Tag: ICC

  • 1 ಪಂದ್ಯದ ಆಟದಿಂದ ಕೊಹ್ಲಿ, ಸಾಲ್ಟ್‌ ಹಿಂದಿಕ್ಕಿ ಟಿ20ಯಲ್ಲಿ ಅಭಿಷೇಕ್‌ ಶರ್ಮಾ ವಿಶ್ವದಾಖಲೆ

    1 ಪಂದ್ಯದ ಆಟದಿಂದ ಕೊಹ್ಲಿ, ಸಾಲ್ಟ್‌ ಹಿಂದಿಕ್ಕಿ ಟಿ20ಯಲ್ಲಿ ಅಭಿಷೇಕ್‌ ಶರ್ಮಾ ವಿಶ್ವದಾಖಲೆ

    ದುಬೈ: ಏಷ್ಯಾ ಕಪ್‌ನಲ್ಲಿ (Asia Cup) ಸಿಕ್ಸ್‌, ಬೌಂಡರಿ ಸಿಡಿಸಿ ಸದ್ದು ಮಾಡಿದ ಅಭಿಷೇಕ್‌ ಶರ್ಮಾ (Abhishek Sharma) ಐಸಿಸಿ ಟಿ20 (ICC T20) ರ‍್ಯಾಕ್‌ ಪಟ್ಟಿಯಲ್ಲಿ ವಿಶ್ವದಾಖಲೆ (World Record) ಮಾಡಿದ್ದಾರೆ.

    25 ವರ್ಷದ ಅಭಿಷೇಕ್‌ ಶರ್ಮಾ ಮೊದಲ ಸ್ಥಾನ ಪಡೆದಿದ್ದು ಅಲ್ಲದೇ 926 ರೇಟಿಂಗ್‌ ಪಾಯಿಂಟ್‌ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

    ಇಲ್ಲಿಯವರೆಗೆ 2020 ರಲ್ಲಿ ಇಂಗ್ಲೆಂಡಿನ ಡೇವಿಡ್‌ ಮಲಾನ್‌ 919 ರೇಟಿಂಗ್‌ ಪಾಯಿಂಟ್‌ ಪಡೆದಿದ್ದು ಇದೂವರೆಗಿನ ದಾಖಲೆಯಾಗಿತ್ತು. ಆದರೆ ಏಷ್ಯಾ ಕಪ್‌ನ 7 ಪಂದ್ಯಗಳಿಂದ 314 ರನ್‌ ಸಿಡಿಸಿದ್ದರಿಂದ ವಿಶ್ವದಾಖಲೆ ನಿರ್ಮಾಣವಾಗಿದೆ.  ಇದನ್ನೂ ಓದಿಬಿಸಿಸಿಐ ಮುಂದೆ ಮಂಡಿಯೂರಿದ ಪಾಕ್‌ ಸಚಿವ – ಕದ್ದೊಯ್ದಿದ್ದ ಏಷ್ಯಾ ಕಪ್‌ ವಾಪಸ್‌

    ವಿರಾಟ್‌ ಕೊಹ್ಲಿ ಈ ಹಿಂದೆ 909 ರೇಟಿಂಗ್‌ ಪಾಯಿಂಟ್‌ ಪಡೆದಿದ್ದರು. ಇದು ಈವರೆಗಿನ ಭಾರತೀಯ ಬ್ಯಾಟರ್‌ನ ಅತ್ಯುತ್ತಮ ರೇಟಿಂಗ್‌ ಪಾಯಿಂಟ್‌ ಆಗಿತ್ತು. ಆದರೆ ಈಗ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯನ್ನು ಅಭಿಷೇಕ್‌ ಶರ್ಮಾ ಮುರಿದಿದ್ದಾರೆ.

    ಸೂಪರ್‌ 4 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಶರ್ಮಾ 31 ಎಸೆತಗಳಲ್ಲಿ 61 ರನ್‌ (8 ಬೌಂಡರಿ, 2 ಸಿಕ್ಸ್‌) ಸಿಡಿಸಿದ್ದರು. ಈ ಸ್ಫೋಟಕ ಆಟದಿಂದಾಗಿ ಅಭಿಷೇಕ್‌ ಶರ್ಮಾ ಅವರ ರೇಟಿಂಗ್‌ ಪಾಯಿಂಟ್‌ ರಾಕೆಟ್‌ನಂತೆ ಮೇಲಕ್ಕೆ ಹೋಗಿದೆ.

    ಅಂಕಪಟ್ಟಿಯಲ್ಲಿ ಫಿಲ್‌ ಸಾಲ್ಟ್‌ 2ನೇ ರ‍್ಯಾಕ್‌ ಪಡೆದರೆ ತಿಲಕ್‌ ವರ್ಮಾ ಮೂರನೇ ಸ್ಥಾನ ಪಡೆದಿದ್ದಾರೆ. 2 ಸ್ಥಾನ ಕುಸಿದಿದ್ದರಿಂದ ಸೂರ್ಯಕುಮಾರ್‌ ಯಾದವ್‌ 8ನೇ ಸ್ಥಾನಕ್ಕೆ ಜಾರಿದ್ದಾರೆ.

  • ಪಹಲ್ಗಾಮ್‌ ಸಂತ್ರಸ್ತರಿಗೆ ಗೆಲುವು ಅರ್ಪಿಸಿದ ಸೂರ್ಯ, ಪ್ಲೇನ್‌ ಕ್ರ್ಯಾಶ್‌ ಸನ್ನೆ ಮಾಡಿದ ರೌಫ್‌ಗೆ ಬಿತ್ತು ದಂಡ

    ಪಹಲ್ಗಾಮ್‌ ಸಂತ್ರಸ್ತರಿಗೆ ಗೆಲುವು ಅರ್ಪಿಸಿದ ಸೂರ್ಯ, ಪ್ಲೇನ್‌ ಕ್ರ್ಯಾಶ್‌ ಸನ್ನೆ ಮಾಡಿದ ರೌಫ್‌ಗೆ ಬಿತ್ತು ದಂಡ

    – ಗನ್‌ ಸೆಲೆಬ್ರೇಷನ್‌ ಮಾಡಿದ ಫರ್ಹಾನ್‌ಗೆ ಬಿಗ್‌ ವಾರ್ನಿಂಗ್‌

    ದುಬೈ: ಯುಎಇನಲ್ಲಿ ನಡೆಯುತ್ತಿರುವ ಏಷ್ಯಾಕಪ್‌ (Asia Cup 2025) ಟೂರ್ನಿಯಲ್ಲಿ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಟೀಂ ಇಂಡಿಯಾ ಕ್ಯಾಪ್ಟನ್‌ ಸೂರ್ಯಕುಮಾರ್‌ ಯಾದವ್‌ (Suryakumar Yadav) ಹಾಗೂ ಪಾಕ್‌ ವೇಗಿ ಹ್ಯಾರಿಸ್‌ ರೌಫ್‌ಗೆ ಪಂದ್ಯ ಶುಲ್ಕದ ತಲಾ 30% ದಂಡ ವಿಧಿಸಲಾಗಿದೆ.

    ಶುಕ್ರವಾರ ವಿಚಾರಣೆ ಮುಗಿದ ಬಳಿಕ ಮ್ಯಾಚ್‌ ರೆಫರಿ ರಿಚಿ ರಿಚರ್ಡ್‌ಸನ್‌ ಇಬ್ಬರೂ ಆಟಗಾರರಿಗೆ ಪಂದ್ಯ ಶುಲ್ಕದ 30% ದಂಡ ವಿಧಿಸಿದ್ದಾರೆ. ಆದ್ರೆ ಗನ್‌ ಸೆಲೆಬ್ರೇಷನ್‌ ಮಾಡಿದ್ದ ಸಾಹಿಬ್‌ಜಾದಾ ಫರ್ಹಾನ್‌ಗೆ (Sahibzada Farhan) ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ಇದನ್ನೂ ಓದಿ: ಫಸ್ಟ್‌ ಟೈಮ್‌ – ಏಷ್ಯಾ ಕಪ್‌ ಇತಿಹಾಸದಲ್ಲಿ ಇಂಡೋ- ಪಾಕ್ ಫೈನಲ್

    ಸೂರ್ಯನಿಗೇಕೆ ದಂಡ?
    ‌ಏಷ್ಯಾಕಪ್‌ ಟೂರ್ನಿಯ ಗುಂಪುಹಂತದ ಪಂದ್ಯದಲ್ಲಿ ಪಾಕ್‌ ವಿರುದ್ಧ ಭಾರತ ಗೆದ್ದಾಗ ನಾಯಕ ಸೂರ್ಯಕುಮಾರ್‌ ಯಾದವ್‌ ಪಂದ್ಯದ ಗೆಲುವು ಪಹಲ್ಗಾಮ್‌ ಸಂತ್ರಸ್ತರು ಹಾಗೂ ಭಾರತೀಯ ಸೇನೆಗೆ ಅರ್ಪಣೆ ಎಂದಿದ್ದರು. ಈ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ ಎಂದು ಪಿಸಿಬಿ ಐಸಿಸಿಗೆ ದೂರು ಸಲ್ಲಿಸಿತ್ತು. ಈ ಬಗ್ಗೆ ಸೂರ್ಯರನ್ನ ವಿಚಾರಣೆ ನಡೆಸಿದಾಗ ತನ್ನದೇನು ತಪ್ಪಿಲ್ಲವೆಂದು ಒಪ್ಪಿಕೊಂಡರು. ಬಳಿಕ ಐಸಿಸಿ 30% ದಂಡ ವಿಧಿಸಿ ಆದೇಶಿಸಿತು. ಏಷ್ಯಾ ಕಪ್ ಮುಗಿದ ನಂತರವೇ ಐಸಿಸಿಯಿಂದ ಅಧಿಕೃತ ದೃಢೀಕರಣ ಸಿಗಲಿದೆ ಎಂದು ರಿಚರ್ಡ್‌ಸನ್‌ ತಿಳಿಸಿದ್ದಾರೆ.

