Tag: hydrabad

  • ಮಾಜಿ ಸಿಎಂ ಕೆಸಿಆರ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ವ್ಯಕ್ತಿ ಶವವಾಗಿ ಪತ್ತೆ

    ಮಾಜಿ ಸಿಎಂ ಕೆಸಿಆರ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ವ್ಯಕ್ತಿ ಶವವಾಗಿ ಪತ್ತೆ

    ಹೈದರಾಬಾದ್: ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್(K Chandrashekar Rao) ವಿರುದ್ಧ ಭ್ರಷ್ಟಾಚಾರ(Corruption) ಆರೋಪ ಮಾಡಿ ಕೋರ್ಟ್ ಮೆಟ್ಟಿಲೇರಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿರುವ ಘಟನೆ ಜಯಶಂಕರ್ ಭೂಪಲಪಲ್ಲಿಯಲ್ಲಿ(Jayashankar Bhupalpally) ನಡೆದಿದೆ.

    ಎನ್.ರಾಜಲಿಂಗಮೂರ್ತಿ ಕೊಲೆಯಾದ ವ್ಯಕ್ತಿ. ಕಾಳೇಶ್ವರಂ ಯೋಜನೆಯ ಭಾಗವಾಗಿ ಮೇಡಿಗಡ್ಡ ಬ್ಯಾರೇಜ್ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಮತ್ತು ಇತರರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಇದನ್ನೂ ಓದಿ: ಮುಡಾ ಕೇಸ್‌ನಲ್ಲಿ ಬಿ ರಿಪೋರ್ಟ್; ಅಕ್ರಮವಾಗಿ 14 ನಿವೇಶನ ಬಂದಿಲ್ಲ ಎಂದಾದರೆ, ಅದನ್ನು ಹಿಂತಿರುಗಿಸಿದ್ದೇಕೆ? – ವಿಜಯೇಂದ್ರ

    ರಾಜಲಿಂಗಮೂರ್ತಿ ಬುಧವಾರ ರಾತ್ರಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಭೂ ವಿವಾದದ ಹಿನ್ನೆಲೆ ಇಬ್ಬರು ಆರೋಪಿಗಳು ಚಾಕುವಿನಿಂದ ಇರಿದಿದ್ದಾರೆ. ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶಮಿಗೆ 5 ವಿಕೆಟ್‌; ಬಾಂಗ್ಲಾ ಆಲೌಟ್‌ – ಟೀಂ ಇಂಡಿಯಾಗೆ 229 ರನ್‌ಗಳ ಗುರಿ

    ಮೇಡಿಗಡ್ಡ ಬ್ಯಾರೇಜ್‌ನ ಕೆಲವು ಕಂಬಗಳು ಮುಳುಗಿದ ನಂತರ ಕೆಸಿಆರ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ರಾಜಲಿಂಗಮೂರ್ತಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಇ.ಡಿ ವಿಚಾರಣೆಯಿಂದ ಸಿಎಂ ಪತ್ನಿಗೆ ರಿಲೀಫ್‌ – ಪಾರ್ವತಿ, ಸಚಿವ ಬೈರತಿಗೆ ಮಧ್ಯಂತರ ರಕ್ಷಣೆ ಮುಂದುವರಿಕೆ

    ಕೆಸಿಆರ್, ಅವರ ಸೋದರಳಿಯ ಮತ್ತು ಮಾಜಿ ಸಚಿವ ಟಿ.ಹರೀಶ್ ರಾವ್ ತಮ್ಮ ವಿರುದ್ಧದ ಅರ್ಜಿ ವಜಾಗೊಳಿಸಲು ತೆಲಂಗಾಣ ಹೈಕೋರ್ಟ್ ಮೊರೆ ಹೋಗಿದ್ದರು. ಇದನ್ನೂ ಓದಿ: ಚಿಕನ್ ಖರೀದಿಗೆ ಬಂದಿದ್ದ ದೈತ್ಯ ವಿದೇಶಿ ಪ್ರಜೆ ಕೊಲೆ – ಅನುಮಾನಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ!

  • ಮರ್ಯಾದಾ ಹತ್ಯೆ – ತಹಶೀಲ್ದಾರ್ ಕಚೇರಿಯಲ್ಲೇ ಚಾಕುವಿನಿಂದ ಇರಿದು ವ್ಯಕ್ತಿ ಬರ್ಬರ ಕೊಲೆ

    ಮರ್ಯಾದಾ ಹತ್ಯೆ – ತಹಶೀಲ್ದಾರ್ ಕಚೇರಿಯಲ್ಲೇ ಚಾಕುವಿನಿಂದ ಇರಿದು ವ್ಯಕ್ತಿ ಬರ್ಬರ ಕೊಲೆ

    ಹೈದರಾಬಾದ್: ಮರ್ಯಾದಾ ಹತ್ಯೆ ಘಟನೆಯೊಂದು ಹೈದರಾಬಾದ್‍ನ ಸರೂರ್‌ನಗರ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ. ಬೈಕ್‍ನಲ್ಲಿ ಬಂದ ದುಷ್ಕರ್ಮಿಯೋರ್ವ ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ.

