ಹೈದರಾಬಾದ್: ನಾನು ಇಗಷ್ಟೇ ಬೆಳೆಯುತ್ತಿದ್ದರೆ ಹೈದರಾಬಾದ್ (Hyderabad) ಬಿಟ್ಟು ಎಂದಿಗೂ ಅಮೆರಿಕಕ್ಕೆ ಹೋಗುತ್ತಿರಲಿಲ್ಲ ಎಂದು ಹೇಳುವ ಮೂಲಕ ಜಾಗತಿಕ ಸಾಫ್ಟ್‌ವೇರ್ ಕಂಪನಿ ಅಡೋಬ್‌ನ (Adobe) ಮುಖ್ಯ ಕಾರ್ಯ ನಿರ್ವಾಹಕ ಶಾಂತನು ನಾರಾಯಣ್ (Shantanu Narayan) ಹೈದರಾಬಾದ್ ಅನ್ನು ಹಾಡಿ ಹೊಗಳಿದ್ದಾರೆ.
ಹೈದರಾಬಾದ್‌ನಲ್ಲಿ ಜನಿಸಿದ ಶಾಂತನು ನಗರದಲ್ಲಿನ ಪ್ರಸ್ತುತ ದೇಶದಲ್ಲಿನ ವ್ಯಾಪಾರದ ವಾತಾವರಣ, ತೆಲಂಗಾಣದ ಕೈಗಾರಿಕೆಗಳು, ಐಟಿ ಸಚಿವ ಕೆಟಿ ರಾಮರಾವ್ ಹಾಗೂ ಕಾರ್ಯದರ್ಶಿ ಜಯೇಶ್ ರಂಜನ್ ಅವರ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್‌ನಲ್ಲಿ ನಂಬಲಾಗದ ಹಾಗೂ ರೋಮಾಂಚನಗೊಳಿಸುವ ವಾತಾವರಣ ಸೃಷ್ಟಿಯಾಗಿದೆ ಎಂದು ಶಾಂತನು ನಾರಾಯಣ್ ಶ್ಲಾಘಿಸಿದ್ದಾರೆ.
ಹೈದರಾಬಾದ್‌ನಲ್ಲಿ ಟೈ ಗ್ಲೋಬಲ್ ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ನಾರಾಯಣ್, ನಾನು ಈಗ ಬೆಳೆಯುತ್ತಿದ್ದರೆ, ಹೈದರಾಬಾದ್‌ನಿಂದ ಹೊರಬರಲು ನನಗೆ ಯಾವುದೇ ಅಗತ್ಯವಿರುತ್ತಿರಲಿಲ್ಲ. ಹೈದರಾಬಾದ್ ಮಾತ್ರವಲ್ಲದೇ ಇಡೀ ಭಾರತದಲ್ಲಿ ಸಾಕಷ್ಟು ಅವಕಾಶಗಳಿವೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರು ನಗರದ ಸಂಬಳದಾರರ ಮನೆ ಬಾಡಿಗೆ ಭತ್ಯೆ ಶೇ.50 ಹೆಚ್ಚಳಕ್ಕೆ ತೇಜಸ್ವಿ ಸೂರ್ಯ ಮನವಿ
ನಾನು ಉದ್ಯಮಿಗಳಿಗೆ ಯಾವಾಗಲೂ ಹೇಳಬಯಸುವುದೇನೆಂದರೆ, ಬಿಕ್ಕಟ್ಟಿನ ಸಮಯವನ್ನು ವ್ಯರ್ಥ ಮಾಡುವುದು ತಪ್ಪು. ನೀವು ತಾಳ್ಮೆಯಿಲ್ಲದ ಉದ್ಯಮಿಗಳಾಗಿದ್ದರೆ ಇದು ಪ್ರಶಂಸೆಗೆ ಕಾರಣವಾಗುವ ಗುಣವಾಗಿದೆ. ವಾಣಿಜ್ಯೋದ್ಯಮ ಎಂದಿಗೂ ಉತ್ತರ ನೀಡಲು ಇಲ್ಲ ಎನ್ನುವುದಿಲ್ಲ ಎಂದು ಶಾಂತನು ಯುವ ಉದ್ಯಮಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನು ನುಡಿದರು. ಇದನ್ನೂ ಓದಿ: ಭಾರತ, ಚೀನಾ ಸಂಘರ್ಷಕ್ಕೆ ಕಾರಣ ಏನು? ಅರುಣಾಚಲದ ಗಡಿಯಲ್ಲಿ ನಿಜವಾಗಿ ಏನಾಯ್ತು?
