Tag: Hyderabad

  • ಆಸ್ಪತ್ರೆಯಿಂದ ಜಿಗಿದು ಆತ್ಮಹತ್ಯೆಗೆ ಶರಣಾದ ಕೊರೊನಾ ಸೋಂಕಿತ

    ಆಸ್ಪತ್ರೆಯಿಂದ ಜಿಗಿದು ಆತ್ಮಹತ್ಯೆಗೆ ಶರಣಾದ ಕೊರೊನಾ ಸೋಂಕಿತ

    ಹೈದರಾಬಾದ್: ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಸೋಂಕಿಗೆ ಹೆದರಿ ಆಸ್ಪತ್ರೆಯ ಮಹಡಿಯಿಂದ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ.

    ಪ್ರಾಣ ಕಳೆದುಕೊಂಡ ವ್ಯಕ್ತಿಯನ್ನು 77 ವರ್ಷ ಪ್ರಾಯದ ಕೆ ನಾರಾಯಣ್ ಎಂದು ಗುರುತಿಸಲಾಗಿದೆ. ಕೊರೊನಾ ಚಿಕಿತ್ಸೆಗೆಂದು ಹೈದರಾಬಾದ್‍ನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಮಹಡಿಯ ಮೇಲಿನಿಂದ ಹಾರಿ ಪ್ರಾಣ ಬಿಟ್ಟಿದ್ದಾರೆ.

    ಮೂಲತಃ ವೆಮುಲವಾಡದವರಾದ ಕೆ ನಾರಾಯಣ್ ಕೊಂಡಾಪುರ್‍ನಲ್ಲಿ ಇಬ್ಬರು ಗಂಡು ಮಕ್ಕಳೊಂದಿಗೆ ನೆಲೆಸಿದ್ದರು. ಮಾಹಿತಿ ಪ್ರಕಾರ ಅವರು ಮಾನಸಿಕ ಅಸ್ವಸ್ಥರಾಗಿದ್ದರು ಎಂದು ವರದಿಯಾಗಿದೆ.

    ಆಸ್ಪತ್ರೆಯ ವೈದ್ಯರು ಕೊಟ್ಟಿರುವ ವರದಿ ಪ್ರಕಾರ ನಾರಾಯಣ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆ ಜನವರಿ 13ರಂದು ಕೊಂಡಾಪುರ್‍ನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ನರ್ಸ್‍ಗಳಿಂದ ಚಿಕಿತ್ಸೆ ಪೆಡೆಯುತ್ತಿದ್ದ ವೇಳೆ ಆಸ್ಪತ್ರೆಯ 2ನೇ ಮಹಡಿಯ ಮೇಲಿಂದ ಹಾರಿದ್ದಾರೆ. ಇದನ್ನು ಗಮನಿಸಿ ಆಸ್ಪತ್ರೆ ಸಿಬ್ಬಂದಿ ತಕ್ಷಣ ಆಸ್ಪತ್ರೆಯ ತುರ್ತುಚಿಕಿತ್ಸಾ ಘಟಕಕ್ಕೆ ದಾಖಲಿಸಿದ್ದಾರೆ ಆದರೆ ಅಷ್ಟೊತ್ತಿಗಾಗಲೇ ಅವರ ಪ್ರಾಣಪಕ್ಷಿ ಹಾರಿಹೊಗಿತ್ತು.

    ನಂತರ ಮನೆಯವರೊಂದಿಗೆ ವಿಚಾರ ತಿಳಿಸಿ ಅವರಿಗೆ ಶವವನ್ನು ಹಸ್ತಾಂತರಿಸಲಾಯಿತು. ಈ ಹಿಂದೆ 60ವರ್ಷ ಪ್ರಾಯದ ವ್ಯಕ್ತಿಯೊಬ್ಬರು ಇದೇ ರೀತಿ ಕೊರೊನಾಗೆ ಹೆದರಿ ಖಾಸಗಿ ಆಸ್ಪತ್ರೆಯ ಮೇಲಿಂದ ಹಾರಿ ಪ್ರಾಣಕಳೆದುಕೊಂಡಿದ್ದ ಘಟನೆ ಹೈದರಾಬಾದ್‍ನಲ್ಲಿ ವರದಿಯಾಗಿತ್ತು.

  • ಮದುವೆ ಮಾಡುವಂತೆ ಒತ್ತಾಯಿಸಿದ ಮಗನನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ತಂದೆ

    ಮದುವೆ ಮಾಡುವಂತೆ ಒತ್ತಾಯಿಸಿದ ಮಗನನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ತಂದೆ

    -ಕುಡಿದು ಬಂದು ಮಗನ ಮೇಲೆ ಹಲ್ಲೆ

    ಹೈದರಾಬಾದ್: ಮದುವೆ ಮಾಡುವಂತೆ ಒತ್ತಾಯಿಸಿದ ಮಗನನ್ನೇ ತಂದೆ ಕೊಡಲಿಯಿಂದ ಕೊಚ್ಚಿ ಕೊಂದ ಘಟನೆ ಹೈದರಾಬಾದ್‍ನ ರಂಗರೆಡ್ಡಿ ಜಿಲ್ಲೆಯ ಶಾದ್‍ನಗರ ಕ್ಷೇತ್ರದ ನಂದಿಗಮ ಮಂಡಲದಲ್ಲಿ ನಡೆದಿದೆ.

