Tag: ICC Cricket World Cup 2023

  • IND vs ENG: 2019 ರ ವಿಶ್ವಕಪ್ ಪಂದ್ಯದಲ್ಲಿ ಭಾರತ ಕೊನೆ ಬಾರಿಗೆ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿದಾಗ ಏನಾಗಿತ್ತು?

    IND vs ENG: 2019 ರ ವಿಶ್ವಕಪ್ ಪಂದ್ಯದಲ್ಲಿ ಭಾರತ ಕೊನೆ ಬಾರಿಗೆ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿದಾಗ ಏನಾಗಿತ್ತು?

    ಭಾರತದಲ್ಲಿ ಐಸಿಸಿ ವಿಶ್ವಕಪ್‌-2023 (World Cup 2023) ಟೂರ್ನಿ ನಡೆಯುತ್ತಿದ್ದು, ಅ.29 ರಂದು ಲಕ್ನೋದಲ್ಲಿ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಮತ್ತು ಭಾರತ (India-England) ತಂಡಗಳು ಮುಖಾಮುಖಿಯಾಗಲಿವೆ. ಭಾನುವಾರ ಲಕ್ನೋದಲ್ಲಿ ಹೈವೋಲ್ಟೇಜ್‌ ಪಂದ್ಯ ನಡೆಯಲಿದೆ.

    2023 ರ ವಿಶ್ವಕಪ್‌ನಲ್ಲಿ (World Cup 2019) ರೋಹಿತ್‌ ಪಡೆ ಐದಕ್ಕೆ ಐದೂ ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಸೆಮಿಫೈನಲ್‌ ಹಾದಿ ಸುಗಮಗೊಳಿಸಲು ಇಂಡಿಯಾ ಹವಣಿಸುತ್ತಿದೆ. ನಾಲ್ಕು ಸೋಲುಗಳಿಂದ ಕಂಗೆಟ್ಟಿರುವ ಹಾಲಿ ಚಾಂಪಿಯನ್‌, ಟೂರ್ನಿಯಲ್ಲಿ 2ನೇ ಗೆಲುವು ದಾಖಲಿಸುವ ಕನಸು ಹೊತ್ತಿದೆ. ಇದನ್ನೂ ಓದಿ: World Cup 2023: ಅಂದು ರೋಹಿತ್‌ ಶರ್ಮಾ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದು ಇದೇ ಕಾರಣಕ್ಕೆ

    2019 ರ ಆವೃತ್ತಿಯಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಪಂದ್ಯದಲ್ಲಿ ಕೊನೆ ಬಾರಿಗೆ ಈ ಎರಡೂ ತಂಡಗಳು ಮುಖಾಮುಖಿಯಾಗಿದ್ದವು. ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ವಿರುದ್ಧದ ಸೋಲಿನ ನೆರಳಿನಲ್ಲೇ ಇಂಗ್ಲೆಂಡ್ ಭಾರತದೊಂದಿಗೆ ಕಣಕ್ಕಿಳಿದಿತ್ತು. ಆತಿಥೇಯರು ಗೆಲ್ಲಲೇಬೇಕಾದ ಪರಿಸ್ಥಿತಿಯಲ್ಲಿತ್ತು. ಆದರೆ ಭಾರತದ ವಿರುದ್ಧ ಇಂಗ್ಲೆಂಡ್‌ ಗೆಲುವು ಸಾಧಿಸಿತು. ಇದರಿಂದ ಆಂಗ್ಲರಿಗೆ ಅವಕಾಶ ಸುಧಾರಿಸಿತು. ಇಂಗ್ಲೆಂಡ್ ಅಂತಿಮ ಗುಂಪು ಹಂತದ ಪಂದ್ಯದಲ್ಲಿ ನ್ಯೂಜಿಲೆಂಡ್ ಅನ್ನು ಸೋಲಿಸಿದ ನಂತರ ಸೆಮಿ-ಫೈನಲ್‌ಗೆ ಮುನ್ನಡೆಯಿತು.

