Tag: Hyderabad

  • ಪ್ರಭಾಸ್, ದೀಪಿಕಾ ಪಡುಕೋಣೆಯ ಪ್ರಾಜೆಕ್ಟ್ ಕೆ ಚಿತ್ರೀಕರಣ ಆರಂಭ ಯಾವಾಗ?

    ಪ್ರಭಾಸ್, ದೀಪಿಕಾ ಪಡುಕೋಣೆಯ ಪ್ರಾಜೆಕ್ಟ್ ಕೆ ಚಿತ್ರೀಕರಣ ಆರಂಭ ಯಾವಾಗ?

    ಹೈದರಾಬಾದ್: ಟಾಲಿವುಡ್ ನಟ ಪ್ರಭಾಸ್ ಹಾಗೂ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಬಿಗ್ ಬಿ ಅಮಿತಾಭ್ ಬಚ್ಚನ್ ಅಭಿನಯ ಹೊಸ ಪ್ರಾಜೆಕ್ಟ್ ಕೆ ಜುಲೈನಿಂದ ಆರಂಭವಾಗಲಿದೆ ಎಂದು ಹೇಳಲಾಗುತ್ತಿತ್ತು. ಆದರೀಗ ಈ ಚಿತ್ರದ ಚಿತ್ರೀಕರಣ ನವೆಂಬರ್‌ನಿಂದ ಆರಂಭವಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

    K Project

    ನಿರ್ದೇಶಕ ನಾಗ್ ಅಶ್ವಿನ್ ನಿರ್ದೇಶಿಸುತ್ತಿರುವ ಈ ಪ್ರಾಜೆಕ್ಟ್ ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿದ್ದು, ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ನವೆಂಬರ್‌ನಿಂದ ಆರಂಭವಾಗಲಿದ್ದು, ಒಂದು ವರ್ಷಗಳ ಕಾಲ ಶೂಟಿಂಗ್ ನಡೆಯಲಿದೆ. ಅಲ್ಲದೇ 2022ರ ಅಂತ್ಯದ ವೇಳೆಗೆ ಪ್ರಾಜೆಕ್ಟ್ ಕಂಪ್ಲೀಟ್ ಮಾಡುವ ನಿರೀಕ್ಷೆಯನ್ನು ನಿರ್ಮಾಪಕರು ಹೊಂದಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಪ್ರಾಜೆಕ್ಟ್ ಕೆ ವೈ ಜಯಂತಿ ಮೂವೀಸ್ ನಿರ್ಮಿಸುತ್ತಿದೆ.  ಇದನ್ನೂ ಓದಿ: ಇ-ಹರಾಜಿನಲ್ಲಿ ಭಾಗವಹಿಸಲು ಜನರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ

    K Project

    ಜುಲೈನಲ್ಲಿ ಅಮಿತಾಭ್ ಬಚ್ಚನ್ ಚಿತ್ರೀಕರಣವನ್ನು ಆರಂಭಿಸಿದರು. ದೀಪಿಕಾ ಪಡುಕೋಣೆ ಶಕುನ್ ಬಾತ್ರಾ ಅವರ ಹೆಸರಿಡದ ಪ್ರಾಜೆಕ್ಟ್ ಪೂರ್ಣಗೊಳಿಸಿದ್ದು, ಪ್ರಭಾಸ್ ಆದಿ ಪುರುಷ ಸಿನಿಮಾದ ಚಿತ್ರೀಕರಣ ಶೀಘ್ರದಲ್ಲಿಯೇ ಕಂಪ್ಲೀಟ್ ಆಗಲಿದೆ. ಈ ಚಿತ್ರದ ಚಿತ್ರೀಕರಣಕ್ಕಾಗಿ ಹೈದರಾಬಾದ್‍ನಲ್ಲಿ ಬೃಹತ್ ಸೆಟ್ ನಿರ್ಮಿಸಲಾಗಿದ್ದು, ಪ್ರಾಜೆಕ್ಟ್ ಕೆ ತಂಡವನ್ನು ಶೀಘ್ರದಲ್ಲಿಯೇ ಕಲಾವಿದರು ಸೇರಿಕೊಳ್ಳಲಿದ್ದಾರೆ.  ಇದನ್ನೂ ಓದಿ: ಐವರ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್- ಡೆತ್ ನೋಟ್‍ನಲ್ಲಿ ಅಪ್ಪನ ವಿರುದ್ಧವೇ ಮಕ್ಕಳ ಆರೋಪ

    ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ಪ್ರಭಾಸ್ ಪ್ರಾಜೆಕ್ಟ್ ಕೆ ನಲ್ಲಿ ಒಟ್ಟಿಗೆ ಕೆಲಸ ಮಾಡಲು ಉತ್ಸುಕರಾಗಿದ್ದಾರೆ. ಇನ್ನೂ ಈ ಚಿತ್ರದ ಚಿತ್ರೀಕರಣಕ್ಕಾಗಿ ಹೈದರಾಬಾದ್‍ನಲ್ಲಿ ಬೃಹತ್ ಸೆಟ್ ನಿರ್ಮಿಸಲಾಗಿದೆ. ಅತ್ಯಂತ ದುಬಾರಿ ಭಾರತೀಯ ಸಿನಿಮಾಗಳನ್ನು ತೆರೆದ ಹೆಸರಾಂತ ನಿರ್ದೇಶಕರಲ್ಲಿ ನಾಗ್ ಅಶ್ವಿನ್ ಕೂಡ ಒಬ್ಬರಾಗಿದ್ದು, ಪ್ರಾಜೆಕ್ಟ್ ಕೆ ಗೆ ವೈಜಯಂತಿ ಮೂವೀಸ್ ಬಂಡವಾಳ ಹೂಡುತ್ತಿದೆ.

  • 21 ಕೆಜಿಯ ಲಡ್ಡು 18.90 ಲಕ್ಷಕ್ಕೆ ಹರಾಜಾಯ್ತು!

    21 ಕೆಜಿಯ ಲಡ್ಡು 18.90 ಲಕ್ಷಕ್ಕೆ ಹರಾಜಾಯ್ತು!

    ಹೈದರಾಬಾದ್: ಬಾಲಾಪುರ ಗಣೇಶನ 21 ಕೆ.ಜಿ ತೂಕದ ಫೇಮಸ್ ಲಡ್ಡು ಭಾನುವಾರ 18.90 ಲಕ್ಷ ರೂಪಾಯಿಗೆ ಹರಾಜು ಹಾಕಲಾಯಿತು.

