Tag: Hyderabad

  • ಸಿಕಂದರಾಬಾದ್ ಕಂಟೋನ್ಮೆಂಟ್ ಮನೆಗಳಿಗೆ ಶೀಘ್ರದಲ್ಲೇ ಉಚಿತ ಕುಡಿಯುವ ನೀರು

    ಸಿಕಂದರಾಬಾದ್ ಕಂಟೋನ್ಮೆಂಟ್ ಮನೆಗಳಿಗೆ ಶೀಘ್ರದಲ್ಲೇ ಉಚಿತ ಕುಡಿಯುವ ನೀರು

    ಹೈದರಾಬಾದ್: ಸಿಕಂದರಾಬಾದ್ ಕಂಟೋನ್ಮೆಂಟ್ ಪ್ರದೇಶದ ಪ್ರತಿ ಮನೆಗೆ ತಿಂಗಳಿಗೆ 20 ಕಿಲೋ ಲೀಟರ್‌ಗಳವರೆಗೆ ಉಚಿತ ಕುಡಿಯುವ ನೀರನ್ನು ಪೂರೈಸಲು ಹೈದರಾಬಾದ್ ಮೆಟ್ರೋಪಾಲಿಟನ್ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ಧರಿಸಿದೆ.

    ಕೊಳೆಗೇರಿಗಳು, ದೇಶೀಯ ಸಂಸ್ಥೆಗಳು ಮತ್ತು ದೇಶೀಯ ಸಂಪರ್ಕಗಳನ್ನು ಹೊಂದಿರುವ ಬಹುಮಹಡಿ ಕಟ್ಟಡಗಳಿಗೆ ಫೆಬ್ರವರಿ 1 ರಿಂದ ಪೂರ್ವಾನ್ವಯ ಪರಿಣಾಮದೊಂದಿಗೆ ಯೋಜನೆಯು ಅನ್ವಯಿಸುತ್ತದೆ. ಇದನ್ನೂ ಓದಿ: ನನ್ನ ಮುಗಿಸ್ಬಿಡ್ತೀನಿ ಅಂತಾನೆ: ಗಂಭೀರ ಆರೋಪ ಮಾಡಿದ ನಟಿ ಸಂಜನಾ

    ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ತೆಲಂಗಾಣ ಸಚಿವ ಟಿ. ಶ್ರೀನಿವಾಸ್ ಯಾದವ್ ಅವರು, ರಾಜ್ಯ ಸರ್ಕಾರವು ಸುಮಾರು 16.8 ಕೋಟಿ ರೂಪಾಯಿ ವೆಚ್ಚವನ್ನು ಮಾಡಿ ಬಡ ಕುಟುಂಬಗಳಿಗೆ ಅನುಕೂಲವಾಗುವಂತೆ ಎಸ್‍ಸಿಬಿ ಮಿತಿಯಲ್ಲಿ ಉಚಿತ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೆ ತರಲು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ : ನಟ ಚೇತನ್‌ಗೆ ನೀಡಿದ್ದ ಗನ್ ಮ್ಯಾನ್ ಹಿಂಪಡೆದ ಸರ್ಕಾರ

  • ಉಕ್ರೇನ್ ವಧು ಜೊತೆ ಹೈದರಾಬಾದ್ ವರನ ಮದುವೆ- ಆರಕ್ಷತೆಯಲ್ಲಿ ಉಕ್ರೇನ್ ರಕ್ಷಣೆಗೆ ಪ್ರಾರ್ಥಿಸಿದ ನವದಂಪತಿ

    ಉಕ್ರೇನ್ ವಧು ಜೊತೆ ಹೈದರಾಬಾದ್ ವರನ ಮದುವೆ- ಆರಕ್ಷತೆಯಲ್ಲಿ ಉಕ್ರೇನ್ ರಕ್ಷಣೆಗೆ ಪ್ರಾರ್ಥಿಸಿದ ನವದಂಪತಿ

    ಹೈದರಾಬಾದ್: ಉಕ್ರೇನ್ ವಧು ಜೊತೆ ಹೈದರಾಬಾದ್ ವರ ಮದುವೆಯಾಗಿದ್ದಾರೆ. ಆರಕ್ಷತೆ ಸಮಾರಂಭದ ವೇಳೆ ಅರ್ಚಕರು ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲಿ ಹರಿದಾಡುತ್ತಿದೆ.

    ಪ್ರತೀಕ್ ಮತ್ತು ಲ್ಯುಬೊವ್ ಉಕ್ರೇನ್‍ನಲ್ಲಿ ಮದುವೆಯಾಗಿದ್ದರು. ಆರಕ್ಷತೆಗಾಗಿ ಹೈದರಾಬಾದ್‍ಗೆ ಬಂದ ಮರುದಿನವೇ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಣೆ ಮಾಡಿತ್ತು. ಹೀಗಾಗಿ ವಧುವಿನ ಆತ್ಮಸ್ಥೈರ್ಯ ಕುಂದದಂತೆ ನೋಡಿಕೊಂಡ ಪ್ರತೀಕ್ ಪೋಷಕರು, ಆಕೆಗೆ ಮಾನಸಿಕವಾಗಿ ಬೆಂಬಲ ನೀಡಿದರು.

    ಇತ್ತೀಚೆಗೆ ಹೈದರಾಬಾದ್‍ನಲ್ಲಿ ಉಕ್ರೇನಿಯನ್ ವಧು ಲ್ಯುಬೊವ್ ಮತ್ತು ಹೈದರಬಾದ್‍ನ ವರ ಪ್ರತೀಕ್ಷ್ ಮದುವೆ ಆರತಕ್ಷತೆ ಸಮಾರಂಭದಲ್ಲಿ, ಅರ್ಚಕ ರಂಗರಾಜನ್ ಭಾಗವಹಿಸಿದ್ದರು. ದೇವರ ವಿಶೇಷ ವಸ್ತ್ರಗಳನ್ನ ಮತ್ತು ಸ್ಮರಣಿಕೆಗಳನ್ನು ವಧು ವರರಿಗೆ ನೀಡಿ ಅವರಿಗೆ ದೀರ್ಘಾಯುಷ್ಯ ಮತ್ತು ಸಂತಾನಫಲ ಸಿಗಲಿ ಎಂದು ನವವಿವಾಹಿತರನ್ನು ಆಶೀರ್ವದಿಸಿದರು. ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧ ಅಂತ್ಯವಾಗಿ, ಕೂಡಲೇ ಶಾಂತಿ ನೆಲೆಸುವಂತಾಗಲಿ ಎಂದು ಚಿಲುಕೂರಿನ ಬಾಲಾಜಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು ಎಂದು ಹೇಳಿದ್ದಾರೆ. ಇದನ್ನೂ ಓದಿ: ಊಟ ತರಲು ನನ್ನ ಬಳಿ ದುಡ್ಡಿಲ್ಲ, ಸ್ವಲ್ಪ ಹಣ ಹಾಕು ಅಂದ ಅದೇ ನವೀನ್‍ನ ಕೊನೆ ಮಾತು: ಶ್ರೀಕಾಂತ್

