Tag: Hyderabad

  • ಮಾತನಾಡಲು ನಿರಾಕರಿಸಿದಕ್ಕೆ ಯುವತಿಗೆ ಆ್ಯಸಿಡ್ ದಾಳಿ ಬೆದರಿಕೆ ಹಾಕ್ದ

    ಮಾತನಾಡಲು ನಿರಾಕರಿಸಿದಕ್ಕೆ ಯುವತಿಗೆ ಆ್ಯಸಿಡ್ ದಾಳಿ ಬೆದರಿಕೆ ಹಾಕ್ದ

    ಗಾಂಧಿನಗರ: ಮಾತನಾಡಲು ನಿರಾಕರಿಸಿದ 25 ವರ್ಷದ ಯುವತಿಗೆ ಆ್ಯಸಿಡ್ ದಾಳಿ ನಡೆಸುವುದಾಗಿ ವ್ಯಕ್ತಿಯೋರ್ವ ಬೆದರಿಕೆ ಹಾಕಿರುವ ಘಟನೆ ಅಹಮದಬಾದ್‍ನಲ್ಲಿ ನಡೆದಿದೆ.

    ಇದೀಗ ಯುವತಿ ಆ್ಯಸಿಡ್ ದಾಳಿ ಬೆದರಿಕೆಯೊಡ್ಡಿದ್ದ ಆರೋಪಿ ವಿರುದ್ಧ ವೆಜಾಲ್‍ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಹಮದಾಬಾದ್‍ನ ಜುಹಾಪುರದ ನಿವಾಸಿಯಾಗಿರುವ ಸಂತ್ರಸ್ತೆ, ವೆಜಲ್‍ಪುರದಲ್ಲಿ ವಾಸಿಸುವ ಮನ್ಸೂರಿ ಇಬ್ಬರೂ ಸುಮಾರು ಏಳು ವರ್ಷಗಳಿಂದ ಸ್ನೇಹಿತರಾಗಿದ್ದರು. ಆದರೆ ಇದೀಗ ಯುವತಿ ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಗ್ಯಾಂಗ್‌ರೇಪ್ ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು!

    ಮನ್ಸೂರಿ ಶನಿವಾರ ಮಧ್ಯಾಹ್ನ ಸಂತ್ರಸ್ತೆ ಮನೆಗೆ ಆಗಮಿಸಿ ಮತನಾಡುವುದನ್ನು ನಿಲ್ಲಿಸಿರುವ ಕುರಿತಂತೆ ಪ್ರಶ್ನಿಸಿದ್ದಾನೆ. ಆಗ ಯುವತಿ ನಿನ್ನೊಂದಿಗೆ ಸ್ನೇಹ ಬೆಳೆಸಲು ಇಷ್ಟವಿಲ್ಲ ಎಂದು ಹೇಳಿದ್ದು, ಇಬ್ಬರ ನಡುವೆ ವಾಗ್ವಾದ ನಡೆದಿದೆ. ಇದರಿಂದ ಕೋಪಗೊಂಡ ಮನ್ಸೂರಿ ಆಕೆಯ ಮೇಲೆ ದೌರ್ಜನ್ಯ ಎಸಗಲು ಮುಂದಾಗಿದ್ದಾನೆ. ಈ ವೇಳೆ ಯುವತಿ ಕಿರುಚಾಡಿದ್ದರಿಂದ ಅವರ ನೆರೆಹೊರೆಯವರು ಧಾವಿಸಿದಾರೆ. ಆಗ ವ್ಯಕ್ತಿ ಸಂತ್ರಸ್ತೆಗೆ ಆ್ಯಸಿಡ್ ದಾಳಿ ನಡೆಸುವುದಾಗಿ ಬೆದರಿಕೆಯೊಡ್ಡಿ ಅಲ್ಲಿಂದ ಪರಾರಿಯಾಗಿದ್ದಾನೆ.

    ಈ ಘಟನೆ ಕುರಿತಂತೆ ಯುವತಿ ತನ್ನ ತಂದೆಗೆ ವಿವರಿಸಿದಾಗ ಕೂಡಲೇ ಪೊಲೀಸರನ್ನು ಸಂಪರ್ಕಿಸಲು ತಿಳಿಸಿದ್ದಾರೆ. ಇದೀಗ ಪೊಲೀಸರು ಆರೋಪಿ ವಿರುದ್ಧ ಕ್ರಮಿನಲ್ ಬೆದರಿಕೆ ಮತ್ತು ಇತರ ದೂರುಗಳನ್ನು ದಾಖಲಿಸಿದ್ದಾರೆ. ಇದನ್ನೂ ಓದಿ: ಹಿರಿಯರ ಕಿರುಕುಳ – ಚರ್ಚಿನಲ್ಲಿಯೇ ಪಾದ್ರಿ ಆತ್ಮಹತ್ಯೆಗೆ ಯತ್ನ

  • ಗ್ಯಾಂಗ್‌ರೇಪ್ ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು!

