Tag: Hyderabad

  • ನಿರ್ಗತಿಕ ಮಕ್ಕಳ ಹಸಿವು ನೀಗಿಸಿದ ಪೊಲೀಸ್- ನೆಟ್ಟಿಗರಿಂದ ಮೆಚ್ಚುಗೆ

    ನಿರ್ಗತಿಕ ಮಕ್ಕಳ ಹಸಿವು ನೀಗಿಸಿದ ಪೊಲೀಸ್- ನೆಟ್ಟಿಗರಿಂದ ಮೆಚ್ಚುಗೆ

    ಹೈದರಾಬಾದ್: ನಿರ್ಗತಿಕ ಮಕ್ಕಳಿಬ್ಬರು ಊಟಕ್ಕಾಗಿ ಅಲೆದಾಡುತ್ತಿರುವುದನ್ನು ಕಂಡ ಟ್ರಾಫಿಕ್ ಪೊಲೀಸ್ ಪೇದೆಯೊಬ್ಬರು ಮಕ್ಕಳಿಗೆ ಊಟ ನೀಡಿ ಅವರ ಹಸಿವನ್ನು ನೀಗಿಸುವ ಕೆಲಸ ಮಾಡಿದ್ದಾರೆ.

    ಲಾಕ್‍ಡೌನ್ ಇರುವ ಕಾರಣ ಹೈದರಾಬಾದ್‍ನ ಸೋಮಾಜಿಗುಡಾ ಎಂಬ ಪ್ರದೇಶದಲ್ಲಿ ಪಂಜಾಗುಠ ಸಿರುಪಂಗಿ ಮಹೇಶ್ ಕುಮಾರ್ ಗಸ್ತು ತಿರುಗುತ್ತಿದ್ದರು. ಆಗ ಇಬ್ಬರು ಮಕ್ಕಳು ಊಟಕ್ಕಾಗಿ ಅದೇ ಪ್ರದೇಶದಲ್ಲಿದ್ದ ಕಸದಬುಟ್ಟಿಯಲ್ಲಿ ಆಹಾರಕ್ಕಾಗಿ ತಡಕಾಡುತ್ತಿರುವುದನ್ನು ಕಂಡು ವಿಚಾರಿಸಿದಾಗ ಸತ್ಯ ತಿಳಿದು ಬೇಸರಗೊಂಡಿದ್ದಾರೆ.

    ಹಸಿವಾಗಿದ್ದ ಕಾರಣ ಅಮೀರ್‌ಪೇಟೆ ಮತ್ತು ಗ್ರೀನ್‍ಲ್ಯಾಂಡ್ ಬಳಿ ಭಿಕ್ಷೆ ಬೇಡಿದ್ದೇವೆ. ಆದರೆ ಊಟ ಮಾತ್ರ ಸಿಕ್ಕಿಲ್ಲ. ಹಾಗಾಗಿ ಊಟಕ್ಕಾಗಿ ಕಸದ ಬುಟ್ಟಿಯನ್ನು ಹುಡುಕಾಡುತ್ತಿದ್ದೇವೆ ಎಂದು ತಮ್ಮ ನೋವನ್ನು ಮಕ್ಕಳು ಹೇಳಿಕೊಂಡಿದ್ದಾರೆ.

    ಮಕ್ಕಳ ಮಾತನ್ನು ನೊಂದ ಮಹೇಶ್ ಕುಮಾರ್ ಅವರು ತಮಗಾಗಿ ಬಾಕ್ಸ್‍ನಲ್ಲಿ ತಂದಿದ್ದ ಊಟವನ್ನು ಮಕ್ಕಳಿಗೆ ನೀಡಿದ್ದಾರೆ. ಮಕ್ಕಳಿಗೆ ಎರಡು ತಟ್ಟೆಗಳಲ್ಲಿ ಅವರು ತಂದಿದ್ದ ಅನ್ನ, ಸಾಂಬಾರು, ಚಿಕನ್ ಫ್ರೈ ಹಾಕಿ ಊಟ ಮಾಡುವಂತೆ ಹೇಳಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪೊಲೀಸರ ಈ ಕಾಯಕ್ಕೆ ಪ್ರಶಂಸನೀಯ ಮಾತುಗಳು ಹರಿದು ಬರುತ್ತಿದೆ. ಈ ವೀಡಿಯೋ ತೆಲಂಗಾಣ ಸ್ಟೇಟ್ ಪೊಲೀಸ್ ಎಂಬ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಆಗಿದೆ.

