Tag: Hyderabad

  • ‘ಕಾಮಸೂತ್ರ 3D’ ಸಿನಿಮಾದ ನಟಿ ನಿಧನ

    ‘ಕಾಮಸೂತ್ರ 3D’ ಸಿನಿಮಾದ ನಟಿ ನಿಧನ

    ಹೈದರಾಬಾದ್: ಬಾಲಿವುಡ್‍ನ ‘ಕಾಮಸೂತ್ರ 3D’ ಸಿನಿಮಾದಲ್ಲಿ ಅಭಿನಯಿಸಿದ್ದ ನಟಿ ಸೈರಾ ಖಾನ್ ವಿಧಿವಶರಾಗಿದ್ದಾರೆ.

    ನಟಿ ಸೈರಾ ಖಾನ್ ಅವರು ಕೆಲವು ದಿನಗಳಿಂದ ಹೃದಯ ಕಾಯಿಲೆಯಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

    ಸೈರಾ ನಿಧನದ ಸುದ್ದಿ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಆಘಾತ ಉಂಟು ಮಾಡಿದ್ದು, ಈ ವಿಚಾರವನ್ನು ನಿರ್ದೇಶಕ ರೂಪೇಶ್ ಪೌಲ್ ತಿಳಿಸಿದ್ದಾರೆ. ‘ಕಾಮಸೂತ್ರ 3D’ ಸಿನಿಮಾ 2013ರಲ್ಲಿ ಬಾಲಿವುಡ್‍ನಲ್ಲಿ ಬಿಡುಗಡೆಯಾಗಿತ್ತು.

    ‘ಕಾಮಸೂತ್ರ 3D’ ಈ ಸಿನಿಮಾಗೆ ಮೊದಲು ಶರ್ಲಿನ್ ಚೋಪ್ರಾ ಆಯ್ಕೆಯಾಗಿದ್ದರು. ಆದರೆ ಕಾರಣಾಂತರದಿಂದ ಅವರು ಈ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಿಲ್ಲ. ಹೀಗಾಗಿ ಆ ಅವಕಾಶವನ್ನು ಸೈರಾ ಖಾನ್ ಪಡೆದಿದ್ದರು ಎಂದು ತಿಳಿದು ಬಂದಿದೆ.

    ಸೈರಾ ಖಾನ್ ಮುಸ್ಲಿಂ ಕುಟುಂಬದದಿಂದ ಬಂದವರಾಗಿದ್ದಾರೆ. ಹೀಗಾಗಿ ಈ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಸಲು ಚಿತ್ರತಂಡ ಬಹಳ ಕಷ್ಟಪಟ್ಟಿತ್ತು. ಕೊನೆಗೂ ಈ ಸಿನಿಮಾದಲ್ಲಿ ನಟಿಸಲು ಸೈರಾ ಒಪ್ಪಿಕೊಂಡಿದ್ದು, ಪಾತ್ರಕ್ಕೆ ತಕ್ಕ ಹಾಗೆ ನಟಿಸಿದ್ದರು ಎಂದು ರೂಪೇಶ್ ಪೌಲ್ ಹೇಳಿದ್ದಾರೆ. ಈ ಸಿನಿಮಾದ ಮೂಲಕವೇ ಸೈರಾ ಖಾನ್ ಅವರು ಬಾಲಿವುಡ್ ಚಿತ್ರರಂಗಕ್ಕೆ ಪ್ರವೇಶ ಪಡೆದಿದ್ದರು.

  • ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ಕರಾವಳಿ ಸುಂದರಿಯರು!

    ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ಕರಾವಳಿ ಸುಂದರಿಯರು!

    ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಮತ್ತು ಬಾಲಿವುಡ್ ಬ್ಯೂಟಿ ಐಶ್ವರ್ಯ ರೈ ಬಚ್ಚನ್ ಇಬ್ಬರು ಇದೇ ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

    ಐಶ್ವರ್ಯ ಮತ್ತು ಅನುಷ್ಕಾ ಇಬ್ಬರು ಕರ್ನಾಟಕದ ಕರಾವಳಿ ಭಾಗದವರು ಆಗಿದ್ದಾರೆ. ಇವರಿಬ್ಬರು ಇದುವರೆಗೂ ಯಾವ ಸಿನಿಮಾದಲ್ಲೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಆದ್ರೆ ಇದೀಗ ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ‘ಪೊನ್ನಿಯನ್ ಸೆಲ್ವಾನ್’ ಸಿನಿಮಾದಲ್ಲಿ ಐಶ್ವರ್ಯ ಮತ್ತು ಅನುಷ್ಕಾ ಶೆಟ್ಟಿ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಮಣಿರತ್ನಂ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಪೊನ್ನಿಯನ್ ಸೆಲ್ವಾನ್’ ಸಿನಿಮಾದಲ್ಲಿ ಈಗಾಗಲೇ ಐಶ್ವರ್ಯ ರೈ ಅಭಿನಯಿಸುತ್ತಿರುವುದು ಪಕ್ಕವಾಗಿದೆ.