    ತಂದೆಯ ಕೈಯಿಂದ ಕೊಲೆಯಾದ ಮಗನನ್ನು ನರೇಶ್ ಎಂದು ಗುರುತಿಸಲಾಗಿದೆ. ಎಲ್ಲಯ್ಯ, ಮಗನನ್ನು ಕೊಲೆ ಮಾಡಿರುವ ತಂದೆ. ಮದುವೆ ಮಾಡುವಂತೆ ಮಗ ಪ್ರತಿನಿತ್ಯ ಹಿಂಸೆ ಮಾಡುತ್ತಾನೆ ಎಂದು ಎಲ್ಲಯ್ಯ ತನ್ನ ಮಗನನ್ನು ಕೊಂದಿದ್ದಾನೆ.

    ನರೇಶ್ ತನ್ನ ಮದುವೆ ಮಾಡುವಂತೆ ತನ್ನ ತಂದೆಗೆ ಒತ್ತಾಯ ಮಾಡುತ್ತಿದ್ದನು. ತಂದೆ-ಮಗನಿಗೆ ಈ ವಿಚಾರವಾಗಿ ಪ್ರತಿನಿತ್ಯ ಜಗಳವಾಗುತ್ತಿತ್ತು. ಶನಿವಾರ ಸಂಜೆ ಎಲ್ಲಯ್ಯ ಕುಡಿದು ಮನೆಗೆ ಬಂದಿದ್ದಾನೆ. ಈ ವೇಳೆ ತಂದೆ-ಮಗನ ಮಧ್ಯೆ ಇದೇ ವಿಚಾರವಾಗಿ ಗಲಾಟೆಯಾಗಿದೆ. ಸಿಟ್ಟನಿಂದ ತಂದೆ ಹತ್ತಿರದಲ್ಲಿದ್ದ ಕೊಡಲಿಯನ್ನು ತೆಗೆದುಕೊಂಡು ಬಂದು ಮಗನಿಗೆ ಬಲವಾಗಿ ಹೊಡೆದಿದ್ದಾನೆ. ಈ ವೇಳೆ ನರೇಶ್ ಗಂಭೀರವಾಗಿ ಗಾಯಗೊಂಡಿದ್ದಾನೆ.

    ತಕ್ಷಣ ನರೇಸ್‍ನನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ನರೇಶ್ ತಾಯಿ ಪತಿಯ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ಮನೆ ಕೆಲಸದವಳ ಮುಖವಾಡ ಧರಿಸಿ 8.60 ಲಕ್ಷ ರೂ. ಚಿನ್ನ ಕಳ್ಳತನ

    ಮನೆ ಕೆಲಸದವಳ ಮುಖವಾಡ ಧರಿಸಿ 8.60 ಲಕ್ಷ ರೂ. ಚಿನ್ನ ಕಳ್ಳತನ

    – ಶ್ರೀಮಂತ ವೃದ್ಧೆಯರ ಮನೆಸೇರಿ ಕಳ್ಳತನ

    ಹೈದರಾಬಾದ್: ವಯಸ್ಸಾದ ಮಹಿಳೆ ಇರುವ ಮನೆಗೆ ಕೆಲಸದವಳಾಗಿ ಸೇರಿಕೊಂಡು, 8.60 ಲಕ್ಷ ರೂ.ಗಳ 23 ಚಿನ್ನದ ಆಭರಣಗಳನ್ನು ದೋಚಿ ಪರಾರಿಯಾಗಿದ್ದ ಮಹಿಳೆಯನ್ನು ಹೈದರಾಬಾದ್‍ನ ಅಮಲಾಪುರಂ ಪೊಲೀಸರು ಬಂಧಿಸಿದ್ದಾರೆ.

    ಅನಂತಲಕ್ಷ್ಮಿ(80) ಅವರ ಮನೆಯಲ್ಲಿ ಕಳ್ಳತನವಾಗಿದೆ. ಕಳ್ಳತನ ಮಾಡಿ ಪರಾರಿಯಾಗಿರುವ ಮಹಿಳೆಯನ್ನು ಮೇರಿ ಸುನೀತಾ(42)ಎಂದು ಗುರುತಿಸಲಾಗಿದೆ. ಈಕೆ ಗುಂಟೂರು ಜಿಲ್ಲೆಯ ನಿವಾಸಿ.

    ಅಮಲಪುರಂ ಪ್ರದೇಶದಲ್ಲಿರುವ ಮನೆಯಲ್ಲಿ ವೃದ್ಧೆ ಅನಂತಲಕ್ಷ್ಮಿ ಒಂಟಿಯಾಗಿ ವಾಸಿಸುತ್ತಿದ್ದು, ಪಾಶ್ರ್ವವಾಯುವಿಗೆ ತುತ್ತಾಗಿದ್ದಳು. ಹೀಗಾಗಿ ಕೆಲಸಕ್ಕೆ ಓರ್ವ ಹೆಂಗಸನ್ನು ಮನೆಯಲ್ಲಿ ಇರಿಸಿಕೊಂಡಿದ್ದಳು. ಮೂರು ತಿಂಗಳಿಂದ ಕೆಲಸ ಮಾಡುತ್ತಿದ್ದ ಸುನೀತಾ, ಒಂದು ದಿನ ಮಧ್ಯರಾತ್ರಿ ಚಿನ್ನದ ಆಭರಣಗಳೊಂದಿಗೆ ಮನೆಯಿಂದ ಪರಾರಿಯಾಗಿದ್ದಾಳೆ. ವೃದ್ಧೆ ಮನೆಯಲ್ಲಿ ಕಳ್ಳತನವಾಗಿರುವುದನ್ನು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದಾಳೆ.