    ತೆಲಂಗಾಣದ ನಾದಾರ್‌ಗುಲ್ ಎಂಬಲ್ಲಿನ ಉದ್ಯಮಿ ಮರಿ ಶಶಾನ್ ರೆಡ್ಡಿಯಿಂದ ಈ ಲಡ್ಡುವನ್ನು ಆಂಧ್ರಪ್ರದೇಶದ ವಿಧಾನಪರಿಷತ್ ಸದಸ್ಯ ರಮೇಶ್ ಯಾದವ್ ಖರೀದಿಸಿದರು. ಮೊದಲಿಗೆ 1,116ರೂ. ಯಿಂದ ಆರಂಭವಾದ ಹರಾಜು ಪ್ರಕ್ರಿಯೆ ಕೆಲವೇ ನಿಮಿಷಗಳಲ್ಲಿ ನೂರರು ಭಕ್ತರ ಮಧ್ಯೆ ಅಧಿಕ ಮೊತ್ತಕ್ಕೆ ಹರಾಜಾಯಿತು. ಈ ಲಡ್ಡುವನ್ನು ಯಾದವ್ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್. ಜಗನ್ ಮೋಹನ್ ರೆಡ್ಡಿಗೆ ಉಡುಗೊರೆಯಾಗಿ ನೀಡುವುದಾಗಿ ತಿಳಿಸಿದರು.

    2019ರಲ್ಲಿ 17.60 ಲಕ್ಷ ರೂ.ಗೆ ಲಡ್ಡು ಖರೀದಿಸಿದ ಉದ್ಯಮಿ ಮತ್ತು ಕೃಷಿಕ ಕೊಲನು ರಾಮ್ ರೆಡ್ಡಿ ಸಹ ಈ ವರ್ಷ ಹರಾಜಿನಲ್ಲಿ ಭಾಗವಹಿಸಿದ್ದರು. ಹರಾಜನ್ನು ವೀಕ್ಷಿಸಲು ರಾಜ್ಯ ಶಿಕ್ಷಣ ಸಚಿವ. ಪಿ. ಸಬಿತಾ ಇಂದ್ರ ರೆಡ್ಡಿ, ಮಾಜಿ ಶಾಸಕ ಟಿ.ಕೃಷ್ಣ ರೆಡ್ಡಿ ಮತ್ತು ಹಲವಾರು ರಾಜಕಾರಣಿಗಳು ಹಾಜರಿದ್ದರು. ಇದನ್ನೂ ಓದಿ: ಅನುಮತಿ ಇಲ್ಲದೇ ಬಿಸಿಯೂಟದ ಕೋಣೆ ನೆಲಸಮ – ಅಧ್ಯಕ್ಷನ ದರ್ಪಕ್ಕೆ ಗ್ರಾಮಸ್ಥರ ಆಕ್ರೋಶ

    ನಗರದ ಹೊರವಲಯದಲ್ಲಿರುವ ಬಾಲಾಪುರ ಗ್ರಾಮದಲ್ಲಿ ಪ್ರತಿ ವರ್ಷ ಗಣೇಶ ವಿಸರ್ಜನೆಯ ಸಮಯದಲ್ಲಿ ಲಡ್ಡುವನ್ನು ಮೆರವಣಿಗೆ ಮಾಡಲಾಗುತ್ತದೆ. ಪ್ರತಿ ವರ್ಷ ಹರಾಜನ್ನು ಆಯೋಜಿಸುವ ಬಾಲಪುರ ಗಣೇಶ ಉತ್ಸವ ಸಮಿತಿಯ ಪ್ರಕಾರ 1994ರಲ್ಲಿ ನಡೆದ ಮೊದಲ ಹರಾಜಿನಲ್ಲಿ 450 ರೂ.ಗೆ ಲಡ್ಡು ಮಾರಾಟವಾಗಿತ್ತು.

    Laddu

    ಅಂದಿನಿಂದ ಈ ಸಿಹಿ ಲಡ್ಡು ಫೇಮಸ್ ಹಾಗೂ ದುಬಾರಿ ಬೆಲೆಯನ್ನು ಹೊಂದಿದೆ. ಅಲ್ಲದೇ ವಿಜೇತರಿಗೆ ಸಮೃದ್ಧಿಯನ್ನು ತರುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಉದ್ಯಮಿಗಳು ಹಾಗೂ ರಾಜಕಾರಣಿಗಳು ಪ್ರತಿ ವರ್ಷ ಈ ಲಡ್ಡುಗಾಗಿ ಪರಸ್ಪರ ಪೈಪೋಟಿ ನಡೆಸುತ್ತಾರೆ. 2018ರಲ್ಲಿ 16.60 ಲಕ್ಷ ರೂ.ಗೆ ಈ ಲಡ್ಡು ಹರಾಜಾಗಿತ್ತು. ಆದರೆ ಕಳೆದ ವರ್ಷ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಸಾರ್ವಜನಿಕ ಆಚರಣೆಗಳಿಲ್ಲದ ಕಾರಣ ಹರಾಜನ್ನು ರದ್ದುಗೊಳಿಸಲಾಗಿತ್ತು.  ಇದನ್ನೂ ಓದಿ: ಮತ್ತೆ ಒಂದಾಗಲಿರುವ ರಾಜಕುಮಾರ ಜೋಡಿ – ಸೆಟ್ಟೇರಲಿದೆ ಪುನೀತ್, ಸಂತೋಷ್ ಕಾಂಬಿನೇಷನ್‍ನ ಹೊಸ ಸಿನಿಮಾ

  • ಅಮೃತ ಮಹೋತ್ಸವದ ಎಲ್ಲಾ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಕ್ರಮ: ಹಾಲಪ್ಪ ಆಚಾರ್

    ಅಮೃತ ಮಹೋತ್ಸವದ ಎಲ್ಲಾ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಕ್ರಮ: ಹಾಲಪ್ಪ ಆಚಾರ್

    ಕೊಪ್ಪಳ: ದೇಶದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸವಿನೆನಪಿಗಾಗಿ ನಮ್ಮ ಸರ್ಕಾರವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಎಲ್ಲಾ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಸರ್ಕಾರದ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರು ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಬಸಪ್ಪ ಆಚಾರ್ ಅವರು ಹೇಳಿದರು.

    74ನೇ ಕಲ್ಯಾಣ-ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ನಗರದ ಗದಗ ರಸ್ತೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

    ದೇಶದ ಎಲ್ಲ ಭಾಗಗಳಲ್ಲಿ ಆಗಸ್ಟ್ 15 ರಂದು ಮಾತ್ರ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರೆ, ಕಲ್ಯಾಣ-ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಮಾತ್ರ ಆಗಸ್ಟ್ 15 ಮತ್ತು ಸೆಪ್ಟೆಂಬರ್ 17 ರಂದು ಹೀಗೆ ಎರಡೆರಡು ಬಾರಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ. ಬ್ರಿಟೀಷರ ಪ್ರಚೋದನೆಯಿಂದ ಹೈದರಾಬಾದ್ ಪ್ರದೇಶವನ್ನು ಸ್ವತಂತ್ರ ರಾಜ್ಯವನ್ನಾಗಿ ಅಂದಿನ ನಿಜಾಮರಾದ ಮೀರ್ ಉಸ್ಮಾನ್ ಅಲಿ ಘೋಷಿಸಿಕೊಂಡಿದ್ದರು.

