Tag: Hyderabad

  • ಪತಿ ಸಾವನ್ನಪ್ಪಿದ 2 ವರ್ಷಗಳ ಬಳಿಕ ಮಗು ಜನನ- ಹಣಕ್ಕಾಗಿ ಹಸುಗೂಸನ್ನೇ ಮಾರಿದ ತಾಯಿ

    ಪತಿ ಸಾವನ್ನಪ್ಪಿದ 2 ವರ್ಷಗಳ ಬಳಿಕ ಮಗು ಜನನ- ಹಣಕ್ಕಾಗಿ ಹಸುಗೂಸನ್ನೇ ಮಾರಿದ ತಾಯಿ

    – ಮಗುವನ್ನು ವಶಕ್ಕೆ ಪಡೆದ ಅಧಿಕಾರಿಗಳು

    ಹೈದರಾಬಾದ್: ಕುಟುಂಬದ ಆರ್ಥಿಕ ಸ್ಥಿತಿ ಸರಿ ಇಲ್ಲದ ಕಾರಣ ತಾಯಿ ಮಗುವನ್ನೇ 15 ಸಾವಿರ ರೂ. ಮಾರಾಟ ಮಾಡಿರುವ ಘಟನೆ ಆಂಧ್ರ ಪ್ರದೇಶ ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದಿದೆ.

    ಪದ್ಮ ಮಗುವನ್ನು ಮಾರಾಟ ಮಾಡಿದ ತಾಯಿಯಾಗಿದ್ದು, ಈಕೆ ಜೀವನ ನಡೆಸಲು ನಿಜಾಮಾಬಾದ್ ಜಿಲ್ಲೆಯ ಗ್ರಾಮಕ್ಕೆ ಒಂದೂವರೆ ವರ್ಷದ ಹಿಂದೆ ಕುಟುಂಬದೊಂದಿಗೆ ವಲಸೆ ಬಂದಿದ್ದಳು. ಕಳೆದ 2 ವರ್ಷಗಳ ಹಿಂದೆ ಪದ್ಮ ಪತಿಯನ್ನು ಕಳೆದುಕೊಂಡಿದ್ದಳು. ಆದಾಗಲೇ ಅವರಿಗೆ ಇಬ್ಬರು ಮಕ್ಕಳಿದ್ದರು.

    ವಿವಾಹೇತರ ಸಂಬಂಧ ಬೆಳೆಸಿದ್ದ ಆಕೆಗೆ ಅಕ್ಟೋಬರ್ 1ರಂದು ಮಗು ಜನಿಸಿತ್ತು. ಆದರೆ ಕುಟುಂಬ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ ಆಕೆ ಮಗುವನ್ನು 15 ಸಾವಿರ ರೂ.ಗಳಿಗೆ ಮಾರಾಟ ಮಾಡಿ ಒಪ್ಪಂದ ಪತ್ರವನ್ನು ಬರೆದುಕೊಟ್ಟಿದ್ದಳು. ಆದರೆ ಈ ಸ್ಥಳಿಯ ಅಂಗನವಾಡಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಅಧಿಕಾರಿಗಳಿಗೆ ಲಭಿಸಿತ್ತು. ಪೊಲೀಸರು ನೆರವು ಪಡೆದ ಅಧಿಕಾರಿಗಳು ಮಾರಾಟವಾಗಿದ್ದ ಮಗುವನ್ನು ಬುಧವಾರ ವಶಕ್ಕೆ ಪಡೆದು, ಶಿಶು ಕೇಂದ್ರಕ್ಕೆ ಸೇರ್ಪಡೆ ಮಾಡಿದ್ದಾರೆ. ಪ್ರಕರಣ ಕುರಿತು ಹೆಚ್ಚಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.

  • ಉದ್ಯಮಿ ತಾಯಿಗೆ ನಿದ್ದೆ ಮಾತ್ರೆ ನೀಡಿ 180 ಗ್ರಾಂ ಚಿನ್ನ, 10 ಲಕ್ಷ ರೂ. ಕಳವುಗೈದ್ರು!

    ಉದ್ಯಮಿ ತಾಯಿಗೆ ನಿದ್ದೆ ಮಾತ್ರೆ ನೀಡಿ 180 ಗ್ರಾಂ ಚಿನ್ನ, 10 ಲಕ್ಷ ರೂ. ಕಳವುಗೈದ್ರು!

    – ಮನೆ ಕೆಲಸದವರಿಂದ್ಲೇ ಕೃತ್ಯ
    – ನಾಲ್ವರು ನೇಪಾಳಿಗರ ಬಂಧನ

    ಹೈದರಾಬಾದ್: ಉದ್ಯಮಿ ಮನೆಯಿಂದ 10 ಲಕ್ಷ ರೂ. 180 ಗ್ರಾಂ ಚಿನ್ನದ ಆಭರಣ ದರೋಡೆ ಮಾಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಕಳ್ಳತನ ಅರೋಪದ ಮೇಲೆ ನಾಲ್ವರು ನೇಪಾಳಿಗರನ್ನು ಪೊಲೀಸರು ಬಂಧಿಸಿದ್ದಾರೆ.

    ಕಳ್ಳರಲ್ಲಿ ಇಬ್ಬರು ಉದ್ಯಮಿ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಅಕ್ಟೋಬರ್ 19 ರಂದು ಉದ್ಯಮಿ ಮನೆಯಲ್ಲಿ ಕುಟುಂಬಸ್ಥರು ಇಲ್ಲದಿರುವುದನ್ನು ತಿಳಿದ ಕಳ್ಳರು ದರೋಡೆಗೆ ಹೊಂಚು ಹಾಕಿದ್ದಾರೆ. ಅಲ್ಲದೆ ಉದ್ಯಮಿಯ 70 ವರ್ಷದ ತಾಯಿ ಮಾತ್ರ ಮನೆಯಲ್ಲಿ ಇದ್ದರು.

    ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ದರೋಡೆಕೋರರು ವೃದ್ಧೆಗೆ ಚಹಾದಲ್ಲಿ ನಿದ್ದೆ ಮಾತ್ರೆ ಬೆರೆಸಿ ನೀಡಿದ್ದಾರೆ. ಈ ಚಹಾ ಕುಡಿದ ವೃದ್ಧೆ ನಿದ್ದೆಗೆ ಜಾರಿದ್ದಾರೆ. ಈ ವೇಳೆ ಖತರ್ನಾಕ್ ಕಳ್ಳರು 180 ಗ್ರಾಂ ಚಿನ್ನ, 10 ಲಕ್ಷ ರೂ. ಹಣವನ್ನು ದೋಚಿ ಮನೆಯಿಂದ ಎಸ್ಕೇಪ್ ಆಗಿದ್ದಾರೆ.

    ಕಳ್ಳತನ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಲು 15 ತಂಡಗಳನ್ನು ರಚಿಸಲಾಗಿತ್ತು. ಅಕ್ಟೋಬರ್ 22 ಮತ್ತು 25 ರ ನಡುವೆ ಲಕ್ನೋದಲ್ಲಿ ದರೋಡೆಕೊರರನ್ನು ಬಂಧಿಸಲಾಗಿದೆ. ಪೊಲೀಸರ ಬಲೆಗೆ ಬಿದ್ದಿರುವ ಕಳ್ಳರು ನೇಪಾಳಿ ಮೂಲದವರಾಗಿದ್ದಾರೆ. ಈ ನಾಲ್ವರು ಕಳ್ಳರಿಂದ 90ಗ್ರಾಂ ಚಿನ್ನ ಮತ್ತು 1.40 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಮಹೇಶ್ ಎಂ ಭಾಗವತ್ ತಿಳಿಸಿದ್ದಾರೆ.

  • ಕೊನೆಗೂ ಭಾವಿ ಪತಿ ಜೊತೆಗಿನ ಫೋಟೋ ಹಂಚಿಕೊಂಡ ಕಾಜಲ್

    ಕೊನೆಗೂ ಭಾವಿ ಪತಿ ಜೊತೆಗಿನ ಫೋಟೋ ಹಂಚಿಕೊಂಡ ಕಾಜಲ್

    ಹೈದರಾಬಾದ್: ಇನ್ನೇನು ಕೆಲವೇ ದಿನಗಳಲ್ಲಿ ನಟಿ ಕಾಜಲ್ ಅಗರ್ವಾಲ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇದುವರೆಗೂ ತಮ್ಮ ಭಾವಿ ಪತಿಯನ್ನು ಪರಿಚಯಿಸದ ನಟಿ ಇದೀಗ ಅವರ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

    ಹೌದು. ತಮ್ಮ ಭಾವಿ ಪತಿ ಜೊತೆ ತೆಗೆಸಿಕೊಂಡ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಕಾಜಲ್, ನಮ್ಮ ಕಡೆಯಿಂದ ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಮದುವೆಗೂ ಮುನ್ನ ಕಾಜಲ್ ಪತಿಯೊಂದಿಗೆ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಕಾಜಲ್ ಮತ್ತು ಗೌತಮ್ ಫೋಟೋಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಕಾಜಲ್ ನಿಶ್ಚಿತಾರ್ಥದ ರಿಂಗ್ ರಿವೀಲ್ ಮಾಡಿದ್ದರು. ಕಾಜಲ್ ಉಂಗುರವನ್ನು ತೋರಿಸುತ್ತಿರುವ ಕೈ ಬೆರಳಿನ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿತ್ತು. ಉಂಗುರ ತೋರಿಸಿ ಸೂಪರ್ ಎಂದು ಹೇಳಿರುವ ವಿಡಿಯೋ ಎಲ್ಲಾ ಕಡೆ ಹರಿದಾಡಿತ್ತು. ನಿಶ್ಚಿತಾರ್ಥದ ಬಳಿಕ ಕಾಜಲ್ ಎಲ್ಲಿಯೂ ಉಂಗುರ ರಿವೀಲ್ ಮಾಡಿರಲಿಲ್ಲ.

     

    View this post on Instagram

     

    Happy Dussehra from us to you ! @kitchlug #kajgautkitched

    A post shared by Kajal Aggarwal (@kajalaggarwalofficial) on

    ಈ ಹಿಂದೆ ಮದುವೆ ವಿಚಾರವನ್ನು ಕೂಡ ಇನ್ ಸ್ಟಾ ಮೂಲಕವೇ ರಿವೀಲ್ ಮಾಡಿದ್ದರು. ನಾನು ಇದೇ ಅಕ್ಟೋಬರ್ 30ರಂದು ಗೌತಮ್ ಕಿಚ್ಲು ಅವರನ್ನು ಮುಂಬೈನಲ್ಲಿ ಮದುವೆ ಆಗುತ್ತಿದ್ದೇನೆ. ಮದುವೆಗೆ ಕೇವಲ ಕುಟುಂಬಸ್ಥರು ಮತ್ತು ಆಪ್ತರನ್ನ ಮಾತ್ರ ಆಹ್ವಾನಿಸಲಾಗಿದೆ. ಹೊಸ ಜೀವನಕ್ಕೆ ಕಾಲಿಡಲು ನಾನು ಥ್ರಿಲ್ ಆಗಿದ್ದೇನೆ. ಇಷ್ಟು ದಿನ ನೀವು ತೋರಿಸಿದ ಅನಿಯಮಿತ ಪ್ರೀತಿಗೆ ಅಭಾರಿಯಾಗಿದ್ದು, ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ. ಹೊಸ ಬದುಕಿಗೆ ಎಂಟ್ರಿ ಕೊಡಲು ಉತ್ಸುಕಳಾಗಿದ್ದೇನೆ. ಮುಂದೆಯೂ ನಾನು ಸಿನಿಮಾಗಳಲ್ಲಿ ನಟಿಸುವ ಮೂಲಕ ನಿಮ್ಮನನ್ನ ರಂಜಿಸುತ್ತೇನೆ. ನಿಮ್ಮ ಪ್ರೀತಿ, ಬೆಂಬಲಕ್ಕೆ ಧನ್ಯವಾದಗಳು ಎಂದು ಕಾಜಲ್ ಬರೆದುಕೊಂಡಿದ್ದರು.