  • ಮನೆಯಿಂದ ಆಚೆ ಬರಬೇಡಿ – ನಟ ಚಿರಂಜೀವಿ ಮನವಿ

    ಮನೆಯಿಂದ ಆಚೆ ಬರಬೇಡಿ – ನಟ ಚಿರಂಜೀವಿ ಮನವಿ

    ಹೈದರಾಬಾದ್: ಟಾಲಿವುಡ್ ನಟ ಮೆಗಾಸ್ಟಾರ್ ಚಿರಂಜೀವಿ ಲಾಕ್‍ಡೌನ್ ಸಮಯದಲ್ಲಿ ಜನರಿಗೆ ಮನೆಯಲ್ಲಿಯೇ ಇರುವಂತೆ ವಿನಂತಿಸಿ ಕೊಂಡಿದ್ದಾರೆ. ಈ ಕುರಿತಂತೆ ವೀಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಜನರಿಗೆ ಸಂದೇಶ ನೀಡಿದ್ದಾರೆ. ಜೊತೆಗೆ ಕೋವಿಡ್-19 ಸೋಂಕಿತರು ತಮ್ಮನ್ನು ಹೇಗೆ ನೋಡಿಕೊಳ್ಳಬೇಕು ಮತ್ತು ಯಾವಾಗ ಆಸ್ಪತ್ರೆಗೆ ದಾಖಲಾಗಬೇಕು ಎಂದು ವಿವರಿಸಿದ್ದಾರೆ.

    ವೀಡಿಯೋದಲ್ಲಿ ಚಿರಂಜೀವಿಯವರು, ಕೊರೊನಾ ವೈರಸ್ ತೀವ್ರತೆಯನ್ನು ನಿಯಂತ್ರಿಸಿಲು ಕೈಗೊಂಡಿರುವ ಲಾಕ್ ಡೌನ್ ಬಗ್ಗೆ ಮಾತನಾಡಿದ್ದು, ಜನರು ಅನಗತ್ಯವಾಗಿ ಓಡಾಡಬಾರದು ಮತ್ತು ಸುರಕ್ಷಿತ ನಿಯಮಗಳನ್ನು ಪಾಲಿಸಬೇಕು. ಕೋವಿಡ್ ಸೋಂಕಿತರು ತಮ್ಮ ಕುಟುಂಬದಿಂದ ಪ್ರತ್ಯೇಕವಾಗಿರಬೇಕು. ರಾಜ್ಯಾದ್ಯಂತ ವ್ಯಾಕ್ಸಿನೇಷನ್ ಕೇಂದ್ರಗಳು ತೆರೆದಿದ್ದು, ಪ್ರತಿಯೊಬ್ಬರು ಲಸಿಕೆ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವುದರಿಂದಾಗಿ ಕೋವಿಡ್-19 ತೀವ್ರತೆಯನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದ್ದಾರೆ.

    ಇಂದು ಈದ್ ಹಬ್ಬದ ಪ್ರಯುಕ್ತ ಮೆಗಾಸ್ಟಾರ್ ಚಿರಂಜೀವಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಎಲ್ಲರಿಗೂ ಈದ್ ಮುಬಾರಕ್, ಎಂದಿಗಿಂತಲೂ ಹೆಚ್ಚಾಗಿ ಈ ಸವಾಲಿನ ಸಂದರ್ಭದಲ್ಲಿ ಸರ್ವಶಕ್ತನು ಎಲ್ಲರಿಗೂ ಉತ್ತಮ ಆರೋಗ್ಯ, ಸಂತೋಷ ಮತ್ತು ಶಾಂತಿಯನ್ನು ನೀಡಲಿ, ಪ್ರಪಂಚದಾದ್ಯಂತ ಮಾನವೀಯತೆಯ ಎಲ್ಲಾ ದುಃಖವನ್ನು ದೂರವಾಗಲಿ ಎಂದು ಟ್ವೀಟ್ ಮಾಡಿದ್ದಾರೆ.

  • ಈ ಸೈಕಲ್ ಸವಾರರು ಕೊರೊನಾ  ವಾರಿಯರ್‌ಗಳು- ಸಹಾಯಕ್ಕೆ ಮೆಚ್ಚುಗೆಯ ಸುರಿಮಳೆ

    ಈ ಸೈಕಲ್ ಸವಾರರು ಕೊರೊನಾ ವಾರಿಯರ್‌ಗಳು- ಸಹಾಯಕ್ಕೆ ಮೆಚ್ಚುಗೆಯ ಸುರಿಮಳೆ

    ಹೈದರಾಬಾದ್: ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಸಂಪನ್ಮೂಲಗಳ ಲಭ್ಯತೆ ವಿರಳವಾಗಿದೆ. ಮತ್ತು ಸೇವೆಗೆ ಸಂಪೂರ್ಣವಾಗಿ ಅಡ್ಡಿಯಾಗಿರುವ ಅಥವಾ ನಿರ್ಬಂಧಿಸಲ್ಪಟ್ಟಿರುವ ಸಮಯದಲ್ಲಿ, ಹೈದರಾಬಾದ್‍ನ ಬೈಸಿಕಲ್ ಮೇಯರ್ ತನ್ನ ಸೈಕಲ್ ಬಳಸಿ ವೃದ್ಧರ ಅಗತ್ಯತೆಗಳನ್ನು ನಗುವಿನೊಂದಿಗೆ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. ಅವರಿಗೆ ಹಲವು ಸ್ವಯಂಸೇವಕರು ಬೆಂಬಲ ನೀಡುತ್ತಿದ್ದಾರೆ.