    ಈ ಸಂದರ್ಭದಲ್ಲಿ ಮಾತನಾಡಿದ ಅವರು, ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಶೀಘ್ರ ಅಂತ್ಯಗೊಳ್ಳಲಿ ಎಂದು ಚಿಲುಕೂರು ವೆಂಕಟೇಶ್ವರ ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇವೆ. ಯುದ್ಧವು ಪ್ರಪಂಚದಾದ್ಯಂತ ರಕ್ತಪಾತ ಮತ್ತು ದುರಂತಕ್ಕೆ ಕಾರಣವಾಯಿತು. ಕೋವಿಡ್‍ನ ದುರತದಿಂದ ಚೇತರಿಕೊಳ್ಳುವುದಕ್ಕೂ ಮುಂಚೆಯೇ ರಷ್ಯಾ ಉಕ್ರೇನ್ ಮೇಲೆ ದಾಳಿ ಆತಂಕವನ್ನ ಸೃಷ್ಟಿಸಿದೆ ಆದಷ್ಟು ಬೇಗ ಯುದ್ದ ಕೊನೆಯಾಗಲಿ ಎಂದು ಹೇಳಿದ್ದಾರೆ.

  • TRS ನಾಯಕನಿಂದ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ

    TRS ನಾಯಕನಿಂದ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ

    ಹೈದರಾಬಾದ್: 15 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ತೆಲಂಗಾಣದ ನಿರ್ಮಲ್ ಜಿಲ್ಲೆಯ ಮುನ್ಸಿಪಲ್ ಕೌನ್ಸಿಲ್‍ನ ಉಪಾಧ್ಯಕ್ಷ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ನಾಯಕ ಅತ್ಯಾಚಾರವೆಸಗಿದ್ದಾರೆ.

    ಒಂದು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಆರೋಪಿಯನ್ನು ಸಾಜಿದ್ ಖಾನ್ ಎಂದು ಗುರುತಿಸಲಾಗಿದೆ. ಇದೀಗ ಆರೋಪಿ ವಿರುದ್ಧ ಮಕ್ಕಳ ಲೈಂಗಿಕ ಅಪರಾಧಗಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸೈಬರ್ ಮೋಸದ ಜಾಲದಕ್ಕೆ ಸಿಕ್ಕಿ 1.48 ಲಕ್ಷ ಕಳೆದುಕೊಂಡ ನಟಿ!

    ಫೆಬ್ರವರಿ 26 ರಂದು ಮಕ್ಕಳ ಕಲ್ಯಾಣ ಸಮಿತಿಗೆ ಅತ್ಯಾಚಾರ ಘಟನೆ ಕುರಿತಂತೆ ಮಾಹಿತಿ ದೊರೆತಿದ್ದು, ಬಳಿಕ ಪೊಲೀಸರಿಗೆ ವಿಚಾರ ತಿಳಿಸಿದರು. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಲಕಿಯಿಂದ ಹೇಳಿಕೆ ಪಡೆದರು. ಅಲ್ಲದೇ ಪ್ರಕರಣದಲ್ಲಿ ಭಾಗಿಯಾಗಿರುವ ಮಹಿಳೆ, ಕಾರು ಚಾಲಕ ಮತ್ತು ಸಾಜಿದ್ ಖಾನ್ ಮೂವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಮತ್ತು ಪೋಕ್ಸೊ ಕಾಯ್ದೆಯ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯ ಆರೋಪಿ ಸಾಜಿದ್ ಖಾನ್ ತಲೆ ಮರೆಸಿಕೊಂಡಿದ್ದು, ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತನಿಖೆ ವೇಳೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳುವ ನೆಪದಲ್ಲಿ ಮಹಿಳೆ ಬಾಲಕಿಯನ್ನು ಹೈದರಾಬಾದ್ ಕರೆದುಕೊಂಡು ಹೋಗಿದ್ದಳು. ಈ ವೇಳೆ ಮೂವರು ಆರೋಪಿಗಳು ಒಂದೇ ಹೋಟೆಲ್‍ನಲ್ಲಿ ತಂಗಿದ್ದರು. ಈ ನಡುವೆ ಸಾಜಿದ್ ಖಾನ್ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಆಹಾರ ಇಲ್ಲದೇ ಚಾಕೊಲೇಟ್ ತಿನ್ನುತ್ತ ದಿನ ಕಳೆಯುತ್ತಿದ್ದೇವೆ: ವಿದ್ಯಾರ್ಥಿಗಳ ಅಳಲು

    ತನ್ನ ಆರೋಗ್ಯ ಸ್ಥಿತಿಯ ಬಗ್ಗೆ ಬಾಲಕಿ ಪೋಷಕರಿಗೆ ತಿಳಿಸಿದ ಬಳಿಕ ಲೈಂಗಿಕ ದೌರ್ಜನ್ಯ ಎಸಗಿರುವ ವಿಚಾರ ಬೆಳಕಿಗೆ ಬಂದಿದ್ದು, ನಂತರ ಈ ವಿಚಾರವಾಗಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

  • ಪ್ರೆಗ್ನೆನ್ಸಿ ವೇಳೆ ಕಾಜಲ್ ಅಗರ್‌ವಾಲ್ ವರ್ಕೌಟ್ – ವೀಡಿಯೋ ವೈರಲ್

    ಪ್ರೆಗ್ನೆನ್ಸಿ ವೇಳೆ ಕಾಜಲ್ ಅಗರ್‌ವಾಲ್ ವರ್ಕೌಟ್ – ವೀಡಿಯೋ ವೈರಲ್

    ಹೈದರಾಬಾದ್: ಟಾಲಿವುಡ್ ನಟಿ ಕಾಜಲ್ ಅಗರ್‌ವಾಲ್ ಫಿಟ್‍ನೆಸ್ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಏನೇ ಮಿಸ್ ಆದರೂ ಪ್ರತಿನಿತ್ಯ ವರ್ಕೌಟ್ ಮಾಡುವುದನ್ನು ಮಾತ್ರ ತಪ್ಪಿಸುವುದಿಲ್ಲ. ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕಾಜಲ್ ಗರ್ಭಿಣಿಯರು ಮಾಡುವಂತಹ ವ್ಯಾಯಾಮ ಮಾಡುವುದರಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.