    ಮತ್ತೊಂದು ಕಡೆ ಪ್ಲೇನ್‌ ಕ್ರ್ಯಾಶ್‌ ರೀತಿ ಸಂಭ್ರಮಿಸಿದ್ದಕ್ಕೆ ರೌಫ್‌ ವಿರುದ್ಧ ಬಿಸಿಸಿಐ ಐಸಿಸಿಗೆ ದೂರು ನೀಡಿತ್ತು. ವಿಚಾರಣೆ ಬಳಿಕ ಐಸಿಸಿ ರೌಫ್‌ಗೂ ದಂಡ ವಿಧಿಸಿತು. ಇನ್ನೂ ಸೂಪರ್‌ ಫೋರ್‌ನ ಮೊದಲ ಪಂದ್ಯದಲ್ಲಿ ಫಿಫ್ಟಿ ಬಾರಿಸಿ ಗನ್‌ ಸೆಲೆಬ್ರೇಷನ್‌ ಮಾಡಿದ ಫರ್ಹಾನ್‌ಗೆ ಎಚ್ಚರಿಕೆ ನೀಡಿತು. ಇದನ್ನೂ ಓದಿ: ಪಹಲ್ಗಾಮ್‌ ಸಂತ್ರಸ್ತರು, ಭಾರತೀಯ ಸೇನೆಗೆ ಗೆಲುವು ಅರ್ಪಣೆ ಎಂದ ಸೂರ್ಯಗೆ ಐಸಿಸಿ ವಾರ್ನಿಂಗ್‌

    ಈಗಾಗಲೇ ಎರಡು ಪಂದ್ಯಗಳನ್ನಾಡಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳು 3ನೇ ಬಾರಿಗೆ ಮುಖಾಮುಖಿಯಾಗುತ್ತಿವೆ. ಏಷ್ಯಾಕಪ್‌ನ 41 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ನಡುವೆ ಫೈನಲ್ ಪಂದ್ಯ ನಡೆಯಲಿದೆ.

  • ಪಹಲ್ಗಾಮ್‌ ಸಂತ್ರಸ್ತರು, ಭಾರತೀಯ ಸೇನೆಗೆ ಗೆಲುವು ಅರ್ಪಣೆ ಎಂದ ಸೂರ್ಯಗೆ ದಂಡ ವಿಧಿಸಿದ ಐಸಿಸಿ

    ಪಹಲ್ಗಾಮ್‌ ಸಂತ್ರಸ್ತರು, ಭಾರತೀಯ ಸೇನೆಗೆ ಗೆಲುವು ಅರ್ಪಣೆ ಎಂದ ಸೂರ್ಯಗೆ ದಂಡ ವಿಧಿಸಿದ ಐಸಿಸಿ

    ದುಬೈ: ಪಹಲ್ಗಾಮ್‌ ದಾಳಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ ಟೀಂ ಇಂಡಿಯಾ (Team India) ನಾಯಕ ಸೂರ್ಯಕುಮಾರ್‌ ಯಾದವ್‌ (Suryakumar Yadav) ವಿರುದ್ಧ ಐಸಿಸಿ ಶಿಸ್ತು ಕ್ರಮಕೈಗೊಂಡಿದೆ.

    ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ ನೀಡಿದ ದೂರನ್ನು ಸ್ವೀಕರಿಸಿದ ಐಸಿಸಿ (ICC) ಸೂರ್ಯಕುಮಾರ್‌ ಯಾದವ್‌ ಅವರ ವಿಚಾರಣೆ ನಡೆಸಿ ಪಂದ್ಯ ಶುಲ್ಕದ ಶೇ.30 ರಷ್ಟು ದಂಡ ವಿಧಿಸಿದೆ.

    ವಿಚಾರಣೆ ಸಂದರ್ಭದಲ್ಲಿ ಸೂರ್ಯ ತನ್ನ ಮೇಲೆ ಬಂದ ಆರೋಪಕ್ಕೆ ತಪ್ಪೊಪ್ಪಿಕೊಂಡಿಲ್ಲ. ಮುಂದೆ ನಡೆಯವ ಫೈನಲ್‌ ಪಂದ್ಯದಲ್ಲಿ ರಾಜಕೀಯ ಎಂದು ಅರ್ಥೈಸಬಹುದಾದ ಯಾವುದೇ ಹೇಳಿಕೆ ನೀಡದಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.  ಇದನ್ನೂ ಓದಿ:  ಭಾರತ-ಪಾಕ್ ಪಂದ್ಯದ ವೇಳೆ ದುವರ್ತನೆ – ಫರ್ಹಾನ್, ರೌಫ್‌ ವಿರುದ್ಧ ಐಸಿಸಿಗೆ ಬಿಸಿಸಿಐ ದೂರು

    ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ ನೀಡಿದ ದೂರನ್ನು ಸ್ವೀಕರಿಸಿದ ಐಸಿಸಿ (ICC) ಸೂರ್ಯಕುಮಾರ್‌ ಯಾದವ್‌ ಅವರ ವಿಚಾರಣೆ ನಡೆಸಿತ್ತು. ಪಿಸಿಬಿ ಸಲ್ಲಿಸಿದ ಎಲ್ಲಾ ಪುರಾವೆಗಳು ಮತ್ತು ಹೇಳಿಕೆಗಳನ್ನು ಪರಿಶೀಲಿಸಿದ ನಂತರ ಸೂರ್ಯಕುಮಾರ್ ಅವರ ಹೇಳಿಕೆಗಳು ಕ್ರೀಡಾ ಸ್ಪೂರ್ತಿಗೆ ವಿರುದ್ಧವಾಗಿದೆ. ಹೀಗಾಗಿ ಸೂರ್ಯಕುಮಾರ್‌ ವಿರುದ್ಧ ಆರೋಪ ಹೊರಿಸುವಂತೆ ಮ್ಯಾಚ್‌ ರೆಫ್ರೀ ರಿಚಿ ರಿಚರ್ಡ್ಸನ್ ತೀರ್ಮಾನಿಸಿದ್ದರು. ಇದನ್ನೂ ಓದಿ:  ಸಿಕ್ಸ್‌ ಮೇಲೆ ಸಿಕ್ಸ್‌ – ಏಷ್ಯಾಕಪ್‌ನಲ್ಲಿ ದಾಖಲೆ ಬರೆದ ಅಭಿಷೇಕ್‌ ಶರ್ಮಾ

    ಸೂರ್ಯ ಹೇಳಿದ್ದೇನು?
    ಸೆಪ್ಟೆಂಬರ್ 14 ರಂದು ಪಾಕಿಸ್ತಾನದ ವಿರುದ್ಧ ಭಾರತ ಜಯಗಳಿಸಿದ ನಂತರ ಮಾತನಾಡಿದ ಸೂರ್ಯ, ಪಹಲ್ಗಾಮ್ ಸಂತ್ರಸ್ತರ ಕುಟುಂಬಗಳೊಂದಿಗೆ ನಾವು‌ ನಿಲ್ಲುತ್ತೇವೆ, ನಮ್ಮ ಒಗ್ಗಟ್ಟನ್ನು ಪ್ರದರ್ಶಿಸುತ್ತೇವೆ. ಶೌರ್ಯವನ್ನು ಪ್ರದರ್ಶಿಸಿದ ನಮ್ಮ ಎಲ್ಲಾ ಸಶಸ್ತ್ರ ಪಡೆಗಳಿಗೆ ಈ ಗೆಲುವನ್ನು ಅರ್ಪಿಸಲು ಬಯಸುತ್ತೇವೆ. ಅವರು ನಮಗೆಲ್ಲರಿಗೂ ಸ್ಫೂರ್ತಿ ಎಂದು ಹೇಳಿದ್ದರು.

