Tag: Hyderabad

  • ಸೀರೆ ಧರಿಸಿ ಬರಲು ಹೋದವಳು ಪ್ರಿಯಕರನೊಂದಿಗೆ ಜೂಟ್

    ಸೀರೆ ಧರಿಸಿ ಬರಲು ಹೋದವಳು ಪ್ರಿಯಕರನೊಂದಿಗೆ ಜೂಟ್

    ಹೈದರಾಬಾದ್: ತಾಳಿ ಕಟ್ಟಲು ಕೆಲವು ಗಂಟೆ ಬಾಕಿ ಇರುವಾಗ ವಧು ವರನಿಗೆ ಕೈ ಕೊಟ್ಟು ತನ್ನ ಪ್ರಿಯಕರನ ಜೊತೆಗೆ ಹೋಗಿರುವ ಘಟನೆ  ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ನಡೆದಿದೆ.

    ಮದನಪಲ್ಲಿ ವಲಯದ ತಟ್ಟಿವರಿಪಲ್ಲಿ ನಿವಾಸಿಯಾದ ರಾಮಕೃಷ್ಣ ಮತ್ತು ಮಲ್ಲಿಕಾ ದಂಪತಿ ಪುತ್ರಿ ಸೋನಿಕಾ ಮತ್ತು ಮದನಪಲ್ಲಿ ಪಟ್ಟಣದ ಕಾಲನಿಯೊಂದರ ಯುವಕನಿಗೂ ಮದುವೆ ನಿಶ್ಚಯವಾಗಿತ್ತು. ಇಬ್ಬರ ಕುಟುಂಬಸ್ಥರು ಒಟ್ಟಿಗೆ ಕುಳಿತು ಜಾತಕಫಲವನ್ನು ನೋಡಿ ಒಂದು ತಿಂಗಳ ಹಿಂದೆಯೇ ಮದುವೆಗೆ ನಿಶ್ಚಯ ಮಾಡಿದ್ದರು. ಇದನ್ನೂ ಓದಿ:  ದಲಿತರೊಂದಿಗೆ ಚಹಾ ಸೇವಿಸಿ, ಬಿಜೆಪಿಗೆ ಮತ ಹಾಕುವಂತೆ ಮನವೊಲಿಸಿ: ಸ್ವತಂತ್ರ ದೇವ್

    ವರ ಮತ್ತು ವಧುವಿನ ಕಡೆಯ ಸಂಬಂಧಿಕರು ಮತ್ತು ಆಪ್ತರು ಮದುವೆಗೆ ಆಗಮಿಸಿದ್ದರು. ಭಾನುವಾರ ಮದುವೆಯಾಗಬೇಕಿತ್ತು. ಶನಿವಾರ ರಾತ್ರಿ ರಿಸೆಪ್ಷನ್‍ಗೆಂದು ಸೀರೆ ಧರಿಸಿ ಬರುವುದಾಗಿ ಹೇಳಿ ವಧುವಿನ ಕೊಠಡಿಗೆ ತೆರಳಿದ್ದ ಸೋನಿಕಾ ಮರಳಿ ಬರಲೇ ಇಲ್ಲ. ಎಲ್ಲಿ ಹೋದಳು ಎಂದು ವಿಚಾರಿಸುತ್ತಲೇ ಇಡೀ ರಾತ್ರಿ ಕಳೆದಿದೆ. ಆದರೆ ಇತ್ತ ಮನೆಯವರು ಹುಡುಕುತ್ತಿದ್ದರೆ ಸೋನಿಕಾ ತನ್ನ ಪ್ರಿಯಕರ ಚರಣ್ ಜೊತೆ ದೇವಸ್ಥಾನದಲ್ಲಿ ಮದುವೆಯಾಗಿದ್ದಾಳೆ.ಇದನ್ನೂ ಓದಿ: ಆದಿವಾಸಿಗಳ ದುಸ್ಥಿತಿಗೆ ಕಾಂಗ್ರೆಸ್ ಕಾರಣ: ಮೋದಿ

    ವರನ ಕಡೆಯವರು ಈ ವಿಚಾರವಾಗಿ ಮದನಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮದುವೆಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದೇವೆ, ಸಬಂಧಿಕರು ಮುಂದೆ ನಮಗೆ ಅವಮಾನವಾಗಿದೆ ಎಂದೂ ದೂರು ನೀಡಿದ್ದಾರೆ. ಸದ್ಯ ಪ್ರಕರಣ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಸೋನಿಕಾ ಎಂಬಿಎ ಓದಿದ್ದು, ಸ್ಥಳೀಯ ಗುರುಕುಲ ಶಾಳೆಯಲ್ಲಿ ಸೂಪರ್‍ವೈಸ್ ಆಗಿ ಕೆಲಸ ಮಾಡುತ್ತಿದ್ದಾಳೆ. ನನ್ನ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಲು ಮುಂದಾಗಿದ್ದರು. ನನ್ನನ್ನು ಗೃಹಬಂಧನದಲ್ಲಿ ಇರಿಸಿದ್ದರು ಎಂದು ಆಕೆಯೂ ಅವಳ ಕುಟುಂಬಸ್ಥರ ವಿರುದ್ಧ ಠಾಣೆಯಲ್ಲಿ ದೂರು ನೀಡಿದ್ದಾಳೆ.