    ಕಾಜಲ್ ಅಗರ್‌ವಾಲ್ ಅವರು ಪ್ರೆಗ್ನೆನ್ಸಿ ವೇಳೆ ಪ್ರತಿನಿತ್ಯ ವರ್ಕೌಟ್ ಮಾಡುತ್ತಿರುವ ಪುಟ್ಟ ವೀಡಿಯೋವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವೀಡಿಯೋದಲ್ಲಿ ಕಾಜಲ್ ಲ್ಯಾವೆಂಡರ್-ಹ್ಯೂಡ್ ಸ್ಪೋಟ್ರ್ಸ್ ಬ್ರಾ ಧರಿಸಿ ಮತ್ತು ಲೂಸ್ ಜಾಕೆಟ್ ಧರಿಸಿ ವಿವಿಧ ರೀತಿಯಲ್ಲಿ ವ್ಯಾಯಾಮ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಜೊತೆಗೆ ಕ್ಯಾಪ್ಷನ್‍ನಲ್ಲಿ ಗರ್ಭಿಣಿಯರಿಗೆ ಏರೋಬಿಕ್ಸ್ ಮತ್ತು ವ್ಯಾಯಾಮ ಬಹಳ ಮುಖ್ಯ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಶಿವರಾತ್ರಿ ಸಡಗರಕ್ಕೆ ಸಿದ್ಧಗೊಂಡ ಸ್ಯಾಂಡಲ್ ವುಡ್

    ನಾನು ಯಾವಾಗಲೂ ತುಂಬಾ ಆ್ಯಕ್ಟೀವ್ ಆಗಿರುತ್ತೇನೆ ಮತ್ತು ನನ್ನ ಇಡೀ ಜೀವನ ಕೆಲಸ ಮಾಡಿದ್ದೇನೆ. ಪ್ರೆಗ್ನೆನ್ಸಿ ವೇಳೆ ಯಾವುದೇ ಸಮಸ್ಯೆಗಳಿಲ್ಲದೆ ಇರಬೇಕೆಂದರೆ, ಎಲ್ಲಾ ಗರ್ಭಿಣಿಯರು ಆರೋಗ್ಯಕರವಾಗಿರಲು ಏರೋಬಿಕ್ ಮತ್ತು ಸ್ಟ್ರೆಂತ್ ಕಂಡೀಷನಿಂಗ್ ವ್ಯಾಯಾಮಗಳನ್ನು ಮಾಡಲು ಪ್ರೋತ್ಸಾಹಿಸಬೇಕು ಎಂದಿದ್ದಾರೆ.

    ಟ್ರೈನರ್ ನನ್ನ ಪ್ರೆಗ್ನೆನ್ಸಿ ವೇಳೆ ನನ್ನ ದೇಹ ಫಿಟ್ ಆಗಿರಲು ಸಹಾಯ ಮಾಡುತ್ತಿದ್ದಾರೆ. ಈ ವ್ಯಾಯಮಗಳು ನನಗೆ ಸ್ಟ್ರಾಂಗ್, ಲಾಂಗ್ ಮತ್ತು ತೆಳ್ಳಗಿರುವ ಫೀಲ್ ನೀಡುತ್ತಿದೆ. ಪ್ರೆಗ್ನೆನ್ಸಿ ವೇಳೆ ಏರೋಬಿಕ್ ನಮ್ಮ ದೇಹ ಫಿಟ್ ಆಗಿರಲು ಸಹಾಯವಾಗಿದೆ. ನಾವು ಕೂಡ ಫಿಟ್‍ನೆಸ್ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ : ಮಾರ್ಚ್ ನಲ್ಲಿ ರಿಲೀಸ್ ಆಗಲಿರುವ ಬಿಗ್ ಬಜೆಟ್ ಸಿನಿಮಾಗಳಿಗೆ ಮತ್ತೆ ಸಂಕಷ್ಟ

    2022ರ ಹೊಸ ವರ್ಷದಂದು, ಕಾಜಲ್ ಅಗರ್‌ವಾಲ್ ಮತ್ತು ಗೌತಮ್ ಕಿಚ್ಲು ಅಪ್ಪ-ಅಮ್ಮ ಆಗುತ್ತಿರುವ ಸಿಹಿ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು. ಅಲ್ಲದೇ ಇತ್ತೀಚೆಗಷ್ಟೆ ಸೀಮಂತ ಸಮಾರಂಭದ ಫೋಟೋವನ್ನು ಕಾಜಲ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

  • ಲಾಂಗ್ Hairಗೆ ಗುಡ್ ಬೈ ಹೇಳಿದ ವಿಜಯ್ ದೇವರಕೊಂಡ

    ಲಾಂಗ್ Hairಗೆ ಗುಡ್ ಬೈ ಹೇಳಿದ ವಿಜಯ್ ದೇವರಕೊಂಡ

    ಹೈದರಾಬಾದ್: ಟಾಲಿವುಡ್ ರೌಡಿ ನಟ ವಿಜಯ್ ದೇವರಕೊಂಡ ತಮ್ಮ ಮುಂದಿನ ಸಿನಿಮಾ ಲೈಗರ್‌ಗಾಗಿ ಲಾಂಗ್ ಹೇರ್ಸ್ ಬಿಟ್ಟಿದ್ದರು. ಇದೀಗ ಎರಡು ವರ್ಷಗಳ ಬಳಿಕ ವಿಜಯ್ ದೇವರಕೊಂಡ ತಮ್ಮ ಲಾಂಗ್ ಹೇರ್ಸ್‍ಗೆ ಗುಡ್ ಬೈ ಹೇಳಿದ್ದಾರೆ.

