Tag: Hyderabad

  • Miss World | ಥಾಯ್ಲೆಂಡ್‌ನ ಒಪಾಲ್ ಸುಚಾತಾಗೆ 72ನೇ ವಿಶ್ವ ಸುಂದರಿ ಕಿರೀಟ

    Miss World | ಥಾಯ್ಲೆಂಡ್‌ನ ಒಪಾಲ್ ಸುಚಾತಾಗೆ 72ನೇ ವಿಶ್ವ ಸುಂದರಿ ಕಿರೀಟ

    ಹೈದರಾಬಾದ್‌: ಥಾಯ್ಲೆಂಡ್‌ನ ಒಪಾಲ್ ಸುಚಾತಾ ಚೌಂಗಶ್ರೀ (Opal Suchata Chuangsri) ಅವರು 72ನೇ ಆವೃತ್ತಿಯ ವಿಶ್ವ ಸುಂದರಿ (Miss World) ಕಿರೀಟ ಮುಡಿಗೇರಿಸಿಕೊಂಡಿದ್ದು, ಇಥಿಯೋಪಿಯಾದ ಹಾಸೆಟ್ ಡೆರೆಜ್ ಅದ್ಮಾಸ್ಸು ‘ರನ್ನ‌ರ್ ಅಪ್’ ಆಗಿ ಹೊರಹೊಮ್ಮಿದ್ದಾರೆ.

    ಶನಿವಾರ ಸಂಜೆ ಹೈದರಾಬಾದ್‌ನ (Hyderabad) ಹೈಟೆಕ್‌ ಎಕ್ಸಿಬಿಷನ್ ಸೆಂಟರ್‌ನಲ್ಲಿ ನಡೆದ 72ನೇ ಆವೃತ್ತಿಯ ವಿಶ್ವಸುಂದರಿ ಸ್ಪರ್ಧೆಯ ಗ್ರಾಂಡ್ ಫಿನಾಲೆಯಲ್ಲಿ ಸುಚಾತಾ ಕಿರೀಟ ತಮ್ಮದಾಗಿಸಿಕೊಂಡರು. ಇನ್ನೂ ಭಾರತವನ್ನು ಪ್ರತಿನಿಧಿಸಿದ ನಂದಿನಿ ಗುಪ್ತಾ ಅವರು ಅಗ್ರ 8ರಲ್ಲಿ ಸ್ಥಾನ ಪಡೆಯುವ ಮುನ್ನವೇ ಹೊರಬಿದ್ದರು. ಇದನ್ನೂ ಓದಿ: ‘ಅಂಬಿ’ ಕನ್ವರ್ ಲಾಲ್ ಲುಕ್‌ನಲ್ಲಿ ಬಂದ ದರ್ಶನ್- ‘ದ ಡೆವಿಲ್’ ಪೋಸ್ಟರ್ ಔಟ್

    ವಿಜೇತರಿಗೆ 1 ಮಿಲಿಯನ್ ಡಾಲರ್ ಅಂದರೆ ಸುಮಾರು 8 ಕೋಟಿ ರೂ. ಬೆಲೆ ಬಾಳುವ ವಜ್ರದ ಕಿರೀಟ ಅವರ ಮುಡಿಗೆ ಸಿಂಗರಿಸಲಾಯಿತು. ಇಥಿಯೋಪಿಯಾದ ಹಾಸೆಟ್ ಡೆರೆಜ್ ಅದ್ಮಾಸ್ಸು ಮೊದಲ ರನ್ನರಪ್‌ ಆದ್ರೆ, ಪೋಲೆಂಡಿನ ಪೊಲ್ಯಾಂಡ್‌ನ ಸುಂದರಿ 2ನೇ ರನ್ನರ್ ಅಪ್ ಹಾಗೂ ಕೆರೆಬಿಯನ್ ದ್ವೀಪದ ಸುಂದರಿ 3ನೇ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

    ಈ ಬಾರಿಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ವಿವಿಧ ದೇಶಗಳಿಂದ ಒಟ್ಟು 108 ಸ್ಪರ್ಧಿಗಳು ಭಾಗವಹಿಸಿದ್ದರು. ಕಳೆದ ಒಂದು ತಿಂಗಳಿನಿಂದ ವಿವಿಧ ಸುತ್ತುಗಳಲ್ಲಿ ಈ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಇದನ್ನೂ ಓದಿ: ಪಾಕ್ ದಾಳಿಯಿಂದ ನಮ್ಮ ಫೈಟರ್ ಜೆಟ್‌ಗಳಿಗೂ ಹಾನಿ? – ಮೊದಲ ಬಾರಿಗೆ ಸಿಡಿಎಸ್ ಪ್ರತಿಕ್ರಿಯೆ ಏನು?

    ಅಮೆರಿಕ ಮತ್ತು ಕೆರಿಬಿಯನ್, ಯುರೋಪ್, ಏಷ್ಯಾ ಹಾಗೂ ಓಸಿನಿಯಾ ಎಂಬ ನಾಲ್ಕು ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಿಂದ ಒಂದು ವಿಭಾಗದಿಂದ 10 ಜನರನ್ನು ಸೆಮಿಫೈನಲ್ಸ್‌ಗೆ ಆಯ್ಕೆ ಮಾಡಲಾಗಿತ್ತು. ನಂತರ ಒಂದು ವಿಭಾಗದಿಂದ 4 ಜನರಂತೆ 16 ಸ್ಪರ್ಧಿಗಳನ್ನು ಫೈನಲ್‌ಗೆ ಆಯ್ಕೆಮಾಡಲಾಗಿತ್ತು. ಅದರಲ್ಲಿ ಟಾಪ್ 8 ಹಾಗೂ ಫೈನಲ್ ನಡೆಯುತ್ತದೆ. ವಿಶ್ವ ಸುಂದರಿಯ ಜೊತೆಗೆ ಫೈನಲ್ ಪ್ರವೇಶಿಸಿದ ಮೂವರಿಗೆ ರನ್ನರ್ ಅಪ್ ಸ್ಥಾನ ಲಭಿಸಿದೆ.

