Tag: Hyderabad

  • ಮಹಿಳೆಯರಿಗೆ ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದ ವ್ಯಕ್ತಿ ಅರೆಸ್ಟ್

    ಮಹಿಳೆಯರಿಗೆ ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದ ವ್ಯಕ್ತಿ ಅರೆಸ್ಟ್

    ಹೈದರಾಬಾದ್: ವಿವಿಧ ಫೋನ್ ನಂಬರ್‌ಗಳಿಂದ ಮಹಿಳೆಯರಿಗೆ ಅಶ್ಲೀಲ ವೀಡಿಯೋಗಳನ್ನು ಕಳುಹಿಸುತ್ತಿದ್ದ 58 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ರೈಸುದ್ದೀನ್ ಎಂದು ಗುರುತಿಸಲಾಗಿದ್ದು, ಈತ ಹೈದರಾಬಾದ್‍ನ ಬಜಾರ್‍ಘಾಟ್ ಪ್ರದೇಶದ ನಿವಾಸಿಯಾಗಿದ್ದಾನೆ. ಈ ಕುರಿತಂತೆ ವಿಚಾರಣೆ ವೇಳೆ ರೈಸುದ್ದೀನ್ ತನ್ನ ಪತ್ನಿಯೊಂದಿಗೆ ದೈಹಿಕ ಸಂಬಂಧ ಹೊಂದಿಲ್ಲದ ಕಾರಣ ಕೆಲವು ತಿಂಗಳಿನಿಂದ ಬೇಸರಗೊಂಡಿದ್ದನು. ಹೀಗಾಗಿ ಮಹಿಳೆಯರ ಹೆಸರಿನಲ್ಲಿ ಫೇಸ್‍ಬುಕ್ ಅಕೌಂಟ್ ಕ್ರಿಯೆಟ್ ಮಾಡಿ. ನಂತರ ಮಹಿಳೆಯರ ಬಳಿ ನಂಬರ್ ಪಡೆದು ಅಶ್ಲೀಲ ವೀಡಿಯೋಗಳನ್ನು ಕಳುಹಿಸಲು ಆರಂಭಿಸಿದ್ದಾಗಿ ಹೇಳಿದ್ದಾನೆ.  ಇದನ್ನೂ ಓದಿ: ಗುತ್ತಿಗೆ, ಹೊರ ಗುತ್ತಿಗೆ ನೌಕರರ ವೇತನ ಪರಿಷ್ಕರಣೆಗೆ ಯತ್ನ, ಆರೋಗ್ಯ ವಿಮೆ ವಿಸ್ತರಣೆ: ಸುಧಾಕರ್

    ಕಳೆದ ಕೆಲವು ತಿಂಗಳುಗಳಿಂದ ಮೂರು ವಿಭಿನ್ನ ಮೊಬೈಲ್ ನಂಬರ್‌ಗಳಿಂದ 5ಕ್ಕೂ ಹೆಚ್ಚು ಮಹಿಳೆಯರಿಗೆ ಅಶ್ಲೀಲ ವೀಡಿಯೊಗಳನ್ನು ಕಳುಹಿಸಿರುವ ವಿಚಾರ ತಿಳಿದುಬಂದಿದೆ. ಮಹಿಳೆಯರು ಒಂದು ಸಂಖ್ಯೆಯನ್ನು ಬ್ಲಾಕ್ ಮಾಡಿದರೆ, ಆತ ಮತ್ತೊಂದು ನಂಬರ್‌ನಿಂದ ಮತ್ತೆ ಅಶ್ಲೀಲ ವೀಡಿಯೋವನ್ನು ಕಳುಹಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದನು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಪಿಕ್ನಿಕ್‌ಗೆ ಹೋಗುತ್ತಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಮೂವರು ಸಾವು – MPಯಲ್ಲಿ ಒಂದೇ ದಿನ 11 ಬಲಿ

    ಈತನ ಕಿರುಕುಳ ಸಹಿಸಲಾಗದೇ ಕೊನೆಗೆ ಮಹಿಳೆಯೊಬ್ಬರು ಪೊಲೀಸರನ್ನು ಸಂಪರ್ಕಿಸಿದ್ದು, ಇದೀಗ ಬೋವನಪಲ್ಲಿ ಪೊಲೀಸರು ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನೀರಿದ್ದ ಬಕೆಟ್‌ಗೆ ತಲೆ ಮುಳುಗಿಸಿ ಪತ್ನಿಯನ್ನ ಕೊಂದ, ತಾನೂ ಆತ್ಮಹತ್ಯೆ ಮಾಡ್ಕೊಂಡ

    ನೀರಿದ್ದ ಬಕೆಟ್‌ಗೆ ತಲೆ ಮುಳುಗಿಸಿ ಪತ್ನಿಯನ್ನ ಕೊಂದ, ತಾನೂ ಆತ್ಮಹತ್ಯೆ ಮಾಡ್ಕೊಂಡ

    ಹೈದರಾಬಾದ್: ನೀರು ತುಂಬಿದ ಬಕೆಟ್ ಒಳಗೆ ಪತ್ನಿಯ ತಲೆ ಮುಳುಗಿಸಿ ಪತ್ನಿಯನ್ನು ಹತ್ಯೆ ಮಾಡಿದ ಬಳಿಕ ತಾನೂ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

    ಮೃತರನ್ನು ಮಹಾನಂದ ಬಿಸ್ವಾಸ್ (24), ಪಂಪಾ ಸರ್ಕಾ (22) ಎಂದು ಗುರುತಿಸಲಾಗಿದೆ. ಮೂಲತಃ ಈತ ಅಸ್ಸಾಂ ನಿವಾಸಿ, ಹೈದರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿರುವ ಶಾಪಿಂಗ್ ಮಾಲ್ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಈತನ ಮೃತದೇಹ ಮಂಗಳವಾರ ಲಕಡಿ ಕಾ ಪುಲ್ ರೈಲು ನಿಲ್ದಾಣದ ಹಳಿಗಳ ಮೇಲೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಏಕನಾಥ್‌ ಶಿಂಧೆ ಸಿಎಂ – ನಾನು ಸರ್ಕಾರದಲ್ಲಿ ಇರಲ್ಲ ಎಂದ ಫಡ್ನವೀಸ್‌

