Tag: Hyderabad

  • ಕ್ಯಾಂಪಸ್‌ ಪ್ರವೇಶಕ್ಕೆ ರಾಹುಲ್‌ಗೆ ಅನುಮತಿ ನೀಡದ ವಿವಿ – ಉಸ್ಮಾನಿಯಾ ವಿದ್ಯಾರ್ಥಿಗಳಿಂದ ಪ್ರತಿಭಟನೆ

    ಕ್ಯಾಂಪಸ್‌ ಪ್ರವೇಶಕ್ಕೆ ರಾಹುಲ್‌ಗೆ ಅನುಮತಿ ನೀಡದ ವಿವಿ – ಉಸ್ಮಾನಿಯಾ ವಿದ್ಯಾರ್ಥಿಗಳಿಂದ ಪ್ರತಿಭಟನೆ

    ಹೈದರಾಬಾದ್: ತೆಲಂಗಾಣದ ಹೈದರಾಬಾದ್‍ನಲ್ಲಿರುವ ಉಸ್ಮಾನಿಯಾ ವಿಶ್ವವಿದ್ಯಾನಿಲಯ ಕ್ಯಾಂಪಸ್‍ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರವೇಶಕ್ಕೆ ವಿಶ್ವವಿದ್ಯಾನಿಲಯ ಆಡಳಿತ ಅನುಮತಿ ನೀಡದ್ದಕ್ಕೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

    ಮೇ 6 ಮತ್ತು 7 ರಂದು ತೆಲಂಗಾಣಕ್ಕೆ ಭೇಟಿ ನೀಡಲಿರುವ ರಾಹುಲ್ ಗಾಂಧಿ ಅವರು ಇದೇ ವೇಳೆ ಉಸ್ಮಾನಿಯಾ ವಿಶ್ವವಿದ್ಯಾನಿಲಯದ ಕ್ಯಾಂಪಸ್‍ನಲ್ಲಿ ‘ರಾಜಕೀಯೇತರ’ ಸಭೆಯನ್ನು ನಡೆಸಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಅದನ್ನು ವಿವಿ ನಿರಾಕರಿಸಿದೆ. ಇದನ್ನೂ ಓದಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಪುಂಡಾಟ

    ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ನೇತೃತ್ವದ ರಾಜ್ಯ ಸರ್ಕಾರವು ರಾಹುಲ್ ಗಾಂಧಿ ಭೇಟಿ ನೀಡುವುದನ್ನು ತಡೆಯುವಂತೆ ಸಂಸ್ಥೆಗೆ ಒತ್ತಾಯಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕೆಲವು ವಿದ್ಯಾರ್ಥಿಗಳು ಈ ಕುರಿತಂತೆ ತೆಲಂಗಾಣ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ. ರಾಹುಲ್ ಗಾಂಧಿ ಅವರ ಭೇಟಿಗೆ ಅವಕಾಶ ನೀಡುವಂತೆ ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದ್ದಾರೆ. ಮತ್ತೆ ಕೆಲವರು ಕ್ಯಾಂಪಸ್‍ನ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಶಾಲೆಗಳಲ್ಲಿ ವೇದ, ರಾಮಾಯಣ, ಗೀತೆಗಳನ್ನು ಕಲಿಸಬೇಕು: ಧನ್ ಸಿಂಗ್ ರಾವತ್

    ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‍ಎಸ್‍ಯುಐ) ಸದಸ್ಯರೊಬ್ಬರು, ಮೇ 7 ರಂದು ಉಸ್ಮಾನಿಯಾ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಮಾತನಾಡಲು ರಾಹುಲ್ ಗಾಂಧಿ ಅವರು ನಿರ್ಧರಿಸಿದ್ದರು. ಆದ್ದರಿಂದ ನಾವು (ಎನ್‍ಎಸ್‍ಯುಐ) ಉಸ್ಮಾನಿಯಾ ವಿಶ್ವವಿದ್ಯಾಲಯದ ಉಪಕುಲಪತಿಗಳಿಗೆ ರಾಹುಲ್ ಗಾಂಧಿ ಅವರಿಗೆ ನಮ್ಮನ್ನು ಭೇಟಿ ಮಾಡಲು ಅವಕಾಶ ನೀಡುವಂತೆ ಕೇಳಿಕೊಳ್ಳಲು ಬಂದಿದ್ದೇವೆ. ಆದರೆ ಆಡಳಿತ ಮಂಡಳಿಯೂ ಅನುಮತಿ ನೀಡುತ್ತಿಲ್ಲ. ಏಕೆಂದರೆ ತೆಲಂಗಾಣ ಸರ್ಕಾರವು ರಾಹುಲ್ ಭೇಟಿಯನ್ನು ತಡೆಯುವಂತೆ ಆದೇಶಿಸಿದೆ ಎಂದು ಆರೋಪಿಸಿದ್ದಾರೆ.

    ಇದೀಗ ಪ್ರತಿಭಟನಾ ನಿರತ ಎನ್‍ಎಸ್‍ಯುಐ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಸಾರ್ವಜನಿಕ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಶಾಲೆಗಳಲ್ಲಿ ವೇದ, ರಾಮಾಯಣ, ಗೀತೆಗಳನ್ನು ಕಲಿಸಬೇಕು: ಧನ್ ಸಿಂಗ್ ರಾವತ್