    ಗ್ರಾಂಡ್ ಫಿನಾಲೆಯ ನಿರೂಪಣೆಯನ್ನು 2016ರ ವಿಶ್ವ ಸುಂದರಿ ಸ್ಪರ್ಧೆಯ ವಿಜೇತೆ ಸ್ಟೆಫನಿ ಡೆಲ್ ವ್ಯಾಲೆ ನಡೆಸಿಕೊಟ್ಟರು. ಅವರೊಂದಿಗೆ ಭಾರತದ ಸಚಿನ್ ಕುಂಬಾ‌ರ್ ಇದ್ದರು. ಕಾರ್ಯಕ್ರಮದಲ್ಲಿ 2017ರಲ್ಲಿ ವಿಶ್ವ ಸುಂದರಿಯಾಗಿದ್ದ ಮಾನುಶಿ ಚಿಲ್ಲ‌ರ್, ಬಾಲವುಡ್ ನಟ ಸೋನು ಸೂದ್ ಸೇರಿದಂತೆ ಹಲವು ನಟ – ನಟಿಯರು ಭಾಗವಹಿಸಿದ್ದರು.

  • ಹೈದರಾಬಾದ್‌ನಲ್ಲಿ ಬಾಂಬ್ ಬ್ಲಾಸ್ಟ್ ಮಾಡಲು ಸಂಚು – ಇಬ್ಬರು ಶಂಕಿತ ಉಗ್ರರ ಬಂಧನ

    ಹೈದರಾಬಾದ್‌ನಲ್ಲಿ ಬಾಂಬ್ ಬ್ಲಾಸ್ಟ್ ಮಾಡಲು ಸಂಚು – ಇಬ್ಬರು ಶಂಕಿತ ಉಗ್ರರ ಬಂಧನ

    ಹೈದರಾಬಾದ್: ತೆಲಂಗಾಣ ಹಾಗೂ ಆಂಧ್ರ ಪ್ರದೇಶ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಹೈದರಾಬಾದ್‌ನಲ್ಲಿ (Hyderabad)  ಬಾಂಬ್ ಬ್ಲಾಸ್ಟ್ ಮಾಡಲು ಸಂಚು ರೂಪಿಸಿದ್ದ ಇಬ್ಬರು ಶಂಕಿತ ಉಗ್ರರನ್ನು (Suspected Terrorists) ಬಂಧಿಸಿದ್ದಾರೆ.

    ವಿಜಯನಗರದ ಸಿರಾಜ್ ಮತ್ತು ಹೈದರಾಬಾದ್‌ನ ಸಮೀರ್ ಬಂಧಿತರು. ಯೋಜನೆಯ ಭಾಗವಾಗಿ ಸಿರಾಜ್ ವಿಜಯನಗರದಲ್ಲಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿದ್ದ. ಸೌದಿ ಅರೇಬಿಯಾ ಮೂಲದ ಐಸಿಸ್ ಮಾಡ್ಯೂಲ್ ಇವರಿಗೆ ಹೈದರಾಬಾದ್‌ನಲ್ಲಿ ದಾಳಿ ನಡೆಸಲು ಮಾರ್ಗದರ್ಶನ ನೀಡುತ್ತಿದ್ದ. ಆಂಧ್ರಪ್ರದೇಶದ ವಿಜಯನಗರದಲ್ಲಿ ಸಿರಾಜ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ಇನ್ನೋರ್ವ ಶಂಕಿತ ಉಗ್ರನ ಬಗ್ಗೆ ಸಿರಾಜ್ ಬಾಯ್ಬಿಟ್ಟಿದ್ದಾನೆ. ಬಳಿಕ ಪೊಲೀಸರು ಸಮೀರ್‌ನನ್ನು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಏರೋಸ್ಪೇಸ್ ಎಂಜಿನಿಯರ್ ಸಾವು ಕೇಸ್‌ಗೆ ಟ್ವಿಸ್ಟ್ – 2 ಮಕ್ಕಳ ತಂದೆಯೊಂದಿಗೆ ಪ್ರೇಮ ವೈಫಲ್ಯ

    ಶಂಕಿತ ಉಗ್ರರು ಅಲ್ ಹಿಂದ್ ಇತ್ತೆಹಾದುಲ್ ಮುಸ್ಲಿಮೀನ್ ಸಂಘಟನೆ ನಡೆಸುತ್ತಿದ್ದರು. ಸಮೀರ್ ಇಂಜಿನಿಯರಿಂಗ್ ಮುಗಿಸಿ, ಲಿಫ್ಟ್ ಆಪರೇಟಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಶಂಕಿತರು ಬ್ಲಾಸ್ಟ್‌ ಸಲುವಾಗಿ ಪೊಟ್ಯಾಸಿಯಮ್ ಕ್ಲೊರೇಡ್ ಹಾಗೂ ಸಲ್ಫರ್‌ನಂತಹ ರಾಸಾಯನಿಕಗಳನ್ನು ಆನ್ಲೈನ್‌ನಲ್ಲಿ ಆರ್ಡರ್ ಮಾಡಿದ್ದರು. ಈ ತಿಂಗಳು 21-22 ರಂದು ವಿಜಯನಗರ ಪ್ರದೇಶದಲ್ಲಿ ಪೂರ್ವಭ್ಯಾಸಕ್ಕೆ ತಯಾರಿ ಮಾಡಿಕೊಂಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮಾನ್ಯತಾ ಟೆಕ್‌ ಪಾರ್ಕ್‌ ಜಲಾವೃತ – ಪರ್ಯಾಯ ಮಾರ್ಗ ಬಳಸುವಂತೆ ಮನವಿ

    ಶಂಕಿತ ಉಗ್ರರ ಮನೆಯಿಂದ ಅಮೋನಿಯಾ, ಸಲ್ಫರ್ ಮತ್ತು ಅಲ್ಯೂಮಿನಿಯಂ ಪುಡಿ ಸೇರಿದಂತೆ ಸ್ಫೋಟಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಇಬ್ಬರು ಶಂಕಿತ ಉಗ್ರರನ್ನು ಶೀಘ್ರದಲ್ಲೇ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮುಂದಿನ ನಾಲ್ಕು ದಿನ ರಾಜ್ಯಕ್ಕೆ ಮಳೆ ಎಚ್ಚರಿಕೆ – ಬೆಂಗಳೂರಿಗೆ ಇಂದು ಯೆಲ್ಲೋ ಅಲರ್ಟ್

  • Hyderabad Fire | ಕಾಪಾಡಲು ಹೋಗಿದ್ದ ತಾಯಿ ಮಕ್ಕಳನ್ನು ಅಪ್ಪಿಕೊಂಡೇ ಸುಟ್ಟು ಕರಕಲು!