    ಮೃತದುರ್ದೈವಿಯನ್ನು ನಾಗರಾಜ್(25) ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಸರೂರನಗರ ತಹಸೀಲ್ದಾರ್ ಕಚೇರಿಗೆ ಬೈಕ್‍ನಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ನಾಗರಾಜ್‍ನನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ. ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಘಟನೆಯ ದೃಶ್ಯವನ್ನು ಅನೇಕ ದಾರಿಹೋಕರು ತಮ್ಮ ಫೋನ್‍ಗಳಲ್ಲಿ ಸೆರೆಹಿಡಿದಿದ್ದಾರೆ. ಇದೀಗ ಕುಟುಂಬಸ್ಥರು ನಾಗರಾಜ್ ಕೊಲೆಯ ಹಿಂದೆ ಪತ್ನಿಯ ಮನೆಯವರ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕ್ಷುಲ್ಲಕ ವಿಚಾರಕ್ಕೆ ಪತ್ನಿಯ ಕತ್ತು ಹಿಸುಕಿ ಕೊಲೆ?

    CRIME 2

    ಎರಡು ತಿಂಗಳ ಹಿಂದೆ ಜನವರಿ 31 ರಂದು ನಾಗರಾಜ್ 23 ವರ್ಷದ ಸೈಯದ್ ಅಶ್ರಿನ್ ಸುಲ್ತಾನಾ(ಪಲ್ಲವಿ) ಅವರನ್ನು ವಿವಾಹವಾಗಿದ್ದರು. ಕಾಲೇಜು ದಿನಗಳಿಂದಲೂ ನಾಗರಾಜ್ ಹಾಗೂ ಪಲ್ಲವಿ ಇಬ್ಬರೂ ಪ್ರೀತಿಸುತ್ತಿದ್ದರು. ಹೀಗಾಗಿ ಎರಡು ತಿಂಗಳ ಹಿಂದೆ ಹಳೆನಗರದ ಆರ್ಯ ಸಮಾಜ ಮಂದಿರದಲ್ಲಿ ಮದುವೆಯಾಗಿದ್ದರು. ಇಬ್ಬರು ಬೇರೆ, ಬೇರೆ ಧರ್ಮದವರಾಗಿದ್ದರಿಂದ ಪಲ್ಲವಿ ಮನೆಯವರು ನಾಗರಾಜ್‍ನನ್ನು ಕೊಂದಿದ್ದಾರೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ.

    POLICE JEEP

    ಬಿಲ್ಲಾಪುರಂ ನಾಗರಾಜು ಸಿಕಂದರಾಬಾದ್‍ನ ಮರ್ರೆಡ್‍ಪಲ್ಲಿ ನಿವಾಸಿಯಾಗಿದ್ದು, ಓಲ್ಡ್ ಸಿಟಿಯ ಮಲಕ್‍ಪೇಟ್‍ನಲ್ಲಿರುವ ಜನಪ್ರಿಯ ಕಾರ್ ಶೋ ರೂಂನಲ್ಲಿ ಸೇಲ್ಸ್‍ಮ್ಯಾನ್ ಕಾರ್ಯನಿರ್ವಹಿಸುತ್ತಿದ್ದರು. ಈ ಘಟನೆಯ ಬಳಿಕ ಮೃತನ ಕುಟುಂಬಸ್ಥರಿಗೆ ನ್ಯಾಯ ಒದಗಿಸಿಕೊಡುವಂತೆ ಮತ್ತು ಆರೋಪಿಗಳನ್ನು ಬಂಧಿಸುವಂತೆ ಬಿಜೆಪಿ ಪ್ರತಿಭಟನೆ ನಡೆಸುವ ಮೂಲಕ ಒತ್ತಾಯಿಸುತ್ತಿದೆ. ಇದನ್ನೂ ಓದಿ: ಈ ಬಾರಿಯಾದ್ರೂ ಸಿಐಡಿ ವಿಚಾರಣೆಗೆ ಹಾಜರಾಗ್ತಾರಾ ಪ್ರಿಯಾಂಕ್ ಖರ್ಗೆ?

    ಇದೀಗ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಲ್ಲದೇ ಇವರಿಬ್ಬರ ಪ್ರೇಮ ವಿವಾಹವೇ ಹತ್ಯೆಗೆ ಕಾರಣ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿರುವುದಾಗಿ ಸಹಾಯಕ ಪೊಲೀಸ್ ಆಯುಕ್ತ ಶ್ರೀಧರ್ ರೆಡ್ಡಿ ತಿಳಿಸಿದ್ದಾರೆ.

  • ಆರ್ಥಿಕ ಸಮಸ್ಯೆ – ಇಬ್ಬರು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ಮಹಿಳಾ ಟೆಕ್ಕಿ

    ಆರ್ಥಿಕ ಸಮಸ್ಯೆ – ಇಬ್ಬರು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ಮಹಿಳಾ ಟೆಕ್ಕಿ

    ಹೈದರಾಬಾದ್: ಆರ್ಥಿಕ ಸಮಸ್ಯೆಯಿಂದಾಗಿ ಮಹಿಳೆಯೊಬ್ಬರು ಇಬ್ಬರು ಮಕ್ಕಳನ್ನು ಕೊಂದು ತಾವು ನೇಣು ಬೀಗಿದುಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

    ಸ್ವಾತಿ ಕುಸುಮಾ (32) ಮೃತ ಮಹಿಳೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಸ್ವಾತಿ ಕುಸುಮಾ ಹಾಗೂ ಅವರ ಪತಿ ಸಾಯಿಕುಮಾರ್ ಉದ್ಯೋಗವನ್ನು ಕಳೆದುಕೊಂಡಿದ್ದರು. ಇದರಿಂದಾಗಿ ಹಣದ ಸಮಸ್ಯೆ ಉಂಟಾಗಿತ್ತು.

