Tag: Hyderabad

  • ದೋಣಿ ಸಮಸ್ಯೆ – ಪ್ರಾಣ ಉಳಿಸಿಕೊಳ್ಳಲು ನೀರಿಗೆ ಹಾರಿದ ನಾಲ್ವರಲ್ಲಿ ಓರ್ವ ಯುವಕ ಸಾವು

    ದೋಣಿ ಸಮಸ್ಯೆ – ಪ್ರಾಣ ಉಳಿಸಿಕೊಳ್ಳಲು ನೀರಿಗೆ ಹಾರಿದ ನಾಲ್ವರಲ್ಲಿ ಓರ್ವ ಯುವಕ ಸಾವು

    ಹೈದರಾಬಾದ್: ಫ್ಲೋರಿಡಾದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದ ತೆಲಂಗಾಣದ 25 ವರ್ಷದ ವಿದ್ಯಾರ್ಥಿಯೊಬ್ಬ ದೋಣಿ ದುರಂತದಲ್ಲಿ ಸಾವನ್ನಪ್ಪಿದ್ದಾರೆ.

    ಮೃತ ದುರ್ದೈವಿಯನ್ನು ಯಶವಂತ್ ಕುಮಾರ್ ಎಂದು ಗುರುತಿಸಲಾಗಿದ್ದು, ಇವರು ರಾಜಣ್ಣ-ಸಿರ್ಸಿಲ್ಲಾ ಜಿಲ್ಲೆಯ ವೇಮುಲವಾಡ ನಿವಾಸಿಯಾಗಿದ್ದಾರೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಹೈದರಾಬಾದ್‍ನಲ್ಲಿ ಬಿಟೆಕ್ ಮುಗಿಸಿ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು.

    ಭಾನುವಾರ ಯಶವಂತ್ ತನ್ನ ಸ್ನೇಹಿತರಾದ ಚರಣ್, ಮೈಸೂರ, ಶ್ರೀಕರ್ ಮತ್ತು ರ್ವರಿ ಅವರೊಂದಿಗೆ ಪಾಂಟೂನ್ ಬೋಟ್ ನಿಂದ ಪಶ್ಚಿಮ ಫ್ಲೋರಿಡಾ ಕ್ರ್ಯಾಬ್ ದ್ವೀಪಕ್ಕೆ ಹೊರಟಿದ್ದರು. ಈ ಮಧ್ಯೆ ದೋಣಿಯಲ್ಲಿ ಸಮಸ್ಯೆ ಕಂಡು ಬಂದಿದ್ದು, ನಂತರ ಕೆಲವರು ಪ್ರಾಣವನ್ನು ಉಳಿಸಿಕೊಳ್ಳಲು ನೀರಿಗೆ ಹಾರಿದ್ದಾರೆ. ಇದನ್ನೂ ಓದಿ: ರಾಜ್‍ ಠಾಕ್ರೆ ಆಸ್ಪತ್ರೆಗೆ ದಾಖಲು- ನಾಳೆ ಶಸ್ತ್ರಚಿಕಿತ್ಸೆ

    ಈ ವೇಳೆ ಸಮುದ್ರದ ಅಲೆಯಲ್ಲಿ ಯಶವಂತ್ ಕುಮಾರ್ ಕೊಚ್ಚಿ ಹೋಗಿದ್ದಾರೆ. ನೀರಿನಲ್ಲಿ ಮುಳುಗಿದ್ದ ಉಳಿದ ನಾಲ್ವರನ್ನು ಒಕಲೂಸಾ ಕೌಂಟಿ ಶೆರಿಫ್ಸ್ ಆಫೀಸ್ (ಒಸಿಎಸ್‍ಒ ಹಡಗು) ಎಫ್‍ಡಬ್ಲೂ ಹಡಗು ಮತ್ತು ಯುಎಸ್‍ಸಿಜಿ ಹಡಗಿನ ಮೂಲಕ ರಕ್ಷಿಸಲಾಗಿದೆ. ಆದರೆ ಅಲೆಗಳು ಹೆಚ್ಚಾಗಿದ್ದ ಕಾರಣ ಯಶವಂತ್ ದೋಣಿಯನ್ನು ತಲುಪಲು ಸಾಧ್ಯವಾಗಲಿಲ್ಲ.

    ಘಟನೆ ವೇಳೆ ನಾಪತ್ತೆಯಾಗಿದ್ದ ಯಶವಂತ್ ಮೃತದೇಹ ಸೋಮವಾರ ರಾತ್ರಿ ಪತ್ತೆಯಾಗಿದ್ದು, ಅಧಿಕಾರಿಗಳು ಅದನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಪಠ್ಯ ಪುಸ್ತಕಗಳ ಮರು ಪರಿಷ್ಕರಣೆ ಮಾಡುವಂತೆ ಸಿಎಂಗೆ ರಮೇಶ್ ಕುಮಾರ್ ಪತ್ರ

  • ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಬೀದರ್‌ನ 7 ಜನ ಮಣ್ಣಲ್ಲಿ ಮಣ್ಣು

    ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಬೀದರ್‌ನ 7 ಜನ ಮಣ್ಣಲ್ಲಿ ಮಣ್ಣು

    ಬೀದರ್: ಉತ್ತರ ಪ್ರದೇಶದ ಖೇರಿ ಹೈವೆಯಲ್ಲಿ ಭಾನುವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೀದರ್ ಮೂಲದ 7 ಜನ ಹಾಗೂ ಕಲಬುರಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರು.

