Tag: Hyderabad

  • 3 KG ಚಿನ್ನವನ್ನು ಒಳ ಉಡುಪಿನಲ್ಲಿಟ್ಟು ಸಾಗಿಸ್ತಿದ್ದ ಮಹಿಳೆಯರು ಅರೆಸ್ಟ್

    3 KG ಚಿನ್ನವನ್ನು ಒಳ ಉಡುಪಿನಲ್ಲಿಟ್ಟು ಸಾಗಿಸ್ತಿದ್ದ ಮಹಿಳೆಯರು ಅರೆಸ್ಟ್

    ಹೈದರಾಬಾದ್: ತಮ್ಮ ಒಳ ಉಡುಪುಗಳಲ್ಲಿ ಸುಮಾರು 1.72 ಕೋಟಿ ಮೌಲ್ಯದ ಚಿನ್ನ (Gold) ಸಾಗಿಸುತ್ತಿದ್ದ ಮೂವರು ಮಹಿಳೆಯರು (Womens) ಹಾಗೂ ಇಬ್ಬರು ಪುರುಷರನ್ನು ಹೈದರಾಬಾದ್ ಕಸ್ಟಮ್ಸ್ ಅಧಿಕಾರಿಗಳು (Customs Officers) ಬಂಧಿಸಿದ್ದಾರೆ.

    ದುಬೈನಿಂದ ಬಂದ ಮಹಿಳೆಯರಿಬ್ಬರು ತಮ್ಮ ಒಳಉಡುಪು ಹಾಗೂ ಹೇರ್‌ಬ್ಯಾಂಡ್‌ಗಳಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ 3.283 ಕೆಜಿ ಚಿನ್ನವನ್ನು ಹೈದರಾಬಾದ್ (Hyderabad) ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದರ ಒಟ್ಟು ಮೌಲ್ಯ 1.75 ಕೋಟಿ ಮೌಲ್ಯ ಎಂದು ಅಂದಾಜಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ J9-403 ವಿಮಾನದಲ್ಲಿ ಕುವೈತ್‌ನಿಂದ ಚಿನ್ನ ಸಾಗಿಸುತ್ತಿದ್ದ ಇಬ್ಬರು ಪುರುಷರನ್ನು ಬಂಧಿಸಿದ್ದು, ಅವರಿಂದ 855 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಮೇರೆಗೆ ತೀವ್ರ ತಪಾಸಣೆ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಗೃಹಿಣಿ ಸಾವು

    ಮಾಹಿತಿ ಪ್ರಕಾರ, ದುಬೈನಿಂದ ಬಂದ ಮಹಿಳಾ ಪ್ರಯಾಣಿಕರು ತಮ್ಮ ಹೇರ್‌ಬ್ಯಾಂಡ್ ನಲ್ಲಿ 234 ಗ್ರಾಂ ಚಿನ್ನ ಬಚ್ಚಿಟ್ಟಿದ್ದರು. ಅವರ ಲಗೇಜ್ ತಪಾಸಣೆಗೆ ಒಳಪಡಿಸಿದಾಗ ತಮ್ಮ ಒಳಉಡುಪಿನಲ್ಲೂ ಚಿನ್ನವನ್ನು ಬಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: `ಗಂಧದಗುಡಿ’ ಪ್ರೀ ರಿಲೀಸ್ ಇವೆಂಟ್‌ಗೆ ಭರ್ಜರಿ ತಯಾರಿ

    ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (International Airport) ಕಸ್ಟಮ್ಸ್ ಅಧಿಕಾರಿಗಳು ನಾಲ್ಕು ದಿನಗಳ ಹಿಂದೆಯಷ್ಟೇ 24 ಕ್ಯಾರೆಟ್ ಗುಣಮಟ್ಟದ 2.57 ಕೋಟಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದರು ಎಂದು ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಪವನ್ ಕಲ್ಯಾಣ್‍ಗಾಗಿ ಸಕ್ರಿಯ ರಾಜಕೀಯಕ್ಕೆ ಮೆಗಾಸ್ಟಾರ್ ಚಿರಂಜೀವಿ ಗುಡ್‍ಬೈ

    ಪವನ್ ಕಲ್ಯಾಣ್‍ಗಾಗಿ ಸಕ್ರಿಯ ರಾಜಕೀಯಕ್ಕೆ ಮೆಗಾಸ್ಟಾರ್ ಚಿರಂಜೀವಿ ಗುಡ್‍ಬೈ

    ಹೈದರಾಬಾದ್: ಜನಸೇನೆ ಪಕ್ಷವನ್ನು ಸ್ಥಾಪಿಸಿದ ತಮ್ಮ ಸಹೋದರ ಪವನ್ ಕಲ್ಯಾಣ್ (Pawan Kalyan) ಪ್ರಬಲ ನಾಯಕರಾಗಿ ಹೊರಹೊಮ್ಮಲು ಸಕ್ರಿಯ ರಾಜಕಾರಣದಿಂದ ತಾವು ಹಿಂದೆ ಸರಿಯುವುದಾಗಿ ಮೆಗಾಸ್ಟಾರ್ ಕೆ.ಚಿರಂಜೀವಿ (Chiranjeevi) ಹೇಳಿದ್ದಾರೆ.

    ಹೈದರಾಬಾದ್‍ನಲ್ಲಿ ಚಲನಚಿತ್ರ ಸಭೆವೊಂದರಲ್ಲಿ ಮಾತನಾಡಿದ ಚಿರಂಜೀವಿ, ಭವಿಷ್ಯದಲ್ಲಿ ರಾಜಕೀಯ ಚಟುವಟಿಕೆಗಳಲ್ಲಿ ತಮ್ಮ ಸಹೋದರನಿಗೆ ಸಹಾಯ ಮಾಡಬಹುದು. ಪವನ್ ಕಲ್ಯಾಣ್ ಬದ್ಧತೆ ಹೊಂದಿರುವ ಪ್ರಾಮಾಣಿಕ ನಾಯಕ, ಅಂತಹ ನಾಯಕರು ನಮಗೆ ಬೇಕು. ಭವಿಷ್ಯದಲ್ಲಿ ಜನರು ಅವರನ್ನು ತಮ್ಮ ನಾಯಕನನ್ನಾಗಿ ಮಾಡಬಹುದು ಎಂದು ಚಿರಂಜೀವಿ ಹೇಳಿದರು. ಜನಸೇನೆ ಪಕ್ಷಕ್ಕೆ ತಮ್ಮ ಬೆಂಬಲದ ಬಗ್ಗೆ ನೇರ ಉತ್ತರವನ್ನು ಬದಿಗಿಟ್ಟ ಅವರು, ಭವಿಷ್ಯದಲ್ಲಿ ತಮ್ಮ ಸಹೋದರ ಮತ್ತು ಅವರ ಪಕ್ಷವನ್ನು ಬೆಂಬಲಿಸಬಹುದು ಎಂದು ಹೇಳಿದರು. ಇದನ್ನೂ ಓದಿ: ಕಾಂತಾರ ಕಾಳಗ: ಜಾಲತಾಣಗಳಲ್ಲಿ ಸೈದ್ಧಾಂತಿಕ, ರಾಜಕೀಯ, ಪ್ರಾದೇಶಿಕ ಸೊಗಡಿನ ಚರ್ಚೆ

