Tag: Hyderabad

  • Exclusive | ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್ ಶೀಟ್‌ನಲ್ಲಿ ನಟ ದರ್ಶನ್ ಆರೋಪಿ ನಂ.1

    Exclusive | ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್ ಶೀಟ್‌ನಲ್ಲಿ ನಟ ದರ್ಶನ್ ಆರೋಪಿ ನಂ.1

    ಬೆಂಗಳೂರು: ಜೈಲು ಹಕ್ಕಿ ದರ್ಶನ್‌ಗೆ ಕೊಲೆ ಕೇಸಲ್ಲಿ ಬಡ್ತಿ ಸಿಗೋದು ಫಿಕ್ಸ್ ಆದಂತೆ ಕಾಣ್ತಿದೆ. ಎ2 ಆರೋಪಿಯಿಂದ ಎ1 ಆರೋಪಿ ಸ್ಥಾನಕ್ಕೆ ದರ್ಶನ್‌ಗೆ ಚಾರ್ಜ್ ಶೀಟ್ (Darshan Charge Sheet) ಬಡ್ತಿ ನೀಡಲು ತಯಾರಿ ನಡೆದಿದೆ.

    ಕೊಲೆ ಕೇಸಿನ ತನಿಖೆ ವೇಳೆ ದರ್ಶನ್ ಎ2 ಆರೋಪಿಯನ್ನಾಗಿ ಮಾಡಲಾಗಿತ್ತು. ಎ1 ಆರೋಪಿಯನ್ನಾಗಿ ಪವಿತ್ರಾಗೌಡರನ್ನ (Pavithra Gowda) ಹೆಸರಿಸಲಾಗಿತ್ತು. ತನಿಖೆ ಮುಗಿದು ಚಾರ್ಜ್ ಶೀಟ್ ಸಲ್ಲಿಕೆಯ ಸಿದ್ಧತೆಯಲ್ಲಿ ಎ2 ಇಂದ ಎ1 ಗೆ ಬಡ್ತಿ ನೀಡಲು ಸಿದ್ಧತೆಗಳು ಆರಂಭವಾಗಿದ್ದು, ಇದು ದರ್ಶನ್‌ಗೆ ಮತ್ತಷ್ಟು ಸಂಕಷ್ಟ ತಂದೊಡ್ಡೋದು ಫಿಕ್ಸ್ ಆಗಿದೆ ಎಂದು ಪೊಲೀಸರ ಆಪ್ತ ಮೂಲಗಳಿಂದ ತಿಳಿದುಬಂದಿದೆ. ದರ್ಶನ್ ಎ1 ಆರೋಪಿ ಮಾಡಲು ಕಾರಣಗಳು ಇಲ್ಲಿವೆ.

    ಆ ಮಹಾ ಕಾರಣಗಳು ಏನು?
    * ದರ್ಶನ್‌ನಿಂದಲೇ ರೇಣುಕಾಸ್ವಾಮಿಯನ್ನ ಕಿಡ್ನ್ಯಾಪ್ ಮಾಡಲು ಸೂಚನೆ
    * ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರನಿಗೆ ಡೀಲ್
    * ಡೀಲ್ ಬಳಿಕ ರೇಣುಕಾಸ್ವಾಮಿಯನ್ನ ಕಿಡ್ನ್ಯಾಪ್ ಮಾಡಿ ಆರ್.ಆರ್ ನಗರದ ಪಟ್ಟಣಗೆರೆಯ ಶೆಡ್‌ಗೆ ಕರೆತರಲಾಗಿತ್ತು
    * ಶೆಡ್ ನಲ್ಲಿ ದರ್ಶನ್‌ನಿಂದ ಬೆಲ್ಟ್ ಲಾಠಿ ಹಾಗೂ ಕಬ್ಬಿಣದ ರಾಡ್ ನಿಂದ ಹಲ್ಲೆ
    * ರೇಣುಕಾಸ್ವಾಮಿಯ ಮೇಲೆ ಸಿಕ್ಕ ಸಿಕ್ಕ ಕಡೆ ಒದ್ದಿದ್ದ ದರ್ಶನ್
    * ರೇಣುಕಾಸ್ವಾಮಿ ಸಾವನ್ನಪ್ಪಿದ್ದ ಬಳಿಕ ಶವ ವಿಲೇವಾರಿಗೆ ಪ್ಲ್ಯಾನ್‌
    * ಶವ ವಿಲೇವಾರಿ ಮಾಡುವಂತೆ ಪ್ರದೋಷ್ ಗೆ 30 ಲಕ್ಷ ಹಣ ಕೊಟ್ಟಿದ್ದ ದರ್ಶನ್
    * ಕೊಲೆ ಮಾಡಿದ ಸ್ಪಾಟ್ ನಲ್ಲಿ ಸಿಸಿಟಿವಿ ಡಿವಿಆರ್ ನಲ್ಲಿನ ವೀಡಿಯೊ ಅಳಿಸಿ ಹಾಕಿ ಸಾಕ್ಷಿ ನಾಶದ ಯತ್ನ
    * ಪ್ರಮುಖ ಸೂತ್ರಧಾರನೆ ದರ್ಶನ್ ಆದ್ರಿಂದ ಎ1 ಆರೋಪಿ ಮಾಡಲು ಪೊಲೀಸರು ತಯಾರಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

  • ದರ್ಶನ್‌ಗೆ ಸಂಕಷ್ಟ ತಂದೊಡ್ಡುತ್ತಾ ಹೈದರಾಬಾದ್‌ ಎಫ್‌ಎಸ್‌ಎಲ್‌ ವರದಿ?

    ದರ್ಶನ್‌ಗೆ ಸಂಕಷ್ಟ ತಂದೊಡ್ಡುತ್ತಾ ಹೈದರಾಬಾದ್‌ ಎಫ್‌ಎಸ್‌ಎಲ್‌ ವರದಿ?

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ಹೈದರಾಬಾದ್‌ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ (FSL Report) ಮೂರು ದಿನದಲ್ಲಿ ಎಸ್‌ಐಟಿ ಪೊಲೀಸರ ಕೈ ಸೇರಲಿದೆ.

    ಈಗಾಗಲೇ 70% ವರದಿ ಪೊಲೀಸರ ಕೈಸೇರಿದ್ದು, ಉಳಿದ 30% ವರದಿ ಎಫ್‌ಎಸ್‌ಎಲ್‌ನಿಂದ ಬರಬೇಕಾಗಿತ್ತು. ಬರಬೇಕಾದ ಅಷ್ಟೂ ವರದಿಗಳು ಎಲೆಕ್ಟ್ರಾನಿಕ್ ಸಾಧನಗಳಿಗೆ ಸಂಬಂಧಿಸಿದ ವರದಿಯಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ವ್ಹೀಲಿಂಗ್ ಪುಂಡರ ವಿರುದ್ಧ ಪೊಲೀಸರ ಸೈಲೆಂಟ್ ಸಮರ

     

    ಆರೋಪಿಗಳ ಐಪೋನ್ ಡೇಟಾ ರಿಟ್ರೀವ್ ಮತ್ತು ಡಿಲೀಟ್‌ ಮಾಡಿದ ದೃಶ್ಯಗಳ ರಿಟ್ರೀವ್‌ ಮಾಡಲು ಹೈದರಾಬಾದ್‌ಗೆ ಕಳುಹಿಸಲಾಗಿತ್ತು.

