Tag: Hyderabad

  • ಹೊಸ ಪಕ್ಷ ಆರಂಭಿಸುವ ದಿನಾಂಕ ಪ್ರಕಟಿಸಿದ ಜಗನ್ ಸಹೋದರಿ

    ಹೊಸ ಪಕ್ಷ ಆರಂಭಿಸುವ ದಿನಾಂಕ ಪ್ರಕಟಿಸಿದ ಜಗನ್ ಸಹೋದರಿ

    ಹೈದರಾಬಾದ್: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಸಹೋದರಿ ವೈ.ಎಸ್ ಶರ್ಮಿಳಾ ಅವರು ತೆಲಂಗಾಣದಲ್ಲಿ ಹೊಸ ರಾಜಕೀಯ ಪಕ್ಷ ಆರಂಭವನ್ನು ಘೋಷಣೆ ಮಾಡುವ ದಿನಾಂಕವನ್ನು ಹೇಳಿದ್ದಾರೆ.

    ಜುಲೈ 8 ರಂದು ಹೊಸ ಪಕ್ಷವನ್ನು ತೆಲಂಗಾಣದಲ್ಲಿ ಉದ್ಘಾಟಿಸಲಿದ್ದೇನೆ. ಜುಲೈ 8 ರಂದು ತಂದೆ ದಿ.ವೈ ಎಸ್ ರಾಜಶೇಖರ ರೆಡ್ಡಿಯವರ ಜನ್ಮದಿನದ ವಾರ್ಷಿಕೋತ್ಸವಿದೆ. ಇದೇ ದಿನದಂದು ನಮ್ಮ ಹೊಸ ಪಕ್ಷವನ್ನು ಉದ್ಘಾಟಿಸಲಿದ್ದೇನೆ ಎಂದು ಶರ್ಮಿಳಾ ಖಮ್ಮಂನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ.

    ಭರವಸೆ ನೀಡಿರುವ ಪ್ರಕಾರ, ಸರ್ಕಾರಿ ಉದ್ಯೋಗ ನೀಡುವುದಕ್ಕೆ ಅಧಿಸೂಚನೆ ಹೊರಡಿಸದಿದ್ದಲ್ಲಿ ಏಪ್ರಿಲ್ 15ರಿಂದ ಮೂರು ದಿನಗಳ ಕಾಲ ಹೈದರಾಬಾದ್‍ನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದಾಗಿ ತಿಳಿಸಿದ್ದಾರೆ. ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ಕೆ. ಚಂದ್ರಶೇಖರ್ ರಾವ್ ನೇತೃತ್ವದ ಸರ್ಕಾರದ ಭ್ರಷ್ಟಾಚಾರ ಆರೋಪಗಳನ್ನು ಪ್ರಶ್ನೆ ಮಾಡುವುದಕ್ಕಾಗಿ ನಮ್ಮ ಪಕ್ಷ ಅಗತ್ಯ ಇದೆ. ತೆಲಂಗಾಣ ರಾಜ್ಯ ಸ್ಥಾಪನೆಯಾಗಿ 7 ವರ್ಷ ಆಗಿರಬಹುದು. ಜನರ ಆಶೋತ್ತರಗಳನ್ನು ಈಡೇರಿಸಿಲ್ಲ ಎಂದು ಹೇಳಿದ್ದಾರೆ.

    ತೆಲಂಗಾಣ ರಾಜ್ಯ ಸ್ಥಾಪನೆಗಾಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ತೆಲಂಗಾಣ ಅಸ್ತಿತ್ವಕ್ಕೆ ಬಂದ ನಂತರವೂ ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಮುಖ್ಯಮಂತ್ರಿಗಳನ್ನು ಎಮ್‍ಎಲ್‍ಎಗಳು ಅಥವಾ ಎಂಪಿಗಳು ಭೇಟಿಯಾಗುವ ಅವಕಾಶವೇ ಇಲ್ಲ. ಕಾಂಗ್ರೆಸ್ ಪಾರ್ಟಿ ಕೆಸಿಆರ್ ಜೊತೆಗೆ ಫೈಟ್ ಮಾಡಲು ತಯಾರಿಲ್ಲ. ಬಿಜೆಪಿ ನೀಡಿದ ಭರವಸೆಗಳು ಏನಾದವು? ಅವರು ರೈಲು, ಫ್ಯಾಕ್ಟರಿಯ ಭರವಸೆ ನೀಡಿದ್ದರು. ಅದಿನ್ನೂ ಜಾರಿಗೆ ಬಂದಿಲ್ಲ ಎಂದು ಕಿಡಿಕಾರಿದ್ದಾರೆ.

