Tag: Hyderabad

  • ಹೆತ್ತ ಮಗುವನ್ನೇ ಕೊಂದು, ಸರಗಳ್ಳತನದ ಕಥೆ ಕಟ್ಟಿದ್ಲು

    ಹೆತ್ತ ಮಗುವನ್ನೇ ಕೊಂದು, ಸರಗಳ್ಳತನದ ಕಥೆ ಕಟ್ಟಿದ್ಲು

    ಹೈದರಾಬಾದ್: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಒಂದು ವರ್ಷದ ತನ್ನ ಪುಟ್ಟ ಮಗಳನ್ನು ಮಹಿಳೆಯೊಬ್ಬಳು ಸಂಪ್‍ಗೆ ಎಸೆದು ಹತ್ಯೆಗೈದು, ನಂತರ ಮಗುವಿನ ಸಾವಿಗೆ ಸರಗಳ್ಳರು ಕಾರಣ ಎಂದು ಕಥೆ ಕಟ್ಟಿದ್ದಾಳೆ.

    ಸರಗಳ್ಳರು ಮನೆಯ ಬಳಿ ಮಗುವಿನ ಹತ್ತಿರ ಸರ ಕದಿಯಲು ಯತ್ನಿಸಿದಾಗ, ಮಗು ಸಂಪ್‍ಗೆ ಬಿದ್ದು ಸಾವನ್ನಪ್ಪಿದೆ ಎಂದು ಮಹಿಳೆ ಆರಂಭದಲ್ಲಿ ಹೇಳಿದ್ದಳು. ಆದರೆ ತನಿಖೆ ನಡೆಸಿದ ಪೊಲೀಸರು ಸರಗಳ್ಳತನ ಮಗುವಿನ ಸಾವಿಗೆ ಕಾರಣವಲ್ಲ. ಮಗುವನ್ನು ತಾನೇ ಕೊಂದು ಹಾಕಿ ನಂತರ ಮಹಿಳೆ ನಾಟಕವಾಡಿದ್ದಾಳೆ ಎಂದು ತಿಳಿಸಿದ್ದಾರೆ.

    crime

    ಮಹಿಳೆಗೆ ಇಬ್ಬರು ಮಕ್ಕಳಿದ್ದು, ಮೃತ ಮಗು ಕಿರಿಯ ಮಗುವಾಗಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿತ್ತು. ಆರೋಗ್ಯದ ದೃಷ್ಟಿಯಿಂದ ಮಗುವಿಗೆ ಮತ್ತು ತನಗೆ ತೊಂದರೆಯಾಗುತ್ತದೆ ಎಂದು ಭಾವಿಸಿ ಮಹಿಳೆ ಮಗುವನ್ನು ಕೊಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಲ್‌ಖೈದಾ ಮುಖ್ಯಸ್ಥ ಝವಾಹಿರಿ ಹತ್ಯೆ- ಮೋಸ್ಟ್ ವಾಂಟೆಡ್ ಉಗ್ರನ ಮೇಲೆ ಡ್ರೋಣ್ ಸ್ಟ್ರೈಕ್‌

    ಈ ಕುರಿತಂತೆ ಮಹಿಳೆ ಕೂಡ ವಿಚಾರಣೆ ವೇಳೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಇದೀಗ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಹಿಳೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: Commonwealth Games: ಹರ್ಜಿಂದರ್ ಹವಾ – ಭಾರತಕ್ಕೆ ಮತ್ತೊಂದು ಕಂಚು

    Live Tv
    [brid partner=56869869 player=32851 video=960834 autoplay=true]

  • ತೆಲುಗು ಧಾರಾವಾಹಿ ಶೂಟಿಂಗ್ ಸೆಟ್‌ನಲ್ಲಿ ಕನ್ನಡದ ನಟ ಚಂದನ್‍ಗೆ ಕಪಾಳ ಮೋಕ್ಷ..!

    ತೆಲುಗು ಧಾರಾವಾಹಿ ಶೂಟಿಂಗ್ ಸೆಟ್‌ನಲ್ಲಿ ಕನ್ನಡದ ನಟ ಚಂದನ್‍ಗೆ ಕಪಾಳ ಮೋಕ್ಷ..!

    ನ್ನಡ ಕಿರುತೆರೆಯ ಸ್ಟಾರ್ ನಟ ಚಂದನ್ ಕುಮಾರ್‌ಗೆ ತೆಲುಗು ತಂತ್ರಜ್ಞರು ಕಪಾಳಮೋಕ್ಷ ಮಾಡಿರುವ ವೀಡಿಯೋ ಸೊಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಕನ್ನಡ ಮಾತ್ರವಲ್ಲದೇ ತೆಲುಗು ಧಾರಾವಾಹಿಗಳಲ್ಲಿ ಅಭಿನಯಿಸುವ ಮೂಲಕ ಚಂದನ್ ಕುಮಾರ್ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಕೆಲವು ದಿನಗಳ ಹಿಂದೆ ಹೈದರಾಬಾದ್‍ನಲ್ಲಿ ಸಾವಿತ್ರಮ್ಮಗಾರು ಅಬ್ಬಾಯಿ ಧಾರಾವಾಹಿಯ ಶೂಟಿಂಗ್ ನಡೆಯುತ್ತಿತ್ತು. ಈ ಧಾರಾವಾಹಿಯಲ್ಲಿ ಮುಖ್ಯಪಾತ್ರದಲ್ಲಿ ಚಂದನ್ ಕುಮಾರ್ ಅಭಿನಯಿಸುತ್ತಿದ್ದಾರೆ. ಈ ಧಾರವಾಹಿ ಶೂಟಿಂಗ್ ಸೆಟ್‍ನಲ್ಲಿ ಅಲ್ಲಿನ ತಂತ್ರಜ್ಞರು ನಟ ಚಂದನ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ವಸತಿ ಶಾಲೆಯಲ್ಲಿ ‘ವಿಕ್ರಾಂತ್ ರೋಣ ‘ ಪೈರಸಿ ಸಿನಿಮಾ ವೀಕ್ಷಣೆ : ಕ್ರಮಕ್ಕೆ ಒತ್ತಾಯ

