Tag: Hyderabad

  • ಸಾರ್ವಜನಿಕ ಶೌಚಾಲಯ ಕದ್ದು, 45 ಸಾವಿರ ರೂ.ಗೆ ಮಾರಿದ ಕಿರಾತಕ

    ಸಾರ್ವಜನಿಕ ಶೌಚಾಲಯ ಕದ್ದು, 45 ಸಾವಿರ ರೂ.ಗೆ ಮಾರಿದ ಕಿರಾತಕ

    ಹೈದರಾಬಾದ್: ಆಟೋ ಟ್ರಾಲಿ ಚಾಲಕನೋರ್ವ ಸಾರ್ವಜನಿಕ ಪೋರ್ಟಬಲ್ ಶೌಚಾಲಯವನ್ನು ಕದ್ದು 45 ಸಾವಿರಕ್ಕೆ ಮಾರಾಟ ಮಾಡಿದ್ದಾನೆ.

    ಆರೋಪಿಯನ್ನು ಎಂ ಜೋಗಯ್ಯ ಎಂದು ಗುರುತಿಸಲಾಗಿದ್ದು, ಈತ ಮೇದಕ್ ಜಿಲ್ಲೆಯ ದೋಮಲಗುಡ ನಿವಾಸಿಯಾಗಿದ್ದಾನೆ. ಇದೀಗ ಮಲ್ಕಾಜ್‍ಗಿರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಅನ್ನೋದೊಂದು ಶಕ್ತಿ: ಬಸವರಾಜ್ ರಾಯರೆಡ್ಡಿ

    ಕೆಲ ದಿನಗಳ ಹಿಂದೆ ಜೋಗಯ್ಯ ಮತ್ತು ಆತನ ಇಬ್ಬರು ಸಹಚರರಾದ ಬುದ್ಧ ಭವನದ ಜಿಎಚ್‍ಎಂಸಿ ಕಾರ್ಯಕರ್ತ ಅರುಣ್ ಕುಮಾರ್ ಮತ್ತು ಮಲ್ಕಾಜ್‍ಗಿರಿಯ ಆನಂದಬಾಗ್‍ನಲ್ಲಿರುವ ಜೈನ್ ಕನ್‍ಸ್ಟ್ರಕ್ಷನ್‍ನ ಬಿಕ್ಷಪತಿ ಸಾರ್ವಜನಿಕ ಆಸ್ತಿಯನ್ನು ಕದ್ದು ಪರಾರಿಯಾಗಿದ್ದರು. ಇದನ್ನೂ ಓದಿ: 32 ವರ್ಷಗಳ ನಂತ್ರ ಕಾಶ್ಮೀರಿ ಪಂಡಿತರಿಗೆ ಸಿಕ್ಕಿದ್ದು ಸಿನಿಮಾ, ನ್ಯಾಯವಲ್ಲ: ಕೇಜ್ರಿವಾಲ್

    ನಂತರ ಜೋಗಯ್ಯ ಸಾರ್ವಜನಿಕ ಶೌಚಾಲಯವನ್ನು 45,000 ರೂ.ಗೆ ಮುಶೀರಾಬಾದ್‍ನ ಸ್ಕ್ರ್ಯಾಪ್ ವ್ಯಾಪಾರಿಗೆ ಮಾರಾಟ ಮಾಡಿದ್ದಾನೆ. ಬಳಿಕ ಬಂದ ಹಣವನ್ನು ತನ್ನ ವೈಯಕ್ತಿಕ ಖರ್ಚಿಗೆ ಇಟ್ಟುಕೊಂಡಿದ್ದ. ಆದರೆ ಕಳೆದ ವಾರ ಜಿಎಚ್‍ಎಂಸಿ ಜಿಲ್ಲಾಧಿಕಾರಿ ಜಿ.ರಾಜು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದರು. ಈ ವೇಳೆ ಜೋಗಯ್ಯ ಕಂಡು ಬಂದಿದ್ದು, ಇದೀಗ ಪೊಲೀಸರು ಆತನನ್ನು ಬಂಧಿಸಿ, ಆರೋಪಿ ಬಳಿ ಇದ್ದ ಹಣ ಮತ್ತು ಆಟೋ ಟ್ರಾಲಿಯನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

  • ಶಾಲೆಯಿಂದ ಗೇಟ್ ಪಾಸ್ – 10ನೇ ಕ್ಲಾಸ್ ಟಾಪರ್ ಆತ್ಮಹತ್ಯೆ

    ಶಾಲೆಯಿಂದ ಗೇಟ್ ಪಾಸ್ – 10ನೇ ಕ್ಲಾಸ್ ಟಾಪರ್ ಆತ್ಮಹತ್ಯೆ

    ಹೈದರಾಬಾದ್: ಹತ್ತನೇ ತರಗತಿಯ ಟಾಪರ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ತೂರಿನ ಪಲಮನೇರ್ ನಡೆದಿದೆ.

    ಸೋಡಾ ವ್ಯಾಪಾರ ಮಾಡುತ್ತಿದ್ದವರ ಪುತ್ರಿ ಮಿಸ್ಬಾ ಫಾತಿಮಾ ಗಂಗಾವರಂನ ಬ್ರಹ್ಮರ್ಷಿ ಪ್ರೌಢಶಾಲೆಯಲ್ಲಿ ಓದುತ್ತಿದ್ದಳು. ಪ್ರಾಂಶುಪಾಲ ರಮೇಶ್ ಅವರು ಶೈಕ್ಷಣಿಕ ವರ್ಷ ಮುಗಿಯುವ ಕೆಲವೇ ದಿನಗಳಲ್ಲಿ ಮಿಸ್ಬಾ ಅವರಿಗೆ ವರ್ಗಾವಣೆ ಪ್ರಮಾಣಪತ್ರ (ಟಿಸಿ) ನೀಡಿದ್ದರು. ಪ್ರಾಂಶುಪಾಲರ ಅನುಚಿತ ವರ್ತನೆಯಿಂದ ಬೇಸತ್ತು ಮಿಸ್ಬಾ ಫಾತಿಮಾ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಮನೆ ಮುಂದೆ ಬುಲ್ಡೋಜರ್ ಪ್ರತ್ಯಕ್ಷ – ಪರಾರಿಯಾಗಿದ್ದ ಯುಪಿ ರೇಪ್ ಆರೋಪಿ ಶರಣು