    ಮೇರಿ ಸುನೀತಾ ಸೆಲ್ ಪೋನ್ ಸಂಖ್ಯೆಯನ್ನು ಆಧರಿಸಿ ಅವಳನ್ನು ಪತ್ತೆ ಮಾಡಲಾಗಿದೆ. ಈಕೆಯನ್ನು ಅಮಲಾಪುರಂನ ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಬಂಧಿತ ಆರೋಪಿಯಿಂದ 8.60 ಲಕ್ಷ ರೂಪಾಯಿ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಧವ ರೆಡ್ಡಿ ತಿಳಿಸಿದ್ದಾರೆ.

    ಈ ಮೇರಿ ಸುನೀತಾ ಕಳೆದ ಕೆಲವು ವರ್ಷಗಳಿಂದ ಶ್ರೀಮಂತ ವೃದ್ಧೆಯರ ಮನೆಯಲ್ಲಿ ಕೆಲಸದ ಹೆಂಗಸಿನ ಮುಖವಾಡ ಧರಿಸಿ ಕೆಲಸಕ್ಕೆ ಸೇರಿ ಕಳ್ಳತನ ಮಾಡುತ್ತಿರುತ್ತಾಳೆ. ಈ ರೀತಿಯಾಗಿ ಆಕೆ ಹೈದರಾಬಾದ್‍ನಲ್ಲಿ 11 ಮತ್ತು ವಿಶಾಖಪಟ್ಟಣಂನಲ್ಲಿ ಎರಡು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾಳೆ. ಈ 13 ಪ್ರಕರಣಗಳಲ್ಲಿ ಮೂರು ಪ್ರಕರಣಗಳಲ್ಲಿ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಹೇಳಿದರು.

  • ಮರಳಿ ಬರುವುದಾಗಿ ಹೇಳಿ ಹೋದ ಪತಿ ಶವವಾಗಿ ಪತ್ತೆ

    ಮರಳಿ ಬರುವುದಾಗಿ ಹೇಳಿ ಹೋದ ಪತಿ ಶವವಾಗಿ ಪತ್ತೆ

    – ಹೈದರಾಬಾದ್ ವ್ಯಕ್ತಿ ಶವ ಬಿಜಾಪುರದಲ್ಲಿ ಪತ್ತೆ

    ಹೈದರಾಬಾದ್: ಮರಳಿ ಬರುವುದಾಗಿ ಪತ್ನಿಯಲ್ಲಿ ಹೇಳಿ ಹೈದರಾಬಾದ್‍ನಿಂದ ಹೊರಟ ವ್ಯಕ್ತಿ, ವಿಜಯಪುರ ರೈಲ್ವೆ ಹಳಿಗಳಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

    ಮೃತ ವ್ಯಕ್ತಿಯನ್ನು ಡಕಾ ಸಾಯಿನಾಥ್ ರೆಡ್ಡಿ (30) ಎಂದು ಗುರುತಿಸಲಾಗಿದೆ. ಈತ ಹೈದರಾಬಾದ್ ಮೂಲದವನಾಗಿದ್ದಾನೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಅನುಮಾನಸ್ಪದ ರೀತಿಯಲ್ಲಿ ರೈಲ್ವೆ ಹಳಿ ಮೇಲೆ ಈತನ ಶವ ಪತ್ತೆಯಾಗಿದೆ.

    ಪೊಲೀಸ್ ಸಿಬ್ಬಂದಿ ಶವವನ್ನು ಪರಿಶೀಲಿಸಿದಾಗ ಆತನ ಜೇಬಿನಲ್ಲಿ ಫೋನ್ ಇರುವುದು ಪತ್ತೆಯಾಗಿದೆ. ಹೀಗಾಗಿ ವ್ಯಕ್ತಿಯ ಮೂಲದ ಕುರಿತಾಗಿ ಗುರುತಿಸಲು ಸಹಾಯವಾಗಿದೆ. ಈತನ ಕುಟುಂಬಕ್ಕೆ ಈಗಾಗಲೇ ಮಾಹಿತಿ ನೀಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತ ವ್ಯಕ್ತಿ ಹೈದರಾಬಾದ್‍ನ ನೆಲ್ಲೂರು ಜಿಲ್ಲೆಯ ಸಂಗಮ್ ಮಂಡಲದ ದುವ್ವುರು ಮೂಲದವನಾಗಿದ್ದಾನೆ. ಈತ ಹೋಟೆಲ್ ನಿರ್ವಹಣೆಯಲ್ಲಿ ಪದವಿ ಪೂರ್ಣಗೊಳಿಸಿದ್ದಾನೆ. ಕೆಲವು ಕಂಪನಿಯನ್ನು ನಡೆಸುತ್ತಿದ್ದನು ಮತ್ತು ಷೇರುಗಳಲ್ಲಿ ಹಣ ಹೂಡಿಕೆ ಮಾಡಿ ವ್ಯವಹರಿಸುತ್ತಿದ್ದನು. ಕಳೆದ ವರ್ಷ ನವೆಂಬರ್ 25 ರಂದು ಅವರು ವಾರಂಗಲ್ ಮೂಲದ ಜ್ಯೋತ್ಸನ್ನಾಳನ್ನು ಮದುವೆಯಾಗಿ ಹೈದರಾಬಾದ್‍ನ ಚಂದನಗರದಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು.