    ಏಪ್ರಿಲ್ 2018ರಲ್ಲಿ ರಾಜ್ಯಸಭಾ ಸದಸ್ಯರಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಿದ ನಂತರ ಚಿರಂಜೀವಿ ತಮ್ಮ ರಾಜಕೀಯ ನಡೆಗಳ ಬಗ್ಗೆ ಮೌನವಾಗಿದ್ದಾರೆ. ಅವರು ಸಂಸತ್ತಿನ ಮೇಲ್ಮನೆಯಿಂದ ನಿವೃತ್ತರಾದ ನಂತರ ಅವರನ್ನು ಸಂಸದ ಮತ್ತು ಕೇಂದ್ರ ಸಚಿವರನ್ನಾಗಿ ಮಾಡಿದ ಕಾಂಗ್ರೆಸ್‍ನಿಂದ ದೂರ ಉಳಿದಿದ್ದಾರೆ. ವೈಎಸ್‍ಆರ್ ಕಾಂಗ್ರೆಸ್‍ನಿಂದ (YSR Congress) ಮತ್ತೊಂದು ಅವಧಿಗೆ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗುತ್ತದೆ ಎಂಬ ಊಹಾಪೋಹಗಳಿದ್ದವು. ಇದನ್ನೂ ಓದಿ: ರಮ್ಯಾ ನಟಿಸಿ, ನಿರ್ಮಾಣ ಮಾಡುತ್ತಿರುವ ಟೀಮ್ ನಲ್ಲಿ ಇವರೆಲ್ಲ ಇದ್ದಾರೆ

    ನನ್ನ ಗಮನ ಈಗ ಚಿತ್ರಗಳ ಮೇಲೆ:
    ಜುಲೈ 4 ರಂದು ಭೀಮಾವರಂನಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೊಂದಿಗೆ ವೇದಿಕೆ ಹಂಚಿಕೊಳ್ಳಲು ಚಿರಂಜೀವಿ ಅವರನ್ನು ಆಹ್ವಾನಿಸಿದ ನಂತರ ಅವರು ಬಿಜೆಪಿಯೊಂದಿಗೆ ಸಕ್ರಿಯ ರಾಜಕೀಯಕ್ಕೆ ಮರಳುತ್ತಾರೆ ಎಂಬ ಮಾತುಕತೆಯೂ ಇತ್ತು. ಈ ಊಹಾಪೋಹಗಳಿಗೆ ತೆರೆ ಎಳೆದ ಚಿರಂಜೀವಿ, ತನ್ನ ಸಹೋದರನ ಬೆಳವಣಿಗೆಗೆ ಅವಕಾಶ ಮಾಡಿಕೊಡಲು ಸಕ್ರಿಯ ರಾಜಕಾರಣದಿಂದ ಹೊರಗುಳಿಯಲು ಮುಂದಾಗಿದ್ದೇನೆ ಎಂದು ಹೇಳಿದರು. ಆದಾಗ್ಯೂ, ಭವಿಷ್ಯದಲ್ಲಿ ತನ್ನ ಸಹೋದರನಿಗೆ ಸಹಾಯ ಮಾಡಲು ಸಕ್ರಿಯ ರಾಜಕೀಯಕ್ಕೆ ಮರಳುವ ಸಾಧ್ಯತೆಯನ್ನು ಅವರು ತಳ್ಳಿಹಾಕಲಿಲ್ಲ. ತಾನು ಜನಸೇನೆಯ ಭಾಗವಲ್ಲ, ತೆಲಂಗಾಣ ಅಥವಾ ಆಂಧ್ರಪ್ರದೇಶದಲ್ಲಿ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ಅವರು ಹೇಳಿದರು. ಈಗ ನನ್ನ ಗಮನ ಸಿನಿಮಾಗಳ ಮೇಲೆ ಇದೆ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಿಎಫ್‌ಐ ನಿಷೇಧವನ್ನು ನಾನು ಬೆಂಬಲಿಸುವುದಿಲ್ಲ: ಅಸಾದುದ್ದೀನ್‌ ಓವೈಸಿ

    ಪಿಎಫ್‌ಐ ನಿಷೇಧವನ್ನು ನಾನು ಬೆಂಬಲಿಸುವುದಿಲ್ಲ: ಅಸಾದುದ್ದೀನ್‌ ಓವೈಸಿ

    ಹೈದರಾಬಾದ್: ಕೇಂದ್ರ ಸರ್ಕಾರವು ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI) ಸಂಘಟನೆಯನ್ನು ನಿಷೇಧಿಸಿರುವುದಕ್ಕೆ ಸಂಸದ ಹಾಗೂ ಎಐಎಂಐಎಂ (AIMIM) ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ (Asaduddin Owaisi) ವಿರೋಧ ವ್ಯಕ್ತಪಡಿಸಿದ್ದಾರೆ. ಸಂಘಟನೆ ನಿಷೇಧವನ್ನು ನಾನು ಬೆಂಬಲಿಸುವುದಿಲ್ಲ ಎಂದು ತಿಳಿಸಿದ್ದಾರೆ.

    ಪಿಎಫ್‌ಐ ನಿಲುವಿಗೆ ನನ್ನ ವಿರೋಧವಿದೆ. ಪ್ರಜಾಪ್ರಭುತ್ವದ ವಿಧಾನವನ್ನು ನಾನು ಬೆಂಬಲಿಸುತ್ತೇನೆ. ಆದರೆ ಸಂಘಟನೆ ಮೇಲಿನ ನಿಷೇಧವನ್ನು ನಾನು ಬೆಂಬಲಿಸುವುದಿಲ್ಲ ಎಂದು ಓವೈಸಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಉಗ್ರ ಸಂಘಟನೆಗಳ ಜೊತೆ ಲಿಂಕ್‌ – ಈ ಕ್ಷಣದಿಂದಲೇ PFI, 8 ಅಂಗ ಸಂಸ್ಥೆಗಳು ಬ್ಯಾನ್‌

    ಈ ರೀತಿಯ ಕಠೋರವಾದ ನಿಷೇಧವು ಅಪಾಯಕಾರಿ. ಏಕೆಂದರೆ ತನ್ನ ಮನಸ್ಸಿನಲ್ಲಿರುವುದನ್ನು ಹೇಳಲು ಬಯಸುವ ಯಾವುದೇ ಮುಸಲ್ಮಾನನ ಮೇಲೆ ನಿಷೇಧ ವಿಧಿಸಿದಂತಾಗುತ್ತದೆ. ದೇಶದಲ್ಲಿ ಪ್ರತಿಯೊಬ್ಬ ಮುಸ್ಲಿಂ ಯುವಕರನ್ನು ಯುಎಪಿಎ ಅಡಿಯಲ್ಲಿ ಪಿಎಫ್‌ಐ ಕರಪತ್ರದೊಂದಿಗೆ ಬಂಧಿಸಬಹುದು ಎಂದು ಹೇಳಿದ್ದಾರೆ.