     

    View this post on Instagram

     

    ♾????????

    A post shared by Kajal Aggarwal (@kajalaggarwalofficial) on


    ಕಾಜಲ್ ಅಗರ್ವಾಲ್ ಮದುವೆ ಆಗುತ್ತಿರುವ ಗೌತಮ್ ಕಿಚ್ಲು, ಡಿಸರ್ನ್ ಲಿವಿಂಗ್ ಸಂಸ್ಥೆಯ ಸ್ಥಾಪಕರು. ಇನ್ನು ಗೌತಮ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ತಾವು ಓರ್ವ ಇಂಟಿರೀಯರ್ ಡಿಸೈನರ್, ಡಿಸರ್ನ್ ಲಿವಿಂಗ್ ಸ್ಥಾಪಕ ಎಂದು ಹೇಳಿಕೊಂಡಿದ್ದಾರೆ.

  • ಪ್ರೇಯಸಿಯ ಸಮಾಧಿಯ ಬಳಿಯೇ ಪ್ರಿಯಕರ ಆತ್ಮಹತ್ಯೆ

    ಪ್ರೇಯಸಿಯ ಸಮಾಧಿಯ ಬಳಿಯೇ ಪ್ರಿಯಕರ ಆತ್ಮಹತ್ಯೆ

    – ಪ್ರಿಯತಮೆಯ ನೆನಪಲ್ಲೇ ವಿಷ ಸೇವಿಸಿದ ಯುವಕ

    ಹೈದರಾಬಾದ್: ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಪ್ರೇಯಸಿ ಸಾವನ್ನಪ್ಪಿದ ಕಾರಣದಿಂದ ಮನನೊಂದ ಯುವಕ ಆಕೆಯ ಸಮಾಧಿಯ ಬಳಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಮಹಾದೇವ್‍ಪುರ ಮಂಡಲದ ಕುದುರುಪಲ್ಲಿ ಎಂಬ ಗ್ರಾಮದಲ್ಲಿ ನಡೆದಿದೆ.

    ಮಹೇಶ್ ಆತ್ಮಹತ್ಯೆ ಮಾಡಿಕೊಂಡು ಯುವಕನಾಗಿದ್ದು, ಅದೇ ಗ್ರಾಮದ ಯುವತಿಯನ್ನು ಆತ ಪ್ರೀತಿ ಮಾಡಿದ್ದ. ಆದರೆ ಅನಾರೋಗ್ಯ ಕಾರಣದಿಂದ ಯುವತಿ ಸಾವನ್ನಪ್ಪಿದ್ದಳು. ಅಂದಿನಿಂದ ಆಕೆಯ ನೆನಪುಗಳಲ್ಲೇ ತೀವ್ರವಾಗಿ ಮನನೊಂದಿದ್ದ ಯುವಕ ಸಮಾಧಿಯ ಬಳಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಯುವತಿ ಸಾವನ್ನಪ್ಪುವ ಮುನ್ನ ಮನೆಯವರನ್ನು ಮದುವೆಗೆ ಒಪ್ಪಿಸಿದ್ದ ಯುವಕ ಎಲ್ಲರ ಅಂಗೀಕರದೊಂದಿಗೆ ಮದುವೆಯ ಸಿದ್ಧತೆಗಳನ್ನು ಆರಂಭಿಸಿದ್ದ. ಈ ವೇಳೆ ಏಕಾಏಕಿ ಯುವತಿಗೆ ಅನಾರೋಗ್ಯ ಸಮಸ್ಯೆ ಎದುರಾಗಿ ಆಕೆ ಸಾವನ್ನಪ್ಪಿದ್ದಳು. ಯುವಕನನ್ನು ಕಳೆದುಕೊಂಡ ಕುಟುಂಬಸ್ಥರಿಗೆ ಆತನ ಆತ್ಮಹತ್ಯೆ ತೀವ್ರ ನೋವನ್ನುಂಟು ಮಾಡಿದೆ.

  • ತವರಿನ ಮನೆಯವ್ರು ಚಿನ್ನ ಕೊಟ್ಟರೆ ಮಾತ್ರ ಸೀಮಂತ- ನೊಂದು ಆತ್ಮಹತ್ಯೆಗೆ ಶರಣಾದ ಗರ್ಭಿಣಿ

    ತವರಿನ ಮನೆಯವ್ರು ಚಿನ್ನ ಕೊಟ್ಟರೆ ಮಾತ್ರ ಸೀಮಂತ- ನೊಂದು ಆತ್ಮಹತ್ಯೆಗೆ ಶರಣಾದ ಗರ್ಭಿಣಿ

    – ಮದುವೆಯಾದ 5 ತಿಂಗಳಿಗೆ ಆತ್ಮಹತ್ಯೆ
    – ಹೆಚ್ಚುವರಿ ವರದಕ್ಷಿಣೆಗೆ ಕಿರುಕುಳದ ಆರೋಪ

    ಹೈದರಾಬಾದ್: ಮದುವೆಯಾದ ಐದು ತಿಂಗಳಿಗೆ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್‍ನ ಪಿಎಸ್ ಪಾಪಿರೆಡ್ಡಿ ನಗರದಲ್ಲಿ ನಡೆದಿದೆ.