    ಹೈದರಾಬಾದ್ ನಿವಾಸಿ ಸಂತನಾ ಸೆಲ್ವನ್ (41) ಅವರನ್ನು ನಗರದ ಬೈಸಿಕಲ್ ಮೇಯರ್ ಎಂದು ಅಂತಾರಾಷ್ಟ್ರೀಯ ಬೈಸಿಕಲ್ ಸಂಸ್ಥೆ BYCS ಏಪ್ರಿಲ್‍ನಲ್ಲಿ ಕರೆಯಲಾಯಿತು. ಜನದಟ್ಟಣೆಯ ಸ್ಥಳಗಳಲ್ಲಿ ಮಾಲಿನ್ಯವನ್ನು ಕಡಿಮೆ ಮಾಡಲು ನಗರಗಳಲ್ಲಿ ಬೈಸಿಕಲ್ ಬಳಕೆಯನ್ನು ಉತ್ತೇಜಿಸುವ ಉದ್ದೇಶವನ್ನು ಈ ಸಂಸ್ಥೆ ಹೊಂದಿದೆ. ಕೆಲವು ವಾರಗಳ ಹಿಂದೆ, ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯು ಹೈದರಾಬಾದ್ ಸೇರಿದಂತೆ ಭಾರತದ ಬಹುತೇಕ ಭಾಗಗಳನ್ನು ಆವರಿಸಲಾರಂಭಿಸಿತು.

    ಕೊರೊನಾ ವೈರಸ್ ಸೋಂಕು ತಗುಲುವ ಅಥವಾ ತಮ್ಮಿಂದ ಬೇರೆಯವರಿಗೆ ಹರಡುವ ಭೀತಿಯಿಂದ ತಮ್ಮ ಮನೆಗಳಿಂದ ಹೊರಬರಲು ಸಾಧ್ಯವಾಗದ ವೃದ್ಧರಿಗೆ ಔಷಧಿಗಳಂತಹ ಅಗತ್ಯ ವಸ್ತುಗಳ ಸೇವೆ ಒದಗಿಸುವುದಾಗಿ ಸೆಲ್ವನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಅಷ್ಟೇ ಅಲ್ಲ, ಹೇಳಿದಂತೆ ನೆರವಾಗಲು ಸೆಲ್ವನ್ ಮತ್ತು ಅವರ ಸ್ವಯಂ ಸೇವಕರು ಹೆಜ್ಜೆ ಇಟ್ಟರು. ಸೆಲ್ವನ್ ಔಷಧಿಗಳನ್ನು ತಲುಪಿಸಲು ನೆರವು ಕೇಳಿದ್ದಕ್ಕೆ ಹಲವು ಸ್ವಯಂ ಸೇವಕರು ಈ  ಪೋಸ್ಟ್‌ಗೆ  ಪ್ರತಿಕ್ರಯಿಸಿದ್ದು, ತಾವೂ ಸೇವೆಗೆ ಮುಂದಾದರು.

    ವೃದ್ಧರಿಗೆ ಔಷಧಿಗಳನ್ನು ತಲುಪಿಸುವ ಒಂದು ಸಣ್ಣ ಉಪಕ್ರಮವಾಗಿ ಪ್ರಾರಂಭವಾದದ್ದು, ಈಗ ಸುಮಾರು 100 ಸ್ವಯಂಸೇವಕರ ಸಮೂಹವಾಗಿ ಬೆಳೆದಿದೆ. ಈ ತಂಡಕ್ಕೆ ರಿಲೀಫ್ ರೈಡರ್ಸ್ ಎಂದು ಹೆಸರಿಡಲಾಗಿದೆ. ಸ್ವಯಂಸೇವಕರು ಆರಂಭದಲ್ಲಿ ವಯಸ್ಸಾದವರಿಗೆ ಕೇವಲ ಔಷಧಿಗಳನ್ನು ತಲುಪಿಸುತ್ತಿದ್ದರೆ. ಆದರೆ ಈಗ ಆಮ್ಲಜನಕ ಸಿಲಿಂಡರ್‍ಗಳು ಮತ್ತು ಸಾಂದ್ರಕಗಳು, ಆಸ್ಪತ್ರೆಯಲ್ಲಿ ಬೆಡ್, ವೆಂಟಿಲೇಟರ್‍ಗಳು, ಪ್ಲಾಸ್ಮಾ ದಾನಿಗಳು ಮತ್ತು ಕೋವಿಡ್ -19 ರೋಗಿಗಳಿಗೆ ಅಗತ್ಯವಿರುವ ಔಷಧಿಗಳನ್ನು ಹುಡುಕಲು ಮತ್ತು ಈ ಸಂಪನ್ಮೂಲಗಳನ್ನು ಅಗತ್ಯವಿರುವವರಿಗೆ ಸಂಪರ್ಕಿಸಲು ವಿಸ್ತರಿಸಿದೆ. ಸೆಲ್ವನ್ ಮತ್ತು ಅವರ ಸ್ನೇಹಿತರು ಈಗ ತಮ್ಮ ಸೇವೆಗಳನ್ನು ಹೆಚ್ಚಿಸಲು ಮತ್ತು ಆಹಾರ ಹಾಗೂ ಇತರ ಅಗತ್ಯ ವಸ್ತುಗಳನ್ನು ತಲುಪಿಸಲು ಯೋಜಿಸುತ್ತಿದ್ದಾರೆ.