    ಒಂದು ದಿನ ಸಾಯಿನಾಥ್ ರೆಡ್ಡಿ ವಾಸವಿರುವ ಪ್ರದೇಶದಲ್ಲೇ ಇದ್ದ ಚಿಕ್ಕಮ್ಮಳ ಮನೆಗೆ ಪತ್ನಿಯನ್ನು ಉಳಿದುಕೊಳ್ಳುವಂತೆ ಬಿಟ್ಟುಹೋಗಿದ್ದಾನೆ. ಆಗ ತನ್ನಲ್ಲಿ ಕೆಲಸ ಮಾಡುತ್ತಿರುವವರಿಗೆ ಸಂಬಳ ಕೊಟ್ಟು ನಾನು ವಾಪಸ್ ಬರುವುದಾಗಿ ಪತ್ನಿಯಲ್ಲಿ ಹೇಳಿ ಹೋದವನು ನಾಪತ್ತೆಯಾಗಿದ್ದಾನೆ. ಆದರೆ ಕೆಲವು ದಿನಗಳ ನಂತರ ಈತನ ಶವ ಬಿಜಾಪುರದ ರೈಲ್ವೇ ಹಳಿಯ ಮೇಲೆ ಪತ್ತೆಯಾಗಿದೆ. ಮೊಬೈಲ್ ನಲ್ಲಿರುವ ಮಾಹಿತಿ ಆಧರಿಸಿ ಕುಟುಂಬವನ್ನು ಸಂಪರ್ಕಿಸಿ ಪೊಲೀಸರು ಮಾಹಿತಿ ನೀಡಿದ್ದಾರೆ.

    ಇದು ಮೇಲ್ನೋಟಕ್ಕೆ ಕೊಲೆಯಂತೆ ಕಾಣುತ್ತಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಹೆಚ್ಚಿನ ವಿವರಗಳನ್ನು ಶವ ಪರೀಕ್ಷೆಯ ವರದಿಯ ನಂತರವೇ ತಿಳಿಯಲಾಗುವುದು. ಆತನ ಕಂಪನಿಗೆ ಸಂಬಂಧಿಸಿದ ಯಾವುದೇ ಹಣಕಾಸಿನ ವಹಿವಾಟು ಅಥವಾ ಅವನ ಮದುವೆಗೆ ಕಾರಣವೇ ಎಂಬ ವಿಚಾರವಾಗಿಯೂ ತನಿಖೆ ನಡೆಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಕಲ್ಲಿನಿಂದ ಜಜ್ಜಿ ಯುವಕನ ಕೊಂದು ಸೂಟ್‍ಕೇಸ್‍ನಲ್ಲಿ ತುಂಬಿ ಬಿಸಾಕಿದ ಗೆಳೆಯರು..!

    ಕಲ್ಲಿನಿಂದ ಜಜ್ಜಿ ಯುವಕನ ಕೊಂದು ಸೂಟ್‍ಕೇಸ್‍ನಲ್ಲಿ ತುಂಬಿ ಬಿಸಾಕಿದ ಗೆಳೆಯರು..!

    ಹೈದರಾಬಾದ್: ಕಳೆದ ಶುಕ್ರವಾರ ನಾಪತ್ತೆಯಾಗಿದ್ದ ಆಟೋ ಚಾಲಕನ ಮೃತದೇಹ ರಾಜೇಂದ್ರ ನಗರದಲ್ಲಿ ರಸ್ತೆ ಬದಿಯಲಿದ್ದ ಸೂಟ್ ಕೇಸ್ ನಲ್ಲಿ ಪತ್ತೆಯಾಗಿದೆ.

    ಮೃತ ದುರ್ದೈವಿಯನ್ನು ಮೊಹಮ್ಮದ್ ಇಲಿಯಾಜ್ ಅಲಿಯಾಸ್ ರಿಯಾಜ್(24) ಎಂದು ಗುರುತಿಸಲಾಗಿದೆ. ಈತ ಶುಕ್ರವಾರ ಚಂದ್ರಯನಗುತ್ತದಲ್ಲಿರುವ ತನ್ನ ನಿವಾಸದಿಂದ ಹೊರ ಬಂದವನು ಮತ್ತೆ ಮನೆಗೆ ಹಿಂದಿರುಗಲಿಲ್ಲ. ಈ ಹಿನ್ನೆಲೆಯಲ್ಲಿ ಆತನ ಕುಟುಂಬಸ್ಥರು ಶನಿವಾರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

    ಕ್ರಿಮಿನಲ್ ಬ್ಯಾಗ್ರೌಂಡ್ ಇರುವ ರಿಯಾಜ್ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಟಾಸ್ಕ್ ಫೋರ್ಸ್ ಪೊಲೀಸರು ಸ್ಥಳೀಯ ಪೊಲೀಸರೊಂದಿಗೆ ತನಿಖೆ ನಡೆಸಲು ಆರಂಭಿಸಿದ್ದಾರೆ.

    ಇತ್ತ ರಿಯಾಜ್ ಕುಟುಂಬಸ್ಥರು ಕೂಡ ಮಗನಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ರಾಜೇಂದ್ರನಗರ ವ್ಯಾಪ್ತಿಯಲ್ಲಿ ರಿಯಾಜ್ ಆಟೋ ಸಿಕ್ಕಿದೆ. ಹೀಗಾಗಿ ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಯಿತು. ಈ ವೇಳೆ ಶುಕ್ರವಾರ ರಾತ್ರಿ ಇಬ್ಬರೊಂದಿಗೆ ರಿಯಾಜ್ ಹೋಗುತ್ತಿರುವುದು ಬೆಳಕಿಗೆ ಬಂದಿದೆ. ಆ ಇಬ್ಬರನ್ನು ಸೈಯದ್ ಹಾಗೂ ಫಿರೋಜ್ ಎಂದು ಕುಟುಂಬಸ್ಥರು ಗುರುತು ಹಿಡಿದಿದ್ದಾರೆ.

