ಹೈದರಾಬಾದ್: ಇಲ್ಲಿನ ಬೊಗ್ಗಲಕುಂಟೆಯ ಪಟಾಕಿ ಮಳಿಗೆಯೊಂದರಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಪಟಾಕಿ ಮಳಿಗೆ ಮುಂದೆ ನಿಲ್ಲಿಸಿದ್ದ 10ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿಯಾಗಿವೆ.
ಇನ್ನೂ ಸಮೀಪದ ಹೋಟೆಲ್‌ಗೆ ಬೆಂಕಿ ವ್ಯಾಪಿಸಿದ್ದರಿಂದ ಜನರು ಭಯಭೀತರಾಗಿ ಓಡಿದರು. ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ. ಘಟನೆಯಲ್ಲಿ ಮಹಿಳೆಗೆ ಗಂಭೀರ ಗಾಯವಾಗಿದ್ದು ಆಸ್ಪತೆಗೆ ದಾಖಲಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವೀಡಿಯೋ ಇಲ್ಲಿದೆ.
ಹೈದರಾಬಾದ್: ಇಲ್ಲಿನ (Hyderabad) ಹೋಟೆಲ್ ಒಂದರಲ್ಲಿ ಸ್ನೇಹಿತನ ಹುಟ್ಟುಹಬ್ಬದ ಆಚರಣೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಯೊಬ್ಬ (Student) ನಾಯಿಯೊಂದಿಗೆ (Dog) ತಮಾಷೆ ಮಾಡಲು ಹೋಗಿ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾನೆ.
ಮೃತ ಯುವಕನನ್ನು ಉದಯ್ ಕುಮಾರ್ (24) ಎಂದು ಗುರುತಿಸಲಾಗಿದೆ. ಆತ ಸ್ನೇಹಿತನ ಹುಟ್ಟುಹಬ್ಬದ ಆಚರಣೆಗಾಗಿ ಹೋಟೆಲ್‌ಗೆ ತೆರಳಿದ್ದ. ಈ ವೇಳೆ ಹೋಟೆಲ್‌ನ ಕಾರಿಡಾರ್‌ನಲ್ಲಿದ್ದ ನಾಯಿಯನ್ನು ನೋಡಿ ಅದನ್ನು ಅಟ್ಟಿಸಿಕೊಂಡು ಹೋಗಿದ್ದಾನೆ. ಈ ವೇಳೆ ನಾಯಿಯೂ ಓಡಿ ಹೋಗಿ ಬಲಕ್ಕೆ ತಿರುಗಿದೆ. ಆದರೆ ಉದಯ್ ವೇಗವಾಗಿ ಓಡಿ ಬಂದು, ವೇಗವನ್ನು ನಿಯಂತ್ರಿಸಲಾಗದೇ ಕಿಟಕಿಯಿಂದ ಕೆಳಕ್ಕೆ ಬಿದ್ದಿದ್ದಾನೆ. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಗಳಲ್ಲಿ ಉದಯ್ ತಮಾಷೆಗಾಗಿ ನಾಯಿಯನ್ನು ಕಾರಿಡಾರ್‌ನಲ್ಲಿ ಅಟ್ಟಿಸಿಕೊಂಡು ಹೋಗುತ್ತಿರುವುದು ಸೆರೆಯಾಗಿದೆ. ಈ ಸಂಬಂಧ ಚಂದಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೋಟೆಲ್‌ನ ಮೂರನೇ ಮಹಡಿಗೆ ನಾಯಿ ಹೇಗೆ ಬಂದಿದೆ ಎಂಬುದು ಸ್ಪಷ್ಟವಾಗಿಲ್ಲ. ಈ ಸಂಬಂಧ ಹೋಟೆಲ್ ಆಡಳಿತ ಮಂಡಳಿ ಮತ್ತು ಉದ್ಯೋಗಿಗಳ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ.
ಚಿಕ್ಕಮಗಳೂರು: ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿ ಕಾರೊಂದು 250 ಅಡಿ ಎತ್ತರದಿಂದ ಬಿದ್ದಿರುವ ಘಟನೆ ಚಿಕ್ಕಮಗಳೂರು (Chikkamgaluru) ತಾಲೂಕಿನ ದತ್ತಪೀಠ (Dattapeeta) ಮಾರ್ಗದ ಕವಿಕಲ್ ಗಂಡಿ ಬಳಿ ನಡೆದಿದೆ.
ತೆಲಂಗಾಣ (Telangana) ರಾಜ್ಯದ ನೋಂದಣಿ ಹೊಂದಿರುವ ಕಾರಾಗಿದ್ದು, ಗಾಯಾಳುಗಳು ಹೈದರಾಬಾದ್ ಮೂಲದವರು ಎಂಬ ಮಾಹಿತಿ ಈಗ ಲಭ್ಯವಾಗಿದೆ. 250 ಅಡಿ ಎತ್ತರದಿಂದ ಕಾರು ಬಿದ್ದರೂ ಕೂಡ ಕಾರಿನಲ್ಲಿದ್ದ ಸಣ್ಣ ಮಗು ಸೇರಿ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: Mysuru Dasara | ಜಂಬೂ ಸವಾರಿ ರೂಟ್ ಮ್ಯಾಪ್ ಹೇಗಿದೆ?
ಅಷ್ಟು ಎತ್ತರದ ಪ್ರದೇಶದಿಂದ ಬೀಳುವಾಗ ಗುಡ್ಡಗಾಡು ಪ್ರದೇಶದಲ್ಲಿದ್ದ ಮರಗಳು ಹಾಗೂ ಮರದ ರೆಂಬೆ ಕೊಂಬೆಗಳಿಗೆ ಬಡಿದು ನಿಧಾನವಾಗಿ ಕಾರು ಮೇಲಿನಿಂದ ಜಾರಿಕೊಂಡು ಸಾಗಿದೆ. ಹೀಗಾಗಿ ಕಾರು ಎತ್ತರದಿಂದ ಬಿದ್ದರೂ ಕೂಡ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದನ್ನೂ ಓದಿ: ರಾಜಕೀಯ ಪ್ರೇರಿತ ಕೇಸ್ ವಾಪಸ್ ಪಡೆದಿದ್ದೇವೆ: ಪ್ರಿಯಾಂಕ್ ಖರ್ಗೆ ಸಮರ್ಥನೆ
ಕಾರು ಬಿದ್ದ ಕೂಡಲೇ ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಹಾಗೂ ಸ್ಥಳಿಯರು ಭೇಟಿ ನೀಡಿ ಕಾರಿನಲ್ಲಿದ್ದವರನ್ನು ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಾರಾಂತ್ಯದ ಜೊತೆ 3 ದಿನ ರಜೆ ಸಿಕ್ಕ ಪರಿಣಾಮ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಹಾಗೂ ದತ್ತಪೀಠಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.