  • ಮೇ 5ರಿಂದ 2 ವಾರ ನೈಟ್ ಕರ್ಫ್ಯೂ ವಿಸ್ತರಿಸಿದ ಆಂಧ್ರ ಸರ್ಕಾರ

    ಮೇ 5ರಿಂದ 2 ವಾರ ನೈಟ್ ಕರ್ಫ್ಯೂ ವಿಸ್ತರಿಸಿದ ಆಂಧ್ರ ಸರ್ಕಾರ

    ಹೈದರಾಬಾದ್: ಕೋವಿಡ್-19 ಪ್ರಕರಣಗಳ ಸಂಖ್ಯೆಯನ್ನು ತಡೆಗಟ್ಟಲು ಮೇ 5 ರಿಂದ ಎರಡು ವಾರಗಳವರೆಗೂ ರಾಜ್ಯಾದ್ಯಂತ ನೈಟ್ ಕರ್ಫ್ಯೂ ವಿಧಿಸಲು ಆಂಧ್ರಪ್ರದೇಶ ಸರ್ಕಾರ ನಿರ್ಧರಿಸಿದೆ. ಮಧ್ಯಾಹ್ನ 12 ರಿಂದ 6 ರವರೆಗೆ ಲಾಕ್‍ಡೌನ್ ನಿರ್ಬಂಧಗಳು ಜಾರಿಯಲ್ಲಿರುತ್ತದೆ.

    144 ಸೆಕ್ಷನ್ ಸಿಆರ್​ಪಿಸಿ ಅಡಿಯಲ್ಲಿ ಜಾರಿಯಿರಲಿದ್ದು, ಪ್ರತಿದಿನ ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗುತ್ತದೆ. ಮಧ್ಯಾಹ್ನ 12 ಗಂಟೆಯ ಬಳಿಕ ಕರ್ಫ್ಯೂ ಪ್ರಾರಂಭವಾಗುತ್ತದೆ ಮತ್ತು ತುರ್ತು ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗುತ್ತದೆ. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸೋಮವಾರ ಉನ್ನತ ಮಟ್ಟದ ಕೋವಿಡ್ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ.

    ಕೋವಿಡ್-19 ಇರುವುದರಿಂದ ಕಳೆದ ಕೆಲವು ದಿನಗಳಿಂದ ರಾತ್ರಿ 10 ರಿಂದ ಬೆಳಗ್ಗೆ 5 ರವರೆಗೆ ನೈಟ್ ಕರ್ಫ್ಯೂವನ್ನು ಜಾರಿಗೊಳಿಸಲಾಗಿತ್ತು. ಆದರೆ ದಿನೇ ದಿನೇ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಕೊರೊನಾವನ್ನು ಹೊಗಲಾಡಿಸಲು ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನಿರ್ಧರಿಸಿದ್ದಾರೆ.

  • ಮತ್ತೆ ಬಾಲಿವುಡ್ ಸಿನಿಮಾದಲ್ಲಿ ಪ್ರಭಾಸ್ – ಬಾಹುಬಲಿಗೆ ಜೋಡಿ ಆಗ್ತಾರಾ ಈ ಕ್ಯೂಟ್ ಬೆಡಗಿ

    ಮತ್ತೆ ಬಾಲಿವುಡ್ ಸಿನಿಮಾದಲ್ಲಿ ಪ್ರಭಾಸ್ – ಬಾಹುಬಲಿಗೆ ಜೋಡಿ ಆಗ್ತಾರಾ ಈ ಕ್ಯೂಟ್ ಬೆಡಗಿ

    ಹೈದರಾಬಾದ್: ಟಾಲಿವುಡ್ ನಟ ಬಾಹುಬಲಿ ಪ್ರಭಾಸ್ ಮತ್ತೆ ಬಾಲಿವುಡ್ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿಯೊಂದು ಇದೀಗ ಟಿ-ಟೌನ್ ಅಂಗಳದಲ್ಲಿ ಹರಿದಾಡುತ್ತಿದೆ.

    ನಟ ಪ್ರಭಾಸ್ ಸದ್ಯ ತೆಲುಗಿನ ಆದಿಪುರುಷ ಮತ್ತು ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ ನಿರ್ದೇಶಕ ನಾಗ್ ಅಶ್ವಿನ್ ಆ್ಯಕ್ಷನ್ ಕಟ್ ಹೇಳುತ್ತಿರುವ ಮುಂದಿನ ಸಿನಿಮಾದ ಶೂಟಿಂಗ್‍ನಲ್ಲಿ ಕೂಡ ಶೀಘ್ರದಲ್ಲಿಯೇ ಪಾಲ್ಗೊಳ್ಳಲಿದ್ದರೆ. ಆದರೆ ಈ ಎಲ್ಲದರ ಮಧ್ಯೆ ಬಾಲಿವುಡ್ ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರ ಮುಂದಿನ ಸಿನಿಮಾಕ್ಕೆ ಪ್ರಭಾಸ್ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಸದ್ಯದಲ್ಲಿಯೇ ಈ ಸಿನಿಮಾವನ್ನು ಅಧಿಕೃತವಾಗಿ ಘೋಷಿಸಲು ಸಿನಿಮಾತಂಡ ಪ್ಲಾನ್ ಮಾಡಿದೆಯಂತೆ.