  • ಮಾಸ್ಕ್ ಧರಿಸದವರಿಗೆ 1,000 ರೂ. ದಂಡ ವಿಧಿಸಿದ ತೆಲಂಗಾಣ ಸಿಎಂ

    ಮಾಸ್ಕ್ ಧರಿಸದವರಿಗೆ 1,000 ರೂ. ದಂಡ ವಿಧಿಸಿದ ತೆಲಂಗಾಣ ಸಿಎಂ

    ಹೈದರಾಬಾದ್: ಮಹಾಮಾರಿ ಕೊರೊನಾ ವೈರಸ್ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಮಧ್ಯೆ ಕೊರೊನಾ ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವ ಜನರು ಕೂಡ ಇದ್ದಾರೆ. ಹೀಗಾಗಿ ಮಾಸ್ಕ್ ಧರಿಸದೇ ಅಸಡ್ಡೆ ತೋರಿಸುವ ಜನರಿಗೆ 1,000ರೂ. ದಂಡ ವಿಧಿಸುವಂತೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಗುರುವಾರ ಅಧಿಕಾರಿಗಳಿಗೆ ತಿಳಿಸಿದ್ದಾರೆ.

    ಗುರುವಾರ ಪ್ರಧಾನಿ ನರೇಂದ್ರ ಮೋದಿಯವರು ಆಯೋಜಿಸಿದ್ದ ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸಿದ್ದ ಸಿಎಂ ಚಂದ್ರಶೇಖರ್ ನಂತರ ಆರೋಗ್ಯ ಅಧಿಕಾರಿಗಳೊಂದಿಗೆ ಪ್ರಸ್ತುತ ಕೊರೊನಾ ಸೋಂಕಿನ ಬಗ್ಗೆ ಚರ್ಚೆ ನಡೆಸಿದರು.

    ರಾಜ್ಯದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸುವಂತೆ ಸಿಎಂ ಚಂದ್ರಶೇಖರ್ ರಾವ್ ಅಧಿಕಾರಿಗಳಿಗೆ ತಿಳಿಸಿದರು. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಎಲ್ಲ ಆರೋಗ್ಯ ಸಿಬ್ಬಂದಿಗೂ ಲಸಿಕೆ ನೀಡಬೇಕು ಹಾಗೂ ಈ ಪ್ರಕ್ರಿಯೆ ಈ ವಾರದೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದ್ದಾರೆ.

    ಕೊರೊನಾ ತಡೆಗಟ್ಟಲು ಮಾಸ್ಕ್ ಧರಿಸುವ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು, ಮಾಸ್ಕ್ ಧರಿಸದಿದ್ದರೆ, ಪ್ರತಿ ವ್ಯಕ್ತಿಗೆ 1000 ರೂ. ದಂಡ ವಿಧಿಸಬೇಕು ಹಾಗೂ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪೊಲೀಸ್ ಇಲಾಖೆಯ ಡಿಜಿಪಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ 45 ವರ್ಷಕ್ಕೂ ಮೇಲ್ಪಟ್ಟ ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳುವಂತೆ ಆಗ್ರಹಿಸಿದರು.

  • ಪವರ್ ಸ್ಟಾರ್ ಸಿನಿಮಾ ಟ್ರೈಲರ್ ರಿಲೀಸ್ – ನಟನನ್ನು ನೋಡಲು ಥಿಯೇಟರ್ ಗ್ಲಾಸ್ ಪುಡಿ ಮಾಡಿದ ಅಭಿಮಾನಿಗಳು

    ಪವರ್ ಸ್ಟಾರ್ ಸಿನಿಮಾ ಟ್ರೈಲರ್ ರಿಲೀಸ್ – ನಟನನ್ನು ನೋಡಲು ಥಿಯೇಟರ್ ಗ್ಲಾಸ್ ಪುಡಿ ಮಾಡಿದ ಅಭಿಮಾನಿಗಳು

    ಹೈದರಾಬಾದ್: ಟಾಲಿವುಡ್ ನಟ, ಕಮ್ ರಾಜಕಾರಣಿ ಪವರ್‍ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬಹುನಿರೀಕ್ಷಿತ ‘ವಕೀಲ್ ಸಾಬ್’ ಸಿನಿಮಾದ ಟ್ರೈಲರ್ ಸೋಮವಾರ ಬಿಡುಗಡೆಯಾಗಿದ್ದು ವಿಶಾಖಪಟ್ಟಣಂನನಲ್ಲಿ ಅಭಿಮಾನಿಗಳು ಥಿಯೇಟರ್ ಗ್ಲಾಸ್ ಪುಡಿ ಮಾಡಿದ್ದಾರೆ.

    ಮಾರ್ಚ್ 29ರಂದು ತೆಲುಗು ರಾಜ್ಯದ ಕೆಲವು ಚಿತ್ರಮಂದಿರಗಳಲ್ಲಿ ಸಂಜೆ 4 ಗಂಟೆ ಸುಮಾರಿಗೆ ಟ್ರೈಲರ್ ಬಿಡುಗಡೆಯಾಗಿದ್ದು, ಅಭಿಮಾನಿಗಳು ಥಿಯೇಟರ್ ಬಳಿ 2 ಗಂಟೆಗೆ ಆಗಮಿಸಿ ತಮ್ಮ ನೆಚ್ಚಿನ ನಟನ ಫೋಟೋಗೆ ತೆಂಗಿನ ಕಾಯಿ ಹೊಡೆದು ಪೂಜೆ ಮಾಡಿದ್ದಾರೆ.

