Tag: ICC T20 World Cup

  • ಭಾರತ vs ಪಾಕಿಸ್ತಾನ T20 ವಿಶ್ವಕಪ್ ಪಂದ್ಯಕ್ಕೆ ಬೆದರಿಕೆ ಕರೆ – ಕ್ರೀಡಾಂಗಣದಲ್ಲಿ ಭದ್ರತೆ ಹೆಚ್ಚಳ

    ಭಾರತ vs ಪಾಕಿಸ್ತಾನ T20 ವಿಶ್ವಕಪ್ ಪಂದ್ಯಕ್ಕೆ ಬೆದರಿಕೆ ಕರೆ – ಕ್ರೀಡಾಂಗಣದಲ್ಲಿ ಭದ್ರತೆ ಹೆಚ್ಚಳ

    ನ್ಯೂಯಾರ್ಕ್‌: ಇದೇ ಜೂ.9 ರಂದು ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ ಭಾರತ-ಪಾಕಿಸ್ತಾನ ಹೈವೋಲ್ಟೇಜ್‌ ಪಂದ್ಯಕ್ಕೆ ಬೆದರಿಕೆ ಕರೆಗಳು ಬಂದಿದ್ದು, ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ನ್ಯೂಯಾರ್ಕ್‌ನ ಐಸೆನ್‌ಹೋವರ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

    ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಸಾರ್ವಜನಿಕರ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆಯಾಗಿದೆ. ಪಂದ್ಯಗಳು ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಕಾನೂನು ಜಾರಿ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದ್ದೇನೆ ಎಂದು ನ್ಯೂಯಾರ್ಕ್‌ನ ಗವರ್ನರ್‌ ಕ್ಯಾಥಿ ಹೊಚುಲ್‌ ತಿಳಿಸಿದ್ದಾರೆ.

    ಮ್ಯಾನ್‌ಹ್ಯಾಟನ್‌ನ ಪೂರ್ವಕ್ಕೆ 25 ಮೈಲುಗಳಷ್ಟು ದೂರದಲ್ಲಿರುವ ಐಸೆನ್‌ಹೋವರ್ ಪಾರ್ಕ್ ಕ್ರೀಡಾಂಗಣವು ಜೂನ್ 3 ರಿಂದ 12 ರ ವರೆಗೆ ಎಂಟು ICC T20 WC ಪಂದ್ಯಗಳ ಆತಿಥ್ಯ ವಹಿಸುತ್ತದೆ. ಇದರಲ್ಲಿ ಎರಡು ಏಷ್ಯನ್ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಹಣಾಹಣಿಯೂ ಸೇರಿದೆ.

    ಸುಧಾರಿತ ಕಣ್ಗಾವಲು ಮತ್ತು ಸಂಪೂರ್ಣ ಸ್ಕ್ರೀನಿಂಗ್ ಪ್ರಕ್ರಿಯೆಗಳು ಸೇರಿದಂತೆ ಉನ್ನತ ಭದ್ರತಾ ಕ್ರಮಗಳಲ್ಲಿ ತೊಡಗಿಸಿಕೊಳ್ಳಲು ನಾನು ನ್ಯೂಯಾರ್ಕ್ ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಿದ್ದೇನೆ ಎಂದು ಹೊಚುಲ್‌ ಮಾಹಿತಿ ನೀಡಿದ್ದಾರೆ.

    ಜೂ.5 ರಂದು ಐರ್ಲೆಂಡ್‌ ವಿರುದ್ಧ, ಜೂ.9 ಕ್ಕೆ ಪಾಕಿಸ್ತಾನ, ಜೂ.12 ರಂದು ಯುಎಸ್‌ಎ ಹಾಗೂ ಜೂ.15 ಕ್ಕೆ ಕೆನಡಾ ತಂಡಗಳ ವಿರುದ್ಧ ಭಾರತ ತಂಡ ಸೆಣಸಲಿದೆ. ಯುಎಸ್‌ನಲ್ಲಿ ಭಾರತ ತಂಡ ಈ ನಾಲ್ಕು ಪಂದ್ಯಗಳನ್ನು ಆಡಲಿದೆ. ಮೆನ್ ಇನ್ ಬ್ಲೂ ತಂಡ ಮಂಗಳವಾರ ನ್ಯೂಯಾರ್ಕ್‌ಗೆ ಆಗಮಿಸಿ ತರಬೇತಿ ಪಡೆಯುತ್ತಿದ್ದಾರೆ.

  • ಕೆಲವೇ ಗಂಟೆಗಳಲ್ಲಿ ಭಾರತ vs ಪಾಕಿಸ್ತಾನ ಪಂದ್ಯದ ಟಿಕೆಟ್ ಸೋಲ್ಡ್ ಔಟ್

    ಕೆಲವೇ ಗಂಟೆಗಳಲ್ಲಿ ಭಾರತ vs ಪಾಕಿಸ್ತಾನ ಪಂದ್ಯದ ಟಿಕೆಟ್ ಸೋಲ್ಡ್ ಔಟ್

    ಸಿಡ್ನಿ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ- ಪಾಕಿಸ್ತಾನದ ರಣರೋಚಕ ಪಂದ್ಯ ವೀಕ್ಷಿಸಲು ಪ್ರತಿ ಬಾರಿ ಅಭಿಮಾನಿಗಳು ಹಾತೊರೆಯುತ್ತಾರೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2022ರ ಟಿ20 ವಿಶ್ವಕಪ್‍ನ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್ ಕೇವಲ 5 ಗಂಟೆಯಲ್ಲಿ ಸೋಲ್ಡ್ ಔಟ್ ಆಗಿದೆ ಎಂದು ಐಸಿಸಿ ತಿಳಿಸಿದೆ.