    ತಾನು ಕ್ಲಾಸ್ ಟಾಪರ್ ಆಗಿದ್ದ ಕಾರಣ ತನ್ನ ಸಹಪಾಠಿಯ ತಂದೆ ಅವರ ಮಗಳು ಕ್ಲಾಸ್ ಟಾಪರ್ ಆಗಬೇಕೆಂಬ ಉದ್ದೇಶದಿಂದ ಶಾಲೆಯ ಆಡಳಿತ ಮಂಡಳಿಗೆ ತನ್ನನ್ನು ತೆಗೆದುಹಾಕಲು ಒತ್ತಾಯಿಸುತ್ತಿದ್ದರು ಎಂದು ಮಿಸ್ಬಾ ಫಾತಿಮಾ ಡೆತ್ ನೋಟ್‍ನಲ್ಲಿ ಉಲ್ಲೇಖಿಸಿದ್ದಾಳೆ.

    ಸದ್ಯ ತೆಲುಗು ದೇಶಂ ಪಕ್ಷದ ನಾಯಕ ಮತ್ತು ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್, ಮಿಸ್ಬಾ ಫಾತಿಮಾ ಸಹಪಾಠಿಯ ತಂದೆ ಆಡಳಿತ ಪಕ್ಷದ ನಾಯಕನಾಗಿರುವ ಕಾರಣ ಅವರ ಮೇಲೆ ಪೊಲೀಸರು ಸಹ ಶೀಘ್ರವಾಗಿ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮಾತುಬಾರದ ಬಾಲಕನ ಕೊಂದು ಗೋಣಿ ಚೀಲದಲ್ಲಿ ತುಂಬಿ ಎಸೆದ್ರು

    ಮೃತ ಮಿಸ್ಬಾ ಫಾತಿಮಾ ವೈಎಸ್‌ಆರ್‌ಸಿಪಿ ನಾಯಕನ ಮಗಳಿಗಿಂತ ಹೆಚ್ಚು ಅಂಕ ಗಳಿಸಿದ್ದಳು. ಹಾಗಾಗಿ ಆಕೆಗೆ ಕಿರುಕುಳ ನೀಡುವುದರ ಜೊತೆಗೆ ಶಾಲೆಯ ಪ್ರಾಂಶುಪಾಲರ ಬೆದರಿಕೆಯೊಡ್ಡಿದ್ದರಿಂದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವೈಎಸ್‌ಆರ್‌ಸಿಪಿ ನಾಯಕ ಸುನಿಲ್ ಅವರು ತಮ್ಮ ಮಗಳು ಪೂಜಿತಾ ಕ್ಲಾಸ್ ಟಾಪರ್ ಆಗಬೇಕೆಂದು ಬಯಸಿದ್ದರು. ಆದರೆ ನಜೀರ್ ಅಹ್ಮದ್ ಮತ್ತು ನಸೀಮಾ ಅವರು ದಿನಗೂಲಿ ಕಾರ್ಮಿಕರಾಗಿದ್ದರೂ ಮಿಸ್ಬಾ ಉತ್ತಮ ಅಂಕಗಳಿಸುತ್ತಿದ್ದಳು ಎಂದು ತಿಳಿದ್ದಾರೆ.

    ಇದೊಂದು ಅಮಾನವೀಯ, ಭಯಾನಕ ಮತ್ತು ಅವಮಾನಕರ ಘಟನೆಯಾಗಿದ್ದು, ಇದರಲ್ಲಿ ಆಕೆಯ ಯಾವುದೇ ತಪ್ಪಿಲ್ಲದೆ ಬಾಲಕಿಯನ್ನು ಶಾಲೆಯಿಂದ ತೆಗೆದುಹಾಕುವುದು ಅತ್ಯಂತ ಖಂಡನೀಯ. ಆಕೆಯ ಸಾವಿಗೆ ಕಾರಣರಾದವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯ ಕೇಳಿ ಬಂದಿದೆ.

  • ಸಿಕಂದರಾಬಾದ್‍ನಲ್ಲಿ ಟಿಂಬರ್ ಗೋಡಾನ್‍ಗೆ ಬೆಂಕಿ- 11 ಮಂದಿ ಸಜೀವ ದಹನ

    ಸಿಕಂದರಾಬಾದ್‍ನಲ್ಲಿ ಟಿಂಬರ್ ಗೋಡಾನ್‍ಗೆ ಬೆಂಕಿ- 11 ಮಂದಿ ಸಜೀವ ದಹನ

    ಹೈದರಾಬಾದ್: ತೆಲಂಗಾಣದ ಸಿಕಂದರಾಬಾದ್‍ನ ಟಿಂಬರ್ ಗೋಡಾನ್‍ನಲ್ಲಿ ಭೀಕರ ಬೆಂಕಿ ದುರಂತ ಸಂಭವಿಸಿದ್ದು, ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ.

    ಸಿಕಂದರಾಬಾದ್‍ನ ಬೋಯಗೂಡದ  ಟಿಂಬರ್ ಗೋಡಾನ್‍ನಲ್ಲಿ ಈ ಘಟನೆ ನಡೆದಿದೆ. ಸಾವನ್ನಪ್ಪಿದ 11 ಜನರು ಬಿಹಾರ್ ಮೂಲದವರಾಗಿದ್ದರು. ಸಿಕಂದರಾಬಾದ್ ರೈಲ್ವೆ ನಿಲ್ದಾಣದ ಸಮೀಪವಿರುವ ಜನಬಿಡ ವಸತಿ ಕಾಲೋನಿಯಲ್ಲಿ ಸುಮಾರು 13 ಕಾರ್ಮಿಕರು ಗೋದಾಮಿನ ಮೇಲಿನ ಮಹಡಿಯಲ್ಲಿ ಮಲಗಿದ್ದಾಗ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಮರದ ದಿಮ್ಮಿಗಳು, ಉರುವಲುಗಳ ಸಂಗ್ರಹ ಇದ್ದಿದ್ದರಿಂದ ಬೆಂಕಿ ಬಹುಬೇಗ ಹರಡಿತು. ಕಾರ್ಮಿಕರು ಎಷ್ಟೇ ಪ್ರಯತ್ನ ಪಟ್ಟರೂ ಅದನ್ನು ತಡೆಯಲು ಸಾಧ್ಯವಾಗಲಿಲ್ಲ. ದಟ್ಟವಾದ ಹೊಗೆಯೊಂದಿಗೆ ಬೆಂಕಿ ಭಾರಿ ಪ್ರಮಾಣದಲ್ಲಿ ಹೊತ್ತಿ ಉರಿದಿದೆ.

