Tag: Hyderabad

  • ಮದುವೆಯ ಬಗ್ಗೆ ವಿಜಯ್‌ ದೇವರಕೊಂಡ ಮಾತು

    ಮದುವೆಯ ಬಗ್ಗೆ ವಿಜಯ್‌ ದೇವರಕೊಂಡ ಮಾತು

    ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ನಟರಲ್ಲಿ ದಿ ಮೋಸ್ಟ್ ಹ್ಯಾಂಡ್‍ಸಮ್ ನಟ ವಿಜಯ್ ದೇವರಕೊಂಡ ಕೂಡ ಒಬ್ಬರು. ಇದೀಗ ವಿಜಯ್ ದೇವರಕೊಂಡ ತಮ್ಮ ಮುಂದಿನ ಲೈಗರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ಈ ಸಿನಿಮಾದಲ್ಲಿ ವಿಜಯ್‍ಗೆ ನಾಯಕಿಯಾಗಿ ಅನನ್ಯ ಪಾಂಡೆ ಅಭಿನಯಿಸುತ್ತಿದ್ದಾರೆ. ಸದ್ಯ ಬ್ಯಾಚುಲರ್ ಲಿಸ್ಟ್ ನಲ್ಲಿರುವ ವಿಜಯ್ ದೇವರಕೊಂಡಗೆ ಶೀಘ್ರವೇ ಮದುವೆಯಾಗುವಂತೆ ಅವರ ತಾಯಿ ತಿಳಿಸಿದ್ದಾರೆ ಎಂಬ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

    ಈ ವಿಚಾರವಾಗಿ ಮಾತನಾಡಿದ ಅವರು, ತಮ್ಮ ತಾಯಿ ದೇವರಕೊಂಡ ಮಾಧವಿಯವರು ಮದುವೆ ವಿಚಾರ ಬಂದಾಗ ಶಾಂತವಾಗಿ ಬಿಡುತ್ತಾರೆ. ಕಾರಣ ನನ್ನ ಪೋಷಕರಿಗೆ ನನಗಿರುವ ಜವಾಬ್ದಾರಿ ಬಗ್ಗೆ ತಿಳಿದಿದೆ ಹಾಗೂ ನಾನು ಏನು ಮಾಡುತ್ತಿದ್ದೇನೆ ಎಂಬುವುದು ಕೂಡ ಅರಿತಿದ್ದಾರೆ. ಹಾಗಾಗಿ ತಮ್ಮ ವಿಚಾರವಾಗಿ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರ ನೀಡಿದ್ದಾರೆ ಎಂದು ಹೇಳಿದರು.

    ತಾಯಿ ಕುರಿತಂತೆ ಮಾತನಾಡಲು ಆರಂಭಿಸಿದ ವಿಜಯ್ ದೇವರಕೊಂಡ, ನಾನು ನನ್ನ ತಾಯಿ ಜೊತೆ ಚಿತ್ರ ಮಂದಿರದಲ್ಲಿ ರಜನಿಕಾಂತ್ ಹಾಗೂ ಚಿರಂಜೀವಿ ಅಭಿನಯದ ಸಿನಿಮಾ ನೋಡಿದ್ದೇನೆ. ಅಲ್ಲದೇ ನಾನು ಹೆಚ್ಚಾಗಿ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ತಾಯಿ ಹಾಗೂ ಇಡೀ ಕುಟುಂಬದೊಂದಿಗೆ ಹೋಗುತ್ತಿದ್ದೆ. ಅಡುಗೆ ವಿಚಾರಕ್ಕೆ ಬಂದರೆ ಅಮ್ಮ ಮಾಡುವ ದಾಲ್ ಮತ್ತು ರೋಟಿ ಎಂದರೆ ನನಗೆ ಬಹಳ ಇಷ್ಟ ಎಂದರು.

    ತಾಯಿಗೆ ನೀಡಿದ ಮೊದಲ ಗಿಫ್ಟ್ ಯಾವುದು ಎಂದು ಕೇಳಿದ ಪ್ರಶ್ನೆಗೆ, ನಾನು ಮೂರನೇ ತರಗತಿಯಲ್ಲಿದ್ದಾಗ ಅಪ್ಪ-ಅಮ್ಮ ಹೊರಗೆ ಹೋಗಿದ್ದರು. ಆಗ ನಾನು ನನ್ನ ಸಹೋದರನೊಂದಿಗೆ ಸೇರಿ ಮನೆಯನ್ನು ಸ್ಚಚ್ಛಗೊಳಿಸಿ ಗ್ರೀಟಿಂಗ್ ಕಾರ್ಡ್ ಒಂದರಲ್ಲಿ ಅವರ ಭಾವಚಿತ್ರವನ್ನು ಅಂಟಿಸಿ ಐ ಲವ್ ಯು ಎಂದು ಬರೆದು ಕೊಟ್ಟಿದ್ದೆ. ಅದನ್ನು ನೋಡಿ ನನ್ನ ತಾಯಿ ಸಂತೋಷದಿಂದ ಕಣ್ಣೀರಿಟ್ಟಿದ್ದರು ಎಂದು ಹೇಳಿದರು. ಹೀಗೆ ವಿಜಯ್ ದೇವರಕೊಂಡ ತಮ್ಮ ಬಾಲ್ಯದ ಹಳೆಯ ಸವಿ ನೆನಪುಗಳನ್ನು ಹಂಚಿಕೊಂಡಿದ್ದಾರೆ.