ಸುಮಾರು 900ಕ್ಕೂ ಅಧಿಕ ಕಾರುಗಳು, 300ಕ್ಕೂ ಅಧಿಕ ಬೈಕು ಹಾಗೂ 80ಕ್ಕೂ ಹೆಚ್ಚು ಟಿಟಿ ವಾಹನಗಳಲ್ಲಿ ಪ್ರವಾಸಿಗರು ಪಶ್ಚಿಮ ಘಟ್ಟಗಳ ತಪ್ಪಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
2023ರಲ್ಲಿ ತೆರೆ ಕಂಡಿದ್ದ ಸೂಪರ್ ಹಿಟ್ ಸಿನಿಮಾ ʻಜೈಲರ್ʼನಲ್ಲಿ (Jailer) ರಜನಿಕಾಂತ್ ಎದುರು ವಿಲನ್ ಆಗಿ ಅಬ್ಬರಿಸಿದ್ದ ಮಲಯಾಳಂ ನಟ ವಿನಾಯಕನ್ (Vinayakan) ಅವರನ್ನು ಅರೆಸ್ಟ್ ಮಾಡಲಾಗಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂಠಪೂರ್ತಿ ಕುಡಿದಿದ್ದ ವಿನಾಯಕನ್, ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ.
Reel life Villain #Vinayakan was detained by Police at RGIA #Airport in #Hyderabad for misbehaving with gate staff in a drunken state.
The ‘Jailer’ fame Malayalam actor Vinayakan was detained by the #RGIA Police on Saturday for allegedly misbehaving with the airport officials… pic.twitter.com/ODl1TAhiTb
ವಿನಾಯಕನ್ ಅವರು ಕೊಚ್ಚಿಯಿಂದ ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ಗೆ (Hyderabad Airport) ಆಗಮಿಸಿದ್ದರು. ಅಲ್ಲಿ ಇಂಡಿಗೋ ಸಿಬ್ಬಂದಿ ಜೊತೆಗೆ ಮೊದಲು ಅನುಚಿತವಾಗಿ ವರ್ತಿಸಿದ್ದಾರೆ. ಅವರು ವಿಪರೀತ ಕುಡಿದಿದ್ದರಿಂದ ಮೈಮೇಲೆ ಅರಿವೇ ಇಲ್ಲದಂತೆ ನಡೆದುಕೊಂಡಿದ್ದಾರೆ. ಅಲ್ಲಿನ ಸಿಬ್ಬಂದಿಗೆ ಅವರನ್ನು ನಿಯಂತ್ರಿಸುವುದು ಕಷ್ಟವಾಗಿದೆ. ಅಲ್ಲದೇ ಪ್ರಯಾಣಿಕರೊಂದಿಗೂ ಅಸಭುವಾಗಿ ವರ್ತಿಸಿದ್ದಾರೆ. ಈ ಬಗ್ಗೆ ದೂರು ನೀಡಿದ ಬಳಿಕ ಏರ್‌ಪೋರ್ಟ್ ಸಿಐಎಸ್‌ಎಫ್ (CISF) ಭದ್ರತಾ ಸಿಬ್ಬಂದಿ ವಿನಾಯಕನ್ ಅವರನ್ನು ವಶಕ್ಕೆ ಪಡೆದು, ಸ್ಥಳೀಯ ಏರ್‌ಪೋರ್ಟ್ ಪೊಲೀಸರಿಗೆ ಒಪ್ಪಿಸಿದ್ದಾರೆ.
ಅರೆಬೆತ್ತಲಾಗಿ ಕುಳಿತಿದ್ದ ನಟ:
ವಿಮಾನ ನಿಲ್ದಾಣದಲ್ಲಿ ಧರಿಸಿದ್ದ ಶರ್ಟ್ ಬಿಚ್ಚಿ ಅರೆಬೆತ್ತಲಾಗಿ ಕುಳಿತಿದ್ದ ವಿನಾಯಕನ್ ಅವರ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸದ್ಯ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಏರ್‌ಪೋರ್ಟ್ ಪೊಲೀಸ್ ಠಾಣೆಯ ಸಿಐ ಬಾಲರಾಜ್, ಪ್ರಕರಣ ದಾಖಲಾಗಿದ್ದು, ತನಿಖೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ ಪಕ್ಷವನ್ನು ಅಧಿಕೃತಗೊಳಿಸಿದ ಚುನಾವಣಾ ಆಯೋಗ
ಉತ್ತಮ ನಟ:
ಕಳೆದ 28 ವರ್ಷಗಳಿಂದ ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ವಿನಾಯಕನ್ ಅವರು ಮಲಯಾಳಂನ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿ, ಉತ್ತಮ ನಟ ಎನಿಸಿಕೊಂಡಿದ್ದಾರೆ. ʻಜೈಲರ್ʼ ಸಿನಿಮಾದಲ್ಲಿ ರಜನಿಕಾಂತ್ ಎದುರು ಖಳನಾಗಿ ನಟಿಸಿದ ಮೇಲೆ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಯಿತು. 2016ರಲ್ಲಿ ತೆರೆಕಂಡ ಮಲಯಾಳಂನ ʻಕಮ್ಮಟ್ಟಿಪಾಡಂʼ ಸಿನಿಮಾದ ನಟನೆಗಾಗಿ ವಿನಾಯಕನ್‌ಗೆ ಭಾರೀ ಮೆಚ್ಚುಗೆ ಸಿಕ್ಕಿತ್ತು. ಅದಕ್ಕಾಗಿ ಅವರು ಅತ್ಯುತ್ತಮ ನಟ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದರು. ಇದನ್ನೂ ಓದಿ: ಸದ್ದು ಮಾಡುತ್ತಿದೆ ಅನೀಶ್, ಮಿಲನಾ ನಾಗರಾಜ್ ನಟನೆಯ ‘ಆರಾಮ್ ಅರವಿಂದ ಸ್ವಾಮಿ’ ಚಿತ್ರದ ಪೋಸ್ಟರ್
ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ವಿನಾಯಕನ್, ಸದ್ಯ ವಿಕ್ರಮ್ ನಟನೆಯ ಆಕ್ಷನ್ ಥ್ರಿಲ್ಲರ್ ಸಿನಿಮಾ ʻಧ್ರುವನಚ್ಚತ್ತಿರಂʼ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಬಳಿಕ ತೆಕ್ಕು ವಡಕ್ಕು, ಕರಿಂತಂದನ್ ಮಲಯಾಳಂ ಸಿನಿಮಾಗಳಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಲು ಕಾಲ್‌ಶೀಟ್ ಕೊಟ್ಟಿದ್ದಾರೆ. ಇದನ್ನೂ ಓದಿ: ಅಂಬಾನಿ ಮನೆಯ ಗಣೇಶ ಹಬ್ಬದ ಸಂಭ್ರಮದಲ್ಲಿ ಬಾಲಿವುಡ್ ಸ್ಟಾರ್ಸ್
ಭೊಪಾಲ್: ಮಧ್ಯಪ್ರದೇಶದ ಜಬಲ್‍ಪುರದಿಂದ ತೆಲಂಗಾಣದ ಹೈದರಾಬಾದ್‍ಗೆ (Hyderabad) ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ (IndiGo Flight) ಬಾಂಬ್ ಬೆದರಿಕೆ ಹಾಕಲಾಗಿದ್ದು, ನಾಗ್ಪುರದಲ್ಲಿ (Nagpur) ತುರ್ತು ಭೂಸ್ಪರ್ಶ ಮಾಡಲಾಗಿದೆ.
