Tag: Hyderabad

  • ಪುಷ್ಪ 2 ಪ್ರೀಮಿಯರ್‌ ಶೋ ವೇಳೆ ಕಾಲ್ತುಳಿತ; ಓರ್ವ ಮಹಿಳೆ ಸಾವು

    ಪುಷ್ಪ 2 ಪ್ರೀಮಿಯರ್‌ ಶೋ ವೇಳೆ ಕಾಲ್ತುಳಿತ; ಓರ್ವ ಮಹಿಳೆ ಸಾವು

    – ಜನರನ್ನು ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಜ್‌

    ಹೈದರಾಬಾದ್:‌ ಸ್ಟರ್‌ ನಟ ಅಲ್ಲು ಅರ್ಜುನ್‌ ಅಭಿನಯದ ಪುಷ್ಪ 2 ಪ್ರೀಮಿಯರ್‌ ಶೋ (Pushpa 2) ವೇಳೆ ಕಾಲ್ತುಳಿತ ಸಂಭವಿಸಿ ಓರ್ವ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ.

    ಹೈದರಾಬಾದ್‌ನ RTC ಕ್ರಾಸ್‌ರೋಡ್ಸ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಈ ದುರಂತ ಸಂಭವಿಸಿತು. ದಿಲ್‌ಸುಖ್‌ನಗರದ ರೇವತಿ ಮೃತ ಮಹಿಳೆ. ಪತಿ ಭಾಸ್ಕರ್ ಮತ್ತು ಇಬ್ಬರು ಮಕ್ಕಳೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದರು. ಇದನ್ನೂ ಓದಿ: ವೈವಾಹಿಕ ಜೀವನಕ್ಕೆ ಕಾಲಿಟ್ಟ ನಾಗಚೈತನ್ಯ, ಶೋಭಿತಾ – ನಾಗಾರ್ಜುನ ಭಾವುಕ

    ರಾತ್ರಿ 10:30 ರ ಸುಮಾರಿಗೆ ಥಿಯೇಟರ್‌ನಲ್ಲಿ ಪ್ರೇಕ್ಷಕರು ಕಿಕ್ಕಿರಿದು ನೆರೆದಿದ್ದರು. ಸಿನಿಮಾ ಸ್ಕ್ರೀನಿಂಗ್‌ನಲ್ಲಿ ಅಲ್ಲು ಅರ್ಜುನ್ ಹಾಜರಿದ್ದರು. ಈ ವೇಳೆ ನೂಕುನುಗ್ಗಲು ಜಾಸ್ತಿಯಾಗಿ ಕಾಲ್ತುಳಿತ ಸಂಭವಿಸಿತು. ಪರಿಣಾಮವಾಗಿ 39 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಆಕೆಯ ಚಿಕ್ಕ ಮಗನ ಸ್ಥಿತಿ ಗಂಭೀರವಾಗಿದೆ.

    ಜನರ ಗುಂಪನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್‌ ನಡೆಸಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಗಾಯವಾಗಿದ್ದು, ಬಾಲಕನ ಸ್ಥಿತಿ ಗಂಭೀರವಾಗಿದೆ. ಇದನ್ನೂ ಓದಿ: ಶ್ರೀಲೀಲಾಗೆ ಚಿತ್ರರಂಗದಲ್ಲಿ ಉತ್ತಮ ಭವಿಷ್ಯವಿದೆ: ಹೊಗಳಿದ ಅಲ್ಲು ಅರ್ಜುನ್

  • ವೈವಾಹಿಕ ಜೀವನಕ್ಕೆ ಕಾಲಿಟ್ಟ ನಾಗಚೈತನ್ಯ, ಶೋಭಿತಾ – ನಾಗಾರ್ಜುನ ಭಾವುಕ

    ವೈವಾಹಿಕ ಜೀವನಕ್ಕೆ ಕಾಲಿಟ್ಟ ನಾಗಚೈತನ್ಯ, ಶೋಭಿತಾ – ನಾಗಾರ್ಜುನ ಭಾವುಕ

    ಹೈದರಾಬಾದ್: ಕೆಲ ವರ್ಷಗಳ ಡೇಟಿಂಗ್ ಬಳಿಕ ತೆಲುಗು ನಟ ನಾಗಚೈತನ್ಯ (Naga Chaitanya) ಮತ್ತು ನಟಿ ಶೋಭಿತಾ (Sobhita Dhulipala)  ಡಿಸೆಂಬರ್ 4ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ವೇಳೆ ಮಗನ ಮದುವೆ ಕಂಡು ತಂದೆ ನಾಗಾರ್ಜುನ (Nagarjuna Akkineni) ಭಾವುಕರಾಗಿದ್ದಾರೆ.

    ಡಿಸೆಂಬರ್ 4ರಂದು ರಾತ್ರಿ 8:15ಕ್ಕೆ ನಾಗಚೈತನ್ಯ ಹಾಗೂ ಶೋಭಿತಾ ಸಪ್ತಪದಿ ತುಳಿದಿದ್ದಾರೆ. ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿರುವ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಪ್ರತಿಮೆ ಮುಂದೆ ನಾಗಚೈತನ್ಯ ಹಾಗೂ ಶೋಭಿತಾ ಕಲ್ಯಾಣ ನಡೆದಿದೆ. ತಂದೆ ನಾಗಾರ್ಜುನ ಮುಂದೆ ನಿಂತು ಮಗನ ಎರಡನೇ ಮದುವೆ ನಡೆಸಿದ್ದಾರೆ.