    ಈ ಇಬ್ಬರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಆಗ ಇಬ್ಬರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ರಿಯಾಜ್ ನನ್ನು ಕೊಲೆ ಮಾಡಿ ನಂತರ ಮೃತದೇಹವನ್ನು ಸೂಟ್ ಕೇಸ್ ನಲ್ಲಿ ತುಂಬಿಸಿ ರಸ್ತೆ ಬದಿ ಎಸೆದು ಹೋಗಿರುವುದಾಗಿ ಆರೋಪಿಗಳು ಪೊಲೀಸರ ಬಳಿ ತಿಳಿಸಿದ್ದಾರೆ.

    ಆರೋಪಿಗಳ ಹೇಳಿಕೆ ಆಧರಿಸಿ ಅವರೊಂದಿಗೆ ಪೊಲೀಸರು ಕೂಡ ಸೂಟ್ ಕೇಸ್ ಇದ್ದ ಸ್ಥಳಕ್ಕೆ ತೆರಳಿದ್ದಾರೆ. ಅಲ್ಲದೆ ಸೂಟ್ ಕೇಸ್ ತೆರೆದು ನೋಡಿದಾಗ ರಿಯಾಜ್ ಮೃತದೇಹ ಪೀಸ್ ಪೀಸ್ ಆಗಿತ್ತು. ಆರೋಪಿಗಳು ರಿಯಾಜ್ ನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಗಳು ಕೂಡ ರಿಕ್ಷಾ ಓಡಿಸುತ್ತಾ ಜೀವನ ಸಾಗಿಸುತ್ತಿದ್ದು, ರಿಯಾಜ್ ಮನೆಯ ಆಸು-ಪಾಸು ಮನೆಯವರಾಗಿದ್ದಾರೆ. ಸೈಯದ್ ಸಹೋದರಿಗೆ ರಿಯಾಜ್ ತಮಾಷೆ ಮಾಡುತ್ತಿದ್ದನು. ಇದೇ ವಿಚಾರ ಕೊಲೆ ಕಾರಣ ಎಂಬುದಾಗಿ ಆರೋಪಿಗಳು ಬಾಯಿಬಿಟ್ಟಿದ್ದಾರೆ.

    ಶುಕ್ರವಾರ ರಿಯಾಜ್ ಹಾಗೂ ಆರೋಪಿಗಳು ಕಂಠಪೂರ್ತಿ ಕುಡಿದಿದ್ದರು. ಬಳಿಕ ಮೂವರು ಕೂಡ ರಿಕ್ಷಾದಲ್ಲಿ ತೆರಳಿದ್ದಾರೆ. ಹೀಗೆ ಹೋಗುತ್ತಿದ್ದಾಗ ಮೂವರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಪರಿಣಾಮ ಸೈಯದ್ ಹಾಗೂ ಫಿರೋಜ್, ರಿಯಾಜ್ ನನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ನಂತರ ಮೃತದೇಹವನ್ನು ಸೂಟ್ ಕೇಸ್ ನಲ್ಲಿ ತುಂಬಿ ರಸ್ತೆ ಬಿಸಾಕಿ ಹೋಗಿದ್ದಾರೆ.

  • 100 ಫೋನ್‍ಗಳನ್ನು ಗಿಫ್ಟ್ ಕೊಟ್ಟ ಸೋನು ಸೂದು

    100 ಫೋನ್‍ಗಳನ್ನು ಗಿಫ್ಟ್ ಕೊಟ್ಟ ಸೋನು ಸೂದು

    ಹೈದರಾಬಾದ್: ಚಿತ್ರತಂಡದಲ್ಲಿ ಕೆಲಸ ಮಾಡುತ್ತಿರುವ ದಿನಗೂಲಿ ನೌಕರರ ಮಕ್ಕಳಿಗೆ, ಆನ್‍ಲೈನ್ ಕ್ಲಾಸ್ ಕೇಳಲು ನೂರು ಮೊಬೈಲ್‍ಗಳನ್ನು ಉಡುಗೊರೆಯಾಗಿ ಸೋನು ಸೂದ್ ಕೊಟ್ಟಿದ್ದಾರೆ.

    ಸ್ಮಾರ್ಟ್ ಫೋನ್ ಇಲ್ಲದೆ ಆನ್‍ಲೈನ್ ಶಿಕ್ಷಣ ಪಡೆಯಲು ಮಕ್ಕಳಿಗೆ ಕಷ್ಟವಾಗುತ್ತಿದೆ, ಎಂಬ ಸುದ್ದಿಯನ್ನು ತಿಳಿದ ಸೋನು ಸೂದ್ ತಕ್ಷಣ ನೂರು ಮೊಬೈಲ್ ಫೋನ್‍ಗಳನ್ನು ಆರ್ಡರ್ ಮಾಡಿದ್ದಾರೆ. ಆಚಾರ್ಯ ಚಿತ್ರತಂಡಲ್ಲಿ ಕೆಲಸ ಮಾಡುತ್ತಿರುವ 100 ಕಾರ್ಮಿಕರಿಗೆ ನೀಡಿದ್ದಾರೆ.

