ಬೆಂಗಳೂರು: 2024 ರ ಲೋಕಸಭಾ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದ್ದು, ಅಂಚೆ ಮತದಾನದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಬೆಳಗ್ಗೆ 8:52 ರ ಹೊತ್ತಿಗೆ ಎನ್‌ಡಿಎ 304, ಐಎನ್‌ಡಿಐಎ 167 ಹಾಗೂ ಇತರೆ 30 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.
ಕರ್ನಾಟಕದಲ್ಲಿ ಬಿಜೆಪಿ 17, ಕಾಂಗ್ರೆಸ್ 4 ಮತ್ತು ಜೆಡಿಎಸ್ 2 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಬೆಂಗಳೂರು ಗ್ರಾಮಾಂತರದಲ್ಲಿ ಡಾ. ಮಂಜುನಾಥ್ ಮುನ್ನಡೆ ಸಾಧಿಸಿದ್ದಾರೆ.
ಇಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಯಿತು. ಮಧ್ಯಾಹ್ನದ ಹೊತ್ತಿಗೆ ಫಲಿತಾಂಶದ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ.
ನವದೆಹಲಿ: ಇಂಡಿಯಾ ಒಕ್ಕೂಟದ (INDIA Bloc) ನಾಲ್ಕನೇ ಸಭೆಯನ್ನು ಮತ್ತೆ ಮುಂದೂಡಲಾಗಿದ್ದು, ಡಿಸೆಂಬರ್ 19 ರಂದು ದೆಹಲಿಯಲ್ಲಿ ನಡೆಯಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ (Jai Ram Ramesh) ಭಾನುವಾರ ಹೇಳಿದ್ದಾರೆ.
ಈ ಹಿಂದೆ ಡಿಸೆಂಬರ್ 17 ರಂದು ಸಭೆ ನಿಗದಿಯಾಗಿತ್ತು. ಆದರೆ ಇದೀಗ ಮತ್ತೆ ಈ ಸಭೆಯನ್ನು ಮುಂದೂಡಿದ್ದು, ಇದಕ್ಕೆ ಕಾರಣ ತಿಳಿದುಬಂದಿಲ್ಲ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ಮೈತ್ರಿಕೂಟದ ಉನ್ನತ ನಾಯಕರು ನಿರ್ಧರಿಸಿದ ಹಿನ್ನೆಲೆಯಲ್ಲಿ ಡಿ.6ರಂದು ನಿಗದಿಯಾಗಿದ್ದ ಸಭೆಯನ್ನು ಡಿ. 17 ಕ್ಕೆ ಮುಂದೂಡಲಾಗಿತ್ತು.
ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ಮತ್ತು ರಾಜಸ್ಥಾನಗಳ ಚುನಾವಣಾ ಫಲಿತಾಂಶ ಪ್ರಕಟವಾದ ದಿನವೇ ಡಿಸೆಂಬರ್ 6 ರಂದು ಕಾಂಗ್ರೆಸ್ ಸಭೆಯನ್ನು (Comgress Meeting) ಕರೆದಿತ್ತು . ಆದರೆ ಮೂರು ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದಂತೆಯೇ ಪ್ರತಿಪಕ್ಷಗಳ ಸಭೆಯನ್ನು ಘೋಷಿಸಲಾಯಿತು. ಇದನ್ನೂ ಓದಿ: ಸೋದರಳಿಯನನ್ನು ರಾಜಕೀಯ ಉತ್ತರಾಧಿಕಾರಿಯಾಗಿ ಘೋಷಿಸಿದ ಮಾಯಾವತಿ
27 ಮೈತ್ರಿ ಪಕ್ಷಗಳ ಕೊನೆಯ ಸಭೆಯು ಮುಂಬೈನಲ್ಲಿ ನಡೆಯಿತು. ಶಿವಸೇನಾ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಐದು ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಇದನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ಪ್ರಮುಖ ಚುನಾವಣಾ ವಿಷಯಗಳ ಚರ್ಚೆಯ ಜೊತೆಗೆ ಸಮನ್ವಯ ಸಮಿತಿಯನ್ನು ರಚಿಸಿತು. ಅಲ್ಲದೇ 2024 ರ ಭಾರತೀಯ ಸಾರ್ವತ್ರಿಕ ಚುನಾವಣೆಗಳನ್ನು ಸಾಧ್ಯವಾದಷ್ಟು ಒಟ್ಟಾಗಿ ಎದುರಿಸಲು ಮೂರು ಅಂಶಗಳ ನಿರ್ಣಯವನ್ನು ಅಂಗೀಕರಿಸಿತು.
ಬೆಂಗಳೂರಿನಲ್ಲಿ ನಡೆದ ಎರಡನೇ ಸಭೆಯಲ್ಲಿ ಮೈತ್ರಿಕೂಟದ ಹೆಸರು ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್ (ಇಂಡಿಯಾ) ಅನ್ನು ಘೋಷಿಸಲಾಯಿತು. ಮೊದಲ ಸಭೆಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪಾಟ್ನಾದಲ್ಲಿ ಆಯೋಜಿಸಿದ್ದರು . ಈ ವೇಳೆ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಹೋರಾಡಲು ಪಕ್ಷಗಳು ನಿರ್ಧರಿಸಿದವು.