    ವರದಿ ಕೈಸೇರುತ್ತಿದ್ದಂತೆ ತನಿಖೆ ಮತ್ತಷ್ಟು ಚುರಕಾಗಲಿದೆ. ರಿಟ್ರೀವ್ ವಿಡಿಯೋಗಳನ್ನು ಪರಿಶೀಲನೆಗಾಗಿ ಮತ್ತೆ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗುತ್ತದೆ. ತನಿಖಾ ಕಾಲದಲ್ಲಿ ಪತ್ತೆಯಾದ ವಿಡಿಯೋಗಳಿಗೂ ಹಾಗೂ ರಿಟ್ರೀವ್ ವಿಡಿಯೋಗಳಿಗೆ ಹೋಲಿಕೆ ಮಾಡಿ ರಿಪೋರ್ಟ್ ಕೊಡಬೇಕಾಗುತ್ತದೆ. ಹೀಗಾಗಿ ಇಡೀ ಪ್ರಕರಣ ತನಿಖೆ ಹೈದರಾಬಾದ್ ಎಫ್‌ಎಸ್‌ಎಲ್‌ ವರದಿ ಅತ್ಯಂತ ಮಹತ್ವ ಪಡೆದುಕೊಂಡಿದೆ. ಇದನ್ನೂ ಓದಿ: ಮಹಿಳೆ ನೇಣಿಗೆ ಶರಣು – ವರದಕ್ಷಿಣೆ ಕಿರುಕುಳ ಆರೋಪ

    ಒಂದು ವೇಳೆ ಎಫ್‌ಎಸ್‌ಎಲ್‌ ವರದಿಯಲ್ಲಿ ಡಿಲೀಟ್‌ ಮಾಡಿದ ದೃಶ್ಯ ಸಿಕ್ಕಿದರೆ ದರ್ಶನ್‌ ಗ್ಯಾಂಗ್‌ಗೆ (Darshan Gang) ಮತ್ತಷ್ಟು ಸಮಸ್ಯೆಯಾಗುವ ಸಾಧ್ಯತೆಯಿದೆ.

     

  • 10 ವರ್ಷದಾಕೆಯ ಮೇಲೆ 10 ಜನರಿಂದ ಗ್ಯಾಂಗ್‌ರೇಪ್- ಬಾಲಕಿ ಗರ್ಭಿಣಿ

    10 ವರ್ಷದಾಕೆಯ ಮೇಲೆ 10 ಜನರಿಂದ ಗ್ಯಾಂಗ್‌ರೇಪ್- ಬಾಲಕಿ ಗರ್ಭಿಣಿ

    ಹೈದರಾಬಾದ್:‌ ಹೈದರಾಬಾದ್‌ನಲ್ಲಿ 10 ವರ್ಷದ ಬಾಲಕಿಯನ್ನು ಯುವಕರ ಗುಂಪೊಂದು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದು, ಬಾಲಕಿ ಈಗ ಗರ್ಭಿಣಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪ್ರಕರಣ ಸಂಬಂಧ 10 ಮಂದಿಯನ್ನೂ ಬಂಧಿಸಲಾಗಿದೆ. ಆರೋಪಿಗಳನ್ನು ಕಾರು ಚಾಲಕ ಚಕ್ಕೋಲು ನರೇಶ್ (26), ವಿಜಯ್ ಕುಮಾರ್ (23), ಬಾಲಾಜಿ (23), ಗುಡ್ಡಂತಿ ಕೃಷ್ಣ (22), ಕಿರಣ್ ಕುಮಾರ್ (26), ಬೊಳ್ಳೆಪೋಗು ಅಜಯ್ (23), ಜೇಮ್ಸ್ ಕ್ಸೇವಿಯರ್ (24), ದೀಪಕ್ (25), ಸಬವತ್ ಹತ್ಯಾ ನಾಯ್ಕ್ (25), ಇಂಜಮುರಿ ಮಧು (30) ಎಂದು ಗುರುತಿಸಲಾಗಿದೆ.

    ಅತ್ಯಾಚಾರ ಎಸಗಕ್ಕೂ ಮೊದಲು ಆರೋಪಿಗಳು ಸಂತ್ರಸ್ತೆಗೆ ಮತ್ತು ಬರುವ ಪಾನೀಯವನ್ನು ಒತ್ತಾಯಪೂರ್ವಕವಾಗಿ ಕುಡಿಸಿದ್ದಾರೆ. ಬಳಿಕ ಒಬ್ಬೊಬ್ಬರಾಗಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಇದು ಆಕೆ ಗರ್ಭಿಣಿಯಾಗಲು ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯ ಆರೋಪಿಗಳಿಂದ ದ್ವಿಚಕ್ರವಾಹನ ಸೇರಿದಂತೆ ಮೊಬೈಲ್, ವಾಹನಗಳು, ಸಿಮ್ ಕಾರ್ಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಮರುದಿನ ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಒಪ್ಪಿಸಲಾಗಿದೆ.

  • ರೀಲ್ಸ್‌ ಕ್ರೇಜ್‌ – ಬಾಜಿ ಕಟ್ಟಿ, ಹಠಾತ್ತನೆ ಚಲಿಸುತ್ತಿದ್ದ ಬಸ್‌ ಕೆಳಗೆ ಮಲಗಿದ ಯುವಕ!

    ರೀಲ್ಸ್‌ ಕ್ರೇಜ್‌ – ಬಾಜಿ ಕಟ್ಟಿ, ಹಠಾತ್ತನೆ ಚಲಿಸುತ್ತಿದ್ದ ಬಸ್‌ ಕೆಳಗೆ ಮಲಗಿದ ಯುವಕ!

    – ಪಾಪ ಆ ಡ್ರೈವರ್‌ಗೆ ಹಾರ್ಟ್‌ ಅಟ್ಯಾಕ್‌ ಆಗಿರುತ್ತೆ ಎಂದ ನೆಟ್ಟಿಗರು

    ಹೈದರಾಬಾದ್‌: ಸೋಷಿಯಲ್‌ ಮೀಡಿಯಾದಲ್ಲಿ ಈಗ ರೀಲ್ಸ್‌ ಹವಾ ಜಾಸ್ತಿಯಾಗಿದೆ. ಯುವಕ-ಯುವತಿಯರಂತು (Youngster) ತಮ್ಮ ಫಾಲೋವರ್‌ಗಳನ್ನ ಹೆಚ್ಚಿಸಿಕೊಳ್ಳಲು, ಹೆಚ್ಚು ವೀವ್ಸ್ ಮತ್ತು ಲೈಕ್ಸ್ ಪಡೆಯಲು ಜೀವಕ್ಕೆ ಅಪಾಯವಾಗುವಂತಹ ಸ್ಟಂಟ್ ಗಳನ್ನು ಮಾಡುತ್ತಿದ್ದಾರೆ. ಇದರಿಂದ ಕೆಲವರು ಸಾವನ್ನಪ್ಪಿರುವ ಘಟನೆಯನ್ನೂ ನಾವು ಆಗಾಗ್ಗೆ ನೋಡಿದ್ದೇವೆ. ಇಷ್ಟಾದರೂ ಯುವಜನತೆಗೆ ರೀಲ್ಸ್ (Reels) ಹುಚ್ಚು ಬಿಟ್ಟಿಲ್ಲ.

