Tag: Hyderabad

  • ವೃದ್ಧೆಗೆ ಮನೆ ನಿರ್ಮಸಿಕೊಟ್ಟು ಮೆಚ್ಚುಗೆಗೆ ಪಾತ್ರವಾದ ಎಸ್‍ಐ

    ವೃದ್ಧೆಗೆ ಮನೆ ನಿರ್ಮಸಿಕೊಟ್ಟು ಮೆಚ್ಚುಗೆಗೆ ಪಾತ್ರವಾದ ಎಸ್‍ಐ

    ಹೈದರಾಬಾದ್: ಎಸ್‍ಐ ಅಧಿಕಾರಿಯೊಬ್ಬರು ನಿರ್ಗತಿಕ ವೃದ್ಧೆಗೆ ಹೊಸ ಮನೆಯನ್ನು ನಿರ್ಮಿಸಿಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ. ಪೊಲೀಸ್‍ರಲ್ಲಿ ಮಾನವೀಯತೆ ಇದೆ ಕಷ್ಟಕ್ಕೆ ಸ್ಪಂದಿಸುವ ಮನಸ್ಸಿದೆ ಎಂಬುದುನ್ನು ಎಸ್‍ಐ ಗುಂದ್ರಥಿ ಸತೀಶ್ ಅವರು ಸಾಬೀತು ಮಾಡಿದ್ದಾರೆ.

    ಪ್ರವಾಹದಲ್ಲಿ ಮನೆ ಕಳೆದುಕೊಂಡು ನಿರ್ಗತಿಕಳಾಗಿದ್ದ ವಾರಾಂಗಲ್ ಜಿಲ್ಲೆಯ ಲಕ್ಷ್ಮಿನಾರಾಯಣಪುರಂ ಗ್ರಾಮದ ವೃದ್ಧ ಮಹಿಳೆಯೊಬ್ಬರಿಗೆ, ಎಸ್‍ಐ ಸತೀಶ್ ತಮ್ಮದೇ ಹಣದಲ್ಲಿ ಪುಟ್ಟದೊಂದು ಮನೆ ನಿರ್ಮಾಣ ಮಾಡಿಕೊಟ್ಟಿದ್ದಾರೆ. ರಾಜಮ್ಮ(70)ನನ್ನು ನೋಡಿಕೊಳ್ಳಲು ಯಾರು ಇರಲಿಲ್ಲ. ಮಗ ಅಂಗವಿಕಲರಾಗಿದ್ದರು ತಾಯಿಯನ್ನು ನೋಡಿಕೊಳ್ಳದೆ ಆಕೆಯನ್ನು ತೊರೆದಿದ್ದಾನೆ. ಹೀಗಿರುವಾಗ ರಾಜಮ್ಮ ಒಬ್ಬಳೇ ಪುಟ್ಟ ಮನೆಯಲ್ಲಿ ವಾಸವಾಗಿದ್ದಳು. ಇದು ಎಸ್‍ಐ ಸತೀಶ್ ಅವರ ಗಮನಕ್ಕೆ ಬಂದಿದೆ.

    ರಾಜಮ್ಮಳನ್ನು ಭೇಟಿ ಮಾಡಿ ಹೊಸ ಮನೆ ನಿರ್ಮಿಸಿಕೊಡುವುದಾಗಿ ಹೇಳಿದ್ದರು. ಅದರಂತೆ ದಾನಿಗಳ ಸಹಾಯದಿಂದ ಹಾಗೂ ಅರ್ಧ ತಮ್ಮ ಹಣದಲ್ಲಿ ಮನೆ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಸುಮಾರು 1,60,000 ರೂಪಾಯಿ ಹಣದಲ್ಲಿ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ.

    ರಾಜಮ್ಮ ಅವರ ಪರಿಸ್ಥಿತಿ ಕಂಡು ನನಗೆ ನೋವಾಯಿತು. ಅವರಿಗೆ ಎನನ್ನಾದರೂ ಸಹಾಯ ಮಾಡಬೇಕು ಯೋಚಿಸಿದೆ. ನನ್ನಿಂದ ಸಾಧ್ಯವಾಗಿರುವ ಪುಟ್ಟ ಸಹಾಯವನ್ನು ನಾನು ಮಾಡಿದ್ದೇನೆ. ದಾನಿಗಳ ಸಹಾಯ ಮತ್ತು ನನ್ನ ಹಣವನ್ನು ಸೇರಿಸಿ ಒಂದು ಮನೆ ನಿರ್ಮಿಸಿಕೊಟ್ಟಿದ್ದೇನೆ ಎಂದು ಎಸ್‍ಐ ಸತೀಶ್ ಅವರು ಹೇಳಿದ್ದಾರೆ.

    ಎಸ್‍ಐ ಸತೀಶ್ ಅವರು ಅನೇಕ ವರ್ಷಗಳಿಂದ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ಇವರು ಮಾಡಿರುವ ಸಹಾಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ಹಣ ಮಾಡಲು ಡೇಟಿಂಗ್ ಆಪ್ ತೆರೆದ ದಂಪತಿ ಅಂದರ್

    ಹಣ ಮಾಡಲು ಡೇಟಿಂಗ್ ಆಪ್ ತೆರೆದ ದಂಪತಿ ಅಂದರ್

    – ನಕಲಿ ಖಾತೆ ತೆರೆದು ವಂಚನೆ
    – ಹಣದ ಸಹಾಯ ಮಾಡಿ ಎಂದು ವಂಚನೆ

    ಹೈದರಾಬಾದ್: ದುಡ್ಡು ಮಡುವ ಉದ್ದೇಶದಿಂದ ದಂಪತಿ ಖತರ್ನಾಕ್ ಐಡಿಯಾ ಮಾಡಿ ಜೈಲು ಸೇರಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ಬಂಧಿತ ಆರೋಪಿಗಳನ್ನು ಕಂಪಾ ಹರಿದಯಾನಂದ(30) ಅನುಷಾ ಅಲಿಯಾಸ್ ಹರಿಕಾ (20) ಎಂದು ಗುರುತಿಸಲಾಗಿದೆ. ಇಬ್ಬರು ವಿಜಯವಾಡ ಮೂಲದವರಾಗಿದ್ದಾರೆ. ಡೇಟಿಂಗ್ ಆ್ಯಪ್ ಮೂಲಕವಾಗಿ ಅವಿವಾಹಿತ ಪುರುಷರನ್ನು ಟಾರ್ಗೆಟ್ ಮಾಡಿ ಮದುವೆ ಹಾಗೂ ಡೇಟಿಂಗ್ ಹೆಸರಲ್ಲಿ ವಂಚನೆ ಮಾಡುತ್ತಿದ್ದ ದಂಪತಿಯನ್ನು ರಾಚನಕೊಂಡ ಪೊಲೀಸರು ಬಂಧಿಸಿದ್ದಾರೆ.