    ವಿಶಾಖಪಟ್ಟಣಂನ ಸಂಗಮ್ ಶರತ್ ಥಿಯೇಟರ್‍ನಲ್ಲೂ ಚಿತ್ರ ಬಿಡುಗಡೆಯಾಗಿತ್ತು. ಈ ವೇಳೆ ಟ್ರೈಲರ್ ವೀಕ್ಷಿಸಲು ಅಪಾರ ಅಭಿಮಾನಿಗಳು ಥಿಯೇಟರ್ ಮುಂದೆ ಜಮಾಯಿಸಿದ್ದರು. ಈ ವೇಳೆ ಟ್ರೈಲರ್ ವೀಕ್ಷಿಸುವ ಬರದಲ್ಲಿ ಅಭಿಮಾನಿಗಳು ಥಿಯೇಟರ್ ಗ್ಲಾಸ್ ಹೊಡೆದು ಹಾಕಿ ಒಳಗೆ ಹೋಗಿದ್ದಾರೆ. ಸದ್ಯ ಈ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಹೋಳಿ ಹಬ್ಬದ ದಿನದಂದು ಟ್ರೈಲರ್ ಬಿಡುಗಡೆಗೊಳಿಸುವುದಾಗಿ ಸಿನಿಮಾದ ನಿರ್ಮಾಪಕರು ಘೋಷಿಸಿದ್ದರು. ಈ ದಿನವನ್ನು ಹಬ್ಬದಂತೆ ಆಚರಿಸಲು ಪವರ್ ಸ್ಟಾರ್ ಅಭಿಮಾನಿಗಳು ಪ್ಲಾನ್ ಮಾಡಿಕೊಂಡಿದ್ದರು.

    ಎರಡು ವರ್ಷದ ಬಳಿಕ ಪವನ್ ಕಲ್ಯಾಣ್ ‘ವಕೀಲ್ ಸಾಬ್’ ಸಿನಿಮಾದ ಮೂಲಕ ಕಮ್‍ಬ್ಯಾಕ್ ಮಾಡುತ್ತಿದ್ದು, ಈ ಸಿನಿಮಾ ಬಾಲಿವುಡ್ ಪಿಂಕ್ ಚಿತ್ರದ ರಿಮೇಕ್ ಆಗಿದೆ. ಈ ಸಿನಿಮಾದ ಅಮಿತಾಬ್ ಬಚ್ಚನ್ ಅಭಿನಯಿಸಿದ್ದ ಪಾತ್ರದಲ್ಲಿ ಪವನ್ ಕಲ್ಯಾಣ್ ತೆಲುಗಿನಲ್ಲಿ ಮಿಂಚಿದ್ದಾರೆ.

  • ಮಾಸ್ಕ್ ಧರಿಸದ ಇನ್ಸ್‌ಪೆಕ್ಟರ್‌ಗೆ  ದಂಡ ವಿಧಿಸಿದ ಎಸ್‍ಪಿ

    ಮಾಸ್ಕ್ ಧರಿಸದ ಇನ್ಸ್‌ಪೆಕ್ಟರ್‌ಗೆ ದಂಡ ವಿಧಿಸಿದ ಎಸ್‍ಪಿ

    ಹೈದರಾಬಾದ್: ಮಾಹಾಮಾರಿ ಕೊರೊನಾ ವೈರಸ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಾಸ್ಕ್ ಧರಿಸುವಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಈ ಮಧ್ಯೆ ಮಾಸ್ಕ್ ಧರಿಸದ ಸರ್ಕಲ್ ಇನ್ಸ್‌ಪೆಕ್ಟರ್‌ಗೆ  ದಂಡ ವಿಧಿಸಿದ ಘಟನೆಯೊಂದು ಹೈದರಾಬಾದ್‍ನಲ್ಲಿ ನಡೆದಿದೆ.

    ಸಾರ್ಕರದ ನಿಯಮಗಳು ಎಲ್ಲರಿಗೂ ಒಂದೇ ಎಂಬುದನ್ನು ಪೊಲೀಸ್ ವರಿಷ್ಠಾಧಿಕಾರಿ ನಿರೂಪಿಸುವ ಮೂಲಕವಾಗಿ ಇತರರಿಗೆ ಮಾದರಿಯಾಗಿದ್ದಾರೆ. ಗುಂಟೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಅಮ್ಮಿರೆಡ್ಡಿ ಮಾಸ್ಕ್ ಧರಿಸದವರ ವಿರುದ್ಧ ಭಾನುವಾರ ವಿಶೇಷ ಕಾರ್ಯಾಚರಣೆ ಮಾಡುತ್ತಿದ್ದರು. ಈ ವೇಳೆ ತಳ್ಳೂರು ವೃತ್ತ ನಿರೀಕ್ಷಕ ಮಲ್ಲಿಕಾರ್ಜುನ್ ರಾವ್ ಮಾಸ್ಕ್ ಧರಿಸದೆಯೇ ತಮ್ಮ ಮುಂದೆ ಹಾದು ಹೋಗಿದ್ದನ್ನು ಅಮ್ಮಿರೆಡ್ಡಿಯವರು ಗಮನಿಸಿದ್ದಾರೆ.