    ಇತ್ತೀಚೆಗಷ್ಟೇ ಪುಣೆಯಲ್ಲಿ (Pune) ಯುವತಿಯೊಬ್ಬಳು, ಹುಡುಗನೊಬ್ಬನ ಕೈ ಹಿಡಿದುಕೊಂಡು ಪಾಳುಬಿದ್ದ ಕಟ್ಟಡದ ಮೇಲಿಂದ ನೇತಾಡುತ್ತಿರುವ ರೀತಿ ರೀಲ್ಸ್‌ ಮಾಡಿದ್ದ ವಿಡಿಯೋ ವೈರಲ್‌ ಆಗಿತ್ತು. ಇದೀಗ ಹೈದರಾಬಾದ್‌ನಲ್ಲಿ (Hyderabad) ಯುವಕನೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಚಲಿಸುತ್ತಿದ್ದ ಬಸ್‌ ಕೆಳಗೆ ಹಠಾತ್ತನೆ ಮಲಗುವ ಸಾಹಸ ರೀಲ್ಸ್‌ ಮಾಡಿದ್ದಾನೆ. ಈ ಕುರಿತ ವೀಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಪೊದೆಯೊಂದರಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ – ಅತ್ಯಾಚಾರ ಶಂಕೆ

    ಬಹುತೇಕ ವಾಹನಗಳು ಸಂಚರಿಸುವ ಸಮಯದಲ್ಲಿ ಯುವಕನೊಬ್ಬ ದಿಢೀರನೆ ರಸ್ತೆ ಮಧ್ಯಕ್ಕೆ ಬಂದು ನಿಂತಿದ್ದಾನೆ. ನಂತರ ಒಂದೆರಡು ಹೆಜ್ಜೆ ಮುಂದಕ್ಕೆ ಸಾಗಿ ಚಲಿಸುತ್ತಿದ್ದ ಬಸ್‌ ಕೆಳಗೆ ಮಲಗಿದ್ದಾನೆ. ಬಸ್‌ ಸಹ ತಕ್ಷಣಕ್ಕೆ ನಿಲ್ಲಿಸಲಾಗದೇ ಮುಂದೆ ಸಾಗಿದೆ. ಏನೋ ಅನಾಹುತ ಸಂಭವಿಸಿತೇನೋ ಎನ್ನುವಷ್ಟರಲ್ಲಿ ಯುವಕ ಎದ್ದು ರಸ್ತೆ ಪಕ್ಕಕ್ಕೆ ತೆರಳಿದ್ದಾರೆ. ಬಿಡ್‌ ಕಟ್ಟಿ ರೀಲ್ಸ್‌ಗಾಗಿ ಯುವಕನೊಬ್ಬ ಇಂತಹ ಕೆಲಸ ಮಾಡಿದ್ದಾನೆ. ಇದನ್ನೂ ಓದಿ: ʻದಾಸʼನಿಗೆ ಕಾನೂನು ಕುಣಿಕೆ ಮತ್ತಷ್ಟು ಬಿಗಿ – ಪೊಲೀಸರಿಂದ 2 ಹಲ್ಲೆ ವೀಡಿಯೋ ಸಂಗ್ರಹ!

    ಆನೇರಿ ಶಾ ಯಕ್ಕತಿ ಎಂಬ ಎಕ್ಸ್‌ ಖಾತೆಯಲ್ಲಿ ಜೂನ್‌ 21 ರಂದು ವೀಡಿಯೋ ಹಂಚಿಕೊಳ್ಳಲಾಗಿದ್ದು, 78 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಯುವಜನ ಹುಚ್ಚಾಟಕ್ಕೆ ನೆಟ್ಟಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.

    ಕೆಲವರು ಇದು ಎಡಿಟ್‌ ಮಾಡಿದ ವೀಡಿಯೋ, ನಕಲಿ ವೀಡಿಯೋ ಎಂದು ಹೇಳಿದರೆ, ಇನ್ನೂ ಕೆಲವರು ಪಾಪ ಆ ಬಸ್‌ ಡ್ರೈವರ್‌ಗೆ ಹಾರ್ಟ್‌ ಅಟ್ಯಾಕ್‌ ಆಗಿರುತ್ತೆ, ಇಂಥವನನ್ನ ಅರೆಸ್ಟ್‌ ಮಾಡಿ ಜೈಲಿಗೆ ಕಳುಹಿಸಿ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ -‌ ಇಂದು ನಟ ದರ್ಶನ್‌ ಸೇರಿ ನಾಲ್ವರು ಆರೋಪಿಗಳಿಗೆ ಜೈಲು ಫಿಕ್ಸ್‌?

  • ಹೆಬ್ಬೆ ಜಲಪಾತದ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಬಂಡೆ ಮೇಲಿಂದ ಜಾರಿ ಬಿದ್ದು ಯುವಕ ಸಾವು!

    ಹೆಬ್ಬೆ ಜಲಪಾತದ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಬಂಡೆ ಮೇಲಿಂದ ಜಾರಿ ಬಿದ್ದು ಯುವಕ ಸಾವು!

    ಚಿಕ್ಕಮಗಳೂರು: ತರೀಕೆರೆಯ (Tarikere) ಹೆಬ್ಬೆ ಜಲಪಾತದ (Hebbe Falls) ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕಾಲು ಜಾರಿ ಬಿದ್ದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.

    ಮೃತನನ್ನು ಹೈದರಾಬಾದ್ (Hyderabad) ಮೂಲದ ಶ್ರವಣ್ (25) ಎಂದು ಗುರುತಿಸಲಾಗಿದೆ. ಮೃತ ಶ್ರವಣ್ ತನ್ನ ಸ್ನೇಹಿತನ ಜೊತೆ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ದತ್ತಪೀಠ, ಗಾಳಿಕೆರೆ, ಕಲ್ಲತ್ತಿಗಿರಿ, ಕೆಮ್ಮಣ್ಣುಗುಂಡಿಗೆ ಪ್ರವಾಸಕ್ಕೆ ಬಂದಿದ್ದ. ಇಬ್ಬರೂ ಸೋಮವಾರ ಹೆಬ್ಬೆ ಜಲಪಾತಕ್ಕೆ ಭೇಟಿ ನೀಡಿದ್ದರು. ಈ ವೇಳೆ ಬಂಡೆ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಕಾಲು ಜಾರಿ ನೀರಿನೊಳಕ್ಕೆ ಬಿದ್ದಿದ್ದಾನೆ. ಕೂಡಲೇ ಆತನ ಸ್ನೇಹಿತ ಹಾಗೂ ಇತರೆ ಪ್ರವಾಸಿಗರು ಆತನನ್ನ ಮೇಲಕ್ಕೆತ್ತಿದ್ದಾರೆ. ನಂತರ ಚಿಕಿತ್ಸೆಗಾಗಿ ತರಿಕೆರೆ ಆಸ್ಪತ್ರೆಗೆ ಕರೆತರಲಾಗಿತ್ತು. ಆದ್ರೆ ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದರಿಂದ ಆಸ್ಪತ್ರೆ ಆವರಣದಲ್ಲೇ ಯುವಕ ಸಾವನ್ನಪಿದ್ದಾನೆ. ಇದನ್ನೂ ಓದಿ: ಐವರು ಕೇಂದ್ರ ಸಚಿವರು ರಾಜ್ಯದ ಸಮಸ್ಯೆಗಳನ್ನು ಬಗೆಹರಿಸುವ ವಿಶ್ವಾಸವಿದೆ: ಪರಮೇಶ್ವರ್

    ಹೆಬ್ಬೆ ಜಲಪಾತ ಕಾಡಿನೊಳಗಿದ್ದು, ಕೆಮ್ಮಣ್ಣುಗುಂಡಿಯಿಂದ ಸುಮಾರು 7 ಕಿ.ಮೀ ಕಾಫಿ ತೋಟದ ಒಳಗೆ ಜೀಪ್‍ನಲ್ಲೇ ಹೋಗಬೇಕು. ಹೆಬ್ಬೆ ಜಲಪಾತ ತರೀಕೆರೆಯಿಂದ ಸುಮಾರು 35-40 ಕಿಮೀ ಮೀಟರ್ ದೂರದಲ್ಲಿದೆ. ಅಲ್ಲಿಂದ ಶ್ರವಣ್‍ನನ್ನು ಆಸ್ಪತ್ರೆಗೆ ಕರೆತರುವುದು ಬಹಳ ತಡವಾಗಿದೆ ಎಂದು ತಿಳಿದುಬಂದಿದೆ.

    ಈ ಸಂಬಂಧ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕಸ್ಟಡಿ ಅವಧಿ ಅಂತ್ಯ – ಪರಪ್ಪನ ಅಗ್ರಹಾರ ಜೈಲಿಗೆ ಪ್ರಜ್ವಲ್ ಶಿಫ್ಟ್!