    ಪತಿ ಹರಿದಯಾನಂದ್‍ಗೆ ಆರೋಗ್ಯ ಹದಗೆಡುತ್ತಿರುವುದರಿಂದ ಕುಟುಂಬ ಸಂಕಷ್ಟಕ್ಕಿಡಾಗಿತ್ತು. ಈ ಸಮಯದಲ್ಲಿ ಪತ್ನಿ ಅನುಷಾ ಹೈದರಾಬಾದ್‍ನ ಡಯಾಗ್ನೋಸ್ಟಕ್ ಕೇಂದ್ರದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾಳೆ. ಆದರೆ ಸಂಬಳ ಸಾಕಾಗದ ಕಾರಣ ಹೆಚ್ಚಿನ ಹಣವನ್ನುಗಳಿಸುವ ಉದ್ದೇಶದಿಂದ ದಂಪತಿ ತಲೆಗೆ ಖತರ್ನಾಕ್ ಯೋಚನೆ ಮಾಡಿದ್ದಾರೆ.

    ಡೇಟಿಂಗ್ ಆ್ಯಪ್‍ನಲ್ಲಿ ನಕಲಿ ಖಾತೆ ತೆರೆದಿದ್ದಾರೆ. ನಂತರ ಅವಿವಾಹಿತ ಪುರುಷರನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ. ಚೆಂದದ ಹುಡುಗಿಯ ಫೋಟೋವನ್ನು ನಕಲಿ ಖಾತೆಯ ಪ್ರೋಪೈಲ್‍ಗೆ ಅಪ್‍ಲೋಡ್ ಮಾಡಿದ್ದಾರೆ. ಹುಡುಗಿಯ ಫೋಟೋವನ್ನು ನೋಡಿದ ಹಲವರು ಮೆಸೇಜ್ ಮಾಡಲು ಪ್ರಾರಂಭಿಸಿದ್ದಾರೆ. ಅದರಲ್ಲೂ ಶ್ರೀಮಂತರೇ ಹೆಚ್ಚಾಗಿ ಮೆಸೇಜ್ ಮಾಡಲು ಪ್ರಾರಂಭಿಸಿದ್ದಾರೆ.

    ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬ ಡೇಟಿಂಗ್ ಆ್ಯಪ್‍ನಲ್ಲಿ ಪರಿಚಯವಾಗಿದ್ದಾನೆ. ರೋಸಾರಿಯೋ ಎಂಬ ನಕಲಿ ಖಾತೆಯಿಂದ ಸಂದೇಶ ಕಳುಹಿಸುತ್ತಿದ್ದವಳು ಒಳ್ಳೆಯವಳು ಎಂದು ನಂಬಿದ್ದಾನೆ. ಹೀಗೆ ಮಾತನಾಡುತ್ತಾ ಇಬ್ಬರ ನಡುವೆ ಸಲುಗೆ ಹೆಚ್ಚಾಗಿದೆ. ನನ್ನ ತಾಯಿ ಆರೋಗ್ಯ ಸರಿಯಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗೆ ಹಣ ಬೇಕು ಸಹಾಯ ಮಾಡಿ ಎಂದು ಕೇಳಿದ್ದಾಳೆ. ಅದನ್ನು ನಂಬಿದ ಶ್ರೀಮಂತ ವ್ಯಕ್ತಿ ಹಣವನ್ನು ಕಳುಹಿಸಿದ್ದಾನೆ. ಹೀಗೆ ಆತನಿಂದ ಸುಮಾರು 21 ಲಕ್ಷರೂಪಾಯಿ ಹಣವನ್ನು ಪಡೆದಿದ್ದಾರೆ.

    ನಂತರ ಹಣ ನೀಡಿದ ವ್ಯಕ್ತಿ ಇಬ್ಬರು ಮದವೆಯಾಗೋಣ ಎಂದು ಹೇಳಿದ್ದಾನೆ. ಆದರೆ ಮದುವೆಯ ವಿಷಯವನ್ನು ಮರೆಮಾಚುವಂತೆ ಮಾತನಾಡಿದ್ದಾಳೆ. ಇದರಿಂದ ಅನುಮಾನಗೊಂಡ ವ್ಯಕ್ತಿ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾನೆ. ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಖತರ್ನಾಕ್ ದಂಪತಿಗೆ ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ.

  • 6 ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಮಗಳ ಪತಿಯನ್ನೇ ಹೊಡೆದು ಕೊಂದ್ರು!

    6 ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಮಗಳ ಪತಿಯನ್ನೇ ಹೊಡೆದು ಕೊಂದ್ರು!

    – ರಾಡ್‍ನಿಂದ ಹಿಗ್ಗಾಮುಗ್ಗ ಥಳಿಸಿ, ತಲೆಯನ್ನು ಕಲ್ಲಿನಿಂದ ಜಜ್ಜಿದ್ರು

    ಹೈದರಾಬಾದ್: ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಮಗಳ ಪತಿಯನ್ನು ಆಕೆಯ ಕುಟುಂಬಸ್ಥರೇ ಹೊಡೆದು ಕೊಂದ ವಿಲಕ್ಷಣ ಘಟನೆಯೊಂದು ಆಂಧ್ರಪ್ರದೇಶದ ಕರ್ನೂಲ್ ನಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ಆ್ಯಡಂ ಸ್ಮಿತ್ ಎಂದು ಗುರುತಿಸಲಾಗಿದ್ದು, ಫಿಸಿಯೋಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದನು. ಈತ 6 ತಿಂಗಳ ಹಿಂದೆ ಮಹೇಶ್ವರಿ ಎಂಬ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದನು. ಇಬ್ಬರು ಬೇರೆ ಬೇರೆ ಸಮುದಾಯದವರಾಗಿದ್ದರಿಂದ ಯುವತಿ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಮನೆಯವರ ತೀವ್ರ ಆಕ್ಷೇಪದ ಮಧ್ಯೆಯೂ ಯುವತಿ ಸ್ಮಿತ್ ನನ್ನು ವರಿಸಿ ಸುಖ ಸಂಸಾರ ಸಾಗಿಸುತ್ತಿದ್ದಳು.

    ಮದುವೆಯ ಬಳಿಕ ಈ ಜೋಡಿ ಅದೊನಿ ಪಟ್ಟಣದ ಕೃಷ್ತಪ್ಪ ನಗರದಲ್ಲಿ ವಾಸವಾಗಿತ್ತು. ಇತ್ತ ತಮ್ಮ ವಿರೋಧದ ನಡುವೆಯೇ ಮಗಳು ಮದುವೆಯಾಗಿದ್ದಾಳೆ ಎಂದು ಸಿಟ್ಟಿನಿಂದ ಆಕೆಯ ಜೊತೆ ಮನೆಯವರು ಮಾತು ಬಿಟ್ಟಿದ್ದರು. ಅಲ್ಲದೆ ಸೇಡು ತೀರಿಸಿಕೊಳ್ಳಲು ಹೊಂಚು ಹಾಕುತ್ತಿದ್ದರು.