    ಈ ಸಿನಿಮಾದಲ್ಲಿ ಮೊದಲು ಅನುಷ್ಕಾ ಶೆಟ್ಟಿ ಅಭಿನಯಿಸಬೇಕಾಗಿದ್ದ ಪಾತ್ರಕ್ಕೆ ನಟಿ ನಯನತಾರಾ ಆಯ್ಕೆಯಾಗಿದ್ದರು. ಆದರೆ ಅವರು ಕಾರಣಾಂತರಗಳಿಂದ ಈ ಸಿನಿಮಾದಿಂದ ಹೊರ ಹೋಗಿದ್ದಾರೆ. ಹೀಗಾಗಿ ಆ ಪಾತ್ರಕ್ಕೆ ಅನುಷ್ಕಾ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ಸದ್ಯಕ್ಕೆ ಅನುಷ್ಕಾ ‘ಸೈಲೆನ್ಸ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆ ಸಿನಿಮಾ ಮುಗಿದ ಬಳಿಕ ‘ಪೊನ್ನಿಯನ್ ಸೆಲ್ವಾನ್’ ಚಿತ್ರತಂಡ ಸೇರಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

    ಈ ಸಿನಿಮಾದಲ್ಲಿ ಐಶ್ಚರ್ಯ ಅವರು ವಿಲನ್ ಪಾತ್ರದಲ್ಲಿ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಅವರು ಚಿತ್ರದಲ್ಲಿ ನೆಗೆಟಿವ್ ಪಾತ್ರ ಮಾಡಿದರೆ ಮೊದಲ ಬಾರಿಗೆ ಪ್ರೇಕ್ಷಕರ ಮುಂದೆ ಖಳನಟಿಯಾಗಿ ಬರಲಿದ್ದಾರೆ. ‘ಪೊನ್ನಿಯನ್ ಸೆಲ್ವಾನ್’ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ಐಶ್ವರ್ಯ ರೈ, ಚಿಯಾನ್ ವಿಕ್ರಮ್, ಕೀರ್ತಿ ಸುರೇಶ್, ಕಾರ್ತಿಕ್, ಅಮಿತಾಬ್ ಬಚ್ಚನ್ ಮತ್ತು ಅನುಷ್ಕಾ ಕಾಣಿಸಿಕೊಳ್ಳುತ್ತಿದ್ದಾರೆ.

  • ಬಟ್ಟೆ ಬಿಚ್ಚುವಂತೆ ಹೇಳಿದ್ದ ಶಿಕ್ಷಕನ ವಿರುದ್ಧ ಯುವತಿ ದೂರು

    ಬಟ್ಟೆ ಬಿಚ್ಚುವಂತೆ ಹೇಳಿದ್ದ ಶಿಕ್ಷಕನ ವಿರುದ್ಧ ಯುವತಿ ದೂರು

    ಹೈದರಾಬಾದ್: ಡ್ಯಾನ್ಸ್ ಶಿಕ್ಷಕನೊಬ್ಬ 21 ವರ್ಷದ ಯುವತಿಯನ್ನು ಬಟ್ಟೆ ಬಿಚ್ಚುವಂತೆ ಹೇಳಿದ್ದು, ಇದೀಗ ಆತನ ವಿರುದ್ಧ ಯುವತಿ ಪೊಲೀಸರಿಗೆ ದೂರು ಸಲ್ಲಿಸಿದ್ದಾಳೆ.

    ಯುವತಿ ತೆಲಂಗಾಣದ ನಾರಾಯಂಗುಡಾ ಪೊಲೀಸ್ ಠಾಣೆಯಲ್ಲಿ ಬುಧವಾರ ನೃತ್ಯ ಶಿಕ್ಷಕನ ವಿರುದ್ಧ ದೂರು ದಾಖಲಿಸಿದ್ದಾಳೆ. ಆರೋಪಿ ಡಾನ್ಸ್ ಅಕಾಡೆಮಿ ಶಿಕ್ಷಕನಾಗಿದ್ದು, ವಿದ್ಯಾರ್ಥಿಗಳಿಗೆ ಬಟ್ಟೆಯನ್ನು ಬಿಚ್ಚುವಂತೆ ಹೇಳಿದ್ದನು ಎಂದು ಯುವತಿ ಆರೋಪಿಸಿದ್ದಾಳೆ.

    ದೂರಿನಲ್ಲಿ ಏನಿದೆ?
    ನಾಟಕ ಅಕಾಡೆಮಿ ಶಿಕ್ಷಕ ಎಲ್ಲಾ ವಿದ್ಯಾರ್ಥಿಗಳಿಗೆ ತರಗತಿಗಳು ಪ್ರಾರಂಭವಾಗುವ ಮುನ್ನ ತಮ್ಮ ಬಟ್ಟೆಯನ್ನು ಬಿಚ್ಚುವಂತೆ ಕೇಳಿದ್ದನು. ಆದರೆ ನಾನು ಶಿಕ್ಷಕನ ಮಾತನ್ನು ತಿರಸ್ಕರಿಸಿದೆ. ಹೀಗಾಗಿ ನನ್ನನ್ನು ತರಗತಿಯಿಂದ ಹೊರಗೆ ಹಾಕಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

    ಯುವತಿ ದೂರ ಸಲ್ಲಿಸಿದ ನಂತರ ಪೊಲೀಸರು ಆರೋಪಿಯ ವಿರುದ್ಧ ಸೆಕ್ಷನ್ 509 (ಮಹಿಳೆ ಅವಮಾನ ಮಾಡುವ ಉದ್ದೇಶ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