    Hyderabad Fire | ಕಾಪಾಡಲು ಹೋಗಿದ್ದ ತಾಯಿ ಮಕ್ಕಳನ್ನು ಅಪ್ಪಿಕೊಂಡೇ ಸುಟ್ಟು ಕರಕಲು!

    – ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ

    ಹೈದರಾಬಾದ್: ಚಾರ್‌ಮಿನಾರ್(Charminar) ಬಳಿಯಿರುವ ಗುಲ್ಜಾರ್ ಹೌಸ್‌ನಲ್ಲಿ(Gulzar House) ಬೆಂಕಿ ಅವಘಡ ಸಂಭವಿಸಿ, 17 ಮಂದಿ ಸಜೀವ ದಹನವಾಗಿರುವ ಘಟನೆ ಹೈದರಾಬಾದ್‌ನಲ್ಲಿ(Hyderabad) ನಡೆದಿದೆ. ಈ ದುರ್ಘಟನೆ ವೇಳೆ ಒರ್ವ ಮಹಿಳೆ ತನ್ನ ಮಕ್ಕಳನ್ನ ಬೆಂಕಿಯಿಂದ ರಕ್ಷಿಸುವ ಕೊನೆಯ ಪ್ರಯತ್ನದಲ್ಲಿ ಅಪ್ಪಿಕೊಂಡಿದ್ದಳು. ಆದ್ರೆ ಆ ಕೊನೆಯ ಅಪ್ಪುಗೆಯಲ್ಲೇ ತಾಯಿ ಮಕ್ಕಳು ಸಜೀವ ದಹನವಾದ ಹೃದಯ ವಿದ್ರಾವಕ ಪ್ರಸಂಗವನ್ನ ಪ್ರತ್ಯಕ್ಷದರ್ಶಿಯೊಬ್ಬರು ಬಿಚ್ಚಿಟ್ಟರು.

    ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡ ಸ್ವಲ್ಪ ಸಮಯದಲ್ಲೇ ತಾಯಿಯೊಬ್ಬಳು ತನ್ನ ಮಕ್ಕಳ ರಕ್ಷಣೆಗಾಗಿ ಓಡಿದ್ದಾಳೆ.. ಮಕ್ಕಳನ್ನ ಅಪ್ಪಿಕೊಂಡಿದ್ದಾಳೆ.. ಆದ್ರೆ ಅಪ್ಪಿಕೊಂಡೇ ಸುಟ್ಟು ಕರಕಲಾಗಿದ್ದಾಳೆ ಎಂದು ಪ್ರತ್ಯಕ್ಷದರ್ಶಿ ಜಹೀರ್ ಕಹಿ ಘಟನೆಯನ್ನ ವಿವರಿಸಿದ್ರು. ಇದನ್ನೂ ಓದಿ: Hyderabad | ಚಾರ್‌ಮಿನಾರ್ ಬಳಿಯ ಗುಲ್ಜಾರ್ ಹೌಸ್‌ನಲ್ಲಿ ಬೆಂಕಿ ಅವಘಡ – 17 ಮಂದಿ ಸಜೀವ ದಹನ

    ಬೆಂಕಿಯ ಜ್ವಾಲೆಗೆ ಒಳಗೆ ಹೋಗುವುದು ತುಂಬಾ ಕಷ್ಟಕರವಾಗಿತ್ತು. ಹೊಗೆಯಿಂದಾಗಿ ನಮಗೆ ಏನೂ ಕಾಣಿಸುತ್ತಿರಲಿಲ್ಲ. ಗೋಡೆಗಳನ್ನು ಒಡೆದು ಒಳಗೆ ಹೋಗಲು ಹೋದೆವು. ಅಷ್ಟರಲ್ಲಾಗಲೇ ಕಟ್ಟಡದ ಒಳಗಿದ್ದವರು ಸುಟ್ಟುಹೋಗಿದ್ದರು ಎಂದು ಘಟನೆಯನ್ನು ವಿವರಿಸಿದರು. ಇದನ್ನೂ ಓದಿ: ಪಾಕಿಸ್ತಾನದ ಮುಂಡೆವನ್ನ ನಿಂಬೆಹಣ್ಣು ಹಿಂಡಿದ ಹಾಗೆ ಹಿಂಡಬಹುದು: ಸಿಎಂ ಇಬ್ರಾಹಿಂ

    ಈ ಅಗ್ನಿ ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು(Narendra Modi) ಎಕ್ಸ್ ಮೂಲಕ ಸಂತಾಪ ಸೂಚಿಸಿದ್ದಾರೆ. ತೆಲಂಗಾಣದ ಹೈದರಾಬಾದ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಜೀವಹಾನಿಯಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ ಎಂದು ಮೃತರ ಕುಟುಂಕ್ಕೆ ಪಿಎಂ ಪರಿಹಾರ ನಿಧಿಯಿಂದ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50,000 ರೂ. ಪರಿಹಾರ ಘೋಷಿಸಿದ್ದಾರೆ. ಇದನ್ನೂ ಓದಿ: ಮೇ 21 ರಂದು ವಿಧಾನಸೌಧದ ಮುಂದೆ ಆಂಧ್ರಕ್ಕೆ ಆನೆಗಳ ಹಸ್ತಾಂತರ

    ಗುಲ್ಜಾರ್ ಹೌಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಘಟನೆಯ ಸಂಪೂರ್ಣ ವಿವರಗಳು ಇನ್ನೂ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಕೇಂದ್ರ ಸಚಿವ ಕಿಷನ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • Hyderabad | ಚಾರ್‌ಮಿನಾರ್ ಬಳಿಯ ಗುಲ್ಜಾರ್ ಹೌಸ್‌ನಲ್ಲಿ ಬೆಂಕಿ ಅವಘಡ – 17 ಮಂದಿ ಸಜೀವ ದಹನ

    Hyderabad | ಚಾರ್‌ಮಿನಾರ್ ಬಳಿಯ ಗುಲ್ಜಾರ್ ಹೌಸ್‌ನಲ್ಲಿ ಬೆಂಕಿ ಅವಘಡ – 17 ಮಂದಿ ಸಜೀವ ದಹನ

    – ಉಸಿರಾಟ ತೊಂದರೆಯಾಗಿ 16ಕ್ಕೂ ಹೆಚ್ಚು ಮಂದಿ ಅಸ್ವಸ್ಥ

    ಹೈದರಾಬಾದ್: ಚಾರ್‌ಮಿನಾರ್ (Charminar) ಬಳಿಯಿರುವ ಗುಲ್ಜಾರ್ ಹೌಸ್‌ನಲ್ಲಿ (Gulzar House) ಭಾರೀ ಬೆಂಕಿ ಅವಘಡ ಸಂಭವಿಸಿದ್ದು, 17 ಮಂದಿ ಸಜೀವ ದಹನವಾಗಿರುವ ಘಟನೆ ಹೈದರಾಬಾದ್‌ನಲ್ಲಿ (Hyderabad) ನಡೆದಿದೆ.