    24 ವರ್ಷದ ಕೃಷ್ಣ ಪ್ರಿಯಾ ಆತ್ಮಹತ್ಯೆ ಶರಣಾದ ಯುವತಿಯಾಗಿದ್ದು, ಕಳೆದ ಜೂನ್ ತಿಂಗಳಿನಲ್ಲಿ ಜಿಮ್ ಟ್ರೈನರ್ ಆಗಿದ್ದ ಶ್ರವಣ್ ಕುಮಾರ್ ಎಂಬಾತನೊಂದಿಗೆ ಮದುವೆಯಾಗಿತ್ತು. ಮದುವೆ ಸಂದರ್ಭದಲ್ಲಿ ಪ್ರಿಯ ಕುಟುಂಬದವರು 5 ಲಕ್ಷ ರೂ. ವರದಕ್ಷಿಣೆಯನ್ನು ನೀಡಿದ್ದರು.

    ಆದರೆ ಮದುವೆಯಾದ ಸ್ವಲ್ಪ ಸಮಯದ ಬಳಿಕ ಹೆಚ್ಚುವರಿಯಾಗಿ 12 ಲಕ್ಷ ರೂ.ಗಳನ್ನು ತವರು ಮನೆಯಿಂದ ತರುವಂತೆ ಗಂಡ ಪ್ರಿಯ ಮೇಲೆ ಒತ್ತಡ ಹಾಕಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನೊಂದ ಪ್ರಿಯಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ.

    ಗಂಡನ ಮನೆಯಲ್ಲಿ ಕೃಷ್ಣ ಪ್ರಿಯಾ ಮೃತದೇಹ ಅನುಮಾನಸ್ಪದ ಸ್ಥಿತಿಯಲ್ಲಿ ಬೆಳಕಿಗೆ ಬಂದಿದ್ದು, ಆಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾಳೆ ಎಂದು ಮೃತಳ ಅತ್ತೆ-ಮಾವ ತಿಳಿಸಿದ್ದಾರೆ. ಆದರೆ ಹೆಚ್ಚುವರಿ ವರದಕ್ಷಿಣೆ ತರುವಂತೆ ಪುತ್ರಿಗೆ ಕಿರುಕುಳ ನೀಡಿದ್ದೆ ಆಕೆಯ ಸಾವಿಗೆ ಕಾರಣ ಎಂದು ಪ್ರಿಯಾ ಪೋಷಕರು ಆರೋಪಿಸಿದ್ದಾರೆ.

    ಹೆಚ್ಚುವರಿ 12 ಲಕ್ಷ ರೂ. ತರುವಂತೆ ಶ್ರವಣ್ ಪತ್ನಿಗೆ ಕಿರುಕುಳ ನೀಡುತ್ತಿದ್ದ, ಗರ್ಭಿಣಿಯಾಗಿದ್ದ ಕೃಷ್ಣ ಪ್ರಿಯ ಸೀಮಂತ ಕಾರ್ಯ ನಡೆಸಲು ಕೂಡ ರಾದ್ಧಾಂತ ಮಾಡಿದ್ದ. ಸೀಮಂತ ಕಾರ್ಯಕ್ರಮ ಮಾಡಬೇಕು ಎಂದರೇ ಬಂಗಾರ ತರಲೇ ಬೇಕು, ಆ ಬಳಿಕವಷ್ಟೇ ತವರು ಮನೆಗೆ ಕಳುಹಿಸುವುದಾಗಿ ಹೇಳಿದ್ದ. ಹೆಚ್ಚುವರಿ ವರದಕ್ಷಿಣೆಗಾಗಿ ಅನ್ಯಾಯವಾಗಿ ತಮ್ಮ ಮಗಳನ್ನು ಬಲಿ ಪಡೆದಿದ್ದಾರೆ ಎಂದು ಪ್ರಿಯ ಪೋಷಕರು ಕಣ್ಣೀರಿಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ವಿಚರಣೆ ಕೈಗೊಂಡಿದ್ದಾರೆ.

  • ಹೈದರಾಬಾದ್ ಪ್ರವಾಹ- ಮಹೇಶ್ ಬಾಬು, ಎನ್‍ಟಿಆರ್, ಚಿರಂಜೀವಿ ಬಳಿಕ ಭಾರೀ ಮೊತ್ತ ನೀಡಿದ ಪ್ರಭಾಸ್

    ಹೈದರಾಬಾದ್ ಪ್ರವಾಹ- ಮಹೇಶ್ ಬಾಬು, ಎನ್‍ಟಿಆರ್, ಚಿರಂಜೀವಿ ಬಳಿಕ ಭಾರೀ ಮೊತ್ತ ನೀಡಿದ ಪ್ರಭಾಸ್

    ಹೈದರಾಬಾದ್: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಹೈದರಾಬಾದ್ ಸೇರಿದಂತೆ ತೆಲಂಗಾಣದ ಹಲವು ಪ್ರದೇಶಗಳು ನಲುಗಿ ಹೋಗಿದ್ದು, ಭಾರೀ ಪ್ರಮಾಣದ ಹಾನಿ ಸಂಭವಿಸಿದೆ. ಪರಿಸ್ಥಿತಿ ಅರಿತ ಹಲವು ಗಣ್ಯರು ಸಹಾಯ ಹಸ್ತ ಚಾಚುತ್ತಿದ್ದು, ಟಾಲಿವುಡ್ ನಟರಾದ ಮಹೇಶ್ ಬಾಬು, ಜೂನಿಯರ್ ಎನ್‍ಟಿಆರ್, ಚಿರಂಜೀವಿ ಬಳಿಕ ಇದೀಗ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಭಾರೀ ಮೊತ್ತದ ಕೊಡುಗೆ ನೀಡಿದ್ದಾರೆ.