    ಸೊನು ಸುದ್ ಅವರು ಮೊಬೈಲ್ ತರಿಸಿ ಚಿತ್ರತಂಡದಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಬರಲು ಹೇಳಿದ್ದರೆ. ಈ ವಿಚಾರ ತಿಳಿಯದೆ ಇರುವ ಕಾರ್ಮಿಕರು ಗೊಂದಲ ಮತ್ತು ಆಶ್ಚರ್ಯದಿಂದ ಬಂದಿದ್ದಾರೆ. ಸೋನುಸೂದ್ ಅವರು ಸ್ಮಾರ್ಟ್ ಫೋನ್ ಹಂಚುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಸಂತೋಷಪಟ್ಟಿದ್ದಾರೆ. ಸೋನು ಅವರ ಕೈಯಿಂದ ಮೊಬೈಲ್ ಪಡೆದುಕೊಂಡ ಕಾರ್ಮಿಕರು ಖುಷಿಯಿಂದ ಕೂಗಾಡಿದ್ದಾರೆ. ಸೋನು ಅವರನ್ನು ಮನಸರೆ ಹರಿಸಿ ಹಾರೈಸಿದ್ದಾರೆ. ಸ್ಮಾಟ್ ಫೋನ್‍ಗಳನ್ನು ಸ್ವೀಕರಿಸಿದ ಫೋಟೋಗಳು ಸಾಮಾಜಿ ಜಾಲತಾಣದಲ್ಲಿ ಹರಿದಾಡುತ್ತಿವೆ.

    ಈ ಹಿಂದೆ ಸರ್ಕಾರಿ ಶಾಲೆ ಮಕ್ಕಳಿಗೆ ಆನ್‍ಲೈನ್ ಕ್ಲಾಸ್ ಕೇಳಲು ಉಚಿತವಾಗಿ ಸ್ಮಾರ್ಟ್ ಫೋನ್ ನೀಡಿದ್ದರು. ಇದೀಗ ಮತ್ತೊಮ್ಮೆ ನೂರು ಫೋನ್ ಉಚಿತವಾಗಿಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಆಚಾರ್ಯ ಚಿತ್ರದಲ್ಲಿ ಸೋನು ಸೂದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೈದರಾಬಾದ್‍ನ ಕೊಕಾಪೇಟ್‍ನಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರ ತಂಡದಲ್ಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳಿಗೆ ಆನ್‍ಲೈನ್ ತರಗತಿ ಕೇಳಲು ಸಹಾಯವಾಗಲು ಮೊಬೈಲ್ ಫೋನ್‍ಗಳನ್ನು ಉಚಿತವಾಗಿ ನೀಡಿದ್ದಾರೆ. ಈ ಹಿಂದೆ ಕೂಡಾ ತಾವು ಮಾಡಿರುವ ಉತ್ತಮ ಸಾಮಾಜಿಕ ಕಾರ್ಯಗಳಿಂದ ಗುರುತಿಸಿಕೊಂಡ ಸೋನು ಅವರು ಈ ಬಾರಿಯೂ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

  • ಓವರ್ ಡೋಸ್ ನಿದ್ರೆ ಮಾತ್ರೆ ಸೇವಿಸಿ 7 ವರ್ಷದ ಮಗನೊಂದಿಗೆ ಪ್ರಾಣಬಿಟ್ಟ ವೈದ್ಯೆ

    ಓವರ್ ಡೋಸ್ ನಿದ್ರೆ ಮಾತ್ರೆ ಸೇವಿಸಿ 7 ವರ್ಷದ ಮಗನೊಂದಿಗೆ ಪ್ರಾಣಬಿಟ್ಟ ವೈದ್ಯೆ

    ಹೈದರಾಬಾದ್: ಓವರ್ ಡೋಸ್ ನಿದ್ರೆ ಮಾತ್ರೆಯನ್ನು ಸೇವಿಸಿದ ಪರಿಣಾಮ ಚರ್ಮರೋಗ ತಜ್ಞೆ ಡೊಂಥಮ್‍ಸೆಟ್ಟಿ ಲಾವಣ್ಯ (33) ಮತ್ತು ಆಕೆಯ ಮಗ ನಿಶಾಂತ್(7) ಕೋಮಾ ಸ್ಥಿತಿಗೆ ಜಾರಿ ನಂತರ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ನಡೆದಿದೆ.

    ಲಾವಣ್ಯ ತೆಲಂಗಾಣದ ವೈದ್ಯರೊಬ್ಬರನ್ನು ಮದುವೆಯಾಗಿದ್ದರು. ಇತ್ತೀಚೆಗೆ ದಂಪತಿ ನಡುವೆ ವಿವಾದ ನಡೆದಿತ್ತು. ಹಾಗಾಗಿ ಮಗನನ್ನು ಕರೆದುಕೊಂಡು ರಾಜಮಂಡ್ರಿಯಲ್ಲಿರುವ ಆಕೆ ತಂದೆ ಡಾ. ಬುದ್ಧರೊಂದಿಗೆ ವಾಸವಾಗಿದ್ದಳು.

