ಹೈದರಾಬಾದ್: ತಿರುಪತಿಯಿಂದ ಹೈದರಾಬಾದ್‌ಗೆ (Tirupati-Hyderabad) ಹೋಗುತ್ತಿದ್ದ ಇಂಡಿಗೋ ವಿಮಾನ (IndiGo Flight) ತಾಂತ್ರಿಕ ದೋಷದಿಂದ ಸುಮಾರು 40 ನಿಮಿಷಗಳ ಕಾಲ ಆಕಾಶದಲ್ಲೇ ಸುತ್ತಾಡಿದೆ.
ಇದರಿಂದಾಗಿ ಹೈದರಾಬಾದ್‌ಗೆ ನಿಗದಿಪಡಿಸಲಾದ ಕೊನೆಯ ವಿಮಾನವನ್ನು ರದ್ದುಗೊಳಿಸಲಾಯಿತು. ವಿಮಾನ ರದ್ದಾದ ವಿಚಾರಕ್ಕೆ ಪ್ರಯಾಣಿಕರು, ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದಾರೆ. ಸಿಬ್ಬಂದಿ ಹಾಗೂ ಪ್ರಯಾಣಿಕರ ನಡುವಿನ ವಾಗ್ವಾದದ ವಿಡಿಯೋ ವೈರಲ್ ಆಗಿದೆ.
ಹೈದರಾಬಾದ್: ಇಲ್ಲಿನ ಫುಕೆಟ್‌ಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ (IX 110) ತಾಂತ್ರಿಕ ದೋಷದಿಂದಾಗಿ ಟೇಕಾಫ್ ಆಗಿ 16 ನಿಮಿಷಕ್ಕೆ ಲ್ಯಾಂಡ್ ಆಗಿದೆ.
98 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನ ಬೆಳಗ್ಗೆ 6:57 ಕ್ಕೆ ಸುರಕ್ಷಿತವಾಗಿ ವಾಪಸ್ ಬಂದಿಳಿದಿದೆ. ನಮ್ಮ ವಿಮಾನಗಳಲ್ಲಿ ಒಂದು ತಾಂತ್ರಿಕ ಸಮಸ್ಯೆಯಿಂದಾಗಿ ಟೇಕಾಫ್ ಆದ ಸ್ವಲ್ಪ ಸಮಯದ ನಂತರ ಹೈದರಾಬಾದ್‌ಗೆ ಹಿಂತಿರುಗಿತು. ಸಿಬ್ಬಂದಿ ಹೆಚ್ಚಿನ ಎಚ್ಚರಿಕೆಯಿಂದ ಹಿಂತಿರುಗಲು ನಿರ್ಧರಿಸಿದರು ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪರ್ಯಾಯ ವಿಮಾನ ವ್ಯವಸ್ಥೆ ಮಾಡಲಾಗಿದ್ದು, ವಿಮಾನವು ಅಲ್ಲಿಂದ ಹೊರಟಿದೆ. ವಿಳಂಬದ ಸಮಯದಲ್ಲಿ ಪ್ರಯಾಣಿಕರಿಗೆ ಉಪಹಾರ ಒದಗಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ. ನಮ್ಮ ಕಾರ್ಯಾಚರಣೆಯ ಪ್ರತಿಯೊಂದು ಅಂಶದಲ್ಲೂ ಸುರಕ್ಷತೆ ಪ್ರಮುಖ ಆದ್ಯತೆಯಾಗಿದೆ ಎಂದು ಪುನರುಚ್ಚರಿಸುತ್ತೇವೆ ಎಂದು ಏರ್ ಇಂಡಿಯಾ ತಿಳಿಸಿದೆ.
ವಿಮಾನವು ಬೆಳಗ್ಗೆ 6:40 ಕ್ಕೆ ಹೊರಟಿತು. ಆದರೆ, ಹೈದರಾಬಾದ್ ವಿಮಾನ ನಿಲ್ದಾಣದಿಂದ ಹೊರಟ ಕೆಲವು ನಿಮಿಷಗಳ ನಂತರ ಮತ್ತೆ ಇಳಿಯಿತು. ಅದು ಮಧ್ಯಾಹ್ನ 1:26 ಕ್ಕೆ ಫುಕೆಟ್‌ಗೆ ಮತ್ತೆ ಹೊರಟಿತು.