    ಸಾಂದರ್ಭಿಕ ಚಿತ್ರ

    ಪಂಪಾ ಸರ್ಕಾ ಮತ್ತು ಬಿಸ್ವಾತ್ ಇಬ್ಬರೂ ಅಸ್ಸಾಂ ಮೂಲದವರು. ಕೆಲಸಕ್ಕೆಂದು ಹೈದರಾಬಾದ್‌ಗೆ ಬಂದಿದ್ದರು. ಒಂದೂವರೆ ವರ್ಷದ ಹಿಂದೆ ಮದುವೆಯಾಗಿ ಪ್ರೇಮ್‌ನಗರದಲ್ಲಿ ವಾಸವಿದ್ದರು. ಪತ್ನಿಯ ಶೀಲ ಶಂಕಿಸಿ, ಕೆಲವು ದಿನಗಳ ಹಿಂದೆ ಬಿಸ್ವಾಸ್ ಆಕೆಯನ್ನು ಪ್ರಶ್ನಿಸಿದ್ದರು. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಜಗಳ ತಾರಕ್ಕೇರಿ ಮಾತಿನ ಚಕಮಕಿ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ಇದನ್ನೂ ಓದಿ: ಮೋದಿ, ಅಮಿತ್‌ ಶಾ, ಯೋಗಿಗೆ ಜೀವ ಬೆದರಿಕೆ – ಆರೋಪಿಯನ್ನು ಬಂಧಿಸಿ ಬಿಟ್ಟು ಕಳುಹಿಸಿದ ಪೊಲೀಸರು

    CRIME

    ಪತ್ನಿ ಮೃತಪಟ್ಟಿರುವುದು ದೃಢವಾದ ಬಳಿಕ ಮೃತದೇಹವನ್ನು ಅಲ್ಲಿಯೇ ಬಿಟ್ಟು, ಮನೆಯನ್ನು ಲಾಕ್ ಮಾಡಿ, ಮರು ದಿನ ಬಿಸ್ವಾತ್ ರೈಲು ನಿಲ್ದಾಣಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಿಸ್ವಾಸ್ ಮೃತದೇಹ ಪತ್ತೆಯಾದಾಗ ಆತನ ಪಾಕೆಟ್‌ನಲ್ಲಿ ಒಂದು ಪೋನ್ ಮತ್ತು ಡೈರಿ ಇತ್ತು. ಅಸ್ಸಾಮೀಸ್ ಭಾಷೆಯಲ್ಲಿ ಬರೆದಿದ್ದರಿಂದ ಅದರ ಅನುವಾದಕ್ಕಾಗಿ ಪೊಲೀಸರು ಬಿಸ್ವಾಸ್ ಸ್ನೇಹಿತರನ್ನು ಸಂಪರ್ಕಿಸಿದರು. ಬಿಸ್ವಾಸ್ ಸ್ನೇಹಿತರು ಹೇಳುವಂತೆ ಪತ್ನಿಯನ್ನು ಕೊಲೆ ಮಾಡಿ ಅದೇ ನೋವಿನಿಂದ ತಾನೂ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆತ ಹೇಳಿದ್ದಾನೆ ಎನ್ನಲಾಗಿದೆ.

    ಡೈರಿ ಓದಿದ ಬಳಿಕ ಪೊಲೀಸರು ಬಿಸ್ವಾತ್ ಮನೆಗೆ ದೌಡಾಯಿಸಿದ್ದಾರೆ. ಆದರೆ ಬಾಗಿಲನ್ನು ಲಾಕ್ ಮಾಡಲಾಗಿತ್ತು. ಬೀಗವನ್ನು ಮುರಿದು ಮನೆಯ ಒಳಹೊಕಾಗಿ ನಿಗೂಡ ಸ್ಥಿತಿಯಲ್ಲಿ ಬಿಸ್ವಾಸ್ ಪತ್ನಿ ಪಂಪಾ ಸರ್ಕಾ (22)ರ ಮೃತದೇಹ ಪತ್ತೆಯಾಯಿತು. ಪೊಲೀಸರ ಪ್ರಕಾರ ಪಂಪಾಳ ತಲೆಯನ್ನು ನೀರು ತುಂಬಿದ ಬಕೆಟ್‌ನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ.

    ಸದ್ಯ ಪೊಲೀಸರು ಮೃಹದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

    Live Tv

  • ಮೋದಿ, ಅಮಿತ್‌ ಶಾ, ಯೋಗಿಗೆ ಜೀವ ಬೆದರಿಕೆ – ಆರೋಪಿಯನ್ನು ಬಂಧಿಸಿ ಬಿಟ್ಟು ಕಳುಹಿಸಿದ ಪೊಲೀಸರು

    ಮೋದಿ, ಅಮಿತ್‌ ಶಾ, ಯೋಗಿಗೆ ಜೀವ ಬೆದರಿಕೆ – ಆರೋಪಿಯನ್ನು ಬಂಧಿಸಿ ಬಿಟ್ಟು ಕಳುಹಿಸಿದ ಪೊಲೀಸರು

    ಹೈದರಾಬಾದ್‌: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಜೀವ ಬೆದರಿಕೆ ಪೋಸ್ಟ್‌ ಹಾಕಿದ್ದ ಆರೋಪದಡಿ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ನಂತರ ಬಿಟ್ಟು ಕಳುಹಿಸಿದ್ದಾರೆ.

    ಅಬ್ದುಲ್‌ ಮಜೀದ್‌ ಬಂಧಿತ ಆರೋಪಿ. ಈತನನ್ನು ಹೈದರಾಬಾದ್‌ನಲ್ಲಿ ಬಂಧಿಸಲಾಯಿತು. ಪ್ರಭಾವಿ ನಾಯಕರನ್ನು ಕೊಲೆ ಮಾಡುವುದಾಗಿ ಸೋಷಿಯಲ್‌ ಮೀಡಿಯಾದಲ್ಲಿ ಬೆದರಿಕೆ ಪೋಸ್ಟ್‌ ಹಾಕಿದ್ದ. ಇದನ್ನೂ ಓದಿ: ಮೊಬೈಲ್‍ನಲ್ಲಿ ಗೇಮ್ ಆಡೋದು ಬಿಟ್ಟು, ಕೆಲಸ ಹುಡುಕು ಎಂದಿದ್ದಕ್ಕೆ ಅತ್ತಿಗೆಯನ್ನೇ ಕೊಂದ

