Tag: Hyderabad

  • ಓಮಿಕ್ರಾನ್ ಭೀತಿ – ಮತ್ತೆ RRR ಚಿತ್ರ ಬಿಡುಗಡೆ ಮುಂದೂಡಿಕೆ?

    ಓಮಿಕ್ರಾನ್ ಭೀತಿ – ಮತ್ತೆ RRR ಚಿತ್ರ ಬಿಡುಗಡೆ ಮುಂದೂಡಿಕೆ?

    ಹೈದರಾಬಾದ್: ಟಾಲಿವುಡ್ ನಟ ಜ್ಯೂನಿಯರ್ ಎನ್‍ಟಿಆರ್ ಹಾಗೂ ನಟ ರಾಮ್ ಚರಣ್ ತೇಜ ಅಭಿನಯದ ಬಹುನಿರೀಕ್ಷಿತ ಆರ್‌ಆರ್‌ಆರ್‌ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ.

    ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಬಹು ಕೋಟಿ ವೆಚ್ಚದಲ್ಲಿ ತಯಾರಾಗಿರುವ ಆರ್‌ಆರ್‌ಆರ್‌ ಸಿನಿಮಾ 2022ರ ಜನವರಿ 7ರಂದು ಐದು ಭಾಷೆಗಳಲ್ಲಿ ತೆರೆ ಕಾಣಬೇಕಾಗಿತ್ತು. ಆದರೆ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಇದೀಗ ಆರ್‌ಆರ್‌ಆರ್‌ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎನ್ನಲಾಗುತ್ತಿದೆ.

    ತಮಿಳುನಾಡು, ದೆಹಲಿ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೊನಾ ನಿರ್ಬಂಧ ವಿಧಿಸಲಾಗಿದ್ದು, ಬೆಂಗಳೂರಿನಲ್ಲಿಯೂ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಪಕರು ಚಿತ್ರ ಬಿಡುಗಡೆಗೊಳಿಸದಿರಲು ತೀರ್ಮಾನಿಸಿದ್ದಾರೆ. ಈಗಾಗಲೇ ಆರ್‌ಆರ್‌ಆರ್‌ ಚಿತ್ರತಂಡ ಸಿನಿಮಾ ಕುರಿತಂತೆ ಭರ್ಜರಿಯಾಗಿ ಪ್ರಮೋಷನ್ ನಡೆಸಿದ್ದು, ಚಿತ್ರ ನೋಡಲು ಅಭಿಮಾನಿಗಳು ಸಾಕಷ್ಟು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡುವುದನ್ನು ಬಿಟ್ಟು ನಿರ್ಮಾಪಕರಿಗೆ ಬೇರೆ ದಾರಿ ಇಲ್ಲದಂತಾಗಿದೆ. ಇದನ್ನೂ ಓದಿ: ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಿಸಿದ ದಕ್ಷಿಣ ಭಾರತದ ಸಿನಿ ತಾರೆಯರು

    ಬೆಂಗಳೂರಿನಲ್ಲಿ ಆರ್‌ಆರ್‌ಆರ್‌ ಚಿತ್ರದ ಪ್ರಿರಿಲೀಸ್ ಇವೆಂಟ್ ಜನವರಿ 2ಕ್ಕೆ ನಿಗದಿಯಾಗಿತ್ತು. ಆದರೆ ಬೆಂಗಳೂರಿನಲ್ಲಿಯೂ ಕೊರೊನಾ ಹೆಚ್ಚಾಗುತ್ತಿರುವ ಕಾರಣ ಪ್ರಮೋಷನ್ ಕಾರ್ಯಕ್ರಮವನ್ನು ಚಿತ್ರತಂಡ ಮೊಟಕುಗೊಳಿಸಿದೆ. ಕೊರೊನಾ ಏರಿಕೆಯ ಪರಿಸ್ಥಿತಿ ನೋಡಿಕೊಂಡು ಆರ್‌ಆರ್‌ಆರ್‌ ರಿಲೀಸ್ ದಿನಾಂಕ ಘೋಷಿಸುವ ಸಾಧ್ಯತೆ ಇದೆ. ಸದ್ಯ ಆರ್‌ಆರ್‌ಆರ್‌ ಬಿಡುಗಡೆ ದಿನಾಂಕವನ್ನು ಎರಡು ತಿಂಗಳು ಮುಂದೂಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

    ಈ ತಿಂಗಳು ಆರ್‌ಆರ್‌ಆರ್‌ ಹಾಗೂ ರಾಧೆಶ್ಯಾಮ್ ಸೇರಿದಂತೆ ಅನೇಕ ಚಿತ್ರಗಳು ರಿಲೀಸ್ ಆಗಬೇಕಿತ್ತು. ಆದರೆ ಈಗ ಸಿನಿಮಾ ಬಿಡುಗಡೆಯಾಗದ ಹಿನ್ನೆಲೆ ಮಾರ್ಚ್ ಹಾಗೂ ಏಪ್ರಿಲ್‍ನಲ್ಲಿ ಬಿಗ್ ಸ್ಟಾರ್ ಸಿನಿಮಾಗಳು ಕ್ಲ್ಯಾಶ್ ಆಗುವುದು ಪಕ್ಕಾ ಎಂದೇ ಹೇಳಬಹುದು. ಇದನ್ನೂ ಓದಿ: ಬೋಲ್ಡ್ ಲುಕ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ ದಿಶಾ ಪಟಾನಿ

  • ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಿಸಿದ ದಕ್ಷಿಣ ಭಾರತದ ಸಿನಿ ತಾರೆಯರು

    ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಿಸಿದ ದಕ್ಷಿಣ ಭಾರತದ ಸಿನಿ ತಾರೆಯರು