    ಘಟನೆ ಸಂಬಂಧಸಿದಂತೆ ತನಿಖೆಯಲ್ಲಿ ಇತ್ತೀಚೆಗಷ್ಟೇ ಆಕೆಗೆ ಪತಿ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾನೆ. ಪತಿ-ಪತ್ನಿ ಜಗಳ ವಿಕೋಪಕ್ಕೆ ತಿರುಗಿ ಕೋರ್ಟ್ ಮಟ್ಟಿಲೇರಿದೆ. ಹಾಗಾಗಿ ಈ ವಿಚಾರದಿಂದಾಗಿ ನೊಂದು ತನ್ನ ಮಗನೊಂದಿಗೆ ಆಕೆ ಪ್ರಾಣ ಬಿಟ್ಟಿರಬಹದು ಎಂದು ಪೋಲಿಸ್ ಮೂಲಗಳು ತಿಳಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಾವಿನ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

  • ಸೋನಾ ಅಕ್ಕಿಗೆ ಬಂತು ಭಾರೀ ಪ್ರಮಾಣದ ಬೇಡಿಕೆ

    ಸೋನಾ ಅಕ್ಕಿಗೆ ಬಂತು ಭಾರೀ ಪ್ರಮಾಣದ ಬೇಡಿಕೆ

    ಹೈದರಾಬಾದ್: ಹೊಸ ತಳಿಯ ಸೋನಾ ಅಕ್ಕಿಗೆ ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದ ಬೇಡಿಕೆ ಬಂದಿದೆ. ತೆಲಂಗಾಣ ರಾಜ್ಯ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಯಶಂಕರ್ ಅಭಿವೃದ್ಧಿ ಪಡಿಸಿದ್ದ ಈ ಹೊಸ ಮಾದರಿಯ ಅಕ್ಕಿಗೆ ಎಲ್ಲೆಡೆ ಬೇಡಿಕೆ ಸೃಷ್ಟಿಯಾಗಿದೆ.

    ಈ ಬೆಳೆಯು ಉತ್ತಮ ಇಳುವರಿಯನ್ನು ನೀಡುತ್ತದೆ. ಗುಣಮಟ್ಟ ಕೂಡ ಉತ್ತಮವಾಗಿದೆ. ರುಚಿಯಿದೆ ಹೀಗಾಗಿ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ ಎಂದು ತೆಲಂಗಾಣ ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ಜಗದೀಶ್ವರ್ ಹೇಳಿದ್ದಾರೆ.

    ಅಕ್ಕಿಯಲ್ಲಿ ಸಕ್ಕರೆ ಅಂಶ ತೀರಾ ಕಡಿಮೆ ಇರುವುದರಿಂದ ಬೇಡಿಕೆ ಹೆಚ್ಚಾಗಿದೆ. ಹಲವು ಪರೀಕ್ಷೆಗಳಲ್ಲಿ ಸಕ್ಕರೆ ಅಂಶ ಕಡಿಮೆ ಇರುವುದು ಸಾಬೀತಾಗಿದೆ ಎಂದಿದ್ದಾರೆ.

    ಸೋನಾ ಅಕ್ಕಿಗೆ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ 25 ಲಕ್ಷ ಎಕರೆ ಭೂಪ್ರದೇಶದಲ್ಲಿ ಈ ಅಕ್ಕಿಯನ್ನು ಬೆಳಯಲಾಗುತ್ತಿದೆ. ತೆಲಂಗಾಣ ಹೊರತುಪಡಿಸಿ ಹೊರ ರಾಜ್ಯಗಳಲ್ಲಿಯೂ 10 ಲಕ್ಷ ಎಕರೆಯಲ್ಲಿ ಈ ಅಕ್ಕಿಯನ್ನು ಬೆಳೆಯಲು ಶುರು ಮಾಡಿದ್ದಾರೆ.

    ತೆಲಂಗಾಣ ಮರುಕಟ್ಟೆಯಲ್ಲಿ ಸೋನ ಅಕ್ಕಿಗೆ ಒಂದು ಕೆಜಿಗೆ 100 ರಿಂದ 145 ರೂಪಾಯಿ ಇದೆ. ಒಂದು ಕ್ವಿಂಟಾಲ್‍ಗೆ 2500 ರೂಪಾಯಿ ಇದೆ. ಕಾರ್ನಾಟಕ, ತೆಲಂಗಾಣ, ಪಂಜಾಬ್, ರಾಜಸ್ಥಾನ, ಒಡಿಶಾ, ತಮಿಳುನಾಡು ಸೇರಿದಂತೆ ಹಲವು ಕಡೆಗಳಲ್ಲಿ ಸೋನಾ ಅಕ್ಕಿಗೆ ಭಾರೀ ಪ್ರಮಣದ ಬೇಡಿಕೆ ಶುರುವಾಗಿದೆ.

  • ಗಂಡನ ತಲೆಯನ್ನು ಕುಟ್ಟಾಣಿಯಲ್ಲಿ ಕುಟ್ಟಿ ಕೊಂದ ಪತ್ನಿ

    ಗಂಡನ ತಲೆಯನ್ನು ಕುಟ್ಟಾಣಿಯಲ್ಲಿ ಕುಟ್ಟಿ ಕೊಂದ ಪತ್ನಿ

    ಹೈದರಾಬಾದ್: ಗಂಡನ ಕಿರುಕುಳ ತಾಳಲಾರದೆ ಪತಿಯ ತಲೆಯನ್ನು ಕುಟ್ಟಾಣಿಯಲ್ಲಿ ಕುಟ್ಟಿ ಪತ್ನಿ ಕೊಂದಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ಕೊಲೆಯಾದ ವ್ಯಕ್ತಿಯನ್ನು ಶ್ಯಾಮ್ ಎಂದು ಗುರುತಿಸಲಾಗಿದೆ. ಪತ್ನಿ ಸರೋಜಾ, ಈಕೆ ಪತಿ ಉದ್ಯಮಿಯೊಬ್ಬರ ಫ್ಲ್ಯಾಟ್‍ನಲ್ಲಿ ವಾಚ್‍ಮೆನ್ ಕೆಲಸ ಮಾಡುತ್ತಿದ್ದನು. ಪ್ರತಿನಿತ್ಯ ಕುಡಿದು ಬಂದು ಕಿರುಕುಳ ನೀಡುತ್ತಿದ್ದನು. ಪತಿಯ ಕಿರುಕುಳ ತಾಳಲಾರದೆ ಮಹಿಳೆ ಪತಿಯ ತಲೆಯನ್ನು ಚಚ್ಚಿ ಕೊಂದಿದ್ದಾಳೆ.