  • ಹಿಮಾಲಯ, ಹಿಂದೂ ಮಹಾಸಾಗರದ ನಡುವೆ ವಾಸಿಸುವವರೆಲ್ರೂ ಹಿಂದೂಗಳು: ಕೇಂದ್ರ ಸಚಿವ

    ಹಿಮಾಲಯ, ಹಿಂದೂ ಮಹಾಸಾಗರದ ನಡುವೆ ವಾಸಿಸುವವರೆಲ್ರೂ ಹಿಂದೂಗಳು: ಕೇಂದ್ರ ಸಚಿವ

    ಹೈದರಾಬಾದ್: ಹಿಮಾಲಯ ಮತ್ತು ಹಿಂದೂ ಮಹಾಸಾಗರದ ನಡುವಿನ ಭೂಮಿಯಲ್ಲಿ ವಾಸಿಸುವ ಎಲ್ಲಾ ಜನರು ಹಿಂದೂಗಳು ಎಂದು ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ತಿಳಿಸಿದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶ ಜ್ಞಾನದ ನಾಡು ಎಂಬುದನ್ನು ಅನೇಕ ವಿದೇಶಿ ವಿದ್ವಾಂಸರು ಒಪ್ಪಿಕೊಂಡಿದ್ದಾರೆ. ಈ ವಿಷಯವನ್ನು ಭಾರತೀಯರಾಗಿರುವ ಪ್ರತಿಯೊಬ್ಬರೂ ಹೆಮ್ಮೆ ಪಡಬೇಕು ಎಂದರು.

    ಹಿಂದೂ ಧರ್ಮವು ಜೀವನದೊಂದು ವಿಧಾನವಾಗಿದೆ. ಎಂದಿಗೂ ಹಿಂದೂ ಪದವನ್ನು ಸೀಮಿತ ಗಡಿಗಳಿಗೆ ನಿರ್ಬಂಧಿಸಬಾರದು. ಹಿಂದೂ ಭೌಗೋಳಿಕ ಗುರುತು. ಹಿಮಾಲಯ ಮತ್ತು ಹಿಂದೂ ಮಹಾಸಾಗರದ ನಡುವೆ ವಾಸಿಸುವ ಎಲ್ಲಾ ಜನರು ಹಿಂದೂಗಳು ಎಂದು ನುಡಿದರು. ಇದನ್ನೂ ಓದಿ: ಜಾತಿ, ಧರ್ಮದ ಹೆಸರಲ್ಲಿ ದೇಶವನ್ನು ಹಿಂದಕ್ಕೆ ಕೊಂಡೊಯ್ಯುವ ಯತ್ನ: ಶರದ್ ಪವಾರ್

    ವಿಶ್ವವೇ ಒಪ್ಪಿಕೊಂಡಿರುವ ಪ್ರಜಾಪ್ರಭುತ್ವಕ್ಕೆ ಭಾರತ ಉದಾಹರಣೆಯಾಗಿದೆ. ನಾವು ನಮ್ಮ ದೇಶವನ್ನು ನಮ್ಮ ತಾಯಿ ಎಂದು ಪರಿಗಣಿಸುತ್ತೇವೆ. ಇದರಿಂದಲೇ ಭಾರತ ಮಾತಾ ಎಂದು ಕರೆಯುತ್ತೇವೆ ಎಂದರು. ಇದನ್ನೂ ಓದಿ: ಔಷಧಿಯ ಮೇಲಿನ ದರ ಶೇ.40 ರಷ್ಟು ಏರಿಸಿದ ಲಂಕಾ ಸರ್ಕಾರ

    ನದಿಗಳ ಜೋಡಣೆಯಲ್ಲಿ ಎನ್‍ಡಿಎ ಸರ್ಕಾರದ ಪ್ರಯತ್ನಗಳ ಕುರಿತು ಮಾತನಾಡಿದ ಅವರು, ಗಂಗಾ ನದಿಯ ಸಂರಕ್ಷಣೆ ಮತ್ತು ಪುನರುಜ್ಜೀವನಕ್ಕಾಗಿ ಸರ್ಕಾರವು ನಮಾಮಿ ಗಂಗೆ ಯೋಜನೆಯನ್ನು ಪ್ರಾರಂಭಿಸಿದೆ ಎಂದು ಹೇಳಿದರು.

  • ಭಾಷಣದ ವೇಳೆ ಕಣ್ಣೀರು ಹಾಕಿದ ಓವೈಸಿ

    ಭಾಷಣದ ವೇಳೆ ಕಣ್ಣೀರು ಹಾಕಿದ ಓವೈಸಿ

    ಹೈದರಾಬಾದ್: ಸದಾ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಈ ಬಾರೀ ಕಣ್ಣೀರು ಹಾಕುವ ಮೂಲಕ ಸುದ್ದಿಯಾಗಿದ್ದಾರೆ.

    ಹೌದು. ತಮ್ಮ ಭಾಷಣದ ವೇಳೆ ಓವೈಸಿ ಭಾವುಕರಾಗಿ ಕಣ್ಣೀರಾಕಿದ್ದಾರೆ. ಓವೈಸಿ ಕಣ್ಣೀರಾಕುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ಕಣ್ಣೀರು ಯಾಕೆ..?
    ಹೈದರಾಬಾದ್‍ನಲ್ಲಿ ಇಂದು ನಮಾಜ್ ಮುಗಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದಾಗ ಓವೈಸಿ ಭಾವುಕರಾಗಿದ್ದಾರೆ. ಮಾತನಾಡುತ್ತಿದ್ದ ಸಂದರ್ಭದಲ್ಲಿ ಓವೈಸಿ ಎರಡು ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. ಮಧ್ಯಪ್ರದೇಶದ ಖಾರ್ಗೋನ್ ಹಿಂಸಾಚಾರ ಹಾಗೂ ದೆಹಲಿಯ ಜಹಂಗೀರ್ ಪುರಿ ಘಟನೆಯನ್ನು ಓವೈಸಿ ಮೆಲುಕು ಹಾಕಿಕೊಂಡಿದ್ದಾರೆ. ಈ ಘಟನೆಗಳನ್ನು ನೆನಪು ಮಾಡುತ್ತಾ ಓವೈಸಿ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಬಡ ಮುಸ್ಲಿಮರ ಮೇಲೆ ಬಿಜೆಪಿ ಸಮರ ಸಾರಿದೆ: ಓವೈಸಿ ಕಿಡಿ