ಹೈದರಾಬಾದ್: ಬಂಗಾಳ ಕೊಲ್ಲಿಯಲ್ಲಿ (Bay Of Bengal) ವಾಯುಭಾರ ಕುಸಿತದ ಪರಿಣಾಮ ಹೈದರಾಬಾದ್‌ನಲ್ಲಿ (Hyderabad) ಶುಕ್ರವಾರ ಸುರಿದ ಭಾರೀ ಮಳೆಗೆ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಭಾರೀ ಮಳೆಗೆ (Heavy Rain) ಹೈದರಾಬಾದ್‌ನ ಉತ್ತರ ಮತ್ತು ದಕ್ಷಿಣ ಪ್ರದೇಶಗಳ ಹಲವು ಕಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಭಾರೀ ಮಳೆಯ ಪರಿಣಾಮ ಫ್ಲೈಓವರ್, ರಸ್ತೆಗಳು ಮುಳುಗಡೆಯಾಗಿದ್ದು, ಫ್ಲೈಓವರ್‌ಗಳು ನದಿಯಂತೆ ತುಂಬಿ ಹರಿಯುತ್ತಿವೆ. ಹಲವು ಜನನಿಬಿಡ ಪ್ರದೇಶಗಳು ಜಲಾವೃತಗೊಂಡಿವೆ. ರಕ್ಷಣಾ ಪಡೆ ಶುಕ್ರವಾರದಿಂದ ಹಲವು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ವಾಹನಗಳು ನೀರಿನಲ್ಲಿ ಮುಳುಗಿ ನಿಂತಿದ್ದು, ರಸ್ತೆಯಲ್ಲಿ ಸವಾರರು ಪರದಾಟ ನಡೆಸುವಂತಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಹಣಕಾಸು ಸಚಿವರಾದಾಗ ಲಕ್ಷ್ಮಿ ಕುಂಟಾಗಿ ಖಜಾನೆಯಲ್ಲಿರುತ್ತಾಳೆ: ಮಲ್ಲಿಕಾರ್ಜುನ ಖರ್ಗೆ
ಹೈದರಾಬಾದ್ ಕಾಂಚ ಗಚಿಬೌಲಿ ಫ್ಲೈಓವರ್ ನದಿಯಂತೆ ಹರಿಯುತ್ತಿದೆ. ಚಂದ್ರಾಯನಗುಟ್ಟದಲ್ಲಿ ಭಾರೀ ಮಳೆಯಿಂದಾಗಿ ಅನಾಹುತವೊಂದು ತಪ್ಪಿದೆ. ಗೋಡೆ ಕುಸಿತದಿಂದ ಚಲಿಸುತ್ತಿದ್ದ ಕಾರೊಂದು ಜಸ್ಟ್ ಮಿಸ್ ಆಗಿದೆ. ಮುಂದಿನ ಮೂರು ದಿನಗಳ ಕಾಲ ತೆಲಂಗಾಣಕ್ಕೆ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಇದನ್ನೂ ಓದಿ: ಸಾಧನಾ ಸಮಾವೇಶ ಮುಗಿಸಿ ವಾಪಸ್ ಬರುವಾಗ ಡಿಕೆಶಿ ಬೆಂಗಾವಲು ವಾಹನ ಪಲ್ಟಿ – ಪ್ರಾಣಾಪಾಯದಿಂದ ಪಾರು
ಹೈದರಾಬಾದ್: ಇಲ್ಲಿನ (Hyderabad) ನಾಂಪಲ್ಲಿಯಲ್ಲಿ ಆಟ ಆಡುವಾಗ ಹಾಳು ಮನೆಯೊಳಗೆ ಬಿದ್ದ ಚೆಂಡನ್ನು ತರಲು ಹೋದ ವ್ಯಕ್ತಿಗೆ ಅಸ್ಥಿಪಂಜರವೊಂದು (Skeleton) ಕಾಣಿಸಿದೆ. ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದು, ವಿಡಿಯೋ ವೈರಲ್ ಆಗಿದೆ.
