Tag: Hyderabad

  • ನಿಮ್ಮನ್ನು ಪಡೆಯಲು ನಾವು ಅದೃಷ್ಟ ಮಾಡಿದ್ದೇವೆ: ಪ್ರಕಾಶ್ ರೈ

    ನಿಮ್ಮನ್ನು ಪಡೆಯಲು ನಾವು ಅದೃಷ್ಟ ಮಾಡಿದ್ದೇವೆ: ಪ್ರಕಾಶ್ ರೈ

    ಹೈದರಾಬಾದ್: ಬಹುಭಾಷಾ ನಟ ಪ್ರಕಾಶ್ ರೈ ಇತ್ತೀಚೆಗಷ್ಟೆ ಚಿತ್ರೀಕರಣ ವೇಳೆ ಗಾಯಗೊಂಡು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕೆಲವೇ ದಿನಗಳಲ್ಲಿ ಜಿಮ್‍ಗೆ ಭೇಟಿ ನೀಡಿದ್ದು, ಈ ವೇಳೆ ಮೆಗಾ ಸ್ಟಾರ್ ಚಿರಂಜೀವಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಕಾಲಿವುಡ್ ನಟ ಧನುಷ್ ಅಭಿನಯದ ಡಿ44 ಸಿನಿಮಾದ ಚಿತ್ರೀಕರಣದ ವೇಳೆ ಪ್ರಕಾಶ್ ರೈ ಕೆಳಗೆ ಬಿದ್ದು, ಕೈ ಮುರಿದುಕೊಂಡಿದ್ದರು. ತಕ್ಷಣ ಅವರನ್ನು ಹೈದರಾಬಾದ್‍ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವೇಳೆ ಪ್ರಕಾಶ್ ರೈ ಬೆಡ್ ಮೇಲೆ ಮಲಗಿಕೊಂಡು ಕೈಗೆ ಪಟ್ಟಿಯೊಂದನ್ನು ಸುತ್ತಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದನ್ನೂ ಓದಿ: ಡೆವಿಲ್ ಈಸ್ ಬ್ಯಾಕ್, ಶಸ್ತ್ರ ಚಿಕಿತ್ಸೆ ಯಶಸ್ವಿ: ಪ್ರಕಾಶ್ ರೈ

    75ನೇ ಸ್ವತಂತ್ರ್ಯ ದಿನಾಚರಣೆಯ ದಿನದಂದು ಸಿನಿಮಾ ಶೂಟಿಂಗ್ ಸೆಟ್‍ನಲ್ಲಿ ಧ್ವಜ ಹಾರಿಸಿ ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಿಸಿದ್ದರು. ಇದೀಗ ಮುಂಜಾನೆ ಜಿಮ್‍ಗೆ ಭೇಟಿ ನೀಡಿದ್ದ ಅವರು, ಚಿರಂಜೀವಿಯನ್ನು ಭೇಟಿ ಮಾಡಿ ಅವರೊಟ್ಟಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇನ್ನೂ ಈ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಮುಂಜಾನೆ ಬಾಸ್‍ರನ್ನು ಜಿಮ್‍ನಲ್ಲಿ ಭೇಟಿ ಮಾಡಿದೆ. ಚಿತ್ರರಂಗದಲ್ಲಿ ಸಮಸ್ಯೆಗಳನ್ನು ಸರಿಪಡಿಸುವ ಜವಾಬ್ದಾರಿ ಹೊತ್ತಿದ್ದ ಅವರಿಗೆ ಧನ್ಯವಾದ. ನೀವು ಸದಾ ಉತ್ಸಾಹ ತುಂಬುವ ಅಣ್ಣಯ್ಯ. ಅವರನ್ನು ಪಡೆಯಲು ನಾವು ಅದೃಷ್ಟ ಮಾಡಿದ್ದೇವೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮಗಳ ಮದುವೆಯಲ್ಲಿ ಅನಿಲ್ ಕಪೂರ್ ಡ್ಯಾನ್ಸ್- ವೀಡಿಯೋ ವೈರಲ್

  • ತಾತನ ಮೃತದೇಹವನ್ನೇ ಫ್ರಿಡ್ಜ್‌ನಲ್ಲಿಟ್ಟ ಮೊಮ್ಮಗ – ಕಾರಣವೇನು ಗೊತ್ತಾ?

    ತಾತನ ಮೃತದೇಹವನ್ನೇ ಫ್ರಿಡ್ಜ್‌ನಲ್ಲಿಟ್ಟ ಮೊಮ್ಮಗ – ಕಾರಣವೇನು ಗೊತ್ತಾ?

    ಹೈದರಾಬಾದ್: ಅಂತ್ಯಕ್ರಿಯೆ ನಡೆಸಲು ಹಣವಿಲ್ಲದೇ ವ್ಯಕ್ತಿಯೊಬ್ಬರು ತಮ್ಮ 93 ವರ್ಷದ ತಾತನ ದೇಹವನ್ನು ಫ್ರಿಡ್ಜ್ ಒಳಗೆ ಅಡವಿಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ನೆರೆಹೊರೆಯವರು ದುರ್ವಾಸನೆ ಕುರಿತಂತೆ ಪೊಲೀಸರಿಗೆ ದೂರು ನೀಡಿದ ಬಳಿಕ ಪೊಲೀಸರು ವಾರಂಗಲ್‍ನ ಪರ್ಕಳದಲ್ಲಿರುವ ಮನೆಯನ್ನು ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ರೆಫ್ರಿಜರೇಟರ್ ಒಳಗೆ ಕೊಳೆತ ದೇಹವೊಂದು ಪತ್ತೆಯಾಗಿದೆ. ನಿವೃತ್ತ ವ್ಯಕ್ತಿ ಹಾಗೂ ಆತನ ಮೊಮ್ಮಗ ನಿಖಿಲ್ ಬಾಡಿಗೆಗೆ ಈ ಮನೆಯಲ್ಲಿ ವಾಸವಾಗಿದ್ದು, ವೃದ್ಧನಿಗೆ ಬರುವ ಪಿಂಚಣಿ ಹಣದಿಂದ ಜೀವನ ನಡೆಸುತ್ತಿದ್ದರು ಎಂದು ಹೇಳಲಾಗುತ್ತಿದೆ.

