Tag: IAF C-130J

  • ಮೊದಲ ಬಾರಿ ನೈಟ್ ವಿಷನ್ ಗಾಗಲ್ಸ್ ಬಳಸಿ ವಿಮಾನ ಲ್ಯಾಂಡ್ ಮಾಡಿದ ಐಎಎಫ್

    ಮೊದಲ ಬಾರಿ ನೈಟ್ ವಿಷನ್ ಗಾಗಲ್ಸ್ ಬಳಸಿ ವಿಮಾನ ಲ್ಯಾಂಡ್ ಮಾಡಿದ ಐಎಎಫ್

    ನವದೆಹಲಿ: ಭಾರತೀಯ ವಾಯುಪಡೆ (IAF) ಮೊದಲ ಬಾರಿಗೆ ಪೂರ್ವ ವಲಯದ ಅಡ್ವಾನ್ಸ್ಡ್ ಲ್ಯಾಂಡಿಂಗ್ ಗ್ರೌಂಡ್‍ನಲ್ಲಿ (Advanced landing ground ) ಎನ್‍ವಿಜಿ ಬಳಸಿ (ರಾತ್ರಿ ದೃಷ್ಟಿ ಕನ್ನಡಕ) ವಿಮಾನವನ್ನು ಯಶಸ್ವಿಯಾಗಿ ಇಳಿಸಿದೆ.

    ಈ ಬಗ್ಗೆ ಎಕ್ಸ್ ಖಾತೆಯಲ್ಲಿ ವಾಯುಪಡೆ, ಐಎಎಫ್ ಸಿ-130ಜೆ ವಿಮಾನವನ್ನು ಪೂರ್ವ ವಲಯದಲ್ಲಿರುವ ಅಡ್ವಾನ್ಸ್ಡ್ ಲ್ಯಾಂಡಿಂಗ್ ಗ್ರೌಂಡ್‍ನಲ್ಲಿ ನೈಟ್ ವಿಷನ್ ಗಾಗಲ್ಸ್ (Night Vision Goggles) ಸಹಾಯದಿಂದ ಲ್ಯಾಂಡ್ ಮಾಡಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದೆ. ಅಲ್ಲದೇ ಎಕ್ಸ್‌ನಲ್ಲಿ ವಿಮಾನ ಲ್ಯಾಂಡಿಂಗ್ ಆಗುವ ವೀಡಿಯೋವನ್ನು ಸಹ ಹಂಚಿಕೊಳ್ಳಲಾಗಿದ್ದು, ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿರುವುದನ್ನು ಗಮನಿಸಬಹುದಾಗಿದೆ. ಇದರೊಂದಿಗೆ ಕಿಟಕಿಯಿಂದ ಸಹ ಎನ್‍ವಿಜಿ ಬಳಸಿ ಒಂದು ದೃಶ್ಯವನ್ನು ಸೆರೆ ಹಿಡಿದು ಹಂಚಿಕೊಳ್ಳಲಾಗಿದೆ. ಇದನ್ನೂ ಓದಿ: ವಿಚಾರಣೆಗೆ ಬಾರದ ಭವಾನಿ ರೇವಣ್ಣ- ಸರ್ಕಾರದ ವಿರುದ್ಧ ಜೆಡಿಎಸ್ MLC ಕಿಡಿ

    ಪೂರ್ವ ವಲಯವು ಭಾರತದ ಈಶಾನ್ಯ ರಾಜ್ಯಗಳಾದ ಒಡಿಶಾ, ಜಾರ್ಖಂಡ್, ಸಿಕ್ಕಿಂ, ಪಶ್ಚಿಮ ಬಂಗಾಳ ಮತ್ತು ಬಿಹಾರದ ಭಾಗಗಳನ್ನು ಒಳಗೊಂಡಿದೆ. ಇದು ಚೀನಾ, ನೇಪಾಳ, ಭೂತಾನ್, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದೊಂದಿಗೆ 6300 ಕಿಮೀ ಉದ್ದದ ಅಂತರಾಷ್ಟ್ರೀಯ ಗಡಿಯ ರಕ್ಷಣೆಯ ಹೊಣೆ ಹೊತ್ತಿದೆ.

    ಎನ್‍ವಿಜಿ ತಂತ್ರಜ್ಞಾನ ಬಳಸಿಕೊಂಡು, ವಾಯುಪಡೆ ಈಗ ಕಡಿಮೆ ಬೆಳಕಿರುವ ಸಮಯದಲ್ಲೂ ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿ ಕಾರ್ಯಾಚರಣೆಗಳನ್ನು ನಡೆಸಬಹುದು. ಇದು ರಾತ್ರಿ ವೇಳೆಯ ಕಾರ್ಯಾಚರಣೆಗಳನ್ನು ಪರಿಣಾಮಕಾರಿಯಾಗಿ ನಡೆಸಲು ಸಹಕಾರಿಯಾಗಲಿದೆ.