  • 50 ಯೂಟ್ಯೂಬ್ ಚಾನೆಲ್‍ನಲ್ಲಿ ನಟಿಯ ಅಶ್ಲೀಲ ವಿಡಿಯೋ ಅಪ್ಲೋಡ್

    50 ಯೂಟ್ಯೂಬ್ ಚಾನೆಲ್‍ನಲ್ಲಿ ನಟಿಯ ಅಶ್ಲೀಲ ವಿಡಿಯೋ ಅಪ್ಲೋಡ್

    ಹೈದರಾಬಾದ್: ತೆಲುಗು ನಟಿ ಪೂನಂ ಕೌರ್ ಅವರ ಅಶ್ಲೀಲ ವಿಡಿಯೋಗಳನ್ನು ಕಿಡಿಗೇಡಿಗಳು 50 ಯೂಟ್ಯೂಬ್ ಚಾನೆಲ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಬಗ್ಗೆ ಪೂನಂ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ನನ್ನ ನಕಲಿ ವಿಡಿಯೋಗಳನ್ನು ಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ ಈ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ ಎಂದು ಬುಧವಾರ ಪೂನಂ ಕೌರ್ ಸಿಟಿ ಪೊಲೀಸ್ ಕಮಿಷನರ್ ಬಳಿಕ ದೂರು ದಾಖಲಿಸಿದ್ದರು.

    ಹಣ ಪಡೆಯುವ ಸಲುವಾಗಿ ಕಿಡಿಗೇಡಿಗಳು 50 ಯೂಟ್ಯೂಬ್ ಚಾನೆಲ್‍ನಲ್ಲಿ ನನ್ನ ನಕಲಿ ವಿಡಿಯೋ ಹಾಗೂ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ ಎಂದು ಪೂನಂ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೂನಂ ದೂರಿನ ಆಧಾರದಲ್ಲಿ ಸೈಬರ್ ಕ್ರೈಂ ಪೊಲೀಸರು ಕಿಡಿಗೇಡಿಗಳ ವಿರುದ್ಧ ಐಟಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪೂನಂ ‘ಶೌರ್ಯಂ’, ‘ವಿನಾಯಾಕುಡು’ ಹಾಗೂ ‘ಗಣೇಶ್ ಜಸ್ಟ್ ಗಣೇಶ್’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರ ‘ಬಂಧು-ಬಳಗ’ ಚಿತ್ರ ಸೇರಿದಂತೆ ತಮಿಳು, ಮಲೆಯಾಳಂ ಚಿತ್ರದಲ್ಲೂ ಅಭಿನಯಿಸಿದ್ದಾರೆ.

  • ವರದಕ್ಷಿಣೆ ತರುವಂತೆ ಕಿರುಕುಳ ನೀಡಿ 3 ಬಾರಿ ಭ್ರೂಣ ಹತ್ಯೆ

    ವರದಕ್ಷಿಣೆ ತರುವಂತೆ ಕಿರುಕುಳ ನೀಡಿ 3 ಬಾರಿ ಭ್ರೂಣ ಹತ್ಯೆ

    ಹೈದರಾಬಾದ್: ಪತಿ ಹಾಗೂ ಆತನ ತಾಯಿ ವರದಕ್ಷಿಣೆ ತರುವಂತೆ ಕಿರುಕುಳ ನೀಡಿ 3 ಬಾರಿ ಭ್ರೂಣ ಹತ್ಯೆ ಮಾಡಿಸಿದ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ.

    ರಾಜೇಶ್ವರಿ (23) ಕಿರುಕುಳಕ್ಕೆ ಒಳಗಾದ ಮಹಿಳೆ. ರಾಜೇಶ್ವರಿ ಹಾಗೂ ಆಕೆಯ ಸಹೋದರ ಚಂದ್ರಶೇಖರ್ ವಿಶಾಖಪಟ್ಟಣದ ದಾಬಾ ಗಾರ್ಡನ್‍ನಲ್ಲಿರುವ ಪ್ರೇಮಾ ಸಮಾಜಂ ಅನಾಥಶ್ರಮದಲ್ಲಿ ಬೆಳೆದಿದ್ದರು. ರಾಜೇಶ್ವರಿ ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ತನ್ನದೇ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಳು.

    ರಾಜೇಶ್ವರಿ ಪತಿ ದಾಮೋದರ್ ಹಾಗೂ ಆತನ ತಾಯಿ ಲಲಿತಾ ತನ್ನ ಅಜ್ಜಿಯನ್ನು ನೋಡಲು ಅನಾಥಶ್ರಮಕ್ಕೆ ಹೋಗಿದ್ದರು. ಈ ವೇಳೆ ಅವರು ರಾಜೇಶ್ವರಿಯನ್ನು ನೋಡಿ ಮದುವೆ ಪ್ರಸ್ತಾಪವನ್ನು ಮಾಡಿದ್ದಾರೆ. ಆದರೆ ಮದುವೆಗೆ ಒಪ್ಪಿಗೆ ಇದೆ ಆದರೆ ವರದಕ್ಷಿಣೆ ನೀಡಲು ನನ್ನ ಬಳಿ ಹಣವಿಲ್ಲ ಎಂದು ರಾಜೇಶ್ವರಿ ಹೇಳಿದ್ದಳು. ಆಗ ದಾಮೋದರ್ ಹಾಗೂ ಆತನ ತಾಯಿ ನಮಗೆ ಯಾವುದೇ ಹಣ ಬೇಡ ಎಂದು ಹೇಳಿದ್ದರು. ಆದರೆ ಮದುವೆಯ ಸಮಯದಲ್ಲಿ ದಾಮೋದರ್ 1.5 ಲಕ್ಷ ರೂ. ಬೇಡಿಕೆ ಇಟ್ಟಿದ್ದಾನೆ. ರಾಜೇಶ್ವರಿ ಹಾಗೂ ಚಂದ್ರಶೇಖರ್ ಹೇಗೋ ಹಣ ಹೊಂದಿಸಿ ದಾಮೋದರ್ ಗೆ ನೀಡಿದ್ದರು.

