Tag: Hyderabad

  • ಆಫ್‍ಲೈನ್ ಕ್ಲಾಸ್‍ಗೆ ಹೋಗು ಅಂದಿದ್ದಕ್ಕೆ ಹುಡುಗಿ ಆತ್ಮಹತ್ಯೆ

    ಆಫ್‍ಲೈನ್ ಕ್ಲಾಸ್‍ಗೆ ಹೋಗು ಅಂದಿದ್ದಕ್ಕೆ ಹುಡುಗಿ ಆತ್ಮಹತ್ಯೆ

    ಹೈದರಾಬಾದ್: ಆಫ್‍ಲೈನ್ ತರಗತಿಗೆ ಹಾಜರಾಗುವಂತೆ ಪೋಷಕರು ಒತ್ತಾಯಿಸಿದ್ದಕ್ಕೆ ಹುಡುಗಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

    ಆಂಧ್ರಪ್ರದೇಶದ ವಿಜಯನಗರದ ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ನಾಲೆಡ್ಜ್ ಟೆಕ್ನಾಲಜೀಸ್‍ನಲ್ಲಿ (ಐಐಐಟಿ-ಶ್ರೀಕಾಕುಲಂ) ಓದುತ್ತಿದ್ದ ಹುಡುಗಿ ಫೆಬ್ರವರಿ 16 ರಂದು ತನ್ನ ಹಾಸ್ಟೆಲ್ ಕೋಣೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬಾಲಕಿ ಕೊಠಡಿ ಒಳಗಿನಿಂದ ಬಾಗಿಲು ಲಾಕ್ ಆಗಿದ್ದನ್ನು ಗಮನಿಸಿದ ಕೆಲವು ಹುಡುಗಿಯರು ನಂತರ ಕಾಲೇಜು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

    ಕಾಲೇಜಿನ ಅಧಿಕಾರಿಗಳು ಬಾಗಿಲು ಒಡೆದು ನೋಡಿದಾಗ ಹುಡುಗಿ ನೇಣಿಗೆ ಶರಣಾಗಿರುವುದು ಕಂಡು ಬಂದಿದೆ. ಆಕೆಯ ಇಚ್ಛೆಯ ವಿರುದ್ಧ ಬಾಲಕಿಗೆ ಆಫ್‍ಲೈನ್ ತರಗತಿಗೆ ಹಾಜರಾಗುವಂತೆ ಪೋಷಕರು ಒತ್ತಾಯಿಸಿದ್ದರಿಂದ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಇದನ್ನೂ ಓದಿ: ನಮಗೆ ಆಜಾದಿ ಬೇಕು ಅಂತಾ ಘೋಷಣೆ ಕೂಗ್ತಿಯಾ? ನಿನ್ನನ್ನು ಅಟ್ಟಾಡಿಸಿ ಹೊಡೀತಿವಿ: ಸೀಮಾ ಇನಾಂದಾರ್‌ಗೆ ಜೀವ ಬೆದರಿಕೆ

    ಮೃತ ದುರ್ದೈವಿಯನ್ನು ಕೊಂಡಪಲ್ಲಿ ಮನೀಶಾ ಅಂಜು ಎಂದು ಗುರುತಿಸಲಾಗಿದ್ದು, ಈಕೆ ವಿಜಯನಗರದ ನೆಲ್ಲಿಮಾರ್ಲ ನಿವಾಸಿಯಾಗಿದ್ದಾಳೆ. ಐಐಟಿ-ಶ್ರೀಕಾಕುಲಂನ ಮೊದಲ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಶೈಕ್ಷಣಿಕ ವರ್ಷ ಪ್ರಾರಂಭವಾದಾಗಿನಿಂದ ಆನ್‍ಲೈನ್ ಕ್ಲಾಸ್‍ಗೆ ಹಾಜರಾಗುತ್ತಿದ್ದಳು. ಆದರೆ ಕೋವಿಡ್-19 ಪ್ರಕರಣಗಳು ಕಡಿಮೆಯಾದ ಬಳಿಕ, ಕಾಲೇಜು ಅಧಿಕಾರಿಗಳು ಆನ್‍ಲೈನ್ ಕ್ಲಾಸ್ ಮುಂದುವರಿಸಬಹುದು ಅಥವಾ ಆಫ್‍ಲೈನ್ ಕ್ಲಾಸ್‍ಗೆ ಬರಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದ್ದರು. ಹೀಗಾಗಿ ಬಾಲಕಿ ಆನ್‍ಲೈನ್ ಕ್ಲಾಸ್ ಮುಂದುವರೆಸಲು ಬಯಸಿದರೂ, ಆಕೆಯ ಪೋಷಕರು ಆಫ್‍ಲೈನ್ ಕ್ಲಾಸ್‍ಗೆ ಹಾಜರಾಗುವಂತೆ ಒತ್ತಾಯಿಸಿದ್ದಾರೆ.

    POLICE JEEP

    ಇದರಿಂದ ಪೋಷಕರ ವಿರುದ್ಧ ಕೋಪಗೊಂಡ ಹುಡುಗಿ ತನ್ನ ಮೊಬೈಲ್ ಫೋನ್ ಅನ್ನು ಬಸ್ಸಿನಲ್ಲಿ ಎಸೆದಿದ್ದಳು. ಹೀಗಾಗಿ ಮರುದಿನ ಪೋಷಕರು ಆಕೆಗೆ ಹೊಸ ಫೋನ್ ನೀಡಲು ಖರೀದಿದ್ದರು. ಆದರೆ ಅಷ್ಟೋತ್ತಿಗೆ ಹುಡುಗಿ ನೇಣಿಗೆ ಶರಣಾಗಿದ್ದಾಳೆ. ಸದ್ಯ ಈ ಸಂಬಂಧ ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‍ಪಿಸಿ) ಕಲಂ 174 (ಅನುಮಾನಾಸ್ಪದ ಸಾವು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಚ್ಚರ್ಲ ಸಬ್‌ಇನ್ಸ್‌ಪೆಕ್ಟರ್‌ ಕೆ. ರಾಮು ತಿಳಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಂ ವೇಶ ಧರಿಸಿ ಅನುಮಾಸ್ಪದ ರೀತಿಯಲ್ಲಿ ಓಡಾಟ: ಐವರನ್ನು ವಶಕ್ಕೆ ಪಡೆದ ಪೊಲೀಸರು