ಕೋಲಾರ: ಸನಾತನ ಧರ್ಮದ ವಿರುದ್ಧ ಮಾತಾಡಿದರೆ ಪಾಕಿಸ್ತಾನದ ಪರ ಇರುವವರು ಮತ ಕೊಡುತ್ತಾರೆ ಎಂಬ ಉದ್ದೇಶದಿಂದ ಉದಯನಿಧಿ ಸ್ಟಾಲಿನ್ (Udhayanidhi Stalin) ಮಾತಾಡಿದ್ದಾರೆ ಎಂದು ಸಂಸದ ಮುನಿಸ್ವಾಮಿ (Muniswamy) ವಾಗ್ದಾಳಿ ನಡೆಸಿದ್ದಾರೆ.
ಬಂಗಾರಪೇಟೆಯ ರೈಲ್ವೆ ನಿಲ್ದಾಣದಲ್ಲಿ ಎಕ್ಸಿಲೇಟರ್ ಲೋಕಾರ್ಪಣೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಬಿಜೆಪಿ ಹಿಂದೂಪರ ಇದೆ. ಆದರೆ ಐ.ಎನ್.ಡಿ.ಐ.ಎ (I.N.D.I.A) ಒಕ್ಕೂಟ ಪಾಕಿಸ್ತಾನದ ಪರ ಸಾಗುತ್ತಿದೆ. ಭಾರತದಲ್ಲಿ 800 ವರ್ಷ ಆಳ್ವಿಕೆ ನಡೆಸಿದ ಮಹಮ್ಮದ್ ಘಜ್ನಿಯಿಂದ ಸಹ ಹಿಂದೂ ಧರ್ಮ ನಾಶ ಮಾಡಲು ಸಾಧ್ಯವಾಗಿಲ್ಲ. ಅಧರ್ಮ ಅಳಿಸಲು ಶ್ರೀಕೃಷ್ಣನ ಅವತಾರದಂತೆ ನರೇಂದ್ರ ಮೋದಿಯವರು ದೇಶದಲ್ಲಿ ಇದ್ದಾರೆ. ಆಲಿಬಾಬಾ 40 ಕಳ್ಳರ ತಂಡದ ಐ.ಎನ್.ಡಿ.ಐ.ಎ ಒಕ್ಕೂಟದ ಅಂತ್ಯಕಾಲ ಸಮೀಪದಲ್ಲೇ ಇದೇ ಎಂದಿದ್ದಾರೆ. ಇದನ್ನೂ ಓದಿ: ‘INDIA’ ಬಗ್ಗೆ ಭಯ ಬಂದು ಹೆಸರು ಬದಲಾವಣೆ: ಡಿಕೆಶಿ ಲೇವಡಿ
ರಿಪಬ್ಲಿಕ್ ಆಫ್ ಇಂಡಿಯಾ ಹೆಸರನ್ನು ರಿಪಬ್ಲಿಕ್ ಆಫ್ ಭಾರತ ಮಾಡುವ ವಿಚಾರವಾಗಿ, ಮೊದಲು ಈಸ್ಟ್ ಇಂಡಿಯಾ ಕಂಪನಿ ಎಂದು ನಾಮಕರಣ ಮಾಡಿಕೊಂಡಿದ್ದರು. ಈಗ ಭಾರತ ಎಂದರೆ ಇಡೀ ವಿಶ್ವಕ್ಕೆ ಗೊತ್ತಿದೆ. ಭಾರತ ಎಂದರೆ ಹಿಂದೂಸ್ತಾನ, ಇತಿಹಾಸ ಇರುವಂತಹ ದೇಶ. ಈ ಕೆಲಸಕ್ಕೆ ಬಾರದವರು ಯುಪಿಎ ಸರ್ಕಾರ ಇದ್ದಾಗ ಯುಪಿಎ1, ಯುಪಿಎ2 ಎಂದು ಮಾಡಿಕೊಂಡು ಭ್ರಷ್ಟಾಚಾರ ಮಾಡಿದ್ದರು. ಅದನ್ನು ತೊಳೆದುಕೊಳ್ಳುವ ನಿಟ್ಟಿನಲ್ಲಿ ಹೊಸ ಹೆಸರು ಐ.ಎನ್.ಡಿ.ಐ.ಎ ಎಂದು ಇಟ್ಟುಕೊಂಡಿದ್ದಾರೆ. ಭಾರತ ಎಂದರೆ ವಿರೋಧ ಮಾಡುವವರು ಯಾರೂ ಇಲ್ಲ. ಹೀಗಾಗಿ ಮರುನಾಮಕರಣ ಮಾಡಲು ನಮ್ಮ ಒಪ್ಪಿಗೆ ಇದೆ ಎಂದಿದ್ದಾರೆ.