    ಮಗನ ಮದುವೆ ಫೋಟೋ ಎಕ್ಸ್‌ನಲ್ಲಿ ಹಂಚಿಕೊಂಡು ನಾಗಾರ್ಜುನ ಭಾವುಕರಾಗಿದ್ದಾರೆ. ಮಗನ ಮದುವೆ ಭಾವನಾತ್ಮಕ ಕ್ಷಣ. ನನ್ನ ಪ್ರೀತಿಯ ಚೈಗೆ ಅಭಿನಂದನೆಗಳು ಹಾಗೇ ಕುಟುಂಬಕ್ಕೆ ಸ್ವಾಗತ ಶೋಭಿತಾ. ನೀವಿಬ್ಬರು ನಮ್ಮ ಜೀವನದಲ್ಲಿ ತುಂಬಾ ಸಂತೋಷವನ್ನು ತಂದಿದ್ದೀರಿ ಎಂದು ಬರೆದು ಎಕ್ಸ್‌ನಲ್ಲಿ ನಾಗಾರ್ಜುನ ಪೋಸ್ಟ್ ಮಾಡಿದ್ದಾರೆ.

    ನಾಗಚೈತನ್ಯ ಹಾಗೂ ಶೋಭಿತಾ ಕಲ್ಯಾಣಕ್ಕೆ ಕೇವಲ 400 ಅತಿಥಿಗಳಿಗೆ ಮಾತ್ರ ಮದುವೆ ಆಹ್ವಾನ ನೀಡಲಾಗಿತ್ತು. ಅಲ್ಲು ಅರ್ಜುನ್, ರಾಮ್ ಚರಣ್ ದಂಪತಿ, ಮಹೇಶ್ ಬಾಬು ದಂಪತಿ, ಪ್ರಭಾಸ್, ರಾಜಮೌಳಿ, ಪಿ.ವಿ ಸಿಂಧೂ ಸೇರಿ ಹಲವು ಗಣ್ಯರು ನವದಂಪತಿಗೆ ಶುಭಕೋರಿದರು.

  • ಹುಟ್ಟೂರಿಗೆ ಶೋಭಿತಾ ಮೃತದೇಹ – ಇಂದು ಅಂತ್ಯಕ್ರಿಯೆ

    ಹುಟ್ಟೂರಿಗೆ ಶೋಭಿತಾ ಮೃತದೇಹ – ಇಂದು ಅಂತ್ಯಕ್ರಿಯೆ

    ಹಾಸನ: ಹೈದರಾಬಾದ್‌ನಲ್ಲಿ (Hyderabad) ಆತ್ಮಹತ್ಯೆಗೆ ಶರಣಾಗಿದ್ದ ನಟಿ ಶೋಭಿತಾ (Shobhitha Shivanna) ಮೃತದೇಹವನ್ನ ಹುಟ್ಟೂರಾದ ಹಾಸನ (Hassan) ಜಿಲ್ಲೆ ಸಕಲೇಶಪುರ ತಾಲೂಕಿನ ಹೆರೂರು ಗ್ರಾಮಕ್ಕೆ ತರಲಾಗಿದೆ.

    ಶೋಭಿತಾ ನಿವಾಸದೆದುರು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹೆರೂರು (Herur) ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. ಶೋಭಿತಾ ಮೃತದೇಹ ನೋಡುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಇದನ್ನೂ ಓದಿ: ಚಿತ್ರದುರ್ಗದಲ್ಲಿ ವ್ಯಾಪಕ ಮಳೆ; ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

    ಇಂದೇ ಶೋಭಿತಾ ಅಂತ್ಯಕ್ರಿಯೆ ನಡೆಯಲಿದೆ. ಕಳೆದ ಎರಡು ದಿನಗಳ ಹಿಂದೆ ಹೈದರಾಬಾದ್‌ನಲ್ಲಿ ನಟಿ ಶೋಭಿತಾ ಆತ್ಮಹತ್ಯೆಗೆ ಶರಣಾಗಿದ್ದರು. ಶೋಭಿತಾ ತಾಯಿ, ಮೂವರು ಸಹೋದರಿಯರು ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ. ಇದನ್ನೂ ಓದಿ:  ಅಕ್ರಮ ಆಸ್ತಿ ಗಳಿಕೆ ಆರೋಪ – ಇಂದು ‘ಲೋಕಾ’ ವಿಚಾರಣೆಗೆ ಹಾಜರಾಗ್ತಾರಾ ಜಮೀರ್?

  • ತಮ್ಮನಿಂದಲೇ ಮಹಿಳಾ  ಕಾನ್‌ಸ್ಟೆಬಲ್ ಕೊಲೆ – ಮರ್ಯಾದಾ ಹತ್ಯೆ ಶಂಕೆ

    ತಮ್ಮನಿಂದಲೇ ಮಹಿಳಾ ಕಾನ್‌ಸ್ಟೆಬಲ್ ಕೊಲೆ – ಮರ್ಯಾದಾ ಹತ್ಯೆ ಶಂಕೆ

    ಹೈದರಾಬಾದ್‌: ತೆಲಂಗಾಣ (Telangana) ಪೊಲೀಸ್ (Police) ಇಲಾಖೆಯ ಮಹಿಳಾ‌ ಕಾನ್‌ಸ್ಟೆಬಲ್ ಒಬ್ಬರನ್ನು ನಡುರಸ್ತೆಯಲ್ಲಿಯೇ ಆಕೆಯ ಸಹೋದರ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹೈದರಾಬಾದ್‌ನ ಇಬ್ರಾಹಿಂಪುರದಲ್ಲಿ ನಡೆದಿದೆ.