    2019 ರ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ-ಇಂಗ್ಲೆಂಡ್‌ ಮುಖಾಮುಖಿಯ ಕೊನೆ ಪಂದ್ಯ ಕುತೂಹಲ ಮೂಡಿಸಿತ್ತು. ಟಾಸ್‌ ಗೆದ್ದ ಇಂಗ್ಲೆಂಡ್‌ ತಂಡ ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿತು. ಆಂಗ್ಲ ಪಡೆಯ ಜೇಸನ್‌ ರಾಯ್‌ ಮತ್ತು ಜಾನಿ ಬೈರ್‌ಸ್ಟೋವ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ಆ ಮೂಲಕ ಇಂಗ್ಲೆಂಡ್‌ 7 ವಿಕೆಟ್‌ ನಷ್ಟಕ್ಕೆ 337 ಅಸಾಧಾರಣ ಮೊತ್ತ ದಾಖಲಿಸಿತು. ಇದಕ್ಕೆ ಪ್ರತಿಯಾಗಿ ಭಾರತ ತಂಡದ ಉತ್ತಮ ಬ್ಯಾಟಿಂಗ್‌ ಪ್ರದರ್ಶನದ ಹೊರತಾಗಿಯೂ 31 ರನ್‌ಗಳ ಅಂತರದಲ್ಲಿ ಸೋಲನುಭವಿಸಿತು. ಭಾರತದ ಇನ್ನಿಂಗ್ಸ್‌ 306/5 ಕ್ಕೆ ಕೊನೆಗೊಂಡಿತು. ಇದನ್ನೂ ಓದಿ: 20 ವರ್ಷಗಳಿಂದ ಆಂಗ್ಲರ ವಿರುದ್ಧ ಗೆದ್ದೇ ಇಲ್ಲ ಭಾರತ – ಸೇಡು ತೀರಿಸಿಕೊಳ್ಳಲು ಸಮರಾಭ್ಯಾಸ?

    ಆರಂಭಿಕರಾದ ಜೇಸನ್ ರಾಯ್ ಮತ್ತು ಜಾನಿ ಬೈರ್‌ಸ್ಟೋವ್ ಸೇರಿದಂತೆ ಆಂಗ್ಲ ಬ್ಯಾಟ್ಸ್‌ಮನ್‌ಗಳು ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಜೊತೆಗೆ ಭಾರತದ ಬೌಲರ್‌ಗಳನ್ನು ದಂಡಿಸಿದರು. ಸ್ಟೋಕ್ಸ್ ಕೇವಲ 54 ಎಸೆತಗಳಲ್ಲಿ ಆಕರ್ಷಕ 79 ರನ್ ಗಳಿಸಿದರು. ಭಾರತದ ಪರವಾಗಿ ರೋಹಿತ್ ಶರ್ಮಾ ಟೂರ್ನಿಯ ಮೂರನೇ ಶತಕ (109 ಎಸೆತ, 15 ಬೌಂಡರಿ) ಮತ್ತು ವಿರಾಟ್ ಕೊಹ್ಲಿ ಅವರ ಸತತ ಐದನೇ ಅರ್ಧಶತಕ (76 ಎಸೆತ, 7 ಬೌಂಡರಿ) ಹೊರತಾಗಿಯೂ ಇಂಗ್ಲೆಂಡ್ ತಂಡದ ಮೊತ್ತ ಭಾರತಕ್ಕೆ ನಿಲುಕದ್ದು ಎಂದು ಸಾಬೀತಾಯಿತು.

    ಭಾರತದ ಅತ್ಯಂತ ಅನುಭವಿ ಆಟಗಾರರಲ್ಲಿ ಒಬ್ಬರಾದ ಎಂ.ಎಸ್. ಧೋನಿ ಅವರು ಅಂತಿಮ ಓವರ್‌ಗಳಲ್ಲಿ ರನ್ ವೇಗ ಹೆಚ್ಚಿಸಲು ಅಸಮರ್ಥರಾಗಿ ಟೀಕೆ ಎದುರಿಸಬೇಕಾಯಿತು. ಸೋಲಿನ ಹೊರತಾಗಿಯೂ, ಭಾರತವು ವಿಶ್ವಕಪ್ ಪಂದ್ಯಗಳಲ್ಲಿ ಇಂಗ್ಲೆಂಡ್ ವಿರುದ್ಧ ಪ್ರಬಲ ದಾಖಲೆಯನ್ನು ಹೊಂದಿದೆ. ಈ ಹಿಂದೆ ಹಲವಾರು ಬಾರಿ ಗೆದ್ದಿದೆ. 1983 ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ಗಮನಾರ್ಹ ಗೆಲುವನ್ನೂ ದಾಖಲಿಸಿತ್ತು. ಇದನ್ನೂ ಓದಿ: ಪಾಕ್ ಆಟಗಾರರಿಗೆ ಐದು ತಿಂಗಳಿಂದ ಸಂಬಳ ಕೊಟ್ಟಿಲ್ಲ: ಮಾಜಿ ನಾಯಕ ಲತೀಫ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಶಾನ್‌ಗೆ ಜೇನುಹುಳು ಕಂಟಕ, ಸೂರ್ಯನಿಗೆ ಮೊಣಕೈ ಗಾಯ – ಪಂದ್ಯ ಆರಂಭಕ್ಕೂ ಮುನ್ನವೇ ಭಾರತಕ್ಕೆ ತ್ರಿಬಲ್‌ ಶಾಕ್‌