    ಹೈದರಾಬಾದ್ ಸಂಸ್ಥಾನದಲ್ಲಿ ಇಂದಿನ ತೆಲಂಗಾಣ, ಮಹಾರಾಷ್ಟ್ರದ ಮರಾಠಾವಾಡ ಹಾಗೂ ರಾಜ್ಯದ ಹೈದರಾಬಾದ್ ಕರ್ನಾಟಕದ 7 ಜಿಲ್ಲೆಗಳು ಸೇರ್ಪಡೆಯಾಗಿದ್ದವು. ನಿಜಾಮರ ಆಡಳಿತದಲ್ಲಿ ಜನಸಾಮಾನ್ಯರಿಗೆ ವಾಕ್ ಸ್ವಾತಂತ್ರ್ಯ, ಸಂಘಟನಾ ಸ್ವಾತಂತ್ರ್ಯ ಹಾಗೂ ಪತ್ರಿಕಾ ಸ್ವಾತಂತ್ರ್ಯ ಕ್ಕೆ ಅವಕಾಶವಿರಲಿಲ್ಲ. ಅಂದಿನ ನಿಜಾಮರು ಉಸ್ಮಾನಾ ಬಾದಿನ ಕಾಶಿಂ ರಿಜ್ವಿ ಎಂಬ ಮತಾಂಧನ ನೇತೃತ್ವದಲ್ಲಿ ‘ರಜಾಕರ ಪಡೆ’ ಎಂಬ ಭಯೋತ್ಪಾದಕ ಸೈನ್ಯವನ್ನು ನಿರ್ಮಿಸಿ ಜನಸಾಮಾನ್ಯರ ಮೇಲೆ ನಿರಂತರವಾಗಿ ಅನ್ಯಾಯ, ದೌರ್ಜನ್ಯ ಮಾಡುತ್ತಿದ್ದನು. ಇದನ್ನು ಸಹಿಸದೆ ಸ್ವಾಮಿ ರಮಾನಂದ ತೀರ್ಥರು ‘ಹೈದರಾಬಾದ್ ಕರ್ನಾಟಕ ವಿಮೋಚನಾ’ ಹೋರಾಟವನ್ನು ಅಹಿಂಸಾತ್ಮಕವಾಗಿ ಪ್ರಾರಂಭಿಸಿದರು ಎಂದರು.

    ಈ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಸಂದರ್ಭದಲ್ಲಿ ನಾನು ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವನಾಗಿರುವುದು ಬಹು ದೊಡ್ಡದಾದ ಜವಾಬ್ದಾರಿಯೆಂದು ಭಾವಿಸಿ ಈ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸರ್ವ ಪ್ರಯತ್ನ ಮಾಡುವುದಾಗಿ ಭರವಸೆಯನ್ನು ನೀಡುತ್ತಾ, ಎಲ್ಲರಿಗೂ ‘ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ’ ಶುಭಾಶಯಗಳನ್ನು ತಿಳಿಸಿದರು. ಇದನ್ನೂ ಓದಿ: ಹಿಂದುತ್ವದ ಹೆಸರು ಹೇಳಿಕೊಂಡು ಬಂದಿದೆ ಅಂತಲ್ಲ, ದೇಶದ ಸಂಸ್ಕೃತಿ ಉಳಿಸುವ ಸರ್ಕಾರ: ಸಚಿವ ನಾಗೇಶ್

    ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ:
    74ನೇ ಕಲ್ಯಾಣ-ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ವಿವಿಧ ಶಾಲಾ ಮಕ್ಕಳು, ಪೊಲೀಸ್, ಎನ್.ಸಿ.ಸಿ., ಸೇವಾದಳ, ಭಾರತ ಸ್ಕೌಟ್ಸ್ & ಗೈಡ್ಸ್ ಹಾಗೂ ಗೃಹ ರಕ್ಷಕ ದಳದಿಂದ ಪಥಸಂಚಲನ, ಗೌರವ ರಕ್ಷೆ ಸ್ವೀಕಾರ ಕಾರ್ಯಕ್ರಮ ಜರುಗಿತು. ಪಥಸಂಚಲನದಲ್ಲಿ 10 ತಂಡಗಳು ಭಾಗವಹಿಸಿದ್ದವು. ನಗರದ ನಂದೀಶ್ವರ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದನ್ನೂ ಓದಿ: ಮಾಸ್ಕ್ ಹಾಕದ ವಿದ್ಯಾರ್ಥಿಗಳ ಮೇಲೆ ಸಚಿವ ನಾಗೇಶ್ ಗರಂ

  • 6 ವರ್ಷದ ಬಾಲಕಿಯನ್ನು ರೇಪ್‍ಗೈದ ಆರೋಪಿ ರೈಲ್ವೇ ಹಳಿಯಲ್ಲಿ ಶವವಾಗಿ ಪತ್ತೆ

    6 ವರ್ಷದ ಬಾಲಕಿಯನ್ನು ರೇಪ್‍ಗೈದ ಆರೋಪಿ ರೈಲ್ವೇ ಹಳಿಯಲ್ಲಿ ಶವವಾಗಿ ಪತ್ತೆ

    ಹೈದರಾಬಾದ್: 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದ ವ್ಯಕ್ತಿಯೋರ್ವ ರೈಲ್ವೇ ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದಾನೆ.