    ಈ ಕುರಿತಂತೆ ನಿಖಿಲ್(23) ಇತ್ತೀಚೆಗಷ್ಟೆ ನನ್ನ ತಾತ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಆದರೆ 3 ದಿನಗಳ ಹಿಂದೆ ಸಾವನ್ನಪ್ಪಿದ್ದಾರೆ. ಅವರು ನಿಧನರಾದ ಬಳಿಕ ಅಂತಿಮ ವಿಧಿವಿಧಾನ ನಡೆಸಲು ಹಣವಿಲ್ಲದ ಕಾರಣ, ಒಂದು ಬೆಡ್‍ಶೀಟ್‍ನಲ್ಲಿ ಮೊದಲು ತಾತನ ದೇಹವನ್ನು ಸುತ್ತಿ ನಂತರ ರೆಫ್ರಿಜರೇಟರ್‍ನಲ್ಲಿ ಇಟ್ಟಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

    ಸದ್ಯ ಪೊಲೀಸರಿಗೆ ನಿಖಿಲ್ ತನ್ನ ತಾತನ ಪಿಂಚಣಿ ಹಣಕ್ಕಾಗಿ ದೇಹವನ್ನು ಬಚ್ಚಿಟ್ಟಿದ್ದಾನೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದ್ದು, ಈ ಕುರಿತಂತೆ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ:ತಾನು ನಿರ್ಮಿಸಿದ ಹೆಲಿಕಾಪ್ಟರ್‌ನಿಂದಲೇ ಯುವಕನಿಗೆ ಕಾದಿತ್ತು ಆಪತ್ತು

  • ಸ್ಟೈಲಿಶ್ ಸ್ಟಾರ್ ಅಲ್ಲುಗೆ ಜೋಡಿ ಆಗ್ತಾರಾ ಈ ಕನ್ನಡದ ನಟಿಯರು?

    ಸ್ಟೈಲಿಶ್ ಸ್ಟಾರ್ ಅಲ್ಲುಗೆ ಜೋಡಿ ಆಗ್ತಾರಾ ಈ ಕನ್ನಡದ ನಟಿಯರು?

    ಹೈದರಾಬಾದ್: ಟಾಲಿವುಡ್ ನಟ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್‍ರ ಮುಂದಿನ ಸಿನಿಮಾದಲ್ಲಿ ಕನ್ನಡದ ಇಬ್ಬರು ಬಿಗ್ ಸ್ಟಾರ್ ನಟಿಯರು ಜೋಡಿ ಆಗಲಿದ್ದಾರೆ ಎಂಬ ಸುದ್ದಿ ಇದೀಗ ಟಿ-ಟೌನ್‍ನಲ್ಲಿ ಭಾರೀ ಸದ್ದು ಮಾಡುತ್ತಿದೆ.

    ಸದ್ಯ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿರುವ ಅಲ್ಲು ಅರ್ಜುನ್ ಬಳಿಕ ವೇಣು ಶ್ರೀ ರಾಮ್ ಆ್ಯಕ್ಷನ್ ಕಟ್ ಹೇಳುತ್ತಿರುವ ‘ಐಕಾನ್’ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ಇಬ್ಬರು ಹೀರೋಯಿನ್ ಇರಲಿದ್ದಾರೆ ಎನ್ನಲಾಗುತ್ತಿದೆ.

    ಅದರಲ್ಲಿಯೂ ಈ ಸಿನಿಮಾದಲ್ಲಿ ಅಲ್ಲುಗೆ ಜೋಡಿಯಾಗಿ ಕನ್ನಡದ ನಟಿ ಪೂಜಾ ಹೆಗ್ಡೆ ಹಾಗೂ ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣರನ್ನು ನಾಯಕಿಯರಾಗಿ ಆಯ್ಕೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಡಿಜೆ ಹಾಗೂ ಅಲಾ ವೈಕುಂಠಪುರಮುಲೋ ಸಿನಿಮಾದಲ್ಲಿ ಅಲ್ಲುಗೆ ಜೋಡಿಯಾಗಿ ಪೂಜಾ ಹೆಗ್ಡೆ ಮಿಂಚಿದ್ದರು. ಈ ಎರಡು ಸಿನಿಮಾಗಳು ಟಾಲಿವುಡ್ ಬಾಕ್ಸ್ ಆಫಿಸ್‍ನಲ್ಲಿ ಜೋರಾಗಿಯೇ ಸದ್ದು ಮಾಡಿತ್ತು.

    ಸದ್ಯ ರಶ್ಮಿಕಾ ಮಂದಣ್ಣ ಪುಷ್ಪ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಅಲ್ಲು ಅರ್ಜುನ್‍ಗೆ ನಾಯಕಿಯಾಗಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದು, ಈ ಸಿನಿಮಾ ಕುರಿತಂತೆ ಟಾಲಿವುಡ್‍ನಲ್ಲಿ ಬಹು ನಿರೀಕ್ಷೆ ಹುಟ್ಟಿಸಿದೆ.