    ಈ ವರ್ಷದ ಆರಂಭದಲ್ಲಿ, ಐಎಎಫ್ ಕಾರ್ಗಿಲ್ ಏರ್‌ಸ್ಟ್ರಿಪ್‌ನಲ್ಲಿ ಇದೇ ವಿಮಾನ ರಾತ್ರಿ ವೇಳೆ ಲ್ಯಾಂಡಿಂಗ್‍ನ್ನು ಯಶಸ್ವಿಯಾಗಿ ನಡೆಸಿತ್ತು. ಇದು ಈ ಏರ್‌ಸ್ಟ್ರಿಪ್‌ನಲ್ಲಿ ರಾತ್ರಿ ವೇಳೆಯ ಕಾರ್ಯಾಚರಣೆ ಮೊದಲಾಗಿತ್ತು. ಇನ್ನೂ ಕಾರ್ಗಿಲ್, ಶ್ರೀನಗರ ಮತ್ತು ಜಮ್ಮು ನಡುವಿನ ನಾಗರಿಕ ಸಾರಿಗೆಗಾಗಿ, ವಿಶೇಷವಾಗಿ ತೀವ್ರ ಚಳಿಗಾಲದಲ್ಲಿ ವಿಮಾನ ಬಳಕೆ ಮಾಡಲಾಗುತ್ತದೆ. ಆದರೂ ಇತ್ತೀಚಿನವರೆಗೆ ಕಾರ್ಗಿಲ್ ಏರ್‌ಸ್ಟ್ರಿಪ್‌ನಲ್ಲಿ ರಾತ್ರಿ ವಿಮಾನ ಇಳಿಸುವ ವ್ಯವಸ್ಥೆ ಇರಲಿಲ್ಲ. ಇದನ್ನೂ ಓದಿ: ಪೊಲೀಸರಿಗಾಗಿ ನಾನು, ನನ್ನ ಪೋಷಕರು, ಹೆಂಡತಿ ಕಾಯುತ್ತಿದ್ದೇವೆ: ಕೇಜ್ರಿವಾಲ್‌ ಪೋಸ್ಟ್‌

  • ಆಪರೇಷನ್ ಕಾವೇರಿ- 135 ಮಂದಿ ಭಾರತೀಯರಿದ್ದ 3ನೇ ತಂಡ ಸೌದಿಗೆ ರೀಚ್

    ಆಪರೇಷನ್ ಕಾವೇರಿ- 135 ಮಂದಿ ಭಾರತೀಯರಿದ್ದ 3ನೇ ತಂಡ ಸೌದಿಗೆ ರೀಚ್

    ರಿಯಾದ್: ಕಲಹ ಪೀಡಿತ ಸುಡಾನ್‍ನಿಂದ (Sudan) ಹೊರಟಿದ್ದ ಅಪರೇಷನ್ ಕಾವೇರಿಯ ಐಎಎಫ್ ಸಿ-130ಜೆ (IAF C-130J) ವಿಮಾನವು 135 ಭಾರತೀಯರ (Indians) ಮೂರನೇ ಬ್ಯಾಚ್ ಸೌದಿ ಅರೇಬಿಯಾದ (Saudi Arabia) ಜೆಡ್ಡಾವನ್ನು (Jeddah) ಬುಧವಾರ ತಲುಪಿದೆ ಎಂದು ವಿದೇಶಾಂಗ ಖಾತೆಯ ರಾಜ್ಯ ಸಚಿವ ವಿ. ಮುರಳೀಧರನ್ (V Muraleedharan) ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

    ಸಿ-130ಜೆ ವಿಮಾನದಲ್ಲಿ ಜೆಡ್ಡಾ ವಿಮಾನ ನಿಲ್ದಾಣಕ್ಕೆ ಬಂದಿಳಿದ 148 ಭಾರತೀಯರ ಎರಡನೇ ಬ್ಯಾಚ್‍ನ್ನು ಬುಧವಾರ ಮುಂಜಾನೆ ಅವರು ಬರಮಾಡಿಕೊಂಡಿದ್ದಾರೆ. ಅಲ್ಲದೆ ನೌಕಾಪಡೆಯ ಐಎನ್‍ಎಸ್ ಸುಮೇಧಾ (INS Sumedha) ನೌಕೆಯು 278 ಜನರೊಂದಿಗೆ ಜೆಡ್ಡಾ ಬಂದರನ್ನು ತಲುಪಿದೆ ಎಂದು ಅವರು ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸುಡಾನ್ ಸಂಘರ್ಷ – ಭಾರತೀಯರು ಸೇರಿದಂತೆ 150 ಜನರನ್ನು ಸುರಕ್ಷಿತವಾಗಿ ಕರೆತಂದ ಸೌದಿ ಅರೇಬಿಯಾ