    ಇತ್ತೀಚೆಗೆ ಪ್ರೇಮ ವಿವಾಹವಾಗಿದ್ದ ಮಹಿಳಾ ಕಾನ್‌ಸ್ಟೆಬಲ್ ಹಯಾತ್‌ನಗರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ದ್ವಿಚಕ್ರ ವಾಹನದಲ್ಲಿ ಕರ್ತವ್ಯಕ್ಕೆ ತೆರಳುತ್ತಿರುವ ವೇಳೆ ಈ ಹತ್ಯೆ ನಡೆದಿದ್ದು, ಈ ಕೊಲೆಯನ್ನು ಮರ್ಯಾದಾ ಹತ್ಯೆ ಪ್ರಕರಣವೆಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕಾರಿನಲ್ಲಿ ಬಂದಿದ್ದ ಆರೋಪಿ ಹಿಂದಿನಿಂದ ಮಹಿಳೆಯ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದಾನೆ. ಆಕೆ ಕೆಳಗೆ ಬಿದ್ದಾಗ ಚಾಕುವಿನಿಂದ ಕುತ್ತಿಗೆಗೆ ಚುಚ್ಚಿ ಕೊಲೆ ಮಾಡಿದ್ದಾನೆ. ಇದು ಮರ್ಯಾದಾ ಹತ್ಯೆಯ ಪ್ರಕರಣವೇ ಎಂಬುವುದರ ತನಿಖೆ ನಡೆಸುತ್ತಿದ್ದೇವೆ. ಮೃತ ಮಹಿಳೆ ಮತ್ತು ಸಹೋದರನ ನಡುವೆ ಜಮೀನಿನ ವಿಚಾರವಾಗಿ ಗಲಾಟೆ ನಡೆದಿರುವ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

    ನಾವು ಮದುವೆಯಾದರೆ ಕೊಲೆ ಮಾಡುವುದಾಗಿಯೂ ಆಕೆಯ ಸಹೋದರ ಬೆದರಿಕೆ ಹಾಕಿದ್ದ ಎಂದು ಮಹಿಳೆಯ ಪತಿ ಆರೋಪಿಸಿದ್ದಾರೆ. ಇಂದು (ಸೋಮವಾರ) ಕೆಲಸಕ್ಕೆ ತೆರೆಳಿದ ಬಳಿಕ ಪತ್ನಿಗೆ ನಾನು ಕರೆ ಮಾಡಿದ್ದೆ. ಈ ವೇಳೆ ನನ್ನ ಸಹೋದರ ನನ್ನನ್ನು ಕೊಲ್ಲಲು ಬಂದಿದ್ದಾನೆ ಎಂದು ಅವಳು ನನಗೆ ಕರೆಯಲ್ಲಿ ಹೇಳಿದ್ದಳು. ಅದಾದ ಬಳಿಕ ಸಂಪರ್ಕ ಕಡಿತಗೊಂಡಿತ್ತು ಎಂದು ಅವರು ತಿಳಿಸಿದ್ದಾರೆ.

  • ಮೂರು ಪೂರಿ ಒಟ್ಟಿಗೆ ತಿನ್ನಲು ಹೋಗಿ ಗಂಟಲಿಗೆ ಸಿಕ್ಕಿಕೊಂಡು 11ರ ಬಾಲಕ ಸಾವು

    ಮೂರು ಪೂರಿ ಒಟ್ಟಿಗೆ ತಿನ್ನಲು ಹೋಗಿ ಗಂಟಲಿಗೆ ಸಿಕ್ಕಿಕೊಂಡು 11ರ ಬಾಲಕ ಸಾವು

    ಹೈದರಾಬಾದ್: 11 ವರ್ಷದ ಬಾಲಕ ಪೂರಿ ತಿಂದು ಸಾವನ್ನಪ್ಪಿರುವ ಘಟನೆ ತೆಲಂಗಾಣದ (Telangana) ಸಿಕಂದರಾಬಾದ್‌ನ (Secunderabad) ಶಾಲೆಯೊಂದರಲ್ಲಿ ನಡೆದಿದೆ.

    ಮೃತ ಬಾಲಕನನ್ನು 6ನೇ ತರಗತಿಯ ವಿಕಾಸ್ ಜೈನ್ ಎಂದು ಗುರುತಿಸಲಾಗಿದೆ.

    ಸಿಕಂದರಾಬಾದ್‌ನ ತಿವೋಲಿ ಥಿಯೇಟರ್ ಬಳಿ ಇರುವ ಶಾಲೆಯಲ್ಲಿ ವಿಕಾಸ್ ಜೈನ್ 6ನೇ ತರಗತಿಯಲ್ಲಿ ಓದುತ್ತಿದ್ದ. ಮನೆಯಿಂದ ತಂದ ಪೂರಿಯನ್ನು ಮಧ್ಯಾಹ್ನ ಊಟದ ಸಮಯದಲ್ಲಿ ತಿನ್ನುವಾಗ ಈ ಘಟನೆ ಸಂಭವಿಸಿದೆ.ಇದನ್ನೂ ಓದಿ: ಡಾ ಹಗರಣದ ಲೋಕಾಯುಕ್ತ ವರದಿ ಇಂದು ಹೈಕೋರ್ಟ್‌ಗೆ ಸಲ್ಲಿಕೆ – ಸಿಬಿಐ ಅಂಗಳಕ್ಕೆ ತನಿಖೆ ಶಿಫ್ಟ್?

