Tag: Hyderabad

  • ಮಧ್ಯರಾತ್ರಿ ಮರ ಕಡಿದವನಿಗೆ ಬಿತ್ತು 62,075 ರೂ. ದಂಡ

    ಮಧ್ಯರಾತ್ರಿ ಮರ ಕಡಿದವನಿಗೆ ಬಿತ್ತು 62,075 ರೂ. ದಂಡ

    ಹೈದರಾಬಾದ್: ತನ್ನ ಹೊಸ ಮನೆಯ ಪಕ್ಕದಲ್ಲೇ ಇದ್ದ ಬೇವಿನ ಮರವನ್ನು ಮಧ್ಯರಾತ್ರಿ ಕಡಿದ ವ್ಯಕ್ತಿಗೆ ಅರಣ್ಯ ಇಲಾಖೆ 62,075 ರೂಪಾಯಿ ದಂಡ ವಿಧಿಸಿರುವ ಘಟನೆ ಸೈದಾಬಾದ್‍ನಲ್ಲಿ ಬೆಳಕಿಗೆ ಬಂದಿದೆ.

    ಮರ ಕಡಿದ ವ್ಯಕ್ತಿಯನ್ನು ಜಿ.ಸಂತೋಷ್ ರೆಡ್ಡಿಯೆಂದು ಗುರುತಿಸಲಾಗಿದೆ. ರೆಡ್ಡಿ ಹೊಸ ಮನೆಯನ್ನು ಕಟ್ಟುತ್ತಿದ್ದು, ಈ ಮನೆಗೆ ಈ ಮರ ಅಡ್ಡವಾಗುವ ಕಾರಣದಿಂದಾಗಿ ಮಧ್ಯರಾತ್ರಿ ವೇಳೆ ಕಡಿದು ಇಲ್ಲವಾಗಿಸಿದ್ದಾನೆ. ಮರ ಕಡಿದ ವಿಷಯ ತಿಳಿದ ಸ್ಥಳೀಯ 8ನೇ ತರಗತಿ ವಿದ್ಯಾರ್ಥಿಯೋರ್ವ 40 ವರ್ಷಗಳಿಂದ ಇದ್ದ ಬೇವಿನ ಮರ ಏಕಾಏಕಿ ಕಾಣೆಯಾಗಿರುವ ವಿಷಯವನ್ನು ಅರಣ್ಯ ಇಲಾಖೆಯ ಸಹಾಯವಾಣಿ ನಂಬರ್‍ ಗೆ ಕರೆ ಮಾಡಿ ತಿಳಿಸಿದ್ದಾನೆ.

    ಕೂಡಲೇ ಸ್ಪಂದಿಸಿದ ಅರಣ್ಯಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಮರ ಕಡಿದಿರುವುದು ಸಾಬೀತಾಗಿದೆ. ರೆಡ್ಡಿ ಮರವನ್ನು ಕಡಿದು ಅದರ ರೆಂಬೆಗಳನ್ನು ಸುಟ್ಟಿರುವುದು ಕಂಡುಬಂದಿದೆ. ಹಾಗಾಗಿ ಅರಣ್ಯ ಇಲಾಖೆಯಿಂದ ರೆಡ್ಡಿಗೆ ಬಾರಿ ಮೊತ್ತದ ದಂಡ ಪ್ರಯೋಗವಾಗಿದೆ. ಪ್ರಕರಣದ ನಂತರ ಮರ ಕಡಿದ ವಿಷಯ ತಿಳಿಸಿದ ಬಾಲಕನನ್ನು ಗುರುತಿಸಿ ಅಭಿನಂದಿಸಿದೆ.

  • ಶ್ವಾನಕ್ಕೆ ಸೀಮಂತ ಮಾಡಿದ ದಂಪತಿ

    ಶ್ವಾನಕ್ಕೆ ಸೀಮಂತ ಮಾಡಿದ ದಂಪತಿ

    ಹೈದರಾಬಾದ್: ದಂಪತಿ ತಾವು ಸಾಕಿರುವ ಶ್ವಾನಕ್ಕೆ ಸೀಮಂತ ಮಾಡಿ ತಮ್ಮ ಸಂಬಂಧಿಗಳಿಗೆ ಊಟ ಹಾಕಿ ಅದ್ದೂರಿಯಾಗಿ ಕಾರ್ಯಕ್ರಮವನ್ನು ಮಾಡಿ ಸಂಭ್ರಮಿಸಿದ್ದಾರೆ.