    ಆಕೆಯ ಪತಿ ಆರ್ಥಿಕ ಸಮಸ್ಯೆಯಿಂದಾಗಿ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಆದರೂ ತನ್ನ ಪತಿ ಕುಟುಂಬವನ್ನು ಪೋಷಿಸಲು ಸಾಕಾಗುವಷ್ಟು ದುಡಿಯುತ್ತಿಲ್ಲ ಎಂದು ಬೇಸರದಿಂದ ಮನನೊಂದಿದ್ದರು. ಇದನ್ನೂ ಓದಿ:  ತೊಟ್ಟಿಲಲ್ಲಿ ಮಲಗಿದ್ದ ತಂಗಿಗೆ ಬಿಸಿಯಾದ ಫೋರ್ಕ್‍ನಿಂದ ಬರೆ ಹಾಕಿದ ಅಕ್ಕ

    POLICE JEEP

    ಸ್ವಾತಿ ಅವರಿಗೆ ಅನೈತಿಕ ಸಂಬಂಧವಿದೆ ಎಂದು ಅನುಮಾನಿಸಿ ದಂಪತಿ ಆಗಾಗೆ ಜಗಳವಾಡುತ್ತಿದ್ದರು. ಈ ಜಗಳ ಅತಿಯಾಗಿ ಸಾಯಿಕುಮಾರ್ ಮನೆ ಬಿಟ್ಟು ಹೋಗಿದ್ದರು. ಇದರಿಂದಾಗಿ ಮನನೊಂದ ಸ್ವಾತಿ ಮಲಗುವ ಕೋಣೆಯ ಗೋಡೆಯ ಮೇಲೆ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ಆಮ್ಲೆಟ್ ಸೀದು ಹೋಗಿದೆ ಎಂದಿದ್ದಕೆ ಬಿಸಿ ಬಾಣಲೆಯಿಂದ ಹೊಡೆದ ಹೋಟೆಲ್ ಮಾಲೀಕ

    ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ವಾತಿ ಕುಸುಮಾ ಅವರ ಪತಿ ಸಾಯಿಕುಮಾರ್ ಅವರನ್ನು ವಶಕ್ಕೆ ಪಡೆದಿದ್ದಾರೆ.

  • ರಾಹುಲ್ ಭೇಟಿಗೆ ಬ್ರೇಕ್ ಹಾಕಿದ ಓಸ್ಮಾನಿಯ ವಿಶ್ವವಿದ್ಯಾಲಯ

    ರಾಹುಲ್ ಭೇಟಿಗೆ ಬ್ರೇಕ್ ಹಾಕಿದ ಓಸ್ಮಾನಿಯ ವಿಶ್ವವಿದ್ಯಾಲಯ

    ಹೈದ್ರಾಬಾದ್: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಓಸ್ಮಾನಿಯ ವಿಶ್ವವಿದ್ಯಾಲಯದ ಭೇಟಿಗೆ ವಿದ್ಯಾರ್ಥಿ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗಿದ್ದ ಬೆನ್ನಲ್ಲೆ, ಆಡಳಿತ ಮಂಡಳಿ ಭೇಟಿಯನ್ನು ನಿರಾಕರಿಸಿದೆ.

    ಭದ್ರತೆ ಕೊರತೆಯ ಕಾರಣವನ್ನು ಮುಂದಿಟ್ಟು ಓಸ್ಮಾನಿಯಾ ವಿಶ್ವವಿದ್ಯಾಲಯ ಆಡಳಿತ ಮಂಡಳಿಯು, ರಾಹುಲ್ ಗಾಂಧಿ ಸಂವಾದ ಕಾರ್ಯಕ್ರಮದ ಅನುಮತಿಯನ್ನು ರದ್ದು ಮಾಡಿದೆ. ಆದರೆ ಇತ್ತ ರಾಹುಲ್ ಗಾಂಧಿ ಬೆಂಬಲಿತ ಸಂಘಟನೆಯು ಆಡಳಿತ ಮಂಡಳಿ ವಿರುದ್ಧ ಕಿಡಿಕಾರಿದೆ.

    ರಾಹುಲ್ ಗಾಂಧಿ ಆಗಸ್ಟ್ 13 ಮತ್ತು 14ರಂದು ತೆಲಂಗಾಣಕ್ಕೆ ಭೇಟಿ ನೀಡಿ, ಪ್ರತ್ಯೇಕ ರಾಜ್ಯ ಹೋರಾಟಗಾರರನ್ನು ಭೇಟಿ ಆಗಲಿದ್ದಾರೆ. ಇತ್ತ ಓಸ್ಮಾನಿಯಾ ವಿಶ್ವವಿದ್ಯಾಲಯದ ಶತಮಾನೋತ್ಸವ ಕಾರ್ಯಕ್ರಮವೂ ಇದೇ ಸಮಯದಲ್ಲಿ ನಡೆಯಲಿದೆ. ಹೀಗಾಗಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲು ರಾಹುಲ್ ಗಾಂಧಿ ಮುಂದಾಗಿದ್ದರು.

    ವಿಶ್ವವಿದ್ಯಾಲಯದ ಒಂದು ವಿದ್ಯಾರ್ಥಿ ಸಂಘಟನೆ ಮಾತ್ರ ರಾಹುಲ್ ಗಾಂಧಿ ಭೇಟಿಗೆ ಮನವಿ ಸಲ್ಲಿಸಿದೆ. ಆದರೆ ಉಳಿದ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗಿದ್ದು, ಒಂದು ವೇಳೆ ರಾಹುಲ್ ಗಾಂಧಿ ಆಗಮನಕ್ಕೆ ಅವಕಾಶ ನೀಡಿದರೆ ಶತಮಾನೋತ್ಸವ ಕಾರ್ಯಕ್ರಮಕ್ಕೆ ಅಡ್ಡಿಯಾಗುವ ಎನ್ನುವ ಅಳಕು ಕಾಡುತ್ತಿದೆ. ಹೀಗಾಗಿ ಅನುಮತಿ ನಿರಾಕರಿಸಲಾಗಿದೆ ಎಂದು ಉಪಕುಲಪತಿ ಎಸ್.ರಾಮಚಂದ್ರಂ ತಿಳಿಸಿದ್ದಾರೆ.