    ಇತ್ತೀಚೆಗಷ್ಟೇ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ವಾಲಿಬಾಲ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ವಿಜಯ್ ದೇವರಕೊಂಡ ಅವರನ್ನು ಆಹ್ವಾನಿಸಲಾಗಿತ್ತು. ಈ ಕಾರ್ಯಕ್ರದಲ್ಲಿ ಪಾಲ್ಗೊಂಡಿದ್ದ ವಿಜಯ್ ವಿಜೇತರಿಗೆ ಟ್ರೋಫಿ ನೀಡಿ ವಿಶ್ ಮಾಡಿದ್ದರು. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ವಿಜಯ್ ಹೊಸ ಲುಕ್‍ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಅದರಲ್ಲಿಯೂ ಹೆಣ್ಮಕ್ಕಳಂತೂ ಕ್ಲೀನ್ ಬೋಲ್ಡ್ ಆಗಿದ್ದಾರೆ. ಇದನ್ನೂ ಓದಿ : ಕ್ರೇಜಿಸ್ಟಾರ್ ವಿ.ರವಿಚಂದ್ರನ್ ತಾಯಿ ವಿಧಿವಶ

    ವಿಜಯ್ ದೇವರಕೊಂಡ ತಮ್ಮ ಮುಂದಿನ ಸಿನಿಮಾ ಲೈಗರ್‌ನಲ್ಲಿ ಲಾಂಗ್ ಹೇರ್ಸ್ ಬಿಟ್ಟು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಕ್ಕೆ ನಿರ್ದೇಶಕ ಪುರಿ ಜಗನ್ನಾಥ್ ಆ್ಯಕ್ಷನ್ ಕಟ್ ಹೇಳಿದ್ದು, ಸಿನಿಮಾದಲ್ಲಿ ವಿಜಯ್ ಬಾಕ್ಸರ್ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನೂ ವಿಜಯ್‍ಗೆ ಜೋಡಿಯಾಗಿ ಬಾಲಿವುಡ್ ನಟಿ ಅನನ್ಯ ಪಾಂಡೆ ಬಣ್ಣ ಹಂಚಿದ್ದಾರೆ. ಇದೇ 2022ರ ಆಗಸ್ಟ್ 25ಕ್ಕೆ ಲೈಗರ್ ಸಿನಿಮಾ ತೆರೆಕಾಣಲಿದೆ.

    ಇತ್ತೀಚೆಗಷ್ಟೇ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮದುವೆ ಕುರಿತ ಗಾಸಿಪ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಆದರೆ ಈ ವಿಚಾರವನ್ನು ವಿಜಯ್ ದೇವರಕೊಂಡ ಟ್ವೀಟ್ ಮಾಡುವ ಮೂಲಕ ಗಾಸಿಪ್‍ಗಳಿಗೆ ಫುಲ್‍ಸ್ಟಾಪ್ ಇಟ್ಟರು. ಸದ್ಯ ತಮ್ಮ ಮುಂದಿನ ಸಿನಿಮಾ ಬಿಡುಗಡೆಗಾಗಿ ವಿಜಯ್ ದೇವರಕೊಂಡ ಕಾಯುತ್ತಿದ್ದಾರೆ. ಇದನ್ನೂ ಓದಿ : ಮೊದಲ ಬಾರಿಗೆ ಒಂದಾದ ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ರಾಜಮೌಳಿ

  • ಲಿಂಗ ಪರಿವರ್ತನೆ ಶಸ್ತ್ರ ಚಿಕಿತ್ಸೆ ವೇಳೆ ವ್ಯಕ್ತಿ ಸಾವು – ಇಬ್ಬರ ಬಂಧನ

    ಲಿಂಗ ಪರಿವರ್ತನೆ ಶಸ್ತ್ರ ಚಿಕಿತ್ಸೆ ವೇಳೆ ವ್ಯಕ್ತಿ ಸಾವು – ಇಬ್ಬರ ಬಂಧನ

    ಹೈದರಾಬಾದ್: ಇಬ್ಬರು ಪದವಿಪೂರ್ವ ವೈದ್ಯಕೀಯ ವಿದ್ಯಾರ್ಥಿಗಳು ಯೂಟ್ಯೂಬ್ ನೋಡಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಯತ್ನಿಸಿದ್ದರಿಂದ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ.

    ಮೃತದುರ್ದೈವಿಯನ್ನು ಪ್ರಕಾಶಂ ಜಿಲ್ಲೆಯ ಶ್ರೀಕಾಂತ್ (28) ಎಂದು ಗುರುತಿಸಲಾಗಿದೆ. ಶ್ರೀಕಾಂತ್ ಕೆಲ ದಿನಗಳ ಹಿಂದೆ ಪತ್ನಿಯನ್ನು ತೊರೆದು ಒಂಟಿ ಜೀವನ ನಡೆಸುತ್ತಿದ್ದರು. ನಂತರ ಇಬ್ಬರು ಬಿಫಾರ್ಮಾ ವಿದ್ಯಾರ್ಥಿಗಳೊಂದಿಗೆ ಸಂಪರ್ಕಿಸಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಇಚ್ಛೆಯನ್ನು ಬಹಿರಂಗಪಡಿಸಿದ್ದರು. ಅಲ್ಲದೇ ಕಡಿಮೆ ಬೆಲೆಗೆ ಆಪರೇಷನ್ ಮಾಡುವಂತೆ ಕೇಳಿಕೊಂಡು ಶಸ್ತ್ರ ಚಿಕಿತ್ಸೆಗಾಗಿ ಮುಂಬೈಗೆ ತೆರಳಿದ್ದರು. ಇದನ್ನೂ ಓದಿ: ಯುದ್ಧಪೀಡಿತ ಉಕ್ರೇನ್‍ನಿಂದ ಗ್ರೌಂಡ್ ರಿಪೋರ್ಟ್ ಮಾಡಿದ ವಿದ್ಯಾರ್ಥಿಗಳು

    ನಂತರ ಶಸ್ತ್ರ ಚಿಕಿತ್ಸೆಗಾಗಿ ಮೂವರು ಖಾಸಗಿ ಲಾಡ್ಜ್‌ನ ಕೊಠಡಿಯನ್ನು ಬಾಡಿಗೆ ಪಡೆದರು. ಮಸ್ತಾನ್ ಮತ್ತು ಜೀವಾ ಎಂಬ ಇಬ್ಬರು ವಿದ್ಯಾರ್ಥಿಗಳು ಯೂಟ್ಯೂಬ್‍ನಲ್ಲಿ ವೀಡಿಯೊವನ್ನು ಅನುಸರಿಸುವಾಗ ಕಾರ್ಯವಿಧಾನವನ್ನು ಪ್ರಾರಂಭಿಸಿದರು. ದುರದೃಷ್ಟವಶಾತ್ ಶಸ್ತ್ರಚಿಕಿತ್ಸೆ ವೇಳೆ ಶ್ರೀಕಾಂತ್ ಅತಿಯಾದ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ.