    ಪ್ರವಾದಿ ಮೊಹಮ್ಮದ್‌ ಅವರ ಬಗ್ಗೆ ಉಚ್ಚಾಟಿತ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ನೀಡಿದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಾಯಕರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ ಆರೋಪಿ ಪೋಸ್ಟ್‌ ಮಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಹೈದರಾಬಾದ್‌ನ ಮೊಘಲ್‌ಪುರ ಪೊಲೀಸರು, ಪ್ರಚೋದನಕಾರಿ ಪೋಸ್ಟ್‌ಗಾಗಿ ಅಬ್ದುಲ್ ಮಜೀದ್ ವಿರುದ್ಧ ಪ್ರಕರಣ ದಾಖಲಿಸಿ ಬುಧವಾರ ಬಂಧಿಸಿದ್ದಾರೆ. ಆತನನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಸಿಆರ್‌ಪಿಸಿ ಸೆಕ್ಷನ್ 41 ಎ ಅಡಿಯಲ್ಲಿ ನೋಟಿಸ್ ನೀಡುವಂತೆ ಪೊಲೀಸರಿಗೆ ಸೂಚಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಕನ್ಹಯ್ಯಾ ಲಾಲ್ ಕುಟುಂಬಕ್ಕೆ ನೆರವು – 24 ಗಂಟೆಯಲ್ಲಿ ಬಂತು 1 ಕೋಟಿ

    ಅದರಂತೆ ಅಬ್ದುಲ್ ಮಜೀದ್‌ಗೆ ನೋಟಿಸ್ ಜಾರಿ ಮಾಡಿದ್ದು, ನಂತರ ಆತನನ್ನು ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

    Live Tv

  • ನೂಪುರ್ ಶರ್ಮಾ ಹೇಳಿಕೆ ಬಗ್ಗೆ ಮೋದಿ ತನ್ನ ಬಾಲ್ಯ ಸ್ನೇಹಿತ ಅಬ್ಬಾಸ್‍ನನ್ನು ಕೇಳಲಿ: ಓವೈಸಿ

    ನೂಪುರ್ ಶರ್ಮಾ ಹೇಳಿಕೆ ಬಗ್ಗೆ ಮೋದಿ ತನ್ನ ಬಾಲ್ಯ ಸ್ನೇಹಿತ ಅಬ್ಬಾಸ್‍ನನ್ನು ಕೇಳಲಿ: ಓವೈಸಿ

    ಹೈದರಾಬಾದ್: ಪ್ರವಾದಿ ಮುಹಮ್ಮದ್ ಬಗ್ಗೆ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರ ಹೇಳಿಕೆ ಆಕ್ಷೇಪಾರ್ಹವೇ ಅಥವಾ ಇಲ್ಲವೇ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬಾಲ್ಯ ಸ್ನೇಹಿತ ಅಬ್ಬಾಸ್ ಅವರನ್ನು ಕೇಳಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸಲಹೆ ಕೊಟ್ಟರು.

    ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರ 100ನೇ ವರ್ಷದ ಹುಟ್ಟು ಹಬ್ಬದ ವೇಳೆ ಮೋದಿ ಅವರು ತಮ್ಮ ಬಾಲ್ಯ ಸ್ನೇಹಿತ ಅಬ್ಬಾಸ್ ಬಗ್ಗೆ ಬರೆದು ಪೋಸ್ಟ್ ಶೇರ್ ಮಾಡಿಕೊಂಡಿದ್ದರು. ಇದೇ ವಿಷಯವನ್ನು ತೆಗೆದುಕೊಂಡು ಓವೈಸಿ, ಪ್ರಧಾನಿ ಮೋದಿ ಅವರು ತಮ್ಮ ಬಾಲ್ಯದ ಸ್ನೇಹಿತನನ್ನು ಸುಮಾರು 8 ವರ್ಷಗಳ ನಂತರ ನೆನಪಿಸಿಕೊಂಡಿದ್ದಾರೆ. ನಮಗೂ ಸಹ ನಮಗೆ ಈ ಸ್ನೇಹಿತ ಇದ್ದಾರೆ ಎಂದು ತಿಳಿದಿರಲಿಲ್ಲ ಎಂದು ಮಾತನ್ನು ಪ್ರಾರಂಭಿಸಿದರು.

    ನಾನು ಇಂದು ಮೋದಿ ಅವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ದಯವಿಟ್ಟು ಒಮ್ಮೆ ನಿಮ್ಮ ಸ್ನೇಹಿತ ಅಬ್ಬಾಸ್ ಅವರನ್ನು ಅಸಾದುದ್ದೀನ್ ಓವೈಸಿ ಮತ್ತು ಉಲೇಮಾಗಳ ಭಾಷಣಗಳನ್ನು ಕೇಳುವಂತೆ ಮಾಡಿ. ಆಗ ನಾವು ಸುಳ್ಳು ಹೇಳುತ್ತಿದ್ದೇವೆಯೇ ಎಂಬುದನ್ನು ಕೇಳಿ ಎಂದು ತಿಳಿಸಿದರು.

    ನಿಮಗೆ ಕೇಳಲು ಸಾಧ್ಯವಾಗಿಲ್ಲವೆಂದರೆ ನಮಗೆ ಅಬ್ಬಾಸ್ ವಿಳಾಸವನ್ನು ಕೊಡಿ. ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಬಗ್ಗೆ ಹೇಳಿರುವ ಹೇಳಿಕೆ ಸರಿನಾ ಎಂದು ನಾವೇ ಕೇಳುತ್ತೇವೆ. ಅವರು ಸಹ ಆಕೆ ಸರಿಯಾಗಿ ಮಾತನಾಡಿಲ್ಲವೆಂದು ಒಪ್ಪಿಕೊಳ್ಳುತ್ತಾರೆ ಎಂದರು.

    ನೀವು ನಿಮ್ಮ ಗೆಳೆಯನನ್ನು ನೆನಪಿಸಿಕೊಂಡಿದ್ದೀರಾ. ಇದೊಂದು ಕಥೆಯಿರುವ ಸಾಧ್ಯತೆಯೂ ಇದೆ. ಈ ಬಗ್ಗೆ ನೀವು ಹೇಳುತ್ತಿರುವುದು ಸರಿನಾ ಎಂದು ನನಗೆ ಹೇಗೆ ಗೊತ್ತು! ಅಲ್ಲದೇ ಅವರು ‘ಅಚ್ಛೇ ದಿನ್’ ಭಾರತಕ್ಕೆ ಬರುವುದಾಗಿ ಭರವಸೆ ನೀಡಿದ್ದರು. ಆದರೆ ಎಲ್ಲಿ ಬಂತು ಎಂದು ಪ್ರಶ್ನೆ ಮಾಡಿದರು.