  • ಥ್ರೋಬಾಲ್ ಆಡಿ ಗಮನಸೆಳೆದ ನಟಿ ರೋಜಾ

    ಥ್ರೋಬಾಲ್ ಆಡಿ ಗಮನಸೆಳೆದ ನಟಿ ರೋಜಾ

    ಹೈದರಾಬಾದ್: ನಟಿ, ರಾಜಕಾರಣಿ ರೋಜಾ ಅವರು ತಮ್ಮ ಬಿಡುವಿಲ್ಲದ ರಾಜಕೀಯ, ಸಿನಿಮಾ ದಿನಚರಿಯ ನಡುವೆ ಮಕ್ಕಳ ಜೊತೆಗೆ ಥ್ರೋಬಾಲ್ ಆಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ರೋಜಾ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ನಗರಿ ಕ್ಷೇತ್ರದಲ್ಲಿ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು. ಈ ವೇಳೆ ಅವರು ಕೂಡ ಆಟ ಆಡಿ ರೋಜಾ ಗಮನಸೆಳೆದಿದ್ದಾರೆ. ರೋಜಾ ಅವರು ಇತ್ತೀಚೆಗೆ ಅಂಡರ್-17 ಮತ್ತು 17 ವರ್ಷಕ್ಕಿಂತ ಮೇಲ್ಪಟ್ಟ ವಿಭಾಗಗಳಲ್ಲಿ ಥ್ರೋಬಾಲ್ ಸ್ಪರ್ಧೆಗಳನ್ನು ಪ್ರಾರಂಭಿಸಿದ್ದಾರೆ. ಶಾಸಕಿಯಾಗಿ ಜನರೊಂದಿಗೆ ಒಬ್ಬರಾಗಿ ಬೆರೆಯುತ್ತಿರುವ ರೋಜಾ, ಇದೇ ವೇಳೆ ಅನೇಕ ಜನರ ಸಮಸ್ಯೆ ಆಲಿಸಿ ಅದನ್ನು ಪರಿಹರಿಸುವ ಭರವಸೆ ನೀಡಿದ್ದಾರೆ.  ಇದನ್ನೂ ಓದಿ:  ಸೀರೆ ಎತ್ತಿಕಟ್ಟಿ ಕಬಡ್ಡಿ ಅಖಾಡಕ್ಕಿಳಿದ ರೋಜಾ

    ಇತ್ತೀಚೆಗಷ್ಟೇ ಚುನಾವಣಾ ಪ್ರಚಾರಕ್ಕೆ ಹೋಗಿರುವ ವೇಳೆ ಕಬಡ್ಡಿ ಅಖಾಡಲ್ಲಿ ಇಳಿದು ಆಟ ಆಡುವ ಮೂಲಕವಾಗಿ ಯುವಕರನ್ನು ಹುರಿದುಂಬಿಸಿದ್ದರು. ಆದರೆ ಇದೀಗ ಥ್ರೋಬಾಲ್ ನಲ್ಲೂ ಮಿಂಚಿದ್ದಾರೆ. ಸಿನಿಮಾ, ರಿಯಾಲಿಟಿ ಶೋ, ಕಾಮಿಡಿ ಶೋಗಳಲ್ಲಿ ತನ್ನ ದಿನನಿತ್ಯದ ತಮ್ಮ ನಗುವಿನ ಮೂಲಕ ಅಭಿಮಾನಿಗಳನ್ನು ಆಕರ್ಷಿಸುವ ರೋಜಾಗೆ ಆಟದಲ್ಲಿಯೂ ಆಸ್ತಿ ಇದೆ ಎಂಬುದು ಈ ಮೂಲಕವಾಗಿ ಗೊತ್ತಾಗಿದೆ. ಇದನ್ನೂ ಓದಿ:   ಪುನೀತ್ ನಿಧನಕ್ಕೆ ಬಹುಭಾಷಾ ನಟಿ ರೋಜಾ ಕಂಬನಿ

  • ಹೈದರಾಬಾದ್‍ಗೆ ಹಾರಿದ ಅರ್ವಿಯಾ ಜೋಡಿ

    ಹೈದರಾಬಾದ್‍ಗೆ ಹಾರಿದ ಅರ್ವಿಯಾ ಜೋಡಿ

    ಬೆಂಗಳೂರು: ಬಿಗ್‍ಬಾಸ್ ಸೀಸನ್-8ರ ಕಾರ್ಯಕ್ರಮದ ಸ್ಪರ್ಧಿಗಳಾಗಿದ್ದ ಅರವಿಂದ್ ಹಾಗೂ ದಿವ್ಯಾ ಉರುಡುಗ ಹೈದರಾಬಾದ್‍ಗೆ ಹಾರಿದ್ದಾರೆ.

    aravind divya

    ಅರವಿಂದ್ ಹಾಗೂ ದಿವ್ಯಾ ಉರುಡುಗ ಬಿಗ್‍ಬಾಸ್ ಸೀಸನ್-8ರ ಪ್ರಣಯ ಪಕ್ಷಿಗಳು ಎಂದೇ ಫೇಮಸ್ ಆಗಿದ್ದರು. ಬಿಗ್‍ಬಾಸ್ ಮನೆಯಲ್ಲಿ ಸದಾ ಜೊತೆ, ಜೊತೆಯಾಗಿದ್ದ ಈ ಜೋಡಿ ರಿಯಾಲಿಟಿ ಶೋ ನಂತರ ಕೂಡ ಎಲ್ಲೆಲ್ಲೂ ಜೊತೆ, ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.  ಇದನ್ನೂ ಓದಿ: ಬಿಗ್‌ಬಾಸ್ ಲವ್ ಬರ್ಡ್ಸ್ ಭೇಟಿಯಾದ ಶುಭಾ ಪೂಂಜಾ

