Tag: ICC Ranking

  • ICC Ranking: ದೈತ್ಯ ಆಸೀಸ್‌ ಹಿಂದಿಕ್ಕಿ ಮತ್ತೆ ನಂ.1 ಪಟ್ಟಕ್ಕೇರಿದ ಭಾರತ

    – ಕ್ರಿಕೆಟ್‌ ಲೋಕದಲ್ಲಿ ಮತ್ತೊಮ್ಮೆ ಇತಿಹಾಸ ನಿರ್ಮಿಸಿದ ಟೀಂ ಇಂಡಿಯಾ

    ಮುಂಬೈ: ಇಂಗ್ಲೆಂಡ್‌ ವಿರುದ್ಧ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಅಮೋಘ ಜಯ ಸಾಧಿಸಿದ ಬಳಿಕ ಭಾರತ, ದೈತ್ಯ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿ ಐಸಿಸಿ ಟೆಸ್ಟ್‌ ರ‍್ಯಾಕಿಂಗ್‌ನಲ್ಲಿ (ICC Test Ranking) ಮತ್ತೊಮ್ಮೆ ನಂ.1 ಪಟ್ಟವನ್ನು ಕಸಿದುಕೊಂಡಿದೆ. ಇದಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ICC) ವಿಶೇಷ ಪೋಸ್ಟರ್‌ ಹಂಚಿಕೊಂಡಿದೆ.

    ದಕ್ಷಿಣ ಆಫ್ರಿಕಾ ವಿರುದ್ಧ 2 ಪಂದ್ಯಗಳ ಟೆಸ್ಟ್‌ ಸರಣಿ ಡ್ರಾನಲ್ಲಿ ಅಂತ್ಯಗೊಂಡ ಬಳಿಕ ಭಾರತ ಐಸಿಸಿ ಟೆಸ್ಟ್‌ ರ‍್ಯಾಕಿಂಗ್‌ನಲ್ಲಿ ನಂ.1 ಸ್ಥಾನ ಕಳೆದುಕೊಂಡಿತ್ತು. ಆಗ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ಟೀಂ ಇಂಡಿಯಾದ ಕನಸನ್ನು ಭಗ್ನಗೊಳಿಸಿದ್ದ ಆಸ್ಟ್ರೇಲಿಯಾ (Australia) ತಂಡ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಪಡೆದುಕೊಂಡಿತ್ತು. 2 ತಿಂಗಳ ನಂತರ ಭಾರತ ಮತ್ತೆ ಅಗ್ರಸ್ಥಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದನ್ನೂ ಓದಿ:  WTC – ಮತ್ತೆ ನಂ.1 ಸ್ಥಾನಕ್ಕೆ ಜಿಗಿದ ಭಾರತ – ಹಿಟ್‌ಮ್ಯಾನ್‌ ನಾಯಕತ್ವಕ್ಕೆ ಮೆಚ್ಚುಗೆ

    ಅಲ್ಲದೇ 6 ತಿಂಗಳ ಬಳಿಕ ಟೆಸ್ಟ್‌, ಏಕದಿನ ಹಾಗೂ T20 ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಅಗ್ರಸ್ಥಾನಕ್ಕೇರಿದ್ದು ಇತಿಹಾಸ ಬರೆದಿದೆ. 2023ರ ಏಕದಿನ ವಿಶ್ವಕಪ್‌ಗೂ (ODI World Cup) ಮುನ್ನ ಭಾರತ ಈ ವೀಶೇಷ ಸಾಧನೆ ಮಾಡಿತ್ತು. ಇದೀಗ ಮತ್ತೊಮ್ಮೆ ಮೂರು ಮಾದರಿಗಳಲ್ಲಿ ನಂ.1 ಸ್ಥಾನ ತನ್ನದಾಗಿಸಿಕೊಂಡಿದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 122 ರೇಟಿಂಗ್ಸ್‌, ಏಕದಿನ ಕ್ರಿಕೆಟ್‌ನಲ್ಲಿ 121 ರೇಟಿಂಗ್ಸ್‌ ಹಾಗೂ ಟಿ20 ಕ್ರಿಕೆಟ್‌ನಲ್ಲಿ 266 ರೇಟಿಂಗ್ಸ್‌ನೊಂದಿಗೆ ಅಗ್ರಸ್ಥಾನಕ್ಕೇರಿದೆ. ಜೊತೆಗೆ 68.51 ಪಿಸಿಟಿಯೊಂದಿಗೆ (Percentage Of Points Earned) ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲೂ ಅಗ್ರಸ್ಥಾನ ಉಳಿಸಿಕೊಂಡಿದೆ. ಇದನ್ನೂ ಓದಿ: RCB ಖರೀದಿಸಿದ ದುಬಾರಿ ಆಟಗಾರನಿಗೆ ದೀರ್ಘಕಾಲದ ಕಿಡ್ನಿ ಕಾಯಿಲೆ – ಸತ್ಯ ಬಹಿರಂಗಪಡಿಸಿದ ಗ್ರೀನ್‌

    ಟೆಸ್ಟ್‌ ರ‍್ಯಾಂಕಿಂಗ್‌ನ ಟಾಪ್‌-5 ತಂಡಗಳು
    ಭಾರತ – 122 ರೇಟಿಂಗ್ಸ್‌
    ಆಸ್ಟ್ರೇಲಿಯಾ – 120 ರೇಟಿಂಗ್ಸ್‌
    ಇಂಗ್ಲೆಂಡ್‌ – 111 ರೇಟಿಂಗ್ಸ್‌
    ದಕ್ಷಿಣ ಆಫ್ರಿಕಾ – 99 ರೇಟಿಂಗ್ಸ್‌
    ನ್ಯೂಜಿಲೆಂಡ್‌ – 98 ರೇಟಿಂಗ್ಸ್‌

