Tag: Hyderabad

  • ಶ್ವಾನದ ಸವಿನೆನಪಿಗೆ ಕಂಚಿನ ಪ್ರತಿಮೆ – ಬಿಡಿಸಲಾಗದ ಮಾಲೀಕ, ಶ್ವಾನದ ನಂಟು

    ಶ್ವಾನದ ಸವಿನೆನಪಿಗೆ ಕಂಚಿನ ಪ್ರತಿಮೆ – ಬಿಡಿಸಲಾಗದ ಮಾಲೀಕ, ಶ್ವಾನದ ನಂಟು

    ಹೈದರಾಬಾದ್: ಸಾಮಾನ್ಯವಾಗಿ ಜನರು ಸಾಕು ಪ್ರಾಣಿಗಳನ್ನು ತಮ್ಮ ಮನೆಯ ಸದಸ್ಯರಂತೆ ಭಾವಿಸುತ್ತಾರೆ. ಮನುಷ್ಯರಂತೆ ಅನೇಕ ಮಂದಿ ಪ್ರಾಣಿಗಳೊಂದಿಗೆ ಕೂಡ ಉತ್ತಮ ಪ್ರೀತಿ ಹಾಗೂ ಬಾಂಧವ್ಯವನ್ನು ಹೊಂದಿರುತ್ತಾರೆ. ತಮ್ಮ ನೆಚ್ಚಿನ ಶ್ವಾನ, ಬೆಕ್ಕು ಮತ್ತು ಇತರೆ ಸಾಕು ಪ್ರಾಣಿಗಳು ಸತ್ತಾಗ ದುಃಖ ವ್ಯಕ್ತಪಡಿಸುತ್ತಾರೆ. ಆದರೆ ಆಂಧ್ರ ಪ್ರದೇಶದ ವ್ಯಕ್ತಿಯೊಬ್ಬರು 5 ವರ್ಷಗಳ ಹಿಂದೆ ನಿಧನ ಹೊಂದಿದ ಶ್ವಾನದ ನೆನಪಿಗಾಗಿ ಕಂಚಿನ ಪ್ರತಿಮೆಯನ್ನು ಸ್ಥಾಪಿಸಿ ಪೂಜೆ ಸಲ್ಲಿಸುತ್ತಿದ್ದಾರೆ.

    ಹೌದು, ಆಂಧ್ರ ಪ್ರದೇಶದ ಪ್ರಕಾಶ್ ಎಂಬವರು 9 ವರ್ಷಗಳ ಕಾಲ ಶ್ವಾನವನ್ನು ಬಹಳ ಪ್ರೀತಿಯಿಂದ ಸಾಕಿದ್ದರು. ಆದರೆ 5 ವರ್ಷದ ಹಿಂದೆ ಶ್ವಾನ ಮೃತಪಟ್ಟಿದೆ. ಅಂದಿನಿಂದ ಶ್ವಾನದ ಸವಿನೆನಪಿಗಾಗಿ ಪ್ರತಿಮೆಯನ್ನು ಸ್ಥಾಪಿಸಿ ಪ್ರತಿವರ್ಷ ಶ್ವಾನ ಪುಣ್ಯ ಸ್ಮರಣೋತ್ಸವವನ್ನು ಆಚರಿಸುತ್ತಾರೆ.

    ಈ ವೇಳೆ ಶ್ವಾನದ ಪ್ರತಿಮೆಗೆ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿ, ಗ್ರಾಮಸ್ಥರಿಗೆ ಊಟವನ್ನು ಆಯೋಜಿಸುತ್ತಾರೆ. ಇದೀಗ ಶ್ವಾನದ ಪ್ರತಿಮೆಗೆ ಪೂಜೆ ಮಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಈ ಕುರಿತಂತೆ ಮಾಧ್ಯಮದೊಂದಿಗೆ ಮಾತನಾಡಿದ ಪ್ರಕಾಶ್, ನಾವು ಈ ಪ್ರಾಣಿಯನ್ನು ನಮ್ಮ ಸ್ವಂತ ಮಗುವಿನಂತೆ ಭಾವಿಸಿದ್ದೆವು. ಹಲವಾರು ವರ್ಷಗಳ ಕಾಲ ಬಹಳ ಪ್ರೀತಿಯಿಂದ ಶ್ವಾನವನ್ನು ಸಾಕಿದ್ದೆವು. ಶ್ವಾನ ಜೀವನ ಪೂರ್ತಿ ಸಹಕಾರಿ ಮತ್ತು ನಿಯತ್ತಾಗಿತ್ತು. ಇದೀಗ ಶ್ವಾನದ ಐದನೇ ಪುಣ್ಯಸ್ಮರಣೆಯನ್ನು ಆಚರಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬಾಲಕಿಯ ಶವ ಪತ್ತೆ

  • ‘ಆರ್‌ಆರ್‌ಆರ್’ ಸೆಟ್‍ನಲ್ಲಿ ಆಲಿಯಾ ವರ್ಕೌಟ್

    ‘ಆರ್‌ಆರ್‌ಆರ್’ ಸೆಟ್‍ನಲ್ಲಿ ಆಲಿಯಾ ವರ್ಕೌಟ್

    ಹೈದರಾಬಾದ್: ಬಾಲಿವುಡ್ ನಟಿ ಆಲಿಯಾ ಭಟ್ ತಮ್ಮ ಮುಂದಿನ ಸಿನಿಮಾ ಆರ್‌ಆರ್‌ಆರ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆದರೂ ಈ ಮಧ್ಯೆ ತಮ್ಮ ದಿನನಿತ್ಯದ ವರ್ಕೌಟ್ ಮಾತ್ರ ಮಿಸ್ ಮಾಡದೇ ಮಾಡುತ್ತಿದ್ದಾರೆ. ಸದ್ಯ ಜಿಮ್‍ನಲ್ಲಿ ಕ್ಲಿಕ್ಕಿಸಿಕೊಂಡ ಸೆಲ್ಫಿಯೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಬುಧವಾರ ಬೆಳಗ್ಗೆ ಆಲಿಯಾ ಭಟ್ ಆರ್‌ಆರ್‌ಆರ್ ಸಿನಿಮಾದ ಚಿತ್ರೀಕರಣಕ್ಕಾಗಿ ಚಿತ್ರತಂಡವನ್ನು ಸೇರಿದ್ದಾರೆ. ಚಿತ್ರೀಕರಣ ಆರಂಭವಾಗುವುದಕ್ಕೂ ಮುನ್ನ ಜಿಮ್‍ನಲ್ಲಿ ವರ್ಕೌಟ್ ಮಾಡುವ ಮೂಲಕ ಬೆವರಿಳಿಸಿದ್ದಾರೆ.

    ಇದಕ್ಕೂ ಮುನ್ನ ಆರ್‌ಆರ್‌ಆರ್ ಸೆಟ್‍ನಲ್ಲಿ ಡ್ರೆಸ್ಸಿಂಗ್ ರೂಮ್‍ನ ಕನ್ನಡಿ ಮುಂದೆ ಕುಳಿತು ರೆಡಿಯಾಗುತ್ತಿರುವ ಫೋಟೋವನ್ನು ಆಲಿಯಾ ಭಟ್ ಕ್ಲಿಕ್ಕಿಸಿಕೊಂಡಿದ್ದು, ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ರೈಸ್ ಮತ್ತು ಶೈನ್, ಬೆಳಗ್ಗೆ 6.41ಕ್ಕೆ ಎಂದು ಟೈಮ್ ಸ್ಟ್ಯಾಂಪ್‍ನಲ್ಲಿ ಹಾಕಿದ್ದಾರೆ.