    ಅಕ್ಟೋಬರ್ 23 ರಂದು ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೆಜ್ ಪಂದ್ಯ ಮೆಲ್ಬರ್ನ್ ಮೈದಾನದಲ್ಲಿ ನಡೆಯಲಿದೆ. 1 ಲಕ್ಷ ಪ್ರೇಕ್ಷಕರಿಗೆ ಆಸನ ವ್ಯವಸ್ಥೆ ಹೊಂದಿರುವ ಮೆಲ್ಬರ್ನ್ ವಿಶ್ವದ ಅತಿ ದೊಡ್ಡ ಮೈದಾನದಲ್ಲಿ ಒಂದಾಗಿದೆ. ಈ ಮೈದಾನದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್ ನಿನ್ನೆ ಆನ್‍ಲೈನ್‍ನಲ್ಲಿ ಮಾರಾಟಕ್ಕೆ ಐಸಿಸಿ ಅವಕಾಶ ನೀಡಿತ್ತು. ಇದೀಗ 60 ಸಾವಿರ ಫ್ರೀ-ಸೇಲ್ ಟಿಕೆಟ್ ಕೇವಲ 5 ಗಂಟೆಗಳಲ್ಲಿ ಸೋಲ್ಡ್ ಔಟ್ ಆಗಿರುವ ಬಗ್ಗೆ ಐಸಿಸಿ ಸ್ಪಷ್ಟಪಡಿಸಿದೆ. ಇದನ್ನೂ ಓದಿ: 2022ರ ಟಿ20 ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ – ಭಾರತಕ್ಕೆ ಮೊದಲ ಎದುರಾಳಿ ಪಾಕ್

    ಭಾರತ ಹಾಗೂ ಪಾಕಿಸ್ತಾನ ನಡುವಿನ 60 ಸಾವಿರ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆದರೂ ಅಫಿಶಿಯಲ್ ಹಾಸ್ಪಿಟಾಲಿಟಿ ಹಾಗೂ ಐಸಿಸಿ ಟ್ರಾವೆಲ್ಸ್ ಮತ್ತು ಟೂರ್ಸ್ ಯೋಜನೆಯಡಿ ಇನ್ನೂ ಕೆಲವು ಟಿಕೆಟ್‍ಗಳು ಲಭ್ಯವಿವೆ. ಈ ಬಗ್ಗೆ ಇ-ಮೇಲ್ ಮೂಲಕ ಟಿಕೆಟ್ ಲಭ್ಯತೆಯ ಮಾಹಿತಿಯನ್ನು ಐಸಿಸಿ ನೀಡುತ್ತದೆ ಎಂದು ಪ್ರಕಟಣೆ ಹೊರಡಿಸಿದೆ. ಇದನ್ನೂ ಓದಿ: ಧೋನಿ ಸಿಕ್ಸರ್ ನೆನಪಿಸಿದ ದಿನೇಶ್ ಬಣ ಫಿನಿಶಿಂಗ್ ಶಾಟ್

    8ನೇ ಆವೃತ್ತಿಯ ಟಿ20 ವಿಶ್ವಕಪ್ ಆಸ್ಟ್ರೇಲಿಯಾದ 7 ಮೈದಾನದಲ್ಲಿ ನಡೆಯಲಿದ್ದು, ಅಡಿಲೇಡ್, ಬ್ರಿಸ್ಬೇನ್, ಗೀಲಾಂಗ್, ಹೊಬಾರ್ಟ್, ಮೆಲ್ಬರ್ನ್, ಪರ್ತ್ ಮತ್ತು ಸಿಡ್ನಿಯಲ್ಲಿ ಟೂರ್ನಿಯ ಎಲ್ಲಾ ಪಂದ್ಯಗಳು ನಡೆಯಲಿದ್ದು, ಟೂರ್ನಿಯ ಫೈನಲ್ ಪಂದ್ಯಾಟ ನವೆಂಬರ್ 13 ರಂದು ನಡೆಯಲಿದೆ.

    ಒಟ್ಟು 16 ವಿಶ್ವದ ಬಲಾಢ್ಯ ತಂಡಗಳು ವಿಶ್ವಕಪ್‍ಗಾಗಿ ಸೆಣಸಾಡಲಿದ್ದು, 45 ಪಂದ್ಯಗಳು ನಡೆಯಲಿದೆ. ಗ್ರೂಪ್ A ವಿಭಾಗದಲ್ಲಿ ಇಂಗ್ಲಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಸ್ಥಾನಪಡೆದಿದ್ದರೆ, ಗ್ರೂಪ್ B ವಿಭಾಗದಲ್ಲಿ ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲದೇಶ ಸ್ಥಾನ ಪಡೆದುಕೊಂಡಿದೆ.

    2021ರ ಟಿ20 ವಿಶ್ವಕಪ್‍ನಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ 10 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿ, ಇತಿಹಾಸ ಬರೆದಿತ್ತು. ಆ ಬಳಿಕ ಮತ್ತೊಮ್ಮೆ ಉಭಯ ತಂಡಗಳು ಟಿ20 ವಿಶ್ವಕಪ್‍ನಲ್ಲಿ ಎದುರುಬದುರಾಗುತ್ತಿದೆ. ಹಾಗಾಗಿ ಕ್ರಿಕೆಟ್ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.