    ಲಾಡ್ಜ್ ಸಿಬ್ಬಂದಿ ಕೊಠಡಿಯೊಳಗೆ ಶವ ಪತ್ತೆಯಾದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಇದೀಗ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಶ್ರೀಕಾಂತ್ ಸಾವಿಗೆ ಅತಿಯಾದ ನಿದ್ರಾಜನಕ ಮತ್ತು ರಕ್ತಸ್ರಾವವೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.  ಇದನ್ನೂ ಓದಿ: ಕರ್ಕಿವ್‍ನಲ್ಲಿ ಗ್ಯಾಸ್ ಪೈಪ್‍ಲೈನ್ ಸ್ಫೋಟಿಸಿದ ರಷ್ಯಾ ಸೇನೆ..!

  • ಮತ್ತೆ ಕಂಗನಾಗೆ ಬಂತು ಕಂಟಕ – ‘ಲಾಕ್‍ಆಪ್’ ವಿರುದ್ಧ ಕಾಪಿರೈಟ್

    ಮತ್ತೆ ಕಂಗನಾಗೆ ಬಂತು ಕಂಟಕ – ‘ಲಾಕ್‍ಆಪ್’ ವಿರುದ್ಧ ಕಾಪಿರೈಟ್

    ಮುಂಬೈ: ಹೈದರಾಬಾದ್ ಉದ್ಯಮಿ ‘ಲಾಕ್ ಅಪ್’ ಶೋ ವಿರುದ್ಧ ಕಾಪಿರೈಟ್ ಪ್ರಕರಣವನ್ನು ದಾಖಲಿಸಿದ್ದು, ಈ ಶೋ ಮುಂದೂಡುವ ಸಾಧ್ಯತೆಯಿದೆ ಎಂದು ಮೂಲಗಳಿಂದ ಕೇಳಿಬರುತ್ತಿದೆ.

    ಬಾಲಿವುಡ್ ತಲೈವಿ ಕಂಗನಾ ಹೋಸ್ಟ್ ಮಾಡುತ್ತಿರುವ ‘ಲಾಕ್‍ಆಪ್’ ಶೋ ವಿರುದ್ಧ ಹೈದರಾಬಾದ್ ಮೂಲದ ಉದ್ಯಮಿ ಸನೋಬರ್ ಬೇಗ್ ಕಾಪಿರೈಟ್ ಪ್ರಕರಣವನ್ನು ದಾಖಲಿಸಿದ್ದಾರೆ. ಪ್ರಸ್ತುತ ಅವರು ದೂರನ್ನು ಹೈದರಾಬಾದ್‍ನ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಕೊಟ್ಟಿದ್ದಾರೆ. ಈ ದೂರಿನಲ್ಲಿ ನನ್ನ ಐಡಿಯಾವನ್ನು ಕದ್ದು ‘ಲಾಕ್ ಅಪ್’ ಶೋ ಮಾಡುತ್ತಿದ್ದಾರೆ. ಈ ಹಿಂದೆ ನಾನು ಎಂಡೆಮೊಲ್ ಶೈನ್ ಇಂಡಿಯಾದ ಅಭಿಷೇಕ್ ಅವರೊಂದಿಗೆ ಈ ನನ್ನ ಪರಿಕಲ್ಪನೆಯನ್ನು ಹಂಚಿಕೊಂಡಿದ್ದೆ. ಅವನು ನನ್ನ ಐಡಿಯಾಗಳನ್ನು ಕದ್ದು ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ಮಾಡಿದ್ದಾನೆ ಎಂದು ತಿಳಿಸಿದರು. ಇದನ್ನೂ ಓದಿ:  ಸಾವು ಗೆದ್ದು ಬಂದವಳ ‘ಸಾಹಸ’ ಕಥೆ : ಇದು ಕಥೆಯಲ್ಲ ಜೀವನ

     

    View this post on Instagram

     

    A post shared by Erk❤️rek (@ektarkapoor)

    ದೂರಿನ ಆಧಾರದ ಮೇಲೆ ಸಿವಿಲ್ ನ್ಯಾಯಾಲಯವು ‘ಲಾಕ್‍ಆಪ್’ ಕಾರ್ಯಕ್ರಮವನ್ನು ಯಾವುದೇ ಪ್ಲಾಟ್‍ಫಾರ್ಮ್‍ನಲ್ಲಿ ಪ್ರದರ್ಶನ ಮಾಡಬಾರದು ಎಂದು ‘ಲಾಕ್ ಅಪ್’ ತಯಾರಕರಿಗೆ ನೋಟಿಸ್ ನೀಡಿದೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ನನ್ನ ಐಡಿಯಾ ಬಗ್ಗೆ 2018 ರಲ್ಲೇ ನೋಂದಾಯಿಸಿಕೊಂಡಿದ್ದೇನೆ. ನಂತರ ಈ ಬಗ್ಗೆ ಕೆಲಸ ಮಾಡಲು ನಿರ್ದೇಶಕ ಶಾಂತನು ರೆ ಅವರನ್ನು ನನ್ನ ಜೊತೆಗೆ ಸೇರಿಸಿಕೊಂಡೆ. ನಾವು ಈ ಐಡಿಯಾ ಬಗ್ಗೆ ಓಟಿಟಿವೊಂದಕ್ಕೆ ತಿಳಿಸಿದ್ದೆವು. ಆದರೆ ಇದರಿಂದ ಯಾವುದೇ ಪ್ರಯೋಜವಾಗಿಲ್ಲ. ನಮ್ಮ ಕೆಲಸ ಕಾರ್ಯರೂಪಕ್ಕೆ ಬರಲಿಲ್ಲ. ತದನಂತರ ಕೊರೊನಾದಿಂದ ಈ ಶೋ ಮಾಡುವುದು ಮತ್ತಷ್ಟು ವಿಳಂಬವಾಯಿತು ಎಂದು ವಿವರಿಸಿದರು.

    Lock Upp to GET postponed? Hyderabad businessman files copyright case against Lock Upp; DEETS INSIDE!