    ಸೈದಾಬಾದ್‍ನಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಆಕೆಯನ್ನು ಕೊಲೆ ಮಾಡಿದ್ದ ಬಗ್ಗೆ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಸೇರಿದಂತೆ ದೇಶಾದ್ಯಂತ ಸುದ್ದಿ ಮಾಡಿತ್ತು. ಬಳಿಕ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದರು. ಆದರೆ ಇದೀಗ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಪಲ್ಲಂಕೊಂಡ ರಾಜು ಎಂಬಾತ ಶವವಾಗಿ ರೈಲ್ವೇ ಹಳಿ ಮೇಲೆ ಪತ್ತೆಯಾಗಿದ್ದಾನೆ. ಇದನ್ನೂ ಓದಿ: ಮಹಿಳಾ ಅಧಿಕಾರಿಗಳು ಅನ್ನೋದೆ ಕೆಲವರಿಗೆ ಅಡ್ವಾಂಟೇಜ್ : ಸಾ.ರಾ ಮಹೇಶ್

    ಸೈದಾಬಾದ್‍ನಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿ ಪಲ್ಲಂಕೊಂಡ ರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಉನ್ನತ ಮೂಲಗಳಿಂದ ತಿಳಿದುಬಂದಿದ್ದು, ರೈಲಿಗೆ ತಲೆಕೊಟ್ಟು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ಆತನ ಕೈ ಮತ್ತು ಶರೀರದ ಮೇಲಿದ್ದ ಹಚ್ಚೆಯ ಆಧಾರದ ಮೇಲೆ ಆತ ರಾಜು ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬೆಲೆ ಏರಿಕೆ ಅನಿವಾರ್ಯ, ಖಜಾನೆ ತುಂಬಲು ಬೆಲೆ ಹೆಚ್ಚಳ ಮಾಡಲೇಬೇಕಾಗುತ್ತೆ: ಎಚ್‍ಡಿಕೆ

    ಹೈದರಾಬಾದ್‍ನ ಸಮೀಪದ ಸೈದಾಬಾದ್‍ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಆಕೆಯನ್ನು ಭೀಕರವಾಗಿ ಹತ್ಯೆ ಮಾಡಿದ್ದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಬಾಲಕಿಯನ್ನು ಕೊಲೆಗೈದು ಆ ಬಳಿಕ ಕಾಣೆಯಾಗಿದ್ದ. ಪೊಲೀಸರು ಆತನ ಪತ್ತೆಗಾಗಿ ಹುಡುಕಾಟದಲ್ಲಿದ್ದರು ಆದರೂ ಆತನ ಪತ್ತೆ ಸಾಧ್ಯವಾಗಿರಲಿಲ್ಲ. ಪೊಲೀಸರು ಈತನ ಸುಳಿವು ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನವನ್ನೂ ಘೋಷಿಸಿದ್ದರು. ಅದಲ್ಲದೆ ತೆಲಂಗಾಣ ಗೃಹ ಸಚಿವರು ಆರೋಪಿಯನ್ನು ಎನ್‍ಕೌಂಟರ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಆದರೆ ಇದೀಗ ಆರೋಪಿ ಶವವಾಗಿ ಪತ್ತೆಯಾಗಿದ್ದಾನೆ.

  • ಬೈಕ್ ಆಕ್ಸಿಡೆಂಟ್ – ಟಾಲಿವುಡ್ ನಟ ಸಾಯಿಧರ್ಮ ತೇಜ್ ಸ್ಥಿತಿ ಗಂಭೀರ

    ಬೈಕ್ ಆಕ್ಸಿಡೆಂಟ್ – ಟಾಲಿವುಡ್ ನಟ ಸಾಯಿಧರ್ಮ ತೇಜ್ ಸ್ಥಿತಿ ಗಂಭೀರ

    ಹೈದರಾಬಾದ್: ನಟ ಚಿರಂಜೀವಿ ಕುಟುಂಬದ ಕುಡಿ, ತೆಲುಗು ನಟ ಸಾಯಿಧರ್ಮ ತೇಜ್ ಅವರ ಬೈಕ್ ಆಕ್ಸಿಡೆಂಟ್ ಸಂಭವಿಸಿ ಸ್ಥಿತಿ ಗಂಭೀರವಾಗಿದೆ.

    ನಿನ್ನೆ ರಾತ್ರಿ 8.30ರ ಸುಮಾರಿಗೆ ಸಾಯಿಧರ್ಮ ತೇಜ್ ಹೈದ್ರಾಬಾದ್‍ನ ಮಾದಾಪುರ್ ಕೇಬಲ್ ಬ್ರಿಡ್ಜ್ ಬಳಿ ಸ್ಪೋರ್ಟ್ಸ್ ಬೈಕ್‍ನಲ್ಲಿ ಬರುವಾಗ ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಪಿಡ್ಸ್ ಬಂದು ಕೋಮಾ ಸ್ಥಿತಿಗೆ ತಲುಪಿದ್ದಾರೆ. ಇದನ್ನೂ ಓದಿ: ನಾನು ಚರ್ಚೆಗೆ ಬರಲು ಸಿದ್ಧ- ಸಂಬರ್ಗಿಗೆ ಸವಾಲೆಸೆದ ಚಂದ್ರಚೂಡ್

    ಸಾಯಿಧರ್ಮ ತೇಜ್ ಬಲಗಣ್ಣು ಹಾಗೂ ಎದೆ ಭಾಗ, ಭುಜ, ಹೊಟ್ಟೆ ಭಾಗಕ್ಕೆ ಗಂಭೀರ ಗಾಯವಾಗಿದೆ. ಸದ್ಯ ಹೈದ್ರಾಬಾದ್‍ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ವೈದ್ಯರು ಔಟ್ ಆಫ್ ಡೇಂಜರ್ ಎಂದು ತಿಳಿಸಿದ್ದಾರೆ. ಚಿರಂಜೀವಿ, ಪವನ್ ಕಲ್ಯಾಣ್, ಅಲ್ಲು ಅರ್ಜುನ್, ಅಲ್ಲು ಅರವಿಂದ್ ಸೇರಿದಂತೆ ಇಡೀ ಕುಟುಂಬವೇ ಆಸ್ಪತ್ರೆಯಲ್ಲಿದ್ದಾರೆ. ಇತ್ತ ಅಭಿಮಾನಿಗಳು ಕಂಗಾಲಾಗಿದ್ದು ಕುಟುಂಬಸ್ಥರು ಆತಂಕ ಪಡುವ ಅಗತ್ಯವಿಲ್ಲ. ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ. ಬೈಕ್ ಸ್ಕಿಡ್ ಆಗಿ ಅಪಘಾತವಾಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ಬಲಗಣ್ಣು, ಬಲಭಾಗದ ಎದೆಗೆ ಗಾಯಗಳಾಗಿದ್ದು, ಭುಜದ ಮೂಳೆ ಮುರಿದಿದೆ. ಮೆದುಳು ಹಾಗೂ ಇತರ ಸೂಕ್ತ ಭಾಗಕ್ಕೆ ಯಾವುದೇ ರೀತಿಯ ಪೆಟ್ಟು ಬಿದ್ದಿಲ್ಲ. ಸದ್ಯ ಕೋಮಾದಲ್ಲಿದ್ದಾರೆ, 24 ಗಂಟೆ ನಿಗಾವಹಿಸಲಾಗಿದೆ ಎಂದು ಅಪೋಲೋ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಅರವಿಂದ್ ವೀಡಿಯೋ ಮಾಡಿ ಅದನ್ನು ಟ್ರೋಲಿಗನಿಗೆ ಸಂಬರ್ಗಿ ಕೊಟ್ಟ: ಚಂದ್ರಚೂಡ್

  • ಇನ್‍ ಸ್ಟಾ ಫಾಲೋವರ್ಸ್ – ಯಾರಿಗೆ ಎಷ್ಟು ಮಂದಿ ಅಭಿಮಾನಿಗಳಿದ್ದಾರೆ?