Live Tv
[brid partner=56869869 player=32851 video=960834 autoplay=true]
ಹೈದರಾಬಾದ್: ತಂದೆಯ ಸಾಲ ತೀರಿಸಲು ತನ್ನ ಮೂತ್ರಪಿಂಡ (Kidney) ಮಾರಲು ಯತ್ನಿಸಿದ್ದ ವಿದ್ಯಾರ್ಥಿನಿ (Student) ಸೈಬರ್ ವಂಚಕರ (Cyber Crooks) ಜಾಲಕ್ಕೆ ಸಿಕ್ಕಿ 16 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಹೈದರಾಬಾದ್‌ನ ಗುಂಟೂರಿನ ನರ್ಸಿಂಗ್ ವಿದ್ಯಾರ್ಥಿನಿ (Nursing Student) ತನ್ನ ತಂದೆ ಮಾಡಿದ್ದ 2 ಲಕ್ಷ ರೂಪಾಯಿ ಸಾಲ ತೀರಿಸಲು ತನ್ನ ಮೂತ್ರಪಿಂಡ ಮಾರಾಟ ಮಾಡಲು ಯತ್ನಿಸಿದ್ದಾಳೆ. ಈ ವೇಳೆ ಸೈಬರ್ ವಂಚಕರಿಗೆ ಸಿಕ್ಕಿ ತನ್ನ ಬ್ಯಾಂಕ್ ಖಾತೆಯಿಂದ 16 ಲಕ್ಷ ರೂ. ಕಳೆದುಕೊಂಡಿದ್ದಾಳೆ. ಈ ಸಂಬಂಧ ಗುಂಟೂರು ಪೊಲೀಸರಿಗೆ (Guntur Police) ದೂರು ನೀಡಿದ್ದಾಳೆ. ಇದನ್ನೂ ಓದಿ: ಗಡಿ ವಿವಾದದ ನಡುವೆಯೂ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಭೇಟಿ
ಆಕೆ ಕಿಡ್ನಿ ಮಾರಲು ಯತ್ನಿಸಿದಾಗ ವಂಚಕರು 3 ಕೋಟಿ ಆಫರ್ ನೀಡಿದ್ದಾರೆ. ಅದಕ್ಕೂ ಮುನ್ನ ಪೊಲೀಸ್ ವೆರಿಫಿಕೇಶನ್ ಹಾಗೂ ತೆರಿಗೆ ಹಣವಾಗಿ 16 ಲಕ್ಷ ರೂಪಾಯಿ ಪಾವತಿ ಮಾಡಬೇಕು ಎಂದು ಹೇಳಿದ್ದಾರೆ. ಈ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಪ್ರವೀಣ್ ರಾಜ್ ಎಂಬವನನ್ನ ಭೇಟಿಯಾಗಿದ್ದು, ಆತ ಶೇ.50 ರಷ್ಟು ಹಣವನ್ನು ಆಪರೇಷನ್‌ಗೆ ಮುಂಚಿತವಾಗಿ, ಉಳಿದ ಹಣವನ್ನು ಕೆಲಸ ಮುಗಿದ ನಂತರ ಕೊಡುವುದಾಗಿ ಹೇಳಿದ್ದಾನೆ. ಇದನ್ನೂ ಓದಿ: ಭಾರತ-ಚೀನಾ ಗಡಿ ಸಂಘರ್ಷ – ಅರುಣಾಚಲ ಪ್ರದೇಶದಲ್ಲಿ ವಾಯು ಗಸ್ತು ಆರಂಭಿಸಿದ ಭಾರತೀಯ ಸೇನೆ
ಸಾಂದರ್ಭಿಕ ಚಿತ್ರ
ಹಣ ವರ್ಗಾವಣೆ ಮಾಡುವುದಕ್ಕಾಗಿ ಚೆನ್ನೈ ಸಿಟಿ ಬ್ಯಾಂಕ್‌ನಲ್ಲಿ ಖಾತೆ ತೆರೆದಿದ್ದಾಳೆ. ಈ ಖಾತೆ ಮೂಲಕ 16 ಲಕ್ಷ ಪಾವತಿಸಿದ ಬಳಿಕ ಹಣ ಕೇಳಿದ್ದಾಳೆ. ನಂತರ ಹಣ ವಸೂಲಿ ಮಾಡಲು ದೆಹಲಿಗೆ ಹೋಗುವಂತೆ ಹೇಳಿದ್ದಾರೆ. ಆಕೆ ದೆಹಲಿಗೆ ತೆರಳಿದಾಗ ವಿಳಾಸ ಸಹ ನಕಲಿಯಾಗಿರುವುದು ಕಂಡುಬಂದಿದೆ.
ಸಂತ್ರಸ್ತೆಯ ತಂದೆ ತನ್ನ ಎಟಿಎಂ ಕಾರ್ಡ್‌ಗಳಲ್ಲಿ ಒಂದನ್ನು ಮಗಳಿಗೆ ನೀಡಿದ್ದರು. ನವೆಂಬರ್‌ನಲ್ಲಿ ಖಾತೆಯಿಂದ ಹಣ ತೆಗೆದುಕೊಂಡಿರುವ ಬಗ್ಗೆ ಅವರಿಗೆ ಗೊತ್ತಾಯಿತು. ನಂತರ ಮಗಳನ್ನು ಮನೆಗೆ ಬರುವಂತೆ ಹೇಳಿದಾಗ, ಆಕೆ ಹಾಸ್ಟೆಲ್ ಬಿಟ್ಟು ಹೋಗಿದ್ದಳು. ಬಳಿಕ ಹುಡುಕಾಟ ನಡೆಸಿದ್ದ ಎನ್‌ಟಿಆರ್ ಜಿಲ್ಲೆಯ ಪೊಲೀಸರು ಜಗ್ಗಯ್ಯಪೇಟಾದಲ್ಲಿ ಆಕೆಯ ಸ್ನೇಹಿತನ ಮನೆಯಲ್ಲಿ ಆಕೆಯನ್ನು ಪತ್ತೆ ಹಚ್ಚಿದ್ದಾರೆ.