    ಇತ್ತೀಚೆಗಷ್ಟೇ ಶುಭಾ ಪೂಂಜಾ ಜೊತೆಗೆ ಕಾಣಿಸಿಕೊಂಡಿದ್ದ ಈ ಜೋಡಿ ಇದೀಗ ಫ್ಲೈಟ್‍ವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅರವಿಂದ್ ಹಾಗೂ ದಿವ್ಯಾ ಉರುಡುಗ ಒಟ್ಟಿಗೆ ಹೈದರಾಬಾದ್‍ಗೆ ಹಾರಿದ್ದಾರೆ. ಸದ್ಯ ಇವರಿಬ್ಬರು ಫ್ಲೈಟ್‍ನಲ್ಲಿ ಪ್ರಯಾಣಿಸುತ್ತಿರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಶೇಷವೆಂದರೆ ಇವರಿಬ್ಬರೊಂದಿಗೆ ದಿಯಾ ಸಿನಿಮಾ ಖ್ಯಾತಿಯ ನಟಿ ಖುಷಿ ಅವರು ಕೂಡ ಕಾಣಿಸಿಕೊಂಡಿದ್ದಾರೆ.

     

    ನಟಿ ಖುಷಿ ಅವರು ಕೂಡ ಅರವಿಂದ್ ಹಾಗೂ ದಿವ್ಯಾ ಉರುಡುಗ ಜೊತೆಗಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಫೋಟೋ ಜೊತೆಗೆ ಹೈದರಾಬಾದ್ ಕಾಲಿಂಗ್ ದಿವ್ಯಾ ಉರುಡುಗ, ಕೆ.ಪಿ ಅರವಿಂದ್ ಎಂದು ಬರೆದುಕೊಂಡಿದ್ದಾರೆ.  ಇದನ್ನೂ ಓದಿ: ಬ್ಯಾಕ್ ಬ್ಯೂಟಿಗೆ 13 ಕೋಟಿ ಇನ್ಶೂರೆನ್ಸ್ ಮಾಡಿಸಿದ Miss Bumbum 2021

    ಇತ್ತೀಚೆಗಷ್ಟೇ ಬಿಗ್‍ಬಾಸ್ ಸೀಸನ್ 8ರ ಸ್ಪರ್ಧಿ ಶುಭಾ ಪೂಂಜಾ ಅವರು ಅರವಿಂದ್.ಕೆ.ಪಿ ಮತ್ತು ದಿವ್ಯಾ ಉರುಡುಗ ಅವರನ್ನು ಭೇಟಿ ಮಾಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಇನ್ನೂ ಆ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.

  • ಪುಷ್ಪಾ ಸಿನಿಮಾದಲ್ಲಿ ಅಲ್ಲು ಜೊತೆ ಡ್ಯಾನ್ಸ್ ಮಾಡಲಿದ್ದಾರಾ ಸಮಂತಾ?

    ಪುಷ್ಪಾ ಸಿನಿಮಾದಲ್ಲಿ ಅಲ್ಲು ಜೊತೆ ಡ್ಯಾನ್ಸ್ ಮಾಡಲಿದ್ದಾರಾ ಸಮಂತಾ?

    ಹೈದರಾಬಾದ್: ಟಾಲಿವುಡ್ ನಟ ಸ್ಟೈಲಿಶ್ ಸ್ಟಾರ್ ಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಪುಷ್ಪ ಸಿನಿಮಾ ವಿಶೇಷ ಸಾಂಗ್‍ವೊಂದರಲ್ಲಿ ನಟಿ ಸಮಂತಾ ಹೆಜ್ಜೆ ಹಾಕಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ಶೂಟಿಂಗ್‍ನಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ನಟಿ ಸಮಂತಾ ಇದೀಗ ಬ್ಯಾಕ್ ಟು ಬ್ಯಾಕ್ ಚಿತ್ರಗಳಿಗೆ ಸಹಿ ಹಾಕುತ್ತಿದ್ದಾರೆ. ಸದ್ಯ ಅಲ್ಲು ಅರ್ಜುನ್ ಅವರ ಮುಂಬರುವ ಬಿಗ್-ಬಜೆಟ್ ಚಿತ್ರ ಪುಷ್ಪಾದಲ್ಲಿ ವಿಶೇಷ ಸಾಂಗ್‍ವೊಂದರಲ್ಲಿ ನೃತ್ಯ ಮಾಡಲು ಒಪ್ಪಿಕೊಂಡಿದ್ದು, ನವೆಂಬರ್ ಅಂತ್ಯದಲ್ಲಿ ಈ ಹಾಡಿನ ಚಿತ್ರೀಕರಣವನ್ನು ಚಿತ್ರತಂಡ ಆರಂಭಿಸಲಿದೆ ಮತ್ತು ಹೈದರಾಬಾದ್‍ನ ರಾಮೋಜಿ ಫಿಲಂ ಸಿಟಿಯಲ್ಲಿ ಅದ್ಧೂರಿ ಸೆಟ್ ಹಾಕಲು ಪ್ಲಾನ್ ಮಾಡಲಾಗಿದೆ ಎಂಬ ಸುದ್ದಿಯೊಂದು ಇದೀಗ ಭಾರೀ ಸದ್ದು ಮಾಡುತ್ತಿದೆ.

    ನಟ ನಾಗ ಚೈತನ್ಯ ಜೊತೆಗೆ ವಿಚ್ಛೇದನ ಪಡೆದ ನಂತರ ಸಮಂತಾ ಬದರಿನಾಥ್, ಕೇದಾರನಾಥ್, ಗೋವಾ ಮತ್ತು ಚೆನ್ನೈ ಪ್ರವಾಸ ಕೈಗೊಂಡಿದ್ದರು. ಆದರೆ ಇದೀಗ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಮತ್ತೆ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ. ದನ್ನೂ ಓದಿ: ಮಗಳ ಹುಟ್ಟುಹಬ್ಬವನ್ನು ವಿಲ್ಲಾದಲ್ಲಿ ಆಚರಿಸುತ್ತಿರೋ ಅಭಿ, ಐಶ್ – ದಿನಕ್ಕೆ ಇದರ ಬೆಲೆ ಎಷ್ಟು ಗೊತ್ತಾ?