    ಸ್ಥಳೀಯ ನಾಯಕರಿಗೆ ಭದ್ರತೆ ನೀಡಬಹುದು. ಆದರೆ ರಾಹುಲ್ ಗಾಂಧಿ ರಾಷ್ಟ್ರೀಯ ನಾಯಕ. ವಿದ್ಯಾರ್ಥಿಗಳಿಂದ ವಿರೋಧ ವ್ಯಕ್ತವಾಗಿದ್ದರಿಂದ ಅವರಿಗೆ ಭಾರೀ ಭದ್ರತೆ ನೀಡಬೇಕಾಗುತ್ತದೆ. ಯಾವುದೇ ಅನಾಹುತ ಸಂಭವಿಸಿದರೂ ಅದಕ್ಕೆ ನಾವೇ ಹೊಣೆ ಆಗಬೇಕಾಗುತ್ತದೆ. ಇಂತಹ ಸಮಸ್ಯೆಯನ್ನು ನಾವು ಎದುರಿಸಲು ಸಿದ್ಧರಿಲ್ಲ ಎಂದು ಅವರು ಹೇಳಿದರು.

    ಇತ್ತ ವಿಶ್ವವಿದ್ಯಾಲಯದ ಒಂದು ವಿದ್ಯಾರ್ಥಿ ಸಂಘಟನೆ ಆಡಳಿತ ಮಂಡಳಿ ನಿರ್ಧಾರವನ್ನು ಪ್ರಶ್ನಿಸಿ, ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ಇಂದು ಹೈಕೋರ್ಟ್ ಮೆಟ್ಟಿಲೇರಿ ರಾಹುಲ್ ಪ್ರವೇಶಕ್ಕೆ ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿ ಮನವಿ ಮಾಡಿದೆ.

  • ಮಿಸ್ ಇಂಡಿಯಾ ಕಿರೀಟ ತನ್ನದಾಗಿಸಿಕೊಂಡ ಕೋಲಾರದ ಬೆಡಗಿ

    ಮಿಸ್ ಇಂಡಿಯಾ ಕಿರೀಟ ತನ್ನದಾಗಿಸಿಕೊಂಡ ಕೋಲಾರದ ಬೆಡಗಿ

    ಕೋಲಾರ: ಹೈದರಾಬಾದ್ ನಲ್ಲಿ ನಡೆದ ಪ್ರತಿಷ್ಠಿತ ರಿಲಯನ್ಸ್ ಜ್ಯುವೆಲ್-2017 ನ ಮಿಸ್ ಇಂಡಿಯಾ ಕಿರೀಟವನ್ನ ಕೋಲಾರದ ರಮ್ಯಾ ಸರಣ್ ತನ್ನದಾಗಿಸಿಕೊಂಡಿದ್ದಾರೆ.

    ಈ ಸ್ಪರ್ಧೆಯಲ್ಲಿ ದೇಶ-ವಿದೇಶಗಳಿಂದ ಬಂದಿದ್ದ 80 ಮಂದಿ ಮಾಡೆಲ್‍ಗಳನ್ನು ಹಿಂದಿಕ್ಕಿ 5 ದಿನಗಳ ಕಾಲ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತಳಾಗುವ ಮೂಲಕ ಮಿಸ್ ಇಂಡಿಯಾ ಕಿರೀಟವನ್ನ ತನ್ನ ಮುಡಿಗೇರಿಸಿಕೊಂಡಿದ್ದಾರೆ.

    ಕೋಲಾರದ ವಿನಾಯಕನಗರದ ಮೃತ ಪೊಲೀಸ್ ಪೇದೆ ಆರ್.ಎ.ಸರಣ್ ಹಾಗೂ ಲಕ್ಷ್ಮೀ ದಂಪತಿಯ ಮೂವರು ಮಕ್ಕಳಲ್ಲಿ ರಮ್ಯಾ ಪ್ರಥಮ ಪುತ್ರಿ. ಕೋಲಾರದಲ್ಲಿ ಪಿಯುಸಿವರೆಗೆ ತನ್ನ ವಿದ್ಯಾಭ್ಯಾಸವನ್ನ ಪೂರೈಸಿ, ನಂತರ ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಆರ್ಕಿಟೆಕ್ಟರ್ ಎಂಜಿನಿಯರ್ ಮುಗಿಸಿದ್ದಾರೆ.

    ಕಳೆದ ಮಾರ್ಚ್‍ನಲ್ಲಿ `ಮಿಸ್ ಬೆಂಗಳೂರು’ ಆಗಿ ಕೂಡ ಆಯ್ಕೆಯಾಗಿದ್ರು. ಇದೀಗ ಕರ್ನಾಟಕಕದಿಂದ `ಮಿಸ್ ಇಂಡಿಯಾ’ ಸ್ಪರ್ಧೆಗೆ ಆಯ್ಕೆಯಾಗಿ `ಮಿಸ್ ಇಂಡಿಯಾ’ ಕಿರೀಟವನ್ನ ಮುಡಿಗೇರಿಸಿಕೊಂಡಿದ್ದಾರೆ. `ಮಿಸ್ ಇಂಡಿಯಾ’ ಆದ ಬಳಿಕ ಇದೆ ಮೊದಲ ಬಾರಿಗೆ ತವರಿಗೆ ಆಗಮಿಸಿದ್ದ ರಮ್ಯಾ, ಓದಿದ ಕೋಲಾರದ ಮಹಿಳಾ ಕಾಲೇಜಿಗೆ ಭೇಟಿ ನೀಡಿದ್ದರು. ಈ ವೇಳೆ ಕಾಲೇಜಿನಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಿದ್ರು.