    ಶೂಟಿಂಗ್ ವೇಳೆ ಕ್ಯಾಮೆರಾಮೆನ್ ಹಾಗೂ ತಂತ್ರಜ್ಞರ ಜೊತೆ ಚಂದನ್ ಕುಮಾರ್ ಕಿರಿಕ್ ಮಾಡಿಕೊಂಡಿದ್ದು, ಕ್ಯಾಮೆರಾ ಅಸಿಸ್ಟೆಂಟ್‍ಗೆ ಮೊದಲು ಚಂದನ್ ಅವರೇ ಹಲ್ಲೆ ಮಾಡಿದ್ದಾರೆ ಎಂಬ ಆರೋಪಿಸಲಾಗಿದ್ದು, ಬಳಿಕ ತೆಲುಗು ತಂತ್ರಜ್ಞರು ಒಟ್ಟಾಗಿ ಚಂದನ್‍ಗೆ ನಿಂದಿಸಿದ್ದಾರೆ. ಸೀರಿಯಲ್ ತಂತ್ರಜ್ಞರ ಜೊತೆ ಮಾತಿಗೆ ಮಾತು ಬೆಳೆದು ಕನ್ನಡ ನಟ ಚಂದನ್‍ಗೆ ಅವರು ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ. ಕಳೆದ ಒಂದು ತಿಂಗಳ ಹಿಂದೆ ಹಲ್ಲೆ ನಡೆದಿದ್ದು, ಇದೀಗ ಈ ವೀಡಿಯೋ ವೈರಲ್ ಆಗಿದೆ.

    ಚಂದನ್ ಹಿಂದೆ ಲಕ್ಷ್ಮೀ ಬಾರಮ್ಮ, ‘ರಾಧಾ ಕಲ್ಯಾಣ’, ‘ಸರ್ವ ಮಂಗಳ ಮಾಂಗಲ್ಯೇ’ ಧಾರವಾಹಿಗಳಲ್ಲಿ ನಟಿಸಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಲವ್ ಯು ಅಲಿಯಾ, ಅರ್ಜುನ್ ಸರ್ಜಾ ನಿರ್ದೇಶನದ “ಪ್ರೇಮ ಬರಹ” ಸೇರಿ ಕನ್ನಡದ ಕೆಲವು ಸಿನಿಮಾಗಳಲ್ಲೂ ಚಂದನ್ ಬಣ್ಣಹಚ್ಚಿದ್ದಾರೆ. ಸದ್ಯ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ’ ಮರಳಿ ಮನಸಾಗಿದೆ, ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇದನ್ನೂ ಓದಿ: ನಾಡದೇವಿ ಚಾಮುಂಡೇಶ್ವರಿ ಹಬ್ಬಕ್ಕೆ ದಿನಗಣನೆ – ಮೈಸೂರು ದಸರಾಕ್ಕೆ ಬಹಿಷ್ಕಾರ ಹಾಕಿದ ಮಾವುತ ಕಾವಾಡಿಗಳು

    ಬಿಗ್ ಬಾಸ್‍ನಲ್ಲೂ ಕಾಣಿಸಿಕೊಂಡಿದ್ದ ಚಂದು, ನಟಿ ಕವಿತಾ ಗೌಡರನ್ನು ವಿವಾಹವಾಗಿದ್ದಾರೆ. ಚಂದನ್ ಕುಮಾರ್ ಒಡೆತನದಲ್ಲಿ ಬಿರಿಯಾನಿ ಹೋಟೆಲ್ ಕೂಡ ಇದ್ದು, ಇದರ ಜೊತೆಗೆ ಪ್ರೋಟೀನ್ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಡಿಲಲ್ಲಿ ಮಗುವಿಗೆ ಹಾಲುಣಿಸುತ್ತಿರುವಾಗಲೇ ಕೊನೆಯುಸಿರೆಳೆದ ತಾಯಿ

    ಮಡಿಲಲ್ಲಿ ಮಗುವಿಗೆ ಹಾಲುಣಿಸುತ್ತಿರುವಾಗಲೇ ಕೊನೆಯುಸಿರೆಳೆದ ತಾಯಿ

    ಹೈದರಾಬಾದ್: ಮಡಿಲಲ್ಲಿ ಮಗುವನ್ನಿಟ್ಟುಕೊಂಡು ಹಾಲುಣಿಸುತ್ತಿರುವಾಗಲೇ ತಾಯಿಯೊಬ್ಬಳು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯ ತಿಮ್ಮಾಜಿಪೇಟ್ ಮಂಡಲದ ನೆರೆಲ್ಲಪಲ್ಲಿಯಲ್ಲಿ ನಡೆದಿದೆ.