    ಅಂತೆಯೇ ಒಂದು ದಿನ ಸ್ಮಿತ್ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಕೆಲ ದುಷ್ಕರ್ಮಿಗಳು ಆತನ ಬೈಕ್ ಅಡ್ಡಹಾಕಿದ್ದಾರೆ. ಅಲ್ಲದೆ ಏಕಾಏಕಿ ಕಬ್ಬಿಣದ ರಾಡ್ ಗಳಿಂದ ಸ್ಮಿತ್ ಮೇಲೆ ದಾಳಿ ಮಾಡಿದ್ದಾರೆ. ಕಲ್ಲಿನಿಂದ ತಲೆಯನ್ನು ಜಜ್ಜಿ ಕೊಲೆಗೈದು ಅಲ್ಲಿಂದ ಕಾಲ್ಕಿತ್ತಿದ್ದಾರೆ.

    ಪತಿಯ ಸಾವಿನಿಂದ ತೀವ್ರವಾಗಿ ನೊಂದ ಯುವತಿ, ಮನೆಯವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ನಮ್ಮ ಮದುವೆಗೆ ಮನೆಯವರು ಒಪ್ಪಿರಲಿಲ್ಲ. ಆದರೆ ವಿರೋಧದ ನಡುವೆಯೇ ನಾನು ಸ್ಮಿತ್ ನನ್ನು ಮದುವೆಯಾದೆ. ಅದೇ ಕಾರಣಕ್ಕೆ ಇಂದು ನನ್ನ ಪತಿಯನ್ನು ಕೊಲೆ ಮಾಡಿದ್ದಾರೆ ಎಂದು ಯುವತಿ ಪೊಲೀಸರ ಬಳಿ ದೂರಿದ್ದಾಳೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಹೊಸ ವರ್ಷಕ್ಕೆ ಮದ್ಯ ಖರೀದಿಸಲು 6 ತಿಂಗಳ ಮಗನನ್ನೇ ಮಾರಾಟಕ್ಕಿಟ್ಟ ಭೂಪ!

    ಹೊಸ ವರ್ಷಕ್ಕೆ ಮದ್ಯ ಖರೀದಿಸಲು 6 ತಿಂಗಳ ಮಗನನ್ನೇ ಮಾರಾಟಕ್ಕಿಟ್ಟ ಭೂಪ!

    – ಪತ್ನಿ ಹಣ ಕೊಡದಿದ್ದಕ್ಕೆ ಕಂದಮ್ಮನನ್ನೇ ಮಾರಿದ

    ಹೈದರಾಬಾದ್: ಮದ್ಯದ ಚಟಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬ ಹೊಸ ವರ್ಷದ ಸಂಭ್ರಮಾಚರಣೆಗೆ ಮದ್ಯ ಖರೀದಿಸಲು ತನ್ನ ಮಗನನ್ನೇ ಮಾರಾಟಕ್ಕಿಟ್ಟು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

    ರಾಜು ಮತ್ತು ಸಾರಾ ದಂಪತಿ ಮಲಕ್‍ಪೇಟೆ ಏರಿಯಾ ಆಸ್ಪತ್ರೆಯ ಬಳಿ ಫುಟ್‍ಪಾತ್‍ನಲ್ಲಿ ವಾಸಿಸುತ್ತಾ ಜೀವನ ನಡೆಸುತ್ತಿದ್ದರು. ದಂಪತಿಗೆ 6 ತಿಂಗಳ ಗಂಡು ಮಗುವೊಂದಿತ್ತು. ಹೊಸ ವರ್ಷದ ಗುಂಗಿನಲ್ಲಿದ್ದ ರಾಜು ತನ್ನ ಪತ್ನಿ ಸಾರಾ ಜೊತೆ ಮದ್ಯ ಖರೀದಿಸಲು ಹಣ ಕೇಳಿದ್ದಾನೆ. ಆಕೆ ಹಣ ಕೊಡಲು ನಿರಾಕರಿಸಿದ್ದರಿಂದ ತನ್ನ 6 ತಿಂಗಳ ಮಗುವನ್ನೇ ಮಾರಾಟ ಮಾಡಲು ಹೊರಟಿದ್ದಾನೆ.

    ಹೊಸ ವರ್ಷದ ಆಚರಣೆಗಾಗಿ ಮದ್ಯಕುಡಿಯಲು ಹಣ ಕೊಡದಿದ್ದ ಪತ್ನಿಯ ವಿರುದ್ಧ ಕೋಪಗೊಂಡ ರಾಜು ತನ್ನ ಆರು ತಿಂಗಳ ಗಂಡು ಮಗುವನ್ನು ಆಫ್ರೀನ್ ಎಂಬ ಏಜೆಂಟ್‍ನ ಸಹಾಯದಿಂದ ಮಾರಾಟ ಮಾಡಲು ಯತ್ನಿಸಿದ್ದಾನೆ. ಅದರಂತೆ ಏಜೆಂಟ್, ಗಂಡು ಮಗುವನ್ನು ಬಯಸುವ ಗ್ರಾಹಕರನ್ನು ಸಂಪರ್ಕಿಸಿ 70,000 ರೂಪಾಯಿಗೆ ಮಾರಾಟ ಮಾಡಿ ಕೊಡುವುದಾಗಿ ರಾಜುಗೆ ತಿಳಿಸಿದ್ದಾನೆ.

    ಆಫ್ರೀನ್ ಮಗುವಿನೊಂದಿಗೆ ಎಬ್ಬಿ ನಗರಕ್ಕೆ ಕರೆದುಕೊಂಡು ಬಂದು ಮಾರಾಟ ಮಾಡುತ್ತಿರುವುದರ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಚಾದರ್‍ಘಾಟ್ ಪೊಲೀಸರು, ರಾಜು ಮತ್ತು ಆಫ್ರೀನ್ ನಡುವೆ ಹಣದ ವಿಚಾರವಾಗಿ ಚೌಕಾಸಿ ನಡೆಯುತ್ತಿರುವುದನ್ನು ಗಮನಿಸಿದ್ದಾರೆ. ನಂತರ ಸಿಸಿಟಿವಿ ಆಧಾರದ ಮೂಲಕ ಮಗುವನ್ನು ಮಾರಾಟ ಮಾಡಿದ ಸ್ಥಳವನ್ನು ಗುರುತು ಮಾಡಿ ಮಗುವನ್ನು ರಕ್ಷಿಸಿದ್ದಾರೆ. ರಾಜು ಮತ್ತು ಆಫ್ರೀನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಚಾದರ್‍ಘಾಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಸಾಲ ನೀಡಿ ಬಡ್ಡಿಗಾಗಿ ಬೆದರಿಸುತ್ತಿದ್ದ ಗ್ಯಾಂಗ್- ಚೀನೀ ಮಹಿಳೆ ಸಹಿತ ಮೂವರು ಅರೆಸ್ಟ್

