Tag: IAS officer

  • Exclusive: ಅನುರಾಗ್ ತಿವಾರಿಗೆ ಇತ್ತು ಜೀವ‌ ಭಯ-  4-5 ತಿಂಗಳಿಂದ ಕೊಟ್ಟೇ ಇರಲಿಲ್ಲ ಸಂಬಳ

    Exclusive: ಅನುರಾಗ್ ತಿವಾರಿಗೆ ಇತ್ತು ಜೀವ‌ ಭಯ- 4-5 ತಿಂಗಳಿಂದ ಕೊಟ್ಟೇ ಇರಲಿಲ್ಲ ಸಂಬಳ

    – ಹಿರಿಯ ಅಧಿಕಾರಿಗಳಿಂದ ಕಿರುಕುಳ

    ಪ್ರವೀಣ್ ರೆಡ್ಡಿ
    ಕಲಬುರಗಿ: ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರಿಗೆ ಸಾವಿನ ಭಯವಿತ್ತಂತೆ. ಹೀಗಂತ ಅನುರಾಗ್ ಸಹೋದರ ಮಯಾಂಕ್ ತಿವಾರಿ ಅವರ ಸ್ನೇಹಿತ ರಾಕೇಶ್ ಎಂಬುವರಿಗೆ ಮಾರ್ಚ್ 27ರಂದು ಮೇಸೆಜ್ ಕಳುಹಿಸಿದ್ದಾರೆ. ಸದ್ಯ ಹೀಗೆ ಸ್ನೇಹಿತನಿಗೆ ಮಯಾಂಕ್ ತಿವಾರಿ ಕಳುಹಿಸಿರುವ ವಾಟ್ಸಪ್ ಸಂದೇಶ ಇದೀಗ ಪಬ್ಲಿಕ್ ಟಿವಿಗೆ ಸಿಕ್ಕಿದೆ.

    ಮಯಾಂಕ್ ಅವರನ್ನು ಅವರ ಸ್ನೇಹಿತ ಪದೇ ಪದೇ ಕರೆ ಮಾಡಿದ್ರೂ ಅವರು ಕರೆಯನ್ನು ಸ್ವಿಕರಿಸಿರಲಿಲ್ಲ. ಯಾಕೆ ಕಾಲ್ ರಿಸಿವ್ ಮಾಡಿಲ್ಲ ಅಂತಾ ವಾಟ್ಸಪ್ ಮೂಲಕ ರಾಕೇಶ್ ಪ್ರಶ್ನಿಸಿದ್ದಾಗ. “ನನ್ನ ಸಹೋದರ ಅನುರಾಗ್ ಮೇಲೆ ಜೀವ ಭಯವಿದೆ ಅಂತಾ ನನ್ನ ಸಹೋದರ(ಅಲೋಕ್) ಹೇಳಿದ್ದ” ಅಂತಾ ಮಯಾಂಕ್ ತನ್ನ ಸ್ನೇಹಿತನಿಗೆ ಸಂದೇಶ ಕಳುಹಿಸಿದ್ದಾರೆ. ಈ ಮೂಲಕ ಅನುರಾಗ್ ಜೀವಕ್ಕೆ ಕುತ್ತು ಇತ್ತು ಎಂಬುದನ್ನು ಅನುರಾಗ್ ತನ್ನ ಸಹೋದರನ ಬಳಿ ಹೇಳಿರುವುದು ದೃಢಪಟ್ಟಿದೆ.