    ಹೈದರಾಬಾದ್‍ನಲ್ಲಿ ಉಂಟಾದ ಪ್ರವಾಹದಿಂದಾಗಿ 37 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಹಾನಿಯಾಗಿದೆ. ಪರಿಸ್ಥಿತಿ ಅರಿತ ಟಾಲಿವುಡ್‍ನ ಹಲವು ನಟ, ನಟಿಯರು ಹಾಗೂ ಗಣ್ಯರು ತೆಲಂಗಾಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪರಿಹಾರ ನೀಡುತ್ತಿದ್ದು, ಇದೀಗ ಪ್ರಭಾಸ್ 1.5 ಕೋಟಿ ರೂ. ಗಳನ್ನು ನೀಡಿದ್ದಾರೆ.

    ಹೈದರಾಬಾದ್ ಪ್ರವಾಹದಿಂದಾಗಿ ಭಾರೀ ಪ್ರಮಾಣದ ನಷ್ಟ ಸಂಭವಿಸಿದ್ದು, ಜನರ ಜೀವನವನ್ನು ಸಹಜ ಸ್ಥಿತಿಗೆ ತರಲು ಮಹಾನಗರ ಪಾಲಿಕೆ ಹಾಗೂ ವಿಪತ್ತು ನಿರ್ವಹಣಾ ತಂಡಗಳು ದಣಿವರಿಯದೆ ಕೆಲಸ ಮಾಡುತ್ತಿವೆ. ಇದರ ಮಧ್ಯೆ ನಟ, ನಟಿಯರು ಸಹ ಸಹಾಯ ಮಾಡುತ್ತಿದ್ದಾರೆ.

    ಪ್ರಭಾಸ್ ಪರಿಹಾರ ಹಣ ನೀಡಿರುವ ಕುರಿತು ಸೌತ್ ಫಿಲ್ಮ್ ಇಂಡಸ್ಟ್ರಿ ಪಿಆರ್ ಒ ಹಾಗೂ ನಿರ್ಮಾಪಕ ಬಿ.ಎ.ರಾಜು ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ. ಹೈದರಾಬಾದ್ ಪ್ರವಾಹ ಸಂತ್ರಸ್ತರಿಗಾಗಿ ಪ್ರಭಾಸ್ 1.5 ಕೋಟಿ ರೂಗಳನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ. ಪ್ರಭಾಸ್ ಪರಿಹಾರ ಹಣ ನೀಡಿರುವುದು ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಕೊರೊನಾ ಸಂದರ್ಭದಲ್ಲಿ ಸಹ ಬಾಹುಬಲಿ ನಟ ಇತ್ತೀಚೆಗೆ 1 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದರು. ಈ ವೇಳೆ ಸಹ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇವರು ಮಾತ್ರವಲ್ಲ ಮಹೇಶ್ ಬಾಬು, ಜೂನಿಯರ್ ಎನ್‍ಟಿಆರ್, ನಾಗಾರ್ಜುನ, ಚಿರಂಜೀವಿ ಅವರು ಸಹ ಪರಿಹಾರ ನೀಡಿದ್ದರು.

    ಮಹೇಶ್ ಬಾಬು 1 ಕೋಟಿ ರೂ., ಜೂನಿಯರ್ ಎನ್‍ಟಿಆರ್ 50 ಲಕ್ಷ ರೂ., ನಾಗಾರ್ಜುನ ಹಾಗೂ ಚಿರಂಜೀವಿ ಸಹ ತಲಾ 50 ಲಕ್ಷ ಹಾಗೂ 1 ಕೋಟಿ ರೂ.ಗಳನ್ನು ನೀಡಿದ್ದಾರೆ.

  • ಅತ್ಯಾಚಾರಕ್ಕೆ ವಿರೋಧ- 13 ವರ್ಷದ ಬಾಲಕಿಗೆ ಬೆಂಕಿ ಹಚ್ಚಿದ ಮಾಲೀಕ

    ಅತ್ಯಾಚಾರಕ್ಕೆ ವಿರೋಧ- 13 ವರ್ಷದ ಬಾಲಕಿಗೆ ಬೆಂಕಿ ಹಚ್ಚಿದ ಮಾಲೀಕ

    – ಮನೆ ಕೆಲಸದ ಬಾಲಕಿ ಮೇಲೆ ಮಾಲೀಕ ಅತ್ಯಾಚಾರ

    ಹೈದರಾಬಾದ್: ಅತ್ಯಾಚಾರ ವಿರೋಧಿಸಿದ್ದಕ್ಕೆ ಮಾಲೀಕ 13 ವರ್ಷದ ಬಾಲಕಿಗೆ ಬೆಂಕಿ ಹಚ್ಚಿದ ಆಘಾತಕಾರಿ ಘಟನೆ ನಡೆದಿದೆ. ಕಳೆದ ಒಂದು ತಿಂಗಳಿಂದ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಬಾಲಕಿ ಸಾವನ್ನಪ್ಪಿದ್ದಾಳೆ.

    ತೆಲಂಗಾಣದ ಖಮ್ಮಮ್ ನಗರದಲ್ಲಿ ಘಟನೆ ನಡೆದಿದ್ದು, ಬುಡಕಟ್ಟು ಜನಾಂಗದ ಬಾಲಕಿ ಮೇಲೆ ಆಕೆಯ ಮಾಲೀಕನೇ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿ ಒಪ್ಪದ್ದಕ್ಕೆ ಬೆಂಕಿ ಹಚ್ಚಿ ಸಜೀವ ದಹನ ಮಾಡಲು ಯತ್ನಿಸಿದ್ದು, ಬಾಲಕಿಯನ್ನು ಹೈದರಾಬಾದ್‍ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದೊಂದು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿ ಬಾಲಕಿ ಸಾವನ್ನಪ್ಪಿದ್ದಾಳೆ.