ಇಂಡಿಗೋ ವಿಮಾನ ಸಂಸ್ಥೆ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, 6ಇ-7308 ವಿಮಾನ ಜಬಲ್‍ಪುರದಿಂದ ಹೈದರಾಬಾದ್‍ಗೆ ತೆರಳುತ್ತಿತ್ತು. ವಿಮಾನದ ಶೌಚಾಲಯದಲ್ಲಿ ಬಾಂಬ್ ಬೆದರಿಕೆ ಪತ್ರ ಸಿಕ್ಕಿದ್ದು, ನಾಗ್ಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು ಎಂದು ತಿಳಿಸಿದೆ.
ಬಾಂಬ್ ಬೆದರಿಕೆ ಸಂದೇಶವನ್ನು ಕಾಗದದಲ್ಲಿ ಬರೆದು ವಿಮಾನದ ಶೌಚಾಲಯದಲ್ಲಿ ಇಡಲಾಗಿತ್ತು. ತುರ್ತು ಭೂಸ್ಪರ್ಶದ ಬಳಿಕ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಿ ತಪಾಸಣೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಪೂರ್ಣ ಪರಿಶೀಲನೆಯ ನಂತರ ಅನುಮಾನಾಸ್ಪದ ವಸ್ತುಗಳು ಏನೂ ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ ಪರಿಶೀಲನೆ ಮುಗಿದಿದ್ದು, ವಿಮಾನ ಹೈದರಾಬಾದ್‍ಗೆ ತೆರಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿ ನಟ ದರ್ಶನ್ (Darshan) ಜೈಲಿನಲ್ಲಿದ್ದುಕೊಂಡೇ ರೌಡಿಶೀಟರ್ ಮೊಬೈಲ್‌ನಿಂದ ವಿಡಿಯೋ ಕಾಲ್ ಮಾಡಿರುವುದು ಬೆಳಕಿಗೆ ಬಂದಿತ್ತು. ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆಗೆ (Police Investigation) ಮುಂದಾಗಿದ್ದಾರೆ. ಬುಧವಾರ ದರ್ಶನ್ ವಿಚಾರಣೆಯನ್ನೂ ನಡೆಸಿದ್ದಾರೆ. ಆದ್ರೆ ತನಿಖಾಧಿಕಾರಿಗಳ ಮುಂದೆ ದರ್ಶನ್ ಜಾಣನಡೆ ತೋರಿದ್ದಾರೆ ಎಂದು ತಿಳಿದುಬಂದಿದೆ.
ಅಸಲಿಗೆ ನನ್ನ ಕೋಣೆಗೆ ಬಂದಿದ್ಯಾರು ಅನ್ನೋದೇ ಗೊತ್ತಿಲ್ಲ. ನಾನು ಮಾತನಾಡಿದ ವ್ಯಕ್ತಿಯೇ ನನಗೆ ಗೊತ್ತಿಲ್ಲ ಅಂತ ದರ್ಶನ್ ಹೇಳಿದ್ದಾರಂತೆ. ಅಷ್ಟೇ ಅಲ್ಲ. ಕರೆ ಮಾಡಿದವನು ಯಾರು ಎಂಬುದೇ ಗೊತ್ತಿಲ್ಲ. ವೀಡಿಯೋ ಕಾಲ್ (Video Call) ಮಾಡಿಕೊಂಡು ಬಂದ, ದರ್ಶನ್ ಸರ್ ಇದ್ದಾರೆ ಅಂತ ಹೇಳ್ಕೊಂಡು ಬಂದ, ಹಾಗೆಯೇ ನನ್ನ ಕಡೆ ಮೊಬೈಲ್ ತಿರುಗಿಸಿದ. ಆದ್ದರಿಂದ ನಾನು ವಿಶ್ ಮಾಡಿದೆ ಅಷ್ಟೇ ಎಂದಿದ್ದಾರೆ. ಇದನ್ನೂ ಓದಿ: Exclusive Video | ಜೈಲಲ್ಲಿದ್ದುಕೊಂಡೇ ವೀಡಿಯೊ ಕಾಲ್ – 25 ಸೆಕೆಂಡುಗಳ ಆ ವೀಡಿಯೋನಲ್ಲಿ ಏನಿದೆ?
ಏನಿದು ಆರೋಪ?
ಇದೇ ಆಗಸ್ಟ್ 25 ರಂದು ಆರೋಪಿ ನಟ ದರ್ಶನ್ ಜೈಲಿನಲ್ಲಿದ್ದುಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎನ್ನಲಾದ ಫೋಟೋವೊಂದು ಭಾರೀ ಬೆಳಕಿಗೆ ಬಂದಿತ್ತು. ಈ ಬೆನ್ನಲ್ಲೇ ದರ್ಶನ್ ಮೊಬೈಲ್‌ನಲ್ಲಿ ವೀಡಿಯೋ ಕಾಲ್ (Video Call) ಮೂಲಕ ಆಪ್ತರೊಬ್ಬರ ಜೊತೆ ಮಾತನಾಡಿರುವ ವೀಡಿಯೋ ಸಹ ವೈರಲ್ ಆಗಿತ್ತು. ಅತ್ಯಾಪ್ತವಾಗಿ ಮಾತನಾಡಿದ್ದ ದರ್ಶನ್, ಊಟ ಆಯ್ತಾ ಚಿನ್ನ, ಆರಾಮಾಗಿದ್ದೀನಿ ಅಂತ ಹೇಳಿದ್ದರು. ಸುಮಾರು 25 ಸೆಕೆಂಡುಗಳ ಈ ವೀಡಿಯೋ ಇದಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ದರ್ಶನ್ ಜೊತೆ ಜೈಲಲ್ಲಿ ಪೋಸ್ ಕೊಟ್ಟ ರೌಡಿಶೀಟರ್ ನಾಗ ಧರಿಸಿದ್ದ ಟಿ-ಶರ್ಟ್ ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಾ!