    ಇಂದು ಅವರ ಮೃತದೇಹಗಳು ಲಕ್ನೋದಿಂದ ಏರ್-ಲಿಫ್ಟ್ ಮಾಡಿ ಹೈದರಾಬಾದ್‍ಗೆ ತಂದು ಅಲ್ಲಿಂದ ರಸ್ತೆ ಮೂಲಕ 7 ಅಂಬುಲೆನ್ಸ್‌ಗಳಲ್ಲಿ 4 ಗಂಟೆಗೆ ಬೀದರ್‌ಗೆ ತರಲಾಯಿತು. ಓರ್ವ ವ್ಯಕ್ತಿಯ ಮೃತದೇಹವನ್ನು ಕಲಬುರಗಿಗೆ ರವಾನೆ ಮಾಡಲಾಯಿತು.  ಇದನ್ನೂ ಓದಿ: ಯುಪಿಯಲ್ಲಿ ಬೀದರ್ ಪ್ರವಾಸಿಗರಿಗೆ ಅಪಘಾತ – ಸಂತ್ರಸ್ತರ ನೆರವಿಗೆ ಯೋಗಿ ಜೊತೆ ಬೊಮ್ಮಾಯಿ ಮಾತುಕತೆ

    ಮೃತದೇಹಗಳು ಬೀದರ್‌ಗೆ ಬರುತ್ತಿದ್ದಂತೆ ಗುಂಪಾ ಬಳಿಯ ಅವರ ನಿವಾಸದಲ್ಲಿ ಕುಟುಂಬಸ್ಥರ ಹಾಗೂ ಸ್ಥಳೀಯರು ಆಕ್ರಂದನ ಮುಗಿಲು ಮುಟ್ಟಿತು. ಬಳಿಕ ಬೀದರ್ ತಾಲೂಕಿನ ಸುಲ್ತಾನಪುರ್‌ದಲ್ಲಿ 6 ಜನರನ್ನು ಲಿಂಗಾಯತ ಸಂಪ್ರದಾಯದಂತೆ ಸುರಿಯುವ ಮಳೆಯ ನಡುವೆ ಅಂತ್ಯಕ್ರಿಯೆ ಮಾಡಿದರು. ಇದನ್ನೂ ಓದಿ: ಯುಪಿಯಲ್ಲಿ ಬೀದರ್‌ ಟಿಟಿ ಅಪಘಾತ – ಯುವತಿ ಸಾವು, ಸಾವಿನ ಸಂಖ್ಯೆ 8ಕ್ಕೆ ಏರಿಕೆ

    ಬೀದರ್ ತಾಲೂಕಿನ ಅಷ್ಟೂರಿನಲ್ಲಿ ಓರ್ವ ವ್ಯಕ್ತಿಯನ್ನು ಅಂತ್ಯಕ್ರಿಯೆ ಮಾಡಲಾಗಿದೆ. ಅಂತ್ಯಕ್ರಿಯೆ ಮಾಡುವ ಸ್ಥಳದಲ್ಲೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕೇದಾರನಾಥ್, ಭದ್ರಿನಾಥ್, ಅಯೋಧ್ಯೆ ಸೇರಿದಂತೆ ತೀರ್ಥಯಾತ್ರೆಗೆ ಹೋಗಿದ್ದ ಬೀದರ್ ಮೂಲದ 16 ಜನರಲ್ಲಿ 7 ಜನ ಮಸಣ ಸೇರಿದ್ದು ಮಾತ್ರ ದುರಂತವೇ ಸರಿ.

  • ಪತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಐವರಿಂದ ರೇಪ್ ಮಾಡಿಸಿ ವೀಡಿಯೋ ಮಾಡಿದ್ಳು!

    ಪತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಐವರಿಂದ ರೇಪ್ ಮಾಡಿಸಿ ವೀಡಿಯೋ ಮಾಡಿದ್ಳು!

    ಹೈದರಾಬಾದ್: ತನ್ನ ಪತಿಯೊಂದಿಗೆ ಅನೈತಿಕವಾಗಿ ಸಂಬಂಧ ಹೊಂದಿದ್ದಳೆಂದು ಶಂಕಿಸಿ, ಮಹಿಳೆಯೊಬ್ಬಳು ತನ್ನ ಸ್ನೇಹಿತೆ ಮೇಲೆಯೇ ಐವರಿಂದ ಅತ್ಯಾಚಾರ ಮಾಡಿಸಿದ್ದಾಳೆ. ಬಳಿಕ ಕೃತ್ಯವನ್ನು ವೀಡಿಯೋ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ಹೈದರಾಬಾದ್‌ನ ಗಚ್ಚಿಬೌಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಗಾಯತ್ರಿ ಮತ್ತು ಇತರೆ ಐವರು ಅತ್ಯಾಚಾರ ಆರೋಪಿಗಳಾದ ಉಲ್ಸಲಾ ಮನೋಜ್ ಕುಮಾರ್ (22), ಸೈಯದ್ ಮಸ್ತಾನ್ (25), ಶೇಖ್ ಮುಜಾಹಿದ್(25), ಶೇಖ್ ಮೌಲಾ ಅಲಿ(32), ಮತ್ತು ಪೃದ್ವಿ ವಿಷ್ಣು ವರ್ಧನ್(22) ಅನ್ನು ಬಂಧಿಸಲಾಗಿದೆ.

    CRIME

    ಏನಿದು ಘಟನೆ?:  ಆರೋಪಿ ಮಹಿಳೆ ಗಾಯತ್ರಿ ಹಾಗೂ ಆಕೆಯ ಪತಿ ಶ್ರೀಕಾಂತ್ ಕೊಂಡಾಪುರ ಶ್ರೀರಾಮನಗರದಲ್ಲಿ ವಾಸವಾಗಿದ್ದರು. ವೃತ್ತಿಯಲ್ಲಿ ಶ್ರೀಕಾಂತ್ ಉಪನ್ಯಾಸಕರಾಗಿ ಹಾಗೂ ಆರೋಪಿ ಪತ್ನಿ ಗಾಯತ್ರಿ ಸ್ಫರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಈ ನಡುವೆ ಸಾಮಾಜಿಕ ಮಾಧ್ಯಮದ ಮೂಲಕ ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಶ್ರೀಹರ್ಷಿತಾ (25) ಪರಿಚಯವಾಗಿದ್ದರು. ಇಬ್ಬರೂ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರಿಂದ ಆಗಾಗ್ಗೆ ಇಬ್ಬರೂ ಪರಸ್ಪರ ಚಾಟ್ ಮತ್ತು ಫೋನ್ ಮಾಡಿ ಮಾತನಾಡುತ್ತಿದ್ದರು.