    ಖಾರ್ಗೋನ್ ಮತ್ತು ಜಹಂಗೀರ್ ಪುರಿಯಲ್ಲಿ ಮುಸ್ಲಿಮರಿಗೆ ಅನ್ಯಾಯ ಮಾಡಲಾಗಿದೆ. ಅವರ ಮನೆಗಳನ್ನು ಕೆಡವಲಾಗಿದೆ ಎಂದು ಓವೈಸಿ ತಮ್ಮ ಭಾಷಣದಲ್ಲಿ ಹೇಳಿದರು. ಆದರೂ ಭರವಸೆ ಮತ್ತು ಧೈರ್ಯವನ್ನು ಕಳೆದುಕೊಳ್ಳಬೇಡಿ ಎಂದು ಅವರು ಇದೇ ವೇಳೆ ಮುಸ್ಲಿಮರಲ್ಲಿ ಮನವಿ ಮಾಡಿಕೊಂಡರು. ಇದನ್ನೂ ಓದಿ: ಈ ಸರ್ಕಾರಕ್ಕೆ ಹಿಂಸಾಚಾರ ಬೇಕಾಗಿದೆ: ಅಸಾದುದ್ದೀನ್‌ ಓವೈಸಿ

  • ವರ್ಕ್‍ಶಾಪ್‍ನಲ್ಲಿದ್ದ ಐಷಾರಾಮಿ ಕಾರುಗಳು ಸುಟ್ಟು ಭಸ್ಮ

    ವರ್ಕ್‍ಶಾಪ್‍ನಲ್ಲಿದ್ದ ಐಷಾರಾಮಿ ಕಾರುಗಳು ಸುಟ್ಟು ಭಸ್ಮ

    ಹೈದರಾಬಾದ್: ಅಗ್ನಿ ಅವಘಡದಿಂದಾಗಿ ಶುಕ್ರವಾರ ರಾತ್ರಿ ಹೈ ಎಂಡ್ ಕಾರುಗಳ ವರ್ಕ್‍ಶಾಪ್‍ನಲ್ಲಿ ನಿಲ್ಲಿಸಲಾಗಿದ್ದ ಹಲವಾರು ವಿದೇಶಿ ಐಷಾರಾಮಿ ಕಾರುಗಳು ಸುಟ್ಟು ಭಸ್ಮವಾಗಿವೆ.

    ಬರ್ಲಿನ್ ಮೋಟಾರ್ ವರ್ಕ್ಸ್, ಅತ್ತಾಪುರದ ರಾಧಾ ಕೃಷ್ಣ ನಗರದಲ್ಲಿ ಜರ್ಮನ್ ಮತ್ತು ಅಮೆರಿಕನ್ ಕಾರುಗಳ ಸ್ಥಳೀಯ ಕಾರ್ಯಾಗಾರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, ವರ್ಕ್‍ಶಾಪ್‍ನಲ್ಲಿದ್ದ ಹಲವಾರು ಐಷಾರಾಮಿ ಕಾರುಗಳು ಬೆಂಕಿಯಿಂದಾಗಿ ಸುಟ್ಟುಹೋಗಿದೆ. ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುವುದರ ಬಗ್ಗೆ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ:  ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣ – ಸ್ಫೋಟಕ ಆಡಿಯೋ ಔಟ್

    ಪ್ರತಿದಿನ ರಾತ್ರಿ 10 ಗಂಟೆಯವರೆಗೆ ತೆರೆದಿರುವ ವರ್ಕ್‍ಶಾಪ್‍ನಲ್ಲಿದ್ದ ಸಿಬ್ಬಂದಿ ಗ್ಯಾರೇಜ್‍ನಲ್ಲಿದ್ದ ಕಾರುಗಳಿಂದ ಬೆಂಕಿ ಹೊರಹೊಮ್ಮುತ್ತಿರುವುದನ್ನು ಗಮನಿಸಿ ತಕ್ಷಣವೇ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ನಂತರ ಅಗ್ನಿಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿಯಿಂದಾಗಿ ಕಾರುಗಳಿಗೆ ತೀವ್ರವಾಗಿ ಹಾನಿಯಾಗಿದ್ದು, ಹಾನಿಗೊಳಗಾದ ಆಸ್ತಿಯ ಒಟ್ಟು ಮೌಲ್ಯವನ್ನು ಇನ್ನೂ ಅಂದಾಜಿಸಬೇಕಾಗಿದೆ. ಇದನ್ನೂ ಓದಿ: ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣದ ಪ್ರಮುಖ ಆರೋಪಿ ಅರೆಸ್ಟ್

  • ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಸ್ಫೋಟ – ವೃದ್ಧ ಸಾವು, ನಾಲ್ವರಿಗೆ ಗಾಯ

    ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಸ್ಫೋಟ – ವೃದ್ಧ ಸಾವು, ನಾಲ್ವರಿಗೆ ಗಾಯ

    ಹೈದರಾಬಾದ್: ಮನೆಯಲ್ಲಿ ಚಾರ್ಜ್‍ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿ ಸ್ಫೋಟಗೊಂಡು 80 ವರ್ಷದ ವೃದ್ಧರೊಬ್ಬರು ಸಾವನ್ನಪ್ಪಿ, ನಾಲ್ವರು ಗಾಯಗೊಂಡ ಘಟನೆ ತೆಲಂಗಾಣದ ನಿಜಾಮಾಬಾದ್‍ನಲ್ಲಿ ಬುಧವಾರ ನಡೆದಿದೆ.