    ಮುಂಜಾನೆ 5:30ರ ಸುಮಾರಿಗೆ ಘಟನೆ ನಡೆದಿದೆ. ಗುಲ್ಜಾರ್ ಹೌಸ್‌ನಲ್ಲಿ 30ಕ್ಕೂ ಹೆಚ್ಚು ಮಂದಿ ಇರುವ ಶಂಕೆ ವ್ಯಕ್ತವಾಗಿದೆ. ಬೆಂಕಿ ಅವಘಡದ ಪರಿಣಾಮ ಉಸಿರಾಟದ ತೊಂದರೆಯಿಂದಾಗಿ 16ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ರಾಜೇಂದ್ರ ಕುಮಾರ್ (67), ಅಭಿಷೇಕ್ ಮೋದಿ, ಸುಮಿತ್ರಾ, ಮುನ್ನಿಬಾಯ್, ಆರುಷಿ ಜೈನ್, ಶೀತಲ್ ಜೈನ್, ಇರಾಜ್ ಹಾಗೂ ಅರ‍್ಷಾದಿ ಗುಪ್ತಾ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಮೂಲದ ಏರೋಸ್ಪೇಸ್ ಎಂಜಿನಿಯರ್ ಪಂಜಾಬ್‌ನಲ್ಲಿ ನಿಗೂಢ ಸಾವು

    ಗುಲ್ಜಾರ್ ಹೌಸ್‌ನ ಮೊದಲ ಮಹಡಿಯಲ್ಲಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಘಟನೆಯ ಸಂಪೂರ್ಣ ವಿವರಗಳು ಇನ್ನೂ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಕೇಂದ್ರ ಸಚಿವ ಕಿಷನ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್‌ನಿಂದ ಕಾರ್ಯಾಚರಣೆ ಮುಂದುವರಿದಿದೆ. ಸಿಎಂ ರೇವಂತ್ ರೆಡ್ಡಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಘಟನೆ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಕನ್ನಡಿಗರಿಗೆ ಅಪಮಾನ – ಜಿಎಸ್‌ ಸೂಟ್ಸ್‌ ಹೋಟೆಲ್‌ ಸೀಜ್‌, ಮ್ಯಾನೇಜರ್‌ ಬಂಧನ

  • ಇಬ್ಬರು ಗಂಡು ಮಕ್ಕಳನ್ನು ಕೊಂದು ಐದನೇ ಮಹಡಿಯಿಂದ ಜಿಗಿದ ಮಹಿಳೆ

    ಇಬ್ಬರು ಗಂಡು ಮಕ್ಕಳನ್ನು ಕೊಂದು ಐದನೇ ಮಹಡಿಯಿಂದ ಜಿಗಿದ ಮಹಿಳೆ

    ಹೈದರಾಬಾದ್: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಇಬ್ಬರು ಗಂಡು ಮಕ್ಕಳನ್ನು ಕೊಂದು ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನ (Hyderabad) ಗಜುಲರಾಮರಂನ (Gajularamaram) ಬಾಲಾಜಿ ಲೇಔಟ್‌ನಲ್ಲಿ ನಡೆದಿದೆ.

    ಆಶಿಶ್ ರೆಡ್ಡಿ(8), ಅರ್ಷಿತ್ ರೆಡ್ಡಿ(6) ಎಂಬ ಇಬ್ಬರು ಗಂಡು ಮಕ್ಕಳನ್ನು ತೇಜಸ್ವಿನಿ(33) ತೆಂಗಿನಕಾಯಿ ತುರಿಯುವ ಮಣೆಯಿಂದ (Coconut Chopper) ಹೊಡೆದು ಕೊಲೆ ಮಾಡಿ, ಬಳಿಕ ತಾನೂ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: ತಾಯಿ, ಮಗನ ಕೊಲೆ ಕೇಸ್‌ – ಪೊಲೀಸರಿಗೆ ಹೆದರಿ ಆರೋಪಿ ನೇಣಿಗೆ ಶರಣು

    ಮನೆಯಲ್ಲಿ ಕಿರುಚಾಟದ ಶಬ್ದ ಕೇಳಿದ್ದರಿಂದ ಬಂದು ನೋಡಿದಾಗ ಮಕ್ಕಳಿಬ್ಬರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆಶಿಶ್ ಸ್ಥಳದಲ್ಲೇ ಮೃತಪಟ್ಟಿದ್ದು, ಅರ್ಷಿತ್ ರೆಡ್ಡಿ ಗಂಭೀರ ಸ್ಥಿತಿಯಲ್ಲಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದ ಎಂದು ವೈದ್ಯರು ಹೇಳಿದರು ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ಇನ್ನು ಮುಂದೆ ಪಿಯುಸಿಯಲ್ಲಿ ಕಲೆ, ವಾಣಿಜ್ಯ ಓದಿದವರೂ ಪೈಲಟ್‌ ಆಗಬಹುದು!

    7 ಪುಟಗಳ ಡೆತ್‌ನೋಟ್ (Suicide Note) ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ತೇಜಸ್ವಿನಿ, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಬಗ್ಗೆ ಉಲ್ಲೇಖಿಸಿದ್ದಾರೆ. ಪುತ್ರರಿಬ್ಬರ ಉಸಿರಾಟದ ತೊಂದರೆ ಹಾಗೂ ಪತಿಯ ಬೆಂಬಲದ ಕೊರತೆಯಿಂದಾಗಿ ಮಾನಸಿಕವಾಗಿ ಕುಗ್ಗಿ ಹೋಗಿರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮುದ್ದು ಮಗಳಿಗೆ ಸುಂದರ ಹೆಸರಿಟ್ಟ ಅಥಿಯಾ ಶೆಟ್ಟಿ ದಂಪತಿ- ಅದರ ಅರ್ಥವೇನು ಗೊತ್ತಾ?