    ಸದ್ಯ ವಿಜಯ್ ದೇವರಕೊಂಡ ಲೈಗರ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು ಈ ಚಿತ್ರಕ್ಕೆ ನಿರ್ದೇಶಕ ಪುರಿ ಜಗನ್ನಾಥ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅಲ್ಲದೆ ಚಿತ್ರದ ಪ್ರಮುಖ ಪಾತ್ರಗಳಲ್ಲಿ ರಮ್ಯಾಕೃಷ್ಣ, ಮಕರಂದ್ ದೇಶಪಾಂಡೆ ಮತ್ತು ರೋನಿತ್ ರಾಯ್ ಮಿಂಚಿದ್ದಾರೆ. ಈ ಸಿನಿಮಾ 2021ರ ಸೆಪ್ಟೆಂಬರ್ 9 ರಂದು ತೆರೆ ಮೇಲೆ ಬರಲಿದೆ.

  • ಸೀರೆ ಎತ್ತಿಕಟ್ಟಿ ಕಬಡ್ಡಿ ಅಖಾಡಕ್ಕಿಳಿದ ರೋಜಾ

    ಸೀರೆ ಎತ್ತಿಕಟ್ಟಿ ಕಬಡ್ಡಿ ಅಖಾಡಕ್ಕಿಳಿದ ರೋಜಾ

    ಹೈದರಾಬಾದ್: ನಟಿ, ರಾಜಕಾರಣಿ ರೋಜಾ ಆಂಧ್ರಪ್ರದೇಶದಲ್ಲಿ ನಡೆಯಲಿರುವ ಎರಡು ನಗರಪಾಲಿಕೆ ಚುನಾವಣೆ ಪ್ರಚಾರದ ವೇಳೆ ಯುವಕರೊಂದಿಗೆ ಕಬಡ್ಡಿ ಆಡಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.

    ಚುನಾವಣಾ ಪ್ರಚಾರದ ವೇಳೆ ಶಾಸಕಿ ಹಾಗೂ ಆಂಧ್ರಪ್ರದೇಶ ಕೈಗಾರಿಕಾ ಮೂಲಸೌಕರ್ಯ ನಿಗಮ ಮಂಡಳಿ ಅಧ್ಯಕ್ಷೆ ಆಗಿರುವ ರೋಜಾ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಸ್ಥಳಿಯ ನಾಯಕರು ಮತ್ತು ಪುತ್ತೂರ್ ಮುನ್ಸಿಪಾಲಿಟಿ ನಾಯಕರ ಜತೆ ಓಡಾಡಿ ತಮ್ಮ ಬೆಂಬಲಿಗರಿಗೆ ಮತ ಹಾಕುವಂತೆ ಮನವಿ ಮಾಡಿದರು.

    ಪ್ರಚಾರಕ್ಕೆಂದು ಹೋದವೇಳೆ ಚಿತ್ತೂರ್ ಜಿಲ್ಲೆಯ ನಿಂದ್ರಾದಲ್ಲಿರುವ ಶಾಲೆಯಲ್ಲಿ ಕಬಡ್ಡಿ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಟೂರ್ನಮೆಂಟ್ ಬಳಿ ಹೋದ ರೋಜಾ, ಆಟಗಾರರನ್ನು ಹುರಿದುಂಬಿಸಲು ಸೀರೆ ಎತ್ತಿ ಸೊಂಟಕ್ಕೆ ಕಟ್ಟಿಕೊಂಡು ಕಬಡ್ಡಿ ಅಖಾಡಕ್ಕಿಳಿದಿದ್ದಾರೆ.

