೆದುಕೊಂಡು 172 ರನ್‌ ಪೇರಿಸಿತು.

    ಭಾರತ ಪರ ಶಿಖಾ ಪಾಂಡೆ ಎರಡು ಹಾಗೂ ರಾಧಾ ಯಾದವ್‌, ದೀಪ್ತಿ ಶರ್ಮಾ ತಲಾ ಒಂದೊಂದು ವಿಕೆಟ್‌ ಪಡೆದರು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿಶ್ವಕಪ್‍ನಲ್ಲಿ ಅತೀ ಹೆಚ್ಚು ವಿಕೆಟ್ – ದಾಖಲೆ ಸರಿಗಟ್ಟಿದ ಜೂಲನ್ ಗೋಸ್ವಾಮಿ

    ವಿಶ್ವಕಪ್‍ನಲ್ಲಿ ಅತೀ ಹೆಚ್ಚು ವಿಕೆಟ್ – ದಾಖಲೆ ಸರಿಗಟ್ಟಿದ ಜೂಲನ್ ಗೋಸ್ವಾಮಿ

    ನವದೆಹಲಿ: ಭಾರತದ ಅನುಭವಿ ವೇಗಿ ಜೂಲನ್ ಗೋಸ್ವಾಮಿ ಐಸಿಸಿ ಮಹಿಳಾ ವಿಶ್ವಕಪ್‍ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಸರಿಗಟ್ಟಿದ್ದಾರೆ.

    ಹ್ಯಾಮಿಲ್ಟನ್‍ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2022ರಲ್ಲಿ ನ್ಯೂಜಿಲೆಂಡ್ ವಿರುದ್ಧ ಈ ಸಾಧನೆ ಮಾಡಿದರು. ನ್ಯೂಜಿಲೆಂಡ್‍ನ ವಿರುದ್ಧ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ತಂಡದ ಕೇಟಿ ಮಾರ್ಟಿನ್ ಅವರ ವಿಕೆಟ್ ಪಡೆಯುವುದರ ಮೂಲಕ ಮಹಿಳಾ ವಿಶ್ವಕಪ್ ಇತಿಹಾಸದಲ್ಲಿ 39 ವಿಕೆಟ್ ಪಡೆದ ಸಾಧನೆ ನಿರ್ಮಿಸಿದರು. ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಶ್ರೀಶಾಂತ್‌ ವಿದಾಯ

    ಈ ಸಾಧನೆಯೊಂದಿಗೆ ಅವರು 1982 ರಿಂದ 1988 ರವರೆಗೆ ಆಸ್ಟ್ರೇಲಿಯಾದ ಲಿನ್ ಫುಲ್‍ಸ್ಟನ್ ಜೊತೆ ಅಗ್ರಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಐಪಿಎಲ್‍ನ ಸಿಕ್ಸರ್ ಕಿಂಗ್ಸ್

    ಪಾಕಿಸ್ತಾನದ ವಿರುದ್ಧ 26 ರನ್‍ಗಳನ್ನು ನೀಡಿ ಜೂಲನ್ 2 ವಿಕೆಟ್‍ಗಳನ್ನು ಪಡೆದಿದ್ದರು. ಎರಡು ದಶಕಗಳ ಕಾಲದ ತಮ್ಮ ವೃತ್ತಿಜೀವನದಲ್ಲಿ ಅವರು 2005 ರಿಂದ ಐದು ಮಹಿಳಾ ಕ್ರಿಕೆಟ್ ವಿಶ್ವಕಪ್‍ಗಳಲ್ಲಿ ಆಡಿ 39 ವಿಕೆಟ್ ಪಡೆದಿದ್ದಾರೆ.

  • ಕೊಹ್ಲಿ ಸೆಂಚುರಿ ದಾಖಲೆಯನ್ನೂ ಮುರಿದ್ಳು!