    ವರದಕ್ಷಿಣೆ ಕಿರುಕುಳ:
    ಮದುವೆಯಾದ ಕೆಲವೇ ತಿಂಗಳಿನಲ್ಲಿ ದಾಮೋದರ್ ಹಾಗೂ ಆತನ ತಾಯಿ ರಾಜೇಶ್ವರಿಗೆ 25 ಲಕ್ಷ ರೂ. ವರದಕ್ಷಿಣೆ ತರುವಂತೆ ಕಿರುಕುಳ ನೀಡಲು ಶುರು ಮಾಡಿದ್ದರು. ಅಲ್ಲದೆ ಮದುವೆಯಾಗಿ 2 ವರ್ಷದಲ್ಲಿ ಮೂರು ಬಾರಿ ಭ್ರೂಣ ಹತ್ಯೆ ಮಾಡಿಸಿದ್ದಾರೆ. ದಾಮೋದರ್ ಹಾಗೂ ಲಲಿತಾ ದಿನನಿತ್ಯ ರಾಜೇಶ್ವರಿಗೆ ನಿಂದಿಸಿ ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು. ದಾಮೋದರ್ ಹಾಗೂ ಆತನ ತಾಯಿ ರಾಜೇಶ್ವರಿಯ ಬ್ಯೂಟಿ ಪಾರ್ಲರ್ ಮಾರಾಟ ಮಾಡಿ ಹೊಸ ಕಾರು ಕೂಡ ಖರೀದಿಸಿದ್ದರು.

    ಮೊದಲ ಪತ್ನಿಯ ಕರೆ:
    ರಾಜೇಶ್ವರಿ ಮತ್ತೆ ನಾಲ್ಕನೇ ಬಾರಿ ಗರ್ಭಿಣಿ ಆದಾಗ ದಾಮೋದರ್ ಮೊದಲ ಪತ್ನಿ ಸ್ವಾತಿ ಕರೆ ಮಾಡಿದ್ದಳು. ನೀನು ಈ ಮಗುವಿಗೆ ಜನ್ಮ ನೀಡಿದರೆ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಳು. ಆಗ ರಾಜೇಶ್ವರಿ ಮೊದಲ ಪತ್ನಿ ಬಗ್ಗೆ ದಾಮೋದರ್ ಬಳಿ ಕೇಳಿದ್ದಾಳೆ. ಇದರಿಂದ ಕೋಪಗೊಂಡ ದಾಮೋದರ್ ಆಕೆಯ ಮೇಲೆ ಹಲ್ಲೆ ಮಾಡಿ ಕಿರುಕುಳ ನೀಡಿದ್ದಾನೆ. ಇದರಿಂದ ಬೇಸತ್ತ ರಾಜೇಶ್ವರಿ ಮನೆಯಿಂದ ಹೊರ ಬಂದು ಬೇರೆ ಕಡೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಳು.

    ಕಾರಿನಲ್ಲಿ ಹಲ್ಲೆ:
    ಮಂಗಳವಾರ ಮಧ್ಯಾಹ್ನ ದಾಮೋದರ್ 6 ತಿಂಗಳ ಗರ್ಭಿಣಿ ಪತ್ನಿ ರಾಜೇಶ್ವರಿಗೆ ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾನೆ. ದಾರಿ ಮಧ್ಯೆ ಕಾರಿನಲ್ಲಿದ್ದ ಅತ್ತೆ ಲಲಿತಾ ರಾಜೇಶ್ವರಿ ಮೇಲೆ ಹಲ್ಲೆ ಮಾಡಿದ್ದಾಳೆ. ಲಲಿತಾ ಮೊದಲು ರಾಜೇಶ್ವರಿ ಹೊಟ್ಟೆ ಭಾಗಕ್ಕೆ ಹೊಡೆದಿದ್ದಾಳೆ. ಬಳಿಕ ದುಪ್ಪಟ್ಟಾದಿಂದ ಆಕೆಯ ಕತ್ತು ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದ್ದಾಳೆ. ಅಲ್ಲದೆ ಇಬ್ಬರು ಚೂಪಾದ ವಸ್ತುವಿನಿಂದ ಆಕೆಯ ಕೈ ಮುರಿದು ಹಾಕಿದ್ದಾರೆ.

    ರಾಜೇಶ್ವರಿ ತನ್ನ ಪತಿ ಹಾಗೂ ಅತ್ತೆಯಿಂದ ತಪ್ಪಿಸಿಕೊಂಡು ತನ್ನ ಸಹೋದರ ಚಂದ್ರಶೇಖರ್ ಬಳಿ ಹೋಗಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಬಳಿಕ ಇಬ್ಬರು ಪೆಂದೂರ್ತಿ ಪೊಲೀಸ್ ಠಾಣೆಗೆ ಹೋಗಿ ದಾಮೋದರ್ ಹಾಗೂ ಆತನ ತಾಯಿಯ ವಿರುದ್ಧ ದೂರು ನೀಡಿದ್ದಾರೆ. ರಾಜೇಶ್ವರಿ ಸ್ಥಿತಿ ನೋಡಿದ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಾಗುವಂತೆ ಹೇಳಿದ್ದಾರೆ.