    ಸಹೋದರ ಮಯಾಂಕ್ ತಿವಾರಿ

    ಇನ್ನು ಈ ಬಗ್ಗೆ ಮಯಾಂಕ್ ತಿವಾರಿ ಅವರನ್ನು ಪಬ್ಲಿಕ್ ಟಿವಿ ಸಂಪರ್ಕಿಸಿದಾಗ, ನನ್ನ ಸಹೋದರ ಅನುರಾಗ್ ತಿವಾರಿ ಸಾವು ಸಹಜ ಸಾವಲ್ಲ ಅದು ಕೊಲೆ. ಈ ಕುರಿತು ಅನುರಾಗ್ ಹಲವು ಬಾರಿ ನನ್ನ ಜೊತೆ ಮಾತನಾಡಿ ಮೇಸೆಜ್ ಸಹ ಕಳುಹಿಸಿದ್ದಾನೆ. ಆ ಎಲ್ಲಾ ಮೆಸೇಜ್ ಗಳು ನನ್ನ ಬಳಿ ಇವೆ. ಯಾಕಂದ್ರೆ ಆಹಾರ ಇಲಾಖೆಯಲ್ಲಿನ ದೊಡ್ಡ ಹಗರಣದ ಕಡತವನ್ನು ಸಿಬಿಐ ಮತ್ತು ಪಿಎಮ್ಓ(ಪ್ರಧಾನ ಮಂತ್ರಿಕಚೇರಿ)ಗೇ ಕಳುಹಿಸಲು ಸಿದ್ಧತೆ ನಡೆಸಿದ್ದ. ಆದರೆ

    ಹಿರಿಯ ಅಧಿಕಾರಿಗಳು ಈ ಕುರಿತು ಹಲವು ಬಾರಿ ಅವನ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಇದೇ ಪ್ರಕರಣ ಸಂಬಂಧ ಅನುರಾಗ್ ಗೆ ಕಳೆದ 4-5 ತಿಂಗಳಿನಿಂದ ಸಂಬಳ ಸಹ ನೀಡಿರಲಿಲ್ಲ. ಇನ್ನು ಅವನು ರಜೆ ಕೇಳಿದ್ರೆ ಬೇಕು ಅಂತಾನೆ ಅವನ ರಜೆಯನ್ನು ಪದೇ ಪದೇ ಕೇಳಿದ್ರು ಅಧಿಕಾರಿಗಳು ಅದನ್ನು ರಿಜಕ್ಟ್ ಮಾಡಿ ಅವನಿಗೆ ಮಾನಸಿಕ ಕಿರುಕುಳ ಕೊಡುತ್ತಿದ್ದರು. ಅಂತಾ ತನ್ನ ಸಹೋದರನಿಗೆ ಆದ ಅನ್ಯಾಯದ ಬಗ್ಗೆ ಮಯಾಂಕ್ ತಿವಾರಿ ಅಲವತ್ತುಕೊಂಡಿದ್ದಾರೆ.

    ಪರಿಸ್ಥಿತಿ‌ ಸರಿ ಇಲ್ಲ: ಸದ್ಯ ಬೆಂಗಳೂರಿನಲ್ಲಿ ಪರಿಸ್ಥಿತಿ ಸರಿಯಿಲ್ಲ . ಹೀಗಾಗಿ ತಂದೆ-ತಾಯಿಯನ್ನು ಇಲ್ಲಿಗೆ ಕಳುಹಿಸಬೇಡಿ ಇನ್ನು ಕೆಲ ದಿನಗಳಲ್ಲಿ ನಾನೇ ಉತ್ತರದತ್ತ ಬರುತ್ತೇನೆ ಅಂತಾ ಮಾರ್ಚ್ 25ರಂದು ಮೃತ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ತನ್ನ ಸಹೋದರ ಮಯಾಂಕ್‍ಗೇ ವಾಟ್ಸಪ್ ಮೆಸೇಜ್ ಕಳುಹಿಸಿದ್ದಾರೆ.

    ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜಕೀಯ ಮತ್ತು ಮೇಲಾಧಿಕಾರಿಗಳ ವರ್ತನೆ ಸರಿಯಿಲ್ಲ. ಹೀಗಾಗಿ ಪೋಷಕರನ್ನು ಬೆಂಗಳೂರಿಗೆ ಕಳುಹಿಸುವುದು ಎಷ್ಟರ ಮಟ್ಟಿಗೆ ಸರಿ ಅಂತಾ ಅನುರಾಗ್ ಸಹೋದರನಿಗೆ ಪ್ರಶ್ನೆ ಮಾಡಿದ್ದಾರೆ. ಅಷ್ಟೆ ಅಲ್ಲ ಇನ್ನು ಕೆಲ ದಿನಗಳಲ್ಲಿ ಉತ್ತರ ಭಾರತದ ಪರಿಸ್ಥಿತಿ ಸರಿಯಾಗಬಹುದು. ಸದ್ಯ ಬೆಂಗಳೂರಿನಲ್ಲಿ ಕಲುಷಿತ ರಾಜಕೀಯ ಮತ್ತು ಹಿರಿಯ ಅಧಿಕಾರಿಗಳ ವರ್ತನೆಯಿಂದ ವಾತಾವರಣ ಸರಿಯಿಲ್ಲ ಅಂತಾ ಸಹ ಅನುರಾಗ್ ತಿವಾರಿ ತನ್ನ ಸಹೋದರನಿಗೆ ಮೇಸೆಜ್ ಕಳುಹಿಸಿದ್ದು ಅದರ ಎಕ್ಸ್ ಕ್ಲೂಸಿವ್ ಮಾಹಿತಿ ಸಹ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಅನುರಾಗ್ ತಿವಾರಿ ತಂದೆ-ತಾಯಿ