Live Tv
[brid partner=56869869 player=32851 video=960834 autoplay=true]
ಚಿಕ್ಕಬಳ್ಳಾಪುರ: ಹೆದ್ದಾರಿಯಲ್ಲಿ ಅಡ್ಡ ಬಂದ ಹಾವನ್ನು(Snake) ತಪ್ಪಿಸಲು ಹೋಗಿ ಟ್ರಕ್ ಚಾಲಕನೊರ್ವ ಸಡನ್ ಬ್ರೇಕ್ ಹಾಕಿದ ಪರಿಣಾಮ ಸರಣಿ ಅಪಘಾತ(Serial Accident) ಸಂಭವಿಸಿರುವ ಘಟನೆ ಬೆಂಗಳೂರು – ಹೈದರಾಬಾದ್(Bengaluru – Hyderabad) ರಾಷ್ಟ್ರೀಯ ಹೆದ್ದಾರಿ 44ರ ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಗ್ರಾಮದ ಬಳಿ ನಡೆದಿದೆ.
ಹೈದರಾಬಾದ್ ಕಡೆಯಿಂದ ಬೆಂಗಳೂರು ಕಡೆಗೆ ಕಂಟೈನರ್(Continer) ಟ್ರಕ್ ಬರುತ್ತಿತ್ತು. ಅಗಲಗುರ್ಕಿ ಗ್ರಾಮದ ಬಳಿ ಹೆದ್ದಾರಿಯ ನಡುರಸ್ತೆಯಲ್ಲಿ ಹಾವೊಂದು ರಸ್ತೆ ದಾಟುತ್ತಿತ್ತು. ಇದನ್ನು ಗಮನಿಸಿದ ಚಾಲಕ ಸಡನ್ ಆಗಿ ಟ್ರಕ್ ಬ್ರೇಕ್ ಹಾಕಿದ್ದಾನೆ. ಇದನ್ನೂ ಓದಿ: ಚಲಿಸುತ್ತಿದ್ದ ಗೂಡ್ಸ್ ರೈಲಿನಿಂದ ಜೀವ ಉಳಿಸಿಕೊಂಡ ತಾಯಿ-ಮಗ!
ಪರಿಣಾಮ ಹಿಂದೆ ಇದ್ದ ಕಂಟೈನರ್ ಟ್ರಕ್, ಟಾಟಾ ಏಸ್, ಕಾರು, ಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಸೇರಿದಂತೆ ಐದು ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿವೆ. ಟಾಟಾ ಏಸ್ ಚಾಲಕನ ಸ್ಥಿತಿ ಗಂಭೀರವಾಗಿದೆ.
ಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಮುಂದಿನ ಲಾರಿಗೆ ಡಿಕ್ಕಿ ಹೊಡೆದ ಕಾರಣ ಅದರಲ್ಲಿದ್ದ ಚಾಲಕನಿಗೆ ಸ್ಟೇರಿಂಗ್ ಹೊಟ್ಟೆ ತಗುಲಿ ರಕ್ಷಣೆಗೆ ಮೊರೆ ಇಟ್ಟಿದ್ದಾನೆ. ಪಕ್ಕದಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಪೊಲೀಸರು, ರಕ್ಷಣೆಗೆ ಧಾವಿಸಿದ್ದಾರೆ.
ಗ್ಯಾಸ್ ವೆಲ್ಡರ್‌ನನ್ನು ಸ್ಥಳಕ್ಕೆ ಕರೆಸಿ ಟಿಪ್ಪರ್ ಡೋರ್ ಹಾಗೂ ಮುಂಭಾಗವನ್ನು ಕತ್ತರಿಸಿ ಚಾಲಕನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮತ್ತೊಂದೆಡೆ ಪೊಲೀಸರು ಹೆದ್ದಾರಿಯಲ್ಲಿ ವಾಹನಗಳ ತಪಾಸಣೆ ಮಾಡ್ತಿರುವ ಕಾರಣ ಪದೇ ಪದೇ ಅಪಘಾತಗಳು ಆಗುತ್ತಿವೆ. ಘಟನೆಗೆ ಸಂಚಾರಿ ಠಾಣೆ ಪೊಲೀಸರೇ ಕಾರಣ ಎಂದು ಸ್ಥಳಿಯರು ಪೊಲೀಸರ ವಿರುದ್ದ ತಿರುಗಿ ಬಿದ್ದ ಘಟನೆ ನಡೆಯಿತು.
Live Tv
[brid partner=56869869 player=32851 video=960834 autoplay=true]
ಹೈದರಾಬಾದ್: ಎಟಿಎಂಗಳಲ್ಲಿ ಹಣ ಡ್ರಾ ಮಾಡಿದ್ದೀರಾ. ಆದರೆ ಚಿನ್ನವನ್ನು ಡ್ರಾ ಮಾಡುವುದನ್ನು ನೋಡಿದ್ದೀರಾ? ಹೌದು, ಹೈದರಾಬಾದ್‌ನ (Hyderabad) ಬೇಗಂಪೇಟೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ಚಿನ್ನದ ಎಟಿಎಂ (Gold ATM) ಉದ್ಘಾಟಿಸಲಾಗಿದೆ.
ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ನೀವು ಬಯಸಿದ ಚಿನ್ನವನ್ನು ಡ್ರಾ ಮಾಡಬಹುದು. ಹೈದರಾಬಾದ್‌ನ ಬೇಗಂಪೇಟೆಯಲ್ಲಿರುವ ಗೋಲ್ಡ್ ಸಿಕ್ಕಾ ಕಂಪನಿಯ ಕಚೇರಿಯಲ್ಲಿ ತೆಲಂಗಾಣ ಮಹಿಳಾ ಆಯೋಗದ ಅಧ್ಯಕ್ಷೆ ಸುನಿತಾ ಲಕ್ಷ್ಮಾ ರೆಡ್ಡಿ ಅವರು ನೂತನ ಚಿನ್ನದ ಎಟಿಎಂ ಅನ್ನು ಉದ್ಘಾಟಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಕಾನ್‌ಸ್ಟೇಬಲ್‌ಗೆ ಕಪಾಳಮೋಕ್ಷ – ಬಿಜೆಪಿ ಮಾಜಿ ಸಂಸದೆ ವಿರುದ್ಧ ಎಫ್‌ಐಆರ್
ಶೇ.99.99ರಷ್ಟು ಶುದ್ಧತೆಯ 0.5, 1, 2, 5, 10, 20, 50 ಮತ್ತು 100 ಗ್ರಾಂ ತೂಕದ ಚಿನ್ನದ ನಾಣ್ಯಗಳನ್ನು ಡ್ರಾ ಮಾಡಬಹುದು. ಚಿನ್ನದ ಜೊತೆಗೆ ಅದರ ಗುಣಮಟ್ಟ ಖಾತರಿಪಡಿಸಲು ದಾಖಲೆಗಳನ್ನು ಸಹ ನೀಡಲಾಗುತ್ತದೆ ಎಂದು ಗೋಲ್ಡ್ ಸಿಕ್ಕಾ ಲಿಮಿಟೆಡ್‌ನ ಸಿಇಒ ಸೈಯದ್ ತರುಜ್ ತಿಳಿಸಿದ್ದಾರೆ.
ಗೋಲ್ಡ್ ಸಿಕ್ಕಾ ದೇಶಾದ್ಯಂತ ಸುಮಾರು 3,000 ಎಟಿಎಂಗಳನ್ನು ಸ್ಥಾಪಿಸಲು ಯೋಜಿಸಿದೆ. ಇದರಲ್ಲಿ ಶೇ.60-70ರಷ್ಟು ಭಾಗ ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿಸಲು ಚಿಂತಿಸಿದೆ. ಎಟಿಎಂಗಳು ಪ್ರಾಯೋಗಿಕವಾಗಿ ಹೈದರಾಬಾದ್‌ನಲ್ಲಿ ಆರಂಭವಾಗಿದೆ. ನಗರದ ಗುಲ್ಜಾರ್‌ಹೌಸ್, ಸಿಕಂದರಾಬಾದ್, ಅಬಿಡ್ಸ್, ಪೆದ್ದಪಲ್ಲಿ, ವಾರಂಗಲ್ ಮತ್ತು ಕರೀಂನಗರದಲ್ಲಿ ಶೀಘ್ರದಲ್ಲೇ ಚಿನ್ನದ ಎಟಿಎಂಗಳನ್ನು ತೆರೆಯಲಾಗುವುದು ಎಂದು ತರುಜ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮದುವೆಗೆಂದು ವಿಮಾನವನ್ನೇ ಬುಕ್ ಮಾಡಿದ ಜೋಡಿ
Live Tv
[brid partner=56869869 player=32851 video=960834 autoplay=true]
ಹೈದರಾಬಾದ್: ಅಯ್ಯಪ್ಪ ಮಾಲೆ (Ayyappa Mala) ಧರಿಸಿದ್ದ 6ನೇ ತರಗತಿಯ ವಿದ್ಯಾರ್ಥಿಗೆ (Student) ಶಾಲೆಯಲ್ಲಿ (School) ಪ್ರವೇಶ ನಿರಾಕರಿಸಿರುವ ಘಟನೆ ಬುಧವಾರ ಅಯ್ಯಪ್ಪ ಸ್ವಾಮಿ ಮೊಹ್ನಸ್ ಶಾಲೆಯಲ್ಲಿ ನಡೆದಿದೆ. ಘಟನೆಯ ಬಳಿಕ ಚರ್ಚೆ ಉಂಟಾಗಿ, ಪ್ರತಿಭಟನೆ ನಡೆಸಲಾಗಿದೆ.