    ಸೋಮವಾರ (ನ.25) ಶಾಲೆಯಲ್ಲಿ ಮಧ್ಯಾಹ್ನ ಊಟದ ವೇಳೆ ಮೂರು ಪೂರಿ ಒಟ್ಟಿಗೆ ತಿಂದ ಪರಿಣಾಮ ಬಾಲಕನಿಗೆ ಉಸಿರುಗಟ್ಟಿ ನೆಲಕ್ಕೆ ಕುಸಿದಿದ್ದಾನೆ. ಎಷ್ಟೇ ಎಚ್ಚರಗೊಳಿಸಿದರೂ ಪ್ರಜ್ಞೆ ಬರದ ಕಾರಣ ಆತನನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ವೈದ್ಯರು ತಪಾಸಣೆ ಮಾಡಿ ಸಾವನ್ನಪ್ಪಿರುವುದಾಗಿ ಧೃಡಪಡಿಸಿದ್ದಾರೆ.

    ಶಾಲಾ ಆಡಳಿತ ಮಂಡಳಿ ಬಾಲಕನ ಪೋಷಕರಿಗೆ ಕರೆ ಮಾಡಿ ನಿಮ್ಮ ಮಗ ಊಟದ ಸಮಯದಲ್ಲಿ ಒಟ್ಟಿಗೆ ಮೂರು ಪೂರಿ ತಿಂದ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ. ಸದ್ಯ ಪೊಲೀಸರು ಮೃತ ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ಇಲ್ಲಿಯವರೆಗೂ ಆಂಧ್ರಪ್ರದೇಶದಲ್ಲಿ (Andhrapradesh) ಈ ರೀತಿಯ ಮೂರು ಘಟನೆಗಳು ವರದಿಯಾಗಿವೆ. ಕಳೆದ ತಿಂಗಳು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ದೋಸೆ ತಿಂದು ಉಸಿರುಗಟ್ಟಿಸಿ ಸಾವನ್ನಪ್ಪಿದ್ದ. ವೆಂಕಟಯ್ಯ (43) ಅವರು ಸ್ಥಳೀಯ ಉಪಾಹಾರ ಗೃಹದಲ್ಲಿ ದೋಸೆ ತಿನ್ನುತ್ತಿದ್ದಾಗ ಅವರ ಗಂಟಲಿಗೆ ಆಹಾರ ಸಿಕ್ಕಿಹಾಕಿಕೊಂಡ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

    ಜೂನ್‌ನಲ್ಲಿ ಹೈದರಾಬಾದ್‌ನಲ್ಲಿ (Hyderabad) 37 ವರ್ಷದ ವ್ಯಕ್ತಿಯೊಬ್ಬರು ಕೋಳಿಯ ಮೂಳೆಯ ತುಂಡು ಗಂಟಲಿಗೆ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದರು. ಜನವರಿಯಲ್ಲಿ ಮಹಬೂಬ್‌ನಗರ ಜಿಲ್ಲೆಯಲ್ಲಿ ನಡೆದ ಇದೇ ರೀತಿಯ ಘಟನೆಯಲ್ಲಿ, ಊಟ ಮಾಡುವಾಗ ಕೋಳಿಯ ಮೂಳೆಯ ತುಂಡು ಗಂಟಲಿಗೆ ಸಿಲುಕಿ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದ.ಇದನ್ನೂ ಓದಿ: ಜೋಡಿ ಕೊಲೆ ಕೇಸ್‌ಗೆ ಟ್ವಿಸ್ಟ್‌ – ಕಾಯಿಲೆ ಹುಷಾರಾಗ್ಲಿ ಅಂತ ಅಜ್ಜಿ ಮೇಲೆ ಮೊಮ್ಮಗನಿಂದಲೇ ಅತ್ಯಾಚಾರಕ್ಕೆ ಯತ್ನಿಸಿ ಹತ್ಯೆ!

  • ಬೆಂಗ್ಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಐರಾವತ ಬಸ್‌ ಮೇಲೆ ತೆಲಂಗಾಣದಲ್ಲಿ ಪುಂಡರಿಂದ ಕಲ್ಲು ತೂರಾಟ

    ಬೆಂಗ್ಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಐರಾವತ ಬಸ್‌ ಮೇಲೆ ತೆಲಂಗಾಣದಲ್ಲಿ ಪುಂಡರಿಂದ ಕಲ್ಲು ತೂರಾಟ

    ಹೈದರಾಬಾದ್‌: ರಾಜ್ಯದ ಕೆಎಸ್‍ಆರ್‌ಟಿಸಿ (KSRTC) ಬಸ್‌ಗಳ ಮೇಲೆ ತೆಲಂಗಾಣದಲ್ಲಿ (Telangana) ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.