    ಇಶಾನ್‌ಗೆ ಜೇನುಹುಳು ಕಂಟಕ, ಸೂರ್ಯನಿಗೆ ಮೊಣಕೈ ಗಾಯ – ಪಂದ್ಯ ಆರಂಭಕ್ಕೂ ಮುನ್ನವೇ ಭಾರತಕ್ಕೆ ತ್ರಿಬಲ್‌ ಶಾಕ್‌

    ಧರ್ಮಶಾಲಾ: 2019ರ ಏಕದಿನ ವಿಶ್ವಕಪ್‌ ಟೂರ್ನಿಯ ಸೆಮಿ ಫೈನಲ್‌ನಲ್ಲಿ ವಿರೋಚಿತ ಸೋಲಿಗೆ ಕಾರಣವಾಗಿದ್ದ ನ್ಯೂಜಿಲೆಂಡ್‌ (New Zealand) ವಿರುದ್ಧ ಟೀಂ ಇಂಡಿಯಾ (Team India) ಇಂದು ಸೆಣಸಲಿದೆ. ಇತ್ತಂಡಗಳು ಈವರೆಗೆ 116 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ 58 ಪಂದ್ಯಗಳಲ್ಲಿ ಮತ್ತು ನ್ಯೂಜಿಲೆಂಡ್‌ 50 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 7 ಪಂದ್ಯಗಳು ಫಲಿತಾಂಶವಿಲ್ಲದೇ ರದ್ದಾಗಿದ್ದು, 1 ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.

    ಈ ವಿಶ್ವಕಪ್‌ನಲ್ಲಿ (ICC Cricket World Cup 2023) ಎರಡೂ ತಂಡಗಳು ಆಡಿರುವ 4 ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿದ್ದು, ಭಾನುವಾರ ಮಳೆಯಿಂದ ಪಂದ್ಯ ರದ್ದಾಗದಿದ್ದರೆ ಒಂದು ತಂಡದ ಗೆಲುವಿನ ಓಟಕ್ಕೆ ಬ್ರೇಕ್‌ ಬೀಳಲಿದೆ. ಅದಕ್ಕಾಗಿ ಇತ್ತಂಡಗಳು ಬಲಿಷ್ಠ ಪ್ಲೇಯಿಂಗ್‌-11 ಸಿದ್ಧತೆ ಮಾಡಿಕೊಳ್ಳುತ್ತಿವೆ. ಇದನ್ನೂ ಓದಿ: World Cup 2023: ಡಚ್ಚರಿಗೆ ಡಿಚ್ಚಿ ಕೊಟ್ಟು ಗೆಲುವಿನ ಖಾತೆ ತೆರೆದ ಸಿಂಹಳಿಯರು – ಲಂಕಾಗೆ 5 ವಿಕೆಟ್‌ಗಳ ಜಯ