    ಏಕದಿನ ರ‍್ಯಾಂಕಿಂಗ್‌ನ ಟಾಪ್‌-5 ತಂಡಗಳು
    ಭಾರತ – 121 ರೇಟಿಂಗ್ಸ್‌
    ಆಸ್ಟ್ರೇಲಿಯಾ – 118 ರೇಟಿಂಗ್ಸ್‌
    ದಕ್ಷಿಣ ಆಫ್ರಿಕಾ – 110 ರೇಟಿಂಗ್ಸ್‌
    ಪಾಕಿಸ್ತಾನ – 109 ರೇಟಿಂಗ್ಸ್‌
    ನ್ಯೂಜಿಲೆಂಡ್‌ – 102 ರೇಟಿಂಗ್ಸ್‌

    ಟಿ20 ರ‍್ಯಾಂಕಿಂಗ್‌ನ ಟಾಪ್‌-5 ತಂಡಗಳು
    ಭಾರತ – 266 ರೇಟಿಂಗ್ಸ್‌
    ಇಂಗ್ಲೆಂಡ್‌ – 256 ರೇಟಿಂಗ್ಸ್‌
    ಆಸ್ಟ್ರೇಲಿಯಾ – 255 ರೇಟಿಂಗ್ಸ್‌
    ನ್ಯೂಜಿಲೆಂಡ್‌ – 254 ರೇಟಿಂಗ್ಸ್‌
    ಪಾಕಿಸ್ತಾನ – 249 ರೇಟಿಂಗ್ಸ್‌

  • WTC – ಮತ್ತೆ ನಂ.1 ಸ್ಥಾನಕ್ಕೆ ಜಿಗಿದ ಭಾರತ – ಹಿಟ್‌ಮ್ಯಾನ್‌ ನಾಯಕತ್ವಕ್ಕೆ ಮೆಚ್ಚುಗೆ

    WTC – ಮತ್ತೆ ನಂ.1 ಸ್ಥಾನಕ್ಕೆ ಜಿಗಿದ ಭಾರತ – ಹಿಟ್‌ಮ್ಯಾನ್‌ ನಾಯಕತ್ವಕ್ಕೆ ಮೆಚ್ಚುಗೆ

    ಮುಂಬೈ: ಇಂಗ್ಲೆಂಡ್‌ ವಿರುದ್ಧ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿರುವ ಭಾರತ ತಂಡ (Team India) ಅಂತಿಮ ಟೆಸ್ಟ್‌ ಪಂದ್ಯಕ್ಕೂ ಮುನ್ನವೇ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ (WTC) ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಜಿಗಿದಿದೆ. ಇದರಿಂದ ರೋಹಿತ್‌ ಶರ್ಮಾ ನಾಯಕತ್ವಕ್ಕೆ ಭಾರೀ ಮೆಚ್ಚುಗೆಯೂ ವ್ಯಕ್ತವಾಗಿದೆ.

    ರಾಂಚಿಯಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ 3ನೇ ಟೆಸ್ಟ್‌ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಂಡ ನಂತರ 64.58 ಪಿಸಿಟಿ (Percentage Of Points Earned), 62 ಅಂಕಗಳೊಂದಿಗೆ ಟೀಂ ಇಂಡಿಯಾ ಅಗ್ರಸ್ಥಾನಕ್ಕೇರಿದೆ. ಅಷ್ಟೇ ಅಲ್ಲ 117 ಶ್ರೇಯಾಂಕಗಳೊಂದಿಗೆ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಆಸೀಸ್‌ ಜೊತೆಗೆ ಅಗ್ರಸ್ಥಾನ ಹಂಚಿಕೊಂಡಿದ್ದು, ಅಂತಾರಾಷ್ಟ್ರೀಯ ಟಿ20 ಹಾಗೂ ಏಕದಿನ ಪಂದ್ಯಗಳ ರ‍್ಯಾಂಕಿಂಗ್‌ನಲ್ಲೂ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ. ಇದನ್ನೂ ಓದಿ: WTC: ಭಾರತಕ್ಕೆ ಹೀನಾಯ ಸೋಲು – 209 ರನ್‌ಗಳ ಭರ್ಜರಿ ಜಯ, ಆಸೀಸ್‌ಗೆ ಚೊಚ್ಚಲ ಟ್ರೋಫಿ

    WTC ನಲ್ಲಿ ಟಾಪ್‌-5 ತಂಡಗಳು:
    2023-25ರ ನಡುವಿನ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಈ ಆವೃತ್ತಿಯಲ್ಲಿ 8 ಪಂದ್ಯಗಳನ್ನಾಡಿದ್ದು, 5ರಲ್ಲಿ ಗೆಲುವು ಸಾಧಿಸಿದೆ. 2 ಪಂದ್ಯಗಳಲ್ಲಿ ಸೋಲು ಕಂಡಿದ್ದು, 1 ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಒಟ್ಟಾರೆ 62 ಅಂಕಗಳನ್ನು ಪಡೆದಿರುವ ಟೀಂ ಇಂಡಿಯಾ 64.58 ಪಿಸಿಟಿಯೊಂದಿಗೆ ಅಗ್ರಸ್ಥಾನದಲ್ಲಿದೆ. 5 ಪಂದ್ಯಗಳಲ್ಲಿ 3ರಲ್ಲಿ ಗೆಲುವು ಸಾಧಿಸಿರುವ ಕಿವೀಸ್‌ 36 ಅಂಕಗಳೊಂದಿಗೆ (60.00 ಪಿಸಿಟಿ) 2ನೇ ಸ್ಥಾನದಲ್ಲಿದೆ. 11 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿರುವ ಆಸೀಸ್‌ 59.09 ಪಿಸಿಟಿಯೊಂದಿಗೆ 78 ಅಂಕ ಪಡೆದು 3ನೇ ಸ್ಥಾನ, 2 ಪಂದ್ಯಗಳಲ್ಲಿ 1ರಲ್ಲಿ ಗೆಲುವು ಸಾಧಿಸಿರುವ ಬಾಂಗ್ಲಾದೇಶ 12 ಅಂಕಗಳೊಂದಿಗೆ 4ನೇ ಸ್ಥಾನ ಹಾಗೂ 5 ಪಂದ್ಯಗಳಲ್ಲಿ 2ರಲ್ಲಿ ಗೆಲುವು ಸಾಧಿಸಿರುವ ಪಾಕಿಸ್ತಾನ 36.66 ಪಿಸಿಟಿಯೊಂದಿಗೆ 22 ಅಂಕ ಪಡೆದು 5ನೇ ಸ್ಥಾನದಲ್ಲಿದೆ. ಇದನ್ನೂ ಓದಿ: PublicTV Explainer: ಬಿಸಿಸಿಐ ಕೇಂದ್ರ ಗುತ್ತಿಗೆ ಬಗ್ಗೆ ನಿಮಗೆಷ್ಟು ಗೊತ್ತು?

    ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಟಾಪ್‌-5 ತಂಡಗಳು
    * ಆಸ್ಟ್ರೇಲಿಯಾ – 37 ಪಂದ್ಯ – 4,345 ಅಂಕ – 117 ಶ್ರೇಯಾಂಕ
    * ಭಾರತ – 32 ಪಂದ್ಯ – 3,746 ಅಂಕ – 117 ಶ್ರೇಯಾಂಕ
    * ಇಂಗ್ಲೆಂಡ್‌ – 43 ಪಂದ್ಯ – 4,941 ಅಂಕ – 115 ಶ್ರೇಯಾಂಕ
    * ನ್ಯೂಜಿಲೆಂಡ್‌ – 29 ಪಂದ್ಯ – 2,939 ಅಂಕ – 101 ಶ್ರೇಯಾಂಕ
    * ದಕ್ಷಿಣ ಆಫ್ರಿಕಾ – 27 ಪಂದ್ಯ – 2,671 ಅಂಕ – 99 ಶ್ರೇಯಾಂಕ

    ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಟಾಪ್‌-5 ತಂಡಗಳು
    * ಭಾರತ – 58 ಪಂದ್ಯ – 7,020 ಅಂಕ – 121 ಶ್ರೇಯಾಂಕ
    * ಆಸ್ಟ್ರೇಲಿಯಾ – 45 ಪಂದ್ಯ – 5,309 ಅಂಕ – 118 ಶ್ರೇಯಾಂಕ
    * ದಕ್ಷಿಣ ಆಫ್ರಿಕಾ – 37 ಪಂದ್ಯ – 4,062 ಅಂಕ – 110 ಶ್ರೇಯಾಂಕ
    * ಪಾಕಿಸ್ತಾನ – 36 ಪಂದ್ಯ – 3,922 ಅಂಕ – 109 ಶ್ರೇಯಾಂಕ
    * ನ್ಯೂಜಿಲೆಂಡ್‌ – 46 ಪಂದ್ಯ – 4,708 ಅಂಕ – 102 ಶ್ರೇಯಾಂಕ

    ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ ಟಾಪ್‌-5 ತಂಡಗಳು
    * ಭಾರತ – 71 ಪಂದ್ಯ – 18,867 ಅಂಕ – 266 ಶ್ರೇಯಾಂಕ
    * ಇಂಗ್ಲೆಂಡ್‌ – 48 ಪಂದ್ಯ – 12,305 ಅಂಕ – 256 ಶ್ರೇಯಾಂಕ
    * ಆಸ್ಟ್ರೇಲಿಯಾ – 45 ಪಂದ್ಯ – 11,460 ಅಂಕ – 255 ಶ್ರೇಯಾಂಕ
    * ನ್ಯೂಜಿಲೆಂಡ್‌ – 63 ಪಂದ್ಯ – 15,994 ಅಂಕ – 254 ಶ್ರೇಯಾಂಕ
    * ಪಾಕಿಸ್ತಾನ – 58 ಪಂದ್ಯ – 14,454 ಅಂಕ – 249 ಶ್ರೇಯಾಂಕ

    ಅಂತಿಮ ಟೆಸ್ಟ್‌ ಗೆಲ್ಲಲು ಭಾರತ ರಣತಂತ್ರ: ಬೆನ್‌ ಸ್ಟೋಕ್ಸ್‌ ಸಾರಥ್ಯದ ಇಂಗ್ಲೆಂಡ್‌ ತಂಡ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಪೈಪೋಟಿ ನಡೆಸಿತು. ಮೊದಲ ಟೆಸ್ಟ್‌ ಗೆದ್ದು ತನ್ನ ಗುರಿ ಸಾಧನೆ ಕಡೆಗೆ ಮಹತ್ವದ ಹೆಜ್ಜೆಯನ್ನು ಇಟ್ಟರೂ, ಬಳಿಕ ಸತತ 3 ಸೋಲಿನೊಂದಿಗೆ ಟ್ರೋಫಿ ಗೆಲುವಿನ ಆಸೆ ಕೈಚೆಲ್ಲಿತು. ಈಗ ಸರಣಿಯ ಅಂತಿಮ ಪಂದ್ಯ ಧರ್ಮಶಾಲಾದ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ. ಮಾರ್ಚ್ 7 ರಿಂದ ಮಾರ್ಚ್‌ 11ರ ವರೆಗೆ ಪಂದ್ಯ ನಡೆಯಲಿದೆ. ಈಗಾಗಲೇ ಸರಣಿ ಗೆದ್ದಿರುವ ಭಾರತ ಅಂತಿಮ ಪಂದ್ಯದಲ್ಲೂ ಆಗ್ಲರಿಗೆ ಸೋಲುಣಿಸಲು ರಣತಂತ್ರ ರೂಪಿಸಿದೆ.