  • ಪವನ್ ಕಲ್ಯಾಣ್ ಸಿನಿಮಾದ ನೋಡಲು ಹಣ ನೀಡದ್ದಕ್ಕೆ 11ರ ಬಾಲಕ ಆತ್ಮಹತ್ಯೆ

    ಪವನ್ ಕಲ್ಯಾಣ್ ಸಿನಿಮಾದ ನೋಡಲು ಹಣ ನೀಡದ್ದಕ್ಕೆ 11ರ ಬಾಲಕ ಆತ್ಮಹತ್ಯೆ

    ಹೈದರಾಬಾದ್: ಟಾಲಿವುಡ್ ಪವರ್ ಸ್ಟಾರ್ ನಟ ಪವನ್ ಕಲ್ಯಾಣ್ ಅಭಿನಯದ ಬಹುನಿರೀಕ್ಷಿತ ಭೀಮ್ಲಾ ನಾಯಕ್ ಸಿನಿಮಾ ಟಿಕೆಟ್ ಖರೀದಿಸಲು ಪೋಷಕರು ಹಣ ನೀಡಲು ನಿರಾಕರಿಸಿದ್ದಕ್ಕೆ 11 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ಪಿ. ನವದೀಪ್ ಎಂದು ಗುರುತಿಸಲಾಗಿದ್ದು, ಈತ 8 ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ. ನವದೀಪ್ ನಟ ಪವನ್ ಕಲ್ಯಾಣ್ ಅವರ ದೊಡ್ಡ ಅಭಿಮಾನಿಯಾಗಿದ್ದು, ತನ್ನ ಸ್ನೇಹಿತರೊಂದಿಗೆ ಸಿನಿಮಾ ವೀಕ್ಷಿಸಲು ಯೋಜನೆ ರೂಪಿಸಿದ್ದ. ಇದನ್ನೂ ಓದಿ: ಕೆಂಪುಕೋಟೆ ಮೇಲೆ ಸಿಖ್‌ ಬಾವುಟ ಹಾರಿಸಿದ್ದ ದೀಪ್ ಸಿಧು ರಸ್ತೆ ಅಪಘಾತದಲ್ಲಿ ಸಾವು

    ಫೆಬ್ರವರಿ 25 ರ ಸೋಮವಾರ ಭೀಮ್ಲಾ ನಾಯಕ್ ಸಿನಿಮಾ ಬಿಡುಗಡೆಯಾಗುತ್ತಿದ್ದು, ಸಿನಿಮಾ ಬಿಡುಗಡೆಗೂ ಮುನ್ನವೇ ಟಿಕೆಟ್ ಬುಕ್ ಮಾಡಲು ತನ್ನ ತಂದೆಗೆ 300 ರೂ. ಹಣವನ್ನು ನೀಡಲು ಕೇಳಿದ್ದಾನೆ. ಆದರೆ ಅವರ ತಂದೆ ಎಷ್ಟೇ ಕೇಳಿದರೂ ಹಣ ನೀಡಲು ನಿರಾಕರಿಸಿದ್ದಾರೆ. ಇದರಿಂದ ಮನನೊಂದ ಬಾಲಕ ಮನೆಯ ಬಾಲ್ಕಾನಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ಹಿರಿಯ ಗಾಯಕ ಬಪ್ಪಿ ಲಹರಿ ಇನ್ನಿಲ್ಲ

  • ರಾಹುಲ್ ವಿರುದ್ಧ ಹಿಮಂತ ಬಿಸ್ವಾ ವಿವಾದಾತ್ಮಕ ಹೇಳಿಕೆ – ತೆಲಂಗಾಣ ಕಾಂಗ್ರೆಸ್ ನಾಯಕರಿಂದ ದೂರು

    ರಾಹುಲ್ ವಿರುದ್ಧ ಹಿಮಂತ ಬಿಸ್ವಾ ವಿವಾದಾತ್ಮಕ ಹೇಳಿಕೆ – ತೆಲಂಗಾಣ ಕಾಂಗ್ರೆಸ್ ನಾಯಕರಿಂದ ದೂರು

    ಹೈದರಾಬಾದ್: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಅವರು ನೀಡಿದ್ದ ಹೇಳಿಕೆ ಕುರಿತಂತೆ ತೆಲಂಗಾಣ ಕಾಂಗ್ರೆಸ್ ಘಟಕದ ಮುಖ್ಯಸ್ಥ ಮತ್ತು ಸಂಸದ ರೇವಂತ್ ರೆಡ್ಡಿ ಸೇರಿದಂತೆ ತೆಲಂಗಾಣದ ಕಾಂಗ್ರೆಸ್ ಸಮಿತಿ (ಟಿಪಿಸಿಸಿ)ಯ ಇತರ ಹಿರಿಯ ನಾಯಕರು ದೂರು ನೀಡಿದ್ದಾರೆ.

    ಫೆಬ್ರವರಿ 11ರಂದು ಉತ್ತರಾಖಂಡದಲ್ಲಿ ನಡೆಸಿದ ರ್‍ಯಾಲಿ ವೇಳೆ ಮಾತನಾಡಿದ ಹಿಮಂತಾ ಬಿಸ್ವಾ ಅವರು, 2016ರ ಸೆಪ್ಟೆಂಬರ್‌ನಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಕುರಿತಂತೆ ರಾಹುಲ್ ಗಾಂಧಿ ಅವರು ಪುರಾವೆಯನ್ನು ಕೇಳಿದ್ದರು. ಅದೇ ರೀತಿ ರಾಹುಲ್ ಗಾಂಧಿ ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಮಗ ಎಂಬುವುದಕ್ಕೆ ಬಿಜೆಪಿ ಏನಾದರೂ ಪುರಾವೆ ಕೇಳಿದೆಯೇ ಎಂದು ಪ್ರಶ್ನಿಸಿದ್ದರು. ಈ ಹೇಳಿಕೆ ಕುರಿತಂತೆ ರಾಜ್ಯಾದ್ಯಂತ ಕಾಂಗ್ರೆಸ್‍ನಿಂದ ಹಲವಾರು ದೂರುಗಳನ್ನು ದಾಖಲಿಸಲಾಗಿದೆ ಮತ್ತು ದೂರಿನಲ್ಲಿ ರಾಹುಲ್ ಗಾಂಧಿಯವರ ಗೌರವಾನ್ವಿತ ಕುಟುಂಬದ ಹಿನ್ನೆಲೆಯನ್ನು ಉಲ್ಲೇಖಿಸಲಾಗಿದೆ.