  • ಭೀಕರ ಅಪಘಾತದಲ್ಲಿ ಕಿರುತೆರೆ ನಟಿಯರಿಬ್ಬರ ದುರ್ಮರಣ

    ಭೀಕರ ಅಪಘಾತದಲ್ಲಿ ಕಿರುತೆರೆ ನಟಿಯರಿಬ್ಬರ ದುರ್ಮರಣ

    ಹೈದರಾಬಾದ್: ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ತೆಲುಗು ಕಿರುತೆರೆಯ ನಟಿಯರಿಬ್ಬರು ಮೃತಪಟ್ಟಿರುವ ಘಟನೆ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯಲ್ಲಿ ನಡೆದಿದೆ.

    ಕಿರುತೆರೆ ನಟಿ ಭಾರ್ಗವಿ(20) ಮತ್ತು ಅನುಷಾ ರೆಡ್ಡಿ(21) ಮೃತ ದುರ್ದೈವಿಗಳು. ಚೆವೆಲ್ಲಾದಲ್ಲಿನ ಅಪ್ಪರೆಡ್ಡಿ ಬಸ್ ನಿಲ್ದಾಣದ ಬಳಿ ಈ ಅಪಘಾತ ನಡೆದಿದ್ದು, ಇಬ್ಬರು ನಟಿಯರು ಧಾರಾವಾಹಿಯ ಚಿತ್ರೀಕರಣ ಮುಗಿಸಿ ವಾಪಸ್ಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

    ಧಾರಾವಾಹಿಯ ಮುಂದಿನ ದೃಶ್ಯಗಳನ್ನು ಶೂಟಿಂಗ್ ಮಾಡಲು ತಂಡದೊಂದಿಗೆ ಅನಂತಗಿರಿ ಅರಣ್ಯಕ್ಕೆ ಹೋಗಿದ್ದರು. ಅಲ್ಲಿ ಕೆಲವು ದೃಶ್ಯಗಳ ಶೂಟಿಂಗ್ ಮುಗಿಸಿ ಮಂಗಳವಾರ ರಾತ್ರಿ ಹೈದರಾಬಾದಿಗೆ ಹಿಂದಿರುಗುತ್ತಿದ್ದರು. ಚಾಲಕ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ.

    ಪರಿಣಾಮ ಅನುಷಾ ಮತ್ತು ಭಾರ್ಗವಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೂ ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಮೃತ ಭಾರ್ಗವಿ ತೆಲಂಗಾಣ ನಿವಾಸಿಯಾಗಿದ್ದು, ‘ಮುತ್ಯಾಲ ಮುಗ್ಗು’ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದರು.

  • ನಟಿ ಸಾಯಿ ಪಲ್ಲವಿಯಿಂದ 2 ಕೋಟಿ ಆಫರ್ ರಿಜೆಕ್ಟ್

    ನಟಿ ಸಾಯಿ ಪಲ್ಲವಿಯಿಂದ 2 ಕೋಟಿ ಆಫರ್ ರಿಜೆಕ್ಟ್

    ಹೈದರಾಬಾದ್: ನಟಿ ಸಾಯಿ ಪಲ್ಲವಿ ಅವರು ಬರೋಬ್ಬರಿ 2 ಕೋಟಿ ಪ್ರಾಜೆಕ್ಟ್ ತಿರಸ್ಕರಿಸಿದ್ದಾರೆ.

    ಸಾಯಿ ಪಲ್ಲವಿ ಅವರಿಗೆ ಖ್ಯಾತ ಸಂಸ್ಥೆಯೊಂದು 2 ಕೋಟಿ ಸಂಭಾವನೆ ನೀಡುವುದಾಗಿ ಹೇಳಿ ತಮ್ಮ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗುವಂತೆ ಆಫರ್ ನೀಡಿದೆ. ಆದರೆ ಈ ಆಫರ್ ಅನ್ನು ಸಾಯಿ ಪಲ್ಲವಿ ಅವರು ತಿರಸ್ಕಾರ ಮಾಡಿದ್ದಾರೆ.

    ಕಂಪನಿ ಹೊಸದಾಗಿ ಫೇಸ್ ಕ್ರೀಮ್ ಒಂದನ್ನ ಉತ್ಪಾದಿಸಿದ್ದು, ಅದನ್ನು ಪ್ರೇಕ್ಷರಿಗೆ ಪರಿಚಯಿಸಬೇಕಿತ್ತು. ಈ ಫೇಸ್ ಕ್ರೀಮ್ ಜಾಹೀರಾತಿಗೆ ಸಾಯಿ ಪಲ್ಲವಿ ಸೂಕ್ತ ಎಂದು ಅವರನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಿತ್ತು. ಅದರಂತೆಯೇ ಅವರ ಬಳಿ ಸಂಸ್ಥೆ ಬೇಡಿಕೆ ಇಟ್ಟಿದೆ. ಆದರೆ ಜಾಹೀರಾತಿನ ಆಫರನ್ನು ಸಾಯಿ ಪಲ್ಲವಿ ಅವರು ತಾವು ಮಾಡುವುದಿಲ್ಲ ಎಂದು ಹೇಳಿ ತಿರಸ್ಕರಿಸಿದ್ದಾರೆ.