    ಸಾಲ ನೀಡಿ ಬಡ್ಡಿಗಾಗಿ ಬೆದರಿಸುತ್ತಿದ್ದ ಗ್ಯಾಂಗ್- ಚೀನೀ ಮಹಿಳೆ ಸಹಿತ ಮೂವರು ಅರೆಸ್ಟ್

    ಹೈದರಾಬಾದ್: ಸಾಲ ಕೋಡುತ್ತೇವೆ ಎಂದು ಹೇಳಿ, ಆನ್‍ಲೈನ್ ಆ್ಯಪ್ ಮೂಲಕವಾಗಿ ಜನರಿಗೆ ವಂಚಿಸುತ್ತಿದ್ದ ಗ್ಯಾಂಗ್‍ನ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ಚೀನೀ ಮಹಿಳೆ ಸಹಿತ ಮೂವರನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ಪುಣೆ ಮೂಲದ ಕಾಲ್ ಸೆಂಟರ್ ಮೂಲಕವಾಗಿ ಸಾಲಪಡೆದವರನ್ನು ಈ ಗ್ಯಾಂಗ್ ಬೆದರಿಸಿ ಹಣ ವಸೂಲಿ ಮಾಡುತ್ತಿತ್ತು. ಅಧಿಕ ಬಡ್ಡಿದರ ವಸೂಲಾತಿಗಾಗಿ ಬೆದರಿಕೆ ಹಾಕಿದ ಹಿನ್ನೆಲೆ ಹೈದರಾಬಾದ್‍ನ ವ್ಯಕ್ತಿಯೊಬ್ಬ ದೂರನ್ನು ನೀಡಿದ್ದನು. ಈ ದೂರನ್ನು ಆಧರಿಸಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

    ಕಳೆದ ಒಂದು ತಿಂಗಳಲ್ಲಿ ತೆಲಂಗಾಣದಲ್ಲಿ ಇಂತಹ ಕಂಪನಿಗಳ ಕಿರುಕುಳದಿಂದಾಗಿ ಮನನೊಂದು ಸಾಫ್ಟ್‍ವೇರ್ ಎಂಜಿನಿಯರ್ ಸೇರಿದಂತೆ ಮೂರು ಆತ್ಮಹತ್ಯೆ ಪ್ರಕರಣಗಳಾಗಿದ್ದವು. ನಂತರ ತ್ವರಿತ ಹಣ ಸಾಲ ನೀಡುವ ಅಪ್ಲಿಕೇಶನ್‍ಗಳ ಕುರಿತಾಗಿ ಎಚ್ಚೆತ್ತುಕೊಂಡ ಪೊಲೀಸರು ಈ ಜಾಲವನ್ನು ಭೇಧಿಸಲು ಆರಂಭಿಸಿದ್ದಾರೆ. ಈ ಹಿಂದೆ ಇದೇ ರೀತಿಯಾಗಿ ವಂಚನೆಯ ಜಾಲದಲ್ಲಿ ಶಾಮೀಲಾಗಿದ್ದ ಚೀನೀ ಪ್ರಜೆಯೊಬ್ಬನ ಸಹಿತ ನಾಲ್ವರನ್ನು ಬಂಧಿಸಲಾಗಿತ್ತು.

  • ಭಕ್ತೆಯನ್ನು 6 ಕಿ.ಮೀ ಹೆಗಲಲ್ಲಿ ಹೊತ್ತು ಸಾಗಿದ ಪೊಲೀಸ್ ಪೇದೆ

    ಭಕ್ತೆಯನ್ನು 6 ಕಿ.ಮೀ ಹೆಗಲಲ್ಲಿ ಹೊತ್ತು ಸಾಗಿದ ಪೊಲೀಸ್ ಪೇದೆ

    ಹೈದರಾಬಾದ್: ತಿರುಮಲ ದೇವಸ್ಥಾನಕ್ಕೆ ಪಾದಯಾತ್ರೆ ಹೊರಟಿರುವ ಭಕ್ತರಲ್ಲಿ ಒಬ್ಬರು ಮೂರ್ಛೆ ಹೋಗಿದ್ದರ. ಇವರನ್ನು ಪೊಲೀಸ್ ಪೇದೆಯೊಬ್ಬರು ಸುಮಾರು 6 ಕಿಲೋಮೀಟರ್ ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದಾರೆ.

    ಪೊಲೀಸ್ ಕಾನ್‍ಸ್ಟೇಬಲ್ ಅವರನ್ನು ಶೇಖ್ ಅರ್ಷದ್ ಎಂದು ಗುರುತಿಸಲಾಗಿದೆ. ಅರ್ಷದ್ ಅವರು ಪಾದಯಾತ್ರೆ ಹೊರಟಿರುವ ವೇಳೆ ದಣಿದು ಮೂರ್ಛೆ ಹೋಗಿದ್ದ ಮಹಿಳೆಯನ್ನು 6 ಕಿಲೋಮೀಟರ್‍ಗಳಷ್ಟು ದೂರ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ.

    ತಿರುಮಲ ತಿಮ್ಮಪ್ಪನ ಬಾಲಾಜಿ ದೇವಸ್ಥಾನಕ್ಕೆ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಭಕ್ತರು ಬರಿಗಾಲಿನಲ್ಲಿ ನಡೆದುಕೊಂಡು ದೇವರ ದರ್ಶನಕ್ಕೆ ಹೋಗುತ್ತಾರೆ. ಹೀಗಿರುವಾಗ ಬುಧವಾರದಂದು ಕೆಲವು ಭಕ್ತರು ಬರಿಗಾಲಿನಿಂದ ಬೆಟ್ಟವನ್ನು ಹತ್ತುತ್ತಿದ್ದರು. ಈ ವೇಳೆ ಇಬ್ಬರು ಭಕ್ತರು ಬರಿಗಾಲಿನಲ್ಲಿ ಬೆಟ್ಟ ಹತ್ತುವಾಗ ತುಂಬಾ ದಣಿದಿದ್ದರು. ಗುರುಪುರ ಪದಂ ಎಂಬ ಸ್ಥಳದಲ್ಲಿ ಬಂದು ನಾಗವೇರಮ್ಮ ಎಂಬವರು ಬಿಪಿಯಿಂದಾಗಿ ಮೂರ್ಛೆ ಹೋದಾಗ ಕರ್ತವ್ಯದಲ್ಲಿದ್ದ ಕಾನ್ ಸ್ಟೇಬಲ್ ಅರ್ಷದ್ ಮಹಿಳೆಯನ್ನ ರಕ್ಷಿಸಿದ್ದಾರೆ.

