ಹೈದರಾಬಾದ್: ಬೈಕ್ ಚಕ್ರಕ್ಕೆ ಬುರ್ಖಾ ಸಿಲುಕಿ, ಬಿದ್ದ ಯುವತಿ ಸಾವನ್ನಪ್ಪಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವಾಗ ಮುಖ್ಯವಾಗಿ ಮಹಿಳೆಯರು ಬುರ್ಖಾ ಅಥವಾ ಉದ್ದನೆಯ ಬಟ್ಟೆಗಳನ್ನು ಧರಿಸಿ ಜಾಗರೂಕರಾಗಿ ಇರಬೇಕೆಂದು ಜನರು ಎಚ್ಚರಿಕೆ ನೀಡುತ್ತಿದ್ದಾರೆ.
ಬುರ್ಖಾ ಬೈಕ್ ಚಕ್ರಕ್ಕೆ ಸಿಲುಕಿ ಯುವತಿ ಸಾವನ್ನಪ್ಪಿರುವ ಘಟನೆ ಹೈದರಾಬಾದ್‌ನ ಯಾಚರಂನಲ್ಲಿ ನಡೆದಿದೆ. ಭಾನುವಾರ ನಡೆದ ಘಟನೆಯಲ್ಲಿ ಯುವತಿಗೆ ಗಂಭೀರ ಗಾಯಗಳಾಗಿದ್ದು, ಮರುದಿನ ಸಾವನ್ನಪ್ಪಿದ್ದಳು. ಅಪಘಾತದಲ್ಲಿ ಆಕೆಯ ಸಹೋದರನಿಗೆ ಯಾವುದೇ ಗಾಯಗಳಾಗದೇ ಪಾರಾಗಿದ್ದಾನೆ. ಇದನ್ನೂ ಓದಿ: ಬಾಂಗ್ಲಾ ಯುವತಿಯ ಮೇಲೆ ಬೆಂಗ್ಳೂರಿನಲ್ಲಿ ಗ್ಯಾಂಗ್ ರೇಪ್ – 7 ಮಂದಿಗೆ ಜೀವಾವಧಿ ಶಿಕ್ಷೆ
ನವದೆಹಲಿ: ಹೈದರಾಬಾದ್‍ನ ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ದೇಹವನ್ನು ಸುಟ್ಟು ಹಾಕಿದ್ದ ಪ್ರಕರಣದ ಆರೋಪಿಗಳನ್ನು ಪೊಲೀಸರು ಉದ್ದೇಶ ಪೂರ್ವಕವಾಗಿ ಎನ್‍ಕೌಂಟರ್ ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ನೇಮಿಸಿದ ಆಯೋಗ ತಿಳಿಸಿದೆ.
ಎನ್‍ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಸುಪ್ರೀಂ ನ್ಯಾ. ವಿ.ಎಸ್.ಸಿರ್ಪುಕರ್, ಬಾಂಬೆ ಹೈಕೋರ್ಟ್‍ನ ನಿವೃತ್ತ ನ್ಯಾ. ರೇಖಾ ಬಲ್ಡೋಟಾ ಮತ್ತು ಸಿಬಿಐನ ಮಾಜಿ ನಿರ್ದೇಶಕ ಡಾ. ಕಾರ್ತಿಕೇಯನ್ ಅವರಿದ್ದ ಆಯೋಗ ತನ್ನ ವರದಿಯನ್ನು ಸುಪ್ರೀಂಗೆ ಸಲ್ಲಿಸಿದೆ.
ಉದ್ದೇಶ ಪೂರ್ವಕವಾಗಿ ಪೊಲೀಸರು ಆರೋಪಿಗಳನ್ನು ಎನ್‍ಕೌಂಟರ್ ಮೂಲಕ ಹತ್ಯೆಗೈದಿದ್ದಾರೆ. ನಾಲ್ವರಲ್ಲಿ ಮೂವರು ಅಪ್ರಾಪ್ತರು. ಸಂಬಂಧಿತ ಸಮಯದಲ್ಲಿ ಜೊಲ್ಲು ಶಿವ, ಜೊಲ್ಲು ನವೀನ್ ಮತ್ತು ಚಿಂತಕುಂಟಾ ಚೆನ್ನಕೇಶವುಲು ಅವರು ಅಪ್ರಾಪ್ತರಾಗಿದ್ದರು. ಈ ಹಿನ್ನೆಲೆಯಲ್ಲಿ 10 ಪೊಲೀಸ್ ಅಧಿಕಾರಿಗಳನ್ನು ಕೊಲೆ ಆರೋಪದ ಅಡಿ ವಿಚಾರಣೆಗೆ ಒಳಪಡಿಸಬೇಕು ಎಂದು ತಿಳಿಸಿದೆ. ಇದನ್ನೂ ಓದಿ:ಮಸ್ಕ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ – ಬಾಯಿ ಮುಚ್ಚಿಸಲು ಕೋಟಿ ಹಣ ಸಂದಾಯ
ಮೃತರು 2019 ಡಿಸೆಂಬರ್ 6ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳುವುದು, ಬಂಧನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವುದು, ಪೊಲೀಸರ ಮೇಲೆ ಹಲ್ಲೆ ಮತ್ತು ಗುಂಡು ಹಾರಿಸುವುದು ಮುಂತಾದ ಯಾವುದೇ ಅಪರಾಧವನ್ನು ಮಾಡಿಲ್ಲ ಎಂದು ನಾವು ತೀರ್ಮಾನಿಸುತ್ತೇವೆ ಎಂದು ಆಯೋಗ ವರದಿಯಲ್ಲಿ ಉಲ್ಲೇಖಿಸಿದೆ.