    ಈ ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಡ್ಯೂಯೆಟ್ ಆಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮುನ್ನ ನಿರ್ದೇಶಕ ಸಿದ್ದಾರ್ಥ್ ಆನಂದ್ ಆ್ಯಕ್ಷನ್ ಕಟ್ ಹೇಳಿದ್ದ ಬ್ಯಾಂಗ್ ಬ್ಯಾಂಗ್ ಸಿನಿಮಾದಲ್ಲಿ ಹೃತಿಕ್ ರೋಷನ್‍ಗೆ ಜೋಡಿಯಾಗಿ ಕತ್ರಿನಾ ಕೈಫ್ ಅಭಿನಯಿಸಿದ್ದರು. ಪ್ರಭಾಸ್‍ಗೆ ಸಾಹೋ ಸಿನಿಮಾದಲ್ಲಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಜೋಡಿಯಾಗಿ ನಟಿಸಿದ್ದರು.

    ಸದ್ಯ ಸಿದ್ಧಾರ್ಥ್ ಆನಂದ್ ಬಾಲಿವುಡ್ ಬಾದ್ ಶಾ ನಟ ಶಾರೂಕ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯಿಸುತ್ತಿರುವ ಪಠಾಣ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಎಲ್ಲ ಒಕೆ ಆದಲ್ಲಿ ಸಿದ್ಧಾರ್ಥ್ ಪ್ರಭಾಸ್ ಸಿನಿಮಾವನ್ನು ಶೀಘ್ರದಲ್ಲಿ ಕೈಗೆತ್ತುಕೊಳ್ಳಲಿದ್ದಾರೆ.

  • ಅಂಬುಲೆನ್ಸ್ ಸಿಗದೆ ಬೈಕ್‍ನಲ್ಲಿ ತಾಯಿ ಶವ ಸಾಗಿಸಿದ

    ಅಂಬುಲೆನ್ಸ್ ಸಿಗದೆ ಬೈಕ್‍ನಲ್ಲಿ ತಾಯಿ ಶವ ಸಾಗಿಸಿದ

    ಹೈದರಾಬಾದ್: ಅಂಬುಲೆನ್ಸ್ ಸಿಗದೆ ಇರುವ ಕಾರಣದಿಂದ ಬೈಕ್‍ನಲ್ಲಿ ತಾಯಿ ಶವವನ್ನು ಸಾಗಿಸಿರುವ ಮನಕಲಕುವಂತಹ ಘಟನೆ ಆಂದ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಮಂದಾಸ್ ಮಂಡಲ್ ಗ್ರಾಮದಲ್ಲಿ ನಡೆದಿದೆ.

    50 ವರ್ಷದ ಮಹಿಳೆಗೆ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿದ್ದವು. ಕೊರೊನಾ ಪರೀಕ್ಷೆ ಮಾಡಲಾಗಿತ್ತು. ವರದಿ ಬರುವಷ್ಟರಲ್ಲಿ ಮಹಿಳೆ ಆರೋಗ್ಯದಲ್ಲಿ ಏರುಪೇರಾಗಿತ್ತು. ಶ್ರೀಕಾಕುಲಂ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆರೋಗ್ಯಸ್ಥಿತಿ ತುಂಬಾ ಗಂಭೀರವಾಗಿರುವುದರಿಂದ ಆಸ್ಪತ್ರೆಯಲ್ಲಿಯೆ ಮಹಿಳೆ ಸಾವನ್ನಪ್ಪಿದ್ದಾರೆ.

     ಶವವನ್ನು ಸಾಗಿಸಲು ಅಂಬುಲೆನ್ಸ್ ದೊರೆಯಲಿಲ್ಲ. ಎಷ್ಟೇ ಸಮಯ ಕಾದರು ಅಂಬುಲೆನ್ಸ್ ಬಾರದೇ ಇದ್ದಾಗ ಮೃತಳ ಮಗ ಮತ್ತು ಅಳಿಯ ಶವವನ್ನು ಬೈಕ್ ಮೇಲೆ ಇಟ್ಟುಕೊಂಡು ತಮ್ಮೂರಿಗೆ ಸಾಗಿಸಿ ಅಂತ್ಯಕ್ರೀಯೆ ನೆರವೇರಿಸಿದ್ದಾರೆ.