    CRIME (1)

    ಈ ನಡುವೆ ಕಾರಣಾಂತರಗಳಿಂದ ಯುವತಿ ಶ್ರೀಹರ್ಷಿತಾ ಅವರು ಗಚ್ಚಿಬೌಲಿಯಲ್ಲಿ ಗಾಯತ್ರಿ ವಾಸವಿದ್ದ ಕಾಲೋನಿಗೇ ಸ್ಥಳಾಂತರಗೊಂಡಿದ್ದರು. ಅಂದಿನಿಂದ ಶ್ರೀಹರ್ಷಿತಾ ಆಗಾಗ ಗಾಯತ್ರಿ ಮನೆಗೆ ಬಂದು ಮಾತನಾಡುತ್ತಿದ್ದರು. ಇದೇ ವೇಳೆ ಹರ್ಷಿತಾಗೆ ಗಾಯತ್ರಿ ಪತಿ ಶ್ರೀಕಾಂತ್‌ನೊಂದಿಗೆ ಪರಿಚಯವಾಗಿತ್ತು. ಇವರಿಬ್ಬರ ಪರಿಚಯ ದಿನೇ ದಿನೇ ಗಾಢವಾಗಿದ್ದು, ಇದನ್ನು ಗಮನಿಸಿದ ಶ್ರೀಕಾಂತ್ ಪತ್ನಿ ಗಾಯತ್ರಿ ತನ್ನ ಪತಿ ಮತ್ತು ಹರ್ಷಿತಾ ನಡುವೆ ವಿವಾಹೇತರ ಸಂಬಂಧವಿದೆ ಎಂದು ಶಂಕಿಸಿದ್ದಾರೆ. ಅಲ್ಲದೆ ಇದಕ್ಕೆ ಪ್ರತಿಯಾಗಿ ತಾನು ಸೇಡು ತೀರಿಸಿಕೊಳ್ಳಲು ಹೊಂಚು ಹಾಕಿದ್ದಾಳೆ.

    CRIME COURT

    ನಂತರ ಆಕೆಯ ಮೇಲೆ ಅತ್ಯಾಚಾರ ಮಾಡುವಂತೆ ಐವರು ಪುರುಷರಿಗೆ ಹಣದ ಆಮಿಷ ಒಟ್ಟಿದ್ದಾಳೆ. ಪಕ್ಕಾ ಪ್ಲಾನ್ ಮಾಡಿ ಇದೇ ಮೇ 26ರಂದು ಹರ್ಷಿತಾಳನ್ನು ಮನೆಗೆ ಬರುವಂತೆ ಮಾಡಿ, ಅತ್ಯಾಚಾರ ಮಾಡಿಸಿದ್ದಾಳೆ. ಮನೆಗೆ ಬಂದಕೂಡಲೇ ಐವರು ಯುವಕರಿಗೆ ಹಣ ನೀಡಿ ಗಾಯತ್ರಿ ತನ್ನ ಮನೆಗೆ ಕರೆತಂದಿದ್ದಳು. ಸಂತ್ರಸ್ತೆ ಮನೆಗೆ ಹೋಗುತ್ತಿದ್ದಂತೆ ಐವರು ಯುವಕರು ಹರ್ಷಿತಾ ಮೇಲೆ ಹಲ್ಲೆ ನಡೆಸಿ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ. ಅಲ್ಲದೆ ಸ್ವತಃ ಗಾಯತ್ರಿ ಈ ಸಾಮೂಹಿಕ ಅತ್ಯಾಚಾರ ಎಸಗುತ್ತಿರುವುದನ್ನು ವೀಡಿಯೋ ಕೂಡ ಮಾಡಿಕೊಂಡಿದ್ದಾಳೆ.

    STOP RAPE

    ಸಂತ್ರಸ್ತೆ ಕಿರುಚದಂತೆ ತಡೆಯಲು ಆಕೆಯ ಬಾಯಿಗೆ ಬಟ್ಟೆ ತುರುಕಿ ಆಕೆಯ ಖಾಸಗಿ ಭಾಗಗಳ ಮೇಲೆ ದಾಳಿ ಮಾಡಿದ್ದಾಳೆ. ಅಲ್ಲದೆ ಯಾರಿಗಾದರೂ ಹೇಳಿದರೆ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ತೀವ್ರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಸಂತ್ರಸ್ತೆಯನ್ನು ಗಚ್ಚಿಬೌಲಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ನಂತರ ಸಂತ್ರಸ್ತೆ ಗಚ್ಚಿಬೌಲಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗಾಯತ್ರಿ ಹಾಗೂ ಇತರೆ ನಾಲ್ವರು ಯುವಕರನ್ನು ಬಂಧಿಸಿ, ವಶಕ್ಕೆ ಪಡೆದಿದ್ದಾರೆ. ನಾಲ್ಕು ಅತ್ಯಾಚಾಕ ಆರೋಪಿಗಳ ಪೈಕಿ ಓರ್ವ ಆರೋಪಿ ಯುವತಿಗೆ ಸಹೋದರ ಸಂಬಂಧಿ ಕೂಡ ಇದ್ದ ಎನ್ನಲಾಗಿದೆ.

  • PSI ನೇಮಕಾತಿ ಅಕ್ರಮ: 2 ತಿಂಗಳ ಬಳಿಕ ಅಭ್ಯರ್ಥಿ ಶಾಂತಿಬಾಯಿ ಅರೆಸ್ಟ್

    PSI ನೇಮಕಾತಿ ಅಕ್ರಮ: 2 ತಿಂಗಳ ಬಳಿಕ ಅಭ್ಯರ್ಥಿ ಶಾಂತಿಬಾಯಿ ಅರೆಸ್ಟ್

    ಕಲಬುರಗಿ: ಪಿಎಸ್‍ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಅಭ್ಯರ್ಥಿಯಾಗಿದ್ದ ಶಾಂತಿಬಾಯಿ ಹಾಗೂ ಪತಿ ಬಸಯ್ಯಾ ನಾಯಕ ಎರಡು ತಿಂಗಳ ಬಳಿಕ ಸಿಐಡಿ ಬಲೆಗೆ ಬಿದ್ದಿದ್ದಾರೆ.