    ಮೋದಿ ಪೋಸ್ಟ್‌ನಲ್ಲಿ ಏನಿದೆ?
    ನನ್ನ ತಂದೆಯ ಆಪ್ತ ಸ್ನೇಹಿತ ಪಕ್ಕದ ಗ್ರಾಮದಲ್ಲಿ ವಾಸಿಸುತ್ತಿದ್ದರು. ಅವರ ಅಕಾಲಿಕ ಮರಣದ ನಂತರ, ನನ್ನ ತಂದೆ ಅವರ ಗೆಳೆಯನ ಮಗ ಅಬ್ಬಾಸ್‍ನನ್ನು ನಮ್ಮ ಮನೆಗೆ ಕರೆದುಕೊಂಡು ಬಂದರು. ಆತ ನಮ್ಮ ಜೊತೆ ಇದ್ದು ಶಿಕ್ಷಣ ಪೂರೈಸಿದ್ದ. ನನ್ನ ಅಮ್ಮ ಸಹ ಅವನನ್ನು ಪ್ರೀತಿಯಿಂದ ನಮ್ಮನ್ನು ನೋಡಿಕೊಳ್ಳುವ ರೀತಿಯಲ್ಲಿಯೇ ನೋಡಿಕೊಳ್ಳುತ್ತಿದ್ದರು. ಈದ್ ಸಮಯದಲ್ಲಿ ಅವನಿಗೆ ಇಷ್ಟವಾದ ತಿನಿಸುಗಳನ್ನು ಮಾಡಿಕೊಡುತ್ತಿದ್ದಳು ಎಂದು ಬರೆದು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ.

    Live Tv

  • `ಅಗ್ನಿಪಥ್’ ಪ್ರತಿಭಟನೆ – ಸಿಕಂದರಾಬಾದ್ ಹಿಂಸಾಚಾರದ ಮಾಸ್ಟರ್ ಮೈಂಡ್ ಅರೆಸ್ಟ್

    `ಅಗ್ನಿಪಥ್’ ಪ್ರತಿಭಟನೆ – ಸಿಕಂದರಾಬಾದ್ ಹಿಂಸಾಚಾರದ ಮಾಸ್ಟರ್ ಮೈಂಡ್ ಅರೆಸ್ಟ್

    ಹೈದರಾಬಾದ್: `ಅಗ್ನಿಪಥ್’ ನೇಮಕಾತಿ ಯೋಜನೆ ವಿರೋಧಿಸಿ ಶುಕ್ರವಾರ ತೆಲಂಗಾಣದ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸೈನಿಕರೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಹಲವಾರು ರೈಲುಗಳಿಗೆ ಬೆಂಕಿ ಹಚ್ಚಿ ಹಿಂಸಾಚಾರ ಕೃತ್ಯವೆಸಗಿದ ಪ್ರತಿಭಟನಾಕಾರರ ಹಿಂದೆ ಮಾಸ್ಟರ್ ಮೈಂಡ್ ಆವುಲಾ ಸುಬ್ಬಾ ರಾವ್ ಇದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಪ್ರತಿಭಟನೆ ನಡೆಸುತ್ತಿದ್ದ ಗುಂಪನ್ನು ಚದುರಿಸಲು ಪೊಲೀಸರು ಫೈರಿಂಗ್ ನಡೆಸಿದಾಗ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:  ದೇಶದಲ್ಲಿ ಅಗ್ನಿಪಥ್ ಪ್ರತಿಭಟನೆಯ ಕಾವು- ಉತ್ತರದ ಬಳಿಕ ದಕ್ಷಿಣದಲ್ಲಿ ಹಿಂಸಾತ್ಮಕ ಪ್ರೊಟೆಸ್ಟ್

    ಪ್ರತಿಭಟನೆ ನಡೆಸಲು ಜನರನ್ನು ಸಜ್ಜುಗೊಳಿಸಲು ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಲಾಗಿತ್ತು. ಅಲ್ಲದೇ ಸಿಕಂದರಾಬಾದ್‍ನಲ್ಲಿ ರೈಲಿಗೆ ಬೆಂಕಿ ಹಚ್ಚಿ ಹಿಂಸಾಚಾರ ಕೃತ್ಯಗಳನ್ನು ಎಸಗಿದ್ದವರಲ್ಲಿ ಆವುಲಾ ಸುಬ್ಬಾ ರಾವ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಆವುಲಾ ಸುಬ್ಬಾ ರಾವ್ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯವರಾಗಿದ್ದು, ಕಳೆದ ಕೆಲವು ವರ್ಷಗಳಿಂದ ನರಸರಾವ್‍ಪೇಟೆ, ಹೈದರಾಬಾದ್ ಸೇರಿದಂತೆ ಸುಮಾರು ಏಳು ಸ್ಥಳಗಳಲ್ಲಿ ಶಾಖೆಗಳನ್ನು ಹೊಂದಿದ್ದು, ಸೇನಾ ಆಕಾಂಕ್ಷಿಗಳಿಗಾಗಿ ತರಬೇತಿ ಅಕಾಡೆಮಿಯನ್ನು ನಡೆಸುತ್ತಿದ್ದಾರೆ. ಇದನ್ನೂ ಓದಿ: ಇಸ್ರೇಲ್ ಮಾದರಿಯ ʼಅಗ್ನಿಪಥ್ʼ- ಏನಿದು ಯೋಜನೆ, ಯಾಕಿಷ್ಟು ವಿರೋಧ?

    ಶುಕ್ರವಾರ ಸಿಕಂದರಾಬಾದ್ ರೈಲ್ವೆ ನಿಲ್ದಾಣದಲ್ಲಿ ಸಾವಿರಾರು ಪ್ರತಿಭಟನಾಕಾರರು ಜಮಾಯಿಸಿ ಮೂರು ಪ್ಯಾಸೆಂಜರ್ ರೈಲುಗಳಿಗೆ ಬೆಂಕಿ ಹಚ್ಚಿ ಕೋಚ್‍ಗಳನ್ನು ಸುಟ್ಟುಹಾಕಿ, ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಾಶಪಡಿಸಿದರು. ಘಟನೆ ವೇಳೆ ವಾರಂಗಲ್‍ನ ರಾಜೇಶ್(19) ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೋನಿ, ಕರ್ನೂಲ್, ಗುಂಟೂರು, ನೆಲ್ಲೂರು, ಅಮದಾಲವಲಸ, ವಿಶಾಖಪಟ್ಟಣಂ ಮತ್ತು ಯಲಮಂಚಿಲಿಯ ಹಲವಾರು ಮಂದಿಯನ್ನು
    ಪೊಲೀಸರು ಬಂಧಿಸಿದ್ದಾರೆ.