ಶುಕ್ರವಾರ ನಡೆದ ವಿಚಾರಣೆ ವೇಳೆ ಆಯೋಗದ ವರದಿಯನ್ನು ಮುಚ್ಚಿದ ಕವರ್‍ನಲ್ಲಿ ಇಡಬೇಕು ಎಂಬ ವಕೀಲರ ವಾದವನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರನ್ನೊಳಗೊಂಡ ಪೀಠ ತಿರಸ್ಕರಿಸಿದೆ. ಇದು ಎನ್‍ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದೆ. ಇಲ್ಲಿ ಇಡಲು ಏನೂ ಇಲ್ಲ. ಆಯೋಗವು ಯಾರು ತಪ್ಪಿತಸ್ಥರೆಂದು ಕಂಡುಹಿಡಿದಿದೆ. ನಾವು ಈ ವಿಷಯವನ್ನು ಹೈಕೋರ್ಟ್‍ಗೆ ವರ್ಗಾವಣೆ ಮಾಡಲು ಬಯಸುತ್ತೇವೆ ಎಂದು ತಿಳಿಸಿದೆ. ಇದನ್ನೂ ಓದಿ:ಜ್ಞಾನವಾಪಿ ಕೇಸ್ ವಾರಣಾಸಿ ಕೋರ್ಟ್‍ಗೆ ವರ್ಗಾವಣೆ – ವಾದ, ಪ್ರತಿವಾದ ಹೇಗಿತ್ತು?
ಏನಿದು ಪ್ರಕರಣ?: 2019ರ ನವೆಂಬರ್ 27ರಂದು 26 ವರ್ಷದ ಪಶುವೈದ್ಯೆಯನ್ನು ಸ್ಕೂಟಿ ಪಂಕ್ಚರ್ ಹಾಕಿಸಿಕೊಡುವ ನೆಪದಲ್ಲಿ ಲಾರಿ ಚಾಲಕ ಮೊಹಮ್ಮದ್ ಪಾಷಾ, ಮೂವರು ಕ್ಲೀನರ್ ಗಳಾದ ನವೀನ್, ಚೆನ್ನಕೇಶವುಲು ಮತ್ತು ಶಿವಾ ಸೇರಿ ಕಿಡ್ನಾಪ್ ಮಾಡಿ, ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಅಲ್ಲದೆ ವೈದ್ಯೆಯ ಮೃತ ದೇಹವನ್ನು ಸುಟ್ಟು ಹಾಕಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿತ್ತು. ಅಪರಾಧ ಕೃತ್ಯದ ಮರುಸೃಷ್ಟಿ ಮಾಡಲು ಘಟನಾ ಸ್ಥಳಕ್ಕೆ ಆರೋಪಿಗಳನ್ನು ಪೊಲೀಸರು ಕರೆದೊಯ್ದ ವೇಳೆ, 2019ರ ಡಿಸೆಂಬರ್ 6ರಂದು ಎನ್‍ಕೌಂಟರ್ ನಡೆದಿತ್ತು. ಪಶುವೈದ್ಯೆಯ ಸುಟ್ಟು ಕರಕಲಾದ ಮೃತದೇಹ ಪತ್ತೆಯಾಗಿದ್ದ ಹೈದರಾಬಾದ್ ಸಮೀಪದ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಆರೋಪಿಗಳು ಹತರಾಗಿದ್ದಾರೆ ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದರು. ಈ ಘಟನೆ ದೇಶದ್ಯಂತ ಸಂಚಲನ ಮೂಡಿಸಿತ್ತು.
ಹೈದರಾಬಾದ್: ಶಸ್ತ್ರ ಚಿಕಿತ್ಸೆ ಮೂಲಕ ರೋಗಿಯೊಬ್ಬರ ಮೂತ್ರಪಿಂಡದಲ್ಲಿದ್ದ 206 ಕಲ್ಲುಗಳನ್ನು ಒಂದು ಗಂಟೆಯಲ್ಲಿಯೇ ತೆಲಂಗಾಣದ ಹೈದರಾಬಾದ್‍ನಲ್ಲಿರುವ ಅವೇರ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯರು ತೆಗೆದು ಹಾಕಿದ್ದಾರೆ.
ಕಳೆದ ಆರು ತಿಂಗಳಿನಿಂದ ಎಡ ಭಾಗದ ಸೊಂಟದ ನೋವಿನಿಂದ ಬಳಲುತ್ತಿದ್ದ ನಲ್ಗೊಂಡ ನಿವಾಸಿ 56 ವರ್ಷದ ವೀರಮಲ್ಲ ರಾಮಲಕ್ಷ್ಮಯ್ಯ ಅವರಿಗೆ ಬೇಸಿಗೆಯಲ್ಲಿ ತೀವ್ರ ನೋವು ಕಾಣಿಸಿಕೊಂಡಿತ್ತು. ಇದರಿಂದ ಏಪ್ರಿಲ್ 22 ರಂದು ವೀರಮಲ್ಲ ಅವರು ಅವೇರ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿದ್ದಾರೆ. ನಂತರ ಕೆಲವು ಔಷಧಿಗಳನ್ನು ತೆಗೆದುಕೊಳ್ಳುವಂತೆ ವೈದ್ಯರು ಸಲಹೆ ನೀಡಿದರು. ಅದರಿಂದ ಅಲ್ಪಾವಧಿಯ ಪರಿಹಾರ ಮಾತ್ರ ದೊರೆಯಿತು. ಆದರೆ ದಿನದಿಂದ ದಿನೇ ನೋವು ವಿಪರೀತಗೊಂಡಿತು. ಇದನ್ನೂ ಓದಿ: ಚಾರ್ ಧಾಮ್ ಯಾತ್ರೆ – ಇಲ್ಲಿ ವರೆಗೆ 46 ಯಾತ್ರಿಕರು ಹೃದಯಾಘಾತದಿಂದ ಸಾವು
ನಂತರ ಅವೇರ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ಹಿರಿಯ ಸಮಾಲೋಚಕ ಮೂತ್ರಶಾಸ್ತ್ರಜ್ಞ ಡಾ.ಪೂಲಾ ನವೀನ್ ಕುಮಾರ್ ಅವರು, ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿದಾಗ ರೋಗಿಯ ಎಡ ಮೂತ್ರಪಿಂಡದಲ್ಲಿ ಕಲ್ಲುಗಳಿರುವುದು ಕಂಡು ಬಂದಿದೆ. ಕೊನೆಗೆ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದರು.