    CRIME 2

    ಹೈದರಾಬಾದ್‍ನಲ್ಲಿ ಸಿಐಡಿ ಪೊಲೀಸರು ಶಾಂತಿಬಾಯಿ ಹಾಗೂ ಆಕೆಯ ಪತಿ ಬಸಯ್ಯಾ ನಾಯಕ್‍ನನ್ನು ಬಂಧನ ಮಾಡಿದ್ದಾರೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ನಿವಾಸಿಯಾಗಿರುವ ಶಾಂತಿಬಾಯಿ ಪಿಎಸ್‍ಎ ಪರೀಕ್ಷೆಯಲ್ಲಿ ಪಾಸಾಗಿದ್ದು, ಮಂಜುನಾಥ್ ಮೇಳಕುಂದಿ ಎನ್ನುವವನಿಗೆ ಹಣ ನೀಡಿದ್ದರು. ಇದನ್ನೂ ಓದಿ: ಯುಪಿಯಲ್ಲಿ ಬೀದರ್‌ ಟಿಟಿ ಅಪಘಾತ – ಯುವತಿ ಸಾವು, ಸಾವಿನ ಸಂಖ್ಯೆ 8ಕ್ಕೆ ಏರಿಕೆ

    ಇನ್ನೂ ಹೈದ್ರಾಬಾದ್‍ನಿಂದ ಕಲಬುರಗಿ ಕಡೆಗೆ ಶಾಂತಿಬಾಯಿ ಹಾಗೂ ಆಕೆಯ ಗಂಡ ಬಸಯ್ಯಾ ನಾಯಕ್‍ನನ್ನು ಸಿಐಡಿ ಪೊಲೀಸರು ಕರೆ ತರಲಿದ್ದಾರೆ.

  • ‘ಕೆಜಿಎಫ್ 2’ ರಾಕಿಭಾಯ್ ಪ್ರೇರಣೆಯಿಂದ ಆಸ್ಪತ್ರೆ ಸೇರಿದ 15 ವರ್ಷದ ಬಾಲಕ

    ‘ಕೆಜಿಎಫ್ 2’ ರಾಕಿಭಾಯ್ ಪ್ರೇರಣೆಯಿಂದ ಆಸ್ಪತ್ರೆ ಸೇರಿದ 15 ವರ್ಷದ ಬಾಲಕ

    ಸಿನಿಮಾಗಳಿಂದ ಯಾರು, ಯಾವ ರೀತಿಯ ಪ್ರೇರಣೆ ಪಡೆಯುತ್ತಾರೋ ಗೊತ್ತಿಲ್ಲ. ಆದರೆ, ಹೈದರಾಬಾದ್ ನ ಹುಡುಗನೊಬ್ಬ ಕೆಜಿಎಫ್ 2 ಸಿನಿಮಾದ ರಾಕಿಭಾಯ್ ಪ್ರೇರಣೆ ಪಡೆದು ಆಸ್ಪತ್ರೆ ಸೇರಿದ್ದಾನೆ. ಅವನ ಈ ಹುಚ್ಚಾಟಕ್ಕೆ ಕುಟುಂಬ ಆತಂಕ ಪಡುವಂತಾಗಿದೆ. ಇದನ್ನೂ ಓದಿ : ಪ್ರಭುದೇವ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾಗೆ ಸಂದೇಶ್ ನಾಗರಾಜ್ ನಿರ್ಮಾಪಕ

    ಕೆಜಿಎಫ್ 2 ಸಿನಿಮಾದಲ್ಲಿ ರಾಕಿಭಾಯ್, ಪ್ಯಾಕೆಟ್ ಗಟ್ಟಲೆ ಸಿಗರೇಟು ಸೇದುತ್ತಾನೆ, ಒಂದು ರೀತಿಯಲ್ಲಿ ಉಗಿಬಂಡೆ ಹೋದಂತೆ ಒಂದರ ಮೇಲೊಂದು ಸಿಗರೇಟು ಹಚ್ಚುತ್ತಾನೆ. ಇದನ್ನೇ ಮಾದರಿಯನ್ನಾಗಿ ತಗೆದುಕೊಂಡ  ಆ ಹುಡುಗ ಫುಲ್ ಪ್ಯಾಕ್ ಸಿಗರೇಟು ಸೇದಿದ್ದಾನೆ. ಪರಿಣಾಮ ತೀವ್ರ ಗಂಟಲು ನೋವು ಮತ್ತು ಕೆಮ್ಮು ಕಾಣಿಸಿಕೊಂಡಿದೆ. ವಿಷಯ ತಿಳಿದ ಪಾಲಕರು ಅವನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇದನ್ನೂ ಓದಿ : ಅಕ್ಟೋಬರ್ 3ಕ್ಕೆ ಅಭಿಷೇಕ್ ಅಂಬರೀಶ್ ಹೊಸ ಸಿನಿಮಾಗೆ ಮುಹೂರ್ತ

    ಅಂದಹಾಗೆ ಈ ಹುಡುಗ ಕೆಜಿಎಫ್ 2 ಸಿನಿಮಾವನ್ನು ಮೂರು ಬಾರಿ ನೋಡಿದ್ದಾನಂತೆ. ಥಿಯೇಟರ್ ನಿಂದ ಆಚೆ ಬರುತ್ತಿದ್ದಂತೆಯೇ ಥೇಟ್ ರಾಕಿಭಾಯ್ ತರಹ ಆಡುತ್ತಿದ್ದನಂತೆ. ಅದು ಅತಿರೇಕಕ್ಕೆ ಹೋಗಿ ಈಗ ಆಸ್ಪತ್ರೆ ಸೇರುವಂತಾಗಿದೆ. ಮಗನಿಗೆ ಚಿಕಿತ್ಸೆ ಕೊಡಿಸಿರುವ ಪಾಲಕರು, ಈ ರೀತಿ ಯಾರೂ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ : ‘ಮಾ ಇಷ್ಟಂ’ ಸಿನಿಮಾಗೆ ತಡೆಯಾಜ್ಞೆ ತಂದವರ ವಿರುದ್ಧವೇ ನಕಲಿ ಸಹಿ ದೂರು ನೀಡಿದ ವರ್ಮಾ

    ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಈ ಕುರಿತು ಪರ ವಿರೋಧ ಚರ್ಚೆ ಶುರುವಾಗಿದೆ. ಸಿನಿಮಾ ನೋಡಿ ಈ ರೀತಿ ಮಾಡುವುದಾದರೆ, ಅದೆಷ್ಟೋ ಸಿನಿಮಾಗಳು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿವೆ. ಅದರಲ್ಲೂ ಡಾ.ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ, ಸಮಾಜಕ್ಕೆ ನೀಡಿದ ಸಂದೇಶ ಎಂತಹದ್ದು ಅಂತ ಎಲ್ಲರಿಗೂ ಗೊತ್ತಿದೆ. ಆದರೆ, ಯಾರೂ ಬಂಗಾರದ ಮನುಷ್ಯ ಆಗಲಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

  • ಕುಡುಕ ತಂದೆಯಿಂದ ಚಿತ್ರಹಿಂಸೆ – ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತೆ

    ಕುಡುಕ ತಂದೆಯಿಂದ ಚಿತ್ರಹಿಂಸೆ – ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತೆ

    ಹೈದರಾಬಾದ್: ಬಾಲಕಿಯೊಬ್ಬಳು ತನ್ನ ಮದ್ಯವ್ಯಸನಿ ತಂದೆಯಿಂದ ದೈಹಿಕ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ನಂದಿಗಾಮ ಗ್ರಾಮದಲ್ಲಿ ನಡೆದಿದೆ.

    ಬಾಲಕಿಯು ಮನೆಯಲ್ಲಿ ಒಬ್ಬಳೇ ಇದ್ದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರು ಈಗಾಗಲೇ ಆಕೆಯ ತಂದೆಯನ್ನು ಬಂಧಿಸಿದ್ದಾರೆ. ಆರೋಪಿ ರೈತನಾಗಿದ್ದು, ಆತನ ಪತ್ನಿ ಒಂದು ವರ್ಷದ ಹಿಂದೆಯೇ ಅನಾರೋಗ್ಯದಿಂದ ಮೃತಪಟ್ಟಿದ್ದರು. ಆರೋಪಿಗೆ ಇಬ್ಬರು ಮಕ್ಕಳಿದ್ದು, ಪತ್ನಿಯ ಸಾವಿನ ನಂತರ ಮಕ್ಕಳಿಗೆ ಚಿತ್ರಹಿಂಸೆ ನೀಡಲಾರಂಭಿಸಿದನು. ಅವನ ಹಿರಿಯ ಮಗನೊಬ್ಬನು ಅಂಗಡಿಯೊಂದರಲ್ಲಿ ಕೆಲಸ ಮಾಡಲು ಪಟ್ಟಣಕ್ಕೆ ತೆರಳಿದ್ದು, ಅಪ್ಪನ ಟಾರ್ಚರ್ ತಡೆದುಕೊಳ್ಳಲಾಗದೇ ಅಲ್ಲಿಯೇ ಇರಲು ಪ್ರಾರಂಭಿಸಿದನು. ಇದನ್ನೂ ಓದಿ: ಮಾಟಕ್ಕೆ ಒಳಗಾದ ಮಹಿಳೆಗೆ ಚಾಟಿಯಿಂದ ಹೊಡೆದ ಪೂಜಾರಿ

    POLICE JEEP

    ಆದರೆ ಮೃತ ಬಾಲಕಿಯು ತನ್ನ ಮದ್ಯವ್ಯಸನಿ ತಂದೆಯ ಚಿತ್ರಹಿಂಸೆಗೆ ನೊಂದು ತನ್ನ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾಳೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಈಗಾಗಲೇ ಬಂಧಿಸಿದ್ದೇವೆ ಎಂದು ಶಾದ್‍ನಗರ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಕುಶಾಲ್ಕರ್ ತಿಳಿಸಿದ್ದಾರೆ. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿನ ಡಿಸ್ಪ್ಲೆ ಹ್ಯಾಕ್- ಅಶ್ಲೀಲ ವೀಡಿಯೋ ಪ್ರಸಾರ

  • ಬೇರೆ ಧರ್ಮದ ಯುವಕನ ಮದುವೆಯಾಗಿದ್ದ ಯುವತಿ ಶವವಾಗಿ ಪತ್ತೆ – ಮರ್ಯಾದಾ ಹತ್ಯೆ ಶಂಕೆ

    ಬೇರೆ ಧರ್ಮದ ಯುವಕನ ಮದುವೆಯಾಗಿದ್ದ ಯುವತಿ ಶವವಾಗಿ ಪತ್ತೆ – ಮರ್ಯಾದಾ ಹತ್ಯೆ ಶಂಕೆ

    ಹೈದರಾಬಾದ್: ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ನಾಗಲ್ ಕೊಂಡ ಗ್ರಾಮದ ತನ್ನ ಮನೆಯಲ್ಲಿ 21 ವರ್ಷದ ಯುವತಿ ಶವವಾಗಿ ಪತ್ತೆಯಾಗಿದ್ದು, ಇದನ್ನು ಮರ್ಯಾದಾ ಹತ್ಯೆ ಎಂದು ಶಂಕಿಸಲಾಗಿದೆ.