ವರದಿಗಳ ಪ್ರಕಾರ ಅಯ್ಯಪ್ಪ ಮಾಲೆ ಧರಿಸಿದ್ದಕ್ಕೆ 6ನೇ ತರಗತಿಯ ವಿದ್ಯಾರ್ಥಿಯನ್ನು ಆತನ ಶಿಕ್ಷಕರು (Teacher) ನಿಂದಿಸಿದ್ದಾರೆ. ಮಾಲಾಧಾರಿಗಳು 41 ದಿನಗಳ ಕಾಲ ವೃತ ನಡೆಸುತ್ತಾರೆ. ಈ ವೇಳೆ ಅವರು ಕಪ್ಪು ಬಟ್ಟೆಯನ್ನು ಧರಿಸುತ್ತಾರೆ. ಆದರೆ ಶಿಕ್ಷಕರು ತರಗತಿಗೆ ಪ್ರವೇಶ ಬೇಕೆಂದರೆ ಕಪ್ಪು ಬಟ್ಟೆ ಹಾಗೂ ತಿಲಕವನ್ನು ತೆಗೆದುಹಾಕುವಂತೆ ವಿದ್ಯಾರ್ಥಿಗೆ ಒತ್ತಾಯಿಸಿದ್ದಾರೆ.
ಇಂತಹುದೇ ಘಟನೆ ನವೆಂಬರ್ 23ರಂದು ಮಂದಮಾರಿಯ ಸಿಂಗರೇಣಿ ಪ್ರೌಢಶಾಲೆಯಲ್ಲೂ ನಡೆದಿತ್ತು. 10ನೇ ತರಗತಿ ವಿದ್ಯಾರ್ಥಿ ಅಯ್ಯಪ್ಪ ಮಾಲೆ ಧರಿಸಿದ್ದಕ್ಕಾಗಿ ಶಾಲೆಯಲ್ಲಿ ಪ್ರವೇಶವನ್ನು ನಿರಾಕರಿಸಲಾಗಿತ್ತು. ವಿದ್ಯಾರ್ಥಿಯ ತಂದೆ ತನ್ನ ಮಗನಿಗೆ ಮಾಲೆ ಧರಿಸಿದ್ದಕ್ಕಾಗಿ ಶಾಲೆಗೆ ಪ್ರವೇಶಿಸಲು ಅನುಮತಿ ನೀಡಲಿಲ್ಲ ಎಂದು ಆರೋಪಿಸಿದ್ದಾರೆ.
#Hyderabad – Student refused entry to school for wearing Ayyappa Mala, kicks in the school uniform debate
ಈ ಎಲ್ಲಾ ವಿವಾದ ಶಾಲಾ ಸಮವಸ್ತ್ರ ವಿಚಾರದ ಹಿನ್ನೆಲೆಯಲ್ಲಿ ಉಂಟಾಗಿದೆ. ಕರ್ನಾಟಕದಲ್ಲಿ ಪ್ರಾರಂಭವಾದ ಹಿಜಬ್ ವಿವಾದದಿಂದಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಏಕರೂಪದ ಡ್ರೆಸ್ ಕೋಡ್ ನಿಯಮವನ್ನು ಪಾಲಿಸುವ ಆದೇಶ ಹೊರಡಿಸಲಾಯಿತು. ಇದರಿಂದಾಗಿ ವಿದ್ಯಾರ್ಥಿಗಳು ಸಮವಸ್ತ್ರವನ್ನು ಹೊರತುಪಡಿಸಿ ಹಿಜಬ್, ಸ್ಕಾರ್ಫ್ ಅಥವಾ ಯಾವುದೇ ಇತರ ಉಡುಗೆಗಳನ್ನು ಧರಿಸುವುದನ್ನು ನಿಷೇಧಿಸಲಾಯಿತು. ಆದರೂ ಈ ಆದೇಶವನ್ನು ಹಲವರು ಪ್ರಶ್ನಿಸಿದ್ದಾರೆ. ಇದು ಅಭಿವ್ಯಕ್ತಿ ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಗಾಳಿಯಲ್ಲಿ ಗುಂಡುಹಾರಿಸಿ ಹಿಡಿಯಲು ಮುಂದಾದ ಅರಣ್ಯಾಧಿಕಾರಿಗಳ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಗಂಧಚೋರರು
Live Tv
[brid partner=56869869 player=32851 video=960834 autoplay=true]
ಹೈದರಾಬಾದ್: 2 ನಾಯಿಮರಿಗಳನ್ನು (Puppies) ಕೊಂದು, ಕೃತ್ಯದ ವೀಡಿಯೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿದ ಆರೋಪದ ಮೇಲೆ ಹೈದರಾಬಾದ್‌ನ (Hyderabad) ವ್ಯಕ್ತಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಮೂಕ ಪ್ರಾಣಿಗಳ ಮೇಲೆ ಕ್ರೂರ ಕೃತ್ಯ ಎಸಗಿದ ವ್ಯಕ್ತಿ ಮೊದಲ ನಾಯಿಮರಿಯನ್ನು ಮರಕ್ಕೆ ನೇತುಹಾಕಿ, ಎರಡನೆಯದನ್ನು ಕಟ್ಟಡದ 4ನೇ ಮಹಡಿಯಿಂದ ಎಸೆದು