    ಕೆಲವು ದಿನಗಳ ಹಿಂದೆ ಪುಷ್ಪಾ ಸಿನಿಮಾದ ನಿರ್ಮಾಪಕರು ವಿಶೇಷ ಸಾಂಗ್‍ವೊಂದರಲ್ಲಿ ಅಭಿನಯಿಸಲು ಸಮಂತಾ ಅವರೊಂದಿಗೆ ಮಾತುಕತೆ ನಡೆಸಿದ್ದು, ಸಮಂತಾ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಸಮಂತಾ ಆಗಲಿ, ಪುಷ್ಪಾ ಸಿನಿಮಾದ ನಿರ್ದೇಶಕ ಸುಕುಮಾರನ್ ಆಗಲಿ ಎಲ್ಲೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಇದನ್ನೂ ಓದಿ: ದಲಿತರು ಕೋಳಿ ಕೊಟ್ಟರೆ ತಿನ್ನುತ್ತಾರಾ? : ಕ್ಷಮೆ ಕೇಳಿದ ಹಂಸಲೇಖ

    ಪುಷ್ಪಾ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರಕ್ಕೆ ನಿರ್ದೇಶಕ ಸುಕುಮಾರನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಜಗಪತಿ ಬಾಬು, ಪ್ರಕಾಶ್ ರಾಜ್, ಧನಂಜಯ್, ಸುನೀಲ್, ಅನಸೂಯಾ ಭಾರದ್ವಾಜ್ ಮತ್ತು ಹರೀಶ್ ಉತ್ತಮನ್ ಸೇರಿದಂತೆ ದೊಡ್ಡ ತಾರಾಬಳಗವೇ ಇದ್ದು, ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ. ಇದೇ ಡಿಸೆಂಬರ್ 17 ರಂದು ಪುಷ್ಪಾ ಸಿನಿಮಾ ಬಹು ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

  • ಹೊಸ ಸಿನಿಮಾ ಅನೌನ್ಸ್ ಮಾಡಿದ ಬಾಹುಬಲಿ ಬೆಡಗಿ ಅನುಷ್ಕಾ ಶೆಟ್ಟಿ

    ಹೊಸ ಸಿನಿಮಾ ಅನೌನ್ಸ್ ಮಾಡಿದ ಬಾಹುಬಲಿ ಬೆಡಗಿ ಅನುಷ್ಕಾ ಶೆಟ್ಟಿ

    ಹೈದರಾಬಾದ್: ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ತಮ್ಮ 40ನೇ ಹುಟ್ಟುಹಬ್ಬದ ಪ್ರಯುಕ್ತ ಹೊಸ ಸಿನಿಮಾವನ್ನು ಘೋಷಿಸುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

    2020ರಲ್ಲಿ ನಿಶಬ್ಧಂ ಸಿನಿಮಾದ ಬಳಿಕ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಅನುಷ್ಕಾ ಶೆಟ್ಟಿ, ನವೆಂಬರ್ 7ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. 40ನೇ ವಸಂತಕ್ಕೆ ಕಾಲಿಟ್ಟ ಅನುಷ್ಕಾ ಶೆಟ್ಟಿ ಯುವಿ ಕ್ರಿಯೇಷನ್ಸ್‌ನೊಂದಿಗೆ ಮುಂದಿನ ಸಿನಿಮಾದಲ್ಲಿ ಅಭಿನಯಿಸುತ್ತಿರುವುದಾಗಿ ಇನ್ಸ್‍ಸ್ಟಾಗ್ರಾಮ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಪದ್ಮಶ್ರೀ ಅಲ್ಲ, ಪುನೀತ್ ಅಮರಶ್ರೀ: ಶಿವರಾಜ್‍ಕುಮಾರ್

    ಈ ಕುರಿತಂತೆ ಅನುಷ್ಕಾ ಶೆಟ್ಟಿ ವೀಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದು, ಕ್ಯಾಪ್ಷನ್‍ನಲ್ಲಿ ನಿಮ್ಮೆಲ್ಲರ ಹುಟ್ಟುಹಬ್ಬದ ಶುಭಾಶಯ ಮತ್ತು ಪ್ರೀತಿಯೊಂದಿಗೆ ನಿಮ್ಮ ಜೊತೆ ನನ್ನ ಮುಂದಿನ ಸಿನಿಮಾವನ್ನು ಘೋಷಿಸಲು ಸಂತೋಷವಾಗುತ್ತಿದೆ. ಮಹೇಶ್ ಬಾಬು.ಪಿ ಅವರೊಂದಿಗೆ ನನ್ನ ಮುಂದಿನ ಸಿನಿಮಾ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ವಿಕ್ಕಿ, ಕತ್ರಿನಾ ಮದುವೆ ಸಿದ್ಧತೆ ಶುರು