ಬೆಂಗಳೂರು: ಜೈಲಿನಲ್ಲಿದ್ದುಕೊಂಡು ನಟ ದರ್ಶನ್ ಐಷಾರಾಮಿ ಜೀವನ ನಡೆಸುತ್ತಿರೋ ಫೋಟೋ ಭಾರೀ ಚರ್ಚೆ ಹುಟ್ಟುಹಾಕಿರುವ ಬೆನ್ನಲ್ಲೇ ಮತ್ತೊಂದು ವೀಡಿಯೋ ವೈರಲ್ ಆಗಿದೆ. ನಟ ದರ್ಶನ್‌ನಿಂದ (Darshan) ವೀಡಿಯೊ ಕಾಲ್ ಮಾಡಿರುವ ವೀಡಿಯೋ ʻಪಬ್ಲಿಕ್ ಟಿವಿʼಗೆ (Public TV) ಲಭ್ಯವಾಗಿದೆ. ಇದರಿಂದ ನಟ ದರ್ಶನ್‌ಗೆ ಇನ್ನಷ್ಟು ಸಂಕಷ್ಟ ಎದುರಾಗಬಹುದು ಎನ್ನಲಾಗಿದೆ. ಇದನ್ನೂ ಓದಿ: ʻಡೆವಿಲ್ʼ ದರ್ಶನ್ ಜೈಲಿನಲ್ಲೂ ಬಿಂದಾಸ್ ಲೈಫು – ಕಾಸು ಕೊಟ್ರೆ ಎಲ್ಲವೂ ಖುಲ್ಲಂ ಖುಲ್ಲನಾ..?
ಹೌದು. ಜೈಲಿನಲ್ಲಿರುವ ದರ್ಶನ್ ಮೊಬೈಲ್‌ನಲ್ಲಿ ವೀಡಿಯೋ ಕಾಲ್ (Video Call) ಮೂಲಕ ಆಪ್ತರೊಬ್ಬರ ಜೊತೆ ವೀಡಿಯೊ ಮಾತನಾಡಿದ್ದಾರೆ. ಅತ್ಯಾಪ್ತವಾಗಿ ಮಾತಾಡಿರೊ ದರ್ಶನ್, ಊಟ ಆಯ್ತಾ ಚಿನ್ನ, ಆರಾಮಾಗಿದ್ದೀನಿ ಅಂತ ಮಾತುಕತೆ ನಡೆಸಿದ್ದಾರೆ. ಒಂದು ವೀಡಿಯೋ ಕಾಲ್‌ನಲ್ಲಿ ಸುಮಾರು 25 ಸೆಕೆಂಡುಗಳ ಕಾಲ ಮಾತನಾಡಿದ್ದಾರೆ. ಈ ವೀಡಿಯೋ ʻಪಬ್ಲಿಕ್ ಟಿವಿʼಗೆ ಲಭ್ಯವಾಗಿದೆ. ಇದನ್ನೂ ಓದಿ: Exclusive Video | ಸೆಂಟ್ರಲ್ ಜೈಲಲ್ಲಿ ಕೊಲೆ ಆರೋಪಿ ದರ್ಶನ್ ಬಿಂದಾಸ್?
ಜೈಲಿನ ನಿಯಮಾವಳಿಗಳೇನು?
* ಆರೋಪಿಗಳನ್ನು ಭೇಟಿ ಮಾಡಬೇಕಾದರೇ ವಾರದಲ್ಲಿ ಎರಡು ದಿನ ಕುಟುಂಬದವರಿಗೆ ಅವಕಾಶ.
* ಕುಟುಂಬ ಹೊರತುಪಡಿಸಿ ಅಡ್ವೋಕೇಟ್ ಒಬ್ಬರಿಗೆ ಆರೋಪಿಯನ್ನು ಭೇಟಿ ಮಾಡಲು ಅವಕಾಶ.
* ಇದನ್ನ ಹೊರತುಪಡಿಸಿ ಮತ್ತ್ಯಾರಿಗೂ ಭೇಟಿಗೆ ಅವಕಾಶ ಕೊಡುವುದಿಲ್ಲ.
* ಕುಟುಂಬದವರು ಭೇಟಿಯಾಗುವ ವೇಳೆ ಬಟ್ಟೆ ಮತ್ತು ಹಣ್ಣುಗಳನ್ನು ಮಾತ್ರ ಕೊಡಲು ಅವಕಾಶ.
* ಬೇಕರಿ ಐಟಂ ಅಥವಾ ಊಟ ಕೊಡುವುದಕ್ಕೆ ಅವಕಾಶವಿಲ್ಲ.
* ದಿಂಬು ಅಥವಾ ಬೆಡ್ ಶೀಟ್ ಚಾಪೆ ಬೆಡ್ ಇದ್ಯಾವುದಕ್ಕೂ ಅವಕಾಶವಿಲ್ಲ.
* ಸಾಮಾನ್ಯ ಖೈದಿಗಳು ಮತ್ತು ಆರೋಪಿಗಳು ಸಾಮಾನ್ಯವಾಗಿ ಊಟದ ಅಥವಾ ತಿಂಡಿ ಸಮಯದಲ್ಲಿ ಭೇಟಿ ಮಾಡಬಹುದು.
* ವಿಐಪಿ ಆರೋಪಿಗಳು ಬೇರೆ ರೌಡಿಶೀಟರ್‌ಗಳ ಜೊತೆ ಭೇಟಿ ಮಾಡಲು ಅವಕಾಶವಿಲ್ಲ.
* ಅದರಲ್ಲೂ ವಿಶೇಷ ಭದ್ರತಾ ಕೊಠಡಿಯಲ್ಲಿ ಇರಬೇಕಾದರೆ ಅಲ್ಲಿ ಬೇರೆ ಆರೋಪಿಗಳಿಗೆ ಅವಕಾಶ ಇರುವುದಿಲ್ಲ.
* ವಿಐಪಿ ಕೊಠಡಿ ಜೈಲಿನ ಮುಖ್ಯ ದ್ವಾರದ ಬಳಿ ಇರುವುದರಿಂದ ಉಳಿದ ಖೈದಿಗಳು ಭೇಟಿ ಮಾಡಲು ಅವಕಾಶವಿಲ್ಲ.