  • ಪಹಲ್ಗಾಮ್‌ ಸಂತ್ರಸ್ತರು, ಭಾರತೀಯ ಸೇನೆಗೆ ಗೆಲುವು ಅರ್ಪಣೆ ಎಂದ ಸೂರ್ಯಗೆ ಐಸಿಸಿ ವಾರ್ನಿಂಗ್‌

    ಪಹಲ್ಗಾಮ್‌ ಸಂತ್ರಸ್ತರು, ಭಾರತೀಯ ಸೇನೆಗೆ ಗೆಲುವು ಅರ್ಪಣೆ ಎಂದ ಸೂರ್ಯಗೆ ಐಸಿಸಿ ವಾರ್ನಿಂಗ್‌

    ದುಬೈ: ಪಹಲ್ಗಾಮ್‌ ದಾಳಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ ಟೀಂ ಇಂಡಿಯಾ (Team India) ನಾಯಕ ಸೂರ್ಯಕುಮಾರ್‌ ಯಾದವ್‌ಗೆ (Suryakumar Yadav) ಐಸಿಸಿ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ.

    ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ ನೀಡಿದ ದೂರನ್ನು ಸ್ವೀಕರಿಸಿದ ಐಸಿಸಿ (ICC) ಸೂರ್ಯಕುಮಾರ್‌ ಯಾದವ್‌ ಅವರ ವಿಚಾರಣೆ ನಡೆಸಿದೆ.

    ಪಿಸಿಬಿ ಸಲ್ಲಿಸಿದ ಎಲ್ಲಾ ಪುರಾವೆಗಳು ಮತ್ತು ಹೇಳಿಕೆಗಳನ್ನು ಪರಿಶೀಲಿಸಿದ ನಂತರ ಸೂರ್ಯಕುಮಾರ್ ಅವರ ಹೇಳಿಕೆಗಳು ಕ್ರೀಡಾ ಸ್ಪೂರ್ತಿಗೆ ವಿರುದ್ಧವಾಗಿದೆ. ಹೀಗಾಗಿ ಸೂರ್ಯಕುಮಾರ್‌ ವಿರುದ್ಧ ಆರೋಪ ಹೊರಿಸುವಂತೆ ಮ್ಯಾಚ್‌ ರೆಫ್ರೀ ರಿಚಿ ರಿಚರ್ಡ್ಸನ್ ತೀರ್ಮಾನಿಸಿದ್ದಾರೆ ಎಂದು ವರದಿಯಾಗಿದೆ.  ಇದನ್ನೂ ಓದಿ:  ಫಿಫ್ಟಿ ಬಾರಿಸಿ ಫರ್ಹಾನ್‌ ಗನ್‌ ಸೆಲೆಬ್ರೇಷನ್ – ಪೆಹಲ್ಗಾಮ್ ದಾಳಿಯ ಉಗ್ರರಿಗೆ ಹೋಲಿಸಿದ ನೆಟ್ಟಿಗರು

    ಪಾಕಿಸ್ತಾನದ ಬ್ಯಾಟರ್‌ ಫರ್ಹಾನ್ ಸಾಹಿಬ್‌ಜಾದಾ ಮತ್ತು ಹ್ಯಾರಿಸ್ ರೌಫ್ ಮೈದಾನದಲ್ಲಿ ತೋರಿದ ವರ್ತನೆಗೆ ಸಂಬಂಧಿಸಿಂತೆ ಬಿಸಿಸಿಐ ನೀಡಿದ ದೂರಿನ ಬಗ್ಗೆ ನಾಳೆ ಇಬ್ಬರ ವಿಚಾರಣೆ ನಡೆಯಲಿದೆ.  ಎರಡೂ ತಂಡಗಳ ಆಟಗಾರರ ವಿರುದ್ಧ ಐಸಿಸಿ ಶಿಸ್ತುಕ್ರಮವನ್ನು ಕೈಗೊಂಡು ದಂಡ ವಿಧಿಸುವ ಸಾಧ್ಯತೆಯಿದೆ. ಇದನ್ನೂ ಓದಿ:  ವಿಮಾನ ಕ್ರ್ಯಾಶ್‌ ರೀತಿ ಸನ್ನೆ ಮಾಡಿದ ರೌಫ್‌ಗೆ ರುಬ್ಬಿದ ನೆಟ್ಟಿಗರು – ಆಪರೇಷನ್‌ ಸಿಂಧೂರಕ್ಕೆ ಹೋಲಿಸಿ ಕಿಡಿ

    ಸೂರ್ಯ ಹೇಳಿದ್ದೇನು?
    ಸೆಪ್ಟೆಂಬರ್ 14 ರಂದು ಪಾಕಿಸ್ತಾನದ ವಿರುದ್ಧ ಭಾರತ ಜಯಗಳಿಸಿದ ನಂತರ ಮಾತನಾಡಿದ ಸೂರ್ಯ, ಪಹಲ್ಗಾಮ್ ಸಂತ್ರಸ್ತರ ಕುಟುಂಬಗಳೊಂದಿಗೆ ನಾವು‌ ನಿಲ್ಲುತ್ತೇವೆ, ನಮ್ಮ ಒಗ್ಗಟ್ಟನ್ನು ಪ್ರದರ್ಶಿಸುತ್ತೇವೆ. ಶೌರ್ಯವನ್ನು ಪ್ರದರ್ಶಿಸಿದ ನಮ್ಮ ಎಲ್ಲಾ ಸಶಸ್ತ್ರ ಪಡೆಗಳಿಗೆ ಈ ಗೆಲುವನ್ನು ಅರ್ಪಿಸಲು ಬಯಸುತ್ತೇವೆ. ಅವರು ನಮಗೆಲ್ಲರಿಗೂ ಸ್ಫೂರ್ತಿ ಎಂದು ಹೇಳಿದ್ದರು.

  • ಭಾರತ-ಪಾಕ್ ಪಂದ್ಯದ ವೇಳೆ ದುವರ್ತನೆ – ಫರ್ಹಾನ್, ರೌಫ್‌ ವಿರುದ್ಧ ಐಸಿಸಿಗೆ ಬಿಸಿಸಿಐ ದೂರು

    ಭಾರತ-ಪಾಕ್ ಪಂದ್ಯದ ವೇಳೆ ದುವರ್ತನೆ – ಫರ್ಹಾನ್, ರೌಫ್‌ ವಿರುದ್ಧ ಐಸಿಸಿಗೆ ಬಿಸಿಸಿಐ ದೂರು

    – ಪಹಲ್ಗಾಮ್‌ ಸಂತ್ರಸ್ತರಿಗೆ ಗೆಲುವು ಅರ್ಪಿಸಿದ್ದಕ್ಕೆ ಸೂರ್ಯ ವಿರುದ್ಧ ಪಿಸಿಬಿ ಕಂಪ್ಲೆಂಟ್‌

    ದುಬೈ: ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಳಿಕ ಭಾರತ-ಪಾಕ್‌ (Ind vs Pak) ಮುಖಾಮುಖಿಯಾಗಿರುವ ಮೊದಲ ಟೂರ್ನಿ ವಿವಾದದ ಕಣವಾಗಿ ಮಾರ್ಪಟ್ಟಿದೆ. ಕಳೆದ ಭಾನುವಾರ ಭಾರತ ಮತ್ತು ಪಾಕ್‌ ನಡುವಿನ ಮೊದಲ ಸೂಪರ್‌ ಫೋರ್‌ ಪಂದ್ಯ ಕೂಡ ಸ್ಲೆಡ್ಜಿಂಗ್‌ಗೆ (ಕೆಣಕುವುದು) ವೇದಿಕೆಯಾಗಿತ್ತು.

    ಸೂಪರ್‌-4 ಪಂದ್ಯದ ವೇಳೆ ದುವರ್ತನೆ ತೋರಿದ ಪಾಕಿಸ್ತಾನಿ ಕ್ರಿಕೆಟಿಗರಾದ ಹ್ಯಾರಿಸ್ ರೌಫ್ (Haris Rauf) ಮತ್ತು ಸಾಹಿಬ್‌ಝಾದಾ ಫರ್ಹಾನ್ (Sahibzada Farhan) ವಿರುದ್ಧ ಐಸಿಸಿಗೆ ಬಿಸಿಸಿಐ (BCCI) ದೂರು ನೀಡಿದೆ. ಐಸಿಸಿಗೆ ಇ-ಮೇಲ್ ಮೂಲಕ ದೂರು ನೀಡಿದೆ. ಸಾಹಿಬ್‌ಝಾದಾ ಫರ್ಹಾನ್ ಮತ್ತು ರೌಫ್ ಈ ಆರೋಪಗಳನ್ನು ಲಿಖಿತವಾಗಿ ನಿರಾಕರಿಸಿದ್ರೆ ಐಸಿಸಿ ವಿಚಾರಣೆ ನಡೆಸುವ ನಿರೀಕ್ಷೆಯಿದೆ. ಅವರು ಐಸಿಸಿ ಎಲೈಟ್ ಪ್ಯಾನಲ್ ರೆಫರಿ ರಿಚಿ ರಿಚರ್ಡ್ಸನ್ ಅವರ ಮುಂದೆ ವಿಚಾರಣೆಗೆ ಹಾಜರಾಗಬೇಕಾಗಬಹುದು ಎಂದು ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ.