    ಇನ್‍ ಸ್ಟಾ ಫಾಲೋವರ್ಸ್ – ಯಾರಿಗೆ ಎಷ್ಟು ಮಂದಿ ಅಭಿಮಾನಿಗಳಿದ್ದಾರೆ?

    ಹೈದರಾಬಾದ್: ದಕ್ಷಿಣ ಭಾರತದ ಟಾಲಿವುಡ್ ಸ್ಟೈಲಿಶ್ ನಟ ಅಲ್ಲು ಅರ್ಜುನ್ 1.3 ಕೋಟಿ ಫಾಲೋವರ್ಸ್‍ಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹೊಂದಿದ್ದು, ಈ ಮೂಲಕ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಸ್ಟೈಲ್ ಮೂಲಕವೇ ಎಲ್ಲರನ್ನು ಸೆಳೆಯುವ ನಟ ಅಲ್ಲು ಅರ್ಜುನ್. ಇವರಿಗೆ ಕೋಟ್ಯಂತರ ಅಭಿಮಾನಿ ಬಳಗವನ್ನೆ ಹೊಂದಿದ್ದಾರೆ. ಈಗ ಇನ್‍ಸ್ಟಾಗ್ರಾಮ್‍ನಲ್ಲಿಯೂ ಅತೀ ಹೆಚ್ಚು ಫಾಲೋವರ್ಸ್‍ಗಳಿಂದ ಇವರ ಗರಿ ಹೆಚ್ಚಿದೆ. ಅದು ಅಲ್ಲದೆ ಇವರು ಅತೀ ಹೆಚ್ಚು ಫಾಲೋವರ್ಸ್ ಹೊಂದಿದ ದಕ್ಷಿಣದ ಮೊದಲ ನಟ ಎಂಬ ಖ್ಯಾತಿಗೂ ಒಳಗಾಗಿದ್ದಾರೆ.ಇದನ್ನೂ ಓದಿ :ಚಂದನವನದಲ್ಲಿ ಸುದೀಪ್ ಸಿನಿ ಜರ್ನಿ

    ದಕ್ಷಿಣ ಭಾರತದ ಸಿನಿಮಾ ನಟರ ಪಟ್ಟಿಯಲ್ಲಿ ವಿಜಯ್ ದೇವರಕೊಂಡ 2ನೇ ಸ್ಥಾನವನ್ನು ಹೊಂದಿದ್ದು, 12.9 ಮಿಲಿಯನ್(1.2 ಕೋಟಿ) ಜನರು ಇನ್‍ಸ್ಟಾದಲ್ಲಿ ಫಾಲೋ ಮಾಡುತ್ತಿದ್ದಾರೆ. ಮಹೇಶ್ ಬಾಬು 71 ಲಕ್ಷ, ಪ್ರಭಾಸ್ 69 ಲಕ್ಷ, ವಿಜಯ್ ಸೇತುಪತಿ 43 ಲಕ್ಷ, ರಾಮ್ ಚರಣ್ 41 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ.ಇದನ್ನೂ ಓದಿ :ಗಂಡನ ಮನೆ ಬಿಟ್ಟು ಹೋದ್ರಾ ಶಿಲ್ಪಾ ಶೆಟ್ಟಿ?

    ಅಲ್ಲು ಅರ್ಜುನ್ ಅವರ ‘ಪುಷ್ಪ’ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದು, ಕೊರೊನಾ ಕಾರಣದಿಂದ ಚಿತ್ರದ ಬಿಡುಗಡೆ ಡಿಸೆಂಬರ್‍ಗೆ ಹೋಗಿದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ಡಾಲಿ ಧನಂಜಯ್ ನಟಿಸಿರುವುದು ಕನ್ನಡಿಗರಿಗೆ ಇನ್ನೂ ಸಂತೋಷ ತಂದಿದ್ದು, ಈ ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

    ನಮ್ಮ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಮೂಲಕ ಇಡೀ ಇಂಡಿಯಾದಲ್ಲೇ ಅಲೆ ಎಬ್ಬಿಸಿದ್ದರು. ಇವರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಿಂದೆ ಬಿದ್ದಿಲ್ಲ. ಇವರಿಗೂ 50 ಲಕ್ಷ ಫಾಲೋವರ್ಸ್ ಮತ್ತು ಟ್ಚೀಟರ್‍ನಲ್ಲಿ 7 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.ಇದನ್ನೂ ಓದಿ :ತಂದೆ ಸಮಾಧಿ ಬಳಿ ಹುಟ್ಟುಹಬ್ಬ ಆಚರಿಸಿದ ಬಾಲಕಿ

    ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 13 ಲಕ್ಷ ಫಾಲೋವರ್ಸ್‍ಗಳನ್ನು ಇನ್‍ಸ್ಟಾಗ್ರಾಮ್ ನಲ್ಲಿ ಹೊಂದಿದ್ದು, ತಮ್ಮ ಮೂವೀ ಅಪ್ಡೇಟ್ ಕೊಡುವ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ.

  • ನಟ ಚಿರಂಜೀವಿ ಭೇಟಿಗಾಗಿ 600 ಕಿ.ಮೀ ಸೈಕಲ್ ತುಳಿದ ಅಭಿಮಾನಿ

    ನಟ ಚಿರಂಜೀವಿ ಭೇಟಿಗಾಗಿ 600 ಕಿ.ಮೀ ಸೈಕಲ್ ತುಳಿದ ಅಭಿಮಾನಿ

    ಹೈದರಾಬಾದ್: ನೆಚ್ಚಿನ ನಟ ಮೆಗಾಸ್ಟಾರ್ ಚಿರಂಜೀವಿಯನ್ನು ಭೇಟಿಯಾಗಲು ಅಭಿಮಾನಿಯೊಬ್ಬರು 600ಕಿ.ಮೀ ಸೈಕಲ್ ತುಳಿದುಕೊಂಡು ಬರುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ಎನ್. ಈಶ್ವರಯ್ಯ ಚಿತ್ತೂರಿನವರಾಗಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಅವರ ಊರಿಂದ ಹೈದರಾಬಾದ್‍ಗೆ ಸುಮಾರು 600 ಕಿ.ಮೀ ಅಂತರ. ಈ ದೂರ ಬಂದು ನೆಚ್ಚಿನ ನಟನನ್ನು ಭೇಟಿಯಾಗಿದ್ದಾರೆ. ಇವರು ಈ ಪ್ರಯಾಣವನ್ನು ಮಾಡಲು 12 ದಿನ ತೆಗೆದುಕೊಂಡಿದ್ದಾರೆ. ಚಿರಂಜೀವಿಗೆ ಒಳ್ಳೆಯದಾಗಲಿ ಎಂದು ಈಶ್ವರಯ್ಯ ಅವರು ಹನುಮ ದೀಕ್ಷೆಯನ್ನೂ ತೊಟ್ಟಿದ್ದಾರೆ ಅನ್ನೋದು ವಿಶೇಷವಾಗಿದೆ. ಇದನ್ನೂ ಓದಿ:  ಮೈಸೂರು ಗ್ಯಾಂಗ್‍ರೇಪ್- ನಾಲ್ವರು ಆರೋಪಿಗಳು ಪೊಲೀಸರ ವಶಕ್ಕೆ