    ಆರ್‌ಆರ್‌ಆರ್ ಸ್ವಾತಂತ್ರ್ಯ ಪೂರ್ವ ಯುಗದಲ್ಲಿ ನಡೆದ ಕಥಾ ಹಂದರವಾಗಿದ್ದು, ಜ್ಯೂನಿಯರ್ ಎನ್‍ಟಿಆರ್ ಸ್ವಾತಂತ್ರ್ಯ ಹೋರಾಟಗಾರ ಕೋಮರಮ್ ಭೀಮ್ ಮತ್ತು ರಾಮ್‍ಚರಣ್ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ರಾಮ್ ಚರಣ್‍ಗೆ ಜೋಡಿಯಾಗಿ ಸೀತಾ ಪಾತ್ರದಲ್ಲಿ ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ. ಅಕ್ಟೋಬರ್ 13ರಂದು ಆರ್‌ಆರ್‌ಆರ್ ಬೆಳ್ಳಿ ಪರದೆ ಮೇಲೆ ತೆರೆ ಕಾಣಲಿದೆ. ಇದನ್ನೂ ಓದಿ:ಬದುಕಿರುವುದಕ್ಕಾಗಿ ನಾನು ಅದೃಷ್ಟವಂತೆ: ಶಿಲ್ಪಾ ಶೆಟ್ಟಿ

  • ತಿರುಪತಿ ತಿಮ್ಮಪ್ಪನಿಗೆ ಆರೂವರೆ ಕೆ.ಜಿಯ ಚಿನ್ನದ ಖಡ್ಗ ನೀಡಿದ ದಂಪತಿ

    ತಿರುಪತಿ ತಿಮ್ಮಪ್ಪನಿಗೆ ಆರೂವರೆ ಕೆ.ಜಿಯ ಚಿನ್ನದ ಖಡ್ಗ ನೀಡಿದ ದಂಪತಿ

    ಹೈದ್ರಾಬಾದ್‍: ತಿರುಮಲ ವೇಂಕಟೇಶ್ವರ ದೇವಸ್ಥಾನಕ್ಕೆ ಹೈದ್ರಾಬಾದ್‍ನ ಭಕ್ತರೊಬ್ಬರು ದುಬಾರಿ ಬೆಲೆಯ ಚಿನ್ನದ ಖಡ್ಗ ನೀಡಿದ್ದಾರೆ.

    ಹೈದರಾಬಾದ್‍ನ ಭಕ್ತ ಎಂ.ಶ್ರೀನಿವಾಸ್ ಪ್ರಸಾದ್ ಮತ್ತು ಅವರ ಪತ್ನಿ ವೆಂಕಟೇಶ್ವರ ಸ್ವಾಮಿಗೆ 4 ಕೋಟಿ ರೂಪಾಯಿ ಮೌಲ್ಯದ 6.5 ಕೆಜಿ ತೂಕವುಳ್ಳ ಚಿನ್ನದ ಖಡ್ಗವನ್ನು ದೇವರಿಗೆ ಅರ್ಪಿಸಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದಾರೆ. ದೇವರಿಗೆ ಖಡ್ಗವನ್ನು ನೀಡುವ ಮೊದಲು ತಿರುಮಲ ಕಲೆಕ್ವಿವ್ ಅತಿಥಿ ಗೃಹದಲ್ಲಿ ಭಾನುವಾರ ಮಾಧ್ಯಮಗಳ ಮುಂದೆ ಚಿನ್ನದ ಖಡ್ಗವನ್ನು ಪ್ರದರ್ಶಿಸಿದ್ದಾರೆ.

    ಈ ದಂಪತಿ ಕಳೆದ ವರ್ಷವೇ ದೇವಸ್ಥಾನಕ್ಕೆ ಖಡ್ಗ ಕಾಣಿಕೆಯಾಗಿ ಕೊಡಬೇಕು ಎಂದು ನಿರ್ಧರಿಸಿದ್ದೇವು. ಆದರೆ ಕೊರೊನಾ ಇರುವ ಕಾರಣದಿಂದಾಗಿ ಕೊಡಲು ಸಾಧ್ಯವಾಗಿರಲಿಲ್ಲ ಎಂದು ದಂಪತಿ ಹೇಳಿಕೊಂಡಿದ್ದಾರೆ.

    ಈ ಖಡ್ಗವನ್ನು ತಮಿಳುನಾಡಿನ ಕೊಯುಮತ್ತೂರಿನಲ್ಲಿರುವ ವಿಶೇಷ ಆಭರಣಕಾರರು ತಯಾರಿಸಿದ್ದಾರೆ. ಆರುತಿಂಗಳ ಕಾಲಾವಕಾಶದಲ್ಲಿ ಖಡ್ಗ ತಯಾರಿಸಲಾಗಿದೆ. ಸುಮಾರು ಆರೂವರೆ ಕೆಜಿ ತೂಕವಿದೆ. ಸರಿಸುಮಾರಾಗಿ 4 ಕೋಟಿ ರೂಪಾಯಿಯಾಗಿದೆ.

    ಇದಕ್ಕೂ ಮೊದಲು ತಮಿಳುನಾಡಿನ ತೆನಿ ಮೂಲದ ಜವಳಿ ವ್ಯಾಪಾರಿ ತಂಗಾ ದೋರೈ ಅವರು 2018ರಲ್ಲಿ 1.75 ಕೋಟಿ ರೂಪಾಯಿ ಬೆಲೆ ಬಾಳುವ ಚಿನ್ನದ ಕತ್ತಿಯನ್ನು ವೆಂಕಟೇಶ್ವರ ಸ್ವಾಮಿಗೆ ಅರ್ಪಿಸಿದ್ದರು.

  • 11 ವರ್ಷದಿಂದ ರಸ್ತೆ ಗುಂಡಿ ಮುಚ್ಚುತ್ತಿರುವ ದಂಪತಿ – 2,000 ಗುಂಡಿ ಮುಚ್ಚಲು 40 ಲಕ್ಷ ವೆಚ್ಚ

    11 ವರ್ಷದಿಂದ ರಸ್ತೆ ಗುಂಡಿ ಮುಚ್ಚುತ್ತಿರುವ ದಂಪತಿ – 2,000 ಗುಂಡಿ ಮುಚ್ಚಲು 40 ಲಕ್ಷ ವೆಚ್ಚ

    ಹೈದರಾಬಾದ್: ಭಾರತದ ರಸ್ತೆಗಳಲ್ಲಿ ಗುಂಡಿಗಳು ಸರ್ವೇ ಸಾಮಾನ್ಯ. ಅದರಲ್ಲಿಯೂ ಮಳೆಗಾಲದಲ್ಲಿ ಹೆಚ್ಚಾಗಿ ರಸ್ತೆ ಗುಂಡಿಗಳನ್ನು ಕಾಣಬಹುದು. ಇದರಿಂದ ಜನರಿಗೆ ಬಹಳಷ್ಟು ತೊಂದರೆಯುಂಟಾಗುತ್ತದೆ. ಈ ಭೀತಿಯನ್ನು ತೊಡೆದು ಹಾಕಲು ಸ್ಥಳೀಯ ಅಧಿಕಾರಿಗಳು ಕೆಲಸ ಮಾಡಬೇಕಾಗುತ್ತದೆ. ಆದರೆ ಅವರು ಕೆಲಸವನ್ನು ಮಾಡದ ಕಾರಣ ಹೈದರಾಬಾದ್‍ನ ವೃದ್ಧ ದಂಪತಿ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಲು ಮುಂದಾಗಿದ್ದಾರೆ.