    Abhishek Sharma 3

    ವಿವಾದ ಆಗಿದ್ದೇನು?
    ಸೂಪರ್‌-4 ಪಂದ್ಯದ ವೇಳೆ ಸಾಹಿಬ್‌ಝಾದಾ ಫರ್ಹಾನ್ ಫಿಫ್ಟಿ ಬಾರಿಸಿದ ಬಳಿಕ ಗನ್‌ ಸೆಲಬ್ರೇಷನ್‌ ಮಾಡಿದ್ದರು. ರೈಫಲ್‌ ರೀತಿ ಶೋ ಮಾಡಿ ಮೂರು ಸುತ್ತು ಗುಂಡು ಹಾರಿಸಿದ ರೀತಿ ಆಕ್ಷನ್‌ ಮಾಡಿದ್ದರು. ಇನ್ನೂ ಫೀಲ್ಡಿಂಗ್‌ ವೇಳೆ ಹ್ಯಾರಿಸ್‌ ರೌಫ್‌ಗೆ ಕೊಹ್ಲಿ ಅಭಿಮಾನಿಗಳು ಕಾಡಿಸಿದರು. 2022ರ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಹ್ಯಾರಿಸ್‌ ರೌಫ್‌ಗೆ ಬಾರಿಸಿದ್ದ ಸಿಕ್ಸ್‌ ಅನ್ನು ಉಲ್ಲೇಖಿಸುತ್ತಾ ಕೊಹ್ಲಿ ಕ್ಲೊಹ್ಲಿ ಅಂತ ಕೂಗುತ್ತಿದ್ದರು. ಈ ವೇಳೆ ರೌಫ್‌ ವಿಮಾನ ಕ್ರ್ಯಾಶ್‌ ರೀತಿ ಸನ್ನೆ ಮಾಡಿ ಅಣುಕಿಸಿದ್ದರು. ಇದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಹೀಗಾಗಿ ರೌಫ್ ಮತ್ತು ಫರ್ಹಾನ್‌ ಇಬ್ಬರೂ ಐಸಿಸಿ ವಿಚಾರಣೆಯಲ್ಲಿ ತಮ್ಮ ಸನ್ನೆಗಳನ್ನು ವಿವರಿಸಬೇಕಾಗುತ್ತದೆ. ಒಂದು ವೇಳೆ ಅವರು ಮನವೊಲಿಸಲು ಸಾಧ್ಯವಾಗದಿದ್ದರೇ ನೀತಿ ಸಂಹಿತೆಯ ಉಲ್ಲಂಘನೆ ಪ್ರಕಾರ ನಿರ್ಬಂಧ ಎದುರಿಸಬೇಕಾಗುತ್ತೆ ಎಂದು ತಿಳಿದುಬಂದಿದೆ.

    ಸೂರ್ಯ ವಿರುದ್ಧ ದೂರು
    ಇನ್ನೂ ಲೀಗ್‌ ಸುತ್ತಿನಲ್ಲಿ ಪಾಕ್‌ ವಿರುದ್ಧದ ಪಂದ್ಯದಲ್ಲಿ ಗೆದ್ದ ಬಳಿಕ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್‌ ಯಾದವ್‌ (Suryakumar Yadav), ಪಂದ್ಯದ ಗೆಲುವುನ್ನು ಪಹಲ್ಗಾಮ್‌ ದಾಳಿಯ ಸಂತ್ರಸ್ತರು ಹಾಗೂ ಭಾರತೀಯ ಸಶಸ್ತ್ರಪಡೆಗಳಿಗೆ ಅರ್ಪಿಸಿದ್ದರು. ಇದಕ್ಕಾಗಿ ಸೂರ್ಯಕುಮಾರ್‌ ಯಾದವ್‌ ವಿರುದ್ಧ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (PCB) ಐಸಿಸಿಗೆ ದೂರು ನೀಡಿದೆ.

    ಸೂರ್ಯಕುಮಾರ್‌ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿದ್ದು, ಕ್ರೀಡಾ ಪ್ರತಿಷ್ಠೆಗೆ ಹಾನಿಯಾಗಿದೆ. ಹೀಗಾಗಿ ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ್ದಾರೆ. ಸೂರ್ಯ ಈ ಆರೋಪಗಳನ್ನು ನಿರಾಕರಿಸಿದ್ರೆ, ಅಧಿಕೃತ ವಿಚಾರಣೆಗೆ ಐಸಿಸಿ ಮುಂದೆ ಹಾಜರಾಗಬೇಕಾಗುತ್ತೆ ಎಂದು ತಿಳಿದುಬಂದಿದೆ.

  • Asia Cup 2025 | ಏಷ್ಯಾ ಕಪ್‌ಗೆ 30 ವರ್ಷಗಳ ಇತಿಹಾಸ

    Asia Cup 2025 | ಏಷ್ಯಾ ಕಪ್‌ಗೆ 30 ವರ್ಷಗಳ ಇತಿಹಾಸ

    ಏಷ್ಯಾ ಕಪ್‌ ಟಿ20 ಕ್ರಿಕೆಟ್‌ (Asia Cup T20 Cricket) ಟೂರ್ನಿ ಇಂದಿನಿಂದ ಆರಂಭವಾಗಲಿದೆ. ಯುಎಇ (UAE) ದೇಶದ ದುಬೈ, ಅಬುಧಾಬಿ ಕ್ರೀಡಾಂಗಣದಲ್ಲಿ 20 ದಿನಗಳ ಕಾಲ 8 ದೇಶಗಳು ಒಟ್ಟು 19 ಪಂದ್ಯಗಳನ್ನು ಆಡಲಿವೆ. ಉದ್ಘಾಟನಾ ಪಂದ್ಯ ಅಫ್ಘಾನಿಸ್ತಾನ ಮತ್ತು ಹಾಂಕಾಂಗ್‌ ಮಧ್ಯೆ ನಡೆದರೆ ಸೆ.28ರಂದು ಫೈನಲ್‌ ಪಂದ್ಯ ನಡೆಯಲಿದೆ.

    ಹಾಲಿ ಚಾಂಪಿಯನ್‌ ಭಾರತ (India) ಬುಧವಾರ ಯುಎಇ ವಿರುದ್ಧ ತನ್ನ ಮೊದಲ ಪಂದ್ಯವಾಡಲಿದೆ. ಪಾಕಿಸ್ತಾನದ ವಿರುದ್ಧ ಸೂಪರ್‌ ಸಂಡೇ ಹೈವೋಲ್ಟೇಜ್‌ ಪಂದ್ಯವನ್ನಾಡಲಿದೆ. ಪ್ರತಿದಿನ ರಾತ್ರಿ 8 ಗಂಟೆಗೆ ಪಂದ್ಯ ಶುರುವಾಗಲಿದೆ. ಈಹೊತ್ತಿನಲ್ಲಿ ಏಷ್ಯಾಕಪ್‌ ಆವೃತ್ತಿಯ ಇತಿಹಾಸ ತಿಳಿಯುವುದೂ ಅಷ್ಟೇ ಸೂಕ್ತವಾಗಿದೆ.

    30 ವರ್ಷಗಳ ಇತಿಹಾಸ ನೀವೂ ತಿಳಿಯಿರಿ
    ಏಷ್ಯಾ ಕಪ್ ಟೂರ್ನಿಗೆ 30 ವರ್ಷಗಳ ಇತಿಹಾಸವಿದೆ. ಮೊದಲಬಾರಿಗೆ ಏಷ್ಯನ್‌ ಕ್ರಿಕೆಟ್ ಸಮಿತಿ (ACC)ಯು ಏಷ್ಯಾದ ಅತ್ಯುತ್ತಮ ತಂಡವನ್ನು ನಿರ್ಧರಿಸುವ ಸಲುವಾಗಿ 1984ರಲ್ಲಿ ಶಾರ್ಜಾದಲ್ಲಿ ಏಷ್ಯಾಕಪ್ ಹಮ್ಮಿಕೊಂಡಾಗ ಏಕದಿನ ಮಾದರಿಯಲ್ಲೇ ನಡೆಸುವುದೆಂದು ನಿರ್ಧಾರ ಆಗಿತ್ತು . ಆಗ ಟಿ20 ಮಾದರಿ ಸಹ ಇರಲಿಲ್ಲ ಎಂಬುದು ಸಹ ಗಮನಾರ್ಹ. ಆದರೆ ಈ ರೀತಿ ಪ್ರತಿಬಾರಿ ಮಾದರಿ ಬದಲಾಯಿಸುವ ಪರಿಪಾಠ ಕಳೆದ 10 ವರ್ಷಗಳಿಂದ ಸಾಗಿ ಬಂದಿದೆ. 2009ರ ಬಳಿಕ ಈ ಟೂರ್ನಿ ಪ್ರತಿ 2 ವರ್ಷಗಳಿಗೊಮ್ಮೆ ನಿಯಮಿತವಾಗಿ ನಡೆಸಲು ನಿರ್ಧರಿಸಲಾಯಿತು. ಆದರೆ 2015ರಲ್ಲಿ ಮುಂದಿನ ವಿಶ್ವ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ನಡೆಸುವ ನಿರ್ಧಾರಕ್ಕೆ ಬರಲಾಯಿತು. ಹಾಗಾಗಿ 2026ರ ಈ ಬಾರಿಯ ಏಷ್ಯಾ ಕಪ್ ಟಿ20 ಮಾದರಿಯಲ್ಲಿ ನಡೆಯಲಿದೆ.