    ನಂತರ ಮಲ್ಲಿಕಾರ್ಜುನ್ ರಾವ್ ಅವರಿಗೆ ಮಾಸ್ಕ್ ಧರಿಸದೆ ಇರಲು ಕಾರಣವೇನು ಎಂದು ಕೇಳಿದ್ದಾರೆ. ಕೆಲಸಕ್ಕೆ ಬರುವ ಅವಸರದಲ್ಲಿ ಮರೆತೆ ಅಂತೆ ಮಲ್ಲಿಕಾರ್ಜುನ್ ಹೇಳಿದ್ದಾರೆ. ಈ ವೇಳೆ ಅವರಿಗೆ ದಂಡವನ್ನು ವಿಧಿಸಿ ಹಾಗೂ ತಾವೇ ಮಾಸ್ಕ್ ಅನ್ನು ಮಲ್ಲಿಕಾರ್ಜುನ್ ಅವರಿಗೆ ಹಾಕಿದ್ದಾರೆ. ಅಲ್ಲದೆ ಎಲ್ಲರಿಗೂ ಒಂದೇ ನಿಯಮ, ಕಾನೂನು ಎಂದು ಹೇಳಿದ್ದಾರೆ.

    ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಎಸ್‍ಪಿ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಪ್ರೀತಿಯ ಮಳೆ ಸುರಿಸಿದ ನಿಮಗೆ ಒಳ್ಳೆಯದಾಗಲಿ – ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಅಲ್ಲು ಅರ್ಜುನ್

    ಪ್ರೀತಿಯ ಮಳೆ ಸುರಿಸಿದ ನಿಮಗೆ ಒಳ್ಳೆಯದಾಗಲಿ – ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಅಲ್ಲು ಅರ್ಜುನ್

    ಹೈದರಾಬಾದ್: ಟಾಲಿವುಡ್ ನಟ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಚಿತ್ರರಂಗಕ್ಕೆ ಪ್ರವೇಶಿ ಇಂದಿಗೆ 18 ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆ ಅಲ್ಲು ಅರ್ಜುನ್ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

    2003ರಲ್ಲಿ ಗಂಗೋತ್ರಿ ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಪ್ರವೇಶಿಸಿದ ಹಲವಾರು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಅಭಿಮಾನಿಗಳಗೆ ಮನರಂಜನೆ ನೀಡಿದ್ದಾರೆ. ಈ ಕುರಿತಂತೆ ಅಲ್ಲು ಅರ್ಜುನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.

    ಇಷ್ಟು ವರ್ಷ ಅಭಿಮಾನಿಗಳು ನೀಡಿದ ಪ್ರೀತಿ ಹಾಗೂ ಬೆಂಬಲಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಇಂದಿಗೆ ನನ್ನ ಮೊದಲ ಸಿನಿಮಾ ಗಂಗೋತ್ರಿ ಬಿಡುಗಡೆಯಾಗಿ 18 ವರ್ಷ ಕಳೆದಿದೆ. ನನ್ನ ಈ ಸಿನಿ ಜರ್ನಿಯಲ್ಲಿ ಭಾಗಿಯಾಗಿದ್ದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಹೃದಯವು ಕೃತಜ್ಞತೆಗಳಿಂದ ತುಂಬಿದೆ. ಇಷ್ಟು ವರ್ಷ ನನಗೆ ಪ್ರೀತಿಯ ಮಳೆ ಸುರಿಸಿದ ಎಲ್ಲರಿಗೂ ನಿಜವಾಗಿಯೂ ಒಳ್ಳೆಯದಾಗಲಿ ಎಂದು ಬಯಸುತ್ತೇನೆ. ನಿಮ್ಮೆಲ್ಲರ ಆಶೀರ್ವಾದಗಳಿಗೆ ಧನ್ಯವಾದ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.

    ಗಂಗೋತ್ರಿ ಸಿನಿಮಾದ ಬಳಿಕ, 2004ರಲ್ಲಿ ನಿರ್ದೇಶಕ ಸುಕುಮಾರನ್ ಆ್ಯಕ್ಷನ್ ಕಟ್ ಹೇಳಿದ್ದ ಆರ್ಯ ಸಿನಿಮಾದಲ್ಲಿ ಅಭಿನಯಿಸಿದ್ದರು. 2005ರಲ್ಲಿ ಬನ್ನಿ, 2006ರಲ್ಲಿ ಹ್ಯಾಪಿ, 2007ರಲ್ಲಿ ದೇಸಮದುರು ಸಿನಿಮಾದಲ್ಲಿ ಅಭಿನಯಿಸಿದರು. ಇತ್ತೀಚೆಗೆ ಅಲಾ ವೈಕುಂಠಪುರಂಲೋ ಸಿನಿಮಾದಲ್ಲಿ ನಟಿಸಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದರು. ಇನ್ನೂ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್‍ಗೆ ಜೋಡಿಯಾಗಿ ಪೂಜಾ ಹೆಗ್ಡೆ ಡ್ಯೂಯೆಟ್ ಹಾಡಿದ್ದರು. ಸಿನಿಮಾಕ್ಕೆ ತ್ರಿವಿಕ್ರಮ್ ಶ್ರೀನಿವಾಸ್ ಆ್ಯಕ್ಷನ್ ಕಟ್ ಹೇಳಿದ್ದರು.