    ಪ್ರಾಥಮಿಕ ತನಿಖೆಯ ಪ್ರಕಾರ ಶಾರ್ಟ್ ಸರ್ಕ್ಯೂಟ್‍ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

    ಎಂಟು ಅಗ್ನಿಶಾಮಕ ಭೇಟಿ ನೀಡಿದ್ದು, ಬೆಳಿಗ್ಗೆ 7ರ ಸುಮಾರಿಗೆ ಬೆಂಕಿಯನ್ನು ಹತೋಟಿಗೆ ತರಲಾಯಿತು. ಇಲ್ಲಿಯವರೆಗೆ 11 ಶವಗಳನ್ನು ತೆಗೆಯಲಾಗಿದ್ದು, ಅವೆಲ್ಲವೂ ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಗುರುತಿಸಲಾಗದ ಸ್ಥಿತಿಯಲ್ಲಿವೆ. ಮತ್ತೊಬ್ಬ ಕಾರ್ಮಿಕ ಬೆಂಕಿಯಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದು, ಆತನನ್ನು ಗಾಂಧಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಸತತ 2ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ

    ಘಟನಾ ಸ್ಥಳಕ್ಕೆ ರಾಜ್ಯ ಸಚಿವ ತಲಸಾನಿ ಶ್ರೀನಿವಾಸ ಯಾದವ್ ಭೇಟಿ ನೀಡಿದ್ದು, ಮೃತರ ಕುಟುಂಬಗಳಿಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಸಶಸ್ತ್ರ ಪಡೆಗಳ ಪೂರ್ವಸಿದ್ಧತಾ ಶಾಲೆಗೆ ಭಗತ್ ಸಿಂಗ್ ಹೆಸರು: ಕೇಜ್ರಿವಾಲ್

  • ಎಳನೀರಿನಲ್ಲಿ ಮದ್ಯ ಹಾಕಿ ಕೊಟ್ಟಿದ್ದೇ ಈ ನಟಿ ಸಾವಿಗೆ ಕಾರಣವಾಯ್ತಾ?

    ಎಳನೀರಿನಲ್ಲಿ ಮದ್ಯ ಹಾಕಿ ಕೊಟ್ಟಿದ್ದೇ ಈ ನಟಿ ಸಾವಿಗೆ ಕಾರಣವಾಯ್ತಾ?

    ಸೋಷಿಯಲ್ ಮೀಡಿಯಾದ ಸ್ಟಾರ್ ಮತ್ತು ನಟಿ ಡಾಲಿ ಡಿಕ್ರೂಜ್ ಅಲಿಯಾಸ್ ಗಾಯತ್ರಿ ಮಾರ್ಚ್ 18ರಂದು ನಡೆದ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದರು. ಸ್ನೇಹಿತರ ಜೊತೆ ಹೋಳಿ ಪಾರ್ಟಿಗೆ ಎಂದು ಪಬ್ ವೊಂದಕ್ಕೆ ತೆರಳಿದ್ದ ಅವರು, ಅಲ್ಲಿಂದ ವಾಪಸ್ ಮನೆಗೆ ಬರುವಾಗ ಕಾರು ಅಪಘಾತವಾಗಿತ್ತು. ಚಾಲಕ ನಿಯಂತ್ರಣ ತಪ್ಪಿ ಫುಟ್ ಪಾತ್ ಮೇಲೆ ಹಾರಿದ್ದ ಕಾರು, ಈ ನಟಿಯ ಪ್ರಾಣ ತಗೆದಿತ್ತು. ಈ ಪ್ರಕರಣವನ್ನು ಬೆನ್ನುಹತ್ತಿದ್ದ ಪೊಲೀಸರಿಗೆ ಒಂದಷ್ಟು ಪ್ರಾಥಮಿಕ ಮಾಹಿತಿಗಳು ಲಭ್ಯವಾಗಿವೆ. ಇದನ್ನೂ ಓದಿ : ಮಿಲ್ಕಿ ಬ್ಯೂಟಿಗೆ ಬಿಕಿನಿನೂ ಒಪ್ಪತ್ತೆ ಅಂದ್ರು ಫ್ಯಾನ್ಸ್ : ಖುಷ್ ಅಂದ ತಮನ್ನಾ

    ಹೋಳಿ ಹಬ್ಬದ ದಿನ ಹೈದರಾಬಾದ್ ನಲ್ಲಿ ಮದ್ಯ ನಿಷೇಧವಾಗಿತ್ತು. ಹಾಗಾಗಿಯೇ ಇವರು ಮದ್ಯ ಕುಡಿಯಲೆಂದು ಉಪಾಯ ಮಾಡಿದ್ದು ಎಳನೀರನ್ನು. ಅದಕ್ಕೆ ಮಿಕ್ಸ್ ಮಾಡಿ ಗೊತ್ತಿಲ್ಲದಂತೆ ಗಾಯತ್ರಿ ಮತ್ತು ಅವರ ಜೊತೆ ಹೋಗಿದ್ದ ರೋಹಿತ್ ಗೆ ಕೊಟ್ಟಿದ್ದಾರೆ. ತಾವು ಎಷ್ಟು ಕುಡಿದಿದ್ದೇವೆ ಎಂದು ಅರಿಯದೇ ಕಂಠಪೂರ್ತಿ ಕುಡಿದು ಕಾರು ಚಲಾಯಿಸಿದ್ದಾರೆ ಎನ್ನಲಾಗುತ್ತಿದೆ.