    ಹೌದು, ಅಪಘಾತವನ್ನು ತಪ್ಪಿಸಲು ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿ ಹೈದರಾಬಾದ್‍ನ ವೃದ್ಧ ದಂಪತಿ ಕಳೆದ 11 ವರ್ಷದಿಂದ 2,000ಕ್ಕೂ ಹೆಚ್ಚು ಗುಂಡಿಗಳನ್ನು ಸರಿಪಡಿಸಿದ್ದಾರೆ. ರೋಡ್ ಡಾಕ್ಟರ್ ಎಂದೇ ಖ್ಯಾತಿ ಪಡೆದಿರುವ ಹೈದರಾಬಾದ್‍ನ ಗಂಗಾಧರ್ ತಿಲಕ್ ಕಟ್ನಮ್(73) ಮತ್ತು ಅವರ ಪತ್ನಿ ವೆಂಕಟೇಶ್ವರಿ ಕಟ್ನಮ್(64) ಕಾರಿನಲ್ಲಿ ಹೊರಟು, ಅವರಿಗೆ ಕಾಣಿಸುವ ರಸ್ತೆಯಲ್ಲಿರುವ ಎಲ್ಲಾ ಗುಂಡಿಗಳನ್ನು ಪ್ರತಿದಿನ ಮುಚ್ಚುತ್ತಾರೆ.

    ಗುಂಡಿಗಳಿಂದಾಗಿ ರಸ್ತೆಯಲ್ಲಿ ಅನೇಕ ಅಪಘಾತಗಳು ಸಂಭವಿಸಿದೆ. ಹೀಗಾಗಿ ಈ ವಿಚಾರವಾಗಿ ನಾನು ಪೊಲೀಸರು ಹಾಗೂ ಪುರಸಭೆಯ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ನಂತರ ಈ ಗುಂಡಿಗಳನ್ನು ಮುಚ್ಚಲು ನಾನೇ ನಿರ್ಧರಿಸಿದೆ ಎಂದು ಗಂಗಾಧರ್ ತಿಲಕ್ ಕಟ್ನಮ್ ತಿಳಿದ್ದಾರೆ.

    ಗಂಗಾಧರ್ ತಿಲಕ್ ಕಟ್ನಮ್‍ರವರು ಸುಮಾರು 35 ವರ್ಷಗಳ ಕಾಲ ಭಾರತದ ರೈಲ್ವೇ ಇಲಾಖೆಯ ಉದ್ಯೋಗಿಯಾಗಿ ಕೆಲಸ ಮಾಡಿದ್ದು, ನಿವೃತ್ತಿ ಬಳಿಕ ಸಾಫ್ಟ್‍ವೇರ್ ಡಿಸೈನ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸಲು ಹೈದರಾಬಾದ್‍ಗೆ ಬಂದಿದ್ದಾರೆ. ಅಂದಿನಿಂದ ಇಲ್ಲಿಯವರೆಗೂ ನಗರಾದ್ಯಂತ ಇರುವ ಗುಂಡಿಗಳೆಲ್ಲವನ್ನು ಮುಚ್ಚುತ್ತಾ ಬಂದಿದ್ದಾರೆ. ಈ ಕಾರ್ಯಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ತಮ್ಮ ಪಿಂಚಣಿ ಹಣವನ್ನು ಬಳಸಿ ಖರೀದಿಸಲಾಗುತ್ತಿದ್ದು, ಕಳೆದ 11 ವರ್ಷಗಳಿಂದ 2,030 ಗುಂಡಿಗಳನ್ನು ಮುಚ್ಚಲು 40 ಲಕ್ಷ ರೂ ಖರ್ಚು ಮಾಡಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ರೈಲಿನ ಕೆಳಗೆ ಸಿಲುಕಿದ ವೃದ್ಧ – ಸಾವಿನ ಅಂಚಿನಿಂದ ಪಾರು

  • ಸಾಲ ತೀರಿಸಲು ಕಿಡ್ನಿ ಮಾರಾಟಕ್ಕೆ ಮುಂದಾದ ದಂಪತಿ- 40 ಲಕ್ಷ ಕಳೆದುಕೊಂಡ್ರು

    ಸಾಲ ತೀರಿಸಲು ಕಿಡ್ನಿ ಮಾರಾಟಕ್ಕೆ ಮುಂದಾದ ದಂಪತಿ- 40 ಲಕ್ಷ ಕಳೆದುಕೊಂಡ್ರು

     ಹೈದ್ರಾಬಾದ್: ದಂಪತಿ ಸಾಲ ತೀರಿಸಲು ಹಣವಿಲ್ಲದೇ ಕಿಡ್ನಿ ಮಾರಲು ಮುಂದಾಗಿ 40 ಲಕ್ಷ ಕಳೆದುಕೊಂಡಿರುವ ಘಟನೆ ಹೈದರಬಾದ್‍ನಲ್ಲಿ ನಡೆದಿದೆ.


    ಸ್ಟೇಷನರಿ ಅಂಗಡಿಯೊಂದನ್ನು ಇಟ್ಟುಕೊಂಡಿದ್ದ ದಂಪತಿ ವ್ಯಾಪಾರ ಹಾಗೂ ಮನೆ ನಿರ್ಮಾಣಕ್ಕಾಗಿ ಸಾಲ ತೆಗೆದುಕೊಂಡಿದ್ದರಂತೆ. ಲಾಕ್‍ಡೌನ್ ಇದ್ದಿದ್ದರಿಂದ ಯಾವುದೇ ಆದಯ ಬರುತ್ತಿರಲಿಲ್ಲ. ಹೀಗಾಗಿ 1.5 ಲಕ್ಷ ಕೋಟಿ ಸಾಲ ಮಾಡಿ ಮನೆ ಅಂತಸ್ತಿನ ಕಟ್ಟಡ ನಿರ್ಮಿಸಿದ್ದರು. ಈ ಸಾಲ ತೀರಿಸಲು ಬೇರೆ ದಾರಿ ಸಿಗದೇ ಕಿಡ್ನಿ ಮಾರಾಟ ಮಾಡಲು ಮುಂದಾಗಿದ್ದಾರೆ. ಕಿಡ್ನಿ ಮಾರಾಟಕ್ಕಾಗಿ ಸೋಶಿಯಲ್ ಮೀಡಿಯಾ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ಕುಟುಂಬದಲ್ಲಿ ಆದ ಗೊಂದಲ ಬಗೆಹರಿದಿದೆ: ಮೇಘಾ ಶೆಟ್ಟಿ