    ಈ ಮಧ್ಯೆ ಐಕಾನ್ ಸಿನಿಮಾಕ್ಕಾಗಿ ಪೂಜಾ ಹೆಗ್ಡೆ ಹಾಗೂ ರಶ್ಮಿಕಾ ಮಂದಣ್ಣರಿಗೆ ಚಿತ್ರತಂಡ ಕಾಲ್ ಶೀಟ್ ಕೇಳಿದ್ದು, ಒಂದೇ ಸಿನಿಮಾದಲ್ಲಿ ಈ ಇಬ್ಬರು ನಟಿಯರು ಅಲ್ಲು ಅರ್ಜುನ್ ಜೊತೆಗೆ ಅಭಿನಯಿಸುತ್ತಾರಾ ಅಂತ ಕಾದು ನೋಡಬೇಕಾಗಿದೆ.  ಇದನ್ನೂ ಓದಿ:ಕೆಜಿಎಫ್ ನಟಿ ಮೌನಿ ರಾಯ್ ಹಾಟ್ ಲುಕ್‍ಗೆ ನೆಟ್ಟಿಗರು ಫಿದಾ

  • ಅಕ್ಕನ ಚಿಕಿತ್ಸೆಗಾಗಿ ಪಕ್ಷಿಗಳ ಆಹಾರವನ್ನು ಮಾರುತ್ತಿದ್ದಾನೆ ತಮ್ಮ

    ಅಕ್ಕನ ಚಿಕಿತ್ಸೆಗಾಗಿ ಪಕ್ಷಿಗಳ ಆಹಾರವನ್ನು ಮಾರುತ್ತಿದ್ದಾನೆ ತಮ್ಮ

    ಹೈದರಾಬಾದ್: ಹತ್ತು ವರ್ಷದ ಬಾಲಕನೋರ್ವ ಬ್ರೈನ್ ಕ್ಯಾನ್ಸರ್‍ನಿಂದ ಬಳಲುತ್ತಿರುವ ತನ್ನ ಸಹೋದರಿಗೆ ಚಿಕಿತ್ಸೆ ಕೊಡಿಸಲು ಪಕ್ಷಿಗಳ ಆಹಾರವನ್ನು ಮಾರಾಟ ಮಾಡುವ ಮೂಲಕ ಹಣ ಸಂಗ್ರಹಿಸುತ್ತಿದ್ದಾನೆ.

    ಹೈದರಾಬಾದಿನ ಸೈಯದ್ ಅಜೀಜ್‍ನ ಸಹೋದರಿ ಕಳೆದ ಎರಡು ವರ್ಷಗಳಿಂದ ಬ್ರೈನ್ ಕ್ಯಾನ್ಸರ್‍ನಿಂದ ಬಳಲುತ್ತಿದ್ದು, ಕುಟುಂಬ ನಿರ್ವಹಣೆಗೆ ಬಾಲಕ ಬೀಜಗಳನ್ನು ಮಾರಾಟ ಮಾಡುತ್ತಿದ್ದಾನೆ. ವ್ಯಾಪಾರದಲ್ಲಿ ಮಾಡಲು ನಿರ್ಧರಿಸಿದರೂ, ಸೈಯದ್ ಅಜೀಜ್ ಶಿಕ್ಷಣವನ್ನು ಬಿಡದೇ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದಾನೆ. ಈ ಕುರಿತಂತೆ ಸೈಯದ್ ಅಜೀಜ್, ನಾನು ಬೆಳಗ್ಗೆ 6 ರಿಂದ 8 ವರೆಗೆ ಪಕ್ಷಿ ಆಹಾರವನ್ನು ಮಾರಾಟ ಮಾಡುತ್ತೇನೆ ಮತ್ತು 8 ರಿಂದ ಸಂಜೆ 5 ಗಂಟೆಯವರೆಗೆ ಮದರಸದಲ್ಲಿರುವ ನನ್ನ ತರಗತಿಗೆ ಹಾಜರಾಗುತ್ತೇನೆ ಎಂದಿದ್ದಾನೆ.

    ಸೈಯದ್ ಅಜೀಜ್ ತಾಯಿ ಬಿಲ್ಕೆಸ್ ಬೇಗಂ, ನನ್ನ ಮಗಳಿಗೆ 2 ವರ್ಷಗಳ ಹಿಂದೆ ಮೆದುಳಿನ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಅಂದಿನಿಂದ ಇಡೀ ಕುಟುಂಬ ಅವಳ ಚಿಕಿತ್ಸೆಗಾಗಿ ಕಷ್ಟವನ್ನು ಎದುರಿಸುತ್ತಿದ್ದೇವೆ. ಮೊದಲು ವೈದ್ಯರು ಆಕೆಯ ಆರೋಗ್ಯ ಸ್ಥಿತಿಯ ಬಗ್ಗೆ ಹೇಳಿದಾಗ ನಮಗೆ ಭಯವಾಯಿತು. ಸಕೀನಾರನ್ನು ಗುಣಮುಖಪಡಿಸಬೇಕೆಂದರೆ ರೇಡಿಯೋ ಥೆರಪಿಗೆ ಒಳಪಡಿಸಬೇಕು ಎಂದು ವೈದ್ಯರು ತಿಳಿಸಿದರು. ನಾವು ತೆಲಂಗಾಣ ಸರ್ಕಾರದಿಂದ ಹಣವನ್ನು ಸ್ವೀಕರಿಸಿ ಮತ್ತು ಆ ಸಂಪೂರ್ಣ ಹಣವನ್ನು ರೇಡಿಯೋ ಥೆರಪಿಗೆ ಬಳಸಿದ್ದೇವೆ. ಕುಟುಂಬದ ಸ್ಥಿತಿಯನ್ನು ನೋಡುತ್ತಾ ಬಂದ ಮಗ ಸೈಯದ್ ಅಜೀಜ್ ಸಹಾಯ ಮಾಡಲು ನಿರ್ಧರಿಸಿದ್ದಾನೆ. ಬಳಿಕ ಪಕ್ಷಿಗಳ ಆಹಾರವನ್ನು ಮಾರಾಟ ಮಾಡುತ್ತೇನೆ ಎಂದು ತಿಳಿಸಿ ರಸ್ತೆಗಳಲ್ಲಿ ಮೇಜಿನ ಮೇಲೆ ಪಕ್ಷಿಗಳ ಆಹಾರ ಪದಾರ್ಥವನ್ನು ಮಾರಾಟ ಮಾಡುತ್ತಿದ್ದಾನೆ ಎಂದು ಹೇಳಿದರು.