    ಪೊಲೀಸರು ಈ ಕುರಿತು ಮಾಹಿತಿ ನೀಡಿದ್ದು, 13 ವರ್ಷದ ಬಾಲಕಿ ತೆಲಂಗಾಣದ ಖಮ್ಮಮ್ ಪಟ್ಟಣದ ಆರೋಪಿಯ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದಳು. ಸೆಪ್ಟೆಂಬರ್ 18ರಂದು ಆರೋಪಿ ಕಿರುಕುಳ ನೀಡಲು ಮುಂದಾಗಿದ್ದು, ಈ ವೇಳೆ ಬಾಲಕಿ ವಿರೋಧಿಸಿದ್ದಾಳೆ. ಆಗ ಆರೋಪಿ ಅವಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಪರಿಣಾಮ ಬಾಲಕಿಗೆ ಶೇ.70ರಷ್ಟು ಸುಟ್ಟ ಗಾಯಗಳಾಗಿದ್ದವು.

    ಸುಟ್ಟಗಾಯಗಳು ಹೆಚ್ಚಾಗಿದ್ದರಿಂದ ಬಾಲಕಿಯನ್ನು ಹೈದರಾಬಾದ್‍ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ತೆಲಂಗಾಣ ಪೊಲೀಸರಿಗೆ ಪ್ರಕರಣದ ಕುರಿತು ತಿಳಿದಿದೆ. ಈ ಕುರಿತು ಖಮ್ಮಮ್ ಪೊಲೀಸ್ ಆಯುಕ್ತ ತಫ್ಸೀರ್ ಇಕ್ಬಾಲ್ ಖಚಿತಪಡಿಸಿದ್ದು, ಹೈದರಾಬಾದ್‍ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಬಾಲಕಿ ಸಾವನ್ನಪ್ಪಿದ್ದಾಳೆ. ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್‍ಗಳಡಿ ದೂರು ದಾಖಲಾಗಿತ್ತು. ಈಗ ಕೊಲೆ ಮಾಡಿರುವುದಾಗಿ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.

    ಪ್ರಕರಣದ ಕುರಿತು ಅರಿತ ತೆಲಂಗಾಣ ರಾಜ್ಯ ಮಾನವ ಹಕ್ಕುಗಳ ಆಯೋಗ(ಟಿಎಸ್‍ಎಚ್‍ಆರ್‍ಸಿ) ಖಮ್ಮಮ್ ಪೊಲೀಸರಿಗೆ ವರದಿ ನೀಡುವಂತೆ ತಿಳಿಸಿದೆ. ಪ್ರಕರಣ ನಡೆಯುತ್ತಿದ್ದಂತೆ ಪೊಲೀಸರಿಗೆ ತಿಳಿಸದೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಕುಟುಂಬಸ್ಥರು ಸಹ ನಮಗೆ ಮಾಹಿತಿ ನೀಡಿಲ್ಲ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

  • ಬಿಟೆಕ್ ವಿದ್ಯಾರ್ಥಿನಿ ಕೊಲೆ ಪ್ರಕರಣ- ಪೊಲೀಸರ ಎದುರು ಆರೋಪಿಯ ಅಚ್ಚರಿಯ ಹೇಳಿಕೆ

    ಬಿಟೆಕ್ ವಿದ್ಯಾರ್ಥಿನಿ ಕೊಲೆ ಪ್ರಕರಣ- ಪೊಲೀಸರ ಎದುರು ಆರೋಪಿಯ ಅಚ್ಚರಿಯ ಹೇಳಿಕೆ

    – ಇಬ್ಬರಿಗೂ ವರ್ಷದ ಹಿಂದೆಯೇ ಮದುವೆಯಾಗಿತ್ತು
    – ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಫೋಟೋ

    ಹೈದರಾಬಾದ್: ಆಂಧ್ರ ಪ್ರದೇಶದ ವಿಜಯರವಾಡ ನಗರದ ಬಿಟೆಕ್ ವಿದ್ಯಾರ್ಥಿನಿ ದಿವ್ಯ ತೇಜಸ್ವಿನಿ ಕೊಲೆ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್ ಲಭಿಸಿದ್ದು, ಪ್ರಕರಣದ ಆರೋಪಿ ನಾಗೇಂದ್ರ ಪೊಲೀಸರ ಎದುರು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

    ದಿವ್ಯ ತೇಜಸ್ವಿನಿ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ನಾಗೇಂದ್ರ ಬಾಬು, ಗುಂಟೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸದ್ಯ ಕೃತ್ಯದ ಕುರಿತು ಪೊಲೀಸರ ಬಳಿ ಹೇಳಿಕೆ ನೀಡಿರುವ ಆರೋಪಿ, ದಿವ್ಯ ತೇಜಸ್ವಿನಿ ಹಾಗೂ ನನಗೆ ಒಂದು ವರ್ಷದ ಹಿಂದೆಯೇ ಮದುವೆಯಾಗಿತ್ತು. ಆಕೆ ಬಲವಂತ ಮಾಡಿದ ಹಿನ್ನೆಲೆಯಲ್ಲೇ ಮದುವೆಯಾಗಿದ್ದೆವು. ಆದರೆ ಆಕೆಯ ಕುಟುಂಬಸ್ಥರು ಕಳೆದ 7 ತಿಂಗಳಿಂದ ನ್ನಿಂದ ಆಕೆಯನ್ನು ದೂರ ಮಾಡಿದ್ದರು. ಮಾತನಾಡಲು ಕೂಡ ಅವಕಾಶ ನೀಡುತ್ತಿರಲಿಲ್ಲ.

    ಮೂರು ವರ್ಷಗಳಿಂದ ನನಗೆ ದಿವ್ಯ ಪರಿಚಯ. ಒಂದು ವರ್ಷದ ಹಿಂದೆ ಮದುವೆಯಾಗಿತ್ತು. ಕುಟುಂಬಸ್ಥರು ನಮ್ಮ ಮದುವೆಗೆ ಒಪ್ಪಿಗೆ ಸೂಚಿಸಿದ ಕಾರಣ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ, ಇಬ್ಬರೂ ಚಾಕುವಿನಿಂದ ಕತ್ತು ಕೂಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದೇವು ಎಂದು ಮಾಹಿತಿ ನೀಡುವುದಾಗಿ ವರದಿಯಾಗಿದೆ.

