Tag: ICC Test rankings

  • ICC Test Ranking | ಅಶ್ವಿನ್‌ ಹಿಂದಿಕ್ಕಿ ನಂ.1 ಪಟ್ಟಕ್ಕೇರಿದ ಬುಮ್ರಾ – ಬ್ಯಾಟಿಂಗ್‌ನಲ್ಲಿ ಯಶಸ್ವಿ, ಕೊಹ್ಲಿ ಶೈನ್‌

    ICC Test Ranking | ಅಶ್ವಿನ್‌ ಹಿಂದಿಕ್ಕಿ ನಂ.1 ಪಟ್ಟಕ್ಕೇರಿದ ಬುಮ್ರಾ – ಬ್ಯಾಟಿಂಗ್‌ನಲ್ಲಿ ಯಶಸ್ವಿ, ಕೊಹ್ಲಿ ಶೈನ್‌

    ಮುಂಬೈ: ಇತ್ತೀಚೆಗೆ ಬಾಂಗ್ಲಾದೇಶ ತಂಡದ ವಿರುದ್ಧ ನಡೆದ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ (Team India) ಕ್ಲೀನ್‌ ಸ್ವೀಪ್‌ ಸಾಧನೆ ಮಾಡಿತು. ಈ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿದ ಟೀಂ ಇಂಡಿಯಾ ಆಟಗಾರರು ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ (ICC Test Rankings) ಅದ್ಭುತ ಸಾಧನೆ ಮಾಡಿದ್ದಾರೆ.

    ಬಾಂಗ್ಲಾದೇಶದ ವಿರುದ್ಧ ನಡೆದ ಟೆಸ್ಟ್‌ ಪಂದ್ಯಗಳಲ್ಲಿ 11 ವಿಕೆಟ್‌ ಪಡೆದ ಟೀಂ ಇಂಡಿಯಾ ಸ್ಟಾರ್‌ ವೇಗಿ ಜಸ್ಪ್ರೀತ್‌ ಬುಮ್ರಾ (Jasprit Bumrah) ಮತ್ತೊಮ್ಮೆ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೆ ಜಿಗಿದಿದ್ದಾರೆ. 870 ರೇಟಿಂಗ್ಸ್‌ನೊಂದಿಗೆ ನಂ.1 ಸ್ಥಾನದಲ್ಲಿದ್ದ ಭಾರತದ ಅಶ್ವಿನ್‌ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. 1 ಸ್ಥಾನ ಕುಸಿತ ಕಂಡಿರುವ ಅಶ್ವಿನ್‌ (Ravichandran Ashwin) 847 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಇನ್ನೂ ರವಿಂದ್ರ ಜಡೇಜಾ 809 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದ್ದಾರೆ. ಬಾಂಗ್ಲಾದೇಶ ವಿರುದ್ಧ ನಡೆದ 2 ಟೆಸ್ಟ್‌ ಪಂದ್ಯದಲ್ಲಿ ಅಶ್ವಿನ್‌ 11 ವಿಕೆಟ್‌ ಪಡೆದಿದ್ದರು. ಇದನ್ನೂ ಓದಿ: IPL Mega Auction | ಹಿಟ್‌ಮ್ಯಾನ್ ರೋಹಿತ್‌ ಇನ್‌ – ಡುಪ್ಲೆಸಿ ಔಟ್‌ – ಆರ್‌ಸಿಬಿಗೆ ಆನೆ ಬಲ

    ಐಸಿಸಿ ಟೆಸ್ಟ್‌ ಬೌಲಿಂಗ್‌ ರ‍್ಯಾಂಕಿಂಗ್‌
    1. ಜಸ್ಪ್ರೀತ್‌ ಬುಮ್ರಾ – ಭಾರತ – 870 ಅಂಕ
    2. ಆರ್. ಅಶ್ವಿನ್‌ – ಭಾರತ -‌ 869 ಅಂಕ
    3. ಜೋಶ್‌ ಹೇಜಲ್ವುಡ್‌ – ಆಸ್ಟ್ರೇಲಿಯಾ – 847 ಅಂಕ
    4. ಪ್ಯಾಟ್‌ ಕಮ್ಮಿನ್ಸ್‌ – ಆಸ್ಟ್ರೇಲಿಯಾ 820 ಅಂಕ
    5. ಕಗಿಸೊ ರಬಾಡ – ದಕ್ಷಿಣ ಆಫ್ರಿಕಾ – 820 ಅಂಕ