    ಬಿ ರಾಮಸ್ವಾಮಿ (80) ಮೃತ ವ್ಯಕ್ತಿ. ಟೈಲರ್ ಆಗಿರುವ ಅವರ ಮಗ ಬಿ ಪ್ರಕಾಶ್ ಒಂದು ವರ್ಷದಿಂದ ಇವಿ ಸ್ಕೂಟರ್ ಬಳಸುತ್ತಿದ್ದರು. ಘಟನೆ ಕುರಿತು ಮಾತನಾಡಿದ ನಿಜಾಮಾಬಾದ್‍ನ ಸಹಾಯಕ ಪೊಲೀಸ್ ಕಮಿಷನರ್ ಎ ವೆಂಕಟೇಶ್ವರಲು, ಸ್ಕೂಟರ್ ತಯಾರಕ ಮತ್ತು ಕಂಪನಿ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 304 ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: PSI ಅಕ್ರಮ ನೇಮಕಾತಿ: ಎಂಎಲ್‌ಎ ಮುಂದೆಯೇ ಗನ್‌ಮ್ಯಾನ್ ಅರೆಸ್ಟ್

    ತ್ರೀ ಟೌನ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಾಯಿನಾಥ್ ಹೇಳಿಕೆ ಪ್ರಕಾರ, ಪ್ರಕಾಶ್ ಅವರು 12:30 ರ ಸುಮಾರಿಗೆ ಸ್ಕೂಟರ್‌ನಿಂದ ಬ್ಯಾಟರಿಯನ್ನು ತೆಗೆದು ಚಾರ್ಜ್ ಮಾಡಲು ಇಟ್ಟುಕೊಂಡಿದ್ದರು. ಅವರ ತಂದೆ ರಾಮಸ್ವಾಮಿ, ತಾಯಿ ಕಮಲಮ್ಮ ಮತ್ತು ಮಗ ಕಲ್ಯಾಣ್ ಲಿವಿಂಗ್ ರೂಮಿನಲ್ಲಿ ಮಲಗಿದ್ದಾಗ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬ್ಯಾಟರಿ ಸ್ಫೋಟಗೊಂಡು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಪ್ರಕಾಶ್ ಮತ್ತು ಅವರ ಪತ್ನಿ ಕೃಷ್ಣವೇಣಿ ಕೂಡ ಬೆಂಕಿಯನ್ನು ನಂದಿಸುವಾಗ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಗಾಂಧೀಜಿ ಆಶ್ರಮದಲ್ಲಿ ಚರಕ ಹಿಡಿದು ನೂಲು ತೆಗೆದ ಬ್ರಿಟನ್ ಪ್ರಧಾನಿ

    ಗಾಯಾಳುಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ರಾಮಸ್ವಾಮಿ ಅವರ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‍ಗೆ ಸಾಗಿಸುವಾಗ ಅವರು ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  • ರಾಮನವಮಿ ವೇಳೆ ಹಿಂಸಾಚಾರ ತಡೆಗಟ್ಟುವಲ್ಲಿ ಕರ್ನಾಟಕ ಸರ್ಕಾರ ಸೋತಿದೆ: ಓವೈಸಿ

    ರಾಮನವಮಿ ವೇಳೆ ಹಿಂಸಾಚಾರ ತಡೆಗಟ್ಟುವಲ್ಲಿ ಕರ್ನಾಟಕ ಸರ್ಕಾರ ಸೋತಿದೆ: ಓವೈಸಿ

    ಹೈದರಾಬಾದ್‌: ರಾಮನವಮಿ ಸಂದರ್ಭದಲ್ಲಿ ಹಿಂಸಾಚಾರವನ್ನು ತಡೆಗಟ್ಟುವಲ್ಲಿ ಕರ್ನಾಟಕ ಸೇರಿದಂತೆ ಅನೇಕ ರಾಜ್ಯ ಸರ್ಕಾರಗಳು ಸೋತಿವೆ ಎಂದು ಸಂಸದ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಕಿಡಿಕಾರಿದ್ದಾರೆ.

    RAMANAVAMI

    ರಾಮನವಮಿ ಆಚರಣೆ ಸಂದರ್ಭದಲ್ಲಿ ಹಲವು ರಾಜ್ಯಗಳಲ್ಲಿ ಹಿಂಸಾಚಾರಗಳಾಗಿವೆ. ರಾಜಸ್ಥಾನ, ಮಧ್ಯಪ್ರದೇಶ, ಜಾರ್ಖಂಡ್‌, ಕರ್ನಾಟಕ, ಗೋವಾ ರಾಜ್ಯಗಳಲ್ಲಿ ಹಿಂಸಾಚಾರ ನಡೆದಿದ್ದು, ಅದನ್ನು ತಡೆಗಟ್ಟುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಮತಾ ಬ್ಯಾನರ್ಜಿ ಸಿಎಂ ಸ್ಥಾನಕ್ಕೆ ಅರ್ಹರಲ್ಲ: ನಿರ್ಭಯಾ ತಾಯಿ

    ಇದು ಸ್ಪಷ್ಟವಾಗಿ ರಾಜ್ಯಗಳ ಸಹಭಾಗಿತ್ವದ ಹಿಂಸಾಚಾರವಾಗಿದೆ. ಜಿನೆವಾ ಒಪ್ಪಂದದ ಗಂಭೀರ ಉಲ್ಲಂಘನೆಯಾಗಿದೆ ಎಂದು ಓವೈಸಿ ಗಂಭೀರ ಆರೋಪ ಮಾಡಿದ್ದಾರೆ.

