Tag: Hyderabad

  • ಯಡಿಯೂರಪ್ಪ ಇಲ್ಲಾಂದ್ರೆ ಬಿಜೆಪಿ ಇಲ್ಲ, ಬಿಜೆಪಿ ಇಲ್ಲಾಂದ್ರೆ ಯಡಿಯೂರಪ್ಪ ಇಲ್ಲ: ಅಮರೇಗೌಡ

    ಯಡಿಯೂರಪ್ಪ ಇಲ್ಲಾಂದ್ರೆ ಬಿಜೆಪಿ ಇಲ್ಲ, ಬಿಜೆಪಿ ಇಲ್ಲಾಂದ್ರೆ ಯಡಿಯೂರಪ್ಪ ಇಲ್ಲ: ಅಮರೇಗೌಡ

    ಕೊಪ್ಪಳ: ಯಡಿಯೂರಪ್ಪ ಇಲ್ಲ ಅಂದರೆ ಬಿಜೆಪಿ ಇಲ್ಲ, ಬಿಜೆಪಿ ಇಲ್ಲ ಅಂದರೆ ಯಡಿಯೂರಪ್ಪ ಇಲ್ಲ ಎಂದು ಕಾಂಗ್ರೆಸ್ ಶಾಸಕ ಅಮರೇಗೌಡರವರು ಹೇಳಿದ್ದಾರೆ.

    ಇತ್ತೀಚೆಗೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಜೋರಾಗಿ ನಡೆಯುತ್ತಿದೆ. ಈ ಮಧ್ಯೆ ಕೊಪ್ಪಳದಲ್ಲಿ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಮಾತನಾಡಿ, ಈ ಪುಣ್ಯಾತ್ಮ ಯಡಿಯೂರಪ್ಪ ಇರುವುದರಿಂದಲೇ ಕೇಂದ್ರದವರು ರಾಜ್ಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ.

    ಕೇಂದ್ರದಿಂದ ಸರಿಯಾದ ಅನುದಾನ ನೀಡುತ್ತಿಲ್ಲ, ಇತ್ತೀಚಿನ ಚಂಡಮಾರುತದಿಂದ ಕರಾವಳಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿಗಳು ವರದಿ ನೀಡಿದ್ದಾರೆ. ಆದರೆ ರಾಜ್ಯಕ್ಕೆ ಅತ್ಯಲ್ಪ ಪರಿಹಾರ ಬಿಡುಗಡೆಯಾಗಿದೆ. ಯಡಿಯೂರಪ್ಪ ಇಳಿಸಲು ಕೇಂದ್ರದ ಅವರ ಹೈಕಮಾಂಡ್ ಹಾಗೂ ರಾಜ್ಯದ ಲೋ ಕಮಾಂಡ್ ಸಹ ಕೆಲಸ ಮಾಡುತ್ತಿದೆ.

    ರಾಜ್ಯದಲ್ಲಿ ಪರಿಸ್ಥಿತಿ ಕೆಟ್ಟು ಹೈದರಾಬಾದ್‍ನಂತೆ ಆಗಿದೆ. ಹಿಂದೆ ಜನಾರ್ದನರೆಡ್ಡಿ ಹೈದರಾಬಾದ್‍ಗೆ ಶಾಸಕರನ್ನು ಕರೆದುಕೊಂಡು ಹೋಗಿದ್ದರು. ಈಗ ಆಡಳಿತವೇ ಕೆಟ್ಟು ಹೈದರಾಬಾದ್‍ನಂತೆ ಆಗಿದೆ ಎಂದು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಟೀಕಿಸಿದ್ದಾರೆ. ಇದನ್ನೂ ಓದಿ: ಒಂದೆರಡು ದಿನಗಳಲ್ಲಿ ಹೆಚ್ಚಿನ ಪ್ರಮಾಣದ ಕೋವಿಡ್ ಲಸಿಕೆ ಲಭ್ಯ: ಸಿಎಂ ಯಡಿಯೂರಪ್ಪ

  • 700 ಕಿ.ಮೀ ಪಾದಯಾತ್ರೆ ಮಾಡಿದ ಅಭಿಮಾನಿ – ಮೆಚ್ಚುಗೆ ಜೊತೆಗೆ ಸೋನು ಬುದ್ಧಿವಾದ

    700 ಕಿ.ಮೀ ಪಾದಯಾತ್ರೆ ಮಾಡಿದ ಅಭಿಮಾನಿ – ಮೆಚ್ಚುಗೆ ಜೊತೆಗೆ ಸೋನು ಬುದ್ಧಿವಾದ

    ಮುಂಬೈ: ರಿಯಲ್ ಹೀರೋ ಸೋನು ಅವರನ್ನು ನೋಡಲು ಅಭಿಮಾನಿಯೊಬ್ಬರು ಬರಿಗಾಲಿನಲ್ಲಿ ಹೈದರಾಬಾದ್‍ನಿಂದ ಮುಂಬೈವರೆಗೆ ಬರೋಬ್ಬರಿ 700 ಕಿಲೋಮೀಟರ್ ಪಾದಯಾತ್ರೆ ಮಾಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ಸೋನು ಅವರ ಅಭಿಮಾನಿ ವೆಂಕಟೇಶ್ ಹೈದರಾಬಾದ್ ಮೂಲದವನು. ಈತನಿಗೆ ಸೋನು ಸೂದ್ ಕಂಡರೆ ಅಪಾರ ಗೌರವ. ಹೀಗಾಗಿ ಸೋನು ಅವರನ್ನು ಭೇಟಿ ಮಾಡಲು ಬರಿಗಾಲಿನಲ್ಲಿ ಹೈದರಾಬಾದ್‍ನಿಂದ ಮುಂಬೈವರೆಗೆ ಬರೋಬ್ಬರಿ 700 ಕಿಲೋಮೀಟರ್ ಪಾದಯಾತ್ರೆ ಮಾಡಿದ್ದಾನೆ. ಈತನ ಅಭಿಮಾನ ಕಂಡು ಸೋನು ಸೂದ್ ಖುಷಿ ಆಗಿದ್ದಾರೆ ಎಂಬುದೇನೋ ನಿಜ. ಆದರೆ ಬೇರೆ ಯಾರೂ ಹೀಗೆ ಮಾಡಬೇಡಿ ಎಂದು ತಮ್ಮ ಅಭಿಮಾನಿ ಬಳಗಕ್ಕೆ ಅವರು ಬುದ್ಧಿಮಾತು ಹೇಳಿದ್ದಾರೆ. ಇದನ್ನೂ ಓದಿ: ಈ ದಿನ ಮಾಡಿ ಮಾವಿನ ಹಣ್ಣಿನ ಕೇಸರಿ ಬಾತ್

