Tag: Hyderabad

  • 50 ಕೋಟಿ  ರೂ. ಜಾಗತಿಕ ಕ್ರೆಡಿಟ್ ಕಾರ್ಡ್ ಹಗರಣ ಭೇದಿಸಿದ ಪೊಲೀಸರು – 7 ಜನ ಅರೆಸ್ಟ್

    50 ಕೋಟಿ ರೂ. ಜಾಗತಿಕ ಕ್ರೆಡಿಟ್ ಕಾರ್ಡ್ ಹಗರಣ ಭೇದಿಸಿದ ಪೊಲೀಸರು – 7 ಜನ ಅರೆಸ್ಟ್

    ಹೈದರಾಬಾದ್: 50 ಕೋಟಿ ರೂ. ಜಾಗತಿಕ ಕ್ರೆಡಿಟ್ ಕಾರ್ಡ್ ಹಗರಣವನ್ನು ಸೈಬರಾಬಾದ್ ಪೊಲೀಸರು ಭೇದಿಸಿದ್ದು, ಏಳು ಜನರನ್ನು ಅರೆಸ್ಟ್ ಮಾಡಿದ್ದಾರೆ.

    ದೆಹಲಿ ಮತ್ತು ಹೈದರಾಬಾದ್ ಮೂಲದ ಆರೋಪಿಗಳು ತಾಂತ್ರಿಕ ಸೇವೆಗಳನ್ನು ಒದಗಿಸುವ ನೆಪದಲ್ಲಿ ವಿದೇಶಿ ಗ್ರಾಹಕರಿಗೆ ವಂಚಿಸುತ್ತಿದ್ದರು. ಈ ಕುರಿತು ಸೈಬರಾಬಾದ್ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ತನಿಖೆ ಪ್ರಾರಂಭಿಸಿದ್ದರು. ಇದನ್ನೂ ಓದಿ: ಸಂಕ್ರಾಂತಿ ಪುಣ್ಯಸ್ನಾನ ಮಾಡಲು ಹೋಗಿ ಇಬ್ಬರು ಯುವಕರು ನೀರುಪಾಲು

    ಹೈದರಾಬಾದ್‍ನ ಎಚ್‍ಡಿಎಫ್‍ಸಿ ಬ್ಯಾಂಕ್ ಕ್ರೆಡಿಟ್ ಇಂಟೆಲಿಜೆನ್ಸ್ ಮತ್ತು ಕಂಟ್ರೋಲ್ ಯೂನಿಟ್‍ನ ಅಧಿಕೃತ ಸಹಿದಾರ ಅಬ್ದುಲ್ ನಯೀಮ್ ಅವರು ಈ ಕುರಿತು ದೂರು ನೀಡಿದ್ದರು. ಈ ದೂರಿನಲ್ಲಿ ತಮಗೆ ನೀಡಿರುವ ಸ್ವೈಪಿಂಗ್ ಮಷಿನ್‍ನಲ್ಲಿ ಅನೇಕ ಅನುಮಾನಾಸ್ಪದ ವಹಿವಾಟುಗಳು ನಡೆಯುತ್ತಿದೆ. ಡಿಸೆಂಬರ್ 18 ಮತ್ತು 23, 2021 ರ ನಡುವೆ 85 ವಿವಿಧ ಅಂತರರಾಷ್ಟ್ರೀಯ ಕಾರ್ಡ್‍ಗಳ ಮೂಲಕ 64.40 ಲಕ್ಷ ರೂಪಾಯಿಗಳ ವಹಿವಾಟು ನಡೆಸಲಾಗಿದೆ. ಈ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರರು ಕೋರಿದ್ದರು.

    ಸೈಬರಾಬಾದ್ ಪೊಲೀಸ್ ಕಮಿಷನರ್ ಸ್ಟೀಫನ್ ರವೀಂದ್ರ ಈ ಕುರಿತು ಮಾತನಾಡಿದ್ದು, ಈ ಆರೋಪಿಗಳು ಯುನೈಟೆಡ್ ಕಿಂಗ್‍ಡಮ್, ಸಿಂಗಾಪುರ್ ಮತ್ತು ಆಸ್ಟ್ರೇಲಿಯಾದ ನಿವಾಸಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಬಂಧಿತರನ್ನು ನವೀನ್ ಭೂತಾನಿ, ಮೋಹಿತ್ ಮತ್ತು ಮೋನು ಎಂದು ಗುರುತಿಸಲಾಗಿದ್ದು, ಎಲ್ಲರೂ ನವದೆಹಲಿಯ ನಿವಾಸಿಗಳು. ನಾಗರಾಜು ಬೊಂಡದ, ದೊಂತುಲ ಶ್ರವಣ ಕುಮಾರ್, ಸಾಧನಾಲ ಮುಕ್ಕಂಟಿ ಶ್ರೀನಿವಾಸ ರಾವ್ ಮತ್ತು ಪವನ್ ವೆನ್ನೆಲಕಂಟಿ ಇವರೆಲ್ಲರೂ ಹೈದರಾಬಾದ್‍ನವರು. ಅವರಿಂದ 1.11 ಕೋಟಿ ರೂಪಾಯಿ ನಗದು, ನಾಲ್ಕು ದ್ವಿಚಕ್ರದ ವಾಹನಗಳು, ಲ್ಯಾಪ್‍ಟಾಪ್‍ಗಳು, ಮೊಬೈಲ್ ಫೋನ್‍ಗಳು, ಚೆಕ್ ಬುಕ್‍ಗಳು ಮತ್ತು ಡೆಬಿಟ್ ಕಾರ್ಡ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