    ಆಪರೇಷನ್ ಕಾವೇರಿ (Operation Kaveri) ಹೆಸರಿನಲ್ಲಿ ನಡೆಸಲಾಗುತ್ತಿರುವ ಕಾರ್ಯಾಚರಣೆಯಲ್ಲಿ, ಸುಡಾನ್‍ನಿಂದ ಸ್ಥಳಾಂತರಿಸಲ್ಪಟ್ಟ ಭಾರತೀಯರನ್ನು ದೇಶಕ್ಕೆ ಕಳಿಸುವ ಮುನ್ನ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಸ್ವಲ್ಪ ಸಮಯ ಇರಿಸಲಾಗುತ್ತದೆ. ನಂತರ ಅವರನ್ನು ಭಾರತಕ್ಕೆ ಕಳುಹಿಸಲಾಗುತ್ತದೆ ಎಂದು ಮುರುಳೀಧರನ್ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

    ಸುಡಾನ್‍ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಭಾರತೀಯ ನೌಕಾಪಡೆಯ ಐಎನ್‍ಎಸ್ ಟೆಗ್ ಮಂಗಳವಾರ ಆಪರೇಷನ್ ಕಾವೇರಿಗೆ ಸೇರಿದೆ. ಸುಡಾನ್‍ನಲ್ಲಿ ಸಿಲುಕಿರುವ ಭಾರತೀಯರ ನೆರವಿಗೆ ಹೆಚ್ಚುವರಿ ಅಧಿಕಾರಿಗಳು, ಅಗತ್ಯ ಪರಿಹಾರ ಸಾಮಗ್ರಿಗಳೊಂದಿಗೆ ನೌಕೆಯಲ್ಲಿ ಪೋರ್ಟ್ ಸುಡಾನ್‍ಗೆ ತಲುಪಿದೆ ಎಂದು ಹಿರಿಯ ಎಂಇಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸುಡಾನ್‍ನ ರಾಜಧಾನಿ ಖಾರ್ತೌಮ್‍ನಲ್ಲಿ ಸುಡಾನ್ ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಕಾಳಗ ತೀವ್ರಗೊಂಡಿದೆ. ಕದನ ಪೀಡಿತ ಸುಡಾನ್‍ನಿಂದ ತನ್ನ ನಾಗರಿಕರನ್ನು ಸ್ಥಳಾಂತರಿಸುವ ಪ್ರಯತ್ನ ನಡೆಯುತ್ತಿದೆ. ಸುಮಾರು 500 ಭಾರತೀಯರು ಪೋರ್ಟ್ ಸುಡಾನ್ ತಲುಪಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಸೋಮವಾರ ತಿಳಿಸಿದ್ದರು.

    ಸುಡಾನ್‍ನ ಇತ್ತೀಚಿನ ಬೆಳವಣಿಗೆಯಲ್ಲಿ, ವಿವಿಧ ದೇಶಗಳು ತಮ್ಮ ಪ್ರಜೆಗಳನ್ನು ಸುಡಾನ್‍ನಿಂದ ಸ್ಥಳಾಂತರಿಸುತ್ತಿದ್ದಾರೆ. ಈ ವೇಳೆ ಅನಾಹುತಗಳಾಗದಂತೆ ತಡೆಯಲು ಅಮೆರಿಕ ಮತ್ತು ಸೌದಿ ಅರೇಬಿಯಾ ಮಧ್ಯಸ್ಥಿಕೆಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಮನವಿಯ ನಂತರ ಹೋರಾಟ ನಡೆಸುತ್ತಿದ್ದ ಎರಡು ಬಣಗಳು ಸೋಮವಾರ 72 ಗಂಟೆಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದವು. ಇದನ್ನೂ ಓದಿ: ಸುಡಾನ್ ಹಿಂಸಾಚಾರ – ವಿಮಾನ ನಿಲ್ದಾಣಗಳ ಸ್ಥಗಿತ; ಪ್ರಜೆಗಳನ್ನು ಕರೆತರಲು ಭೂಮಾರ್ಗ ಹುಡುಕಾಟದಲ್ಲಿ ಭಾರತ