    ಸದ್ಯ ಅಲ್ಲು ಅರ್ಜುನ್ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾದಲ್ಲಿ ಸ್ಟೈಲಿಷ್ ಸ್ಟಾರ್‍ಗೆ ಜೊತೆಯಾಗಿ ಕನ್ನಡದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ನಿರ್ದೇಶಕ ಸುಕುಮಾರನ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ದೇವಿ ಶ್ರೀ ಪ್ರಸಾದ್ ಸಂಗೀತಾ ಸಂಯೋಜಿಸಿದ್ದಾರೆ. ಈ ಸಿನಿಮಾ 5 ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ.

  • ಜೀವವನ್ನೇ ಕಿತ್ತುಕೊಂಡ ಕೃಷಿ ಸಾಲ – ನಾಲ್ವರು ನೇಣಿಗೆ ಶರಣು

    ಜೀವವನ್ನೇ ಕಿತ್ತುಕೊಂಡ ಕೃಷಿ ಸಾಲ – ನಾಲ್ವರು ನೇಣಿಗೆ ಶರಣು

    – ಸಾಲಕ್ಕಾಗಿ ಇಡೀ ಕುಟುಂಬವೇ ಬಲಿ

    ಹೈದರಾಬಾದ್: ಕೃಷಿಗಾಗಿ ಮಾಡಿದ ಸಾಲದ ಹೊರೆಯಿಂದ ಮನನೊಂದ ಒಂದೇ ಕುಟುಂಬದ ನಾಲ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‍ನ ಮಂಚಿರ್ಯಾಲ ಜಿಲ್ಲೆಯ ಮಲ್ಕಪಲ್ಲಿ ಗ್ರಾಮದಲ್ಲಿ ನಡೆದಿದೆ.

    ರೈತ ರಮೇಶ್(40) ಈತನ ಪತ್ನಿ ಹಾಗೂ ಮತ್ತು ಇಬ್ಬರು ಮಕ್ಕಳಾದ ಸೌಮ್ಯಾ(19) ಮತ್ತು ಅಕ್ಷಯ್(17) ನೇಣಿಗೆ ಶರಣಾಗಿದ್ದಾರೆ. ಸಾಲ ಬಾಧೆಗೆ ಸಿಲುಕಿದ ಒಂದು ಕುಟುಂಬದ ನಾಲ್ವರು ನೇಣು ಬೀಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ.

    ನಾಲ್ವರು ನೇಣಿಗೆ ಶರಣಾಗುವ ಮುನ್ನ ಡೇತ್ ನೋಟ್ ಬರೆದಿಟ್ಟಿದ್ದಾರೆ. ನಿನ್ನೆ ನಮಗೆ ಸಾಲ ಕೊಟ್ಟವರಿಗೆ ವಾಪಸ್ ಸಾಲ ಕೊಡುತ್ತೇವೆ ಎಂದು ಮಾತುಕೊಟ್ಟಿದ್ದೆವು. ಆದರೆ ಕೊಟ್ಟ ಮಾತು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬರೆದಿಟ್ಟು ಸಾವನ್ನಪ್ಪಿದ್ದಾರೆ.

    ರೈತ ರಮೇಶ್ ಅವರು ತಮ್ಮ ಜಮೀನಿನಲ್ಲಿ ಬೆಳೆ ಬೆಳೆಯಲು ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದರು. ಕಳೆದ ವರ್ಷ ಸಾಕಷ್ಟು ಬೆಳೆ ಹಾನಿಯಾಗಿತ್ತು. ಮಗಳ ಮದುವೆಗೆಂದು ಸಾಲ ಮಾಡಿದ್ದಾರೆ. ಸಾಲ ತೀರಿಸಲು ಸಾಧ್ಯವಾಗಿಲ್ಲ. ಇದರ ನಡುವೆ ಸಾಲಗಾರರ ಕಾಟ ಜೋರಾಗಿತ್ತು. ನಿನ್ನೆ ಸಾಲ ಮರಳಿ ಕೊಡುವುದಾಗಿ ಮಾತುಕೊಟ್ಟಿದ್ದರು. ಆದರೆ ಹಣವನ್ನು ವಾಪಸ್ ಕೊಡುವ ಪರಿಸ್ಥಿತಿಯಲ್ಲಿ ರಮೇಶ್ ಅವರ ಕುಟುಂಬ ಇರಲಿಲ್ಲ. ಹೀಗಾಗಿ ಕುಟುಂಬದ ನಾಲ್ವರು ಸದಸ್ಯರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಈ ಸಂಬಂಧ ಮಂಚಿರ್ಯಾಲ ಜಿಲ್ಲಾ ಕಾಸಿಪೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮಡುತ್ತಿದ್ದಾರೆ. ಸಾಲಕ್ಕಾಗಿ ಇಡೀ ಕುಟುಂಬವೇ ಬಲಿಯಾಗಿದೆ.

  • ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಆಟೋ ನಜ್ಜುಗುಜ್ಜು-6 ಕಾರ್ಮಿಕರ ಸಾವು

    ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಆಟೋ ನಜ್ಜುಗುಜ್ಜು-6 ಕಾರ್ಮಿಕರ ಸಾವು

    ಹೈದರಾಬಾದ್: ಆಟೋಗೆ ಲಾರಿ ಡಿಕ್ಕಿಯಾದ ಪರಿಣಾಮ ಆಟೋದಲ್ಲಿದ್ದ 6 ಮಂದಿ ಕೂಲಿಕಾರ್ಮಿಕರು ಸಾವನ್ನಪ್ಪಿದ್ದು, 7 ಮಂದಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಗೊಲ್ಲಪಲ್ಲಿಯ ಬಳಿ ನಡೆದಿದೆ.

    ಕಾರ್ಮಿಕರು ಆಟೋದಲ್ಲಿ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಈ ಭೀಕರವಾದ ಅಪಘಾತ ಸಂಭವಿಸಿದೆ. ಗಾಯಳುಗಳನ್ನು ವಿಜಯವಾಡ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತದ ನಂತರ ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾನೆ.

    14 ಮಂದಿ ಕಾರ್ಮಿಕರು ಆಟೋ ಮೂಲಕವಾಗಿ ಕೆಲಸ ಮಾಡುತ್ತಿದ್ದ ಜಾಗಕ್ಕೆ ಹೋಗುತ್ತಿದ್ದರು. ಈ ವೇಳೆ ಲಾರಿಯೊಂದು ಬಂದು ಗುದ್ದಿದೆ. ಲಾರಿ ಗುದ್ದಿದ ರಭಸಕ್ಕೆ ಆಟೋ ನುಜ್ಜುಗುಜ್ಜಾಗಿದೆ. 6 ಮಂದಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. 7 ಜನರನ್ನು ಆಸ್ಪತ್ರೆಗೆ ದಾಖಲಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

  • ಇನಿಯ ಬಚ್ಚಿಟ್ಟ ಸತ್ಯ ತಿಳಿದ ಯುವತಿ ಆತ್ಮಹತ್ಯೆ

    ಇನಿಯ ಬಚ್ಚಿಟ್ಟ ಸತ್ಯ ತಿಳಿದ ಯುವತಿ ಆತ್ಮಹತ್ಯೆ

    – ಕೀಟನಾಶಕ ಸೇವಿಸಿ ಆತ್ಮಹತ್ಯೆ
    – ಸತ್ಯ ಬಚ್ಚಿಟ್ಟು ಯುವತಿ ಜೊತೆ ಲವ್

    ಹೈದರಾಬಾದ್: ಇನಿಯ ಬಚ್ಚಿಟ್ಟ ಸತ್ಯ ತಿಳಿದ ಯುವತಿ ಮೋಸ ಹೋದೆ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಖಮ್ಮಮ್ ಜಿಲ್ಲೆಯಲ್ಲಿ ನಡೆದಿದೆ.

    ರತ್ನಕುಮಾರಿ(24) ಮೃತ ಯುವತಿಯಾಗಿದ್ದಾಳೆ. ಈಕೆ ಮಲಬಂಜಾರಾ ಗ್ರಾಮದ ನಿವಾಸಿಯಾಗಿರುವ ಈಕೆ ಖಮ್ಮಮ್ನಲ್ಲಿ ದೋನಿಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಆಟೋ ಚಾಲಕ ಸಂಜಯ್‍ನನ್ನು ಪ್ರೀತಿಸುತ್ತಿದ್ದಳು. ಈತನ ಮದುವೆ ವಿಚಾರವನ್ನು ತಿಳಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಸಂಜಯ್ ಮತ್ತು ರತ್ನಕುಮಾರಿ ಇಬ್ಬರು ಪ್ರೀತಿಸುತ್ತಿದ್ದರು. ಆದರೆ ಸಂಜಯ್‍ಗೆ ಈ ಮೊದಲೇ ಮದುವೆಯಾಗಿತ್ತು. ಆದರೆ ಈ ವಿಚಾರವನ್ನು ರತ್ನಕುಮಾರಿಯಿಂದ ಮುಚ್ಚಿಟ್ಟಿದ್ದನು. ಈ ವಿಚಾರವನ್ನು ತಿಳಿದ ರತ್ನಕುಮಾರಿ ಬಾರೀ ಅಘಾತಕ್ಕೊಳಗಾಗಿದ್ದಳು. ಮಾರ್ಚ್ 9ರಂದು ತನ್ನ ಗ್ರಾಮಕ್ಕೆ ತೆರಳಿದ್ದ ಯುವತಿ ಮಾರ್ಚ್ 10 ರಂದು ಕೀಟನಾಶಕ ಸೇವಿಸಿದ್ದಾಳೆ.