    ಅನ್ಯಧರ್ಮದ ವ್ಯಕ್ತಿಯನ್ನು ಪ್ರೀತಿಸುತ್ತಿದ್ದ ಯುವತಿ ಎರಡು ತಿಂಗಳ ಹಿಂದೆ ಓಡಿ ಹೋಗಿ ಮದುವೆಯಾಗಿ ಮಹಾರಾಷ್ಟ್ರದಲ್ಲಿ ನೆಲೆಸಿದ್ದಳು. ಆದರೆ ಯುವತಿಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಆಕೆಯನ್ನು ಪತ್ತೆ ಹಚ್ಚಿ ತೆಲಂಗಾಣಕ್ಕೆ ಪೊಲೀಸರು ಕರೆತಂದಿದ್ದರು.

    CRIME 2

    ಶುಕ್ರವಾರ ಯುವತಿ ಶವ ಮನೆಯಲ್ಲಿ ಪತ್ತೆಯಾಗಿದ್ದು, ಆಕೆಯ ಕುತ್ತಿಗೆ ಮೇಲೆ ಅನೇಕ ಗಾಯಗಳಾಗಿದೆ. ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಇದನ್ನೂ ಓದಿ: ವಿಶ್ವದಲ್ಲೇ ಅತೀ ವೇಗದ ಚಾರ್ಜಿಂಗ್ ಬ್ಯಾಟರಿ – ಬೆಂಗಳೂರು ಸ್ಟಾರ್ಟ್ಅಪ್ ಸಂಶೋಧನೆ

    MARRIAGE

    ಬೇರೆ ಧರ್ಮದ ಹುಡುಗನೊಂದಿಗೆ ಓಡಿಹೋಗಿದ್ದಕ್ಕಾಗಿ ಆಕೆಯ ತಂದೆ ಯುವತಿಯನ್ನು ಕೊಂದಿರಬಹುದು ಎಂಬ ಅನುಮಾನ ಬಂದಿದೆ. ಆ ಸಮಯದಲ್ಲಿ ಕುಟುಂಬದವರು ಕೌನ್ಸಲಿಂಗ್ ಬಳಿಕ ಯುವತಿಯನ್ನು ವಾಪಸ್ ಕರೆತಂದಿದ್ದರು. ಆದರೆ ಆಕೆಯ ತಂದೆ ಈ ವಿಚಾರವಾಗಿ ಬೇಸರಗೊಂಡಿದ್ದರು ಎಂದು ಆದಿಲಾಬಾದ್‍ನ ಪೊಲೀಸ್ ವರಿಷ್ಠಾಧಿಕಾರಿ ಉದಯ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

    ಇದೀಗ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಆಡಳಿತ ಮಂಡಳಿ ಎಚ್ಚರಿಕೆಗೆ ಡೋಂಟ್‍ಕೇರ್- ಹಿಜಬ್ ಧರಿಸಿ ಬಂದ 15 ವಿದ್ಯಾರ್ಥಿನಿಯರು!

  • ಮೋದಿ ಪ್ರಧಾನಿಯಾಗಿ 8 ವರ್ಷ – ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇಗೆ ಚಾಲನೆ

    ಮೋದಿ ಪ್ರಧಾನಿಯಾಗಿ 8 ವರ್ಷ – ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇಗೆ ಚಾಲನೆ

    ನವದೆಹಲಿ: ಜಪಾನ್ ಪ್ರವಾಸಿ ಮುಗಿದ ನಂತರ ಭಾರತಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹೈದರಾಬಾದ್ ಹಾಗೂ ಚೆನ್ನೈಗೆ ಭೇಟಿ ನೀಡಲಿದ್ದಾರೆ.

    ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಹಾಗೂ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಎಂಟು ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನಲೆ ಮೋದಿ ಗುರುವಾರ ಹೈದರಾಬಾದ್ ಹಾಗೂ ತಮಿಳುನಾಡಿನಲ್ಲಿ ಮಾಡಲಿರುವ ಭಾಷಣ ಮೇಲೆ ಎಲ್ಲರ ನಿರೀಕ್ಷೆಗಳಿದೆ.

    ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ನರೇಂದ್ರ ಮೋದಿ ಅವರು, ಇದೇ ಮೊದಲ ಬಾರಿಗೆ ತಮಿಳುನಾಡಿಗೆ ಭೇಟಿ ನೀಡುತ್ತಿದ್ದು ಹಲವು ಯೋಜನೆಗಳಿಗೆ ಶಿಲನ್ಯಾಸ ನೆರವೇರಿಸಲಿದ್ದಾರೆ.

    ಹೈದರಾಬಾದ್ ಭೇಟಿ: ಪ್ರಧಾನಿ ಮೋದಿ ಅವರು ಇಂದು 2 ಗಂಟೆ ಸುಮಾರಿಗೆ ಹೈದರಾಬಾದ್‍ಗೆ ಆಗಮಿಸಲಿದ್ದು, ಬಳಿಕ ಐಎಸ್‍ಬಿ 20ನೇ ವರ್ಷದ ಸಂಭ್ರಮಾಚರಣೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಪದವಿ ಸಮಾರಂಭದಲ್ಲಿ ಭಾಷಣ ಮಾಡಲಿದ್ದಾರೆ. ಇದನ್ನೂ ಓದಿ: ಪಾಟಿದರ್ ಸ್ಫೋಟಕ ಶತಕ, ಡಿ.ಕೆ ಅಬ್ಬರ – ಅಹಮದಾಬಾದ್‌ಗೆ ಹಾರಿದ ಬೆಂಗ್ಳೂರು