  • 11ನೇ ವಯಸ್ಸಿಯಲ್ಲೇ 63% ಅಂಕಗಳೊಂದಿಗೆ 12ನೇ ತರಗತಿ ಪಾಸ್ ಮಾಡಿದ ಪೋರ

    11ನೇ ವಯಸ್ಸಿಯಲ್ಲೇ 63% ಅಂಕಗಳೊಂದಿಗೆ 12ನೇ ತರಗತಿ ಪಾಸ್ ಮಾಡಿದ ಪೋರ

    ಹೈದರಾಬಾದ್: ಸಾಧನೆಗೆ ವಯಸ್ಸಿನ ಹಂಗಿಲ್ಲ ಅನ್ನೋದಕ್ಕೆ ಹೈದರಬಾದ್ ನ ಈ ಬಾಲಕ ನೈಜ ಉದಾಹರಣೆ. ನಗರದ 11 ವರ್ಷದ ಪೋರನೊಬ್ಬ 12ನೇ ತರಗತಿ ಪರೀಕ್ಷೆ ಬರೆದು ಪಾಸಾಗಿದ್ದಾನೆ.

    ಅಗಸ್ತ್ಯ ಜೈಶ್ವಾಲ್ 12ನೇ ತರಗತಿ ಪರೀಕ್ಷೆ ಬರೆದ ಬಾಲಕನಾಗಿದ್ದಾನೆ. ಪರೀಕ್ಷೆಯಲ್ಲಿ ಈತ ಶೇ. 63ರಷ್ಟು ಅಂಕ ಪಡೆದು ಉತ್ತೀರ್ಣನಾಗಿದ್ದಾನೆ. ಈ ಮೂಲಕ ರಾಜ್ಯದಲ್ಲೇ ಅತ್ಯಂತ ಕಿರಿಯ ವಯಸ್ಸಿನಲ್ಲಿ 12ನೇ ತರಗತಿ ಪಾಸು ಮಾಡಿದ ಮೊದಲ ಬಾಲಕ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ ಅಂತಾ ಬಾಲಕನ ತಂದೆ ಅಶ್ವಾನಿ ಕುಮಾರ್ ಹೇಳಿದ್ದಾರೆ.

    ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ ಬರೆದ 11ರ ಪೋರ!

    ಅಗಸ್ತ್ಯ ತನ್ನ 9ನೇ ವಯಸ್ಸಿಗೆ 2015ರಲ್ಲಿ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದ ಹಾಗೂ 12ನೆ ತರಗತಿ ಪರೀಕ್ಷೆ ಬರೆಯಲು ತೆಲಂಗಾಣ ಎಸ್‍ಎಸ್‍ಸಿ ಬೋರ್ಡ್‍ನಿಂದ ಅನುಮತಿ ಪಡೆದಿದ್ದ.

    12ನೇ ತರಗತಿ ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿ ತನ್ನ ವಿಷಯ, ಬೋಧನೆಯ ಮಾಧ್ಯಮ ಹಾಗೂ ಎರಡನೇ ವಿಷಯದ ಬಗ್ಗೆ ಮಾಹಿತಿ ನೀಡಬೇಕು. ವಯಸ್ಸಿನ ಬಗ್ಗೆ ಮಾಹಿತಿ ಅಗತ್ಯವಿಲ್ಲ ಎಂದು ಮಧ್ಯಂತರ ಶಿಕ್ಷಣ ಮಂಡಳಿಯ ಅಧಿಕಾರಿಯೊಬ್ಬರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಇದನ್ನೂ ಓದಿ: 16 ವರ್ಷದ ಈಕೆ ಈಗ ಏಷ್ಯಾದಲ್ಲೇ ಅತ್ಯಂತ ಕಿರಿಯ ಸ್ನಾತಕೋತ್ತರ ಪದವೀಧರೆ

    ಅಗಸ್ತ್ಯ ಜೈಶ್ವಾಲ್, ಯೂಸುಫ್‍ಗಢದ ಸೆಂಟ್ ಮೇರಿಸ್ ಜೂನಿಯರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಮಾರ್ಚ್‍ನಲ್ಲಿ 12ನೇ ತರಗತಿ ಪರೀಕ್ಷೆ ಬರೆದಿದ್ದ. ಈ ಪರೀಕ್ಷೆಯ ಫಲಿತಾಂಶ ಭಾನುವಾರದಂದು ಪ್ರಕಟವಾಗಿದೆ. ಈತ ಹೈದರಾಬಾದ್‍ನಲ್ಲಿರೋ ಜುಬ್ಲಿ ಹಿಲ್ಸ್ ನ ಚೈತನ್ಯ ಜೂನಿಯರ್ ಕಲಾಶಾಲಾದಲ್ಲಿ ಪರೀಕ್ಷೆ ಬರೆದಿದ್ದನು. ಸಿವಿಕ್ಸ್, ಅರ್ಥಶಾಸ್ತ್ರ ಹಾಗೂ ವ್ಯವಹಾರ ಅಧ್ಯಯನ(ಕಾಮರ್ಸ್) ಈತನ ವಿಷಯಗಳಾಗಿತ್ತು.