  • ICC Ranking: ಭಾರತ ನಂ.1 – ಕ್ರಿಕೆಟ್‌ ಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಟೀಂ ಇಂಡಿಯಾ

    ICC Ranking: ಭಾರತ ನಂ.1 – ಕ್ರಿಕೆಟ್‌ ಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಟೀಂ ಇಂಡಿಯಾ

    ಮೊಹಾಲಿ: ವಿಶ್ವಕಪ್‌ಗೂ (World Cup 2023) ಮುನ್ನ ಆರಂಭವಾಗಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲೇ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿರುವ ಭಾರತ ಏಕದಿನ ಕ್ರಿಕೆಟ್‌ನಲ್ಲಿ (ODI Cricket) ನಂ.1 ಸ್ಥಾನಕ್ಕೇರಿದೆ. ಇದರೊಂದಿಗೆ T20 ಹಾಗೂ ಟೆಸ್ಟ್‌ ಕ್ರಿಕೆಟ್‌ ನಲ್ಲೂ (Test Cricket) ಅಗ್ರಸ್ಥಾನಕೇರಿದ್ದು, ಕ್ರಿಕೆಟ್‌ ಲೋಕದಲ್ಲೇ ಹೊಸ ಇತಿಹಾಸ ನಿರ್ಮಿಸಿದೆ.

    ಭಾರತ ತಂಡ (Team India) 59 ಪಂದ್ಯಗಳಿಂದ 15,589 ಅಂಕಗಳು ಹಾಗೂ 264 ಶ್ರೇಯಾಂಕದೊಂದಿಗೆ (Rating) ಟಿ20 ಕ್ರಿಕೆಟ್‌ನಲ್ಲಿ, 42 ಪಂದ್ಯಗಳಿಂದ 4,864 ಅಂಕಗಳು ಹಾಗೂ 116 ಶ್ರೇಯಾಂಕದೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ಹಾಗೂ 29 ಪಂದ್ಯಗಳಿಂದ 3,434 ಅಂಕಗಳು ಹಾಗೂ 118 ಶ್ರೇಯಾಂಕದೊಂದಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಗ್ರಸ್ಥಾನಕ್ಕೇರಿದೆ. ಇದನ್ನೂ ಓದಿ: ಮೊಹಮ್ಮದ್ ಸಿರಾಜ್ ಟೀಂ ಇಂಡಿಯಾದ ಬೆಂಕಿ ಚೆಂಡು – ಜೈಹೋ ಟೀಂ ಇಂಡಿಯಾ ಎಂದ ಡಿಕೆಶಿ

    ಟಿ20 ಕ್ರಿಕೆಟ್‌ನಲ್ಲಿ ಹಾಲಿ ವಿಶ್ವಕಪ್‌ ಚಾಂಪಿಯನ್‌ ಇಂಗ್ಲೆಂಡ್‌ (England) ತಂಡವು 261 ಶ್ರೇಯಾಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ 254 ಶ್ರೇಯಾಂಕದೊಂದಿಗೆ 3ನೇ ಸ್ಥಾನ, 254 ಶ್ರೇಯಾಂಕದೊಂದಿಗೆ ನ್ಯೂಜಿಲೆಂಡ್‌ 4ನೇ ಸ್ಥಾನ ಹಾಗೂ 251 ಶ್ರೇಯಾಂಕದೊಂದಿಗೆ ದಕ್ಷಿಣ ಆಫ್ರಿಕಾ 5ನೇ ಸ್ಥಾನದಲ್ಲಿದೆ.

    ಏಕದಿನ ಕ್ರಿಕೆಟ್‌ನಲ್ಲಿ 115 ಶ್ರೇಯಾಂಕದೊಂದಿಗೆ ಪಾಕಿಸ್ತಾನ 2ನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 111 ಶ್ರೇಯಾಂಕದೊಂದಿಗೆ 3ನೇ ಸ್ಥಾನದಲ್ಲಿ, ದಕ್ಷಿಣ ಆಫ್ರಿಕಾ 106 ಶ್ರೇಯಾಂಕದೊಂದಿಗೆ 4ನೇ ಸ್ಥಾನದಲ್ಲಿ ಹಾಗೂ ಇಂಗ್ಲೆಂಡ್‌ 105 ಶ್ರೇಯಾಂಕದೊಂದಿಗೆ 5ನೇ ಸ್ಥಾನದಲ್ಲಿದೆ. ಇದನ್ನೂ ಓದಿ: ವಿಶ್ವಕಪ್‌ ಟೂರ್ನಿಯಲ್ಲಿ ಗೆದ್ದರೂ ಸೋತರೂ ದುಡ್ಡೋ ದುಡ್ಡು – ಬಹುಮಾನದ ಮೊತ್ತ ಪ್ರಕಟಿಸಿದ ICC

    ಟೆಸ್ಟ್‌ ಕ್ರಿಕೆಟ್‌ನಲ್ಲಿ 118 ಶ್ರೇಯಾಂಕದೊಂದಿಗೆ ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್‌ 115 ಶ್ರೇಯಾಂಕದೊಂದಿಗೆ 3ನೇ ಸ್ಥಾನ, ದಕ್ಷಿಣ ಆಫ್ರಿಕಾ 104 ಶ್ರೇಯಾಂಕದೊಂದಿಗೆ 4ನೇ ಸ್ಥಾನ ಹಾಗೂ 100 ಶ್ರೇಯಾಂಕದೊಂದಿಗೆ ನ್ಯೂಜಿಲೆಂಡ್‌ 5ನೇ ಸ್ಥಾನದಲ್ಲಿದೆ.