    ತಮಿಳುನಾಡು ಭೇಟಿ: ಸಂಜೆ 5.45ರ ಸುಮಾರಿಗೆ ಚೆನ್ನೈ ತಲುಪಲಿರುವ ಮೋದಿ ಅವರು, 31,400 ಕೋಟಿಯ ಒಟ್ಟು 11 ಯೋಜನೆಗಳಿಗೆ ಅವರು ಶಿಲನ್ಯಾಸ ಮಾಡಲಿದ್ದು, ಇದೇ ವೇಳೆ 2,900 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿರುವ ನಾಲ್ಕು ರೈಲ್ವೆ ಯೋಜನೆಗಳನ್ನು ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. 910 ಕೋಟಿ ವೆಚ್ಚದಲ್ಲಿ 271 ಕಿಮೀ ಉದ್ದದ ತಿರುವಳ್ಳೂರು-ಬೆಂಗಳೂರು ಭಾಗದ ನೈಸರ್ಗಿಕ ಅನಿಲ ಪೈಪ್‍ಲೈನ್‍ಗೂ ಅವರು ಚಾಲನೆ ನೀಡಲಿದ್ದು, ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 116 ಕೋಟಿ ವೆಚ್ಚದಲ್ಲಿ ಚೆನ್ನೈನ ಲೈಟ್ ಹೌಸ್ ಯೋಜನೆಯ ಭಾಗವಾಗಿ ನಿರ್ಮಿಸಲಾದ 1,152 ಮನೆಗಳನ್ನು ಅವರು ಉದ್ಘಾಟಿಸಲಿದ್ದಾರೆ. ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿ ಮುಂದುವರಿಸಿದ ಭಾರತ – ರಿಯಾಯಿತಿ ಬಗ್ಗೆ ಆಗಿಲ್ಲ ನಿರ್ಧಾರ

    PM MET STALIN

    28,500 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಆರು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದು, ಇದು 262 ಕಿಮೀ ಉದ್ದದ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ರಸ್ತೆ ಒಳಗೊಂಡಿದೆ. 14,870 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಯೋಜನೆಯಿಂದ ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಎರಡರಿಂದ ಮೂರು ಗಂಟೆಗಳವರೆಗೆ ಕಡಿಮೆ ಮಾಡುವ ನಿರೀಕ್ಷೆಯಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

  • ವರದಕ್ಷಿಣೆ ಕಿರುಕುಳ – ಮಗುವನ್ನು ಕೊಲೆಗೈದು ತಾಯಿ ಆತ್ಮಹತ್ಯೆ

    ವರದಕ್ಷಿಣೆ ಕಿರುಕುಳ – ಮಗುವನ್ನು ಕೊಲೆಗೈದು ತಾಯಿ ಆತ್ಮಹತ್ಯೆ

    ಹೈದರಾಬಾದ್: ವರದಕ್ಷಿಣೆ ಕಿರುಕುಳದ ಆರೋಪದ ಹಿನ್ನೆಲೆ ಮಹಿಳೆಯೊಬ್ಬರು ತಮ್ಮ 2 ವರ್ಷದ ಮಗುವನ್ನು ಹತ್ಯೆಗೈದಿದಲ್ಲದೇ ತಾವೂ ಕೂಡಾ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ನಾರ್ಕೆಟ್‍ಪಲ್ಲಿ ಮಂಡಲದಲ್ಲಿ ನಡೆದಿದೆ.

    BRIBE

    ಮಹಿಳೆಯನ್ನು ಲಾಸ್ಯ ಎಂದು ಗುರುತಿಸಲಾಗಿದ್ದು, ಮೊದಲು ತಮ್ಮ 2 ವರ್ಷದ ಮಗು ಸಾತ್ವಿಕ್‍ನನ್ನು ಸೀಲಿಂಗ್ ಫ್ಯಾನ್‍ಗೆ ನೇಣು ಹಾಕಿ ಹತ್ಯೆಗೈದಿದ್ದಾರೆ. ನಂತರದಲ್ಲಿ ತಾವೂ ಕೂಡಾ ಅದೇ ಫ್ಯಾನ್‍ಗೆ ನೇಣು ಬಿಗಿದುಕೊಂಡಿದ್ದಾರೆ. ಘಟನೆಯನ್ನು ಗಮನಿಸಿದ ನೆರೆಹೊರೆಯವರು ಧಾವಿಸಿ ಅವರನ್ನು ಕೆಳಗಿಳಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಇಬ್ಬರೂ ಸಾವನ್ನಪ್ಪಿದ್ದರು ಎಂದು ನಾರ್ಕೆಟ್‍ಪಲ್ಲಿ ಸರ್ಕಲ್ ಇನ್ಸ್‍ಪೆಕ್ಟರ್ (ಸಿಐ) ಶಿವರಾಮಿ ರೆಡ್ಡಿ ತಿಳಿಸಿದ್ದಾರೆ.

    ಲಾಸ್ಯ ಅವರು ನಾರ್ಕೆಟ್‍ಪಲ್ಲಿಯ ಔರವಾಣಿ ಗ್ರಾಮದ ರೈಲ್ವೆ ಕಾರ್ಮಿಕನಾದ ನರೇಶ್‍ನನ್ನು ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಈ ಹಿಂದೆ ಲಾಸ್ಯ ಕುಟುಂಬ ವರದಕ್ಷಿಣೆಯಾಗಿ 35 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿತ್ತು. ಆರಂಭದಲ್ಲಿ ನರೇಶ್ ಕುಟುಂಬಕ್ಕೆ ಮಹಿಳೆಯ ಕುಟುಂಬವು 10 ಲಕ್ಷ ರೂ. ನೀಡಿದ್ದರು. ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ರೈಲ್ವೆ ಕಾರ್ಮಿಕನಾಗಿ ನೇಮಕಗೊಂಡಿದ್ದ ನರೇಶ್, ರಾಜ್ಯ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸಲು ರಜೆ ಪಡೆದು ಹೈದರಾಬಾದ್‍ನಲ್ಲಿ ತಂಗಿದ್ದನು. ಇದನ್ನೂ ಓದಿ: 17 ವರ್ಷ ಲವ್, 2 ಮಕ್ಕಳಾದ ನಂತರ ಮದುವೆಯಾದ ನಿರ್ದೇಶಕ ಹನ್ಸಲ್ ಮೆಹ್ತಾ, ಸಫೀನಾ ಹುಸೇನ್