    ಪಕ್ಷಿ ಆಹಾರವನ್ನು ಮಾರಾಟ ಮಾಡುವುದರಿಂದ ಬರುವ ಇಬ್ಬರ ಹಣದಿಂದ ಔಷಧಿ, ಎಂಆರ್‍ಐ, ಎಕ್ಸ್ ರೇ ಮತ್ತು ರಕ್ತ ಪರೀಕ್ಷೆ ಹೀಗೆ ಚಿಕಿತ್ಸೆಯ ಖರ್ಚುಗಳನ್ನು ನೋಡಿಕೊಳ್ಳಲಾಗುತ್ತದೆ. ಸೈಯದ್ ಅಜೀಜ್ ತಂದೆ ಮನೆಗಳಿಗೆ ಬಣ್ಣ ಹೊಡೆಯುವ ಕೆಲಸ ಮಾಡುತ್ತಿದ್ದು, ಅವರು ಆದಾಯದಿಂದ ಕುಟುಂಬ ನಿರ್ವಹಣೆ ಆಗುತ್ತಿದೆ. ಇದನ್ನೂ ಓದಿ:ನನಗೆ ಪರೀಕ್ಷೆ ಮಾಡಬೇಕು ಅಂತ ಯಾವುದೇ ಹಠ, ಪ್ರತಿಷ್ಠೆ ಇರಲಿಲ್ಲ: ಸುರೇಶ್ ಕುಮಾರ್

  • ಶ್ರುತಿ ಹಾಸನ್‍ಗೆ ಸರ್ಪ್ರೈಸ್ ನೀಡಿದ ಪ್ರಭಾಸ್

    ಶ್ರುತಿ ಹಾಸನ್‍ಗೆ ಸರ್ಪ್ರೈಸ್ ನೀಡಿದ ಪ್ರಭಾಸ್

    ಹೈದರಾಬಾದ್: ಕಾಲಿವುಡ್ ನಟಿ ಶ್ರುತಿ ಹಾಸನ್ ಸದ್ಯ ಸಲಾರ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಶ್ರುತಿ ಹಾಸನ್ ವಿವಿಧ ಭಕ್ಷ್ಯಗಳ ವೀಡಿಯೋವೊಂದನ್ನು ಶೇರ್ ಮಾಡುವ ಮೂಲಕ ಪ್ರಭಾಸ್‍ಗೆ ಧನ್ಯವಾದ ತಿಳಿಸಿದ್ದಾರೆ.

    ಟಾಲಿವುಡ್ ನಟ ಬಾಹುಬಲಿ ಪ್ರಭಾಸ್ ಹಾಗೂ ಶ್ರುತಿ ಸಲಾರ್ ಸಿನಿಮಾದಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರದ ಶೂಟಿಂಗ್ ವೇಳೆ ಪ್ರಭಾಸ್ ಶ್ರುತಿ ಹಾಸನ್‍ಗೆ ಭೋಜನವನ್ನು ಕಳುಹಿಸುವ ಮೂಲಕ ಬಿಗ್ ಸರ್ಪ್ರೈಸ್ ನೀಡಿದ್ದಾರೆ. ಈ ವೀಡಿಯೋವನ್ನು ಶ್ರುತಿ ಹಾಸನ್ ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದು, ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ವೀಡಿಯೋ ಜೊತೆ ಶ್ರುತಿ ಹಾಸನ್ ಪ್ರಭಾಸ್‍ರವರು ಯಾವಾಗಲೂ ಶಾಂತ ರೀತಿಯಲ್ಲಿರುವ ಮನುಷ್ಯ. ನಾನು ಕೂಡ ಕೂಲ್ ಆಗಿ ಮತ್ತು ಶಾಂತವಾಗಿರಲು ಪ್ರಯತ್ನಿಸುತ್ತಿದ್ದೇನೆ. ಆದರೆ ಸಾಧ್ಯವಾಗುತ್ತಿಲ್ಲ ಎನ್ನುತ್ತಾ, ತಿಂಡಿಗಳನ್ನು ಝೂಮ್ ಮಾಡಿ ತೋರಿಸಿದ್ದಾರೆ. ವೀಡಿಯೋದಲ್ಲಿ ದುಬೈ ಶೈಲಿಯ ಮಂಡಿ ಬಿರಿಯಾನಿ, ಗೊಂಗುರು, ಮಾಂಸ, ಚಿಕನ್ ಬಿರಿಯಾನಿ, ಪನ್ನೀರ್, ಕಬಾಬ್, ಏಡಿ, ವೆಜ್ ಮಂಚೂರಿಯನ್, ದಾಲ್‍ನನ್ನು ಕಾಣಬಹುದಾಗಿದೆ.

    ಸಲಾರ್ ಚಿತ್ರದ ಶೂಟಿಂಗ್ ಹೈದರಾಬಾದ್‍ನಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದು, ಈ ಚಿತ್ರಕ್ಕೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿದ್ದಾರೆ. 2022ರ ಏಪ್ರಿಲ್ 14ರಂದು ಈ ಚಿತ್ರ ತೆರೆ ಮೇಲೆ ಬರಲಿದೆ. ಇದನ್ನೂ ಓದಿ:ದಿವ್ಯಾ ಸುರೇಶ್ ಬಗ್ಗೆ ಲ್ಯಾಗ್ ಮಂಜು ಹೇಳಿದ್ದೇನು..?