    ತನಿಖೆಗೆ ಪತ್ರ: ಐಎಎಸ್ ಅಧಿಕಾರಿಯ ನಿಗೂಢ ಸಾವಿನ ಕುರಿತು ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ.

    ಕರ್ನಾಟಕ ಕೇಡರ್ ನ 2007ನೇ ಬ್ಯಾಚ್ ಐಎಎಸ್ ಅಧಿಕಾರಿ ಶ್ರೀ ಅನುರಾಗ್ ತಿವಾರಿಯವರು ಲಖನೌನ ಹಜರತ್ ಗಂಜ್ ಬಳಿಯ ಮೀರಾ ಬಾಯಿ ಅತಿಥಿ ಗೃಹದ ಬಳಿ ನತದೃಷ್ಟವಾಗಿ ಸಾವಿಗೀಡಾದ ಕುರಿತು ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ.

    ಶ್ರೀ ತಿವಾರಿಯವರು ಕರ್ನಾಟಕ ಕೇಡರ್ ನ ಒಬ್ಬ ದಕ್ಷ ಅಧಿಕಾರಿಯಾಗಿದ್ದು, ಅವರ ಅಕಾಲಿಕ ಹಾಗೂ ದುರದೃಷ್ಟಕರ ಸಾವು ನಮಗೆ ತೀವ್ರ ದುಃಖ ತಂದಿದೆ. ಅವರ ಸಾವಿಗೆ ಸಂಬಂಧಿಸಿದಂತೆ ಇಡೀ ಪ್ರಕರಣವನ್ನು, ಅದರ ಸನ್ನಿವೇಶಗಳು ಹಾಗೂ ಕಾರಣಗಳ ಸಹಿತ ತಿಳಿಯುವುದು ಅತ್ಯಂತ ಅಗತ್ಯವಾಗಿದ್ದು ಈ ಸಂಬಂಧ ತನಿಖಾಧಿಕಾರಿಗಳು ಹಾಗೂ ತಜ್ಞರನ್ನೊಳಗೊಂಡ ಸಮರ್ಥ ತಂಡದಿಂದ ತನಿಖೆ ನಡೆಸುವ ಅಗತ್ಯವಿದೆ. ಈ ಕುರಿತಾಗಿ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚಿಸುವಂತೆ ತಮ್ಮಲ್ಲಿ ವಿನಂತಿಸುತ್ತೇನೆ.

    ಸಿಎಂ ಪತ್ರ: ನಮ್ಮ ರಾಜ್ಯದ ಓರ್ವ ದಕ್ಷ ಐಎಎಸ್ ಅಧಿಕಾರಿಯಾಗಿದ್ದ ಅನುರಾಗ್ ತಿವಾರಿಯವರು ಉತ್ತರಪ್ರದೇಶದ ಲಖನೌನ ತೀವ್ರ ಭದ್ರತಾ ವಲಯದ ಸಮೀಪವೇ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ನಡೆಸುವಂತೆ ಕೋರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯವರಾದ ಯೋಗಿ ಆದಿತ್ಯನಾಥ್ ಅವರಿಗೆ ಪತ್ರವನ್ನು ಬರೆದಿದ್ದೇನೆ. ಪತ್ರದ ಕನ್ನಡಾನುವಾದ:

    ಪ್ರೀತಿಯ ಶ್ರೀ ಯೋಗಿ ಆದಿತ್ಯನಾಥ್ ರವರೇ

    ಕರ್ನಾಟಕ ಕೇಡರ್ ನ 2007ನೇ ಬ್ಯಾಚ್ ಐಎಎಸ್ ಅಧಿಕಾರಿ ಶ್ರೀ ಅನುರಾಗ್ ತಿವಾರಿಯವರು ಲಖನೌನ ಹಜರತ್ ಗಂಜ್ ಬಳಿಯ ಮೀರಾ ಬಾಯಿ ಅತಿಥಿ ಗೃಹದ ಬಳಿ ನತದೃಷ್ಟವಾಗಿ ಸಾವಿಗೀಡಾದ ಕುರಿತು ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ.