    ಈ ಚಿತ್ರಕ್ಕೆ ನಿರ್ದೇಶಕ ಮಹೇಶ್ ಬಾಬು ಆ್ಯಕ್ಷನ್ ಕಟ್ ಹೇಳುತ್ತಿದ್ದು, ಅನುಷ್ಕಾ ಜೊತೆಗೆ ನಟ ನವೀನ್ ಪೋಲಿಶೆಟ್ಟಿ ಸ್ಕ್ರೀನ್ ಶೇರ್ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸಿನಿಮಾ ಕುರಿತಂತೆ ಮತ್ತಷ್ಟು ಮಾಹಿತಿಯನ್ನು ಶೀಘ್ರವೇ ರಿವೀಲ್ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಇದನ್ನೂ ಓದಿ: ಪತ್ನಿಯೊಂದಿಗೆ ಅಲ್ಲು ಅರ್ಜುನ್ ಫುಲ್ ಮಿಂಚಿಂಗ್- ದೀಪಾವಳಿ ವೀಡಿಯೋ ವೈರಲ್

    ಅನುಷ್ಕಾ ಶೆಟ್ಟಿ ಕೊನೆಯದಾಗಿ ನಿರ್ದೇಶಕ ಹೇಮಂತ್ ಮಧುರ್ಕರ್ ಅವರ ನಿಶಬ್ಧಂ ಸಿನಿಮಾದಲ್ಲಿ ಕಾಣಿಸಿಕೊಂಡರು, ಈ ಸಿನಿಮಾ ನೇರವಾಗಿ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಬಿಡುಗಡೆಯಾಯಿತು. ಆದರೆ ಈ ಸಿನಿಮಾ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು.

  • ಒಂದೇ ಕುಟುಂಬದ ಮೂವರಿಗೆ ಕಚ್ಚಿದ ಹಾವು- 3 ತಿಂಗಳ ಮಗು ಸಾವು

    ಒಂದೇ ಕುಟುಂಬದ ಮೂವರಿಗೆ ಕಚ್ಚಿದ ಹಾವು- 3 ತಿಂಗಳ ಮಗು ಸಾವು

    ಹೈದರಾಬಾದ್: ಒಂದೇ ಕುಟುಂಬದ ಮೂವರಿಗೆ ಹಾವು ಕಚ್ಚಿದ್ದು, 3 ತಿಂಗಳ ಮಗು ಸಾವನ್ನಪ್ಪಿರುವ ಘಟನೆ ಮಹಬೂಬಾಬಾದ್ ಜಿಲ್ಲೆಯ ಶನಿಗಪುರಂನಲ್ಲಿ ನಡೆದಿದೆ.

    ಒಂದೇ ಕುಟುಂಬದ ಮೂವರಿಗೆ ಹಾವು ಕಚ್ಚಿದ್ದು, 3 ತಿಂಗಳ ಮಗು ಸಾವನ್ನಪ್ಪಿದೆ. ಮಗುವಿನ ಪೆÇೀಷಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ‘ಅಪ್ಪು ಜೊತೆ ರಾಜ್ ಸಮಾಧಿ ನೋಡಲು ಬರ್ತಿದ್ದ ನಾವು ಈಗ ಅವರದ್ದೇ ಸಮಾಧಿ ನೋಡೋಕೆ ಬರುವಂಗಾಯ್ತು

    ಕ್ರಾಂತಿ ಮತ್ತು ಮಮತಾ ದಂಪತಿಯ ಹೆಣ್ಣು ಮಗುವಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ಖಮ್ಮಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರವಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ದಂಪತಿ ಮನೆಗೆ ಮರಳಿದ್ದರು. ಮಧ್ಯರಾತ್ರಿ ಮಗುವಿನ ಬಾಯಿಂದ ನೊರೆ ಬರುತ್ತಿರುವುದನ್ನು ಕಂಡ ಪೋಷಕರು ಆತಂಕಕ್ಕೊಳಗಾಗಿದ್ದಾರೆ. ಇದನ್ನೂ ಓದಿ: ಜಿಮ್ ಮಾಡೋವ್ರಿಗೆ ಅಪ್ಪು ಸಾವು ಬಿಗ್ ಶಾಕ್ – ಜಿಮ್‍ಗೆ ಹೋಗದಂತೆ ಮಕ್ಕಳಿಗೆ ಪೋಷಕರ ಆಕ್ಷೇಪ

    ಮರುಘಳಿಗೆಯೇ ಮಗುವಿನ ಮೇಲೆ ಹೊದಿಸಿದ್ದ ಹೊದಿಕೆಯಿಂದ ಹಾವು ಬಿದ್ದಿದೆ. ಅದೇ ಹಾವು ಕ್ರಾಂತಿ ಮತ್ತು ಮಮತಾಗೂ ಕಚ್ಚಿದೆ. ಮೂವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿಮಧ್ಯೆ ಮಗು ಸಾವನ್ನಪ್ಪಿದೆ. ಕ್ರಾಂತಿ ಮತ್ತು ಮಮತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಕೋಣಕ್ಕೆ 3 ಕೆಜಿ ಚಿನ್ನ ಗಿಫ್ಟ್

    ಕೋಣಕ್ಕೆ 3 ಕೆಜಿ ಚಿನ್ನ ಗಿಫ್ಟ್

    ಹೈದರಾಬಾದ್: ಒಂದುವರೆಕೋಟಿ ಬೆಲೆ ಬಾಳುವ ಚಿನ್ನದ ಸರವನ್ನು ವ್ಯಕ್ತಿ ಕೋಣವೊಂದಕ್ಕೆ ತೊಡಿಸಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ಹರಿಯಾಣದಿಂದ ಒಂದು ಕೋಣವನ್ನು ತರಿಸಲಾಗಿದ್ದು, ಅದಕ್ಕೆ ಬಾಹುಬಲಿ ಕೋಣ ಎಂದು ಹೆಸರಿಡಲಾಗಿದೆ. ಹೈದರಾಬಾದ್‍ನ ಚಾಪೆಲ್ ಬಜಾರ್‍ನ ಲಡ್ಡು ಯಾದವ್ ಎಂಬಾತ ಕೋಣವನ್ನು ಹರಿಯಾಣದ ಬಲ್ವೀರ್ ಸಿಂಗ್ ಎಂಬಾತನಿಂದ ತಂದು, ಸದರ್ ಉತ್ಸವದಲ್ಲಿ ಪ್ರದರ್ಶಿಸಲು ಮುಂದಾಗಿದ್ದಾರೆ. ಇದನ್ನೂ ಓದಿ:  ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಿಂದ ಬೊಕ್ಕಸಕ್ಕೆ 2,100 ಕೋಟಿ ಆದಾಯ ನಷ್ಟ: ಸಿಎಂ