ನಾಂಪಲ್ಲಿ ಮಾರುಕಟ್ಟೆಯ ಬಳಿ ಇರುವ ಹಾಳು ಮನೆಗೆ ಏಳು ವರ್ಷಗಳಿಗೂ ಹೆಚ್ಚು ಕಾಲ ಬೀಗ ಹಾಕಲಾಗಿತ್ತು. ಈ ಮನೆಯ ಅಡುಗೆಮನೆಯಂತೆ ಕಾಣುವ ನೆಲದ ಮೇಲೆ ಅಸ್ಥಿಪಂಜರವೊಂದು ಬಿದ್ದಿತ್ತು. ಈ ಅವಶೇಷಗಳ ಸುತ್ತಲೂ ಹಲವಾರು ಪಾತ್ರೆಗಳು ಬಿದ್ದಿದ್ದವು. ಇದನ್ನೂ ಓದಿ: ಕಲಬುರಗಿ ಚಿನ್ನದಂಗಡಿ ದರೋಡೆ ಕೇಸ್; ಖದೀಮರ ಸುಳಿವು ಪತ್ತೆ – ಇಬ್ಬರು ಅಂದರ್
ನೈಋತ್ಯ ವಲಯದ ಉಪ ಪೊಲೀಸ್ ಆಯುಕ್ತ ಚಂದ್ರಮೋಹನ್ ಸೇರಿದಂತೆ ಹಬೀಬ್ ನಗರ ಪೊಲೀಸರ ತಂಡ ಅಸ್ಥಿಪಂಜರ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಬಾಗಿಲು ಒಡೆದು, ಅವಶೇಷಗಳನ್ನು ವಶಪಡಿಸಿಕೊಂಡು ಪರೀಕ್ಷೆಗೆ ಕಳುಹಿಸಿದ್ದಾರೆ.
ಈ ಮನೆಯ ಮಾಲೀಕರು ವಿದೇಶದಲ್ಲಿ ವಾಸಿಸುತ್ತಿದ್ದಾರೆ. ಈ ಆಸ್ತಿ ಏಳು ವರ್ಷಗಳಿಗೂ ಹೆಚ್ಚು ಕಾಲ ಖಾಲಿಯಾಗಿ ಉಳಿದುಕೊಂಡಿದೆ ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.
ಎಸಿಪಿ ಕಿಶನ್ ಕುಮಾರ್ ಮಾತನಾಡಿ, ಈ ಮನೆ ಮುನೀರ್ ಖಾನ್ ಎಂಬುವವರಿಗೆ ಸೇರಿದ್ದು, ಅವರಿಗೆ 10 ಮಕ್ಕಳಿದ್ದರು. ಅವರ ನಾಲ್ಕನೇ ಮಗ ಇಲ್ಲಿ ವಾಸಿಸುತ್ತಿದ್ದರು. ಉಳಿದವರು ಬೇರೆಡೆ ವಾಸಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಅಸ್ಥಿಪಂಜರ ಸುಮಾರು 50 ವರ್ಷ ವಯಸ್ಸಿನವರಾಗಿರಬಹುದು. ಒಂಟಿಯಾಗಿದ್ದವರು ಅಥವಾ ಮಾನಸಿಕ ಅಸ್ವಸ್ಥರಾಗಿದ್ದವರು ಆಗಿರಬಹುದು. ಸತ್ತು ಕೆಲವು ವರ್ಷಗಳೇ ಕಳೆದಿವೆ, ಮೂಳೆಗಳು ಸಹ ಹಾಳಾಗಿವೆ. ನಮಗೆ ಯಾವುದೇ ರೀತಿಯ ಹೋರಾಟ ನಡೆದು ಸಾವನ್ನಪ್ಪಿದ ಲಕ್ಷಣಗಳು ಕಂಡುಬಂದಿಲ್ಲ. ಇದು ನೈಸರ್ಗಿಕ ಸಾವು ಆಗಿರಬಹುದು. ಹೆಚ್ಚಿನದನ್ನು ಕಂಡುಹಿಡಿಯುವ ಪ್ರಯತ್ನದಲ್ಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಿಸ್ ಪುದುಚೆರಿ ಖ್ಯಾತಿಯ ಮಾಡೆಲ್ ಸ್ಯಾನ್ ರೆಚಲ್ ಆತ್ಮಹತ್ಯೆ
ಕನ್ನಡ ಸೇರಿದಂತೆ 750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಬಹುಭಾಷಾ ನಟ ಕೋಟ ಶ್ರೀನಿವಾಸ ರಾವ್ (83) (Kota Srinivas Rao) ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ನಟ ಕೋಟ ಶ್ರೀನಿವಾಸ ರಾವ್ ಹೈದರಾಬಾದ್‌ನಲ್ಲಿರುವ (Hyderabad) ತಮ್ಮ ಮನೆಯಲ್ಲಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಹಿರಿಯ ನಟನ ನಿಧನಕ್ಕೆ ಇಡೀ ಚಿತ್ರರಂಗವೇ ಸಂತಾಪ ಸೂಚಿಸಿದೆ.