    RAHUL GANDHI

    ರಾಹುಲ್ ಗಾಂಧಿ ಅವರ ಮುತ್ತಜ್ಜರಾದ ಮೋತಿಲಾಲ್ ನೆಹರು ಮತ್ತು ಪಂಡಿತ್ ಜವಾಹರಲಾಲ್ ನೆಹರು ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಮತ್ತು ದೇಶಕ್ಕಾಗಿ ಹಲವಾರು ವರ್ಷಗಳ ಜೈಲುವಾಸ ಮಾಡಿದ್ದಾರೆ. ಅವರ ಮುತ್ತಜ್ಜ ಪಂಡಿತ್ ಜವಾಹರಲಾಲ್ ನೆಹರು, ಅಜ್ಜಿ ಇಂದಿರಾ ಗಾಂಧಿ ಮತ್ತು ಅವರ ತಂದೆ ರಾಜೀವ್ ಗಾಂಧಿ ಅವರು ಪ್ರಧಾನ ಮಂತ್ರಿಗಳಾಗಿ ಈ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ ಎಂದು ದೂರಿನಲ್ಲಿ ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ. ಇದನ್ನೂ ಓದಿ: ಸಿಎಂ ಕೆಸಿಆರ್‌ಗೆ ಸರ್ಜಿಕಲ್ ಸ್ಟ್ರೈಕ್ ವೀಡಿಯೋ ಪುರಾವೆ ನೀಡಿದ ಅಸ್ಸಾಂ ಸಿಎಂ

    ರಾಹುಲ್ ಗಾಂಧಿ ಅವರ ತಂದೆ ರಾಜೀವ್ ಗಾಂಧಿ ಅವರು 1990ರ ಅಕ್ಟೋಬರ್ 19ರಂದು ಐತಿಹಾಸಿಕ ಚಾರ್ಮಿನಾರ್‍ನಿಂದ ಹೈದರಾಬಾದ್ ಮತ್ತು ಸಿಕಂದರಾಬಾದ್ ಅವಳಿ ನಗರಗಳಲ್ಲಿ ತಮ್ಮ ಸದ್ಭಾವನಾ ಯಾತ್ರೆಯನ್ನು ಪ್ರಾರಂಭಿಸಿದ್ದರು. 2018ರ ಐತಿಹಾಸಿಕ ಚಾರ್‌ಮಿನಾರ್‌ನಲ್ಲಿ ನಡೆದ ಯಾತ್ರಾ ಸ್ಮರಣಾರ್ಥ ಸಭೆಯಲ್ಲಿ ರಾಹುಲ್ ಗಾಂಧಿ ಕೂಡ ರಾಜೀವ್ ಗಾಂಧಿ ಸದ್ಭವನದಲ್ಲಿ ಭಾಗವಹಿಸಿದ್ದರು.

    ಇದೀಗ ಅಸ್ಸಾಂ ಮುಖ್ಯಮಂತ್ರಿ ಅವರ ಹೇಳಿಕೆಗಳು ತಮಗೆ ಅತೀವ ನೋವನ್ನುಂಟು ಮಾಡಿದೆ ಹಾಗೂ ಹಾಗಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153-ಎ, 505 (2) ಮತ್ತು 294 ರ ಅಡಿಯಲ್ಲಿ ಹಿಮಂತ ಬಿಸ್ವಾ ಶರ್ಮಾ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಟ್ವೀಟ್ ವಿರುದ್ಧ ಒಂದು ಸಾವಿರಕ್ಕೂ ಹೆಚ್ಚು ಕೇಸ್ ದಾಖಲು

    ಅಸ್ಸಾಂ ಸಿಎಂ ಮಹಿಳೆಯರ ಅವಹೇಳನಕಾರಿ ಹೇಳಿಕೆಗಳಿಗೆ ಪ್ರಧಾನಿ ಮೋದಿ, ಗೃಹ ಸಚಿವ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಪ್ರತಿಕ್ರಿಯಿಸಬೇಕು ಮತ್ತು ಅವರನ್ನು ತಕ್ಷಣವೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

  • ಹುಟ್ಟುಹಬ್ಬದಂದೇ ಬಿಸಿ ಸಾಂಬಾರ್ ಪಾತ್ರೆಗೆ ಬಿದ್ದು ಬಾಲಕಿ ಸಾವು

    ಹುಟ್ಟುಹಬ್ಬದಂದೇ ಬಿಸಿ ಸಾಂಬಾರ್ ಪಾತ್ರೆಗೆ ಬಿದ್ದು ಬಾಲಕಿ ಸಾವು

    ಹೈದರಾಬಾದ್: ಆಕಸ್ಮಿಕವಾಗಿ ಬಿಸಿ ಸಾಂಬಾರ್ ಹೊಂದಿರುವ ಪಾತ್ರೆಗೆ ಬಿದ್ದು ಎರಡು ವರ್ಷದ ಬಾಲಕಿ ಸಾವನ್ನಪ್ಪಿರುವ ದುರಂತ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಕಲಗಾರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

    ಫೆಬ್ರವರಿ 13ರಂದು ಈ ಘಟನೆ ನಡೆದಿದ್ದು, ಶಿವ ಮತ್ತು ಭಾನುಮತ್ ಅವರ ಪುತ್ರಿ ತೇಜಸ್ವಿ ತನ್ನ ಹುಟ್ಟುಹಬ್ಬದ ವೇಳೆ ಮನೆಯ ಮುಂದೆ ಆಟವಾಡುತ್ತಿದ್ದಳು. ಆಕೆಯ ಪೋಷಕರು ಅತಿಥಿಗಳನ್ನು ಭೇಟಿ ಮಾಡಲು ಮತ್ತು ಊಟ ಬಡಿಸಲು ಹೋದಾಗ, ತೇಜಸ್ವಿ ಅಡುಗೆಮನೆಗೆ ಹೋಗಿ ಕುರ್ಚಿ ಮೇಲೆ ಹತ್ತಿ ಆಟವಾಡುತ್ತಿದ್ದ ವೇಳೆ ಬಿಸಿ ಸಾಂಬಾರ್ ತುಂಬಿದ ಪಾತ್ರೆಯಲ್ಲಿ ಬಿದ್ದಿದ್ದಾಳೆ. ಇದನ್ನೂ ಓದಿ: ಧರ್ಮ ಮುಖ್ಯ ಎಂದು ಪರೀಕ್ಷೆಯನ್ನೇ ಬಹಿಷ್ಕರಿಸಿದ ಶಿವಮೊಗ್ಗ ವಿದ್ಯಾರ್ಥಿನಿಯರು