    ಗ್ಯಾಂಗ್‌ರೇಪ್ ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು!

    ಹೈದರಾಬಾದ್: ವಿವಾಹೇತರ ಸಂಬಂಧವನ್ನು ಬಹಿರಂಗಪಡಿಸುವುದಾಗಿ ಹೆದರಿಸಿ ಮಹಿಳೆಯ ಮೇಲೆ ಆರೋಪಿಗಳಿಬ್ಬರು ಅತ್ಯಾಚಾರ ಎಸಗಿದ್ದಾರೆ. ಬಳಿಕ ಮಹಿಳೆ ಹಾಗೂ ಆಕೆಯ ಪ್ರೇಮಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹೈದರಾಬಾದ್‌ನ ಎಸ್‌ಆರ್ ನಗರದಲ್ಲಿ ನಡೆದಿದೆ.

    ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳಿಬ್ಬರು ಮಹಿಳೆ ಹಾಗೂ ಆಕೆಯ ಪ್ರೇಮಿಗೆ ಅವರಿಬ್ಬರ ಸಂಬಂಧವನ್ನು ಬಹಿರಂಗಪಡಿಸುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು. ಇದರಿಂದ ನೊಂದಿದ್ದ ಪ್ರೇಮಿಗಳು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಘಟನೆ ಡಿಸೆಂಬರ್ 13 ರಂದು ನಡೆದಿದ್ದು, 17 ರಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಹಿರಿಯರ ಕಿರುಕುಳ – ಚರ್ಚಿನಲ್ಲಿಯೇ ಪಾದ್ರಿ ಆತ್ಮಹತ್ಯೆಗೆ ಯತ್ನ

    ಕಟ್ಟಡ ಕಾರ್ಮಿಕರಾಗಿದ್ದ ಮಹಿಳೆ ತನ್ನ ಸಹೋದ್ಯೋಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಡಿಸೆಂಬರ್ 13 ರಂದು ಮಹಿಳೆ ಮನೆಯಿಂದ ಹೊರಗಡೆ ಹೊರಟಿದ್ದ ಸಮಯದಲ್ಲಿ ಆರೋಪಿಗಳು ಅಡ್ಡಗಟ್ಟಿ ಅವರಿಬ್ಬರ ಸಂಬಂಧವನ್ನು ಕುಟುಂಬದವರಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದಾರೆ.

    ನಂತರ ಆರೋಪಿಗಳು ಆಕೆಯನ್ನು ಖಾಲಿ ಕೋಣೆಗೆ ಒಯ್ದು ಅಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮರುದಿನ ಸಂತ್ರಸ್ತೆ ಹಾಗೂ ಸಂಗಾತಿ ಪ್ರತ್ಯೇಕ ಸ್ಥಳಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಗಲಾಟೆ ಮಾಡಿದವರೆಲ್ಲಾ ಕಾಂಗ್ರೆಸಿಗರು: ಶ್ರೀರಾಮುಲು

    POLICE JEEP

    ಕೀಟನಾಶಕವನ್ನು ಸೇವಿಸಿ, ಪ್ರಜ್ಞಾಹೀನರಾಗುವ ಮೊದಲೇ ಮಹಿಳೆ ತನ್ನ ಕುಟುಂಬದ ಸದಸ್ಯರಿಗೆ ವಿಷಯ ತಿಳಿಸಿದ್ದು, ತಕ್ಷಣ ಅವರಿಬ್ಬರನ್ನು ಹುಡುಕಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಶುಕ್ರವಾರ ಮಹಿಳೆ ಪ್ರಜ್ಞೆ ಬಂದಾಗ ಲೈಂಗಿಕ ದೌರ್ಜನ್ಯದ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ. ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ದಾಖಲಿಸಿಕೊಂಡು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

  • ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಲಿಂಗಕಾಮಿ ಜೋಡಿ

    ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಲಿಂಗಕಾಮಿ ಜೋಡಿ

    ಹೈದರಬಾದ್: ತೆಲಂಗಾಣದ ಸಲಿಂಗಕಾಮಿ ಜೋಡಿಯೊಂದು ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಶನಿವಾರ ಹೈದರಾಬಾದ್‍ನ ಹೊರವಲಯದಲ್ಲಿರುವ ರೆಸಾರ್ಟ್‍ನಲ್ಲಿ ಸಲಿಂಗಕಾಮಿ ಜೋಡಿಯ ವಿವಾಹ ಮಹೋತ್ಸವ ಅದ್ದೂರಿಯಾಗಿ ನೆರವೇರಿತ್ತು. ಹೋಟೆಲ್ ಮ್ಯಾನೇಜ್‍ಮೆಂಟ್ ಇನ್‍ಸ್ಟಿಟ್ಯೂಟ್‍ನಲ್ಲಿ ಹಿರಿಯ ಅಧ್ಯಾಪಕರಾದ ಕೋಲ್ಕತ್ತಾ ಮೂಲದ ಸುಪ್ರಿಯೊ ಚಕ್ರವರ್ತಿ(31) ಮತ್ತು ಎಂಎನ್‍ಸಿ ಉದ್ಯೋಗಿಯಾಗಿರುವ ದೆಹಲಿ ಮೂಲಕ ಅಭಯ್ ಡ್ಯಾಂಗ್ (34) ಬಿಳಿ ಸೂಟಿನಲ್ಲಿ ಉಂಗುರ ವಿನಿಮಯ ಮಾಡಿಕೊಳ್ಳುವ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ನಂತರ ಬೆಂಗಾಲಿ ಮತ್ತು ಪಂಜಾಬಿ ಸಂಪ್ರದಾಯದಂತೆ ವಿವಾಹ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: MESಗೆ ಪಾಠ ಕಲಿಸಲು ಕಾರ್ಮಿಕ ಸಂಘಟನೆ ಪ್ಲ್ಯಾನ್- ಇಂದಿನಿಂದ್ಲೇ ಮಹಾರಾಷ್ಟ್ರ ವಸ್ತುಗಳು ಬ್ಯಾನ್

    Gay couple

    8 ವರ್ಷಗಳಿಂದ ರಿಲೇಶನ್ ಶಿಪ್‍ನಲ್ಲಿದ್ದ ಈ ಜೋಡಿ ಇದೀಗ ಅಧಿಕೃತವಾಗಿ ಪತಿ ಮತ್ತು ಪತಿ ಆಗಿದ್ದು, ಈ ವಿಶೇಷ ಮದುವೆಗೆ ಅವರು ಪ್ರಾಮಿಸಿಂಗ್ ಸೆರ್ಮನಿ ಎಂಬ ಹೆಸರನ್ನು ಕೊಟ್ಟಿದ್ದಾರೆ. ಕುಟುಂಬಸ್ಥರ ಒಪ್ಪಿಗೆ ಮೇರೆಗೆ ನಡೆದ ಈ ವಿವಾಹ ಮಹೋತ್ಸವದಲ್ಲಿ ದಂಪತಿಗಳ ಅನೇಕ ಸ್ನೇಹಿತರು ಮತ್ತು ಆಪ್ತರು ಭಾಗವಹಿಸಿದ್ದರು. ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಟಾಲಿವುಡ್ ನಟಿ – ಕಾಜಲ್ ಫೋಟೋ ಹೇಳ್ತೀರೋದೇನು?

    Gay couple

    ಒಟ್ಟಾರೆ ಭಾರತದಲ್ಲಿ ಸಲಿಂಗಕಾಮಿ ವಿವಾಹಕ್ಕೆ ಮಾನ್ಯತೆ ಇಲ್ಲದಿದ್ದರೂ, ಈ ಜೋಡಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೊದಲ ಭಾರತದ ಸಲಿಂಗಕಾಮಿ ಜೋಡಿಯಾಗಿದೆ.

  • ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಟಾಲಿವುಡ್ ನಟಿ – ಕಾಜಲ್ ಫೋಟೋ ಹೇಳ್ತೀರೋದೇನು?

    ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಟಾಲಿವುಡ್ ನಟಿ – ಕಾಜಲ್ ಫೋಟೋ ಹೇಳ್ತೀರೋದೇನು?

    ಹೈದರಾಬಾದ್: ಟಾಲಿವುಡ್ ಕ್ಯೂಟ್ ನಟಿ ಕಾಜಲ್ ಅಗರ್ವಾಲ್ ಹಾಗೂ ಗೌತಮ್ ಕಿಚ್ಲು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

    ಇತ್ತೀಚೆಗಷ್ಟೇ ಕಾಜಲ್ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಕಾಜಲ್ ಬೇಬಿ ಬಂಪ್ ಎದ್ದು ಕಾಣಿಸುವಂತಿದೆ. ಆದರೆ ಈ ಬಗ್ಗೆ ಕಾಜಲ್ ಆಗಲಿ, ಗೌತಮ್ ಆಗಲಿ ಎಲ್ಲೂ ಅಧಿಕೃತವಾಗಿ ಘೋಷಿಸಿಲ್ಲ. ಇದನ್ನೂ ಓದಿ: ಕನ್ನಡಕ್ಕಾಗಿ ಪ್ರಾಣ ಕೊಡೋಕು ಸಿದ್ಧ: ಶಿವಣ್ಣ ಖಡಕ್‌ ಮಾತು