    ಕಬಡ್ಡಿ..ಕಬಡ್ಡಿ ಎನ್ನುತ್ತಾ ಕೆಲಕಾಲ ಆಟವಾಡಿದ್ದಾರೆ. ವಿರೋಧ ಪಕ್ಷದ ನಾಯಕರನ್ನು ಸದಾ ಟೀಕಿಸುವ ಮೂಲಕವಾಗಿ ಸುದ್ದಿಯಾಗುವ ನಟಿ ಮಣಿ ಇದೀಗ ಕಬಡ್ಡಿ ಆಟವನ್ನು ಆಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

  • ಹ್ಯಾಪಿ ಆ್ಯನಿವರ್ಸರಿ ನಮಗೆ ಕ್ಯೂಟಿ ಅಂದ ಅಲ್ಲು ಅರ್ಜುನ್

    ಹ್ಯಾಪಿ ಆ್ಯನಿವರ್ಸರಿ ನಮಗೆ ಕ್ಯೂಟಿ ಅಂದ ಅಲ್ಲು ಅರ್ಜುನ್

    ಹೈದರಾಬಾದ್: ಟಾಲಿವುಡ್ ಸ್ಟೈಲಿಶ್ ಸ್ಟಾರ್ ನಟ ಅಲ್ಲು ಅರ್ಜುನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಹತ್ತು ವರ್ಷ ಕಳೆದಿದೆ. ಇದೇ ಖುಷಿಯಲ್ಲಿ ಅಲ್ಲು ಅರ್ಜುನ್ ಪತ್ನಿ ಸ್ನೇಹ ರೆಡ್ಡಿ ಜೊತೆ ತಾಜ್‍ಮಹಲ್ ಮುಂದೆ ಕ್ಲಿಕ್ಕಿಸಿಕೊಂಡಿದ್ದ ಕೆಲ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ಫೋಟೋಗಳ ಜೊತೆ ಅಲ್ಲು ಪತ್ನಿಯನ್ನು ಪ್ರೀತಿಯಿಂದ ಕ್ಯೂಟಿ ಎಂದು ಕರೆದಿರುವ ವಿಚಾರ ಬಹಿರಂಗಗೊಂಡಿದೆ. ಒಂದು ತಾಜ್ ಮಹಲ್ ಮುಂದೆ ಕ್ಲಿಕ್ಕಿಸಿಕೊಂಡಿರುವ ಫೋಟೋವಾದರೆ ಮತ್ತೊಂದು ಮದುವೆ ವೇಳೆ ಸೆರೆಹಿಡಿಯಲಾದ ಫೋಟೋವನ್ನು ಕೋಲಾಜ್ ಮಾಡಿ ಶೇರ್ ಮಾಡುವ ಮೂಲಕ ಸವಿನೆನಪುಗಳ ಮೆಲುಕು ಹಾಕಿದ್ದಾರೆ.

    ಫೋಟೋಗಳ ಶೇರ್ ಮಾಡಿರುವುದರ ಜೊತೆಗೆ, ಹ್ಯಾಪಿ ಆ್ಯನಿವರ್ಸರಿ ನಮಗೆ ಕ್ಯೂಟಿ. ಹತ್ತು ವರ್ಷಗಳು ಎಂತಹ ಅದ್ಭುತ ಪ್ರಯಾಣ. ಇನ್ನೂ ಅನೇಕ ವರ್ಷಗಳು ಹೀಗೆ ಬರಲಿ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಇತ್ತೀಚೆಗಷ್ಟೇ ರಜೆಯನ್ನು ಎಂಜಾಯ್ ಮಾಡಲು ಅಲ್ಲು ಅರ್ಜುನ್ ಮತ್ತು ಕುಟುಂಬ ದುಬೈಗೆ ತೆರಳಿದ್ದರು. ಇದೀಗ ಒಂದೆರಡು ದಿನಗಳ ಹಿಂದೆಯಷ್ಟೇ ಹೈದರಾಬಾದ್‍ಗೆ ಹಿಂದಿರುಗಿದ್ದಾರೆ.

    ಸದ್ಯ ಅಲ್ಲು ಅರ್ಜುನ್ ನಟಿ ರಶ್ಮಿಕಾ ಮಂದಣ್ಣ ಜೊತೆ ಪುಷ್ಪಾ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರಕ್ಕೆ ನಿರ್ದೇಶಕ ಸುಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಆದರೆ ಅಲ್ಲು ಇಷ್ಟು ದಿನ ದುಬೈಗೆ ತೆರಳಿದ್ದ ಕಾರಣ ಸಿನಿಮಾ ತಯಾರಕರು ಕೇವಲ ರಶ್ಮಿಕಾ ಪಾತ್ರದ ಭಾಗಗಳನ್ನು ಚಿತ್ರೀಕರಿಸಿದ್ದರು. ಇನ್ನೂ ಈ ಸಿನಿಮಾದ ಟೀಸರ್‍ನನ್ನು ಅಲ್ಲು ಅರ್ಜುನ್ ಹುಟ್ಟುಹಬ್ಬದ ದಿನ ಬಿಡುಗಡೆಗೊಳಿಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಆದರೆ ಈ ಕುರಿತಂತೆ ಸಿನಿಮಾ ತಯಾಕರು ಯಾವುದೇ ರೀತಿ ಅಧಿಕೃತವಾಗಿ ಘೋಷಣೆ ಮಾಡಿಲ್ಲ.