* ವಿಐಪಿ ಸೆಲ್‌ನಲ್ಲಿರುವ ವಿಐಪಿಗಳನ್ನ ಜೈಲಿನಲ್ಲಿ ಕೆಲಸ ಮಾಡುವ ಸಿಬ್ಬಂದಿ ಸಹ ಮಾತನಾಡಲು ಅವಕಾಶವಿಲ್ಲ
* ಸಾಮಾನ್ಯ ಖೈದಿಗಳು ಬ್ಯಾರಕ್ ಇರುವ ಕೊಠಡಿಗಳ ಬಳಿ ಭೇಟಿ ಮಾಡಬಹುದು.
* ಅತಿ ಸೂಕ್ಷ್ಮ ಪ್ರಕರಣದಲ್ಲಿ ಜೈಲಿಗೆ ಹೋಗಿರುವ ಖೈದಿಗಳನ್ನ ಬೇರೆ ಯಾರು ಭೇಟಿ ಮಾಡೋದಕ್ಕೆ ಅವಕಾಶವಿಲ್ಲ.
* ನ್ಯಾಯಾಲಯದ ಅನುಮತಿ ಇದ್ದರೇ ಮಾತ್ರ ಮನೆ ಊಟ ಅಥವಾ ಬೇರೆ ಆರೋಗ್ಯದ ವಿಚಾರವಾಗಿ ಅವಕಾಶ ಮಾಡಿಕೊಡುತ್ತಾರೆ.
* ಬ್ಯಾರಕ್ ಹೊರಗೆ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅವಕಾಶ ಇಲ್ಲ
* ಜೈಲಿನೊಳಗು ಕುರ್ಚಿಯಲ್ಲಿ ಕುಳಿತುಕೊಳ್ಳಲು ಅವಕಾಶವಿಲ್ಲ
* ಟೀ ಕಪ್ ಸಹ ಕೈದಿಗಳಿಗೆ ನೀಡಲ್ಲ, ಮನೆಯವರು ತಂದು ಕೊಡಲು ಅವಕಾಶವಿಲ್ಲ
ಆಂತರಿಕ ತನಿಖೆಗೆ ಆದೇಶ:
ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ಹಾಗೂ ರೌಡಿಗಳ ಜೊತೆ ಫೋಟೊ ವೈರಲ್ ಬೆನ್ನಲ್ಲೇ ಆಂತರಿಕ ತನಿಖೆಗೆ ಕಾರಾಗೃಹಗಳ ಡಿ.ಜಿ ಮಾಲಿನಿ ಕೃಷ್ಣಮೂರ್ತಿ ಆದೇಶ ನೀಡಿದ್ದಾರೆ. ರಾಜಾತಿಥ್ಯ ನೀಡಿದ ವಿಚಾರ ಹಾಗೂ ರೌಡಿಗಳ ಜೊತೆ ಇರಲು ಬಿಟ್ಟಿದ್ದು ಯಾರು? ಅನ್ನೋದನ್ನ ಜೈಲಿಗೆ ತೆರಳಿ ಪರಿಶೀಲನೆ ನಡೆಸಿ ವರದಿ ನೀಡಲು ಸೂಚನೆ ನೀಡಲಾಗಿದೆ. ಪೊಲೀಸ್ ಅಧಿಕಾರಿಗಳಾದ ಆನಂದ್ ರೆಡ್ಡಿ ಹಾಗೂ ಸೋಮಶೇಖರ್‌ಗೆ ಸೂಚನೆ ನೀಡಿದ್ದು, ಬಹುತೇಕ ಸೋಮವಾರ ಅಥವಾ ಇವತ್ತು (ಭಾನುವಾರ) ರಾತ್ರಿಯೇ ಜೈಲಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಅಧಿಕಾರಿಗಳ ವಿಚಾರಣೆ, ಸಿಸಿ ಕ್ಯಾಮೆರಾಗಳ ಪರಿಶೀಲನೆ ನಡೆಸಿ, ಏನೆಲ್ಲಾ ರಾಜಾತಿಥ್ಯ ನೀಡಲಾಗಿತ್ತು ಅನ್ನೋ ಕುರಿತಾಗಿ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ.
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿಂದಲೇ ಸೋರಿಕೆ ಆಗಿರುವ ದರ್ಶನ್ (Actor Darshan) ಐಷಾರಾಮಿ ಜೀವನ ನಡೆಸ್ತಿರೋ ಫೋಟೋ ಹತ್ತಾರು ಚರ್ಚೆಗಳಿಗೆ ಕಾರಣವಾಗಿದೆ. ಇದರಿಂದ ನಟ ದರ್ಶನ್‌ಗೆ ಇನ್ನಷ್ಟು ಸಂಕಷ್ಟ ಎದುರಾಗಬಹುದು ಎನ್ನಲಾಗಿದೆ. ಫೋಟೋ ಸಂಬಂಧ ಈಗಾಗಲೇ ಆಂತರಿಕ ತನಿಖೆಗೂ ಆದೇಶ ನೀಡಲಾಗಿದ್ದು, ಅಧಿಕಾರಿಗಳಿಗೆ ಕಂಟಕ ಎದುರಾಗಲಿದೆ.
ಅಬ್ಬಾಬ್ಬ ಈ ಫೋಟೋ ನೋಡಿದ್ರೆ.. ಎಂತಹವರಿಗೂ ಇದು ಜೈಲಾ? ಯಾವುದೋ ರೆಸಾರ್ಟ್ ಇರಬೇಕು ಅಂತ ಫೀಲ್ ಆಗುತ್ತೆ.. ಅಷ್ಟರ ಮಟ್ಟಿಗೆ ಕೊಲೆ ಆರೋಪಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappana Agrahara Jail) ಲೈಫ್ ಲೀಡ್ ಮಾಡ್ತಿದ್ದಾರೆ. ಇದನ್ನೂ ಓದಿ: Exclusive Video | ಸೆಂಟ್ರಲ್ ಜೈಲಲ್ಲಿ ಕೊಲೆ ಆರೋಪಿ ದರ್ಶನ್ ಬಿಂದಾಸ್?
ನಟ ದರ್ಶನ್ ಹೊರಗೆ ಹೇಗೆಲ್ಲಾ ಬಿಂದಾಸ್ ಜೀವನ ನಡೆಸ್ತಿದ್ರೋ, ಅದೇ ರೀತಿ ಜೈಲಲ್ಲಿಯೂ ಇರುವಂತೆ ಕಾಣ್ತಿದೆ. ದರ್ಶನ್‌ಗೆ ಬೇಕಿರೋ ವ್ಯವಸ್ಥೆಗಳೆಲ್ಲಾ ಮಾಡಿಕೊಡ್ತಿರೋ ಶಂಕೆಗೆ ಜೈಲಿಂದ ಸೋರಿಕೆ ಆಗಿರುವ ಫೋಟೋಗಳು ಕಾರಣವಾಗಿದೆ. ಅಷ್ಟಕ್ಕೂ ಜೈಲು ನಿಯಮ ಏನು ಹೇಳುತ್ತದೆ? ವಿಚಾರಣಾಧೀನ ಕೈದಿಗೆ ಏನೆಲ್ಲಾ ಸವಲತ್ತು ಸಿಗುತ್ತವೆ? ಏನೆಲ್ಲಾ ಸಿಗಲ್ಲ ಅನ್ನೋದನ್ನು ನೋಡೋಣ..