    ರ‍್ಯಾಂಕಿಂಗ್‌ನಲ್ಲಿ ಯಶಸ್ವಿ:
    ಬಾಂಗ್ಲಾ ವಿರುದ್ಧದ ಟೆಸ್ಟ್‌ನಲ್ಲಿ ಬೌಲಿಂಗ್‌ನಲ್ಲಿ ಬುಮ್ರಾ, ಅಶ್ವಿನ್‌ ಕಮಾಲ್‌ ಮಾಡಿದರೆ, ಬ್ಯಾಟಿಂಗ್‌ನಲ್ಲಿ ಬ್ಯಾಕ್‌ ಟು ಬ್ಯಾಕ್‌ ಫಿಫ್ಟಿ ಸಿಡಿಸಿ ಯಶಸ್ವಿ ಜೈಸ್ವಾಲ್‌ (Yashasvi Jaiswal) ಮಿಂಚಿದ್ದಾರೆ. 2 ಸ್ಥಾನ ಜಿಗಿತ ಕಂಡು ಐಸಿಸಿ ರ‍್ಯಾಂಕಿಂಗ್‌ನಲ್ಲಿ 3ನೇ ಸ್ಥಾನ ಪಡೆದುಕೊಂಡಿದ್ದಾರೆ. ಸತತ 6 ಸ್ಥಾನಗಳಲ್ಲಿ ಏರಿಕೆ ಕಂಡಿರುವ ವಿರಾಟ್‌ ಕೊಹ್ಲಿ 6ನೇ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಭಾರತ ಮತ್ತೊಂದು ಮೈಲುಗಲ್ಲು – ಅತಿ ಹೆಚ್ಚು ಟೆಸ್ಟ್ ಪಂದ್ಯ ಗೆದ್ದ ಸಾಧನೆ

    ಐಸಿಸಿ ಟೆಸ್ಟ್‌ ಬ್ಯಾಟಿಂಗ್‌ ರ‍್ಯಾಂಕಿಂಗ್‌
    1. ಜೋ ರೂಟ್‌ – ಇಂಗ್ಲೆಂಡ್‌ – 899 ಅಂಕ
    2. ಕೇನ್‌ ವಿಲಿಯಮ್ಸನ್‌ – ನ್ಯೂಜಿಲೆಂಡ್‌ – 829 ಅಂಕ
    3. ಯಶಸ್ವಿ ಜೈಸ್ವಾಲ್‌ – ಭಾರತ – 792 ಅಂಕ
    4. ಸ್ಟೀವ್‌ ಸ್ಮಿತ್‌ – ಆಸ್ಟ್ರೇಲಿಯಾ – 757 ಅಂಕ
    5. ಉಸ್ಮಾನ್‌ ಖವಾಜ – ಆಸ್ಟ್ರೇಲಿಯಾ – 728 ಅಂಕ

  • ICC ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ನಂ.1 ಪಟ್ಟ – ಹೊಸ ಇತಿಹಾಸ ನಿರ್ಮಿಸಿದ ಬೂಮ್‌ ಬೂಮ್‌ ಬುಮ್ರಾ

    ICC ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ನಂ.1 ಪಟ್ಟ – ಹೊಸ ಇತಿಹಾಸ ನಿರ್ಮಿಸಿದ ಬೂಮ್‌ ಬೂಮ್‌ ಬುಮ್ರಾ

    – ಹೊಸ ಇತಿಹಾಸ ನಿರ್ಮಿಸಿದ ಸ್ಟಾರ್‌ ವೇಗಿ

    ವಿಶಾಖಪಟ್ಟಣಂ: ಇತ್ತೀಚೆಗೆ ಇಂಗ್ಲೆಂಡ್‌ ವಿರುದ್ಧ ನಡೆದ 5 ಪಂದ್ಯಗಳ ಟೆಸ್ಟ್‌ ಸರಣಿಯ 2ನೇ ಪಂದ್ಯದಲ್ಲಿ ಮಾರಕ ಬೌಲಿಂಗ್‌ ಪ್ರದರ್ಶನ ನೀಡಿದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್‌ ಬುಮ್ರಾ (Jasprit Bumrah) ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

    ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದ ಎರಡು ಇನ್ನಿಂಗ್ಸ್‌ಗಳಲ್ಲಿ 6 ವಿಕೆಟ್‌ ಪಡೆದಿದ್ದ ಬುಮ್ರಾ, 2ನೇ ಪಂದ್ಯದಲ್ಲಿ 9 ವಿಕೆಟ್‌ಗಳನ್ನ ಉರುಳಿಸಿ ಐಸಿಸಿ ರ‍್ಯಾಂಕಿಂಗ್‌ನಲ್ಲಿ (ICC Test Rankings) ನಂ.1 ಸ್ಥಾನಕ್ಕೇರಿದ್ದಾರೆ. ಈ ಮೂಲಕ ದೇಶದ ಇತಿಹಾಸದಲ್ಲೇ ಟೆಸ್ಟ್‌ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ವೇಗಿ ಎನಿಸಿಕೊಂಡಿದ್ದಾರೆ.

    2ನೇ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 15.5 ಓವರ್‌ಗಳಲ್ಲಿ 45 ರನ್‌ ಬಿಟ್ಟುಕೊಟ್ಟು 6 ವಿಕೆಟ್‌ ಪಡೆದಿದ್ದ ಬುಮ್ರಾ, 2ನೇ ಇನ್ನಿಂಗ್ಸ್‌ನಲ್ಲಿ 17.2 ಓವರ್‌ಗಳಲ್ಲಿ 3 ವಿಕೆಟ್‌ ಪಡೆದು ಮಿಂಚಿದ್ದಾರೆ. ಈ ಮೂಲಕ 881 ಶ್ರೇಯಾಂಕಗಳೊಂದಿಗೆ ನಂ.1 ಪಟ್ಟಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ರವಿಚಂದ್ರನ್‌ ಅಶ್ವಿನ್‌ (Ashwin), ರವೀಂದ್ರ ಜಡೇಜಾ ಹಾಗೂ ಬಿಷೆನ್‌ ಸಿಂಗ್‌ ಬೇಡಿ ಈ ಹಿಂದೆ ಅಗ್ರಸ್ಥಾನಕ್ಕೇರಿದ್ದರು. ಇದನ್ನೂ ಓದಿ: ಡೇವಿಸ್ ಕಪ್‍ನಲ್ಲಿ ಕೊಡಗಿನ ಯುವಕನ ಸಾಧನೆ – ವರ್ಲ್ಡ್‌‌ ಕಪ್ 1ರಲ್ಲಿ ಸ್ಥಾನ ಗಿಟ್ಟಿಸಿಕೊಂಡ ಭಾರತ

    ಬುಮ್ರಾ ಕಳೆದ 34 ಟೆಸ್ಟ್‌ ಪಂದ್ಯಗಳಿಂದ 15 ವಿಕೆಟ್‌ ಪಡೆದಿದ್ದರೂ 3ನೇ ಸ್ಥಾನಕ್ಕಿಂತ ಹೆಚ್ಚು ಮೇಲಕ್ಕೇರಲು ಸಾಧ್ಯವಾಗಿರಲಿಲ್ಲ. ಆದರೀಗ ಇಂಗ್ಲೆಂಡ್‌ (England) ವಿರುದ್ಧದ ಪ್ರದರ್ಶನದಿಂದಾಗಿ ಆರ್‌. ಅಶ್ವಿನ್‌ ಅವರನ್ನು ಹಿಂದಿಕ್ಕಿ ನಂ.1 ಸ್ಥಾನ ತನ್ನದಾಗಿಸಿಕೊಂಡಿದ್ದಾರೆ. ಅಲ್ಲದೇ ಏಕದಿನ ಕ್ರಿಕೆಟ್‌ ಬೌಲಿಂಗ್‌ ರ‍್ಯಾಂಕಿಂಗ್‌ನಲ್ಲಿ 665 ಶ್ರೇಯಾಂಕದೊಂದಿಗೆ 6ನೇ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತ ಖ್ಯಾತ ಹಾಕಿ ಆಟಗಾರನಿಂದ ಅಪ್ರಾಪ್ತೆಯ ಮೇಲೆ ರೇಪ್‌!