ಬೇಸಿಗೆಯಲ್ಲಿ ಹೆಚ್ಚು ಬಿಸಿಲಿರೋ ಕಾರಣ ಅನೇಕ ಬಹುತೇಕರು ನಿರ್ಜಲೀಕರಣದಿಂದ ಬಳಲುತ್ತಿರುತ್ತಾರೆ. ಇದರಿಂದ ಮೂತ್ರಪಿಂಡದಲ್ಲಿ ಕಲ್ಲು ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ. ಹೀಗಾಗಿ ಮುನ್ನೆಚ್ಚರಿಕೆಯಿಂದ ಸಾಧ್ಯವಾದಷ್ಟು ಹೆಚ್ಚು ನೀರು ಕುಡಿಯುವುದು ಮತ್ತು ಎಳನೀರು ಕುಡಿಯುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಹೈದರಾಬಾದ್: ತೆಲಂಗಾಣದ ಪ್ರದೇಶವೊಂದರಲ್ಲಿ ನೇಮಕಗೊಂಡ ಗುಪ್ತಚರ ಇಲಾಖೆಯ (ಐಬಿ) ಅಧಿಕಾರಿಯೊಬ್ಬರು ಕರ್ತವ್ಯದಲ್ಲಿದ್ದಾಗ ಆಕಸ್ಮಿಕವಾಗಿ ಬಿದ್ದ ಪರಿಣಾಮ ಗಾಯಗೊಂಡು ಸಾವನ್ನಪ್ಪಿದ್ದಾರೆ.
ಐಬಿ ಸಹಾಯಕ ನಿರ್ದೇಶಕ ಅಮರೀಶ್ (51) ಮೃತ ಅಧಿಕಾರಿ. ಅಮರೀಶ್ ಅವರು ಬುಧವಾರ ಮಧ್ಯಾಹ್ನ ಹೈದರಾಬಾದ್‍ನ ಮಾದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಶಿಲ್ಪ ಕಲಾ ವೇದಿಕೆಯಲ್ಲಿ ಭದ್ರತಾ ತಪಾಸಣೆ ನಡೆಸುತ್ತಿದ್ದಾಗ ಆಕಸ್ಮಿಕವಾಗಿ ಬಿದ್ದಿದ್ದಾರೆ. ಇದನ್ನೂ ಓದಿ: ಬಾಕ್ಸಿಂಗ್ ರಿಂಗ್‍ನಲ್ಲಿಯೇ ಹೃದಯಾಘಾತ – ಚಾಂಪಿಯನ್ ಮೂಸಾ ಯಮಕ್ ವಿಧಿವಶ
ಹೈದರಾಬಾದ್: ವೈಎಸ್‌ಆರ್‌ಸಿಪಿ ನಾಯಕ ಮತ್ತು ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸೋದರ ಸಂಬಂಧಿ ವೈಎಸ್ ಕೊಂಡ ರೆಡ್ಡಿಯನ್ನು ಭ್ರಷ್ಟಾಚಾರ ಆರೋಪದಡಿ ಆಂಧ್ರಪ್ರದೇಶದ ಪೊಲೀಸರು ಬಂಧಿಸಿದ್ದಾರೆ.
ರಾಯಚೋಟಿ ನಡುವೆ ರಸ್ತೆ ನಿರ್ಮಿಸಲು ನಿರ್ಮಾಣ ಸಂಸ್ಥೆಗೆ ಟೆಂಡರ್ ನೀಡಲಾಗಿದ್ದು, ಈ ಕಾಮಗಾರಿ ಮುಂದುವರಿಬೇಕಾದರೆ ಲಂಚ ನೀಡುವಂತೆ ವೈ.ಎಸ್.ಕೊಂಡಾ ರೆಡ್ಡಿ ಒತ್ತಾಯಿಸಿದ್ದಾರೆ ಮತ್ತು ಒಂದು ವೇಳೆ ಲಂಚ ನೀಡದಿದ್ದರೆ, ಸರ್ಕಾರದ ಮೇಲೆ ಪ್ರಭಾವ ಬೀರಿ ನಡೆಯುತ್ತಿರುವ ಕಾಮಗಾರಿಗಳನ್ನು ಸ್ಥಗಿತಗೊಳಿಸಬೇಕಾಗುತ್ತದೆ ಎಂದು ಚಕ್ರಯಾಪೇಟ್ ಮಂಡಲ್‍ನ ಕಟ್ಟಡ ನಿರ್ಮಾಣ ಸಂಸ್ಥೆಯ ಮಾಲೀಕರಿಗೆ ಬೆದರಿಕೆಯೊಡ್ಡಿದ್ದಾರೆ ಅಂತ ಆರೋಪಿಸಲಾಗಿದೆ ಎಂದು ಕಡಪಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಕೆ.ಎನ್.ಅನ್ಬುರಾಜನ್ ತಿಳಿಸಿದ್ದಾರೆ. ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಗಳನ್ನು ಹಂಚಲು ಹೋಗಿದ್ದ ಯುವತಿಯ ಮೇಲೆ ಗ್ಯಾಂಗ್‍ರೇಪ್
ಈ ಸಂಬಂಧ ಕಟ್ಟಡ ನಿರ್ಮಾಣ ಸಂಸ್ಥೆ ಮಾಲೀಕರು, ಮೇ 5ರಂದು ಚಕ್ರಾಯಪೇಟೆ ಮಂಡಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇದೀಗ ಪೊಲೀಸರು ವೈಎಸ್ ಕೊಂಡ ರೆಡ್ಡಿಯನ್ನು ಬಂಧಿಸಿದ್ದಾರೆ.