  • ಹಕ್ಕಿಗೂಡನ್ನು ಮಾಸ್ಕ್ ಮಾಡಿಕೊಂಡ ತಾತ

    ಹಕ್ಕಿಗೂಡನ್ನು ಮಾಸ್ಕ್ ಮಾಡಿಕೊಂಡ ತಾತ

    ಹೈದರಾಬಾದ್: ಹಿರಿ ಜೀವವೊಂದು ಮಾಸ್ಕ್ ಕೊಳ್ಳಲು ಹಣವಿಲ್ಲದೆ ಹಕ್ಕಿಯ ಗೂಡನ್ನೇ ಮಾಸ್ಕ್ ಮಾಡಿಕೊಂಡು ಮುಖಕ್ಕೆ ಧರಿಸುವ ಮೂಲಕವಾಗಿ ತೆಲಂಗಾಣದ ಮೆಹಬೂಬ್ ನಗರದ ನಿವಾಸಿಯೊಬ್ಬರು ಸುದ್ದಿಯಾಗಿದ್ದಾರೆ.

    ಹಕ್ಕಿಯ ಗೂಡನ್ನು ಮಾಸ್ಕ್ ನಂತೆ ಧರಿಸಿಕೊಂಡು ಸರ್ಕಾರಿ ಕಚೇರಿಗೆ ಬಂದಿದ್ದಾರೆ. ಈ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೇಕಲಾ ಕುರ್ಮಯ್ಯ ತನ್ನ ಪಿಂಚಣಿ ಹಣ ಸಂಗ್ರಹಿಸುವ ಉದ್ದೇಶದಿಂದ ಸರ್ಕಾರಿ ಕಚೇರಿಗೆ ಭೇಟಿ ನೀಡಬೇಕಾಗಿತ್ತು. ಆದರೆ ಮಾಸ್ಕ್ ಖರೀದಿ ಮಾಡಲು ಸಾಧ್ಯವಾಗದ ಕಾರಣ ಈ ರೀತಿಯಾಗಿ ಒಂದು ಉಪಾಯವನ್ನು ಮಾಡಿದ್ದಾರೆ.

    ಕೊರೊನ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಅಲ್ಲದೆ ಮಾಸ್ಕ್ ಇಲ್ಲದಿದ್ದರೆ ಯಾವುದೇ ಕಚೇರಿಗಳಿಗೂ ಪ್ರವೇಶ ಇರುವುದಿಲ್ಲ. ಈ ಕಾರಣದಿಂದಾಗಿ ಮೇಕಲಾ ಕರ್ಮಯ್ಯ ಹಕ್ಕಿಯ ಗೂಡನ್ನೇ ತನ್ನ ಮಾಸ್ಕ್ ಹಾಗೇ ಮಾಡಿಕೊಂಡು ಬಂದು ಗಮನ ಸೆಳೆದಿದ್ದಾರೆ.

  • ಆರ್ಥಿಕ ಸಮಸ್ಯೆ – ಮಕ್ಕಳಿಬ್ಬರಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆ

    ಆರ್ಥಿಕ ಸಮಸ್ಯೆ – ಮಕ್ಕಳಿಬ್ಬರಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆ

    ಹೈದರಾಬಾದ್: ಮಕ್ಕಳಿಗೆ ವಿಷಕೊಟ್ಟು ತಾನು ಕುಡಿದು ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.

    ಇಬ್ಬರು ಮಕ್ಕಳೊಂದಿಗೆ ಮಹಿಳೆ ಅತ್ಮಹತ್ಯೆಗೆ ಶರಣಾಗಿದ್ದಾರೆ. ಮಹಿಳೆ ಪತಿ ಸುರೇಂದ್ರ ತನ್ನ ಕುಟುಂಬದೊಂದಿಗೆ ಕೊಟ್ಟಗುಟ್ಟು ಕೇಂದ್ರದಲ್ಲಿ ವಾಸವಾಗಿದ್ದರು. ಜೀವನ ನಿರ್ವಹಣೆಗಾಗಿ ಬೆಳಗ್ಗೆ ದಿನಸಿ ವ್ಯವಹಾರ, ರಾತ್ರಿ ಆಟೋ ಓಡಿಸುತ್ತಿದ್ದರು. ಹಾಗಿದ್ದರು ಈ ಕುಟುಂಬಕ್ಕೆ ಹಣದ ಸಮಸ್ಯೆ ಉಂಟಾಗುತ್ತಲೇ ಇತ್ತು.