    ನನ್ನನ್ನು ಭೇಟಿಯಾಗಲು ವೆಂಕಟೇಶ್ ಹೈದರಾಬಾದ್‍ನಿಂದ ಮುಂಬೈವರೆಗೆ ಬರಿಗಾಲಿನಲ್ಲಿ ನಡೆದುಕೊಂಡು ಬಂದಿದ್ದಾನೆ. ಅವನಿಗೆ ವಾಹನದ ವ್ಯವಸ್ಥೆ ಮಾಡಿದರೂ ಕೂಡ ಅವನು ಅದನ್ನು ಒಪ್ಪಲಿಲ್ಲ. ಅವನು ನನಗೆ ಸ್ಫೂರ್ತಿದಾಯಕವಾಗಿದ್ದಾನೆ. ಆದರೆ ಬೇರೆ ಯಾರೂ ಕೂಡ ಈ ರೀತಿ ಬರಿಗಾಲಿನಲ್ಲಿ ಪಾದಯಾತ್ರೆ ಮಾಡುವ ಕಷ್ಟವನ್ನು ತೆಗೆದುಕೊಳ್ಳಲು ನಾನು ಪ್ರೇರಣೆ ನೀಡುವುದಿಲ್ಲ ಎಂದು ಸೋನು ಸೂದ್ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಪೆಟ್ರೋಲ್ ಕಳ್ಳತನ ವೇಳೆ ಸಿಕ್ಕಿಬಿದ್ದ ಯುವಕರು – ಸ್ಥಳೀಯರಿಂದ ಧರ್ಮದೇಟು

    ನಟ ಸೋನು ಸೂದ್ ಅವರು ಲಕ್ಷಾಂತರ ಜನರ ಪಾಲಿಗೆ ರಿಯಲ್ ಹೀರೋ ಆಗಿದ್ದಾರೆ. ಕಳೆದ ವರ್ಷ ಲಾಕ್‍ಡೌನ್ ಆರಂಭ ಆದಾಗಿನಿಂದಲೂ ಅವರು ಹಲವು ಬಗೆಯಲ್ಲಿ ಜನರಿಗೆ ಸಹಾಯ ಮಾಡಿದ್ದಾರೆ. ಹೀಗಾಗಿ ಅವರಿಗೆ ಅಪಾರ ಅಭಿಮಾನಿಗಳು ಇದ್ದಾರೆ. ನೂರಾರು ಬಗೆಯಲ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುವವರಿದ್ದಾರೆ. ಸೂದ್ ಚಾರಿಟಿ ಫೌಂಡೇಶನ್ ಮೂಲಕ ಲಕ್ಷಾಂತರ ಜನರಿಗೆ ಅವರು ನೆರವಾಗಿದ್ದಾರೆ. ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡಿಸುವುದು, ಆಕ್ಸಿಜನ್ ಸಿಲಿಂಡರ್‍ಗಳನ್ನು ಪೂರೈಸುವುದು, ಹಸಿದವರಿಗೆ ಉಚಿತವಾಗಿ ಊಟ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಸೋನು ಅವರ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ದಿ ಫ್ಯಾಮಿಲಿ ಮ್ಯಾನ್-2ರಲ್ಲಿ ಸಮಂತಾ ನಟನೆಗೆ ಕನ್ನಡ ನಟಿಯರು ಫುಲ್ ಫಿದಾ!

    ದಿ ಫ್ಯಾಮಿಲಿ ಮ್ಯಾನ್-2ರಲ್ಲಿ ಸಮಂತಾ ನಟನೆಗೆ ಕನ್ನಡ ನಟಿಯರು ಫುಲ್ ಫಿದಾ!

    ಹೈದರಾಬಾದ್: ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಅಭಿನಯದ ದಿ ಫ್ಯಾಮಿಲಿ ಮ್ಯಾನ್-2 ವೆಬ್ ಸೀರಿಸ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಮೆಚ್ಚುಗೆ ಪಡೆಯುತ್ತಿದೆ. ಈ ಮಧ್ಯೆ ಕನ್ನಡದ ನಟಿಯರು ಸಮಂತಾ ಆ್ಯಕ್ಟಿಂಗ್‍ಗೆ ಫುಲ್ ಫಿದಾ ಆಗಿದ್ದಾರೆ.