    Live Tv

  • ಬರ್ತ್‍ಡೇ ಪಾರ್ಟಿ ಮುಗಿಸಿ ಮನೆಗೆ ಬಂದ ಯುವತಿ ಮೇಲೆ ಸ್ನೇಹಿತನಿಂದಲೇ ಅತ್ಯಾಚಾರ

    ಬರ್ತ್‍ಡೇ ಪಾರ್ಟಿ ಮುಗಿಸಿ ಮನೆಗೆ ಬಂದ ಯುವತಿ ಮೇಲೆ ಸ್ನೇಹಿತನಿಂದಲೇ ಅತ್ಯಾಚಾರ

    ಹೈದರಾಬಾದ್: ಬರ್ತ್‍ಡೇ ಪಾರ್ಟಿ ಮುಗಿಸಿ ಪಬ್‍ನಿಂದ ಮನೆಗೆ ಹಿಂದಿರುಗಿದ 28 ವರ್ಷದ ಯುವತಿ ಮೇಲೆ ಆಕೆಯ ಸ್ನೇಹಿತರೇ ಅತ್ಯಾಚಾರ ಎಸಗಿರುವ ಘಟನೆ ತೆಲಂಗಾಣದ ಹೈದರಾಬಾದ್‍ನಲ್ಲಿ ನಡೆದಿದೆ.

    ಆರೋಪಿ ಸಂತಸ್ತೆಯನ್ನು ಬರ್ತ್‍ಡೇ ಪಾರ್ಟಿಗೆಂದು ಜುಬಿಲಿ ಹಿಲ್ಸ್‍ನ ಉನ್ನತ ಮಟ್ಟದ ಪಬ್‍ಗೆ ಆಹ್ವಾನಿಸಿದ್ದನು. ಹೀಗಾಗಿ ಕೆಲಸ ಮುಗಿಸಿ ಸಂತ್ರಸ್ತೆ ಪಬ್‍ಗೆ ಮಹಿಳೆ ಹೋಗಿದ್ದರು. ಪಾರ್ಟಿ ಬಳಿಕ ರಾತ್ರಿ 11.30ರ ಸುಮಾರಿಗೆ ಡ್ರಾಪ್ ಮಾಡುವಂತೆ ಆಕೆಯ ಮನೆಗೆ ಸ್ನೇಹಿತರು ಹೋಗಿದ್ದಾರೆ. ನಂತರ ಮಂಗಳವಾರ ಬೆಳಗಿನ ಜಾವ 4.30ರವರೆಗೂ ಮೂವರು ಹರಟೆ ಹೊಡೆದು, ಬಳಿಕ ಇಬ್ಬರು ಸ್ನೇಹಿತರು ಮನೆಯಿಂದ ಹೊರಟರು.

    ಸಂತಸ್ತೆ ಕೂಡ ಬೆಳಗ್ಗೆ 5 ಗಂಟೆ ಸುಮಾರಿಗೆ ಮಲಗಿಕೊಂಡಿದ್ದರು. ಬೆಳಗ್ಗೆ 6.15ರ ಸುಮಾರಿಗೆ ಸಂತಸ್ತೆ ಖಾಸಗಿ ಭಾಗದಲ್ಲಿ ತೀವ್ರವಾದ ನೋವು ಕಾಣಿಸಿಕೊಂಡಿದ್ದು, ಈ ವೇಳೆ ನಿದ್ದೆ ಕಣ್ಣಿನಲ್ಲಿದ್ದ ಆಕೆಯ ಮೇಲೆ ಸ್ನೇಹಿತರಿಬ್ಬರು ಬಲವಂತವಾಗಿ ಅತ್ಯಾಚಾರವೆಸಗುತ್ತಿರುವುದನ್ನು ಕಂಡು ನೆರೆ ಹೊರೆಯವನ್ನು ಸಹಾಯಕ್ಕಾಗಿ ಕೂಗಾಡಲು ಆರಂಭಿಸಿದ್ದಾರೆ. ಈ ವೇಳೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು   ಪೊಲೀಸರು ತಿಳಿಸಿದ್ದಾರೆ.

    ಇದೀಗ ಬುಧವಾರ ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಬಾಚುಪಲ್ಲಿ ಪೊಲೀಸರು ಆಕೆಯ ಸ್ನೇಹಿತರ ವಿರುದ್ಧ ಐಪಿಸಿ ಸೆಕ್ಷನ್ 376 ಮತ್ತು 506ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ.

    Live Tv

  • ಗ್ಯಾಂಗ್ ರೇಪ್ ಸಂತ್ರಸ್ತೆಯ ಫೋಟೋ ರಿಲೀಸ್ – ಬಿಜೆಪಿ ಶಾಸಕನ ವಿರುದ್ಧ ಪ್ರಕರಣ ದಾಖಲು

    ಗ್ಯಾಂಗ್ ರೇಪ್ ಸಂತ್ರಸ್ತೆಯ ಫೋಟೋ ರಿಲೀಸ್ – ಬಿಜೆಪಿ ಶಾಸಕನ ವಿರುದ್ಧ ಪ್ರಕರಣ ದಾಖಲು

    ಹೈದರಾಬಾದ್: ಸಾಮೂಹಿಕ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಕೆಲವು ಫೋಟೋ ಮತ್ತು ವೀಡಿಯೋ ಬಿಡುಗಡೆ ಮಾಡಿದ್ದಕ್ಕೆ ಬಿಜೆಪಿ ಶಾಸಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    ದೂರಿನ ಆಧಾರದ ಮೇಲೆ ಶಾಸಕ ಎಂ.ರಘುನಂದನ್ ರಾವ್ ಅವರು ಫೋಟೋ ಮತ್ತು ವೀಡಿಯೋ ಕ್ಲಿಪ್ ಹಂಚಿಕೊಳ್ಳುವ ಮೂಲಕ ಅಪ್ರಾಪ್ತೆ ಗುರುತನ್ನು ಬಹಿರಂಗಪಡಿಸಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಐಪಿಸಿಯ ಸೆಕ್ಷನ್ 228-ಎ(ನಿರ್ದಿಷ್ಟ ಅಪರಾಧಕ್ಕೆ ಬಲಿಯಾದ ವ್ಯಕ್ತಿಯ ಗುರುತನ್ನು ಬಹಿರಂಗ ಪಡಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಗ್ಯಾಂಗ್ ರೇಪ್: ಅಪ್ರಾಪ್ತ ಆರೋಪಿ ಫೋಟೋ ರಿಲೀಸ್ – ಬಿಜೆಪಿ ಶಾಸಕನ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ 