    ಒಂದೂವರೆ ವರ್ಷದ ಶ್ವಾನದ ಹೆಸರು ಸ್ಟೆಫಿಯಾಗಿದೆ. ಈ ನಾಯಿಯನ್ನು ನವಕುಮಾರ್- ಆಶಾ ದಂಪತಿ ತಮ್ಮ ಮಗಳಂತೆ ಸಾಕಿದ್ದಾರೆ. ಈ ದಂಪತಿ ನಾಯಿಗೆ ಸೀಮಂತ ಕಾರ್ಯಕ್ರಮವನ್ನು ಮಾಡಿ ಸುದ್ದಿಯಾಗಿದ್ದಾರೆ.

    ಸ್ಟೆಫಿ ನಮ್ಮ ಮಗಳಂತೆ. ಅವಳ ಮೊದಲು ವರ್ಷದ ಜನ್ಮದಿನವನ್ನು ನಾವು ಅದ್ಧೂರಿಯಾಗಿ ಆಚರಿಸಿದ್ದೆವು. ಸ್ಟೆಫಿ ಗರ್ಭವತಿ ಆದಾಗ ಯಾಕೆ ಹಾಗೆಯೆ ಸೀಮಂತ ಮಾಡಬಾರದು ಎಂದು ಯೋಚಿಸಿ ಈ ಸೀಮಂತವನ್ನು ಮಾಡಿದ್ದೇವೆ. ನಮ್ಮ ಮನೆಯಲ್ಲಿರುವ ಒಬ್ಬ ಸದಸ್ಯರಂತೆ ಆಗಿದೆ. ಸ್ಟೆಫಿ ಕುರಿತಾಗಿ ನಮಗಿಬ್ಬರಿಗೆ ತುಂಬಾ ಪ್ರೀತಿ ಇದೆ. ಇದೀಗ ಸೀಮಂತವನ್ನು ಮಾಡಿದ್ದೇವೆ ಎಂದು ದಂಪತಿ ಹೇಳಿಕೊಂಡಿದ್ದಾರೆ.

  • ಪತಿಯನ್ನು ಮನೆಯೊಳಗಡೆ ಲಾಕ್ ಮಾಡಿ ಹೆಣ್ಣು ಮಗುವಿನೊಂದಿಗೆ ಕಟ್ಟಡದಿಂದ ಜಿಗಿದ್ಳು!

    ಪತಿಯನ್ನು ಮನೆಯೊಳಗಡೆ ಲಾಕ್ ಮಾಡಿ ಹೆಣ್ಣು ಮಗುವಿನೊಂದಿಗೆ ಕಟ್ಟಡದಿಂದ ಜಿಗಿದ್ಳು!

    ಹೈದರಾಬಾದ್: ಪತಿಯನ್ನು ಮನೆಯೊಳಗಡೆ ಲಾಕ್ ಮಾಡಿ ತನ್ನ 8 ತಿಂಗಳ ಹೆಣ್ಣು ಮಗುವಿನೊಂದಿಗೆ ಮಹಿಳೆಯೊಬ್ಬರು ಬಹುಮಹಡಿ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

    ಮಹಿಳೆಯನ್ನು ಅನಿತಾ(24) ಎಂದು ಗುರುತಿಸಲಾಗಿದೆ. ಬಿಹಾರ ಮೂಲದವರಾಗಿರುವ ಅನಿತಾ, ಬಿಸ್ಮಲ್ ಸಿಂಗ್ ಎಂಬವರನ್ನು ವರಿಸಿದ್ದು, ಈ ದಂಪತಿಗೆ 8 ತಿಂಗಳ ಹೆಣ್ಣು ಮಗುವೊಂದಿದೆ. ಈ ಕುಟುಂಬ ಹೈದರಾಬಾದ್ ನ ಬಂಜಾರಾ ಹಿಲ್ಸ್ ಶ್ರೀರಾಮ್ ನಗರ ಕಾಲೋನಿಯಲ್ಲಿ ಕಳೆದ ಮೂರು ತಿಂಗಳಿನಿಂದ ವಾಸವಾಗಿದೆ.

    ಕುಟುಂಬದಲ್ಲಾಗುತ್ತಿರುವ ಪ್ರತಿನಿತ್ಯದ ಸಮಸ್ಯೆಗಳಿಂದ ಬೇಸತ್ತು ಮಹಿಳೆ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ದಂಪತಿ ದಿನನಿತ್ಯ ಜಗಳವಾಡುತ್ತಿದ್ದರು. ಈ ಮಧ್ಯೆ ಸಂಬಂಧಿಕರು ಇಬ್ಬರಲ್ಲಿರುವ ವೈಮನಸ್ಸನ್ನು ಸರಿದೂಗಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ.