    2020ರ ಅಕ್ಟೋಬರ್ 30ರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಜಲ್ ಅಗರ್ವಾಲ್ ಮತ್ತು ಗೌತಮ್ ಕಿಚ್ಲು ದಕ್ಷಿಣ ಭಾರತದ ಕ್ಯೂಟ್ ಜೋಡಿಗಳಲ್ಲಿ ಒಬ್ಬರು. ಇತ್ತೀಚೆಗೆ ದಂಪತಿಗಳು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಗಾಳಿಸುದ್ದಿ ಟಾಲಿವುಡ್ ಅಂಗಳದಲ್ಲಿ ಸಖತ್ ಸದ್ದು ಮಾಡುತ್ತಿದೆ. ತೆಲುಗಿನ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದ ಕಾಜಲ್ ಮದುವೆಯ ನಂತರ ಚಿತ್ರರಂಗದಿಂದ ಸದ್ಯ ಬ್ರೇಕ್ ಪಡೆದುಕೊಂಡಿದ್ದಾರೆ.

    ಡಿಸೆಂಬರ್ 19ರಂದು ಕಾಜಲ್ ಅಗರ್ವಾಲ್ ತನ್ನ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಿದ್ದ ಒಂದೆರಡು ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಫೋಟೋಗಳಲ್ಲಿ ಕಾಜಲ್ ಟೈಟ್ ಫಿಟ್ ಡ್ರೆಸ್ ಧರಿಸಿದ್ದರು. ಇದರಲ್ಲಿ ಕಾಜಲ್ ಬೇಬಿ ಬಂಪ್ ಎದ್ದು ಕಾಣುತ್ತಿದ್ದು, ಎಲ್ಲರ ಗಮನ ಸೆಳೆದಿದೆ.  ಇದನ್ನೂ ಓದಿ: ‘ಬನಾರಸ್’ ಫಸ್ಟ್ ಲುಕ್ ಮೋಷನ್ ಪೋಸ್ಟರ್‌ಗೆ ಚಿತ್ರರಸಿಕರಿಂದ ಬಹುಪರಾಕ್

    ಪ್ರವಾಸದಲ್ಲಿ ಕಾಜಲ್ ತಮ್ಮ ಗರ್ಲ್ಸ್ ಗ್ಯಾಂಗ್ ಹಾಗೂ ಅವರ ಮಕ್ಕಳೊಂದಿಗೆ ಅದ್ಭುತವಾದಂತಹ ಸಮಯ ಕಳೆದಿದ್ದು, ಕಾಜಲ್ ಮತ್ತು ಗೌತಮ್ ಕಿಚ್ಲು ಶೀಘ್ರದಲ್ಲೇ ಅಭಿಮಾನಿಗಳ ಮುಂದೆ ಈ ಸಿಹಿ ಸುದ್ದಿಯನ್ನು ರಿವೀಲ್ ಮಾಡುತ್ತಾರಾ ಎಂದು ಕಾದು ನೋಡಬೇಕಾಗಿದೆ.

  • ಹುಬ್ಬಳ್ಳಿ ವ್ಯಕ್ತಿಯ ದೇಹದಿಂದ 156 ಕಿಡ್ನಿ ಸ್ಟೋನ್ಸ್ ತೆಗೆದ ವೈದ್ಯರು

    ಹುಬ್ಬಳ್ಳಿ ವ್ಯಕ್ತಿಯ ದೇಹದಿಂದ 156 ಕಿಡ್ನಿ ಸ್ಟೋನ್ಸ್ ತೆಗೆದ ವೈದ್ಯರು

    ಹೈದರಾಬಾದ್: 50 ವರ್ಷದ ರೋಗಿಯ ದೇಹದಿಂದ 156 ಕಿಡ್ನಿ ಸ್ಟೋನ್ಸ್ ಅನ್ನು ಹೈದರಾಬಾದ್ ವೈದ್ಯರು ಹೊರ ತೆಗೆದಿದ್ದಾರೆ.

    ಪ್ರಮುಖ ಆಸ್ಪತ್ರೆಯ ವೈದ್ಯರು 50 ವರ್ಷದ ರೋಗಿಯಿಂದ ಲ್ಯಾಪರೊಸ್ಕೋಪಿ ಮತ್ತು ಎಂಡೋಸ್ಕೋಪಿಯನ್ನು ಬಳಸಿ 156 ಕಿಡ್ನಿ ಸ್ಟೋನ್ಸ್ ಗಳನ್ನು ಹೊರತೆಗೆದಿದ್ದಾರೆ. ಈ ಆಪರೇಷನ್ ಸುಮಾರು ಮೂರು ಗಂಟೆಗಳ ಕಾಲ ನಡೆದಿದ್ದು, ರೋಗಿಯು ಈಗ ಆರೋಗ್ಯವಾಗಿದ್ದಾರೆ.