    ಘಟನಾ ಸ್ಥಳಕ್ಕೆ ಜೀಡಿಮೆಲ್ಲಾ ಪೊಲೀಸರು (Jeedimetla Police) ಭೇಟಿ ನೀಡಿ, ಪರಿಸೀಲನೆ ನಡೆಸಿದ್ದಾರೆ. ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಅತ್ಯಾಚಾರಕ್ಕೆ ಯತ್ನ – ಕಾಮುಕನಿಂದ ತಪ್ಪಿಸಿಕೊಳ್ಳಲು ಚಲಿಸುತ್ತಿದ್ದ ರೈಲಿಂದ ಜಿಗಿದ ಮಹಿಳೆ

    ಅತ್ಯಾಚಾರಕ್ಕೆ ಯತ್ನ – ಕಾಮುಕನಿಂದ ತಪ್ಪಿಸಿಕೊಳ್ಳಲು ಚಲಿಸುತ್ತಿದ್ದ ರೈಲಿಂದ ಜಿಗಿದ ಮಹಿಳೆ

    ಹೈದರಾಬಾದ್: ರೈಲಿನಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಹಿನ್ನೆಲೆ ಮಹಿಳೆಯು ರೈಲಿನಿಂದ ಹಾರಿದ ಪರಿಣಾಮ ಗಂಭೀರ ಗಾಯಗೊಂಡ ಘಟನೆ ತೆಲಂಗಾಣದಲ್ಲಿ (Telangana) ನಡೆದಿದೆ.

    ಖಾಸಗಿ ವಲಯದ ಉದ್ಯೋಗಿಯಾಗಿರುವ ಮಹಿಳೆ, ಮೊಬೈಲ್ ಫೋನ್ ಸರಿಮಾಡಲು ಮೆಡ್ಚಲ್‌ನಿಂದ ಸಿಕಂದರಾಬಾದ್‌ಗೆ (Secunderabad) ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಇದನ್ನೂ ಓದಿ: ನಾನು ಸಿಎಂ ಆದ್ರೆ ಸಾವಿರ ಜೆಸಿಬಿ ಆರ್ಡರ್, ಪ್ರತಿ ತಾಲೂಕಿಗೆ 35 ಇಡ್ತೀನಿ: ಯತ್ನಾಳ್‌

    ಮಾ. 22ರಂದು ಸಂಜೆ ಸಿಕಂದರಾಬಾದ್ ರೈಲ್ವೆ ನಿಲ್ದಾಣದಿಂದ ಮೆಡ್ಚಲ್‌ಗೆ (Medchal) ಹೋಗುವ ಮಲ್ಟಿ ಮಾಡಲ್ ಟ್ರಾರ್ನ್ಸ್‌ಪೋರ್ಟ್‌ ಸರ್ವಿಸ್ ರೈಲಿನ ಮಹಿಳಾ ಕೋಚ್‌ನಲ್ಲಿ ಒಂಟಿಯಾಗಿ ಪ್ರಯಾಣಿಸುತ್ತಿದ್ದೆ. ಅಲ್ವಾಲ್ ರೈಲ್ವೆ ನಿಲ್ದಾಣದಲ್ಲಿ (Alwal railway station) ಹತ್ತಿದ ಸುಮಾರು 25 ವಯಸ್ಸಿನ ಒಬ್ಬ ಅಪರಿಚಿತ ವ್ಯಕ್ತಿ ಲೈಂಗಿಕ ಕ್ರಿಯೆಗೆ ಬೇಡಿಕೆ ಇಟ್ಟಿದ್ದ. ಆತನಿಗೆ ಸಹಕರಿಸಲು ನಿರಾಕರಿಸಿದಾಗ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದನು. ಆತನಿಂದ ತಪ್ಪಿಸಿಕೊಳ್ಳಲು ಚಲಿಸುವ ರೈಲಿನಿಂದ ಹೊರಗೆ ಹಾರಿದೆ ಎಂದು ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದರು. ಇದನ್ನೂ ಓದಿ: ನ್ಯಾ.ಯಶವಂತ್ ವರ್ಮಾ ನ್ಯಾಯಾಂಗ ಕರ್ತವ್ಯ ನಿರ್ವಹಣೆ ಮಾಡುವಂತಿಲ್ಲ: ದೆಹಲಿ ಹೈಕೋರ್ಟ್

    ಮಹಿಳೆಯ ತಲೆ, ಗಲ್ಲ, ಬಲಗೈ ಮತ್ತು ಸೊಂಟದ ಮೇಲೆ ತೀವ್ರ ಗಾಯಗಳಾಗಿದ್ದು, ರೈಲ್ವೆ ಹಳಿ ಬಳಿ ಹೋಗುತ್ತಿದ್ದ ಕೆಲವರು ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು. ಮಹಿಳೆಯ ದೂರಿನ ಆಧಾರದ ಮೇಲೆ ಬಿಎನ್‌ಎಸ್‌ನ (BNS) ಸೆಕ್ಷನ್ 75 ಮತ್ತು 131 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಹನಿಟ್ರ್ಯಾಪ್‌ ಕೇಸ್‌- ಮಂಗಳವಾರ ರಾಜಣ್ಣ ದೂರು, ಎಸ್‌ಐಟಿ ರಚನೆ ಸಾಧ್ಯತೆ

  • ತಡರಾತ್ರಿ ಮಟನ್ ಸಾರು ಮಾಡಲು ನಿರಾಕರಿಸಿದ್ದಕ್ಕೆ ಪತ್ನಿಯನ್ನೇ ಕೊಂದ ಪತಿ

    ತಡರಾತ್ರಿ ಮಟನ್ ಸಾರು ಮಾಡಲು ನಿರಾಕರಿಸಿದ್ದಕ್ಕೆ ಪತ್ನಿಯನ್ನೇ ಕೊಂದ ಪತಿ

    ಹೈದರಾಬಾದ್: ಮಟನ್ ಸಾರು ಮಾಡಲು ನಿರಾಕರಿಸಿದ ಪತ್ನಿಯನ್ನ ಪತಿಯೇ ಕ್ರೂರವಾಗಿ ಥಳಿಸಿ ಹತ್ಯೆಮಾಡಿರುವ ಘಟನೆ ತೆಲಂಗಾಣದ(Telangana) ಮಹಬೂಬಾಬಾದ್‌ನಲ್ಲಿ ನಡೆದಿದೆ.