ಹೈದರಾಬಾದ್: ಮಧ್ಯಪ್ರದೇಶ ಮತ್ತು ದೆಹಲಿಯಲ್ಲಿ ಇತ್ತೀಚೆಗಷ್ಟೇ ನಡೆದ ಕೋಮು ಗಲಭೆಗಳ ನಡುವೆ ಮಸೀದಿಗಳ ಮುಂದೆ ಕ್ಯಾಮೆರಾಗಳನ್ನು ಅಳವಡಿಸುವಂತೆ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕರೆ ನೀಡಿದ್ದಾರೆ.
ದೆಹಲಿಯ ಜಹಾಂಗೀರ್‍ಪುರಿ ಮತ್ತು ಸಂಸದ ಖಾರ್ಗೋನ್‍ನಲ್ಲಿ ನಡೆದ ಕೋಮು ಹಿಂಸಾಚಾರದ ಘಟನೆಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು, ಧಾರ್ಮಿಕ ಮೆರವಣಿಗೆಗಳನ್ನು ರೆಕಾರ್ಡ್ ಮಾಡಲು ಮಸೀದಿಗಳ ಬಳಿ ಹೆಚ್ಚಿನ ರೆಸಲ್ಯೂಶನ್ ಕ್ಯಾಮೆರಾಗಳನ್ನು ಅಳವಡಿಸಬೇಕು. ಇದರಿಂದ ಯಾರು ಕಲ್ಲು ತೂರಾಟ ನಡೆಸುತ್ತಿದ್ದಾರೆಂದು ಜನರು ತಿಳಿಯಬಹುದು ಎಂದಿದ್ದಾರೆ.
ಈ ಮುನ್ನ ಶನಿವಾರ ಹೈದರಾಬಾದ್‍ನಲ್ಲಿ ಮಾತನಾಡಿದ ಅಸಾದುದ್ದೀನ್ ಓವೈಸಿ ಅವರು, ಜ್ಞಾನವಾಪಿ-ಶೃಂಗಾರ್ ಗೌರಿ ಸಂಕೀರ್ಣದ ಕೆಲವು ಪ್ರದೇಶಗಳನ್ನು ಸಮೀಕ್ಷೆ ನಡೆಸುವಂತೆ ವಾರಣಾಸಿ ನ್ಯಾಯಾಲಯವು ಇತ್ತೀಚಿಗೆ ನೀಡಿದೆ ಆದೇಶವನ್ನು ಖಂಡಿಸಿದ್ದರು. ಈ ಆದೇಶವು ರಥಯಾತ್ರೆಯ ರಕ್ತಪಾತ ಮತ್ತು 1980-1990ರ ಮುಸ್ಲಿಂ ವಿರೋಧಿ ಹಿಂಸಾಚಾರಕ್ಕೆ ದಾರಿ ಮಾಡಿಕೊಡುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ವಾರಣಾಸಿಯ ಜ್ಞಾನವಾಪಿ ಮಸೀದಿಯ ಸಮೀಕ್ಷೆಯ ವಿವಾದವನ್ನು ಹುಟ್ಟು ಹಾಕಿರುವ ಬಿಜೆಪಿ ಮತ್ತುಆರ್‌ಎಸ್‍ಎಸ್ ಉಭಯ ಕೋಮಿನಲ್ಲಿ ದ್ವೇಷವನ್ನು ಮೂಡಿಸುತ್ತಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಮಸೀದಿಗಳ ಮೈಕ್ ತೆರವಿಗೆ ನಾಳೆಯೇ ಡೆಡ್‍ಲೈನ್ – ದೇಗುಲಗಳಲ್ಲಿ 3 ಬಾರಿ ಮಂತ್ರ ಘೋಷ
मस्जिद के ऊपर high-resolution CCTV cameras लगाइये और जब भी कोई जुलूस निकले तो उसे Facebook पर Live करें, ताकि दुनिया को मा’लूम हो सकें कि पत्थर किसने फेंका। pic.twitter.com/K7m5gZcCCz
ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ-1991ರ ಪ್ರಕಾರ ಧಾರ್ಮಿಕ ಕೇಂದ್ರಗಳಿಗೆ ಯಾವುದೇ ತೊಂದರೆ ಉಂಟು ಮಾಡಬಾರದು ಎಂದು ಹೇಳಿದೆ. ಇದನ್ನು ಭಾರತ ಸರ್ಕಾರ ಕೂಡ ಅಂಗೀಕರಿಸಿದೆ. ಈ ಬಗ್ಗೆ ಸರ್ಕಾರ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕಡಬೇಕಿತ್ತು. ಆದರೆ, ಬಿಜೆಪಿ ಸರ್ಕಾರ ಇದರಲ್ಲಿ ಮೌನ ವಹಿಸಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿಯ ನಮ್ಮ ಮನೆ ಎಕ್ಸ್‌ಪೋಗೆ ಸಖತ್ ಸ್ಪಂದನೆ – ಇಂದೇ ಕಡೇ ದಿನ, ತಪ್ಪದೇ ಬನ್ನಿ