    ಭಾರತ vs ಪಾಕಿಸ್ತಾನ 3 ಬಾರಿ ಮುಖಾಮುಖಿ?
    ಪಹಲ್ಗಾಮ್‌ ಉಗ್ರರ ದಾಳಿ ಹಾಗೂ ಆ ಬಳಿಕ ನಡೆದ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಳಿಕ ಇದೇ ಮೊದಲ ಬಾರಿ ಭಾರತ-ಪಾಕ್‌ (India vs Pakistan) ತಂಡಗಳು ತಂಡಗಳು ಬಹುರಾಷ್ಟ್ರೀಯ ಟೂರ್ನಿಯಲ್ಲಿ ಮುಖಾಮುಖಿಯಾಗಲಿವೆ. ಪ್ರಶಸ್ತಿ ಸುತ್ತಿಗೆ ಬಂದ್ರೆ ಉಭಯ ತಂಡಗಳು ಒಂದಲ್ಲ ಮೂರು ಬಾರಿ ಕಾದಾಟ ನಡೆಸುವ ಸಾಧ್ಯತೆಯಿದೆ.

    ಸೆ.14ರಂದು ಗುಂಪು ಹಂತದಲ್ಲಿ ಮೊದಲ ಬಾರಿಗೆ ಸೆಣಸಾಟವಾಡಲಿವೆ. ಒಂದು ವೇಳೆ ಗುಂಪು ಹಂತದಲ್ಲಿ ಗೆದ್ದು ಸೂಪರ್‌ 6 ಪ್ರವೇಶಿಸಿದ್ರೆ ಅಲ್ಲೂ ಕಾದಾಟ ನಡೆಸಬೇಕಾಗುತ್ತದೆ. ಸೂಪರ್‌ 6 ರಲ್ಲಿ ಅಗ್ರ ಸ್ಥಾನ ಪಡೆದರೆ ಫೈನಲ್‌ನಲ್ಲೂ ಮುಖಾಮುಖಿಯಾಗುವ ಸಾಧ್ಯತೆಯಿದೆ.

    ಭಾರತವೇ ಯಶಸ್ವಿ ತಂಡ
    ಏಷ್ಯಾಕಪ್‌ ಇಲ್ಲಿಯವರೆಗೆ 16 ಆವೃತ್ತಿಗಳನ್ನು ಪೂರ್ಣಗೊಳಿಸಿದ್ದು, ಟೀಂ ಇಂಡಿಯಾ ಅತ್ಯಂತ ಯಶಸ್ವಿ ತಂಡವಾಗಿದೆ. ಏಷ್ಯಾಕಪ್‌ನಲ್ಲಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ತಂಡ ಭಾರತ ಆಗಿದೆ.

    ಭಾರತ – 8 ಪ್ರಶಸ್ತಿಗಳು
    ಶ್ರೀಲಂಕಾ – 6 ಪ್ರಶಸ್ತಿಗಳು
    ಪಾಕಿಸ್ತಾನ – 2 ಪ್ರಶಸ್ತಿಗಳು

    ರನ್ನರ್‌ ಅಪ್‌
    ಶ್ರೀಲಂಕಾ – 7 ಬಾರಿ ರನ್ನರ್‌ ಅಪ್‌
    ಭಾರತ – 3 ಬಾರಿ ರನ್ನರ್‌ ಅಪ್‌
    ಪಾಕಿಸ್ತಾನ – 3 ಬಾರಿ ರನ್ನರ್‌ ಅಪ್‌
    ಬಾಂಗ್ಲಾದೇಶ – 3 ಬಾರಿ ರನ್ನರ್‌ ಅಪ್‌

  • Asia Cup 2025 | ಒಮ್ಮೆ ಏಕದಿನ, ಒಮ್ಮೆ ಟಿ20 – ಸ್ವರೂಪ ಬದಲಾಗೋದು ಏಕೆ?

    Asia Cup 2025 | ಒಮ್ಮೆ ಏಕದಿನ, ಒಮ್ಮೆ ಟಿ20 – ಸ್ವರೂಪ ಬದಲಾಗೋದು ಏಕೆ?

    – ಇಲ್ಲಿದೆ ಗೆದ್ದವರು, ಸೋತವರ ಪಟ್ಟಿ

    ಯಾವುದೇ ಮಹತ್ವದ ಟೂರ್ನಿ ಒಂದು ಮಾದರಿಯಲ್ಲಿ ನಡೆಯಬೇಕಾದ್ರೆ ಅದರ ಸ್ವರೂಪ ಮೊದಲೇ ನಿರ್ಧಾರವಾಗಿರುತ್ತೆ.. ಆದ್ರೆ ಏಷ್ಯಾ ಕಪ್ (Asia Cup 2025) ಮಾತ್ರ ಹಾಗಲ್ಲ. 2022ರಲ್ಲಿ ನಡೆದ ಏಷ್ಯಾ ಕಪ್ ಟಿ20 ಮಾದರಿಯಲ್ಲಿ ನಡೆದಿತ್ತು. 2023ರಲ್ಲಿ ಏಕದಿನ ಮಾದರಿಯಲ್ಲಿ ನಡೆಯಿತು. ಇದೀಗ ಮತ್ತೆ ಟಿ20 ಮಾದರಿಗೆ ಬದಲಾಯಿಸಲಾಗಿದೆ. ಈ ರೀತಿ ಪ್ರತಿಬಾರಿಯೂ ಮಾದರಿ ಬದಲಾಯಿಸಲು ಕಾರಣವೇನು? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

    ಏಷ್ಯಾ ಕಪ್‌ ಟಿ20 ಕ್ರಿಕೆಟ್‌ (Asia Cup T20 Cricket) ಟೂರ್ನಿ ಇಂದಿನಿಂದ ಆರಂಭವಾಗಲಿದೆ. ಯುಎಇ (UAE) ದೇಶದ ದುಬೈ, ಅಬುಧಾಬಿ ಕ್ರೀಡಾಂಗಣದಲ್ಲಿ 20 ದಿನಗಳ ಕಾಲ 8 ದೇಶಗಳು ಒಟ್ಟು 19 ಪಂದ್ಯಗಳನ್ನು ಆಡಲಿವೆ. ಉದ್ಘಾಟನಾ ಪಂದ್ಯ ಅಫ್ಘಾನಿಸ್ತಾನ ಮತ್ತು ಹಾಂಕಾಂಗ್‌ ಮಧ್ಯೆ ನಡೆದರೆ ಸೆ.28ರಂದು ಫೈನಲ್‌ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್‌ ಭಾರತ (India) ಬುಧವಾರ ಯುಎಇ ವಿರುದ್ಧ ತನ್ನ ಮೊದಲ ಪಂದ್ಯವಾಡಲಿದೆ. ಪಾಕಿಸ್ತಾನದ ವಿರುದ್ಧ ಸೂಪರ್‌ ಸಂಡೇ ಹೈವೋಲ್ಟೇಜ್‌ ಪಂದ್ಯವನ್ನಾಡಲಿದೆ.

    ವಿಶ್ವಕಪ್‌ಗೆ ಪೂರ್ವತಯಾರಿ ಏಷ್ಯಾ ಕಪ್
    1975ರಲ್ಲಿ ಪ್ರಾರಂಭವಾದ ಐಸಿಸಿ ಏಕದಿನ ವಿಶ್ವಕಪ್ (ICC ODI World Cup) ಪ್ರತಿ 4 ವರ್ಷಗಳಿಗೊಮ್ಮೆ ಬರುತ್ತದೆ. ಅದೇ 2007ರಲ್ಲಿ ಪ್ರಾರಂಭವಾದ ಐಸಿಸಿ ಟಿ20 ವಿಶ್ವಕಪ್ ಅನ್ನು ಪ್ರತಿ 2 ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. ಏಷ್ಯಾ ಕಪ್ ಸಹ 2 ವರ್ಷಗಳಿಗೊಮ್ಮೆ ನಡೆಯುತ್ತಿರುವುದರಿಂದ ಇದನ್ನು ವಿಶ್ವಕಪ್‌ಗೆ ಪೂರ್ವತಯಾರಿಯಾಗಿ ನಡೆಸಲು ಅನುಕೂಲ ಆಗುವಂತೆ ನಡೆಸಲು ಐಸಿಸಿ ನಿರ್ದೇಶನ ನೀಡಿದೆ. ಹಾಗಾಗಿ ಪ್ರತಿ ಬಾರಿ ಟಿ20 ವಿಶ್ವಕಪ್‌ಗೆ (T20 World Cup) ಮುನ್ನ ಟಿ20 ಮಾದರಿಯಲ್ಲಿ ಏಕದಿನ ವಿಶ್ವಕಪ್‌ಗೆ ಮುನ್ನ ಏಕದಿನ ಮಾದರಿಯಲ್ಲಿ ಕ್ರಿಕೆಟ್‌ ಟೂರ್ನಿ ನಡೆಯಲಿದೆ.