    ಮಂಗಳವಾರ ತಡರಾತ್ರಿ ಹೊರಡಿಸಿದ ಅಧಿಸೂಚನೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ಪಿಎಫ್‌ಐ ಅನ್ನು ನಿಷೇಧಿಸಿದೆ. ಕೇಂದ್ರ ಸರ್ಕಾರವು ಇಸ್ಲಾಮಿ ಸಂಘಟನೆ ಮತ್ತು ಅದರ ಅಂಗಸಂಸ್ಥೆಗಳು ವಿಧ್ವಂಸಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ ಎಂದು ಅಭಿಪ್ರಾಯಪಟ್ಟಿದೆ. ಕೇಂದ್ರದ ನಿಲುವಿಗೆ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಪಿಎಫ್‌ಐನಂತೆಯೇ ಆರ್‌ಎಸ್‌ಎಸ್‌ (RSS) ಅನ್ನು ಕೂಡ ಬ್ಯಾನ್‌ ಮಾಡಬೇಕು ಎಂದು ಅನೇಕ ಕಾಂಗ್ರೆಸ್‌ (Congress) ಸೇರಿದಂತೆ ವಿಪಕ್ಷಗಳು ಹಾಗೂ ಸಂಘಟನೆಗಳು ಒತ್ತಾಯಿಸಿವೆ. ಇದನ್ನೂ ಓದಿ: ಪಿಎಫ್‌ಐ ನಂತೆಯೇ RSSನ್ನೂ ಬ್ಯಾನ್‌ ಮಾಡಿ: ಕೇರಳ ವಿಪಕ್ಷಗಳ ಒತ್ತಾಯ

    Live Tv
    [brid partner=56869869 player=32851 video=960834 autoplay=true]

  • ದೀಪಿಕಾ ಪಡುಕೋಣೆ ಆರೋಗ್ಯದಲ್ಲಿ ಏರುಪೇರು: ಪ್ರತಿಷ್ಠಿತ ಆಸ್ಪತ್ರೆಗೆ ದಾಖಲು

    ದೀಪಿಕಾ ಪಡುಕೋಣೆ ಆರೋಗ್ಯದಲ್ಲಿ ಏರುಪೇರು: ಪ್ರತಿಷ್ಠಿತ ಆಸ್ಪತ್ರೆಗೆ ದಾಖಲು

    ಹೈದರಾಬಾದ್‌ನಲ್ಲಿ ನಡೆದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ದೀಪಿಕಾ ಪಡುಕೋಣೆಗೆ (Deepika Padukone) ಏಕಾಏಕಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೂಡಲೇ ಅವರನ್ನು ಹೈದರಾಬಾದ್ (Hyderabad)ನ ಪ್ರತಿಷ್ಠಿತ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ (hospital) ದಾಖಲಿಸಲಾಗಿದೆ. ಶೂಟಿಂಗ್ ಸೆಟ್‌ನಲ್ಲೇ ಅವರು ಅಸೌಖ್ಯದಿಂದಾಗಿ ಕುಸಿದರು ಎಂದು ಹೇಳಲಾಗುತ್ತಿದೆ. ಸುಸ್ತಿನಿಂದಾಗಿ ಸಾಕಷ್ಟು ಬಳಲಿದ್ದರಿಂದ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

    ದೀಪಿಕಾ ಆರೋಗ್ಯ ಕೈ ಕೊಡುತ್ತಿರುವುದು ಇದೇ ಮೊದಲೇನೂ ಅಲ್ಲ. ಆಗಾಗ್ಗೆ ಆಸ್ಪತ್ರೆಗೆ ದಾಖಲಾಗುತ್ತಲೇ ಇರುತ್ತಾರೆ. ಈ ಬಾರಿಯೂ ಶೂಟಿಂಗ್‌ನಲ್ಲೇ ಸುಸ್ತಾಗಿ ಕೂತಿದ್ದಾರೆ. ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆಯೇ ಹಲವಾರು ಟೆಸ್ಟ್‌ಗಳನ್ನು ಕೂಡ ಮಾಡಲಾಗಿದೆ. ಸೂಕ್ತ ಚಿಕಿತ್ಸೆ ನೀಡಲಾಗಿದೆ ಎನ್ನುವ ಮಾಹಿತಿಯೂ ಇದೆ. ಸೆಪ್ಟೆಂಬರ್ 26 ರಂದೇ ಈ ಘಟನೆ ನಡೆದಿದ್ದು, ಅವರ ಆರೋಗದ್ಯ ಬಗ್ಗೆ ಈವರೆಗೂ ಮಾಹಿತಿ ಸಿಕ್ಕಿಲ್ಲ. ಈ ಕಾರಣದಿಂದಾಗಿ ಅಭಿಮಾನಿಗಳು ಆತಂಕದಲ್ಲಿದ್ದಾರೆ. ಇದನ್ನೂ ಓದಿ: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಆಸ್ಪತ್ರೆ ದಾಖಲು: ಅಭಿಮಾನಿಗಳಿಗೆ ಹೆಚ್ಚಿದೆ ಆತಂಕ

    ಕೆಲ ದಿನಗಳ ಹಿಂದೆ ದೀಪಿಕಾ ಪಡುಕೋಣೆ ತಾಯಿ ಆಗುತ್ತಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಈ ಕಾರಣಕ್ಕಾಗಿ ಅವರು ಸುಸ್ತಾಗಿ ಕುಸಿದು ಕೂತರಾ ಎನ್ನುವ ಚರ್ಚೆ ಕೂಡ ನಡೆದಿದೆ. ದೀಪಿಕಾ ಪತಿ ರಣವೀರ್ ಸಿಂಗ್ (Ranveer Singh) ಆಗಲಿ, ಅಥವಾ ದೀಪಿಕಾ ಕುಟುಂಬವಾಗಲೇ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ದೀಪಿಕಾ ಅವರ ಆರೋಗ್ಯದ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಪ್ರತಿಷ್ಠಾಪನೆಯಾಗಿದ್ದ ದುರ್ಗಾ ದೇವಿಯ ವಿಗ್ರಹ ವಿರೂಪ – ಇಬ್ಬರು ಮಹಿಳೆಯರು ಅರೆಸ್ಟ್

    ಪ್ರತಿಷ್ಠಾಪನೆಯಾಗಿದ್ದ ದುರ್ಗಾ ದೇವಿಯ ವಿಗ್ರಹ ವಿರೂಪ – ಇಬ್ಬರು ಮಹಿಳೆಯರು ಅರೆಸ್ಟ್

    ಹೈದರಾಬಾದ್: ದುರ್ಗಾ ದೇವಿಯ ವಿಗ್ರಹವನ್ನು (Goddess Durga Idol) ವಿರೂಪಗೊಳಿಸಿದ ಇಬ್ಬರು ಮಹಿಳೆಯರನ್ನು ಬಂಧಿಸಿರುವ ಘಟನೆ ಹೈದರಾಬಾದ್‍ನಲ್ಲಿ (Hyderabad) ನಡೆದಿದೆ.