  • ರಾಮೋಜಿ ಫಿಲ್ಮ್ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ವಿಧಿವಶ

    ರಾಮೋಜಿ ಫಿಲ್ಮ್ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ವಿಧಿವಶ

    – ಮೋದಿ ಸೇರಿದಂತೆ ಗಣ್ಯರಿಂದ ಸಂತಾಪ

    ಹೈದರಾಬಾದ್: ಈನಾಡು ಮತ್ತು ರಾಮೋಜಿ ಫಿಲ್ಮ್ ಸಿಟಿ (Ramoji Film City) ಸಂಸ್ಥಾಪಕ ರಾಮೋಜಿ ರಾವ್ (87) ವಿಧಿವಶರಾಗದ್ದಾರೆ.

    ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ರಾಮೋಜಿ ರಾವ್ (Ramoji Rao) ಅವರು ಜೂನ್ 5 ರಂದು ಹೈದರಾಬಾದ್‍ನ ಆಸ್ಪತ್ರೆಗೆ ದಾಖಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಬೆಳಗ್ಗಿನ ಜಾವ 4:50ರ ಸುಮಾರಿಗೆ ನಿಧನರಾಗಿದ್ದಾರೆ.

    ವರದಿಗಳ ಪ್ರಕಾರ, ರಾಮೋಜಿ ರಾವ್ ಅವರ ಪಾರ್ಥಿವ ಶರೀರವನ್ನು ರಾಮೋಜಿ ಫಿಲ್ಮ್ ಸಿಟಿಯಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲು ಸಿದ್ಧತೆಗಳು ನಡೆಯುತ್ತಿವೆ. ಅಲ್ಲಿ ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ಹಿತೈಷಿಗಳು ರಾಮೋಜಿ ರಾವ್ ಅವರಿಗೆ ಅಂತಿಮ ನಮನ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಜನರ ಜ್ವಲಂತ ಸಮಸ್ಯೆ ಎತ್ತಿರೋ ರಾಹುಲ್‌ ಗಾಂಧಿಯವ್ರೇ ಪ್ರತಿಪಕ್ಷ ನಾಯಕನಾಗಲಿ: ಪರಂ

    ರಾಮೋಜಿ ರಾವ್ ಅವರ ನಿಧನಕ್ಕೆ ನರೇಂದ್ರ ಮೋದಿ , ಚಂದ್ರಬಾಬು ನಾಯ್ಡು ಹಾಗೂ ರೇವಂತ್‌ ರೆಡ್ಡಿ ಸೇರಿದಂತೆ ಹಲವು ಹಿರಿಯ ನಾಯಕರು ಸಂತಾಪ ಸೂಚಿಸಿದ್ದಾರೆ. ರಾಮೋಜಿ ರಾವ್ ಅವರ ನಿಧನವು ಅತ್ಯಂತ ದುಃಖಕರವಾಗಿದೆ. ಅವರು ಭಾರತೀಯ ಮಾಧ್ಯಮದಲ್ಲಿ ಕ್ರಾಂತಿಯನ್ನು ಮಾಡಿದ ದಾರ್ಶನಿಕರಾಗಿದ್ದರು. ಅವರ ಕೊಡುಗೆ ಪತ್ರಿಕೋದ್ಯಮ ಮತ್ತು ಚಲನಚಿತ್ರ ಜಗತ್ತಿನಲ್ಲಿ ಅಳಿಸಲಾಗದ ಛಾಪು ಮೂಡಿಸಿದೆ. ರಾಮೋಜಿ ರಾವ್ ಅವರು ಭಾರತದ ಅಭಿವೃದ್ಧಿಯ ಬಗ್ಗೆ ಅಪಾರವಾಗಿ ಉತ್ಸುಕರಾಗಿದ್ದರು. ಅವರೊಂದಿಗೆ ಸಂವಹನ ನಡೆಸಲು ಮತ್ತು ಅವರ ಜ್ಞಾನದಿಂದ ಪ್ರಯೋಜನ ಪಡೆಯಲು ಅನೇಕ ಅವಕಾಶಗಳನ್ನು ಪಡೆದಿರುವುದು ನನ್ನ ಅದೃಷ್ಟ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬ, ಸ್ನೇಹಿತರು ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಮೋದಿ ಬರೆದುಕೊಂಡಿದ್ದಾರೆ.

  • ಬುರ್ಖಾ ತೆಗೆದು ವೋಟರ್‌ ಐಡಿ ತೋರಿಸಲು ಹೇಳಿದ ಮಾಧವಿ ಲತಾ ವಿರುದ್ಧ ಪ್ರಕರಣ ದಾಖಲು

    ಬುರ್ಖಾ ತೆಗೆದು ವೋಟರ್‌ ಐಡಿ ತೋರಿಸಲು ಹೇಳಿದ ಮಾಧವಿ ಲತಾ ವಿರುದ್ಧ ಪ್ರಕರಣ ದಾಖಲು

    ಹೈದರಾಬಾದ್:‌ ಮುಸ್ಲಿಂ ಮಹಿಳೆಯರಿಗೆ ಬುರ್ಖಾ ತೆಗೆದು ವೋಟರ್‌ ಐಡಿ ತೋರಿಸುವಂತೆ ಒತ್ತಡ ಹೇರಿದ್ದಕ್ಕಾಗಿ ಹೈದರಾಬಾದ್‌ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ (Madhavi Latha) ವಿರುದ್ಧ ಪ್ರಕರಣ ದಾಖಲಾಗಿದೆ.

    ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ (Loksabha Elections 2024) ಸ್ಪರ್ಧಿಸುತ್ತಿರುವ ಮಾಧವಿ ಲತಾ ಅವರು ಸೋಮವಾರ ಮತದಾನ ಕೇಂದ್ರದಲ್ಲಿ ಮುಸ್ಲಿಂ ಮಹಿಳೆಯರ ಬಳಿ ಹೋಗಿ ಬುರ್ಖಾ ತೆಗೆಯುವಂತೆ ಹೇಳುತ್ತಿರುವ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಭಾರೀ ವಿವಾದ ಸೃಷ್ಟಿಸಿತ್ತು.

    ವೈರಲ್ ಆದ ವೀಡಿಯೊದಲ್ಲಿ, ಮಾಧವಿ ಲತಾ ಅವರು ಬುರ್ಖಾ ಧರಿಸಿದ ಮುಸ್ಲಿಂ ಮಹಿಳೆಯರನ್ನು ಪರಿಶೀಲನೆಗಾಗಿ ತಮ್ಮ ಬುರ್ಖಾ ತೆಗೆಯುವಂತೆ ಹೇಳುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ನೀವು ಎಷ್ಟು ವರ್ಷಗಳ ಹಿಂದೆ ಇದನ್ನು (Voter ID) ಮಾಡಿದ್ದೀರಿ ಎಂದು ಇದೇ ವೇಳೆ ಮುಸ್ಲಿಂ ಮಹಿಳೆಯರನ್ನು ಪ್ರಶ್ನಿಸಿದ್ದಾರೆ. ಜೊತೆಗೆ ಹೆಚ್ಚಿನ ಪರಿಶೀಲನೆಗಾಗಿ ಆಧಾರ್‌ ಕಾರ್ಡ್‌ (Adhar Card) ಕೂಡ ಕೊಡುವಂತೆ ಮನವಿ ಮಾಡಿದ್ದಾರೆ.