    ಟಾಪ್‌-10ನಲ್ಲಿ ಮೂವರು ಭಾರತೀಯರು:
    ಇತ್ತೀಚೆಗಷ್ಟೇ ಬುಮ್ರಾ ಟೆಸ್ಟ್‌ನಲ್ಲಿ ಅತಿ ವೇಗವಾಗಿ 150 ವಿಕೆಟ್ ಪಡೆದ ಏಷ್ಯಾದ 2ನೇ ಆಟಗಾರ ಎಂಬ ಮಹತ್ವದ ಮೈಲುಗಲ್ಲು ಸಾಧಿಸಿದ್ದರು. ಈ ಬೆನ್ನಲ್ಲೇ ಐಸಿಸಿ ರ‍್ಯಾಂಕಿಂಗ್‌ನಲ್ಲೂ ನಂ.1 ಪಟ್ಟಕ್ಕೇರಿದ್ದಾರೆ. ಇದರೊಂದಿಗೆ ಪುರುಷರ ಟೆಸ್ಟ್‌ ಕ್ರಿಕೆಟ್‌ ಬೌಲಿಂಗ್‌ ರ‍್ಯಾಂಕಿಂಗ್‌ನಲ್ಲಿ ಮೂವರು ಭಾರತೀಯರು ಟಾಪ್‌-10 ನಲ್ಲಿ ಸ್ಥಾನ ಪಡೆದುಕೊಂಡಂತಾಗಿದೆ. 881 ಶ್ರೇಯಾಂಕದೊಂದಿಗೆ ವೇಗಿ ಜಸ್ಪ್ರೀತ್‌ ಬುಮ್ರಾ ನಂ.1 ಸ್ಥಾನದಲ್ಲಿದ್ದರೆ, ನಂ.1 ಸ್ಥಾನದಲ್ಲಿದ್ದ ಅಶ್ವಿನ್‌ 841 ಶ್ರೇಯಾಂಕದೊಂದಿಗೆ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದರೊಂದಿಗೆ ರವೀಂದ್ರ ಜಡೇಜಾ 746 ಶ್ರೇಯಾಂಕದೊಂದಿಗೆ 9ನೇ ಸ್ಥಾನದಲ್ಲಿದ್ದಾರೆ.

    WTC ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿತ:
    ಇಂಗ್ಲೆಂಡ್‌ (England) ವಿರುದ್ಧ ನಡೆದ ಎರಡನೇ ಟೆಸ್ಟ್‌ ಪಂದ್ಯವನ್ನು ಟೀಂ ಇಂಡಿಯಾ (Team India) 106 ರನ್‌ಗಳಿಂದ ಭರ್ಜರಿ ಗೆದ್ದುಕೊಂಡಿದ್ದು, ಈ ಮೂಲಕ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ (World Test Championship) ಅಂಕ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿಯಿತು. ಇದನ್ನೂ ಓದಿ: ಒಂದೇ ಸಮಯದಲ್ಲಿ ಅಪ್ಲೋಡ್‌, ಟ್ಯಾಗ್‌ – ಸಿಂಧು, ನೀರಜ್‌ ಪೋಸ್ಟ್‌ ರಹಸ್ಯ ಬಯಲು

    ಸಂಕ್ಷಿಪ್ತ ಸ್ಕೋರ್‌
    ಭಾರತ ಮೊದಲ ಇನ್ನಿಂಗ್ಸ್‌ 396/10
    ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ 253/10
    ಭಾರತ ಎರಡನೇ ಇನ್ನಿಂಗ್ಸ್‌ 255/10
    ಇಂಗ್ಲೆಂಡ್‌ ಎರಡನೇ ಇನ್ನಿಂಗ್ಸ್‌ 292/10

  • ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ – ರವೀಂದ್ರ ಜಡೇಜಾ ವಿಶ್ವ ನಂಬರ್ 1 ಆಲ್‍ರೌಂಡರ್

    ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ – ರವೀಂದ್ರ ಜಡೇಜಾ ವಿಶ್ವ ನಂಬರ್ 1 ಆಲ್‍ರೌಂಡರ್

    ದುಬೈ: ಟೀಂ ಇಂಡಿಯಾದ ಆಲ್‍ರೌಂಡರ್ ರವೀಂದ್ರ ಜಡೇಜಾ ಐಸಿಸಿಯ ನೂತನ ಟೆಸ್ಟ್ ಆಲ್‍ರೌಂಡರ್ ರ‍್ಯಾಂಕಿಂಗ್‌ನಲ್ಲಿ ನಂಬರ್ 1 ಸ್ಥಾನಕ್ಕೇರಿದ್ದಾರೆ.