     

    View this post on Instagram

     

    A post shared by Allu Arjun (@alluarjunonline)

  • ಏಕಾಏಕಿ ಬಾಗಿಲು ಹಾಕಿಕೊಂಡು ಮಗಳಿಗೆ ಬೆಂಕಿಯಿಟ್ಟು ತಾನೂ ಹಚ್ಚಿಕೊಂಡ್ಳು!

    ಏಕಾಏಕಿ ಬಾಗಿಲು ಹಾಕಿಕೊಂಡು ಮಗಳಿಗೆ ಬೆಂಕಿಯಿಟ್ಟು ತಾನೂ ಹಚ್ಚಿಕೊಂಡ್ಳು!

    – ಕೋಣೆಯೊಳಗೆ ತಾಯಿ- ಮಗಳು ಸಜೀವ ದಹನ

    ಹೈದರಾಬಾದ್: 3 ವರ್ಷದ ಮಗಳಿಗೆ ಬೆಂಕಿ ಇಟ್ಟು ತಾನೂ ಬೆಂಕಿ ಹಚ್ಚಿಕೊಂಡು ಅಮ್ಮ, ಮಗಳು ಜೀವಂತ ದಹನವಾಗಿರುವ ಘಟನೆ ಹೈದರಾಬಾದ್‍ನ ಮೆದಕ್ ಜಿಲ್ಲೆಯಲ್ಲಿ ನಡೆದಿದೆ.

     

    ರೇವತಿ(28) ಹಾಗೂ ಆದ್ಯಾಶ್ರೀ(3) ಮೃತರು. ರೇವತಿ ಐದು ವರ್ಷಗಳ ಹಿಂದೆ ಗಟ್ಟಯ್ಯ ಎಂಬ ವ್ಯಕ್ತಿಯನ್ನು ವಿವಾಹವಾಗಿದ್ದಳು. ಇದೀಗ ತಾಯಿ-ಮಗಳು ಬೆಂಕಿ ಹಚ್ಚಿಕೊಂಡು ಪ್ರಾಣ ಬಿಟ್ಟಿದ್ದಾರೆ.

    ಪತಿ ಕೆಲಸಕ್ಕೆ ಹೋಗುತ್ತಿದ್ದಂತೆ ಮನೆಯ ಬಾಗಿಲನ್ನು ರೇವತಿ ಮುಚ್ಚಿಕೊಂಡಿದ್ದಾಳೆ. ನಂತರ ಮಗಳ ದೇಹಕ್ಕೆ ಬೆಂಕಿ ಇಟ್ಟಿದ್ದಾಳೆ. ಅದಾದ ನಂತರ ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಾಯಿ-ಮಗಳ ಚೀರಾಟವನ್ನು ನೋಡಿ ನೆರೆಹೊರೆಯವರು ರಕ್ಷಣೆಗೆ ಬಂದಿದ್ದಾರೆ. ಆದರೆ ಬಾಗಿಲು ಲಾಕ್ ಆಗಿರುವುದರಿಂದ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

    ತಾಯಿ ಮಗಳ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಸಿಕೊಂಡಿದ್ದೇವೆ. ತನಿಖೆ ನಡೆಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.

  • ಅಪಾರ್ಟ್‍ಮೆಂಟ್ ಕಂಪೌಂಡ್ ಏರಿ ಬಂದು ಟೆಕ್ಕಿಗೆ ಚಾಕು ಇರಿದ ಭಗ್ನಪ್ರೇಮಿ

    ಅಪಾರ್ಟ್‍ಮೆಂಟ್ ಕಂಪೌಂಡ್ ಏರಿ ಬಂದು ಟೆಕ್ಕಿಗೆ ಚಾಕು ಇರಿದ ಭಗ್ನಪ್ರೇಮಿ

    ಹೈದರಾಬಾದ್: ಭಗ್ನಪ್ರೇಮಿಯೊಬ್ಬ ಅಪಾರ್ಟ್‍ಮೆಂಟ್ ಕಂಪೌಂಡ್ ಏರಿ ಬಂದು ಯುವತಿ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ಸಲ್ನಾನ್ ಶಾರೂಖ್ ತನ್ನ ಪ್ರಿಯತಮೆಗೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾದ ಯುವತಿ 29 ವರ್ಷ ಸಾಫ್ಟ್‍ವೇರ್ ಎಂಜಿನಿಯರ್ ಆಗಿ ಕೆಲಸಮಾಡುತ್ತಿದ್ದಳು.