    ಆದ್ರೆ ಈತನ ಕುಟುಂಬದಲ್ಲಿ ಕಡಿಮೆ ವಯಸ್ಸಿನಲ್ಲೇ ಸಾಧನೆ ಮಾಡಿದವರಲ್ಲಿ ಅಗಸ್ತ್ಯ ಮೊದಲಿಗನಲ್ಲ. ಈತನ ಸಹೋದರಿಯಾದ ಅಂತರಾಷ್ಟ್ರೀಯ ಟೇಬಲ್ ಟೆನ್ನಿಸ್ ಆಟಗಾರ್ತಿ ನೇಹಾ ಜೈಸ್ವಾಲ್ ಕೂಡ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಪಿಎಚ್‍ಡಿಗೆ ದಾಖಲಾತಿ ಪಡೆದವರಾಗಿದ್ದಾರೆ.

    ನೇಹಾ ಜೈಸ್ವಾಲ್ ತನ್ನ 15 ವಯಸ್ಸಿಗೆ ಒಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

  • ಕಟ್ಟಡ ನಿರ್ಮಾಣ ಸ್ಥಳದಲ್ಲಿ ಮಣ್ಣು ಕುಸಿತ- ಇಬ್ಬರು ಮಹಿಳೆಯರು ಜೀವಂತ ಸಮಾಧಿ

    ಕಟ್ಟಡ ನಿರ್ಮಾಣ ಸ್ಥಳದಲ್ಲಿ ಮಣ್ಣು ಕುಸಿತ- ಇಬ್ಬರು ಮಹಿಳೆಯರು ಜೀವಂತ ಸಮಾಧಿ

    ಹೈದ್ರಾಬಾದ್: ಕಟ್ಟಡ ನಿರ್ಮಾಣ ಸ್ಥಳದಲ್ಲಿ ಮಣ್ಣು ಕುಸಿದು, ಮಣ್ಣಿನಡಿ ಸಿಲುಕಿ ಇಬ್ಬರು ಮಹಿಳೆಯರು ಜೀವಂತ ಸಮಾಧಿಯಾದ ಘಟನೆ ಸೋಮವಾರ ಹೈದ್ರಾಬಾದ್‍ನ ಕೊಂಡಪುರ ಪ್ರದೇಶದಲ್ಲಿ ನಡೆದಿದೆ.

    ಸೆಲ್ಲರ್ ನಿರ್ಮಿಸುವ ಸಲುವಾಗಿ ಕಾರ್ಮಿಕರು ಸುಮಾರು 40 ಅಡಿ ಆಳದ ಗುಂಡಿ ತೆಗೆಯುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕಟ್ಟಡ ನಿರ್ಮಾಣಕ್ಕೆ ಹಾಕಲಾಗಿದ್ದ ರಾಡ್‍ಗಳ ಭಾರಕ್ಕೆ ಮಣ್ಣು ಕುಸಿದಿದ್ದು ಮಹಿಳೆಯರು ಸಾವನ್ನಪ್ಪಿದ್ದಾರೆ.

    ಮೃತ ಮಹಿಳೆಯರನ್ನು ಭರತಮ್ಮ ಹಾಗೂ ಕಿಸ್ತಮ್ಮ ಎಂದು ಗುರುತಿಸಲಾಗಿದ್ದು, 2 ಗಂಟೆಗಳ ಕಾರ್ಯಾಚರಣೆ ಬಳಿಕ ಅವರ ಮೃತದೇಹವನ್ನು ಹೊರತೆಗೆಯಲಾಗಿದೆ. ಘಟನೆಯಲ್ಲಿ ಮೃತ ಮಹಿಳೆಯರ ಗಂಡಂದಿರಾದ ಬಲರಾಜು ಹಾಗೂ ಪಾಪಯ್ಯ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಟ್ಟಡ ನಿರ್ಮಾಣ ಸ್ಥಳದಲ್ಲಿ ಮಣ್ಣಿನ ಪರೀಕ್ಷೆ ಮಾಡಿಸಿರಲಿಲ್ಲ ಹಾಗೂ ಸುರಕ್ಷಾ ಕ್ರಮಗಳನ್ನ ಕೈಗೊಂಡಿರಲಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ಆರೋಪದಡಿ ಸೈಟ್ ಎಂಜಿನಿಯರ್ ಹಾಗೂ ಗುತ್ತಿಗೆದಾರರ ಮೇಲೆ ಪ್ರಕರಣ ದಾಖಲಾಗಿದೆ.

  • ಸಿಲ್ಲಿ ಕಾರಣಕ್ಕೆ 3 ವರ್ಷದ ಮಗಳನ್ನ ಕೊಂದೇ ಬಿಟ್ಟ!

    ಸಿಲ್ಲಿ ಕಾರಣಕ್ಕೆ 3 ವರ್ಷದ ಮಗಳನ್ನ ಕೊಂದೇ ಬಿಟ್ಟ!

    ಹೈದರಾಬಾದ್: ಕುಡುಕ ತಂದೆಯೋರ್ವ ಮೂರು ವರ್ಷದ ಹೆಣ್ಣು ಮಗುವನ್ನು ಥಳಿಸಿ, ಆಕೆಯ ತಲೆಯನ್ನು ಗೋಡೆಗೆ ಒತ್ತಿ ಕೊಲೆ ಮಾಡಿರೋ ಘಟನೆ ಹೈದ್ರಾಬಾದ್‍ನಲ್ಲಿ ನಡೆದಿದೆ.

    ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡೋ ಸುರೇಶ್ ಎಂಬಾತ ಈ ಕೃತ್ಯವೆಸಗಿದ್ದಾನೆ. ಸುರೇಶ್ ತನ್ನ ಪತ್ನಿ ಜ್ಯೋತಿಯೊಂದಿಗೆ ಜಗಳವಾಡಿದ್ದು, ಬಳಿಕ 3 ವರ್ಷದ ಮಗಳು ಕೀರ್ತಿಯನ್ನ ಕರದಿದ್ದಾನೆ. ಆದ್ರೆ ಕರೆದಾಗ ಮಗಳು ಹತ್ತಿರ ಬರಲಿಲ್ಲ ಎಂಬ ಕೋಪಕ್ಕೆ ಮಗುವನ್ನು ಹೊಡೆದು, ಗೋಡೆಗೆ ತಲೆಯನ್ನ ಹಿಡಿದು ಒತ್ತಿದ್ದಾನೆ. ಈ ವೇಳೆ ಮಗುವಿನ ಮೂಗಿನಿಂದ ರಕ್ತಸ್ರಾವವಾಗಿದ್ದು, ಜ್ಞಾನ ತಪ್ಪಿದೆ. ಬಳಿಕ ಸುರೇಶ್ ಮಗುವನ್ನು ಹತ್ತಿರದ ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಮಗು ಆಗಲೇ ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕೀರ್ತಿ ಮೊದಲೇ ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ದೇಹದಲ್ಲಿ ಶಕ್ತಿ ಇರಲಿಲ್ಲ. ಹೀಗಾಗಿ ಗೋಡೆಗೆ ಒತ್ತಿ ಹಿಡಿದಿದ್ದರಿಂದ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿರೋದಾಗಿ ಇಲ್ಲಿನ ಪೊಲೀಸ್ ಅಧಿಕಾರಿ ಎಸ್ ವೆಂಕಟ್ ರೆಡ್ಡಿ ಹೇಳಿದ್ದಾರೆ.

    ಮಗು ಸಾವನ್ನಪ್ಪಿರುವುದು ತಿಳಿದ ಬಳಿಕ ತಪ್ಪಿಸಿಕೊಳ್ಳಲು ಯತ್ನಿಸಿದ ಸುರೇಶ್‍ನನ್ನು ಪೊಲೀಸರು ಬಂಧಿಸಿದ್ದಾರೆ.

    ಮೂರು ವರ್ಷದ ಕೀರ್ತಿ ತಂದೆ ಸುರೇಶ್ ಜೊತೆ ಅಷ್ಟೊಂದು ಅನ್ಯೋನ್ಯವಾಗಿರಲಿಲ್ಲ. ಇದರಿಂದ ಸುರೇಶ್‍ಗೆ ಕೋಪ ಬರುತ್ತಿತ್ತು. ಈ ಮಗು ನನ್ನದಲ್ಲ ಅಂತಾ ಪತ್ನಿ ಜೊತೆ ಜಗಳವಾಡುತ್ತಿದ್ದ ಎಂದು ಹೇಳಲಾಗಿದೆ. ಮೂರು ವರ್ಷಗಳ ಹಿಂದೆ ಸುರೇಶ್ ಜ್ಯೋತಿಯನ್ನು ಪ್ರೀತಿಸಿ ಮದುವೆಯಾಗಿದ್ದು, ಮದುವೆಗೆ ಮುಂಚೆಯೇ ಇವರಿಗೆ ಮಗುವಾಗಿತ್ತು ಎಂದು ವರದಿಯಾಗಿದೆ.

  • ದ್ವಿತೀಯ ಪಿಯುಸಿ ಪರೀಕ್ಷೆ ಬರೆದ 11ರ ಪೋರ!

    ದ್ವಿತೀಯ ಪಿಯುಸಿ ಪರೀಕ್ಷೆ ಬರೆದ 11ರ ಪೋರ!

    ಹೈದರಾಬಾದ್: ಸಾಧನೆಗೆ ವಯಸ್ಸಿನ ಮಿತಿ ಇಲ್ಲ ಅನ್ನೊದನ್ನು ಪ್ರೂವ್ ಮಾಡಿದ್ದಾನೆ ಹೈದರಾಬಾದಿನ ಈ ಪೋರ. 11 ವರ್ಷದ ಅಗಸ್ತ್ಯ ಜಸ್ವಾಲ್ 12ನೇ ತರಗತಿಯ ಪರೀಕ್ಷೆ ಬರೆಯುವ ಮೂಲಕ ಅಚ್ಚರಿಗೆ ಕಾರಣನಾಗಿದ್ದಾನೆ. ಆದ್ರೆ ಈತನ ಕುಟುಂಬದಲ್ಲಿ ಇಂತಹ ಅಚ್ಚರಿ ಘಟನೆಗಳು ಇದು ಮೊದಲೇನಲ್ಲ.

    ಸಾಧಕ ಸಾಹಸಿ ಈ ಅಗಸ್ತ್ಯ ಸೆಂಟ್ ಮೇರಿಸ್ ಜೂನಿಯರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಪೌರನೀತಿ, ಅರ್ಥಶಾಸ್ತ್ರ ಮತ್ತು ವಾಣಿಜ್ಯಶಾಸ್ತ್ರ ವಿಷಯಗಳನ್ನು ಪರೀಕ್ಷೆಗಾಗಿ ಆಯ್ಕೆ ಮಾಡಿಕೊಂಡಿದ್ದ ಅವನ ಪೋಷಕರು ಹೇಳಿದ್ದಾರೆ.

    ಅಗಸ್ತ್ಯ ಇವತ್ತು ಹೈದರಾಬಾದಿನ ಚೈತನ್ಯ ಜುನಿಯರ್ ಕಲಾಶಾಲಾ ಜಿಬ್ಲಿ ಹಿಲರ್ ಎನ್ನುವ ಕಾಲೇಜಿನಲ್ಲಿ 12ನೇ ತರಗತಿ ಪರಿಕ್ಷೆಯನ್ನು ಬರೆದಿದ್ದಾನೆ.