ಕೆಜಿಎಫ್ 2 ಸಕ್ಸಸ್ ಅನ್ನು ಚಿತ್ರತಂಡ ಎಂಜಾಯ್ ಮಾಡುತ್ತಿದ್ದರೆ, ಅದರ ನಿರ್ದೇಶಕ ಪ್ರಶಾಂತ್ ನೀಲ್ ‘ಸಲಾರ್’ ಸಿನಿಮಾದ ಉಳಿದ ಕೆಲಸಗಳತ್ತ ಮುಖ ಮಾಡಿದ್ದಾರೆ. ‘ಸಲಾರ್’ ಸಿನಿಮಾದ ಶೂಟಿಂಗ್ ಇನ್ನೂ ಬಾಕಿ ಇರುವ ಕಾರಣದಿಂದಾಗಿ ಅವರು ಹೈದರಾಬಾದ್ ನಲ್ಲೇ ಉಳಿದುಕೊಳ್ಳಲು ನಿರ್ಧರಿಸಿದ್ದಾರಂತೆ. ಹಾಗಾಗಿ ಹೈದರಾಬಾದ್ ನಲ್ಲಿ ಮನೆ ಹುಡುಕಾಟಕ್ಕೆ ಮುಂದಾಗಿದ್ದಾರೆ ಎನ್ನುತ್ತಾರೆ ಅವರ ಆಪ್ತರು. ಇದನ್ನೂ ಓದಿ : ಪ್ರಶಾಂತ್ ನೀಲ್ -ಜ್ಯೂ.ಎನ್‌ಟಿಆರ್ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು ಗೊತ್ತಾ?
ಕೆಲಸದ ವಿಷಯದಲ್ಲಿ ಪ್ರಶಾಂತ್ ನೀಲ್ ದೈತ್ಯ. ಹಗಲು ರಾತ್ರಿ ಲೆಕ್ಕಿಸದೇ ಕೆಲಸ ಮಾಡುತ್ತಾರೆ. ಕೆಲಸ ಮಾಡುತ್ತಿರುವಾಗ ಮನೆಗೆ ಹೋಗುವುದೇ ಕಡಿಮೆ ಎಂದು ಅವರೇ ಸ್ವತಃ ಹೇಳಿದ್ದಾರೆ. ಕೋವಿಡ್ ವೇಳೆಯಲ್ಲೇ ಆಫೀಸಿನಲ್ಲೇ ಹೆಚ್ಚು ದಿನ ಉಳಿದುಬಿಟ್ಟೆ ಎಂದೂ ಹೇಳಿದ್ದಾರೆ. ಹಾಗಾಗಿ ಸಲಾರ್ ಸಿನಿಮಾದ ಬಹುತೇಕ ಕೆಲಸಗಳು ಹೈದರಾಬಾದ್ ನಲ್ಲೇ ನಡೆಯುವ ಕಾರಣದಿಂದಾಗಿ ಅಲ್ಲದೇ ಉಳಿದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಯಶ್ ಮುಂದಿನ ಚಿತ್ರ ಯಾರ ಜೊತೆ? ಹೊರಬಿತ್ತು ಬಿಗ್ ನ್ಯೂಸ್
ಈ ತಿಂಗಳಿಂದ ಸಲಾರ್ ಸಿನಿಮಾದ ಶೂಟಿಂಗ್ ಶುರುವಾಗಲಿದ್ದು, ಈ ಸಿನಿಮಾ ಮುಗಿದ ನಂತರ ಅವರು ಜ್ಯೂನಿಯರ್ ಎನ್.ಟಿ.ಆರ್ ಗಾಗಿ ಸಿನಿಮಾವೊಂದನ್ನು ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅದರ ಬಹುತೇಕ ಕೆಲಸಗಳು ಹೈದರಾಬಾದ್ ನಲ್ಲೇ ನಡೆಯುವುದರಿಂದ ಹಲವು ವರ್ಷಗಳ ಕಾಲ ಅವರು ಅಲ್ಲೇ ಇರಬೇಕಾಗಿ ಬರಬಹುದು. ಹಾಗಾಗಿ ಹೈದರಾಬಾದ್ ನಲ್ಲಿ ಉಳಿದುಕೊಳ್ಳಲು ಮನೆಯೊಂದು ಹುಡುಕುತ್ತಿದ್ದಾರಂತೆ. ಇದನ್ನೂ ಓದಿ : ಹೆಸರಾಂತ ಹಾಸ್ಯ ಕಲಾವಿದ ಮೋಹನ್ ಜೂನೇಜ ಇನ್ನಿಲ್ಲ
ಸಲಾರ್ ಮತ್ತು ಜ್ಯೂ.ಎನ್.ಟಿ.ಆರ್ ಈ ಎರಡೂ ಸಿನಿಮಾಗಳು ಮುಗಿಯಲು ಕನಿಷ್ಠ ನಾಲ್ಕೈದು ವರ್ಷ ಬೇಕಾಗಬಹುದು. ಅಲ್ಲದೇ, ಇದೇ ಹೊತ್ತಿನಲ್ಲಿ ಕೆಜಿಎಫ್ 3 ಸಿನಿಮಾದ ವಿಷಯವು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಸಲಾರ್ ನಂತರ ಕೆಜಿಎಫ್ 3 ಬರತ್ತಾ? ಅಥವಾ ಕೆಜಿಎಫ್ 3 ಗಿಂತಲೂ ಮೊದಲು ಜ್ಯೂನಿಯರ್ ಎನ್.ಟಿ.ಆರ್ ಸಿನಿಮಾ ಮಾಡುತ್ತಾರಾ ಅವರೇ ಸ್ಪಷ್ಟನೆ ಕೊಡಬೇಕು.