    ಯಾವಾಗಿನಿಂದ ಈ ಬದಲಾವಣೆ?
    2015ರ ಬಳಿಕ ಈ ಬೆಳವಣಿಗೆ ನಡೆದಿದೆ. 2016 ರಲ್ಲಿ ಏಷ್ಯಾಕಪ್ ಟಿ20 ಮಾದರಿಯಲ್ಲಿ ಏಷ್ಯಾ ಕಪ್ ನಡೆಯಿತು. ಇದು 2016ರ ಟಿ20 ವಿಶ್ವಕಪ್‌ಗೂ ಮುನ್ನ ಸಿದ್ಧತೆಯಾಗಿತ್ತು. 2018 ರಲ್ಲಿ ಏಷ್ಯಾ ಕಪ್ ಟೂರ್ನಿಯು ಏಕದಿನ ಮಾದರಿಯಲ್ಲಿ ನಡೆಯಿತು. ಇದು 2019ರ ಏಕದಿನ ವಿಶ್ವಕಪ್‌ಗೆ ಸಿದ್ಧತೆಯಾಗಿತ್ತು. 2022ರಲ್ಲಿ ಟಿ20 ಮಾದರಿಯಲ್ಲಿ ಏಷ್ಯಾ ಕಪ್ ನಡೆಯಿತು. ಇದು 2022ರ ಟಿ20 ವಿಶ್ವಕಪ್‌ಗೆ ಪೂರ್ವತಯಾರಿ ಆಗಿತ್ತು. 2023 ರಲ್ಲಿ ಏಕದಿನ ಮಾದರಿಯಲ್ಲಿ ಏಷ್ಯಾ ಕಪ್ ನಡೆಯಿತು. ಇದು 2023ರ ಏಕದಿನ ವಿಶ್ವಕಪ್‌ಗೆ ಸಕಲ ಸಿದ್ಧತೆಯಾಗಿತ್ತು. 2025 ರಲ್ಲಿ ಟಿ20ಐ ಮಾದರಿಯಲ್ಲಿ ಏಷ್ಯಾ ಕಪ್ ನಡೆಯಲಿದೆ. ಇದು 2026 ರ ಟಿ20ಐ ವಿಶ್ವಕಪ್‌ಗೆ ಪೂರ್ವ ಸಿದ್ಧತೆಯಾಗಿರಲಿದೆ. ಜೊತೆಗೆ ಎರಡೂ ಮಾದರಿಗಳ ಜನಪ್ರಿಯತೆ ಹೆಚ್ಚಲು, ಅಭಿಮಾನಿಗಳನ್ನು, ಪ್ರಾಯೋಜಕರನ್ನು ಹಿಡಿದಿಟ್ಟುಕೊಳ್ಳಲು ಐಸಿಸಿ ಮತ್ತು ಎಸಿಸಿ ಕಂಡುಕೊಂಡಿರುವ ತಂತ್ರವಾಗಿದೆ.

    ಭಾರತವೇ ಯಶಸ್ವಿ ತಂಡ
    ಏಷ್ಯಾಕಪ್‌ ಇಲ್ಲಿಯವರೆಗೆ 16 ಆವೃತ್ತಿಗಳನ್ನು ಪೂರ್ಣಗೊಳಿಸಿದ್ದು, ಟೀಂ ಇಂಡಿಯಾ ಅತ್ಯಂತ ಯಶಸ್ವಿ ತಂಡವಾಗಿದೆ. ಏಷ್ಯಾಕಪ್‌ನಲ್ಲಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ತಂಡ ಭಾರತ ಆಗಿದೆ.

    ಭಾರತ – 8 ಪ್ರಶಸ್ತಿಗಳು
    ಶ್ರೀಲಂಕಾ – 6 ಪ್ರಶಸ್ತಿಗಳು
    ಪಾಕಿಸ್ತಾನ – 2 ಪ್ರಶಸ್ತಿಗಳು

    ರನ್ನರ್‌ ಅಪ್‌
    ಶ್ರೀಲಂಕಾ – 7 ಬಾರಿ ರನ್ನರ್‌ ಅಪ್‌
    ಭಾರತ – 3 ಬಾರಿ ರನ್ನರ್‌ ಅಪ್‌
    ಪಾಕಿಸ್ತಾನ – 3 ಬಾರಿ ರನ್ನರ್‌ ಅಪ್‌
    ಬಾಂಗ್ಲಾದೇಶ – 3 ಬಾರಿ ರನ್ನರ್‌ ಅಪ್‌

  • Asia Cup 2025 | ಇಂದಿನಿಂದ ಟೂರ್ನಿ – 8 ತಂಡಗಳ ಬಲಾಬಲ ಹೇಗಿದೆ?

    Asia Cup 2025 | ಇಂದಿನಿಂದ ಟೂರ್ನಿ – 8 ತಂಡಗಳ ಬಲಾಬಲ ಹೇಗಿದೆ?

    ಬಹುನಿರೀಕ್ಷಿತ ಏಷ್ಯಾಕಪ್ (Asia Cup) ಟೂರ್ನಿಯು ಇಂದಿನಿಂದ ಯುಎಇನಲ್ಲಿ ಶುರುವಾಗುತ್ತಿದೆ. ಸೆ.28ರ ವರೆಗೆ ಟೂರ್ನಿ ನಡೆಯಲಿದೆ. ಭಾರತ ತಂಡ (Team India) ತನ್ನ ಮೊದಲ ಪಂದ್ಯವನ್ನು ಯುಎಇ ವಿರುದ್ಧ ಸೆಪ್ಟೆಂಬರ್‌ 10ರಂದು ಆಡಲಿದೆ. ಪ್ರತಿದಿನ ರಾತ್ರಿ 8 ಗಂಟೆಗೆ ಪಂದ್ಯ ಶುರುವಾಗಲಿದೆ.

    ದುಬೈ (Dubai) ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತ ತಂಡ ಅನೇಕ ಪ್ರಯೋಗಗಳನ್ನು ನಡೆಸುವ ಸಾಧ್ಯತೆ ಇದೆ. ಜೊತೆಗೆ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ಅವರು ಟಿ20 ತಂಡಕ್ಕೆ ಉಪನಾಯಕನಾಗಿ ಮರಳಿರುವುದು ತಂಡದ ರಚನೆ ಮೇಲೆ ಯಾವ ರೀತಿಯ ಪ್ರಭಾವ ಬೀರಬಹುದು ಎಂಬ ಬಗ್ಗೆಯೂ ಕುತೂಹಲ ಇದ್ದೇ ಇದೆ. ಅಲ್ಲದೇ 2026ರ ಟಿ20 ವಿಶ್ವಕಪ್‌ ಮೇಲೆ ಕಣ್ಣಿಟ್ಟಿರುವ ಭಾರತ ಈ ಟೂರ್ನಿಯಲ್ಲಿ ಹೇಗೆ ಪ್ರದರ್ಶನ ನೀಡಲಿದೆ ಎಂಬುದೂ ಕೂಡ ಅಷ್ಟೇ ಮುಖ್ಯವಾಗಿದೆ.

    ಇನ್ನೂ ಪ್ರತಿವರ್ಷ ಏಷ್ಯಾಕಪ್‌ ಟೂರ್ನಿಯಲ್ಲಿ 6 ತಂಡಗಳು ಪಾಲ್ಗೊಳ್ಳುತ್ತಿದ್ದವು. ಈ ಬಾರಿ ತಂಡಗಳ ಸಂಖ್ಯೆಯನ್ನು 8ಕ್ಕೆ ಏರಿಸಲಾಗಿದ್ದು, ಬಲಾ ಬಲ ಹೇಗಿದೆ ಎಂಬುದನ್ನಿಲ್ಲಿ ನೋಡಬಹುದು…

    ಹೇಗಿದೆ ತಂಡಗಳ ಬಲಾಬಲ?
    ಟೀಂ ಇಂಡಿಯಾ
    ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್‌ ಗಿಲ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಜಿತೇಶ್ ಶರ್ಮಾ (ವಿಕೆಟ್‌ ಕೀಪರ್‌), ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅರ್ಷ್‌ದೀಪ್‌ ಸಿಂಗ್‌, ಕುಲ್‌ದೀಪ್‌ ಯಾದವ್‌, ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್‌), ಹರ್ಷಿತ್ ರಾಣಾ, ರಿಂಕು ಸಿಂಗ್‌.

    ಪಾಕಿಸ್ತಾನ
    ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಜ್, ಹುಸೇನ್ ತಲಾತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿಕೆಟ್‌ ಕೀಪರ್‌), ಮೊಹಮ್ಮದ್ ನವಾಜ್, ಮೊಹಮ್ಮದ್ ವಸೀಮ್ ಜೂನಿಯರ್, ಸಾಹಿಬ್ಜಾದಾ, ಸಲೀಂ, ಫರ್ಹಾನ್, ಫರ್ಹಾನ್ ಅಫ್ರಿದಿ, ಸುಫ್ಯಾನ್ ಮೊಕಿಮ್.