    ಅಂತೆಯೇ ಸೋಮವಾರ ಪತಿ ಹಾಗೂ ಪತ್ನಿಯ ನಡುವೆ ಜಗಳ ನಡೆದಿದೆ. ಈ ಜಗಳ ತಾರಕಕ್ಕೇರಿದ್ದು, ಅನಿತಾ ತನ್ನ ಪತಿಯನ್ನು ಮನೆಯೊಳಗಡೆ ಲಾಕ್ ಮಾಡಿ ಮಗುವಿನೊಂದಿಗೆ ಕಟ್ಟಡದ ಎರಡನೇ ಮಹಡಿಯ ಬಾಲ್ಕನಿಯಿಂದ ಕೆಳಕ್ಕೆ ಜಿಗಿದಿದ್ದಾಳೆ. ಪರಿಣಾಮ ಅನಿತಾ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಪುಟ್ಟ ಕಂದಮ್ಮನ ಸ್ಥಿತಿ ಗಂಭೀರವಾಗಿದೆ.

    ಅನಿತಾ ಹಾರಿದ್ದನ್ನು ಕಂಡ ಸ್ಥಳೀಯರು ಕೂಡಲೇ ಸ್ಥಳಕ್ಕೆ ದೌಡಾಯಿಸಿ, ಇಬ್ಬರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅನಿತಾ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆದರೆ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ ಎಂದು ಬಂಜಾರಾ ಹಿಲ್ಸ್ ಸಬ್-ಇನ್ಸ್ ಪೆಕ್ಟರ್ ಕೆ. ಉದಯ್ ಹೇಳಿದ್ದಾರೆ.

  • ಸುಳ್ಳು ಹೇಳಿ ಲಾಡ್ಜ್ ಸೇರಿದ್ದ ಪ್ರೇಮಿಗಳು ಆತ್ಮಹತ್ಯೆಗೆ ಶರಣು

    ಸುಳ್ಳು ಹೇಳಿ ಲಾಡ್ಜ್ ಸೇರಿದ್ದ ಪ್ರೇಮಿಗಳು ಆತ್ಮಹತ್ಯೆಗೆ ಶರಣು

    ಹೈದರಾಬಾದ್: ಸರ್ಕಾರಿ ನೌಕರರಿಬ್ಬರು ಕೆಲಸ ಇದೆ ಎಂದು ಸುಳ್ಳು ಹೇಳಿ ಬಂದು ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ.

    ಮೃತರನ್ನು ಹರೀಶ್, ಲಾವಣ್ಯ ಎಂದು ಗುರುತಿಸಲಾಗಿದೆ. ಇಬ್ಬರೂ ಪ್ರೀತಿಸುತ್ತಿದ್ದು, ಗ್ರಾಮ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಹರೀಶ್ ನೆಲ್ಲೂರ್ ಜಿಲ್ಲೆಯ ಚಿಟ್ಟಮರ್ ಮಂಡಲದ ನಿವಾಸಿ. ಈತ ಗ್ರಾಮ ಸಚಿವಾಲಯದಲ್ಲಿ ಸಹಾಯಕ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದನು. ಲಾವಣ್ಯ ನಾಯ್ಡುಪೇಟೆ ಮೂಲದರಾಗಿದ್ದು, ಗ್ರಾಮ ಕಂದಾಯ ಅಧಿಕಾರಿಯಾಗಿದ್ದರು.

    ಲಾವಣ್ಯ ಮತ್ತು ಹರೀಶ್ ಪ್ರಿತಿಸುತ್ತಿದ್ದರು ಆದರೆ ಕಾರಣಾಂತರಗಳಿಂದ ಇಬ್ಬರು ಬೇರೆಯವರನ್ನು ವರಿಸಬೇಕಾದಂತಹ ಸಂದರ್ಭ ಬಂದೊದಗಿತ್ತು. ಇಬ್ಬರು ಬೇರೆಯವನ್ನು ವಿವಾಹವಾಗಿ ಜೀವನವನ್ನು ನಡೆಸುತ್ತಿದ್ದರು. ಆದರೆ ವಿವಾಹದ ಬಳಿಕವೂ ಇವರ ಸಂಬಂಧ ಮುಂದುವರಿದಿತ್ತು. ಈ ವಿಚಾರ ಲಾವಣ್ಯ ಮನೆಯವರಿಗೆ ತಿಳಿದಿದೆ. ಸಂಬಂಧವನ್ನು ಕಡಿದುಕೊಳ್ಳುವಂತೆ ಎಚ್ಚರಿಕೆಯನ್ನು ನೀಡಿದ್ದರು. ಆದರೆ ಲಾವಣ್ಯ ಮಾತ್ರ ತನ್ನ ಪ್ರಿಯಕರನೊಂದಿಗೆ ಸಂಬಂಧವನ್ನು ಮುಂದುವರಿಸಿದ್ದರು.