    ಹುಬ್ಬಳ್ಳಿ ನಿವಾಸಿಯಾಗಿರುವ ಶಾಲಾ ಶಿಕ್ಷಕ ಬಸವರಾಜ್ ಮಡಿವಾಳರ್ ಅವರ ಹೊಟ್ಟೆ ಬಳಿ ಹಠಾತ್ ಆಗಿ ನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆ ಅವರು ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಆಗ ಅವರಿಗೆ ಸ್ಕ್ರೀನಿಂಗ್ ಗುಂಪು ಇರುವುದು ವೈದ್ಯರಿಗೆ ತಿಳಿದುಬಂದಿದೆ. ಈ ಹಿನ್ನೆಲೆ ಅವರು ಹೈದರಾಬಾದ್ ಗೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದು, ಯಶಸ್ವಿಯಾಗಿದೆ. ಇದನ್ನೂ ಓದಿ: ಅಪಘಾತದಲ್ಲಿ ವಿದ್ಯಾರ್ಥಿ ಸಾವು – ನುಚ್ಚು ನೂರಾದ ಮೆಡಿಕಲ್ ಕನಸು

    ಆಸ್ಪತ್ರೆಯ ಮೂತ್ರಶಾಸ್ತ್ರಜ್ಞ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಚಂದ್ರ ಮೋಹನ್ ಈ ಕುರಿತು ಮಾತನಾಡಿದ್ದು, ರೋಗಿಯ ಮೂತ್ರಪಿಂಡದಲ್ಲಿ ಸಮಸ್ಯೆ ಇತ್ತು. ಹೊಟ್ಟೆಯ ಸಮೀಪವೇ ಸ್ಟೋನ್ಸ್ ತೆಗೆಯುವುದು ನಮಗೆ ಸವಾಲಿನ ಕೆಲಸವಾಗಿತ್ತು ಎಂದು ತಿಳಿಸಿದರು.

    ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಈ ರೋಗಿಯು ಕಿಡ್ನಿ ಸ್ಟೋನ್ಸ್ ಸಮಸ್ಯೆಯಿಂದ ಬಳಲುತ್ತಿದ್ದು, ಬರುಬರುತ್ತಾ ಈ ಕಲ್ಲುಗಳು ಬೆಳೆಯುತ್ತಾ ಹೋಗಿದೆ. ಆದರೆ ಇವರು ಈ ಹಿಂದೆ ಯಾವುದೇ ರೋಗಲಕ್ಷಣಗಳನ್ನು ಅನುಭವಿಸಿರಲಿಲ್ಲ. ಆದರೆ ಅವರಿಗೆ ಹಠಾತ್ ನೇ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದ್ದು, ಈ ಹಿನ್ನೆಲೆ ಎಲ್ಲಾ ಅಗತ್ಯ ಪರೀಕ್ಷೆಗಳನ್ನು ಮಾಡಲಾಗಿದೆ. ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ಪತ್ತೆಯಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ಕನ್ನಡ ಧ್ವಜ ಸುಟ್ಟ ದ್ರೋಹಿಗಳ ವಿರುದ್ಧ ಆಕ್ರೋಶ: ಪಕ್ಷಬೇಧ ಮರೆತು ಖಂಡನಾ ನಿರ್ಣಯ

  • ಆಯಾ ತಪ್ಪಿ ನದಿಗೆ ಬಿದ್ದ ಬಸ್ – 9 ಪ್ರಯಾಣಿಕರು ಬಲಿ

    ಆಯಾ ತಪ್ಪಿ ನದಿಗೆ ಬಿದ್ದ ಬಸ್ – 9 ಪ್ರಯಾಣಿಕರು ಬಲಿ

    ಹೈದರಾಬಾದ್: ಪಶ್ಚಿಮ ಗೋದಾವರಿ ಜಿಲ್ಲೆಯ ಜಂಗಾರೆಡ್ಡಿಗುಡೆಂ ಬಳಿ ಇಂದು ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಎಪಿಎಸ್‌ಆರ್‌ಟಿಸಿ)ಯ ಬಸ್ ಜಿಲ್ಲೇರು ವಾಗು(ಜಲ್ಲೇರು ಹೊಳೆ)ಯಲ್ಲಿ ಬಿದ್ದಿದೆ. ಈ ಪರಿಣಾಮ ಒಂಬತ್ತು ಪ್ರಯಾಣಿಕರು ಸಾವನ್ನಪ್ಪಿದ್ದಾರೆ.