    ಹೈದರಬಾದ್: ದಕ್ಷಿಣ ಭಾರತದ ಸಿನಿ ತಾರೆಯರು ಈ ಬಾರಿ ಹೊಸ ವರ್ಷವನ್ನು ತುಂಬು ಹೃದಯದಿಂದ ಬರಮಾಡಿಕೊಂಡಿದ್ದಾರೆ. ಕೆಲವು ಕಲಾವಿದರು ಭಾರತದಿಂದ ವಿದೇಶಕ್ಕೆ ತೆರಳಿ ಹೊಸ ವರ್ಷವನ್ನು ಆಚರಿಸಿದರೆ, ಮತ್ತೆ ಕೆಲವರು ಭಾರತದಲ್ಲಿಯೇ ಸೆಲೆಬ್ರೆಟ್ ಮಾಡಿದ್ದಾರೆ. ಜೊತೆಗೆ ನ್ಯೂ ಇಯರ್ ಸೆಲೆಬ್ರೇಶನ್ ವೀಡಿಯೋ ಹಾಗೂ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಟಿ ನಯನತಾರಾ ಬಾಯ್ ಫ್ರೆಂಡ್ ವಿಫ್ನೇಶ್ ಶಿವನ್ ಜೊತೆಗೆ ಈ ಬಾರಿ ದುಬೈನ ಬುರ್ಜ್‌ ಖಲೀಫಾದಲ್ಲಿ ಹೊಸವರ್ಷವನ್ನು ಆಚರಿಸಿದ್ದಾರೆ. ಇದರ ವೀಡಿಯೋವನ್ನು ವಿಘ್ನೇಶ್ ಶಿವನ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದು, ವೀಡಿಯೋದಲ್ಲಿ 2022 ಅಂತ ಬುರ್ಜ್‌ ಖಲೀಫಾದಲ್ಲಿ ಬರುತ್ತಿದ್ದಂತೆಯೇ ಇಬ್ಬರು ಒಬ್ಬರನ್ನೊಬ್ಬರು ತಬ್ಬಿಕೊಂಡು 2022ಕ್ಕೆ ವೆಲ್‍ಕಮ್ ಮಾಡಿದ್ದಾರೆ. ಜೊತೆಗೆ ಕ್ಯಾಪ್ಷನ್‍ನಲ್ಲಿ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ.

     

    View this post on Instagram

     

    A post shared by Vignesh Shivan (@wikkiofficial)

    ಟಾಲಿವುಡ್ ಮಿಲ್ಕಿ ಬ್ಯೂಟಿ ನಟಿ ತಮನ್ನಾ ಬಾಟಿಯಾ ಕುಟುಂಬ ಸಮೇತ ಗೋವಾಗೆ ತೆರಳಿ ಗೋವಾದ ಕಡಲ ತೀರದಲ್ಲಿ ನ್ಯೂ ಇಯರ್ ಸೆಲೆಬ್ರೆಟ್ ಮಾಡಿದ್ದಾರೆ.  ಈ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿ ಅಭಿಮಾನಿಗಳಿಗೆ ವಿಶ್‌ ಮಾಡಿದ್ದಾರೆ. ಇದನ್ನೂ ಓದಿ: ಬೋಲ್ಡ್ ಲುಕ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ ದಿಶಾ ಪಟಾನಿ

     

    View this post on Instagram

     

    A post shared by Tamannaah Bhatia (@tamannaahspeaks)

    ಮತ್ತೊಂದೆಡೆ ಟಾಲಿವುಡ್ ಸೂಪರ್ ಸ್ಟಾರ್ ನಟ ಮಹೇಶ್ ಬಾಬು ಅವರು ಸಹ ಕುಟುಂಬ ಸಮೇತ ದುಬೈಗೆ ಹಾರಿ ಹೊಸವರ್ಷ ಆಚರಿಸಿದ್ದಾರೆ. ಇನ್ನು ಸೆಲೆಬ್ರೆಶನ್ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡು, ಹೊಸ ವರ್ಷ ಆರಂಭವಾಗಿದೆ. ಎಲ್ಲರೂ ಸಂತೋಷದಿಂದಿ ಇರಿ. ಕೃತಜ್ಞರಾಗಿರಿ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Mahesh Babu (@urstrulymahesh)

    ನಟಿ ಕಾಜಲ್ ಅಗರ್ ವಾಲ್, ಗೌತಮ್ ಕಿಚ್ಲು ಮತ್ತು ಕುಟುಂಬದವರೊಂದಿಗೆ ಹೊಸ ವರ್ಷವನ್ನು ಆಚರಿಸಿದ್ದು, ಪತಿ ಜೊತೆಗಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಹಳೆಯದನ್ನು ಮರೆತು ಹೋಗಲು ನನ್ನ ಕಣ್ಣಗಳನ್ನು ಮುಚ್ಚುತ್ತೇನೆ. ಹೊಸ ಆರಂಭಗಳಿಗೆ ನನ್ನ ಕಣ್ಣನ್ನು ತೆರೆಯುತ್ತೇನೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ: ಲೈಂಗಿಕತೆ ವಿಚಾರದಲ್ಲಿ ಮಗಳಿಗೆ ಬುದ್ಧಿ ಹೇಳಿಕೊಡ್ಬೇಡಿ, ಮಗನಿಗೆ ಕಲಿಸಿಕೊಡಿ: ಸಮಂತಾ

    ಅಷ್ಟೇ ಅಲ್ಲದೇ ನಟ ಚಿರಂಜೀವಿ, ಮಲಯಾಳಂ ನಟ ಮೋಹನ್‍ಲಾಲ್, ಪ್ರಭುದೇವ್, ಕಾಲಿವುಡ್ ನಟ ಕಾರ್ತಿಕ್, ನಟಿ ಸಮಂತಾ, ರಶ್ಮಿಕಾ ಮಂದಣ್ಣ ಹೀಗೆ ಹಲವಾರು ತಾರೆಯರು ಹೊಸ ವರ್ಷವನ್ನು ಆಚರಿಸಿದ್ದಾರೆ. ಒಟ್ಟಾರೆ ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಹೊಸ ವರ್ಷ ಆಚರಿಸದಿದ್ದ ದಕ್ಷಿಣ ಭಾರತದ ಕಲಾವಿದರೂ ಇದೀಗ ಅದ್ದೂರಿಯಾಗಿ 2022 ನ್ಯೂ ಇಯರ್ ಸೆಲೆಬ್ರೆಟ್ ಮಾಡಿದ್ದಾರೆ.

  • ಆಂಧ್ರ ವ್ಯಕ್ತಿಯ ಕೈ ಹಿಡಿದ ಟರ್ಕಿ ಮಹಿಳೆ

    ಆಂಧ್ರ ವ್ಯಕ್ತಿಯ ಕೈ ಹಿಡಿದ ಟರ್ಕಿ ಮಹಿಳೆ

    ಹೈದರಾಬಾದ್: ಟರ್ಕಿ ಮೂಲದ ಮಹಿಳೆಯೊಬ್ಬಳು ಭಾರತೀಯ ಸಂಪ್ರದಾಯ ಪ್ರಕಾರ ಆಂಧ್ರ ಪ್ರದೇಶದ ವ್ಯಕ್ತಿಯ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾಳೆ.