  • 300 ಶ್ವಾನಗಳ ಕೊಲೆಗೈದು ಕೆರೆಗೆ ಎಸೆದರು

    300 ಶ್ವಾನಗಳ ಕೊಲೆಗೈದು ಕೆರೆಗೆ ಎಸೆದರು

    ಹೈದರಾಬಾದ್: ವಿಷದ ಇಂಜೆಕ್ಷನ್ ಚುಚ್ಚಿ 300 ನಾಯಿಗಳ ಕೊಲೆಮಾಡಿ ಶ್ವಾನಗಳ ಶವಗಳನ್ನು ಕೆರೆಗೆ ಎಸೆದಿರುವ ಘಟನೆ ಹೈದರಾಬಾದ್‍ನ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.

    ಏರಿಯಾದಲ್ಲಿ ಬೀದಿ ನಾಯಿಗಳು ಹೆಚ್ಚಾಗಿದ್ದರಿಂದ ಈ ಬಗ್ಗೆ ನಗರ ಪಂಚಾಯತ್‍ಗೆ ಜನರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಂಚಾಯತ್ ಸಿಬ್ಬಂದಿ ಜುಲೈ 24ರಂದು 300ಕ್ಕೂ ಹೆಚ್ಚು ನಾಯಿಗಳು ತಿನ್ನುವ ಊಟದಲ್ಲಿ ವಿಷ ಬೆರೆಸಿ ಕೆಲವಕ್ಕೆ ವಿಷದ ಇಂಜೆಕ್ಷನ್ ಚುಚ್ಚಲಾಗಿದೆ. ಬಳಿಕ ಸಾವನ್ನಪ್ಪಿದ ನಾಯಿಗಳ ಶವಗಳನ್ನು ಕೆರೆಗೆ ಎಸೆದಿದ್ದಾರೆ. ಬೀದಿ ನಾಯಿಗಳ ಸಂತಾನಹರಣ ಮಾಡುವ ಬದಲು ಅವುಗಳನ್ನು ಕೊಲ್ಲಲಾಗಿದೆ ಎಂದು ಅಲ್ಲಿನ ಸಾಮಾಜಿಕ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಹಳೆಯ ಎಸಿ ಬಸ್‍ಗಳಲ್ಲಿ ಹಣ್ಣು, ತರಕಾರಿ ಸಾಗಾಟಕ್ಕೆ ಕೆಎಸ್‌ಆರ್‌ಟಿಸಿಯಿಂದ ಚಿಂತನೆ

    ಈ ಅಮಾನವೀಯ ಘಟನೆಗೆ ಸಾಮಾಜಿಕ ಜಾಲತಾಣಗಳಲ್ಲೀ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ರೀತಿಯ ಆದೇಶ ಹೊರಡಿಸಿದ ಪಂಚಾಯತ್ ಸದಸ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವೂ ಕೇಳಿಬಂದಿದೆ. ಕೆರೆಯಲ್ಲಿ ಹಾಕಿದ್ದ ನಾಯಿಗಳ ಶವಗಳು ನೀರಿನಲ್ಲಿ ಕೊಳೆತಿದ್ದು, ಸುತ್ತಲೂ ದುರ್ವಾಸನೆ ಹರಡಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ಸ್ಥಳೀಯರು ದೂರು ನೀಡಿದ್ದು, ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

  • ಫ್ರೆಂಡ್‍ಶಿಪ್ ಡೇಗೆ ರಾಜಮೌಳಿ ಬಿಗ್ ಗಿಫ್ಟ್ – ರಿಲೀಸ್ ಆಯ್ತು ‘RRR’ ಫಸ್ಟ್ ಸಾಂಗ್

    ಫ್ರೆಂಡ್‍ಶಿಪ್ ಡೇಗೆ ರಾಜಮೌಳಿ ಬಿಗ್ ಗಿಫ್ಟ್ – ರಿಲೀಸ್ ಆಯ್ತು ‘RRR’ ಫಸ್ಟ್ ಸಾಂಗ್

    ಹೈದರಾಬಾದ್: ಟಾಲಿವುಡ್ ನಟ ಮೆಗಾ ಪ್ರಿನ್ಸ್ ರಾಮ್‍ಚರಣ್ ತೇಜ ಹಾಗೂ ಜ್ಯೂನಿಯರ್ ಎನ್‍ಟಿಆರ್ ಒಟ್ಟಿಗೆ ಅಭಿನಯಿಸಿರುವ ಬಹುನಿರೀಕ್ಷಿತ ‘ಆರ್‌ಆರ್‌ಆರ್’ ಸಿನಿಮಾದ ಮೊದಲ ಮ್ಯೂಸಿಕ್ ವೀಡಿಯೋ ಭಾನುವಾರ ರಿಲೀಸ್ ಆಗಿದೆ.

    ನಿರ್ದೇಶಕ ರಾಜಮೌಳಿಯವರು ಭರವಸೆ ನೀಡಿದಂತೆ ‘ಆರ್‌ಆರ್‌ಆರ್’ ದೋಸ್ತಿ ಎಂಬ ಟೈಟಲ್‍ನ ಮ್ಯೂಸಿಕಲ್ ವೀಡಿಯೋವನ್ನು ತಮಿಳು, ತೆಲುಗು, ಮಲಯಾಳಂ, ಕನ್ನಡ ಹಾಗೂ ಹಿಂದಿಯಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಿದ್ದಾರೆ. ವಿಶೇಷವೆಂದರೆ ಎಂ.ಎಂ ಕೀರವಾಣಿ ಸಂಯೋಜಿಸಿರುವ ಈ ಹಾಡನ್ನು ಅನಿರುದ್ಧ್ ರವಿಚಂದ್ರ, ವಿಜಯ್ ಯೇಸುದಾಸ್, ಅಮಿತ್ ತ್ರಿವೇದಿ, ಹೇಮಚಂದ್ರ ಮತ್ತು ಯಾಜಿನ್ ನಿಜಾರ್ ಹಾಡಿದ್ದಾರೆ.