    ಆರ್ಥಿಕ ಸಮಸ್ಯೆಗಳಿಂದ ಮನನೊಂದ ಸುರೇಂದ್ರ ಪತ್ನಿ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದರು. ಗಂಡ ಕೆಲಸಕ್ಕೆ ಹೋದ ವೇಳೆ ತಾನು ವಿಷ ಕುಡಿದು, ಮಕ್ಕಳಿಗೂ ಕುಡಿಸಿ ಪ್ರಾಣ ಬಿಟ್ಟಿದ್ದಾರೆ. ಸುರೇಂದ್ರ ಕೆಲಸ ಮುಗಿಸಿ ಮನೆಗೆ ವಾಪಸ್ ಬಂದಾಗ ಪತ್ನಿ, ಮಕ್ಕಳ ಬಾಯಲ್ಲಿ ನೊರೆ ಬರುತ್ತಿರುವುದನ್ನು ಗಮನಿಸಿ ತಕ್ಷಣ ಗುಂಟೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಆದರೆ ತಾಯಿ, ಮಕ್ಕಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇತ್ತ ಪತ್ನಿ ಮತ್ತು ಮಕ್ಕಳನ್ನು ಕಳೆದುಕೊಂಡ ಸುರೇಂದ್ರ ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

  • ಹಬ್ಬದಂದೇ ಅಭಿಮಾನಿಗಳಿಗೆ ಪ್ರಭಾಸ್ ಸಿಹಿ – ರಾಧೆ ಶ್ಯಾಮ್ ನ್ಯೂ ಪೋಸ್ಟರ್ ರಿಲೀಸ್

    ಹಬ್ಬದಂದೇ ಅಭಿಮಾನಿಗಳಿಗೆ ಪ್ರಭಾಸ್ ಸಿಹಿ – ರಾಧೆ ಶ್ಯಾಮ್ ನ್ಯೂ ಪೋಸ್ಟರ್ ರಿಲೀಸ್

    ಹೈದರಾಬಾದ್: ಯುಗಾದಿ ಹಬ್ಬದ ಪ್ರಯುಕ್ತ ಟಾಲಿವುಡ್ ನಟ ಡಾರ್ಲಿಂಗ್ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ರಾಧೆ ಶ್ಯಾಮ್ ಚಿತ್ರದ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ.

    ರಾಧೆ ಶ್ಯಾಮ್ ಸಿನಿಮಾದ ಈ ನೂತನ ಪೋಸ್ಟರ್ ರಿಲೀಸ್ ಆಗುತ್ತಿದ್ದಂತೆಯೇ ಸೋಶಿಯಲ್ ಮೀಡಿಯದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಫೋಟೋದಲ್ಲಿ ಪ್ರಭಾಸ್ ಲವ್ವರ್ ಬಾಯ್‍ನಂತೆ ರೆಟ್ರೋ ಲುಕ್‍ನಲ್ಲಿ ಮಿಂಚಿದ್ದು, ಕಂದು ಬಣ್ಣದ ಸ್ವೆಟರ್, ಅದಕ್ಕೆ ಸೂಟ್ ಆಗುವಂತಹ ಪ್ಯಾಂಟ್ ಧರಿಸಿ, ಕಂಬವನ್ನು ಹಿಡಿದುಕೊಂಡು ನಿಂತಿರುವುದನ್ನು ಕಾಣಬಹುದಾಗಿದೆ. ಅಲ್ಲದೆ ಪೋಸ್ಟರ್‍ನಲ್ಲಿ ಮಿಲಿಯನ್-ಡಾಲರ್‍ಗಳಿಗೆ ಸಾಟಿ ಎಂಬಂತೆ ಪ್ರಭಾಸ್ ಸ್ಮೈಲ್ ನೀಡಿದ್ದಾರೆ.

     

    View this post on Instagram

     

    A post shared by Prabhas (@actorprabhas)

    ಸದ್ಯ ಈ ಪೋಸ್ಟರ್‍ನನ್ನು ಪ್ರಭಾಸ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಸುಂದರ ಹಬ್ಬದ ಆಚರಣೆಯ ಪ್ರಮುಖ ಅಂಶವೆಂದರೆ ಪ್ರೀತಿ. ಅದನ್ನು ಅನುಭವಿಸಿ, ಅದನ್ನು ಪಾಲಿಸಿ, ಅದನ್ನು ಹಂಚಿ. ನಿಮಗೂ ಹಾಗೂ ನಿಮ್ಮ ಪ್ರೀತಿ ಪಾತ್ರರಿಗೂ ಯುಗಾದಿ ಹಬ್ಬದ ಶುಭಾಶಯಗಳು ಎಂದು ವಿಶ್ ಮಾಡಿದ್ದಾರೆ.

     

    View this post on Instagram

     

    A post shared by Prabhas (@actorprabhas)

    ಈ ಸಿನಿಮಾದಲ್ಲಿ ಪ್ರಭಾಸ್ ಜೊತೆ ನಟಿ ಪೂಜಾ ಹೆಗ್ಡೆ ಇದೇ ಮೊದಲ ಬಾರಿಗೆ ಡ್ಯೂಯೆಟ್ ಆಡುತ್ತಿದ್ದು, ರಾಧಾಕೃಷ್ಣ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಮುರಳಿ ಶರ್ಮ, ಸಚಿನ್ ಖೇಡೇಕರ್, ಪ್ರಿಯದರ್ಶಿ, ಸಶಾ ಚೆಟ್ರಿ, ಕುನಾಲ್ ರಾಯ್, ಕಪೂರ್ ಮತ್ತು ಸತ್ಯನ್ ನಟಿಸಿದ್ದಾರೆ. ರಾಧೆ ಶ್ಯಾಮ್ ಮುಂಬರುವ ಜುಲೈ 30 ರಂದು ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ತೆರೆ ಮೇಲೆ ಬರಲಿದೆ.

