Tag: IAEA

  • ಭಾರತದ ದಾಳಿ ನಂತ್ರ ಪಾಕ್‌ನಲ್ಲಿ ಪರಮಾಣು ವಿಕಿರಣ ಸೋರಿಕೆ ಆಗ್ತಿದ್ಯಾ? ಮತ್ತೆ ಜಗತ್ತಿನ ಮುಂದೆ ಬೆತ್ತಲಾದ ಪಾಕ್‌

    ಭಾರತದ ದಾಳಿ ನಂತ್ರ ಪಾಕ್‌ನಲ್ಲಿ ಪರಮಾಣು ವಿಕಿರಣ ಸೋರಿಕೆ ಆಗ್ತಿದ್ಯಾ? ಮತ್ತೆ ಜಗತ್ತಿನ ಮುಂದೆ ಬೆತ್ತಲಾದ ಪಾಕ್‌

    ಇಸ್ಲಾಮಾಬಾದ್‌: ಭಾರತ (India) ಪ್ರತಿದಾಳಿ ನಡೆಸಿದ ಬಳಿಕ ಪಾಕಿಸ್ತಾನದಲ್ಲಿ (Pakistan) ಪರಮಾಣು ವಿಕಿರಣ ಸೋರಿಕೆ ಆಗುತ್ತಿದ್ಯಾ? ಎಂಬ ಪ್ರಶ್ನೆಗೆ ಅಂತಾರಾಷ್ಟ್ರೀಯ ಅಣುಶಕ್ತಿ ಪ್ರಾಧಿಕಾರ (IAEA) ಪ್ರತಿಕ್ರಿಯೆ ನೀಡಿದೆ.

    ಹೌದು. ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಸಂದರ್ಭದಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಗೋಧಾ ವಾಯುನೆಲೆಯ ಮೇಲೆ ಭಾರತ ದಾಳಿ ನಡೆಸಿತ್ತು. ಈ ವಾಯುನೆಲೆ ಕಿರಾನಾ ಬೆಟ್ಟದೊಂದಿಗೆ (Kirana Hills) ಸಂಪರ್ಕ ಹೊಂದಿದೆ. ಕಿರಾನಾ ಬೆಟ್ಟದ ಕೆಳಗಡೆ ಇರುವ ಅಣ್ವಸ್ತ್ರ ಗೋದಾಮಿನಿಂದ ವಿಕಿರಣ ಸೋರಿಕೆಯಾಗುತ್ತಿದೆ (Nuclear Leak) ಎಂಬ ವದಂತಿಯನ್ನ ಪಾಕ್‌ ಹಬ್ಬಿಸಿತ್ತು. ಇದೇ ಕಾರಣಕ್ಕೆ ಕದನ ವಿರಾಮಕ್ಕೆ ಅಮೆರಿಕದ ಕಾಲು ಹಿಡಿದುಕೊಂಡಿತ್ತು. ವಿಕಿರಣ ಸೋರಿಕೆ ವದಂತಿಗಳ ಕುರಿತು ನೆಟ್ಟಿಗರು ಸೋಷಿಯಲ್‌ ಮೀಡಿಯಾಗಳಲ್ಲಿ ಮೀಮ್ಸ್‌ ಹಂಚಿಕೊಳ್ಳುವ ಮೂಲಕ ವ್ಯಂಗ್ಯ ಮಾಡಿದ್ದರು. ಇದೀಗ ಅಂತರರಾಷ್ಟ್ರೀಯ ಅಣುಶಕ್ತಿ ಪ್ರಾಧಿಕಾರ (ಐಎಇಎ) ಪ್ರತಿಕ್ರಿಯೆ ನೀಡಿದ್ದು, ಪಾಕಿಸ್ತಾನದ ನಿಜಬಣ್ಣ ಬಯಲಾಗಿದೆ.

    ಪಾಕಿಸ್ತಾನದಲ್ಲಿ ಪರಮಾಣು ವಿಕಿರಣ ಸೋರಿಕೆ ಆಗಿದೆಯೇ? ಎಂಬುದನ್ನು ಪ್ರಶ್ನಿಸಿ ಇತ್ತೀಚೆಗೆ ಮಾಧ್ಯಮ ಸಂಸ್ಥೆಯೊಂದು ಐಎಇಎಗೆ ಇ-ಮೇಲ್‌ ಪತ್ರ ಕಳುಹಿಸಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಐಎಇಎ, ನಮಗೆ ಲಭ್ಯವಿರುವ ಮಾಹಿತಿ ಹಾಗೂ ವರದಿಗಳ ಪ್ರಕಾರ ಪಾಕಿಸ್ತಾನದಲ್ಲಿ ಯಾವುದೇ ಪರಮಾಣು ಸೌಲಭ್ಯದಿಂದ ವಿಕಿರಣ ಸೋರಿಕೆ ಆಗಿಲ್ಲ ಎಂದು ಹೇಳಿದೆ.