    ಪಕ್ಕಾ ರಸ್ತೆ ಇಲ್ಲದ ಕಾರಣ ಅರಣ್ಯ ಮಾರ್ಗದಲ್ಲೇ ಸುಮಾರು 6 ಕಿಲೋಮೀಟರ್ ದೂರ ಅರ್ಷದ್ ಮಹಿಳೆಯನ್ನು ಹೆಗಲ ಮೇಲೆ ಎತ್ತಿಕೊಂಡು ನಡೆದುಕೊಂಡು ಹೋಗಿದ್ದಾರೆ. ನಂತರ ಮಹಿಳೆಯನ್ನು ಹತ್ತಿರದ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಈ ಮೊದಲು ಅರ್ಷದ್ ಅವರು ನಾಗೇಶ್ವರ ರಾವ್ ಎಂಬ ಮತ್ತೊಬ್ಬರು ಹಿರಿಯರನ್ನು ಇದೇ ಅರಣ್ಯ ರಸ್ತೆಯ ಮೂಲಕ ಕರೆದುಕೊಂಡು ಹೋಗಿದ್ದರು. ಇಬ್ಬರೂ ಭಕ್ತರಿಗೂ ಅರ್ಷದ್ ಸಲ್ಲಿಸಿದ ಸೇವೆಗೆ ತಿಮ್ಮಪ್ಪನ ಭಕ್ತರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.

  • ಮದುವೆಯಾದ ಮೊದಲ ರಾತ್ರಿಯೇ ಪತ್ನಿಗೆ ಚಿತ್ರಹಿಂಸೆ ನೀಡಿದ ಟೆಕ್ಕಿ ಪತಿ!

    ಮದುವೆಯಾದ ಮೊದಲ ರಾತ್ರಿಯೇ ಪತ್ನಿಗೆ ಚಿತ್ರಹಿಂಸೆ ನೀಡಿದ ಟೆಕ್ಕಿ ಪತಿ!

    – ಅರವಳಿಕೆ ಇಂಜೆಕ್ಷನ್ ನೀಡಿ ಬ್ಲೇಡ್‍ನಿಂದ ಗಾಯ

    ಹೈದರಾಬಾದ್‍: ಟೆಕ್ಕಿಯೊಬ್ಬ ಮದುವೆಯ ಮೊದಲ ರಾತ್ರಿ ಪತ್ನಿಗೆ ಅರವಳಿಕೆಯ ಇಂಜೆಕ್ಷನ್ ನೀಡಿ ಚಿತ್ರ ಹಿಂಸೆ ಕೊಟ್ಟು, ಸೈಕೋ ನಂತೆ ವರ್ತಿಸಿರುವ ಘಟನೆ ನಡೆದಿದೆ.

    ಹೈದರಾಬಾದ್‍ನಲ್ಲಿ ಸಾಫ್ಟ್‍ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುವ ಗುಂಟೂರು ಮೂಲದ ಯುವತಿ, ಹೈದರಾಬಾದ್‍ನಲ್ಲಿ ಟೆಕ್ಕಿ ಆಗಿರುವ ಪ್ರಕಾಶಂ ಜಿಲ್ಲೆಯ ಯುವಕನನ್ನು ಮದುವೆಯಾಗಿದ್ದಳು.

    ಮದುವೆ ನಂತರ ಹೊಸ ಜೀವನಕ್ಕೆ ಕಾಲಿಟ್ಟ ಯುವತಿ ವೈವಾಹಿಕ ಜೀವನದ ಕನಸು ಕಂಡಿದ್ದಳು. ಆದರೆ ಟೆಕ್ಕಿ ಪತಿ, ಪತ್ನಿಗೆ ಅರವಳಿಕೆ ಇಂಜೆಕ್ಷನ್ ನೀಡಿ, ಬ್ಲೇಡ್ ನಿಂದ ಆಕೆಗೆ ಗಾಯವನ್ನು ಮಾಡಿದ್ದಾನೆ. ಪತಿ ವಿಚಿತ್ರ ವರ್ತನೆಯನ್ನು ನೋಡಿ ಪತ್ನಿ ಹೆದರಿದ್ದಾಳೆ. ಪತಿ ಸರಿ ಹೋಗ ಬಹುದು ಎಂದು ಕಾದಿದ್ದಾಳೆ. ಆದರೆ ಪತಿಯ ವರ್ತನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋದಾಗ ಯುವತಿ ಪೋಷಕರಿಗೆ ತಿಳಿಸಿದ್ದಾಳೆ.

    ವಧುವಿನ ತಂದೆ ವರನ ಪೋಷಕರಲ್ಲಿ ಪ್ರಶ್ನೆ ಮಾಡಿದ್ದಾರೆ. ಆದರೆ ಇದರಿಂದ ಕುಪಿತಗೊಂಡ ವರನ ತಂದೆ ನಿಮ್ಮ ಮಗಳು ಕೆಲಸಕ್ಕೆ ಬಾರದವಳು ಎಂದು ಹೀಯಾಳಿಸಿದ್ದಾರೆ. ಇದಾದ ಬಳಿಕ ವಧುವಿನ ಪಾಲಕರು ಗುಂಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿಗೆ ಸ್ಪಂದಿಸಿರುವ ಎಸ್‍ಪಿ ಪ್ರಕರಣವನ್ನು ನರಸರಾವ್‍ಪೇಟೆಗೆ ವರ್ಗಾಹಿಸಿ ತನಿಖೆಗೆ ಆದೇಶಿಸಿದ್ದಾರೆ.

  • ನಗರ ಸಭೆಯವರು ಕಸ ಮನೆ ಮುಂದೆ ಸುರಿದಿದ್ದಕ್ಕೆ ಆಘಾತಗೊಂಡು ಮಹಿಳೆ ಸಾವು

    ನಗರ ಸಭೆಯವರು ಕಸ ಮನೆ ಮುಂದೆ ಸುರಿದಿದ್ದಕ್ಕೆ ಆಘಾತಗೊಂಡು ಮಹಿಳೆ ಸಾವು

    ಹೈದರಾಬಾದ್: ನಗರಸಭೆಯವರು ಮನೆ ಮುಂದೆ ಕಸ ಹಾಕಿದ್ದಕ್ಕೆ ಆಘಾತಕ್ಕೊಳಗಾಗಿ ಮಹಿಳೆ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ನಾರಾಯಣಖೇಡ್ ಜಿಲ್ಲೆಯಲ್ಲಿ ನಡೆದಿದೆ.