    ಹೈದರಾಬಾದ್ ಗ್ಯಾಂಗ್ ರೇಪ್‍ಗೆ ಸಂಬಂಧಿಸಿದಂತೆ ಜೂನ್ 4 ರಂದು ಎಂ.ರಘುನಂದನ್ ಸುದ್ದಿಗೋಷ್ಠಿ ನಡೆಸಿದ್ದರು. ಎಐಎಂಐಎಂ ಶಾಸಕರೊಬ್ಬರ ಪುತ್ರ ಸಹ ಈ ಗ್ಯಾಂಗ್‍ ರೇಪ್‍ನಲ್ಲಿ ಭಾಗಿಯಾಗಿದ್ದಾನೆ ಎಂದು ಆರೋಪಿಸಿದ್ದರು. ಈ ಹೇಳಿಕೆಯನ್ನು ಸಾಬೀತುಪಡಿಸಲು ತಮ್ಮ ಬಳಿ ಹೆಚ್ಚಿನ ಸಾಕ್ಷಿಗಳಿವೆ ಎಂದು ಹೇಳಿದ್ದರು. ವೀಡಿಯೋದಲ್ಲಿ ಅಪ್ರಾಪ್ತನ ಜೊತೆಗೆ ಸಂತ್ರಸ್ತೆ ಸಹ ಇರುವುದು ಕಂಡುಬಂದಿದೆ. ಅದಕ್ಕೆ ಪ್ರತಿಪಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸಿತ್ತು.

  • ಗ್ಯಾಂಗ್ ರೇಪ್: ಅಪ್ರಾಪ್ತ ಆರೋಪಿ ಫೋಟೋ ರಿಲೀಸ್ – ಬಿಜೆಪಿ ಶಾಸಕನ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

    ಗ್ಯಾಂಗ್ ರೇಪ್: ಅಪ್ರಾಪ್ತ ಆರೋಪಿ ಫೋಟೋ ರಿಲೀಸ್ – ಬಿಜೆಪಿ ಶಾಸಕನ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

    ಹೈದರಾಬಾದ್: ಗ್ಯಾಂಗ್ ರೇಪ್ ಪ್ರಕರಣದಲ್ಲಿ ಸಂತ್ರಸ್ತೆ ಮತ್ತು ಅಪ್ರಾಪ್ತ ಆರೋಪಿಗಳ ಫೋಟೋ ಮತ್ತು ವೀಡಿಯೋ ಬಿಡುಗಡೆ ಮಾಡಿದ್ದಕ್ಕಾಗಿ ಬಿಜೆಪಿ ಶಾಸಕ ರಘುನಂದನ್ ರಾವ್ ಅವರನ್ನು ಕಾಂಗ್ರೆಸ್ ಸಂಸದ ಮತ್ತು ತೆಲಂಗಾಣ ಉಸ್ತುವಾರಿ ಮಾಣಿಕಂ ಟ್ಯಾಗೋರ್ ಅವರು ಟ್ವಿಟ್ಟರ್‌ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ

    ರಘುನಂದನ್ ರಾವ್ ಟ್ವೀಟ್‍ನಲ್ಲಿ, ತೆಲಂಗಾಣದಲ್ಲಿ ಆಡಳಿತಾರೂಢ(ತೆಲಂಗಾಣ ರಾಷ್ಟ್ರ ಸಮಿತಿ) ಟಿಆರ್‌ಎಸ್ ಸರ್ಕಾರದ ಹಿರಿಯ ಸದಸ್ಯರ ಪುತ್ರನಾಗಿರುವ ಅಪ್ರಾಪ್ತ ಆರೋಪಿಗೆ ಪೊಲೀಸರು ತರಾತುರಿಯಲ್ಲಿ ಕ್ಲೀನ್ ಚಿಟ್ ನೀಡಿದ್ದಾರೆ. ಶಾಸಕರ ಪುತ್ರನ ಕೈವಾಡವನ್ನು ಸಾಬೀತುಪಡಿಸುವ ವೀಡಿಯೋ ಸಾಕ್ಷಿಗಳನ್ನು ನಾನು ಹೊಂದಿದ್ದೇನೆ ಎಂದು ಬರೆದು ಅಪ್ರಾಪ್ತನ ಫೋಟೋ ಪೋಸ್ಟ್ ಮಾಡಿದ್ದರು. ಇದನ್ನೂ ಓದಿ: ಕಾರಿನಲ್ಲೇ ಅಪ್ರಾಪ್ತೆಯ ಮೇಲೆ ಗ್ಯಾಂಗ್‍ರೇಪ್ – ಓರ್ವ ಅರೆಸ್ಟ್, ಆರೋಪಿಗಳ ಪೈಕಿ ಮೂವರು ಅಪ್ರಾಪ್ತರು

    ಈ ಟ್ವೀಟ್‍ಗೆ ಪ್ರತಿಕ್ರಿಯೆ ಕೊಟ್ಟ ಮಾಣಿಕಂ ಟ್ಯಾಗೋರ್ ಅವರು, ಅತ್ಯಾಚಾರ ಪ್ರಕರಣದ ಆರೋಪಿಗಳಲ್ಲಿ ಒಬ್ಬರು ಎಂಐಎಂ ಶಾಸಕರ ಮಗ ಎಂದು ಹೇಳಲಾಗಿದೆ. ನಿಮ್ಮ ರಾಜಕೀಯ ಲಾಭಕ್ಕಾಗಿ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ನೀವು ಸಂತ್ರಸ್ತೆ ಮತ್ತು ಅಪ್ರಾಪ್ತನ ಗುರುತನ್ನು ಸಾರ್ವಜನಿಕ ಡೊಮೇನ್‌ನಲ್ಲಿ ಹಂಚಿಕೊಂಡಿದ್ದೀರಿ. ತೆಲಂಗಾಣದ ಮಗಳನ್ನು ಅವಮಾನಿಸಲು ನಾವು ಅನುಮತಿಸುವುದಿಲ್ಲ. ನಾವು ಮ್ಯಾಚ್ ಫಿಕ್ಸಿಂಗ್ ಮಾಡಲು ಬಿಡುವುದಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಜಾಗತಿಕ ಪರಿಸರ ಉಪಕ್ರಮ ‘ಲೈಫ್ ಮೂವ್ಮೆಂಟ್’ಗೆ ಚಾಲನೆ ನೀಡಲಿರುವ ಮೋದಿ 