    25 ವರ್ಷದ ಜಯಶ್ರೀ ತನ್ನ ಮೊದಲ ಹೆರಿಗೆಗೆ ತವರು ಮನೆಗೆ ಬಂದಿದ್ದರು. 2 ತಿಂಗಳ ಕೆಳಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆಕೆಯ ಪತಿ ಪ್ರಶಾಂತ್ ತಿರ್ಮಲಾಪುರದಿಂದ ಬಂದು ಆಕೆಯ ಮೈಬಣ್ಣ ಬದಲಾಗಿ ಕಪ್ಪಾಗಿದ್ದರಿಂದ ಮಹಬೂಬನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ಆಕೆಯ ಹೃದಯ ಕವಾಟದಲ್ಲಿ ಸಣ್ಣಪುಟ್ಟ ಸಮಸ್ಯೆ ಇದ್ದು, ಔಷಧ ಬಳಸಿದರೆ ಗುಣವಾಗುತ್ತದೆ ಎಂದು ಹೇಳಿದ್ದಾರೆ. ಹೀಗಾಗಿ ವೈದ್ಯರು ಬರೆದುಕೊಟ್ಟ ಔಷಧಗಳನ್ನು ಸೇವಿಸಿ ಮತ್ತೆ ನೇರಳಪಲ್ಲಿಗೆ ಮರಳಿದ್ದರು. ಇದನ್ನೂ ಓದಿ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನಿರಂತರ ಪ್ರಯತ್ನ ಮಾಡುತ್ತೇವೆ: ಕಾಗೇರಿ ಹಾರಿಕೆ ಉತ್ತರ

    ನಿನ್ನೆ ಬೆಳಗ್ಗಿನ ಜಾವ 5.30ಕ್ಕೆ ಮಗುವಿಗೆ ಹಾಲುಣಿಸುವ ವೇಳೆ ಜಯಶ್ರೀ ಕೊನೆಯುಸಿರೆಳೆದಿದ್ದಾರೆ. ಸ್ವಲ್ಪ ಸಮಯದ ನಂತರ ಅಜ್ಜ ಮತ್ತು ಅಜ್ಜಿ ಚಹಾಕ್ಕೆ ಕರೆದರು. ಆದರೆ ಅವರ ಕೋಣೆಯಿಂದ ಉತ್ತರ ಬರಲಿಲ್ಲ. ಏನಾಯಿತು ಎಂದು ನೋಡಲು ಹೋದಾಗ ಮೃತಪಟ್ಟಿರುವುದು ಗೊತ್ತಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

    Live Tv
    [brid partner=56869869 player=32851 video=960834 autoplay=true]

  • ವಿದೇಶದಿಂದ ತೆಲಂಗಾಣಕ್ಕೆ ಬಂದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಲಕ್ಷಣ

    ವಿದೇಶದಿಂದ ತೆಲಂಗಾಣಕ್ಕೆ ಬಂದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಲಕ್ಷಣ

    ಹೈದರಬಾದ್: ವಿದೇಶದಿಂದ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಗೆ ಮರಳಿದ 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಕಾಯಿಲೆಯ ರೋಗ ಲಕ್ಷಣಗಳು ಕಾಣಿಸಿಕೊಂಡಿದೆ.

    ಮಂಕಿಪಾಕ್ಸ್ ಕಾಯಿಲೆಯ ರೋಗ ಲಕ್ಷಣವನ್ನು ಹೊಂದಿರುವ ವ್ಯಕ್ತಿ ಕಾಮರೆಡ್ಡಿ ಜಿಲ್ಲೆಯ ಇಂದಿರಾನಗರ ಕಾಲೋನಿಯ ನಿವಾಸಿಯಾಗಿದ್ದು, ಜುಲೈ 6 ರಂದು ಕುವೈತ್‍ನಿಂದ ಆಗಮಿಸಿದ್ದರು. ಜುಲೈ 20 ರಂದು ಜ್ವರ ಕಾಣಿಸಿಕೊಂಡಿದ್ದು, ಜುಲೈ 23 ರಂದು ದದ್ದು ಕಾಣಿಸಿಕೊಂಡ ಹಿನ್ನೆಲೆ ವ್ಯಕ್ತಿಯನ್ನು ಕಾಮರೆಡ್ಡಿ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಾಜ್ಯ ಸಾರ್ವಜನಿಕ ಆರೋಗ್ಯ ನಿರ್ದೇಶಕ ಜಿ.ಶ್ರೀನಿವಾಸ ರಾವ್ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಗೂ ತಲುಪಿದ ಮಂಕಿಪಾಕ್ಸ್ – ವಿದೇಶ ಪ್ರಯಾಣದ ದಾಖಲೆಯೇ ಇಲ್ಲದ ವ್ಯಕ್ತಿಗೆ ಸೋಂಕು