    ಇದು ಫೇಸ್ ಕ್ರೀಮ್ ಜಾಹೀರಾತು ಆಗಿರುವುದರಿಂದ ಸಾಮಾನ್ಯವಾಗಿ ಮೊಡವೆ ಇರಲ್ಲ, ಮಾರ್ಕ್ ಇರಲ್ಲ, ನಿಮ್ಮ ಮುಖ ಸುಂದರವಾಗಿ ಕಾಣುತ್ತದೆ ಎಂದು ಹೇಳಬೇಕಾಗುತ್ತದೆ. ಇದರಿಂದ ಜನರನ್ನು ಮೋಸ ಮಾಡಿದಂತೆ ಆಗುತ್ತದೆ. ಪ್ರೇಕ್ಷಕರಿಗೆ ಸುಳ್ಳು ಹೇಳುವುದು ಕಷ್ಟವಾಗುತ್ತದೆ ಎಂದು ಸಾಯಿ ಪಲ್ಲವಿ ಅವರು ಈ ಆಫರ್ ರಿಜೆಕ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

    ನಟಿ ಸಾಯಿ ಪಲ್ಲವಿ ಅವರು ತಾವು ಅಭಿನಯಿಸುವ ಸಿನಿಮಾಗಳಲ್ಲಿ ಹೆಚ್ಚು ಮೇಕಪ್ ಬಳಸುವುದಿಲ್ಲ. ತಮ್ಮ ಮುಖದಲ್ಲಿ ಮೊಡವೆಗಳಿದ್ದರೂ ಅದನ್ನ ಕಾಣಿಸಿದಂತೆ ಮೇಕಪ್ ಮಾಡಿಕೊಳ್ಳುವುದಿಲ್ಲ. ಅವರು ತಮ್ಮ ನೈಜ ಸೌಂದರ್ಯವನ್ನೇ ಉಳಿಸಿಕೊಂಡು, ಸಿನಿಮಾ ಮಾಡುತ್ತಾರೆ. ಈ ಮೂಲಕವೇ ಅವರು ಅಪಾರ ಪ್ರೇಕ್ಷಕರ ಮನಗೆದ್ದಿದ್ದಾರೆ. ಈ ಕಾರಣದಿಂದ ಅವರು ಫೇಸ್ ಕ್ರೀಮ್ ಆಫರ್ ರಿಜೆಕ್ಟ್ ಮಾಡಿದ್ದಾರೆ.

  • ಪ್ರೇಮ ವಿವಾಹಕ್ಕೆ ಪೋಷಕರ ಅಡ್ಡಿ – ಸೆಲ್ಫಿ ವಿಡಿಯೋ ಮಾಡಿ ಯುವ ಜೋಡಿ ಆತ್ಮಹತ್ಯೆ

    ಪ್ರೇಮ ವಿವಾಹಕ್ಕೆ ಪೋಷಕರ ಅಡ್ಡಿ – ಸೆಲ್ಫಿ ವಿಡಿಯೋ ಮಾಡಿ ಯುವ ಜೋಡಿ ಆತ್ಮಹತ್ಯೆ

    ಹೈದರಾಬಾದ್: ಪ್ರೇಮಿಗಳ ಮದುವೆಗೆ ಪೋಷಕರು ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ಮನೆಯಿಂದ ಹೊರ ನಡೆದ ಯುವಕ, ಯುವತಿ ಮದುವೆಯಾಗಿ ಬಳಿಕ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಚಂದ್ರಗಿರಿ ಮಂಡಲ ಪ್ರದೇಶದಲ್ಲಿ ನಡೆದಿದೆ.

    ಧನಂಜಯ್ (20), ಪಲ್ಲವಿ (16) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸೆಲ್ಫಿ ವಿಡಿಯೋ ಮಾಡಿ ತಮ್ಮಂತಹ ಪ್ರೇಮಿಗಳನ್ನು ಬೇರೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

    ಏನಿದು ಪ್ರಕರಣ: ಶ್ರೀಕಾಳಹಸ್ತಿ ಮೂಲದ ದಂಪತಿಗಳ ಪುತ್ರಿ ಪಲ್ಲವಿ ಪ್ರಥಮ ಪಿಯು ವ್ಯಾಸಂಗ ಮಾಡುತ್ತಿದ್ದು, ಕಳೆದ 1 ವರ್ಷದಿಂದ ಮುರುವಪಲ್ಲಿ ಮೂಲಕ ಧನಂಜಯ್ ಎಂಬ ಯುವಕನ್ನು ಪ್ರೀತಿಸುತ್ತಿದ್ದಳು. ಈತ ವೃತ್ತಿಯಲ್ಲಿ ಜೆಸಿಬಿ ಚಾಲಕನಾಗಿದ್ದು, ಇಬ್ಬರು ಮದುವೆ ಆಗಲು ನಿರ್ಧರಿಸಿ ಮನೆಯಲ್ಲಿ ತಮ್ಮ ಪ್ರೀತಿಯನ್ನು ತಿಳಿಸಿದ್ದರು. ಆದರೆ ಇಬ್ಬರ ಜಾತಿ ಬೇರೆ ಆದ ಕಾರಣದಿಂದ ಇವರ ಪ್ರೀತಿಗೆ ಪೋಷಕರು ವಿರೋಧ ಮಾಡಿದ್ದರು.