ಕೊಂದಿದ್ದಾನೆ. ಬಳಿಕ ಅದು ಜೀವಂತವಾಗಿದೆಯೇ ಎಂಬುದನ್ನು ನೋಡಲು ಕಾಲಿನಿಂದ ಒದ್ದಿದ್ದಾನೆ. ಕೃತ್ಯದ ವೀಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿದ ವ್ಯಕ್ತಿಯನ್ನು ಕಟ್ಟೇಡನ್ ಪ್ರದೇಶದ ನಿವಾಸಿ ರೇ ಎಂದು ಪೊಲೀಸರು ಗುರುತಿಸಿದ್ದಾರೆ. ಇದನ್ನೂ ಓದಿ: ಚಿರತೆ ಕಣ್ಣಾಮುಚ್ಚಾಲೆ, 15 ದಿನಗಳಿಂದ ಬೃಂದಾವನ ಕ್ಲೋಸ್ – ಅರಣ್ಯ ಇಲಾಖೆ ವಿರುದ್ಧ ಜನರ ಆಕ್ರೋಶ
ನವೆಂಬರ್ 15ರಂದು ವೀಡಿಯೋವನ್ನು ಆರೋಪಿ ಅಪ್ಲೋಡ್ ಮಾಡಿದ್ದಾನೆ. ಕೃತ್ಯ ಬೆಳಕಿಗೆ ಬಂದಂತೆ ಮೈಲಾರ್‌ದೇವಪಲ್ಲಿ ಪೊಲೀಸರು ವ್ಯಕ್ತಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಹೈದರಾಬಾದ್: ತನ್ನ ಕಿರುಕುಳಕ್ಕೆ ಪತ್ನಿ ದೂರವಾದಳು ಎಂದು ಖಿನ್ನತೆಗೆ ಒಳಗಾದ ವ್ಯಕ್ತಿ ಹುಸಿ ಬಾಂಬ್ ಕರೆ (Fake Bomb Threat Call) ಮಾಡಿದ್ದು, ಆತನನ್ನು ಕೆಲವೇ ಗಂಟೆಗಳಲ್ಲಿ ಪೊಲೀಸರು ಪತ್ತೆಹಚ್ಚಿ, ಬಂಧಿಸಿದ್ದಾರೆ. ಹುಸಿ ಬಾಂಬ್ ಬೆದರಿಕೆ ಹಾಕಿದ್ದಕ್ಕೆ ಹೈದರಾಬಾದ್‌ನ (Hyderabad) ಸ್ಥಳೀಯ ನ್ಯಾಯಾಲಯ ಆತನಿಗೆ 18 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.
ವರದಿಗಳ ಪ್ರಕಾರ ಆರೋಪಿ ಸಂತೋಷನಗರದ ಮೊಹಮ್ಮದ್ ಅಕ್ಬರ್ ಖಾನ್ ತನ್ನ ಪತ್ನಿ ತನ್ನನ್ನು ಬಿಟ್ಟು ತವರುಮನೆಗೆ ಹೋಗಿದ್ದಕ್ಕೆ ಮಂಗಳವಾರ ರಾತ್ರಿ ಕಂಠಪೂರ್ತಿ ಕುಡಿದಿದ್ದಾನೆ. ಬಳಿಕ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ, ಮಂದಿರ-ಮಸೀದಿ ಜಂಕ್ಷನ್ ಬಳಿ ಬಾಂಬ್ ಇಡಲಾಗಿದೆ ಎಂದು ಮಾಹಿತಿ ನೀಡಿದ್ದಾನೆ.
ತಕ್ಷಣ ಬಾಂಬ್ ನಿಷ್ಕ್ರಿಯ ದಳದೊಂದಿಗೆ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಸ್ಥಳವನ್ನು ತೆರವುಗೊಳಿಸಿ ತಪಾಸಣೆ ಆರಂಭಿಸಿದ್ದಾರೆ. ಒಂದೆರಡು ಗಂಟೆಗಳ ಕಾಲ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಬಳಿಕ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗದ ಕಾರಣ ಹುಸಿ ಬಾಂಬ್ ಕರೆ ಎಂದು ದೃಢಪಟ್ಟಿದೆ. ಇದನ್ನೂ ಓದಿ: ಇಳಿಯ ವಯಸ್ಸಿನಲ್ಲಿ ಸಪ್ತಪದಿ ತುಳಿದ ನವಜೋಡಿ – ಪತ್ನಿಯ ಅಕ್ಕನಿಗೆ ಬಾಳು ಕೊಟ್ಟ ಮಾಜಿ ಮೇಯರ್
ಅದೇ ರಾತ್ರಿ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತನ ರಕ್ತದಲ್ಲಿ ಆಲ್ಕೋಹಾಲ್ ಅಂಶ ಹೆಚ್ಚಿರುವುದನ್ನು ಅಧಿಕಾರಿಗಳು ತಿಳಿದು, ಆತ ಸ್ಫೋಟಕ್ಕೆ ಸಂಬಂಧಿಸಿದಂತೆ ಯಾವುದೇ ಪೂರ್ವಸಿದ್ಧತೆಯನ್ನು ಮಾಡಿಕೊಂಡಿರಲಿಲ್ಲ ಎಂದು ತಿಳಿಸಿದ್ದಾರೆ.