    ಈ ವಿಚಾರವಾಗಿ ಮನನೊಂದಿದ್ದ ಇಬ್ಬರು ಪ್ರೇಮಿಗಳು ಕೆಲಸದ ನಿಮಿತ್ತ ನೆಲ್ಲೂರಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮರಳಿ ಮನೆಗೆ ಬಂದಿಲ್ಲ. ಆತಂಕಗೊಂಡ ಲಾವಣ್ಯ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು. 2 ಕುಟುಂಬದವರು ಇಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಹರೀಶ್ ಬರೆದಿಟ್ಟಿದ್ದ ಡೆತ್‍ನೋಟ್ ಆತನ ಮನೆಯಲ್ಲಿ ಪತ್ತೆಯಾಗಿದೆ. ತಕ್ಷಣ  ಲಾಡ್ಜ್ ಗೆ  ಬಂದು ನೋಡಿದಾಗ ಇಬ್ಬರು ನೇಣಿಗೆ ಶರಣಾಗಿದ್ದರು.

    ಈ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

  • ರೈಲು ಬರ್ತಿದ್ದಾಗಲೇ ದಾಟಲು ಮುಂದಾದ – ಟ್ರ್ಯಾಕ್‍ನಲ್ಲಿ ಸಿಲುಕಿ ಬೈಕ್ ಜಖಂ

    ರೈಲು ಬರ್ತಿದ್ದಾಗಲೇ ದಾಟಲು ಮುಂದಾದ – ಟ್ರ್ಯಾಕ್‍ನಲ್ಲಿ ಸಿಲುಕಿ ಬೈಕ್ ಜಖಂ

    – ಭಯಾನಕ ವೀಡಿಯೋ ವೈರಲ್

    ಹೈದರಾಬಾದ್: ರೈಲ್ವೆ ಕ್ರಾಸಿಂಗ್ ವೇಳೆ ಅಸಡ್ಡೆ ತೋರಿಸುವ ಮಂದಿಗೆ ಭಾರತೀಯ ರೈಲ್ವೆ ಇಲಾಖೆ ಹಲವಾರು ಎಚ್ಚರಿಕೆ ಮತ್ತು ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಿದೆ. ಆದರೂ ವ್ಯಕ್ತಿಯೊಬ್ಬ ರೈಲ್ವೆ ಗೇಟ್ ಹಾಕಿದ್ದರೂ ಹಳಿ ದಾಟಲು ಮುಂದಾಗಿ ಬೈಕರ್ ಅಪಘಾತದಿಂದ ಅಚಾನಕ್ ಆಗಿ ತಪ್ಪಿಸಿಕೊಂಡಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಬೈಕರ್ ಒಬ್ಬ ರೈಲ್ವೆ ಗೇಟ್ ಹಾಕಿದ್ದರೂ ಕೂಡ ಹಳಿದಾಟಲು ಪ್ರಯತ್ನಿಸಿದ್ದಾನೆ. ಇದೇ ವೇಳೆ ವೇಗವಾಗಿ ಬರುತ್ತಿದ್ದ ರೈಲನ್ನು ನೋಡಿ ಬ್ರೇಕ್ ಹಾಕಿದ್ದಾನೆ. ಆದರೆ ನಿಯಂತ್ರಣ ಕಳೆದುಕೊಂಡ ಬೈಕ್ ಟ್ರ್ಯಾಕ್ ನಲ್ಲಿ ಸಿಲುಕಿ ಛಿದ್ರ ಛಿದ್ರವಾಗಿದೆ. ಅದೃಷ್ಟವಶಾತ್ ಬೈಕಿನಿಂದ ವ್ಯಕ್ತಿ ಹಾರಿದ ಪರಿಣಾಮ ಆತನಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ಟ್ರ್ಯಾಕ್ ನಲ್ಲಿ ಸಿಲುಕಿಕೊಂಡ ಬೈಕ್ ಜಖಂ ಆಗಿದೆ.

    ಇದೀಗ ಈ ಭಯಾನಕ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೆಲ ನೆಟ್ಟಿಗರು ಬೈಕ್ ಸವಾರ ತನ್ನ ಜೀವಕ್ಕೆ ಅಪಾಯ ತಂದಿಟ್ಟುಕೊಂಡಿದ್ದಲ್ಲದೆ ಅಲ್ಲಿದ್ದ ಸ್ಥಳೀಯರ ಜೀವ ಕೂಡ ಬಾಯಿಗೆ ಬರುವಂತೆ ಮಾಡಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಸದ್ಯ ಅಪಾಯದಿಂದ ಪಾರಾಗಿದ್ದಾನೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

  • ಪತ್ನಿ ಮೇಲಿನ ಸಿಟ್ಟಿನಿಂದ 16 ಮಂದಿಯನ್ನು ರೇಪ್ ಮಾಡಿ ಹತ್ಯೆಗೈದ ಪಾಪಿ!