    ನಡೆದಿದ್ದೇನು?
    ಮರ್ಸಿಡಿಸ್ ಕಾರಿನಲ್ಲಿ 17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಅಪ್ಡೇಟ್ ಸಿಗುತ್ತಿದೆ. ಶನಿವಾರ ಸಿಕ್ಕ ಸಿಸಿಟಿವಿಯಲ್ಲಿ, ಶಂಕಿತ ಆರೋಪಿಗಳು ಪಬ್‍ನ ಹೊರಗೆ ಅಪ್ರಾಪ್ತೆ ಜೊತೆ ಹೋಗಿದ್ದರು. ಈ ವೇಳೆ ಹುಡುಗರು ಆಕೆಯನ್ನು ಮನೆಗೆ ಬಿಡಲು ಮುಂದಾಗುತ್ತಾರೆ. ಸಂತ್ರಸ್ತೆ ಕಾರಿನ ಬಳಿ ಹೋಗುತ್ತಿದಂತೆ ಆಕೆಯ ಮೇಲೆ ಹಲ್ಲೆ ಮಾಡಲಾಗಿದೆ. ನಂತರ ಕಾರಿನೊಳಗೆಯೇ ಆರೋಪಿಗಳು ಸರದಿಯಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಇತರರು ಕಾರಿನ ಹೊರಗೆ ಕಾವಲು ನಿಂತಿರುವುದು ಸೆರೆಯಾಗಿದೆ.

  • ಕಾರಿನಲ್ಲೇ ಅಪ್ರಾಪ್ತೆಯ ಮೇಲೆ ಗ್ಯಾಂಗ್‍ರೇಪ್ – ಓರ್ವ ಅರೆಸ್ಟ್, ಆರೋಪಿಗಳ ಪೈಕಿ ಮೂವರು ಅಪ್ರಾಪ್ತರು

    ಕಾರಿನಲ್ಲೇ ಅಪ್ರಾಪ್ತೆಯ ಮೇಲೆ ಗ್ಯಾಂಗ್‍ರೇಪ್ – ಓರ್ವ ಅರೆಸ್ಟ್, ಆರೋಪಿಗಳ ಪೈಕಿ ಮೂವರು ಅಪ್ರಾಪ್ತರು

    ಹೈದರಾಬಾದ್: ಮರ್ಸಿಡಿಸ್ ಕಾರಿನಲ್ಲಿ 17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ. ಗುರುತಿಸಲಾದ ಐದು ಆರೋಪಿಗಳಲ್ಲಿ ಮೂವರು ಅಪ್ರಾಪ್ತರು ಎಂದು ಪೊಲೀಸರು ತಿಳಿಸಿದ್ದಾರೆ.

    ಮೇ 28 ರಂದು ಹೈದರಾಬಾದ್‍ನ ಜುಬಿಲಿ ಹಿಲ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯ ಕುರಿತು ಅಪ್ರಾಪ್ತ ಬಾಲಕಿಯ ತಂದೆ ಪೆÇಲೀಸರಿಗೆ ದೂರು ನೀಡಿದ ನಂತರ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 ಮತ್ತು 323 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೆಕ್ಷನ್ 9 ಅನ್ನು ಪೋಕ್ಸೊ ಕಾಯಿದೆಯ 10 ರೊಂದಿಗೆ ಈ ಪ್ರಕರಣದಲ್ಲಿ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.

    ಪೊಲೀಸ್ ಅಧಿಕಾರಿ ಜೋಯಲ್ ಡೇವಿಸ್ ಈ ಕುರಿತು ಮಾಹಿತಿ ಕೊಟ್ಟಿದ್ದು, ಆರೋಪಿಗಳ ಬಗ್ಗೆ ಸಂತ್ರಸ್ತೆ ಏನನ್ನೂ ಬಹಿರಂಗಪಡಿಸಿಲ್ಲ. ಆದರೆ ಆಕೆ ಒಬ್ಬನ ಹೆಸರನ್ನು ಮಾತ್ರ ತಿಳಿಸಿದ್ದಾಳೆ. ತಕ್ಷಣ ಅವನನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಿದ್ದು, ಒಬ್ಬನನ್ನು ಬಂಧಿಸಲಾಗಿದೆ. ಪ್ರಸ್ತುತ ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಐದು ಆರೋಪಿಗಳ ಬಗ್ಗೆ ಪತ್ತೆ ಮಾಡಲಾಗಿದೆ. ಸಂತ್ರಸ್ತೆ ಪ್ರಸ್ತುತ ಯಾರನ್ನು ಗುರುತಿಸುವ ಸ್ಥಿತಿಯಲ್ಲಿ ಇಲ್ಲ ಎಂದರು. ಇದನ್ನೂ ಓದಿ: ಶ್ರೀರಂಗಪಟ್ಟಣ ಮಸೀದಿ ವಿವಾದ – ಹಿಂದೂ, ಮುಸ್ಲಿಮರ ವಾದ ಏನು? 