    ಮಧ್ಯಪ್ರದೇಶ ಸರ್ಕಾರ ಯಾವ ಕಾನೂನಿನ ಅಡಿಯಲ್ಲಿ ಮುಸ್ಲಿಂ ಸಮುದಾಯದ ಮನೆಗಳನ್ನು ನೆಲಸಮ ಮಾಡಿದೆ? ಇದು ಮುಸ್ಲಿಂ ಅಲ್ಪಸಂಖ್ಯಾತರ ಬಗ್ಗೆ ಸಿಎಂ ಅವರ ಪಕ್ಷಪಾತ ಧೋರಣೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: SSLC ಪರೀಕ್ಷೆಯಲ್ಲಿ ಹೆಚ್ಚಿಗೆ ಅಂಕ ಬರುವಂತೆ ಮಾಡುತ್ತೇನೆಂದು ವಿದ್ಯಾರ್ಥಿನಿ ಕೆನ್ನೆಗೆ ಮುತ್ತು ಕೊಟ್ಟ ಶಿಕ್ಷಕ

  • ಭಾರತ ಶೀಘ್ರದಲ್ಲೇ ಹಿಂದೂ ರಾಷ್ಟ್ರವಾಗಲಿದೆ ಎಂದಿದ್ದ ಬಿಜೆಪಿ MLA ವಿರುದ್ಧ ದೂರು ದಾಖಲು

    ಭಾರತ ಶೀಘ್ರದಲ್ಲೇ ಹಿಂದೂ ರಾಷ್ಟ್ರವಾಗಲಿದೆ ಎಂದಿದ್ದ ಬಿಜೆಪಿ MLA ವಿರುದ್ಧ ದೂರು ದಾಖಲು

    ಹೈದರಾಬಾದ್: ಭಾರತ ಶೀಘ್ರದಲ್ಲೇ ಹಿಂದೂ ರಾಷ್ಟ್ರವಾಗಲಿದೆ ಎಂದು ಹಾಡಿದ್ದ ಬಿಜೆಪಿ ಶಾಸಕ ಟಿ. ರಾಜಾ ವಿರುದ್ಧ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟು ಮಾಡಿದ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಹೈದರಾಬಾದ್‍ನಲ್ಲಿ ರಾಮನವಮಿ ಯಾತ್ರೆಯಲ್ಲಿ ಪಾಲ್ಗೋಂಡಿದ್ದ ಅವರು ಹಿಂದೂ ರಾಷ್ಟ್ರದ ಬಗ್ಗೆ ಒಂದು ಹಾಡನ್ನು ಹಾಡಿದ್ದರು. ಅದರಲ್ಲಿ ಭಾರತವು ಶೀಘ್ರದಲ್ಲೇ ಹಿಂದೂ ರಾಷ್ಟ್ರವಾಗಲಿದೆ. ಶ್ರೀರಾಮನ ಹೆಸರನ್ನು ತೆಗೆದುಕೊಳ್ಳದವರು ಭಾರತದಿಂದ ಹೊರಗೆ ಹೋಗಬೇಕಾಗುತ್ತದೆ ಎಂದು ಹೇಳಿದ್ದರು.

    ಅಯೋಧ್ಯೆಯಲ್ಲಿ ರಾಮ ಮಂದಿರ ಆಗಿದೆ. ಈಗ ಮಥುರಾ ಮತ್ತು ಕಾಶಿ ಎಂದ ಅರು, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಲ್ಡೋಜರ್ ಅನ್ನು ಸ್ವಚ್ಛಗೊಳಿಸಲು ಬಳಸುತ್ತಾರೆ. ಭಾರತವು ಶೀಘ್ರದಲ್ಲೇ ಹಿಂದೂ ರಾಷ್ಟ್ರವಾಗಲಿದೆ. ಅದೇ ಹಾಡಿನಲ್ಲಿ ರಾಮನ ಹೆಸರನ್ನು ತೆಗೆದುಕೊಳ್ಳದವರು ಮುಂದಿನ ದಿನಗಳಲ್ಲಿ ಭಾರತದಿಂದ ಓಡಿಹೋಗಬೇಕಾಗುತ್ತದೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಓಲೈಕೆ ರಾಜಕಾರಣ ಗೊತ್ತಿಲ್ಲ: ಇಬ್ಬರು ಮಾಜಿ ಸಿಎಂಗಳಿಗೆ ಕುಟುಕಿದ  ಬೊಮ್ಮಾಯಿ

    ಈ ಹಾಡಿಗೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಹೈದರಾಬಾದ್‍ನ ಪೊಲೀಸರು ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗ ತರುವ ಆರೋಪದ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಧರ್ಮದಂಗಲ್‍ ಅಭಿಯಾನಕ್ಕೆ ರೋಡ್ ಸೇರ್ಪಡೆ- ಮುಸ್ಲಿಂ ಹೆಸರುಳ್ಳ ರಸ್ತೆಗಳನ್ನು ಬದಲಿಸಲು ಆಗ್ರಹ

  • ಬರೋಬ್ಬರಿ 900 ಕೋಟಿ ಬಾಚಿ 12ನೇ ದಿನದತ್ತ ಮುನ್ನುಗುತ್ತಿದೆ RRR ಚಿತ್ರ

    ಬರೋಬ್ಬರಿ 900 ಕೋಟಿ ಬಾಚಿ 12ನೇ ದಿನದತ್ತ ಮುನ್ನುಗುತ್ತಿದೆ RRR ಚಿತ್ರ

    ಹೈದರಾಬಾದ್: ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ ಆರ್‍ಆರ್‍ಆರ್ ಸಿನಿಮಾವು ಬಿಡುಗಡೆಗೊಂಡು ಇವತ್ತಿಗೆ 11 ದಿನಗಳು ಕಳೆದಿವೆ. ಆದರೂ ಈ ಚಿತ್ರದ ಹವಾ ನಿಂತಿಲ್ಲ. ಕಾರಣ ಚಿತ್ರದಲ್ಲಿರುವ ಇಬ್ಬರು ಸೂಪರಸ್ಟಾರ್‌ಗಳಾದ ರಾಮ್‍ಚರಣ್ ಮತ್ತು ಜ್ಯೂನಿಯರ್ ಎನ್‍ಟಿಆರ್ ಅವರ ಅದ್ಭುತವಾದ ನಟನೆ ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸಿದೆ. ಚಿತ್ರದಲ್ಲಿ ಬಳಸಿರುವ ಅಡ್ವಾನ್ಸ್ ಲೆವೆಲ್ ವಿಎಫ್‍ಎಕ್ಸ್ ಎಡಿಟಿಂಗ್ಸ್‌ಗಳನ್ನು ನೋಡಿದರೆ ಎಂತಹವರಿಗೂ ಒಂದು ಕ್ಷಣ ಮೈ ಜುಮ್ಮೆನ್ನಿಸುತ್ತದೆ.