    ಇಷ್ಟು ದಿನ ಗ್ಲಾಮರ್ ಲುಕ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ಸಮಂತಾ ಅಕ್ಕಿನೇನಿ, ದಿ ಫ್ಯಾಮಿಲಿ ಮ್ಯಾನ್-2 ವೆಬ್ ಸೀರಿಸ್‍ಗಾಗಿ ಫುಲ್ ವರ್ಕ್ ಔಟ್ ಮಾಡಿ, ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು. ಚೆನ್ನೈನ ಗಾರ್ಮೆಂಟ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುವ ರಾಜಿ ಎಂಬ ಎರಡು ವಿಭಿನ್ನ ಶೇಡ್ ಇರೋ ಪಾತ್ರದಲ್ಲಿ ನಟಿಸಿದ್ದಾರೆ.

    ಸದ್ಯ ನಟಿ ಸಮಂತಾ ಅಕ್ಕಿನೇನಿ ದಿ ಫ್ಯಾಮಿಲಿ ಮ್ಯಾನ್-2 ವೆಬ್ ಸೀರಿಸ್‍ನ ಚಿಕ್ಕ ದೃಶ್ಯವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ನನಗೆ ಸ್ಟಂಟ್ ಮಾಡಲು ತರಬೇತಿ ನೀಡಿದ ವ್ಯಕ್ತಿ ಯಾನ್ ನಿಕ್‍ಬಿನ್‍ಗೆ ವಿಶೇಷ ಧನ್ಯವಾದ ತಿಳಿಸಲು ಬಯಸುತ್ತೇನೆ. ನನ್ನನ್ನು ತಳ್ಳಿದಾಗಲೆಲ್ಲ ನನ್ನ ದೇಹದ ಅಂಗಗಳಿಗೆ ನೋವುಂಟಾಗುತ್ತಿತ್ತು. ಆದರೆ ಇವೆಲ್ಲವನ್ನು ನೀಡಲು ಎಂದು ಈಗ ತಿಳಿಯಿತು. ನನಗೆ ಎತ್ತರ ಎಂದರೆ ಭಯವಾಗುತ್ತದೆ. ಆದರೆ ನನ್ನ ಬೆನ್ನ ಹಿಂದೆ ನೀವಿದ್ದೀರಿ ಎಂದು ಬೀಲ್ಡಿಂಗ್‍ನಿಂದ ಜಿಗಿದೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಇದನ್ನು ಓದಿ: ಕೊರೊನಾ ಲಸಿಕೆ ಇಂಜೆಕ್ಷನ್‍ಗೆ ಹೆದರಿಕೊಂಡ್ರಾ ನಿರ್ದೇಶಕ ಪ್ರಶಾಂತ್ ನೀಲ್?

    ಇದೀಗ ಈ ವೀಡಿಯೋಗೆ ಸ್ಯಾಂಡಲ್‍ವುಡ್ ನಟಿ ರಶ್ಮಿಕಾ ಮಂದಣ್ಣ, ಬೆಂಕಿಯ ಎಮೋಜಿ ಕಳುಹಿಸಿದ್ದು, ಡ್ಯಾಮ್ ಎಂದು ಕಮೆಂಟ್ ಮಾಡಿದ್ದಾರೆ. ಜೊತೆಗೆ ಕಿರುತೆರೆ ನಟಿ ಶ್ವೇತಾ ಚೆಂಗಪ್ಪ, ಎಂಥ ಪರ್ಫಾಮೆನ್ಸ್ ನಿಮ್ಮದು ಎಂದರೆ, ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್, ನೀವು ಬೆಂಕಿ. ವಾವ್ ಎಂದು ಕಮೆಂಟ್ ಮಾಡಿದ್ದಾರೆ. ಅಲ್ಲದೆ ನಟ ಸಾರ್ವಭೌಮ ಸಿನಿಮಾದಲ್ಲಿ ಪುನೀತ್‍ಗೆ ಜೋಡಿಯಾಗಿದ್ದ ನಟಿ ಅನುಪಮಾ ಪರಮೇಶ್ವರ್ ಕೂಡ ವೀಡಿಯೋ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ: ಶಿಲ್ಪಾ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ – ಬಾಲಿವುಡ್ ಗಣ್ಯರಿಂದ ಶುಭಾಶಯಗಳ ಸುರಿಮಳೆ

  • ಪ್ರಭಾಸ್ ಹಾಡು ಹರಾಜಾಕುತ್ತಿರುವ ಗಿಬ್ರಾನ್

    ಪ್ರಭಾಸ್ ಹಾಡು ಹರಾಜಾಕುತ್ತಿರುವ ಗಿಬ್ರಾನ್

    ಹೈದರಾಬಾದ್: ಟಾಲಿವುಡ್ ನಟ ಬಾಹುಬಲಿ ಖ್ಯಾತಿಯ ಪ್ರಭಾಸ್ ಸಿನಿಮಾದ ಹಾಡನ್ನು ಹರಾಜಾಕಲು ಸಂಗೀತಾ ನಿರ್ದೇಶಕ ಗಿಬ್ರಾನ್ ಮುಂದಾಗಿದ್ದಾರೆ.

    ಕೊರೊನಾದಿಂದ ದೇಶದಲ್ಲಿ ಸಾಕಷ್ಟು ಜನ ಕಷ್ಟ ಪಡುತ್ತಿದ್ದಾರೆ. ಈ ವೇಳೆ ಅನೇಕ ಸೆಲೆಬ್ರೆಟಿಗಳು ತಮ್ಮ ಕೈಲಾದಷ್ಟು ಸಹಾಯ ಜನರಿಗೆ ಮಾಡುತ್ತಿದ್ದಾರೆ. ಅದರಂತೆ ಸಂಗೀತ ನಿರ್ದೇಶಕ ಗಿಬ್ರಾನ್ ಕೂಡ ಸಮಾಜಮುಖಿ ಕಾರ್ಯಗಳನ್ನು ಮಾಡಲು ಇದೀಗ ಸಿದ್ಧರಾಗಿದ್ದಾರೆ. ನಟ ಡಾರ್ಲಿಂಗ್ ಪ್ರಬಾಸ್ ಅಭಿನಯದ ಸಾಹೋ ಸಿನಿಮಾದ ಹಾಡೊಂದನ್ನು ಹರಾಜಿಗೆ ಹಾಕುವ ಮೂಲಕ ಅದರಿಂದ ಬಂದ ಹಣದಲ್ಲಿ ಜನರಿಗೆ ಸಹಾಯ ಮಾಡಲು ಪ್ಲಾನ್ ಮಾಡಿದ್ದಾರೆ.