    ತಕ್ಷಣ ತೇಜಸ್ವಿಯನ್ನು ಪೋಷಕರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಂತರ ವೈದ್ಯರ ಶಿಫಾರಸಿನ ಮೇರೆಗೆ ಆಕೆಯನ್ನು ವಿಜಯವಾಡಕ್ಕೆ ಸ್ಥಳಾಂತರಿಸಲಾಯಿತು. ಆದರೆ ವಿಪರೀತ ಸುಟ್ಟ ಗಾಯಗೊಂಡಿದ್ದರಿಂದ ತೇಜಸ್ವಿ ಸಾವನ್ನಪ್ಪಿದ್ದಾಳೆ. ಸದ್ಯ ಪೊಲೀಸರು ಈ ಘಟನೆ ಸಂಬಂಧ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹಿಜಬ್‌ ನಮಗೆ ಮುಖ್ಯ – ಕಲಬುರಗಿ ಉರ್ದು ಶಾಲೆಗೆ ಗೈರಾದ ವಿದ್ಯಾರ್ಥಿನಿಯರು

  • ಶೂಟಿಂಗ್‍ಗಾಗಿ ರಾಜಮಂಡ್ರಿಗೆ ಬಂದಿಳಿದ ರಾಮ್ ಚರಣ್ – ಅಭಿಮಾನಿಗಳಿಂದ ನೂಕು ನುಗ್ಗಲು

    ಶೂಟಿಂಗ್‍ಗಾಗಿ ರಾಜಮಂಡ್ರಿಗೆ ಬಂದಿಳಿದ ರಾಮ್ ಚರಣ್ – ಅಭಿಮಾನಿಗಳಿಂದ ನೂಕು ನುಗ್ಗಲು

    ಹೈದರಾಬಾದ್: ಆರ್‌ಸಿ 15 ಚಿತ್ರೀಕರಣಕ್ಕಾಗಿ ತೆಲುಗಿನ ಖ್ಯಾತ ನಟ ರಾಮ್ ಚರಣ್ ಅವರು ಆಂಧ್ರಪ್ರದೇಶದ ರಾಜಮಂಡ್ರಿಯ ರಾಜಾಜಿನಗರಕ್ಕೆ ಬಂದಿಳಿದ ತಕ್ಷಣ ನೂರಾರು ಅಭಿಮಾನಿಗಳು ವಿಮಾನ ನಿಲ್ದಾಣದ ಹೊರಗೆ ಜಮಾಯಿಸಿ ಚರಣ್ ಅವರನ್ನು ಕಾಣಲು ಮುಗಿಬಿದ್ದಿದ್ದಾರೆ.

    ರಾಮ್ ಚರಣ್ ತಮ್ಮ ಮುಂಬರುವ ಚಿತ್ರ ಆರ್‍ಆರ್‍ಆರ್ ಬಿಡುಗಡೆಗಾಗಿ ಈಗಾಗಲೇ ಕಾತುರದಿಂದ ಕಾಯುತ್ತಿದ್ದಾರೆ. ಎಸ್ ಎಸ್ ರಾಜಮೌಳಿ ನಿರ್ದೇಶನದ ಈ ಚಿತ್ರವು ಮಾರ್ಚ್ 25 ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ತೆಲುಗು ಅಲ್ಲದೆ, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲೂ ಸಹ ಚಿತ್ರವು ಬಿಡುಗಡೆಯಾಗಲಿದೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಗುಡ್‍ಬೈ ಹೇಳಿದ ಬಾಲಿವುಡ್ ನಟಿ ರಾಖಿ ಸಾವಂತ್

     

    View this post on Instagram

     

    A post shared by Kamlesh Nand (work) (@artistrybuzz_)

    ಫೆಬ್ರವರಿ 13 ರಂದು, ರಾಮ್ ಚರಣ್ ಮತ್ತು ಅವರ ತಂಡವು ಆರ್‌ಸಿ 15 ರ ಶೂಟಿಂಗ್‍ಗಾಗಿ ರಾಜಮಂಡ್ರಿ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಇದನ್ನೂ ಗಮನಿಸಿದ ಅಭಿಮಾನಿಗಳು ಚರಣ್ ಅವರ ದರ್ಶನ ಪಡೆಯಲು ವಿಮಾನ ನಿಲ್ದಾಣದ ಹೊರಗೆ ಕಾಯುತ್ತಿದ್ದರು.

    ವಿಮಾನ ನಿಲ್ದಾಣದಿಂದ ಅವರು ರಾಜಮಂಡ್ರಿಯ ಪ್ರತಿಷ್ಠಿತ ಹೋಟೆಲ್‍ವೊಂದಕ್ಕೆ ತೆರಳುತ್ತಿದ್ದಾಗ ಅಭಿಮಾನಿಗಳು ರಸ್ತೆಯ ಎರಡೂ ಬದಿಯಲ್ಲಿ ಸಾಲುಗಟ್ಟಿ ನಿಂತು ಚರಣ್‍ಗೆ ಆತ್ಮೀಯ ಸ್ವಾಗತ ಕೋರಿದ್ದಾರೆ. ಈ ಸಂದರ್ಭದಲ್ಲಿ ರಾಮ್ ಚರಣ್ ಬೌನ್ಸರ್‌ಗಳು ಅಭಿಮಾನಿಗಳನ್ನು ಚದುರಿಸಲು ಹರ ಸಾಹಸ ಪಟ್ಟಿದ್ದಾರೆ. ಇದನ್ನೂ ಓದಿ: ಹಿರಿಯ ನಟ ರಾಜೇಶ್ ಸ್ಥಿತಿ ಗಂಭೀರ

    ಆರ್‌ಸಿ 15 ರಾಜಕೀಯಕ್ಕೆ ಸಂಬಂಧಪಟ್ಟ ಚಿತ್ರವಾಗಿದೆ. ಈ ಚಿತ್ರವನ್ನು ಶಂಕರ್ ಅವರು ನಿರ್ದೇಶಿಸಿದ್ದು, ಚಿತ್ರಕ್ಕೆ ಕಾರ್ತಿಕ್ ಸುಬ್ಬರಾಜ್ ಕಥೆ ಬರೆದಿದ್ದಾರೆ.