    ನಾರಾಯಣ್‍ಖೇಡ್ ನಗರಸಭೆಯ ಅಧಿಕಾರಿಗಳು ಭೂಮವ್ವ ಅವರ ಮನೆಯ ಮುಂದೆ ಡಿ.15ರಂದು ಕಸ ತಂದು ಸುರಿದಿದ್ದರು. ಮನೆಯ ತೆರಿಗೆ ಪಾವತಿಸದ್ದಕ್ಕೆ ಅಧಿಕಾರಿಗಳು ಈ ರೀತಿ ದುರ್ವರ್ತನೆ ತೋರಿದ್ದರು. ಇದರಿಂದ ಆಘಾತಕ್ಕೊಳಗಾದ ಮಹಿಳೆ ಸಾವನ್ನಪ್ಪಿದ್ದಾಳೆ.

    ನಗರಸಭೆಯವರು ಮನೆಯ ಮುಂದೆ ಕಸ ಹಾಕಿದ್ದರಿಂದ ಭೂಮವ್ವ ಅವರು ತೀವ್ರ ಅಸಮಾಧಾನಗೊಂಡಿದ್ದರು. ಅಲ್ಲದೆ ಅವಮಾನವಾಗಿದ್ದರಿಂದ ತೀವ್ರ ಆಘಾತ ಉಂಟಾಗಿ ಮಹಿಳೆ ಸಾವನ್ನಪ್ಪಿದ್ದಾಳೆ. ಶನಿವಾರ ಮಹಿಳೆಯ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಬಳಿಕ ಕುಟುಂಬಸ್ಥರು ಸಂಗಾರೆಡ್ಡಿಯಲ್ಲಿನ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಇಂದು ಸಾವನ್ನಪ್ಪಿದ್ದಾಳೆ.

    ಕುಟುಂಬಸ್ಥರು ನಗರ ಸಭೆಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರಿಗಳ ವಿಪರೀತ ಕ್ರಮದಿಂದಾಗಿ ಭುಮವ್ವ ಅವರಿಗೆ ಅವಮಾನವಾಗಿ ಅಸ್ವಸ್ಥರಾಗಿದ್ದರು. ಬಳಿಕ ಸಾವನ್ನಪ್ಪಿದ್ದಾರೆ ಎಂದು ದೂರಿದ್ದಾರೆ.

    ನಗರಸಭೆ ಅಧಿಕಾರಿಗಳು ಡಿಸೆಂಬರ್ 15ರಂದು ಭುಮವ್ವ ಅವರ ಮನೆಯ ಮುಂದೆ ಕಸ ಸುರಿದಿದ್ದರು. ಬಳಿಕ ಡಿಸೆಂಬರ್ 17ರಂದು ಕಸವನ್ನು ತೆರವುಗೊಳಿಸಿದ್ದರು. ಇದರಿಂದ ಆಘಾತಕ್ಕೊಳಗಾಗಿ ಭೂಮವ್ವ ಆರೋಗ್ಯದಲ್ಲಿ ಏರುಪೇರಾಗಿತ್ತು. ಬಳಿಕ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆ ಕುರಿತು ಕುಟುಂಬಸ್ಥರಿಂದ ದೂರು ಸ್ವೀಕರಿಸಲಾಗಿದ್ದು, ಮಹಿಳೆ ಅಸ್ತಮಾದಿಂದ ಬಳಲುತ್ತಿದ್ದಳು. ಅಲ್ಲದೆ ವಿವಿಧ ಖಾಯಿಲೆ ಹೊಂದಿದ್ದರು ಎಂದು ಅಧಿಕಾರಿಗಳು ವಾದಿಸಿದ್ದಾರೆ.

  • 10 ರೂಪಾಯಿಗೆ ಚಿಕಿತ್ಸೆ ನೀಡುವ ಯುವ ವೈದ್ಯೆ

    10 ರೂಪಾಯಿಗೆ ಚಿಕಿತ್ಸೆ ನೀಡುವ ಯುವ ವೈದ್ಯೆ

    – ಅತೀ ಕಡಿಮೆ ದರದಲ್ಲಿ ಬಡವರ ಸೇವೆ

    ಹೈದರಾಬಾದ್: ಯುವ ಭಾರತೀಯ ವೈದ್ಯೆಯೊಬ್ಬರು ಕೇವಲ 10 ರೂಪಾಯಿಗೆ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಇಂದಿನ ದಿನಗಳಲ್ಲಿ ಭಾರತದ ಖಾಸಗಿ ಆಸ್ಪತ್ರೆಗಳಲ್ಲಿ ಬಡವರು ಚಿಕಿತ್ಸೆ ಪಡೆಯುವುದು ಅಸಾಧ್ಯವಾಗಿದೆ. ಆದರೆ ಆಂಧ್ರಪ್ರದೇಶದ ಯುವ ವೈದ್ಯೆ ಡಾ. ನೂರ್ ಪರ್ವೀನಾ ಮಾನವೀಯತೆಯ ದೃಷ್ಟಿಯಿಂದ ಸೇವೆ ಸಲ್ಲಿಸುವ ಒಂದು ಅದ್ಭುತವಾದ ಕೆಲಸವನ್ನು ಮಾಡುತ್ತಿದ್ದಾರೆ.

    ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಖಾಸಗಿ ವೈದ್ಯಕೀಯ ಕಾಲೇಜಿನಿಂದ ವೈದ್ಯಕೀಯ (ಎಂಬಿಬಿಎಸ್) ಕೋರ್ಸ್ ಮುಗಿಸಿದ ಡಾ.ನೂರ್ ಪರ್ವೀನಾ, ಆರ್ಥಿಕವಾಗಿ ದುರ್ಬಲಗೊಂಡಿರುವ ಕುಟುಂಬಗಳಿಗೆ ವೈದ್ಯಕೀಯ ಸೇವೆಯಿಂದ ವಂಚಿತರಾಗದಂತೆ ನೋಡಿಕೊಳ್ಳಲು ಪ್ರತಿ ರೋಗಿಗೆ ಕೇವಲ 10 ರೂ. ಚಾರ್ಜ್ ಮಾಡುವ ಮೂಲಕವಾಗಿ, ಅತೀ ಕಡಿಮೆ ದುಡ್ಡಿನಲ್ಲಿ ಉತ್ತಮ ಚಿಕಿತ್ಸೆಯನ್ನು ನೀಡುತ್ತಿದ್ದಾರೆ.

    ಡಾ. ನೂರ್ ಪರ್ವೀನಾ ಆಂಧ್ರಪ್ರದೇಶದ ವಿಜಯವಾಡದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದಾರೆ. ಅರ್ಹತೆಯ ಆಧಾರದ ಮೇಲೆ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಎಂಬಿಬಿಎಸ್ ಕೋರ್ಸ್ ಗೆ ಸೇರಿಕೊಂಡರು. ವೈದ್ಯಕೀಯ ಕೋರ್ಸ್‍ನ್ನು ಮುಗಿಸಿದರು. ಉತ್ತಮವಾದ ಅಂಕಗಳಿಸಿ ಕಾಲೇಜಿನಿಂದ ಹೊರ ಬರುವಾಗ ಪರ್ವೀನಾ ವೈದ್ಯಕೀಯ ಸೇವೆ ಅಗತ್ಯ ಇರುವವರಿಗೆ ನನ್ನಿಂದ ಆದಷ್ಟು ಸಹಾಯ ಮಾಡಬೇಕು ಎಂದು ನಿರ್ಧರಿಸಿ ಬಂದಿದ್ದರು. ಇದೀಗ ಅದರಂತೆ ರೋಗಿಗಳ ಸೇವೆಯನ್ನು ಮಾಡುತ್ತಿದ್ದಾರೆ.