    ಪತ್ನಿ ಮೇಲಿನ ಸಿಟ್ಟಿನಿಂದ 16 ಮಂದಿಯನ್ನು ರೇಪ್ ಮಾಡಿ ಹತ್ಯೆಗೈದ ಪಾಪಿ!

    – ಪೊಲೀಸರಿಂದ ಆರೋಪಿ ಬಂಧನ
    – ವಿಚಾರಣೆಗ ಬಳಿಕ ಹೊರಬೀಳಲಿದೆ ಇನ್ನಷ್ಟು ಸತ್ಯ

    ಹೈದರಾಬಾದ್: ತನ್ನ ಪತ್ನಿಯ ಮೇಲಿನ ಸಿಟ್ಟಿನಿಂದ ವ್ಯಕ್ತಿಯೊಬ್ಬ 16 ಮಂದಿಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಬರ್ಬರವಾಗಿ ಕೊಲೆ ಮಾಡಿರುವ ಸಿನಿಮೀಯ ಘಟನೆಯೊಂದು ಹೈದರಾಬಾದ್ ನ ರಾಚಕೊಂಡದಲ್ಲಿ ನಡೆದಿದೆ.

    ಆರೋಪಿಯನ್ನು ಮೈನಾ ರಾಮುಲು ಎಂದು ಗುರುತಿಸಲಾಗಿದೆ. ಈತ 16 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಕಾಮತೃಷೆ ತೀರಿಸಿಕೊಂಡ ಬಳಿಕ ಕೊಲೆ ಮಾಡಿದ್ದಾನೆ. ಈ ಮೂಲಕ ಆರೋಪಿ ವಿಕೃತ ಆನಂದ ಅನುಭವಿಸಿದ್ದಾನೆ.

    ಮೈನಾ ಪತ್ನಿ ಪರಪುರುಷನ ಜೋತೆ ಓಡಿಹೋಗಿದ್ದೇ ಈತನ ವರ್ತನೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಆಕೆಯ ಮೇಲಿನ ಸಿಟ್ಟಿಗೆ ಮೈನಾ ಈ ಕೃತ್ಯ ಎಸಗಿದ್ದಾನೆ. ಮೈನಾ ದಿನಗೂಲಿ ಕೆಸಲ ಮಾಡುತ್ತಿದ್ದು, ವಿಪರೀತ ಮದ್ಯವ್ಯಸನಿಯಾಗಿದ್ದ. ಈತನ ಮೇಲೆ ಮೆದಕ್, ಸೈಬರಾಬಾದ್ ಮತ್ತು ರಾಚಕೊಂಡ ನಗರದಲ್ಲಿ ಕಳ್ಳತನ ಹಾಗೂ ದರೋಡೆ ಸೇರಿ 21 ಪ್ರಕರಣಗಳು ದಾಖಲಾಗಿದ್ದವು.

    ಕೊಲೆ ಪ್ರಕರಣವೊಂದರಲ್ಲಿ ಈತನಿಗೆ ಜೀವಾವಧಿ ಶಿಕ್ಷೆ ಕೂಡ ಆಗಿತ್ತು. ಆದರೆ ಕಳೆದ ವರ್ಷ ಜುಲೈ ತಿಂಗಳಲ್ಲಿ ಪರೋಲ್ ಮೇಲೆ ಬಿಡುಗಡೆಗೊಂಡಿದ್ದನು. ಆ ನಂತರವೂ ತನ್ನ ವಿಕೃತಿಯನ್ನು ಮುಂದುವರಿಸಿದ್ದನು. ಈತ ಒಂಟಿ ಮಹಿಳೆಯರಿಗೆ ಹಣದ ಆಮಿಷ ತೋರಿಸಿ ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಮೊದಲು ಬಣ್ಣದ ಮಾತುಗಳಿಗೆ ಒಳಗಾಗುವ ಮಹಿಳೆಯನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ನಂತರ ಅವರಿಗೆ ದುಡ್ಡಿನ ಆಸೆ ತೋರಿಸಿ, ಡ್ರಿಂಕ್ಸ್ ಮಾಡಿಸಿ ಅವರ ಮೇಲೆ ಅತ್ಯಾಚಾರ ಎಸಗುತ್ತಾನೆ. ಕೊನೆಗೆ ಕತ್ತು ಹಿಸುಕಿ ಕೊಲೆ ಮಾಡಿ ಅವರ ಬಳಿ ಇದ್ದ ಹಣ, ಒಡವೆ ದೋಚಿ ಪರಾರಿಯಾಗುತ್ತಿದ್ದ.

    ಒಟ್ಟಿನಲ್ಲಿ ಸದ್ಯ ಮೈನಾ 16 ಮಂದಿ ಮಹಿಳೆಯನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದ್ದು, ವಿಚಾರಣೆಯ ಬಳಿಕ ಇನ್ನಷ್ಟು ಸತ್ಯ ಹೊರಬರಲಿದೆ.