    ಸದ್ಯ ಏಕದಿನ ವಿಶ್ವಕಪ್‌‌ ಟೂರ್ನಿಗೆ ಭರ್ಜರಿ ಸಿದ್ಧತೆ ನಡೆಸಿರುವ ಭಾರತ ಆಸ್ಟ್ರೇಲಿಯಾ ವಿರುದ್ಧ ಮೂರು ಏಕದಿನ ಕ್ರಿಕೆಟ್‌ ಸರಣಿಯನ್ನಾಡುತ್ತಿದೆ. ಇದು ವಿಶ್ವಕಪ್‌ ಟೂರ್ನಿಗೆ ಪೂರ್ವ ತಯಾರಿಯೂ ಆಗಿದ್ದು, ಮೊದಲ ಪಂದ್ಯದಲ್ಲೇ 5 ವಿಕೆಟ್‌ಗಳ ಜಯ ಸಾಧಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ICC ರ‍್ಯಾಂಕಿಂಗ್‍ನಲ್ಲಿ 4ನೇ ಸ್ಥಾನಕ್ಕೆ ಜಿಗಿದ ಬುಮ್ರಾ – 9ನೇ ಸ್ಥಾನಕ್ಕಿಳಿದ ಕೊಹ್ಲಿ

    ICC ರ‍್ಯಾಂಕಿಂಗ್‍ನಲ್ಲಿ 4ನೇ ಸ್ಥಾನಕ್ಕೆ ಜಿಗಿದ ಬುಮ್ರಾ – 9ನೇ ಸ್ಥಾನಕ್ಕಿಳಿದ ಕೊಹ್ಲಿ

    ದುಬೈ: ತವರಿನಲ್ಲಿ ನಡೆದ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಐಸಿಸಿ ಟೆಸ್ಟ್  ರ‍್ಯಾಂಕಿಂಗ್‍ನಲ್ಲಿ 6 ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಜಿಗಿದಿದ್ದಾರೆ.

    ಇಂದು ಐಸಿಸಿ ಬಿಡುಗಡೆ ಮಾಡಿರುವ ಆಟಗಾರರ ರ‍್ಯಾಂಕಿಂಗ್‍ನಲ್ಲಿ ಬೌಲರ್‌ಗಳ ಪೈಕಿ ಬುಮ್ರಾ 4ನೇ ಸ್ಥಾನಕ್ಕೇರಿದರೆ, ಭಾರತದ ಸ್ಟಾರ್ ಬ್ಯಾಟ್ಸ್‌ಮ್ಯಾನ್‌ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಐಸಿಸಿ ಶ್ರೇಯಾಂಕದಲ್ಲಿ 9ನೇ ಸ್ಥಾನಕ್ಕೆ ಇಳಿದಿರುವುದು ಕ್ರಿಕೆಟ್ ಪ್ರೇಮಿಗಳಲ್ಲಿ ಕೊಂಚ ಬೇಸರ ತರಿಸಿದೆ. ಇದನ್ನೂ ಓದಿ: ಈ ಬಾರಿಯ ಐಪಿಎಲ್‍ನಲ್ಲಿ ಕಾಣಸಿಗಲ್ಲ ಈ ಜೋಡಿ ಆಟಗಾರರ ಕಮಾಲ್

    ಬೆಂಗಳೂರಿನಲ್ಲಿ ಶ್ರೀಲಂಕಾ ವಿರುದ್ಧದ ಡೇ – ನೈಟ್ 2ನೇ ಟೆಸ್ಟ್‌ನಲ್ಲಿ 8 ವಿಕೆಟ್‍ಗಳನ್ನು ಪಡೆದುಕೊಂಡು ರ‍್ಯಾಂಕಿಂಗ್‍ನಲ್ಲಿ ಬುಮ್ರಾ, ಶಾಹೀನ್ ಅಫ್ರಿದಿ, ಕೈಲ್ ಜೇಮಿಸನ್, ಟಿಮ್ ಸೌಥಿ, ಜೇಮ್ಸ್ ಆಂಡರ್ಸನ್, ನೀಲ್ ವ್ಯಾಗ್ನರ್ ಮತ್ತು ಜೋಶ್ ಹ್ಯಾಜಲ್‍ವುಡ್ ಅವರನ್ನು ಬೌಲರ್‌ಗಳ ಶ್ರೇಯಾಂಕದಲ್ಲಿ ಹಿಂದಿಕ್ಕಿದ್ದಾರೆ. ಇದನ್ನೂ ಓದಿ: IPL 2022 – ಡೆಲ್ಲಿ ತಂಡ ಸೇರಿಕೊಂಡ ಶೇನ್ ವಾಟ್ಸನ್

    ಬ್ಯಾಟ್ಸ್‌ಮ್ಯಾನ್‌ಗಳ ಪೈಕಿ ಕ್ಯಾಪ್ಟನ್ ವಿರಾಟ್ ಕೊಹ್ಲಿ, 4 ಸ್ಥಾನಗಳನ್ನು ಕಳೆದುಕೊಂಡರೆ, ರಿಷಬ್ ಪಂತ್ ಟಾಪ್-10 ರೊಳಗೆ ಉಳಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮೊಹಾಲಿಯಲ್ಲಿ ನಡೆದ ಆರಂಭಿಕ ಟೆಸ್ಟ್‌ನಲ್ಲಿ ಕೊಹ್ಲಿ 45ರನ್ ಗಳಿಸಿದರೆ, 2ನೇ ಟೆಸ್ಟ್‌ನಲ್ಲಿ 23 ಮತ್ತು 13ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ನವೆಂಬರ್ 2019ರಲ್ಲಿ ಬಾಂಗ್ಲಾದೇಶ ವಿರುದ್ಧ 136 ರನ್ ಗಳಿಸಿದ ನಂತರ ಕೊಹ್ಲಿ ಇನ್ನೂ ಶತಕ ಗಳಿಸಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ. ಇದನ್ನೂ ಓದಿ: ಐಪಿಎಲ್ 2022: ಅಗ್ರ ವಿದೇಶಿ ಆಟಗಾರರು ಲೀಗ್‍ನ ಮೊದಲ ವಾರದಲ್ಲಿ ಲಭ್ಯವಿರಲ್ಲ