    ಇತ್ತೀಚಿನ ಸಂದರ್ಶನವೊಂದರಲ್ಲಿ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಅವರು ಚಿತ್ರವನ್ನು ಉದ್ದೇಶಿಸಿ ಮಾತನಾಡಿದ್ದು, ನಾನು ಈ ರಾಜಕೀಯ ಕಥೆಯನ್ನು ಹಲವು ವರ್ಷಗಳ ಹಿಂದೆ ಬರೆದಿದ್ದೇನೆ. ನನಗೆ ಬಹಳ ಹಿಂದೆಯೇ ಶಂಕರ್ ಸರ್ ಈ ಚಿತ್ರವನ್ನು ನಿರ್ದೇಶಿಸಿದರೆ ಉತ್ತಮವಾಗಿರುತ್ತದೆ ಅಂತ ಅನಿಸಿತ್ತು. ಹೀಗಾಗಿ ನಾನು ಈ ಕಥೆಯನ್ನು ಅವರಿಗೆ ನೀಡಿದಾಗ ಅವರು ಅದನ್ನು ಇಷ್ಟಪಟ್ಟರು. ಅವರು ಈಗಾಗಲೇ ಈ ಕಥೆಯನ್ನು ನಿರ್ದೇಶಿಸಲು ಒಪ್ಪಿಕೊಂಡಿದ್ದಾರೆ. ನಾನು ಅವರೊಂದಿಗೆ ಈ ಚಿತ್ರದಲ್ಲಿ ಕೆಲಸ ಮಾಡಲು ಅತ್ಯಂತ ಸಂತೋಷ ಮತ್ತು ಹೆಮ್ಮೆಯೆನಿಸುತ್ತದೆ.

    ರಾಮ್ ಚರಣ್ ಹೊರತಾಗಿ, ಆರ್‌ಸಿ 15 ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ಅಂಜಲಿ, ಜಯರಾಮ್, ಸುನಿಲ್, ಶ್ರೀಕಾಂತ್ ಮತ್ತು ನವೀನ್ ಚಂದ್ರ ನಟಿಸಿದ್ದಾರೆ. ಛಾಯಾಗ್ರಾಹಕ ತಿರುರು, ಸಂಕಲನಕಾರ ಶಮೀರ್ ಮುಹಮ್ಮದ್ ಮತ್ತು ಸಂಗೀತ ಸಂಯೋಜಕ ಎಸ್ ಥಮನ್ ತಾಂತ್ರಿಕ ತಂಡದ ಭಾಗವಾಗಿದ್ದಾರೆ.

  • ಬೀದಿ ನಾಯಿಯನ್ನೂ ಬಿಡದ ಕಾಮುಕ – ಸಿಸಿಟಿವಿಯಲ್ಲಿ ರೆಕಾರ್ಡ್!

    ಬೀದಿ ನಾಯಿಯನ್ನೂ ಬಿಡದ ಕಾಮುಕ – ಸಿಸಿಟಿವಿಯಲ್ಲಿ ರೆಕಾರ್ಡ್!

    ಹೈದರಾಬಾದ್: ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂದು ಹೇಳುತ್ತಿರುವಾಗ ಇಲ್ಲೊಬ್ಬ ಕಾಮುಕ ಬೀದಿ ನಾಯಿಯನ್ನೂ ಬಿಡದೆ ಅತ್ಯಾಚಾರ ಮಾಡಿರುವ ಆಘಾತಕಾರಿ ಘಟನೆ ತೆಲಂಗಾಣದ ಹೈದರಾಬಾದ್‍ನಲ್ಲಿ ಬೆಳಕಿಗೆ ಬಂದಿದೆ. ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿಯೂ ಸೆರೆಯಾಗಿದೆ.

    58 ವರ್ಷದ ವ್ಯಕ್ತಿಯೊಬ್ಬ ಬೀದಿ ನಾಯಿಯ ಮೇಲೆ ಅತ್ಯಾಚಾರವೆಸಗಿದ್ದು, ಈ ಹೇಯ ಕೃತ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಪರಿಣಾಮ ವೀಡಿಯೋ ನೋಡಿದ ಪ್ರಾಣಿ ಪ್ರೇಮಿಯೊಬ್ಬ ಆರೋಪಿ ವಿರುದ್ಧ ದೂರು ಕೊಟ್ಟಿದ್ದಾರೆ. ಈ ಘಟನೆ ಹೈದರಾಬಾದ್‍ನ ನಲ್ಲಕುಂಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸುದ್ದಿ ಬಹಿರಂಗವಾದಾಗಿನಿಂದ ನಲ್ಲಕುಂಟಾದಲ್ಲಿ ಸಂಚಲನ ಮೂಡಿದೆ. ಇದನ್ನೂ ಓದಿ: 7.47 ಕೋಟಿ ರೂ.ಗೆ ವಿಮೆ ಮಾಡಿಸಿದ್ದ ಪೇಂಟಿಂಗ್ ನಾಶ ಮಾಡಿದ ಸೆಕ್ಯೂರಿಟಿ!

    RAPE CASE

    ಪೊಲೀಸರಿಗೆ ದೂರು ನೀಡಿದ ಪ್ರಾಣಿ ಪ್ರೇಮಿ, ಈ ರೀತಿಯ ವ್ಯಕ್ತಿಗಳು ಸಮಾಜದಲ್ಲಿ ಇದ್ರೆ, ಮಹಿಳೆಯರಿಗೂ ಸುರಕ್ಷಿತವಲ್ಲ. ಈ ರೀತಿ ಹೇಯ ಕೃತ್ಯ ಮಾಡುವವರು ಜೈಲಿನಲ್ಲಿರಬೇಕು. ಇಂಥವರು ಹೊರಗೆ ಉಳಿಯುವುದು ಅಪಾಯಕಾರಿ ಎಂದು ತಿಳಿಸಿದ್ದು, ಆರೋಪಿಯನ್ನ ಅರೆಸ್ಟ್ ಮಾಡುವಂತೆ ಪೊಲೀಸರಿಗೆ ಒತ್ತಡ ಹೇರಲಾಗುತ್ತಿದೆ.