    ನರೇಶ್‍ನಿಗೆ ರೈಲ್ವೆ ಕೆಲಸದಲ್ಲಿ ಆಸಕ್ತಿ ಇರಲಿಲ್ಲ. ಈ ವಿಷಯವನ್ನು ಮನೆಯವರಿಗೆ ತಿಳಿಸಿ ಉಳಿದ ವರದಕ್ಷಿಣೆ ಹಣವನ್ನು ಕೋಳಿ ವ್ಯಾಪಾರ ಮಾಡಲು ಕೇಳಿದ್ದಾನೆ. ಹಾಗಾಗಿ ಅಳಿಯನ ಒತ್ತಡಕ್ಕೆ ಮಣಿದು ಲಾಸ್ಯ ಕುಟುಂಬದವರು 20 ದಿನಗಳ ಹಿಂದೆ 20 ಲಕ್ಷ ರೂ. ನೀಡಿದ್ದರು. ಇದನ್ನೂ ಓದಿ: ಯಡಿಯೂರಪ್ಪಗೆ ಕೊಟ್ಟು ಗೊತ್ತೇ ಹೊರತು ಬೇಡಿ ಪಡೆದು ಗೊತ್ತಿಲ್ಲ: ಬಿ.ವೈ.ವಿಜಯೇಂದ್ರ

    ಹಣ ನೀಡಿದ್ದರೂ ನರೇಶ್ ತನ್ನ ಹೆಂಡತಿಗೆ ಕಿರುಕುಳ ನೀಡುವುದನ್ನು ಮುಂದುವರೆಸಿದ್ದ. ಹೀಗಾಗಿ ಮನನೊಂದ ಲಾಸ್ಯ ಅವರು ಭಾನುವಾರ, ಅವರ ಅತ್ತೆ ಮನೆಯಿಂದ ಹೊರಬಂದ ನಂತರ ಮೊದಲು ತನ್ನ ಎರಡು ವರ್ಷದ ಮಗನನ್ನು ನೇಣು ಹಾಕಿ ನಂತರ ತಾವೇ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಲಾಗಿದ್ದು ಯಾರನ್ನೂ ಬಂಧಿಸಲಾಗಿಲ್ಲ.

  • ಓಮಿಕ್ರಾನ್ ಉಪತಳಿ BA-4 ಮತ್ತೊಂದು ಪ್ರಕರಣ ತಮಿಳುನಾಡಿನಲ್ಲಿ ಪತ್ತೆ

    ಓಮಿಕ್ರಾನ್ ಉಪತಳಿ BA-4 ಮತ್ತೊಂದು ಪ್ರಕರಣ ತಮಿಳುನಾಡಿನಲ್ಲಿ ಪತ್ತೆ

    ಚೆನ್ನೈ: ಕೋವಿಡ್‌ನ ರೂಪಾಂತರಿಯಾಗಿರುವ ಓಮಿಕ್ರಾನ್‌ನ BA-4 ಉಪತಳಿ ತಮಿಳುನಾಡಿನಲ್ಲಿ ಪತ್ತೆಯಾಗಿದೆ.

    ನಿನ್ನೆ ಹೈದರಾಬಾದ್‌ನಲ್ಲಿ ಮೊದಲ ರೂಪಾಂತರಿ ಪತ್ತೆಯಾಗಿತ್ತು. ಈಗ ಚೆನ್ನೈನಿಂದ 30 ಕಿ.ಮೀ. ದೂರದಲ್ಲಿರುವ ಚೆಂಗಲ್ಪಟ್ಟು ಜಿಲ್ಲೆಯ ನವಲೂರ್ ನಿವಾಸಿಯೊಬ್ಬರಲ್ಲಿ ಬಿಎ-4 2ನೇ ಪ್ರಕರಣ ಪತ್ತೆಯಾಗಿದೆ. ವ್ಯಕ್ತಿಯ ಪ್ರಯಾಣದ ಹಿನ್ನೆಲೆಯ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ತಮಿಳುನಾಡಿನ ಆರೋಗ್ಯ ಸಚಿವ ಎಂ.ಸುಬ್ರಹ್ಮಣಿಯನ್ ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವಯೋಗ ದಿನಕ್ಕೆ ಮೈಸೂರಿಗೆ ಆಗಮಿಸಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ: ಪ್ರತಾಪ್ ಸಿಂಹ

    corona

    ಕೋವಿಡ್ ಲಕ್ಷಣಗಳನ್ನೇ ಹೊಂದಿರುವ ಬಿಎ-4 ರೂಪಾಂತರಿಯಿಂದ ಯಾವುದೇ ಆತಂಕ ಇಲ್ಲ. ಆದರೂ ಸೂಕ್ತ ಕ್ರಮ ಕೈಗೊಳ್ಳುವುದು ಅವಶ್ಯಕ. ಪ್ರತಿಯೊಬ್ಬರೂ ಲಸಿಕೆ ಪಡೆದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ. ಇದನ್ನೂ ಓದಿ: ಕಾರವಾರದಲ್ಲಿ ಉದ್ದ ಕಣ್ಣಿನ ಅಪರೂಪದ ಏಡಿ ಪತ್ತೆ

    ಮಾಹಿತಿ ಪ್ರಕಾರ, ಮೇ ತಿಂಗಳಲ್ಲಿ ನಡೆದ ಕೋವಿಡ್ ಮಾದರಿ ಪರೀಕ್ಷೆಗಳಲ್ಲಿ ಶೇ.82 ರಷ್ಟು ಓಮಿಕ್ರಾನ್‌ನ BA ರೂಪಾಂತರಿಗಳು ಕಾಣಿಸಿಕೊಂಡಿವೆ. ಶೇ.7 ರಷ್ಟು BA-3 ಹಾಗೂ ಶೇ.10 ರಷ್ಟು BA-2 ರೂಪಾಂತರಿ ಕಾಣಿಸಿಕೊಂಡಿದ್ದು BA-4 2ನೇ ಪ್ರಕರಣ ಕಾಣಿಸಿಕೊಂಡಿದೆ.