    ಇನ್ನುಳಿದಂತೆ ಭಾರತದ ನಾಯಕ ರೋಹಿತ್ ಶರ್ಮಾ 6ನೇ ಸ್ಥಾನ ಉಳಿಸಿಕೊಂಡು ಬ್ಯಾಟಿಂಗ್ ಪಟ್ಟಿಯಲ್ಲಿ ಅತ್ಯುತ್ತಮ ಸ್ಥಾನ ಪಡೆದುಕೊಂಡಿದ್ದಾರೆ. ಭರ್ಜರಿ ಫಾರ್ಮ್‍ನಲ್ಲಿರುವ ಶ್ರೇಯಸ್ ಅಯ್ಯರ್ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಅಜೇಯ 92 ಮತ್ತು 67 ರನ್‍ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಆ ಬಳಿಕ ಇದೀಗ ರ‍್ಯಾಂಕಿಂಗ್‍ನಲ್ಲಿ 40 ರಿಂದ 37ನೇ ಸ್ಥಾನಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ.

  • ಐಸಿಸಿ ರ‍್ಯಾಂಕಿಂಗ್‌ನಲ್ಲೂ ಕಿಂಗ್ ಆದ ವಿರಾಟ್ ಕೊಹ್ಲಿ

    ಐಸಿಸಿ ರ‍್ಯಾಂಕಿಂಗ್‌ನಲ್ಲೂ ಕಿಂಗ್ ಆದ ವಿರಾಟ್ ಕೊಹ್ಲಿ

    ದುಬೈ: ವಾರ್ಷಂತ್ಯದಲ್ಲಿ ಐಸಿಸಿ ರ‍್ಯಾಂಕಿಂಗ್‌ ಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದೆ.

    ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಬ್ಯಾಟಿಂಗ್‍ನಲ್ಲಿ ನಂಬರ್ 1 ಪಟ್ಟದಲ್ಲಿ ಮುಂದುವರಿದಿದ್ದಾರೆ. ಸೋಮವಾರ ಪ್ರಕಟವಾದ ಬ್ಯಾಟ್ಸ್ ಮನ್‍ಗಳ ರ‍್ಯಾಂಕಿಂಗ್‌ನಲ್ಲಿ ಒಂದು ಸ್ಥಾನ ಕೆಳಗಿಳಿದಿರುವ ಚೇತೇಶ್ವರ ಪೂಜಾರ ಐದನೇ ಸ್ಥಾನಕ್ಕೆ ತಲುಪಿದ್ದಾರೆ.

    ವಿರಾಟ್ ಕೊಹ್ಲಿ 928 ಅಂಕಗಳಿಂದ ಅಗ್ರಸ್ಥಾನದಲ್ಲಿದ್ದಾರೆ, 911 ಅಂಕ ಹೊಂದಿರುವ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ 2ನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‍ನ ಕೇನ್ ವಿಲಿಯಮ್ಸನ್ (822) ಹಾಗೂ ಆಸ್ಟ್ರೇಲಿಯಾದ ಮಾರ್ನಸ್ ಲಾಬುಶೇನ್(805) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.

    ಒನ್ ಡೇ ಕ್ರಿಕೆಟಿನಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮೊದಲ ಎರಡು ಸ್ಥಾನದಲ್ಲಿ ಭದ್ರವಾಗಿದ್ದಾರೆ. ಕೊಹ್ಲಿ 887 ಅಂಕದಿಂದ ಮೊದಲ ಸ್ಥಾನದಲ್ಲಿದ್ದರೆ, ಹಿಟ್ ಮ್ಯಾನ್ ರೋಹಿತ್ ಶರ್ಮ 884 ಅಂಕದಿಂದ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

    ಟೆಸ್ಟ್ ಬೌಲಿಂಗ್ ವಿಭಾಗದಲ್ಲಿ ಭಾರತದ ಪ್ರಮುಖ ವೇಗಿ ಜಸ್‍ಪ್ರೀತ್ ಬೂಮ್ರಾ 794 ಅಂಕ ಪಡೆದು ಆರನೇ ಸ್ಥಾನದಲ್ಲಿ ಸ್ಥಿರವಾಗಿದ್ದಾರೆ. ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹಾಗೂ ಮೊಹಮ್ಮದ್ ಶಮಿ ಕ್ರಮವಾಗಿ 9ನೇ ಮತ್ತು 10ನೇ ಕ್ರಮಾಂಕದಲ್ಲಿದರೆ, ಏಕದಿನ ಪಂದ್ಯದ ಪಟ್ಟಿಯಲ್ಲಿ ಬೂಮ್ರಾ ಮೊದಲ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

    ಟೀಂ ಇಂಡಿಯ ಟೆಸ್ಟ್ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದರೆ, ಏಕದಿನ ಪಟ್ಟಿಯಲ್ಲಿ ಎರಡನೇ ರ‌್ಯಾಂಕ್‌ನಲ್ಲಿದ್ದು, ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದೆ.

  • ಹ್ಯಾಟ್ರಿಕ್ ಸಾಧನೆ ಬಳಿಕ 88 ಸ್ಥಾನ ಜಿಗಿದ ದೀಪಕ್ ಚಹರ್

    ಹ್ಯಾಟ್ರಿಕ್ ಸಾಧನೆ ಬಳಿಕ 88 ಸ್ಥಾನ ಜಿಗಿದ ದೀಪಕ್ ಚಹರ್

    ನವದೆಹಲಿ: ಭಾನುವಾರ ಬಾಂಗ್ಲಾದೇಶದ ವಿರುದ್ಧ ಟಿ-20 ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಭಾರತದ ಯುವ ವೇಗಿ ದೀಪಕ್ ಚಹರ್ ಐಸಿಸಿ ಬೌಲಿಂಗ್ ರ‍್ಯಾಂಕಿಂಗ್ ಪಟ್ಟಿಯಲ್ಲಿ 88 ಸ್ಥಾನ ಏರಿಕೆಯಾಗಿ 42 ಸ್ಥಾನ ಪಡೆದಿದ್ದಾರೆ.

