Tag: ICAI

  • ಜಿಎಸ್‍ಟಿ ಕುರಿತು ಪ್ರಧಾನಿ ಮೋದಿ ಮಾಡಿದ್ದ ಭಾಷಣದಲ್ಲಿ ಸಿಡಿದ ಎರಡು ಹೊಸ ಬಾಂಬ್‍ಗಳು

    ಜಿಎಸ್‍ಟಿ ಕುರಿತು ಪ್ರಧಾನಿ ಮೋದಿ ಮಾಡಿದ್ದ ಭಾಷಣದಲ್ಲಿ ಸಿಡಿದ ಎರಡು ಹೊಸ ಬಾಂಬ್‍ಗಳು

    ನವದೆಹಲಿ: ಜೂನ್ 30ರಂದು ದೇಶದ ಆರ್ಥಿಕ ಕ್ರಾಂತಿ ಎಂದೇ ಹೇಳಲಾಗುತ್ತಿರುವ ಜಿಎಸ್‍ಟಿ ಮಂಡಿಸಿರುವ ಪ್ರಧಾನಿ ನರೇಂದ್ರ ಮೋದಿ ಇಂದು ನವದೆಹಲಿಯ ಇಂದಿರಾಗಾಂದಿ ಕ್ರೀಡಾಂಗಣದಲ್ಲಿ ದೇಶದ ಜನರು ಹಾಗು ಲೆಕ್ಕ ಪರಿಶೋಧಕರು (ಚಾರ್ಟೆಡ್ ಅಕೌಂಟೆಂಟ್)ಗಳನ್ನು ಉದ್ದೇಶಿಸಿ ಮಾತನಾಡಿದ್ರು.

    ಇಂದು ನವದೆಹಲಿಯ ಐಸಿಎಐ ಸಂಸ್ಥೆಯ ಸಂಸ್ಥಾಪನಾ ದಿನದಲ್ಲಿ ಮೋದಿ ಭಾಗಿಯಾಗಿದ್ದರು. ಈ ಸಭೆಯಲ್ಲಿ ನಿನ್ನೆ ಜಾರಿಯಾದ ಜಿಎಸ್‍ಟಿ ಕುರಿತು ಸುರ್ದೀರ್ಘವಾಗಿ ಹಲವಾರು ವಿಷಯಗಳನ್ನು ಕುರಿತು ವಿಶ್ಲೇಷಿಸಿದ್ದಾರೆ. ತಮ್ಮ ಭಾಷಣದ ವೇಳೆ ಜಿಎಸ್‍ಟಿ ಅಂದರೆ ಎನು? ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಸಿಎಗಳು ಪಾತ್ರವೇನು? ಎಂಬುವುದಾಗಿ ವಿಶ್ಲೇಷಿಸಿದರು.

    ಮೊದಲ ಬಾಂಬ್: 2014ರಿಂದ ಸ್ವಿಸ್ ಬ್ಯಾಂಕ್‍ಗಳಲ್ಲಿ ಹಣ ಜಮೆ ಮಾಡುವ ಭಾರತೀಯರ ಸಂಖ್ಯೆ ಮತ್ತು ಹಣ ಕಡಿಮೆಯಾಗಿದೆ. 2016 ನವೆಂಬರ್ 8ರ ನಂತರ ದೀಪಾವಳಿ ರಜೆಗೆಂದು ವಿದೇಶಗಳಿಗೆ ತೆರಳಿದ್ದ ಜನರು ಮರಳಿ ದೇಶಕ್ಕೆ ಬಂದಿದ್ದಾರೆ. ಇನ್ನು 2 ವರ್ಷಗಳಲ್ಲಿ ಕಾಳಧನಿಕರ ಮಾಹಿತಿ ಸಿಗಲಿದೆ. ಈಗಾಗಲೇ ಕಾನೂನಾತ್ಮಕ ಕ್ರಮಗಳನ್ನು ಕೈಗೊಂಡಿದ್ದೇವೆ. ಕಾಳಧನಿಕರಿಗೆ ಮುಂದಿನ ದಿನಗಳಲ್ಲಿ ಆಘಾತ ಕಾದಿದೆ ಎಂದು ಸೂಚನೆಯನ್ನು ನೀಡಿದ್ದಾರೆ.