    ಕೊಹ್ಲಿ ಸೆಂಚುರಿ ದಾಖಲೆಯನ್ನೂ ಮುರಿದ್ಳು!

    ನವದೆಹಲಿ: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ದಾಖಲೆಯನ್ನು ಮಹಿಳೆಯೊಬ್ಬಳು ಮುರಿದಿದ್ದಾಳೆ ಎಂದರೆ ನೀವು ನಂಬ್ತೀರಾ..? ಹೌದು, ಟೀಂ ಇಂಡಿಯಾದ ಕೊಹ್ಲಿ, ದಕ್ಷಿಣ ಆಫ್ರಿಕಾದ ಹಶೀಂ ಆಮ್ಲ ದಾಖಲೆ ಧೂಳೀಪಟವಾಗಿದೆ.

    ನಾವೂ ಪುರುಷರಿಗಿಂತ ಯಾವುದರಲ್ಲೂ ಕಮ್ಮಿಯಿಲ್ಲ ಎಂಬಂತೆ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ಆಟಗಾರ್ತಿ ಮೆಗ್ ಲ್ಯಾನ್ನಿಂಗ್ ಅತ್ಯಂತ ಕಡಿಮೆ ಇನ್ನಿಂಗ್ಸ್‍ನಲ್ಲಿ 11 ಶತಕಗಳನ್ನು ಬಾರಿಸುವ ಮೂಲಕ ಏಕದಿನ ಪಂದ್ಯಗಳಲ್ಲಿ ದಾಖಲೆ ಬರೆದಿದ್ದಾರೆ.

    2017ರ ಐಸಿಸಿ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಶ್ರೀಲಂಕಾದ 258 ಮೊತ್ತವನ್ನ ಬೆನ್ನಟ್ಟಿ 8 ವಿಕೆಟ್‍ಗಳ ಭರ್ಜರಿ ಜಯ ಗಳಿಸಿತು. ಈ ಪಂದ್ಯದಲ್ಲಿ ಮೆಗ್ ಲ್ಯಾನ್ನಿಂಗ್ ಏಕದಿನ ಪಂದ್ಯಗಳಲ್ಲಿನ 11ನೇ ಸೆಂಚುರಿ ಬಾರಿಸಿ ದಾಖಲೆ ಬರೆದರು.

    ಆಸ್ಟ್ರೇಲಿಯಾ ತಂಡದ ನಾಯಕಿಯಾದ ಲ್ಯಾನ್ನಿಂಗ್ 59 ಇನ್ನಿಂಗ್ಸ್ ನಲ್ಲಿ 11 ಸೆಂಚುರಿ ಬಾರಿಸಿದ್ದು, ಪುರುಷ ಕ್ರಿಕೆಟ್ ಆಟಗಾರರಾದ ಹಶೀಮ್ ಅಮ್ಲಾ, ಕ್ವಿಂಟನ್ ಡಿ ಕಾಕ್ ಹಾಗೂ ಟೀಂ ಇಂಡಿಯಾ ನಾಯಕ ಕೊಹ್ಲಿ ಅವರ ದಾಖಲೆಯನ್ನ ಮುರಿದಿದ್ದಾರೆ. ಅಮ್ಲಾ 64 ಇನ್ನಿಂಗ್ಸ್‍ನಲ್ಲಿ 11 ಸೆಂಚುರಿ ಬಾರಿಸಿದ್ದರು. ಡಿ ಕಾಕ್ 65 ಇನ್ನಿಂಗ್ಸ್ ಹಾಗೂ ವಿರಾಟ್ ಕೊಹ್ಲಿ 82 ಇನ್ನಿಂಗ್ಸ್‍ನಲ್ಲಿ 11 ಶತಕಗಳನ್ನ ಬಾರಿಸಿದ್ದರು.