    ತೆಲಂಗಾಣದ ಅಶ್ವರಾವ್‍ಪೇಟೆಯಿಂದ ಜಂಗಾರೆಡ್ಡಿಗುಡೆಮ್‍ಗೆ ತೆರಳುತ್ತಿದ್ದ ಬಸ್‍ನಲ್ಲಿ ಸುಮಾರು 35 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ವೇಳೆ ಎಪಿಎಸ್‌ಆರ್‌ಟಿಸಿ ಬಸ್ ಚಾಲಕ ಜಲ್ಲೇರು ನದಿಗೆ ಅಡ್ಡಲಾಗಿರುವ ಸೇತುವೆಯ ಮೇಲೆ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಲಾರಿಯನ್ನು ತಪ್ಪಿಸಲು ಪ್ರಯತ್ನಿಸಿದ್ದಾನೆ. ಇದನ್ನೂ ಓದಿ: ಶ್ರೀನಿವಾಸ್ ಪೂಜಾರಿ ಒಂದು ರೂಪಾಯಿ ಖರ್ಚು ಮಾಡದೇ ಗೆದ್ದಿದ್ದಾರೆ: ಬಿ.ಎಲ್.ಸಂತೋಷ್

    ಈ ಪರಿಣಾಮ ಬಸ್ ಸೇತುವೆಯ ರೇಲಿಂಗ್‍ಗೆ ಡಿಕ್ಕಿ ಹೊಡೆದು ನದಿಯೊಳಗೆ ಬಿದ್ದಿದೆ. ಅದಕ್ಕೆ ಬಸ್ ನಲ್ಲಿದ್ದ ಪ್ರಯಾಣಿಕರಲ್ಲಿ 9 ಜನರು ಸಾವನ್ನಪ್ಪಿದ್ದಾರೆ.

    ಪಶ್ಚಿಮ ಗೋದಾವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ದೇವ್ ಶರ್ಮಾ ಅವರು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಇದುವರೆಗೆ ನಾವು ಐದು ಮಹಿಳಾ ಪ್ರಯಾಣಿಕರು ಸೇರಿದಂತೆ ಎಂಟು ಮೃತದೇಹಗಳನ್ನು ಹೊರತೆಗೆದಿದ್ದೇವೆ. ಅಪಘಾತ ನಡೆದ ತಕ್ಷಣ ಸ್ಥಳೀಯ ಜನರು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಮಾಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ:  ಪಠ್ಯಪುಸ್ತಕ ವಿತರಿಸದಿರುವುದು ಶಿಕ್ಷಣ ಸಚಿವರ ಅಸಮರ್ಥತೆಯ ಸಂಕೇತ: ಎಎಪಿ

  • ಸಿಬಿಐ ಅಧಿಕಾರಿಗಳೆಂದು ಹೇಳಿ ಮನೆಯಲ್ಲಿದ್ದ ಚಿನ್ನ, ನಗದು ಹಣ ಲೂಟಿ

    ಸಿಬಿಐ ಅಧಿಕಾರಿಗಳೆಂದು ಹೇಳಿ ಮನೆಯಲ್ಲಿದ್ದ ಚಿನ್ನ, ನಗದು ಹಣ ಲೂಟಿ

    ಹೈದರಾಬಾದ್: ನಾವು ಸಿಬಿಐ ಅಧಿಕಾರಿಗಳೆಂದು ಹೇಳಿಕೊಂಡು ಬಂದ ನಾಲ್ವರು, ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಹಣವನ್ನು ದೋಚಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

    ರಿಯಲ್ ಎಸ್ಟೇಟ್ ಉದ್ಯಮಿಯ ಮನೆಗೆ ಸಿಬಿಐ ಅಧಿಕಾರಿಗಳೆಂದು ಹೇಳಿ ಬಂದು, ಮನೆಯನ್ನೆಲ್ಲಾ ಪರಿಶೀಲಿಸುವ ನೆಪದಲ್ಲಿ ಬೀರು ಬಾಗಿಲು ತೆಗೆದು ಅದರಲ್ಲಿದ್ದ 1.35 ಕೆ.ಜಿ ಚಿನ್ನ ಹಾಗೂ 2 ಲಕ್ಷ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದ ಆರೋಗ್ಯ ಸಚಿವರ ಕಾರು ಅಪಘಾತ!

    ಅಧಿಕಾರಿಗಳು ಅಲ್ಲವೆಂದು ತಿಳಿದ ಬಳಿಕ ಉದ್ಯಮಿಯು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿಗಳಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಪ್ಪು ಸಮಾಧಿಗೆ ಧಾರವಾಡದಿಂದ ನಡೆದೇ ಬಂದ ಅಭಿಮಾನಿ

  • ಕೆಲಸ ಕಳೆದುಕೊಂಡ ಟೆಕ್ಕಿ, ಮಕ್ಕಳನ್ನು ಕೊಂದು ತಾನೂ ಪ್ರಾಣ ಬಿಟ್ಟಳು

    ಕೆಲಸ ಕಳೆದುಕೊಂಡ ಟೆಕ್ಕಿ, ಮಕ್ಕಳನ್ನು ಕೊಂದು ತಾನೂ ಪ್ರಾಣ ಬಿಟ್ಟಳು

    ಹೈದರಾಬಾದ್: ಕೊರೊನಾ ಸಮಯದಲ್ಲಿ ಕೆಲಸ ಕಳೆದುಕೊಂಡಿದ್ದ ಸಾಫ್ಟ್ ವೇರ್  ಉದ್ಯೋಗಿ ಮಹಿಳೆ ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ಸ್ವಾರ್ತಿ ಕುಸುಮಾ (32)ಮೃತಳಾಗಿದ್ದಾಳೆ. ಈಕೆ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದಳು. ಆರ್ಥಿಕ ಸಂಕಷ್ಟಕ್ಕೆ ಬೇಸತ್ತು ತಮ್ಮ ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಕೊಂಡು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    POLICE JEEP