    ಕಳೆದ ಮೂರು ದಿನಗಳ ಹಿಂದೆ ಕಾಲೇಜಿನಲ್ಲಿ ಪರೀಕ್ಷೆಯ ಫಲಿತಾಂಶ ನೋಡಿಕೊಂಡು ಬರುವುದಾಗಿ ತಿಳಿಸಿದ್ದ ಯುವತಿ ನಾಪತ್ತೆಯಾಗಿದ್ದಳು. ಆ ಬಳಿಕ ಇಬ್ಬರು ದೇವಾಲಯಕ್ಕೆ ತೆರಳಿ ಮದುವೆಯಾಗಿ ಫೋಟೋಗಳನ್ನು ತೆಗೆದುಕೊಂಡಿದ್ದರು. ಆದರೆ ಇಂದು ಮುಂಜಾನೆ ಚಿತ್ತೂರು ಜಿಲ್ಲೆಯ ಚಂದ್ರಗಿರಿ ಮಂಡಲ ಮುರವಪಲ್ಲಿ ಬಳಿ ರೈಲ್ವೇ ಹಳಿ ಬಳಿ ಇಬ್ಬರ ಮೃತ ದೇಹ ಪತ್ತೆಯಾಗಿದ್ದು. ಆ ಅವರ ಬಳಿ ದೊರೆತ ಮೊಬೈಲ್ ನಲ್ಲಿ ವಿಡಿಯೋ ಲಭ್ಯವಾಗಿದೆ.

    ನಮ್ಮನ್ನು ಕ್ಷಮಿಸಿ, ಇದು ನಮ್ಮ ಕೊನೆಯ ವಿಡಿಯೋ. ಈ ನೋಡಿದ ಬಳಿಕವಾದರು ನಮ್ಮಂತ ಬೇರೆ ಪ್ರೇಮಿಗಳನ್ನು ಬೇರೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೇ ಪೋಷಕರಿಗೆ ಕ್ಷಮಿಸುವಂತೆ ಕೋರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ದೇಹಗಳು ರೈಲ್ವೇ ಹಳಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನೆ ಕುರಿತು ಪಾಕಾಲ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರ ಸೆಲ್ಫಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ಲಾಡ್ಜಿನಲ್ಲಿರಲು ಮನವೊಲಿಸಿ ಪ್ರೇಯಸಿ ಟೆಕ್ಕಿಯನ್ನೇ ಕೊಂದ – ಸೂಟ್‍ಕೇಸಿನಲ್ಲಿ ತುಂಬಿ ಚರಂಡಿಗೆ ಎಸೆದ

    ಲಾಡ್ಜಿನಲ್ಲಿರಲು ಮನವೊಲಿಸಿ ಪ್ರೇಯಸಿ ಟೆಕ್ಕಿಯನ್ನೇ ಕೊಂದ – ಸೂಟ್‍ಕೇಸಿನಲ್ಲಿ ತುಂಬಿ ಚರಂಡಿಗೆ ಎಸೆದ

    ಹೈದರಾಬಾದ್: ಮೆಕ್ಯಾನಿಕಲ್ ಎಂಜಿನಿಯರ್ ಒಬ್ಬಾತ ಟೆಕ್ಕಿ ಪ್ರೇಯಸಿಯನ್ನೇ ಕೊಲೆ ಮಾಡಿ ಸೂಟ್‍ಕೇಸ್‍ನಲ್ಲಿ ತುಂಬಿ ಚರಂಡಿಗೆ ಎಸೆದಿರುವ ಘಟನೆ ನಗರದ ಮೆಡ್ಚಾಲ್ ನಲ್ಲಿ ನಡೆದಿದೆ.

    ಮೃತ ಯುವತಿಯನ್ನು 25 ವರ್ಷದ ಸಾಫ್ಟ್ ವೇರ್ ಎಂಜಿನಿಯರ್ ಎಂದು ಗುರುತಿಸಲಾಗಿದೆ. ಯುವತಿಯನ್ನು ಕಾಲೇಜಿನಲ್ಲಿ ಗೆಳೆಯನಾಗಿದ್ದ ಮೆಕ್ಯಾನಿಕಲ್ ಎಂಜಿನಿಯರ್ ಸುನೀಲ್ ಕೊಲೆ ಮಾಡಿದ್ದಾನೆ. ಬಳಿಕ ಸೂಟ್‍ಕೇಸಿನಲ್ಲಿ ತುಂಬಿ ಚರಂಡಿಗೆ ಎಸೆದಿದ್ದಾನೆ. ಯುವತಿಯನ್ನು ಮದುವೆಯಾಗಲು ಇಷ್ಟವಿರದೇ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

    ಸ್ಥಳೀಯರು ಮೆಡ್ಚಾಲ್ ನಲ್ಲಿ ಶಾಲೆಯ ಸಮೀಪದ ಬಳಿ ಸೂಟ್ಕೇಸ್ ಬಿದ್ದಿರುವುದನ್ನು ನೋಡಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಸೂಟ್‍ಕೇಸ್ ಓಪನ್ ಮಾಡಿದಾಗ ಟೆಕ್ಕಿ ಮೃತದೇಹ ಪತ್ತೆಯಾಗಿದೆ. ಮೃತ ಯುವತಿಯ ಪೋಷಕರು ಮಗಳು ಕಳೆದುಹೋದ ಮೂರು ದಿನಗಳ ನಂತರ ಅಂದರೆ ಮಾರ್ಚ್ 7 ರಂದು ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದರು ಎಂದು ತಿಳಿದು ಬಂದಿದೆ.