    ತನಿಖೆಯಲ್ಲಿ ತಿಳಿದಿದ್ದೇನು?
    ಆರೋಪಿ ತನ್ನ ಪತ್ನಿಯೊಂದಿಗೆ ನಲ್ಲಕುಂಟಾ ಸ್ಥಳದಲ್ಲಿಯೇ ವಾಸವಾಗಿದ್ದಾನೆ. ಆರೋಗ್ಯ ಸಮಸ್ಯೆಯಿದ್ದ ಹಿನ್ನೆಲೆ ಆತ ಮನೆಯಲ್ಲಿಯೇ ವಾಸಿಸುತ್ತಿದ್ದನು. ಆದರೆ ಆತನ ಪತ್ನಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಆತ ಬೀದಿ ನಾಯಿಯೊಂದಿಗೆ ಅಸ್ವಾಭಾವಿಕ ಸಂಬಂಧ ಹೊಂದಿರುವುದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಈ ಘಟನೆ ಮಂಗಳವಾರ ನಡೆದಿದೆ ಎಂದು ಪೊಲೀಸರ ತನಿಖೆ ಮೂಲಕ ತಿಳಿದುಬಂದಿದೆ. ಇದನ್ನೂ ಓದಿ: ನಾನೇಕೆ ಪ್ರಧಾನಿ ಮಾತನ್ನ ಕೇಳಬೇಕು- ಮೋದಿಗೆ ರಾಗಾ ತಿರುಗೇಟು

  • ನೆಟ್ಟಿಗರಿಂದ ಟ್ರೋಲ್ ಆಯ್ತು ಎಸ್‍ಆರ್‌ಹೆಚ್ ಹೊಸ ಜೆರ್ಸಿ

    ನೆಟ್ಟಿಗರಿಂದ ಟ್ರೋಲ್ ಆಯ್ತು ಎಸ್‍ಆರ್‌ಹೆಚ್ ಹೊಸ ಜೆರ್ಸಿ

    ಹೈದರಾಬಾದ್: ಸನ್‍ರೈಸರ್ಸ್ ಹೈದರಾಬಾದ್ (ಎಸ್‍ಆರ್‌ಹೆಚ್) ತಂಡದ ಹೊಸ ಜೆರ್ಸಿಯನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

    ಎಸ್‍ಆರ್‌ಹೆಚ್ ತಮ್ಮ ಹೊಸ ಜೆರ್ಸಿಯಲ್ಲೂ ತಮ್ಮ ಆರೆಂಜ್ ಗುರುತನ್ನು ಉಳಿಸಿಕೊಂಡಿದೆ. ಕೆಳಭಾಗವು ಸಂಪೂರ್ಣವಾಗಿ ಕಿತ್ತಳೆ ಬಣ್ಣದ್ದಾಗಿದ್ದರೆ ಜೆರ್ಸಿಯ ತೋಳುಗಳು ಕಿತ್ತಳೆ ಬಣ್ಣದಲ್ಲಿ ಚುಕ್ಕೆಗಳೊಂದಿಗೆ ಕಪ್ಪು ಬಣ್ಣದಲ್ಲಿದೆ. ಇದನ್ನೂ ಓದಿ: ಇನ್‍ಸ್ಟಾಗ್ರಾಮ್‍ನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊಗೆ 40 ಕೋಟಿ ಫಾಲೋವರ್ಸ್ – ನಂ.1

    ಈ ಹೊಸ ನೋಟದ ಜರ್ಸಿಯನ್ನು ಬಹುಪಾಲು ಎಸ್‍ಆರ್‌ಹೆಚ್ ಅಭಿಮಾನಿಗಳು ಮೆಚ್ಚಿಲ್ಲ. ಕೆಲವರು ಇದನ್ನು ಸ್ವಿಗ್ಗಿ ಫುಡ್ ಅಪ್ಲಿಕೇಶನ್ ವೇರ್‌ನ ಟಿ-ಶರ್ಟ್‍ಗಳ ವಿತರಣಾ ಕಾರ್ಯನಿರ್ವಾಹಕರ ಪ್ರತಿರೂಪ ಎಂದು ಟ್ರೋಲ್ ಮಾಡಿದ್ದಾರೆ. ಇದನ್ನೂ ಓದಿ: ಭಾರತ vs ವೆಸ್ಟ್ ಇಂಡೀಸ್ 2ನೇ ಏಕದಿನ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಕಾಣಿಸಿಕೊಂಡ ವಿಶೇಷ ಅತಿಥಿಗಳು

    ತಂಡದ 25 ಮಂದಿ ಆಟಗಾರ ಪೈಕಿ ಎಸ್‍ಆರ್‌ಹೆಚ್ ತಂಡವು ಕೇನ್ ವಿಲಿಯಮ್ಸನ್ (14 ಕೋಟಿ ರೂ.), ಅಬ್ದುಲ್ ಸಮದ್ (4 ಕೋಟಿ ರೂ.), ಉಮ್ರಾನ್ ಮಲಿಕ್ (4 ಕೋಟಿ ರೂ.) ನೀಡಿ ತಂಡದಲ್ಲಿಯೇ ಉಳಿಸಿಕೊಂಡಿದೆ. ಒಟ್ಟು 22 ಮಂದಿ ಆಟಗಾರರ ಪೈಕಿ 7 ಮಂದಿ ವಿದೇಶಿ ಆಟಗಾರರನ್ನು ಖರೀದಿಸಬಹುದು.

  • ICRISAT ಕ್ಯಾಂಪಸ್ ತೋಟದಲ್ಲಿ ಕಡಲೆ ಕಾಯಿ ಸವಿದ ಪ್ರಧಾನಿ ಮೋದಿ

    ICRISAT ಕ್ಯಾಂಪಸ್ ತೋಟದಲ್ಲಿ ಕಡಲೆ ಕಾಯಿ ಸವಿದ ಪ್ರಧಾನಿ ಮೋದಿ

    ಹೈದರಾಬಾದ್: ಅಂತಾರಾಷ್ಟ್ರೀಯ ಬೆಳೆಗಳ ಸಂಶೋಧನಾ ಸಂಸ್ಥೆ (International Crops Research Institute for Semi-Arid Tropics) (ICRISAT)ಯ 50ನೇ ವಾರ್ಷಿಕೋತ್ಸವ ಆಚರಣೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಮಂತ್ರಿ ಮೋದಿ, ಕಾರ್ಯಕ್ರಮದ ಬಳಿಕ ಕ್ಯಾಂಪಸ್ ತೋಟದಲ್ಲಿ ಬೆಳೆದಿದ್ದ ಕಡಲೆ ಗಿಡದಿಂದ ಕಡಲೆ ಬೀಜ ಕಿತ್ತು ಸವಿದಿದ್ದಾರೆ.