    ಕೆಲವು ದಿನಗಳ ಹಿಂದೆಯಷ್ಟೇ ‘ಆರ್‌ಆರ್‌ಆರ್’ ಸಿನಿಮಾದ ನಿರ್ಮಾಪಕರು ಫ್ರೆಂಡ್‍ಶಿಪ್ ಡೇ ದಿನ ಆಗಸ್ಟ್ 1ರಂದು ಚಿತ್ರದ ಮೊದಲ ಹಾಡನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದ್ದರು. ಇದೀಗ ಬಿಡುಗಡೆಗೊಂಡಿರುವ ದೋಸ್ತಿ ಹಾಡಿನಲ್ಲಿ ಐವರು ಗಾಯಕರೊಂದಿಗೆ ಕೊನೆಯಲ್ಲಿ ರಾಮ್‍ಚರಣ್ ಹಾಗೂ ಜ್ಯೂನಿಯರ್ ಎನ್‍ಟಿಆರ್ ಕೂಡ ಸೂಟ್‍ನಲ್ಲಿ ಮಿಂಚಿದ್ದಾರೆ.

    ಸದ್ಯ ಈ ಹಾಡನ್ನು ರಾಜಮೌಳಿಯವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಸ್ನೇಹಿತರ ದಿನಾಚರಣೆಯಂದು ರಾಮರಾಜು ಹಾಗೂ ಭೀಮ ಎಂಬ ಇಬ್ಬರು ಪ್ರಬಲ ವ್ಯಕ್ತಿಗಳು ಎದುರಾಳಿಗಳಾಗಿ ಬರುತ್ತಿದ್ದಾರೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ರಾಮಚರಣ್ ಹಾಗೂ ಜ್ಯೂನಿಯರ್ ಎನ್‍ಟಿಆರ್ ಇದೇ ಮೊದಲ ಬಾರಿಗೆ ‘ಆರ್‌ಆರ್‌ಆರ್’ ಸಿನಿಮಾದ ಮೂಲಕ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿದ್ದು, ಈ ಚಿತ್ರಕ್ಕೆ ನಿರ್ದೇಶಕ ರಾಜಮೌಳಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇನ್ನೂ ಈ ಚಿತ್ರದಲ್ಲಿ ರಾಮ್‍ಗೆ ಜೋಡಿಯಾಗಿ ಬಾಲಿವುಡ್ ನಟಿ ಆಲಿಯಾ ಭಟ್ ಅಭಿನಯಿಸಿದ್ದಾರೆ. ಚಿತ್ರದ ಆಡಿಯೋ ಹಕ್ಕುಗಳನ್ನು ಲಹರಿ ಸಂಸ್ಥೆ ಖರೀದಿಸಿದೆ. ಇದನ್ನೂ ಓದಿ:ಮಮ್ಮಿ ಆಗ್ತಿದ್ದಾರಾ ಪದ್ಮಾವತಿ – ಆಸ್ಪತ್ರೆಗೆ ಬಂದ ದೀಪ್‍ವೀರ್

  • ರಾಧೆ ಶ್ಯಾಮ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ – ಪ್ರಭಾಸ್ ಅಭಿಮಾನಿಗಳಿಗೆ ನಿರಾಸೆ

    ರಾಧೆ ಶ್ಯಾಮ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ – ಪ್ರಭಾಸ್ ಅಭಿಮಾನಿಗಳಿಗೆ ನಿರಾಸೆ

    ಹೈದರಾಬಾದ್: ಟಾಲಿವುಡ್ ಬಾಹುಬಲಿ ನಟ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ರಾಧೆ ಶ್ಯಾಮ್ ಸಿನಿಮಾದ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ. ಆದರೆ ಈ ವಿಚಾರ ಅಭಿಮಾನಿಗಳಿಗೆ ಬೇಸರ ತರಿಸಿದೆ.

    ಕಳೆದ ಒಂದು ವರ್ಷದಿಂದ ಪ್ರಭಾಸ್‍ರನ್ನು ಬೆಳ್ಳಿ ಪರದೆ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಬೇಕಿದ್ದ ರಾಧೆ ಶ್ಯಾಮ ಸಿನಿಮಾ ಕೊರೊನಾ 2ನೇ ಅಲೆಯಿಂದಾಗಿ ಮುಂದೂಡಲಾಗಿತ್ತು. ಆದರೆ ಇದೀಗ ಚಿತ್ರತಂಡ ಸಿನಿಮಾವನ್ನು ಮುಂದಿನ ವರ್ಷ ಜನವರಿ 14ರಂದು ಅಂದರೆ ಸಂಕ್ರಾಂತಿ ಹಬ್ಬದಂದು ಬಿಡುಗಡೆಗೊಳಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ.

    ಈ ಕುರಿತಂತೆ ಚಿತ್ರತಂತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟರ್‍ವೊಂದನ್ನು ಹಂಚಿಕೊಂಡಿದ್ದು, ಹೊಸ ವರ್ಷ, ಹೊಸ ಆರಂಭ ಮತ್ತು ಹೊಸ ಬಿಡುಗಡೆ ದಿನಾಂಕ. ರಾಧೆ ಶ್ಯಾಮ 2022ರ ಜನವರಿ 14ರಂದು ಮಕರ ಸಂಕ್ರಾಂತಿ ಹಬ್ಬದಂದು ತೆರೆ ಮೇಲೆ ಬರಲು ಸಿದ್ಧವಾಗಿದೆ ಎಂದು ಬರೆಯಲಾಗಿದೆ.