    ನಮ್ಮ ಮಗಳು ಸುನೀಲ್ ಜೊತೆ ರಿಲೆಷನ್‍ಶಿಪ್ ನಲ್ಲಿ ಇರುವುದಾಗಿ ಹೇಳಿಕೊಂಡಿದ್ದಳು. ಇತ್ತೀಚೆಗೆ ಆತ ಕೆಲಸಕ್ಕಾಗಿ ಮಸ್ಕತ್‍ಗೆ ಹೋಗಲು ನಿರ್ಧರಿಸಿದ್ದನು. ಜೊತೆಗೆ ನಮ್ಮ ಮಗಳನ್ನು ಕರೆದುಕೊಂಡು ಹೋಗಲು ಇಷ್ಟಪಟ್ಟಿದ್ದನು. ಕೊನೆಗೆ ಮಾರ್ಚ್ 4 ರಂದು ಗೆಳೆಯನೊಂದಿಗೆ ಮಸ್ಕತ್‍ಗೆ ಹೋಗಲು ನಾವು ಆಕೆಯನ್ನು ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಿದ್ದೇವು. ಆಗಲೇ ನಮ್ಮ ಮಗಳನ್ನು ನಾವು ಕೊನೆಯದಾಗಿ ನೋಡಿದ್ದು ಎಂದು ಕುಟುಂಬವು ಹೇಳಿದೆ.

    ಸುನಿಲ್ ಯುವತಿಯನ್ನು ತನ್ನೊಂದಿಗೆ ಲಾಡ್ಜ್ ನಲ್ಲಿ ಉಳಿದುಕೊಳ್ಳುವಂತೆ ಮನವೊಲಿಸಿದ್ದಾನೆ. ಒಂದು ದಿನದ ನಂತರ ಸುನೀಲ್ ಪ್ರೇಯಸಿ ಟೆಕ್ಕಿಯನ್ನು ಕೊಂದು ತನ್ನ ಸೂಟ್‍ಕೇಸಿನಲ್ಲಿ ದೇಹವನ್ನು ತುಂಬಿಸಿದ್ದಾನೆ. ಬಳಿಕ ಮೆಡ್ಚಾಲ್ ನಲ್ಲಿ ಚರಂಡಿಗೆ ಎಸೆದಿದ್ದಾನೆ ಎಂದು ಪೊಲೀಸ್ ಅಧಿಕಾರಿ ರಾಮಚಂದ್ರ ರಾವ್ ತಿಳಿಸಿದ್ದಾರೆ.

    ಆರೋಪಿ ಸುನೀಲ್ ಬಿಹಾರದಿಂದ ಬಂದಿದ್ದು, ಎಂಜಿನಿಯರಿಂಗ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದನು. ಒಂದು ವರ್ಷದ ಹಿಂದೆ ಹೈದರಾಬಾದ್‍ಗೆ ಹೋಗಿದ್ದಾನೆ. ಮೃತ ಯುವತಿ ಕೂಡ ಹೈದರಾಬಾದ್‍ನಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರು ತಮ್ಮ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.

    ಸದ್ಯಕ್ಕೆ ಆರೋಪಿ ಸುನೀಲ್ ವಿರುದ್ಧ ಯುವತಿಯ ಅಪಹರಣ ಮತ್ತು ಕೊಲೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

  • ಸ್ಟ್ರಾಂಗ್ ರೂಮ್‍ನಲ್ಲಿ ಫೋಟೋ – ಕಾರ್ಯಕರ್ತ ಜೈಲುಪಾಲು

    ಸ್ಟ್ರಾಂಗ್ ರೂಮ್‍ನಲ್ಲಿ ಫೋಟೋ – ಕಾರ್ಯಕರ್ತ ಜೈಲುಪಾಲು

    ಹೈದರಾಬಾದ್: ಇವಿಎಂ ಮತ್ತು ವಿವಿಪ್ಯಾಟ್‍ಗಳಿದ್ದ ಸ್ಟ್ರಾಂಗ್ ರೂಮ್ ನಲ್ಲಿ ಫೋಟೋ ತೆಗೆದ ತೆಲಂಗಾಣ ರಾಷ್ಟ್ರ ಸಮಿತಿ ಕಾರ್ಯಕರ್ತನೊಬ್ಬ ಜೈಲುಪಾಲಾಗಿದ್ದಾನೆ.

    ಮಲ್ಕಾಜ್‍ಗಿರಿ ಲೋಕಸಭಾ ಕ್ಷೇತ್ರದ ಬೂತ್ ಏಜೆಂಟ್ ಎನ್ ವೆಂಕಟೇಶ್ ಬಂಧಿತ ಆರೋಪಿ. ಅಭ್ಯರ್ಥಿ ಮರಿ ರಾಜಶೇಖರ್ ರೆಡ್ಡಿ ಅವರ ಬೂತ್ ಏಜೆಂಟ್ ಆಗಿದ್ದ ವೆಂಕಟೇಶ್ ಏಪ್ರಿಲ್ 11 ರಂದು ಮೊದಲ ಹಂತದ ಚುನಾವಣೆ ಮುಗಿದ ಬಳಿಕ ಬೋಗ್ರಾಮ್ ಕಾಲೇಜಿನ ಸ್ಟ್ರಾಂಗ್ ರೂಮ್‍ಗೆ ತೆರಳಿ ಫೋಟೋ ಕ್ಲಿಕ್ಕಿಸಿಕೊಂಡಿದ್ದ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟಿದ್ದಾರೆ.

    ಸ್ಟ್ರಾಂಗ್ ರೂಮಿನ ಒಳಗಡೆ ಚುನಾವಣಾ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಮಾತ್ರ ಪ್ರವೇಶಿಸಲು ಅನುಮತಿ ನೀಡಲಾಗುತ್ತದೆ. ಆದರೆ ಪಕ್ಷದ ಕಾರ್ಯಕರ್ತನಾಗಿರುವ ಈತ ಕೊಠಡಿ ಪ್ರವೇಶಿಸಿದ್ದು ಹೇಗೆ ಎನ್ನುವ ಪ್ರಶ್ನೆ ಎದ್ದಿದೆ.