    ಈ ದೃಶ್ಯ ವೈರಲ್‌ ಆಗುತ್ತಿದ್ದಂತೆಯೇ ಪ್ರತಿಕ್ರಿಯಿಸಿದ ಮಾಧವಿ ಲತಾ, ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ನಾನು ಒಬ್ಬಳು ಅಭ್ಯರ್ಥಿಯಾಗಿದ್ದು, ಕಾನೂನಿನ ಪ್ರಕಾರ ಮುಖಕ್ಕೆ ಮಾಸ್ಕ್ ಇಲ್ಲದೆ ಗುರುತಿನ ಚೀಟಿಗಳನ್ನು ಪರಿಶೀಲಿಸುವ ಹಕ್ಕು ಇದೆ. ಮುಸ್ಲಿಂ ಮಹಿಳೆಯರ ಬಳಿ ತಮ್ಮ ಬುರ್ಖಾವನ್ನು ತೆಗೆಯುವಂತೆ ಕೇಳುವುದು ದೊಡ್ಡ ವಿಷಯವಲ್ಲ, ಏಕೆಂದರೆ ನಾನು ಪರುಷ ಅಲ್ಲ, ತಾನೂ ಮಹಿಳೆಯಾಗಿದ್ದೇನೆ ಎಂದು ಅವರು ಹೇಳಿದ್ದಾರೆ.

    ದಯವಿಟ್ಟು ನಾನು ಐಡಿ ಕಾರ್ಡ್‌ಗಳನ್ನು ನೋಡಿ ಮತ್ತು ಪರಿಶೀಲಿಸಬಹುದೇ ಎಂದು ತುಂಬಾ ವಿನಮ್ರತೆಯಿಂದ ಅವರಲ್ಲಿ ವಿನಂತಿಸಿದ್ದೇನೆ. ಆದರೆ ಯಾರಿಗಾದರೂ ಅದನ್ನು ದೊಡ್ಡ ಸಮಸ್ಯೆಯನ್ನು ಮಾಡಬೇಕು ಎಂದು ಬಯಸಿದರೆ, ಅವರಿಗೆ ಭಯವಿದೆ ಎಂದು ಅರ್ಥ ಅಂತಾ ಮಾಧವಿ ಲತಾ ತಿಳಿಸಿದ್ದಾರೆ. ಇತ್ತ ವೀಡಿಯೋ ವೈರಲ್‌ ಆಗುತ್ತಾ ವಿವಾದವಾಗುತ್ತಿದ್ದಂತೆಯೇ ಮಾಧವಿ ಲತಾ ವಿರುದ್ಧ ಮಲಕಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಧರೆಗುರುಳಿದ ಬೃಹತ್ ಬಿಲ್ ಬೋರ್ಡ್- ಸಾವಿನ ಸಂಖ್ಯೆ 14ಕ್ಕೆ ಏರಿಕೆ

    ಈ ಹಿಂದೆ ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಮಸೀದಿಯತ್ತ ಬಾಣ ಬಿಡುವ ಕ್ರಿಯೆಯನ್ನು ಅನುಕರಿಸುವ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈ ಬೆನ್ನಲ್ಲೇ ಮಾಧವಿ ಲತಾ ಅವರು ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಒಟ್ಟಿನಲ್ಲಿ ಇದೀಗ ಮಾಧವಿ ಲತಾ ವಿರುದ್ಧ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಕೃತ್ಯಗಳನ್ನು ತಿಳಿಸುವ 295A ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ.

    ಮಾಧವಿ ಲತಾ ಅವರು ಹೈದರಾಬಾದ್‌ನ ಹಾಲಿ ಸಂಸದ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ಹಿರಿಯ ಬಿಆರ್‌ಎಸ್ ನಾಯಕ ಗದ್ದಂ ಶ್ರೀನಿವಾಸ್ ಯಾದವ್ ವಿರುದ್ಧ ಕಣಕ್ಕಿಳಿದಿದ್ದಾರೆ.

  • ತೀವ್ರ ಬಿಸಿಲು, ಬಿಸಿ ಗಾಳಿ- ತೆಲಂಗಾಣದಲ್ಲಿ ಮತದಾನದ ಸಮಯ ಬದಲಾವಣೆ

    ತೀವ್ರ ಬಿಸಿಲು, ಬಿಸಿ ಗಾಳಿ- ತೆಲಂಗಾಣದಲ್ಲಿ ಮತದಾನದ ಸಮಯ ಬದಲಾವಣೆ

    ಹೈದರಾಬಾದ್: ಲೋಕಸಭಾ ಚುನಾವಣೆಯ (Loksabha Elections 2024) ಕಾವು ಒಂದೆಡೆಯಾದರೆ ಇನ್ನೊಂದೆಡೆ ಬಿಸಿಲಿನ ಕಾವು ಜೋರಾಗಿದೆ. ವಿಪರೀತ ಬಿಸಿಲು ಹಾಗೂ ಬಿಸಿ ಗಾಳಿಯ ಹಿನ್ನೆಲೆಯಲ್ಲಿ ತೆಲಂಗಾಣದಲ್ಲಿ ಮತದಾನದ ಸಮಯದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ.

    ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಬಿಸಿಗಾಳಿ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಚುನಾವಣಾ ಆಯೋಗವು (ECI) ತೆಲಂಗಾಣದ (Telangana) ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನದ ಸಮಯವನ್ನು ವಿಸ್ತರಿಸಿದೆ. ಈ ಪ್ರಕಾರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ಮಾಡಲು ಅವಕಾಶ ಇರುತ್ತದೆ.

    ಏಳು ಹಂತದ ಚುನಾವಣೆಯ ನಾಲ್ಕನೇ ಸುತ್ತಿನಲ್ಲಿ ರಾಜ್ಯದ ಎಲ್ಲಾ 17 ಲೋಕಸಭಾ ಸ್ಥಾನಗಳಿಗೆ ಮೇ 13 ರಂದು ಮತದಾನ ನಡೆಯಲಿದೆ. ಮತದಾನದ ಸಮಯವು 12 ಲೋಕಸಭಾ ಕ್ಷೇತ್ರಗಳ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಮಾತ್ರ ಅನ್ವಯಿಸುತ್ತದೆ. ಕರೀಂನಗರ, ನಿಜಾಮಾಬಾದ್, ಜಹೀರಾಬಾದ್, ಮೇದಕ್, ಮಲ್ಕಾಜ್‌ಗಿರಿ, ಸಿಕಂದರಾಬಾದ್, ಹೈದರಾಬಾದ್, ಚೆವೆಲ್ಲಾ, ಮಹಬೂಬ್‌ನಗರ, ನಾಗರ್‌ಕರ್ನೂಲ್ (SC), ನಲ್ಗೊಂಡ ಮತ್ತು ಭೋಂಗಿರ್ ಲೋಕಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ.  ಇದನ್ನೂ ಓದಿ: ಅಮೇಥಿ, ರಾಯ್‌ಬರೇಲಿ ಹೈವೋಲ್ಟೇಜ್‌ ಕ್ಷೇತ್ರಗಳಿಗೆ ಇಂದು ಅಭ್ಯರ್ಥಿಗಳ ಘೋಷಣೆ ಸಾಧ್ಯತೆ!

    ಪರಿಷ್ಕೃತ ಮತದಾನದ ಸಮಯವು ಲೋಕಸಭಾ ಕ್ಷೇತ್ರಗಳೊಳಗಿನ ನಿರ್ದಿಷ್ಟ ವಿಧಾನಸಭಾ ವಿಭಾಗಗಳನ್ನು ಸಹ ಒಳಗೊಳ್ಳುತ್ತದೆ. ಆದಿಲಾಬಾದ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 5 ವಿಧಾನಸಭಾ ಕ್ಷೇತ್ರಗಳು, ಪೆದ್ದಪಲ್ಲೆ ಕ್ಷೇತ್ರದ 3 ಕ್ಷೇತ್ರಗಳು, ವಾರಂಗಲ್ (SC) ಕ್ಷೇತ್ರದಲ್ಲಿ 6, ಮಹಬೂಬಾಬಾದ್ (ST) ಕ್ಷೇತ್ರದಲ್ಲಿ 3 ಮತ್ತು ಖಮ್ಮಂ ಲೋಕಸಭಾ ಕ್ಷೇತ್ರದ 5 ಕ್ಷೇತ್ರಗಳು ನವೀಕರಿಸಿದ ಸಮಯಲ್ಲಿ ಮತದಾನ ಮಾಡಬಹುದಾಗಿದೆ.