    ಇಬ್ಬರು ಮಹಿಳೆಯರು (Women) ನಗರದ ಖೈರತಾಬಾದ್ ಪ್ರದೇಶದ ದುರ್ಗಾ ಮಂಟಪಕ್ಕೆ ನುಗ್ಗಿದ್ದಾರೆ. ಆ ಮಹಿಳೆಯರಲ್ಲಿ ಒಬ್ಬಾಕೆ ಸ್ಪ್ಯಾನರ್‌ನಿಂದ ವಿಗ್ರಹದ ಮೇಲೆ ದಾಳಿ ಮಾಡಿದ್ದಾಳೆ. ಅಷ್ಟೇ ಅಲ್ಲದೇ ಆಕೆಯನ್ನು ತಡೆಯಲು ಮುಂದಾದ ಸ್ಥಳೀಯರ ಮೇಲೂ ಇಬ್ಬರು ಮಹಿಳೆಯರು ಸೇರಿ ಹಲ್ಲೆ ನಡೆಸಿದ್ದಾರೆ.

    ಘಟನೆ ವೇಳೆ ದುರ್ಗಾ ದೇವಿಯ ಪಕ್ಕದಲ್ಲಿರುವ ಸಿಂಹವನ್ನು ವಿರೂಪಗೊಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಆರೋಪಿಗಳಿಬ್ಬರನ್ನೂ ಸೈದನಾಬಾದ್ ಪೊಲೀಸರು ಬಂಧಿಸಲಾಗಿದೆ (Arrest). ಇದನ್ನೂ ಓದಿ: ಪ್ರಮೋದಾ ದೇವಿ ಮುಂದೆ ಮಂಡಿಯೂರಿ ನಮಸ್ಕರಿಸಿದ ಸುಧಾಮೂರ್ತಿ – ಫೋಟೋ ವೈರಲ್

    ಘಟನೆಗೆ ಸಂಬಂಧಿಸಿ ಕೇಂದ್ರ ವಲಯದ ಡಿಸಿಪಿ ರಾಜೇಶ್ ಚಂದ್ರ ಮಾತನಾಡಿ, ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಇಬ್ಬರು ಮಹಿಳೆಯರು ನವರಾತ್ರಿ ಪ್ರಯುಕ್ತ ಪ್ರತಿಷ್ಠಾಪಿಸಲಾಗಿದ್ದ ದುರ್ಗಾ ದೇವಿಯ ಮಂಟಪಕ್ಕೆ ನುಗ್ಗಿ ವಿಗ್ರಹವನ್ನು ವಿರೂಪಗೊಳಿಸಿದ್ದಾರೆ. ಈ ಕುರಿತು ಸ್ಥಳೀಯರಿಂದ ಕರೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಆ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ.

    ವಿಚಾರಣೆಯ ನಂತರ ಇಬ್ಬರು ಮಹಿಳೆಯರು ಮಾನಸಿಕ ಅಸ್ವಸ್ಥರಾಗಿದ್ದು, ಅವರಿಬ್ಬರಿಗೆ ನಮ್ಮ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ನಾವು ವೈದ್ಯರ ಸಹಾಯ ತೆಗೆದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕರಗಿತು ಭಾರೀ ಸಂಪತ್ತು – ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿದ ಅದಾನಿ

    Live Tv
    [brid partner=56869869 player=32851 video=960834 autoplay=true]

  • ಭಾರತ Vs ಆಸ್ಟ್ರೇಲಿಯಾ ಹೈವೋಲ್ಟೆಜ್ ಪಂದ್ಯದ ನಡುವೆ ಮೊಳಗಿತು ಜೈಶ್ರೀರಾಮ್ ಉದ್ಘೋಷ

    ಭಾರತ Vs ಆಸ್ಟ್ರೇಲಿಯಾ ಹೈವೋಲ್ಟೆಜ್ ಪಂದ್ಯದ ನಡುವೆ ಮೊಳಗಿತು ಜೈಶ್ರೀರಾಮ್ ಉದ್ಘೋಷ

    ಹೈದರಾಬಾದ್: ಭಾರತ (India) ಹಾಗೂ ಆಸ್ಟ್ರೇಲಿಯಾ (Australia) ನಡುವೆ ನಿನ್ನೆ ಹೈದರಾಬಾದ್‍ದ (Hyderabad)  ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ 3ನೇ ಟಿ20 ಪಂದ್ಯ ನಡೆಯಿತು. ಈ ವೇಳೆ ಮೈದಾನದಲ್ಲಿ ಅಭಿಮಾನಿಗಳು ಜೈಶ್ರೀರಾಮ್ (Jai Shreeram) ಎಂದು ಉದ್ಘೋಷಿಸಿ ಸಂಭ್ರಮಿಸಿದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಮೂರು ಪಂದ್ಯಗಳ ಟಿ20 (T20) ಸರಣಿಯಲ್ಲಿ ಎರಡು ತಂಡಗಳ ನಡುವೆ 1-1 ರಲ್ಲಿ ಸಮಬಲ ಕಂಡಿತ್ತು. ನಿನ್ನೆಯ ಪಂದ್ಯ ಫೈನಲ್ ಪಂದ್ಯದಂತಿತ್ತು. ಸರಣಿ ಗೆಲ್ಲುವ ತವಕದಲ್ಲಿ ಎರಡು ತಂಡಗಳು ಕಣಕ್ಕಿಳಿದಿದ್ದವು. ಹಾಗಾಗಿ ರೋಚಕ ಕದನಕ್ಕೆ ಹೈದರಾಬಾದ್ ಸಾಕ್ಷಿಯಾಗಿತ್ತು. ಅತ್ತ ಮೈದಾನಲ್ಲಿ ಆಟಗಾರರು ಆರ್ಭಟಿಸುತ್ತಿದ್ದರೆ ಇತ್ತ ಸ್ಟೇಡಿಯಂನಲ್ಲಿದ್ದ ಪ್ರೇಕ್ಷಕರು ನಿನ್ನೆ ಜೈಶ್ರೀರಾಮ್ ಎಂದು ಕೂಗುತ್ತ ರಾಮಜಪ ಮಾಡಿದ್ದಾರೆ. ಇದೀಗ ಪ್ರೇಕ್ಷಕರು ಮೈದಾನದಲ್ಲಿ ಜೈಶ್ರೀರಾಮ್ ಎಂದು ಕೂಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಪಾತ್ರವಾಗಿದೆ. ಇದನ್ನೂ ಓದಿ: ಪಂದ್ಯಗೆದ್ದ ಖುಷಿ – ರೋಹಿತ್‍ಗೆ ಹೊಡೆದು ಸಂಭ್ರಮಿಸಿದ ಕೊಹ್ಲಿ