    ಇದಕ್ಕೂ ಮುನ್ನ ಏರ್ ಮಾರ್ಷಲ್ ಎ.ಕೆ. ಭಾರ್ತಿ ಅವರು ಭಾರತ ಕಿರಾನಾ ಬೆಟ್ಟಗಳನ್ನು ಹೊಡೆದುರುಳಿಸಿಲ್ಲ ಎಂದು ದೃಢಪಡಿಸಿದ್ದರು. ಅಲ್ಲದೇ ಕಿರಾನಾ ಬೆಟ್ಟಗಳಲ್ಲಿ ಅಣುಸ್ಥಾವರಗಳಿವೆ ಎಂದು ಹೇಳಿದ್ದಕ್ಕಾಗಿ ಧನ್ಯವಾದಗಳು, ನಮಗೆ ಈ ಬಗ್ಗೆ ಗೊತ್ತೇ ಇರಲಿಲ್ಲ ಎಂದು ಮುಗುಳುನಕ್ಕಿದ್ದರು.

    ಭಾರತವಲ್ಲದಿದ್ದರೆ ದಾಳಿ ಮಾಡಿದ್ದು ಮತ್ಯಾರು?
    ಭಾರತ ದಾಳಿ ಸಂದರ್ಭದಲ್ಲಿ ಪಾಕ್‌ನ ವಾಯುಸೀಮೆಯಲ್ಲಿ ಯುಎಸ್‌ನ ಬೀಚ್‌ಕ್ರಾಫ್ಟ್‌ ಬಿ-350 ವೈಮಾನಿಕ ಮಾಪನ ವ್ಯವಸ್ಥೆ (ಎಎಂಎಸ್) ವಿಮಾನ ಪತ್ತೆಯಾಗಿತ್ತು. ಇದು ರೆಡಾರ್‌ ವ್ಯವಸ್ಥೆಯ ವಿಮಾನ ಆಗಿದೆ. ತುರ್ತು ಸಂದರ್ಭಗಳಲ್ಲಿ ವಿಕಿರಣಶೀಲ ಮಾಲಿನ್ಯ ಗುರುತಿಸಲು ಅಮೆರಿಕ ವಿನ್ಯಾಸಗೊಳಿಸಿದ ವಿಮಾನ ಇದಾಗಿದೆ. ಇದು ಪಾಕ್‌ ವಾಯುಸೀಮೆಯಲ್ಲಿ ಪತ್ತೆಯಾಗಿರುವುದು ಮತ್ತಷ್ಟು ಊಹಾಪೋಹಗಳಿಗೆ ಕಾರಣವಾಹಗಿದೆ.

    ಕಿರಾನಾ ಬೆಟ್ಟ ಎಲ್ಲಿದೆ?
    ಸರ್ಗೋಧಾ ವಾಯುನೆಲೆಯಿಂದ ರಸ್ತೆಯ ಮೂಲಕ ಕೇವಲ 20 ಕಿಮೀ ಮತ್ತು ಕುಶಾಬ್ ಪರಮಾಣು ಸ್ಥಾವರದಿಂದ 75 ಕಿಮೀ ದೂರದಲ್ಲಿ ಕಿರಾನಾ ಬೆಟ್ಟ ಇದೆ. ಸುಮಾರು 68 ಚದರ ಕಿ.ಮೀ ಪ್ರದೇಶವನ್ನು ಆವರಿಸಿರುವ ಮತ್ತು 39 ಕಿ.ಮೀ ಪರಿಧಿಯಿಂದ ಸುತ್ತುವರೆದಿರುವ ಕಿರಾನಾ ಬೆಟ್ಟಗಳು ಬಹು-ಪದರದ ರಕ್ಷಣಾ ವ್ಯವಸ್ಥೆಯೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದರ ಒಳಗಡೆ ಕನಿಷ್ಠ 10 ಭೂಗತ ಸುರಂಗ ಇದೆ ಎನ್ನಲಾಗುತ್ತಿದೆ.

    ಚರ್ಚೆ ಆಗುತ್ತಿರುವುದು ಯಾಕೆ?
    ಭಾರತ ಮತ್ತು ಪಾಕಿಸ್ತಾನದ ಮಧ್ಯೆ ತೀವ್ರ ಸಂಘರ್ಷ ನಡೆಯುತ್ತಿದ್ದಾಗ ದಿಢೀರ್‌ ಕದನ ವಿರಾಮ ಘೋಷಣೆಯಾಗಿದ್ದಕ್ಕೆ ಕಾರಣ ಕಿರಾನಾ ಬೆಟ್ಟದ ಮೇಲಿನ ದಾಳಿ ಎಂಬ ವಿಚಾರ ಕಳೆದ ಶನಿವಾರದಿಂದ ಜೋರಾಗಿ ಚರ್ಚೆ ಆಗುತ್ತಿದೆ.