    ಕೆಎಸ್‌ಆರ್‌ಟಿಸಿಯ ಐರಾವತ ಕ್ಲಬ್ ಕ್ಲಾಸ್ ಹಾಗೂ ಅಂಬಾರಿ ಉತ್ಸವ ಬಸ್ ಮೇಲೆ ಹೈದರಾಬಾದ್‌ನಲ್ಲಿ (Hyderabad) ಗುರುವಾರ (ನ.7) ಕಲ್ಲು ತೂರಾಟ ನಡೆಸಲಾಗಿದೆ. ಕೆಎಸ್‌ಆರ್‌ಟಿಸಿಯ ಎರಡು ಬಸ್, ತೆಲಂಗಾಣ ಸಾರಿಗೆ ಸಂಸ್ಥೆಯ ಒಂದು ಬಸ್ ಹಾಗೂ ಖಾಸಗಿ ಬಸ್ ಸೇರಿದಂತೆ ಒಟ್ಟು 4 ಬಸ್‌ಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಹೈದರಾಬಾದ್‌ನಿಂದ ಬೆಂಗಳೂರು ನಡುವೆ ಸಂಚರಿಸುತ್ತಿದ್ದ ಸಾರಿಗೆ ಬಸ್‌ ಮೇಲೆ ದಾಳಿ ನಡೆದಿದೆ.

    ರಾತ್ರಿ 10:45ರ ಸುಮಾರಿನಲ್ಲಿ ಹೈದರಾಬಾದ್‌ನಿಂದ ಸಾರಿಗೆ ಬಸ್ ಬೆಂಗಳೂರಿನತ್ತ ಹೊರಟಿತ್ತು. ಈ ವೇಳೆ ಹೈದರಬಾದ್‌ನ ಶಂಶಾಬಾದ್ ಬಳಿ ಕಲ್ಲು ತೂರಾಟ ನಡೆಸಲಾಗಿದೆ. ಇದರಿಂದ ಬಸ್ಸಿನ ಕಿಟಕಿ ಗಾಜಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ಅಪಾಯವಾಗಿಲ್ಲ.

    ಈ ಸಂಬಂಧ ಶಂಶಾಬಾದ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನ ಪ್ರವಾಸ ಭಾಗ್ಯ!

    ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನ ಪ್ರವಾಸ ಭಾಗ್ಯ!

    ಬೆಳಗಾವಿ: ಸರ್ಕಾರಿ ಶಾಲಾ ಮಕ್ಕಳು (Govt School Students) ಬಸ್ಸಿನಲ್ಲಿ ಪ್ರವಾಸ ಕೈಗೊಳ್ಳುವುದು ಸಾಮಾನ್ಯ. ಆದರೆ ಬೆಳಗಾವಿ ತಾಲೂಕಿನ ಸೋನಟ್ಟಿ ಗ್ರಾಮದ ಮಕ್ಕಳು ವಿಮಾನದಲ್ಲಿ ಪ್ರವಾಸ (Flight Tour) ಮಾಡಿದ್ದಾರೆ.

    ಮಕ್ಕಳ ಹಾಜರಾತಿ ಹೆಚ್ಚಿಸುವ ಸಲುವಾಗಿ ಶಿಕ್ಷಕ ಪ್ರಕಾಶ್ ದೇವಣ್ಣವರ್ ಸುಮಾರು ಎರಡೂವರೆ ಲಕ್ಷ ರೂ. ಖರ್ಚು ಮಾಡಿ 17 ವಿದ್ಯಾರ್ಥಿಗಳಿಗೆ ಪ್ರವಾಸ ಭಾಗ್ಯ ನೀಡಿದ್ದಾರೆ.

    ವಿದ್ಯಾರ್ಥಿಗಳಿಂದ ತಲಾ ಮೂರು ಸಾವಿರ ರೂ. ಹಣ ಪಡೆದ ಶಿಕ್ಷಕ ಉಳಿದ ಹಣವನ್ನು ತಾವೇ ಹಾಕಿದ್ದಾರೆ. ಇದನ್ನೂ ಓದಿ: ನನ್ನ ಜೀವ ಇರುವವರೆಗೂ ದರ್ಶನ್ ನನ್ನ ಮಗನೇ: ಸುಮಲತಾ

    ಗುರುವಾರ ಸಂಜೆ ಬೆಳಗಾವಿಯಿಂದ (Belagavi) ಹೈದರಾಬಾದ್ (Hyderabad) ಹೋಗಿರುವ ಮಕ್ಕಳು ರಾಮೋಜಿ ಫಿಲ್ಮ್ ಸಿಟಿ, ಚಾರ್ ಮಿನಾರ್, ಗೋಲ್ಕೊಂಡ ಸೇರಿ ಹಲವು ಸ್ಥಳಗಳನ್ನು ನೋಡಿದ್ದಾರೆ. ಶನಿವಾರ  ಸಂಜೆ ಶಿಕ್ಷಕ ಮತ್ತು ವಿದ್ಯಾರ್ಥಿಗಳು ಬೆಳಗಾವಿಗೆ ವಾಪಸ್‌ ಆಗಲಿದ್ದಾರೆ.