    MONEY

    ಕೃತ್ಯ ಹೇಗೆ ಎಸಗುತ್ತಿದ್ದರು?
    ನವೀನ್ ಭೂತಾನಿ ಮೋನು ನೆರವಿನೊಂದಿಗೆ ಹೊಸ ದೆಹಲಿಯ ಜನಕ್‍ಪುರಿ, ಗಾಜಿಯಾಬಾದ್‍ನ ಕೌಶಾಂಬಿ ಮತ್ತು ಪಂಜಾಬ್‍ನ ಮೊಹಾಲಿಯಲ್ಲಿ ತಾಂತ್ರಿಕ ಸೇವೆಗಳನ್ನು ಒದಗಿಸುವ ನೆಪದಲ್ಲಿ ಗ್ರಾಹಕರನ್ನು ವಂಚಿಸಲು ಮೂರು ಕಾಲ್ ಸೆಂಟರ್‌ಗಳನ್ನು ಸ್ಥಾಪಿಸಿದ್ದರು. ಪೇಪಾಲ್, ಅಮೆಜಾನ್, ರೂಟರ್, ಇತ್ಯಾದಿ ಟೆಕ್ ಸಮಸ್ಯೆಗಳಿಗೆ ಆಸ್ಟ್ರೇಲಿಯಾ, ಯುಕೆ ಮತ್ತು ಸಿಂಗಾಪುರದಲ್ಲಿಯೂ ಸೇವೆ ನೀಡುವುದಾಗಿ ಗೂಗಲ್‍ನಲ್ಲಿ ಜಾಹೀರಾತು ನೀಡಿದ್ದರು. ಇದನ್ನೂ ಓದಿ: ನಾವು ಆಪರೇಷನ್ ಕಮಲವನ್ನು ಬಲವಂತವಾಗಿ ಮಾಡಿಲ್ಲ: ರೇಣುಕಾಚಾರ್ಯ

    ಈ ಜಾಹೀರಾತು ನೋಡಿ ಕರೆ ಮಾಡಿದವರಿಗೆ ಸೇವೆ ನೀಡಿ ನಂತರ ಮೋಹಿತ್ ಒದಗಿಸಿದ ಪಾವತಿ ಗೇಟ್‍ವೇ ಲಿಂಕ್‍ಗಳ ಮೂಲಕ ತಮ್ಮ ಸೇವೆಗೆ ಹಣ ಸಂಗ್ರಹಿಸುತ್ತಿದ್ದರು. ಆ ಲಿಂಕ್ ಸಹಾಯದಿಂದ ಇವರು ಗ್ರಾಹಕ ಖಾತೆಯಲ್ಲಿದ್ದ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸುತ್ತಿದ್ದರು.

  • ಮದ್ವೆಯಾಗಲು ಡ್ರಗ್ ಆರೋಪಿಗೆ ಮುಂಬೈಯಿಂದ ಹೈದರಾಬಾದ್ ಹೋಗಲು ಕೋರ್ಟ್ ಅನುಮತಿ

    ಮದ್ವೆಯಾಗಲು ಡ್ರಗ್ ಆರೋಪಿಗೆ ಮುಂಬೈಯಿಂದ ಹೈದರಾಬಾದ್ ಹೋಗಲು ಕೋರ್ಟ್ ಅನುಮತಿ

    ಮುಂಬೈ: ಡ್ರಗ್ ಆರೋಪಿಯೋರ್ವನಿಗೆ ಮದುವೆ ಮಾಡಿಕೊಳ್ಳಲು ಮುಂಬೈಯಿಂದ ಹೈದರಾಬಾದ್ ಗೆ ಹೋಗಲು ಕೋರ್ಟ್ ಅನುಮತಿ ಕೊಟ್ಟಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ಡ್ರಗ್ ಆರೋಪಿ ಕೋರ್ಟ್ ಗೆ ತನ್ನ ಮದುವೆ ಆಮಂತ್ರಣದ ಜೊತೆಗೆ, ನನ್ನ ಮದುವೆ ಹೈದರಾಬಾದ್ ನಲ್ಲಿದೆ. ಒಂದು ವಾರ ನನ್ನ ಮದುವೆಗೆ ಮುಂಬೈಯಿಂದ ಹೈದರಾಬಾದ್ ಗೆ ಹೋಗಲು ಅನುಮತಿ ಕೊಡಿ ಎಂದು ಕೇಳಿಕೊಂಡಿದ್ದಾನೆ. ಈ ಸಂಬಂಧ ನ್ಯಾಯಾಲಯವು, ಮದುವೆಯ ಕಾರ್ಡ್‍ಗಳನ್ನು ಈಗಾಗಲೇ ಮುದ್ರಿಸಿ, ನಂತರ ನ್ಯಾಯಾಲಯದ ಅನುಮತಿ ಕೇಳುತ್ತಿರುವುದು ಅವಹೇಳನ ಕೃತ್ಯವಾಗಿದೆ. ಆದರೆ ಆರೋಪಿ ಮದುವೆಯಾಗಲಿದ್ದಾನೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಷರತ್ತುಗಳೊಂದಿಗೆ ಮನವಿಯನ್ನು ಅನುಮತಿಸುತ್ತಿದೆ ಎಂದು ಹೇಳಿದೆ. ಇದನ್ನೂ ಓದಿ: ಕೆಸರೆಚಿದವನ ಕೈಯಲ್ಲೇ ಪ್ಯಾಂಟ್ ಕ್ಲೀನ್ ಮಾಡಿಸಿ ಕಪಾಳಮೋಕ್ಷ ಮಾಡಿದ ಮಹಿಳಾ ಪೊಲೀಸ್

    ಯಾರಿದು?
    ಆರೋಪಿ ಆರಿಫ್ ಖಾನ್ ವಿರುದ್ಧ ಮುಂಬೈ ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‍ಸ್ಟಾನ್ಸ್(ಎನ್‍ಡಿಪಿಎಸ್) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಕಳೆದ ವರ್ಷ ಆಗಸ್ಟ್‍ನಲ್ಲಿ ಆತನಿಗೆ ಜಾಮೀನು ಸಹ ನೀಡಲಾಗಿತ್ತು. ಆದರೆ ಆರಿಫ್ ಖಾನ್‍ಗೆ ಕೆಲವು ಷರತ್ತುಗಳು ವಿಧಿಸಲಾಗಿತ್ತು. ಈ ಪ್ರಕರಣ ಆರೋಪಿ ಪ್ರಕರಣದ ಬಗ್ಗೆ ಪೂರ್ತಿ ಚಿತ್ರಣ ಸಿಗುವವರೆಗೂ ಯಾವುದೇ ಕಾರಣಕ್ಕೂ ನಗರ ಬಿಟ್ಟು ಹೋಗುವಂತಿಲ್ಲ ಎಂದು ತಿಳಿಸಲಾಗಿತ್ತು.

    ಆರಿಫ್ ಖಾನ್‍ಗೆ ಮದುವೆ ಫಿಕ್ಸ್ ಆಗಿದ್ದು, ಮದುವೆ ಹೈದರಾಬಾದ್ ನಲ್ಲಿತ್ತು. ಈ ಸಂಬಂಧ ಆರಿಫ್ ಖಾನ್ ಒಂದು ವಾರ ಮುಂಬೈಯಿಂದ ತನ್ನ ಮದುವೆಗಾಗಿ ಹೈದರಾಬಾದ್‍ಗೆ ಪ್ರಯಾಣಿಸಲು ಅನುಮತಿ ಕೋರಿ ಮನವಿ ಸಲ್ಲಿಸಿದರು. ಈ ವೇಳೆ ಆತ ಅರ್ಜಿಯೊಂದಿಗೆ ಮದುವೆಯ ಆಮಂತ್ರಣ ಪತ್ರವನ್ನು ಲಗತ್ತಿಸಿರುವುದು ಸ್ಪಷ್ಟವಾಗಿದೆ.