    ನಿವಾಸದ ಬಳಿ ಬಂದ ಈಶ್ವರಯ್ಯ ಅವರನ್ನು ಚಿರಂಜೀವಿ ಭೇಟಿ ಮಾಡಿದ್ದಾರೆ. ನಮ್ಮ ಬಗ್ಗೆ ಅಭಿಮಾನಿಗಳು ಹೀಗೆ ಯೋಚನೆ ಮಾಡುತ್ತಾರೆ. ನಮ್ಮ ಅಭಿಮಾನಿಗಳಿಗೆ ಹಾಗೂ ಅವರ ಕುಟುಂಬದವರಿಗೋಸ್ಕರ ಒಳಿತನ್ನು ಬಯಸುತ್ತೇವೆ ಎಂದಿದ್ದಾರೆ. 12 ದಿನಗಳ ಕಾಲ ಸೈಕಲ್ ತುಳಿಯುವುದು ಎಂದರೆ ಅದು ಸುಲಭದ ಕೆಲಸವಲ್ಲ. ಹೀಗಾಗಿ ಇನ್ನುಮುಂದೆ ಈ ರೀತಿ ಮಾಡದಂತೆ ಚಿರಂಜೀವಿ ಅವರು ಅಭಿಮಾನಿಗೆ ಕಿವಿಮಾತು ಹೇಳಿದ್ದಾರೆ.

    ನೆಚ್ಚಿನ ನಟನಿಗೋಸ್ಕರ ಅಭಿಮಾನಿಗಳು ಏನು ಮಾಡೋಕೂ ರೆಡಿ ಇರುತ್ತಾರೆ. ದೂರದ ಊರುಗಳಿಂದ ನಡೆದು ಬಂದು ನೆಚ್ಚಿನ ನಟನನ್ನು ಭೇಟಿ ಮಾಡುತ್ತಾರೆ. ತಾವು ಇಷ್ಟಪಡುವ ನಟನಿಗೆ ಒಳ್ಳೆಯದಾಗಲಿ ಎಂದು ಹರಕೆ ಹೊತ್ತಿಕೊಳ್ಳುವ ಅಭಿಮಾನಿಗಳೂ ಇದ್ದಾರೆ.

  • ಬಹುಕಾಲದ ಗೆಳತಿ  ಜೊತೆ ನಟ ಕಾರ್ತಿಕೇಯ ನಿಶ್ಚಿತಾರ್ಥ – ಫೋಟೋ ವೈರಲ್

    ಬಹುಕಾಲದ ಗೆಳತಿ  ಜೊತೆ ನಟ ಕಾರ್ತಿಕೇಯ ನಿಶ್ಚಿತಾರ್ಥ – ಫೋಟೋ ವೈರಲ್

    ಹೈದರಾಬಾದ್: ಟಾಲಿವುಡ್ ಸಿನಿಮಾ ‘ಆರ್‌ಎಕ್ಸ್ 100’ ಸಿನಿಮಾ ಖ್ಯಾತಿಯ ನಟ ಕಾರ್ತಿಕೇಯ ಗೊಮ್ಮಕೊಂಡಾ ತಮ್ಮ ಬಹುಕಾಲದ ಗೆಳತಿ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸದ್ಯ ಕಾರ್ತಿಕೇಯರವರ ಎಂಗೇಜ್ ಮೆಂಟ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ‘ಪ್ರೇಮತೋ ಮೀ ಕಾರ್ತಿಕ್’ ಸಿನಿಮಾದ ಮೂಲಕ ಟಾಲಿವುಡ್‍ಗೆಎಂಟ್ರಿ ಕೊಟ್ಟ ಕಾರ್ತಿಕೇಯಗೆ ಖ್ಯಾತಿ ತಂದು ಕೊಟ್ಟ ಸಿನಿಮಾ ‘ಆರ್‍ಎಕ್ಸ್ 100’. ಇಷ್ಟು ದಿನ ಸಿನಿಮಾದಲ್ಲಿ ಬ್ಯುಸಿಯಾಗಿದ್ದ ಕಾರ್ತಿಕೇಯ ಇದೀಗ 10 ವರ್ಷಗಳಿಂದ ಸ್ನೇಹಿತೆಯಾಗಿದ್ದ ಲೋಹಿತಾರೊಂದಿಗೆ ಹೈದರಾಬಾದ್‍ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಡಾಲಿಗೆ ಜೋಡಿಯಾದ ಆರ್‌ಎಕ್ಸ್ 100 ಚೆಲುವೆ

    ಆಗಸ್ಟ್ 23ರಂದು ಗುರು-ಹಿರಿಯ ಮುಂದೆ ಉಂಗುರ ಬದಲಿಸಿಕೊಂಡಿರುವ ಕಾರ್ತಿಕೇಯ ಲೋಹಿತಾರೊಂದಿಗೆ ಹೊಸ ಜೀವನ ಆರಂಭಿಸಲು ಮುಂದಾಗಿದ್ದಾರೆ. ಸದ್ಯ ಇವರಿಬ್ಬರ ನಿಶ್ಚಿತಾರ್ಥ ಫೋಟೋವನ್ನು ಕಾರ್ತಿಕೇಯರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ನನ್ನ ಸ್ನೇಹಿತೆ ಈಗ ನನ್ನ ಬಾಳ ಸಂಗಾತಿಯಾಗುತ್ತಿದ್ದಾಳೆ ಎಂದು ಹೇಳಲು ಖುಷಿಯಾಗುತ್ತಿದೆ. 2010ರಲ್ಲಿ ನಾನು ಲೋಹಿತಾರನ್ನು ವಾರಂಗಲ್‍ನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದೆ. ದಶಕದ ಪರಿಚಯ ಹೀಗೆ ಮುಂದುವರೆಯಲಿ ಎಂದು ಕ್ಯಾಪ್ಷನ್‍ನ್ಲಿ ಬರೆದುಕೊಂಡಿದ್ದಾರೆ.