     

  • Hyderabad | ಶಾಲೆಯಲ್ಲಿ ಕಬ್ಬಿಣದ ಗೇಟ್ ಬಿದ್ದು 6ರ ಬಾಲಕ ಸಾವು

    Hyderabad | ಶಾಲೆಯಲ್ಲಿ ಕಬ್ಬಿಣದ ಗೇಟ್ ಬಿದ್ದು 6ರ ಬಾಲಕ ಸಾವು

    ಹೈದರಾಬಾದ್: ಶಾಲೆಯಲ್ಲಿ ಕಬ್ಬಿಣದ ಗೇಟ್ ಬಿದ್ದು ತಲೆಗೆ ಪೆಟ್ಟಾದ ಕಾರಣ 6 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಹೈದರಾಬಾದ್‌ನ (Hyderabad) ಹಯಾತ್ ನಗರದ ಎಂಪಿಪಿ ಶಾಲೆಯಲ್ಲಿ ನಡೆದಿದೆ.

    ಮೃತ ಬಾಲಕನನ್ನು 1ನೇ ತರಗತಿಯ ಅಜಯ್ ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ 4 ಗಂಟೆಯ ಸುಮಾರಿಗೆ ಶಾಲೆಯ ಕಬ್ಬಿಣದ ಗೇಟ್ ಬಳಿ ಆಟವಾಡುತ್ತಿದ್ದಾಗ ಘಟನೆ ನಡೆದಿದೆ.ಇದನ್ನೂ ಓದಿ: ಮೊದಲ ಫಲಿತಾಂಶ ಪ್ರಕಟ | ಕಮಲಾ, ಟ್ರಂಪ್‌ಗೆ ಬಿತ್ತು ತಲಾ 3 ಮತ – ಮಧ್ಯರಾತ್ರಿ ಚುನಾವಣೆ ಯಾಕೆ?

    ಪೊಲೀಸರ ಮಾಹಿತಿಯ ಪ್ರಕಾರ, ಶಾಲೆಯಲ್ಲಿ ಕೆಲವು ಮಕ್ಕಳು ಗೇಟ್ ಮೇಲೆ ಏರಿ ಅದನ್ನು ಅತ್ತಿಂದಿತ್ತ ತಿರುಗಿಸುತ್ತಾ ಆಟವಾಡುತ್ತಿದ್ದರು. ಈ ವೇಳೆ ಅಜಯ್ ಕೂಡ ಆಟವಾಡುತ್ತಿದ್ದನು. ಗೇಟ್‌ನ ಜಾಯಿಂಟ್‌ಗಳು ಮುರಿದು ಅಲ್ಲಿಯೇ ಆಡುತ್ತಿದ್ದ ಅಜಯ್ ಮೇಲೆ ಬಿದ್ದಿದೆ. ಇದರಿಂದಾಗಿ ಆತನ ತಲೆಗೆ ಗಂಭೀರ ಗಾಯಗಳಾಗಿದ್ದವು. ಇದರಿಂದಾಗಿ ಬಾಲಕ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.

    ಇದಕ್ಕೆ ಸಂಬಂಧಿಸಿದಂತೆ ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಈ ಘಟನೆ ಮೊದಲನೇಯದಲ್ಲ. ಇದಕ್ಕೂ ಮುನ್ನ ಇದೇ ಜು.31 ರಂದು ಗಿರಿಜಾ ಗಣೇಶ್ ಶಿಂಧೆ ಎಂಬ ಮೂರೂವರೆ ವರ್ಷದ ಬಾಲಕಿಯ ಮೇಲೆ ಕಬ್ಬಿಣದ ಗೇಟ್ ಬಿದ್ದು ಸಾವನ್ನಪ್ಪಿದ್ದಳು.

    ಈ ಭೀಕರ ಅಪಘಾತವು ಸಮೀಪದ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ (CCTV Camera) ಸೆರೆಯಾಗಿದ್ದು, ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿತ್ತು. ಸಿಸಿಟಿವಿ ದೃಶ್ಯದಲ್ಲಿ ಗೇಟ್ ಬಳಿ ಆಟವಾಡುತ್ತಿದ್ದ ಮಕ್ಕಳು ಗೇಟ್‌ನ್ನು ಮುಚ್ಚಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಅಲ್ಲಿಯೇ ನಡೆದುಕೊಂಡ ಹೋಗುತ್ತಿದ್ದ ಗಿರಿಜಾ ಮೇಲೆ ಗೇಟ್ ಏಕಾಏಕಿ ಕುಸಿದು ಬಿದ್ದಿತ್ತು. ಇದರಿಂದಾಗಿ ಬಾಲಕಿ ಸಾವನ್ನಪ್ಪಿದ್ದಳು.ಇದನ್ನೂ ಓದಿ: ಬಿಟ್ಟಿ ಸಲಹೆ ಕೊಟ್ಟ ನೆಟ್ಟಿಗನಿಗೆ ಸಮಂತಾ ತಿರುಗೇಟು

  • Hyderabad | ಮೊಮೊಸ್ ತಿಂದು ಓರ್ವ ಮಹಿಳೆ ಸಾವು ಬೆನ್ನಲ್ಲೇ 20 ಜನರಿಗೆ ಫುಡ್ ಪಾಯ್ಸನ್

    Hyderabad | ಮೊಮೊಸ್ ತಿಂದು ಓರ್ವ ಮಹಿಳೆ ಸಾವು ಬೆನ್ನಲ್ಲೇ 20 ಜನರಿಗೆ ಫುಡ್ ಪಾಯ್ಸನ್

    ಹೈದರಾಬಾದ್: ಬೀದಿಬದಿಯ ಮೊಮೊಸ್ (Momos) ತಿಂದು ಓರ್ವ ಮಹಿಳೆ ಸಾವನ್ನಪ್ಪಿದ ಬೆನ್ನಲ್ಲೇ 20 ಜನರಿಗೆ ಫುಡ್ ಪಾಯ್ಸನ್ (Food Poison) ಆಗಿರುವ ಘಟನೆ ಹೈದರಾಬಾದ್‌ನ (Hyderabad) ಬಂಜಾರಾ ಹಿಲ್ಸ್ ಪ್ರದೇಶದಲ್ಲಿ ನಡೆದಿದೆ.