    ರೋಚಕವಾಗಿದ್ದ ಪಂದ್ಯದಲ್ಲಿ ಭಾರತದ ಗೆಲುವಿಗೆ ಕೊನೆಯ 12 ಎಸೆತಗಳಲ್ಲಿ 21 ರನ್ ಬೇಕಾಗಿತ್ತು. 18 ಓವರ್‌ನ ಮೊದಲ ಎಸೆತವನ್ನು ಹಾರ್ದಿಕ್ ಪಾಂಡ್ಯ ಸಿಕ್ಸರ್‌ಗಟ್ಟಿದರು. ಮುಂದಿನ 5 ಎಸೆತಗಳಲ್ಲಿ ಕೊಹ್ಲಿ ಹಾಗೂ ಪಾಂಡ್ಯ 4 ರನ್ ಕಸಿದರು. ಕೊನೆಯ 6 ಎಸೆತಗಳಲ್ಲಿ ಭಾರತದ ಗೆಲುವಿಗೆ 11 ರನ್ ಬೇಕಾಗಿತ್ತು. ಡೇನಿಯಲ್ ಸ್ಯಾಮ್ ಎಸೆದ ಮೊದಲ ಎಸೆತವನ್ನು ಕೊಹ್ಲಿ ಸಿಕ್ಸರ್‌ಗಟ್ಟಿದರು. ಮರು ಎಸೆತದಲ್ಲೇ ಕೊಹ್ಲಿ ಔಟ್ ಆದರು. ನಂತರ ಕಾರ್ತಿಕ್ ಬಂದು 1 ರನ್ ಓಡಿದರು. 19ನೇ ಓವರ್‌ನ 4ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಕೊನೆಯ ಎರಡು ಎಸೆತಗಳಲ್ಲಿ ಭಾರತದ ಗೆಲುವಿಗೆ 4 ರನ್ ಬೇಕಾಗಿತ್ತು. 5ನೇ ಎಸೆತದಲ್ಲಿ ಬೌಂಡರಿ ಸಿಡಿಸಿದ ಪಾಂಡ್ಯ ಭಾರತಕ್ಕೆ ಜಯ ತಂದುಕೊಟ್ಟರು. ಇದನ್ನೂ ಓದಿ: ಟಿ20ಯಲ್ಲಿ ಕೆಟ್ಟ ಸಾಧನೆ ಮಾಡಿದ ಬುಮ್ರಾ

    https://twitter.com/MR4BJP/status/1574055053761347584

    ಆಸ್ಟ್ರೇಲಿಯಾ ನೀಡಿದ 187 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತಕ್ಕೆ ಚೇಸಿಂಗ್ ಕಿಂಗ್ ಕೊಹ್ಲಿ ಮತ್ತು ಸೂರ್ಯಕುಮಾರ್ ಸ್ಫೋಟಕ ಆಟ ನೆರವಾಯಿತು. ಅಂತಿಮ ಓವರ್ ವರೆಗೆ ರೋಚಕವಾಗಿ ಕೂಡಿದ್ದ ಪಂದ್ಯದದಲ್ಲಿ ಫೋರ್ ಹೊಡೆದು ಪಾಂಡ್ಯ ಇನ್ನೊಂದು ಎಸೆತ ಬಾಕಿ ಇರುವಂತೆ 187 ರನ್ ಸಿಡಿಸಿ ಜಯ ತಂದು ಕೊಟ್ಟರು. ಅಂತಿಮವಾಗಿ 19.5 ಓವರ್‌ಗಳ ಅಂತ್ಯಕ್ಕೆ ಭಾರತ 4 ವಿಕೆಟ್ ಕಳೆದುಕೊಂಡು 187 ರನ್‍ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿತು. ಭಾರತ ಈ ಗೆಲುವಿನೊಂದಿಗೆ ತವರಿನಲ್ಲಿ ಟಿ20 ಸರಣಿ ಗೆದ್ದುಕೊಂಡಿತು. ಜೊತೆಗೆ ಈ ವರ್ಷ ದಾಖಲೆಯ 21 ಟಿ20 ಪಂದ್ಯವನ್ನು ಗೆದ್ದು ನೂತನ ದಾಖಲೆ ಬರೆಯಿತು. ಇದನ್ನೂ ಓದಿ: ಕೊಹ್ಲಿ ಜೊತೆ ಸೂರ್ಯನ ಅಬ್ಬರ – ವಿಶ್ವಚಾಂಪಿಯನ್ನರಿಗೆ ಸೋಲು, ಭಾರತಕ್ಕೆ T20 ಸರಣಿ

    Live Tv
    [brid partner=56869869 player=32851 video=960834 autoplay=true]

  • ತಿರುಪತಿ: ಸಾಮಾನ್ಯ ಯಾತ್ರಿಗಳಿಗೆ ಗುಡ್ ‌ನ್ಯೂಸ್‌ ನೀಡಿದ ಟಿಟಿಡಿ

    ಹೈದರಾಬಾದ್‌: ಸಾಮಾನ್ಯ ಯಾತ್ರಿಗಳಿಗೆ (Common Pilgrims) ತಿರುಮಲ ತಿರುಪತಿ ದೇವಸ್ಥಾನಂ (TTD) ಮಂಡಳಿಯು ಗುಡ್‌ ನ್ಯೂಸ್‌ ನೀಡಿದೆ. ಸಾಮಾನ್ಯರಿಗೂ ವೆಂಕಟೇಶ್ವರಸ್ವಾಮಿ ದೇವರ ದರ್ಶನ ಸುಲಭವಾಗಿ ಸಿಗಲೆಂದು ಪ್ರಮುಖ ನಿರ್ಧಾರವನ್ನು ಟಿಟಿಡಿ ಕೈಗೊಂಡಿದೆ.