    ಮಾಲೋತ್ ಕಲಾವತಿ (35) ಕೊಲೆಯಾದ ಪತ್ನಿ. ತಡರಾತ್ರಿ ಕಲಾವತಿ ಬಳಿ ಮಟನ್ ಸಾರು ಮಾಡುವಂತೆ ಪತಿ ಹೇಳಿದ್ದಾನೆ. ಕಲಾವತಿ ಸಾರು ಮಾಡಲು ನಿರಾಕರಿಸಿದಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಯಾರೂ ಇಲ್ಲದಿದ್ದಾಗ ನಡೆದ ಜಗಳದಲ್ಲಿ ಕಲಾವತಿಯನ್ನು ಪತಿ ಹಲ್ಲೆ ಮಾಡಿ ಕೊಂದಿದ್ದಾನೆ ಎಂದು ಕಲಾವತಿ ತಾಯಿ ಆರೋಪಿಸಿದ್ದಾರೆ. ಇದನ್ನೂ ಓದಿ: ದಾವಣಗೆರೆ | ಹೊತ್ತಿ ಉರಿದ ಟಾಕಿಸ್ – ಪೀಠೋಪಕರಣಗಳು ಭಸ್ಮ

    ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಮಾ.14ಕ್ಕೆ ರನ್ಯಾ ಬೇಲ್ ಭವಿಷ್ಯ

  • ಹೈದರಾಬಾದ್‌ನಲ್ಲಿ ದಂಪತಿ ಆತ್ಮಹತ್ಯೆ – ಇಬ್ಬರು ಮಕ್ಕಳು ಶವವಾಗಿ ಪತ್ತೆ

    ಹೈದರಾಬಾದ್‌ನಲ್ಲಿ ದಂಪತಿ ಆತ್ಮಹತ್ಯೆ – ಇಬ್ಬರು ಮಕ್ಕಳು ಶವವಾಗಿ ಪತ್ತೆ

    – ಹಣಕಾಸು ಸಮಸ್ಯೆ, ಅನಾರೋಗ್ಯದಿಂದ ಬಳಲುತ್ತಿರೋದಾಗಿ ಡೆತ್ ನೋಟ್

    ಹೈದರಾಬಾದ್: ಹಣಕಾಸು ಹಾಗೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದು, ಇಬ್ಬರು ಮಕ್ಕಳು ಕೂಡ ಶವವಾಗಿ ಪತ್ತೆಯಾದ ಘಟನೆ ಹೈದರಾಬಾದ್‌ನ (Hyderabad) ಹಬ್ಸಿಗುಡದಲ್ಲಿ (Habsiguda) ನಡೆದಿದೆ.

    ದಂಪತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮಕ್ಕಳನ್ನು ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಗಂಡ-ಹೆಂಡತಿಯ ಮೃತದೇಹ ಬೇರೆಬೇರೆ ಕೋಣೆಗಳಲ್ಲಿ ಪತ್ತೆಯಾಗಿದ್ದು, ಅಪ್ರಾಪ್ತ ಮಕ್ಕಳು ಬೆಡ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇದನ್ನೂ ಓದಿ: ಭಾರತೀಯ ಕುಸ್ತಿ ಒಕ್ಕೂಟದ ಮೇಲಿನ ಅಮಾನತು ವಾಪಸ್

    ಹಬ್ಸಿಗುಡ ಪ್ರದೇಶದ ರವೀಂದ್ರನಗರ ಕಾಲೋನಿಯಲ್ಲಿರುವ ನಿವಾಸದಲ್ಲಿ ರಾತ್ರಿ 9:30ರ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಯ ಬಳಿಕ ನೆರೆಮನೆಯವರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದಂಪತಿ ಮೊದಲು ತಮ್ಮ ಮಕ್ಕಳನ್ನು ಕತ್ತು ಹಿಸುಕಿ ಕೊಂದು ನಂತರ ನೇಣು ಹಾಕಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಉಸ್ಮಾನಿಯಾ ವಿಶ್ವವಿದ್ಯಾಲಯದ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎನ್ ರಾಜೇಂದರ್ ತಿಳಿಸಿದ್ದಾರೆ. ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಗೆದ್ದು ತವರಿಗೆ ಬಂದ ಕ್ಯಾಪ್ಟನ್ ರೋಹಿತ್‌ಗೆ ಭರ್ಜರಿ ಸ್ವಾಗತ

    ಇನ್ನು ಘಟನೆಗೆ ಸಂಬಂಧಿಸಿದಂತೆ ಆತ್ಮಹತ್ಯೆಗೂ ಮುನ್ನ ಪತಿ ಬರೆದಿದ್ದ ಡೆತ್ ನೋಟನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರ್ಥಿಕ ಸಮಸ್ಯೆಗಳು ಮತ್ತು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಝೀರೋ ಬ್ಯಾಲೆನ್ಸ್ ಇದ್ದ ರನ್ಯಾ ಅಕೌಂಟ್‌ಗೆ 2 ದಿನದಲ್ಲಿ 10 ಲಕ್ಷ ಹಣ!

    ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಜೀವನವನ್ನು ಕೊನೆಗೊಳಿಸುವುದನ್ನು ಬಿಟ್ಟು ನನಗೆ ಬೇರೆ ದಾರಿ ಇರಲಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ನನ್ನ ವೃತ್ತಿಜೀವನದಲ್ಲಿ ಕಷ್ಟಪಡುತ್ತಿದ್ದೇನೆ ಮತ್ತು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲುತ್ತಿದ್ದೇನೆ. ನಾನು ಮಧುಮೇಹ, ನರಗಳಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಮೂತ್ರಪಿಂಡದ ಕಾಯಿಲೆಗಳೊಂದಿಗೆ ಹೋರಾಡುತ್ತಿದ್ದೇನೆ ಎಂದು ತೆಲುಗಿನಲ್ಲಿ ಪತಿ ಡೆತ್ ನೋಟ್ ಬರೆದಿದ್ದಾರೆ. ಇದನ್ನೂ ಓದಿ: ಕೊಪ್ಪಳ ಗ್ಯಾಂಗ್‌ರೇಪ್ ಪ್ರಕರಣ – ಮೂವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