    ನಾನು ಅಭಿಷೇಕ್ ರೇಗೆ ಅವರೊಂದಿಗೆ ಬಹಳ ಸಮಯದಿಂದ ಸಂಪರ್ಕದಲ್ಲಿದ್ದೆ. ಈ ರೀತಿಯ ಶೋ ಮಾಡುವ ಬಗ್ಗೆ ನಾನು ಹೈದರಾಬಾದ್‍ನಲ್ಲಿ ವಿಷಯದ ಬಗ್ಗೆ ಹಲವಾರು ಸಭೆಗಳನ್ನು ನಡೆಸಿದ್ದೇನೆ. ಕೊರೊನಾದಿಂದ ಎಲ್ಲ ಮುಕ್ತವಾದ ನಂತರ ಈ ಶೋ ಮಾಡುವುದಾಗಿ ಎಲ್ಲರೂ ಭರವಸೆಯನ್ನು ಕೊಟ್ಟಿದ್ದರು. ಆದರೆ ಒಂದು ವಾರದ ಹಿಂದೆ, ನನ್ನ ಕನಸುಗಳುನ್ನು ಬೇರೊಬ್ಬರು ವಾಸ್ತವಕ್ಕೆ ತಿರುಗಿರುವುದನ್ನು ನಾನು ನೋಡಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ:  ಅಕ್ರಮದಲ್ಲಿ ಸಚಿವರು, ಶಾಸಕರ ಪಾತ್ರದ ಬಗ್ಗೆ ತನಿಖೆಯಾಗಲಿ: ಎಎಪಿ

    ಒಂದು ವಾರದ ಹಿಂದೆ ಲಾಕ್‍ಆಪ್ ಪ್ರೋಮೋಗಳನ್ನು ನೋಡಿದ ತಕ್ಷಣವೇ ನ್ಯಾಯಾಲಯದ ಮೊರೆ ಹೋಗಬೇಕು ಎಂದು ನಿರ್ಧರಿಸಿದ್ದೆ. ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್‍ನ ಮೊರೆಹೋಗಲು ಮತ್ತು ಹೋರಾಡಲು ಸಿದ್ಧ ಎಂದು ಉದ್ಯಮಿ ತಿಳಿಸಿದರು.

  • ಸಿನಿಮಾದೊಂದಿಗೆ ನನ್ನ ಪ್ರೀತಿ ಎಂದಿಗೂ ಕೊನೆಯಾಗುವುದಿಲ್ಲ: ಸಮಂತಾ

    ಸಿನಿಮಾದೊಂದಿಗೆ ನನ್ನ ಪ್ರೀತಿ ಎಂದಿಗೂ ಕೊನೆಯಾಗುವುದಿಲ್ಲ: ಸಮಂತಾ

    ಹೈದರಾಬಾದ್: ಟಾಲಿವುಡ್ ನಟಿ ಸಮಂತಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಇಂದಿಗೆ 12 ವರ್ಷ ಕಳೆದಿದೆ. ಸದ್ಯ ಇದೇ ಖುಷಿಯಲ್ಲಿರುವ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

    ಸದ್ಯ ಕಾತುವಾಕುಲ ರೆಂಡು ಕಾದಲ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಮಂತಾ, 2010ರಲ್ಲಿ ತೆಲುಗಿನ ರೋಮ್ಯಾಂಟಿಕ್ ಯೇ ಮಾಯಾ ಚೇಸಾವೆ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇಂದಿಗೆ 12 ವರ್ಷಗಳನ್ನು ಚಿತ್ರರಂಗದಲ್ಲಿ ಪೂರೈಸಿರುವ ಸಮಂತಾ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ವಿಶೇಷ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ :  ಮಹಾಶಿವರಾತ್ರಿಗೆ ಜೇಮ್ಸ್ ಸಿನಿಮಾ ಲಿರಿಕಲ್ ವೀಡಿಯೋ ಸಾಂಗ್ ರಿಲೀಸ್

    ಫೋಟೋ ಜೊತೆಗೆ ಇಂದು ಬೆಳಗ್ಗೆ ಎದ್ದ ಕೂಡಲೇ ನಾಣು ಚಿತ್ರರಂಗದಲ್ಲಿ 12 ವರ್ಷ ಪೂರೈಸಿರುವ ವಿಚಾರ ನೆನೆಪಾಯಿತು. ಲೈಟ್ಸ್, ಕ್ಯಾಮೆರಾ, ಆ್ಯಕ್ಷನ್ ಮತ್ತು ಮರೆಯಲಾದ 12 ವರ್ಷಗಳ ಕ್ಷಣಗಳು ನನ್ನನ್ನು ಸತ್ತುವರೆಯಿತು. ಈ ಜರ್ನಿಯಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಪ್ರೀತಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಸಿನಿಮಾದ ಬಗೆಗಿರುವ ನನ್ನ ಪ್ರೀತಿ ಎಂದಿಗೂ ಕೊನೆಯಾಗುವುದಿಲ್ಲ ಮತ್ತು ದಿನದಿಂದ ದಿನಕ್ಕೆ ಪ್ರೀತಿ ಹೆಚ್ಚಾಗುತ್ತಲೇ ಇರುತ್ತದೆ ಎಂದು ಆಶಿಸುತ್ತೇನೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ತಾಯಿಯ ಸಾವಿನ ನೋವಲ್ಲೂ ವೃತ್ತಿ ಪರತೆ ಮೆರೆದ ರಘು ದೀಕ್ಷಿತ್

     

    View this post on Instagram

     

    A post shared by Samantha (@samantharuthprabhuoffl)

    ಪ್ರಸ್ತುತ ಸಮಂತಾ ಗುಣಶೇಖರ್ ಅವರ ಶಾಕುಂತಲಂ ಮತ್ತು ವಿಘ್ನೇಶ್ ಶಿವನ್ ಅವರ ಕಾತುವಾಕುಲ ರೆಂಡು ಕಾದಲ್ ಸಿನಿಮಾಗಳಲ್ಲಿ ಅಭಿನಯಿಸಿದ್ದು, ಈ ಸಿನಿಮಾಗಳ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಗೊಂಡಿದ್ದ ಪುಷ್ಪಾ ಸಿನಿಮಾದ ಊ ಅಂಟಾವಾ ಸಾಂಗ್‍ನಲ್ಲಿ ಅಲ್ಲು ಅರ್ಜುನ್ ಜೊತೆ ಸಮಂತಾ ಹೆಜ್ಜೆ ಹಾಕಿದ್ದರು. ಇನ್ನೂ ಈ ಸಾಂಗ್ ಎಲ್ಲೆಡೆ ಭಾರೀ ಸದ್ದು ಮಾಡಿತ್ತು.