    ನನ್ನ ವಿದ್ಯಾಭ್ಯಾಸ ಮುಗಿಸಿ ವಿಜಯವಾಡದಲ್ಲಿರುವ ಮನೆಗೆ ಹಿಂದಿರುಗಿದಾಗ ನನ್ನ ಪೆÇೀಷಕರಿಗೆ ನನ್ನ ಕ್ಲಿನಿಕ್ ಅನ್ನು ಪ್ರಾರಂಭಿಸುತ್ತೇನೆ ಎಂದು ತಿಳಿಸಿದೆ. ಬಡವರಿಗೆ ಕಡಿಮೆ ದುಡ್ಡಿನಲ್ಲಿ ಸೇವೆಯನ್ನು ನೀಡುತ್ತೇನೆ. ನನ್ನ ಪೋಷಕರು ತುಂಬಾ ಸಂತೋಷಪಟ್ಟರು ಮತ್ತು ನನ್ನನ್ನು ಆಶೀರ್ವದಿಸಿದರು. ದುಬಾರಿ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗದ ಜನರಿಗೆ ಸಹಾಯವಾಗಲು ಕಡಪಾ ಪ್ರದೇಶದಲ್ಲಿ ನನ್ನ ಕ್ಲಿನಿಕ್ ಅನ್ನು ತೆರೆದಿದ್ದೇನೆ ಎಂದು ಡಾ ಪರ್ವೀನಾ ಹೇಳಿದರು.

    ನಾನು ಬಡವರಿಗೆ ಸಹಾಯ ಮಾಡುವ ಸ್ಪೂರ್ತಿ ನನ್ನ ತಂದೆ- ತಾಯಿಯಿಂದ ಬಂದಿದೆ. ನನ್ನ ಪೋಷಕರು ಮೂರು ಮಕ್ಕಳನ್ನು ದತ್ತು ಪಡೆದುಕೊಂಡು ಅವರಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಈ ಮೂಲಕವಾಗಿ ನನಗೆ ಜನರ ಸೇವೆ ಮಾಡುವ ಆಲೋಚನೆ ಬಂದಿದೆ ಎಂದು ಹೇಳುತ್ತಾರೆ.

    ಹೊರರೋಗಿ ಗಳಿಗೆ 10 ರೂ., ಬೆಡ್ ಚಾರ್ಜ್ 50.ರೂ ಮಾತ್ರ ತೆಗೆದುಕೊಳ್ಳುತ್ತೇನೆ. ಪ್ರತಿದಿನ ಸುಮಾರು 40 ರೋಗಿಗಳು ನನ್ನ ಚಿಕಿತ್ಸಾಲಯಕ್ಕೆ ಭೇಟಿ ನೀಡುತ್ತಾರೆ ಎಂದು ಪರ್ವೀನಾ ಹೇಳುತ್ತಾರೆ.

    ಜಿಲ್ಲಾ ಕೇಂದ್ರ ನಗರದಲ್ಲಿ, ಸಾಮಾನ್ಯವಾಗಿ ಖಾಸಗಿ ವೈದ್ಯರು ಪ್ರತಿ ಭೇಟಿಗೆ 150 ರಿಂದ 200 ರೂ. ವರೆಗೆ ಶುಲ್ಕ ವಿಧಿಸುತ್ತಾರೆ. 10 ರೂ. ಗೆ ಚಿಕಿತ್ಸೆ ನೀಡುವ ಡಾ. ನೂರ್ ಪರ್ವೀನಾ ಬಡವರಿಗೆ ಮತ್ತು ನಿರ್ಗತಿಕರಿಗೆ ಭರವಸೆಯ ಕಿರಣವಾಗಿದ್ದಾರೆ.

     

    ಕ್ಲಿನಿಕ್ ಅನ್ನು ಪ್ರಾರಂಭಿಸುವ ಮೊದಲು ಡಾ. ಪರ್ವೀನಾ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯ ಎರಡು ಸಾಮಾಜಿಕ ಸಂಘಟನೆಯನ್ನು ಪ್ರಾರಂಭಿಸಿದ್ದರು. ಒಂದು ಸಂಸ್ಥೆ, ಸ್ಪೂರ್ತಿದಾಯಕ ಆರೋಗ್ಯಕರ ಯಂಗ್ ಇಂಡಿಯಾ, ಮಕ್ಕಳು ಮತ್ತು ಯುವಜನರಿಗೆ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಸ್ಫೂರ್ತಿ ನೀಡಲು ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದರು. ತನ್ನ ಅಜ್ಜನ ನೆನಪಿಗಾಗಿ ‘ನೂರ್ ಚಾರಿಟೇಬಲ್ ಟ್ರಸ್ಟ್’ ಅನ್ನು ಸಹ ಪ್ರಾರಂಭಿಸಿದ್ದಾರೆ. ಈ ಟ್ರಸ್ಟ್‍ನ ಅಡಿಯಲ್ಲಿಯೇ ಅವರು ಕೊವೀಡ್ 19 ಸಾಂಕ್ರಾಮಿಕ ರೋಗದಿಂದ ಉಂಟಾದ ಲಾಕ್‍ಡೌನ್ ಸಮಯದಲ್ಲಿ ಬಡವರಿಗೆ ಸಹಾಯ ಮಾಡಿದ್ದರು.

    ಡಾ. ಪರ್ವೀನ್ ಅವರ ಮುಂದಿನ ಯೋಜನೆಗಳಲ್ಲಿ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆಯುವುದು ಮತ್ತು ಹಿಂದುಳಿದ ವಿಭಾಗಗಳ ಮೇಲೆ ವಿಶೇಷ ಗಮನಹರಿಸಿ ಬಹು-ವಿಶೇಷ ಆಸ್ಪತ್ರೆಯನ್ನು ಸ್ಥಾಪಿಸುವುದಾಗಿದೆ.

    ಡಾ.ನೂರ್ ಪರ್ವೀನಾ ಅವರ ಸಾಮಾಜಿಕ ಸೇವೆಯಯನ್ನು ಗುರುತಿಸಿ ಪ್ರಶಸ್ತಿಗಳು ದೊರಕಿವೆ. ಅನೇಕ ಸಾಮಾಜಿಕ ಸಂಸ್ಥೆಗಳು ಇವರನ್ನು ಗುರುತಿಸಲು ಪ್ರಾರಂಭಿಸಿವೆ.