    ಶ್ರೀ ತಿವಾರಿಯವರು ಕರ್ನಾಟಕ ಕೇಡರ್ ನ ಒಬ್ಬ ದಕ್ಷ ಅಧಿಕಾರಿಯಾಗಿದ್ದು, ಅವರ ಅಕಾಲಿಕ ಹಾಗೂ ದುರದೃಷ್ಟಕರ ಸಾವು ನಮಗೆ ತೀವ್ರ ದುಃಖ ತಂದಿದೆ. ಅವರ ಸಾವಿಗೆ ಸಂಬಂಧಿಸಿದಂತೆ ಇಡೀ ಪ್ರಕರಣವನ್ನು, ಅದರ ಸನ್ನಿವೇಶಗಳು ಹಾಗೂ ಕಾರಣಗಳ ಸಹಿತ ತಿಳಿಯುವುದು ಅತ್ಯಂತ ಅಗತ್ಯವಾಗಿದ್ದು ಈ ಸಂಬಂಧ ತನಿಖಾಧಿಕಾರಿಗಳು ಹಾಗೂ ತಜ್ಞರನ್ನೊಳಗೊಂಡ ಸಮರ್ಥ ತಂಡದಿಂದ ತನಿಖೆ ನಡೆಸುವ ಅಗತ್ಯವಿದೆ. ಈ ಕುರಿತಾಗಿ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚಿಸುವಂತೆ ತಮ್ಮಲ್ಲಿ ವಿನಂತಿಸುತ್ತೇನೆ.

    ಕೃತಜ್ಞತಾಪೂರ್ವಕವಾಗಿ

    ತಮ್ಮ ವಿಶ್ವಾಸಿ,
    ಸಿದ್ದರಾಮಯ್ಯ

     

  • ಕರ್ನಾಟಕದ 2 ಸಾವಿರ ಕೋಟಿ ರೂ. ಹಗರಣಕ್ಕೆ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಬಲಿ?

    ಕರ್ನಾಟಕದ 2 ಸಾವಿರ ಕೋಟಿ ರೂ. ಹಗರಣಕ್ಕೆ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಬಲಿ?

    ಲಕ್ನೋ: ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವಿಗೆ ಸ್ಫೋಟಕ ತಿರುವು ಸಿಕ್ಕಿದ್ದು, ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಸಾವಿರಾರು ಕೋಟಿ ರೂ. ಹಗರಣವನ್ನು ಬಹಿರಂಗಪಡಿಸುವ ಉದ್ದೇಶ ಹೊಂದಿದ್ದರು ಎಂದು ಉತ್ತರ ಪ್ರದೇಶದ ಸಚಿವ ಸುರೇಶ್ ಖನ್ನಾ ಹೇಳಿದ್ದಾರೆ.

    ಗುರುವಾರ ಉತ್ತರಪ್ರದೇಶದ ವಿಧಾನಸಭೆ ಕಲಾಪದಲ್ಲಿ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವಿನ ಕುರಿತಂತೆ ಚರ್ಚೆ ನಡೆದಿದ್ದು, ಈ ವೇಳೆ ಸಚಿವರು ಹಗರಣವನ್ನು ಬಯಲಿಗೆಳೆಯುತ್ತಾರೆ ಎಂಬ ನಿಟ್ಟಿನಲ್ಲಿ ಅವರನ್ನು ಕೊಲೆ ಮಾಡಲಾಗಿದೆ ಅನ್ನೋ ಬಾಂಬ್ ಸಿಡಿಸಿದ್ದಾರೆ.