    ಭಾನುವಾರ ಬಾಂಗ್ಲಾದೇಶದ ವಿರುದ್ಧ ನಡೆದ ಮೂರನೇ ಟಿ-20 ಪಂದ್ಯದಲ್ಲಿ ಭಾರತ 30 ರನ್‍ಗಳ ಭರ್ಜರಿ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ ಬೌಲರ್ ದೀಪಕ್ ಚಹರ್, ಈ ಪಂದ್ಯಕ್ಕೂ ಮುಂಚೆ ಐಸಿಸಿ ರ‍್ಯಾಂಕಿಂಗ್ ನಲ್ಲಿ 130 ಸ್ಥಾನದಲ್ಲಿದ್ದರು. ಆದರೆ ಈ ಪಂದ್ಯದಲ್ಲಿ 6 ವಿಕೆಟ್ ಪಡೆದು ಮಿಂಚಿದ ನಂತರ ಐಸಿಸಿ ರ‍್ಯಾಂಕಿಂಗ್ ಪಟ್ಟಿಯಲ್ಲಿ 88 ಸ್ಥಾನ ಜಿಗಿತಗೊಂಡು 42 ಸ್ಥಾನಕ್ಕೆ ಬಂದಿದ್ದಾರೆ.

    ಸೋಮವಾರ ಐಸಿಸಿ ತನ್ನ ನೂತನ ರ‍್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾನುವಾರ ಬಾಂಗ್ಲಾ ವಿರುದ್ಧ ಮಾರಕ ಬೌಲಿಂಗ್ ದಾಳಿ ಮಾಡಿ ಭಾರತ ಗೆಲುವಿಗೆ ನೆರವಾದ ದೀಪಕ್ ಚಹರ್ 517 ಅಂಕಗಳೊಂದಿಗೆ 42 ಸ್ಥಾನದಲ್ಲಿ ಇದ್ದಾರೆ. ಇವರನ್ನು ಬಿಟ್ಟರೆ 519 ಅಂಕಗಳಿಂದ ಜಸ್ಪ್ರಿತ್ ಬುರ್ಮಾ ಅವರು 40 ಸ್ಥಾನದಲ್ಲಿ ಇದ್ದರೆ, 29 ಸ್ಥಾನದಲ್ಲಿ ಭುವನೇಶ್ವರ್ ಕುಮಾರ್, 27 ಸ್ಥಾನದಲ್ಲಿ ವಾಷಿಂಗ್ಟನ್ ಸುಂದರ್, 25 ಸ್ಥಾನದಲ್ಲಿ ಚಹಲ್, 18 ಸ್ಥಾನದಲ್ಲಿ ಕೃನಲ್ ಪಾಂಡ್ಯ, 14 ಸ್ಥಾನದಲ್ಲಿ ಕುಲದೀಪ್ ಯಾದವ್ ಅವರು ಇದ್ದಾರೆ.

    ದೀಪಕ್ ಚಹರ್ ಅವರ ಅದ್ಭುತ ಬೌಲಿಂಗ್ ದಾಳಿಯ ಸಹಾಯದಿಂದ ಗೆದ್ದ ಭಾರತ ಐಸಿಸಿ ಟಿ-20 ರ‍್ಯಾಂಕಿಂಗ್ ನಲ್ಲಿ ಐದನೇ ಸ್ಥಾನದಲ್ಲಿ ಇದ್ದು, ಪಾಕಿಸ್ತಾನ ಮೊದಲ ಸ್ಥಾನದಲ್ಲಿ ಇದೆ. ಬಾಂಗ್ಲಾ ವಿರುದ್ಧ ಪಂದ್ಯದ ನಂತರ ರೋಹಿತ್ ಶರ್ಮಾ ಅವರು ಐಸಿಸಿ ಟಿ-20 ರ‍್ಯಾಂಕಿಂಗ್ ಪಟ್ಟಿಯಲ್ಲಿ 7 ನೇ ಸ್ಥಾನದಲ್ಲಿದ್ದು, ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ ಕೆ.ಎಲ್ ರಾಹುಲ್ ಒಂದು ಸ್ಥಾನ ಏರಿಕೆಯಾಗಿ ಎಂಟನೇ ಸ್ಥಾನದಲ್ಲಿ ಇದ್ದಾರೆ.

    ದೀಪಕ್ ಲೋಕೇಂದ್ರಸಿಂಗ್ ಚಹರ್ ಅವರು ಬಲಗೈ ಮಧ್ಯಮ-ವೇಗದ ಬೌಲರ್ ಮತ್ತು ಕೆಳ ಕ್ರಮಾಂಕದ ಬ್ಯಾಟ್ಸ್‍ಮನ್ ಆಗಿದ್ದು, ದೇಶೀಯ ಕ್ರಿಕೆಟ್‍ನಲ್ಲಿ ರಾಜಸ್ಥಾನ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಾರೆ. ಭಾನುವಾರದ ಪಂದ್ಯದಲ್ಲಿ ಹ್ಯಾಟ್ರಿಕ್ ಮೂಲಕ 7 ರನ್ ನೀಡಿ 6 ವಿಕೆಟ್ ಕಬಳಿಸದ ಅವರು, ಟ್ವೆಂಟಿ -20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಈ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡುವ ಮೂಲಕ ಭಾರತದ ಪರ ಟಿ-20ಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ದಾಖಲೆ ಬರೆದರು. ಈ ಪಂದ್ಯದಲ್ಲಿ ದೀಪಕ್ ಚಹರ್ ಎಸೆದದ್ದು 20 ಎಸೆತ (3.2 ಓವರ್), ನೀಡಿದ್ದು 7 ರನ್, ಯಾವುದೇ ಇತರೆ ರನ್ ಇಲ್ಲ. ಆದರೆ ಪಡೆದದ್ದು 6 ವಿಕೆಟ್. ಇದರಲ್ಲೂ 14 ಎಸೆತಗಳಿಗೆ ಯಾವುದೇ ರನ್ ಬಂದಿರಲಿಲ್ಲ.