    ಕೀಟನಾಶಕ ಸೇವಿಸಿದ ಯುವತಿ ಹೊಟ್ಟೆ ನೋವಿನಿಂದ ಒದ್ದಾಡುತ್ತಿದ್ದಳು. ಗಮನಿಸಿದ ಪಾಲಕರು ಆಸ್ಪತ್ರೆಗೆ ದಾಖಲಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಸಂಜಯ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

  • ಮೂಗಿನ ಮೂಲಕ ಲಸಿಕೆ – 10 ಮಂದಿಯ ಮೇಲೆ ಪ್ರಯೋಗ

    ಮೂಗಿನ ಮೂಲಕ ಲಸಿಕೆ – 10 ಮಂದಿಯ ಮೇಲೆ ಪ್ರಯೋಗ

    ಹೈದರಾಬಾದ್‌: ಮೂಗಿನ ಮೂಲಕ ಲಸಿಕೆಯ (ಇಂಟ್ರಾನಾಸಲ್ ವ್ಯಾಕ್ಸಿನ್‌) ಮೊದಲ ಕ್ಲಿನಿಕಲ್‌ ಪ್ರಯೋಗ ಆರಂಭಗೊಂಡಿದ್ದು 10 ಮಂದಿ ಭಾರತ್‌ ಬಯೋಟೆಕ್‌ ಕಂಪನಿಯ ಕೋವಿಡ್‌ ಲಸಿಕೆ ಹಾಕಿಸಿಕೊಂಡಿದ್ದಾರೆ.

    ಬುಧವಾರ 10 ಮಂದಿ ಲಸಿಕೆ ತೆಗೆದುಕೊಂಡಿದ್ದು, ಶೀಘ್ರವೇ ಪಾಟ್ನಾ, ಚೆನ್ನೈ ಮತ್ತು ನಾಗ್ಪುರದಲ್ಲಿ ಲಸಿಕೆಯ ಪ್ರಯೋಗ ನಡೆಯಲಿದೆ. ಮೊದಲ ಹಂತದಲ್ಲಿ ದೇಶದಲ್ಲಿ 175 ಮಂದಿ ಈ ಲಸಿಕೆಯನ್ನು ಪಡೆದುಕೊಳ್ಳಲಿದ್ದಾರೆ.

    ಕಳೆದ ಶುಕ್ರವಾರ ಹೈದರಾಬಾದ್‌ನಲ್ಲಿ ಕ್ಲಿನಿಕಲ್‌ ಪ್ರಯೋಗ ಆರಂಭಗೊಂಡಿದ್ದು ಮೊದಲ ದಿನ ಇಬ್ಬರು ಲಸಿಕೆಯನ್ನು ಪಡೆದುಕೊಂಡಿದ್ದರು.

    ಇಂಟ್ರಾನಾಸಲ್ ವ್ಯಾಕ್ಸಿನ್‌ ಪ್ರಯೋಗ ಯಶಸ್ವಿಯಾದರೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಇದು ಗೇಮ್‌ ಚೇಂಜರ್‌ ಆಗಲಿದೆ. ಬಹುತೇಕ ಲಸಿಕೆಗಳನ್ನು ಸ್ನಾಯುಗಳ ಮೂಲಕ ನೀಡಲಾಗುತ್ತದೆ. ಈಗ ನೀಡಲಾಗುತ್ತಿರುವ ಕೊರೊನಾ ಲಸಿಕೆಯನ್ನು ಸೂಜಿಯ ಮೂಲಕ ದೇಹಕ್ಕೆ ಕಳುಹಿಸಲಾಗುತ್ತದೆ. ಆದರೆ ಈ ಲಸಿಕೆಯನ್ನು ಮೂಗಿನ ಹೊಳ್ಳೆಗಳ ಒಳಗಡೆ ಸಿಂಪಡಿಸಲಾಗುತ್ತದೆ. ಹೀಗಾಗಿ ಇದರಲ್ಲಿ ಸೂಜಿಯ ಬಳಕೆಯ ಅಗತ್ಯವೇ ಇರುವುದಿಲ್ಲ.

    ಭಾರತ್‌ ಬಯೋಟೆಕ್‌ ಕಂಪನಿಯ ಮುಖ್ಯಸ್ಥ ಡಾ. ಕೃಷ್ಣ ಎಲ್ಲಾ ಪ್ರತಿಕ್ರಿಯಿಸಿ, ಕಂಪನಿ ಅಮೆರಿಕದ ವೈದ್ಯಕೀಯ ವಿಶ್ವವಿದ್ಯಾಲಯದ ಜೊತೆ ಸೇರಿ ನಾಸಲ್ ವ್ಯಾಕ್ಸಿನ್‌ ಬಗ್ಗೆ ಕೆಲಸ ಮಾಡುತ್ತಿದೆ. ನಾಸಲ್‌ ವ್ಯಾಕ್ಸಿನ್‌ಗಳು ಉತ್ತಮ ಆಯ್ಕೆ ಎಂದು ಈಗಾಗಲೇ ಸಂಶೋಧನೆಗಳು ತಿಳಿಸಿವೆ ಎಂದು ಹೇಳಿದ್ದಾರೆ.