    ತಾನು ಮನೆಯಲ್ಲೇ ಹೋಳಿ ಹಬ್ಬ ಆಚರಿಸುವುದಾಗಿ ಗಾಯತ್ರಿ ಹೇಳಿದ್ದರೂ, ಒತ್ತಾಯ ಮಾಡಿ ರೋಹಿತ್ ಮತ್ತು ಸ್ನೇಹಿತರು ಆಕೆಯನ್ನು ಪ್ರಿಸ್ಮಾ ಎಂಬ ಪಬ್ ಗೆ ಕರೆದುಕೊಂಡು ಹೋಗಿದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ. ಮನೆಯಲ್ಲೇ ಹಬ್ಬ ಆಚರಿಸಿದ್ದರೆ ಮಗಳ ಪ್ರಾಣ ಉಳಿಯತ್ತಿತ್ತು ಎಂದಿದ್ದಾರೆ ಕುಟುಂಬದ ಸದಸ್ಯರು. ಇದನ್ನೂ ಓದಿ : ತೂಫಾನಿಗೆ ಸೋಷಿಯಲ್ ಮೀಡಿಯಾ ಗಡಗಡ: ಪೂಜೆಗೆ ಬಂದ ಯಶ್ ಅಭಿಮಾನಿಗಳು

    ಗಾಯತ್ರಿ ಮತ್ತು ಸ್ನೇಹಿತರಿದ್ದ ಆ ಕಾರು ತುಂಬಾ ವೇಗವಾಗಿ ಚಲಿಸಿದೆ. ಫುಟ್ ಪಾತ್ ಗೆ ಢಿಕ್ಕಿ ಹೊಡೆದು, ಅಲ್ಲಿಂದ ಒಂದಷ್ಟು ಅಡಿ ಉರುಳುತ್ತಾ ಸಾಗಿ ಅಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೂ ತಾಗಿದೆ. ಆಕೆಯು ಕೂಡ ಅಲ್ಲಿಯೇ ಪ್ರಾಣ ಬಿಟ್ಟಿದ್ದಾರಂತೆ.

  • ನಿರುದ್ಯೋಗ ತುರ್ತು ಪರಿಸ್ಥಿತಿಗೆ ಕರೆ ನೀಡಿ – ಸಿಎಂ ಕೆಸಿಆರ್‌ಗೆ ಕಾಂಗ್ರೆಸ್ ಒತ್ತಾಯ

    ನಿರುದ್ಯೋಗ ತುರ್ತು ಪರಿಸ್ಥಿತಿಗೆ ಕರೆ ನೀಡಿ – ಸಿಎಂ ಕೆಸಿಆರ್‌ಗೆ ಕಾಂಗ್ರೆಸ್ ಒತ್ತಾಯ

    ಹೈದರಾಬಾದ್: ಕಾಂಗ್ರೆಸ್ ಪಕ್ಷವು ತೆಲಂಗಾಣದಲ್ಲಿ ನಿರುದ್ಯೋಗ ತುರ್ತು ಪರಿಸ್ಥಿತಿಗೆ ಕರೆ ನೀಡಿದ್ದು, ರಾಜ್ಯದ ನಿರುದ್ಯೋಗ ಪರಿಸ್ಥಿತಿಯಿಂದ 40 ಲಕ್ಷ ಜನರು ಬಳಲುತ್ತಿದ್ದಾರೆ ಎಂದು ತಿಳಿಸಿದೆ.

    ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ವಕ್ತಾರ ಹಾಗೂ ತೆಲಂಗಾಣ ಕಾಂಗ್ರೆಸ್ ಹಿರಿಯ ನಾಯಕ ಡಾ.ದಾಸೋಜು ಶ್ರವಣ್ ಕುಮಾರ್ ಮಾತನಾಡಿ, ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ನಿರುದ್ಯೋಗ ಪರಿಸ್ಥಿತಿಯನ್ನು ಪರಿಹರಿಸಲು ಮತ್ತು ನಿವಾರಿಸಲು ಸ್ಪಷ್ಟವಾದ ಉಪಕ್ರಮಗಳನ್ನು ಅನ್ವೇಷಿಸಬೇಕು ಎಂದಿದ್ದಾರೆ.

    ರಾಜ್ಯದ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲು ನಿರ್ದಿಷ್ಟ ಕಾರ್ಯ ನೀತಿಗಳೊಂದಿಗೆ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸಲು ರಾಷ್ಟ್ರೀಯ ಮಟ್ಟದ ಕೈಗಾರಿಕೋದ್ಯಮಿಗಳು, ಶಿಕ್ಷಣ ತಜ್ಞರು, ಬುದ್ಧಿಜೀವಿಗಳು, ತಂತ್ರಜ್ಞರು ಮತ್ತು ನೀತಿ ನಿರೂಪಕರನ್ನು ಒಳಗೊಂಡ ಉನ್ನತ ಮಟ್ಟದ ಕಾರ್ಯಪಡೆಯನ್ನು ಸಂಘಟಿಸಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ : ಪಠಾಣ್ ಚಿತ್ರಕ್ಕಾಗಿ ಬಿಕಿನಿ ತೊಟ್ಟ ದೀಪಿಕಾ ಪಡುಕೋಣೆ: ಫೋಟೋ ಲೀಕ್

    ಖಾಸಗಿ ವಲಯದಲ್ಲೂ ಶೇ.95ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ಮೀಸಲಿಡುವಂತೆ ಶಾಸನಬದ್ಧ ಕಾಯಿದೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆಯಿಂದ 40 ಲಕ್ಷ ಜನರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ : ಸೂಟ್‍ಕೇಸ್‍ನಲ್ಲಿ 40 ಕೆಜಿ ಹಸಿರು ಬಟಾಣಿ ತುಂಬಿ ಸಾಗಿಸಿದ ಐಪಿಎಸ್ ಅಧಿಕಾರಿ

  • ವಿಧಾನಸಭೆಯಿಂದ ಟಿಡಿಪಿ ಪಕ್ಷದ 11 ಶಾಸಕರು ಅಮಾನತು

    ವಿಧಾನಸಭೆಯಿಂದ ಟಿಡಿಪಿ ಪಕ್ಷದ 11 ಶಾಸಕರು ಅಮಾನತು

    ಹೈದರಾಬಾದ್: ಸದನದ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದಡಿ ವಿರೋಧ ಪಕ್ಷ ತೆಲುಗು ದೇಶಂ ಪಕ್ಷದ ಪ್ರಮುಖ 11 ಸದಸ್ಯರನ್ನು ಇಂದು ಆಂಧ್ರಪ್ರದೇಶ ವಿಧಾನಸಭೆಯಿಂದ ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಲಾಗಿದೆ.

    ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಟಿಡಿಪಿ ಶಾಸಕರ ಮೇಲೆ ವಾಗ್ದಾಳಿ ನಡೆಸಿ, ನಾಗರಿಕರ ರೀತಿಯಲ್ಲಿ ವರ್ತಿಸುವಂತೆ ಮತ್ತು ಸದನದಲ್ಲಿ ತಮಗೆ ಮಾತನಾಡಲು ಅವಕಾಶ ಮಾಡಿಕೊಡುವಂತೆ ಕೇಳಿಕೊಂಡರು. ಆದರೆ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ 11 ಜನರ ವಿಚಾರವಾಗಿ ಚರ್ಚೆಗೆ ಒತ್ತಾಯಿಸಿ ಪ್ರತಿಪಕ್ಷದ ಸದಸ್ಯರು ಘೋಷಣೆಯನ್ನು ಕೂಗಿದಾಗ, ಶಾಸಕಾಂಗ ವ್ಯವಹಾರಗಳ ಸಚಿವ ಬುಗ್ಗನ ರಾಜೇಂದ್ರನಾಥ್ ಟಿಡಿಪಿ ಶಾಸಕರ ಅಮಾನತು ಪ್ರಸ್ತಾಪವನ್ನು ಮಂಡಿಸಿದರು. ಅಮಾನತುಗೊಂಡ ಸದಸ್ಯರು ಸದನದಿಂದ ನಿರ್ಗಮಿಸಿದ ನಂತರ ಧ್ವನಿ ಮತದ ಮೂಲಕ ಪ್ರಸ್ತಾವನೆಯನ್ನು ಅಂಗೀಕರಿಸಲಾಯಿತು.

    ಸೋಮವಾರ ಕೂಡ ಇದೇ ವಿಚಾರವಾಗಿ ಬಜೆಟ್ ಅಧಿವೇಶನದ ವೇಳೆ ಗಲಾಟೆ ಮಾಡಿದ ಐದು ಟಿಡಿಪಿ ಶಾಸಕರನ್ನು ವಿಧಾನಸಭೆಯಿಂದ ಅಮಾನತುಗೊಳಿಸಲಾಗಿತು. ಅಲ್ಲದೇ ಈ ಕುರಿತಂತೆ ಮಂಗಳವಾರ ಮತ್ತೊಮ್ಮೆ ಸದನದಲ್ಲಿ ಮಾತನಾಡಿದ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು, ಪಶ್ಚಿಮ ಗೋದಾವರಿ ಜಿಲ್ಲೆಯ ಜಂಗಾರೆಡ್ಡಿ ಗುಡೆಮ್‍ನಲ್ಲಿ ಸಂಭವಿಸಿದ ಸಾವುಗಳು ಆಕಸ್ಮಿಕ ಕಾರಣಗಳಿಂದ ಸಂಭವಿಸಿವೆಯೇ ಹೊರತು ಟಿಡಿಪಿ ಆರೋಪಿಸಿದಂತೆ ಅಕ್ರಮ ಕಳ್ಳಬಟ್ಟಿಯಿಂದಲ್ಲ ಎಂದು ಸ್ಪಷ್ಟನೆ ನೀಡಿದರು. ಉರ್ದು ಶಾಲೆಗಳು ಕಾನೂನು ಪಾಲನೆ ಮಾಡಬೇಕು: ಬಿ.ಸಿ. ನಾಗೇಶ್

    ಈಗಾಗಲೇ ಹಲವು ಶವಗಳನ್ನು ಸುಟ್ಟು ಹಾಕಲಾಗಿದ್ದು, ಇಲ್ಲಿಯವರೆಗೂ ಈ ವಿಚಾರವಾಗಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಒಂದು ಪ್ರಕರಣದಲ್ಲಿ ಕೆಲವು ಅನುಮಾನ ವ್ಯಕ್ತವಾಗಿದ್ದರಿಂದ ಅಧಿಕಾರಿಗಳು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದರು. ಏನಾದರೂ ತಪ್ಪಾಗಿದ್ದರೆ ನಾವೇಕೆ ಹಾಗೆ ಮಾಡುತ್ತೇವೆ ಎಂದು ಪ್ರಶ್ನಿಸಿದರು.

    ಪೊಲೀಸ್ ಠಾಣೆ, ವಾರ್ಡ್ ಸೆಕ್ರೆಟರಿಯೇಟ್ ಮತ್ತು ಮಹಿಳಾ ಪೊಲೀಸರಿರುವ ಅಂತಹ ಸ್ಥಳದಲ್ಲಿ ಅಕ್ರಮವಾಗಿ ಅರಕ್ ಭಟ್ಟಿ ಇಳಿಸಲು ಸಾಧ್ಯವೇ? ನಿಮ್ಮ ಮೆದುಳನ್ನು ಬಳಸಿ ಮತ್ತು ತಾರ್ಕಿಕವಾಗಿ ಯೋಚಿಸಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಫಿಟ್, ಆರೋಗ್ಯವಾಗಿರಲು ಕುದುರೆ ಸವಾರಿ ಮಾಡುತ್ತಾ ಆಫೀಸ್‍ಗೆ ತೆರಳ್ತಿದ್ದಾರೆ ಈ ವ್ಯಕ್ತಿ!

  • ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ಅಜ್ಜ, ಮಗ, ಮೊಮ್ಮಗ ಸಾವು

    ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ಅಜ್ಜ, ಮಗ, ಮೊಮ್ಮಗ ಸಾವು

    ಹೈದರಾಬಾದ್: ನೀರಿನಲ್ಲಿ ಮುಳುಗುತ್ತಿರುವ ಒಬ್ಬರನೊಬ್ಬರು ಪರಸ್ಪರ ಉಳಿಸಲು ಹೋಗಿ, ಒಂದೇ ಕುಟುಂಬದ ಮೂರು ತಲೆಮಾರುಗಳ ಪುರುಷರು ಸರೋವರದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ನಡೆದಿದೆ.

    ಕೃಷ್ಣಮೂರ್ತಿ (65), ಲಕ್ಕಿ (12), ನಾಗರಾಜು (35) ಮೃತರಾಗಿದ್ದಾರೆ. ನರಸಂಪೇಟೆ ಮಂಡಲದ ಚಿನ್ನ ಗುರಿಜಾಲ ಗ್ರಾಮದ ನಿವಾಸಿಗಳಾಗಿದ್ದಾರೆ. ಕೆರೆಯಲ್ಲಿ ಮುಳುಗುತ್ತಿರುವ ಒಬ್ಬರನ್ನೊಬ್ಬರು ರಕ್ಷಣೆ ಮಾಡಲು ಹೋಗಿ ಮೂವರು ಪ್ರಾಣ ಬಿಟ್ಟಿದ್ದಾರೆ. ಇದನ್ನೂ ಓದಿ: ರಣಬೀರ್ ಕಪೂರ್ ಸ್ಟೆಷಲ್ ಸಾಂಗ್‍ಗೆ ರಶ್ಮಿಕಾ ಸ್ಟೆಪ್ 

    ಕೃಷ್ಣಮೂರ್ತಿ ಕೆರೆಯಲ್ಲಿ ಕಾಲು ತೊಳೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದರು. ಕೃಷ್ಣಮೂರ್ತಿ ಜೊತೆಯಲ್ಲಿದ್ದ ಅವರ ಮೊಮ್ಮಗ ಲಕ್ಕಿ ತಾತನನ್ನು ರಕ್ಷಿಸಲು ಕೆರೆಗೆ ಹಾರಿದ್ದಾನೆ. ಈ ವೇಳೆ ಇಬ್ಬರೂ ಮುಳುಗಲು ಪ್ರಾರಂಭಿಸಿದರು. ಸಮೀಪದಲ್ಲಿಯೇ ಇದ್ದ ಕೃಷ್ಣಮೂರ್ತಿ ಮಗ ನಾಗರಾಜು ತನ್ನ ತಂದೆ ಮತ್ತು ಮಗನನ್ನು ರಕ್ಷಿಸಲು ಸರೋವರಕ್ಕೆ ಹಾರಿದನು. ಮೂವರು ನೀರಿನ ಆಳಕ್ಕೆ ಹೋಗಿ ಪ್ರಾಣ ಬಿಟ್ಟಿದ್ದಾರೆ. ಇದನ್ನೂ ಓದಿ: ಭಾರತ Vs ಶ್ರೀಲಂಕಾ ಟೆಸ್ಟ್ – ಅಪ್ಪು ಫೋಟೋ ಜೊತೆ ಚಿನ್ನಸ್ವಾಮಿಯಲ್ಲಿ ಕಾಣಿಸಿಕೊಂಡ ಸುದೀಪ್

    ಪೊಲೀಸರು ಗ್ರಾಮಕ್ಕೆ ಧಾವಿಸಿ ಸ್ಥಳೀಯರ ಸಹಾಯದಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಗ್ರಾಮಸ್ಥರ ಪ್ರಕಾರ, ಅವರಲ್ಲಿ ಯಾರಿಗೂ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ.

  • ತೆಲುಗಿನ ನಟ ಬೆಲ್ಲಂಕೊಂಡ ವಿರುದ್ಧ ವಂಚನೆಯ ಆರೋಪ, ಪ್ರಕರಣ ದಾಖಲು

    ತೆಲುಗಿನ ನಟ ಬೆಲ್ಲಂಕೊಂಡ ವಿರುದ್ಧ ವಂಚನೆಯ ಆರೋಪ, ಪ್ರಕರಣ ದಾಖಲು

    ಹೈದರಾಬಾದ್: ಫೈನಾನ್ಷಿಯರ್‌ಗೆ 85 ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ ತೆಲುಗು ಚಿತ್ರ ನಿರ್ಮಾಪಕ ಬೆಲ್ಲಂಕೊಂಡ ಸುರೇಶ್ ಮತ್ತು ಅವರ ಪುತ್ರ ಮತ್ತು ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ವಿರುದ್ಧ ಹೈದರಾಬಾದ್ ಪೊಲೀಸರು ವಂಚನೆ ಪ್ರಕರಣ ದಾಖಲಿಸಿದ್ದಾರೆ.

    ನಗರದ ನ್ಯಾಯಾಲಯದ ನಿರ್ದೇಶನದ ಮೇರೆಗೆ ಕೇಂದ್ರ ಅಪರಾಧ ಠಾಣೆ (ಸಿಸಿಎಸ್) ಪೊಲೀಸರು ಇಬ್ಬರ ವಿರುದ್ಧವೂ ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ.