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೋಟ ಶ್ರೀನಿವಾಸ ರಾವ್ ಮಗ ತೀರಿಕೊಂಡ ನಂತರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ
ಖಳನಾಯಕ, ಪೋಷಕರ ಪಾತ್ರ ಹಾಗೂ ಹಾಸ್ಯನಟನಾಗಿ ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ (Kannada Cinema) ಪ್ರೇಕ್ಷಕರ ಮನಗೆದ್ದಿದ್ದ ಶ್ರೀನಿವಾಸ ರಾವ್ 750ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ರಂಗಭೂಮಿಯಿಂದ ಬಂದ ನಟ ತಮ್ಮದೇ ಆದ ನಟನಾ ಶೈಲಿಯಿಂದ ಜನರ ಮನ ಗೆದ್ದಿದ್ರು. ವಿಶೇಷವಾಗಿ ನಟ ಮೋಹನ್ ಬಾಬು ಅವರೊಂದಿಗೇ ಅವರು ಸುಮಾರು 60 ಚಿತ್ರಗಳಲ್ಲಿ ನಟಿಸಿದ್ದಾರೆ.
1942ರ ಜುಲೈ 10 ರಂದು ಕೃಷ್ಣ ಜಿಲ್ಲೆಯ ಕಂಕಿಪಾಡುವಿನಲ್ಲಿ ಜನಿಸಿದ ಕೋಟ ಶ್ರೀನಿವಾಸ ರಾವ್, ಸಿನಿಮಾ ರಂಗ ಪ್ರವೇಶಿಸುವುದಕ್ಕೆ ಮುನ್ನ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇದರ ಜೊತೆ ಜೊತೆಗೆ 20 ವರ್ಷಗಳ ಕಾಲ ವೇದಿಕೆಯಲ್ಲಿ ನಟನೆಯಲ್ಲಿ ಅನುಭವ ಪಡೆದಿದ್ದರು. ಚಲನಚಿತ್ರಗಳಿಗೆ ಪದಾರ್ಪಣೆ ಮಾಡಿದ ಕೋಟ ಶ್ರೀನಿವಾಸ ರಾವ್, ತಮ್ಮ ವಿಶಿಷ್ಟ ಶೈಲಿಯ ಹಾಸ್ಯದ ಮೂಲಕ ಪ್ರೇಕ್ಷಕರನ್ನು ಮೆಚ್ಚಿಸಿದರು.
ವಾಷಿಂಗ್ಟನ್: ಅಮೆರಿಕದಲ್ಲಿ (America) ಕಾರು ಹಾಗೂ ಟ್ರಕ್ ನಡುವಿನ ಅಪಘಾತದಲ್ಲಿ ಭಾರತ ಮೂಲದ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿರುವ ಘಟನೆ ಸೋಮವಾರ ನಡೆದಿದೆ.