ಜೈಲು ನಿಯಮ ಏನು ಹೇಳುತ್ತದೆ?
* ವಿಚಾರಣಾಧೀನ ಕೈದಿಗೆ ಅಗತ್ಯ ವಸ್ತು ಹೊರತುಪಡಿಸಿ ಉಳಿದ ಸೌಲಭ್ಯ ನೀಡುವಂತಿಲ್ಲ
* ಕೋರ್ಟ್ ಅನುಮತಿಯಿಲ್ಲದೇ ಮನೆಯೂಟ ಸೇರಿ ಇತರೆ ಸೌಲಭ್ಯಗಳಿಗೆ ಅವಕಾಶ ಇಲ್ಲ
* ಜೈಲಿನ ಲಾನ್‌ನಲ್ಲಿ ಚೇರ್-ಟೀಪಾಯಿ ಹಾಕಿಕೊಂಡು ಕುಳಿತು ಮಾತನಾಡುವ ವ್ಯವಸ್ಥೆ ಮಾಡುವಂತಿಲ್ಲ
* ಜೈಲಿನ ಎಲ್ಲೆಂದರಲ್ಲಿ ಕುಳಿತು ಸಿಗರೇಟ್.. ಬೀಡಿ ಸೇವನೆ ಮಾಡುವಂತಿಲ್ಲ
* ಜೈಲಿಗೆ ಸಿಗರೇಟು, ಮಾದಕ ವಸ್ತು, ಮದ್ಯ ಸರಬರಾಜು… ಸೇವನೆ ಶಿಕ್ಷಾರ್ಹ ಅಪರಾಧ
* ವಿಚಾರಣಾಧೀನ ಕೈದಿ ವಿಐಪಿ ಸೆಲ್‌ನಲ್ಲಿದ್ದರೂ ಸ್ಪೆಷಲ್ ಸೆಕ್ಯೂರಿಟಿ ಕೊಡುವಂತಿಲ್ಲ..
ಗ್ಯಾಂಗ್‌ಸ್ಟರ್‌ಗಳ ಜೊತೆ ನಾನು ಕಾಣಿಸಿಕೊಂಡ್ರೆ ಜನ ಏನಂತಾರೆ ಅನ್ನೊ ಸಣ್ಣ ಪಶ್ಚಾತ್ತಾಪವಾದ್ರು ದರ್ಶನ್‌ಗೆ ಇರಬೇಕಿತ್ತು. ಜೈಲಲ್ಲಿ ಕಾಸು ಕೊಟ್ರೆ ಏನು ಬೇಕಾದ್ರು ಕೊಡ್ತಾರೆ. ಜೈಲಿನಿಂದ ಬೊರಬರಲು ಹಾತೋರೆಯುತ್ತಿರುವ ದರ್ಶನ್‌ಗೆ ಈ ಫೋಟೋ ಸಹ ಸಂಕಷ್ಟ ತಂದೊಡ್ಡಬಹುದು. ದರ್ಶನ್‌ಗೆ ಗ್ಯಾಂಗ್‌ಸ್ಟರ್‌ಗಳು, ರೌಡಿಗಳ ಜೊತೆ ನಂಟಿದೆ, ಹೊರಗೆ ಬಂದ್ರೆ ಸಾಕ್ಷಿಗಳಿಗೆ ಬೆದರಿಕೆ ಹಾಕ್ತಾರೆ ಬೇಲ್ ಕೊಡಬೇಡಿ ಅಂತಾ ಎಸ್‌ಪಿಪಿಗೆ ವಾದಿಸೋಕೆ ಇದೊಂದೇ ಪೋಟೊ ಸಾಕು ಅಂತಾರೆ ನಿವೃತ್ತ ಎಸ್ಪಿ ಎಸ್.ಕೆ ಉಮೇಶ್. ಇದನ್ನೂ ಓದಿ: ಅಲ್ತಾಫ್‌ನನ್ನು ಮುಸ್ಲಿಂ ಸಮುದಾಯದಿಂದ ಬಹಿಷ್ಕರಿಸಲು ತೀರ್ಮಾನ: ಮುಸ್ಲಿಂ ಮುಖಂಡ
ಆಂತರಿಕ ತನಿಖೆಗೆ ಆದೇಶ:
ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ಹಾಗೂ ರೌಡಿಗಳ ಜೊತೆ ಫೋಟೊ ವೈರಲ್ ಬೆನ್ನಲ್ಲೇ ಆಂತರಿಕ ತನಿಖೆಗೆ ಕಾರಾಗೃಹಗಳ ಡಿ.ಜಿ ಮಾಲಿನಿ ಕೃಷ್ಣಮೂರ್ತಿ ಆದೇಶ ನೀಡಿದ್ದಾರೆ. ರಾಜಾತಿಥ್ಯ ನೀಡಿದ ವಿಚಾರ ಹಾಗೂ ರೌಡಿಗಳ ಜೊತೆ ಇರಲು ಬಿಟ್ಟಿದ್ದು ಯಾರು? ಅನ್ನೋದನ್ನ ಜೈಲಿಗೆ ತೆರಳಿ ಪರಿಶೀಲನೆ ನಡೆಸಿ ವರದಿ ನೀಡಲು ಸೂಚನೆ ನೀಡಲಾಗಿದೆ. ಪೊಲೀಸ್ ಅಧಿಕಾರಿಗಳಾದ ಆನಂದ್ ರೆಡ್ಡಿ ಹಾಗೂ ಸೋಮಶೇಖರ್‌ಗೆ ಸೂಚನೆ ನೀಡಿದ್ದು, ಬಹುತೇಕ ಸೋಮವಾರ ಅಥವಾ ಇವತ್ತು (ಭಾನುವಾರ) ರಾತ್ರಿಯೇ ಜೈಲಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಅಧಿಕಾರಿಗಳ ವಿಚಾರಣೆ, ಸಿಸಿ ಕ್ಯಾಮೆರಾಗಳ ಪರಿಶೀಲನೆ ನಡೆಸಿ, ಏನೆಲ್ಲಾ ರಾಜಾತಿಥ್ಯ ನೀಡಲಾಗಿತ್ತು ಅನ್ನೋ ಕುರಿತಾಗಿ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ.