    ಮಾರ್ಚ್ ತಿಂಗಳಲ್ಲಿ ಈ ದಂಪತಿಗೆ ಸೋಶಿಯಲ್ ಮೀಡಿಯಾನಲ್ಲಿ ವ್ಯಕ್ತಿಯೊರ್ವ ಪರಿಚಯವಾಗಿದ್ದಾನೆ. ಯುಕೆಯಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಅಲ್ಲದೇ ಕಿಡ್ನಿಗೆ 5ಕೋಟಿ ಕೊಟ್ಟು ಖರೀದಿಸುವುದಾಗಿ ನಕಲಿ ವೈದ್ಯ ದಂಪತಿಗೆ ನಂಬಿಸಿದ್ದಾನೆ. ಕಿಡ್ನಿ ಖರೀದಿಸುತ್ತೇನೆ ನೋಂದಾವಣಿ, ನಿರ್ವಹಣಾ ವೆಚ್ಚ, ಕರೆನ್ಸಿ ಎಕ್ಸ್ ಚೇಂಜ್ ಅಂತೆಲ್ಲ ಸುಮಾರು 26 ಲಕ್ಷವಾಗುತ್ತದೆ ಎಂದು ದಂಪತಿ ಬಳಿಯಿಂದ ತನ್ನ ಖಾತೆಗೆ ಹಾಕಿಸಿಕೊಂಡಿದ್ದಾನೆ. ಬೆಂಗಳೂರಿನ ಲಾಡ್ಜ್‌ವೊಂದರಲ್ಲಿ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ನಂಬಿಸಿದ್ದಾನೆ. ಇದನ್ನೂ ಓದಿ:  ಕಾಲಿಗೆ ಮಾಸ್ಕ್ ಸಿಕ್ಕಿಸಿಕೊಂಡು ಟ್ರೋಲ್ ಆದ ಸಚಿವ

    ಕೊನೆಗೆ ಬೆಂಗಳೂರಿನ ಲಾಡ್ಜ್‌ವೊಂದರಲ್ಲಿ ದಂಪತಿಯನ್ನು ಭೇಟಿಯದ ಆಫ್ರಿಕಾದ ಪ್ರಜೆಯೋರ್ವ ಅವರಿಗೆ ಸೂಟ್‍ಕೇಸ್‍ನಲ್ಲಿ ಕಪ್ಪು ನೋಟುಗಳನ್ನು ತಂದರಿರುವುದನ್ನ ತೋರಿಸಿದ್ದಾನೆ. ಈ ಕಪ್ಪು ನೋಟಿಗೆ ಯಾವುದೋ ಕೆಮಿಕಲ್ ಮಿಕ್ಸ್ ಮಾಡಿ ಅದು 2 ಸಾವಿರ ರೂಪಾಯಿಯ ನೋಟಾಗಿ ಪರಿವರ್ತನೆಯಾಗುತ್ತದೆ ಎಂದಿದ್ದಾನೆ. ಇದನ್ನ ನಂಬಿದ ದಂಪತಿಗೆ ಕಪ್ಪು ನೋಟ್ ಕೊಟ್ಟು ನಿಮಗೆ ಇದಕ್ಕೆ ಬೇಕಿರುವ ಕೆಮಿಕಲ್ ಕಳಿಸುತ್ತೇನೆಂದು ಹೇಳಿ ಮತ್ತೆ 14 ಲಕ್ಷ ಹಣವನ್ನ ದಂಪತಿಯಿಂದ ಟ್ರಾನ್ಸ್ ಫರ್ ಮಾಡಿಸಿಕೊಂಡಿದ್ದಾನೆ. ಹೀಗೆ ಬರೋಬ್ಬರಿ 40 ಲಕ್ಷ ಹಣ ಕಳೆದುಕೊಂಡು ಮೋಸ ಹೋದ ದಂಪತಿ ಸದ್ಯ ಪೊಲೀಸರಿಗೆ ದೂರು ನೀಡಿದ್ದಾರೆ.

  • ಬ್ಯಾಕ್ ಲೇಸ್ ಟಾಪ್ ತೊಟ್ಟ ಟಾಲಿವುಡ್ ಬ್ಯೂಟಿ – ಪಡ್ಡೆ ಹುಡ್ಗರ ನಿದ್ದೆ ಕದ್ದ ಸಮಂತಾ

    ಬ್ಯಾಕ್ ಲೇಸ್ ಟಾಪ್ ತೊಟ್ಟ ಟಾಲಿವುಡ್ ಬ್ಯೂಟಿ – ಪಡ್ಡೆ ಹುಡ್ಗರ ನಿದ್ದೆ ಕದ್ದ ಸಮಂತಾ

    ಹೈದರಾಬಾದ್: ಟಾಲಿವುಡ್ ಕ್ಯೂಟ್ ಬೆಡಗಿ ನಟಿ ಸಮಂತಾ ಹೊಸ ಟಾಪ್‍ವೊಂದನ್ನು ಧರಿಸಿ ಸಖತ್ ಹಾಟ್ ಆಗಿ ಫೋಟೋಗೆ ಪೋಸ್ ನೀಡಿದ್ದಾರೆ.

    ಯಾವುದೇ ಪಾತ್ರ ಕೊಟ್ಟರೂ ಅದನ್ನು ಲೀಲಾಜಾಲವಾಗಿ ಅಭಿನಯಿಸುವ ನಟಿ ಎಂದರೆ ಅದು ಸಮಂತಾ. ಕೆಲವು ನಟಿಯರು ಮದುವೆಯ ನಂತರ ಅಷ್ಟಾಗಿ ಸಿನಿಮಾಗಳಲ್ಲಿ ಅಭಿನಯಿಸುವುದಿಲ್ಲ. ಆದರೆ ಸಮಂತಾ ಅಕ್ಕಿನೇನಿ ಮದುವೆಯಾದ ಬಳಿಕ ಕೂಡ ಸಿನಿಮಾರಂಗದಿಂದ ದೂರ ಸರಿಯದೇ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಕೂಡ ಸದಾ ಆ್ಯಕ್ಟಿವ್ ಆಗಿರುತ್ತಾರೆ.