    ಚಿತ್ರವು ಜಾಗತಿಕ ಮಟ್ಟದಲ್ಲಿ ಈಗಾಗಲೇ ಕೋಟಿ ಹೃದಯಗಳನ್ನು ಗೆದ್ದಿದೆ. ಚಿತ್ರವು ರೀಲಿಸ್ ಆದ ಮೊದಲನೇ ದಿನದಿಂದ ಹಿಡಿದು ಇಲ್ಲಿಯವರೆಗೆ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಲೇ ಬರುತ್ತಿದೆ. ಆದರೆ ಇದೆಲ್ಲದರ ನಡುವೇ ಚಿತ್ರಕ್ಕೆ ಕೊಂಚ ಹೊಡೆತ ಬಿದ್ದಿದ್ದೆಂದರೆ ಅದು ಕಾಶ್ಮೀರ್ ಫೈಲ್ಸ್ ಚಿತ್ರದಿಂದ ಅಂತಾನೇ ಹೇಳಬಹುದು. ಆದಾಗ್ಯೂ ಚಿತ್ರವು ಇವತ್ತಿಗೆ ಬರೋಬ್ಬರಿ 900 ಕೋಟಿ ರೂ. ಗಳನ್ನು ಬಾಚಿ ಯಶಸ್ವಿ 11ನೇ ದಿನದತ್ತ ಮುನ್ನುಗ್ಗುತ್ತಿದೆ. ಇದನ್ನೂ ಓದಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆ – 1 ಗಂಟೆಯಲ್ಲೇ ಪ್ರಶ್ನೆ ಪತ್ರಿಕೆ ವೈರಲ್

    ಈ ಕುರಿತು ವ್ಯಾಪಾರ ವಿಶ್ಲೇಷಕ ಮನೋಬಾಲಾ ವಿಜಯನ್ ಸಾಮಾಜಿಕ ಜಾಲತಾಣದ ಮೂಲಕ ಆರ್‍ಆರ್‍ಆರ್ ಚಿತ್ರವು 11 ದಿನದಲ್ಲಿ ಒಟ್ಟು 900 ಕೋಟಿ ರೂ. ಗಳಿಸಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯಿಜಾನ್ ಚಿತ್ರದ ಕಲೆಕ್ಷನ್ ಅನ್ನು ಉಡೀಸ್ ಮಾಡಿದೆ. ಆರ್‍ಆರ್‍ಆರ್ ಚಿತ್ರವು ಈಗಾಗಲೇ ದಾಖಲೆಯ 500 ಕೋಟಿ ರೂ. ದಾಟಿದ ಮೊದಲ ಚಿತ್ರವೆಂಬ ಹೆಗ್ಗಳಿಕೆ ಪಾತ್ರವಾಗಿದೆ. ಇದನ್ನೂ ಓದಿ: 22 ಐಪಿಎಸ್‌ ಅಧಿಕಾರಿಗಳು ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿದ್ದಾರೆ- ಎಂಎಚ್‌ಒ

    ವಿಶ್ವಾದ್ಯಂತ ಅತಿ ಹೆಚ್ಚು ಗಳಿಕೆಯ ಸಾರ್ವಕಾಲಿಕ ಹತ್ತು ಭಾರತೀಯ ಚಲನಚಿತ್ರಗಳನ್ನು ನೋಡೋಣ:
    ದಂಗಲ್ – ರೂ. 2008.30 ಕೋಟಿ
    ಬಾಹುಬಲಿ 2 – ರೂ. 1754.50 ಕೋಟಿ
    ಆರ್‍ಆರ್‍ಆರ್ – ರೂ. 939 ಕೋಟಿ ಅಂದಾಜು 11 ದಿನಗಳು, ಇನ್ನೂ ಎಣಿಸಲಾಗುತ್ತಿದೆ
    ಭಜರಂಗಿ ಭಾಯಿಜಾನ್ – ರೂ. 902.80 ಕೋಟಿ
    ಸೀಕ್ರೆಟ್ ಸೂಪರ್‍ಸ್ಟಾರ್ – ರೂ. 895.50 ಕೋಟಿ
    ಪಿಕೆ – ರೂ. 762 ಕೋಟಿ
    2.0 – ರೂ. 666.30 ಕೋಟಿ
    ಸುಲ್ತಾನ್ – ರೂ. 616.60 ಕೋಟಿ
    ಸಂಜು – ರೂ. 588.30 ಕೋಟಿ
    ಬಾಹುಬಲಿ: ದಿ ಬಿಗಿನಿಂಗ್ – ರೂ. 581 ಕೋಟಿ

    ಎಸ್ ಎಸ್ ರಾಜಮೌಳಿಯವರ ‘ಆರ್‍ಆರ್‍ಆರ್’ ಡಾಲ್ಬಿ ಸಿನಿಮಾದಲ್ಲಿ ಬಿಡುಗಡೆಯಾದ ಮೊದಲ ಭಾರತೀಯ ಚಿತ್ರವಾಗಿದೆ. ತೆಲುಗು ಭಾಷೆಯ ಅವಧಿಯ ಆಕ್ಷನ್ ಡ್ರಾಮಾ ಚಲನಚಿತ್ರವನ್ನು ಡಿವಿವಿ ಎಂಟರ್‌ಟೈನಮೆಂಟ್‌ನ ಡಿವಿವಿ ದಾನಯ್ಯ ನಿರ್ಮಿಸಿದ್ದಾರೆ. ಚಿತ್ರವನ್ನು 2022ರ ಮಾರ್ಚ್ 25 ರಂದು ಬಿಡುಗಡೆ ಮಾಡಲಾಗಿದೆ.