ಹೈದರಾಬಾದ್: ತೆಲಂಗಾಣದ ಸರೂರ್‌ನಗರದಲ್ಲಿ ಶುಕ್ರವಾರ ನಡೆದ ಮರ್ಯಾದಾ ಹತ್ಯೆ ಘಟನೆಯು ಸಂವಿಧಾನ ಮತ್ತು ಇಸ್ಲಾಂ ಧರ್ಮದ ಪ್ರಕಾರ ಇದೊಂದು ಅಪರಾಧ ಕೃತ್ಯ ಎಂದು ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ತೆಲಂಗಾಣದ ಹೈದರಾಬಾದ್‍ನಲ್ಲಿ ನಡೆದ ರ್‍ಯಾಲಿ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಸರೂರ್‌ನಗರದಲ್ಲಿ ನಡೆದ ಘಟನೆಯನ್ನು ನಾವು ಖಂಡಿಸುತ್ತೇವೆ. ಮಹಿಳೆ ಇಷ್ಟಪಟ್ಟು ಮದುವೆಯಾಗಲು ನಿರ್ಧರಿಸಿದ್ದಾಳೆ. ಹಾಗಾಗಿ ಆಕೆಯ ಸಹೋದರನಿಗೆ ಪತಿಯನ್ನು ಕೊಲ್ಲುವ ಹಕ್ಕು ಇಲ್ಲ. ಸಂವಿಧಾನ ಮತ್ತು ಇಸ್ಲಾಂ ಪ್ರಕಾರ ಇದೊಂದು ಅಪರಾಧ ಕೃತ್ಯವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಮರ್ಯಾದಾ ಹತ್ಯೆ – ತಹಶೀಲ್ದಾರ್ ಕಚೇರಿಯಲ್ಲೇ ಚಾಕುವಿನಿಂದ ಇರಿದು ವ್ಯಕ್ತಿ ಬರ್ಬರ ಕೊಲೆ
ನಿನ್ನೆಯಿಂದ ಈ ಘಟನೆಗೆ ಮತ್ತೊಂದು ಬಣ್ಣ ನೀಡಲಾಗುತ್ತಿದೆ. ಇಲ್ಲಿನ ಪೊಲೀಸರು ಆರೋಪಿಯನ್ನು ತಕ್ಷಣ ಬಂಧಿಸಲಿಲ್ಲವೋ? ಅಥವಾ ಬಂಧಿಸುತ್ತಾರೋ? ಆದರೆ ನಾವು ಮಾತ್ರ ಆರೋಪಿಯ ಜೊತೆ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಗುರುವಾರ ಮುಂಜಾನೆ, ಹೈದರಾಬಾದ್‍ನ ಸರೂರ್‌ನಗರ ಪೊಲೀಸರು ಬಿಲ್ಲಿಪುರಂ ನಾಗರಾಜು ಹತ್ಯೆಯಲ್ಲಿ ಭಾಗಿಯಾಗಿದ್ದ ಆಶ್ರಿನ್ ಸುಲ್ತಾನಾ ಅಲಿಯಾಸ್ ಪಲ್ಲವಿಯ ಇಬ್ಬರು ಸಂಬಂಧಿಕರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಮೊಹಮ್ಮದ್ ಮಸೂದ್ ಅಹ್ಮದ್ ಅವರ ಸಹೋದರ ಸೈಯದ್ ಮೊಬಿನ್ ಅಹ್ಮದ್ ಎಂದು ಆಶ್ರಿನ್ ಸುಲ್ತಾನ ಗುರುತಿಸಿದ್ದಾರೆ. ಇದೀಗ ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ ಎಂದು ಸರೂರನಗರ ಪೊಲೀಸರು ತಿಳಿಸಿದ್ದಾರೆ.
ಹೈದರಾಬಾದ್: ನನ್ನ ಪತಿ ತನ್ನೊಂದಿಗೆ ಬದುಕುತ್ತೇನೆ ಮತ್ತು ಸಾಯುತ್ತೇನೆ ಎಂದಿದ್ದರು. ಅಷ್ಟೇ ಅಲ್ಲದೇ ನನಗೋಸ್ಕರ ಮುಸ್ಲಿಮ್ ಧರ್ಮಕ್ಕೆ ಮತಾಂತರ ಆಗುತ್ತೇನೆ ಎಂದು ಹೇಳಿದ್ದರು ಎಂದು ಹತ್ಯೆಯಾದ ನಾಗರಾಜು ಅವರ ಪತ್ನಿ ಸೈಯದ್ ಅಶ್ರಿನ್ ಸುಲ್ತಾನಾ ಹೇಳಿದ್ದರು.