ಜೈಲು ಮ್ಯಾನ್ಯುವೆಲ್ ಹೇಳೋದೇನು?
ಕೋರ್ಟ್ ನಿರ್ದೇಶನ ಕೊಡದೇ ಹೊರಗಿನ ಯಾವ ವಸ್ತುಗಳನ್ನೂ ವಿಚಾರಣಾಧೀನ ಕೈದಿ ಮತ್ತು ಸಾಮಾನ್ಯ ಕೈದಿಗೆ ಕೊಡುವ ಹಾಗಿಲ್ಲ. ವಿಐಪಿ ಸೆಲ್ ನಲ್ಲಿ ಇದ್ದರೂ ವಿಶೇಷ ಭದ್ರತೆ ಕೊಡುವಂತಿಲ್ಲ. ಸ್ಪೆಷಲ್ ಸೆಕ್ಯೂರಿಟಿ ಕೊಡುವಂತೆ ಕೋರ್ಟ್ ಡೈರೆಕ್ಷನ್ ಕೊಡಬೇಕು. ಸಿಗರೇಟು, ಮಾದಕ ವಸ್ತು ಮತ್ತು ಮದ್ಯ ಜೈಲಿನೊಳಗೆ ಹೋಗೋದು ಅಪರಾಧ. ಅದನ್ನು ಸೇವಿಸಿದ್ದು ಸಾಬೀತಾದರೆ ಶಿಕ್ಷೆ. ವಿಪಿಐ ಸೆಲ್ ನಲ್ಲಿ ಇರುವವರಿಗೆ ಒಳ್ಳೆಯ ಕಾಟ್, ಬೆಡ್, ಟಿವಿ, ಫ್ಯಾನ್ ಕೊಡಬಹುದು. ಆದರೆ, ಲ್ಯಾನ್ ನಲ್ಲಿ ಕೂತು ಮಾತಾಡುವಂಥ ವ್ಯವಸ್ಥೆ ಮಾಡುವಂತಿಲ್ಲ. ರೌಡಿಗಳ ಜೊತೆ ಮತ್ತು ಇತರ ಕೈದಿಗಳ ಜೊತೆ ಮಾತಾಡಬಹುದು. ಆದರೆ, ಲ್ಯಾನ್ ನಲ್ಲಿ ಚೇರ್ ಹಾಕಿಕೊಂಡು ಕೂತು ಮಾತಾಡುವಂತಿಲ್ಲ. ಸಾಕ್ಷ್ಯನಾಶದಂತ ವಿಷಯಗಳನ್ನು ಮಾತಾಡುವಂತಿಲ್ಲ. ಸಿಗರೇಟು ಒಳಗೆ ಬಂದಿದ್ದು ಮತ್ತು ಅವನು ಅದನ್ನು ಉಪಯೋಗಿಸ್ತಾ ಇರೋದು ಸಾಬೀತಾದರೆ.. ಜೈಲಾಧಿಕಾರಿ ಮೇಲೆ ಆಕ್ಷನ್ ತಗೋಬೋದು.
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಬಂಧನಕ್ಕೆ ಒಳಗಾಗಿರುವ ನಟ ದರ್ಶನ್‌ಗೆ (Darshan) ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದಂತೆ ದರ್ಶನ್ ಜೈಲಿನಲ್ಲಿರೋದು ಎನ್ನಲಾದ ಫೋಟೋವೊಂದು ʻಪಬ್ಲಿಕ್ ಟಿವಿʼಗೆ (Public TV) ಲಭ್ಯವಾಗಿದೆ.
ಹೌದು.. ಪರಪ್ಪನ ಅಗ್ರಹಾರದಲ್ಲಿರುವ ಆರೋಪಿ ನಟ ದರ್ಶನ್‌ಗೆ ರಾಜಾತಿಥ್ಯ ನೀಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ಫೋಟೋವೊಂದು ಲಭ್ಯವಾಗಿದೆ. ಈ ಫೋಟೋದಲ್ಲಿ ದರ್ಶನ್ ಜೈಲಿನ ಬ್ಯಾರಕ್‌ನಿಂದ ಹೊರಗೆ ರೌಡಿಗಳ ಜೊತೆ ಕುಳಿತು ಸಿಗರೇಟ್ ಸೇದುತ್ತಿರುವುದು ಕಂಡುಬಂದಿದೆ. ವಿಲ್ಸನ್ ಗಾರ್ಡನ್ ನಾಗನ ಜೊತೆ ದರ್ಶನ್ ಕುಳಿತಿದ್ದಾರೆ. ಒಂದು ಕೈಯಲ್ಲಿ ಸಿಗರೇಟ್, ಮತ್ತೊಂದು ಕೈಯಲ್ಲಿ ಕಾಫಿ ಮಗ್ ಹಿಡಿದು ವಿಗ್ ಇಲ್ಲದ ಲುಕ್‌ನಲ್ಲಿ ದರ್ಶನ್ ಕುಳಿತಿರುವ ಫೋಟೋ ʻಪಬ್ಲಿಕ್ ಟಿವಿʼಗೆ ಲಭ್ಯವಾಗಿದೆ.
ಫೋಟೋ ಬೆಳಕಿಗೆ ಬರುತ್ತಿದ್ದಂತೆ ಇದೇನು ಜೈಲಾ ಇಲ್ಲ ರೆಸಾರ್ಟಾ? ಅನ್ನೋ ಪ್ರಶ್ನೆ ಎದ್ದಿದೆ. ಜೈಲಿನಲ್ಲಿ ಎಲ್ಲವೂ ಖುಲ್ಲಂ ಖುಲ್ಲ, ʻಜೈಲುʼ ಅನ್ನೋದು ಉಳ್ಳವರಿಗೆ ಎಲ್ಲಾ ಸವಲತ್ತು ನೀಡುವ ಕಾಮಧೇನು? ದುಡ್ಡು ಕೊಟ್ರೆ ಏನೂ ಬೇಕಾದ್ರೂ ಸಿಗುತ್ತೆ ಅನ್ನೋದಕ್ಕೆ ಈ ಫೋಟೋವೊಂದು ಕನ್ನಡಿಯಂತಾಗಿದೆ. ದರ್ಶನ್ ಅವರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಂತೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಆದ್ರೆ ದರ್ಶನ್ ಅಭಿಮಾನಿಗಳು ಎಂದಿನಂತೆ ಸಮರ್ಥಿಸಿಕೊಂಡಿದ್ದಾರೆ.