  • ವಾರದ ಹಿಂದೆ ಲಸಿಕೆ ಪಡೆದ ಅಂಗನವಾಡಿ ಶಿಕ್ಷಕಿ ಸಾವು

    ವಾರದ ಹಿಂದೆ ಲಸಿಕೆ ಪಡೆದ ಅಂಗನವಾಡಿ ಶಿಕ್ಷಕಿ ಸಾವು

    – ಮರಣೋತ್ತರ ಪರೀಕ್ಷೆ ನಂತರ ನಿಖರ ಮಾಹಿತಿ

    ಹೈದರಾಬಾದ್: ಒಂದು ವಾರದ ಹಿಂದೆ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದ ಅಂಗನವಾಡಿ ಶಿಕ್ಷಕಿ ಎದೆನೋವಿನಿಂದ ಸಾವನ್ನಪ್ಪಿರುವ ಘಟನೆ ತೆಲಂಗಣದ ವಾರಂಗಲ್‍ನಲ್ಲಿ ನಡೆದಿದೆ.

    ಮೃತ ಶಿಕ್ಷಕಿ 45 ವರ್ಷದವರಾಗಿದ್ದಾರೆ. ಇವರು 19ರಂದು ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡಿದ್ದು, ಶನಿವಾರ ಮತ್ತೆ ಕೆಲವು ಔಷಧಗಳನ್ನು ಸೇವಿಸಿದ್ದಾರೆ. ಬಳಿಕ ಎದೆನೋವು ಎಂದು ಮಲಗಿದ್ದವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

    ಮೃತ ಶಿಕ್ಷಕಿಯ ದೇಹವನ್ನು ಈಗಾಗಲೇ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮಹಾತ್ಮಾ ಗಾಂಧಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ಮಾಡಲಾಗುತ್ತದೆ. ಬಳಿಕ ಈಕೆಯ ಸಾವಿಗೆ ಕಾರಣ ತಿಳಿದು ಬರಬೇಕಿದೆ ಎಂದು ಆಸ್ಪತ್ರೆಯ ಮುಖ್ಯಸ್ಥ ನಾಗಾರ್ಜುನ ರೆಡ್ಡಿ ಹೇಳಿದ್ದಾರೆ.

    ತೆಲಂಗಾಣದಲ್ಲಿ ಕೊರೊನಾ ಲಸಿಕೆಯನ್ನು ಪಡೆದ ನಂತರ ಎದೆನೋವು ಕಾಣಿಸಿಕೊಂಡು ಮೃತಪಟ್ಟಿರುವ 2ನೇ ಮಹಿಳೆಯಾಗಿದ್ದಾರೆ. ಆದರೆ ಪ್ರಾಥಮಿಕ ಪರೀಕ್ಷೆಯಲ್ಲಿ ಸಾವಿಗೂ ಲಸಿಕೆಗೂ ಸಂಬಂಧವಿಲ್ಲ ಎಂದು ತಿಳಿದು ಬಂದಿತ್ತು. ಮರಣೋತ್ತರ ಪರೀಕ್ಷೆಯ ನಂತರ ಶಿಕ್ಷಕಿ ಸಾವಿಗೆ ಕಾರಣ ತಿಳಿದು ಬರಬೇಕಿದೆ.

  • ತಾಯಿಗೆ ಸೆಲ್ಫಿ ವೀಡಿಯೋ ಕಳಿಸಿ ದುಬೈನಲ್ಲಿ ಯುವಕ ಆತ್ಮಹತ್ಯೆ

    ತಾಯಿಗೆ ಸೆಲ್ಫಿ ವೀಡಿಯೋ ಕಳಿಸಿ ದುಬೈನಲ್ಲಿ ಯುವಕ ಆತ್ಮಹತ್ಯೆ

    – ವೀಡಿಯೋದಲ್ಲಿ ಯುವಕ ಹೇಳಿದ್ದೇನು..?

    ಹೈದರಾಬಾದ್: ದುಬೈನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ತನ್ನ ತಾಯಿಗೆ ಸೆಲ್ಫಿ ವೀಡಿಯೋ ಮಾಡಿ ಬಳಿಕ ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆಯೊಂದು ನಡೆದಿದೆ.