  • ರಶ್ಮಿಕಾ ಜೊತೆಗಿನ ಮದುವೆ ಗಾಸಿಪ್‍ಗೆ ಬ್ರೇಕ್ ಹಾಕಿದ ವಿಜಯ್‍ ದೇವರಕೊಂಡ

    ರಶ್ಮಿಕಾ ಜೊತೆಗಿನ ಮದುವೆ ಗಾಸಿಪ್‍ಗೆ ಬ್ರೇಕ್ ಹಾಕಿದ ವಿಜಯ್‍ ದೇವರಕೊಂಡ

    ಕ್ಷಿಣ ಭಾರತ ಚಿತ್ರರಂಗದಲ್ಲಿ ಟಾಲಿವುಡ್ ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರಿಗೆ ದೊಡ್ಡ ಹೆಸರು ಮಾಡುತ್ತಿದ್ದಾರೆ. ಇಬ್ಬರು ಈಗಾಗಲೇ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಅಲ್ಲದೇ ಪ್ರೇಕ್ಷಕರು ಇವರಿಬ್ಬರ ಆನ್‍ಸ್ಕ್ರೀನ್ ಕೆಮಿಸ್ಟ್ರಿಯನ್ನು ಬಹಳ ಇಷ್ಟಪಡುತ್ತಾರೆ. ಅಲ್ಲದೇ ಆಫ್ ಸ್ಕ್ರೀನ್‍ನಲ್ಲಿಯೂ ಇವರಿಬ್ಬರ ಮಧ್ಯೆ ಕೆಮಿಸ್ಟ್ರಿ ಚೆನ್ನಾಗಿದೆ. ಕೆಲ ದಿನಗಳ ಹಿಂದಷ್ಟೇ ಇವರ ಮದುವೆ ಬಗ್ಗೆ ವದಂತಿ ಹಬ್ಬಿತ್ತು. ಈ ವರ್ಷದ ಕೊನೆಯಲ್ಲಿ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂಬ ಊಹಾಫೋಹಗಳು ಹರಿದಾಡುತ್ತಿತ್ತು. ಆದರೆ ಈ ಎಲ್ಲಾ ಗಾಸಿಪ್‍ಗಳನ್ನು ವಿಜಯ್ ದೇವರಕೊಂಡ ಅಂತಹ ವಂದತಿಗಳು ಅ

    ಹೌದು ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಮದುವೆ ವಿಚಾರವಾಗಿ ಹರಿದಾಡುತ್ತಿರುವ ಸುದ್ದಿಗೆ, ವಿಜಯ್ ದೇವರಕೊಂಡ ತಮ್ಮ ಟ್ವಿಟ್ಟರ್‌ನಲ್ಲಿ ಅಂತಹ ವಂದತಿಗಳು ಅರ್ಥವಿಲ್ಲದ್ದು ಅಥವಾ ಅಸಂಬದ್ಧ ಎಂದು ಟ್ವೀಟ್ ಮಾಡುವ ಮೂಲಕ ಕಿಡಿಕಾರಿದ್ದಾರೆ. ಇದನ್ನೂ ಓದಿ : ಡಿಸೆಂಬರ್ ನಲ್ಲಿ ರಶ್ಮಿಕಾ ಮಂದಣ್ಣ -ದೇವರಕೊಂಡ ಮದುವೆ? ಏನಿದು ಮ್ಯಾರೇಜ್ ಕಹಾನಿ

    ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಗೀತಾಗೋವಿಂದಂ ಹಾಗೂ ಡಿಯರ್ ಕಾಮ್ರೆಡ್ ಎಂಬ ಎರಡು ಹಿಟ್ ಸಿನಿಮಾಗಳಲ್ಲಿ ಒಟ್ಟಾಗಿ ಅಭಿನಯಿಸಿದ್ದಾರೆ. ಈ ಎರಡು ಸಿನಿಮಾಗಳು ರಶ್ಮಿಕಾ ಹಾಗೂ ವಿಜಯ್‍ಗೆ ಬಿಗ್ ಸಕ್ಸಸ್ ತಂದು ಕೊಟ್ಟಿತು. ಜೊತೆಗೆ ಈ ಜೋಡಿ ಆನ್‍ಸ್ಕ್ರೀನ್ ಕೆಮಿಸ್ಟ್ರಿಗೆ ಪ್ರೇಕ್ಷಕರು ಕೂಡ ಫಿದಾ ಆಗಿದ್ದರು. ಅಲ್ಲದೇ ವಿಜಯ್ ಮತ್ತು ರಶ್ಮಿಕಾ ಆಗಾಗ ಒಟ್ಟಿಗೆ ಜೊತೆ, ಜೊತೆಯಾಗಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಜೊತೆಗೆ ಈ ಬಾರಿ ಹೊಸ ವರ್ಷವನ್ನು ಒಟ್ಟಿಗೆ ಗೋವಾದಲ್ಲಿ ಆಚರಿಸಿದ್ದರು. ಅಲ್ಲದೇ, ಮುಂಬೈನ ಹೋಟೆಲ್‍ನಲ್ಲಿ ತಡರಾತ್ರಿ ಒಟ್ಟಾಗಿ ಊಟ ಮಾಡಿದ ಫೋಟೋಗಳು ಮತ್ತು ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದ್ದವು.

    ಸದ್ಯ ವಿಜಯ್ ದೇವರಕೊಂಡ ಆ್ಯಕ್ಷನ್-ಥ್ರಿಲ್ಲರ್ ಲೈಗರ್ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾದಲ್ಲಿ ಎಂಎಂಎ ಬಾಕ್ಸರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನು ವಿಜಯ್‍ಗೆ ಜೋಡಿಯಾಗಿ ಅನನ್ಯ ಪಾಂಡೆ ಕಾಣಿಸಿಕೊಂಡಿದ್ದು, ಮಾಜಿ ಬಾಕ್ಸಿಂಗ್ ಚಾಂಪಿಯನ್ ಮೈಕ್ ಟೈಸನ್ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದಾರೆ. ಮತ್ತೊಂದೆಡೆ ರಶ್ಮಿಕಾ ಮಂದಣ್ಣ ನಟ ಅಲ್ಲು ಅರ್ಜುನ್ ಜೊತೆಗೆ ಅಭಿನಯಸಿದ್ದ ಪುಷ್ಪ ಸಿನಿಮಾದಲ್ಲಿ ಸಕ್ಸಸ್ ಅಲೆಯಲ್ಲಿದ್ದಾರೆ. ಇದನ್ನೂ ಓದಿ : ಜೀ ಕನ್ನಡ ವಾಹಿನಿಗೆ ಜಿಗಿದ ರಚಿತಾ ರಾಮ್ – Exclusive


    Rashmika, Vijaydevarakonda, Tollywood, Hyderabad

  • ಶಾಕುಂತಲಂ ಫಸ್ಟ್ ಪೋಸ್ಟರ್ ಔಟ್ – ಶಕುಂತಲೆ ರೂಪದಲ್ಲಿ ಸಮಂತಾ ಫುಲ್ ಮಿಂಚಿಂಗ್

    ಶಾಕುಂತಲಂ ಫಸ್ಟ್ ಪೋಸ್ಟರ್ ಔಟ್ – ಶಕುಂತಲೆ ರೂಪದಲ್ಲಿ ಸಮಂತಾ ಫುಲ್ ಮಿಂಚಿಂಗ್

    ಹೈದರಾಬಾದ್: ಟಾಲಿವುಡ್ ನಟಿ ಸಮಂತಾ ಅಭಿನಯದ ಬಹು ನಿರೀಕ್ಷಿತ ಪೌರಾಣಿಕ ಸಿನಿಮಾ ಶಾಕುಂತಲಂ ಫಸ್ಟ್ ಪೋಸ್ಟರ್ ಬಿಡುಗಡೆಗೊಂಡಿದೆ.