    ಈ ಕೋಣವನ್ನು ಪ್ರದರ್ಶನಕ್ಕಾಗಿ ಮಾತ್ರ ತಂದಿದ್ದು, ಇದಕ್ಕೆ ಕೋಣದ ಮಾಲೀಕ ಬಲ್ವೀರ್ ಸಿಂಗ್ ಯಾವುದೇ ಹಣವನ್ನೂ ಪಡೆದಿಲ್ಲ. ಕೋಣ ತಂದ ಲಡ್ಡು ಯಾದವ್ ಸುಮಾರು 3 ಕೆ.ಜಿ ತೂಕವಿರುವ, ಒಂದೂವರೆ ಕೋಟಿ ಬೆಲೆ ಬಾಳುವ ಚಿನ್ನದ ಸರವನ್ನು ಕೋಣಕ್ಕೆ ತೊಡಿಸಿದ್ದಾನೆ. ನಿಜಾಮರ ಕಾಲದಿಂದಲೂ ಸದರ್ ಉತ್ಸವ ಪ್ರತಿ ವರ್ಷ ನಡೆಯುತ್ತಿದ್ದು, ಹಸುಗಳು, ಎಮ್ಮೆ, ಎತ್ತು ಕೋಣಗಳನ್ನು ಈ ಉತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ. ಇದನ್ನೂ ಓದಿ: ದಲಿತರ ಬಗ್ಗೆ ಮಾತನಾಡಿದ್ರೆ ಮುಂದಿನ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕಾಗುತ್ತೆ: ಮುನಿಸ್ವಾಮಿ

    ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಮೆರುಗು ನೀಡುವ ಕೋಣಗಳ ಉತ್ಸವವಾದ ಸದರ್ ಉತ್ಸವಕ್ಕೆ ಹೈದರಾಬಾದ್ ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಾಹುಬಲಿ ಕೋಣ ಸಾಕಷ್ಟು ಗಮನ ಸೆಳೆಯುತ್ತಿದೆ.

  • ನಾಗಚೈತನ್ಯ ನೆನಪುಗಳನ್ನು ಅಳಿಸಿ ಹಾಕಿದ ಸಮಂತಾ

    ನಾಗಚೈತನ್ಯ ನೆನಪುಗಳನ್ನು ಅಳಿಸಿ ಹಾಕಿದ ಸಮಂತಾ

    ಹೈದರಾಬಾದ್: ಟಾಲಿವುಡ್ ನಟಿ ಸಮಂತಾ, ನಾಗಚೈತನ್ಯ ಜೊತೆ ಕ್ಲಿಕ್ಕಿಸಿಕೊಂಡಿದ್ದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಡಿಲೀಟ್ ಮಾಡುವ ಮೂಲಕ ಮಾಜಿ ಪತಿಯ ನೆನಪುಗಳನ್ನು ಅಳಿಸಿ ಹಾಕಿದ್ದಾರೆ.

    ಟಾಲಿವುಡ್ ಕ್ಯೂಟ್ ಪೇರ್ ಎಂದೇ ಫೇಮಸ್ ಆಗಿದ್ದ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನಾ ಪಡೆದ ವಿಚಾರ ಎಲ್ಲರಿಗೂ ಗೊತ್ತೆ ಇದೆ. ಸದ್ಯ ದಾಂಪತ್ಯ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಮರೆಯಲು ಸಮಂತಾ ಪ್ರವಾಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ರಿಷಿಕೇಷಕ್ಕೆ ಭೇಟಿ ನೀಡಿದ್ದ ಅವರು, ಇದೀಗ ದುಬೈಗೆ ಹಾರಿದ್ದಾರೆ. ಇದನ್ನೂ ಓದಿ:  ‘ಪುಷ್ಪ’ ಸಾಂಗ್ ನಲ್ಲಿ ಪಡ್ಡೆ ಹೈಕ್ಳ ನಿದ್ದೆ ಕೆಡಿಸಿದ ರಶ್ಮಿಕಾ

    ವಿಚ್ಛೇದನ ಬಳಿಕ ಪ್ರವಾಸ ಕೈಗೊಂಡಿರುವ ಸಮಂತಾ ತಮ್ಮ ದಿನಚರಿಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವುದರ ಜೊತೆಗೆ ವಿವಿಧ ಸಾಲುಗಳನ್ನು ಹಾಕುವ ಮೂಲಕ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಇದನ್ನೂ ಓದಿ: ವಿಚ್ಛೇದನದ ನಂತ್ರ ಚಾರ್ ಧಾಮ್ ಯಾತ್ರೆಯಲ್ಲಿ ನಟಿ ಸಮಂತಾ

    ಬಹುವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಸಮಂತಾ ಹಾಗೂ ನಾಗಚೈತನ್ಯ ಸಾಕಷ್ಟು ಸಮಯ ಒಟ್ಟಿಗೆ ಕಳೆದಿದ್ದಾರೆ. ಈ ವೇಳೆ ಇಬ್ಬರು ಹಲವಾರು ರೀತಿಯ ಸಾಕಷ್ಟುಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದರು. ಇವುಗಳನ್ನು ಒಂದಷ್ಟು ಚೆಂದದ ಫೋಟೋಗಳನ್ನು ಸಮಂತಾ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು. ಆದರೆ ಇದೀಗ ನಾಗಚೈತನ್ಯಯಿಂದ ದೂರ ಇರುವ ಸಮಂತಾ ಅವರ ಜೊತೆ ಕಳೆದ ನೆನಪುಗಳನ್ನು ಮರೆಯಲು ಪ್ರಯತ್ನಿಸುತ್ತಿದ್ದು, ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಮಾಜಿ ಪತಿ ಜೊತೆಗಿರುವ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಇದನ್ನೂ ಓದಿ: ಕಷ್ಟಕರವಾದ ರಸ್ತೆಗಳು ಸುಂದರ ತಾಣಗಳಿಗೆ ದಾರಿ ಮಾಡಿಕೊಡುತ್ತೆ: ದೀಪಿಕಾ ದಾಸ್

    ವಿಶೇಷವೆಂದರೆ ಸಮಂತಾ ನಾಗಚೈತನ್ಯ ಜೊತೆಗಿರುವ ಫೋಟೋಗಳನ್ನು ಮಾತ್ರ ಡಿಲೀಟ್ ಮಾಡಿದ್ದಾರೆ. ಆದರೆ ಇಬ್ಬರು ಇನ್‍ಸ್ಟಾಗ್ರಾಮ್‍ನಲ್ಲಿ ಪರಸ್ಪರ ಫಾಲೋ ಮಾಡುತ್ತಿದ್ದಾರೆ. ಇದನ್ನೂ ಓದಿ: ವಿಚ್ಛೇದನ ಪಡೆದ ಬೆನ್ನಲ್ಲೇ ಆಶ್ರಮಕ್ಕೆ ಹೋಗಿದ್ದಾರಾ ಸಮಂತಾ?

  • ತೆಲುಗಿನ ಜನಪ್ರಿಯ ಹಿರಿಯ ನಟ ರಾಜಾಬಾಬು ಇನ್ನಿಲ್ಲ

    ತೆಲುಗಿನ ಜನಪ್ರಿಯ ಹಿರಿಯ ನಟ ರಾಜಾಬಾಬು ಇನ್ನಿಲ್ಲ

    ಹೈದರಾಬಾದ್: ತೆಲುಗಿನ ಜನಪ್ರಿಯ ಹಿರಿಯ ನಟ ರಾಜಾಬಾಬು(64) ವಿಧಿವಶರಾಗಿದ್ದಾರೆ.

    ಹಲವು ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ರಾಜಾಬಾಬು ಅವರ ಆರೋಗ್ಯ ಸ್ಥಿತಿ ಕೆಲ ದಿನಗಳಿಂದ ಗಂಭೀರವಾಗಿತ್ತು. ಸೀತಮ್ಮ ವಾಕಿತ್ಲೋ ಸಿರಿಮಲ್ಲೆ ಚೆಟ್ಟು, ಸಿಂಧೂರಂ, ಆದವರು ಮಾತು ಅರ್ಥಾಳು ವೆರುಲೆ ಮತ್ತು ಭಾರತ್ ಅನೆ ನೇನು ಸೇರಿದಂತೆ ಇಲ್ಲಿಯವರೆಗೂ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದನ್ನೂ ಓದಿ:  ಅಲ್ಪಸಂಖ್ಯಾತ ವ್ಯಕ್ತಿ ಅನ್ನೋ ಕಾರಣಕ್ಕೆ ಸಲೀಂ ಮೇಲೆ ಕ್ರಮ ಕೈಗೊಂಡ್ರು: ಜಗದೀಶ್ ಶೆಟ್ಟರ್

    ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಮಚಂದ್ರಾಪುರದಲ್ಲಿ ಜನಿಸಿದ ರಾಜಬಾಬು ಅವರು ಕ್ರಿಶಾ ಅವರ ‘ಊರಿಕಿ ಮೊನಗಾಡು’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಆನಂದ್ ಬರ್ಬರ ಕೊಲೆ

    ರಾಜಾಬಾಬು ಅವರು ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದು, ಅಮ್ಮ ಎಂಬ ಸೀರಿಸ್‍ನಲ್ಲಿ ಅಭಿನಯಿಸಿ ನಂದಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇದೀಗ ರಾಜಾ ಬಾಬು ಅವರು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.

  • ಚಿರಂಜೀವಿ, ರಾಮ್ ಚರಣ್ ಭೇಟಿಯಾದ ಪ್ರಶಾಂತ್ ನೀಲ್ – ಕಾರಣವೇನು ಗೊತ್ತಾ?

    ಚಿರಂಜೀವಿ, ರಾಮ್ ಚರಣ್ ಭೇಟಿಯಾದ ಪ್ರಶಾಂತ್ ನೀಲ್ – ಕಾರಣವೇನು ಗೊತ್ತಾ?

    ಹೈದರಾಬಾದ್: ಟಾಲಿವುಡ್ ಮೆಗಾ ಸ್ಟಾರ್ ನಟ ಚಿರಂಜೀವಿ ಹಾಗೂ ನಟ ರಾಮ್ ಚರಣ್ ತೇಜ ಅವರನ್ನು ಸ್ಯಾಂಡಲ್‍ವುಡ್ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಭೇಟಿ ಮಾಡಿದ್ದಾರೆ. ಸದ್ಯ ಈ ವಿಚಾರ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಕೆರಳಿಸಿದೆ.

    ನಟ ಶ್ರೀಮುರಳಿ ಅಭಿನಯದ ಉಗ್ರಂ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಪ್ರಶಾಂತ್ ನೀಲ್ ಮೊದಲ ಸಿನಿಮಾದಲ್ಲಿಯೇ ಸಕ್ಸಸ್ ಕಂಡರು. ನಂತರ ರಾಕಿಂಗ್ ಸ್ಟಾರ್ ಯಶ್‍ಗೆ ಕೆಜಿಎಫ್ ಸಿನಿಮಾವನ್ನು ನಿರ್ದೇಶಿಸಿ, ಬಿಗ್ ಹಿಟ್ ಪಡೆಯುವುದರ ಜೊತೆಗೆ ಈ ಸಿನಿಮಾ ಬಾಕ್ಸ್ ಆಫೀಸ್‍ನಲ್ಲಿ ದಾಖಲೆ ಸೃಷ್ಟಿಸಿತು. ಈ ಸಿನಿಮಾ ಯಶ್‍ಗೆ ನ್ಯಾಷನಲ್ ಸ್ಟಾರ್ ಪಟ್ಟ ಗಿಟ್ಟಿಸಿಕೊಟ್ಟಿದ್ದಲ್ಲದೇ ಪ್ರಶಾಂತ್‍ಗೂ ಕೂಡ ದೊಡ್ಡ ನೇಮ್, ಫ್ರೇಮ್ ತಂದು ಕೊಟ್ಟಿತು.  ಇದನ್ನೂ ಓದಿ: ನನ್ನ ನಂಬಿ ಸಿನಿಮಾ ಮಂದಿರಕ್ಕೆ ಬಂದವ್ರಲ್ಲಿ ಕ್ಷಮೆ ಕೇಳುತ್ತೇನೆ: ಸುದೀಪ್

    ಕೆಜಿಎಫ್ ಸಕ್ಸಸ್ ನಂತರ ಟಾಲಿವುಡ್ ನಟ ಪ್ರಭಾಸ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್‌ಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಪ್ರಶಾಂತ್‍ಗೆ ಪರಭಾಷಾ ಬಿಗ್ ಸ್ಟಾರ್‌ಗಳ ಸಿನಿಮಾ ನಿರ್ದೇಶಿಸಲು ಅವಕಾಶಗಳ ಮಳೆಯೇ ಹರಿದುಬರುತ್ತಿದೆ. ಈ ಮಧ್ಯೆ ಪ್ರಶಾಂತ್ ವಿಜಯದಶಮಿ ಹಬ್ಬದ ದಿನದಂದು ಚಿರಂಜೀವಿ ಅವರ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ರಾಮ್ ಚರಣ್ ಹಾಗೂ ಚಿರಂಜೀವಿ ಜೊತೆ ಪ್ರಶಾಂತ್ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಾನು ತಡ ಮಾಡಿದ್ದೇನೆ ಎಂಬುದು ಗೊತ್ತು: ರಶ್ಮಿಕಾ ಮಂದಣ್ಣ

    ಚಿರಂಜೀವಿ ಹಾಗೂ ರಾಮ್ ಚರಣ್ ಜೊತೆ ಬಹಳ ಕ್ಲೋಸ್ ಆಗಿ ಫೋಟೋ ಕ್ಲಿಕ್ಕಿಸಿಕೊಂಡಿರುವ ಪ್ರಶಾಂತ್ ನೀಲ್ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋವನ್ನು ಶೇರ್ ಮಾಡಿಕೊಳ್ಳುವುದರ ಜೊತೆಗೆ, ನಾನು ಇಂದು ಲೆಜೆಂಡ್ ರನ್ನು ಭೇಟಿಯಾದೆ. ಅದ್ಭುತ ಆತಿಥ್ಯ ನೀಡಿದ ರಾಮ್‍ಚರಣ್ ಅವರಿಗೆ ಧನ್ಯವಾದ. ಚಿಕ್ಕವಯಸ್ಸಿನಲ್ಲಿ ಚಿರಂಜೀವಿ ಅವರನ್ನು ಭೇಟಿಯಾಗುವ ನನ್ನ ಬಾಲ್ಯದ ಕನಸು ಈಗ ನನಸಾಯಿತು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Prashanth Neel (@prashanthneel)

    ವಿಶೇಷವೆಂದರೆ ಪ್ರಶಾಂತ್ ಜೊತೆ ನಿರ್ಮಾಪಕ ಡಿವಿವಿ ದಾನಯ್ಯ ಕೂಡ ಚಿರಂಜೀವಿ ಮನೆಗೆ ಭೇಟಿ ನೀಡಿದ್ದು, ಈ ಮೂವರ ಕಾಂಬಿನೇಷನ್‍ನಲ್ಲಿ ಸಿನಿಮಾ ಬರಲಿದ್ಯಾ ಎಂಬ ಪ್ರಶ್ನೆ ಎದ್ದಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಸದ್ಯ ಪ್ರಶಾಂತ್ ನೀಲ್ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ರಾಮ್ ಚರಣ್ ಕಾಲಿವುಡ್ ನಿರ್ದೇಶಕ ಶಂಕರ್ ನಿದೇಶಿಸುತ್ತಿರುವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇದನ್ನೂ ಓದಿ: ನನ್ನ ಹಾಗೂ ಸೂರಪ್ಪ ಬಾಬು ಮಧ್ಯೆ ಮನಸ್ತಾಪ ಇರೋದು ನಿಜ: ಸುದೀಪ್