    ಕಾರ್ಯಕ್ರಮದ ನಂತರ ಕ್ಯಾಂಪಸ್ ತೋಟದ ಸುತ್ತ ಹೆಜ್ಜೆ ಹಾಕಿದ್ದಾರೆ. ತೋಟದಲ್ಲಿ ಬೆಳೆದಿದ್ದ ಕಡಲೆ ಕಾಯಿ ಗಿಡದಿಂದ ಕಡಲೆ ಬೀಜ ಕಿತ್ತು ಸವಿದಿದ್ದಾರೆ. ಇದೇ ವೇಳೆ ಕ್ಯಾಂಪಸ್‍ನ ತೋಟದಲ್ಲಿ ಬೆಳೆದಿದ್ದ, ರಾಗಿ,ಜೋಳ ಸೇರಿ ವಿವಿಧ ಬೆಳೆಗಳ ಪರಿಶೀಲನೆ ಮಾಡಿದ್ದಾರೆ.

    ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹವಾಮಾನ ಬದಲಾವಣೆಯೆಂಬುದು ನಮ್ಮ ರೈತರಿಗೆ ಅತ್ಯಂತ ದೊಡ್ಡ ಸವಾಲಾಗಿದೆ. ಕೃಷಿಯಲ್ಲಿ ಮೂಲಭೂತ ವಿಷಯಗಳಿಗೆ ಉತ್ತೇಜನ ನೀಡುವ ಜತೆ, ಭವಿಷ್ಯದೆಡೆಗೆ ಧಾವಿಸುವುದರತ್ತ ನಾವು ಗಮನ ನೆಟ್ಟಿದ್ದೇವೆ. ನಮ್ಮ ಅಗತ್ಯವನ್ನು ದೊಡ್ಡ ಮಟ್ಟದಲ್ಲಿ ಪೂರೈಸುವ ಈ ದೇಶದ ಶೇ.80ರಷ್ಟು ಸಣ್ಣ ರೈತರತ್ತ ನಾವು ಗಮನ ಕೇಂದ್ರೀಕರಿಸಿದ್ದೇವೆ. ಅದರ ಭಾಗವಾಗಿಯೇ ನಮ್ಮ ಕೇಂದ್ರ ಸರ್ಕಾರದ 2022-23ರ ಬಜೆಟ್‍ನಲ್ಲಿ ನೈಸರ್ಗಿಕ ಬೇಸಾಯ ಮತ್ತು ಡಿಜಿಟಲ್ ಕೃಷಿಗೆ ಒತ್ತು ನೀಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಕನ್ನಡಕ್ಕೂ ದನಿಗೂಡಿಸಿದ ಲತಾ ಮಂಗೇಶ್ಕರ್

    ಐಸಿಆರ್‌ಐಎಸ್‍ಎಟಿ ಸಂಸ್ಥೆಯು ಕಳೆದ 5 ದಶಕಗಳಿಂದಲೂ ಕೂಡ ಕೃಷಿಯನ್ನು ಸುಲಭ ಮತ್ತು ಸುಸ್ಥಿರಗೊಳಿಸಲು ಇತರ ದೇಶಗಳಿಗೆ ಸಹಾಯ ಮಾಡುತ್ತಿದೆ. ಹಾಗೇ, ಈ ಸಂಸ್ಥೆ ಭಾರತದ ಕೃಷಿ ವಲಯ ಬಲಪಡಿಸುವ ನಿಟ್ಟಿನಲ್ಲಿ ತಮ್ಮ ಸೇವೆಯನ್ನು ಮುಂದುವರಿಸುತ್ತದೆ ಎಂಬ ಭರವಸೆ ನನಗೆ ಇದೆ ಎಂದಿದ್ದಾರೆ. ಇದನ್ನೂ ಓದಿ: ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಇನ್ನಿಲ್ಲ

  • ನಿಮಗೆ ನಿಜವಾಗಿಯೂ ಎಷ್ಟು ಮಚ್ಚೆಗಳಿವೆ – ಪತ್ರಕರ್ತನ ಪ್ರಶ್ನೆಗೆ ನೇಹಾ ಶೆಟ್ಟಿ ಗರಂ

    ನಿಮಗೆ ನಿಜವಾಗಿಯೂ ಎಷ್ಟು ಮಚ್ಚೆಗಳಿವೆ – ಪತ್ರಕರ್ತನ ಪ್ರಶ್ನೆಗೆ ನೇಹಾ ಶೆಟ್ಟಿ ಗರಂ

    ಹೈದರಾಬಾದ್: ಮುಂಗಾರು ಮಳೆ-2 ಸಿನಿಮಾದ ನಟಿ ನೇಹಾ ಶೆಟ್ಟಿ ಅವರು ತಮ್ಮ ಮುಂಬರುವ ಚಿತ್ರ ಡಿಜೆ ಟಿಲ್ಲು ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಸೆಕ್ಸಿಯಸ್ಟ್ ಪ್ರಶ್ನೆ ಕೇಳಿದ ಪತ್ರಕರ್ತರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    Neha Shetty