  • ಪ್ರಕಾಶ್ ರಾಜ್ ಅಭಿನಯಕ್ಕೆ ಮೆಗಾಸ್ಟಾರ್ ಚಿರು ಫಿದಾ!

    ಪ್ರಕಾಶ್ ರಾಜ್ ಅಭಿನಯಕ್ಕೆ ಮೆಗಾಸ್ಟಾರ್ ಚಿರು ಫಿದಾ!

    ಹೈದರಾಬಾದ್: ಟಾಲಿವುಡ್ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ‘ವಕೀಲ್ ಸಾಬ್’ ಚಿತ್ರ ತೆರೆಕಂಡು ಟಿ-ಟೌನ್‍ನಲ್ಲಿ ಧೂಳ್ ಎಬ್ಬಿಸುತ್ತಿದೆ. ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಬಹುಭಾಷಾ ನಟ ಪ್ರಕಾಶ್ ರಾಜ್ ಅಭಿನಯಕ್ಕೆ ಮೆಗಾ ಸ್ಟಾರ್ ಚಿರಂಜೀವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಹೌದು, ಸುಮಾರು ಮೂರೂವರೆ ವರ್ಷದ ಬಳಿಕ ನಟ ಪವನ್ ಕಲ್ಯಾಣ್ ‘ವಕೀಲ್ ಸಾಬ್’ ಸಿನಿಮಾದ ಮೂಲಕ ಸ್ಕ್ರೀನ್ ಮೇಲೆ ಪ್ರೇಕ್ಷಕರ ಮುಂದೆ ಬಂದಿದ್ದು, ಬಾಕ್ಸ್ ಆಫೀಸ್ ಚಿಂದಿ ಉಡಾಯಿಸುತ್ತಿದ್ದಾರೆ. ಈ ಮಧ್ಯೆ ಸಿನಿಮಾದಲ್ಲಿ ಪವನ್ ಕಲ್ಯಾಣ್‍ಗೆ ಎದುರಾಳಿ ಲಾಯರ್ ಆಗಿ ಖಡಕ್ ಡೈಲಾಗ್ ಹೊಡೆಯುವ ಪ್ರಕಾಶ್ ರಾಜ್ ಅಭಿನಯಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

    ಪ್ರಕಾಶ್ ರಾಜ್ ನಟನೆಗೆ ಅಭಿಮಾನಿಗಳಷ್ಟೇ ಅಲ್ಲದೇ ಚಿರಂಜೀವಿ ಕೂಡ ಮಾರುಹೋಗಿದ್ದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಕಾಶ್ ರಾಜ್‍ರಂತಹ ಕಲಾವಿದ ಇದ್ದರೆ, ಸಹಜವಾಗಿ ಸಹ ಕಲಾವಿದರು ಪರ್ಫಾಮೆನ್ಸ್ ಕೂಡ ಹೆಚ್ಚಾಗುತ್ತದೆ. ‘ವಕೀಲ್ ಸಾಬ್’ ಚಿತ್ರದಲ್ಲಿ ಅವರ ನಟನೆ ಅದ್ಭುತ, ಪವನ್ ಕಲ್ಯಾಣ್ ಮುಂದೆ ಉತ್ತಮವಾಗಿ ನಟಿಸಿದ್ದಾರೆ. ಶುಭಾಶಯಗಳು ಪ್ರಕಾಶ್, ಹೀಗೆ ಮುಂದುವರಿಸಿ ಎಂದು ಕ್ಯಾಪ್ಷನ್ ಹಾಕಿ ಟ್ವೀಟ್ ಮಾಡಿದ್ದಾರೆ.

    ಚಿರು ಟ್ವೀಟ್‍ಗೆ ರಿಯಾಕ್ಟ್ ಮಾಡಿರುವ ಪ್ರಕಾಶ್, ಎಂದಿಗೂ ಸ್ಫೂರ್ತಿದಾಯಕ, ಎಂದಿಗೂ ಪ್ರೋತ್ಸಾಹಿಸುವ ಅಣ್ಣಾ.. ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ‘ವಕೀಲ್ ಸಾಬ್’ ಸಿನಿಮಾದಲ್ಲಿ ವಕೀಲ ಪಾತ್ರನಾಗಿ ಪವನ್ ಕಲ್ಯಾಣ್ ಮಿಂಚಿದ್ದು, ನಿರ್ದೇಶಕ ವೇಣು ಶ್ರೀರಾಮ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾದ ಪ್ರಮುಖ ಪಾತ್ರದಲ್ಲಿ ನಿವೇತಾ ಥಾಮಸ್, ಶ್ರುತಿ ಹಾಸನ್, ಅನನ್ಯಾ ಮತ್ತು ಅಂಜಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ಹಿಂದಿಯ ಪಿಂಕ್ ಸಿನಿಮಾದ ರಿಮೇಕ್ ಆಗಿದೆ.