    ಇತ್ತ ಮೃತ ವಿದ್ಯಾರ್ಥಿನಿ ಹಾಗೂ ಆರೋಪಿ ನಾಗೇಂದ್ರ ಇಬ್ಬರು ಒಟ್ಟಿಗೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಬ್ಬರೂ ಪ್ರೀತಿ ಮದುವೆಯಾಗಿದ್ದರು ಎಂಬ ಚರ್ಚೆ ನಡೆಯುತ್ತಿದೆ. ಅಲ್ಲದೇ ಇಬ್ಬರ ವಾಟ್ಸಾಪ್ ಚಾಟ್ ಫೋಟೋಗಳು ಸಾಕಷ್ಟು ವೈರಲ್ ಆಗಿದೆ. ಆದರೆ ತಮ್ಮ ಮಗಳಿಗೆ ಮದುವೆಯಾಗಿಲ್ಲ, ಫೋಟೋಗಳು ಎಲ್ಲವೂ ಸುಳ್ಳು ಎಂದು ವಿದ್ಯಾರ್ಥಿನಿಯ ಪೋಷಕರು ಆರೋಪಗಳನ್ನು ನಿರಾಕರಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸಿಗುತ್ತಿರುವ ಮಾಹಿತಿಯ ಅನ್ವಯ ಎಲ್ಲಾ ಪ್ರಕಾರಗಳಲ್ಲೂ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ಸಂಪೂರ್ಣ ತನಿಖೆ ಬಳಿಕಷ್ಟೇ ಪ್ರಕರಣದ ಸತ್ಯಾಂಶ ಬೆಳಕಿಗೆ ಬರಬೇಕಿದೆ.

  • 3 ನಾಯಿಗಳೊಂದಿಗೆ ವಾಕ್‍ಗೆ ಹೋಗಿದ್ದ ಹುಡುಗಿ ನಾಪತ್ತೆ- 4 ದಿನದ ನಂತ್ರ ಪೊದೆಯಲ್ಲಿ ಪತ್ತೆ

    3 ನಾಯಿಗಳೊಂದಿಗೆ ವಾಕ್‍ಗೆ ಹೋಗಿದ್ದ ಹುಡುಗಿ ನಾಪತ್ತೆ- 4 ದಿನದ ನಂತ್ರ ಪೊದೆಯಲ್ಲಿ ಪತ್ತೆ

    – ಮನೆಯ ಸಮೀಪದ ಪೊದೆಯಲ್ಲಿ 16ರ ಹುಡುಗಿ ಪತ್ತೆ

    ಹೈದರಾಬಾದ್: 16 ವರ್ಷದ ಹುಡುಗಿಯೊಬ್ಬಳು ತನ್ನ ಮನೆಯಿಂದ ಹೊರ ಹೋಗಿದ್ದ ನಾಲ್ಕು ದಿನಗಳ ನಂತರ ಸುರಕ್ಷಿತವಾಗಿ ಮನೆಗೆ ವಾಪಸ್ ಬಂದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಲಾರಾ ರವಿಕುಮಾರ್ ಭಾನುವಾರ ಸಂಜೆ 7 ಗಂಟೆಗೆ ಸುರಕ್ಷಿತವಾಗಿ ಮನೆಗೆ ವಾಪಾಸ್ ಬಂದಿದ್ದಾಳೆ. ಹುಡುಗಿ ಹೆಚ್ಚಾಗಿ ಮೊಬೈಲ್ ಫೋನ್ ಬಳಸುತ್ತಿದ್ದಳು. ಹೀಗಾಗಿ ಆಕೆಯ ತಂದೆ ಬೈದಿದ್ದಾರೆ. ಹುಡುಗಿ ತಂದೆಯ ಜೊತೆ ಜಗಳ ಮಾಡಿದ ನಂತರ ಅ.7 ರಂದು ವಾಕ್ ಮಾಡಲು ಮನೆಯಿಂದ ಹೋಗಿದ್ದಳು. ಆದರೆ ತುಂಬಾ ಸಮಯವಾದರೂ ವಾಪಸ್ ಬಂದಿರಲಿಲ್ಲ. ಇದೀಗ ನಾಲ್ಕು ದಿನಗಳ ನಂತರ ಲಾರಾ ಮನೆಗೆ ವಾಪಸ್ ಬಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಹಯಾತ್‍ನಗರ ನಿವಾಸಿಯಾಗಿದ್ದ ಲಾರಾ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಹೆಚ್ಚಾಗಿ ಫೋನ್ ಬಳಸುತ್ತಿದ್ದಕ್ಕೆ ತಂದೆ ಬೈದಿದ್ದಾರೆ. ಆಗ ತಂದೆ-ಮಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಅಕ್ಟೋಬರ್ 7ರಂದು ರಾತ್ರಿ ಊಟ ಮಾಡಿ ಲಾರಾ ತನ್ನ ಮೂರು ನಾಯಿಗಳೊಂದಿಗೆ ವಾಕ್ ಮಾಡಲು ಮನೆಯಿಂದ ಹೊರ ಹೋಗಿದ್ದಾಳೆ. ಅವಳು ವಾಕಿಂಗ್‍ಗೆ ಹೋದ 10 ನಿಮಿಷಗಳ ನಂತರ ಲಾರಾ ಕಾಣೆಯಾಗಿದ್ದನ್ನು ಕುಟುಂಬ ಗಮನಿಸಿದೆ.