    ಪ್ರೀತಿಗೆ ಯಾವುದೇ ಸಂಸ್ಕೃತಿ, ಗಡಿ, ಜಾತಿ ಮತ್ತು ಧರ್ಮವಿಲ್ಲ. ಪ್ರೀತಿ ಎಂಬುವುದು ಪವಿತ್ರವಾದಂತಹ ಮತ್ತು ಸುಂದರವಾದಂತಹ ಅನುಭವ. ಇದಕ್ಕೆ ಸಾಕ್ಷಿ ಎಂಬಂತೆ ಟರ್ಕಿ ಮಹಿಳೆ ಆಂಧ್ರ ಪ್ರದೇಶದ ವ್ಯಕ್ತಿ ಜೊತೆಗೆ ಗುಂಟೂರಿನಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಸಪ್ತಪದಿ ತುಳಿದಿದ್ದಾಳೆ. ಇದನ್ನೂ ಓದಿ: ಅನುಮತಿ ಇಲ್ಲದೇ ಯಾರೋ ಮನೆಯೊಳಗೆ ಬಂದರೆಂದು ತಪ್ಪಾಗಿ ಭಾವಿಸಿ ಮಗಳನ್ನೇ ಕೊಂದ ತಂದೆ!

    ಗುಂಟೂರಿನ ನಿವಾಸಿಯಾಗಿರುವ ವರ ಮಧು ಸಂಕೀರ್ತ್ 2016 ರಲ್ಲಿ ಜಿಜೆಮ್ ಅವರನ್ನು ಕೆಲಸದ ಪ್ರಾಜೆಕ್ಟ್ ವಿಚಾರವಾಗಿ ಭೇಟಿಯಾದರು. ನಂತರ ಇಬ್ಬರು ಆತ್ಮೀಯ ಸ್ನೇಹಿತರಾದರು. ಬಳಿಕ ಮಧು ಕೆಲಸಕ್ಕಾಗಿ ಟರ್ಕಿಗೆ ಹೋಗಬೇಕಾಯಿತು.

    ತಮ್ಮ ಮಧ್ಯೆ ಇರುವ ಸ್ನೇಹ ಪ್ರೀತಿಯಾಗಿ ತಿರುವು ಪಡೆಯುತ್ತಿರುವುದನ್ನು ಅರಿತ ಇಬ್ಬರು ತಮ್ಮ ಸ್ನೇಹವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಬಯಸಿದರು. ಆರಂಭದಲ್ಲಿ ಜಿಜೆಮ್ ಮತ್ತು ಮಧು ಎರಡು ಕುಟುಂಬದವರು ಇವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದರು. ಆದರೆ ಕೊನೆಗೆ ತಮ್ಮ ಪೋಷಕರ ಒಪ್ಪಿಗೆ ಮೇರೆಗೆ 2019ರಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡರು. ಇದನ್ನೂ ಓದಿ: ಮಾಜಿ ಸೈನಿಕರನ್ನು ಹತ್ಯೆಗೈದ ತಾಲಿಬಾನಿಗಳ ವಿರುದ್ಧ ಅಫ್ಘಾನ್ ಮಹಿಳೆಯರ ಪ್ರತಿಭಟನೆ

    2020ರಲ್ಲಿ ಮದುವೆಯಾಗಲು ಬಯಸಿದ್ದ ಜಿಜೆಮ್ ಮತ್ತು ಮಧು ಕೋವಿಡ್-19 ಕಾರಣದಿಂದಾಗಿ ಮದುವೆಯನ್ನು ಮುಂದೂಡಿದರು. ನಂತರ ಜುಲೈನಲ್ಲಿ ಇಬ್ಬರೂ ಟರ್ಕಿಯಲ್ಲಿ ವಿವಾಹವಾದರು. ಇದೀಗ ಭಾರತೀಯ ಸಾಂಪ್ರದಾಯಿಕ ತೆಲುಗು ಮದುವೆ ಆಚರಣೆಯಲ್ಲಿ ಮತ್ತೆ ವಿವಾಹವಾಗಿದ್ದು, ಈ ವನ ಜೋಡಿಗೆ ಬಂಧುಗಳು ಹಾಗೂ ಕುಟುಂಬ ವರ್ಗದವರು ಶುಭ ಹಾರೈಸಿದ್ದಾರೆ.

  • ಹೆಂಡತಿ, ಮಗುವನ್ನು ಹುಡುಕಿಕೊಟ್ಟವರಿಗೆ 50 ಸಾವಿರ ರೂ. ಬಹುಮಾನ

    ಹೆಂಡತಿ, ಮಗುವನ್ನು ಹುಡುಕಿಕೊಟ್ಟವರಿಗೆ 50 ಸಾವಿರ ರೂ. ಬಹುಮಾನ

    ಹೈದರಾಬಾದ್: ಪತಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಪತ್ನಿ ಹಾಗೂ ಮಗು ಕಿಟಕಿಯಿಂದ ಜಿಗಿದು ಓಡಿಹೋದ ಘಟನೆ ಬಂಗಾಳದ ಪಿಂಗ್ಲಾ ಗ್ರಾಮದಲ್ಲಿ ನಡೆದಿದೆ.

    ಪತಿ, ತನ್ನ ಹೆಂಡತಿ ನನಗೆ ಮೊಬೈಲ್ ಫೋನ್ ತಂದುಕೊಟ್ಟ ವ್ಯಕ್ತಿಯೊಂದಿಗೆ ಓಡಿಹೋಗಿದ್ದಾಳೆ. ರಾತ್ರಿಯಲ್ಲಿ ಈ ವ್ಯಕ್ತಿಯೊಂದಿಗೆ ಈಕೆ ಸಲುಗೆಯಿಂದ ಮಾತನಾಡುತ್ತಿದ್ದಳು. ಬಳಿಕ ಅದೇ ದಿನ ರಾತ್ರಿ ನಂಬರ್ ಇಲ್ಲದ ನ್ಯಾನೋ ಕಾರು ಈ ಪ್ರದೇಶಕ್ಕೆ ಬಂದಿದ್ದು, ಅದೇ ವಾಹನದಲ್ಲಿ ತನ್ನ ಪತ್ನಿ ಓಡಿಹೋಗಿದ್ದಾಳೆ. ಮನೆಯಿಂದ ಹೊರಡುವ ಮುನ್ನ ಹಣ, ಚಿನ್ನಾಭರಣ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಮಗುವಿನ ಜನನ ಪ್ರಮಾಣ ಪತ್ರವನ್ನು ತೆಗೆದುಕೊಂಡು ಹೋಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ಆರೋಪವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪತಿ ಬಿಟ್ಟಾಕೆ ಪ್ರಿಯಕರನೊಂದಿಗೂ ಜಗಳ ಮಾಡಿಕೊಂಡು ಕೊಲೆಯಾದ್ಲು!