    ಸಮಾಜವಾದಿ ಪಕ್ಷದ ನಿತಿನ್ ಅಗರ್‍ವಾಲ್ ಎಂಬವರು ಪ್ರಶ್ನೆಯ ವೇಳೆ ಹೆಚ್ಚಿನ ಭದ್ರೆತೆ ಇರೋ ಪ್ರದೇಶದಲ್ಲಿಯೇ ತಿವಾರಿ ಹತ್ಯೆಯಾಗಿರುವುದರಿಂದ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಎಲ್ಲಿಗೆ ತಲುಪಿದೆ ಅಂತಾ ಕೇಳಿದ್ದಾರೆ. ಇದಕ್ಕೆ ದನಿಗೂಡಿಸಿದ ಸಮಾಜವಾದಿ ಪಕ್ಷದ ಸದಸ್ಯರು ಸದನದ ಬಾವಿಗಿಳಿದು ತಿವಾರಿ ಸಾವಿನ ಬಗ್ಗೆ ಧ್ವನಿಯೆತ್ತಿದ್ದಾರೆ.

    ಈ ವೇಳೆ ಸ್ಪೀಕರ್, ಈ ಬಗ್ಗೆ ಚರ್ಚಿಸಲು ಇದು ಸಮಯವಲ್ಲ. ದಯವಿಟ್ಟು ಗಲಾಟೆ ಮಾಡದೆ ನಿಮ್ಮ ನಿಮ್ಮ ಸೀಟಿನಲ್ಲಿ ಆಸೀನರಾಗಿ ಅಂತಾ ಹೇಳಿದ್ರು. ಇದ್ರಿಂದ ಕೋಪೋದ್ರಿಕ್ತರಾದ ವಿಪಕ್ಷ ನಾಯಕ ರಾಮ್ ಗೋವಿಂದ್ ಚೌಧರಿ, ಒಬ್ಬ ಐಎಎಸ್ ಅಧಿಕಾರಿಯ ಹತ್ಯೆಯಾಗಿದೆ ಅಂದ್ರೆ ಅದು ಗಂಭೀರ ವಿಷಯವಾಗಿದೆ ಅಂದ್ರು.

    ಪ್ರತಿಪಕ್ಷಗಳ ಆರೋಪಕ್ಕೆ ಸಂಸದೀಯ ಸಚಿವ ಸುರೇಶ್ ಕುಮಾರ್ ಖನ್ನಾ ಅವರು, ಅನುರಾಗ್ ತಿವಾರಿ ಅವರ ಮೃತದೇಹದ ಮಣೋತ್ತರ ಪರೀಕ್ಷೆ ನಡೆಸಲಾಗಿದೆ. ಆದರೆ ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಮೃತ ಐಎಎಸ್ ಅಧಿಕಾರಿ ಕರ್ನಾಟಕದಲ್ಲಿ ಒಂದು ದೊಡ್ಡ ಹಗರಣ ಬಯಲಿಗೆಳೆಯಲಿದ್ದರು ಎಂದು ಹೇಳಿದ್ದು ಈಗ ಚರ್ಚೆಗೆ ಕಾರಣವಾಗಿದೆ.

    ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ(36) ಅವರ ಶವ ಉತ್ತರಪ್ರದೇಶದ ಹಜರತ್‍ಗಂಜ್‍ನಲ್ಲಿ ಮೇ 17ರಂದು ಪತ್ತೆಯಾಗಿತ್ತು. ಅನುರಾಗ್ ತಿವಾರಿ ಅವರ ಜನ್ಮದಿನದಂದೇ ಇಲ್ಲಿನ ಮೀರಾ ಬಾಯಿ ಗೆಸ್ಟ್‍ಹೌಸ್ ಬಳಿ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. 2007ನೇ ಬ್ಯಾಚ್‍ನ ಐಎಎಸ್ ಅಧಿಕಾರಿಯಾಗಿರುವ ಇವರು ಸದ್ಯ ಆಹಾರ ಸರಬರಾಜು ಇಲಾಖೆಯ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ರು. ಉತ್ತರಪ್ರದೇಶದ ಬಾಹ್ರಿಯಾಚ್‍ನಲ್ಲಿ ನೆಲೆಸಿದ್ದು, ಸಾವಿಗೂ ಎರಡು ದಿನಗಳಿಂದ ಮೀರಾಬಾಯಿ ಗೆಸ್ಟ್ ಹೌಸ್‍ನಲ್ಲಿ ತಂಗಿದ್ರು ಎಂದು ವರದಿಯಾಗಿತ್ತು.