    ರಾಜ್ಯದಲ್ಲಿ ಬಿಸಿ ಅಲೆ ಚಾಲ್ತಿಯಲ್ಲಿರುವ ಪರಿಸ್ಥಿತಿ ಮತ್ತು ಮತದಾರರ ಮತದಾನದ ಮೇಲೆ ಅದರ ಪರಿಣಾಮದ ಕುರಿತು ವಿವಿಧ ರಾಜಕೀಯ ಪಕ್ಷಗಳು ಮತ್ತು ಸ್ಪರ್ಧಿ ಅಭ್ಯರ್ಥಿಗಳಿಂದ ಪಡೆದ ಪ್ರಾತಿನಿಧ್ಯಗಳನ್ನು ಗಮನದಲ್ಲಿಟ್ಟುಕೊಂಡು ತೆಲಂಗಾಣ ಮುಖ್ಯ ಚುನಾವಣಾ ಅಧಿಕಾರಿಯ ಕೋರಿಕೆಯ ಮೇರೆಗೆ ಸಮಯವನ್ನು ಬದಲಾಯಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

    ರಾಜ್ಯವು ಆದಿಲಾಬಾದ್, ಪೆದ್ದಪಲ್ಲೆ, ಕರೀಂನಗರ, ನಿಜಾಮಾಬಾದ್, ಜಹೀರಾಬಾದ್, ಮೇದಕ್, ಮಲ್ಕಾಜ್‌ಗಿರಿ, ಸಿಕಂದರಾಬಾದ್, ಹೈದರಾಬಾದ್, ಚೆವೆಲ್ಲಾ, ಮಹೆಬೂಬ್‌ನಗರ, ನಾಗರ್‌ಕರ್ನೂಲ್, ನಲ್ಗೊಂಡ, ಭೋಂಗಿರ್, ವಾರಂಗಲ್, ಮಹಬೂಬಾಬಾದ್ ಮತ್ತು ಖಮ್ಮಮ್ ಎಂಬ 17 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.

  • ಕಾಂಡೋಮ್‌ಗಳನ್ನು ಮುಸ್ಲಿಮರೇ ಹೆಚ್ಚಾಗಿ ಬಳಸುತ್ತಾರೆ: ಓವೈಸಿ

    ಕಾಂಡೋಮ್‌ಗಳನ್ನು ಮುಸ್ಲಿಮರೇ ಹೆಚ್ಚಾಗಿ ಬಳಸುತ್ತಾರೆ: ಓವೈಸಿ

    ಹೈದರಾಬಾದ್:‌ ಮುಸ್ಲಿಮರು ಕಾಂಡೋಮ್‌ಗಳನ್ನು ಹೆಚ್ಚು ಬಳಸುತ್ತಾರೆ ಎಂದು ಆಲ್ ಇಂಡಿಯಾಮಜ್ಲಿ ಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ವಾಗ್ದಾಳಿ ನಡೆಸಿದ ಓವೈಸಿ, ಮುಸ್ಲಿಮರು ಶೀಘ್ರದಲ್ಲೇ ಬಹುಸಂಖ್ಯಾತರಾಗುತ್ತಾರೆ ಎಂಬ ಭಯವನ್ನು ನರೇಂದ್ರ ಮೋದಿ ಇನ್ನೂ ಹಿಂದೂಗಳಲ್ಲಿ ಹರಡಲು ಪ್ರಯತ್ನಿಸುತ್ತಿದ್ದಾರೆ. ಎಷ್ಟು ದಿನ ಮುಸ್ಲಿಮರ ಬಗ್ಗೆ ಭಯ ಹುಟ್ಟಿಸುತ್ತೀರಿ. ನಮ್ಮ ಧರ್ಮ ಬೇರೆ ಆಗಿರಬಹುದು ಆದರೆ, ನಾವು ಕೂಡ ಈ ದೇಶದ ನಿವಾಸಿಗಳು ಎಂದಿದ್ದಾರೆ.

    ಯಾಕೆ ದ್ವೇಷದ ಗೋಡೆ ಕಟ್ಟುತ್ತಿದ್ದೀರಿ?. ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೊಂದುತ್ತಾರೆ ಎಂಬ ಭಯವನ್ನು ಏಕೆ ಹರಡಲು ಪ್ರಯತ್ನಿಸುತ್ತಿದ್ದೀರಿ? ಮೋದಿ ಸರ್ಕಾರದ ಅಂಕಿ ಅಂಶಗಳ ಪ್ರಕಾರ, ಮುಸ್ಲಿಮರ ಜನಸಂಖ್ಯೆಯ ಬೆಳವಣಿಗೆ ದರ ಕುಸಿದಿದೆ ಎಂದಿದೆ. ಯಾಕೆಂದರೆ ಮುಸ್ಲಿಮರು ಕಾಂಡೋಮ್‌ಗಳನ್ನು ಹೆಚ್ಚಾಗಿ ಬಳಸುತ್ತಾರೆ. ಇದನ್ನು ಹೇಳಲು ನನಗೆ ಮುಜುಗರವಿಲ್ಲ ಎಂದು ಕಿಡಿಕಾರಿದರು.

    ಕಳೆದ ವಾರ ರಾಜಸ್ಥಾನದ ಬನ್ಸ್ವಾರಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ, ಹಿಂದೂಗಳ ಮಂಗಳ ಸೂತ್ರ ಮುಸ್ಲಿಮರ ಪಾಲಾಗಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ, ಹಿಂದೂ ಮಹಿಳೆಯ ಮಂಗಳಸೂತ್ರ ಸಹ ಉಳಿಯೋದಿಲ್ಲ ಅಂತಾ ಮೋದಿ ಹೇಳಿಕೆ ಕೊಟ್ಟಿದ್ದರು. ಇದನ್ನೂ ಓದಿ: ದೇಶವಾಸಿಗಳೇ ಎಚ್ಚರ, ಕಾಂಗ್ರೆಸ್‌ ನಿಮ್ಮ ಆಸ್ತಿ, ಚಿನ್ನದ ಮೇಲೆ ಕಣ್ಣಿಟ್ಟಿದೆ: ಮೋದಿ

  • ಓವೈಸಿ ವಿರುದ್ಧ ಅಖಾಡಕ್ಕೆ ಇಳಿದಿರೋ, ಮೋದಿ ಮೆಚ್ಚುಗೆ ಪಡೆದಿರೋ ಮಾಧವಿ ಲತಾ ಯಾರು?

    ಓವೈಸಿ ವಿರುದ್ಧ ಅಖಾಡಕ್ಕೆ ಇಳಿದಿರೋ, ಮೋದಿ ಮೆಚ್ಚುಗೆ ಪಡೆದಿರೋ ಮಾಧವಿ ಲತಾ ಯಾರು?

    ಲೋಕಸಭಾ ಚುನಾವಣೆಯ (Loksabha Elections 2024) ದಿನ ಸಮೀಪಿಸುತ್ತಿದ್ದಂತೆಯೇ ಅದರ ಕಾವು ರಂಗೇರಿದೆ. ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಪಕ್ಷದ ನಾಯಕರು ಪಣತೊಟ್ಟರೆ, ಇತ್ತ ಅಭ್ಯರ್ಥಿಗಳು ಕೂಡ ತಮ್ಮದೇ ಶೈಲಿಯಲ್ಲಿ, ವಿಭಿನ್ನ ರೀತಿಯಲ್ಲಿ ಪ್ರಚಾರಕ್ಕೆ ಇಳಿದಿದ್ದಾರೆ. ಈ ನಡುವೆ ಗಮನಾರ್ಹ ವಿಷಯ ಅಂದರೆ ಮುಸ್ಲಿಂ ಪ್ರಾಬಲ್ಯವಿರುವ ಹೈದರಾಬಾದ್ ಭದ್ರಕೋಟೆ ಬೇಧಿಸಲು ಬಿಜೆಪಿ ಈ ಬಾರಿ ವಿಭಿನ್ನ ಅಸ್ತ್ರವೊಂದನ್ನು ಪ್ರಯೋಗ ಮಾಡಿದೆ.