    ಮೃತ ಮಹಿಳೆಯನ್ನು 33 ವರ್ಷದ ರೇಷ್ಮಾ ಬೇಗಂ ಎಂದು ಗುರುತಿಸಲಾಗಿದೆ. ಅವರ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 20 ಜನರು ಫುಡ್ ಪಾಯ್ಸನ್‌ನಿಂದ ಬಳಲುತ್ತಿದ್ದಾರೆ.ಇದನ್ನೂ ಓದಿ: ಜಾಮೀನು ಸಿಕ್ಕ ಬೆನ್ನಲ್ಲೇ ದರ್ಶನ್ ಭೇಟಿಗೆ ಬಂದ ಪತ್ನಿ ವಿಜಯಲಕ್ಷ್ಮಿ

    ಶುಕ್ರವಾರ ಖೈರತಾಬಾದ್‌ನ ಬೀದಿಬದಿ ವ್ಯಾಪಾರಿಯಿಂದ ಮೂವರು ಮೊಮೊಸ್ ತಿಂದಿದ್ದಾರೆ. ತಿಂದು ಮನೆಗೆ ಮರಳಿದ ಸ್ವಲ್ಪ ಸಮಯದ ಬಳಿಕ ಹೊಟ್ಟೆ ನೋವು, ವಾಂತಿಯಿಂದ ಬಳಲಿದ್ದಾರೆ. ಬಳಿಕ ಭಾನುವಾರ ಬೆಳಗ್ಗೆ ಅವರ ತಾಯಿ ಸಾವನ್ನಪ್ಪಿದ್ದು, ಪುತ್ರಿಯರು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಪ್ರಕರಣದ ಕುರಿತು ಬಂಜಾರ ಹಿಲ್ಸ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಮ್ ಬಾಬು ಮಾತನಾಡಿ, ಮಂಗಳವಾರ (ಅ.29) ವಿವಿಧ ಸ್ಥಳಗಳಲ್ಲಿ ಮಾರಾಟ ಮಾಡುವ ಒಬ್ಬ ಬೀದಿಬದಿ ವ್ಯಾಪಾರಿಯಿಂದ ಮೊಮೊಸ್ ತಿಂದಿದ್ದ 15 ರಿಂದ ದೂರು ಬಂದಿದ್ದು, ದೂರು ದಾಖಲಿಸಿಕೊಂಡು ಸದ್ಯ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

    ತನಿಖೆಯ ವೇಳೆ ಯಾವುದೇ ಆಹಾರ ಸುರಕ್ಷತಾ ಪರವಾನಗಿ ಇಲ್ಲದೇ ಮಾರಾಟಗಾರ ವ್ಯಾಪಾರ ನಡೆಸುತ್ತಿದ್ದು, ಯಾವುದೇ ರೀತಿಯ ಸ್ವಚ್ಛತೆಯಿಲ್ಲದೇ ಆಹಾರ ತಯಾರಿಸುತ್ತಿರುವುದು ಪತ್ತೆಯಾಗಿದೆ. ಜೊತೆಗೆ ಮೊಮೊಸ್ ತಯಾರಿಸಲು ಬಳಸುವ ಹಿಟ್ಟನ್ನು ಯಾವುದೇ ಪ್ಯಾಕಿಂಗ್ ಇಲ್ಲದೆ ರೆಫ್ರಿಜರೇಟರ್‌ನಲ್ಲಿ ಇರಿಸಲಾಗಿತ್ತು, ಅದರಲ್ಲೂ ರೆಫ್ರಿಜರೇಟರ್ ಬಾಗಿಲು ಮುರಿದಿರುವುದು ಕೂಡ ಕಂಡುಬಂದಿದೆ. ಹೆಚ್ಚಿನ ತನಿಖೆಗಾಗಿ ಆಹಾರದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಈ ಘಟನೆಗೆ ಸಂಬಂಧಿಸಿದಂತೆ ಮೃತ ಮಹಿಳೆಯ ಕುಟುಂಬದವರು ನೀಡಿದ ದೂರಿನ ಮೇರೆಗೆ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ ಆಹಾರ ಸುರಕ್ಷತಾ ವಿಭಾಗ ಮತ್ತು ಪೊಲೀಸರು ಬೀದಿಬದಿ ವ್ಯಾಪಾರಿಯನ್ನು ಪತ್ತೆ ಹಚ್ಚಿದ್ದಾರೆ ಹಾಗೂ ಸ್ಟಾಲ್ ನಡೆಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.ಇದನ್ನೂ ಓದಿ: Darshan Case File | ಜೂನ್‌ 8 ರಿಂದ ಅ.30ರ ವರೆಗೆ ಏನೆಲ್ಲಾ ಆಯ್ತು?