    ಶ್ರೀಲಂಕಾ
    ಚರಿತ್ ಅಸಲಂಕಾ (ನಾಯಕ), ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್‌ ಕೀಪರ್), ಕುಸಲ್ ಪೆರೆರಾ (ವಿಕೆಟ್‌ ಕೀಪರ್), ನುವಾನಿಡು ಫೆರ್ನಾಂಡೋ, ಕಮಿಂಡು ಮೆಂಡಿಸ್, ಕಮಿಲ್ ಮಿಶ್ರಾ (ಡಬ್ಲ್ಯುಕೆ), ದಸುನ್ ಶನಕ, ವಾನಿಂದು ಹಸರಂಗ, ದುನಿತ್ ವೆಲ್ಲಲಾಗೆ, ಚಾಮಿಕ ಕರುಣಾರತ್ನೆ, ಮಹೇಶ ಬಮ್‌ನನ್‌, ನುಶೇಕ್‌ನನ್‌, ಮಹೇಶ್‌ ಥೀಕ್‌ನನ್‌ ತುಷಾರ, ಮತೀಶ ಪತಿರಣ.

    ಬಾಂಗ್ಲಾದೇಶ
    ಲಿಟ್ಟನ್ ದಾಸ್ (ನಾಯಕ ವಿಕೆಟ್‌ ಕೀಪರ್), ತಂಝಿದ್ ಹಸನ್, ಪರ್ವೇಜ್ ಹೊಸೈನ್ ಎಮನ್ (ವಿಕೆಟ್‌ ಕೀಪರ್), ಸೈಫ್ ಹಸನ್, ತೌಹಿದ್ ಹೃದಯ್, ಜೇಕರ್ ಅಲಿ ಅನಿಕ್ (ವಿಕೆಟ್‌ ಕೀಪರ್), ಶಮೀಮ್ ಹೊಸೈನ್, ಕ್ವಾಜಿ ನೂರುಲ್ ಹಸನ್ ಸೋಹನ್ (ವಿಕೆಟ್‌ ಕೀಪರ್), ಶಾಕ್ ಮಹೇದಿ ಹಸನ್, ರಿಶಾದ್ ತಾಫ್, ನಸ್, ನಸ್, ನಸ್ ಹಸನ್ ಸಾಕಿಬ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಶೈಫ್ ಉದ್ದೀನ್.

    ಅಫ್ಘಾನಿಸ್ತಾನ
    ರಶೀದ್ ಖಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್‌ ಕೀಪರ್‌), ಇಬ್ರಾಹಿಂ ಝದ್ರಾನ್, ದರ್ವಿಶ್ ರಸೂಲಿ, ಸೇದಿಕುಲ್ಲಾ ಅಟಲ್, ಅಜ್ಮತುಲ್ಲಾ ಒಮರ್ಜಾಯ್, ಕರೀಂ ಜನತ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಶರಫುದ್ದೀನ್ ಅಶ್ರಫ್, ಮೊಹಮ್ಮದ್ ಇಶಾಕ್, ಮುಹಮ್ಮದ್ ಇಶಾಕ್ (ಕೀಪರ್), ಜಿ. ಫರೀದ್ ಮಲಿಕ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ.

    ಒಮನ್
    ಜತೀಂದರ್ ಸಿಂಗ್ (ನಾಯಕ), ಹಮ್ಮದ್ ಮಿರ್ಜಾ (ವಿಕೆಟ್‌ ಕೀಪರ್), ವಿನಾಯಕ್ ಶುಕ್ಲಾ (ವಿಕೆಟ್‌ ಕೀಪರ್), ಸುಫ್ಯಾನ್ ಯೂಸುಫ್, ಆಶಿಶ್ ಒಡೆಡೆರಾ, ಅಮೀರ್ ಕಲೀಮ್, ಮೊಹಮ್ಮದ್ ನದೀಮ್, ಸುಫ್ಯಾನ್ ಮೆಹಮೂದ್, ಆರ್ಯನ್ ಬಿಶ್ತ್, ಕರಣ್ ಸೋನಾವಾಲೆ, ಜಿಕ್ರಿಯಾ ಇಸ್ಲಾಂ, ಹಸ್ನೈನ್ ಅಲಿ ಶಾ, ಫೈಸಲ್ ಶಾ, ಮುಹಮ್ಮದ್ ಇಮ್ರಾನ್, ನದೀಮ್ ಖಾನ್, ಸಮೇಲ್ ಖಾನ್, ಶಕೀಲ್.

    ಹಾಂಗ್ ಕಾಂಗ್‌
    ಯಾಸಿಮ್ ಮುರ್ತಾಜಾ (ವಿಕೆಟ್‌ ಕೀಪರ್), ಬಾಬರ್ ಹಯಾತ್, ಜೀಶನ್ ಅಲಿ (ವಿಕೆಟ್‌ ಕೀಪರ್), ನಿಯಾಜಕತ್ ಖಾನ್ ಮೊಹಮ್ಮದ್, ನಸ್ರುಲ್ಲಾ ರಾಣಾ, ಮಾರ್ಟಿನ್ ಕೊಯೆಟ್ಜಿ, ಅಂಶುಮಾನ್ ರಾತ್ (ವಿಕೆಟ್‌ ಕೀಪರ್), ಕಲ್ಹಾನ್ ಮಾರ್ಕ್ ಚಲ್ಲು, ಆಯುಷ್ ಆಶಿಶ್ ಶುಕ್ಲಾ, ಮೊಹಮ್ಮದ್ ಐಜಾಜ್ ಖಾನ್, ಅತೀಕ್ ಉಲ್ ರೆಹಮಾನ್, ಖಿನ್‌ಚಿ ಇಕ್‌ಬಾಲ್ ಮೊಹಮ್ಮದ್ ಅರ್ಷದ್, ಅಲಿ ಹಸನ್, ಶಾಹಿದ್ ವಾಸಿಫ್ (ವಿಕೆಟ್‌ ಕೀಪರ್), ಗಜನ್ಫರ್ ಮೊಹಮ್ಮದ್, ಮೊಹಮ್ಮದ್ ವಹೀದ್, ಅನಾಸ್ ಖಾನ್, ಎಹ್ಸಾನ್ ಖಾನ್.

    ಯುಎಇ
    ಮುಹಮ್ಮದ್ ವಸೀಮ್ (ಸಿ), ಮುಹಮ್ಮದ್ ಜೊಹೈಬ್, ಆಸಿಫ್ ಖಾನ್, ಅಲಿಶನ್ ಶರಾಫು, ರಾಹುಲ್ ಚೋಪ್ರಾ (ಡಬ್ಲ್ಯುಕೆ), ಹರ್ಷಿತ್ ಕೌಶಿಕ್, ಹೈದರ್ ಅಲಿ, ಮುಹಮ್ಮದ್ ಫಾರೂಕ್, ಮುಹಮ್ಮದ್ ರೋಹಿದ್ ಖಾನ್, ಜುನೈದ್ ಸಿದ್ದಿಕ್, ಸಿಮ್ರಂಜೀತ್ ಸಿಂಗ್, ಎಥಾನ್ ಡಿಸೌಜಾ, ಧ್ರುವ ಪರಾಶರ್, ಮುಹಮ್ಮದ್ ಜವಾದುಲ್ಲಾ ಖಾನ್ (ಡಬ್ಲ್ಯೂ, ಮಾಶ್ ಶರಮಹಿರ್ ಖಾನ್, ಅರ್ಯಾನ್).

  • CSK ಮುಖ್ಯಸ್ಥರಾಗಿ ಬಿಸಿಸಿಐ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ನೇಮಕ

    CSK ಮುಖ್ಯಸ್ಥರಾಗಿ ಬಿಸಿಸಿಐ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ನೇಮಕ

    ನವದೆಹಲಿ: ಬಿಸಿಸಿಐ, ಐಸಿಸಿ ಮಾಜಿ ಮುಖ್ಯಸ್ಥರಾಗಿದ್ದ ಎನ್.ಶ್ರೀನಿವಾಸನ್ (N. Srinivasan) ಇದೀಗ ತಮ್ಮ 80ನೇ ವಯಸ್ಸಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ (Chennai Super Kings) ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.

    ಈ ಮೊದಲು ಬಿಸಿಸಿಐ (BCCI) ಹಾಗೂ ಐಸಿಸಿ (ICC) ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್‌ನ ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಲಿಮಿಟೆಡ್‌ನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.ಇದನ್ನೂ  ಓದಿ:ಜಿಎಸ್‌ಟಿ ಪರಿಷ್ಕರಣೆ ಬೆನ್ನಲ್ಲೇ ದುಬಾರಿಯಾಗಲಿದೆ ಆರ್‌ಸಿಬಿ ಟಿಕೆಟ್‌ ದರ

    ಸಿಎಸ್‌ಕೆ ಮಾಹಿತಿ ಪ್ರಕಾರ, ಶ್ರೀನಿವಾಸನ್ ಅವರು 2025ರ ಫೆಬ್ರವರಿಯಲ್ಲಿಯೇ ಅಧಿಕೃತವಾಗಿ ಸಿಎಸ್‌ಕೆ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಬಳಿಕ ಮೇ.10ರಂದು ಮುಖ್ಯಸ್ಥರಾಗಿ ಬಡ್ತಿ ನೀಡಲಾಯಿತು ಎಂದು ತಿಳಿದುಬಂದಿದೆ.