    ತನ್ನ ಮನೆಯಿಂದ ಹೊರಡುವ ಸಮಯದಲ್ಲಿ ಲಾರಾ ತನ್ನ ಫೋನ್, ಪರ್ಸ್ ಯಾವುದನ್ನೂ ತೆಗೆದುಕೊಂಡು ಹೋಗಿರಲಿಲ್ಲ. ಹೀಗಾಗಿ ಪೋಷಕರು ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿರಲಿಲ್ಲ. ಕೊನೆಗೆ ಪೊಲೀಸ್ ಠಾಣೆಗೆ ಹೋಗಿ ನಾಪತ್ತೆ ದೂರು ದಾಖಲಿಸಿದ್ದಾರೆ. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಕೂಡ ಮಗಳನ್ನು ಪತ್ತೆ ಹಚ್ಚಲು ಪೋಷಕರು ಸಹಾಯ ಕೇಳಿದ್ದರು. ಕೂಡಲೇ ಪೊಲೀಸರು ಆ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ.

    ನಿರಂತರವಾಗಿ ನಾಲ್ಕು ದಿನಗಳ ಕಾಲ ಹುಡುಗಿಯನ್ನು ಪತ್ತೆಹಚ್ಚಲು ಪೊಲೀಸರು ಸುತ್ತಮುತ್ತಲಿನ ಪ್ರದೇಶಗಳಿಂದ 100 ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದ್ದಾರೆ. ಆದರೆ ಲಾರಾ ಮಾತ್ರ ಎಲ್ಲೂ ಪತ್ತೆಯಾಗಿರಲಿಲ್ಲ. ಆದರೆ ಹಯಾತ್‍ನಗರ ಪೊಲೀಸ್ ವ್ಯಾಪ್ತಿಯಲ್ಲಿ ಲಾರಾ ನಮ್ಮ ಮನೆಯ ಸಮೀಪ ಪೊದೆಗಳ ನಡುವೆ ಅಡಗಿಕೊಂಡಿದ್ದಳು ಎಂದು ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಲಾರಾ ಭಾನುವಾರ ಸಂಜೆ 7 ಗಂಟೆಗೆ ಮನೆಗೆ ಹಿಂದಿರುಗಿದ್ದಾಳೆ. ಅವಳು ಸುರಕ್ಷಿತವಾಗಿ ವಾಪಸ್ ಮನೆಗೆ ಬಂದಿದ್ದಾಳೆ. ಆದರೆ ಸ್ವಲ್ಪ ವೀಕ್ ಆಗಿದ್ದಾಳೆ. ಹೀಗಾಗಿ ಇನ್ನೂ ಆಕೆಯ ಹೇಳಿಕೆಯನ್ನು ಪಡೆದುಕೊಂಡಿಲ್ಲ. ನಾಪತ್ತೆಯಾದ ಮಗಳಿಗಾಗಿ ಪೋಷಕರು ಸೋಶಿಯಲ್ ಮೀಡಿಯಾದ ಮೂಲಕ ಸಹಾಯ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದರು. ಹೀಗಾಗಿ ಹುಡುಗಿ ವಾಪಸ್ ಮನೆಗೆ ಬಂದ ತಕ್ಷಣ ಪೋಷಕರು ಎಲ್ಲರಿಗೂ ಮಾಹಿತಿ ನೀಡಿದ್ದಾರೆ ಎಂದು ಇನ್ಸ್‌ಪೆಕ್ಟರ್ ಎಸ್.ಸುರೇಂದರ್ ತಿಳಿಸಿದ್ದಾರೆ.

  • ಮದುವೆಯಾದ 6 ತಿಂಗಳಿಗೆ 22ರ ಯುವತಿ ಆತ್ಮಹತ್ಯೆ

    ಮದುವೆಯಾದ 6 ತಿಂಗಳಿಗೆ 22ರ ಯುವತಿ ಆತ್ಮಹತ್ಯೆ

    – ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗಿದ್ದ ಯುವತಿ

    ಹೈದರಾಬಾದ್: ಪ್ರೀತಿಸಿ ಮದುವೆಯಾಗಿದ್ದ ಯುವತಿ ಮದುವೆಯಾದ 6 ತಿಂಗಳಿಗೆ ಆತ್ಮಹತ್ಯೆ ಶರಣಾಗಿರುವ ಘಟನೆ ಆಂಧ್ರ ಪ್ರದೇಶದ ಯಾದಾದ್ರಿ ಜಿಲ್ಲೆಯಲ್ಲಿ ನಡೆದಿದೆ.

    22 ವರ್ಷದ ನವಿತಾ ಆತ್ಮಹತ್ಯೆಗೆ ಶರಣಾಗಿರುವ ಯುವತಿಯಾಗಿದ್ದು, ಯಾದಾದ್ರಿ ಜಿಲ್ಲೆಯ ಮೊತ್ಕೂರ್ ಮಂಡಲದ ದಾತಪ್ಪಗೂಡೆಂ ಗ್ರಾಮದ ನಿವಾಸಿಯಾಗಿದ್ದಳು. ಕಳೆದ ಆರು ತಿಂಗಳ ಹಿಂದೆ ಅದೇ ಗ್ರಾಮದ ಯುವಕನ್ನು ಪ್ರೀತಿಸಿ ಆರ್ಯ ಸಮಾಜದಲ್ಲಿ ಮದುವೆಯಾಗಿ ಹೊಸ ಜೀವನ ಆರಂಭಿಸಿದ್ದಳು.

    ಮದುವೆ ಬಳಿಕ ಗಂಡನ ಮನೆಗ ಬಂದ ನವಿತಾಗೆ ವರದಕ್ಷಿಣೆ ಕಿರುಕುಳ ನೀಡಲಾಗಿತ್ತು ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಕಿರುಕುಳದಿಂದ ಬೇಸತ್ತ ನವಿತಾ ಇದೇ ಅಕ್ಟೋಬರ್ 2ರಂದು ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‍ಗೆ ಕರೆತರಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನವಿತಾ ಗುರುವಾರ ಸಾವನ್ನಪ್ಪಿದ್ದಳು. ಮಗಳನ್ನು ಕಳೆದುಕೊಂಡ ಕುಟುಂಬಸ್ಥರು ನವಿತಾ ಪತಿಯ ಕುಟುಂಬಸ್ಥರ ಮೇಲೆ ಆರೋಪ ಮಾಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.