ಅಲ್ಲದೇ ತನ್ನ ಸಹೋದರ ಕೋಪಿಷ್ಟ ಮತ್ತು ಮದುವೆಯಾದರೆ ಜೀವ ಬೆದರಿಕೆಯೊಡ್ಡಬಹುದು ಅಂತ ಎಚ್ಚರಿಕೆ ನೀಡಿದಾಗಲೂ ನಾನು ನಿನಗೋಸ್ಕರ ಸಾಯಲು ಕೂಡ ಸಿದ್ಧ ಎಂದಿದ್ದರು ಎಂದು ಹೈದರಾಬಾದ್‍ನಲ್ಲಿ ನಡೆದ ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಹತ್ಯೆಗೀಡಾದ ನಾಗರಾಜು(25) ಅವರ ಪತ್ನಿ ಸೈಯದ್ ಅಶ್ರಿನ್ ಸುಲ್ತಾನಾ (ಪಲ್ಲವಿ) ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಮರ್ಯಾದಾ ಹತ್ಯೆ – ತಹಶೀಲ್ದಾರ್ ಕಚೇರಿಯಲ್ಲೇ ಚಾಕುವಿನಿಂದ ಇರಿದು ವ್ಯಕ್ತಿ ಬರ್ಬರ ಕೊಲೆ
Hyderabad | Among the people involved in the killing, I only recognise my brother. My husband Nagaraju was beaten at the signal in front of everyone. I begged the onlookers for help but to no avail, said Ashrin Sulthana, deceased’s wife https://t.co/7Sy0CmplCc
ನನ್ನಿಂದ ನಾಗರಾಜು ಅವರ ಜೀವಕ್ಕೆ ಯಾವುದೇ ಅಪಾಯವಾಗಬಾರದು ಎಂದು ನಮ್ಮ ಮದುವೆಗೆ ಒಂದು ತಿಂಗಳು ಮುನ್ನವೇ ಅವರಿಗೆ ಬೇರೆ ಹುಡುಗಿಯನ್ನು ಮದುವೆಯಾಗುವಂತೆ ಮನವೊಲಿಸಲು ಯತ್ನಿಸಿದ್ದೆ. ಆದರೆ ನಮ್ಮಿಬ್ಬರ ಪ್ರೀತಿಯ ವಿಚಾರ ತಿಳಿದು ಮನೆಯವರು ನಾಗರಾಜು ಅವರು ಕೆಲಸದಲ್ಲಿದ್ದಾಗ ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದರು. ಇದನ್ನೂ ಓದಿ: ಕ್ಷುಲ್ಲಕ ವಿಚಾರಕ್ಕೆ ಪತ್ನಿಯ ಕತ್ತು ಹಿಸುಕಿ ಕೊಲೆ?
ಘಟನೆ ವೇಳೆ ನನ್ನ ಗಂಡ ಸಹಾಯಕ್ಕಾಗಿ ಬೇಡಿಕೊಂಡರೂ ಯಾರೂ ಕೂಡ ಸಹಾಯ ಮಾಡಲು ಬರಲಿಲ್ಲ. ನೋಡುಗರು ಸಹಾಯ ಮಾಡಿದ್ದರೆ ಇಂದು ನನ್ನ ಪತಿ ಬದುಕಿರುತ್ತಿದ್ದರು.ನಮಗಷ್ಟೇ ಅಲ್ಲ, ಜಗತ್ತಿನಲ್ಲಿ ಎಲ್ಲಿಯಾದರೂ ಇಂತಹ ಘಟನೆ ನಡೆದಾಗ ಜನರು ಸಹಾಯಕ್ಕೆ ಬರಬೇಕು. ಆದರೆ 15-20 ನಿಮಿಷಗಳ ಕಾಲ ಹಲ್ಲೆ ನಡೆಸುತ್ತಿದ್ದರೂ, ಯಾರು ಕೂಡ ಸಹಾಯ ಮಾಡಲಿಲ್ಲ ಎಂದು ಕಣ್ಣೀರಿಟ್ಟಿದ್ದರು.
Hyderabad | We were going home when my brother along with another person come on a motorcycle & pushed my husband (Nagaraju) & started beating him. In the beginning, I didn’t know it was my brother who was attacking him. No one helped us: Ashrin Sulthana, deceased’s wife pic.twitter.com/X8VbH4Edy2
ನಾಗರಾಜು ಮತ್ತು ಅವರ ಪತ್ನಿ ಸೈಯದ್ ಅಶ್ರಿನ್ ಸುಲ್ತಾನಾ (ಪಲ್ಲವಿ) ಬೇರೆ, ಬೇರೆ ಸಮುದಾಯಕ್ಕೆ ಸೇರಿದವರಾಗಿದ್ದು, ಎರಡು ತಿಂಗಳ ಹಿಂದೆ ಅವರ ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಿದ್ದರು. ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಹೈದರಾಬಾದ್‍ನ ಸರೂರ್‍ನಗರ ತಹಶೀಲ್ದಾರ್ ಕಚೇರಿ ಬಳಿ ನಾಗರಾಜು ಅವರನ್ನು ಹತ್ಯೆಗೈದಿದ್ದ. ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಘಟನೆಯನ್ನು ಅನೇಕ ದಾರಿಹೋಕರು ತಮ್ಮ ಫೋನ್‍ಗಳಲ್ಲಿ ಸೆರೆಹಿಡಿದಿದ್ದಾರೆ.
ಹೈದರಾಬಾದ್: ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿಯೇ ಪತ್ನಿ ಮತ್ತು ಆಕೆಯ ಪ್ರಿಯಕರನ ಹತ್ಯೆಗೈದಿರುವ ಘಟನೆ ತೆಲಂಗಾಣದ ಹೈದರಾಬಾದ್‍ನ ರಾಚಕೊಂಡದಲ್ಲಿ ನಡೆದಿದೆ.