    ಸದ್ಯ ಆರ್ ಶ್ರೀನಿವಾಸನ್, ರಾಕೇಶ್ ಸಿಂಗ್, ಪಿಎಲ್ ಸುಬ್ರಮಣಿಯನ್, ಸಂಜಯ್ ಪಟೇಲ್, ವಿ ಮಾಣಿಕ್ಕಂ ಮತ್ತು ರೂಪಾ ಗುರುನಾಥ್ ಸಿಎಸ್‌ಕೆ ಕ್ರಿಕೆಟ್ ಲಿಮಿಟೆಡ್‌ನ ಸದಸ್ಯರ ಪಟ್ಟಿಯಲ್ಲಿದ್ದಾರೆ. ಮುಂಬರುವ 2026ರ ಐಪಿಎಲ್‌ಗೂ ಮುನ್ನ ಸಿಎಸ್‌ಕೆ ಕ್ರಿಕೆಟ್ ಲಿಮಿಟೆಡ್ ಎನ್.ಶ್ರೀನಿವಾಸನ್ ಅವರನ್ನು ಮುಖ್ಯಸ್ಥರಾಗಿ ನೇಮಿಸಿದೆ.

    ಈ ಮೊದಲು ಬಿಸಿಸಿಐನ ಅಧ್ಯಕ್ಷರಾಗಿ ಹಾಗೂ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಜೊತೆಗೆ ಐಸಿಸಿಯ ಅಧ್ಯಕ್ಷರಾಗಿದ್ದರು. ಅಷ್ಟೇ ಅಲ್ಲದೇ 15 ವರ್ಷಗಳ ಕಾಲ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿದ್ದರು.ಇದನ್ನೂ ಓದಿ: ಅಕ್ರಮ ಬೆಟ್ಟಿಂಗ್‌ ಆ್ಯಪ್ ಪ್ರಕರಣ – ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಶಿಖರ್‌ ಧವನ್‌ಗೆ ಇಡಿ ಸಮನ್ಸ್‌

  • ದಿಗ್ಗಜರನ್ನ ಹಿಂದಿಕ್ಕಿದ ಸಿಕಂದರ್‌ ರಜಾ – ಪಾಕ್‌ ಮೂಲದ ಜಿಂಬಾಬ್ವೆ ಆಟಗಾರ ವಿಶ್ವದ ನಂ.1 ಆಲ್‌ರೌಂಡರ್‌

    ದಿಗ್ಗಜರನ್ನ ಹಿಂದಿಕ್ಕಿದ ಸಿಕಂದರ್‌ ರಜಾ – ಪಾಕ್‌ ಮೂಲದ ಜಿಂಬಾಬ್ವೆ ಆಟಗಾರ ವಿಶ್ವದ ನಂ.1 ಆಲ್‌ರೌಂಡರ್‌

    – ಟಾಪ್‌-10ನಲ್ಲಿ ಏಕೈಕ ಭಾರತೀಯ ಜಡ್ಡು

    ಹರಾರೆ: ಐಸಿಸಿ (ICC) ಬಿಡುಗಡೆ ಮಾಡಿದ ಏಕದಿನ ಆಲ್‌ರೌಂಡರ್ ರ‍್ಯಾಂಕಿಂಗ್‌ (ODI Ranking) ಪಟ್ಟಿಯಲ್ಲಿ ಪಾಕ್‌ ಮೂಲದ ಜಿಂಬಾಬ್ವೆ ಆಟಗಾರ ಸಿಕಂದರ್ ರಜಾ (Sikandar Raza) ಅಗ್ರಸ್ಥಾನಕ್ಕೇರಿದ್ದಾರೆ.

    302 ರೇಟಿಂಗ್ಸ್‌ನೊಂದಿಗೆ ಎರಡು‌ ಸ್ಥಾನ ಮೇಲಕ್ಕೇರಿರುವ ರಜಾ ಅಫ್ಘಾನಿಸ್ತಾನದ (Afghanistan) ಅಜ್ಮತುಲ್ಲಾ ಉಮರ್‌ಜೈ, ನಬಿ ಅವರನ್ನ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ್ದಾರೆ. ಆದ್ರೆ ಟಾಪ್ 10ರಲ್ಲಿ ಭಾರತದ ರವೀಂದ್ರ ಜಡೇಜಾ ಒಬ್ಬರೇ ಸ್ಥಾನ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಐತಿಹಾಸಿಕ ಗೆಲುವಿನ ಸಂತೋಷದ ಕ್ಷಣ ದುರಂತವಾಯ್ತು – ಚಿನ್ನಸ್ವಾಮಿ ಕಾಲ್ತುಳಿತದ ಬಗ್ಗೆ ಕೊಹ್ಲಿ ಟ್ವೀಟ್

    ಇತ್ತೀಚೆಗೆ ಶ್ರೀಲಂಕಾ ವಿರುದ್ಧ ನಡೆದ 2 ಪಂದ್ಯಗಳ ಏಕದಿನ ಸರಣಿಯಲ್ಲಿ ಜಿಂಬಾಬ್ವೆ 0-2 ಅಂತರದಲ್ಲಿ ಸೋಲು ಕಂಡಿತ್ತು. ಆದ್ರೆ ಈ ಪಂದ್ಯದಲ್ಲಿ ಸಿಕಂದರ್‌ ರಜಾ ಅವರ ಪ್ರದರ್ಶನ ಉತ್ತಮವಾಗಿತ್ತು. ಮೊದಲ ಪಂದ್ಯದಲ್ಲಿ 92 ರನ್‌ ಗಳಿಸಿದ್ರೆ, 2ನೇ ಪಂದ್ಯದಲ್ಲಿ ಅಜೇಯ 59 ರನ್‌ ಬಾರಿಸಿದ್ದರು. ಬೌಲಿಂಗ್‌ನಲ್ಲಿ ಒಂದು ವಿಕೆಟ್‌ ಕೂಡ ಪಡೆದಿದ್ದರು. ಇದು ರಜಾ ನಂಬರ್‌ 1 ಪಟ್ಟಕ್ಕೇರುವಲ್ಲಿ ಸಹಕಾತಿಯಾಯಿತು. ಇದನ್ನೂ ಓದಿ: Women’s World Cup 2025 | ದಾಖಲೆಯ 122 ಕೋಟಿ ಬಹುಮಾನ ಘೋಷಿಸಿದ ಐಸಿಸಿ

    ಕಾಶ್ಮೀರಿ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಸಿಕಂದರ್‌ ರಜಾ
    ಸಿಕಂದರ್‌ ರಜಾ ಮೂಲತಃ ಪಾಕಿಸ್ತಾನದವರು. ಪಾಕ್‌ನ ಸಿಯಾಲ್‌ಕೋಟ್‌ನಲ್ಲಿ ಕಾಶ್ಮೀರಿ ಮುಸ್ಲಿಂ ಕುಟುಂಬದಲ್ಲಿ ಜನಿಸಿದವರು. ಆದ್ರೆ 2002ರಲ್ಲಿ ಕುಟುಂಬದೊಂದಿಗೆ ಜಿಂಬಾಬ್ವೆಗೆ ವಲಸೆ ಬಂದರು. ಅಲ್ಲೇ ತಮ್ಮ ವಿದ್ಯಾಭ್ಯಾಸ ಮಾಡಿದರು. 2013ರಲ್ಲಿ ಜಿಂಬಾಬ್ವೆ ಪರ ಪದಾರ್ಪಣೆ ಮಾಡಿದರು. ಅಂದಿನಿಂದ ಜಿಂಬಾಬ್ವೆ ರಾಷ್ಟ್ರೀಯ ತಂಡದಲ್ಲಿ ಪ್ರಮುಖ ಆಟಗಾರನಾಗಿದ್ದಾರೆ.

    ಇನ್ನೂ ಏಕದಿನ ಬೌಲಿಂಗ್‌ ರ‍್ಯಾಂಕಿಂಗ್‌ನಲ್ಲಿ ಕೇಶವ್‌ ಮಹಾರಾಜ್‌ 690 ಅಂಕಗಳನ್ನ ಪಡೆದು ಅಗ್ರಸ್ಥಾನ ಉಳಿಸಿಕೊಂಡಿದ್ದರೆ, 659 ಅಂಕ ಪಡೆದಿರುವ ಮತೀಶ ಪಥಿರಣ 2ನೇ ಸ್ಥಾನ, 650 ಅಂಕ ಪಡೆದಿರುವ ಕುಲ್‌ದೀಪ್‌ ಯಾದವ್‌ 3ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಟಿ20 ಕ್ರಿಕೆಟ್‌ಗೆ ದಿಢೀರ್‌ ನಿವೃತ್ತಿ ಘೋಷಿಸಿದ ಮಿಚೆಲ್‌ ಸ್ಟಾರ್ಕ್