    ಭಾರತಕ್ಕೆ ತ್ರಿಬಲ್‌ ಶಾಕ್‌:
    ಕಿವೀಸ್‌ ವಿರುದ್ಧ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಕ್ಕೆ ಮತ್ತಷ್ಟು ಆಘಾತ ಎದುರಾಗಿದೆ. ಈಗಾಗಲೇ ಉಪನಾಯಕ ಹಾರ್ದಿಕ್‌ ಪಾಂಡ್ಯ (Hardik Pandya) ಪಂದ್ಯದಿಂದ ಹೊರಬಿದ್ದಿರುವ ಕಾರಣ ಪಾಂಡ್ಯ ಬದಲಿಗೆ ಸೂರ್ಯಕುಮಾರ್‌ ಯಾದವ್‌ (Suryakumar Yadav) ಅಥವಾ ಇಶಾನ್‌ ಕಿಶನ್‌ಗೆ ಅವಕಾಶ ನೀಡುವ ನಿರೀಕ್ಷೆಯಲ್ಲಿ ಟೀಂ ಇಂಡಿಯಾ ಇದೆ. ಆದ್ರೆ ಶನಿವಾರ ಅಭ್ಯಾಸ ಪಂದ್ಯದ ವೇಳೆ ಸೂರ್ಯಕುಮಾರ್‌ ಅವರ ಮೊಣಕೈಗೆ ಚೆಂಡು ತಾಗಿ ಪೆಟ್ಟಾಗಿಸಿಕೊಂಡಿದ್ದಾರೆ. ಬಳಿಕ ನೋವಿನಿಂದ ಬಳಲುತ್ತಾ ಮೈದಾನ ತೊರಿದ್ದಾರೆ. ಅಲ್ಲದೇ ಇಶಾನ್‌ಕಿಶನ್‌ಗೆ ಜೇನು ಹುಳು ಕಚ್ಚಿದ್ದು, ಅವರೂ ನೋವಿನಿಂದ ಒದ್ದಾಡಿದ ಪ್ರಸಂಗ ನಡೆದಿದೆ. ಹಾಗಾಗಿ ಪಾಂಡ್ಯ ಅವರ ಸ್ಥಾನಕ್ಕೆ ಯಾರು ಕಣಕ್ಕಿಳಿಯುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಇದನ್ನೂ ಓದಿ: ಕ್ಲಾಸೆನ್‌ ಅಬ್ಬರದ ಶತಕ – ಇಂಗ್ಲೆಂಡ್‌ ವಿರುದ್ಧ ಆಫ್ರಿಕಾಗೆ 229 ರನ್‌ ಭರ್ಜರಿ ಜಯ

    ಪಿಚ್‌ ರಿಪೋರ್ಟ್‌ ಹೇಗಿದೆ..?
    ಧರ್ಮಶಾಲಾ ಕ್ರೀಡಾಂಗಣವು ಸಮುದ್ರ ಮಟ್ಟಕ್ಕಿಂತ ಬಹಳ ಎತ್ತರದಲ್ಲಿರುವ ಕಾರಣ, ಇದು ವೇಗಿಗಳ ನೆಚ್ಚಿನ ತಾಣವೆನಿಸಿದೆ. ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿರುವ ಕ್ರೀಡಾಂಗಣಗಳ ಪೈಕಿ ಧರ್ಮಶಾಲಾದಲ್ಲಿ ವೇಗಿಗಳಿಗೆ ಹೆಚ್ಚಿನ ನೆರವು ಸಿಕ್ಕಿದೆ. ಉತ್ತಮ ಬೌನ್ಸ್‌ ಹೊಂದಿರುವ ಕಾರಣ ಇಲ್ಲಿ ನಡೆದಿರುವ 7 ಪಂದ್ಯಗಳಲ್ಲಿಯೂ ಟಾಸ್‌ ಗೆದ್ದ ತಂಡ ಮೊದಲು ಫೀಲ್ಡಿಂಗ್‌ ಆಯ್ದುಕೊಂಡಿದೆ. ಇದನ್ನೂ ಓದಿ: ಪಾಕಿಸ್ತಾನ್‌ ಜಿಂದಾಬಾದ್‌ ಅನ್ನದೇ ಇನ್ನೇನು ಹೇಳ್ಬೇಕು? – ಪೊಲೀಸ್‌ ಅಧಿಕಾರಿ ಜೊತೆ ಪಾಕ್‌ ಅಭಿಮಾನಿ ವಾಗ್ವಾದ

    ಇಲ್ಲಿ ಎರಡೂ ಇನ್ನಿಂಗ್ಸ್‌ಗಳ ಮೊದಲ 10 ಓವರ್‌ಗಳಲ್ಲಿ ಚೆಂಡು ಬಹಳಷ್ಟು ಸ್ಟಿಂಗ್ ಆಗಲಿದ್ದು, ಬೂಮ್ರಾ ಹಾಗೂ ಸಿರಾಜ್ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಗಾಯಾಳು ಪಾಂಡ್ಯ ಹೊರಗುಳಿದಿರುವ ಕಾರಣ, ಶಮಿಯನ್ನು ಆಡಿಸುವುದು ಉತ್ತಮ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಆದ್ರೆ ಬ್ಯಾಟಿಂಗ್‌ನಲ್ಲೂ ನೆರವು ನೀಡುವ ಅಗತ್ಯವಿರುವ ಕಾರಣ ಶಾರ್ದೂಲ್‌ ಠಾಕೂರ್‌ ಅವರನ್ನೇ ಮುಂದುವರಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]