    ಮೆಹಬೂಬ್‌ನಗರ ಜಿಲ್ಲೆಯ ಕಲ್ವಕುರ್ತಿ ಬ್ಲಾಕ್‌ನ ಮುಕುರಲ್ಲಾ ಗ್ರಾಮದವರಾದ ದಂಪತಿ ತಮ್ಮ ಮಕ್ಕಳೊಂದಿಗೆ ಒಂದು ವರ್ಷದ ಹಿಂದೆ ಹಬ್ಸಿಗುಡಕ್ಕೆ ಬಂದು ನೆಲೆಸಿದ್ದರು. ಖಾಸಗಿ ಕಾಲೇಜುವೊಂದರಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತಿದ್ದ ಪತಿ ಕಳೆದ ಆರು ತಿಂಗಳಿನಿಂದ ನಿರುದ್ಯೋಗಿಯಾಗಿದ್ದರು. ದೀರ್ಘಕಾಲದ ನಿರುದ್ಯೋಗದಿಂದಾಗಿ ಆರ್ಥಿಕ ಸಮಸ್ಯೆ ಉಂಟಾಗಿದೆ. ಈ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗಿರಬಹುದು. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ. ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ರಾಜೇಂದರ್ ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ವಿರೋಧ

  • ಮದುವೆಯಾದ 6 ತಿಂಗಳಿಗೆ ಟೆಕ್ಕಿ ಆತ್ಮಹತ್ಯೆ – ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ

    ಮದುವೆಯಾದ 6 ತಿಂಗಳಿಗೆ ಟೆಕ್ಕಿ ಆತ್ಮಹತ್ಯೆ – ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ

    ಹೈದರಾಬಾದ್: ಮದುವೆಯಾದ 6 ತಿಂಗಳಿಗೆ ಹೈದರಾಬಾದ್‌ನ (Hyderabad) ಸಾಫ್ಟ್‌ವೇರ್‌ ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿಬರುತ್ತಿದೆ.

    ಹೈದರಾಬಾದ್‌ನ ರಾಯದುರ್ಗಂ (Raidurgam) ನಿವಾಸಿ ದೇವಿಕಾ (35) ನೇಣಿಗೆ ಶರಣಾಗಿರುವ ಟೆಕ್ಕಿ. ಹೈಟೆಕ್ ಸಿಟಿಯ ಟೆಕ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ದೇವಿಕಾ. ಮಾ. 2ರಂದು ರಾತ್ರಿ ಹೈದರಾಬಾದ್‌ನ ತಮ್ಮ ಮನೆಯಲ್ಲಿ ದೇವಿಕಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಯಶ್, ಸುದೀಪ್ ಬಂದ್ರೆ ಸಮಸ್ಯೆ ಆಗುತ್ತದೆ: ಸಾಧುಕೋಕಿಲ

    ಪತ್ನಿ ನೇಣು ಬಿಗಿದುಕೊಂಡಿದ್ದಾಳೆ ಎಂದು ಪತಿ ಸತೀಶ್, ದೇವಿಕಾ ಮನೆಯವರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸ್ಲಿಮ್‌ ಆಗಿರೊರೇ ಬೇಕಿದ್ರೆ ಮಾಡೆಲ್‌ ಆಯ್ಕೆ ಮಾಡಿಕೊಳ್ಳಿ – ರೋಹಿತ್‌ ದಪ್ಪ ಎಂಬ ಶಮಾ ಹೇಳಿಕೆಗೆ ಗವಾಸ್ಕರ್‌ ಆಕ್ಷೇಪ

    ಆರು ತಿಂಗಳ ಹಿಂದೆ ಗೋವಾದಲ್ಲಿ ಅದ್ಧೂರಿ ಮದುವೆ ನಡೆದಿತ್ತು. ಮದುವೆಯ ಬಳಿಕ ದಂಪತಿ ರಾಯದುರ್ಗಂನಲ್ಲಿರುವ ಅಪಾರ್ಟ್ಮೆಂಟ್ ಸ್ಥಳಾಂತರಗೊAಡಿದ್ದರು. ಇಬ್ಬರೂ ಸಣ್ಣಪುಟ್ಟ ವಿಚಾರಗಳಿಗೂ ಜಗಳವಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: `ಬಿ’ ಖಾತಾ ಅಭಿಯಾನದಿಂದ 55 ಲಕ್ಷ ಮನೆ, ನಿವೇಶನಗಳಿಗೆ ದಾಖಲೆ – ಬೈರತಿ ಸುರೇಶ್

    ಮದುವೆಯ ನಂತರ ಸತೀಶ್ ವರದಕ್ಷಿಣೆಗಾಗಿ ದೇವಿಕಾಳಿಗೆ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದನು ಎಂದು ದೇವಿಕಾ ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಅವಧಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಕ್ರಮ ತನಿಖೆ ಮಾಡಿ: ನಾಗರಾಜ್ ಯಾದವ್

    ಘಟನಾ ಸ್ಥಳಕ್ಕೆ ಆಗಮಿಸಿದ ರಾಯದುರ್ಗಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ವರದಕ್ಷಿಣೆ ಕಿರುಕುಳದ ಆರೋಪದಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವೇದವ್ಯಾಸ್ ಕಾಮತ್ ವಿರುದ್ಧ ಎಫ್‌ಐಆರ್‌ಗೆ ಬಿಜೆಪಿ ಖಂಡನೆ – ಸರ್ಕಾರಕ್ಕೆ ತೀವ್ರ ತರಾಟೆ

  • ಡೈವ್ ಮಾಡೋ ರೀಲ್ಸ್‌ ಹುಚ್ಚಿಗೆ ವೈದ್ಯೆ ಬಲಿ – ತುಂಗಭದ್ರಾ ನದಿಪಾಲಾಗಿದ್ದ ಯುವತಿಯ ಶವ ಪತ್ತೆ

    ಡೈವ್ ಮಾಡೋ ರೀಲ್ಸ್‌ ಹುಚ್ಚಿಗೆ ವೈದ್ಯೆ ಬಲಿ – ತುಂಗಭದ್ರಾ ನದಿಪಾಲಾಗಿದ್ದ ಯುವತಿಯ ಶವ ಪತ್ತೆ

    ಕೊಪ್ಪಳ: ನದಿಯಲ್ಲಿ ಡೈವ್ ಮಾಡುವ ಸೆಲ್ಫಿ ಹುಚ್ಚಿಗಾಗಿ ನೀರುಪಾಲಾಗಿದ್ದ ವೈದ್ಯೆಯ ಶವ ಪತ್ತೆಯಾಗಿದೆ.