    ಅಗಸ್ತ್ಯನ ಹಿರಿಯ ಅಣ್ಣ ನೈನಾ ಜೈಸ್ವಾಲ್ ಅಂತಾರಾಷ್ಟ್ರೀಯ ಟೇಬಲ್ ಟೆನ್ನಿಸ್ ಆಟಗಾರನಾಗಿದ್ದು, ಅತ್ಯಂತ ಕಿರಿಯ ವಯಸ್ಸಿನಲ್ಲೇ ಪಿಹೆಚ್‍ಡಿ ಪದವಿಯನ್ನು ಪಡೆದಿದ್ದ. ತಂದೆ ಜಸ್ವಾಲ್ ಕೂಡಾ 15 ವರ್ಷ ವಯಸ್ಸಿನಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಎಂಬುವುದಾಗಿ ವರದಿಯಾಗಿದೆ.

  • ಹುಂಡಿಯಲ್ಲಿ ಸಿಕ್ಕಿದ್ದು 4 ಕೋಟಿ ರೂ. ನಿಷೇಧಿತ ನೋಟುಗಳು: ತಿರುಪತಿ ತಿಮ್ಮಪ್ಪನಿಗೆ ಮತ್ತೆ ಸಂಕಷ್ಟ!

    ಹುಂಡಿಯಲ್ಲಿ ಸಿಕ್ಕಿದ್ದು 4 ಕೋಟಿ ರೂ. ನಿಷೇಧಿತ ನೋಟುಗಳು: ತಿರುಪತಿ ತಿಮ್ಮಪ್ಪನಿಗೆ ಮತ್ತೆ ಸಂಕಷ್ಟ!

    ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 500 ಹಾಗೂ 1 ಸಾವಿರ ಮುಖಬೆಲೆಯ ನೋಟ್‍ಗಳು ಬ್ಯಾನ್ ಮಾಡಿದ ಬಳಿಕ ತಿರುಪತಿ ತಿಮ್ಮಪ್ಪನಿಗೆ ಒಂದಲ್ಲ ಒಂದು ಸಂಕಷ್ಟ ಎದುರಾಗ್ತಾನೆ ಇದೆ.

    ಇತ್ತೀಚೆಗಷ್ಟೇ ದಿನಕ್ಕೆ 5 ಕೋಟಿಯಷ್ಟಿದ್ದ ಆದಾಯ 3ಕೋಟಿಗೆ ಇಳಿದಿತ್ತು. ಈಗ ಹಳೇ ನೋಟು ಸಂಪೂರ್ಣ ನಿಷೇಧವಾದ್ರೂ, ಕಳೆದ 2 ತಿಂಗಳಲ್ಲಿ 4 ಕೋಟಿಯಷ್ಟು 500 ಹಾಗೂ 1 ಸಾವಿರ ರೂಪಾಯಿ ನೋಟುಗಳು ತಿಮ್ಮಪ್ಪನಿಗೆ ಸಲ್ಲಿಕೆಯಾಗಿದೆ. ಇದಕ್ಕೆ ತಿರುಪತಿಯ ಆಡಳಿತ ಮಂಡಳಿ ಕಂಗಾಲಾಗಿದ್ದು, ಕಾನೂನು ಕ್ರಮದ ಭೀತಿ ಎದುರಿಸುತ್ತಿದ್ದಾರೆ.

    ಆರ್‍ಬಿಐ ನಿಯಮದ ಪ್ರಕಾರ 10 ನೋಟಿಗಳಿಗಿಂತ ಹೆಚ್ಚು ಹಳೆಯ ನೋಟುಗಳಿದ್ರೆ ಅದು ಕಾನೂನು ರೀತಿಯಲ್ಲಿ ಅಪರಾಧ. ಅಂಥದ್ರಲ್ಲಿ 4 ಕೋಟಿಯಷ್ಟು ಹಳೆಯ ನೋಟುಗಳು ತಿರುಮಲ ಹುಂಡಿಯಲ್ಲಿ ಸಿಕ್ಕಿದೆ. ಈ ಸಮಸ್ಯೆ ಬಗ್ಗೆ ಟಿಟಿಡಿ ಆಡಳಿತ ಮಂಡಳಿ ಈಗಾಗ್ಲೆ ಆರ್‍ಬಿಐ ಹಾಗೂ ಸರ್ಕಾರಕ್ಕೆ ಪತ್ರ ಬರೆದಿದ್ದು ಕಾನೂನು ಕ್ರಮದ ವಿನಾಯಿತಿಗೆ ಮನವಿ ಮಾಡಿದೆ. ಆದ್ರೆ ಆರ್‍ಬಿಐ ಕಡೆಯಿಂದ ಇನ್ನೂ ಯಾವುದೇ ಉತ್ತರ ಬಂದಿಲ್ಲ. ಹೀಗಾಗಿ ತಿರುಮಲ ತಿಮ್ಮಪ್ಪ ಇಕ್ಕಟ್ಟಿಗೆ ಸಿಲುಕಿದ್ದು, ಕಾನೂನು ಕ್ರಮದ ಭೀತಿ ಎದುರಿಸುವಂತಾಗಿದೆ. ಅಧಿಕಾರಿಗಳು ಕೇಸ್ ಹಾಕಿದ್ರೆ ಯಾರ ಮೇಲೆ ಹಾಕಬೇಕು ತಿರುಪತಿ ತಿಮ್ಮಪ್ಪನ ಮೇಲೆ ಹಾಕುತ್ತಾರಾ ಅನ್ನೋ ಕುತೂಹಲ ಕೂಡ ಮೂಡಿದೆ.