    ಸದ್ಯ ಇದೀಗ ಸಮಂತಾರವರು ಫೋಟೋವೊಂದಕ್ಕೆ ಬೋಲ್ಡ್ ಆಗಿ ಪೋಸ್ ನೀಡುವುದರ ಜೊತೆಗೆ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ವೈಟ್ ಕಲರ್ ಬ್ಯಾಕ್ ಲೇಸ್ ಟಾಪ್ ಹಾಗೂ ನೀಲಿ ಬಣ್ಣದ ಜೀನ್ಸ್ ತೊಟ್ಟು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಜೊತೆಗೆ ಗೆಲ್ಲಲು ಅಸಾಧ್ಯವೆಂದು ತೋರಿಸಿದ ಜೀವನದಲ್ಲಿ ನೀವು ಅನುಭವಿಸಿದ ಎಲ್ಲ ವಿಚಾರಗಳ ಬಗ್ಗೆ ಯೋಚಿಸಿ, ನೀವು ಇಲ್ಲಿದ್ದೀರಾ. ಬದುಕುಳಿದವರು.. ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಒಟ್ಟಾರೆ ಸಮಂತಾರ ಸ್ಟೈಲಿಶ್ ಲುಕ್ ನೋಡಿ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದು, ಇದೀಗ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇತ್ತೀಚೆಗಷ್ಟೇ ಲಾಕ್‍ಡೌನ್ ಸಮಯದಲ್ಲಿ ಫ್ಯಾಮಿಲಿ ಮ್ಯಾನ್- 2 ವೆಬ್ ಸಿರಿಸ್‍ನ ರಾಜಿ ಪಾತ್ರಧಾರಿಯಾಗಿ ಅಭಿನಯಿಸಿದ್ದ ಸಮಂತಾ ಭಾರೀ ಸದ್ದು ಮಾಡಿದ್ದರು. ಸಮಂತಾ ಆ್ಯಕ್ಟಿಂಗ್‍ಗೆ ಮೆಚ್ಚಿದ ಪ್ರೇಕ್ಷಕರು ಫುಲ್ ಫಿದಾ ಆಗಿದ್ದರು. ಇದನ್ನೂ ಓದಿ: ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿದ ನಟಿ ಕ್ಯಾವ್ಯಾ ಶಾಸ್ತ್ರೀ

  • 15 ನಿಮಿಷದಲ್ಲಿ ಸೈಕಲಿನಲ್ಲಿ ಟೀ ತಂದುಕೊಟ್ಟ ಡೆಲಿವರಿ ಬಾಯ್‍ಗೆ ಐಟಿ ಉದ್ಯೋಗಿಯಿಂದ ಬೈಕ್ ಗಿಫ್ಟ್..!

    15 ನಿಮಿಷದಲ್ಲಿ ಸೈಕಲಿನಲ್ಲಿ ಟೀ ತಂದುಕೊಟ್ಟ ಡೆಲಿವರಿ ಬಾಯ್‍ಗೆ ಐಟಿ ಉದ್ಯೋಗಿಯಿಂದ ಬೈಕ್ ಗಿಫ್ಟ್..!

    – ಒಂದೇ ದಿನದಲ್ಲಿ 73 ಸಾವಿರ ರೂ. ಸಂಗ್ರಹ
    – ಸಹಾಯ ಮಾಡಿ ಮಾನವೀಯತೆ ಮೆರೆದ ಜನ

    ಹೈದರಾಬಾದ್: ನಮ್ಮ ಸುತ್ತಮುತ್ತಲೂ ಒಳ್ಳೆಯವರೂ ಇದ್ದಾರೆ ಎಂಬುದನ್ನು ಹೈದರಾಬಾದ್ ನ ಐಟಿ ಉದ್ಯೋಗಿಯೊಬ್ಬರು ಸಾಬೀತು ಪಡಿಸಿದ್ದಾರೆ.

    ಹೌದು. ಮಳೆಯಲ್ಲಿ ನೆನೆದುಕೊಂಡೇ 15 ನಿಮಿಷದಲ್ಲಿ ಟೀ ತಂದು ಕೊಟ್ಟ ಝೋಮ್ಯಾಟೋ ಡೆಲಿವರಿ ಬಾಯ್ ಗೆ ಬೈಕ್ ಗಿಫ್ಟ್ ಮಾಡಿದ್ದಾರೆ. ತನಗೆ ಬೈಕ್ ಸಿಗುತ್ತಿದ್ದಂತೆಯೇ ಡೆಲಿವರಿ ಬಾಯ್ ಖುಷಿಗೆ ಪಾರವೇ ಇಲ್ಲದಂತಾಗಿದೆ. ಡೆಲಿವರಿ ಬಾಯ್ ನನ್ನು ಮೊಹಮ್ಮದ್ ಅಖೀಲ್ ಎಂದು ಗುರುತಿಸಲಾಗಿದ್ದು, ಈತನಿಗೆ ರಾಬಿನ್ ಮುಕೇಶ್ ಎಂಬವರು ಬೈಕ್ ನೀಡಿದ್ದಾರೆ.

    ರಾಬಿನ್ ಮುಕೇಶ್ ಹೈದರಾಬಾದ್ ನಲ್ಲಿ ಐಟಿ ಉದ್ಯೋಗಿಯಾಗಿದ್ದಾರೆ. ಇವರು ಒಂದು ದಿನ ಫುಡ್ ಡೆಲಿವರಿ ಆ್ಯಪ್ ಮೂಲಕ ಟೀ ಆರ್ಡರ್ ಮಾಡಿದ್ದರು. ಈ ವೇಳೆ ಟೀ ತಂದು ಕೊಟ್ಟ ಯುವಕನ ಕಂಡು ಮುಕೇಶ್ ಮನಸ್ಸು ಕರಗಿದ್ದು, ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದನ್ನೂ ಓದಿ: WTC ಫೈನಲ್ ಭಾರತ ಗೆದ್ದರೆ ಬೆತ್ತಲಾಗುವೆ – ಪೂನಂ ಪಾಂಡೆ

    ಈ ಸಂಬಂಧ ಮಾಧ್ಯಮದ ಜೊತೆ ಮಾತನಾಡಿದ ಮುಕೇಶ್, ರಾತ್ರಿ 10 ಗಂಟೆ ಸುಮಾರಿಗೆ ನಾನು ಮನೆಯಿಂದಲೇ ಕೆಲಸ ಮಾಡುತ್ತಿದ್ದೆ. ಈ ವೇಳೆ ನನಗೆ ಟೀ ಕುಡಿಯಬೇಕು ಅನಿಸಿತ್ತು. ಹೀಗಾಗಿ ನಾನು ಹೈದರಾಬಾದ್ ನಲ್ಲಿರುವ ಲಕ್ಡಿ-ಕಾ-ಪೂಲ್ ಎಂಬ ಹೋಟೇಲಿನಿಂದ ಟೀ ಆರ್ಡರ್ ಆಡಿದೆ. ಅಂತೆಯೇ ಕೆಲ ಸಮಯದ ಬಳಿಕ ಡೆಲಿವರಿ ಬಾಯ್ ಎಲ್ಲಿದ್ದಾನೆ ಎಂಬುದನ್ನು ಟ್ರ್ಯಾಕ್ ಮಾಡಿದೆ. ಆಗ ನನ್ನ ಆರ್ಡರ್ ಅನ್ನು ಮೊಹಮ್ಮದ್ ಅಕೀಲ್ ಎಂಬಾತ ತರುತ್ತಿದ್ದಾನೆ ಎಂಬುದು ಗೊತ್ತಾಯಿತು. ಅಲ್ಲದೆ ಆತ ಮೆಹದಿಪಟ್ನಂನಲ್ಲಿರುವುದನ್ನು ಗಮನಿಸಿದೆ. ನಾನು ಆರ್ಡರ್ ಮಾಡಿದ 15 ನಿಮಿಷಕ್ಕೆ ಪಾರ್ಸೆಲ್ ನಾನು ಇರುವ ಅಪಾರ್ಟ್ ಮೆಂಟ್ ಗೆ ಬಂದಿದೆ ಎಂದರು.