    ಆತ್ಮಹತ್ಯೆಗೆ ಶರಣಾದ ಯುವಕನನ್ನು ಮನಲಾ ರಾಜೇಶ್(24) ಎಂದು ಗುರುತಿಸಲಾಗಿದೆ. ಈತ ತೆಲಂಗಾಣದ ಜಗಿತ್ತಲ ಜಿಲ್ಲೆಯ ಗೊಲ್ಲಪೆಲ್ಲಿ ಮಂಡಲದ ಲಕ್ಷ್ಮೀಪುರ ಗ್ರಾಮದ ನಿವಾಸಿ. ಈತ ತನ್ನ ತಾಯಿಗೆ ಸೆಲ್ಫೀ ವೀಡಿಯೋ ಮಾಡಿ ಕಳುಹಿಸಿದ್ದಾನೆ. ಅದರಲ್ಲಿ ಪ್ರೇಯಸಿ ಇಲ್ಲದ ಜೀವನ ವ್ಯರ್ಥ ಎಂದು ತನ್ನ ನೋವನ್ನು ಹೊರಹಾಕಿದ್ದಾನೆ.

    ಜಗಿತ್ತಲ ಜಿಲ್ಲೆಯ ಗೋವಿಂದಪಲ್ಲಿ ಗ್ರಾಮದ ಯುವತಿಯನ್ನು ರಾಜೇಶ್ ಕಳೆದ 4 ವರ್ಷಗಳಿಂದ ಪ್ರೀತಿಸುತ್ತಿದ್ದ. ಆಕೆಯೂ ಸಹ ರಾಜೇಶ್ ನನ್ನು ತುಂಬಾನೇ ಇಷ್ಟಪಡುತ್ತಿದ್ದಳು. ಆದರೆ ಈ ಮಧ್ಯೆ ರಾಜೇಶ್ ಕೆಲಸಕ್ಕೆಂದು ದುಬೈಗೆ ತೆರಳಿದ್ದ. ಅಲ್ಲದೆ ದುಬೈನಿಂದ ಬಂದ ಬಳಿಕ ಇಬ್ಬರು ಮದುವೆ ಮಾಡಿಕೊಳ್ಳುವ ನಿರ್ಧಾರ ಮಾಡಿದರು.

    ಇತ್ತ ಮಗಳ ಪ್ರೀತಿಯ ವಿಚಾರ ಆಕೆಯ ಪೋಷಕರ ಗಮನಕ್ಕೆ ಬಂದಿದೆ. ಹೀಗಾಗಿ ಪ್ರೀತಿಗೆ ಒಪ್ಪದ ಪೋಷಕರು ಆಕೆಗೆ ಬೇರೆಯೊಬ್ಬನ ಜೊತೆ ಮದುವೆ ಮಾಡಲು ನಿರ್ಧರಿಸಿದ್ದರು. ಅದಕ್ಕಾಗಿ ವರನ ಹುಡುಕಾಟ ಆರಂಭಿಸಿದ್ದಾರೆ. ರಾಜೇಶ್ ನನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಲು ಯುವತಿಗೆ ಒಪ್ಪಿಗೆ ಇಲ್ಲ. ಹೀಗಾಗಿ ತಂದೆ-ತಾಯಿಯ ನಿರ್ಧಾರದಿಂದ ಆಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ತನ್ನ ಪ್ರಿಯತಮೆ ಸೂಸೈಡ ಮಾಡಿಕೊಂಡಿರುವ ವಿಚಾರ ತಿಳಿಯುತ್ತಿದ್ದಂತೆಯೇ ರಾಜೇಶ್ ಕೂಡ ದುಬೈನಲ್ಲಿ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿಗೂ ಮುನ್ನ ಈತ, ಪ್ರಿಯತಮೆ ಇಲ್ಲದ ಜೀವನ ವ್ಯರ್ಥ ಎಂದು ಸೆಲ್ಫಿ ವೀಡಿಯೋ ಮಾಡಿ ಅದನ್ನು ತನ್ನ ತಾಯಿಗೆ ಕಳುಹಿಸಿದ್ದಾನೆ. ಮಗ ರಾಜೇಶ್ ಸಾವಿನ ಸುದ್ದಿ ಕೇಳಿ ಆತನ ಪೋಷಕರ ಆಕ್ರಂದನ ಮುಗಿಲು ಮುಟ್ಟಿತು.

  • ಕೂಲಿಕಾರ್ಮಿರು ಪ್ರಯಾಣಿಸ್ತಿದ್ದ ವಾಹನ ಅಪಘಾತ – 7 ಮಂದಿ ಸಾವು, 13 ಜನರಿಗೆ ಗಾಯ

    ಕೂಲಿಕಾರ್ಮಿರು ಪ್ರಯಾಣಿಸ್ತಿದ್ದ ವಾಹನ ಅಪಘಾತ – 7 ಮಂದಿ ಸಾವು, 13 ಜನರಿಗೆ ಗಾಯ

    ಹೈದರಾಬಾದ್: ಕೆಲಸ ಮುಗಿಸಿ ಮನಗೆ ಹೋಗುತ್ತಿದ್ದ ಕೂಲಿ ಕಾರ್ಮಿಕರಿದ್ದ ಆಟೋ ಕಂಟೇನರ್ ಗೆ ಡಿಕ್ಕಿಯಾಗಿ 7 ಮಂದಿ ಸಾವನ್ನಪ್ಪಿ, 13 ಜನರಿಗೆ ಗಾಯವಾಗಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಅಂಗಡಿಪೇಟ್ ಬಳಿ ನಡೆದಿದೆ.