    ಇಂದು ಐಸಿಸಿ ಬಿಡುಗಡೆ ಮಾಡಿರುವ ನೂತನ ಟೆಸ್ಟ್ ರ‍್ಯಾಂಕಿಂಗ್‌ನ ಆಲ್‍ರೌಂಡರ್ ವಿಭಾಗದಲ್ಲಿ ಜಡೇಜಾ 406 ಅಂಗಳೊಂದಿಗೆ ನಂಬರ್ 1 ಸ್ಥಾನ ಪಡೆದಿದ್ದಾರೆ. ಜಡೇಜಾ ಬಳಿಕ ಜೇಸನ್ ಹೋಲ್ಡರ್ ಇದ್ದು, 382 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ರಾವಲ್ಪಿಂಡಿ ಮೈದಾನದಲ್ಲಿ ಭಾಂಗ್ರಾ ನೃತ್ಯ ಮಾಡಿದ ಡೇವಿಡ್ ವಾರ್ನರ್

    ಜಡೇಜಾ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ಬ್ಯಾಟಿಂಗ್‍ನಲ್ಲಿ 175 ರನ್ ಮತ್ತು ಬೌಲಿಂಗ್‍ನಲ್ಲಿ 9 ವಿಕೆಟ್ ಕಿತ್ತು ಮಿಂಚಿದ್ದರು. ಈ ಭರ್ಜರಿ ಪ್ರದರ್ಶನದ ಬಳಿಕ ರ‍್ಯಾಂಕಿಂಗ್‌ನಲ್ಲಿ ಏರಿಕೆ ಕಂಡು ನಂಬರ್ 1 ಸ್ಥಾನಕ್ಕೇರಿದ್ದಾರೆ. ಈ ಹಿಂದೆ ಜೇಸನ್ ಹೋಲ್ಡರ್ 2021ರ ಫೆಬ್ರವರಿ ಬಳಿಕ ಆಲ್‍ರೌಂಡರ್ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿದ್ದರು. ಇದೀಗ ಜಡೇಜಾ ನಂಬರ್ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಇದನ್ನೂ ಓದಿ: ಮಹಿಳಾ ದಿನಾಚರಣೆ ಪ್ರಯುಕ್ತ ಶಭಾಷ್ ಮಿಥು ಚಿತ್ರದ ಪೋಸ್ಟರ್ ಹಂಚಿಕೊಂಡ ತಾಪ್ಸಿ ಪನ್ನು

    ಜಡೇಜಾ ಈ ಹಿಂದೆ 2017ರಲ್ಲಿ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನ ನಂಬರ್ 1 ಆಲ್‍ರೌಂಡರ್ ಆಗಿ ಗುರುತಿಸಿಕೊಂಡಿದ್ದರು. ಇದೀಗ ಮತ್ತೆ ರ‍್ಯಾಂಕಿಂಗ್‌ನ ಪ್ರಗತಿ ಕಂಡು ನಂಬರ್ 1 ಆಲ್‍ರೌಂಡರ್ ಆಗಿ ಜಡೇಜಾ ಕಾಣಿಸಿಕೊಂಡಿದ್ದಾರೆ.

  • ಮೊದಲ ಬಾರಿಗೆ ಟಾಪ್ 10ನಲ್ಲಿ ಗುರುತಿಸಿಕೊಂಡ ಬುಮ್ರಾ- ಅಗ್ರ ಸ್ಥಾನದಲ್ಲಿ ವಿರಾಟ್

    ಮೊದಲ ಬಾರಿಗೆ ಟಾಪ್ 10ನಲ್ಲಿ ಗುರುತಿಸಿಕೊಂಡ ಬುಮ್ರಾ- ಅಗ್ರ ಸ್ಥಾನದಲ್ಲಿ ವಿರಾಟ್

    ದುಬೈ: ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಟೆಸ್ಟ್ ಬೌಲಿಂಗ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಟೀ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಮೊದಲ ಬಾರಿಗೆ ಟಾಪ್ 10ನಲ್ಲಿ ಸ್ಥಾನ ಪಡೆದಿದ್ದಾರೆ.