    ಡಿಜೆ ಟಿಲ್ಲು ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮ ಇಂದು ಅದ್ದೂರಿಯಾಗಿ ನೆರವೇರಿತು. ಈ ಟ್ರೇಲರ್‌ನಲ್ಲಿ ನಾಯಕ ಸಿದ್ದು ನಿನಗೆ ಎಷ್ಟು ಮಚ್ಚೆ ಇದೆ ಎಂದು ಕೇಳುತ್ತಾರೆ. ಇದಕ್ಕೆ ನೇಹಾ ಶೆಟ್ಟಿ 16 ಮಚ್ಚೆಗಳಿದೆ ಎಂದು ಹೇಳಿದ್ದಾರೆ. ಸದ್ಯ ರೋಮ್ಯಾಂಟಿಕ್ ದೃಶ್ಯವೊಂದನ್ನು ಉಲ್ಲೇಖಿಸಿ ಪತ್ರಕರ್ತರೊಬ್ಬರು ನಿಮಗೆ ನಿಜವಾಗಿಯೂ ಎಷ್ಟು ಮಚ್ಚೆಗಳಿದೆ ಎಂದು ತಿಳಿದಿದೆಯೇ ಎಂದು ಮುಜುಗರಕ್ಕಿಡಾಗುವ ಪ್ರಶ್ನೆಯನ್ನು ಕೇಳಿದ್ದಾರೆ. ಈ ಪ್ರಶ್ನೆ ಕೇಳಿದಾಗ ಒಂದು ನಿಮಿಷ ಎಲ್ಲರೂ ಮೌನದಿಂದ ಅಚ್ಚರಿಗೊಳ್ಳುತ್ತಾರೆ. ಆಗ ಸಿದ್ದು ಅವರು ನಾನು ಈ ಪ್ರಶ್ನೆಗೆ ಉತ್ತರಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಅಪ್ಪು ಜೊತೆ ಡ್ಯಾನ್ಸ್ ಕಾರ್ಯಕ್ರಮಕ್ಕೆ ಹೋಗಿದ್ದು, ನನ್ನ ಜೀವನದ ಮರೆಯಲಾಗದ ಕ್ಷಣ: ಅಲ್ಲು ಅರ್ಜುನ್

     

    View this post on Instagram

     

    A post shared by Neha Sshetty (@iamnehashetty)

    ಈ ಕುರಿತಂತೆ ನೇಹಾ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಟ್ರೇಲರ್ ಲಾಂಚ್‍ನಲ್ಲಿ ಈ ಪ್ರಶ್ನೆ ತುಂಬಾ ಅಸಹ್ಯಕರವಾಗಿತ್ತು. ಅವರ ಮನೆಯಲ್ಲಿರುವ ಹೆಣ್ಣುಮಕ್ಕಳಂತೆ ಕೆಲಸದ ಸಮಯದಲ್ಲಿ ತನ್ನ ಸುತ್ತಮುತ್ತಲಿರುವ ಮಹಿಳೆಯರಿಗೂ ಗೌರವಿಸಬೇಕಾಗುತ್ತದೆ ಎಂದು ಕಿಡಿಕಾರಿದ್ದಾರೆ.

    ಇದಕ್ಕೆ ಪತ್ರಕರ್ತ ನನಗೆ ನಿಮ್ಮನ್ನು ಮುಜುಗರಕ್ಕೀಡಾಗಿಸುವ ಉದ್ದೇಶವಿರಲಿಲ್ಲ. ಆದರೆ ಇದು ರೋಮ್ಯಾಂಟಿಕ್ ಸಿನಿಮಾವಾದ್ದರಿಂದ, ನಾನು ರೋಮ್ಯಾಂಟಿಕ್ ಪ್ರಶ್ನೆಯನ್ನು ಕೇಳಿದೆ. ಅಲ್ಲದೇ ಇದು ಬೆಸ್ಟ್ ಟ್ರೇಲರ್ ಎಂದು ಪ್ರತ್ಯುತ್ತರ ನೀಡಿದ್ದಾರೆ. ಇದನ್ನೂ ಓದಿ: ಜಾಕ್ವೆಲಿನ್ ಫರ್ನಾಂಡೀಸ್‍ರನ್ನು ಕೆಟ್ಟದಾಗಿ ಬಿಂಬಿಸಬೇಡಿ: ಸುಕೇಶ್ ಚಂದ್ರಶೇಖರ್

  • ನಟಿ ಜಯಪ್ರದಾಗೆ ಮಾತೃ ವಿಯೋಗ

    ನಟಿ ಜಯಪ್ರದಾಗೆ ಮಾತೃ ವಿಯೋಗ

    ಹೈದರಾಬಾದ್: ಹಿರಿಯ ನಟಿ ಜಯಪ್ರದಾ ಅವರ ತಾಯಿ ನೀಲವೇಣಿ ಅವರು ಇಂದು ವಯೋಸಹಜ ಅನಾರೋಗ್ಯದಿಂದ ಹೈದರಾಬಾದ್‍ನಲ್ಲಿ ಮೃತಪಟ್ಟಿದ್ದಾರೆ.

    ಕಳೆದ ಕೆಲವು ವಾರಗಳಿಂದ ನೀಲವೇಣಿ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಇಂದು ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ರಾಜಕೀಯ ಕೆಲಸಕ್ಕಾಗಿ ದೆಹಲಿಗೆ ತೆರಳಿದ್ದ ಜಯಪ್ರದಾ ಅವರು ತಾಯಿ ನಿಧನದ ವಿಚಾರ ತಿಳಿದ ತಕ್ಷಣವೇ ಹೈದರಾಬಾದ್‍ಗೆ ಬಂದರು.  ಇದನ್ನೂ ಓದಿ:  ಬಿಜೆಪಿಗೆ ಸೇರಿದರೆ ನನ್ನನ್ನು ಹೇಮಾ ಮಾಲಿನಿಯಾಗಿ ಮಾಡುತ್ತಿದ್ದರು: ಜಯಂತ್ ಚೌಧರಿ

    ಜಯಪ್ರದಾ ಅವರು ಮಾಧ್ಯಮಿಕ ಶಿಕ್ಷಣವನ್ನು ಮುಗಿಸಿದ ನಂತರ ಚಿತ್ರರಂಗಕ್ಕೆ ಸೇರುವ ಮೊದಲು ತಾಯಿಯಿಂದ ನೃತ್ಯ ತರಬೇತಿ ಪಡೆದುಕೊಂಡರು. ಜಯಪ್ರದಾ ಅವರು ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳಲು  ಅವರ ತಾಯಿ ನೀಲವೇಣಿ  ದೊಡ್ಡ ಮಟ್ಟದಲ್ಲಿ ಬೆಂಬಲ ನೀಡಿದ್ದರು.

    ಬಾಲಿವುಡ್ ಮತ್ತು ಸ್ಯಾಂಡಲ್‌ವುಡ್‌ ಸಿನಿಮಾದಲ್ಲಿ ನಟಿಸುವ ಮೂಲಕವಾಗಿ ಅಪಾರವಾದ ಅಭಿಮಾನಿ ಬಳಗವನ್ನು ಸಂಪಾದಿಸಿದರು. ನಂತರ ಜಯಪ್ರದಾ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಭಾರತೀಯ ಜನತಾ ಪಕ್ಷದ ಸಂಸದರಾಗಿ ಸೇವೆ ಸಲ್ಲಿಸುತ್ತಿದ್ದಾರೆ.