    ಸ್ವಾರ್ತಿ ಕುಸುಮಾ, ಪತಿ ಸಾಯಿಕುಮಾರ್ ಇಬ್ಬರೂ ಕೊರೊನಾ ಸಮಯದಲ್ಲಿ ಸಾಫ್ಟ್ ವೇರ್ ಉದ್ಯೋಗ ಕಳೆದುಕೊಂಡಿದ್ದರು. ಕೆಲಸ ಕಳೆದುಕೊಂಡ ನಂತರ ಸಾಯಿಕುಮಾರ್ ಕಾಲ್ ಸೆಂಟರ್‌ನಲ್ಲಿ ಕಡಿಮೆ ಸಂಬಳಕ್ಕೆ ಸೇರಿಕೊಂಡಿದ್ದರು. ಸ್ವಾತಿ ಅವರು ಮನೆಯಲ್ಲೇ ಇದ್ದರು. ಇದನ್ನೂ ಓದಿ: ಅಪ್ಪನಂತೆ ನಾನೂ ವಾಯುಪಡೆ ಸೇರ್ತೀನಿ: ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ವಿಂಗ್ ಕಮಾಂಡರ್ ಪುತ್ರಿ ಆಸೆ

    ಪತಿ ಸಾಯಿಕುಮಾರ್‌ಗೆ ಬರುತ್ತಿದ್ದ ಸಂಬಳ ಮಕ್ಕಳ ಫೀಸಿಗೂ ಸಾಕಾಗುತ್ತಿಲ್ಲವೆಂದು ಸ್ವಾತಿ ಚಿಂತಿತರಾಗಿದ್ದರು ಎನ್ನಲಾಗಿದೆ. ಸಾಯಿಕುಮಾರ್ ಕೆಲಸಕ್ಕೆ ತೆರಳಿದ್ದ ವೇಳೆ ಬೆಡ್ ರೂಮಿನಲ್ಲಿ ಆತ್ಮಹತ್ಯೆ ನೋಟ್ ಬರೆದು ಸ್ವಾತಿ 5 ವರ್ಷದ ಮಗ ಮಗು 3 ವರ್ಷದ ಮಗಳನ್ನು ಕೊಂದು ತಾವೂ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ಇಸ್ರೇಲ್ ಪ್ರಧಾನಿಗೆ ಭಗವದ್ಗೀತೆ ಗಿಫ್ಟ್ ಕೊಟ್ಟ ಐರಾವತ ನಟಿ

  • ಪತಿ ಮೇಲೆ ಡೌಟ್‌ ಬಂದು ಹಿಂಬಾಲಿಸಿದ ಪತ್ನಿಗೆ ಕಾದಿತ್ತು ಶಾಕ್!

    ಪತಿ ಮೇಲೆ ಡೌಟ್‌ ಬಂದು ಹಿಂಬಾಲಿಸಿದ ಪತ್ನಿಗೆ ಕಾದಿತ್ತು ಶಾಕ್!

    ಹೈದರಾಬಾದ್: ಬೇರೆ ಹೆಂಗಸಿನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಪತಿ ರೆಡ್‍ಹ್ಯಾಂಡ್ ಆಗಿ ಪತ್ನಿಯ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಹೈದರಾಬಾದ್‍ನ ಜಗದ್ದಿರಿಗುಟ್ಟದಲ್ಲಿ ನಡೆದಿದೆ.

    ಅನಿಲ್ ಜಗದ್ದಿರಿಗುಟ್ಟದ ನಿವಾಸಿಯಾಗಿದ್ದಾನೆ. ಈತ ರಾಮೇಶ್ವರಿಯನ್ನು ಮದುವೆಯಾಗಿದ್ದನು. ಆದರೆ ಈತನ ನಡುವಳಿಕೆಯಲ್ಲಿ ಬದಲಾವಣೆ ಕಂಡಿರುವ ಪತ್ನಿ, ಆತನನ್ನು ಹಿಂಬಾಲಿಸಿದಾಗ ಆತನ ಅನೈತಿಕ ಸಂಬಂಧದ ಕುರಿತಾಗಿ ತಿಳಿದುಬಂದಿದೆ.  ಇದನ್ನೂ ಓದಿ: ಲವ್ ಇದ್ಮೇಲೆ ಜಿಹಾದ್ ಯಾಕೆ ಬರುತ್ತೆ – ಇಬ್ರಾಹಿಂ ತಿರುಗೇಟು