     

    ಶಾಕುಂತಲಂ ಸಿನಿಮಾದಲ್ಲಿ ರಾಜಕುಮಾರಿ ಪಾತ್ರದಲ್ಲಿ ಮಿಂಚುತ್ತಿರುವ ಸಮಂತಾ ಪೋಸ್ಟರ್‌ನಲ್ಲಿ ಬಿಳಿ ಸೀರೆಯುಟ್ಟು ಪ್ರಕೃತಿಯ ಹಾಗೂ ಜಿಂಕೆಗಳ ಮಧ್ಯೆ ಕುಳಿತು ಮಿರ ಮಿರ ಕಂಗೊಳಿಸುತ್ತಿರುವುದನ್ನು ಕಾಣಬಹುದಾಗಿದೆ. ಈ ಪೋಸ್ಟರ್ ಬಿಡುಗಡೆಯಾಗುತ್ತಿದ್ದಂತೆ ಲಕ್ಷಗಟ್ಟಲೆ ಲೈಕ್ಸ್ ಬಂದಿದ್ದು, ಸಮಂತಾ ಲುಕ್‍ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಹಿಂದೆಂದೂ ಕಾಣಿಸಿಕೊಳ್ಳದ ವಿಭಿನ್ನ ಪಾತ್ರದಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿರುವ ಸಮಂತಾರನ್ನು ಬಿಗ್ ಸ್ಕ್ರೀನ್ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

    ಈ ಚಿತ್ರಕ್ಕೆ ನಿರ್ದೇಶಕ ಗುಣಶೇಖರ್ ಆ್ಯಕ್ಷನ್ ಕಟ್ ಹೇಳಿದ್ದು, ನೀಲಿಮಾ ಗುಣ ಬಂಡವಾಳ ಹೂಡಿದ್ದಾರೆ. 2022ರ ಮೋಸ್ಟ್ ಎಕ್ಸ್‍ಪೆಕ್ಟೆಡ್ ಸಿನಿಮಾಗಳಲ್ಲಿ ಶಾಕುಂತಲಂ ಚಿತ್ರ ಕೂಡ ಒಂದಾಗಿದ್ದು, ಪ್ರಸ್ತುತ ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ನಡೆಯುತ್ತಿದೆ. ಈ ಸಿನಿಮಾದ ಮೊದಲ ಪೋಸ್ಟರ್‌ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಇದನ್ನೂ ಓದಿ: ಈ ಹುಡುಗಿಗೆ ಜಿಮ್ ನಲ್ಲಿ ಸಿಕ್ತಂತೆ ನಟಿಸೋಕೆ ಅವಕಾಶ

     

    View this post on Instagram

     

    A post shared by Samantha (@samantharuthprabhuoffl)

    ಈ ಸಿನಿಮಾ ಜನಪ್ರಿಯ ಭಾರತೀಯ ನಾಟಕ ಕಾಳಿದಾಸ ಹಾಗೂ ಶಾಕುಂತಲಾ ಪೇಮ ಕಥಾಹಂದರವನ್ನು ಆಧರಿಸಿದ್ದು, ನಟ ದೇವ್ ಮೋಹನ್ ದುಷ್ಯಂತನ ಪ್ರಾತದಲ್ಲಿ ಕಾಣಿಸಿಕೊಳ್ಳಿದ್ದಾರೆ. ಇನ್ನೂ ಶಾಕುಂತಲಂ ಪೋಷಕರ ಪಾತ್ರದಲ್ಲಿ ನಟಿ ಆದಿತಿ ಬಾಲನ್ ಮತ್ತು ಮೋಹನ್ ಬಾಬು ಅಭಿನಯಿಸುತ್ತಿದ್ದು, ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಪುತ್ರಿ ಅರ್ಹಾ ಕೂಡ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾಳೆ. ಚಿತ್ರಕ್ಕೆ ಮಣಿ ಶರ್ಮಾ ಅವರು ಸಂಗೀತ ಸಂಯೋಜಿಸಿದ್ದು, ಗುಣ ಟೀಮ್‍ ವರ್ಕ್ ಮತ್ತು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಜಂಟಿಯಾಗಿ ನಿರ್ಮಿಸಿದೆ.

    ಟಾಲಿವುಡ್‍ನ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳಲ್ಲಿ ಬ್ಯೂಸಿಯಾಗಿರುವ ನಟಿ ಸಮಂತಾ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇತ್ತೀಚೆಗಷ್ಟೇ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದ ಊ ಅಂಟಾವಾ ಮಾಮ ಸಾಂಗ್‍ನಲ್ಲಿ ಸೊಂಟ ಬಳುಕಿಸಿದ್ದ ಸಮಂತಾಗೆ ದೊಡ್ಡ ಹಿಟ್ ಸಿಕ್ಕಿತು. ಈ ಮುನ್ನ ಫ್ಯಾಮಿಲಿ ಮ್ಯಾನ್ ವೆಬ್ ಸರಣಿ ಕೂಡ ಸಕ್ಸಸ್ ಕಂಡಿತ್ತು. ಇದೀಗ ಮೊದಲ ಬಾರಿಗೆ ಪೌರಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಮಂತಾಗೆ ಶಾಕುಂತಲಂ ಸಿನಿಮಾ ಕೂಡ ಲಕ್ ತಂದು ಕೊಡುತ್ತಾ ಕಾದು ನೋಡಬೇಕಾಗಿದೆ. ಇದನ್ನೂ ಓದಿ: ಪುಷ್ಪ ಸಿನಿಮಾಗೆ ದಾದಾಸಾಹೇಬ್‌ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ – ರಣವೀರ್‌ ಸಿಂಗ್‌ ಅತ್ಯುತ್ತಮ ನಟ