    ಮತ್ತೆ ಮಾತು ಮುಂದುವರಿಸಿದ ಅವರು, ಅಪಾರ್ಟ್ ಮೆಂಟ್ ಬಳಿ ಬಂದವನೇ ಕೆಳಗೆ ಬಂದು ಪಾರ್ಸೆಲ್ ತೆಗೆದುಕೊಂಡು ಹೋಗುವಂತೆ ನನಗೆ ಕರೆ ಮಾಡಿದ್ದಾನೆ. ಕೂಡಲೇ ನಾನು ಕೆಳಗಡೆ ಹೋದೆ. ವಿಪರೀತ ಮಳೆಯಿಂದಾಗಿ ಸಂಪೂರ್ಣವಾಗಿ ತೇವಗೊಂಡಿದ್ದ ಯುವಕನನ್ನು ನಾನು ನೋಡಿದೆ. ಜಡಿ ಮಳೆಯಲ್ಲಿ ಒದ್ದೆಯಾಗಿಕೊಂಡೇ ಕೇವಲ 15 ನಿಮಿಷಗಳಲ್ಲಿ ಬೈಸಿಕಲ್‍ನಲ್ಲಿ ಬಂದು ಹೇಗೆ ಇಷ್ಟು ಬೇಗ ತಲುಪಿದೆ ಎಂದು ಪ್ರಶ್ನಿಸಿದೆ. ಆಗ ಅವನು, ಕಳೆದ ಒಂದು ವರ್ಷದಿಂದ ಬೈಸಿಕಲ್ ಮೂಲಕ ಫುಡ್ ಡೆಲಿವರಿ ಮಾಡುತ್ತಿರುವುದಾಗಿ ತಿಳಿಸಿದ. ಈ ಮಾತುಗಳನ್ನು ಕೇಳಿ ನನಗೆ ನಿಜಕ್ಕೂ ಬೇಸರವಾಯಿತು ಎಂದರು.

    ಹೀಗೆ ಮಾತನಾಡುತ್ತಾ ಮುಕೇಶ್, ಹುಡುಗನ ಬಳಿ ಅನುಮತಿ ಪಡೆದು ಫೋಟೋ ತೆಗೆದುಕೊಂಡಿದ್ದಾರೆ. ಅಲ್ಲದೆ ಆತ ಒಬ್ಬ ಬಿಟೆಕ್ ಪದವೀಧರ ಎಂಬುದು ಗೊತ್ತಾಯಿರು. ಕೂಡಲೇ ಅಕೀಲ್ ಫೋಟೋವನ್ನು ಮುಕೇಶ್ ತಮ್ಮ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿಕೊಂಡು ಇಡೀ ಕಥೆಯನ್ನು ವಿವರಿಸಿದೆ. ಇದನ್ನು ಓದಿದ ಹಲವಾರು ಮಂದಿ ಸಾಕಷ್ಟು ಕಾಮೆಂಟ್ ಮಾಡಿದ್ದುಟ್ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅಲ್ಲದೆ ಅಕೀಲ್ ಗೆ ಸಹಾಯ ಮಾಡುವುದಾಗಿ ತಿಳಿಸಿದರು.

    ಈ ಹಿನ್ನೆಲೆಯಲ್ಲಿ ಅಕೀಲ್ ನನ್ನು ಕೇಳಿದಾಗ ಆತ ತನಗೆ ಬೈಕ್ ಸಿಕ್ಕರೆ ತುಂಬಾ ಸಹಾಯ ಆಗುತ್ತೆ ಎಂದು ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಅದೇ ದಿನ ಹಣ ಸಂಗ್ರಹಿಸಲು ಆರಂಭಿಸಿದ್ದು, ಮರು ದಿನವೇ ಅಕೀಲ್ ಗೆ ಬೈಕ್ ಉಡುಗೊರೆಯಾಗಿ ನೀಡಲಾಗಿದೆ. ಇಷ್ಟೆಲ್ಲಾ ಆಗಿದ್ದು ಕೇವಲ 12 ಗಂಟೆಯಲ್ಲಿ. ಅನೇಕ ಮಂದಿ ಅಕೀಲ್ ಗಾಗಿ ಸಹಾಯ ಮಾಡಿದ್ದು, ಅಮೆರಿಕದಲ್ಲಿ ನೆಲೆಸಿರುವ ಮಹಿಳೆಯೊಬ್ಬರು 30 ಸಾವಿರ ಹಣ ನೀಡಿರುವುದಾಗಿ ಮುಕೇಶ್ ವಿವರಿಸಿದ್ದಾರೆ.

    ಒಟ್ಟಿನಲ್ಲಿ ಕೇವಲ 12 ಗಂಟೆಯಲ್ಲಿ 73 ಸಾವಿರ ರೂ. ಕ್ರೂಢೀಕರಿಸಿ ಅಕೀಲ್ ಗೆ ಸಹಾಯ ಮಾಡಿದ್ದು ಸದ್ಯ ಹಣ ಸಂಗ್ರಹವನ್ನು ನಿಲ್ಲಿಸಲಾಗಿದೆ ಎಂದು ಮುಕೇಶ್ ತಿಳಿಸಿ, ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.

  • ನಂಗೆ ಅವನೇ ಬೇಕು – ಕೊನೆಗೆ ಇಬ್ಬರನ್ನು ಒಂದೇ ಮಂಟಪದಲ್ಲಿ ಮದ್ವೆಯಾದ ವರ

    ನಂಗೆ ಅವನೇ ಬೇಕು – ಕೊನೆಗೆ ಇಬ್ಬರನ್ನು ಒಂದೇ ಮಂಟಪದಲ್ಲಿ ಮದ್ವೆಯಾದ ವರ

    ಹೈದರಾಬಾದ್: ಒಬ್ಬ ವರನನ್ನು ಇಬ್ಬರೂ ಯುವತಿಯರು ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದರು. ಒಂದೇ ಮಂಟಪದಲ್ಲಿ ಈ ಮೂವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ವಿಚಿತ್ರ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ಒಂದೇ ಮಂಟಪದಲ್ಲಿ ಕನಕ ಉಶಾರಾಣಿ , ಅದಾ ಸುರೇಖಾ ಇಬ್ಬರು ಯುವತಿಯರನ್ನು ವರ ಅರ್ಜುನ್ ಮದುವೆಯಾಗಿದ್ದಾನೆ. ತೆಲಂಗಾಣದ ಅದಿಲಾಬಾದ್ ಜಿಲ್ಲಾ ಉಟ್ನೂರು ಮಂಡಲಂ ಮನ್ಸೂರ್​ನಲ್ಲಿ ವರ ವೆಲಾಡಿ ಅರ್ಜುನ್‍ನನ್ನು ಮದುವೆಯಾಗುವುದಾಗಿ ಈ ಇಬ್ಬರೂ ಯುವತಿಯರು ಪಟ್ಟು ಹಿಡಿದಿದ್ದರು. ಇವರಿಬ್ಬರೂ ಸಂಬಂಧಿಗಳು. ವರ ಪದವೀಧರನಾಗಿದ್ದು, ಇಬ್ಬರೂ ವಧುಗಳು ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಆಶ್ಚರ್ಯವೆಂದ್ರೆ ಯುವತಿಯರಿಬ್ಬರೂ ಕಳೆದ 4 ವರ್ಷಗಳಿಂದ ಅರ್ಜುನನನ್ನು ಪ್ರೀತಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ:  ಬಹುದಿನಗಳ ದೈಹಿಕ ಶಿಕ್ಷಕರ ಬೇಡಿಕೆಗೆ ಅಸ್ತು-ಸುರೇಶ್ ಕುಮಾರ್