    ಹಲುವು ದಿನಗಳಿಂದ ಶಾರೂಖ್ ಯುವತಿಯ ಹಿಂದೆ ಬಿದ್ದಿದ್ದನು. ಪ್ರೀತಿಸುವಂತೆ ಕಿರುಕುಳವನ್ನು ನೀಡುತ್ತಿದ್ದನು. ಯುವತಿ ಈ ವಿಚಾರವಾಗಿ ಮನನೊಂದ ಪೊಲೀಸರಲ್ಲಿ ದೂರು ಸಲ್ಲಿಸಿದ್ದಳು. ಆದರೂ ಕೂಡಾ ಶಾರೂಖ್ ಅವಳನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಮಾತನಾಡುತ್ತಿದ್ದನು.

    ಒಂದು ದಿನ ಶಾರೂಖ್ ಮಹಿಳೆ ವಾಸವಾಗಿದ್ದ ಅಪಾರ್ಟ್‍ಮೆಂಟ್ ಕಾಂಪ್ಲಕ್ಸ್‍ನ ಕಾಂಪೌಂಡ್ ಏರಿ ಬಂದು ಆಕೆಯ ಮನೆಗೆ ನುಗ್ಗಿದ್ದಾನೆ. ಚಾಕುವಿನಿಂದ ಆಕೆಯ ಹೊಟ್ಟೆ ಮತ್ತು ಎದೆಗೆ ಇರಿದು ಪರಾರಿಯಾಗಿದ್ದಾನೆ. ಯುವತಿಯ ಪೋಷಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ನರಸಿಂಗಿ ಠಾನೆ ಪೊಲೀಸ್ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಿಸ್ ಇಂಡಿಯಾ 2020 ಆದ ಹೈದರಾಬಾದ್ ಸುಂದರಿ

    ಮಿಸ್ ಇಂಡಿಯಾ 2020 ಆದ ಹೈದರಾಬಾದ್ ಸುಂದರಿ

    ಹೈದರಾಬಾದ್: ಫೆಮಿನಾ ಮಿಸ್ ಇಂಡಿಯಾ 2020 ಆಗಿ ಹೈದರಾಬಾದ್ ಮೂಲದ ಮಾನಸ ವಾರಾಣಸಿ ಆಯ್ಕೆಯಾಗುವ ಮೂಲಕವಾಗಿ ಕೀರಿಟವನ್ನು ಮುಡಿಗೇರಿಸಿಕೊಂಡಿದ್ದಾರೆ.

    ಮಿಸ್ ಇಂಡಿಯಾ 2020ರ ಪಟ್ಟಕ್ಕಾಗಿ ಹಲವು ಸುಂದರಿಯರು ಪೈಪೋಟಿ ನಡೆಸಿದ್ದರು. ಮಾನಸ(23) ವಾರಾಣಸಿ ಅವರಿಗೆ ಮಿಸ್ ಇಂಡಿಯಾ ಕಿರೀಟ ಸಿಕ್ಕಿದೆ. 2021ರ ಡಿಸೆಂಬರ್‍ನಲ್ಲಿ ನಡೆಯಲಿರುವ ಮಿಸ್ ವಲ್ರ್ಡ್ ಸ್ಪರ್ಧೆಯಲ್ಲಿ ಮಾನಸ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ.

    ಮಾನಸ ಮೂಲತಃ ತೆಲಂಗಾಣದವರಾಗಿದ್ದಾರೆ. ಫ್ಯಾಷನ್ ಜಗತ್ತಿನಲ್ಲಿ ಎಲ್ಲರ ಗಮನ ಸೆಳೆದಿರುವ ಈ ಸುಂದರಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‍ನಲ್ಲಿ ಪದವಿಯನ್ನು ಪಡೆದಿದ್ದಾರೆ. ಪುಸ್ತಕಗಳನ್ನು ಓದುವ ಹವ್ಯಾಸ ಹೊಂದಿದ್ದಾರೆ. ಸಂಗೀತ ಮತ್ತು ನೃತ್ಯದಲ್ಲಿ ಮಾನಸ ಅವರಿಗೆ ಅಪಾರ ಆಸಕ್ತಿ ಇದೆ. ಯೋಗಪಟು, ಭರತನಾಟ್ಯ ಕಲಾವಿದೆಯೂ ಆಗಿದ್ದಾರೆ. ಮಾನಸ ಬಿಡುವಿನ ಸಮಯದಲ್ಲಿ ಬಟ್ಟೆಯ ಮೇಲೆ ಕಸೂತಿಹಾಕುತ್ತಾರೆ. ಇನ್‍ಸ್ಟಾಗ್ರಾಮ್‍ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಚೆಂದುಳ್ಳಿ ಚೆಲುವಿಗೆ ಟ್ರಾವೆಲಿಂಗ್ ಎಂದರೆ ಬಲು ಇಷ್ಟವಾಗಿದೆ. ಕರ್ನಾಟಕದ ಹಲವು ಭಾಗಗಳನ್ನು ಸುತ್ತಾಡಿದ್ದಾರೆ.

    ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಅವರನ್ನು ಮಾಸನ ಸ್ಫೂರ್ತಿಯಾಗಿ ಇಟ್ಟುಕೊಂಡಿದ್ದಾರೆ. ಹೀಗೆಂದು ಮನಸ ಈ ಹಿಂದಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. 2000ನೇ ಇಸವಿಯಲ್ಲಿ ಪ್ರಿಯಾಂಕಾ ಕೂಡ ಇದೇ ರೀತಿ ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡಿದ್ದರು. ಸದ್ಯ ಮಿಸ್ ಇಂಡಿಯಾ ಆಗಿರುವ ಮಾನಸ ವಾರಾಣಸಿ ಮುಂದಿನ ದಿನಗಳಲ್ಲಿ ಬಣ್ಣದ ಲೋಕಕ್ಕೆ ಕಾಲಿಡುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

  • ಪತ್ನಿಯ ಓಡಾಟವನ್ನು ಪತ್ತೆ ಹಚ್ಚಲು ಸ್ಕೂಟಿಗೆ ಟ್ರ್ಯಾಕರ್ ಅಳವಡಿಸಿದ ಪತಿ

    ಪತ್ನಿಯ ಓಡಾಟವನ್ನು ಪತ್ತೆ ಹಚ್ಚಲು ಸ್ಕೂಟಿಗೆ ಟ್ರ್ಯಾಕರ್ ಅಳವಡಿಸಿದ ಪತಿ

    ಹೈದರಾಬಾದ್: ಪತ್ನಿಯ ಲೈವ್ ಲೊಕೇಶನ್ ತಿಳಿದುಕೊಳ್ಳಲು ಪತಿ ಸ್ಕೂಟಿಗೆ ಟ್ರ್ಯಾಕರ್ ಅಳವಡಿಸಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ವಿವೇಕ್ ವೀರೇಂದ್ರ ಸಿಂಗ್ (45) ಪತ್ನಿಯ ಸ್ಕೊಟಿಗೆ ಟ್ರ್ಯಾಕರ್ ಅಳವಡಿಸಿದ ವ್ಯಕ್ತಿ. ಸದ್ಯ ಪತಿ ಟ್ರ್ಯಾಕರ್ ಅಳವಡಿಸಿದ ವಿಚಾರವನ್ನು ತಿಳಿದ ಮಹಿಳೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.

    ವಿವೇಕ್ ಹೈದರಾಬಾದ್‍ನ ಶ್ರೀನಗರ ಕಾಲೋನಿಯಲ್ಲಿ ತನ್ನ ಪತ್ನಿಯೊಂದಿಗೆ ವಾಸವಾಗಿದ್ದನು. ಆದರೆ ಈತನಿಗೆ ಬೇರೆ ಮಹಿಳೆಯೊಂದಿಗೆ ಸಂಬಂಧವಿತ್ತು. ಪತ್ನಿಗೆ ವಿಚ್ಛೇದನ ನೀಡಿ ಪ್ರಿಯತಮೆಯೊಂದಿಗೆ ಮದುವೆಯಾಗಲು ನಿರ್ಧರಿಸಿದ್ದನು. ಮಡದಿಗೆ ವಿಚ್ಛೇದನ ನೀಡಲು ಕೋರ್ಟಿಗೆ ಅರ್ಜಿಯನ್ನು ಹಾಕಿದ್ದನು. ಆದರೆ ಮಡದಿ ತನಗೆ ವಿಚ್ಛೇದನ ನೀಡಲು ಇಷ್ಟವಿಲ್ಲ ಎಂದು ಹೇಳಿದ್ದಳು. ಇದರಿಂದ ಕೋಪಗೊಂಡ ಪತಿ ಕಿರುಕುಳ ನೀಡಲು ಆರಂಭಿಸಿದ್ದನು. ಈ ಸಂಬಂಧ ಮಹಿಳೆ ದೂರು ದಾಖಲಿಸಿದ್ದಳು.

    ಇತ್ತೀಚಿನ ದಿನಗಳಲ್ಲಿ ಆಕೆಯನ್ನು ಕೆಲವು ಮಂದಿ ಹಿಂಬಾಲಿಸುತ್ತಿರುವ ವಿಚಾರ ಆಕೆಯ ಗಮನಕ್ಕೆ ಬಂದಿದೆ. ಇದರಿಂದ ಅನುಮಾನಗೊಂಡ ಆಕೆ ತನ್ನ ಸ್ಕೂಟಿಯನ್ನು ಪರಿಶೀಲನೆ ಮಾಡಿದ್ದಾಳೆ. ಆಗ ಟ್ರ್ಯಾಕಿಂಗ್ ಅಳವಡಿಸಿರುವುದು ಬಯಲಾಗಿದೆ. ನಂತರ ಮಹಿಳೆ ಪತಿ ವಿವೇಕ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

  • ಆಟೋ ಹತ್ತಿದ ಪದವಿ ವಿದ್ಯಾರ್ಥಿನಿ- ಪೊದೆಯತ್ತ ಎಳೆದು ಚಾಲಕ ರೇಪ್!