  • ರೇವ್ ಪಾರ್ಟಿಯಲ್ಲಿ ಸಿಕ್ಕಿ ಬಿದ್ದ ಮೆಗಾಸ್ಟರ್ ಕುಟುಂಬದ ಕುಡಿ – ತಂದೆ ಹೇಳುವುದೇ ಬೇರೆ

    ರೇವ್ ಪಾರ್ಟಿಯಲ್ಲಿ ಸಿಕ್ಕಿ ಬಿದ್ದ ಮೆಗಾಸ್ಟರ್ ಕುಟುಂಬದ ಕುಡಿ – ತಂದೆ ಹೇಳುವುದೇ ಬೇರೆ

    ಣ್ಣದ ಲೋಕದ ಸೆಲೆಬ್ರೆಟಿಗಳು ಪಾರ್ಟಿಗಾಗಿ ಸೇರುವುದು ಹೊಸದೇನೂ ಅಲ್ಲ. ಐಷಾರಾಮಿ ಜೀವನ ನಡೆಸುವ ಅನೇಕ ನಟ, ನಟಿಯರು ಪ್ರತಿನಿತ್ಯ ಒಂದಲ್ಲಾ ಒಂದು ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಲೇ ಇರುತ್ತಾರೆ. ಅದರಲ್ಲಿಯೂ ಅನೇಕ ನಟ, ನಟಿಯರು ಪಾರ್ಟಿ ವೇಳೆ ಮಾದಕ ವಸ್ತುಗಳನ್ನು ಸೇವಿಸಿ ಸಿಕ್ಕಿಬಿದ್ದಿರುವ ಘಟನೆಗಳು ಸಾಕಷ್ಟಿವೆ. ಮೊದ ಮೊದಲು ಬಾಲಿವುಡ್‍ನಲ್ಲಿ ನಟ, ನಟಿಯರು ರೇವ್ ಪಾರ್ಟಿಗಳಲ್ಲಿ ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದಿರುವುದೇ ಹೆಚ್ಚು. ಸದ್ಯ ಇಂತಹದೇ ಪ್ರಕರಣದಲ್ಲಿ ಟಾಲಿವುಡ್ ಮೆಗಾ ಕುಟುಂಬದ ಕುಡಿಯೊಂದು ಪೊಲೀಸರ ಕೈಗೆ ಸಿಕ್ಕಿಬಿದ್ದು, ಕುಟುಂಬವನ್ನು ಹೈರಾಣಾಗಿಸಿದೆ.

    niharika konidela

    ಹೌದು, ಡಗ್ರ್ಸ್ ಪಾರ್ಟಿಯಲ್ಲಿ ಟಾಲಿವುಡ್ ನಟ ನಾಗಬಾಬು ಅವರ ಪುತ್ರಿ ನಿಹಾರಿಕಾ ಕೊನಿಡೆಲಾ ಇದ್ದರು ಎನ್ನುವ ಕಾರಣಕ್ಕಾಗಿ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಯುಗಾದಿ ಹಬ್ಬದಂದು ಹೈದರಾಬಾದ್‍ನ ಫೈವ್ ಸ್ಟಾರ್ ಹೋಟೆಲ್ ಒಂದರಲ್ಲಿ ರೇವ್ ಪಾರ್ಟಿ ನಡೆದಿದ್ದು, ಈ ಪಾರ್ಟಿಯಲ್ಲಿ ಸೆಲೆಬ್ರೆಟಿಗಳ ಮಕ್ಕಳು ಮತ್ತು ಪ್ರಭಾವಿ ಮಕ್ಕಳು ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಮಂದಿ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಹೊಟೇಲ್‍ನಲ್ಲಿಯೇ ಇದ್ದ ನಿಹಾರಿಕಾ ಕೊನಿಡೆಲಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇನ್ನೂ ಈ ಸುದ್ದಿ ಟಿ-ಟೌನ್‍ನಲ್ಲಿ ಭಾರೀ ಸದ್ದು ಮಾಡಿತ್ತು. ಇದನ್ನೂ ಓದಿ : ಸ್ಟಾರ್ ತಾರಾಗಣದ ಬಹು ನಿರೀಕ್ಷಿತ ‘ತ್ರಿಕೋನ’ ಬಿಡುಗಡೆಗೆ ರೆಡಿ

    niharika konidela

    ಸದ್ಯ ತಮ್ಮ ಪುತ್ರಿಯ ವಿಚಾರವಾಗಿ ನಟ ನಾಗಬಾಬು ಅವರು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೆ ವೀಡಿಯೋವನ್ನು ಹಂಚಿಕೊಂಡಿದ್ದು, ತಮ್ಮ ಪುತ್ರಿ ನಿಹಾರಿಕಾ ಪಬ್‍ನಲ್ಲಿದ್ದದ್ದು ನಿಜ. ಆದರೆ ನಿಹಾರಿಕಾ ರೇವ್ ಪಾರ್ಟಿಯಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಏಪ್ರಿಲ್ 2ರಂದು ರಾತ್ರಿ ನನ್ನ ಮಗಳು ನಿಹಾರಿಕಾ ಕೊನಿಡೆಲಾ ಪಬ್‍ಗೆ ಹೋಗಿದ್ದರು. ಪಬ್ ಬಂದ್ ಮಾಡುವ ಸಮಯ ಮೀರಿದ್ದರೂ, ಮುಂದುವರೆಸಿದ್ದರಿಂದ ಪಬ್ ನಡೆಸುತ್ತಿದ್ದವರನ್ನು ಹಾಗೂ ಇಲ್ಲಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನನ್ನ ಮಗಳು ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಈ ವೇಳೆ ಪೊಲೀಸರು ವಶಪಡಿಸಿಕೊಂಡ ಮಾದಕ ವಸ್ತುಗಳಿಗೂ ಆಕೆಗೂ ಯಾವುದೇ ಸಂಬಂಧವಿಲ್ಲವೆಂದು ಪೊಲೀಸರು ಹೇಳಿದ್ದಾರೆ. ಇಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ ಮತ್ತು ಇಂತಹ ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ : ಸ್ಟಾರ್ ತಾರಾಗಣದ ಬಹು ನಿರೀಕ್ಷಿತ ‘ತ್ರಿಕೋನ’ ಬಿಡುಗಡೆಗೆ ರೆಡಿ