    ಈ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಮಂಕಿಪಾಕ್ಸ್ ಕಾಯಿಲೆ ರೋಗ ಲಕ್ಷಣ ಹೊಂದಿರುವ ವ್ಯಕ್ತಿಯನ್ನು ಕಾಮರೆಡ್ಡಿ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವ್ಯಕ್ತಿಯ ಮಾದರಿಗಳನ್ನು ಸಂಗ್ರಹಿಸಿ ಪುಣೆಯ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ ಲ್ಯಾಬ್‍ಗೆ ಕಳುಹಿಸಲಾಗಿದ್ದು, ಫಲಿತಾಂಶ ಬರುವವರೆಗೂ ವ್ಯಕ್ತಿಯನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಈ ವ್ಯಕ್ತಿಯೊಂದಿಗೆ ನೇರವಾಗಿ ಸಂಪರ್ಕ ಹೊಂದಿದ್ದ 6 ಜನರನ್ನು ಪರೀಕ್ಷೆಗೆ ಒಳಪಡಿಸಿದಾಗ ಯಾವುದೇ ರೋಗಲಕ್ಷಣಗಳು ಕಂಡುಬಂದಿಲ್ಲ. ಹೀಗಿದ್ದರೂ ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ 3 ಬಾರಿ ಕರೆ ಮಾಡಿದ ಬಂಧಿತ ಸಚಿವ ಪಾರ್ಥ ಚಟರ್ಜಿ

    ಭಾನುವಾರ ದೆಹಲಿಯಲ್ಲಿ ಮಂಕಿಪಾಕ್ಸ್ ವೈರಸ್‍ನ ನಾಲ್ಕನೇ ಪ್ರಕರಣ ಪತ್ತೆಯಾಗಿದೆ. ಆದರೆ ವ್ಯಕ್ತಿ ಯಾವುದೇ ಟ್ರಾವೆಲ್ ಹಿಸ್ಟರಿಯನ್ನು ಹೊಂದಿಲ್ಲ. 31 ವರ್ಷದ ವ್ಯಕ್ತಿ ಜ್ವರ ಹಾಗೂ ಚರ್ಮದಲ್ಲಿ ಕಂಡು ಬಂದ ಗುಳ್ಳೆಗಳಿಂದ ನಗರದ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿಗೆ ದಾಖಲಾಗಿದ್ದ. ಅಲ್ಲಿ ಆತನಿಗೆ ಮಂಕಿಪಾಕ್ಸ್ ಇರುವುದು ಕಂಡುಬಂದಿದೆ. ಆತ ಇತ್ತೀಚೆಗೆ ಹಿಮಾಚಲ ಪ್ರದೇಶದಿಂದ ಹಿಂದಿರುಗಿದ್ದ ಎನ್ನಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ‘ಜೈ ಶ್ರೀರಾಮ್’ ಹೇಳದ ಹುಡುಗನ ಮೇಲೆ ಕಿಡಿಗೇಡಿಗಳಿಂದ ಹಲ್ಲೆ

    ‘ಜೈ ಶ್ರೀರಾಮ್’ ಹೇಳದ ಹುಡುಗನ ಮೇಲೆ ಕಿಡಿಗೇಡಿಗಳಿಂದ ಹಲ್ಲೆ

    ಹೈದರಬಾದ್: ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗದೇ ಇದ್ದಿದ್ದಕ್ಕೆ ಹುಡುಗನೊಬ್ಬನ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿರುವ ಘಟನೆ ಹೈದರಾಬಾದ್‍ನ ಓಲ್ಡ್ ಸಿಟಿಯ ಚಾರ್ಮಹಲ್ ಪ್ರದೇಶದಲ್ಲಿ ನಡೆದಿದೆ.

    ಹುಸೇನಿ ಆಲಂ ನಿವಾಸಿಯಾದ 17 ವರ್ಷದ ಹುಡುಗ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವಾನಾಗಿದ್ದು, ಮನೆಗೆ ಹಿಂತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಚಾರ್ಮಿನಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಶಾದ್ ಕೆಫೆ ಹುಸೇನಿ ಆಲಂನಿಂದ ಬೋನಾಲು ಮೆರವಣಿಗೆ ಸಾಗುತ್ತಿತ್ತು. ಈ ವೇಳೆ ಏಕಾಏಕಿ ದುಷ್ಕರ್ಮಿಗಳ ಗುಂಪೊಂದು ಹುಡುಗನನ್ನು ತಡೆದು ಹಣೆಗೆ ತಿಲಕವಿಟ್ಟು ಜೈ ಶ್ರೀರಾಮ್ ಎಂದು ಕೂಗುವಂತೆ ಒತ್ತಾಯಿಸಿದ್ದಾರೆ. ಆಗ ಘೋಷಣೆ ಕೂಗಲು ಹುಡುಗ ನಿರಾಕರಿಸಿದ್ದರಿಂದ ಹಿಗ್ಗಾಮುಗ್ಗ ಥಳಿಸಿದ್ದಾರೆ ಎಂದು ಹುಡುಗ ಆರೋಪಿಸಿದ್ದಾನೆ. ಇದನ್ನೂ ಓದಿ: ಹೈಕಮಾಂಡ್ ಅಂಗಳಕ್ಕೆ ಬಿಎಸ್‌ವೈ ನಿರ್ಧಾರ

    ಈ ಬಗ್ಗೆ ಬಾಲಕ ಚಾರ್ಮಿನಾರ್ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅದರಲ್ಲಿಯೂ ಪ್ರಮುಖ ಆರೋಪಿಯನ್ನು ರೂಪೇಶ್ ಶರ್ಮಾ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಇಬ್ಬರು ಮಕ್ಕಳಲ್ಲಿ ಕಾಣಿಸಿಕೊಂಡ ಮಂಕಿಪಾಕ್ಸ್ – ಈವರೆಗೆ 2,500ಕ್ಕೂ ಹೆಚ್ಚು ಕೇಸ್ ದಾಖಲು