    ಆಟೋ ಹತ್ತಿದ ಪದವಿ ವಿದ್ಯಾರ್ಥಿನಿ- ಪೊದೆಯತ್ತ ಎಳೆದು ಚಾಲಕ ರೇಪ್!

    ಹೈದರಾಬಾದ್: ಪದವಿ ವಿದ್ಯಾರ್ಥಿಯ ಮೇಲೆ ಆಟೋ ಚಾಲಕನೊಬ್ಬ ಅತ್ಯಾಚಾರ ಎಸಗಿದ ಪೈಶಾಚಿಕ ಘಟನೆ ಹೈದರಾಬಾದ್‍ನ ಘಟ್ಕಸರ್ ನಲ್ಲಿ ಬುಧವಾರ ನಡೆದಿದೆ.

    ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ವಿದ್ಯಾರ್ಥಿನಿ ಕಾಲೇಜಿನಿಂದ ಮನೆಗೆ ವಾಪಸ್ಸಾಗುತ್ತಿದ್ದಳು. ಈ ಸಂದರ್ಭದಲ್ಲಿ ಮನೆಗೆ ತೆರಳಲೆಂದು ಆಕೆ ಆಟೋ ಹತ್ತಿದ್ದಾಳೆ. ಆದರೆ ಚಾಲನ ಇದೇ ಸಮಯದಲ್ಲಿ ಆಕೆಯನ್ನು ಕಿಡ್ನಾಪ್ ಮಾಡಿ ನಂತರ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಅಲ್ಲದೆ ಪೊದೆಯ ಬಳಿ ಆಕೆಯನ್ನು ಎಳೆದುಕೊಂಡು ಹೋಗಿ ತನ್ನ ಕಾಮ ತೃಷೆ ತೀರಿಸಿಕೊಂಡಿದ್ದಾನೆ.

    ಅತ್ಯಾಚಾರ ಎಸಗಿದ ಬಳಿಕ ಚಾಲಕ ತನ್ನ ಆಟೋದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ. ಇತ್ತ ವಿದ್ಯಾರ್ಥಿನಿ ರಸ್ತೆ ಬದಿ ಬಂದು ಸಹಾಯಕ್ಕಾಗಿ ಅಂಗಲಾಚಿದ್ದಾಳೆ. ಈ ವಿಚಾರ ಬಯಲಾಗುತ್ತಿದ್ದಂತೆಯೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಕುಡಲೇ ಆಕೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಘಟನೆ ಸಂಬಂಧ ಘಟ್ಕಸರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

  • ತಿರುಪತಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ

    ತಿರುಪತಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ

    ಹೈದರಾಬಾದ್: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಿರುಪತಿಗೆ ಭೇಟಿ ನೀಡಿದ್ದಾರೆ.

    ನಟ ಇಂದು ಬೆಳಗ್ಗೆ ತಿರುಪತಿ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದಿದ್ದಾರೆ. ಈ ವೇಳೆ ದಾಸನಿಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್, ಸಿನಿಮಾ ತೆಲುಗು ವಿತರಕ ಕೂಡ ಸಾಥ್ ನೀಡಿದ್ದಾರೆ.

    ನಮ್ಮ ಮನೆ ದೇವರು, ಹೀಗಾಗಿ ದರ್ಶನಕ್ಕೆ ಬಂದಿದ್ದೇನೆ. ಇಲ್ಲಿಗೆ ಬರದೆ 5 ವರ್ಷ ಆಗಿತ್ತು, ಈಗ ಸಮಯ ಕೂಡಿ ಬಂತು. ರಾಬರ್ಟ್ ಸಿನಿಮಾ ಬಿಡುಗಡೆಯಾಗಲಿ. ಆಮೇಲೆ ಮಾತನಾಡ್ತೀನಿ ಎಂದರು.