    ಒಟ್ಟಾರೆ ಈ ವರ್ಷವಾದರೂ ಪ್ರಭಾಸ್‍ರನ್ನು ತೆರೆ ಮೇಲೆ ನೋಡಬಹುದು ಅಂದುಕೊಂಡಿದ್ದ ಅಭಿಮಾನಿಗಳಿಗೆ ಮುಂದಿನ ವರ್ಷದವರೆಗೂ ಕಾಯಬೇಕಾಲ್ಲ ಎಂದು ನಿರಾಸೆ ಮೂಡಿದೆ. ರಾಧೆ ಶ್ಯಾಮ ಸಿನಿಮಾದಲ್ಲಿ ಪ್ರಭಾಸ್‍ಗೆ ಜೋಡಿಯಾಗಿ ಪೂಜಾ ಹೆಗ್ಡೆ ಜೋಡಿಯಾಗಿದ್ದು, ಈ ಸಿನಿಮಾಕ್ಕೆ ನಿರ್ದೇಶಕ ರಾಧಾ ಕೃಷ್ಣ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ತೆಲುಗು, ತಮಿಳು, ಮಲಯಾಳಂ, ಕನ್ನಡ ಹಾಗೂ ಹಿಂದಿಯಲ್ಲಿ ರಾಧೆ ಶ್ಯಾಮ ಸಿನಿಮಾ ತೆರೆಕಾಣಿಲಿದೆ. ಸದ್ಯ ಸಲಾರ್, ಆದಿಪುರುಷ್ ಇನ್ನೂ ಹೆಸರಿಡದ ಎರಡು ಸಿನಿಮಾ ಹೀಗೆ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳು ಪ್ರಭಾಸ್ ಕೈನಲ್ಲಿದ್ದು, ಇವು ಇನ್ನೂ ಚಿತ್ರೀಕರಣದ ಹಂತದಲ್ಲಿದೆ. ಇದನ್ನೂ ಓದಿ:ಪತಿ ಜೊತೆಗಿನ ಲಿಪ್‍ಲಾಕ್ ಫೋಟೋ ಶೇರ್ ಮಾಡಿದ ಸೋನಂ ಕಪೂರ್

  • ರಶ್ಮಿಕಾ ಸಿನಿಮಾದಲ್ಲಿ ಬಾಲಿವುಡ್ ಸನ್ನಿ – ಇಬ್ಬರಲ್ಲಿ ಮೋಡಿ ಮಾಡೋರ್‍ಯಾರು?

    ರಶ್ಮಿಕಾ ಸಿನಿಮಾದಲ್ಲಿ ಬಾಲಿವುಡ್ ಸನ್ನಿ – ಇಬ್ಬರಲ್ಲಿ ಮೋಡಿ ಮಾಡೋರ್‍ಯಾರು?

    ಹೈದರಾಬಾದ್: ಸ್ಯಾಂಡಲ್‍ವುಡ್ ನಟಿ ರಶ್ಮಿಕಾ ಮಂದಣ್ಣಾ ಹಾಗೂ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ತೆಲುಗಿನ ಬಹುನಿರೀಕ್ಷಿತ ಸಿನಿಮಾ ಪುಷ್ಪದಲ್ಲಿ ನಟಿ ಸನ್ನಿ ಲಿಯೋನ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೀಗ ಟಾಲಿವುಡ್ ಸಿನಿ ಅಂಗಳದಲ್ಲಿ ಹರಿದಾಡುತ್ತಿದೆ.

    ಬಾಲಿವುಡ್ ಬಾದ್ ಶಾ ಕಿಂಗ್ ಖಾನ್ ಶಾರೂಖ್ ಖಾನ್, ಸಂಜಯ್ ದತ್, ಇಮ್ರಾನ್ ಹಶ್ಮಿ ಸಿನಿಮಾಗಳಲ್ಲಿ ಐಟಂ ಸಾಂಗ್‍ಗೆ ಹೆಜ್ಜೆ ಹಾಕಿದ್ದ ಸನ್ನಿ ಲಿಯೋನ್‍ನನ್ನು ಪುಷ್ಪ ಸಿನಿಮಾಕ್ಕೂ ಕೂಡ ಕರೆತರಲು ಚಿತ್ರತಂಡ ಪ್ಲಾನ್ ಮಾಡಿದೆ ಎಂದು ಹೇಳಲಾಗುತ್ತಿದೆ.

    ಈಗಾಗಲೇ ಈ ಕುರಿತಂತೆ ಪುಷ್ಪ ಸಿನಿಮಾದ ನಿರ್ದೇಶಕ ಸುಕುಮಾರನ್, ಸನ್ನಿಲಿಯೋನ್ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಚಿತ್ರದ ಒಂದು ಹಾಡಿಗೆ ಸನ್ನಿ ಲಿಯೋನ್ ಬರೋಬ್ಬರಿ 50 ಲಕ್ಷ ಸಂಭಾವನೆಯ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ.

    ಪುಷ್ಪ ಸಿನಿಮಾದಲ್ಲಿ ನಟ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣಾ, ಡಾಲಿ ಧನಂಜಯ್, ಫಹಾದ್ ಫಾಸಿಲ್, ಜಗಪತಿ ಬಾಬು, ಪ್ರಕಾಶ್ ರಾಜ್ ಮುಂತಾದ ದೊಡ್ಡ ಸ್ಟಾರ್ ಕಲಾವಿದರು ನಟಿಸಿದ್ದು, ದೇಶಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಸನ್ನಿ ಲಿಯೋನ್ ಪುಷ್ಪ ಚಿತ್ರತಂಡಕ್ಕೆ ಸೇರಿಕೊಂಡರೆ ಚಿತ್ರಕ್ಕೆ ಮತ್ತಷ್ಟು ಪ್ಲಸ್ ಪಾಯಿಂಟ್ ಆಗುತ್ತದೆ ಎಂಬುವುದು ಚಿತ್ರತಂಡದ ಪ್ಲಾನ್ ಆಗಿದೆ. ಇದನ್ನೂ ಓದಿ: ವಿಕ್ರಾಂತ್ ರೋಣ ಚಿತ್ರಕ್ಕಾಗಿ ದೊಡ್ಡ ಮೊತ್ತದ ಸಂಭಾವನೆ ಪಡೆದ ಮರ್ಡರ್ ಬೆಡಗಿ