    ಮತ್ತೊಂದು ವಿಶೇಷತೆ ಅಂದ್ರೆ ಲ್ಯಾನ್ನಿಂಗ್ ಈ 11 ಶತಕಗಳಲ್ಲಿ 8 ಶತಕಗಳನ್ನ ಎದುರಾಳಿ ತಂಡದ ಮೊತ್ತವನ್ನ ಬೆನ್ನಟ್ಟಿದ ವೇಳೆ ಪೂರೈಸಿದ್ದು, ಈ ಎಲ್ಲಾ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ಜಯಗಳಿಸಿದೆ. ಪುರುಷರ ಕ್ರಿಕೆಟ್‍ನಲ್ಲಿ ವಿರಾಟ್ ಕೊಹ್ಲಿ ಈವರೆಗೆ 62 ಇನ್ನಿಂಗ್ಸ್‍ನಲ್ಲಿ ಯಶಸ್ವಿ ಚೇಸಿಂಗ್‍ನಲ್ಲಿ 15 ಸೆಂಚುರಿ ಬಾರಿಸಿದ್ದಾರೆ. ಈ ಪಟ್ಟಿಯಲ್ಲಿ ಲ್ಯಾನ್ನಿಂಗ್ ಅವರು ಗೇಲ್, ಗಿಲ್‍ಕ್ರಿಸ್ಟ್ ಹಾಗೂ ರಿಕಿ ಪಾಂಟಿಂಗ್ ಅವರಿಗಿಂತ ಮುಂಚೂಣಿಯಲ್ಲಿದ್ದಾರೆ.

    ಲ್ಯಾನ್ನಿಂಗ್ 2011ರಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಮೊದಲ ಏಕದಿನ ಪಂದ್ಯವನ್ನ ಆಡಿದ್ದು, ಈವರೆಗೆ 59 ಪಂದ್ಯಗಳಲ್ಲಿ 2835 ರನ್ ಗಳಿಸಿದ್ದಾರೆ. 11 ಸೆಂಚುರಿಗಳ ದಾಖಲೆಯ ಜೊತೆಗೆ 10 ಅರ್ಧ ಶತಕಗಳನ್ನ ಬಾರಿಸಿದ್ದಾರೆ. ಮಹಿಳಾ ಕ್ರಿಕೆಟ್ ನಲ್ಲಿ ಏಕದಿನ ಪಂದ್ಯಗಳಲ್ಲಿ ಅತೀ ಹೆಚ್ಚು ಶತಕ ಗಳಿಸಿದ ಹೆಗ್ಗಳಿಕೆಗೆ ಲ್ಯಾನ್ನಿಂಗ್ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಶಾರ್ಲೊಟ್ ಎಡ್ವಡ್ರ್ಸ್ 9 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ನ್ಯೂಜಿಲ್ಯಾಂಡ್‍ನ ಸೂಝಿ ಬೇಟ್ಸ್ 8 ಶತಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