    ಕಾರ್ತಿಕೇಯರವರು ‘ಪ್ರೇಮತೋ ಮೀ ಕಾರ್ತಿಕ್’ ‘ಆರ್‌ಎಕ್ಸ್ 100’, ಹಿಪ್ಪಿ, ಗುಣ369, ಗ್ಯಾಂಗ್ ಲೀಡರ್, 90ಎಂಎಲ್, ಚಾವು ಕಾಬುರು ಚಾಲಾಗ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಕಾಲಿವುಡ್ ನಟ ಅಜಿತ್ ಕುಮಾರ್ ನಟಿಸುತ್ತಿರುವ ವಾಲಿಮೈ ಸಿನಿಮಾದಲ್ಲಿ ಮೊದಲ ಬಾರಿಗೆ ವಿಲನ್ ಆಗಿ ನಟಿಸುತ್ತಿದ್ದಾರೆ. ಇದನ್ನೂ ಓದಿ:ಮೋತಿಲಾಲ್ ನೆಹರು ವಿಡಿಯೋ ಪೋಸ್ಟ್- ನಟಿ ಪಾಯಲ್ ರೊಹ್ಟಗಿ ಬಂಧನ

  • ಜಿಮ್‍ನಲ್ಲಿ ಮತ್ತೆ ವಿಜಯ್ ಜೊತೆ ಕಾಣಿಸಿಕೊಂಡ ರಶ್ಮಿಕಾ

    ಜಿಮ್‍ನಲ್ಲಿ ಮತ್ತೆ ವಿಜಯ್ ಜೊತೆ ಕಾಣಿಸಿಕೊಂಡ ರಶ್ಮಿಕಾ

    ಹೈದರಾಬಾದ್: ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್ ನಟ ವಿಜಯ್ ದೇವರಕೊಂಡ ಜಿಮ್‍ವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಮಂದಣ್ಣ ನಂತರ ಮುಟ್ಟಿದ್ದೆಲ್ಲಾ ಚಿನ್ನ ಎಂಬಂತೆ ಅವರು ನಟಿಸಿದ ಸಿನಿಮಾಗಳೆಲ್ಲವೂ ಸಕ್ಸಸ್ ಕಂಡಿತು. ಸದ್ಯ ಟಾಲಿವುಡ್ ಹಾಗೂ ಬಾಲಿವುಡ್‍ನ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಇದೀಗ ಸಿನಿಮಾಗಳಿಗಾಗಿ ಹೈದರಾಬಾದ್‍ನಲ್ಲಿದ್ದಾರೆ. ಇದನ್ನೂ ಓದಿ: ವಿಜಯ್ ದೇವರಕೊಂಡ ಬರ್ತ್‍ಡೇಗೆ ರಶ್ಮಿಕಾ ವಿಶ್ – ಫೋಟೋ ವೈರಲ್

    ಮತ್ತೊಂದೆಡೆ ವಿಜಯ್ ದೇವರಕೊಂಡ ಕೂಡ ಲೈಗರ್ ಸಿನಿಮಾದಲ್ಲಿ ನಿರತರಾಗಿದ್ದು, ಈ ಚಿತ್ರದ ಚಿತ್ರೀಕರಣಕ್ಕಾಗಿ ಕೆಲವು ದಿನಗಳ ಹಿಂದೆ ಮುಂಬೈಗೆ ಹಾರಿದ್ದರು. ಅಲ್ಲದೇ ರಶ್ಮಿಕಾ ಕೂಡ ಮುಂಬೈನಲ್ಲಿ ಬಾಲಿವುಡ್‍ನ ಗುಡ್ ಬೈ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಹೀಗೆ ಇಬ್ಬರು ಮುಂಬೈನಲ್ಲಿದ್ದಾಗ ಆಗಾಗ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇದೀಗ ರಶ್ಮಿಕಾ ಹಾಗೂ ವಿಜಯ್ ಹೈದರಾಬಾದ್‍ನ ಜಿಮ್‍ವೊಂದರಲ್ಲಿ ಕಾಣಿಸಿಕೊಂಡಿದ್ದು, ಒಟ್ಟಿಗೆ ವರ್ಕೌಟ್ ಮಾಡುತ್ತಿದ್ದಾರೆ. ಸದ್ಯ ಜಿಮ್‍ನಲ್ಲಿ ಇವರಿಬ್ಬರು ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಕುಲದೀಪ್ಸೆತಿ ಎಂಬವರು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದು, ಫೋಟೋ ಫುಲ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ದೇವರಕೊಂಡ ಜೊತೆಗಿರುವ ಫೇವರಿಟ್ ಫೋಟೋ ಶೇರ್ ಮಾಡಿದ ರಶ್ಮಿಕಾ

     

    View this post on Instagram

     

    A post shared by Kuldep Sethi (@kuldepsethi)

    ಈ ಹಿಂದೆ ಗೀತಾ ಗೋವಿಂದಂ ಸಿನಿಮಾದ ಮೂಲಕ ಫೇಮಸ್ ಆಗಿದ್ದ ಈ ಜೋಡಿ ಮಧ್ಯೆ ಲವ್ವಿ-ಡವ್ವಿ ಶುರುವಾಗಿದೆ ಎಂಬ ಸುದ್ದಿ ಭಾರೀ ಸದ್ದು ಮಾಡಿತ್ತು. ಆದರೆ ನಾವಿಬ್ಬರು ಗುಡ್ ಫ್ರೆಂಡ್ಸ್ ಎಂದು ಹೇಳುವ ಮೂಲಕ ಇಬ್ಬರು ಗಾಸಿಪ್‍ಗಳಿಗೆ ತೆರೆ ಎಳೆದಿದ್ದರು. ಆದರೆ ಇದೀಗ ಇವರಿಬ್ಬರು ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಇವರಿಬ್ಬರ ಮಧ್ಯೆ ಏನಾದರೂ ನಡೆಯುತ್ತಿದ್ಯಾ ಎಂದು ಅಭಿಮಾನಿಗಳಲ್ಲಿ ಗೊಂದಲ ಶುರುವಾಗಿದೆ.