  • Hyderabad | ಮಗನ ಮೃತದೇಹದೊಂದಿಗೆ ನಾಲ್ಕು ದಿನ ಕಳೆದ ಅಂಧ ದಂಪತಿ

    Hyderabad | ಮಗನ ಮೃತದೇಹದೊಂದಿಗೆ ನಾಲ್ಕು ದಿನ ಕಳೆದ ಅಂಧ ದಂಪತಿ

    ಹೈದರಾಬಾದ್: ಮೃತಪಟ್ಟಿದ್ದಾನೆಂದು ತಿಳಿಯದೇ ಮಗನ ಮೃತ ದೇಹದೊಂದಿಗೆ ಅಂಧ ದಂಪತಿಗಳು 4 ದಿನ ಕಳೆದಿರುವ ಘಟನೆ ಹೈದರಾಬಾದ್‌ನ (Hyderabad) ಬ್ಲೈಂಡ್ಸ್‌ ಕಾಲೋನಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು 30 ವರ್ಷದ ಪ್ರಮೋದ್ ಎಂದು ಗುರುತಿಸಲಾಗಿದೆ.

    ಪತಿ ನಿವೃತ್ತ ಸರ್ಕಾರಿ ನೌಕರ ಕಾಲುವ ರಮಣ ಮತ್ತು ಅವರ ಪತ್ನಿ ಶಾಂತಿಕುಮಾರಿ (60) ಮೇಲ್ಪಟ್ಟಿದ್ದು, ದೃಷ್ಟಿ ವಿಕಲಚೇತನರಾಗಿದ್ದರು. ದಂಪತಿ ತಮ್ಮ ಮಗ ಪ್ರಮೋದ್‌ನೊಂದಿಗೆ ಹೈದರಾಬಾದ್‌ನ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಮೃತಪಟ್ಟು 4 ದಿನದ ಬಳಿಕ ಅಕ್ಕಪಕ್ಕದವರು ಅವರ ಮನೆಯಿಂದ ಬರುತ್ತಿದ್ದ ದುರ್ವಾಸನೆಯಿಂದಾಗಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.ಇದನ್ನೂ ಓದಿ: ಇಂದು ಬೆಳಗ್ಗೆ ದರ್ಶನ್‌ ಜಾಮೀನು ಭವಿಷ್ಯ ಪ್ರಕಟ

    ನಾಗೋಲೆ ಪೊಲೀಸ್ ಠಾಣೆಯ ಅಧಿಕಾರಿ ಸೂರ್ಯ ನಾಯಕ್ ಮಾತನಾಡಿ, ವಿಚ್ಛೇದನದ ಬಳಿಕ ಪ್ರಮೋದ್ ಪತ್ನಿ ತನ್ನ ಎರಡು ಮಕ್ಕಳನ್ನು ಕರೆದುಕೊಂಡು ಆತನನ್ನು ಬಿಟ್ಟುಹೋಗಿದ್ದಳು. ಪತ್ನಿ ಬಿಟ್ಟುಹೋದ ಬಳಿಕ ಪ್ರಮೋದ್ ಮದ್ಯವ್ಯಸನಿಯಾಗಿದ್ದ. ದಂಪತಿಗಳು ಆತನನ್ನು ಊಟಕ್ಕಾಗಿ ಕರೆದಾಗ ಆತನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇನ್ನೂ ಅವರ ಧ್ವನಿ ತುಂಬಾ ದುರ್ಬಲವಾಗಿದ್ದ ಕಾರಣ ಅವರ ಧ್ವನಿ ನೆರೆಹೊರೆಯವರಿಗೆ ಕೇಳಿಸದೇ ಇರಬಹುದು ಎಂದು ತಿಳಿಸಿದರು.

    ನೆರೆಹೊರೆಯವರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಭೇಟಿ ನೀಡಿದಾಗ ದಂಪತಿ ರಮಣ ಮತ್ತು ಶಾಂತಿಕುಮಾರಿ ಅರೆಪ್ರಜ್ಞಾವಸ್ಥೆಯಲ್ಲಿದ್ದರು. ಬಳಿಕ ಅವರಿಗೆ ಉಪಚಾರ ಮಾಡಲಾಯಿತು. ಅವರ ಹಿರಿಯ ಮಗ ಪ್ರದೀಪ್ ಹೈದರಾಬಾದ್‌ನ ಇನ್ನೊಂದು ಕಡೆ ವಾಸಿಸುತ್ತಿದ್ದು, ದಂಪತಿಯನ್ನು ಅವರ ಹಿರಿಯ ಮಗನಿಗೆ ಒಪ್ಪಿಸಲಾಯಿತು ಎಂದು ತಿಳಿಸಿದರು.

    4-5 ದಿನಗಳ ಹಿಂದೆ ಪ್ರಮೋದ್ ನಿದ್ದೆಯಲ್ಲಿಯೇ ಮೃತಪಟ್ಟಿದ್ದು, ಆತನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ:ಮಹಾರಾಷ್ಟ್ರ ಚುನಾವಣೆ – ಭಾರಿ ಹೈಡ್ರಾಮಾ ಬಳಿಕ ಎನ್‌ಸಿಪಿ ಅಭ್ಯರ್ಥಿಯಾಗಿ ನವಾಬ್‌ ಮಲಿಕ್‌ ಅಖಾಡಕ್ಕೆ