  • ಉತ್ತರಪ್ರದೇಶದಲ್ಲಿ ಕರ್ನಾಟಕ ಐಎಎಸ್ ಅಧಿಕಾರಿಯ ನಿಗೂಢ ಸಾವು

    ಉತ್ತರಪ್ರದೇಶದಲ್ಲಿ ಕರ್ನಾಟಕ ಐಎಎಸ್ ಅಧಿಕಾರಿಯ ನಿಗೂಢ ಸಾವು

    – ಜನ್ಮದಿನದಂದೇ ಶವವಾಗಿ ಪತ್ತೆಯಾದ ಅನುರಾಗ್ ತಿವಾರಿ

    ಲಕ್ನೋ: ಕರ್ನಾಟಕ ಕೇಡರ್‍ನ ಐಎಎಸ್ ಅಧಿಕಾರಿಯೊಬ್ಬರು ಉತ್ತರಪ್ರದೇಶದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ

    36 ವರ್ಷದ ಅನುರಾಗ್ ತಿವಾರಿ ಅವರ ಶವ ಉತ್ತರಪ್ರದೇಶದ ಹಜರತ್‍ಗಂಜ್‍ನಲ್ಲಿ ಪತ್ತೆಯಾಗಿದೆ. ಅನುರಾಗ್ ತಿವಾರಿ ಅವರ ಜನ್ಮದಿನವಾದ ಇಂದೇ ಇಲ್ಲಿನ ಮೀರಾ ಬಾಯಿ ಗೆಸ್ಟ್‍ಹೌಸ್ ಬಳಿ ಶವವಾಗಿ ಪತ್ತೆಯಾಗಿದ್ದಾರೆ. 2007ನೇ ಬ್ಯಾಚ್‍ನ ಐಎಎಸ್ ಅಧಿಕಾರಿಯಾಗಿರುವ ಇವರು ಸದ್ಯ ಆಹಾರ ಸರಬರಾಜು ಇಲಾಖೆಯ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ರು. ಉತ್ತರಪ್ರದೇಶದ ಬಾಹ್ರಿಯಾಚ್‍ನಲ್ಲಿ ನೆಲೆಸಿದ್ದು, ಎರಡು ದಿನಗಳಿಂದ ಮೀರಾಬಾಯಿ ಗೆಸ್ಟ್‍ಹೌಸ್‍ನಲ್ಲಿ ತಂಗಿದ್ರು ಎಂದು ವರದಿಯಾಗಿದೆ.

    ತಿವಾರಿ ಅವರ ಗಲ್ಲದ ಮೇಲೆ ಗಾಯದ ಗುರುತು ಪತ್ತೆಯಾಗಿದೆ. ಸದ್ಯ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಅನುರಾಗ್ ತಿವಾರಿ ಈ ಹಿಂದೆ ಬೀದರ್, ಕೊಡಗು ಜಿಲ್ಲಾಧಿಕಾರಿಯಾಗಿ, ತುಮಕೂರು ಪಾಲಿಕೆ ಆಯುಕ್ತರಾಗಿ, ಮಧುಗಿರಿ ಎಸಿಯಾಗಿ, ರಾಜ್ಯ ಹಣಕಾಸು ಇಲಾಖೆಯ ಉಪಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ರು.

    ಪಬ್ಲಿಕ್ ಟಿವಿಗೆ ಸಿಕ್ಕ ಮೂಲಗಳ ಮಾಹಿತಿ ಪ್ರಕಾರ ಅನುರಾಗ್ ತಿವಾರಿ ತಮ್ಮ ಪತ್ನಿಯಿಂದ ವಿಚ್ಛೇದನ ಪಡೆದಿದ್ದು, ಮಾನಸಿಕವಾಗಿ ವಿಚಲಿತವಾಗಿದ್ದರು. ಇದೀಗ ಮನೆಯವರ ಒತ್ತಾಯದ ಮೇರೆಗೆ 2ನೇ ಮದುವೆಯಾಗಲು ಒಪ್ಪಿ, ಅದೇ ಕಾರಣಕ್ಕಾಗಿ 4 ವಾರ ರಜೆ ಪಡೆದು ಉತ್ತರಪ್ರದೇಶಕ್ಕೆ ಹುಡುಗಿ ಹುಡುಕಲು ತೆರಳಿದ್ದರು ಎನ್ನಲಾಗಿದೆ. ಮಂಗಳವಾರದಂದು ಮೀರಾಬಾಯಿ ಗೆಸ್ಟ್ ಹೌಸ್‍ನ ಎಲ್‍ಡಿಎವಿಸಿ ಪ್ರಭುನಾರಾಯಣ್ ಅವರ ಕೊಠಡಿಯಲ್ಲಿ ಉಳಿದಿದ್ರು. ಆದ್ರೆ ಇಂದು ಬೆಳಗ್ಗೆ 8 ಗಂಟೆಗೆ ವಾಕಿಂಗ್ ಹೋಗಿದ್ದ ಅನುರಾಗ್ ತಿವಾರಿ ಶವವಾಗಿ ಪತ್ತೆಯಾಗಿದ್ದಾರೆ.