ಕಾರು ಚಾಲಕನಾಗಿದ್ದ ಯಶವಂತ್ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಪತ್ನಿಗೆ ಎಷ್ಟು ಬಾರಿ ತಿಳುವಳಿಕೆ ಹೇಳಿದರೂ ಕೇಳದ ಹಿನ್ನೆಲೆ ಅವಮಾನ ಅನುಭವಿಸಿ ಆರೋಪಿ ಈ ಕೃತ್ಯ ಎಸಗಿದ್ದಾನೆ. ಇದೀಗ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಲ್‍ಬಿ ನಗರದ ಉಪ ಪೊಲೀಸ್ ಆಯುಕ್ತ ಸನ್‍ಪ್ರೀತ್ ಸಿಂಗ್ ತಿಳಿಸಿದ್ದಾರೆ.
ವಿಜಯವಾಡದಿಂದ ಹೈದರಾಬಾದ್‍ಗೆ ಮಹಿಳೆ ಮತ್ತು ಆಕೆಯ ಕುಟುಂಬಸ್ಥರು ಶಿಫ್ಟ್ ಆಗಿದ್ದರು. ಈ ವೇಳೆ ತನ್ನ ಪತ್ನಿಗೆ ಯಶವಂತ್ ಪರಿಚಯವಾಗಿ ನಂತರ ಇಬ್ಬರ ನಡುವೆ ಅಕ್ರಮ ಸಂಬಂಧ ಶುರುವಾಗಿತ್ತು. ಈ ವಿಚಾರ ತಿಳಿದು ನಿರಾಕರಿಸಿ ಆರೋಪಿ ತನ್ನ ಪತ್ನಿಗೆ ಅನೇಕ ಬಾರಿ ಬುದ್ಧಿವಾದ ಹೇಳಿದ್ದಾನೆ. ಆದರೆ ಆಕೆ ಪತಿಯನ್ನೇ ಬಿಟ್ಟು ಹೋಗುವುದಾಗಿ ಬೆದರಿಕೆ ಹಾಕಿದ್ದಾಳೆ. ನಂತರ ಆರೋಪಿ ಮತ್ತೆ ವಿಜಯವಾಡಕ್ಕೆ ಹಿಂತಿರುಗುವುದಾಗಿ ಹೆಂಡತಿ ಬಳಿ ಪ್ರಸ್ತಾಪಿಸಿದಾಗ ಆಕೆ ಕೂಡ ಒಪ್ಪಿಕೊಂಡಿದ್ದಳು. ಆದರೆ ಜೊತೆಯಲ್ಲಿ ಯಶವಂತ್‍ನನ್ನು ಸಹ ತಮ್ಮೊಂದಿಗೆ ಕರೆದುಕೊಂಡು ಹೋಗಬೇಕೆಂದು ಕೇಳಿಕೊಂಡಿದ್ದಳು. ಇದೇ ವೇಳೆ ಆರೋಪಿ ಕೊಲ್ಲಲು ಪ್ಲಾನ್ ಮಾಡಿದ್ದನು. ಇದನ್ನೂ ಓದಿ: 2024ರಲ್ಲಿ ಶುಕ್ರಯಾನಕ್ಕೆ ISRO ಸಜ್ಜು- ಇಲ್ಲಿದೆ ಶುಕ್ರಗ್ರಹದ ಸ್ವಾರಸ್ಯಕರ ಸಂಗತಿ
ನಂತರ ಮೂವರೂ ಎರಡು ವಾಹನಗಳಲ್ಲಿ ಕೊತಗುಡೆಂ ಪಟ್ಟಣವನ್ನು ತಲುಪಿದರು. ಬಳಿಕ ತನ್ನನ್ನು ಮತ್ತು ಯಶವಂತ್‍ನನ್ನು ಒಬ್ಬಂಟಿಯಾಗಿ ಬಿಡುವಂತೆ ಮಹಿಳೆ ತನ್ನ ಪತಿಯನ್ನು ಕೇಳಿದ್ದಾಳೆ. ಈ ವೇಳೆ ಆರೋಪಿ ಮದ್ಯ ಸೇವಿಸಲು ಪ್ರಾರಂಭಿಸಿದಾಗ, ಆತನ ಹೆಂಡತಿ ಮತ್ತು ಆಕೆಯ ಪ್ರಿಯಕರ ಆರೋಪಿ ಮುಂದೆಯೇ ಲೈಂಗಿಕ ಸಂಭೋಗವನ್ನು ಪ್ರಾರಂಭಿಸಿದ್ದಾರೆ. ಇದನ್ನು ಕಂಡು ಕೋಪಗೊಂಡ ಆರೋಪಿ ಬಂಡೆಕಲ್ಲುಗಳಿಂದ ಇಬ್ಬರಿಗೂ ಹೊಡೆದು ಸ್ಕ್ರೂಡ್ರೈವರ್‌ನಿಂದ ಇರಿದಿದ್ದಾನೆ. ಇದರಿಂದಾಗಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮೃತದೇಹಗಳನ್ನು ಜನನಿಬಿಡ ಪ್ರದೇಶದಲ್ಲಿ ಬಿಟ್ಟು ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಫಿನ್‍ಲ್ಯಾಂಡ್ ಪ್ರಧಾನಿಯನ್ನು ಭೇಟಿ ಮಾಡಿದ ಮೋದಿ – ಕಾರಣವೇನು?