    ವಾಹನ ಭೀಕರ ರಸ್ತೆ ಅಪಘಾತಕ್ಕಿಡಾಗಿ ವಾಹನದಲ್ಲಿದ್ದ 7 ಮಹಿಳೆಯರು ಸಾವನ್ನಪ್ಪಿದ್ದು, 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರು ಚಿಂತಾಬಾವಿ ಗ್ರಾಮದ ನಿವಾಸಿಗಳಾಗಿದ್ದಾರೆ. 20 ಮಂದಿ ಕಾರ್ಮಿಕರು ಪ್ರಯಾಣಿಸುತ್ತಿದ್ದ ಆಟೋ ಕಂಟೇನರ್‍ಗೆ ಡಿಕ್ಕಿಯಾಗಿ ಸಾವು-ನೋವು ಸಂಭವಿಸಿದೆ.

    ಈ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರನ್ನು ಆಟೋ ಚಾಲಕ ಮಲ್ಲೇಶ್, ಕಲೂಲಿ ಕಾರ್ಮಿಕರಾದ ಪೆದ್ದಮ್ಮ, ನೋಮಲ ಸೈದಮ್ಮ, ಕೊಟ್ಟಂ, ಪೆದ್ದಮ್ಮ ಗೋಡುಗು, ಇದ್ದಮ್ಮ ಮಲ್ಲಮ್ಮ, ಅಂಜನಮ್ಮ ಎಂದು ಗುರುತಿಸಲಾಗಿದೆ. 13 ಜನರು ಗಂಭಿರವಾಗಿ ಗಾಯಗೊಂಡಿದ್ದಾರೆ. ಆಟೋದಲ್ಲಿ ಒಟ್ಟು 20 ಮಂದಿ ಕಾರ್ಮಿಕರು ಪ್ರಯಾಣ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

  • ಸಿಲಿಂಡರ್ ಸ್ಫೋಟ 13 ಜನ ವಲಸೆ ಕಾರ್ಮಿಕರಿಗೆ ಗಾಯ

    ಸಿಲಿಂಡರ್ ಸ್ಫೋಟ 13 ಜನ ವಲಸೆ ಕಾರ್ಮಿಕರಿಗೆ ಗಾಯ

    ಹೈದರಾಬಾದ್: ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ 13 ಜನ ವಲಸೆ ಕಾರ್ಮಿಕರು ಗಾಯಗೊಂಡಿರುವ ಘಟನೆ ಪಾಥಾ ಬಸ್ತಿ ಬಳಿ ಸಂಭವಿಸಿದೆ.

    ಹೈದರಾಬಾದ್ ಸಮೀಪದ ಪಾಥಾ ಬಸ್ತಿ ಬಳಿ ಬಂಗಾಳದಿಂದ ವಲಸೆ ಬಂದ ಕಾರ್ಮಿಕರು ಚಿನ್ನ ತಯಾರಿ ಕೆಲಸದಲ್ಲಿ ತೊಡಗಿದ್ದರು. ರಾತ್ರಿ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ 13 ಜನ ಗಾಯಗೊಂಡಿದ್ದು ಒಬ್ಬನ ಸ್ಥಿತಿ ಗಂಭೀರವಾಗಿದೆ.

    ಸ್ಥಳೀಯರ ಪ್ರಕಾರ ಮಧ್ಯರಾತ್ರಿ ಕೇಳಿಬಂದ ಶಬ್ಧಕ್ಕೆ ಎಚ್ಚರಗೊಂಡು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ನಂತರ ಪೊಲೀಸರಿಗೆ ಮತ್ತು ಅಗ್ನಿಶಾಮಕದಳಕ್ಕೆ ಕೂಡಲೇ ಮಾಹಿತಿ ನೀಡಿ ಗಾಯಾಳುಗಳನ್ನು ಹತ್ತಿರದ ಉಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಪಶ್ಚಿಮ ಬಂಗಾಳದಿಂದ ವಲಸೆ ಬಂದಿದ್ದ 13 ಮಂದಿ ಕಾರ್ಮಿಕರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಚಿನ್ನ ತಯಾರಿಕೆ ಕೆಲಸಕ್ಕಾಗಿ ಬಳಸಿದ್ದ ರಾಸಾಯನಿಕಗಳಿಂದ ಸ್ಫೋಟ ಸಂಭವಿಸಿದೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡು ಹಚ್ಚಿನ ತನಿಖೆ ನಡೆಸುತ್ತಿದ್ದಾರೆ.