ದಂಪತಿಯ ನಡುವಿನ ಭಿನ್ನಾಭಿಪ್ರಾಯದಿಂದ 4 ದಿನಗಳ ಹಿಂದೆ ಆರೋಪಿಯ ಪತ್ನಿ ಮಗಳನ್ನು ಕರೆದುಕೊಂಡು ಚೌಟುಪ್ಪಲ್‌ನ ಬಂಗಾರಿಡದಲ್ಲಿರುವ ತನ್ನ ತವರು ಮನೆಗೆ ತೆರಳಿದ್ದಳು. ಖಾನ್ ಕಿರುಕುಳಕ್ಕೆ ಬೇಸತ್ತ ಪತ್ನಿ ಮನವೊಲಿಸಿದರೂ ಹಿಂದಿರುಗಲು ನಿರಾಕರಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ವ್ಯಕ್ತಿ ಹುಸಿ ಬಾಂಬ್ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರೈತರ ಅಹೋರಾತ್ರಿ ಧರಣಿಗೆ ಸುಮಲತಾ ಅಂಬರೀಶ್ ಬೆಂಬಲ
Live Tv
[brid partner=56869869 player=32851 video=960834 autoplay=true]
ಹೈದರಾಬಾದ್: ಆನೆಯೊಂದು ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದು, ಅದನ್ನು ಮೇಲಕ್ಕೆತ್ತಲು ಜೆಸಿಬಿ ಮೂಲಕ ಅರಣ್ಯಾಧಿಕಾರಿಗಳು ಹರಸಾಹಸ ಪಟ್ಟಿರುವ ಘಟನೆ ಆಂಧ್ರಪ್ರದೇಶದ (Andhra Pradesh) ಚಿತ್ತೂರು (Chittoor) ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಮತ್ತು ಅಗ್ನಿಶಾಮಕ ದಳ ತಂಡ ಸ್ಥಳಕ್ಕೆ ಧಾವಿಸಿ, ಬಾವಿಯಲ್ಲಿ ಸಿಕ್ಕಿಬಿದ್ದ ಆನೆಯನ್ನು ರಕ್ಷಿಸುವ ಪ್ರಯತ್ನವನ್ನು ಮೊದಲಿಗೆ ಮಾಡಿದರು. ನಂತರ ಎಷ್ಟೇ ಪ್ರಯತ್ನ ಮಾಡಿದರು, ಆನೆಯನ್ನು ಮೇಲಕ್ಕೆತ್ತಲು ಆಗದೇ, ಕೊನೆಗೆ ಜೆಸಿಬಿ ಯಂತ್ರವನ್ನು ಅಳವಡಿಸಿ ಬಾವಿಯ ಗೋಡೆ ಅಗೆದು ಕೊಂಚ ಜಾಗ ಮಾಡಿಕೊಂಡು ಆನೆಯನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾದರು. ಇದನ್ನೂ ಓದಿ: ಸೂಪರ್ ಸ್ಟಾರ್ ಕೃಷ್ಣ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ
Live Tv
[brid partner=56869869 player=32851 video=960834 autoplay=true]
ಬೆಂಗಳೂರು: 1 ಜಿಬಿಪಿಎಸ್+ ವೇಗದಲ್ಲಿ ಜಿಯೋ ಟ್ರೂ 5ಜಿ (Jio True 5G) ಸೇವೆ ಬೆಂಗಳೂರು (Bengaluru) ಹಾಗೂ ಹೈದರಾಬಾದ್‌ನಲ್ಲಿ (Hyderabad) ನವೆಂಬರ್ 10ರಿಂದ ಆರಂಭವಾಗಿದೆ.
ಮುಂಬೈ, ದೆಹಲಿ, ಕೋಲ್ಕತ್ತಾ, ಚೆನ್ನೈ, ವಾರಾಣಸಿ ಮತ್ತು ನಾಥದ್ವಾರ ಹೀಗೆ 6 ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆಗಳ ಯಶಸ್ವಿ ಬೀಟಾ ಅನಾವರಣದ ನಂತರದಲ್ಲಿ ಇದೀಗ ಜಿಯೋ (Jio) ಹೆಚ್ಚಿನ ನಗರಗಳಲ್ಲಿ ಜಿಯೋ ಟ್ರೂ 5ಜಿ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಬೆಂಗಳೂರು ಮತ್ತು ಹೈದರಾಬಾದ್‌ನಲ್ಲೂ ಈಗ ಜಿಯೋ ಟ್ರೂ 5ಜಿ ದೊರೆಯುತ್ತಿದೆ. ಜಿಯೋ ಟ್ರೂ 5ಜಿಯು ಈ ಎರಡೂ ತಂತ್ರಜ್ಞಾನ ಕೇಂದ್ರಿತ ನಗರಗಳಲ್ಲಿ ಮಾನವೀಯತೆಗೆ ಸೇವೆ ಸಲ್ಲಿಸುವ ಮತ್ತು ಭಾರತೀಯರ ಜೀವನದ ಗುಣಮಟ್ಟ ಸುಧಾರಿಸುವ ಕೆಲವು ಇತ್ತೀಚಿನ ತಂತ್ರಜ್ಞಾನಗಳ ನಿಜವಾದ ಸಾಮರ್ಥ್ಯವನ್ನು ಅರಿಯುವುದಕ್ಕೆ ಸಹಾಯ ಮಾಡುತ್ತದೆ.