    ಸಿಎಗಳು ದೇಶದ ಆರ್ಥವ್ಯವಸ್ಥೆಯ ಆಧಾರ ಸ್ಥಂಭಗಳು. ನಿಮ್ಮ ಮೇಲೆ ಅರ್ಥ ವ್ಯವಸ್ಥೆ ನಂಬಿಕೆಯನ್ನು ಇಟ್ಟಿದೆ. ದೇಶದ ಅರ್ಥವ್ಯವಸ್ಥೆಯನ್ನು ಕಾಪಾಡುವ ಜವಬ್ದಾರಿಗಳು ಸಿಎಗಳ ಮೇಲಿದೆ. ನಮ್ಮ ಶಾಸ್ತ್ರಗಳಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಪುರಾಷರ್ಥಗಳಿವೆ. ಹೀಗಾಗಿ ಅರ್ಥವ್ಯವಸ್ಥೆ ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದೆ. ಈ ವೇಳೆ ನಿಮ್ಮಲ್ಲಿರುವ ದೇಶ ಭಕ್ತಿ ಹಾಗು ನನ್ನಲ್ಲಿರುವ ದೇಶ¨ಭಕ್ತಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಮನೆಗೆ ಬೆಂಕಿ ಬಿದ್ರೆ ಬೇರೆ ಕಟ್ಟುಬಹುದು, ಮನೆಯಲ್ಲಿಯೇ ಕಳ್ಳಯಿದ್ದೆರೆ ಏನು ಮಾಡಕಾಗಲ್ಲ. ದೇಶದಲ್ಲಿ ಕೆಲವರಿಗೆ ಕಳ್ಳತನ ಮಾಡುವ ಅಭ್ಯಾಸವಾಗಿದೆ. ಇದ್ರಿಂದ ದೇಶದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಇದನ್ನು ತಡೆಗಟ್ಟುವಲ್ಲಿ ಸಿಎಗಳ ಪಾತ್ರವಿದೆ.

    ಎರಡನೇ ಬಾಂಬ್: ಮೋದಿ ಅವರು ತಮ್ಮ ಭಾಷಣದಲ್ಲಿ ಡೈರಿ ಬಗ್ಗೆ ಉಲ್ಲೇಖಿಸಿದರು. ದೇಶದಲ್ಲಿ ಡೈರಿಯ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಈಗಾಗಲೇ ಸುಮಾರು 40 ಸಾವಿರ ಕಂಪನಿಗಳನ್ನು ಪತ್ತೆ ಮಾಡಲಾಗಿದೆ. ಅವುಗಳ ವಿರುದ್ಧ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 11 ವರ್ಷಗಳಲ್ಲಿ ಕೇವಲ 25 ಚಾರ್ಟೆಡ್ ಅಕೌಂಟ್‍ಗಳ ವಿಚಾರಣೆ ನೆಡೆದಿದ್ದೇವೆ. ಇದು ಅನುಮಾನ ಮೂಡಿಸುತ್ತದೆ ಎಂದು ಅಪ್ರಾಮಣಿಕ ಸಿಎಗಳ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು.