    Live Tv
    [brid partner=56869869 player=32851 video=960834 autoplay=true]

  • ಮಾಧ್ಯಮ ಪ್ರತಿನಿಧಿಗಳಿಗೆ ಕ್ಷಮೆ ಕೇಳಿದ ಕಿಚ್ಚ ಸುದೀಪ್

    ಮಾಧ್ಯಮ ಪ್ರತಿನಿಧಿಗಳಿಗೆ ಕ್ಷಮೆ ಕೇಳಿದ ಕಿಚ್ಚ ಸುದೀಪ್

    ಅಂದುಕೊಂಡಂತೆ ಆಗಿದ್ದರೆ, ಇಂದಿನಿಂದ ಕಿಚ್ಚ ಸುದೀಪ್ ಚೆನ್ನೈ, ಕೊಚ್ಚಿ ಮತ್ತು ಹೈದರಾಬಾದ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಿತ್ತು. ವಿಕ್ರಾಂತ್ ರೋಣ ಸಿನಿಮಾಗಾಗಿ ಹಮ್ಮಿಕೊಂಡಿದ್ದ ಈ ಮಾಧ್ಯಮ ಗೋಷ್ಠಿಯಲ್ಲಿ ಕಿಚ್ಚನ ಎದುರುಗೊಳ್ಳಲು ಮಾಧ್ಯಮ ಪ್ರತಿನಿಧಿಗಳು ಸಿದ್ಧರಾಗಿದ್ದಾರೆ. ಆದರೆ, ನಿನ್ನೆ ಸುದೀಪ್ ಅವರಿಗೆ ಜ್ವರ ಕಾಣಿಸಿಕೊಂಡಿದೆ. ಹಾಗಾಗಿ ಪತ್ರಿಕಾ ಗೋಷ್ಠಿಗಳನ್ನು ರದ್ದು ಮಾಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳಿಗೆ ಟ್ವೀಟ್ ಮೂಲಕ ಕ್ಷಮೆ ಯಾಚಿಸಿದ್ದಾರೆ.

    ಪತ್ರಿಕಾಗೋಷ್ಠಿಯನ್ನು ರದ್ದುಗೊಳಿಸಿದ್ದಕ್ಕೆ ಕೊಚ್ಚಿ, ಚೆನ್ನೈ ಮತ್ತು ಹೈದರಾಬಾದ್ ಮಾಧ್ಯಮದ ಗೆಳೆಯರಿಗೆ ಕ್ಷಮೆ ಕೇಳುತ್ತೇನೆ. ಹುಷಾರಿಲ್ಲದ ಕಾರಣದಿಂದಾಗಿ ನನಗೆ ಪ್ರಯಾಣ ಮಾಡುವುದು  ಕಷ್ಟಸಾಧ್ಯ. ಹಾಗಾಗಿ ಬರಲಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಮತ್ತೆ ದಿನಾಂಕ ನಿಗದಿಪಡಿಸಿ, ನಿಮ್ಮೊಂದಿಗೆ ಮಾತನಾಡಲು ಉತ್ಸುಕನಾಗಿದ್ದೇನೆ. ಆದಷ್ಟು ಬೇಗ ಸಿಗೋಣ ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:ಮಗನ ಜೊತೆ ಮೊದಲ ಬಾರಿಗೆ ರೀಲ್ಸ್ ಮಾಡಿದ ಸಂಜನಾ ಗಲ್ರಾನಿ

    ನಿನ್ನೆ ಸುದೀಪ್ ಅವರಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು ಸುದ್ದಿ ಆಗಿತ್ತು. ತಕ್ಷಣವೇ ವಿಕ್ರಾಂತ್ ರೋಣ ಸಿನಿಮಾ ನಿರ್ಮಾಪಕ ಜಾಕ್ ಮಂಜು, ಈ ಕುರಿತು ಸ್ಪಷ್ಟನೆ ನೀಡಿ, ಅವರಿಗೆ ಜ್ವರ ಬಂದಿದೆ ಅಷ್ಟೇ ಕೋವಿಡ್ ಸೋಂಕು ತಗುಲಿಲ್ಲ ಎಂದು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದರು. ಬೇಗ ಚೇತರಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದರು. ಇದೀಗ ಕಿಚ್ಚನ ಆರೋಗ್ಯ ಸುಧಾರಿಸುತ್ತಿದ್ದು, ಮತ್ತೆ ಅತೀ ಶೀಘ್ರದಲ್ಲೇ ಸಿನಿಮಾ ಪ್ರಚಾರದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೈದರಾಬಾದ್‍ಗೆ ಬರುತ್ತಿದ್ದ ಇಂಡಿಗೋ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

    ಹೈದರಾಬಾದ್‍ಗೆ ಬರುತ್ತಿದ್ದ ಇಂಡಿಗೋ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

    ಇಸ್ಲಾಮಾಬಾದ್: ಶಾರ್ಜಾದಿಂದ ಹೈದರಾಬಾದ್‍ಗೆ ಬರುತ್ತಿದ್ದ ಇಂಡಿಗೋ ವಿಮಾನವು ತಾಂತ್ರಿಕ ದೋಷದಿಂದ ಇಂದು ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