  • ಉಕ್ರೇನ್ ನ್ಯೂಕ್ಲಿಯರ್ ಘಟಕದ ಮೇಲೆ ರಾಕೆಟ್ ದಾಳಿ, 14 ಮಂದಿ ದುರ್ಮರಣ – ಭಾರತಕ್ಕೂ ಆತಂಕ

    ಉಕ್ರೇನ್ ನ್ಯೂಕ್ಲಿಯರ್ ಘಟಕದ ಮೇಲೆ ರಾಕೆಟ್ ದಾಳಿ, 14 ಮಂದಿ ದುರ್ಮರಣ – ಭಾರತಕ್ಕೂ ಆತಂಕ

    ಕೈವ್: ಉಕ್ರೇನಿನ ಝಪೋರಿಝ್ಯಾ ಪರಮಾಣು ವಿದ್ಯುತ್ ಸ್ಥಾವರದ ಸಮೀಪವೇ ರಷ್ಯಾ ರಾಕೆಟ್ ದಾಳಿ ನಡೆಸಿದ್ದು, 14 ಜೀವಗಳು ಬಲಿಯಾಗಿರುವ ದಾರುಣ ಘಟನೆ ನಡೆದಿದೆ. ರಷ್ಯಾ ಮೇಲಿನ ನಿಯಂತ್ರಣವು ಇತರ ದೇಶಗಳಿಗೂ ಅಪಾಯವನ್ನುಂಟುಮಾಡುತ್ತವೆ ಎಂದು G7 ರಾಷ್ಟ್ರಗಳು ಎಚ್ಚರಿಸಿವೆ.

    ರಷ್ಯಾ-ಉಕ್ರೇನ್ ದಾಳಿ ನಡೆಸುತ್ತಿರುವ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಇದು ಜನರ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹಾಗಾಗಿ ಉಭಯ ದೇಶಗಳು ಪರಮಾಣು ಘಟಕದ ಸುರಕ್ಷತೆ ಹಾಗೂ ಭದ್ರತೆಗೆ ಗಮನ ನೀಡಬೇಕು ಎಂದು ಕರೆ ನೀಡಿದೆ. ಇದನ್ನೂ ಓದಿ: ಮನೆ ಬಾಡಿಗೆದಾರರಿಗೆ ಶಾಕ್ – ಹೊಸ ನಿಯಮಗಳ ಪ್ರಕಾರ ಶೇ.18 ರಷ್ಟು ತೆರಿಗೆ ಬರೆ

    ಈ ಸಂಬಂಧ ಚರ್ಚೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿನ್ನೆಯಷ್ಟೇ ತುರ್ತು ಸಭೆ ಕರೆದಿತ್ತು. ಈ ವೇಳೆ ವಿಶ್ವಸಂಸ್ಥೆಯು ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಂಬೋಜ್, ಪರಮಾಣು ಘಟಕದ ಸುರಕ್ಷತೆ ಮತ್ತು ಭದ್ರತೆ ಉದ್ದೇಶದಿಂದ ಘಟಕದ ಸುತ್ತ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.

    ಉಭಯ ದೇಶಗಳ ದಾಳಿಯಿಂದ ಉಂಟಾಗುವ ಯಾವುದೇ ಹಾನಿಯು ಸಾರ್ವಜನಿಕ ಆರೋಗ್ಯ ಮತ್ತು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಅಭ್ಯರ್ಥಿ ನಿತೀಶ್? – ದೂರವಾಣಿ ಕರೆಗಳ ಬಗ್ಗೆ ಸಿಎಂ ಹೇಳಿದ್ದೇನು?

    ರಷ್ಯಾ ರಾಕೆಟ್ ದಾಳಿಯಿಂದ 14 ಮಂದಿ ದುರ್ಮರಣಕ್ಕೀಡಾಗಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಐವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಈ ಉದ್ವಿಗ್ನತೆಯು 1986ರ ಸೋವಿಯತ್ ಉಕ್ರೇನ್‌ನಲ್ಲಿ ನಡೆದ ಭೀರಕ ಪರಮಾಣು ದುರಂತದ ನೆನಪುಗಳನ್ನು ಪುನರುಜ್ಜೀವನಗೊಳಿಸಿದೆ. ಸೋವಿಯತ್‌ನಲ್ಲಿ ನಡೆದಿದ್ದ ಶೆಲ್ ದಾಳಿ ನೂರಾರು ಜನರನ್ನು ಕೊಂದಿತ್ತು. ಯುರೂಪ್‌ನ ಅನೇಕ ಭಾಗಗಳಲ್ಲಿ ವಿಕಿರಣದ ಮಾಲಿನ್ಯವನ್ನುಂಟುಮಾಡಿತ್ತು ಎಂದು ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]