    ತಿರುಮಲದಲ್ಲಿ ಶನಿವಾರ ಸಭೆ ನಡೆಸಿದ ಮಂಡಳಿಯು, ಗಣ್ಯರಿಗಾಗಿ ಜಾರಿಯಲ್ಲಿದ್ದ ತಿರುಪತಿ ದೇವರ ದರ್ಶನ ಸಮಯದಲ್ಲಿ ಬದಲಾವಣೆ ಮಾಡಿದೆ. ಈವರೆಗೆ ಇದ್ದ ಬೆಳಗ್ಗೆ 5:30 ರ ಬದಲಾಗಿ ಗಣ್ಯರಿಗೆ 10 ಗಂಟೆಯಿಂದ ದರ್ಶನಕ್ಕೆ ಅವಕಾಶ ಕಲ್ಪಿಸಲು ಕ್ರಮವಹಿಸಲಾಗಿದೆ. ಗಣ್ಯರು ದರ್ಶನ ಮುಗಿಸಿ ಬರುವವರೆಗೂ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಕಾಯಬೇಕಿದ್ದ ಸಾಮಾನ್ಯ ಯಾತ್ರಾರ್ಥಿಗಳಿಗೆ ಶ್ರೀವಾರಿ ದರ್ಶನಕ್ಕೆ ಅನುವು ಮಾಡಿಕೊಡಲು ಈ ಬದಲಾವಣೆ ಮಾಡಲಾಗಿದೆ.

    ಪ್ರಸಿದ್ಧ ವೆಂಕಟೇಶ್ವರ ದೇವಸ್ಥಾನವನ್ನು ನಿರ್ವಹಿಸುವ ಟಿಟಿಡಿ ಟ್ರಸ್ಟ್ ಬೋರ್ಡ್, ತಿರುಮಲ ಬೆಟ್ಟದ ಮೇಲಿನ ವಸತಿ ಹಂಚಿಕೆ ವ್ಯವಸ್ಥೆಯನ್ನು ತಿರುಪತಿಗೆ ಸ್ಥಳಾಂತರಿಸಲು ನಿರ್ಧರಿಸಿದೆ. ಇದನ್ನೂ ಓದಿ: ತೂಕ ಇಳಿಸಿ, 10 ಲಕ್ಷ ಬಹುಮಾನ ಗೆಲ್ಲಿ – ಉದ್ಯೋಗಿಗಳಿಗೆ ಫಿಟ್‌ನೆಸ್ ಚ್ಯಾಲೆಂಜ್ ಹಾಕಿದ ಸಿಇಒ

    ಟಿಟಿಡಿ ಎಲ್ಲಾ ವರ್ಗಗಳ ಕೊಠಡಿಗಳನ್ನು ಹೊಂದಿದೆ. ಸುಮಾರು 7,500 ಘಟಕಗಳಿವೆ. ಇದು ಸೀಮಿತ ಸಂಖ್ಯೆಯ ಯಾತ್ರಿಕರ ಅಗತ್ಯಗಳನ್ನು ಮಾತ್ರ ಹೊಂದಿದೆ. ತಿರುಮಲಕ್ಕೆ ಬರುವ ಅನೇಕ ಯಾತ್ರಾರ್ಥಿಗಳು ಕೊಠಡಿ ಖಾಲಿಯಾಗಿ ತಮಗೆ ಹಂಚಿಕೆಯಾಗುವವರೆಗೂ ಗಂಟೆಗಳ ಕಾಲ ಕಾಯುವಂತಹ ಪರಿಸ್ಥಿತಿ ಇದೆ. ಅದನ್ನು ತಪ್ಪಿಸಲು ಈ ಕ್ರಮಕೈಗೊಳ್ಳಲಾಗಿದೆ.

    ದರ್ಶನದ ಸಮಯ ಹಾಗೂ ವಾಸ್ತವ್ಯದ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮೊದಲು ಪ್ರಾಯೋಗಿಕವಾಗಿ ಅಕ್ಟೋಬರ್‌ನಿಂದ ಆರಂಭಿಸಲಾಗುವುದು ಎಂದು ಟಿಟಿಡಿ ಮಂಡಳಿಯ ಅಧ್ಯಕ್ಷ ವೈ.ವಿ.ಸುಬ್ಬಾ ರೆಡ್ಡಿ ತಿಳಿಸಿದ್ದಾರೆ. ಇದನ್ನೂ ಓದಿ: 2011ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ಹೀಗಾಗಿತ್ತು, ಇದೀಗ ಮತ್ತೆ? – ಏನಿದು ಧೋನಿ ಲಾಜಿಕ್

    Live Tv
    [brid partner=56869869 player=32851 video=960834 autoplay=true]

  • ಪತಿ ಇಷ್ಟಪಟ್ಟವಳೊಂದಿಗೆ ಮದುವೆ ಮಾಡಿಸಿ ಒಂದೇ ಮನೆಯಲ್ಲಿ ಸಂಸಾರ ನಡೆಸಲು ಮುಂದಾದ ಪತ್ನಿ

    ಪತಿ ಇಷ್ಟಪಟ್ಟವಳೊಂದಿಗೆ ಮದುವೆ ಮಾಡಿಸಿ ಒಂದೇ ಮನೆಯಲ್ಲಿ ಸಂಸಾರ ನಡೆಸಲು ಮುಂದಾದ ಪತ್ನಿ

    ಹೈದರಾಬಾದ್: ಮಹಿಳೆಯೊಬ್ಬಳು ತನ್ನ ಪತಿ ಇಷ್ಟಪಟ್ಟ ಹುಡುಗಿಯೊಂದಿಗೆ ಸಾಂಪ್ರದಾಯಿಕವಾಗಿ ಆಂಧ್ರಪ್ರದೇಶದ (Andhra Pradesh) ತಿರುಪತಿಯಲ್ಲಿ (Tirupati) ಮದುವೆ ಮಾಡಿದ್ದಾರೆ.

    ತಿರುಪತಿಯ (Tirupati) ದಕ್ಕಿಲಿಯ (Dakkili ) ಅಂಬೇಡ್ಕರ್ ನಗರದ (Ambedkar Nagar) ನಿವಾಸಿ ಕಲ್ಯಾಣ್ ಯೂಟ್ಯೂಬ್ ಮತ್ತು ಶೇರ್ ಚಾಟ್‍ನಲ್ಲಿ ರೀಲ್ಸ್ ಮಾಡುವ ಮೂಲಕ ಜನಪ್ರಿಯತೆ ಗಳಿಸಿದ್ದರು. ಈ ವೇಳೆ ಅವರಿಗೆ ಕಡಪಾ ಮೂಲದ ವಿಮಲಾ ಅವರು ಪರಿಚಯವಾಗಿ ಇಬ್ಬರ ನಡುವೆ ಸ್ನೇಹ ಬೆಳೆದು ನಂತರ ಪ್ರೀತಿ ಚಿಲುಮಿದೆ. ಕೆಲವು ವರ್ಷಗಳ ಹಿಂದೆ ಇಬ್ಬರೂ ವಿವಾಹ ಕೂಡ ಆದರು. ನಂತರ ಇಬ್ಬರೂ ಜೊತೆಗೂಡಿ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾ (Social Media) ಫ್ಲಾಟ್‍ಫಾರ್ಮ್‍ಗಳಲ್ಲಿ ಶೇರ್ ಮಾಡಿಕೊಳ್ಳುವುದರ ಮೂಲಕ ಫೇಮಸ್ ಆಗಿದ್ದರು. ಜೊತೆಗೆ ಈ ಜೋಡಿಗೆ ಸಾಕಷ್ಟು ಫಾಲೋವರ್ಸ್ ಕೂಡ ಇದ್ದಾರೆ. ಇದನ್ನೂ ಓದಿ: IND Vs AUS: 3ನೇ T20 ಇಂದು – ಸರಣಿ ಗೆಲ್ಲುವ ತವಕದಲ್ಲಿ ಭಾರತ!