    ಇಂಡಿಗೋ ವಿಮಾನವು ಶಾರ್ಜಾದಿಂದ ಹೊರಟಿತ್ತು. ಈ ವೇಳೆ ಪೈಲಟ್ ವಿಮಾನದಲ್ಲಿ ತಾಂತ್ರಿಕ ದೋಷ ಇರುವುದನ್ನು ಗಮನಿಸಿದರು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದಾರೆ. ಈ ವೇಳೆ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಇದನ್ನೂ ಓದಿ: ಜಾರಿದ್ರಿಂದ ದುಡ್ಡು ಕೆಳಗೆ ಬಿತ್ತು- ಸಿದ್ದರಾಮಯ್ಯರ ಕ್ಷಮೆ ಕೋರಿದ ಮುಸ್ಲಿಂ ಮಹಿಳೆ

    ಕಳೆದ ಎರಡು ವಾರಗಳಲ್ಲಿ ಕರಾಚಿಯಲ್ಲಿ ತುರ್ತುಭೂಸ್ಪರ್ಶ ಮಾಡಿದ 2ನೇ ಭಾರತೀಯ ಸಂಸ್ಥೆ ಇದಾಗಿದೆ. ಈ ತಿಂಗಳ ಆರಂಭದಲ್ಲಿ ದೆಹಲಿಯಿಂದ ದುಬೈಗೆ ಹೋಗುತ್ತಿದ್ದ ಸ್ಪೈಸ್ ಜೆಟ್ ವಿಮಾನವು ತಾಂತ್ರಿಕ ಕಾರಣದಿಂದಾಗಿ ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. 138 ಪ್ರಯಾಣಿಕರು ನಂತರ ಭಾರತದಿಂದ ಕಳುಹಿಸಲಾದ ಬದಲಿ ವಿಮಾನದಲ್ಲಿ ದುಬೈಗೆ ತೆರಳಿದರು.ಇದನ್ನೂ ಓದಿ:  ಬೆಂಗಳೂರಲ್ಲಿ ಉಚಿತ ಬೈಕ್ ಅಂಬುಲೆನ್ಸ್ – 5 ತಿಂಗಳಿನಿಂದ ವ್ಯಕ್ತಿಯಿಂದ ಫ್ರೀ ಸರ್ವೀಸ್

    Live Tv
    [brid partner=56869869 player=32851 video=960834 autoplay=true]

  • 30 ನಿಮಿಷದಲ್ಲಿ ಬಾಹುಬಲಿ ಥಾಲಿ ಖಾಲಿ ಮಾಡಿ  – 1 ಲಕ್ಷ ರೂ. ಗೆಲ್ಲಿ

    30 ನಿಮಿಷದಲ್ಲಿ ಬಾಹುಬಲಿ ಥಾಲಿ ಖಾಲಿ ಮಾಡಿ – 1 ಲಕ್ಷ ರೂ. ಗೆಲ್ಲಿ

    ಹೈದರಾಬಾದ್: ಫುಡ್ ಪ್ರಿಯರಿಗೆ ಹೈದರಾಬಾದ್ ರೆಸ್ಟೋರೆಂಟ್‍ವೊಂದು ಹೊಸ ಚಾಲೆಂಜ್ ನೀಡಿದೆ. ಹೌದು, 30 ನಿಮಿಷದಲ್ಲಿ ಯಾರಾದರೂ ‘ಬಾಹುಬಲಿ ಥಾಲಿ’ ತಿಂದು ಮುಗಿಸಿದರೆ, ಅವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದೆ.

    ನಗರದ ಪ್ರಸಿದ್ಧ ರೆಸ್ಟೋರೆಂಟ್‍ಗಳಲ್ಲಿ ಒಂದಾದ ‘ನಾಯ್ಡು ಗರಿ ಕುಂದಾ ಬಿರಿಯಾನಿ’ಯು ಸಸ್ಯಾಹಾರಿ ಮತ್ತು ಮಾಂಸಾಹಾರಿಗಳಿಗೆ 30 ಕ್ಕೂ ಹೆಚ್ಚು ಐಟಂ ಇರುವ ಬಾಹುಬಲಿ ಥಾಲಿಯನ್ನು ನೀಡುತ್ತದೆ.  ಇದನ್ನೂ ಓದಿ: ಇನ್ಮುಂದೆ ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವೀಡಿಯೋ ಮಾಡುವಂತಿಲ್ಲ

    ಈ ಕುರಿತಂತೆ ಪ್ರತಿಕ್ರಿಯಿಸಿರುವ ರೆಸ್ಟೋರೆಂಟ್‍ನ ಸಿಬ್ಬಂದಿ ಕೀರ್ತಿ ಅವರು, ಬಾಹುಬಲಿ ಥಾಲಿ ಇಲ್ಲಿ ಬಹಳ ಫೇಮಸ್ ಆಗಿದ್ದು, ನಾವು ಥಾಲಿಯಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಸ್ಟಾರ್ಟರ್‌ಗಳು, ಮಾಂಸಾಹಾರಿ ಬಿರಿಯಾನಿ, ಫ್ರೈಡ್ ರೈಸ್ ಮತ್ತು ಕೂಲ್ ಡ್ರಿಂಕ್ಸ್‌ಗಳನ್ನು ಒಳಗೊಂಡಂತೆ 30ಕ್ಕೂ ಹೆಚ್ಚು ಐಟಂಗಳನ್ನು ಜೋಡಿಸಿ ನೀಡುತ್ತೇವೆ. ಇದರ ಹಿಂದಿನ ಉದ್ದೇಶವೆಂದರೆ ಕೆಲವರು ಕಡಿಮೆ ಫುಡ್ ಐಟಂಗಳನ್ನು ಮಾತ್ರ ಇಷ್ಟಪಡುತ್ತಾರೆ. ಆದರೆ ರೆಸ್ಟೋರೆಂಟ್‍ಗೆ ಬರುವ ಪ್ರತಿಯೊಬ್ಬರು ಎಲ್ಲಾ ಫುಡ್‍ಗಳನ್ನು ಟೆಸ್ಟ್ ಮಾಡಬೇಕು ಎಂಬುವುದೇ ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಲಿಪ್‍ಸ್ಟಿಕ್, ಕಾಸ್ಟ್ಲಿ ಮೊಬೈಲ್ ತಗೋತಿರಾ, ಫೀಸ್ ಕಟ್ಟೋಕೆ ಆಗಲ್ವಾ?- ವಿವಿ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿನಿಯರು

    ಈ ರೆಸ್ಟೋರೆಂಟ್‍ನಲ್ಲಿ ಒಂದು ಥಾಲಿಯ ಬೆಲೆ 1,800 ರೂ. ಎಂದು ಅಂದಾಜಿಸಲಾಗಿದೆ. ಕುಕಟ್‍ಪಲ್ಲಿ ಹೌಸಿಂಗ್ ಬೋರ್ಡ್ ಕಾಲೋನಿ (ಕೆಪಿಎಚ್‍ಬಿ) ಶಾಖೆಯಲಿ ಹೊಸದಾಗಿ ತೆರೆಯಲಾಗಿರುವ ಈ ರೆಸ್ಟೋರೆಂಟ್‍ನಲ್ಲಿ ಬಾಹುಬಾಲಿ ಥಾಲಿ ಚಾಲೆಂಜ್ ಅನ್ನು ಇಲ್ಲಿಯವರೆಗೂ ಸುಮಾರು 3,000 ಕ್ಕೂ ಹೆಚ್ಚು ಗ್ರಾಹಕರು ಪ್ರಯತ್ನಿಸಿದ್ದು, ಅವರಲ್ಲಿ ಇಬ್ಬರು ಮಾತ್ರ ತಲಾ 1 ಲಕ್ಷ ನಗದು ಬಹುಮಾನವನ್ನು ಗೆದ್ದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಭಾರತದ ಮುಸ್ಲಿಮರು ದೇಶದ ನಿವಾಸಿಗಳಲ್ಲವೇ: ಓವೈಸಿ ಪ್ರಶ್ನೆ

    ಭಾರತದ ಮುಸ್ಲಿಮರು ದೇಶದ ನಿವಾಸಿಗಳಲ್ಲವೇ: ಓವೈಸಿ ಪ್ರಶ್ನೆ

    ಹೈದರಾಬಾದ್: ಭಾರತದ ಮುಸ್ಲಿಮರು ದೇಶದ ನಿವಾಸಿಗಳಲ್ಲವೇ ಎಂದು ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್‌ ಓವೈಸಿ ಪ್ರಶ್ನಿಸಿದ್ದಾರೆ.

    ಜನಸಂಖ್ಯಾ ಏರಿಕೆ ಕುರಿತು ಹೈದರಾಬಾದ್‌ನಲ್ಲಿ ಮಾತನಾಡಿದ ಅವರು, ನಾವು ವಾಸ್ತವವನ್ನು ಗಮನಿಸಿದರೆ, ಸ್ಥಳೀಯರು ಕೇವಲ ಬುಡಕಟ್ಟು ಮತ್ತು ದ್ರಾವಿಡ ಜನರು ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಷ್ಟ್ರ ಲಾಂಛನಕ್ಕೆ ಅವಮಾನ, ಗಾಂಧಿಯಿಂದ ಗೋಡ್ಸೆಯವರೆಗೆ – ಮೋದಿ ವಿರುದ್ಧ ಕಿಡಿ

    ಜನಸಂಖ್ಯೆ ನಿಯಂತ್ರಣಕ್ಕೆ ದೇಶದಲ್ಲಿ ಯಾವುದೇ ಕಾನೂನು ಅಗತ್ಯವಿಲ್ಲ ಎಂದು ಸ್ವತಃ ಆರೋಗ್ಯ ಸಚಿವರು ಹೇಳಿದ್ದಾರೆ. ಹೆಚ್ಚು ಗರ್ಭನಿರೋಧಕ ಕ್ರಮಗಳನ್ನು ಅನುಸರಿಸುತ್ತಿರುವವರು ಮುಸ್ಲಿಮರು. 2016 ರಲ್ಲಿ 2.6 ರಷ್ಟಿದ್ದ ಒಟ್ಟು ಫಲವಂತಿಕೆ ದರ ಈಗ 2.3 ಆಗಿದೆ ಎಂದು ತಿಳಿಸಿದ್ದಾರೆ.