  • ಮುತ್ತಿನ ನಗರಿಗೆ ಬಿಜೆಪಿ ಮುತ್ತಿಗೆ – 4 ರಿಂದ 49 ಸ್ಥಾನ ಗೆದ್ದಿದ್ದು ಹೇಗೆ?

    ಮುತ್ತಿನ ನಗರಿಗೆ ಬಿಜೆಪಿ ಮುತ್ತಿಗೆ – 4 ರಿಂದ 49 ಸ್ಥಾನ ಗೆದ್ದಿದ್ದು ಹೇಗೆ?

    – ಹೈದರಾಬಾದ್‌ ಕೋಟೆಯಲ್ಲಿ ಅರಳಿದ ಕಮಲ
    – ಟಿಆರ್‌ಎಸ್‌ 55, ಎಐಎಂಎಂಗೆ 44 ಸ್ಥಾನ

    ಹೈದರಾಬಾದ್‌: ಗ್ರೇಟರ್‌ ಹೈದರಾಬಾದ್‌ ಮುನ್ಸಿಪಲ್‌ ಕಾರ್ಪೊರೇಷನ್‌ (ಜಿಎಚ್‌ಎಂಸಿ) ಚುನಾವಣೆಯಲ್ಲಿ ಬಿಜೆಪಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಮೂಲಕ ಮುಂದಿನ ವಿಧಾನಸಭಾ ಚುನಾವಣೆಗೆ ಈಗಲೇ ತನ್ನ ಅಡಿಪಾಯವನ್ನು ಗಟ್ಟಿ ಮಾಡಿದೆ.

    150 ವಾರ್ಡ್‍ಗಳ ಪೈಕಿ 49ರಲ್ಲಿ ಬಿಜೆಪಿ ಜಯ ಸಾಧಿಸಿದೆ. ಸಿಎಂ ಚಂದ್ರಶೇಖರ್‌ ರಾವ್‌ ಅವರ ಟಿಆರ್‌ಎಸ್‌ 55, ಅಸಾದುದ್ದೀನ್ ಒವೈಸಿಯ ಎಐಎಂಎಂ 44 ವಾರ್ಡ್‌ಗಳನ್ನು ಗೆದ್ದುಕೊಂಡರೆ ಕಾಂಗ್ರೆಸ್‌ 2 ಸ್ಥಾನಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಸಾಧನೆಯೊಂದಿಗೆ ದಕ್ಷಿಣ ಭಾರತದಲ್ಲಿ ಕರ್ನಾಟಕ ಬಳಿಕ ತೆಲಂಗಾಣದಲ್ಲಿ ಅಧಿಕಾರ ಹಿಡಿಯಲು ಮಾಡಿದ ಮೊದಲ ದೊಡ್ಡ ಪ್ರಯತ್ನ ಫಲ ನೀಡಿದೆ. ಅಷ್ಟೇ ಅಲ್ಲದೇ ಚಂದ್ರಶೇಖರ್ ರಾವ್ ಮತ್ತು ಓವೈಸಿ ಕಪಿಮುಷ್ಠಿಯಲ್ಲಿದ್ದ ಮುತ್ತಿನಗರಿಗೆ ಬಿಜೆಪಿ ಮುತ್ತಿಗೆ ಹಾಕಿದಂತಾಗಿದೆ.

    ವಿಶೇಷ ಏನೆಂದರೆ 2016ರ ಚುನಾವಣೆಯಲ್ಲಿ ಟಿಆರ್‌ಎಸ್‌ 99, ಎಐಎಂಎಂ 44, ಕಾಂಗ್ರೆಸ್‌ 3 ವಾರ್ಡ್‌ಗಳನ್ನು ಗೆದ್ದುಕೊಂಡಿದ್ದರೆ ಬಿಜೆಪಿ ಕೇವಲ 4 ವಾರ್ಡ್‌ಗಳನ್ನು ಮಾತ್ರ ಗೆದ್ದುಕೊಂಡಿತ್ತು. ಆದರೆ ಈ ಬಾರಿ ಬಿಜೆಪಿ ಈ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿತ್ತು. ಪರಿಣಾಮ ಗೃಹ ಸಚಿವ ಅಮಿತ್‌ ಶಾ ಆದಿಯಾಗಿ ಕೇಂದ್ರದ ಬಿಜೆಪಿ ನಾಯಕರು ವ್ಯಾಪಕ ಪ್ರಚಾರ ಕೈಗೊಂಡಿದ್ದರು.

    ಹೈದರಾಬಾದ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಏರುವಷ್ಟು ವಾರ್ಡ್ ಗೆಲ್ಲದಿದ್ದರೂ ಪಕ್ಷ ಸಂಘಟನೆ ಬಲವಾಗಿದೆ.

    ಬಿಜೆಪಿ ಗೆದ್ದಿದ್ದು ಹೇಗೆ?
    * ತೆಲಂಗಾಣದಲ್ಲಿ ಬೂತ್ ಮಟ್ಟದಲ್ಲಿ ಪಕ್ಷ ಬಲವರ್ಧನೆ
    * ಬಿಜೆಪಿ ಅಗ್ರನಾಯಕರಾದ ಅಮಿತ್‍ಶಾ, ಜೆಪಿ ನಡ್ಡಾ, ಯೋಗಿ ಆದಿತ್ಯನಾಥ್, ತೇಜಸ್ವಿ ಸೂರ್ಯ, ಸಿಟಿ ರವಿ, ಸುಧಾಕರ್, ಸತೀಶ್‍ರೆಡ್ಡಿ ಪ್ರಚಾರ
    * ಹೈದರಬಾದನ್ನು `ಮಿನಿ ಇಂಡಿಯಾ-ಐಟಿ ಹಬ್’ ಮಾಡ್ತೇವೆ ಎಂದಿದ್ದ ಅಮಿತ್ ಶಾ
    * ಹೈದರಾಬಾದ್ ಹೆಸರನ್ನು `ಭಾಗ್ಯ ನಗರ’ ಮಾಡುತ್ತೇವೆ ಎಂದು ಘೋಷಣೆ
    * ನಿಜಾಮರ ಸಂಸ್ಕೃತಿ ಬದಲಿಸ್ತೇವೆ ಎಂದಿದ್ದ ಯೋಗಿ ಆದಿತ್ಯನಾಥ್
    * ಕೊರೊನಾ ಲಸಿಕೆ ಉಚಿತ ಮತ್ತು ಟೆಸ್ಟಿಂಗ್
    * ಮುಸಿ ನದಿ ನವೀಕರಣ, ಉಚಿತ ನೀರು, 100 ಯುನಿಟ್ ಒಳಗೆ ಬಳಸಿದರೆ ಉಚಿತ ವಿದ್ಯುತ್
    * ಮೆಟ್ರೋ, ಸಿಟಿ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