    ಹೀಗಿದ್ದರೂ ಗಂಡನ ನಡವಳಿಕೆಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಲಾರಂಭಿಸಿದ ವಿಮಲಾಗೆ, ಕಲ್ಯಾಣ್ ವಿಶಾಖಪಟ್ಟಣಂನ (Visakhapatnam) ಯುವತಿಯನ್ನು ಇಷ್ಟಪಟ್ಟಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಇಬ್ಬರೂ ಬೇರೆಯಾಗಿದ್ದರು. ಅಂದಿನಿಂದ ಇಬ್ಬರ ನಡುವೆ ಯಾವುದೇ ಸಂಪರ್ಕ ಇರಲಿಲ್ಲ ಎಂಬ ವಿಚಾರ ತಿಳಿದು ಬಂದಿದೆ. ಇದನ್ನೂ ಓದಿ: ಪಹಣಿ ಬದಲಾವಣೆಗೆ 50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟ ಗ್ರಾಮ ಲೆಕ್ಕಿಗ!

    ಮತ್ತೊಂದೆಡೆ ಕಲ್ಯಾಣ್ ಮದುವೆಯಾಗಿರುವ ಸುದ್ದಿಯನ್ನು ಕೇಳಿದ ನಿತ್ಯಾ, ನಂತರ ಕಲ್ಯಾಣ್‍ನನ್ನು ಮದುವೆಯಾಗಲು (Marriage) ಅನುಮತಿ ನೀಡುವಂತೆ ವಿಮಲಾರನ್ನು ಬೇಡಿಕೊಂಡಿದ್ದಾಳೆ. ಅಲ್ಲದೇ ಕಲ್ಯಾಣ್ ಮತ್ತು ನನ್ನ ಮದುವೆಯಾದ ಬಳಿಕ ಎಲ್ಲರೂ ಒಟ್ಟಿಗೆ ಒಂದೇ ಮನೆಯಲ್ಲಿ ವಾಸಿಸೋಣ ಎಂದು ವಿಮಾಲಾರಿಗೆ ಕೇಳಿಕೊಂಡಿದ್ದಾಳೆ. ಇದನ್ನೂ ಓದಿ: ಪಾಲಿಕೆಯ ಹೊಸ ಪಾರ್ಕಿಂಗ್ ರೂಲ್ಸ್ – ಲೂಟಿ ಯೋಜನೆಯೆಂದು ಜನಾಕ್ರೋಶ

    ಇದರಿಂದ ಒಂದು ಕ್ಷಣ ತಬ್ಬಿಬ್ಬಾದ ವಿಮಲಾ ಆಲೋಚಿಸಲು ಕೊಂಚ ಸಮಯ ತೆಗೆದುಕೊಂಡು ನಂತರ ಮದುವೆಗೆ ಗ್ರೀನ್ ಸಿಗ್ನಿಲ್ ನೀಡಿದ್ದಾರೆ. ಅಲ್ಲದೇ ತಾವೇ ಮುಂದೆ ನಿಂತು ಪತಿ ಕಲ್ಯಾಣ್ ಹಾಗೂ ನಿತ್ಯ ಮದುವೆಯನ್ನು ಸಾಂಪ್ರದಾಯಿಕವಾಗಿ ಮಾಡಿದ್ದಾರೆ. ಬಳಿಕ ಮೂವರು ಒಟ್ಟಿಗೆ ನಿಂತುಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಹಲವಾರು ಚರ್ಚೆಗೆ ಕಾರಣವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಭಾರತ Vs ಆಸ್ಟ್ರೇಲಿಯಾ T20: ಟಿಕೆಟ್‍ಗಾಗಿ ಮುಗಿಬಿದ್ದ ಜನ – ಲಾಠಿ ಚಾರ್ಜ್, ನಾಲ್ವರಿಗೆ ಗಾಯ

    ಭಾರತ Vs ಆಸ್ಟ್ರೇಲಿಯಾ T20: ಟಿಕೆಟ್‍ಗಾಗಿ ಮುಗಿಬಿದ್ದ ಜನ – ಲಾಠಿ ಚಾರ್ಜ್, ನಾಲ್ವರಿಗೆ ಗಾಯ

    ಹೈದರಾಬಾದ್: ಭಾರತ (India) ಹಾಗೂ ಆಸ್ಟ್ರೇಲಿಯಾ (Australia) ನಡುವಿನ ಮೂರನೇ ಟಿ20 (T20) ಪಂದ್ಯದ ಟಿಕೆಟ್‍ಗಾಗಿ (Ticket) ಅಭಿಮಾನಿಗಳು (Fans) ಮುಗಿಬಿದ್ದು ನೂಕುನುಗ್ಗಲು ಉಂಟಾದ ಘಟನೆ ಜಿಮ್ಖಾನಾ ಮೈದಾನ (Gymkhana Ground)  ನಡೆದಿದೆ.

    ಸೆ.25 ರಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಟಿ20 ಪಂದ್ಯ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇಂದು ಜಿಮ್ಖಾನಾ ಮೈದಾನದಲ್ಲಿ ಟಿಕೆಟ್ ಮಾರಾಟ ನಡೆಯುತ್ತಿತ್ತು. ಟಿಕೆಟ್ ಖರೀದಿಗಾಗಿ ಸಾವಿರಾರು ಅಭಿಮಾನಿಗಳು ಆಗಮಿಸಿದ್ದರು. ಈ ವೇಳೆ ಟಿಕೆಟ್ ಖರೀದಿಗಾಗಿ ನೂಕುನುಗ್ಗಲು ಉಂಟಾಗಿದೆ. ಇದನ್ನೂ ಓದಿ: ರ‍್ಯಾಂಕಿಂಗ್‌ನಲ್ಲಿ ಫುಲ್‌ಶೈನ್ – ಪಾಕ್ ನಾಯಕನನ್ನು ಹಿಂದಿಕ್ಕಿದ SKY

    ಈ ವೇಳೆ ಪೊಲೀಸರು ಜನರನ್ನು ಚದುರಿಸಲು ಪ್ರಯತ್ನಿಸಿದರು ಆದರೂ ಹತೋಟಿಗೆ ಬಾರದ ಕಾರಣ ಕೊನೆಗೆ ಲಾಠಿ ಲಾಠಿ ಚಾರ್ಜ್ ಮಾಡಲಾಯಿತು. ಈ ವೇಳೆ ನಾಲ್ವರು ಗಾಯಗೊಂಡಿದ್ದಾರೆ. ಇದನ್ನೂ ಓದಿ: 8 ಓವರ್‌ 100 ರನ್‌ – ದುಬಾರಿಯಾದ ಭುವಿ, ಹರ್ಷಲ್‌: ರೋಹಿತ್‌ ಹೇಳಿದ್ದೇನು?