ಜೈಲಲ್ಲಿ ನಾಗ-ದರ್ಶನ್ ಭೇಟಿ:
ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್‌ರನ್ನ ವಿಐಪಿ ಸೆಕ್ಯುರಿಟಿ ಸೆಲ್-1ನಲ್ಲಿ ಹಾಗೂ ರೌಡಿ ಶೀಟರ್ ವಿಲ್ಸನ್‌ಗಾರ್ಡನ್ ನಾಗನನ್ನ ಬ್ಯಾರಕ್ 3 ರಲ್ಲಿ ಇರಿಸಲಾಗಿದೆ. ಹೀಗಿದ್ದರೂ ಜೈಲಲ್ಲಿ ದರ್ಶನ್-ನಾಗನ ಭೇಟಿಯಾಗಿದೆ. ಇಬ್ಬರೂ ಜೈಲಲ್ಲಿ ಕೂತು ಕಾಲಹರಣ ಮಾಡಿದ್ದಾರೆ ಎನ್ನಲಾಗಿದೆ.
ಅಲ್ಲದೇ ದರ್ಶನ್‌ಗೆ ಆರಂಭದಿಂದಲೂ ಜೈಲಲ್ಲಿ ರಾಜಾತೀಥ್ಯ ನೀಡಲಾಗುತ್ತಿದೆ ಎಂಬ ಆರೋಪವೂ ಇದೆ. ರೌಡಿ ಶೀಟರ್ ನಾಗನೇ ದರ್ಶನ್ ರಾಜಾತಿಥ್ಯಕ್ಕೆ ಉಸ್ತುವಾರಿಯಾಗಿದ್ದಾನೆ. ಸಾಮಾನ್ಯ ಕೈದಿಗಳಿಗೆ ಒಂದು ರೀತಿಯ ಊಟ ಇದ್ದರೆ, ನಟ ದರ್ಶನ್‌ಗೆ ಅಂತಾನೇ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿದೆ. ಬಿಸಿ ನೀರು, ಮೊಟ್ಟೆ, ಹಾಲು, ಸಿಗರೇಟ್, ಮಲಗೋಕೆ ವಿಶೇಷ ಹಾಸಿಗೆ ಕೂಡ ವ್ಯವಸ್ಥೆ ಮಾಡಲಾಗಿದೆ. ನೆಪ ಮಾತ್ರಕ್ಕೆ ಕೋರ್ಟ್‌ಗೆ ಮನೆ ಊಟ ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು ಎಂದು ಉತ್ತನ ಮೂಲಗಳು ತಿಳಿಸಿವೆ.
ಎಲ್ಲಿ ಬೇಕಾದ್ರೂ ತಿರುಗಾಡಬಹುದಿತ್ತಂತೆ:
ವಿಐಪಿ ಸೆಲ್‌ನಲ್ಲಿದ್ದರೂ ನಟ ದರ್ಶನ್ ಮತ್ತು ವಿಲ್ಸನ್ ಗಾರ್ಡನ್ ನಾಗ ಎಲ್ಲಿ ಬೇಕಾದರೂ ತಿರುಗಾಡಬಹುದಿತ್ತಂತೆ. ಜೊತೆಗೆ ಕೆಲ ಕೈದಿಗಳನ್ನೂ ದರ್ಶನ್ ಸಹಾಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಜೈಲಾಧಿಕಾರಿಗಳು ಯಾರೂ ಕೂಡ ಪ್ರಶ್ನೆ ಮಾಡುತ್ತಿರಲಿಲ್ಲ ಎಂಬ ರಹಸ್ಯಗಳೂ ಮೂಲಗಳಿಂದ ತಿಳಿದುಬಂದಿವೆ.
Pained by the unlawful manner of demolition carried out in respect of N Convention, contrary to existing stay orders and Court cases.
I thought it fit to issue this statement to place on record certain facts for protecting my reputation and to indicate that we have not done any…
10 ಎಕರೆ ಜಾಗದಷ್ಟು ಎನ್ ಕನ್ವೆನ್ಷನ್ ಸೆಂಟರ್ ಹಲವಾರು ಭೂ ಬಳಕೆ ಹಾಗೂ ಪರಿಸರ ನಿಮಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ. ಜೊತೆಗೆ 1.2 ಎಕರೆ ತುಮ್ಮಿಡ್ಕುಂಟಾ ಕೆರೆಯನ್ನು (Tummidikunta Lake) ಒತ್ತುವರಿ ಮಾಡಿಕೊಳ್ಳಲಾಗಿತ್ತು. 2 ಎಕರೆ ಬಫರ್ ವಲಯವನ್ನು ಬಳಸಿಕೊಂಡು ಎನ್ ಕನ್ವೆನ್ಷನ್ ಸೆಂಟರ್‌ನ್ನು ನಿರ್ಮಾಣ ಮಾಡಿದ್ದಾರೆ ಎಂದು ಆರೋಪ ಬಂದಿತ್ತು. ಇದೀಗ ಹೈಡ್ರಾ ಸಂಸ್ಥೆಯ ಅಧಿಕಾರಿಗಳು ಸುಮಾರು ಮೂರುವರೆ ಎಕರೆ ಜಾಗದಲ್ಲಿರುವ ಎನ್ ಕನ್ವೆನ್ಷನ್ ಸೆಂಟರ್‌ನ್ನು ತೆರವುಗೊಳಿಸಿದ್ದಾರೆ.ಇದನ್ನೂ ಓದಿ: ಶೂಟಿಂಗ್ ಸೆಟ್‌ನಲ್ಲಿ ಅವಘಡ- ರವಿತೇಜಗೆ ಕೈಗೆ ಗಾಯ
ಅಕ್ಕಿನೇನಿ ನಾಗಾರ್ಜುನ ಅವರು ತಮ್ಮ ಎಕ್ಸ್ (X) ಖಾತೆಯಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಪೋಸ್ಟ್ ಮಾಡಿದ್ದಾರೆ. ಕಾನೂನು ಉಲ್ಲಂಘಿಸುವ ಯಾವುದೇ ತಪ್ಪನ್ನು ನಾನು ಮಾಡಿಲ್ಲ. ವಿವಾದ ಕೋರ್ಟ್ನಲ್ಲಿದ್ದರೂ ತೆರವು ಮಾಡಲಾಗಿದೆ. ನನ್ನ ವಿರುದ್ಧ ಆದೇಶ ಬಂದಿದ್ದರೆ ನಾನೇ ತೆರವು ಮಾಡಿಕೊಳ್ಳುತ್ತಿದ್ದೆ. ಆದರೆ ತೆರವುಗೊಳಿಸಿರುವುದು ಅತೀವ ನೋವನ್ನುಂಟು ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ನಾನು ನ್ಯಾಯಾಲಯದಿಂದ ಸೂಕ್ತ ಪರಿಹಾರವನ್ನು ಕೋರುತ್ತೇವೆ ಎಂದು ಬರೆದುಕೊಂಡಿದ್ದಾರೆ.