    ಬಂಜಾರಾ ಹಿಲ್ಸ್ ಠಾಣೆಯ ಪೊಲೀಸರು ನಿಹಾರಿಕ ಅವರನ್ನು ವಶಕ್ಕೆ ಪಡೆದು ಕೆಲ ಸಮಯ ವಿಚಾರಣೆ ನಡೆಸಿ, ಮನೆಗೆ ಕಳುಹಿಸಿದ್ದಾರೆ ಎನ್ನಲಾಗಿದ್ದು, ವಿಚಾರಣೆ ಬಳಿಕ ನಿಹಾರಿಕಾ ಕೊನಿಡೆಲಾ ಪೊಲೀಸ್ ಠಾಣೆಯಿಂದ ಹೊರಬರುತ್ತಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

  • 18 ಗಂಟೆಗಳ ಕಾಲ ಬ್ಯಾಂಕ್ ಲಾಕರ್‌ನಲ್ಲೇ ಸಿಲುಕಿದ್ದ ವೃದ್ಧ

    18 ಗಂಟೆಗಳ ಕಾಲ ಬ್ಯಾಂಕ್ ಲಾಕರ್‌ನಲ್ಲೇ ಸಿಲುಕಿದ್ದ ವೃದ್ಧ

    ಹೈದರಾಬಾದ್: ಬ್ಯಾಂಕ್ ಸಿಬ್ಬಂದಿಯ ನಿರ್ಲಕ್ಷ್ಯದಿಂದ ವೃದ್ಧರೊಬ್ಬರು ಒಂದು ರಾತ್ರಿಯಿಡೀ ಬ್ಯಾಂಕ್ ಲಾಕರ್‌ನಲ್ಲಿ ಸಿಲುಕಿದ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ಕೃಷ್ಣಾ ರೆಡ್ಡಿ(85) ಲಾಕರ್‌ನಲ್ಲಿ ಕಳೆದ ವೃದ್ಧ. ಇವರು ಮಧುಮೇಹ ಹಾಗೂ ಇತರ ರೋಗದಿಂದ ಬಳಲುತ್ತಿದ್ದು, ಸತತ 18 ಗಂಟೆಗಳ ಕಾಲ ಲಾಕರ್‌ನಲ್ಲಿ ಕಳೆಯ ಬೇಕಾದ ಪರಿಸ್ಥಿತಿ ಎದುರಾಗಿದೆ.

    ಘಟನೆ ಏನು?: ಜ್ಯುಬಿಲಿ ಹಿಲ್ಸ್‍ನ ನಿವಾಸಿ ಕೃಷ್ಣಾರೆಡ್ಡಿ ಅವರು ಕೆಲವು ದಾಖಲೆಗಳನ್ನು ಪಡೆದುಕೊಳ್ಳಲು ಬಂಜಾರ ಹಿಲ್ಸ್ ಪ್ರದೇಶದ ಯೂನಿಯನ್ ಬ್ಯಾಂಕ್ ಶಾಖೆಗೆ ಭೇಟಿ ನೀಡಿದ್ದರು. ಇಗವೆಲ್ಲದರ ಪರಿಶೀಲನೆಯ ನಂತರ ಅವರನ್ನು ಬ್ಯಾಂಕ್ ಲಾಕರ್ ರೂಂಗೆ ಕಳುಹಿಸಲಾಯಿತು. ಇದನ್ನೂ ಓದಿ: ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಹಿಂಸಾಚಾರ ಬಳಸೋದು ಹಕ್ಕುಗಳ ಉಲ್ಲಂಘನೆ: ಮೋದಿ

    ಕೃಷ್ಣಾ ರೆಡ್ಡಿ ಅವರು ಬ್ಯಾಂಕ್ ಮುಚ್ಚುವ ಸಮಯವಾಗಿದೆ ಎನ್ನುವ ವಿಷಯವನ್ನು ಕೃಷ್ಣಾ ರೆಡ್ಡಿ ಗಮನಿಸಿರಲಿಲ್ಲ. ಮತ್ತೊಂದೆಡೆ ಕೃಷ್ಣಾ ರೆಡ್ಡಿ ಬ್ಯಾಂಕ್ ಲಾಕರ್‍ನಲ್ಲಿರುವುದು ಬ್ಯಾಂಕ್ ಸಿಬ್ಬಂದಿಯ ಗಮನಕ್ಕೆ ಬಾರದೆ ಬೀಗ ಹಾಕಿ ಮನೆಗೆ ತೆರಳಿದ್ದಾರೆ.

    ರಾತ್ರಿಯಾದರೂ ಕೃಷ್ಣಾ ರೆಡ್ಡಿ ಮನೆಗೆ ಬಾರದ ಕಾರಣ ಅವರ ಕುಟುಂಬಸ್ಥರು ಆತಂಕಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ದೂರನ್ನು ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ಪರಿಶೀಲಿಸಿ ಅವರನ್ನು ಪತ್ತೆ ಹೆಚ್ಚಿದ್ದಾರೆ. ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿದ್ದ ಕೃಷ್ಣಾ ರೆಡ್ಡಿ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಇದನ್ನೂ ಓದಿ: CRPF ಬಂಕರ್ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಬುರ್ಕಾದಾರಿ ಮಹಿಳೆ