    ಸಿಸಿಟಿವಿಯಲ್ಲಿ ಏನಿದೆ?
    ಶಂಕಿತ ಆರೋಪಿಗಳು ಪಬ್‍ನ ಹೊರಗೆ ಅಪ್ರಾಪ್ತೆ ಜೊತೆ ನಿಂತಿರುವುದನ್ನು ಕಾಣಿಸುತ್ತೆ. ಈ ವೇಳೆ ಹುಡುಗರು ಸಂತ್ರಸ್ತೆಯನ್ನು ಮನೆಗೆ ಬಿಡಲು ಮುಂದಾಗಿದ್ದಾರೆ. ಸಂತ್ರಸ್ತೆ ಕಾರಿನ ಬಳಿ ಹೋಗುತ್ತಿದಂತೆ ಆಕೆಯ ಮೇಲೆ ಹಲ್ಲೆ ಮಾಡಲಾಗಿದೆ. ನಂತರ ಕಾರಿನೊಳಗೆಯೇ ಆರೋಪಿಗಳು ಸರದಿಯಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಇತರರು ಕಾರಿನ ಹೊರಗೆ ಕಾವಲು ನಿಂತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

  • ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್ ಪ್ರಕರಣ – ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಬಿಜೆಪಿ ಆಗ್ರಹ

    ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್ ಪ್ರಕರಣ – ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಬಿಜೆಪಿ ಆಗ್ರಹ

    ಹೈದರಾಬಾದ್: ಮರ್ಸಿಡಿಸ್ ಕಾರಿನಲ್ಲಿ ಅಪ್ರಾಪ್ತೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಚಾರವೆಸಗಿರುವ ಘಟನೆ ಮೇ 28 ರಂದು ಹೈದರಾಬಾದ್‍ನಲ್ಲಿ ನಡೆದಿತ್ತು. ಘಟನೆಯಲ್ಲಿ ಶಾಸಕರೊಬ್ಬರ ಪುತ್ರನ ಕೈವಾಡವಿದ್ದು, ಪ್ರಕರಣದ ಐವರು ಆರೋಪಿಗಳು ಅಪ್ರಾಪ್ತರು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

    police (1)

    ಎಫ್‍ಐಆರ್‌ನ ಪ್ರಕಾರ, ಆರೋಪಿಯು ತನ್ನ ಮಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಆಕೆಯ ಕುತ್ತಿಗೆಗೆ ಗಾಯಗಳನ್ನು ಕೂಡ ಮಾಡಿದ್ದಾನೆ ಎಂದು ಸಂತ್ರಸ್ತೆಯ ತಂದೆ ಆರೋಪಿಸಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ಇದೀಗ ಪ್ರಕರಣವನ್ನು ಬದಲಾಯಿಸಿ ಐಪಿಸಿಯ ಸೆಕ್ಷನ್ 376 (ಸಾಮೂಹಿಕ ಅತ್ಯಾಚಾರ) ಎಂದು ಸೇರಿಸಿದ್ದಾರೆ. ಇದನ್ನೂ ಓದಿ: ಮಾರುವೇಶದಲ್ಲಿ ಪೊಲೀಸರ ದಾಳಿ – 400 ಕೆ.ಜಿ ದನದ ಮಾಂಸ ವಶ

    ಶಾಸಕರ ಪುತ್ರ ಮತ್ತು ಅಲ್ಪಸಂಖ್ಯಾತ ಮಂಡಳಿಯ ಅಧ್ಯಕ್ಷರು ಪಾರ್ಟಿಯಲ್ಲಿ ಬಾಲಕಿಯ ಜೊತೆಗಿದ್ದರು. ಅದರಲ್ಲಿ ಒಬ್ಬ ಅಪ್ರಾಪ್ತ ಆರೋಪಿಯನ್ನು ಮಾತ್ರ ಗುರುತಿಸಲು ಮತ್ತು ಹೆಸರಿಸಲು ಸಾಧ್ಯವಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಘಟನೆಯಲ್ಲಿ ಭಾಗಿಯಾಗಿರುವ ಮೂವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ದೌರ್ಜನ್ಯ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದ್ದು, ತನಿಖೆಯು ಇನ್ನೂ ಪ್ರಗತಿಯಲ್ಲಿದೆ.

    ಘಟನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಈ ಅಪರಾಧದ ಐವರು ಅಪರಾಧಿಗಳಲ್ಲಿ ಒಬ್ಬ ವ್ಯಕ್ತಿ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಂಐಎಂ) ಶಾಸಕರ ಮಗನಾಗಿದ್ದು, ಮತ್ತೋರ್ವ ಅಲ್ಪಸಂಖ್ಯಾತ ಅಧ್ಯಕ್ಷರ ಮಗ ಎಂದು ಆರೋಪಿಸಲಾಗಿದೆ ಎಂದು ತೆಲಂಗಾಣ ಬಿಜೆಪಿ ಹೇಳಿದೆ.

    ಸಂತ್ರಸ್ತೆಯ ಪೋಷಕರು ಕ್ರಿಮಿನಲ್ ದೂರು ನೀಡಿದ್ದರೂ ಹೈದರಾಬಾದ್ ಪೊಲೀಸರು ಇನ್ನೂ ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ. ಈ ಪ್ರಕರಣದಲ್ಲಿ ಪೊಲೀಸರು ನಿಧಾನಗತಿಯ ಕ್ರಮ ಕೈಗೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇದನ್ನೂ ಓದಿ: ಹಸು ಜೊತೆಗೆ ಸೆಕ್ಸ್ – ವಿಕೃತ ಕಾಮಿ ಅರೆಸ್ಟ್

    ಈ ಪ್ರಕರಣದಲ್ಲಿ ಬಂಧಿಸಲು ಪೊಲೀಸರು ಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಅಥವಾ ಸಿಎಂ ಕೆಸಿಆರ್ ಅವರ ಅನುಮತಿಗಾಗಿ ಕಾಯುತ್ತಿದ್ದಾರೆಯೇ ಎಂದು ನಾವು ಆಶ್ಚರ್ಯ ಪಡುತ್ತಿದ್ದೇವೆ. ಹಗಲು ಹೊತ್ತಿನಲ್ಲಿ ಹ್ಯಾಕಿಂಗ್‍ಗಳು, ಅಂತರ ಧರ್ಮೀಯ ಕೊಲೆಗಳು ಮತ್ತು ಅತ್ಯಾಚಾರಗಳಂತಹ ಭಯಾನಕ ಅಪರಾಧಗಳ ಸರಣಿಗಳು ತೆಲಂಗಾಣವನ್ನು ಕಳಪೆ ಬೆಳಕಿನತ್ತ ಪ್ರದರ್ಶಿಸುತ್ತಿವೆ. ರಾಜ್ಯದಲ್ಲಿ ಕಾನೂನಿನ ಭಯ ತಳಮಟ್ಟದಲ್ಲಿ ಕಂಡುಬರುತ್ತಿದೆ ಎಂದು ತೆಲಂಗಾಣ ಬಿಜೆಪಿಯ ಮುಖ್ಯ ವಕ್ತಾರ ಕೃಷ್ಣ ಸಾಗರ್ ರಾವ್ ಹೇಳಿದ್ದಾರೆ.

    ಪ್ರಕರಣದ ಎಲ್ಲ ಐವರು ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.