    ಟೆಸ್ಟ್ ನಲ್ಲಿ ಭಾರತದ ಪರ ಅತಿ ವೇಗವಾಗಿ 50 ವಿಕೆಟ್ ಪಡೆದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಮಂಗಳವಾರ ಬಿಡುಗಡೆಯಾದ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ನೆಗೆತ ಕಂಡಿದ್ದಾರೆ. ಟೀಂ ಇಂಡಿಯಾದ ರವೀಂದ್ರ ಜಡೇಜಾ 10ನೇ ಸ್ಥಾನ ಪಡೆದುಕೊಂಡಿದ್ದಾರೆ.

    ಕಳೆದ ಬಾರಿ 15ನೇ ಸ್ಥಾನ ಪಡೆದಿದ್ದ ಬುಮ್ರಾ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದರು. ಕೇವಲ 7 ರನ್ ನೀಡಿ, 5 ವಿಕೆಟ್ ಕಬಳಿಸಿ ಮಿಂಚಿದ್ದರು. ಇದರ ಫಲವಾಗಿ ಬುಮ್ರಾ ಏಳನೇ ಸ್ಥಾನಕ್ಕೆ ನೆಗೆದಿದ್ದಾರೆ.

    ಬೌಲಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ 908 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ. ಉಳಿದಂತೆ ದಕ್ಷಿಣ ಆಫ್ರಿಕಾ ಬೌಲರ್ ಕಗಿಸೋ ರಬಾಡ 851 ಅಂಕ ಪಡೆದು ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ. 814 ಅಂಕ ಗಳಿಸಿರುವ ಇಂಗ್ಲೆಂಡ್ ವೇಗಿ ಜೇಮ್ಸ್ ಅಂಡರ್ಸನ್ ಮೂರನೇ ಸ್ಥಾನ, 813 ಅಂಕಗಳಿಂದ 4ನೇ ಸ್ಥಾನದಲ್ಲಿ ವೆರ್ನಾನ್ ಪಿಲಂಡರ್ ಪಡೆದಿದ್ದಾರೆ. ನ್ಯೂಜಿಲೆಂಡ್‍ನ ಟ್ರೆಂಟ್ ಬೌಲ್ಟ್ 793 ಅಂಕ ಗಳಿಸಿ 5ನೇ ಸ್ಥಾನದಲ್ಲಿದ್ದಾರೆ.

    ಬ್ಯಾಟಿಂಗ್ ವಿಭಾಗ:
    ಟೆಸ್ಟ್ ಬ್ಯಾಟಿಂಗ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 910 ಅಂಕ ಪಡೆದು ಅಗ್ರ ಶ್ರೇಯಾಂಕವನ್ನು ಕಾಯ್ದುಕೊಂಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ (904 ಅಂಕ) ಎರಡನೇ ಸ್ಥಾನ, ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಮೂರು ಹಾಗೂ ಟೀಂ ಇಂಡಿಯಾ ಆಟಗಾರ ಚೇತೇಶ್ವರ್ ಪೂಜಾರ ನಾಲ್ಕನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. 10 ಸ್ಥಾನಗಳ ಜಿಗಿತ ಕಂಡಿರುವ ಅಜಿಂಕ್ಯ ರಹಾನೆ ಈ ಬಾರಿ 11ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ.

    ಆಲ್‍ರೌಂಡರ್ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ಆಟಗಾರ ಜೇಸನ್ ಹೋಲ್ಡರ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್ ಆಟಗಾರ ಬೆನ್ ಸ್ಟೋಕ್ಸ್ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಈ ಹಿಂದಿನ ಪಟ್ಟಿನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಬೆನ್ ಸ್ಟೋಕ್ಸ್ ಆಸ್ಟ್ರೇಲಿಯಾ ವಿರುದ್ದ ಆ್ಯಶಸ್ ಸರಣಿಯಲ್ಲಿ ಅಜೇಯ 135 ರನ್ ಬಾರಿಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟಿದ್ದರು. ಹೀಗಾಗಿ ಪಾಯಿಂಟ್ ಪಟ್ಟಿಯಲ್ಲಿ ಮತ್ತೆರೆಡು ಸ್ಥಾನ ಜಿಗಿದಿದ್ದಾರೆ.