  • ಇನ್ಮುಂದೆ ನ್ಯಾಚುರಲ್ ಸ್ಟಾರ್ ನಾನಿ ಸಿನಿಮಾಗಳಿಗೆ ಬಹಿಷ್ಕಾರ

    ಇನ್ಮುಂದೆ ನ್ಯಾಚುರಲ್ ಸ್ಟಾರ್ ನಾನಿ ಸಿನಿಮಾಗಳಿಗೆ ಬಹಿಷ್ಕಾರ

    ಹೈದರಾಬಾದ್: ಟಾಲಿವುಡ್ ನ್ಯಾಚುರಲ್ ಸ್ಟಾರ್ ನಾನಿ ಸಿನಿಮಾಗಳನ್ನು ಬಹಿಷ್ಕಾರ ಹಾಕಲು ತೆಲುಗು ಚಿತ್ರಮಂದಿರದ ಮಾಲೀಕರು ನಿರ್ಧರಿಸಿದ್ದಾರೆ.

    ತೆಲುಗಿನಲ್ಲಿ ತಮ್ಮ ಆ್ಯಕ್ಟಿಂಗ್ ಮೂಲಕವೇ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ನಟ ಎಂದರೆ ನಾನಿ. ಸೈಲೆಂಟ್ ಆಗಿ ಸಿನಿಮಾಗಳನ್ನು ಮಾಡಿಕೊಂಡು ಬರುತ್ತಿದ್ದ ನಾನಿಗೆ ದೊಡ್ಡ ಮಟ್ಟದ ಸಕ್ಸಸ್ ತಂದು ಕೊಟ್ಟ ಸಿನಿಮಾ ಈಗ. ಇದಾದ ನಂತರ ನಾನಿ ಸಿನಿಮಾಗಳೆಲ್ಲಾವೂ ಬಾಕ್ಸ್ ಆಫೀಸ್‍ನಲ್ಲಿ ಭಾರೀ ಸದ್ದು ಮಾಡತೊಡಗಿತು. ಸದ್ಯ ಟಾಲಿವುಡ್‍ನ ಹಲವು ಬೇಡಿಕೆಯ ನಟರಲ್ಲಿ ಒಬ್ಬರಾಗಿರುವ ನಾನಿ ಸಿನಿಮಾವನ್ನು ಇನ್ನು ಮುಂದೆ ಥಿಯೇಟರ್‍ನಲ್ಲಿ ಪ್ರದರ್ಶನ ಮಾಡುವುದಿಲ್ಲ ಎಂದು ಚಿತ್ರಮಂದಿರದ ಮಾಲೀಕರು ಪಟ್ಟು ಹಿಡಿದು ಕುಳಿತಿದ್ದಾರೆ.

    ಹೌದು, ಕೆಲವು ತಿಂಗಳ ಹಿಂದೆ ನಾನಿ ಅಭಿನಯದ ‘ವಿ’ ಸಿನಿಮಾವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಇದೀಗ ಮತ್ತೆ ನಾನಿಯ ಟಕ್ ಜಗದೀಶ್ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಗೊಳ್ಳುತ್ತಿದೆ. ಹೀಗಾಗಿ ಆಕ್ರೋಶಗೊಂಡ ಚಿತ್ರಮಂದಿರ ಮಾಲೀಕರು ಇನ್ನು ಮುಂದೆ ನಾನಿ ಸಿನಿಮಾಗಳನ್ನು ಆಂಧ್ರ ಹಾಗೂ ತೆಲಂಗಾಣದಲ್ಲಿ ಪ್ರದರ್ಶನ ಮಾಡುವುದಿಲ್ಲ ಎಂದು ಸಾಮೂಹಿಕವಾಗಿ ಬಹಿಷ್ಕಾರ ಹಾಕಿದ್ದಾರೆ. ಇದನ್ನೂ ಓದಿ:ವೈರಲ್ ಆಯ್ತು ಚಿನ್ನದ ಹುಡುಗನ ಮೂರು ವರ್ಷದ ಹಳೆಯ ವೀಡಿಯೋ

    ಅಕ್ಟೋಬರ್ 10ರವರೆಗೂ ಕಾದು ನೋಡಿ ನಂತ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲಿಲ್ಲ ಎಂದರೆ ಓಟಿಟಿಯಲ್ಲಿ ನಿಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಿಕೊಳ್ಳಿ ಯಾವುದೇ ತೊಂದರೆ ಇಲ್ಲ ಎಂದು ನಿರ್ಮಾಪಕರಿಗೆ ಪತ್ರದ ಮೂಲಕ ತಿಳಿಸಿದ್ದೇವು. ಅಲ್ಲದೇ ದಶಕಗಳ ಕಾಲ ನಾವು ನಿರ್ಮಾಪಕರುಗಳಿಗೆ ಲಾಭ ಮಾಡಿಕೊಡುತ್ತಾ ಬಂದಿದ್ದೇವೆ. ಹೀಗಿದ್ದರೂ ಕೆಲ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಓಟಿಟಿಗೆ ನೀಡಿದ್ದಾರೆ ಎಂದು ಚಿತ್ರ ಪ್ರದರ್ಶಕರ ಪ್ರಮುಖರೊಬ್ಬರು ಆರೋಪಿಸಿದ್ದಾರೆ.

    ಈ ಹಿಂದೆ ಸಂದರ್ಶನವೊಂದರಲ್ಲಿ ನಾನಿ ಕೂಡ ವಿ ಸಿನಿಮಾವನ್ನು ನಾನು ಓಟಿಟಿಯಲ್ಲಿ ಬಿಡುಗಡೆ ಮಾಡಿ ತಪ್ಪು ಮಾಡಿದ್ದೆ ಎಂದಿದ್ದರು. ಆದರೆ ಇದೀಗ ನಾನಿ ಅಭಿನಯದ ಹೊಸ ಸಿನಿಮಾ ಮತ್ತೆ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಸದ್ಯ ಈ ವಿಚಾರವಾಗಿ ಮಾತನಾಡಿದ ಚಿತ್ರ ಮಂದಿರ ಮಾಲೀಕರ ಸಂಘದ ಪ್ರಮುಖ ಮುಖಂಡ ಶ್ರೀಹರಿ, ನಾನಿ ಹೆದರು ಪುಕ್ಕಲ. ಮಾತಿನ ಮೇಲೆ ನಿಗಾ ಇಲ್ಲದ ವ್ಯಕ್ತಿ. ಈ ಮುನ್ನ ತಮ್ಮ ಸಿನಿಮಾಗಳನ್ನು ಚಿತ್ರಮಂದಿರಗಳಿಗರೆ ಕೊಡುತ್ತೇನೆ ಎಂದವರು ಇದೀಗ ಓಟಿಟಿಗೆ ಕೊಡುತ್ತಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ:ಬದಲಾಯ್ತು ಸುಶಾಂತ್ ಎಫ್‍ಬಿ ಫೋಟೋ- ಸ್ವರ್ಗದಲ್ಲಿ ನೆಟ್‍ವರ್ಕ್ ಸಿಗುತ್ತಾ ಅಂದ್ರು ಫ್ಯಾನ್ಸ್