    ಪೊಲೀಸರಿಂದ ಯಾವುದೇ ಮಾಹಿತಿ ಸಿಗದ ಹಿನ್ನೆಲೆ ವ್ಯಕ್ತಿಯು, ಪತ್ನಿ ಹಾಗೂ ಮಗುವನ್ನು ಹುಡುಕಲು ಹಲವಾರು ಪ್ರದೇಶಕ್ಕೆ ಹೋಗಿದ್ದಾರೆ. ಆದರೆ ಅದು ಪ್ರಯೋಜನವಾಗದ ಕಾರಣ ಕೊನೆಯಾದಾಗಿ ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದಾರೆ.

    ಮನೆಯಲ್ಲಿರುವವರೆಲ್ಲರೂ ಈಗ ಅವರ ಮರಳುವಿಕೆಗಾಗಿ ಕಾಯುತ್ತಿದ್ದಾರೆ. ಪೊಲೀಸರಿಗೆ ಲಿಖಿತವಾಗಿ ತಿಳಿಸಿದ್ದೇನೆ. ಯಾರಿಗಾದರೂ ಅವರು ಸಿಕ್ಕಿದ್ರೆ ನನಗೆ ತಿಳಿಸಿ. ಹುಡುಕಿ ಕೊಟ್ಟವರಿಗೆ 5,000 ರೂ ನೀಡುತ್ತೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ನಾಳೆಯಿಂದ ಜ.4ರ ವರೆಗೆ ರಾತ್ರಿ 10 ಗಂಟೆಯಿಂದ ಎಲ್ಲಾ ಫ್ಲೈಓವರ್ ಕ್ಲೋಸ್: ಕಮಲ್ ಪಂಥ್

  • ಪೊಲೀಸ್ ಎನ್‌ಕೌಂಟರ್ – ನಾಲ್ವರು ಮಹಿಳೆಯರು ಸೇರಿ 6 ನಕ್ಸಲರ ಹತ್ಯೆ

    ಪೊಲೀಸ್ ಎನ್‌ಕೌಂಟರ್ – ನಾಲ್ವರು ಮಹಿಳೆಯರು ಸೇರಿ 6 ನಕ್ಸಲರ ಹತ್ಯೆ

    ಹೈದರಾಬಾದ್: ಇಂದು ಬೆಳಗ್ಗೆ ತೆಲಂಗಾಣ-ಛತ್ತೀಸ್‌ಗಢದ ಗಡಿಯಲ್ಲಿ ಪೊಲೀಸ್ ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಆರು ಮಂದಿ ನಕ್ಸಲರನ್ನು ಹತ್ಯೆ ಮಾಡಲಾಗಿದೆ.

    ಛತ್ತೀಸ್‌ಗಢದ ರಾಯ್‌ಪುರದಿಂದ 400 ಕಿಮೀ ದೂರವಿರುವ ಸುಕ್ಮಾ ಜಿಲ್ಲೆಯ ಕಿಸ್ತಾರಾಮ್ ಪ್ರದೇಶದ ಕಾಡಿನಲ್ಲಿ ಬೆಳಗ್ಗೆ 6 ರಿಂದ 7 ಗಂಟೆಯ ವರೆಗೆ ಗುಂಡಿನ ಚಕಮಕಿ ನಡೆದಿದೆ. ಈ ಚಕಮಕಿಯಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ ಆರು ಮಂದಿಯನ್ನು ಎನ್‌ಕೌಂಟರ್ ಮಾಡಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: 30 ಲಕ್ಷ ರೂ. ಮೌಲ್ಯದ ಗಾಂಜಾ ವಶ – 12 ಜನ ಅರೆಸ್ಟ್

    ಈ ಹಿಂದೆ ವಿವಿಧ ಮಾರಣಾಂತಿಕ ದಾಳಿಗಳನ್ನು ನಡೆಸುವಲ್ಲಿ ಪ್ರಮುಖ ಪಾತ್ರವಹಿಸದ್ದ ಮಾವೋವಾದಿಗಳ ಕಿಸ್ತಾರಾಮ್ ಪ್ರದೇಶ ಸಮಿತಿಗೆ ಭದ್ರತಾ ಪಡೆಗಳು ಭಾರೀ ಹೊಡೆತವನ್ನು ನೀಡಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಶರ್ಮಾ ಹೇಳಿದ್ದಾರೆ.

  • ರಾಧೆ ಶ್ಯಾಮ್ ಸಿನಿಮಾದ ಕ್ಲೈಮ್ಯಾಕ್ ಹೈಲೈಟ್ ಆಗಿರುತ್ತೆ: ಪ್ರಭಾಸ್

    ರಾಧೆ ಶ್ಯಾಮ್ ಸಿನಿಮಾದ ಕ್ಲೈಮ್ಯಾಕ್ ಹೈಲೈಟ್ ಆಗಿರುತ್ತೆ: ಪ್ರಭಾಸ್

    ಹೈದರಾಬಾದ್: ಟಾಲಿವುಡ್‍ನ ಬಹುನಿರೀಕ್ಷಿತ ರಾಧೆ ಶ್ಯಾಮ್ ಸಿನಿಮಾದ ಕ್ಲೈಮ್ಯಾಕ್ ಸಾಕಷ್ಟು ಹೈಲೆಟ್ ಆಗಿರುತ್ತದೆ ಎಂದು ನಟ ಬಾಹುಬಲಿ ಪ್ರಭಾಸ್ ಹೇಳಿದ್ದಾರೆ.

    ಪ್ರಭಾಸ್ ಅವರು ತಮ್ಮ ಮುಂಬರುವ ಚಿತ್ರ ರಾಧೆ ಶ್ಯಾಮ್ ಅನೇಕ ಇಂಟ್ರಸ್ಟಿಂಗ್ ಕಹಾನಿ ಹೊಂದಿರುವ ರೋಮ್ಯಾಂಟಿಕ್ ಡ್ರಾಮಾವಾಗಿದ್ದು, ಮುಂದಿನ ವರ್ಷ ಸಿನಿಮಾ ಬಿಡುಗಡೆ ನಂತರ ಚಿತ್ರ ನೋಡಿ ಪ್ರೇಕ್ಷಕರು ಸಖತ್ ಎಂಜಾಯ್ ಮಾಡುತ್ತಾರೆ ಅಂತ ಅಂದುಕೊಂಡಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಚಲನಚಿತ್ರ ವಾಣಿಜ್ಯ ಮಂಡಳಿ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧ: ಶಿವಣ್ಣ

     

    1970ರ ದಶಕದ ಸ್ಟೋರಿಯನ್ನೊಳಗೊಂಡ ರಾಧೆ ಶ್ಯಾಮ್ ಸಿನಿಮಾದಲ್ಲಿ ಪ್ರಭಾಸ್ ವಿಕ್ರಮಾದಿತ್ಯನ ಪಾತ್ರದಲ್ಲಿ ಅಭಿನಯಿಸಿದ್ದು, ಪ್ರೇರಣಾ ಪಾತ್ರಧಾರಿಯಲ್ಲಿ ಅಭಿನಯಿಸಿರುವ ಪೂಜಾ ಹೆಗ್ಡೆ ಜೊತೆ ರೋಮ್ಯಾನ್ಸ್ ಮಾಡಲಿದ್ದಾರೆ. ರಾಧೆ ಶ್ಯಾಮ್ ಒಂದು ಲವ್ ಸ್ಟೋರಿಯನ್ನೊಳಗೊಂಡ ಸಿನಿಮಾವಾಗಿದ್ದರೂ, ಚಿತ್ರದಲ್ಲಿ ಸಾಕಷ್ಟು ಟ್ವಿಸ್ಟ್‌ಗಳಿದ್ದು, ಪ್ರೇಕ್ಷಕರು ಸಿನಿಮಾ ನೋಡಿ ಆನಂದಿಸುತ್ತಾರೆ. ಅದರಲ್ಲಿಯೂ ಸಿನಿಮಾ ಕ್ಲೈಮ್ಯಾಕ್ಸ್ ಸಖತ್ ಹೈಲೈಟ್ ಆಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಗುರುವಾರ ರಾತ್ರಿ ರಾಮೋಜಿ ಫಿಲ್ಮ್ ಸಿಟಿಯಲ್ಲಿ ರಾಧೆ ಶ್ಯಾಮ್ ಸಿನಿಮಾದ ಟ್ರೇಲರ್ ಬಿಡುಗಡೆಗೊಳಿಸಿ ಮಾತನಾಡಿದ ನಿರ್ದೇಶಕ ರಾಧ ಕೃಷ್ಣ ಕುಮಾರ್ ಅವರು, ಅನೇಕ ಅಡೆತಡೆಗಳ ನಡುವೆಯೂ ರಾಧೆ ಶ್ಯಾಮ್ ಸಿನಿಮಾದ ಬಗ್ಗೆ ಪ್ರಭಾಸ್ ತೋರಿದ ಉತ್ಸಾಹ ಮತ್ತು ನಿರ್ಣಯಕ್ಕೆ ಶ್ಲಾಘಿಸಿದ್ದಾರೆ. ಇದನ್ನೂ ಓದಿ: ನಮಗೆ ನಷ್ಟ ಮಾಡಿಕೊಂಡು, ಇನ್ನೊಬ್ಬರ ಮೇಲೆ ಪ್ರತಿಭಟನೆ ಮಾಡಬಾರದು: ಯಶ್

    ಐದು ವರ್ಷಗಳ ಕಾಲ ಸಿನಿಮಾದಲ್ಲಿ ಕೆಲಸ ಮಾಡುವುದು ತಮಾಷೆಯಲ್ಲ. ಏಕೆಂದರೆ ಈ ಸಿನಿಮಾದ ಚಿತ್ರೀಕರಣ ಆರಂಭವಾದಾಗ ನಿಂತು ಹೋಗಿತ್ತು. ಆದರೆ ಮತ್ತೆ ಪ್ಲಾನ್ ಮಾಡಲಾಗಿತ್ತು. ಅದು ಬಾಹುಬಲಿ ಮತ್ತು ಸಾಹೋ ಸಿನಿಮಾಗಳ ನಂತರ ಮತ್ತೆ ಶೂಟಿಂಗ್ ಆರಂಭಿಸಲಾಯಿತು. ನಂತರ ಕೋವಿಡ್‍ನಿಂದ ನಿಲ್ಲಿಸಿ ಮತ್ತೆ ಪುನಾರಂಭಿಸಲಾಯಿತು. ಇದರಿಂದ ಬಹಳ ನಿರಾಸೆಯುಂಟಾಯಿತು. ಆದರೆ ಪ್ರಭಾಸ್ ಈ ಎಲ್ಲಾ ಅಡೆತಡೆಗಳ ಮಧ್ಯೆ ಹೋರಾಡಿ ಸಿನಿಮಾವನ್ನು ಕಂಪ್ಲೀಟ್ ಮಾಡಿದರು ಎಂದು ಹೇಳಿದ್ದಾರೆ.

  • ಪತಿಯನ್ನು ಬಚಾವ್ ಮಾಡಲು ಪೊಲೀಸರಿಗೆ ಖಾರದ ಪುಡಿ ಎರಚಿದ್ಲು

    ಪತಿಯನ್ನು ಬಚಾವ್ ಮಾಡಲು ಪೊಲೀಸರಿಗೆ ಖಾರದ ಪುಡಿ ಎರಚಿದ್ಲು

    ಹೈದರಾಬಾದ್: ಪತಿಯನ್ನು ಬಚಾವ್ ಮಾಡಲು ಮಹಿಳೆ ಉತ್ತರಾಖಂಡ ಎಸ್‍ಟಿಎಫ್ ಪೊಲೀಸರಿಗೆ ಮತ್ತು ರಾಜೇಂದ್ರನಗರ ಪೊಲೀಸರ ತಂಡಕ್ಕೆ ಮೆಣಸಿನ ಕಾಯಿ ಪುಡಿ ಎರಚಿರುವ ಘಟನೆ ತೆಲಂಗಾಣದ ಅತ್ತಾಪುರದಲ್ಲಿ ನಡೆದಿದೆ.

    ಸದ್ಯ ಪೊಲೀಸರ ಕರ್ತವ್ಯಕ್ಕೆ ಅಡ್ಡ ಪಡಿಸಿದ ಮಹಿಳೆ ವಿರುದ್ಧ ಭಾರತೀಯ ದಂಡ ಸಂಹಿತೆಯ(ಐಪಿಸಿ)ಸೆಕ್ಷನ್ 353ರ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಮಹಿಳೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    2019 ರ ಕೊಲೆ ಪ್ರಕರಣದ ವಾಟೆಂಡ್ ಕ್ರಿಮಿನಲ್ ಆಗಿದ್ದ ಮಹಿಳೆಯ ಪತಿಯನ್ನು ಬಂಧಿಸಲು ಉತ್ತರಾಖಂಡ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಆದರೆ ಹೈದರಾಬಾದ್‍ನ ಅತ್ತಾಪುರದ ಸುಲೇಮಾನ್ ನಗರದಲ್ಲಿ ಆರೋಪಿ ವಾಸಿಂ ಪತ್ನಿಯನ್ನು ಭೇಟಿಯಾಗಿರುವ ಬಗ್ಗೆ ಪೊಲೀಸರಿ ಮಾಹಿತಿ ಸಿಕ್ಕಿದೆ. ಈ ವಿಚಾರವನ್ನು ಖಚಿತಪಡಿಸಿಕೊಂಡ ಉತ್ತರಾಖಂಡದ ವಿಶೇಷ ಕಾರ್ಯಪಡೆ (ಎಸ್‍ಟಿಎಫ್) ಪೊಲೀಸ್ ತಂಡದೊಂದಿಗೆ ವಾಸಿಂ ಮನೆಗೆ ತೆರಳಿದೆ. ಈ ವೇಳೆ ಅವರೊಂದಿಗೆ ರಾಜೇಂದ್ರನಗರ ಪೊಲೀಸ್ ಠಾಣೆಯ ಮೂವರು ಕಾನ್‍ಸ್ಟೆಬಲ್‍ಗಳು ತೆರಳಿದ್ದರು. ಇದನ್ನೂ ಓದಿ: ಬೂಸ್ಟರ್ ಡೋಸ್ ಅಗತ್ಯತೆ ಬಗ್ಗೆ ಅಧ್ಯಯನ ನಡೆಸಲು ಮೋದಿ ಸೂಚನೆ

    ಪೊಲೀಸರು ಕಂಡ ಕೂಡಲೇ ಮಹಿಳೆ ಎಸ್‍ಟಿಎಫ್ ಕಾನ್‍ಸ್ಟೇಬಲ್ ಚಮನ್‍ಕುಮಾರ್ ಹಾಗೂ ಸ್ಥಳೀಯ ಕಾನ್‍ಸ್ಟೇಬಲ್‍ಗಳ ಕಣ್ಣಿಗೆ ಮೆಣಸಿನ ಕಾಯಿ ಪುಡಿ ಎರಚಿ ಪತಿಗೆ ಪರಾರಿಯಾಗಲು ಸಹಾಯ ಮಾಡಿದ್ದಾಳೆ. ಅಲ್ಲದೇ ತನಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಕಿರುಚಾಡಿ ನೆರೆಹೊರೆಯವರೆಲ್ಲಾ ಬಂದು ಸೇರುವಂತೆ ದೊಂಬಿ ಎಬ್ಬಿಸಿದ್ದಾಳೆ. ಈ ಮಧ್ಯೆ ಆರೋಪಿ ವಾಸಿಂ ಮನೆಯಿಂದ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಟೋಕನೈಸೇಶನ್ ಜಾರಿಗೆ 6 ತಿಂಗಳ ವಿಳಂಬ

  • ಅಶ್ಲೀಲ ಫೋಟೋ ಇಟ್ಟುಕೊಂಡು ಬ್ಲ್ಯಾಕ್​ಮೇಲ್ – ಯುವಕ ಅರೆಸ್ಟ್

    ಅಶ್ಲೀಲ ಫೋಟೋ ಇಟ್ಟುಕೊಂಡು ಬ್ಲ್ಯಾಕ್​ಮೇಲ್ – ಯುವಕ ಅರೆಸ್ಟ್

    ಹೈದರಾಬಾದ್: ಇನ್‍ಸ್ಟಾಗ್ರಾಮ್‍ನಲ್ಲಿ ಹುಡುಗಿಯರಿಗೆ ವಂಚಿಸಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ 19 ವರ್ಷದ ಯುವಕನನ್ನು ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

    ತೆಲಂಗಾಣ ಮೂಲದ ಪಿ. ಅಜಯ್ ಬಂಧಿತ ಆರೋಪಿ. ಹಲವಾರು ಹೆಸರಿನಲ್ಲಿ ಇನ್‍ಸ್ಟಾಗ್ರಾಮ್ ಖಾತೆಯನ್ನು ಕ್ರಿಯೆಟ್ ಮಾಡಿ ಅಮಾಯಕ ಹೆಣ್ಣುಮಕ್ಕಳಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದ. ನಂತರ ಹುಡುಗಿಯರೊಂದಿಗೆ ಸ್ನೇಹ ಬೆಳೆಸಿ ತಮ್ಮ ನಗ್ನ ಫೋಟೋ ಮತ್ತು ವೀಡಿಯೋಗಳನ್ನು ಹಂಚಿಕೊಳ್ಳುವಂತೆ ವಿನಂತಿಸಿ ಹುಡುಗಿಯರನ್ನು ಬಲೆಗೆ ಹಾಕಿಕೊಳ್ಳುತ್ತಿದ್ದ. ಬಳಿಕ ಆತನ ಮಾತನ್ನು ಕೇಳದೇ ಇರುವ ಹುಡುಗಿಯರಿಗೆ ತಮ್ಮ ಖಾಸಗಿ ಫೋಟೋವನ್ನು ಸೋಶಿಯಲ್ ಮೀಡಿಯಾ ಫ್ಲಾಟ್‍ಫಾರ್ಮ್‍ನಲ್ಲಿ ಅಪ್‍ಲೋಡ್ ಮಾಡುವುದಾಗಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ. ಇದನ್ನೂ ಓದಿ: ಮತಾಂತರ ಕಾಯ್ದೆ ವಿಧಾನಸಭೆಯಲ್ಲಿ ಪಾಸ್: ಕಟೀಲ್ ಸ್ವಾಗತ

    ಹೀಗೆ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್​ಮೇಲ್ ಮಾಡುತ್ತಿದ್ದ ಈತನ ಕಿರುಕುಳ ಸಹಿಸಲಾಗದೇ ಅಪ್ರಾಪ್ತ ಬಾಲಕಿಯೊಬ್ಬಳು ನವೆಂಬರ್ 29ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಅಲ್ಲದೇ ಆರೋಪಿ ವಿವಿಧ ಇನ್‍ಸ್ಟಾಗ್ರಾಮ್ ಖಾತೆಗಳಿಂದ ತನಗೆ ಮೆಸೇಜ್‍ಗಳನ್ನು ಕಳುಹಿಸುತ್ತಿದ್ದ. ಜೊತೆಗೆ ಆರೋಪಿಯ ಸ್ನೇಹಿತ ರಫಿ ಪಾಶಾ ಇನ್‍ಸ್ಟಾಗ್ರಾಮ್ ಖಾತೆಯಿಂದಲೂ ಮೆಸೇಜ್ ಕಳುಹಿಸಿ ಹಣ ನೀಡುವಂತೆ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ. ಹೀಗಾಗಿ ಭಯಗೊಂಡ ಬಾಲಕಿ ಆರೋಪಿಗೆ ಕೊಂಚ ಹಣವನ್ನು ನೀಡಿದ್ದಾಳೆ. ಆದರೂ ಆರೋಪಿ ಮತ್ತೆ ಹಣ ನೀಡುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಘಟನೆ ಸಂಬಂಧ ತನಿಖೆ ನಡೆಸಿದ ಪೊಲೀಸರು 19 ವರ್ಷದ ಆರೋಪಿ ವಿವಿಧ ಹೆಸರಿನಲ್ಲಿ ಇನ್‍ಸ್ಟಾಗ್ರಾಮ್ ನಕಲಿ ಖಾತೆಯನ್ನು ತೆರೆದು ಅಪ್ರಾಪ್ತ ಬಾಲಕಿಯರಿಗೆ ರಿಕ್ವೆಸ್ಟ್ ಕಳುಹಿಸುತ್ತಿದ್ದ. ಅವರು ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ ನಂತರ ಮೊದಲಿಗೆ ಕ್ಯಾಶುಯಲ್ ಆಗಿ ಚಾಟಿಂಗ್ ಮಾಡುತ್ತಾ ನಂತರ ಸ್ನೇಹ ಬೆಳೆಸಿ ಲೈಂಗಿಕ ವಿಚಾರದ ಬಗ್ಗೆ ಮಾತನಾಡಿ ಹುಡುಗಿಯರ ಖಾಸಗಿ ಫೋಟೋವನ್ನು ಸಂಗ್ರಹಿಸಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಆಫ್ಘನ್ ಮಹಿಳೆಯರ ಶಿಕ್ಷಣ ಬಗ್ಗೆ ಮಾತನಾಡಿ ಟ್ರೋಲ್‍ಗೆ ಒಳಗಾದ ಪಾಕ್ ಪ್ರಧಾನಿ

    ಸೋಶಿಯಲ್ ಮೀಡಿಯಾದಲ್ಲಿ ಅಪರಿಚಿತರು ಕಳುಹಿಸುವ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸದಂತೆ ಮಕ್ಕಳಿಗೆ ತಿಳಿಸುವಂತೆ ಪೋಷಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

  • ಹೈದರಾಬಾದ್‌ನಲ್ಲಿ ಇನ್ಮುಂದೆ ಶ್ವಾನಗಳ ನೋಂದಾಯಿಸದವರಿಗೆ 50 ಸಾವಿರ ರೂ. ದಂಡ!

    ಹೈದರಾಬಾದ್‌ನಲ್ಲಿ ಇನ್ಮುಂದೆ ಶ್ವಾನಗಳ ನೋಂದಾಯಿಸದವರಿಗೆ 50 ಸಾವಿರ ರೂ. ದಂಡ!

    ಹೈದರಾಬಾದ್: ಸಾಕುಪ್ರಾಣಿಗಳನ್ನು ನೋಂದಾಯಿಸದವರಿಗೆ 50 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಆದೇಶವನ್ನು ಹೊರಡಿಸಿದೆ.

    ಈ ಕಾನೂನಿನ ಪ್ರಕಾರ ಕಡ್ಡಾಯ ನೋಂದಣಿ ಸಾಕು ನಾಯಿಗಳಿಗೆ ಮಾತ್ರ ಅನ್ವಯಿಸುತ್ತದೆ. ಇತರೆ ಸಾಕು ಪ್ರಾಣಿಗಳಿಗೆ ವಿನಾಯಿತಿಯನ್ನು ನೀಡಿದೆ. ಶ್ವಾನಪ್ರೇಮಿಗಳು ನೋಂದಣಿಯಾಗದ ನಾಯಿಗಳನ್ನು ಸಾರ್ವಜನಿಕ ಸ್ಥಳಗಳಿಗೆ ಕರೆದೊಯ್ದರೆ ಶೀಘ್ರದಲ್ಲೇ ದಂಡವನ್ನು ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನೋಂದಾಯಿಸದ ಸಾಕುಪ್ರಾಣಿಗಳನ್ನು ಉದ್ಯಾನವನಗಳು, ಬೀದಿಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಿಗೆ ಕರೆದೊಯ್ಯುವುದು, ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುತ್ತದೆ. ಈ ನಿಟ್ಟಿನಲ್ಲಿ ಸಾಕುನಾಯಿಗಳ ನೋಂದಣಿ ಕಡ್ಡಾಯವಾಗಿದೆ. ಇದನ್ನೂ ಓದಿ: ಪ್ರೀತಿಸಿ ಮದ್ವೆಯಾದ ಮಗಳು – ತಾಳಿ ಕಿತ್ತು, ಜುಟ್ಟು ಹಿಡಿದು ಧರ, ಧರನೇ ಎಳೆದಾಡಿದ ತಂದೆ

    ಒಂದು ವೇಳೆ ನೋಂದಾಯಿಸದ ಸಾಕು ಪ್ರಾಣಿಗಳನ್ನು ಸಾರ್ವಜನಿಕ ಪ್ರದೇಶಕ್ಕೆ ಕರೆತಂದರೆ ಅವುಗಳನ್ನು ವಶಪಡಿಸಿಕೊಳ್ಳುವುದರ ಜೊತೆಗೆ 1,000 ರಿಂದ 50,000 ರೂ.ವರೆಗೂ ದಂಡವನ್ನು ವಿಧಿಸಲಾಗುತ್ತದೆ. ದಂಡವನ್ನು ಪಾವತಿಸಿದ ನಂತರವೇ ಮಾಲೀಕರು ತಮ್ಮ ಸಾಕುಪ್ರಾಣಿಗಳನ್ನು ಮರಳಿ ಪಡೆಯಬಹುದು ಎಂದು ಹೇಳಿದರು.

    ಈ ನಿಯಮಗಳ ಅಡಿಯಲ್ಲಿ, ಶ್ವಾನ ಮಾಲೀಕರು ಪರವಾನಗಿ ಪಡೆಯಬೇಕು. ಜೊತೆಗೆ ಸಾಕು ನಾಯಿಗಳಿಗೆ ಪ್ರತಿ ವರ್ಷ ರೇಬಿಸ್ ಲಸಿಕೆ ಹಾಕಿಸುವುದು ಕಡ್ಡಾಯವಾಗಿದೆ. ಅಲ್ಲದೆ ಸಾಕುಪ್ರಾಣಿಗಳಿಗೆ ಮೈಕ್ರೋಚಿಪ್ ಅಳವಡಿಸಬೇಕು. ಮೈಕ್ರೋಚಿಪ್ ಮೂಲಕ ಅವುಗಳು ನಗರದ ಯಾವುದೇ ಮೂಲದಲ್ಲಿದ್ದರೂ ಸುಲಭವಾಗಿ ಮಾಲೀಕರು ಟ್ರ್ಯಾಕ್ ಮಾಡಬಹುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದ್ವೆಯಾದ ಮಗಳು – ತಾಳಿ ಕಿತ್ತು, ಜುಟ್ಟು ಹಿಡಿದು ಧರ, ಧರನೇ ಎಳೆದಾಡಿದ ತಂದೆ

    ಅಧಿಕೃತ ಅಂಕಿ ಅಂಶಗಳ ಪ್ರಕಾರ, ನಗರದಲ್ಲಿ ಪ್ರಸ್ತುತ 50,000 ಸಾಕುನಾಯಿಗಳಿದ್ದು, ಅವುಗಳಲ್ಲಿ 465 ಸಾಕು ನಾಯಿಗಳು ಎಂದು ನೋಂದಾಯಿಸಲಾಗಿದೆ.

  • ಹೆತ್ತವರ ವಿರುದ್ಧ ದೂರು ನೀಡಿ ತಾನೇ ಜೈಲು ಪಾಲಾದ ಮಗ!

    ಹೆತ್ತವರ ವಿರುದ್ಧ ದೂರು ನೀಡಿ ತಾನೇ ಜೈಲು ಪಾಲಾದ ಮಗ!

    ಹೈದರಾಬಾದ್: ನನ್ನ ಹೆತ್ತವರೇ ನನ್ನ ಸಹೋದರನನ್ನು ಕೊಂದಿದ್ದಾರೆ ಎಂದು ಸುಳ್ಳು ದೂರನ್ನು ನೀಡಿರುವ ವ್ಯಕ್ತಿ ತಾನೇ ಜೈಲು ಪಾಲಾಗಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ಆರೋಪಿಯನ್ನು ಬಂಜಾರಾ ಹಿಲ್ಸ್‌ನ ನಂದಿನಗರ ನಿವಾಸಿ ಬಾನೋತ್ ಲಾಲು ಎಂದು ಗುರುತಿಸಲಾಗಿದೆ. ಪೊಲೀಸ್ ತನಿಖೆಯಲ್ಲಿ ಲಾಲು ಪೋಷಕರ ವಿರುದ್ಧ ಮಾಡಿರುವ ದೂರು ಸುಳ್ಳು ಎಂದು ಗೊತ್ತಾದ ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದ್ವೆಯಾದ ಮಗಳು – ತಾಳಿ ಕಿತ್ತು, ಜುಟ್ಟು ಹಿಡಿದು ಧರ, ಧರನೇ ಎಳೆದಾಡಿದ ತಂದೆ

    ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಲಾಲು ಡಿಸೆಂಬರ್ 17 ರಂದು ರಾತ್ರಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾನೆ. ಆಗ ತನ್ನ ಸಹೋದರನನ್ನು ಹೆತ್ತವರು ಕೊಂದಿದ್ದಾರೆ ಎಂದು ಹೇಳಿ ಪೋಷಕರ ವಿರುದ್ಧ ಆರೋಪ ಮಾಡಿದ್ದಾನೆ. ಮಾಹಿತಿ ಪಡೆದಿರುವ ಪೊಲೀಸರು ತಕ್ಷಣವೇ ಸ್ಥಳಕ್ಕೆ ಹೋಗಿ ತನಿಖೆ ಮಾಡಿದ್ದಾರೆ. ಯಾವುದೇ ಕೊಲೆ ನಡೆದಿಲ್ಲ ಎಂದು ಪೊಲೀಸರಿಗೆ ತಿಳಿದು ಬಂದಿದೆ. ಆದರೆ ಲಾಲು ಯಾಕೆ ಇಂಥಹ ಆರೋಪನ್ನು ಮಾಡಿದ್ದಾನೆ ಎಂದು ವಿಚಾರಿಸಿದಾಗ ಸತ್ಯ ಹೊರ ಬಿದ್ದಿದೆ. ಇದನ್ನೂ ಓದಿ: YouTube ನೋಡ್ಕೊಂಡು ಪತ್ನಿಗೆ ಡೆಲಿವರಿ ಮಾಡಿಸಿದ- ಮುಂದೆ ಆಗಿದ್ದೇನು ಗೊತ್ತಾ?

    POLICE JEEP

    ಲಾಲು ಸಹೋದರ ಅನಾರೋಗ್ಯದಿಂದ ಒಂದು ತಿಂಗಳ ಹಿಂದೆ ಸಾವನ್ನಪ್ಪಿದ್ದನು. ಆದರೆ ಲಾಲು ತಮಾಷೆ ಮತ್ತು ಪೊಲೀಸರು ಅಲರ್ಟ್ ಆಗಿದ್ದಾರ ಎಂದು ಪರೀಕ್ಷೆ ಮಾಡಲು ನಕಲಿ ದೂರು ನೀಡಿದ್ದಾನೆ ಎಂದು ತಿಳಿದುಬಂದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯವು ದೂರನ್ನು ಪರಿಶೀಲಿಸಿದೆ. ಪೊಲೀಸರನ್ನು ತಪ್ಪುದಾರಿಗೆಳೆಯುವ ಮತ್ತು ಗಾಬರಿಯನ್ನುಂಟುಮಾಡುವ ತಪ್ಪು ಮಾಹಿತಿ ನೀಡಿರುವ ಲಾಲುಗೆ ಮೂರು ದಿನಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.