    ಸಂಬಂಧದಲ್ಲಿ ಭಾವನಾಗುತ್ತಿದ್ದ ವೇಲಾಡಿ ಅರ್ಜುನನನ್ನು ಮದುವೆಯಾಗಲು ಕನಕ ಉಶಾರಾಣಿ ಮತ್ತು ಅದಾ ಸುರೇಖಾ ಇಬ್ಬರೂ ಯುವತಿಯ ಪಟ್ಟು ಹಿಡಿದಿದ್ದರು. ಇದಕ್ಕೆ ಸಮಾಜ ಮತ್ತು ಅವರ ಹಿರಿಯರ ವಿರೋಧ ವ್ಯಕ್ತಪಡಿಸಿದರು. ಆದರೆ ಸಮಾಜದ ಹಿರಿಯರ ವಿರೋಧ ಲೆಕ್ಕಿಸದೇ ಯುವತಿಯರ ಕುಟುಂಬಸ್ಥರು ಮದುವೆಗೆ ಮಾತುಕತೆ ನಡೆಸಿ ಒಪ್ಪಿಗೆ ಪಡೆದುಕೊಂಡಿದ್ದಾರೆ. ಇದರಿಂದಾಗಿ ಸಂಭ್ರಮದಿಂದ ಮದುವೆ ನಡೆದಿದೆ. ಗಿರಿಜನ ಸಂಪ್ರದಾಯದಂತೆ ವಿವಾಹ ಮಹೋತ್ಸವ ನಡೆದಿದೆ. ಇದನ್ನೂ ಓದಿ:  ಟಾಪ್‍ಲೆಸ್ ಫೋಟೋ ಶೂಟ್‍ನಲ್ಲಿ ನಟಿ ಕಿಯಾರಾ ಅಡ್ವಾಣಿ ಸಖತ್ ಹಾಟ್

    ಇತ್ತೀಚೆಗೆ ಕೋಲಾರದಲ್ಲಿಯೂ ಯುವಕನೊಬ್ಬ ಅಕ್ಕ-ತಂಗಿಯರನ್ನು ಮದುವೆಯಾಗಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ಮತ್ತೇ ಇಂಹದ್ದೇ ಒಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

  • ಬೆಂಗಳೂರಿನಲ್ಲಿ ಸೆಂಚುರಿ ಬಾರಿಸಿದ ಪೆಟ್ರೋಲ್

    ಬೆಂಗಳೂರಿನಲ್ಲಿ ಸೆಂಚುರಿ ಬಾರಿಸಿದ ಪೆಟ್ರೋಲ್

    ಬೆಂಗಳೂರು: ದೇಶದಾದ್ಯಂತ ಪೆಟ್ರೋಲ್, ಡಿಸೇಲ್ ದರ ಏರಿಕೆ ಮತ್ತೆ ಮುಂದುವರಿದಿದೆ. ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 28 ಪೈಸೆ ಏರಿಕೆ ಕಂಡು ಸೆಂಚುರಿ ಬಾರಿಸಿದೆ. ಈ ಮೂಲಕ 1 ಲೀಟರ್ ಪೆಟ್ರೋಲ್ ಬೆಲೆ 100.23 ರೂಪಾಯಿ ತಲುಪಿದೆ.

    ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಸಾರ್ವಕಾಲಿಕ ದಾಖಲೆ ಬರೆದಿದ್ದು, 100 ರೂಪಾಯಿ ಗಡಿದಾಟಿದೆ. ಇಂದು ಪೆಟ್ರೋಲ್ ಬೆಲೆ 28 ಪೈಸೆ ಏರಿಕೆ ಕಂಡು 1 ಲೀಟರ್‍ ಗೆ 100.23 ರೂ ಆಗಿದೆ. ಡಿಸೇಲ್ ದರ 44 ಪೈಸೆ ಏರಿಕೆ ಕಂಡು ಲೀಟರ್‍ ಗೆ 93.02 ರೂಪಾಯಿ ತಲುಪಿದೆ.  ಇದನ್ನೂ ಓದಿ: SSLC ಪರೀಕ್ಷೆ ಬಗ್ಗೆ ಭಯ ಬೇಡ – ಎರಡು ದಿನ ಎರಡೇ ಪೇಪರ್

    ನಗರದಲ್ಲಿ ನಿನ್ನೆ ಪೆಟ್ರೋಲ್ ಲೀಟರ್‍ ಗೆ 99.95 ರೂಪಾಯಿ ಮತ್ತು ಡಿಸೇಲ್ ಲೀಟರ್‍ ಗೆ 92.38 ರೂಪಾಯಿ ಆಗಿತ್ತು. ಇಂದು ಮತ್ತೆ ಏರಿಕೆಯತ್ತ ಮುಖಮಾಡಿ ಪೆಟ್ರೋಲ್ ಸೆಂಚುರಿ ಬಾರಿಸಿದೆ. ಈ ಮೂಲಕ ಮತ್ತೆ ವಾಹನ ಚಾಲಕರಿಗೆ ಪೆಟ್ರೋಲ್, ಡಿಸೇಲ್ ಬರೆ ಬಿದ್ದಿದೆ. ಇದನ್ನೂ ಓದಿ:  SSLC ಪರೀಕ್ಷೆ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ

    ಕೆಲ ದಿನಗಳ ಹಿಂದೆ ಹೈದರಾಬಾದ್ ಮತ್ತು ತೆಲಂಗಾಣದಲ್ಲೂ ಪೆಟ್ರೋಲ್ ದರ ಶತಕ ತಲುಪಿತ್ತು. ಭೋಪಾಲ್‍ನಲ್ಲಿ ಲೀಟರ್‍ ಗೆ 104.53 ರೂಪಾಯಿ ತಲುಪಿತ್ತು. ಇಂದು ಡೆಲ್ಲಿಯಲ್ಲಿ ಪೆಟ್ರೋಲ್ ದರ ಲೀಟರ್‍ ಗೆ 96.93 ರೂಪಾಯಿ. ಡಿಸೇಲ್‍ಗೆ ಲೀಟರ್‍ ಗೆ 87.69 ರೂಪಾಯಿ ಆಗಿದೆ. ಮುಂಬೈನಲ್ಲಿ ಪೆಟ್ರೋಲ್ ಲೀಟರ್‍ ಗೆ 103.08 ರೂಪಾಯಿ, ಡಿಸೇಲ್ ಲೀಟರ್‍ ಗೆ 95.14 ರೂಪಾಯಿ ಆಗಿದೆ.

  • ಹುಡುಗಿಯ ಹೊಟ್ಟೆಯಲ್ಲಿದ್ದ 2 ಕೆಜಿ ಕೂದಲನ್ನು ಹೊರತೆಗೆದ ವೈದ್ಯರು..!

    ಹುಡುಗಿಯ ಹೊಟ್ಟೆಯಲ್ಲಿದ್ದ 2 ಕೆಜಿ ಕೂದಲನ್ನು ಹೊರತೆಗೆದ ವೈದ್ಯರು..!