    ಮೃತ ವೈದ್ಯೆಯನ್ನು ಹೈದರಾಬಾದ್‌ನ (Hyderabad) ನಾಂಪಲ್ಲಿ ಪ್ರದೇಶದ ನಿವಾಸಿ ಅನನ್ಯ ಮೋಹನ್ (26) ಎಂಬಿಬಿಎಸ್ ಪದವೀಧರೆ ಹಾಗೂ ಪ್ರತಿಭಾವಂತ ಭರತನಾಟ್ಯ ಕಲಾವಿದೆ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಕೊಪ್ಪಳ| ನದಿಯಲ್ಲಿ ಈಜಲು ಹೋಗಿ ಹೈದರಾಬಾದ್‌ನ ವೈದ್ಯೆ ಸಾವು

    ಗಂಗಾವತಿ ತಾಲೂಕಿನ ಸಣಾಪೂರ ಗ್ರಾಮದಲ್ಲಿರುವ ತುಂಗಾಭದ್ರಾ ನದಿಯಲ್ಲಿ (Tungabhadra River)  ಬುಧವಾರ ಮುಂಜಾನೆ ತುಂಗಾಭದ್ರಾ ನದಿಗೆ ಹೋಗಿ, ಕಲ್ಲುಬಂಡೆಗಳ ಮೇಲಿಂದ ಯುವತಿ ನದಿಗೆ ಜಿಗಿಯಲು ಸಿದ್ದವಾಗಿದ್ದಾಳೆ. ಆರಂಭದಲ್ಲಿ ವಿಡಿಯೋ ಮಾಡ್ತಿದ್ದ ಸ್ನೇಹಿತರಿಗೆ ಖುಷಿಯಿಂದಲೇ ಹಾಯ್ ಹೇಳಿದ್ದಾಳೆ. ಆದರೆ, ನದಿಗೆ ಜಿಗಿದ ಕೆಲವೇ ನಿಮಿಷಗಳಲ್ಲಿ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದಳು.

    ನೀರಿನಲ್ಲಿ ಧುಮುಕಿದ್ದ ಸ್ಥಳದಿಂದ 400 ಮೀ. ದೂರದಲ್ಲಿ ಗುರುವಾರ ಸಂಜೆ ವೇಳೆಗೆ ಶವವಾಗಿ ಪತ್ತೆಯಾಗಿದ್ದಾಳೆ. ಅನನ್ಯಾರಾವ್, ಹೈದ್ರಾಬಾದ್‌ನ ಮೇದಕ್ ಕ್ಷೇತ್ರದ ಶಾಸಕ ರೋಹಿತ್ ಮೈನಪಲ್ಲಿಯ ಸಂಬಂಧಿಯಾಗಿದ್ದಾಳೆ. ಸುದ್ದಿ ತಿಳಿದು ಸ್ಥಳಕ್ಕೆ ಶಾಸಕರ ಕುಟುಂಬಸ್ಥರು, ಅನನ್ಯರಾವ್ ಕುಟುಂಬಸ್ಥರು ಬಂದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಆಗಿದ್ದೇನು?
    ಅನನ್ಯ ಸ್ನೇಹಿತರ ಜೊತೆಗೆ ರಜೆ ಕಳೆಯಲು ಸ್ಥಳೀಯ ಪ್ರವಾಸಿ ತಾಣಗಳಾದ ಅಂಜನಾದ್ರಿ, ಪಂಪಾಸರೋವರ, ಸಣಾಪೂರ ಕೆರೆಗೆ ಭೇಟಿ ನೀಡಿ, ತುಂಗಭದ್ರ ನದಿಯ ದಡದಲ್ಲಿಯೇ ಇದ್ದ ರೆಸಾರ್ಟ್‌ನಲ್ಲಿ ಮಂಗಳವಾರ ರಾತ್ರಿ ಉಳಿದುಕೊಂಡಿದ್ದಳು. ಬುಧವಾರ ಮುಂಜಾನೆ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿ, ಕಲ್ಲು ಬಂಡೆಯ ಮೇಲಿಂದ ನದಿಗೆ ಜಿಗಿದಿದ್ದಳು. ನದಿಯಲ್ಲಿ ಕಲ್ಲು ಬಂಡೆ ಹಾಗೂ ನದಿಯ ನೀರಿನ ರಭಸಕ್ಕೆ ಅನನ್ಯ ನೀರಿನಲ್ಲಿ ಮುಳುಗಿದ್ದಳು.

    ದಡದಲ್ಲಿಯೇ ಇದ್ದ ಸ್ನೇಹಿತರು ಅನನ್ಯಾಳನ್ನು ಹುಡುಕಲು ಮುಂದಾಗಿದ್ದರು. ಕೆಲ ಕಾಲದವರೆಗೆ ಅನನ್ಯ ಅವರ ದೇಹ ಕಾಣಿಸಿಕೊಳ್ಳದೆ ಇರುವುದರಿಂದ ಗಾಬರಿಗೊಂಡು ಸ್ಥಳೀಯ ಹಾಗೂ ರೆಸಾರ್ಟ್ ಮಾಲೀಕರಿಗೆ ಮಾಹಿತಿ ನೀಡಿದ್ದರು. ಸ್ಥಳೀಯ ಮೀನುಗಾರರ ಸಹಾಯದಿಂದ ಹುಡುಕಾಟ ನಡೆಸಲಾಗಿತ್ತು. ಮೃತದೇಹ ಪತ್ತೆಯಾಗದ ಕಾರಣ ಪೊಲೀಸರು, ಅಗ್ನಿಶಾಮಕ ಠಾಣೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನೀರಿನಲ್ಲಿ ಅನನ್ಯ  ದೇಹದ ಹುಡುಕಾಟ ನಡೆಸಿದ್ದರು.

    ಅನನ್ಯಾ ಕಲ್ಲು ಬಂಡೆಯ ಮೇಲಿಂದ ನೀರಿಗೆ ಹಾರುವುದನ್ನು ಸ್ನೇಹಿತರು ವೀಡಿಯೋ ಮಾಡಿದ್ದರು. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: 4 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್‌ಬೈ ಹೇಳಿದ ಚಹಲ್‌, ಧನಶ್ರೀ – ಮುಂಬೈ ಕೋರ್ಟ್‌ನಲ್ಲಿ ಏನಾಯ್ತು?