  • ಇಂಗ್ಲಿಷ್‍ನಲ್ಲಿ ಫೈಲ್ ಕಳುಹಿಸಿ ಎಂದು ದರ್ಪ ಮೆರೆದ ಅಧಿಕಾರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಚಾಟಿ ಬೀಸಿದ್ದು ಹೀಗೆ

    ಇಂಗ್ಲಿಷ್‍ನಲ್ಲಿ ಫೈಲ್ ಕಳುಹಿಸಿ ಎಂದು ದರ್ಪ ಮೆರೆದ ಅಧಿಕಾರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಚಾಟಿ ಬೀಸಿದ್ದು ಹೀಗೆ

    – ಕನ್ನಡದಲ್ಲಿ ಫೈಲ್ ಕೊಟ್ರೆ ವಾಪಸ್ಸು ಕಳಿಸ್ತೀನೆಂದು ದರ್ಪ

    ಬೆಂಗಳೂರು: ಕನ್ನಡದ ವಿರುದ್ಧ ಕ್ಯಾತೆ ತೆಗೆದ ದೆಹಲಿ ಮೂಲದ ಐಎಎಸ್ ಅಧಿಕಾರಿ ವಿರುದ್ಧ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಚಾಟಿ ಬೀಸಿದೆ.

    ಸಾರ್ವಜನಿಕ ಉದ್ದಿಮೆಗಳ ಕಾರ್ಯದರ್ಶಿಯಾಗಿರುವ ಐಎಎಸ್ ಅಧಿಕಾರಿ ಶ್ರೀವತ್ಸ ಕೃಷ್ಣಾ ಕನ್ನಡದಲ್ಲಿ ಫೈಲ್ ಕೊಟ್ಟರೆ ವಾಪಸ್ಸು ಕಳಸ್ತಿನಿ ಅಂತಾ ದರ್ಪ ತೋರಿಸಿದ್ದಾರೆ. ಶ್ರೀವತ್ಸಾ ಕೃಷ್ಣಾಗೆ ಕನ್ನಡ ಭಾಷೆ ಬಾರದ ಹಿನ್ನಲೆಯಲ್ಲಿ ಇಲಾಖಾ ಕಡತಗಳನ್ನು ಇಂಗ್ಲಿಷ್‍ನಲ್ಲೆ ಕೊಡುವಂತೆ ಕಿರಿಯ ಅಧಿಕಾರಿಗಳಿಗೆ ಆದೇಶ ಮಾಡಿದ್ದಾರೆ.

    ಕಳೆದ ಮಾರ್ಚ್ 04 ರಂದು ಶ್ರೀವತ್ಸಾ ಕೃಷ್ಣಾ ಅಧಿಕಾರಿಗಳಿಗೆ ಈ ಆದೇಶ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿ ಶ್ರೀವತ್ಸಾಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ ಎಸ್.ಜಿ ಸಿದ್ದರಾಮಯ್ಯ ನೋಟಿಸ್ ನೀಡಿದ್ದಾರೆ.

                                      

    ಕಳೆದ ಹತ್ತು ವರ್ಷಗಳಿಂದ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀವತ್ಸ ಕೃಷ್ಣಾ, ಕನ್ನಡ ಕಲಿಯದಿದ್ದಕ್ಕೆ ಈ ಹಿಂದೆ ಎರಡು ಬಾರಿ ಸಿಎಂ ಬೈದಿದ್ದರು.