    ಹೌದು. ದೇಶದ ಅತಿಹೆಚ್ಚು ಜನಸಂಖ್ಯೆ ಇರುವ ಲೋಕಸಭಾ ಕ್ಷೇತ್ರಗಳಲ್ಲಿ ಹೈದರಾಬಾದ್‌ ಲೋಕಸಭಾ ಕ್ಷೇತ್ರ ಕೂಡ ಒಂದಾಗಿದೆ. ಈ ಕ್ಷೇತ್ರದಲ್ಲಿ ಅಸಾದುದ್ದೀನ್‌ ಓವೈಸಿ (Asaduddin Owaisi) ಕುಟುಂಬವು ಕಳೆದ 40 ವರ್ಷಗಳಿಂದ ಸತತ ಗೆಲುವಿನ ಮೂಲಕ ಭದ್ರಕೋಟೆ ನಿರ್ಮಿಸಿದೆ. ಈ ಕ್ಷೇತ್ರದ ಮತದಾರರ ಪೈಕಿ ಶೇ. 70 ರಷ್ಟು ಮುಸ್ಲಿಮರಿದ್ದಾರೆ. ಆದರೂ ಇಲ್ಲಿ ಬಿಜೆಪಿಯು ಮುಸ್ಲಿಮೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಲಕ್ಷಕ್ಕಿಂತಲೂ ಅಧಿಕ ಮತಗಳಿಸುವ ಮೂಲಕ ಪ್ರತಿಬಾರಿ ಅಸಾದುದ್ದೀನ್‌ ಓವೈಸಿ ಗೆಲುವನ್ನು ಕಠಿಣಗೊಳಿಸುತ್ತಾ ಬಂದಿದೆ. ಅಂತೆಯೇ ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಓವೈಸಿಗೆ ಟಫ್‌ ಫೈಟ್‌ ಕೊಡಲು ಸಜ್ಜಾಗಿದೆ. ಹಾಗಿದ್ರೆ ಈ ಮಾಧವಿ ಲತಾ ಯಾರು?, ಅವರ ಹಿನ್ನೆಲೆ ಏನು..?, ಮಾಧವಿ ಲತಾ ಅವರನ್ನೇ ಬಿಜೆಪಿ ಯಾಕೆ ಅಖಾಡಕ್ಕಿ ಇಳಿಸಿದೆ ಎಂಬುದನ್ನು ನೋಡೋಣ.

    ಮಾಧವಿ ಲತಾ ಯಾರು?: ಆರ್‌ಎಸ್‌ಎಸ್‌ನ ಕಟ್ಟಾ ಕಾರ್ಯಕರ್ತೆ, ಹೋರಾಟಗಾರ್ತಿ, ಭರತನಾಟ್ಯ ಕಲಾವಿದೆ ಮಾಧವಿ ಲತಾ (Madhavi Latha) ಅವರನ್ನು ಭಾರತೀಯ ಜನತಾ ಪಾರ್ಟಿ ಅಖಾಡಕ್ಕೆ ಇಳಿಸಿದೆ. ಈ ಮೂಲಕ ಓವೈಸಿ ವಿರುದ್ಧ ಈ ಬಾರಿ ಗೆಲ್ಲಲೇಬೇಕು ಎಂಬ ಹಠಕ್ಕೆ ಬಿಜೆಪಿ ಬಿದ್ದಂತಿದೆ.

    ನಿಜಾಮ್ ಕಾಲೇಜಿನಲ್ಲಿ ಸಾರ್ವಜನಿಕ ಆಡಳಿತದಲ್ಲಿ ಪದವಿ ಮತ್ತು ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಧವಿ ಲತಾ ಅವರು ಪಡೆದಿದ್ದಾರೆ. ಇವರ ಮೂವರು ಮಕ್ಕಳಲ್ಲಿ ಇಬ್ಬರು ಐಐಟಿ ಮದ್ರಾಸ್‌ನಲ್ಲಿ ಓದುತ್ತಿದ್ದಾರೆ. ಹೋಮ್‌ ಸ್ಕೂಲಿಂಗ್‌ ನಡೆಸಿಯೇ ಮಕ್ಕಳನ್ನು ಐಐಟಿಗೆ ಕಳುಹಿಸಿರುವುದು ವಿಶೇಷವಾಗಿದೆ.

    ವೃತ್ತಿಪರ ಭರತನಾಟ್ಯಂ ಡಾನ್ಸರ್‌ ಆಗಿರುವ 49 ವರ್ಷದ ಮಾಧವಿ ಲತಾ ಅವರು ಹೆಣ್ಣುಮಕ್ಕಳ ಶಿಕ್ಷಣದ ಪ್ರಾಯೋಜಕರಾಗಿದ್ದಾರೆ ಮತ್ತು ಆರೋಗ್ಯ ಶಿಬಿರಗಳನ್ನು ಆಯೋಜಿಸುವಲ್ಲಿ ಮತ್ತು ಪ್ರವಾಹ ನೆರವು ನೀಡುವಲ್ಲಿನ ಪ್ರಯತ್ನಗಳಿಗೆ ಹೆಸರುವಾಸಿಯಾಗಿದ್ದಾರೆ. ಪ್ರಸ್ತುತ ಹೈದರಾಬಾದ್ ಮೂಲದ ಪ್ರಮುಖ ಆರೋಗ್ಯ ಸಂಸ್ಥೆಯಾದ ವಿರಿಂಚಿ ಹಾಸ್ಪಿಟಲ್ಸ್‌ನ ಅಧ್ಯಕ್ಷರಾಗಿದ್ದಾರೆ. ರೋಗಿಗಳಿಗೆ ಹೆಚ್ಚಿನ ಶುಲ್ಕ ವಿಧಿಸಿದ ಆರೋಪದ ನಂತರ ಆರೋಗ್ಯ ಅಧಿಕಾರಿಗಳು ಕೋವಿಡ್‌-19 ಚಿಕಿತ್ಸೆಗಾಗಿ ಅದರ ಪರವಾನಗಿಯನ್ನು ರದ್ದುಗೊಳಿಸಿದಾಗ ವಿರಿಂಚಿ ಹಾಸ್ಪಿಟಲ್ಸ್‌ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

    ಮೋದಿ ಮೆಚ್ಚುಗೆ: ಮಾಧವಿ ಲತಾ ಅವರು 2019 ರಲ್ಲಿ ಕಾನೂನುಬಾಹಿರವಾದ ತ್ರಿವಳಿ ತಲಾಖ್ ವಿರುದ್ಧ ಸಕ್ರಿಯವಾಗಿ ಪ್ರಚಾರ ಮಾಡಿದರು. ಅವರು ಹಳೇ ಹೈದರಾಬಾದ್‌ನಲ್ಲಿ ಈ ಸಮಸ್ಯೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿ, ಈ ಪದ್ಧತಿಯನ್ನು ರದ್ದುಗೊಳಿಸುವಂತೆ ಮುಸ್ಲಿಂ ಹೆಣ್ಣುಮಕ್ಕಳೊಂದಿಗೆ ಸೇರಿ ಒತ್ತಾಯಿಸಿದ್ದರು. ಮಾಧವಿ ಲತಾ ಅವರ ಈ ನಡೆ ಪ್ರಧಾನಿ ನರೇಂದ್ರ ಮೋದಿಯವರ ಗಮನಸೆಳೆದಿತ್ತು. ಕೆಲ ತಿಂಗಳ ಹಿಂದೆ ಪ್ರಚಾರದ ವೇಳೆ ಬುರ್ಕಾ ಧರಿಸಿದ್ದ ಸಾಕಷ್ಟು ಮುಸ್ಲಿಂ ಹೆಣ್ಣುಮಕ್ಕಳು ಇವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದ ಫೋಟೋ ಕೂಡ ವೈರಲ್‌ ಆಗಿತ್ತು. ಒಟ್ಟಿನಲ್ಲಿ ಪಕ್ಷದ ವಲಯದಲ್ಲಿ ಗುರುತಿಸಿಕೊಳ್ಳದಿದ್ದರೂ ಹೊರಗೆ ತಮ್ಮ ವಾಕ್ಚಾತುರ್ಯದಿಂದ ಭಾರೀ ಪ್ರಸಿದ್ಧಿ ಪಡೆದಿದ್ದಾರೆ. ಈ ಕಾರಣದಿಂದ ಇಂದು ಇವರನ್ನು ಬಿಜೆಪಿ ಚುನಾವಣಾ ಅಖಾಡಕ್ಕೆ ಇಳಿಸಿರುವ ಸಾಧ್ಯತೆಗಳಿವೆ.