    ಸಿಎಗಳಿಗೆ ಕಿವಿಮಾತು: ನೀವುಗಳು ನನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ತೀರಾ ಎಂದು ತಿಳಿಯುತ್ತೇನೆ. ದೇಶದ ಅಭಿವೃದ್ದಿ ನಿಮ್ಮ ಕೈಯಲ್ಲಿದೆ, ಇದು ನಿಮ್ಮ ದೇಶವಾಗಿದೆ. ಅಂದು ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹಿನೀಯರು ತಮ್ಮ ಜೀವವನ್ನು ತ್ಯಾಗ ಮಾಡಿದ್ದಾರೆ. ಇಂದು ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಸಿಎಗಳು ಜವಬ್ದಾರಿಯುತವಾಗಿ ಕೆಲಸ ಮಾಡಬೇಕಾಗುತ್ತದೆ. ನಿಮ್ಮ ಸಹಿ ದೇಶದ ಒಬ್ಬ ಪಿಎಂ ಸಹಿಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿದೆ. ನಿಮ್ಮ ಸಹಿ ನಂಬಿಕೆಗೆ ಸೂಚಕವಾಗಿರುತ್ತದೆ. ನಿಮ್ಮ ಒಂದು ಸಹಿಯನ್ನು ಸಹ ಸರ್ಕಾರ ನಂಬುತ್ತದೆ.

    ಕಂಪನಿಯ ಬ್ಯಾಲೆನ್ಸ್ ಶೀಟ್ ನಲ್ಲಿ ನಿಮ್ಮ ಸಹಿ ನೋಡಿ ಬಡ ವಿಧವೆ, ಅಂಗವಿಕಲರು, ವೃದ್ಧರು ಸೇರಿದಂತೆ ತಮ್ಮ ಹಣವನ್ನು ಮಾರ್ಕೆಟ್‍ನಲ್ಲಿ ಹೂಡಿಕೆ ಮಾಡಿರ್ತಾರೆ. ಒಂದು ವೇಳೆ ಕಂಪನಿ ದಿವಾಳಿಯಾದ್ರೆ ಅದರ ನೈತಿಕ ಹೊಣೆ ನಿಮ್ಮ ಮೇಲಿರುತ್ತದೆ. ಹಾಗಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡುವುದರ ಜೊತೆಗೆ ನಿಮ್ಮ ಬಳಿ ಬರುವ ಜನರಿಗೆ ನ್ಯಾಯಯುತವಾಗಿ ಟ್ಯಾಕ್ಸ್ ತುಂಬುವಂತೆ ತಿಳಿಸುವ ಪ್ರಯತ್ನ ಮಾಡಿ. ಈ ಟ್ಯಾಕ್ಸ್ ಹಣದಿಂದ ಕೆಲವರು ಒಂದು ಹೊತ್ತಿನ ಊಟ, ಔಷಧಿ, ವೃದ್ಯಾಪ ವೇತನ, ಮನೆ ಸಿಗುತ್ತದೆ ಎಂದು ಹೇಳಿದರು.

    ಇಂದು ನಾನು ನಿಮ್ಮ ಸಂಸ್ಥೆಯ ಸಂಸ್ಥಾಪನಾ ದಿನಕ್ಕೆ ಆಗಮಿಸಿದ್ದೇನೆ. 2022ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ಆಗುತ್ತದೆ. ನಾವು ಈಗಾಗಲೇ ಅಂದು ನಾವು ಏನು ಮಾಡಬೇಕು ಎಂದು ನೀಲಿ ನಕ್ಷೆಯನ್ನು ಸಿದ್ಧಪಡಿಸಿ ಅದೇ ಮಾರ್ಗದಲ್ಲಿ ಕೆಲಸ ಮಾಡುತ್ತಿದ್ದೆ. 2024ಕ್ಕೆ ನಿಮ್ಮ ಐಸಿಎಐ ಸಂಸ್ಥೆಯ ಸ್ಥಾಪನೆಗೊಂಡು 75 ವರ್ಷವಾಗುತ್ತದೆ. ಈ ಸುದೀರ್ಘ ಕಾಲದಲ್ಲಿ ನಾವು ದೇಶಕ್ಕೆ ಏನ್ನನ್ನು ನೀಡಿದ್ದೇವೆ? ಮುಂದೆ ಎನ್ಮಾಡಬೇಕು ಎಂಬುದರ ಬಗ್ಗೆ ಯೋಚಿಸಿ ಎಂದು ಮೋದಿ ತಿಳಿಸಿದರು.