    ಹೈದರಾಬಾದ್: 17 ವರ್ಷದ ಹುಡುಗಿಯ ಹೊಟ್ಟೆಯಲ್ಲಿದ್ದ 2 ಕೆಜಿ ಕೂದಲನ್ನು ಹೊರ ತೆಗೆದು ಆಕೆಯ ಪ್ರಾಣ ರಕ್ಷಣೆ ಮಾಡುವಲ್ಲಿ ತೆಲಂಗಾಣದ ಉಸ್ಮಾನಿಯಾ ಜನರಲ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.

    ‘ರಾಪುಂಜೆಲ್ ಸಿಂಡ್ರೋಮ್’ ಎಂಬ ಅಪರೂಪದ ಕಾಯಿಲೆಯಿಂದ ಹುಡುಗಿಯ ಹೊಟ್ಟೆಯಲ್ಲಿ ಸುಮಾರು 2 ಕೆಜಿ ಕೂದಲು ಬೆಳೆದಿತ್ತು. ಹೈದರಾಬಾದ್‍ನ ಶಂಶಾಬಾದ್ ಮೂಲದ ಈ ಹುಡುಗಿ ಅಪೌಷ್ಠಿಕತೆಯಿಂದ ಬಳಲುತ್ತಿದ್ದಳು. ಇದಲ್ಲದೆ ಹಸಿವಿನಿಂದ ತನ್ನ ಕೂದಲನ್ನು ಕಳೆದ 5 ತಿಂಗಳಿನಿಂದ ಸೇವಿಸುತ್ತಾ ಬಂದಿದ್ದಾಳೆ. ಬಳಿಕ ಇದೀಗ ಉಸ್ಮಾನಿಯ ಆಸ್ಪತ್ರೆಯ ಅಧೀಕ್ಷಕ ಡಾ.ನಾಗೇಂದರ್ ಬಿ ಅವರನ್ನೊಳಗೊಂಡ ವೈದ್ಯರ ತಂಡವು 150 ಸೆಂ.ಮೀ ಉದ್ದ ಬೆಳೆದಿದ್ದ ಸುಮಾರು 2 ಕೆಜಿ ಕೂದಲನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿದ್ದಾರೆ.ಇದನ್ನೂ ಓದಿ: ಲಸಿಕೆ ಪಡೆದ್ರೆ ಪುರುಷತ್ವ, ಕೈ, ಕಾಲು ಹೋಗುತ್ತೆ- ಕೊರೊನಾ ವ್ಯಾಕ್ಸಿನ್ ಬಗ್ಗೆ ಸುಳ್ಳು ವದಂತಿ

    ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ವೈದ್ಯರಾದ ಡಾ.ನಾಗೇಂದರ್ ಅವರು, ಆಸ್ಪತ್ರೆಯಲ್ಲಿ ನಾವು ಈ ಮೊದಲು ರಾಪುಂಜೆಲ್ ಸಿಂಡ್ರೋಮ್‍ಗೆ ಚಿಕಿತ್ಸೆ ನೀಡಿದ್ದೇವೆ. ಬಾಲಕಿಯ ಹೊಟ್ಟೆಯಲ್ಲಿದ್ದ 150 ಸೆಂ.ಮೀ ಕೂದಲಿನಲ್ಲಿ ಪೈಕಿ 30 ಸೆಂ.ಮೀ ಹೊಟ್ಟೆಯಲ್ಲಿ ಮತ್ತು 120 ಸೆಂ.ಮೀ ಸಣ್ಣ ಕರುಳಿನಿಂದ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿದ್ದೇವೆ. ವಾಂತಿ ಮತ್ತು ಹೊಟ್ಟೆ ನೋವಿನಿಂದಾಗಿ ಒಂದು ತಿಂಗಳ ಹಿಂದೆ 17 ವರ್ಷದ ಹುಡುಗಿ ಪೂಜಿತಾ ಮಂಡಲ್ ಆಸ್ಪತ್ರೆಗೆ ದಾಖಲಾಗಿದ್ದಳು. ತನ್ನ ಸ್ವಂತ ಕೂದಲನ್ನು ಹುಡುಗಿ ತಿನ್ನುತ್ತಿದ್ದಳು ಎಂದು ಆಕೆಯ ಸಹೋದರಿ ತಿಳಿಸಿದ ಬಳಿಕ ಆಕೆಗೆ ಚಿಕಿತ್ಸೆ ಪ್ರಾರಂಭಿಸಿ ಇದೀಗ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.

    ವಿಶ್ವದಾದ್ಯಂತ ಈವರೆಗೆ ಕಂಡುಬಂದಿರುವ 68 ಪ್ರಕರಣಗಳ ಪೈಕಿ ಹೊಟ್ಟೆಯಿಂದ ಹೊರತೆಗೆದಿರುವ ಅತೀ ಉದ್ದದ ಕೂದಲಾಗಿದೆ. ಆಕೆ ಆಸ್ಪತ್ರೆಗೆ ದಾಖಲಾಗಿದ್ದ ಸಮಯದಲ್ಲಿ ಆಕೆಗೆ ಕೊರೊನಾ ಪಾಸಿಟಿವ್ ಬಂದಿದ್ದರಿಂದ ಆಕೆಗೆ ಮೊದಲು ಕೋವಿಡ್ ಚಿಕಿತ್ಸೆ ಕೊಡಿಸಿ ಅದರಿಂದ ಚೇತರಿಸಿಕೊಂಡ ಬಳಿಕ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ವೈದ್ಯರು ಮಾಹಿತಿ ಹಂಚಿಕೊಂಡರು.

    ಪೂಜಿತಾ ಮಂಡಲ್ ಅಪೌಷ್ಠಿಕತೆಯಿಂದ ಬಳಲುತ್ತಿದ್ದು, ತಿಂದ ಕೂದಲು ಜೀರ್ಣವಾಗದೆ ಇದ್ದುದ್ದರಿಂದ ಈ ಮಟ್ಟಕ್ಕೆ ಸೇರಿಕೊಂಡಿತ್ತು. ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಮತ್ತು ಅಧೀಕ್ಷಕ ಡಾ.ಬಿ ನಾಗೇಂದ್ರ, ಸಹಾಯ ಪ್ರಾಧ್ಯಾಪಕ ಡಾ.ಜಿ ಅನಿಲ್ ಕುಮಾರ್, ಸಹಾಯಕ ಪ್ರಾಧ್ಯಾಪಕರಾದ ಡಾ.ಎ ಅಜಿತಾ ಮತ್ತು ಪಿ.ಜಿ ವಿದ್ಯಾರ್ಥಿಗಳು ಸೇರಿದಂತೆ ಅರಿವಳಿಕೆ ವಿಭಾಗದ ಹಿರಿಯ ಪ್ರಾಧ್ಯಾಪಕರು ಡಾ.ಪಾಂಡು ನಾಯಕ್, ಡಾ.ಕೆ.ರಾಣಿ ಮತ್ತು ಡಾ.ಪವನ್ ತಂಡ ಬಾಲಕಿಗೆ ಶಸ್ತ್ರ ಚಿಕಿತ್ಸೆಗೆ ನೆರವಾಗಿದ್ದಾರೆ.