    ಇತ್ತೀಚೆಗೆ ಆಪ್‌ ಕೀ ಅದಾಲತ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಧವಿ ಲತಾಗೆ ಪ್ರಮುಖ ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಮುಸ್ಲಿಂ ಸಮುದಾಯದ ಆಂತರಿಕ ವಿಚಾರಗಳಲ್ಲಿ ನೀವು ಮೂಗು ತೂರಿಸೋದ್ಯಾಕೆ ಎಂದು ಪ್ರಶ್ನಿಸಲಾಗಿತ್ತು. ಇದಕ್ಕೆ ಕಡ್ಡಿಮುರಿದಂತೆ ಉತ್ತರ ನೀಡಿದ್ದ ಮಾಧವಿ ಲತಾ, ಮುಸ್ಲಿಂ ಹೆಣ್ಣುಮಕ್ಕಳು ಬೇರೆಯವರಲ್ಲ. ಅವರೂ ನಮ್ಮ ಪ್ರಜೆಗಳು. ದೇಶದ ಪ್ರಜೆಯಾಗಿ ನಾನು ಇದರ ಬಗ್ಗೆ ಮಾತನಾಡಬಹುದು ಎಂದಿದ್ದರು.

    ಟಿಕೆಟ್‌ ಘೋಷಣೆ ಬಳಿಕ ಲತಾ ಹೇಳಿದ್ದೇನು?: ವಿಶೇಷವೆಂದರೆ, ಮುಂಬರುವ ಲೋಕಸಭಾ ಚುನಾವಣೆ 2024 ರ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ಮಾಧವಿ ಲತಾ ಅವರು ಮಾರ್ಚ್ 2 ರವರೆಗೂ ರಾಜಕೀಯ ವಲಯಗಳಲ್ಲಿ ಹೆಚ್ಚು ಪರಿಚಿತರಾಗಿರಲಿಲ್ಲ. ಅಂದರೆ ಟಿಕೆಟ್‌ ಘೋಷಣೆ ಮಾಡುವ ವೇಳೆ ಮಾಧವಿ ಲತಾ ಬಿಜೆಪಿಯ ಸದಸ್ಯೆ ಕೂಡ ಆಗಿರಲಿಲ್ಲ. ಟಿಕೆಟ್‌ ಘೋಷಣೆ ಬಳಿಕ ಪ್ರತಿಕ್ರಿಯಿಸಿದ್ದ ಮಾಧವಿ, ಕಳೆದ ಒಂದು ವರ್ಷದಿಂದ ಪ್ರತಿದಿನ ಎಲ್ಲಾ ಪ್ರದೇಶಗಳಿಗೆ ಭೇಟಿ ನೀಡಿ 11 ರಿಂದ 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೇನೆ. ಇಲ್ಲಿ ಏನೂ ಇಲ್ಲ, ಸ್ವಚ್ಛತೆ ಇಲ್ಲ, ಶಿಕ್ಷಣವಿಲ್ಲ, ಮದರಸಾಗಳಲ್ಲಿ ಮಕ್ಕಳಿಗೆ ಆಹಾರವಿಲ್ಲ. ಮುಸ್ಲಿಂ ಮಕ್ಕಳು ಬಾಲ ಕಾರ್ಮಿಕರಾಗುತ್ತಿದ್ದಾರೆ. ಹಿಂದೂ ದೇವಾಲಯಗಳು ಮತ್ತು ಮನೆಗಳನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದರು.

    ಮತ್ತೊಂದೆಡೆ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಸಂಸದರಾಗಿರುವ ಅಸಾದುದ್ದೀನ್‌ ಓವೈಸಿ ಮತ್ತೊಮ್ಮೆ ಕಣಕ್ಕಿಳಿದಿದ್ದು, ಸುಲಭ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಬಿಆರ್‌ಎಸ್‌ನಿಂದಲೂ ಚಂದ್ರಶೇಖರ್‌ ರಾವ್‌ ಹಿಂದಿನಷ್ಟು ಆಕ್ರಮಣಕಾರಿ ಶೈಲಿಯಲ್ಲಿ ಪ್ರಚಾರ ಮಾಡದಿರುವುದು ಈ ಬಾರಿ ಕ್ಷೇತ್ರದಲ್ಲಿ ಇಬ್ಬರ ನಡುವಿನ ನೇರ ಹಣಾಹಣಿಗೆ ವೇದಿಕೆ ಸಿದ್ಧಗೊಳಿಸಬಹುದು. ಒಟ್ಟಿನಲ್ಲಿ ಹೈದರಾಬಾದ್‌ನಲ್ಲಿ ಜನರ ನಿರಂತರ ಸಂಪರ್ಕ ಹೊಂದಿರುವ ಮಾಧವಿ ಲತಾ, ಹಿಂದೂ ಫೈರ್‌ ಬ್ರಾಂಡ್‌ ನಾಯಕಿ ಕೂಡ ಹೌದು. ಓವೈಸಿ ವಿರುದ್ಧ ಸತತ ಹೋರಾಟ ಮಾಡುತ್ತಿರುವ ಅವರು ಈ ಬಾರಿಯ ಚುನಾವಣೆಯಲ್ಲಿ ಕಮಾಲ್‌ ಮಾಡಬಹುದು ಎನ್ನುವ ನಿರೀಕ್ಷೆ ಬಿಜೆಪಿಯದ್ದಾಗಿದೆ. ಮಾಧವಿ ಲತಾ ಮೂಲಕ ಮುಸ್ಲಿಂ ಮಹಿಳೆಯರನ್ನು ಓಲೈಸುವ ಬಿಜೆಪಿಯ ಲೆಕ್ಕಾಚಾರ ಫಲಿಸುವುದೇ ಎಂಬುದನ್ನು ಕಾದು ನೋಡಬೇಕಿದೆ.

    2019ರ ಫಲಿತಾಂಶ: ಒಟ್ಟು 7 ವಿಧಾನಸಭಾ ಕ್ಷೇತ್ರಗಳಿರುವ ಸ್ಟಾರ್‌ ಕ್ಷೇತ್ರ ಹೈದರಾಬಾದ್‌ ನಲ್ಲಿ ಮೇ 13 ರಿಂದ ಮತದಾನ ನಡೆಯಲಿದೆ. ಅಸಾದದುದ್ದೀನ್‌ ಓವೈಸಿ (ಎಐಎಂಐಎಂ), ಮಾಧವಿ ಲತಾ (ಬಿಜೆಪಿ) ಹಾಗೂ ಗದ್ದಂ ಶ್ರೀನಿವಾಸ್‌ ಯಾದವ್ (ಬಿಆರ್‌ಎಸ್‌) ಚುನಾವಣಾ ಕಣದಲ್ಲಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಭಗವಂತ ರಾವ್‌ ವಿರುದ್ಧ ಓವೈಸಿ ಅಭೂತಪೂರ್ವ ಗೆಲುವು ಸಾಧಿಸಿದ್ದರು.