    POLICE JEEP

    ಈ ಅರ್ಜಿ ನೋಡಿದ ನ್ಯಾಯಾಲಯ ಮದುವೆ ಕಾರ್ಡ್ ಮೊದಲೇ ಮುದ್ರಿಸಿ ನಂತರ ನ್ಯಾಯಾಲಯಕ್ಕೆ ಅರ್ಜಿ ಅಲ್ಲಿಸಿರುವುದು ಅತ್ಯಂತ ಅವಹೇಳನ ಕೃತ್ಯ. ಮದುವೆಯ ಕಾರ್ಡ್‍ಗಳನ್ನು ಈಗಾಗಲೇ ಮುದ್ರಿಸಿ, ನ್ಯಾಯಾಲಯವು ತನ್ನ ಅರ್ಜಿಯನ್ನು ಅಗತ್ಯವಾಗಿ ಅನುಮತಿಸುತ್ತದೆ ಎಂದು ಅರ್ಜಿದಾರನು ಹೇಗೆ ಭಾವಿಸಿದ್ದಾನೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇದನ್ನೂ ಓದಿ: ಕೋರ್ಟ್ ಅಭಿಪ್ರಾಯ, ಸರ್ಕಾರದ ಆದೇಶ ಪಾಲನೆಯ ಸದ್ಬುದ್ಧಿ ಕೊಡಲಿ: ಪ್ರೀತಂಗೌಡ 

    ಆರೋಪಿಯ ಈ ಕೃತ್ಯವನ್ನು ‘ಅತ್ಯಂತ ಅವಹೇಳನವಾಗಿದೆ’ ಆದರೆ ಅವನು ಮದುವೆಯಾಗಲಿದ್ದಾನೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಷರತ್ತುಗಳೊಂದಿಗೆ ಅವನ ಮನವಿಯನ್ನು ಅನುಮತಿಸಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.

  • ಒಳ ಉಡುಪು, ಗುಪ್ತಾಂಗದಲ್ಲಿ ಚಿನ್ನ ಕಳ್ಳಸಾಗಣೆ ಮಾಡ್ತಿದ್ದ ಮೂವರು ಮಹಿಳೆಯರು ಅರೆಸ್ಟ್

    ಒಳ ಉಡುಪು, ಗುಪ್ತಾಂಗದಲ್ಲಿ ಚಿನ್ನ ಕಳ್ಳಸಾಗಣೆ ಮಾಡ್ತಿದ್ದ ಮೂವರು ಮಹಿಳೆಯರು ಅರೆಸ್ಟ್

    ಹೈದರಾಬಾದ್: ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(ಆರ್‌ಜಿಐಎ) ಒಳ ಉಡುಪು ಮತ್ತು ಗುಪ್ತಾಂಗದಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ ಮೂವರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.

    ಆರ್‌ಜಿಐಎ ವಿಮಾನ ನಿಲ್ದಾಣದಲ್ಲಿ ಮೂವರು ಮಹಿಳಾ ಪ್ರಯಾಣಿಕರು 1.48 ಕೆಜಿ ತೂಕದ 72.80 ಲಕ್ಷ ಮೌಲ್ಯದ ಚಿನ್ನವನ್ನು ತಮ್ಮ ಒಳ ಉಡುಪು, ಗುಪ್ತಾಂಗದಲ್ಲಿ ಇಟ್ಟುಕೊಂಡು ಸಾಗಿಸುತ್ತಿದ್ದರು. ನಿಲ್ದಾಣದಲ್ಲಿ ತಪಾಸಣೆ ವೇಳೆ ಮಹಿಳೆಯರು ಸಿಕ್ಕಿಬಿದ್ದಿದ್ದು, ಹೈದರಾಬಾದ್ ಕಸ್ಟಮ್ಸ್ ಅಧಿಕಾರಿಗಳು ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಿಳೆಯರ ಬಳಿ ಇದ್ದ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ:  180 ಮಿಲಿಯನ್ ವರ್ಷದ ಹಳೆಯ ‘ಸೀ ಡ್ರ್ಯಾಗನ್’ ಅತೀ ದೊಡ್ಡ ಪಳೆಯುಳಿಕೆ ಪತ್ತೆ

    ಅಧಿಕಾರಿಗಳ ಪ್ರಕಾರ, ಮಹಿಳೆಯರು ಬೇರೆ ಬೇರೆ ವಿಮಾನಗಳಲ್ಲಿ ದುಬೈನಿಂದ ಹೈದರಾಬಾದ್‍ಗೆ ಆಗಮಿಸಿದ್ದಾರೆ. ಅವರಲ್ಲಿ ಇಬ್ಬರು ಚಿನ್ನವನ್ನು ಪೇಸ್ಟ್ ರೂಪದಲ್ಲಿ ಸಾಗಿಸುತ್ತಿದ್ದು, ಅದನ್ನು ಒಳ ಉಡುಪುಗಳಲ್ಲಿ ಬಚ್ಚಿಟ್ಟುಕೊಂಡಿದ್ದಾರೆ. ಆದರೆ ಇನ್ನೊಬ್ಬ ಮಹಿಳೆ ಅದನ್ನು ಗುಪ್ತಾಂಗದೂಳಗೆ ಬಚ್ಚಿಟ್ಟುಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ.

    ಚಿನ್ನ ಕಳ್ಳಸಾಗಣೆಗಾಗಿ ಹೈದರಾಬಾದ್ ಕಸ್ಟಮ್ಸ್ ಈ ಮೂವರ ವಿರುದ್ಧ ಮೂರು ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಈ ಮೂಲವನ್ನು ತಿಳಿದುಕೊಳ್ಳಲು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಪದೇ ಪದೇ ಈ ರೀತಿಯ ಪ್ರಕರಣಗಳು ಪತ್ತೆಯಾಗುತ್ತಿದ್ದು, ಅಧಿಕಾರಿಗಳು ಇನ್ನೂ ಹೆಚ್ಚು ಎಚ್ಚೆತ್ತುಕೊಳ್ಳಬೇಕಾಗಿದೆ. ಇದನ್ನೂ ಓದಿ: ಯಾವುದೋ ಊರಿಗೆ ಹೋಗುವ ಬದಲು ಇಲ್ಲೇ ಉದ್ಯೋಗ ಮಾಡಿ: ಈಶಪ್ರೀಯ ತೀರ್ಥ ಸ್ವಾಮೀಜಿ

  • ಲಸಿಕೆ ಕದ್ದು ಕಳ್ಳರು ಪರಾರಿ

    ಲಸಿಕೆ ಕದ್ದು ಕಳ್ಳರು ಪರಾರಿ

    ಹೈದರಾಬಾದ್: ಆರೋಗ್ಯ ಕೇಂದ್ರವೊಂದಕ್ಕೆ ನುಗ್ಗಿದ ಕಳ್ಳರು ಕೋವಿಡ್-19 ಲಸಿಕೆಗಳನ್ನು ಕದ್ದರುವ ಘಟನೆ ಹೈದರಾಬಾದ್‌ನ ಓಲ್ಡ್ ಸಿಟಿ ಬಳಿಯ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಸೋಮವಾರ ಕಳ್ಳರು ಕೋವಿಶೀಲ್ಡ್‌ನ 24 ಬಾಟಲಿ ಹಾಗೂ ಕೋವ್ಯಾಕ್ಸಿನ್‌ನ 17 ಬಾಟಲಿಗಳನ್ನು ಕದ್ದು ಪರಾರಿಯಾಗಿದ್ದಾರೆ.

    ಆರೋಗ್ಯ ಕಾರ್ಯಕರ್ತರು ಆಟೋದಲ್ಲಿ ಮನೆ ಮನೆಗೆ ಭೇಟಿ ನೀಡಿ ಲಸಿಕೆಯನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಸಮಯದಲ್ಲಿ ಕಳ್ಳರು ಕೇಂದ್ರವೊಂದಕ್ಕೆ ನುಗ್ಗಿ ಲಸಿಕೆಗಳನ್ನು ಕದ್ದಿದ್ದಾರೆ. ಕಳ್ಳರು ಕದ್ದಿರುವ ಲಸಿಕೆಗಳಲ್ಲಿ 300 ಡೋಸ್ ಕೋವಿಶೀಲ್ಡ್ ಹಾಗೂ 270 ಡೋಸ್ ಕೋವ್ಯಾಕ್ಸಿನ್ ಇತ್ತು ಎನ್ನಲಾಗಿದೆ. ಇದನ್ನೂ ಓದಿ: ಕಾಫಿನಾಡಿನ ಎರಡು ವಸತಿ ಶಾಲೆಯ 55 ಮಕ್ಕಳಿಗೆ ಕೊರೊನಾ

    ಲಸಿಕೆಗಳೊಂದಿಗೆ ಕಳ್ಳರು ಎರಡು ಕಂಪ್ಯೂಟರ್ ಹಾಗೂ ಕೆಲವು ಸ್ಟೇಷನರಿ ವಸ್ತುಗಳನ್ನೂ ತೆಗೆದುಕೊಂಡು ಹೋಗಿದ್ದಾರೆ. ಇಷ್ಟು ಮಾತ್ರವಲ್ಲದೇ ಆರೋಗ್ಯ ಕೇಂದ್ರದ ಕಂಪೌಂಡ್ ಬಳಿ ನಿಂತಿದ್ದ ಆಟೋ ರಿಕ್ಷಾದ ಟೈರ್‌ಅನ್ನೂ ತೆಗೆದುಕೊಂಡು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಮಕ್ಕಳಲ್ಲಿ ಕೊರೊನಾ ಪಾಸಿಟಿವ್ ಪ್ರಮಾಣ ಹೆಚ್ಚಾಗುತ್ತಿದೆ: ಡಾ. ಪ್ರಸಾದ್

    ಘಟನೆ ಯುಪಿಹೆಚ್‌ಸಿಯ ಮಿರ್‌ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯ ಕಲಿಖಬರ್ ರಸ್ತೆಯಲ್ಲಿ ನಡೆದಿದೆ. ಆಸ್ಪತ್ರೆಯ ಸಿಬ್ಬಂದಿ ನೀಡಿರುವ ದೂರಿ ಮೇರೆಗೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

  • ರಾಜ್ಯದ ಕೋವಿಡ್ ವಾರ್ ರೂಮ್​ಗೆ ರಾಷ್ಟ್ರ ಪ್ರಶಸ್ತಿ

    ರಾಜ್ಯದ ಕೋವಿಡ್ ವಾರ್ ರೂಮ್​ಗೆ ರಾಷ್ಟ್ರ ಪ್ರಶಸ್ತಿ

    ಹೈದರಾಬಾದ್: ಇ-ಆಡಳಿತದ 24ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಕರ್ನಾಟಕಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ.

    ಹೈದರಾಬಾದ್‍ನಲ್ಲಿ ಇ-ಆಡಳಿತದ 24ನೇ ರಾಷ್ಟ್ರೀಯ ಸಮ್ಮೇಳನ ನಡೆಯಿತು. ಈ ವೇಳೆ ಕರ್ನಾಟಕ ರಾಜ್ಯ ಕೋವಿಡ್-19 ವಾರ್ ರೂಮ್ ಗೆ ಕೋವಿಡ್ ನಿರ್ವಹಣೆಯಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು(ಐಸಿಟಿ) ಬಳಸುವ ವಿಭಾಗಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯನ್ನು ಕೋವಿಡ್ ವಾರ್ ರೂಮ್ ಮುಖ್ಯಸ್ಥ ಮುನಿಶ್ ಮೌದ್ಗಿಲ್ ಸ್ವೀಕರಿಸಿದರು. ಇದನ್ನೂ ಓದಿ:  ಮೋದಿ, ಯೋಗಿ ಫೋಟೋಗಳೊಂದಿಗೆ ಉಚಿತ ಆಹಾರ ಪ್ಯಾಕೆಟ್‍ಗಳನ್ನು ವಿತರಿಸುವಂತಿಲ್ಲ

    Contact tracing, 24x7 coordination, close watch on the quarantined in COVID-19 War Room in Karnataka | Deccan Herald

    ನಂತರ ಈ ಕುರಿತು ಮಾತನಾಡಿದ ಅವರು, ಕೋವಿಡ್ ವಾರಿಯರ್ಸ್ ಗಳಿಗೆ ನಾವು ಸಪೋರ್ಟ್ ನೆಟ್ ವರ್ಕ್ ಆಗಿದ್ದೇವೆ. ಸರಿಯಾದ ಸಮಯಕ್ಕೆ ಸೂಕ್ತ ಮಾಹಿತಿಯನ್ನು ನೀಡಿ ಜೀವ ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕೋವಿಡ್ ನಿರ್ವಹಣೆಗೆ ಬೆಂಬಲ ವ್ಯವಸ್ಥಿತವಾಗಿದೆ. ನಾವು ಗಡಿಯಾರದಲ್ಲಿ ಇರುವ ಮುಳ್ಳುಗಳಂತೆ ಕೆಲಸ ಮಾಡುತ್ತಿದ್ದೇವೆ. ಸಾಂಕ್ರಾಮಿಕ ರೋಗದ ಬಳಿಕ ಹೆಚ್ಚಿನ ಸಿಬ್ಬಂದಿ ಒಂದು ದಿನವೂ ರಜೆ ತೆಗೆದುಕೊಂಡಿಲ್ಲ ಎಂದು ವಿವರಿಸಿದರು.

    ರಾಜ್ಯಕ್ಕೆ ಮಾರ್ಚ್ 2020 ರಲ್ಲಿ ಮೊದಲ ಅಲೆ ಅಪ್ಪಳಿಸಿತ್ತು. ಈ ಅಲೆ ಆರಂಭವಾದ 2-3 ದಿನಗಳಲ್ಲಿ ವಾರ್ಡ್ ರೂಮ್ ಅನ್ನು ಸ್ಥಾಪಿಸಲಾಗಿತ್ತು. ಈ ವೇಳೆ ಕೊರೊನಾ ವಾಚ್ ಮೊಬೈಲ್ ಅಪ್ಲಿಕೇಶನ್ ಅನ್ನು ಮೊದಲು ರಚಿಸಲಾಯಿತು. ಇಡೀ ಭಾರತದಲ್ಲಿ ಸೋಂಕಿತರ ಸಂಪರ್ಕ ಪತ್ತೆಹಚ್ಚುವಿಕೆಗಾಗಿ ಅಪ್ಲಿಕೇಶನ್ ಅನ್ನು ಬಳಸುತ್ತಿರುವ ಏಕೈಕ ರಾಜ್ಯ ಕರ್ನಾಟಕವಾಗಿದೆ ಎಂದು ಹೆಮ್ಮೆಯಿಂದ ಹೇಳಿದರು.

     

    ಲೈನ್ ಲಿಸ್ಟ್ ಸಿಸ್ಟಮ್ ಎಂದು ಕರೆಯಲ್ಪಡುವ ರೋಗಿಗಳ ನಿರ್ವಹಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ನಮ್ಮ ರಾಜ್ಯವನ್ನೇ ಹರಿಯಾಣವೂ ಅನುಸರಿಸುತ್ತಿದೆ. ಕೊರೊನಾ ಮೊದಲ ಅಲೆ ಸಂದರ್ಭದಲ್ಲಿ ಪಾಂಡಿಚೆರಿ ರಾಜ್ಯಪಾಲ ಕಿರಣ್ ಬೇಡಿ ಅವರು ಕೋವಿಡ್ ವಾರ್ ರೂಮ್ ನ್ನು ಸಂಪರ್ಕಿಸಿ, ಸಲಹೆಗಳನ್ನು ಪಡೆದುಕೊಂಡಿದ್ದರು. ಅಲ್ಲಿಗೇ ತಂಡವೊಂದನ್ನು ರವಾನಿಸಿ ಮಾಹಿತಿಯನ್ನು ನೀಡಲಾಗಿತ್ತು. ಇದಾದ ಬಳಿಕ ಪ್ರತೀ ರಾಜ್ಯವೂ ಇದೇ ಮಾರ್ಗವನ್ನು ಅನುಸರಿಸುತ್ತಿವೆ ಎಂದು ತಿಳಿಸಿದರು.

    ಸೋಂಕಿನ ನಿರ್ವಹಣೆಗೆ ಐಟಿಯೊಂದಿಗೆ ವ್ಯವಸ್ಥಿತ ಮತ್ತು ಸಂಘಟಿತ ವಿಧಾನದ ಅಗತ್ಯವಿದೆ. ನವೆಂಬರ್ 2020ರಲ್ಲಿ, ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯವು ವಾರ್ ರೂಮ್ ಅನ್ನು ಪರಿಶೀಲನೆ ಮಾಡಿತ್ತು. ಬಳಿಕ ಕೋವಿಡ್-19 ನಿರ್ವಹಣೆಯಲ್ಲಿ ಕೋವಿಡ್ ವಾರ್ ರೂಮ್ ಅತ್ಯಂತ ಪರಿಣಾಮಕಾರಿ ಎಂದು ಹೇಳಿತ್ತು. ನಮ್ಮ ಕಾಂಟ್ಯಾಕ್ಟ್ ಟ್ರೇಸಿಂಗ್ ಮಾದರಿಯನ್ನು ಭಾರತ ಸರ್ಕಾರವು ಜೂನ್-ಜುಲೈ 2020 ರಲ್ಲಿ ಆಯ್ಕೆ ಮಾಡಿತ್ತು. ಅದನ್ನು ಕಾರ್ಯಗತಗೊಳಿಸಲು ಇತರ ರಾಜ್ಯಗಳಿಗೂ ಸೂಚನೆ ನೀಡಿತ್ತು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ನನ್ನನ್ನ ಜ್ಯೋತಿಷಿ ಎಂದು ಕರೆದರೂ ಪರವಾಗಿಲ್ಲ, ಪಂಜಾಬ್‍ನಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತೆ: ಸಿ.ಟಿ.ರವಿ

    ಪ್ರಸ್ತುತ ವಾರ್ ರೂಮ್‍ನಲ್ಲಿ ಸಂಯೋಜಕರು, ತಾಂತ್ರಿಕ ಮತ್ತು ಇತರ ಸಿಬ್ಬಂದಿಯನ್ನು ಹೊರತುಪಡಿಸಿ ಸುಮಾರು 20-30 ಜನರು ಕೆಲಸ ಮಾಡುತ್ತಿದ್ದಾರೆ. ಈಗ ಮೂರನೇ ಅಲೆಯಲ್ಲಿಯೂ ಬಂದಿದ್ದು, ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ಮಾಹಿತಿ ಸಂಗ್ರಹಣೆ ಮತ್ತು ವ್ಯವಸ್ಥಿತ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ವಾರ್ ರೂಮ್ ಶ್ರಮಿಸುತ್ತಿದೆ ಎಂದು ತಮ್ಮ ಪರಿಶ್ರಮದ ಬಗ್ಗೆ ತಿಳಿಸಿದರು.

  • ಓರ್ವನ ಕೊಲೆ – 18 ಮಂದಿ ಅರೆಸ್ಟ್!

    ಓರ್ವನ ಕೊಲೆ – 18 ಮಂದಿ ಅರೆಸ್ಟ್!

    ಹೈದರಾಬಾದ್: ಅಂಗಡಿ ಮಾಲೀಕನೊಬ್ಬನ ಹತ್ಯೆಗೈದ ಆರೋಪದ ಮೇಲೆ ಹೈದರಾಬಾದ್ ಪೊಲೀಸರು 18 ಜನರನ್ನು ಬಂಧಿಸಿದ್ದಾರೆ.

    ಹೈದರಾಬಾದ್‌ನ ಎಲ್‌ಬಿ ನಗರದ ನಿವಾಸಿ ನರಸಿಂಹ ರೆಡ್ಡಿ(33) 2021ರ ಡಿಸೆಂಬರ್ 31ರಂದು ಹತ್ಯೆಯಾಗಿದ್ದು, ಈ ಪ್ರಕರಣದಲ್ಲಿ ಪೊಲೀಸರು ಒಟ್ಟು 21 ಮಂದಿಯ ಮೇಲೆ ಕೇಸ್ ದಾಖಲಿಸಿದ್ದಾರೆ. ಈಗಾಗಲೇ ಪೊಲೀಸರು 18 ಆರೋಪಿಗಳನ್ನು ಬಂಧಿಸಿದ್ದು, ಮೂವರು ಆರೋಪಿಗಳನ್ನು ಹುಡುಕುತ್ತಿದ್ದಾರೆ.

    ನರಸಿಂಹ ರೆಡ್ಡಿ 2021ರ ಡಿಸೆಂಬರ್ 31ರಂದು ತನ್ನ ಹುಟ್ಟು ಹಬ್ಬವನ್ನು ಸ್ನೇಹಿತರೊಂದಿಗೆ ಆಚರಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಅಲ್ಲೇ ಹೊಸ ವರ್ಷವನ್ನು ಆಚರಿಸಿಕೊಳ್ಳುತ್ತಿದ್ದ ಇನ್ನೊಂದು ಗುಂಪಿನೊಂದಿಗೆ ಜಗಳ ನಡೆದಿದೆ. ಪರಿಣಾಮ ನರಸಿಂಹ ರೆಡ್ಡಿ ಹತ್ಯೆಯಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಗರ್ಭಿಣಿ ಅಂತಾ ಸುಳ್ಳಿ ಹೇಳಿ ಮಗುವಿಗೆ ಜನ್ಮ ಕೊಟ್ಟಳು- ಆದರೆ ಕಂದಮ್ಮ ಇಲ್ಲ

    POLICE JEEP

    ಮಲಿಕ್, ಮಿಟ್ಟು, ರಾಘವ ಎಂಬ ಮೂವರು ಆರೋಪಿಗಳು ಆರಂಭದಲ್ಲಿ ಜಗಳ ಪ್ರಾರಂಭಿಸಿ, ನಂತರ ತಮ್ಮ ಸಹಪಾಠಿಗಳನ್ನು ಕರೆಸಿಕೊಂಡಿದ್ದಾರೆ. ಕಾರು ಹಾಗೂ ಬೈಕ್‌ಗಳಲ್ಲಿ ಬಂದಿದ್ದ ಒಟ್ಟು 21 ಆರೋಪಿಗಳು ನರಸಿಂಹ ರೆಡ್ಡಿ ಗುಂಪಿನ ಮೇಲೆ ಕಲ್ಲು ಹಾಗೂ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಕಿರುಕುಳದಿಂದ ಬೇಸತ್ತು ಮಕ್ಕಳಿಂದ ಮರಳಿ ಆಸ್ತಿ ಪಡೆದುಕೊಳ್ಳುವಲ್ಲಿ ವೃದ್ಧ ತಾಯಿ ಯಶಸ್ವಿ!

    ಎಲ್‌ಬಿ ನಗರ ಪೊಲೀಸರು 18 ಆರೋಪಿಗಳನ್ನು ಬಂಧಿಸಿ, ಮೂರು ಕಾರ್, ಬೈಕ್ ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

  • ವಯೋಮಿತಿ ಏರಿಕೆ ಭೀತಿ- ಮುಸ್ಲಿಮರು ತರಾತುರಿ ಲಗ್ನ

    ವಯೋಮಿತಿ ಏರಿಕೆ ಭೀತಿ- ಮುಸ್ಲಿಮರು ತರಾತುರಿ ಲಗ್ನ

    ಹೈದರಾಬಾದ್: ಹೆಣ್ಣುಮಕ್ಕಳ ವಿವಾಹದ ಕನಿಷ್ಠ ವಯಸ್ಸನ್ನು 18ರಿಂದ 21ಕ್ಕೆ ಹೆಚ್ಚಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದೆ ಹಿನ್ನೆಲೆಯಲ್ಲಿ ಮುಸ್ಲಿಮರು ತರಾತುರಿಯಾಗಿ ಹೆಣ್ಣು ಮಕ್ಕಳ ಲಗ್ನವನ್ನು ಮಾಡುತ್ತಿದ್ದಾರೆ.

    ಕೇಂದ್ರ ಸರ್ಕಾರ ಮಹಿಳೆಯರ ವಿವಾಹದ ಕಾನೂನುಬದ್ಧ ವಯೋಮಿತಿ 18 ರಿಂದ 21 ವರ್ಷಕ್ಕೆ ಏರಿಕೆ ಮಾಡಲು ಪ್ರಸ್ತಾಪ ಮಾಡಿದೆ . ಈ ಬೆನ್ನಲ್ಲೆ ತೆಲಂಗಾಣದಾದ್ಯಂತ ಮುಸ್ಲಿಂ ಸಮುದಾಯ ತಮ್ಮ ಹೆಣ್ಣು ಮಕ್ಕಳ ವಿವಾಹಕ್ಕಾಗಿ ಮುಗಿಬಿದ್ದಿವೆ. ಇದನ್ನೂ ಓದಿ: ನನ್ನ ಹೆಸರು Kovid, ಆದ್ರೆ ನಾನು ವೈರಸ್ ಅಲ್ಲ: ಬೆಂಗಳೂರು ಉದ್ಯಮಿ

    ಕಳೆದ ತಿಂಗಳು ಸಂಸತ್ತಿನಲ್ಲಿ ಬಾಲ್ಯ ವಿವಾಹ ತಿದ್ದುಪಡಿ ಕಾಯ್ದೆ 2021ನ್ನು ಮಂಡಿಸಲಾಗಿತ್ತು. ವಿರೋಧ ಪಕ್ಷಗಳು ಆಕ್ಷೇಪಿಸಿದ ಕಾರಣ ಈ ಮಸೂದೆಯನ್ನು ಆಯ್ಕೆ ಸಮಿತಿಗೆ ರವಾನಿಸಲಾದರೂ ಮುಂಬರುವ ಅಧಿವೇಶನದಲ್ಲಿ, ಇದಕ್ಕೆ ಒಪ್ಪಿಗೆ ಸಿಗಲಿದೆ ಎನ್ನುವ ಭೀತಿಯಿಂದ ಮುಂದಿನ ವರ್ಷ ನಿಗದಿಯಾದ ವಿವಾಹವನ್ನು ಕೂಡಲೇ ಮಾಡಲು ಪಾಲಕರು ಮುಂದಾಗುತ್ತಿದ್ದಾರೆ. ಇದನ್ನೂ ಓದಿ: ಹೆಣ್ಣುಮಕ್ಕಳ ವಿವಾಹದ ವಯಸ್ಸು 18ರಿಂದ 21ಕ್ಕೆ ಏರಿಕೆ – ಕೇಂದ್ರ ಸಂಪುಟ ಅನುಮೋದನೆ

    ದಿನಕ್ಕೆ 3 ರಿಂದ 4 ವಿವಾಹಗಳು ಜರುಗುತ್ತಿದ್ದವು. ಆದರೆ ಹಲವರು ಖಾಜಿಗಳು ದಿನಕ್ಕೆ 10 ರಿಂದ 20 ವಿವಾಹಗಳನ್ನು ಮಾಡಿಸುತ್ತಿದ್ದಾರೆ. ವಧುವಿನ ಪಾಲಕರು ವರನ ಮನೆಯವರೊಂದಿಗೆ ಸೇರಿ ಕೇವಲ ಕಾನೂನಾತ್ಮಕವಾಗಿ ವಿವಾಹದ ಪ್ರಕ್ರಿಯೆಯನ್ನು ಮುಗಿಸಿಕೊಳ್ಳುತ್ತಿದ್ದಾರೆ. ಆದರೆ ಸಾಂಪ್ರದಾಯಿಕ ಆಚರಣೆಗಳನ್ನು ಪೂರ್ವ ನಿಗದಿ ಸಮಯದಲ್ಲೇ ಮಾಡಿಕೊಳ್ಳಿದ್ದಾರೆ. ಇದನ್ನೂ ಓದಿ: ಹೂಸಿನ ದುರ್ವಾಸನೆಯನ್ನು ಸುವಾಸನೆಯಾಗಿ ಮಾಡೋ ಮಾತ್ರೆ ಮಾರುಕಟ್ಟೆಗೆ ಎಂಟ್ರಿ

     

  • ಚಿತ್ರಮಂದಿರಕ್ಕೆ ಬೆಂಕಿ – ಪೀಠೋಪಕರಣಗಳು ಸುಟ್ಟು ಕರಕಲು

    ಹೈದರಾಬಾದ್: ನಗರದ ಕುಕಟ್‌ಪಲ್ಲಿ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ಶಿವ ಪಾರ್ವತಿ ಥಿಯೇಟರ್‌ನಲ್ಲಿ ಭಾನುವಾರ ಸಂಜೆ ಭಾರಿ ಅಗ್ನಿ ಅವಘಡ ಸಂಭವಿಸಿದೆ.

    ಅಗ್ನಿ ಅವಘಡದಿಂದಾಗಿ ಚಿತ್ರಮಂದಿರದಲ್ಲಿದ್ದ ಪೀಠೋಪಕರಣಗಳು ಸುಟ್ಟು ಬೂದಿಯಾಗಿದೆ ಹಾಗೂ ಥಿಯೇಟರ್‌ನ ಮೇಲ್ಛಾವಣಿ ಕುಸಿದಿದೆ. ಅದೃಷ್ಟವಶಾತ್ ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಸ್ಥಳದಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ಇದನ್ನೂ ಓದಿ: ನಿಲ್ದಾಣದಲ್ಲಿ ಎಮರ್ಜೆನ್ಸಿ ಬ್ರೇಕ್ ಹಾಕಿದ ಲೊಕೊ ಪೈಲಟ್- ಕೆಲವೇ ಸೆಕೆಂಡ್‍ಗಳಲ್ಲಿ ವ್ಯಕ್ತಿ ಬಚಾವ್

    ಚಿತ್ರಮಂದಿರದೊಳಗೆ ಬೆಂಕಿ ಕಾಣಿಸಿಕೊಂಡಾಗ ಭದ್ರತಾ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ತಕ್ಷಣ ಅಲ್ಲಿಗೆ ಧಾವಿಸಿದ ಮೂರು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕೆಲಸ ಮಾಡಿದೆ.

    ಅಗ್ನಿಶಾಮಕದಳ ಚಿತ್ರಮಂದಿರಕ್ಕೆ ಹತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲು 3 ಗಂಟೆಗಳ ಕಾಲ ತೆಗೆದುಕೊಂಡಿದೆ. ಬೆಂಕಿ ಅವಘಡಕ್ಕೆ ಮುಖ್ಯ ಕಾರಣ ಏನು ಎಂಬುದನ್ನು ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ 6 ಬೈಕ್‌, 9 ಮಂದಿಗೆ ಗುದ್ದಿದ ಕಾರು ಚಾಲಕ

  • ಕಾಂಗ್ರೆಸ್ ಸಂಸದ ರೇವಂತ್ ರೆಡ್ಡಿಗೆ ಕೊರೊನಾ ಪಾಸಿಟಿವ್

    ಕಾಂಗ್ರೆಸ್ ಸಂಸದ ರೇವಂತ್ ರೆಡ್ಡಿಗೆ ಕೊರೊನಾ ಪಾಸಿಟಿವ್

    ಹೈದರಾಬಾದ್: ಲೋಕಸಭೆ ಸಂಸದ ರೇವಂತ್ ರೆಡ್ಡಿ ಅವರಿಗೆ ಕೋವಿಡ್-19 ದೃಢಪಟ್ಟಿದ್ದು, ತಮಗೆ ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

    ನನಗೆ ಕೊರೊನಾ ವೈರಸ್ ದೃಢಪಟ್ಟಿದ್ದು, ಕೆಲವು ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದೇನೆ. ನನ್ನೊಂದಿಗೆ ಸಂಪರ್ಕ ಹೊಂದಿದ್ದವರೆಲ್ಲಾ ದಯವಿಟ್ಟು ಮುನ್ನೆಚ್ಚರಿಕೆ ವಹಿಸಿ ಕೊರೊನಾಪರೀಕ್ಷೆಗೆ ಒಳಗಾಗಿ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ರಾಜಕೀಯ ಬಿಕ್ಕಟ್ಟು – ಸುಡಾನ್‌ ಪ್ರಧಾನಿ ರಾಜೀನಾಮೆ ಘೋಷಣೆ

    ರೇವಂತ್ ರೆಡ್ಡಿ ತೆಲಂಗಾಣದ ಮಲ್ಕಾಜ್‍ಗಿರಿ ಸಂಸದರಾಗಿದ್ದು, ತೆಲಂಗಾಣದ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಈ ಹಿಂದೆ ಅವರು ತೆಲುಗು ದೇಶಂ ಪಕ್ಷದಿಂದ ಎರಡು ಬಾರಿ ಶಾಸಕರಾಗಿದ್ದರು. ಹಾಗೂ 2017ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

    ಕೋವಿಡ್-19 ರೂಪಾಂತರ ತಳಿ ಓಮಿಕ್ರಾನ್ ಹರಡುವಿಕೆ ಭಾರತದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ದೇಶದಲ್ಲಿ ಸೋಮವಾರ 24 ಗಂಟೆಗಳಲ್ಲಿ 33,750 ಹೊಸ ಕೋವಿಡ್ ಪ್ರಕರಣಗಳು ಮತ್ತು 123 ಸಾವುಗಳು ವರದಿಯಾಗಿದೆ. ಇದನ್ನೂ ಓದಿ: YSRPC ಸದಸ್ಯನಿಂದ NTR ಪ್ರತಿಮೆ ಧ್ವಂಸಗೊಳಿಸಲು ಯತ್ನ – ವೀಡಿಯೋ ವೈರಲ್

  • YSRPC ಸದಸ್ಯನಿಂದ NTR ಪ್ರತಿಮೆ ಧ್ವಂಸಗೊಳಿಸಲು ಯತ್ನ – ವೀಡಿಯೋ ವೈರಲ್

    YSRPC ಸದಸ್ಯನಿಂದ NTR ಪ್ರತಿಮೆ ಧ್ವಂಸಗೊಳಿಸಲು ಯತ್ನ – ವೀಡಿಯೋ ವೈರಲ್

    ಹೈದರಾಬಾದ್: ಆಂಧ್ರಪ್ರದೇಶದ ಗುಂಟೂರಿನಲ್ಲಿ ಹಾಡಹಗಲಲ್ಲೇ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ಸಂಸ್ಥಾಪಕ ಎನ್‍ಟಿ ರಾಮರಾವ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಲು ವ್ಯಕ್ತಿಯೊಬ್ಬ ಪ್ರಯತ್ನಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಪ್ರತಿಮೆ ಕೆಡವಲು ಪ್ರಯತ್ನಿಸಿದ ವ್ಯಕ್ತಿಯನ್ನು ಶೆಟ್ಟಿಪಲ್ಲಿ ಕೋಟೇಶ್ವರ್ ರಾವ್ ಎಂದು ಗುರುತಿಸಲಾಗಿದ್ದು, ಈತ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಸದಸ್ಯರಾಗಿದ್ದಾನೆ. ಕೋಟೇಶ್ವರ್ ರಾವ್ ಗುಂಟೂರಿನ ದುರ್ಗಿ ಗ್ರಾಮದಲ್ಲಿ ನಿರ್ಮಿಸಲಾಗಿದ್ದ ಎನ್‍ಟಿ ರಾಮರಾವ್ ಪ್ರತಿಮೆಯನ್ನು ಸುತ್ತಿಗೆಯಿಂದ ಒಡೆದು ಧ್ವಂಸಗೊಳಿಸಲು ಯತ್ನಿಸಿದ್ದಾನೆ. ಇದನ್ನೂ ಓದಿ: ರಾಜಕೀಯ ಬಿಕ್ಕಟ್ಟು – ಸುಡಾನ್‌ ಪ್ರಧಾನಿ ರಾಜೀನಾಮೆ ಘೋಷಣೆ

    ಎನ್‍ಟಿಆರ್ ಎಂದು ಜನಪ್ರಿಯವಾಗಿರುವ ನಂದಮೂರಿ ತಾರಕ ರಾಮರಾವ್ ಅವರು 1983 ರಿಂದ 1995 ರ ನಡುವೆ ಮೂರುಬಾರಿ ಮುಖ್ಯಮಂತ್ರಿಯಾಗಿ ಏಳು ವರ್ಷಗಳ ಕಾಲ ಆಂಧ್ರಪ್ರದೇಶಕ್ಕೆ ಸೇವೆ ಸಲ್ಲಿಸಿದ್ದಾರೆ. ಈ ಘಟನೆ ವಿರೋಧ ಪಕ್ಷದಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.

    ಟಿಡಿಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ (ಎಂಎಲ್‍ಸಿ) ನಾರಾ ಲೋಕೇಶ್ ತಮ್ಮ ಅಜ್ಜನ ಪ್ರತಿಮೆಯನ್ನು ಧ್ವಂಸಗೊಳಿಸಿದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಚರ್ಲ ಕ್ಷೇತ್ರದ ದುರ್ಗಿಯಲ್ಲಿ ವೈಸಿಪಿ ಮುಖಂಡ ಶೆಟ್ಟಿಪಲ್ಲಿ ಕೋಟೇಶ್ವರರಾವ್, ದಿವಂಗತ ನಂದಮೂರಿ ತಾರಕ ರಾಮರಾವ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿರುದನ್ನು ತೀವ್ರವಾಗಿ ಖಂಡಿಸುತ್ತೇನೆ. ಅವರ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ರೈತರು ನನಗಾಗಿ ಸತ್ತರೇ ಅಂತ ಮೋದಿ ಹೇಳಿದ್ರು – ಮೇಘಾಲಯ ರಾಜ್ಯಪಾಲ ವಾಗ್ದಾಳಿ