    ಸಾಹೋ ಸಿನಿಮಾಗೆ ಸಂಗೀತ ನೀಡಿದ್ದ ಗಿಬ್ರಾನ್ ಆ ಚಿತ್ರಕ್ಕಾಗಿ ಒಂದು ಹೀರೋ ಥೀಮ್ ಸಾಂಗ್ ಕಂಪೋಸ್ ಮಾಡಿದ್ದರು. ಆದರೆ ಕಾರಣಾಂತರಗಳಿಂದ ಆ ಸಾಂಗ್‍ನನ್ನು ಬಿಡುಗಡೆಗೊಳಿಸಲಾಗಲಿಲ್ಲ. ಆದರೆ ಇದೀಗ ಆ ಹಾಡನ್ನು ಎನ್‍ಎಫ್‍ಟಿ (non-fungible token)  ವೆಬ್‍ಸೈಟ್ ಮೂಲಕ ಹರಾಜು ಹಾಕಲು ನಿರ್ಧರಿಸಿದ್ದು, ಅದರಿಂದ ಬಂದ ಹಣದಲ್ಲಿ ಶೇ 50 ರಷ್ಟು ತಮಿಳುನಾಡು ಸಿಎಂ ರಿಲೀಫ್ ಫಂಡ್‍ಗೆ ದೇಣಿಗೆ ನೀಡುತ್ತೇನೆ. ಲಾಕ್‍ಡೌನ್‍ನಿಂದ ಕೆಲಸವಿಲ್ಲದೆ ಪರದಾಡುತ್ತಿರುವವರಿಗೆ ಸಹಾಯ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: ದಾಸನ ಮನವಿಗೆ ಸ್ಪಂದನೆ- ಪ್ರಾಣಿಗಳನ್ನು ದತ್ತು ಪಡೆದ ಅಭಿಮಾನಿಗಳು

    ಈವರೆಗೂ ಆ ಹಾಡನ್ನು ನಿರ್ದೇಶಕ ಸುಜೀತ್ ಹಾಗೂ ನಾನು ಬಿಟ್ಟರೆ ಯಾರು ಕೇಳಿಲ್ಲ. ಅಲ್ಲದೆ ಆ ಹಾಡು ಬಹಳ ಸೊಗಸಾಗಿ ಮೂಡಿಬಂದಿದ್ದು, ನಮ್ಮಿಬ್ಬರಿಗೆ ಬಹಳ ಇಷ್ಟವಾಗಿತ್ತು ಎಂದು ಹೇಳಿದ್ದಾರೆ. ಇದನ್ನು ಓದಿ:ಚಿರುವಿನ ಕೊನೆಯ ದಿನ ನಡೆದಿದ್ದು ಏನು? – ಬಹಿರಂಗ ಪಡಿಸಿದ ಮೇಘನಾ

    ಒಟ್ಟಾರೆ ಇದೇ ಪ್ರಪ್ರಥಮ ಬಾರಿಗೆ ವೆಬ್‍ಸೈಟ್ ಮೂಲಕ ಭಾರತದಲ್ಲಿ ಹಾಡೊಂದು ಹರಾಜಾಗುತ್ತಿದೆ ಎಂದೇ ಹೇಳಬಹುದು.

  • ಹಾಲಿವುಡ್ ಸಿನಿಮಾ ಮಾಡಲಿದ್ದಾರೆ ರಾಜಮೌಳಿ : ವಿಜಯೇಂದ್ರ ಪ್ರಸಾದ್

    ಹಾಲಿವುಡ್ ಸಿನಿಮಾ ಮಾಡಲಿದ್ದಾರೆ ರಾಜಮೌಳಿ : ವಿಜಯೇಂದ್ರ ಪ್ರಸಾದ್

    ಹೈದರಾಬಾದ್: ಟಾಲಿವುಡ್ ಖ್ಯಾತ ನಿರ್ದೇಶಕ ರಾಜಮೌಳಿ ಹಾಲಿವುಡ್‍ನಲ್ಲಿ ಸಿನಿಮಾ ನಿರ್ದೇಶಿಸಲಿದ್ದಾರೆ ಎಂದು ಅವರ ತಂದೆ ವಿಜಯೇಂದ್ರ ಪ್ರಸಾದ್ ತಿಳಿಸಿದ್ದಾರೆ.

    ಬಾಹುಬಲಿ ಸಿನಿಮಾದ ಮೂಲಕ ಇಡೀ ವಿಶ್ವವೇ ಟಾಲಿವುಡ್ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ ರಾಜಮೌಳಿ ಹಾಲಿವುಡ್‍ನಲ್ಲಿ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಆಗಾಗ ಹರಿದಾಡುತ್ತಲೇ ಇತ್ತು. ಆದರೀಗ ಈ ಮಾತು ಸತ್ಯ ಆಗುತ್ತಿದೆ. ಹೌದು, ನಿರ್ದೇಶಕ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಸಂದರ್ಶನವೊಂದರಲ್ಲಿ ರಾಜಮೌಳಿ ಹಾಲಿವುಡ್‍ನಲ್ಲಿ ಸಿನಿಮಾ ನಿರ್ದೇಶಿಸಿತ್ತಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಇದನ್ನು ಓದಿ:ಸಿನಿಮಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರಿಗೆ ಯಶ್ ಸಹಾಯ ಹಸ್ತ

    ವಿಶೇಷವೆಂದರೆ ರಾಜಮೌಳಿಯವರು ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ವಿಜಯೇಂದ್ರರವರೆ ಕಥೆ ಬರೆಯುತ್ತಿದ್ದು, ಇದು ಐತಿಹಾಸಿಕ ಕತೆ ಆಧಾರಿಸಿದ ಸಿನಿಮಾವಾಗಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಚಿತ್ರ ಕುರಿತಂತೆ ಹಾಲಿವುಡ್ ಪ್ರಖ್ಯಾತ ನಿರ್ಮಾಣ ಸಂಸ್ಥೆಯೊಂದಿಗೆ ಮಾತುಕತೆ ಮಗಿದಿದ್ದು, ಈ ಸಿನಿಮಾದಲ್ಲಿ ಯಾವ ನಟರು ಇರುವುದಿಲ್ಲ. ಇದೊಂದು ಅನಿಮೇಷನ್ ಸಿನಿಮಾ ಆಗಿರಲಿದ್ದು, ಚಿತ್ರದ ಕಥೆ ಭಾರತದ ಪರಿಸರದ್ದೇ ಆಗಿರುತ್ತದೆ ಎಂದು ಹೇಳಿದ್ದಾರೆ.

    ಸದ್ಯ ನಿರ್ದೇಶಕ ರಾಜಮೌಳಿ ಟಾಲಿವುಡ್‍ನ ಸ್ಟಾರ್ ನಟರಾದ ರಾಮ್‍ಚರಣ್ ಹಾಗೂ ಎನ್‍ಟಿಆರ್ ಅಭಿನಯಿಸುತ್ತಿರುವ ‘ಆರ್‌ಆರ್‌ಆರ್‌’ ಸಿನಿಮಾದಲ್ಲಿ ಬ್ಯೂಸಿಯಾಗಿದ್ದು, ಈ ಸಿನಿಮಾದಲ್ಲಿ ಬಹುತೇಕ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣ ವಾಗುತ್ತಿರುವ ಈ ಸಿನಿಮಾದಲ್ಲ ಬಾಲಿವುಡ್ ನಟಿ ಅಲಿಯಾ ಭಟ್ ನಾಯಕಿಯಾಗಿ ಅಭಿನಯಿಸಿದ್ದಾರೆ.

  • ಬಿರಿಯಾನಿಯಲ್ಲಿ ಲೆಗ್ ಪೀಸ್ ಕಡಿಮೆ ಇದೆ-ಸಚಿವರನ್ನು ಟ್ಯಾಗ್ ಮಾಡಿ ದೂರು ನೀಡಿದ ವ್ಯಕ್ತಿ

    ಬಿರಿಯಾನಿಯಲ್ಲಿ ಲೆಗ್ ಪೀಸ್ ಕಡಿಮೆ ಇದೆ-ಸಚಿವರನ್ನು ಟ್ಯಾಗ್ ಮಾಡಿ ದೂರು ನೀಡಿದ ವ್ಯಕ್ತಿ

    ಹೈದರಾಬಾದ್: ಆನ್‍ಲೈನ್ ಮೂಲಕ ಆರ್ಡರ್ ಮಾಡಿ ತರಿಸಿಕೊಂಡ ಬಿರಿಯಾನಿಯಲ್ಲಿ ಲೆಗ್ ಪೀಸ್ ಇರಲಿಲ್ಲ ಎಂದು ವ್ಯಕ್ತಿಯೊಬ್ಬ ಟ್ವಿಟ್ಟರ್‍ನಲ್ಲಿ ಸಚಿವ ಕೆಟಿ ರಾಮರಾವ್ ಅವರನ್ನು ಟ್ಯಾಗ್ ಮಾಡಿ ದೂರು ನೀಡಿದ್ದು ಇದೀಗ ಸುದ್ದಿಯಾಗುತ್ತಿದೆ.

    ತೊಟಕುರಿ ರಘುಪತಿ ಎಂಬಾತ ಆರ್ಡರ್ ಮಾಡಿ ತರಿಸಿಕೊಂಡ ಬಿರಿಯಾನಿಯ ಬಗ್ಗೆ ಟ್ವಿಟ್ಟರ್‍ನಲ್ಲಿ ಅತೃಪ್ತಿ ವ್ಯಕ್ತಪಡಿಸಿದ್ದಾನೆ. ಬಿರಿಯಾನಿಯ ಗುಣಮಟ್ಟ ಚೆನ್ನಾಗಿರಲಿಲ್ಲ ಎನ್ನುವುದು ಆತನ ತಕರಾರು. ತಾನು ಆರ್ಡರ್ ಮಾಡಿದ್ದ ಬಿರಿಯಾನಿಯಲ್ಲಿ ಹೆಚ್ಚುವರಿ ಮಸಾಲೆ ಮತ್ತು ಹೆಚ್ಚುವರಿ ಚಿಕನ್ ಲೆಗ್ ಪೀಸ್ ಇರಲಿಲ್ಲ ಎಂದು ಅದರ ಫೋಟೊದೊಂದಿಗೆ ಅಸಮಾಧಾನವನ್ನು ಜೊಮ್ಯಾಟೋಗೆ ದೂರು ನೀಡಿದ್ದಾನೆ. ಆದರೆ ತನ್ನ ಟ್ವಿಟ್ಟರ್ ಪೋಸ್ಟ್‌ನಲ್ಲಿ ತೆಲಂಗಾಣದ ನಗರಾಭಿವೃದ್ಧಿ ಸಚಿವ ಕೆಟಿ ರಾಮರಾವ್ ಅವರನ್ನೂ ಟ್ಯಾಗ್ ಮಾಡಿದ್ದಾನೆ. ಇದನ್ನೂ ಓದಿ:  ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಮಕ್ಕಳ ಕ್ಯೂಟ್ ವೀಡಿಯೋ ವೈರಲ್

    ಕೆಟಿ ರಾಮರಾವ್ ಅವರ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಅನ್ನು ಕೂಡ ಟ್ಯಾಗ್ ಮಾಡಿದ್ದು ಇದಕ್ಕೆ ತಮಾಷೆಯ ತಿರುವು ನೀಡಿದೆ. ಟ್ವಿಟ್ಟರ್‍ನಲ್ಲಿ ಕೋವಿಡ್ ಸಂಬಂಧಿ ಮನವಿಗಳು ಹಾಗೂ ಅಹವಾಲುಗಳನ್ನು ಪರಿಶೀಲಿಸಿ ಅದಕ್ಕೆ ನೆರವು ನೀಡುವ ಕೆಲಸ ಮಾಡುತ್ತಿರುವ ಕೆಟಿಆರ್, ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೆ ನನ್ನನ್ನೇಕೆ ಟ್ಯಾಗ್ ಮಾಡಿದ್ದೀರಿ ಸಹೋದರ? ನನ್ನಿಂದ ನೀವು ಏನನ್ನು ನಿರೀಕ್ಷಿಸಿದ್ದೀರಿ ಎಂದು ಕೆಟಿಆರ್ ಪ್ರಶ್ನಿಸಿದ್ದಾರೆ. ಕೆಟಿಆರ್ ಪ್ರತಿಕ್ರಿಯೆ ನೀಡಿ ಟ್ವೀಟ್‍ಗೆ ರಿಪ್ಲಯ್ ಮಾಡಿದ್ದಾರೆ.

    ಈ ಟ್ವೀಟ್ ಸಾಂಕ್ರಾಮಿಕದಿಂದ ನಲುಗಿದ್ದ ಜನರಲ್ಲಿ ನಗುಮೂಡಿಸಲು ನೆರವಾಗುತ್ತಿದೆ. ನೆಟ್ಟಿಗರು ಕೆಟಿಆರ್ ಅವರ ಪ್ರತಿಕ್ರಿಯೆಯನ್ನು ಮೀಮ್‍ಗಳಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಲೆಗ್ ಪೀಸ್ ಅನ್ನು ಕಡ್ಡಾಯ ಮಾಡಿಸಿ ಎಂದು ಕೆಲವರು ಕೆಟಿಆರ್‍ಗೆ ಸಲಹೆ ನೀಡಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ನಗುವಂತೆ ಮಾಡಿದ್ದಕ್ಕೆ ಕೆಟಿಆರ್‍ಗೆ ಧನ್ಯವಾದ ಎಂದು ಕೆಲವು ಹೇಳಿದ್ದಾರೆ. ಉತ್ತಮ ಬಿರಿಯಾನಿ ಪಡೆಯುವುದು ನಿಜಕ್ಕೂ ರಾಷ್ಟ್ರೀಯ ಮಹತ್ವದ ಸಂಗತಿಯಾಗಿದೆ ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ.

    ಬಿರಿಯಾನಿಯೊಂದರ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಚಿವರು ಹಾಗೂ ಸಂಸದರನ್ನೂ ಚರ್ಚೆಗೆ ಎಳೆದು ತಂದಿದೆ. ಬಿರಿಯಾನಿ ಪ್ರಿಯನೊಬ್ಬನ ಕಿತಾಪತಿ ಈಗ ತಮಾಷೆಯ ವಿಚಾರವಾಗಿ ಚರ್ಚೆಯಾಗುತ್ತಿದೆ.

  • ತಾಯಿಯ ಶವದ ಎದುರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಗ

    ತಾಯಿಯ ಶವದ ಎದುರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಗ

    ಹೈದರಾಬಾದ್: ಹೆತ್ತವರ ಆಶೀರ್ವಾದೊಂದಿಗೆ ಹೊಸ ಜೀವನಕ್ಕೆ ಕಾಲಿಡಬೇಕೆಂದು ವಿದೇಶದಿಂದ ಭಾರತಕ್ಕೆ ಬಂದಿದ್ದ ಮಗ, ತಾಯಿಯ ಶವ ಮುಂದಿಟ್ಟುಕೊಂಡು ಪತ್ನಿಯ ಕೊರಳಿಗೆ ತಾಳಿ ಕಟ್ಟಿದ ಹೃದಯ ವಿದ್ರಾವಕ ಘಟನೆ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ಇಸ್ಮಾಯಿಲ್ ಖಾನ್ಪೇಟ್ನಲ್ಲಿ ನಡೆದಿದೆ.

    ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ರಾಕೇಶ್‍ಗೆ ಮೇ 21ರಂದು ಮದುವೆ ನಿಶ್ಚಯವಾಗಿತ್ತು. ಮದುವೆಗೆಂದು ಆತ ತನ್ನೂರಿಗೆ ಮರಳಿದ್ದ. ಆದರೆ ಇವರ ತಾಯಿ ಪಾಲ್ಪಾನೂರಿ ರೇಣುಕಾ (49) ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಹೈದರಾಬಾದ್ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಕೆಲವು ದಿನಗಳ ಹಿಂದಷ್ಟೇ ರೇಣುಕಾ ಅವರ ಸಹೋದರನೂ ಕೂಡ ಕೋವಿಡ್‍ನಿಂದ ಬಲಿಯಾಗಿದ್ದರು. ಹೀಗಾಗಿ ರಾಕೇಶ್ ತನ್ನ ವಿವಾಹವನ್ನು ಮುಂದೂಡಿ, ಅಮ್ಮ ಗುಣಮುಖರಾಗಿ ಕ್ಷೇಮವಾಗಿ ಮನೆಗೆ ಬರಲೆಂದು ಕಾಯುತ್ತಿದ್ದ. ಇದನ್ನೂ ಓದಿ: ಸೇತುವೆ ಮೇಲೆ ನಡೆಯಿತು ವಿಶೇಷ ಮದುವೆ

    ಆದರೆ ತಾಯಿ ಅವರೂ ಕೂಡಾ ಕೊರಾನಾದಿಂದ ಸಾವನ್ನಪ್ಪಿದರು. ಬಳಿಕ ಆಸ್ಪತ್ರೆಯಿಂದ ಗ್ರಾಮಕ್ಕೆ ಮೃತದೇಹವನ್ನು ಕರೆತರಲಾಯಿತು. ಈ ವೇಳೆ, ಅಮ್ಮನ ಮೃತದೇಹದ ಮುಂದೆಯೇ ಭಾರವಾದ ಮನಸ್ಸು, ದು:ಖದ ಮಡುವಿನಲ್ಲೇ ರಾಕೇಶ್ ಹಾಗೂ ವಧು ಪರಸ್ಪರ ಹಾರ ಬದಲಾಯಿಸಿಕೊಂಡರು. ಈ ಮೂಲಕ ತೀರಿಹೋದ ಅಮ್ಮನ ಶವದ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಮನಕಲಕುವ ಘಟನೆಗೆ ಸಾಕ್ಷಿಯಾಗಿ ಅಲ್ಲಿ ನೆರೆದಿದ್ದವರ ಕಣ್ಣಾಲಿಗಳು ತೇವಗೊಂಡವು. ಅಮ್ಮನ ಸಮ್ಮುಖದಲ್ಲಿಯೇ ಮದುವೆಯಾಗ ಬೇಕು ಎಂದು ಆಸೆ ಇಟ್ಟುಕೊಂಡಿದ್ದ ರಾಕೇಶ್

  • ದಿವಂಗತ ನಟ ಎನ್‍ಟಿಆರ್‌ಗೆ ಭಾರತ ರತ್ನ ನೀಡಿ – ಮೆಗಾಸ್ಟಾರ್ ಮನವಿ

    ದಿವಂಗತ ನಟ ಎನ್‍ಟಿಆರ್‌ಗೆ ಭಾರತ ರತ್ನ ನೀಡಿ – ಮೆಗಾಸ್ಟಾರ್ ಮನವಿ

    ಹೈದರಾವಾದ್: ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿಯವರು ತೆಲುಗಿನ ಖ್ಯಾತ ದಿವಂಗತ ನಟ ನಂದಮೂರಿ ತಾರಕ ರಾಮರಾವ್‍ರವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿಮಾಡಿದ್ದಾರೆ.

    ತೆಲುಗು ಚಿತ್ರರಂಗ ಬೆಳೆಸಲು ಪ್ರಮುಖ ಪಾತ್ರವಹಿಸಿದ ಎನ್‍ಟಿಆರ್‌ರವರಿಗೆ ಇಂದು 98ನೇ ವರ್ಷದ ಜನುಮ ದಿನ. ದಶಕಗಳ ಕಾಲ ಟಾಲಿವುಡ್‍ನಲ್ಲಿ ಮಿಂಚುವ ಮೂಲಕ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದ ಎನ್‍ಟಿಆರ್‌ರವರು ಆಂಧ್ರ ಪ್ರದೇಶದಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

    ಇಂದು ಮೆಗಾಸ್ಟಾರ್ ಚಿರಂಜೀವಿಯವರು ಎನ್‍ಟಿಆರ್‌ರವರ 98ನೇ ವರ್ಷದ ಹುಟ್ಟು ಹಬ್ಬದ ವಿಶೇಷ ದಿನದಂದು ಸ್ಮರಿಸಿಕೊಂಡಿದ್ದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಖ್ಯಾತ ಹಿನ್ನೆಲೆ ಗಾಯಕ ಭೂಪೆನ್ ಹಜಾರಿಕಾರಿಗೆ ಮರಣೋತ್ತರ ನಂತರ ದೇಶದತ್ಯುನ್ನತ ನಾಗರಿಕ ಗೌರವ ಭಾರತ ರತ್ನ ಪ್ರಶಸ್ತಿ ನೀಡಲಾಗಿತ್ತು. ಹಾಗೆಯೇ ತೆಲುಗು ರಾಜ್ಯದ ಹೆಮ್ಮೆಯ ನಾಯಕ ನಂದಮೂರಿ ತಾರಕ್ ರಾಮರಾವ್‍ಗೆ ಭಾರತ ರತ್ನ ಕೊಟ್ಟರೆ ಅದು ನಮ್ಮೆಲ್ಲರ ಹೆಮ್ಮೆ. ತಾರಕ್ ರಾಮ್‍ರಾವ್‍ರವರ 100ನೇ ಜನುಮದಿನದ ಸಂದರ್ಭದಲ್ಲಿ ಭಾರತ ರತ್ನ ಗೌರವ ನೀಡಿದರೆ, ಅದು ತೆಲುಗು ಪ್ರಜೆಗಳನ್ನು ಗೌರವಿಸದಂತೆ ಎಂದು ಟ್ವೀಟ್ ಮಾಡಿದ್ದಾರೆ.

    ದಿವಂಗತ ನಟ ನಂದಮೂರಿ ತಾರಕ ರಾಮರಾವ್‍ರವರ ಹುಟ್ಟುಹಬ್ಬದ ಪ್ರಯುಕ್ತ ಸಿನಿ ತಾರೆಯರು ಹಾಗೂ ಅಭಿಮನಿಗಳು ಸೋಶಿಯಲ್ ಮೀಡಿಯಾ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ.

  • ಅಕ್ಕ, ತಂಗಿ ಇಬ್ಬರಿಗೂ ತಾಳಿಕಟ್ಟಿದ ವರ

    ಅಕ್ಕ, ತಂಗಿ ಇಬ್ಬರಿಗೂ ತಾಳಿಕಟ್ಟಿದ ವರ

    ಹೈದರಾಬಾದ್: ಅಕ್ಕ, ತಂಗಿ ಇಬ್ಬರನ್ನು ಮದುವೆಯಾಗಿ ಸುದ್ದಿಯಾಗಿದ್ದ ಕೋಲಾರದ ಯುವಕನಂತೆ ಮತ್ತೊಬ್ಬ ಯುವಕ  ಇಬ್ಬರು ಯುವತಿಯರ ಜೊತೆಗೆ ಸಪ್ತಪದಿ ತುಳಿದಿರುವ ಘಟನೆ ತೆಲಂಗಾಣದ ರಾಜ್ಯದ ಮೆದಕ್ ಜಿಲ್ಲೆಯ ಅನ್ಸಾನ ಪಲ್ಲಿ ಗ್ರಾಮದಲ್ಲಿ ನಡೆದಿದೆ.

    ಗೋಪಾಲ ವೆಂಕಟೇಶ್ ಅವರ ಮಕ್ಕಳಾದ ಸ್ವಾತಿ, ಶ್ವೇತಾ ಇಬ್ಬರು ಒಬ್ಬನನ್ನೇ ಮದುವೆಯಾಗಿದ್ದಾರೆ. ಪೋಷಕರು ಸಂತೋಷದಿಂದ ಇಬ್ಬರು ಹೆಣ್ಣುಮಕ್ಕಳನ್ನು ಒಬ್ಬವರನಿಗೆ ಕೊಟ್ಟು ಮದುವೆ ಮಾಡಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ.

    ಸ್ವಾತಿಗೆ ಸಂಬಂಧಿಕರ ಹುಡುಗ ಬಾಲರಾಜುನೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಶ್ವೇತಾ ಮಾನಸಿಕ ಅಸ್ವಸ್ಥಳಾಗಿದ್ದಳು. ಹಾಗಾಗಿ ಅಕ್ಕ ತಂಗಿ ಇಬ್ಬರನ್ನೂ ಮದುವೆ ಆಗುವಂತೆ ಸ್ವಾತಿ ಹೇಳಿದ್ದು, ಕುಟುಂಬಸ್ಥರ ಸಮ್ಮುಖದಲ್ಲಿ ಬಾಲರಾಜು ಏಕಕಾಲಕ್ಕೆ ತಾಳಿ ಕಟ್ಟಿದ್ದಾನೆ ಎನ್ನಲಾಗುತ್ತಿದೆ.

  • ಸೋಂಕು ಮಕ್ಕಳಿಗೆ ಹಬ್ಬುತ್ತದೆ ಎಂದು ಆತ್ಮಹತ್ಯೆ ಮಾಡಿಕೊಂಡ ದಂಪತಿ

    ಸೋಂಕು ಮಕ್ಕಳಿಗೆ ಹಬ್ಬುತ್ತದೆ ಎಂದು ಆತ್ಮಹತ್ಯೆ ಮಾಡಿಕೊಂಡ ದಂಪತಿ

    ಹೈದರಾಬಾದ್: ಕೊರೊನಾ ಸೋಂಕಿನಿಂದ ಬಳಲುತ್ತಿರುವ ದಂಪತಿ ನಮ್ಮಲ್ಲಿರುವ ಸೋಂಕು ಮಕ್ಕಳಿಗೆ ಬಂದು ಬಿಟ್ಟರೆ ಎನ್ನುವ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡಲ್ಲಿ ನಡೆದಿದೆ.

    ಪ್ರಸಾದ್(40) ಮತ್ತು ಅವರ ಪತ್ನಿ ಭಾರತಿ(37) ಮೃತರಾಗಿದ್ದಾರೆ. ಇವರು ಕೊರೊನಾ ಸೋಂಕಿನ ಪರೀಕ್ಷೆಯನ್ನು ಮಾಡಿಸಿದ್ದರು. ವರದಿ ಕೂಡ ಪಾಸಿಟಿವ್ ಬಂದಿರುವುದರ ಕುರಿತಾಗಿ ದಂಪತಿ ಭಯಭೀತರಾಗಿ ಸಾವನ್ನಪ್ಪಿದ್ದಾರೆ.

    ನಮಗೆ ಸೋಂಕು ಬಂದಿದೆ. ನಮ್ಮಿಂದ ಆ ಸೋಂಕು ಮಕ್ಕಳಿಗೂ ಹರಡಿ ಬಿಡುಬಹುದು ಎಂದು ಭಯ ಶುರುವಾಗಿದೆ. ಹಾಗಾಗದಿರಲಿ ಎನುವ ಕಾರಣಕ್ಕಾಗಿ ದಂಪತಿ ಒಂದು ಕಠಿಣ ನಿರ್ಧಾರ ಮಾಡಿದ್ದಾರೆ. ಇಬ್ಬರೂ ಒಟ್ಟಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ, ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಸುದ್ದಿ ಮೂಲಗಳಿಂದ ತಿಳಿದುಬಂದಿದೆ.