    ಈ ಪಂದ್ಯದಲ್ಲಿ 6 ವಿಕೆಟ್ ಪಡೆಯುವ ಮೂಲಕ ಟಿ20ಯಲ್ಲಿ ಚಹರ್ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಮೊದಲು ಶ್ರೀಲಂಕಾದ ಅಜಂತ ಮೆಂಡೀಸ್ 8 ರನ್ ನೀಡಿ 6 ವಿಕೆಟ್ ಪಡೆದಿದ್ದರು. ಈಗ 7 ರನ್ ನೀಡಿ 6 ವಿಕೆಟ್ ಪಡೆಯುವುದರೊಂದಿಗೆ ಈ ದಾಖಲೆಯನ್ನು ಚಹರ್ ಈಗ ಮುರಿದಿದ್ದಾರೆ.

  • ಕ್ಯಾಚ್, ರನ್ ಆಯ್ತು – ಐಸಿಸಿ ರ‍್ಯಾಂಕಿಂಗ್‌ನಲ್ಲೂ ಧೋನಿಯನ್ನು ಹಿಂದಿಕ್ಕಿದ ಪಂತ್

    ಕ್ಯಾಚ್, ರನ್ ಆಯ್ತು – ಐಸಿಸಿ ರ‍್ಯಾಂಕಿಂಗ್‌ನಲ್ಲೂ ಧೋನಿಯನ್ನು ಹಿಂದಿಕ್ಕಿದ ಪಂತ್

    ದುಬೈ: ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಪಾದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿ ದಾಖಲೆ ಬರೆದಿದ್ದರು. ಇದರ ಬೆನ್ನಲ್ಲೇ ಅಧಿಕ ಕ್ಯಾಚ್, ರನ್‍ಗಳಿಸಿ ದಾಖಲೆ ನಿರ್ಮಿಸಿದ್ದರು. ಸದ್ಯ ಆಡಿರುವ 9 ಟೆಸ್ಟ್ ಪಂದ್ಯದಲ್ಲಿ ಜೀವನ ಶ್ರೇಷ್ಠ ಶ್ರೇಯಾಂಕವನ್ನು ಪಡೆಯುವ ಮೂಲಕ ಧೋನಿಯನ್ನು ಹಿಂದಿಕ್ಕಿದ್ದಾರೆ.

    ಐಸಿಸಿ ಪ್ರಕಟಿಸಿರುವ ಟೆಸ್ಟ್ ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ ರಿಷಬ್ ಪಂತ್ 17ನೇ ಸ್ಥಾನ ಪಡೆದಿದ್ದು, ಈ ಹಿಂದೆ ಟೀಂ ಇಂಡಿಯಾ ಪರ ಮಾಜಿ ನಾಯಕ, ವಿಕೆಟ್ ಕೀಪರ್ ಎಂಎಸ್ ಧೋನಿ 19ನೇ ಶ್ರೇಯಾಂಕ ಪಡೆದಿದ್ದರು. ಸದ್ಯ 21 ಸ್ಥಾನಗಳಲ್ಲಿ ಮುಂಬಡ್ತಿ ಪಡೆದಿರುವ ರಿಷಬ್ ಜನವರಿ 8 ರಂದು ಐಸಿಸಿ ಬಿಡುಗಡೆ ಮಾಡಿರುವ ಶ್ರೇಯಾಂಕ ಪಟ್ಟಿಯಲ್ಲಿ 673 ಅಂಕಗಳನ್ನು ಪಡೆದಿದ್ದಾರೆ.

    ಕಳೆದ 7 ಇನ್ನಿಂಗ್ಸ್ ಗಳಲ್ಲಿ ರಿಷಬ್ ಪಂತ್ 58.33 ಸರಾಸರಿಯಲ್ಲಿ 350 ರನ್ ಸಿಡಿಸಿ ಭಾರತದ ಪರ ಎರಡನೇ ಟಾಪ್ ರನ್ ಸ್ಕೋರರ್ ಆಗಿ ಹೊರ ಹೊಮ್ಮಿದ್ದರು. ಅಲ್ಲದೇ ಸದ್ಯ 2 ಶತಕಗಳು ಹಾಗೂ 2 ಬಾರಿ 90 ಪ್ಲಸ್ ರನ್ ಗಳನ್ನು ಸಿಡಿಸಿದ ಸಾಧನೆ ಮಾಡಿದ್ದಾರೆ. ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಅಜೇಯ 159 ರನ್ ಗಳಿಸಿದ್ದ ಪಂತ್ ವಿದೇಶಿ ನೆಲದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಗಳಿಸಿದ ಹೆಚ್ಚು ರನ್ ಎಂಬ ದಾಖಲೆ ಬರೆದಿದ್ದರು. ಈ ಹಿಂದೆ ಧೋನಿ ಪಾಕಿಸ್ತಾನದ ವಿರುದ್ಧ 148 ರನ್ ಸಿಡಿಸಿದ್ದರು.

    ಉಳಿದಂತೆ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 922 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲೇ ಮುಂದುವರಿದಿದ್ದು, ಚೇತೇಶ್ವರ ಪೂಜಾರ 881 ಅಂಕಗಳೊಂದಿಗೆ 3ನೇ ಸ್ಥಾನ ಪಡೆದಿದ್ದಾರೆ. ಇದರೊಂದಿಗೆ ಐಸಿಸಿ ಟಾಪ್ 5 ಪಟ್ಟಿಯಲ್ಲಿ ಇಬ್ಬರು ಭಾರತೀಯ ಆಟಗಾರರು ಸ್ಥಾನ ಪಡೆದಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv