Tag: Hyderabad

  • ದೇಶದ ಪ್ರಗತಿಗಾಗಿ ಬಿಜೆಪಿಯನ್ನು ಬಂಗಾಳಕೊಲ್ಲಿಗೆ ಎಸೆಯಿರಿ: ಸಿಎಂ ಕೆಸಿಆರ್

    ದೇಶದ ಪ್ರಗತಿಗಾಗಿ ಬಿಜೆಪಿಯನ್ನು ಬಂಗಾಳಕೊಲ್ಲಿಗೆ ಎಸೆಯಿರಿ: ಸಿಎಂ ಕೆಸಿಆರ್

    ಹೈದರಾಬಾದ್: ದೇಶದ ಪ್ರಗತಿಗಾಗಿ ಕೇಂದ್ರದಿಂದ ಆಡಳಿತರೂಢ ಬಿಜೆಪಿಯನ್ನು ಬಂಗಾಳಕೊಲ್ಲಿಗೆ ಎಸೆಯುವಂತೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ನಾಯಕತ್ವದಲ್ಲಿ ಬದಲಾವಣೆ ತರಲು ಅವಶ್ಯಕತೆಯಿದೆ. ಅಭಿವೃದ್ಧಿ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ವಿಫಲವಾಗಿದೆ. ವಾಸ್ತವವಾಗಿ ನಮಗೆ ಹೊಸ ಸಂವಿಧಾನದ ಅಗತ್ಯವಿದ್ದು, ಸಂವಿಧಾನವನ್ನು ಮರಳಿ ಬರೆಯಬೇಕಿದೆ ಎಂದು ಕಿಡಿಕಾರಿದರು.

    bjp - congress

    ಉತ್ತರಪ್ರದೇಶದದಲ್ಲಿ ಬಿಜೆಪಿ ಸೋತರೆ ಅವರ ವರ್ಚಸ್ಸು ಗಣನೀಯವಾಗಿ ಕಡಿಮೆಯಾಗಲಿದೆ. ಒಂದು ವೇಳೆ ಬಿಜೆಪಿ ಗೆದ್ದರೆ ಅವರಿಗೆ ದುರಹಂಕಾರ ಹೆಚ್ಚುತ್ತದೆ ಎಂದು ಟೀಕಿಸಿದರು.

    ನಾನು ರಾಷ್ಟ್ರಮಟ್ಟದಲ್ಲಿ ನಾಯಕತ್ವ ಬದಲಾವಣೆಗಾಗಿ ಅನೇಕ ನಾಯಕರನ್ನು ಭೇಟಿ ಮಾಡಿದ್ದೇನೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಆದರೆ ದೇಶದ ಯುವಜನತೆ ಎಚ್ಚೆತ್ತುಕೊಂಡು ಬದಲಾವಣೆ ತರಲು ಮನಸ್ಸು ಮಾಡಬೇಕಿದೆ ಎಂದರು. ಇದನ್ನೂ ಓದಿ: Budget 2022 : ಮೋದಿ ಸೂಚನೆಯಂತೆ ಜನರಿಂದ ಹೆಚ್ಚುವರಿ ತೆರಿಗೆ ಸಂಗ್ರಹ ಇಲ್ಲ

    2019ರ ಲೋಕಸಭೆ ಚುನಾವಣೆಗೂ ಮುನ್ನ ಕೆಸಿಆರ್ ಅವರು ಕೇರಳ ಸಿಎಂ ಪಿಣರಾಯಿ ವಿಜಯನ್, ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಮತ್ತು ಮಮತಾ ಬ್ಯಾನರ್ಜಿ ಸೇರಿದಂತೆ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಪ್ರಯತ್ನಿಸಿದ್ದರು. ಇದನ್ನೂ ಓದಿ: ಬಿಜೆಪಿ ಶಾಸಕ ನಿತೇಶ್ ರಾಣೆಗೆ ಜಾಮೀನು ನಿರಾಕರಿಸಿದ ಕೋರ್ಟ್

  • ಗುಡಿಸಲಿಗೆ ಡಿಕ್ಕಿ ಹೊಡೆದ ಕಾರು- ನಾಲ್ವರು ಮಹಿಳೆಯರು ಸಾವು

    ಗುಡಿಸಲಿಗೆ ಡಿಕ್ಕಿ ಹೊಡೆದ ಕಾರು- ನಾಲ್ವರು ಮಹಿಳೆಯರು ಸಾವು

    ಹೈದರಾಬಾದ್: ವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಗುಡಿಸಲಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ನಾಲ್ವರು ಮಹಿಳೆಯರು ಮೃತಪಟ್ಟಿದ್ದು, ಮೂವರು ಮಹಿಳೆಯರು ಗಾಯಗೊಂಡಿರುವ ಘಟನೆ ತೆಲಂಗಾಣದ ಕರೀಂನಗರದಲ್ಲಿ ನಡೆದಿದೆ.

    ಕರೀಂನಗರ ನಗರದ ಕಮಾನ್ ಪ್ರದೇಶದಲ್ಲಿ ರಸ್ತೆ ಬಳಿ ಇದ್ದ ಗುಡಿಸಲಿಗೆ ಕಾರು ಡಿಕ್ಕಿ ಹೊಡೆದಿದೆ. ಗುಡಿಸಲೊಳಗೆ ಒಟ್ಟು ಆರು ಮಹಿಳೆಯರು ಕೆಲಸ ಮಾಡುತ್ತಿದ್ದರು. ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಗೊಂಡ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಮೂವರು ಮಹಿಳೆಯರು ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ತಾಯಿಗೆ ಇಟ್ಟಿಗೆಯಿಂದ ಹೊಡೆದು ತಾನೂ ಆತ್ಮಹತ್ಯೆಗೆ ಯತ್ನಿಸಿದ

    POLICE JEEP

    ಕಾರು ಚಾಲಕ ಕಾರನ್ನು ಸ್ಥಳದಲ್ಲೇ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ರಾಜೇಂದ್ರ ಪ್ರಸಾದ್ ಎಂಬ ವ್ಯಕ್ತಿಯ ಹೆಸರಿನಲ್ಲಿ ಈ ವಾಹನ ನೋಂದಣಿಯಾಗಿರುವುದು ತಿಳಿದು ಬಂದಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಶೇ.75 ವಯಸ್ಕರಿಗೆ ಎರಡೂ ಡೋಸ್‌ ಲಸಿಕೆ – ಪ್ರಧಾನಿ ಅಭಿನಂದನೆ

  • ಅಮ್ಮನ ಜನ್ಮದಿನ – ಕ್ವಾರಂಟೈನ್‍ನಲ್ಲಿರುವ ಚಿರು ಭಾವುಕ

    ಅಮ್ಮನ ಜನ್ಮದಿನ – ಕ್ವಾರಂಟೈನ್‍ನಲ್ಲಿರುವ ಚಿರು ಭಾವುಕ

    ಹೈದರಾಬಾದ್: ಟಾಲಿವುಡ್ ನಟ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಇತ್ತೀಚೆಗಷ್ಟೇ ಕೊರೊನಾ ಸೋಂಕು ದೃಢಪಟ್ಟಿದ್ದು, ಸದ್ಯ ಕ್ವಾರಂಟೈನ್‍ನಲ್ಲಿರುವ ಚಿರಂಜೀವಿ ಅವರು ತಮ್ಮ ತಾಯಿಯ ಹುಟ್ಟುಹಬ್ಬದಂದು ಅವರ ಆಶೀರ್ವಾದ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ಭಾವಾನಾತ್ಮಕ ಸಾಲುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಜನವರಿ 29ರಂದು ಚಿರಂಜೀವಿ ಅವರ ತಾಯಿಯ ಹುಟ್ಟುಹಬ್ಬವಿದ್ದು, ಕೋವಿಡ್ ಇರುವುದರಿಂದ ಕ್ವಾರಂಟೈನ್‍ನಲ್ಲಿರುವ ಚಿರಂಜೀವಿ ಅವರು ಈ ವಿಶೇಷವಾದ ದಿನ ತಮ್ಮ ತಾಯಿಯಿಂದ ಆಶೀರ್ವಾದ ಪಡೆಯಲು ಸಾಧ್ಯವಾಗುತ್ತಿಲ್ಲ ಟ್ವಿಟ್ಟರ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತಪ್ಪು ಮಾಡಿಯೂ ತಪ್ಪೇ ಮಾಡಿಲ್ಲ ಎಂದ ಗಟ್ಟಿಮೇಳ ರಕ್ಷಿತ್‌ – ಎಫ್‌ಐಆರ್‌ ಕಾಪಿ ಲಭ್ಯ

    ಕೋವಿಡ್ ಸೋಂಕಿಗೆ ಒಳಗಾಗಿರುವ ಚಿರಂಜೀವಿ ಅವರು ತಮ್ಮ ತಾಯಿ ಹಾಗೂ ಪತ್ನಿ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದು, ಜೊತೆಗೆ ತೆಲುಗಿನಲ್ಲಿ ಜನ್ಮ ದಿನದ ಶುಭಾಶಯಗಳು ಅಮ್ಮ. ನಾನು ಕ್ವಾರಂಟೈನ್‍ನಲ್ಲಿರುವುದರಿಂದ ನಿಮ್ಮ ಆಶೀರ್ವಾದವನ್ನು ನೇರವಾಗಿ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಲ್ಲಿ ನಿಮಗೆ ಶುಭಾಶಯ ಕೋರುತ್ತಿದ್ದೇನೆ. ಈ ಜನ್ಮದಲ್ಲಿ ಮಾತ್ರವಲ್ಲ, ಮುಂದಿನ ಜನ್ಮದಲ್ಲಿಯೂ ನಿಮ್ಮ ಆಶೀರ್ವಾದ ನನ್ನ ಮೇಲೆ ಇರಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ. ಈ ಸಾಲುಗಳಲ್ಲಿಯೇ ಚಿರು ತಮ್ಮ ತಾಯಿಯನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಸಂಗೀತ್ ಕಾರ್ಯಕ್ರಮದಲ್ಲಿ ಸೂರಜ್‍ ಜೊತೆ ಮೌನಿ ರಾಯ್ ಲಿಪ್‍ಲಾಕ್

    ಇತ್ತೀಚೆಗಷ್ಟೇ ಕೋವಿಡ್-19 ಪಾಸಿಟಿವ್ ಬಂದಿದ್ದ ಚಿರಂಜೀವಿ ಅವರು, ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಂಡರೂ ನಿನ್ನೆ ರಾತ್ರಿ ನನಗೆ ಸೌಮ್ಯ ರೋಗಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದೆ. ನನಗೆ ಕೊರೊನಾ ಸೋಂಕು ದೃಢವಾಗಿದ್ದು, ಇದೀಗ ಮನೆಯಲ್ಲಿ ಕ್ವಾರಂಟೈನ್‍ನಲ್ಲಿದ್ದೇನೆ. ಕಳೆದ ಕೆಲವು ದಿನಗಳಿಂದ ನನ್ನ ಜೊತೆ ಸಂಪರ್ಕ ಹೊಂದಿದ್ದ ಎಲ್ಲರಿಗೂ ಕೊರೊನಾ ಪರೀಕ್ಷೆಗೆ ಒಳಗಾಗುವಂತೆ ವಿನಂತಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು.

  • 17ನೇ ಶತಮಾನದ ಬನ್ಸಿಲಾಲ್‌ಪೇಟೆಯ ಮೆಟ್ಟಿಲು ಬಾವಿ ಮರುಸ್ಥಾಪನೆ

    ಹೈದರಾಬಾದ್: 17ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಬನ್ಸಿಲಾಲ್‌ಪೇಟೆ ಮೆಟ್ಟಿಲು ಬಾವಿಯನ್ನು ಮರು ಸ್ಥಾಪಿಸಲಾಗುತ್ತಿದ್ದು, ಈ ವರ್ಷದ ಸ್ವಾತಂತ್ರ್ಯ ದಿನದಂದು ಸಂಪೂರ್ಣವಾಗಿ ಅಭಿವೃದ್ಧಿಗೊಳಿಸಿ ಉದ್ಘಾಟನೆ ಮಾಡಲಾಗುತ್ತದೆ ಎಂದು ತೆಲಂಗಾಣ ಪಶುಸಂಗೋಪನಾ ಸಚಿವ ಟಿ ಶ್ರೀನಿವಾಸ್ ಯಾದವ್ ತಿಳಿಸಿದ್ದಾರೆ.

    ತೆಲಂಗಾಣದ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಭೋಯಿಗುಡ ಜಿಲ್ಲೆಯ ಬನ್ಸಿಲಾಲ್‌ಪೇಟೆ ತೆರೆದ ಮೆಟ್ಟಿಲು ಬಾವಿಯ ಪುನಶ್ಚೇತನ ಕಾಮಗಾರಿಗೆ ಗುರುವಾರ ಚಾಲನೆ ಸಿಕ್ಕಿದೆ. 17ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಬಾವಿಯ ನೀರು ಕಲುಷಿತವಾಗಿದ್ದು, ಅದನ್ನು ಶುದ್ಧೀಕರಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತದಿಂದ ವಾಲಿದ ವಿದ್ಯುತ್ ಕಂಬ – ಆತಂಕದಲ್ಲಿ ಸವಾರರು

    ಬರೋಬ್ಬರಿ 2 ಸಾವಿರ ಟನ್‌ಗಳಷ್ಟು ಹೂಳು ಹಾಗೂ ಅವಶೇಷಗಳನ್ನು ಬಾವಿಯಿಂದ ಎತ್ತಲಾಗಿದ್ದು, ನೀರಿನ ಶುದ್ಧೀಕರಣ ಮಾಡಲಾಗುತ್ತಿದೆ. ಹೈದರಬಾದ್‌ನ ಐತಿಹಾಸಿಕ ತಾಣವನ್ನು ಪ್ರಸಿದ್ಧ ಪ್ರವಾಸೋದ್ಯಮ ತಾಣವನ್ನಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ಹೈದರಾಬಾದ್ ಪ್ರವಾಸೋದ್ಯಮ ಸರ್ಕ್ಯೂಟ್ ಕೆಲಸ ಮಾಡುತ್ತಿದೆ. ಇದನ್ನೂ ಓದಿ: ಭಾರತ ಹಿಂದೂ ರಾಷ್ಟ್ರವಾಗುತ್ತಿದೆ, ಜನರಿಗೆ ಅಭದ್ರತೆ ಕಾಡುತ್ತಿದೆ: ಅನ್ಸಾರಿ

  • ಮಗಳು ಮೊಬೈಲ್ ನೋಡುತ್ತಾಳೆಂದು ಅತ್ಯಾಚಾರ ಮಾಡಿದ ತಂದೆ

    ಮಗಳು ಮೊಬೈಲ್ ನೋಡುತ್ತಾಳೆಂದು ಅತ್ಯಾಚಾರ ಮಾಡಿದ ತಂದೆ

    ಹೈದರಾಬಾದ್: ನನ್ನ ಮಗಳು ಮೊಬೈಲ್ ನೋಡುತ್ತಾ ಹೆಚ್ಚು ಸಮಯವನ್ನು ಕಳೆಯುತ್ತಾಳೆ ಎಂದು ತಂದೆ ಅತ್ಯಾಚಾರ ಮಾಡಿರುವ ಪ್ರಕರಣ ವಿಶಾಖಪಟ್ಟಣಂನ ವೈಜಾಗ್‍ನಲ್ಲಿ ನಡೆದಿದೆ.

    42 ವರ್ಷದ ವ್ಯಕ್ತಿ ಬಂಧಿತ ಆರೋಪಿಯಾಗಿದ್ದಾನೆ. 15 ವರ್ಷದ ಬಾಲಕಿ ತಂದೆಯ ಕೃತ್ಯಕ್ಕೆ ಬಲಿಯಾದ ಸಂತ್ರಸ್ತೆಯಾಗಿದ್ದಾಳೆ. ತಂದೆ ಹಲವು ಬಾರಿ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ವಿಚಾರವನ್ನು ಬಾಲಕಿ ಶಿಕ್ಷಕಿ ಬಳಿ ಹೇಳಿಕೊಂಡಿದ್ದಾಳೆ. ಆಗ ಶಿಕ್ಷಕಿ ಆತನನ್ನು ಕರೆದು ವಿಚಾರಿಸಿದ್ದಾಗ ಆರೋಪಿ ಕ್ಷಮೆ ಕೇಳಿದ್ದಾನೆ. ಶಿಕ್ಷಕಿ, ಬಾಲಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆಗ ಪೊಲೀಸರು ಆತನನ್ನು ಬಂಧಿಸಿದ್ದರು.

    2 ವರ್ಷಗಳ ಹಿಂದೆ ಆರೋಪಿ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದನು. ಈತನ ಪತ್ನ ಕಿಡ್ನಿಯನ್ನು ದಾನ ಮಾಡಿದ್ದಾಳೆ. ಸುಮಾರು 5 ತಿಂಗಳ ನಂತರ ಆಕೆಯ ಅನಾರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಆಕೆ ತವರು ಮನೆಗೆ ಹೋಗಿದ್ದಳು. ಈ ವೇಳೆ ಮಗಳು ತಂದೆಯ ಜೊತೆಗೆ ವಾಸವಾಗಿದ್ದಳು. ಆಗ ಆರೋಪಿ ಮಗಳ ಮೇಳೆ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಆರೋಗ್ಯ ಸೂಚ್ಯಂಕದಲ್ಲಿ ರಾಜ್ಯವನ್ನು ಮುಂಚೂಣಿಗೆ ತರಲು ಅಗತ್ಯ ಕ್ರಮ: ಡಾ.ಕೆ.ಸುಧಾಕರ್

    ನನ್ನ ಮಗಳು ಮೊಬೈಲ್ ನೋಡುತ್ತಾ ಹೆಚ್ಚು ಸಮಯ ಕಳೆಯುತ್ತಾಳೆ. ನಾನು ಅತ್ಯಾಚಾರ ಮಾಡಿದ್ದೇನೆ. ಕೆಲವು ತಿಂಗಳುಗಳಿಂದ ಹಲವು ಬಾರಿ ಅತ್ಯಾಚಾರ ಮಾಡಿದ್ದೇನೆ ಎಂದು ಆರೋಪಿ ತಂದೆ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

  • ವ್ಯಾಯಾಮ ಮಾಡಿದ್ದು ಸಾಕು ಎಂದಿದಕ್ಕೆ ತಾಯಿಯನ್ನೇ ಕೊಲೆಗೈದ ಮಗ

    ವ್ಯಾಯಾಮ ಮಾಡಿದ್ದು ಸಾಕು ಎಂದಿದಕ್ಕೆ ತಾಯಿಯನ್ನೇ ಕೊಲೆಗೈದ ಮಗ

    ಹೈದರಾಬಾದ್: ವ್ಯಾಯಾಮ ಮಾಡಿದ್ದು ಸಾಕು ನಿಲ್ಲಿಸು ಎಂದು ಹೇಳಿದ್ದ ತಾಯಿಯನ್ನು ಹೊಡೆದು ಕೊಂದಿರುವ ಘಟನೆ ಹೈದರಾಬಾದ್‍ನ ಸುಲ್ತಾನ್ ಬಜಾರ್‌ನಲ್ಲಿ ನಡೆದಿದೆ.

    24 ವರ್ಷದ ಕೊಂಡಾ ಸುಧೀರ್ ಕುಮಾರ್ ಆರೋಪಿಯಾಗಿದ್ದಾನೆ. ಕೊಂಡಾ ಪಾಪಮ್ಮ ಮೃತ ತಾಯಿ. ಸುಧೀರ್ ಕುಮಾರ್ ಮಾನಸಿಕವಾಗಿ ಸ್ವಲ್ಪ ಮಟ್ಟಿಗೆ ಅಸ್ವಸ್ಥ ಎನ್ನಲಾಗಿದೆ. ತಾಯಿಯನ್ನು ಹೊಡೆದು ಕೊಂದು ಪೊಲೀಸರ ವಶದಲ್ಲಿದ್ದಾನೆ.

    ನಡೇದಿದ್ದೇನು?: ಜನವರಿ 24ರ ತಡರಾತ್ರಿ 2 ಗಂಟೆ ಹೊತ್ತಿಗೆ ವ್ಯಾಯಾಮ ಮಾಡುತ್ತಿದ್ದನು. ತಾಯಿ ಸುಧೀರ್ ಕುಮಾರ್‌ಗೆ ಮಗನನ್ನು ಮಲಗುವಂತೆ ಹೇಳಿದ್ದಾರೆ. ಆದರೆ ಕೋಪಗೊಂಡ ಆತ ಕೈಯಲ್ಲಿ ಹಿಡಿದಿದ್ದ ಡಂಬಲ್ಸ್‌ನಿಂದ ಆಕೆಗೆ ಹೊಡೆದು ಕೊಂದಿದ್ದಾನೆ.

    ಕೊಂಡಾ ಸುಧೀರ್ ಶಿಕ್ಷಣ ಮುಗಿಸಿದ ಬಳಿಕ ಒಂದು ಫುಡ್ ಡೆಲಿವರಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ವರ್ಷದ ಹಿಂದೆ ಆ ಕೆಲಸವನ್ನೂ ಬಿಟ್ಟು ಮನೆಯಲ್ಲೇ ಇರುತ್ತಿದ್ದ. ಆತನ ಮಾನಸಿಕ ಸ್ಥಿತಿ ಸ್ಥಿಮಿತದಲ್ಲಿಲ್ಲ. ಇತ್ತೀಚೆಗೆ ಕೋಟಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ. ಸುಧೀರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಶೀಘ್ರವೇ ಬಂಧಿಸುತ್ತೇವೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

  • ಡಿವೋರ್ಸ್ ಬಳಿಕ ಧನುಷ್-ಐಶ್ವರ್ಯಾ ಒಂದೇ ಹೊಟೇಲಿನಲ್ಲಿ ವಾಸ!

    ಡಿವೋರ್ಸ್ ಬಳಿಕ ಧನುಷ್-ಐಶ್ವರ್ಯಾ ಒಂದೇ ಹೊಟೇಲಿನಲ್ಲಿ ವಾಸ!

    ಹೈದರಾಬಾದ್: ಕಾಲಿವುಡ್ ನಟ ಧನುಷ್ ಹಾಗೂ ರಜಿನಿಕಾಂತ್ ಪುತ್ರಿ ಐಶ್ವರ್ಯಾ ಪರಸ್ಪರ ದೂರಾಗುತ್ತಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ 18 ವರ್ಷಗಳ ವೈವಾಹಿಕ ಜೀವನ ಅಂತ್ಯಗೊಂಡಂತಾಗಿದೆ. ಆದರೆ ಈ ಜೋಡಿ ಹೈದರಾಬಾದ್‍ನ ಐಷಾರಾಮಿ ಹೋಟೆಲ್‍ವೊಂದರಲ್ಲಿ ಇಬ್ಬರು ತಂಗಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.

    ರಾಮೋಜಿ ಫಿಲ್ಮ್ ಸಿಟಿಯಲ್ಲಿರುವ ಐಷಾರಾಮಿ ಹೋಟೆಲ್‍ವೊಂದರಲ್ಲಿ ಧನುಷ್ ಮತ್ತು ಐಶ್ವರ್ಯಾ ಇದ್ದಾರೆ. ಹಾಗಂದ ಮಾತ್ರಕ್ಕೆ ಇಬ್ಬರು ಒಟ್ಟಿಗೆ ಇದ್ದಾರೆ ಎಂದೇನಲ್ಲ. ವೃತ್ತಿ ಕಾರಣದಿಂದಾಗಿ ಹೈದಾರಾಬಾದ್‍ನಲ್ಲಿ ಬೀಡುಬಿಟ್ಟಿರುವ ಈ ಮಾಜಿ ದಂಪತಿ ಒಂದೇ ಹೋಟೆಲ್‍ನಲ್ಲಿ ಇದ್ದಾರೆ ಅಷ್ಟೇ. ಸದ್ಯ ಇಂಥದ್ದೊಂದು ಮಾಹಿತಿ ಸಿಕ್ಕಿದೆ. ಅಧಿಕೃತವಾಗಿ ವಿಚ್ಛೇದನ ಘೋಷಣೆ ಮಾಡಿರುವ ಇಬ್ಬರು, ಅದನ್ನೇ ಯೋಚಿಸುತ್ತ ಕುಳಿತಿಲ್ಲ. ಬದಲಾಗಿ, ವೃತ್ತಿ ಬದುಕಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

    ಸಾಮಾನ್ಯವಾಗಿ ವಿಚ್ಛೇದನ ಪಡೆದ ನಂತರದಲ್ಲಿ ಒಬ್ಬರ ಮುಖವನ್ನು ಒಬ್ಬರು ನೋಡಿಕೊಳ್ಳೋಕೆ ಇಷ್ಟಪಡುವುದಿಲ್ಲ. ಆದರೆ ಸೆಲೆಬ್ರಿಟಿ ವಲಯದಲ್ಲಿ ಹಾಗಾಗುವುದಿಲ್ಲ. ಒಂದೇ ಇಂಡಸ್ಟ್ರಿಯಲ್ಲಿ ಇದ್ದರೆ ಪರಸ್ಪರ ಭೇಟಿ ಆಗುವ ಸಂದರ್ಭ ಒದಗಿ ಬರುತ್ತದೆ. ಈಗ ಧನುಷ್ ಹಾಗೂ ಐಶ್ವರ್ಯಾಗೆ ಹೀಗೆಯೇ ಆಗಿದೆ ಎನ್ನಲಾಗುತ್ತಿದೆ. ಸದ್ಯ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.

    ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ಅವರು ತಮ್ಮ 18 ವರ್ಷಗಳ ಸುದೀರ್ಘ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ್ದಾರೆ. ಜನವರಿ 17ರಂದು ಅಧಿಕೃತವಾಗಿ ಈ ವಿಚಾರವನ್ನು ಇಬ್ಬರು ಕೂಡ ಘೋಷಣೆ ಮಾಡಿದ್ದರು. ಇದು ಧನುಷ್, ರಜನಿಕಾಂತ್ ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿತ್ತು.ಇದನ್ನೂ ಓದಿ: ನಟ ಧನುಷ್, ಐಶ್ವರ್ಯಾ ಡಿವೋರ್ಸ್- 18 ವರ್ಷದ ವೈವಾಹಿಕ ಸಂಬಂಧಕ್ಕೆ ಗುಡ್‍ಬೈ

    ನಾವಿಬ್ಬರು 18 ವರ್ಷಗಳಿಂದ ಸ್ನೇಹಿತರಾಗಿ, ಪ್ರೇಮಿಗಳಾಗಿ, ದಂಪತಿಯಾಗಿ , ಪೋಷಕರಾಗಿ, ಪರಸ್ಪರ ಒಳ್ಳೆಯದನ್ನು ಬಯಸುತ್ತಾ, ಅರ್ಥಮಾಡಿಕೊಳ್ಳುತ್ತಾ, ಸಹಕರಿಸುತ್ತಾ ಜೀವನ ನಡೆಸಿದ್ದೇವೆ. ಒಬ್ಬರಿಗೆ ಒಬ್ಬರು ಆಸರೆಯಾಗಿದ್ದೇವೆ. ಇಂದು ನಮ್ಮಿಬ್ಬರ ದಾರಿ ಬೇರೆ ಬೇರೆಯಾಗಿದೆ. ನಾನು ಹಾಗೂ ಐಶ್ವರ್ಯಾ ಸಮಯ ತೆಗೆದುಕೊಂಡು ಕೊನೆಗೆ ತೀರ್ಮಾನಿಸಿ ಪರಸ್ಪರ ಒಪ್ಪಿ ದಾಂಪತ್ಯ ಜೀವನದಿಂದ ದೂರಾಗುತ್ತಿದ್ದೇವೆ. ನಮ್ಮ ನಿರ್ಧಾರಕ್ಕೆ ನಿಮ್ಮ ಬೆಂಬಲ ಹಾಗೂ ಸಹಕಾರ ಇರಲಿ ಎಂದು ಆಶಿಸುತ್ತೇನೆ . ದಯಮಾಡಿ ನಮ್ಮ ಖಾಸಗಿ ನಿರ್ಧಾರವನ್ನು ಗೌರವಿಸಿ ಎಂದು ಧನುಷ್ ಟ್ವೀಟ್ ಮಾಡಿದ್ದಾರೆ. ಅದೇ ಪೋಸ್ಟ್ ಅನ್ನು ಹೆಸರು ಬದಲಾಯಿಸಿ, ಐಶ್ವರ್ಯಾ ಕೂಡ ಶೇರ್ ಮಾಡಿಕೊಂಡಿದ್ದರು.

  • ಕತ್ತರಿಯಲ್ಲಿ ಕತ್ತು ಸೀಳಿ ಆತ್ಮಹತ್ಯೆಗೆ ಯತ್ನ- ರಕ್ತಮಡುವಿನಲ್ಲಿ ವ್ಯಕ್ತಿ ಪತ್ತೆ

    ಕತ್ತರಿಯಲ್ಲಿ ಕತ್ತು ಸೀಳಿ ಆತ್ಮಹತ್ಯೆಗೆ ಯತ್ನ- ರಕ್ತಮಡುವಿನಲ್ಲಿ ವ್ಯಕ್ತಿ ಪತ್ತೆ

    ಹೈದರಾಬಾದ್: ಮಾನಸಿಕ ಅಸ್ವಸ್ಥ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿ ವಿಫಲವಾಗಿ ರಕ್ತದ ಮಡುವಿನಲ್ಲಿ ಪತ್ತೆಯಾಗಿರುವ ಘಟನೆ ಹೈದರಾಬಾದ್‍ನ ಹೊರವಲಯದಲ್ಲಿರುವ ಅಬ್ದುಲ್ಲಾಪುರ್‍ಮೆಟ್‍ನ ಜೆಎನ್‍ಆರ್ ಕಾಲೋನಿಯಲ್ಲಿ ನಡೆದಿದೆ.

    ವ್ಯಕ್ತಿಯನ್ನು ನರಸಿಂಹ ಎಂದು ಗುರುತಿಸಲಾಗಿದ್ದು, ಪ್ಲಂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದನು. ಮಂಗಳವಾರ ರಾತ್ರಿ ವ್ಯಕ್ತಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಅವರ ಮನೆಯ ಎದುರುಗಡೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ನೆರೆಹೊರೆಯವರು ಕಂಡಿದ್ದಾರೆ. ಇದನ್ನೂ ಓದಿ: ಚರಣ್‍ಜಿತ್ ಸಿಂಗ್ ಚನ್ನಿ ಅಪ್ರಾಮಾಣಿಕ ವ್ಯಕ್ತಿ: ಅರವಿಂದ್ ಕೇಜ್ರಿವಾಲ್

    POLICE JEEP

    ಮಾನಸಿಕ ಅಸ್ವಸ್ಥ ತನ್ನ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದು, ಆತನ ಪತ್ನಿ ಬೇರೊಬ್ಬರನ್ನು ಮದುವೆಯಾಗಿ ತನ್ನ ಮಕ್ಕಳನ್ನು ಕರೆದುಕೊಂಡು ಹೋಗಿದ್ದಳು. ಇದರಿಂದ ನರಸಿಂಹ ಖಿನ್ನತೆಗೆ ಒಳಗಾಗಿ ಮದ್ಯದ ಅಮಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಲಡಾಖ್‌ನಲ್ಲಿ ಚೀನಾದಿಂದ ಪ್ಯಾಂಗ್ಯಾಂಗ್‌ ಸೇತುವೆ ನಿರ್ಮಾಣ – ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

    ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿರುವುದು ಇದೇ ಮೊದಲಲ್ಲ. ಈ ಮುನ್ನ ತನ್ನ ಸಹೋದರಿಯ ಮನೆಯಲ್ಲಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದ ಮತ್ತು ಚಿಕಿತ್ಸೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಗ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ಕತ್ತರಿ ಹಿಡಿದು ತನ್ನ ಕತ್ತು ಸೀಳಿಕೊಳ್ಳಲು ಪ್ರಯತ್ನಿಸಿದ್ದನು.

  • ಜಲ್ಲಿಕಟ್ಟು ಸ್ಪರ್ಧೆ – 30ಕ್ಕೂ ಹೆಚ್ಚು ಮಂದಿಗೆ ಗಾಯ

    ಜಲ್ಲಿಕಟ್ಟು ಸ್ಪರ್ಧೆ – 30ಕ್ಕೂ ಹೆಚ್ಚು ಮಂದಿಗೆ ಗಾಯ

    ಹೈದರಾಬಾದ್: ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಭಾಗವಹಿಸಿದ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ಜನವರಿ 16 ರಂದು ಭಾನುವಾರ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಜಲ್ಲಿಕಟ್ಟು ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 30 ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಲಾಕ್‍ಡೌನ್ ಬೇಡ- ಸರ್ಕಾರಕ್ಕೆ ಪ್ರತಾಪ್ ಸಿಂಹ ಒತ್ತಾಯ

    ಈ ಕ್ರೀಡೆಯಲ್ಲಿ ಭಾಗವಹಿಸಲು ನೆರೆಯ ನೆಲ್ಲೂರು, ಕಡಪ ಜಿಲ್ಲೆಗಳಿಂದ ಸ್ಪರ್ಧಿಗಳು ಆಗಮಿಸಿದ್ದರು. ಅಲ್ಲದೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ, 500 ಕ್ಕೂ ಹೆಚ್ಚು ಹೋರಿಗಳು ಮತ್ತು ನೂರಾರು ಗ್ರಾಮಸ್ಥರು ಇದರಲ್ಲಿ ಪಾಲ್ಗೊಂಡಿದ್ದರು.

    (ಟಿಡಿಪಿ) ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಪ್ರತಿನಿಧಿಸುವ ಕುಪ್ಪಂ ವಿಧಾನಸಭಾ ಕ್ಷೇತ್ರದ ಗುಂಡುಪಲ್ಲಿ ಮಂಡಲದ ಅಡಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದನ್ನೂ ಓದಿ: Happy Birthday To My Love – ಬಾಲಿವುಡ್ ನಟನಿಗೆ ಸುದೀಪ್ ಪುತ್ರಿ ವಿಶ್

  • ಯಾವುದೇ ನಟಿಗೆ ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಪಾತ್ರ ಜೇಜಮ್ಮ : ಅನುಷ್ಕಾ ಶೆಟ್ಟಿ

    ಯಾವುದೇ ನಟಿಗೆ ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಪಾತ್ರ ಜೇಜಮ್ಮ : ಅನುಷ್ಕಾ ಶೆಟ್ಟಿ

    ಹೈದರಾಬಾದ್: ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಅಭಿನಯದ ಬ್ಲಾಕ್ ಬಾಸ್ಟರ್ ಹಿಟ್ ಅರುಂಧತಿ ಸಿನಿಮಾ ರಿಲೀಸ್ ಆಗಿ ಜನವರಿ ೧೬ಕ್ಕೆ 13 ವರ್ಷ ಕಳೆದಿದ್ದು, ಈ ಚಿತ್ರದ ಪೋಸ್ಟ್‌ವೊಂದನ್ನು ಅನುಷ್ಕಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

    ಅನುಷ್ಕಾ ಶೆಟ್ಟಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಅರುಂಧತಿ ಸಿನಿಮಾದ ಫೋಟೋವೊಂದನ್ನು ಹಂಚಿಕೊಂಡಿದ್ದು, ಫೋಟೋದಲ್ಲಿ ಅನುಷ್ಕಾ ಕತ್ತಿ ಹಿಡಿದು ಖಡಕ್ ಲುಕ್ ನೀಡಿರುವುದನ್ನು ಕಾಣಬಹುದಾಗಿದೆ. ಈ ಫೋಟೋ ಜೊತೆಗೆ ಅರುಧಂತಿ ಸಿನಿಮಾ ಬಿಡುಗಡೆಗೊಂಡು 13 ವರ್ಷ ಕಳೆದಿದೆ. ಜೇಜಮ್ಮ – ಯಾವುದೇ ನಟಿಗೆ ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಪಾತ್ರ ಇದಾಗಿದ್ದು, ನಾನು ಬಹಳ ಪುಣ್ಯಮಾಡಿದ್ದೇನೆ. ಈ ಸಿನಿಮಾ ನೀಡಿದ್ದಕ್ಕಾಗಿ ಕೋಡಿ ರಾಮಕೃಷ್ಣ, ಶ್ಯಾಮ್ ಪ್ರಸಾದ್ ರೆಡ್ಡಿ ಗುರು ಅವರಿಗೆ ಮತ್ತು ಇಡೀ ಚಿತ್ರತಂಡಕ್ಕೆ ಧನ್ಯವಾದಗಳು. ಅದರಲ್ಲಿಯೂ ಅಭಿನಮಾನಿಗಳು ನೀಡಿದ ಬೆಂಬಲ ಹಾಗೂ ಪ್ರೀತಿಗೆ ಬಹಳ ಧನ್ಯವಾದಗಳು. ಜೊತೆಗೆ ಇದು ನನ್ನ ಹೃದಯಕ್ಕೆ ಬಹಳ ಹತ್ತಿರವಾದ ಸಿನಿಮಾ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: Happy Birthday To My Love – ಬಾಲಿವುಡ್ ನಟನಿಗೆ ಸುದೀಪ್ ಪುತ್ರಿ ವಿಶ್

    2009ರಲ್ಲಿ ಹಾರರ್, ಥ್ರಿಲ್ಲರ್ ಸಿನಿಮಾ ಅರುಂಧತಿ ಟಾಲಿವುಡ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಈ ಸಿನಿಮಾಕ್ಕೆ ನಿರ್ದೇಶಕ ಕೋಡಿ ರಾಮಕೃಷ್ಣ ಆ್ಯಕ್ಷನ್ ಕಟ್ ಹೇಳಿದ್ದರು ಮತ್ತು ಶ್ಯಾಮ್ ಪ್ರಸಾದ್ ರೆಡ್ಡಿ ಅವರ ಬ್ಯಾನರ್ ಅಡಿ ಚಿತ್ರ ಸೊಗಸಾಗಿ ಮೂಡಿಬಂದಿತ್ತು. ಸೋನು ಸೂದ್, ದೀಪಕ್, ಸಯಾಜಿ ಶಿಂಧೆ, ಮನೋರಮಾ ಮತ್ತು ಕೈಕಲಾ ಸತ್ಯನಾರಾಯಣ ಸೇರಿದಂತೆ ಹಲವಾರು ಕಲಾವಿದರೂ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾಕ್ಕೆ ಕೋಟಿ ಹಿನ್ನೆಲೆ ಸಂಗೀತ ಸಂಯೋಜಿಸಿದ್ದು, ಕೆ.ಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣವಿತ್ತು. ಇದನ್ನೂ ಓದಿ: ಪಂಡಿತ್ ಬಿರ್ಜೂ ಮಹಾರಾಜ್ ನನ್ನ ಗುರುಗಳು ಮಾತ್ರವಲ್ಲ, ಸ್ನೇಹಿತರು ಹೌದು: ಮಾಧುರಿ ದೀಕ್ಷಿತ್

    ಅನುಷ್ಕಾ ಶೆಟ್ಟಿ ಅದ್ಭುತವಾಗಿ ಅಭಿನಯಿಸಿರುವ ಅರುಂಧತಿ ಸಿನಿಮಾಕ್ಕೆ ಎರಡು ಫಿಲ್ಮ್‍ಫೇರ್ ಪ್ರಶಸ್ತಿಗಳು ಲಭಿಸಿದ್ದು, ಎಲ್ಲೆಡೆ ಪ್ರಶಂಸೆ ಗಿಟ್ಟಿಸಿಕೊಂಡಿತ್ತು. 2014ರಲ್ಲಿ ಅರುಂಧತಿ ಚಿತ್ರವನ್ನು ಬಂಗಾಳಿ ಭಾಷೆಯಲ್ಲಿ ರೀಮೇಕ್ ಸಹ ಮಾಡಲಾಗಿತ್ತು.