    2018ರಲ್ಲಿ ನಿರ್ಮಾಪಕ ಮತ್ತು ಅವರ ಪುತ್ರ ಸಿನಿಮಾ ಮಾಡಲು ತಮ್ಮಿಂದ ಕಂತುಗಳಲ್ಲಿ ಹಣ ತೆಗೆದುಕೊಂಡಿದ್ದಾರೆ ಎಂದು ದೂರಿ ವಿಎಲ್ ಶ್ರವಣ್ ಕುಮಾರ್ ನ್ಯಾಯಾಲಯದ ಮೊರೆ ಹೋಗಿದ್ದರು. ಮಾಲಿನೇನಿ ಗೋಪಿಚಂದ್ ಅವರ ನಿರ್ದೇಶನದಲ್ಲಿ ತಯಾರಾಗಲಿರುವ ಚಿತ್ರಕ್ಕೆ ಸಹಾಯಕ ನಿರ್ಮಾಪಕನಾಗಿ ತಮ್ಮನ್ನು ತೆಗೆದುಕೊಳ್ಳುವುದಾಗಿ ನಿರ್ಮಾಪಕರು ಭರವಸೆ ನೀಡಿದ್ದರು ಎಂದು ಅರ್ಜಿದಾರರು ಹೇಳಿದ್ದಾರೆ. ಇದನ್ನೂ ಓದಿ : ‘ಪುಷ್ಪ ಪಾರ್ಟ್ 10’ ಸಿನಿಮಾಗೆ ನಟ ಮಾಸ್ಟರ್ ಆನಂದ್ ಮಗಳು ಹೀರೋಯಿನ್

    ತಂದೆ, ಮಗನ ಮಾತನ್ನು ನಂಬಿ ಅವರಿಗೆ ಹಣ ನೀಡಿದ್ದೆ. ಆದರೆ ಅವರು ನಂಬಿಸಿ ಮೋಸ ಮಾಡಿದ್ದಾರೆ ಎಂದು ಫೈನಾನ್ಷಿಯರ್ ನ್ಯಾಯಾಲಯಕ್ಕೆ ತಿಳಿಸಿದರು. ಸುರೇಶ್ ಹಾಗೂ ಶ್ರೀನಿವಾಸ್ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಕೋರ್ಟ್ ಸೂಚಿಸಿತ್ತು. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಸಿನಿಮಾ: ಕ್ಷಮೆ ಕೋರಿದ ಪ್ರಕಾಶ್ ಬೆಳವಾಡಿ

    ಸಿಸಿಎಸ್ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 406 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ), 417, 420 (ವಂಚನೆ), ಮತ್ತು 120 ಬಿ (ಅಪರಾಧ ಪಿತೂರಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ತನಿಖೆಯ ಭಾಗವಾಗಿ, ಪೊಲೀಸರು ದೂರುದಾರರಿಗೆ ಸೂಕ್ತ ದಾಖಲೆಗಳೊಂದಿಗೆ ತನಿಖಾಧಿಕಾರಿಯ ಮುಂದೆ ಹಾಜರಾಗಲು ಮತ್ತು ಅವರ ಹೇಳಿಕೆಯನ್ನು ದಾಖಲಿಸಲು ನ್ಯಾಯಾಲಯವು ತಿಳಿಸಿದೆ.

  • ಬಾಹುಬಲಿ ಕಟ್ಟಪ್ಪನ ಬಗ್ಗೆ ಪ್ರಭಾಸ್ ಹೇಳಿದ್ದೇನು ಗೊತ್ತಾ?

    ಬಾಹುಬಲಿ ಕಟ್ಟಪ್ಪನ ಬಗ್ಗೆ ಪ್ರಭಾಸ್ ಹೇಳಿದ್ದೇನು ಗೊತ್ತಾ?

    ಹೈದರಾಬಾದ್: ಟಾಲಿವುಡ್ ನಟ ಪ್ರಭಾಸ್ ಅವರು ನಟ ಸತ್ಯರಾಜ್ ನನ್ನ ಲಕ್ಕಿ ಮ್ಯಾಸ್ಕಟ್ ಎಂದು ಹೇಳಿದ್ದಾರೆ.

    ನಗರದಲ್ಲಿ ನಡೆದ ರಾಧೆ ಶ್ಯಾಮ್ ಸಿನಿಮಾದ ಪ್ರೀ-ರಿಲೀಸ್ ಸಮಾರಂಭದಲ್ಲಿ ಮಾತನಾಡಿದ ಅವರು, ಸತ್ಯರಾಜ್ ಅವರು ನನ್ನ ಅದೃಷ್ಟದ ಮ್ಯಾಸ್ಕಾಟ್. ಅವರೊಂದಿಗೆ ‘ಮಿರ್ಚಿ’ ಸಿನಿಮಾದಲ್ಲಿ ಕೆಲಸ ಮಾಡಿದ್ದೆ. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ನಂತರ ನಟಿಸಿದ ಬಾಹುಬಲಿ ಸಿನಿಮಾ ಕೂಡ ಬ್ಲಾಕ್ ಬಾಸ್ಟರ್ ಹಿಟ್ ಆಗಿತ್ತು. ‘ರಾಧೆ ಶ್ಯಾಮ್’ ನಮ್ಮಿಬ್ಬರ ವೃತ್ತಿ ಜೀವನದಲ್ಲಿ ಮತ್ತೊಂದು ಮೈಲಿಗಲ್ಲು ಆಗಲಿದೆ ಎಂಬ ವಿಶ್ವಾಸ ನನಗಿದೆ. ಈ ಚಿತ್ರದಲ್ಲಿ ಅವರ ಪಾತ್ರವು ಪವರ್‍ಫುಲ್ ಮತ್ತು ಕುತೂಹಲಕಾರಿಯಾಗಿದೆ ಎಂದರು.

    ‘ರಾಧೆ ಶ್ಯಾಮ್’ ಚಿತ್ರದಲ್ಲಿ ಪ್ರಭಾಸ್ 1970ರ ದಶಕದ ಹಸ್ತಸಾಮುದ್ರಿಕ ತಜ್ಞ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಟಲಿ, ಜಾರ್ಜಿಯಾ ಮತ್ತು ಹೈದರಾಬಾದ್‍ನ ವಿವಿಧ ಸ್ಥಳಗಳಲ್ಲಿ ಸಿನಿಮಾ ಶೂಟಿಂಗ್ ಮಾಡಲಾಗಿದೆ. ವಿಶೇಷವೆಂದರೆ ಈ ಚಿತ್ರಕ್ಕೆ ಅಮಿತಾಬ್ ಬಚ್ಚನ್ ಧ್ವನಿ ನೀಡಿದ್ದಾರೆ. ಇದನ್ನೂ ಓದಿ:  ಕಾರ್ ಅಪಘಾತದ ಬಗ್ಗೆ ಹೊಸ ಹಾಡು ರಚಿಸಿದ ಕಚ್ಚಾ ಬಾದಮ್ ಗಾಯಕ ಭುಬನ್

    ಯುವಿ ಕ್ರಿಯೇಷನ್ಸ್ ನಿರ್ಮಿಸಿರುವ ಈ ಚಿತ್ರವನ್ನು ರೆಡ್ ಜೈಂಟ್ ಮೂವೀಸ್ ಪ್ರಸ್ತುತಪಡಿಸಿದ್ದು, ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ಸತ್ಯರಾಜ್ ಮತ್ತು ಜಗಪತಿ ಬಾಬು ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.

  • 5 ರೂಪಾಯಿಗೆ ನಡೆದ ಜಗಳಕ್ಕೆ 55 ಸಾವಿರ ಕಳೆದುಕೊಂಡ  ಹೋಟೆಲ್ ಮಾಲೀಕ

    5 ರೂಪಾಯಿಗೆ ನಡೆದ ಜಗಳಕ್ಕೆ 55 ಸಾವಿರ ಕಳೆದುಕೊಂಡ ಹೋಟೆಲ್ ಮಾಲೀಕ

    ಹೈದರಾಬಾದ್: ಹೋಟೆಲ್ ಮಾಲೀಕನೊಬ್ಬ 5 ರೂಪಾಯಿಗೆ ಗ್ರಾಹಕನ ಜೊತೆಗೆ ಗಲಾಟೆ ಮಾಡಿ 55 ಸಾವಿರ ರೂಪಾಯಿ ಕಳೆದುಕೊಂಡಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಗ್ರಾಹಕ ನ್ಯಾಯಾಲಯ, ಹೈದರಾಬಾದ್‍ನ ತಿಲಕ್ ನಗರದ ಹೋಟೆಲ್‍ಗೆ ದಂಡ ವಿಧಿಸಿದೆ.

    ಒಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿರುವ ವಂಶಿ ತನ್ನ ಸ್ನೇಹಿತರ ಜೊತೆಗೆ ಬಿರಿಯಾನಿ ಹೌಸ್‍ವೊಂದಕ್ಕೆ ಹೋಗಿದ್ದರು. ಊಟ ಮಾಡಿದ ಬಳಿಕ ಜಿಎಸ್‍ಟಿ ಎಲ್ಲಾ ಸೇರಿ 1,127 ರೂಪಾಯಿ ಬಿಲ್ ಆಗಿದೆ. ನೀರಿನ ಬಾಟಲ್‍ಗೆ ಹೆಚ್ಚುವರಿಯಾಗಿ 5 ರೂಪಾಯಿ ಬಿಲ್ ಮಾಡಿದ ವಿಚಾರ ತಿಳಿದ ವಂಶಿ ಹೋಟೆಲ್ ಮಾಲೀಕರಿಗೆ ಪ್ರಶ್ನೆ ಮಾಡಿದ್ದಾಳೆ. ಆಗ ದೊಡ್ಡ ಜಗಳವೇ ಆಗಿದೆ.

    MONEY

    ನಂತರ ವಂಶಿ, ಹೋಟೆಲ್ ಮ್ಯಾನೇಜ್‍ಮೆಂಟ್ ವಿರುದ್ಧ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ನೀರಿನ ಬಾಟಲ್‍ಗೆ ಹೆಚ್ಚುವರಿಯಾಗಿ 5.50 ರೂಪಾಯಿ ವಿಧಿಸಿದ್ದಲ್ಲದೆ, ಎಲ್ಲರೆದುರು ಅವಮಾನಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಇದನ್ನೂ ಓದಿ: ಆಂಬ್ಯುಲೆನ್ಸ್​ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ!

    ಇದಾದ ಬಳಿಕ ಜಿಲ್ಲಾ ಗ್ರಾಹಕ ಆಯೋಗದ 2ನೇ ಪೀಠದ ಮುಖ್ಯಸ್ಥ ವಕ್ಕಂತಿ ನರಸಿಂಹ ಅವರು ಈ ಪ್ರಕರಣದ ವಿಚಾರಣೆ ನಡೆಸಿದರು. ಹೋಟೆಲ್ ಸಿಬ್ಬಂದಿ ಅಶ್ಲೀಲ ಪದ ಬಳಸಿ ನಿಂದಿಸಿ, ಗ್ರಾಹಕರಿಗೆ ಸೇವೆ ನೀಡುವಲ್ಲಿ ವಿಫಲವಾಗಿರುವುದು ಮತ್ತು ಹೆಚ್ಚುವರಿ 5.50 ರೂಪಾಯಿ ಬಿಲ್ ಮಾಡಿರುವುದು ಸಾಬೀತಾಗಿದೆ. ಇದನ್ನೂ ಓದಿ: ಬಿಎಸ್ ಯಡಿಯೂರಪ್ಪಗೆ ಗುರುಬಸವಶ್ರೀ ಪ್ರಶಸ್ತಿ ಪ್ರದಾನ

    ಹೆಚ್ಚುವರಿ 5.50 ರೂಪಾಯಿಗೆ ಶೇ.10 ರಷ್ಟು ಬಡ್ಡಿ ಸೇರಿಸಿ 5000 ರೂಪಾಯಿಯನ್ನು ಗ್ರಾಹಕ ವಂಶಿಗೆ ನೀಡಬೇಕು. ಜಿಲ್ಲಾ ಗ್ರಾಹಕ ರಕ್ಷಣಾ ಮಂಡಳಿಯ ಕಲ್ಯಾಣಕ್ಕಾಗಿ ಜಿಲ್ಲಾಧಿಕಾರಿ ಕಚೇರಿಗೆ 50 ಸಾವಿರ ರೂಪಾಯಿ ದಂಡವನ್ನು 45 ದಿನದ ಒಳಗೆ ಕಟ್ಟಬೇಕು. ಮತ್ತೊಮ್ಮೆ ಈ ತಪ್ಪು ಮಾಡದಂತೆ ನ್ಯಾಯಾಲಯ ಆದೇಶಿದೆ.