    ಅನಿಲ್ ಕುಟ್ಟಬಲ್‌ಪುರ್‌ ಬ್ಯಾಂಕ್ ಕಾಲನಿಯಲ್ಲಿರುವ ಮತ್ತೊಂದು ಮಹಿಳೆ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದನು. ಕಳೆದ ಕೆಲವು ದಿನಗಳಿಂದ ಗಂಡನ ನಡುವಳಿಕೆಯಲ್ಲಿ ಆಗುತ್ತಿರುವ ಬದಲಾವಣೆಯನ್ನು ರಾಮೇಶ್ವರಿ ಗಮನಿಸಿದ್ದಾಳೆ. ಇದನ್ನೂ ಓದಿ: ಯೋಗಿ ಸರ್ಕಾರದಿಂದ ಇಲ್ಲಿಯವರೆಗೆ 15246 ಕಿ.ಮೀ.ಗೂ ಹೆಚ್ಚು ಗ್ರಾಮೀಣ ರಸ್ತೆಗಳನ್ನು ನಿರ್ಮಾಣ

    ಒಂದು ದಿನ ಪತಿಯನ್ನು ಹಿಂಬಾಲಿಸಿದ್ದಾಳೆ. ಆಗ ಅನಿಲ್ ಬೇರೆ ಯುವತಿಯ ಜೊತೆಗೆ ಇರುವುದನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾಳೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಪತ್ನಿಯ ಶಿರಚ್ಛೇದ ಮಾಡಿ ಪೊಲೀಸ್ ಠಾಣೆಗೆ ಹೊತ್ತೊಯ್ದ

    ಪತ್ನಿಯ ಶಿರಚ್ಛೇದ ಮಾಡಿ ಪೊಲೀಸ್ ಠಾಣೆಗೆ ಹೊತ್ತೊಯ್ದ

    ಹೈದರಾಬಾದ್: ವ್ಯಕ್ತಿಯೊಬ್ಬ ತನ್ನ ಪತ್ನಿಯ ಶಿರಚ್ಛೇದ ಮಾಡಿ ನಂತರ ಆಕೆಯ ತಲೆಯೊಂದಿಗೆ ಪೊಲೀಸ್ ಠಾಣೆಗೆ ಹೋಗಿ ಶರಣಾಗಿರುವ ಘಟನೆ ಹೈದರಾಬಾದ್‍ನ ರಾಜೇಂದ್ರನಗರದ ಎಂಎಂ ಪಹಾಡಿಯಲ್ಲಿ ನಡೆದಿದೆ.

    ಸಮ್ರೀನ್ ಮೃತದುರ್ದೈವಿಯಾಗಿದ್ದು, ಆರೋಪಿ ಪರ್ವೇಜ್ ಎಂದು ಗುರುತಿಸಲಾಗಿದೆ. ಆರೋಪಿ ಆಗಾಗಾ ತನ್ನ ಪತ್ನಿಯೊಂದಿಗೆ ಜಗಳವಾಡುತ್ತಿದ್ದನು. ಅಲ್ಲದೇ ದಂಪತಿ ಜಗಳದಿಂದಾಗಿ ವಿಚ್ಛೇದನವನ್ನು ಸಹ ಪಡೆದುಕೊಂಡಿದ್ದರು. ಆದರೆ ಒಂದು ವರ್ಷದ ಹಿಂದೆ ಪರ್ವೇಜ್ ತನ್ನ ಬಳಿಗೆ ಮರಳಲು ಸಮ್ರೀನ್‍ಗೆ ವಿನಂತಿಸಿದ್ದನು. ಹೀಗಾಗಿ ಮತ್ತೆ ಒಂದಾಗಿ ದಂಪತಿ ಒಟ್ಟಿಗೆ ಇದ್ದರು. ಇದನ್ನೂ ಓದಿ: ನಾನು ಜೆಡಿಎಸ್‍ನಲ್ಲಿ ಇರಬೇಕಾ? ಬೇಡ್ವಾ?: ಜಿ.ಟಿ.ದೇವೆಗೌಡ

    ಗುರುವಾರ ಮಧ್ಯರಾತ್ರಿ ಪರ್ವೇಜ್ ಇದೇ ವಿಚಾರವಾಗಿ ಜಗಳ ತೆಗೆದು ಹರಿತವಾದ ಆಯುಧದಿಂದ ಸಮ್ರೀನ್ ಕತ್ತು ಸೀಳಿ ಹತ್ಯೆಗೈದಿದ್ದಾನೆ. ನಂತರ ಮೃತಪಟ್ಟ ಪತ್ನಿಯ ತಲೆಯೊಂದಿಗೆ ರಾಜೇಂದ್ರನಗರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ದೂರು ದಾಖಲಿಸಿಕೊಂಡಿದ್ದು, ಪ್ರಕರಣ ಕುರಿತಂತೆ ತನಿಖೆ ಕೈಗೊಂಡಿದ್ದಾರೆ.