    ಕುಡಿದು ಬಂದು ಸದಾ ಹೆಂಡತಿಗೆ ಕಿರುಕುಳ ನೀಡುತ್ತಿದ್ದನು. ಒಂದು ದಿನ ಹೀಗೆ ಕುಡಿದು ಬಂದ ಈತ ಹೆಂಡ್ತಿ ಹಾಗೂ ಮಕ್ಕಳಿಗೆ ಹೊಡೆದಿದ್ದಾನೆ. ಪ್ರತಿನಿತ್ಯ ಪತಿಯ ಕಿರುಕುಳದಿಂದ ಬೇಸತ್ತ ಮಹಿಳೆ ಮನೆಯಲ್ಲಿದ್ದ ಕುಟ್ಟಾಣಿಯನ್ನು ತಂದು ಗಂಡನ ತೆಲೆಯ ಮೇಲೆ ಜೋರಾಗಿ ಹೊಡೆದಿದ್ದಾಳೆ. ಭಾರೀ ಹೊಡೆತ ತಿಂದ ಶ್ಯಾಮ್ ಸಾವನ್ನಪ್ಪಿದ್ದಾನೆ.

    ನೆರೆಹೊರೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪತಿಯನ್ನು ಕೊಂದ ಪತ್ನಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಹಣದ ಆಸೆಗೆ 1 ತಿಂಗಳ ಹಸುಳೆಯನ್ನು ಮಾರಿದ ತಂದೆ

    ಹಣದ ಆಸೆಗೆ 1 ತಿಂಗಳ ಹಸುಳೆಯನ್ನು ಮಾರಿದ ತಂದೆ

    – 70 ಸಾವಿರಕ್ಕೆ ಮಗು ಮಾರಾಟ

    ಹೈದರಾಬಾದ್: ಹಣದಾಸೆಗೆ ತಂದೆ ತನ್ನ ಹಸುಗುಸನ್ನು 70 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿದ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ಪಾಪಿ ತಂದೆ ತನ್ನ ಒಂದು ತಿಂಗಳ ಹಸುಗೂಸನ್ನು ದಂಪತಿಯಿಂದ ಹಣವನ್ನು ತೆಗೆದುಕೊಂಡು ಮಾರಾಟ ಮಾಡಿದ್ದಾನೆ. ಈ ಮಗುವನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಇಲಾಖೆಗೆ ಒಪ್ಪಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ನನ್ನ ಪತಿ ಹಣದ ಆಸೆಗೆ ಮಗುವನ್ನು ಮಾರಾಟ ಮಾಡಿದ್ದಾನೆ ಎಂದು ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಇದಾದ ನಂತರ ಪೊಲೀಸರು ಒಂದುವಾರದ ಬಳಿಕ ಮಗುವನ್ನು ಹುಡುಕಿ ರಕ್ಷಿಸಿದ್ದಾರೆ.

    ಮಗುವನ್ನು ಕಳೆದಕೊಂಡ ತಾಯಿಯ ದೂರಿನ ಆದಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿ ತನಿಖೆ ಮಾಡಿದ್ದಾರೆ. ಈ ವೇಳೆ ಮಗುವಿನ ಪಾಲಕರು ನಿರ್ಗತಿಕರಾಗಿದ್ದು, ಪಾದಾಚಾರಿ ಮಾರ್ಗದಲ್ಲಿ ವಾಸಿಸುತ್ತಾರೆ. ಸಣ್ಣ ಪುಟ್ಟ ಕೆಲಸ ಮತ್ತು ಭಿಕ್ಷಾಟನೆ ಮಾಡಿ ಜೀವನವನ್ನು ನಡೆಸುತ್ತಾರೆ. ಕೆಲವು ದಿನಗಳ ಕಾಲ ಫುಟ್‍ಪಾತ್‍ನಲ್ಲಿ ವಾಸಿಸುತ್ತಿರುವ ಬಡ ಕುಟುಂಬವನ್ನು ದಂಪತಿ ಗಮನಿಸಿದ್ದರು. ಬಡ ದಂಪತಿಗೆ 70,000 ರೂಪಾಯಿ ಹಣವನ್ನು ನೀಡುತ್ತೇವೆ ಮಗುವನ್ನು ಕೊಡಿ ಎಂದು ಹಣದ ಆಸೆ ತೋರಿಸಿ ಮಗುವನ್ನು ತೆಗೆದುಕೊಂಡು ಹೋಗಿದ್ದಾರೆ ಆದರೆ ಇದರಿಂದ ಮನನೊಂದ ಮಗುವಿನ ತಾಯಿ ನಮ್ಮಲ್ಲಿ ಬಂದು ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮಗುವನ್ನು ಮಕ್ಕಳ ಕಲ್ಯಾಣ ಇಲಾಖೆಯಲ್ಲಿರಿಸಿ ಪೋಷಣೆ ಮಾಡಲಾಗುತ್ತಿದೆ. ಇನ್ನು ಹೆಚ್ಚಿನ ತನಿಖೆಯನ್ನು ಮಾಡುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.