    ವಿಶ್ವಸಂಸ್ಥೆ ಬಿಡುಗಡೆ ಮಾಡಿದ ಜನಸಂಖ್ಯಾ ವರದಿಯನ್ನು ಅಸಾದುದ್ದೀನ್‌ ಓವೈಸಿ ವಿರೋಧಿಸಿದ್ದಾರೆ. ಜನಸಂಖ್ಯಾ ಸ್ಫೋಟ ಕುರಿತು ಪ್ರತಿಕ್ರಿಯಿಸಿರುವ ಅವರು, ಅದೆಲ್ಲ ಸುಳ್ಳು ಎಂದು ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ಆಫರ್‌ ಬೆನ್ನಲ್ಲೇ ದಾಖಲೆ ಪ್ರಮಾಣದಲ್ಲಿ ರಷ್ಯಾದಿಂದ ತೈಲ ಖರೀದಿಸಿದ ಭಾರತ

    Live Tv
    [brid partner=56869869 player=32851 video=960834 autoplay=true]

  • ಕೋರ್ಟ್ ನಲ್ಲಿ ಸಾಯಿಪಲ್ಲವಿಗೆ ಹಿನ್ನೆಡೆ: ವಿಚಾರಣೆಗೆ ಹಾಜರಾಗುವಂತೆ ಸೂಚನೆ

    ಕೋರ್ಟ್ ನಲ್ಲಿ ಸಾಯಿಪಲ್ಲವಿಗೆ ಹಿನ್ನೆಡೆ: ವಿಚಾರಣೆಗೆ ಹಾಜರಾಗುವಂತೆ ಸೂಚನೆ

    ಸಂದರ್ಶನವೊಂದರಲ್ಲಿ ಕಾಶ್ಮೀರ ಪಂಡಿತರ ಹತ್ಯೆಯನ್ನು ಗೋವು ಹತ್ಯೆಯ ಹಂತಕರಿಗೆ ಹೋಲಿಸಿದ್ದ ಸಾಯಿ ಪಲ್ಲವಿಯ ವಿರುದ್ಧ ಹಲವು ಕಡೆ ದೂರು ದಾಖಲಾಗಿತ್ತು. ಹಾಗೆಯೇ ಹೈದರಾಬಾದ್ ನಲ್ಲೂ ದೂರು ದಾಖಲಾಗಿತ್ತು. ಹಾಗಾಗಿ ವಿಚಾರಣೆಗೆ ಹಾಜರಾಗುವಂತೆ ಸಾಯಿ ಪಲ್ಲವಿಗೆ ನೋಟಿಸ್ ಜಾರಿ ಮಾಡಿದ್ದರು. ಅದನ್ನು ರದ್ದುಗೊಳಿಸುವಂತೆ ಸಾಯಿ ಪಲ್ಲವಿ ಕೋರ್ಟ್ ಮೆಟ್ಟಿಲೇರಿದ್ದರು. ಸಾಯಿ ಪಲ್ಲವಿಯ ಮನವಿಯನ್ನು ತೆಲಂಗಾಣ ಹೈಕೋರ್ಟ್ ಕೋರ್ಟ್ ತಿರಸ್ಕರಿಸಿದೆ.

    ಹೈದರಾಬಾದ್ ಸುಲ್ತಾನ್ ಬಜಾರ್ ಸರ್ಕಲ್ ಇನ್ಸ್ಪೆಕ್ಟರ್ ಕೊಟ್ಟಿರುವ ನೋಟಿಸ್ ಅನ್ನು ರದ್ದುಗೊಳಿಸುವಂತೆ ಸಾಯಿ ಪಲ್ಲವಿಯ ಮನವಿಯನ್ನು ತಿರಸ್ಕರಿಸಿರುವ ನ್ಯಾಯಮೂರ್ತಿ ಕನ್ನೆಗಂಟಿ ಲಲಿತಾ, ‘ಅರ್ಜಿದಾರರು ಅಪರಾಧದ ಕುರಿತು ನಿರ್ದಿಷ್ಟಪಡಿಸದ ದುರುದ್ದೇಶಪೂರಿತ ಅರ್ಜಿಯ ಆಧಾರದ ಮೇಲೆ ದೂಷಾರೋಪಣೆಗಾಗಿ ನೋಟಿಸ್ ನೀಡಲಾಗಿದೆ. ಈ ಕುರಿತು ಸತ್ಯಾಸತ್ಯತೆ ಅರಿವುದಕ್ಕಾಗಿ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸೂಚಿಸಿದೆ. ಇದನ್ನೂ ಓದಿ:ಪೂಲನ್ ದೇವಿ ಬದುಕಿಗೆ ನಿರ್ದೇಶಕ ರಾಜಗುರು ಅವರ ಹೊಸ ಸ್ಪರ್ಶ

    ಹೈದರಾಬಾದ್ ಬಜರಂಗದಳದ ಸದಸ್ಯ ಅಖಿಲ್ ಎನ್ನುವವರು ಸಾಯಿ ಪಲ್ಲವಿಯನ್ನು ವಿಚಾರಣೆ ನಡೆಸುವಂತೆ ಸುಲ್ತಾನ್ ಬಜಾರ್ ಸರ್ಕಲ್ ಇನ್ಸೆಪೆಕ್ಟರ್ ಗೆ ದೂರು ನೀಡಿದ್ದರು. ಅಲ್ಲದೇ, ಇನ್ನೂ ಹಲವು ಕಡೆ ದೂರುಗಳು ದಾಖಲಾಗಿದ್ದವು. ಹಾಗಾಗಿ ಸಾಯಿ ಪಲ್ಲವಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಈ ಕುರಿತು ಸಾಯಿ ಪಲ್ಲವಿ ಸ್ಪಷ್ಟನೆ ಕೊಟ್ಟರೂ ದೂರುಗಳು ಮಾತ್ರ ನಿಂತಿರಲಿಲ್ಲ.

    Live Tv
    [brid partner=56869869 player=32851 video=960834 autoplay=true]