    ಈಗಾಗಲೇ 3 ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಮುನ್ನಡೆ ಪಡೆದುಕೊಂಡಿದೆ. 2ನೇ ಟಿ20 ಪಂದ್ಯ ನಾಳೆ ನಾಗ್ಪುರದಲ್ಲಿ ನಡೆಯಲಿದ್ದು, ಮೂರನೇ ಪಂದ್ಯ ಹೈದರಾಬಾದ್‍ನಲ್ಲಿ ನಡೆಯಲಿದೆ. ಇದನ್ನೂ ಓದಿ: ಮಹಿಳಾ ಏಷ್ಯಾಕಪ್‍ಗೆ ಭಾರತ ತಂಡ ಪ್ರಕಟ – ಕೌರ್ ನಾಯಕಿ, ಮಂದಾನ ಉಪನಾಯಕಿ

    ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟಾಸ್ (Toss) ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ (Team India) 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 208 ರನ್  ಗಳಿಸಿತ್ತು. 209 ರನ್‍ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಆಸೀಸ್ ಪಡೆ 19.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 211 ರನ್‍ಗಳಿಸಿ ಜಯ ಸಾಧಿಸಿ ಸರಣಿಯಲ್ಲಿ ಮುನ್ನಡೆ ಪಡೆದುಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ಸರಸಕ್ಕೆಂದು ಮನೆಗೆ ಕರೆಸಿಕೊಂಡು ಪ್ರಿಯಕರನ ಮರ್ಮಾಂಗ ಕತ್ತರಿಸಿದ್ಲು

    ಸರಸಕ್ಕೆಂದು ಮನೆಗೆ ಕರೆಸಿಕೊಂಡು ಪ್ರಿಯಕರನ ಮರ್ಮಾಂಗ ಕತ್ತರಿಸಿದ್ಲು

    ಹೈದರಾಬಾದ್: ವಿವಾಹೇತರ ಸಂಬಂಧಗಳು ಮತ್ತು ಅಕ್ರಮ ಸಂಬಂಧಗಳು ಮುಂದೊಂದು ದಿನ ಅಪಾಯಕ್ಕೆ ತಂದೊಡ್ಡುತ್ತದೆ ಎಂಬುವುದಕ್ಕೆ ಸಾಕಷ್ಟು ಉದಾಹರಣೆಗಳಿದೆ. ಅಕ್ರಮ ಸಂಬಂಧಕ್ಕೆ ಅದೆಷ್ಟೋ ಜೀವಗಳು ಬಲಿಯಾಗಿರುವ ದುರಾದೃಷ್ಟಕರ ಘಟನೆಗಳು ಸಾಕಷ್ಟಿದೆ. ಇದೀಗ ಆಂಧ್ರಪ್ರದೇಶದ (Andhra Pradesh) ಪ್ರಕಾಶಂ ಜಿಲ್ಲೆಯ (Prakasam District) ಕೊಂಡಪಿ ಮಂಡಲದ (Kondapi Mandal) ಕೊಳೆಗೇರಿಯಲ್ಲಿ ವಿವಾಹೇತರ ಸಂಬಂಧ ಹೊಂದಿದ್ದ 60 ವರ್ಷದ ವ್ಯಕ್ತಿಯ ಮರ್ಮಾಂಗವನ್ನು ಪ್ರಿಯತಮೆಯೇ ಕತ್ತರಿಸಿ ಹಾಕಿದ್ದು, ವ್ಯಕ್ತಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ.

     

    ಹೌದು ವಿವಾಹೇತರ ಸಂಬಂಧ ಹೊಂದಿದ್ದ ವ್ಯಕ್ತಿ ಇದೀಗ ಆಸ್ಪತ್ರೆಯ ಹಾಸಿಗೆಯಲ್ಲಿ ಪರದಾಡುತ್ತಿದ್ದಾನೆ. ಇದಕ್ಕೆ ಕಾರಣ 55ರ ವರ್ಷದ ಆತನ ಗೆಳತಿ. ಹೌದು, ತನ್ನನ್ನು ಒಬ್ಬನೇ ಬಂದು ಭೇಟಿಯಾಗುವಂತೆ ಹೇಳಿದ್ದ ಪ್ರಿಯತಮೆಯೇ ವ್ಯಕ್ತಿಯ ಮರ್ಮಾಂಗವನ್ನು ಬ್ಲೇಡ್ ನಿಂದ ಕತ್ತರಿಸಿದ್ದಾಳೆ. ಇದನ್ನೂ ಓದಿ: ಸ್ನಾನದ ವೀಡಿಯೋ ಲೀಕ್‌ ಬೆನ್ನಲ್ಲೇ ಹಾಸ್ಟೆಲ್‌ ತೊರೆಯುತ್ತಿರುವ ವಿದ್ಯಾರ್ಥಿನಿಯರು – 5 ದಿನ ವಿವಿ ಬಂದ್‌

    ಸುಮಾರು 10 ವರ್ಷಗಳಿಂದ ವಿವಾಹೇತರ ಸಂಬಂಧ ಹೊಂದಿದ್ದ ಈ ಜೋಡಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಆದರೆ ಈ ಬಾರಿ ಮನೆಗೆ ಕರೆಸಿಕೊಂಡು ಮಹಿಳೆ ಈ ಕೃತ್ಯವೆಸಗಿದ್ದಾಳೆ. ಇದೀಗ ಸ್ಥಳೀಯರು ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗುತ್ತಿದೆ. ಸದ್ಯ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸುಮಲತಾ ಹೇಳಿದ ದಿನ ಆಣೆ ಮಾಡಲು ರೆಡಿ- ಮೇಲುಕೋಟೆ ಸನ್ನಿಧಿಯಲ್ಲಿ ಪುಟ್ಟರಾಜು ಸವಾಲು ಸ್ವೀಕಾರ

    Live Tv
    [brid partner=56869869 player=32851 video=960834 autoplay=true]