  • ಮಹಿಳಾ ವಿಶ್ವಕಪ್ ಕ್ರಿಕೆಟ್ – ಸ್ಮೃತಿ ಶತಕದ ಮೂಲಕ ಟೀಂ ಇಂಡಿಯಾಗೆ 2ನೇ ಗೆಲುವು

    ಮಹಿಳಾ ವಿಶ್ವಕಪ್ ಕ್ರಿಕೆಟ್ – ಸ್ಮೃತಿ ಶತಕದ ಮೂಲಕ ಟೀಂ ಇಂಡಿಯಾಗೆ 2ನೇ ಗೆಲುವು

    ಎಡ್ಜ್ ಬಾಸ್ಟನ್: ಮಹಿಳೆಯರ ವಿಶ್ವಕಪ್ 2ನೇ ಪಂದ್ಯದಲ್ಲಿ ಭಾರತ ವೆಸ್ಟ್ ಇಂಡೀಸ್ ತಂಡದ ವಿರುದ್ಧ 7 ವಿಕೆಟ್ ಅಂತರದ ಜಯಗಳಿಸಿದೆ. ಭಾರತದ ಪರವಾಗಿ ಸ್ಮೃತಿ ಮಂಧನ ಶತಕ ಗಳಿಸಿ ಗೆಲುವಿನ ರೂವಾರಿ ಎನಿಸಿದರು. ಐಸಿಸಿ ಮಹಿಳಾ ವಿಶ್ವಕಪ್ 2ನೇ ಪಂದ್ಯದಲ್ಲೂ ಸೊಗಸಾದ ಆಟದ ಮೂಲಕ ಎಲ್ಲರ ಗಮನ ಸೆಳೆದರು. ಈ ಪಂದ್ಯದಲ್ಲಿ 2 ಸಿಕ್ಸರ್ ಹಾಗೂ 13 ಬೌಂಡರಿಗಳ ನೆರವಿನಿಂದ 106 ರನ್ ಗಳಿಸಿದರು. ಈ ಮೂಲಕ ಸ್ಮೃತಿ ತಮ್ಮ ಜೀವನದ 2ನೇ ಶತಕ ಬಾರಿಸಿದರು.

    ಟಾಸ್ ಗೆದ್ದ ಮಿಥಾಲಿ ರಾಜ್ ನಾಯಕತ್ವದ ಟೀಂ ಇಂಡಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ತಂಡ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 183 ರನ್ ಗಳಿಸಿತು.

    ವಿಂಡೀಸ್ ಪರವಾಗಿ ಮ್ಯಾಥ್ಯೂಸ್ 43, ಡೇಲಿ 33, ಫ್ಲೆಚರ್ 36, ಟೇಲರ್ 16, ನೇಷನ್ 12, ಮೊಹಮ್ಮದ್ 11, ವಾಲ್ಟರ್ಸ್ 9, ಡಾಟಿನ್ 7, ಅಗಿಲೇರಿಯಾ 6, ನೈಟ್ 5 ರನ್ ಗಳಿಸಿದರು.

    ಟೀಂ ಇಂಡಿಯಾ ಪರವಾಗಿ ದೀಪ್ತಿ ಶರ್ಮಾ, ಹರ್ಮನ್ ಪ್ರೀತ್ ಕೌರ್ ಹಾಗೂ ಪೂನಂ ಯಾದವ್ ತಲಾ 2 ಹಾಗೂ ಏಕ್ತಾ ಬಿಷ್ಟ್ 1 ವಿಕೆಟ್ ಪಡೆದರು.

    184 ರನ್ ಟಾರ್ಗೆಟ್ ಬೆನ್ನತ್ತಿ ಬ್ಯಾಟಿಂಗ್ ಆರಂಭಿಸಿದ ಭಾರತ ಆರಂಭದಲ್ಲೇ ಆಘಾತ ಅನುಭವಿಸಬೇಕಾಯಿತು. ಟೀಂ ರನ್ ಶುಭಾರಂಭ ಮಾಡುವಷ್ಟರಲ್ಲೇ ಶೂನ್ಯಕ್ಕೆ ಪೂನಂ ರಾವತ್ ಔಟಾದರು.

    ಇದಾದ ನಂತರ ಬ್ಯಾಟಿಂಗ್ ಮಾಡಲು ಆಗಮಿಸಿದ ದೀಪ್ತಿ ಶರ್ಮಾ ಕೇವಲ 6 ರನ್ ಗಳಿಸಿ ಔಟಾದರು. ಆದರೆ ನಂತರ ಆಗಮಿಸಿದ ನಾಯಕಿ ಮಿಥಾಲಿ ರಾಜ್ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನ ಜೊತೆಗೆ ಉತ್ತಮ ಜೊತೆಯಾಟ ನೀಡಿದರು. ಸ್ಮೃತಿ ಮಂಧನ ಇಂಗ್ಲೆಂಡ್ ವಿರುದ್ಧದ ಆರಂಭಿಕ ಪಂದ್ಯದಲ್ಲೂ ಅರ್ಧ ಶತಕ ಗಳಿಸಿದ್ದರು.