    ತಮ್ಮ ಬಹು ನಿರೀಕ್ಷಿತ ಸಿನಿಮಾ ರಾಬರ್ಟ್ ಪ್ರಚಾರದಲ್ಲಿ ಬ್ಯುಸಿಯಾಗಿದ್ದು, ಕನ್ನಡ ಹಾಗೂ ತೆಲುಗಿನಲ್ಲಿ ಒಂದೇ ದಿನ ತೆರೆ ಕಾಣಲಿದೆ. ತೆಲುಗು ಸಿನಿಮಾದ ಪ್ರಚಾರಕ್ಕಾಗಿ ಹೈದರಾಬಾದಿಗೆ ತೆರಳಲಿರುವ ದರ್ಶನ್, ಅದಕ್ಕೂ ಮೊದಲು ತಿರುಪತಿಗೆ ಭೇಟಿ ಕೊಟ್ಟಿದ್ದು, ತಿಮ್ಮನ ದರ್ಶನ ಪಡೆದು ಆಶೀರ್ವಾದ ಪಡೆದಿದ್ದಾರೆ.

    ಮಾರ್ಚ್ 11ರಂದು ಕನ್ನಡ ಹಾಗೂ ತೆಲುಗಿನಲ್ಲಿ ರಾಬರ್ಟ್ ತೆರೆ ಕಾಣಲಿದೆ. ಈ ಮಧ್ಯೆ ತೆಲುಗು ಇಂಡಸ್ಟ್ರಿಯಲ್ಲಿ ರಾಬರ್ಟ್ ಸಿನಿಮಾ ಬಿಡುಗಡೆಗೆ ಅಡ್ಡಿಪಡಿಸಲಾಗಿದೆ. ಇದರಿಂದ ನೊಂದಿದ್ದ ದಾಸ, ಫಿಲಂ ಚೇಂಬರ್ ಗೆ ದೂರು ನೀಡಿದ್ದರು.

  • ವಿದ್ಯಾರ್ಥಿಯ ಜಸ್ಟ್ ಒಂದು ಫೋನ್ ಕಾಲ್ – ವ್ಯಕ್ತಿಗೆ ಬಿತ್ತು 62 ಸಾವಿರ ದಂಡ

    ವಿದ್ಯಾರ್ಥಿಯ ಜಸ್ಟ್ ಒಂದು ಫೋನ್ ಕಾಲ್ – ವ್ಯಕ್ತಿಗೆ ಬಿತ್ತು 62 ಸಾವಿರ ದಂಡ

    ಹೈದರಾಬಾದ್: ಹೊಸ ಮನೆ ನಿರ್ಮಾಣಕ್ಕೆ 40 ವರ್ಷಗಳಿಂದ ಬೆಳೆದು ನಿಂತಿರುವ ಮರ ಅಡ್ಡಿಯಾಗುತ್ತಿತ್ತು, ಎಂದು ಬೇವಿನ ಮರ ಕತ್ತರಿಸುತ್ತಿದ್ದ ವ್ಯಕ್ತಿಗೆ 62 ಸಾವಿರ ರೂಪಾಯಿ ದಂಡವನ್ನು ವಿಧಿಸಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ಜಿ ಸಂತೋಷ್ ರೆಡ್ಡಿ ಅರಣ್ಯ ಇಲಾಖೆಗೆ ಯಾವುದೇ ಮಾಹಿತಿಯನ್ನು ನೀಡದೆ ಮರಕತ್ತರಿಸಿದ್ದರು. ಮರ ಕತ್ತರಿಸುವುದನ್ನು ಗಮನಿಸಿದ ವಿದ್ಯಾರ್ಥಿಯೊಬ್ಬ ಅರಣ್ಯ ಇಲಾಖೆಯ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ತಿಳಿಸಿ ಮರ ಕಡಿಯುತ್ತಿದ್ದವರ ವಿರುದ್ಧ ದೂರು ನೀಡಿದ್ದ.

    ತಕ್ಷಣ ಜಾಗೃತರಾದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ಧಾರೆ. ವ್ಯಕ್ತಿ ಮರ ಕಡಿಯಲು ಅನುಮತಿಯನ್ನು ಪಡೆದಿರಲಿಲ್ಲ. ಹೀಗಾಗಿ 62,075 ರೂಪಾಯಿ ದಂಡವನ್ನು ವಿಧಿಸಿದ್ದಾರೆ. ಮರ ಕಡಿದವರ ವಿರುದ್ಧ ಕ್ರಮವನ್ನು ಕೈ ಗೊಂಡಿದ್ದಾರೆ.

    ಮರ ಕಡಿದ ವಿಷಯವನ್ನು ಸಂಬಂಧ ಪಟ್ಟ ಇಲಾಖೆಗೆ ತಿಳಿಸಿದ ಬಾಲಕನ ಜವಾಬ್ದಾರಿಯುತವಾಗಿ ವರ್ತಿಸಿದ್ದಕ್ಕೆ ಅರಣ್ಯ ಇಲಾಖೆ ಹಾಗೂ ಸುತ್ತಮುತ್ತಲಿನ ಜನರು ಅಭಿನಂದನೆ ಸಲ್ಲಿಸಿದ್ದಾರೆ.