  • ಆಪರೇಷನ್‍ಗೆಂದು ಕೂಡಿಟ್ಟಿದ್ದ ಬಡ ತರಕಾರಿ ವ್ಯಾಪಾರಿಯ ಹಣವನ್ನು ಕಡಿದ ಇಲಿಗಳು

    ಆಪರೇಷನ್‍ಗೆಂದು ಕೂಡಿಟ್ಟಿದ್ದ ಬಡ ತರಕಾರಿ ವ್ಯಾಪಾರಿಯ ಹಣವನ್ನು ಕಡಿದ ಇಲಿಗಳು

    ಹೈದರಾಬಾದ್: ಬಡ ತರಕಾರಿ ವ್ಯಾಪಾರಿ ಕಷ್ಟಪಟ್ಟು ದುಡಿದ ಹಣವನ್ನು ತಮ್ಮ ಆಪರೇಷನ್‍ಗೆಂದು ಕೂಡಿಟ್ಟಿದ್ದರು. ಆದರೆ ಇಲಿಗಳು ಸುಮಾರು 2 ಲಕ್ಷ ರೂ.ಗಳನ್ನು ಕಚ್ಚಿ ಹಾಳು ಮಾಡಿದ್ದವು. ಇದರಿಂದ ಆಘಾತಕ್ಕೊಳಗಾದ ವ್ಯಾಪಾರಿ ದಿಕ್ಕು ತೋಚದೆ ತಲೆ ಮೇಲೆ ಕೈ ಹೊತ್ತು ಕುಳಿತ್ತಿದ್ದರು. ಬಳಿಕ ಅಚ್ಚರಿ ರೀತಿಯಲ್ಲಿ ಅವರ ಶಸ್ತ್ರಚಿಕಿತ್ಸೆಗೆ ಸಹಾಯ ದೊರೆತಿದೆ.

    ತೆಲಂಗಾಣದ ಮೆಹಬೂಬಬಾದ್ ವೇಮನೂರ್ ಗ್ರಾಮದ ರೆದ್ಯಾ ನಾಯಕ್ ಅವರು ತಿಂಗಳುಗಟ್ಟಲೇ ಕಷ್ಟಪಟ್ಟು ದುಡಿದು ಕಿಬ್ಬೊಟ್ಟೆ ಚಿಕಿತ್ಸೆಗಾಗಿ 2 ಲಕ್ಷ ರೂ.ಗಳನ್ನು ಸಂಗ್ರಹಿಸಿಟ್ಟಿದ್ದರು. ನಾಲ್ಕು ವರ್ಷಗಳ ಹಿಂದೆ ಇವರಿಗೆ ಕಿಬ್ಬೊಟ್ಟೆಯ ಗಡ್ಡೆ ಕಾಣಿಸಿಕೊಂಡಿತ್ತು. ಆಗಿನಿಂದ ಶಸ್ತ್ರಚಿಕಿತ್ಸೆಗಾಗಿ ನಿತ್ಯ ಹಣವನ್ನು ಕೂಡಿಡುತ್ತ ಬಂದಿದ್ದರು.

    ಬಳಿಕ ಆಪರೇಷನ್ ದಿನದಂದು ನೋಟುಗಳನ್ನು ಸಂಗ್ರಹಿಸಿಟ್ಟಿದ್ದ ಕಾಟನ್ ಬ್ಯಾಗ್‍ನ್ನು ಅಲ್ಮೆರಾದಿಂದ ಹೊರ ತೆಗೆದಿದ್ದು, ಈ ವೇಳೆ ಇಲಿಗಳು ನೋಟುಗಳನ್ನು ಹಾಳು ಮಾಡಿರುವುದು ಬೆಳಕಿಗೆ ಬಂದಿದೆ. ಇದನ್ನು ಕಂಡ ತರಕಾರಿ ವ್ಯಾಪಾರಿಗೆ ತಲೆ ಮೇಲೆ ಆಕಾಶ ಕಳಚಿ ಬಿದ್ದಂತಾಗಿದೆ. ಹೇಗೋ ಬೀರು ಒಳಗೆ ನುಗ್ಗಿದ್ದ ಇಲಿಗಳು ನೋಟುಗಳನ್ನು ಹಾಳು ಮಾಡಿದ್ದವು.

    ಇದರಿಂದ ಆತಂಕಕ್ಕೊಳಗಾದ ನಾಯಕ್ ಅವರು, ಹಲವು ಸ್ಥಳೀಯ ಬ್ಯಾಂಕ್‍ಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಆದರೆ ಬ್ಯಾಂಕ್‍ನವರು ನೋಟುಗಳು ಹಾಳಾಗಿವೆ. ಇವುಗಳನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

    ಇದಕ್ಕೆ ಪರಿಹಾರ ಕಂಡುಕೊಳ್ಳಲು ತರಕಾರಿ ವ್ಯಾಪಾರಿ ಹೋರಾಟ ನಡೆಸುತ್ತಿರುವಾಗಲೇ ಈ ವಿಷಯ ತೆಲಂಗಾಣದ ಬುಡಕಟ್ಟು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಸತ್ಯವತಿ ರಾಠೋಡ್ ಅವರ ಗಮನಕ್ಕೆ ಬರುತ್ತದೆ. ತಕ್ಷಣ ಎಚ್ಚೆತ್ತ ಸಚಿವರು, ಮಹಬೂಬಬಾದ್ ಡಿಸಿಯವರೊಂದಿಗೆ ನಾಯಕ್ ಅವರನ್ನು ಭೇಟಿ ಮಾಡಿದ್ದಾರೆ. ಬಳಿಕ ಆಸ್ಪತ್ರೆ ಸೇರಿದಂತೆ ಶಸ್ತ್ರಚಿಕಿತ್ಸೆ ಬೇಕಾಗುವ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.