ಅಮೆರಿಕದ ಡಲ್ಲಾಸ್‌ನಲ್ಲಿ (Dallas) ವಾಸವಿದ್ದ ಕುಟುಂಬವು ರಜೆಯ ನಿಮಿತ್ತ ಕಳೆದ ವಾರ ಅಟ್ಲಾಂಟಾದಲ್ಲಿದ್ದ ಸಂಬಂಧಿಕರ ಮನೆಗೆ ತೆರಳಿತ್ತು. ಸೋಮವಾರ ಅಟ್ಲಾಂಟಾದಿಂದ ಡಲ್ಲಾಸ್‌ಗೆ ಹಿಂತಿರುತ್ತಿದ್ದ ವೇಳೆ ಟ್ರಕ್, ಕಾರಿಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಕಾರಿಗೆ ಬೆಂಕಿ ಹತ್ತಿಕೊಂಡಿದ್ದು, ಕಾರಿನಲ್ಲಿದ್ದ ನಾಲ್ವರು ಸಜೀವ ದಹನವಾಗಿದ್ದಾರೆ. ಇದನ್ನೂ ಓದಿ: ನಾನು ಆಗಲೇ ಹೋಗಿಲ್ಲ, ಈಗ ಯಾಕೆ ಹೋಗಲಿ? – ಆಪ್ತರ ಬಳಿ ಸಿಎಂ ಮನದ ಮಾತು
ಮೃತರ ಗುರುತುಗಳನ್ನು ಡಿಎನ್‌ಎ ಪರೀಕ್ಷೆಯ ಮೂಲಕ ಪತ್ತೆ ಮಾಡಿದ ಬಳಿಕ ಮೃತರ ಕುಟುಂಬಕ್ಕೆ ಹಸ್ತಾಂತರ ಮಾಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹೈದರಾಬಾದ್: ತೆಲುಗಿನ ಖ್ಯಾತ ಸುದ್ದಿ ನಿರೂಪಕಿ ಸ್ವೆಚ್ಚಾ ವೋಟಾರ್ಕರ್ (40) (Swetcha Votarkar) ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹೈದರಾಬಾದ್‌ನ (Hyderabad) ಚಿಕ್ಕಡಪಲ್ಲಿಯ ಆರ್‌ಟಿ ಕ್ರಾಸ್ ರಸ್ತೆಯ ಜವಾಹರ್‌ನಗರದಲ್ಲಿರುವ ಅವರ ಮನೆಯಲ್ಲಿ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.
ಕಳೆದ 18 ವರ್ಷಗಳಿಂದ ತೆಲುಗು ಮಾಧ್ಯಮ ರಂಗದಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದರು. ಪ್ರಸ್ತುತ ಅವರು ‘ಟಿ ನ್ಯೂಸ್’ ವಾಹಿನಿಯಲ್ಲಿ ಸುದ್ದಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಶೆಫಾಲಿ ಸಾವಿನ ಬೆನ್ನಲ್ಲೇ ಪುನೀತ್ ಸಾವಿನ ಬಗ್ಗೆ ಚರ್ಚೆ
ಸ್ವೇಚ್ಚಾ ಅವರ ಸಾವು ತೆಲುಗು ಮೀಡಿಯಾಗಳಲ್ಲಿ ಸಂಚಲನ ಮೂಡಿಸಿದೆ. ಇನ್ನೂ ಮಾಹಿತಿ ತಿಳಿದ ತಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದು ಮೃತದೇಹವನ್ನು ಹೈದರಾಬಾದ್ ಗಾಂಧಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಿದ್ದಾರೆ. ಇವರ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.