    ಕೊರೊನಾ ವೈರಸ್‌ ಮೂಗಿನ ಮೂಲಕ ದೇಹಕ್ಕೆ ಪ್ರವೇಶಿಸುತ್ತದೆ. ಮೂಗಿನ ಮೂಲಕ ಲಸಿಕೆ ನೀಡಿದರೆ ಸೋಂಕಿನ ವಿರುದ್ಧ ರೋಗ ನಿರೋಧಕ ಶಕ್ತಿ ಬರುವುದರ ಜೊತೆಗೆ ಸೋಂಕು ಹರಡವುದನ್ನು ತಪ್ಪಿಸಬಹುದಾಗಿದೆ.

    ಭಾರತ್‌ ಬಯೋಟೆಕ್‌ ಕಂಪನಿ ಅಭಿವೃದ್ಧಿ ಪಡಿಸಿದರುವ ಕೊವಾಕ್ಸಿನ್‌ ಲಸಿಕೆಯನ್ನು ದೇಶದಲ್ಲಿ ತರ್ತು ಬಳಕೆಗೆ ಅನುಮತಿ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಲಸಿಕೆಯನ್ನು ಪಡೆದುಕೊಂಡಿದ್ದರು.

  • ಅಲ್ಲು ಅರ್ಜುನ್ ಭೇಟಿಯಾಗಿ ಕುತೂಹಲ ಮೂಡಿಸಿದ್ರು ಪ್ರಶಾಂತ್ ನೀಲ್..!

    ಅಲ್ಲು ಅರ್ಜುನ್ ಭೇಟಿಯಾಗಿ ಕುತೂಹಲ ಮೂಡಿಸಿದ್ರು ಪ್ರಶಾಂತ್ ನೀಲ್..!

    ಹೈದರಾಬಾದ್: ಸ್ಯಾಂಡಲ್‍ವುಡ್ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಅವರು ಇಂದು ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಭೇಟಿಯಾಗಿದ್ದಾರೆ. ಈ ಮೂಲಕ ಇದೀಗ ಕೆಜಿಎಫ್ ರೂವಾರಿ ಭಾರೀ ಕುತೂಹಲ ಹುಟ್ಟಿಸಿದ್ದಾರೆ.

    ಹೌದು. ಪ್ರಶಾಂತ್ ನೀಲ್ ಹಾಗೂ ಅಲ್ಲು ಅರ್ಜುನ್ ಇಂದು ಹೈದಾರಾಬಾದ್ ನಲ್ಲಿ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವಿಚಾರ ಇದೀಗ ಅಲ್ಲು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.

    ಪ್ರಶಾಂತ್ ನೀಲ್ ಅವರು ಸದ್ಯ ಪ್ರಭಾಸ್ ನಟನೆಯ ಸಲಾರ್ ಸಿನಿಮಾದ ಚಿತ್ರೀಕರಣದ ಬ್ಯುಸಿಯಲ್ಲಿದ್ದಾರೆ. ಈ ಮಧ್ಯೆ ಇಂದು ಸ್ವಲ್ಪ ಬಿಡುವು ಮಾಡಿಕೊಂಡು ಅಲ್ಲು ಅರವಿಂದ್ ಅವರ ಗೀತಾ ಆರ್ಟ್ಸ್ ಪ್ರೊಡಕ್ಷನ್ ಕಚೇರಿಗೆ ಭೇಟಿ ಕೊಟ್ಟಿದ್ದಾರೆ. ಆಗ ಪ್ರಶಾಂತ್ ನೀಲ್ ಅವರನ್ನು ಭೇಟಿಯಾಗಲು ಅಲ್ಲು ಕೂಡ ಆಫೀಸಿಗೆ ಬಂದಿದ್ದು, ಕೆಲ ಕಾಲ ಚರ್ಚೆ ನಡೆಸಿದ್ದಾರೆ.

    ಕಚೇರಿ ಒಳಗಡೆ ಹೋಗುವ ಮೊದಲು ಅಲ್ಲು ಅರ್ಜುನ್ ಕ್ಯಾಮರಾಗೆ ಪೋಸ್ ನೀಡಿ ಹೋಗಿದ್ದಾರೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪ್ರಶಾಂತ್ ನೀಲ್ ಅವರು ಅಲ್ಲು ಆಫೀಸಿಗೆ ತೆರಳಿ ಸಿನಿಮಾ ಸ್ಕ್ರಿಪ್ಟ್ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

    ಒಟ್ಟಿನಲ್ಲಿ ಪ್ರಶಾಂತ್ ನೀಲ್ ಹಾಗೂ ಅಲ್ಲು ಅರ್ಜುನ್ ಭೇಟಿ ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಸಲಾರ್ ಬಳಿಕ ಪ್ರಶಾಂತ್ ನೀಲ್ ಅವರು ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡುತ್ತಾರಾ..? ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.