`ರೆಟ್ರೋ’ (Retro) ಪ್ರೀ-ರಿಲೀಸ್ (Pre-Release Event) ಈವೆಂಟ್‌ನಲ್ಲಿ ಬುಡಕಟ್ಟು ಸಮುದಾಯದ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ತೆಲುಗು ನಟ ವಿಜಯ್ ದೇವರಕೊಂಡ (Vijay Devarakonda) ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಮೇ 1ರಂದು ತೆರೆಕಂಡಿರುವ `ರೆಟ್ರೋ’ ಸಿನಿಮಾದಲ್ಲಿ ತಮಿಳು ನಟ ಸೂರ್ಯ ಹಾಗೂ ನಟಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಸಿನಿಮಾ ರಿಲೀಸ್‌ಗೂ ಮುನ್ನ ಏ.26ರಂದು ಹೈದರಾಬಾದ್‌ನ ಜೆಆರ್‌ಸಿ ಕನ್‌ವೆನ್ಷನ್‌ನಲ್ಲಿ ತೆಲುಗು `ರೆಟ್ರೋ’ ಸಿನಿಮಾದ ಪ್ರೀ-ರಿಲೀಸ್ ಈವೆಂಟ್ ಆಯೋಜಿಸಲಾಗಿತ್ತು.ಇದನ್ನೂ ಓದಿ: ಜಯಂ ರವಿ ಜೊತೆ ಬೋಲ್ಡ್ ಆಗಿ ಕಾಣಿಸ್ಕೊಂಡ ವದಂತಿ ಗೆಳತಿ ಕೆನೀಶಾ
ಕಾರ್ಯಕ್ರಮದಲ್ಲಿ ತೆಲುಗು ನಟ ವಿಜಯ್ ದೇವರಕೊಂಡ ಅವರು ಭಾಗಿಯಾಗಿದ್ದರು. ಈ ವೇಳೆ ಕಾಶ್ಮೀರದಲ್ಲಿ ನಡೆದ ಪಹಲ್ಗಾಮ್ ದಾಳಿಯನ್ನು ಉಲ್ಲೇಖಿಸಿ ಮಾತನಾಡಿದ್ದ ವಿಜಯ್, ಈ ರೀತಿಯ ಘಟನೆಗಳಿಗೆ ಪರಿಹಾರವೆಂದರೆ ಭಯೋತ್ಪಾದಕರಿಗೆ ಶಿಕ್ಷಣ ನೀಡುವುದು. ಅಂದರೆ ಭಯೋತ್ಪಾದಕರಾಗದಂತೆ ತಡೆಯುವುದು. ಭಯೋತ್ಪಾದನೆಯಿಂದ ಅವರಿಗೆ ಏನು ಲಾಭ? ಕಾಶ್ಮೀರ ಭಾರತಕ್ಕೆ ಸೇರಿದ್ದು, ಕಾಶ್ಮೀರಿಗಳು ನಮ್ಮವರು. ಇನ್ನೂ ಪಾಕಿಸ್ತಾನದ ಮೇಲೆ ಭಾರತ ದಾಳಿ ಮಾಡುವ ಅವಶ್ಯಕತೆಯಿಲ್ಲ. ಈಗಾಗಲೇ ಪಾಕಿಸ್ತಾನದವರು ತಮ್ಮ ಸರ್ಕಾರದಿಂದಾಗಿ ಕಿತ್ತು ತಿನ್ನುವ ಪರಿಸ್ಥಿತಿಗೆ ಬಂದಿದ್ದಾರೆ. ಇದು ಹೀಗೆ ಮುಂದುವರಿದರೆ ಪಾಕಿಸ್ತಾನದ ಪ್ರಜೆಗಳೇ ತಮ್ಮ ಸರ್ಕಾರದ ಮೇಲೆ ದಾಳಿ ನಡೆಸುತ್ತಾರೆ. 500 ವರ್ಷಗಳ ಹಿಂದೆ ಸಾಮಾನ್ಯ ಜ್ಞಾನವಿಲ್ಲದೆ ಬುಡಕಟ್ಟು ಜನಾಂಗದವರು ಹೋರಾಡಿದಂತೆ ಇದೀಗ ಭಯೋತ್ಪಾದಕರು ವರ್ತಿಸುತ್ತಿದ್ದಾರೆ ಎಂದು ಹೇಳಿದರು.
ಈ ಹೇಳಿಕೆಯಿಂದಾಗಿ ಬುಡಕಟ್ಟು ಸಮುದಾಯದವರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಇದನ್ನರಿತ ವಿಜಯ್ ಕ್ಷಮೆಯಾಚಿಸಿದ್ದರು. ನಾನು ಯಾವುದೇ ಸಮುದಾಯವನ್ನು ಗುರಿಯಾಗಿಸಿಕೊಂಡು ಈ ಹೇಳಿಕೆ ನೀಡಿಲ್ಲ. ಯಾರನ್ನೂ ನೋವಿಸುವ ಉದ್ದೇಶ ನನ್ನದಾಗಿರಲಿಲ್ಲ. ನಾನು ಎಲ್ಲರನ್ನು ಗೌರವಿಸುತ್ತೇವೆ ಎಂದು ಹೇಳಿದ್ದರು.
ಸದ್ಯ ಸೈದಾಬಾದ್ ನಿವಾಸಿ ಮತ್ತು ಬುಡಕಟ್ಟು ಸಮುದಾಯಗಳ ಜಂಟಿ ಕ್ರಿಯಾ ಸಮಿತಿಯ ರಾಜ್ಯ ಅಧ್ಯಕ್ಷ ನೆನವತ್ ಅಶೋಕ್ ಕುಮಾರ್ ನಾಯಕ್ ಅವರು ನಟ ವಿಜಯ್ ದೇವರಕೊಂಡ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ನಟ ವಿಜಯ್ ಹೇಳಿಕೆ ನೀಡಿದ ಒಂದು ತಿಂಗಳ ನಂತರ ಸೈಬರಾಬಾದ್‌ನ ರಾಯದುರ್ಗ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಹೈದರಾಬಾದ್: ಹೈದರಾಬಾದ್‌ನಿಂದ (Hyderabad) ತಿರುಪತಿಗೆ (Tirupati) ಹೊರಟಿದ್ದ ಸ್ಪೈಸ್‌ಜೆಟ್ ವಿಮಾನವು (SpiceJet flight) ಟೇಕಾಫ್ ಆದ ಸ್ವಲ್ಪ ಸಮಯದಲ್ಲೇ ತಾಂತ್ರಿಕ ಸಮಸ್ಯೆಯಿಂದ ವಾಪಸ್ ಆಗಿದೆ.
ವಿಮಾನ ತಾಂತ್ರಿಕ ದೋಷದಿಂದಾಗಿ ನಗರಕ್ಕೆ ಹಿಂತಿರುಗಬೇಕಾಯಿತು ಎಂದು ಮೂಲಗಳು ತಿಳಿಸಿವೆ. ಬೆಳಗ್ಗೆ 6:10 ಕ್ಕೆ ಹೊರಡಬೇಕಿದ್ದ ಎಸ್‌ಜಿ 2696 ವಿಮಾನ ಬೆಳಗ್ಗೆ 6:19 ಕ್ಕೆ ಹೊರಟು 7:40 ಕ್ಕೆ ತಿರುಪತಿಯಲ್ಲಿ ಇಳಿಯಬೇಕಿತ್ತು. ಆದರೆ, ವಿಮಾನವು ಟೇಕಾಫ್ ಆದ ಸ್ವಲ್ಪ ಸಮಯದ ನಂತರ ಯೂಟರ್ನ್ ಹೊಡೆದು ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. ಇದನ್ನೂ ಓದಿ: ಏರ್ ಇಂಡಿಯಾ ದುರಂತದ ಬಳಿಕ ಎಚ್ಚೆತ್ತ DGCA – ಏರ್‌ಪೋರ್ಟ್ ಬಳಿಯ ಕಟ್ಟಡಗಳಿಗೆ ಹೊಸ ರೂಲ್ಸ್
ಹೈದರಾಬಾದ್-ತಿರುಪತಿ ವಿಮಾನವನ್ನು ನಿರ್ವಹಿಸುತ್ತಿದ್ದ Q400 ವಿಮಾನವು ಟೇಕಾಫ್ ಆದ ನಂತರ AFT ಬ್ಯಾಗೇಜ್ ಬಾಗಿಲಿನಿಂದ ಬೆಳಕು ಹೊಮ್ಮಿತು. ಕ್ಯಾಬಿನ್ ಒತ್ತಡವು ಸಾಮಾನ್ಯವಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ, ಪೈಲಟ್‌ಗಳು ಹೈದರಾಬಾದ್‌ಗೆ ಹಿಂತಿರುಗಲು ನಿರ್ಧರಿಸಿದರು. ವಿಮಾನ ಸುರಕ್ಷಿತವಾಗಿ ಇಳಿಯಿತು. ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು ಎಂದು ಸ್ಪೈಸ್‌ಜೆಟ್ ತಿಳಿಸಿದೆ.
ಪಾರ್ಟಿಯಲ್ಲಿ ಭಾಗಿಯಾಗಿದ್ದ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೆಡಿಕಲ್ ಟೆಸ್ಟ್‌ನಲ್ಲಿ ಹಲವರು ಮಾದಕ ವಸ್ತು ಸೇವಿಸಿರೋದು ಪತ್ತೆಯಾಗಿದೆ. ಈ ಸಂಬಂಧ ಚೆವೆಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.