ಅತ್ಯುತ್ತಮ ಗ್ರಾಹಕ ಅನುಭವ ಖಚಿತ ಮಾಡಿಕೊಳ್ಳಲು ಜಿಯೋದಿಂದ ಸುಧಾರಿತ ಟ್ರೂ 5ಜಿ ಸೇವೆಗಳನ್ನು ಹಂತ ಹಂತವಾಗಿ ಹೊರತರುತ್ತಿದೆ. ಜಿಯೋ ಟ್ರೂ 5ಜಿ ಅನುಭವವನ್ನು ಈಗಾಗಲೇ 6 ನಗರಗಳಲ್ಲಿ ಲಕ್ಷಗಟ್ಟಲೆ ಬಳಕೆದಾರರು ಪಡೆಯುತ್ತಿದ್ದಾರೆ. ಇದಕ್ಕೆ ದೊರೆಯುತ್ತಿರುವ ಪ್ರತಿಕ್ರಿಯೆ ಅತ್ಯಂತ ಧನಾತ್ಮಕವಾಗಿದೆ ಮತ್ತು ಭರವಸೆ ನೀಡುತ್ತದೆ. ಜಿಯೋ ಜಾಗತಿಕವಾಗಿ ಅತ್ಯಾಧುನಿಕ 5ಜಿ ನೆಟ್‌ವರ್ಕ್ ಅನ್ನು ರೂಪಿಸುವುದಕ್ಕೆ ಗ್ರಾಹಕರ ಒಳನೋಟಗಳು ಮತ್ತು ಪ್ರತಿಕ್ರಿಯೆಯು ಸಹಾಯ ಮಾಡುತ್ತಿದೆ.
ಜಿಯೋ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ 500 ಎಂಬಿಪಿಎಸ್ ನಿಂದ 1 ಜಿಬಿಪಿಎಸ್ ವರೆಗೆ ಎಲ್ಲಿಯಾದರೂ ವೇಗದ ಅನುಭವವನ್ನು ಪಡೆಯುತ್ತಿದ್ದಾರೆ ಹಾಗೂ ಅತಿ ಹೆಚ್ಚು ಪ್ರಮಾಣದಲ್ಲಿ ಡೇಟಾ ಬಳಸುತ್ತಿದ್ದಾರೆ. ಇದಕ್ಕೆ ಕಾರಣ ಆಗಿರುವುದು ಜಿಯೋ ಟ್ರೂ 5ಜಿಯ 3 ಪಟ್ಟು ಅನುಕೂಲಗಳು. ಆದ್ದರಿಂದಲೇ ಇದು ಭಾರತದಲ್ಲಿನ ಏಕೈಕ ನಿಜವಾದ 5ಜಿ ನೆಟ್‌ವರ್ಕ್ ಆಗಿದೆ.
1. 4ಜಿ ನೆಟ್‌ವರ್ಕ್‌ನ ಮೇಲೆ ಯಾವುದೇ ಅವಲಂಬನೆ ಇಲ್ಲದೆ ಸುಧಾರಿತ 5ಜಿ ನೆಟ್‌ವರ್ಕ್‌ನೊಂದಿಗೆ ಅದ್ವಿತೀಯ 5ಜಿ ಆರ್ಕಿಟೆಕ್ಚರ್.
2. 700 MHz, 3500 MHz, ಮತ್ತು 26 GHz ಬ್ಯಾಂಡ್‌ಗಳಾದ್ಯಂತ 5ಜಿ ಸ್ಪೆಕ್ಟ್ರಮ್‌ನ ದೊಡ್ಡ ಮತ್ತು ಉತ್ತಮ ಮಿಶ್ರಣ.
3. ಕ್ಯಾರಿಯರ್ ಅಗ್ರಿಗೇಷನ್ ಎಂಬ ಸುಧಾರಿತ ತಂತ್ರಜ್ಞಾನ ಬಳಸಿಕೊಂಡು ಈ 5ಜಿ ಫ್ರೀಕ್ವೆನ್ಸಿಗಳನ್ನು ಏಕರೂಪದ ‘ಡೇಟಾ ಹೈವೇ’ ಆಗಿ ಯಾವುದೇ ಅಡೆತಡೆ ಇಲ್ಲದೆ ಸಂಯೋಜಿಸುತ್ತದೆ.
ನವೆಂಬರ್ 10ರಿಂದ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿರುವ ಜಿಯೋ ಬಳಕೆದಾರರನ್ನು ಜಿಯೋ ವೆಲ್‌ಕಮ್ ಆಫರ್‌ಗೆ ಆಹ್ವಾನಿಸಲಾಗುತ್ತಿದೆ. ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಈ ಮೂಲಕ ಪಡೆಯಬಹುದಾಗಿದೆ.
Live Tv
[brid partner=56869869 player=32851 video=960834 autoplay=true]
ಹೈದರಾಬಾದ್: ಹೇರ್‌ವಾಶ್‍ಗೆ (Hair Wash) ಅಂತ ಬ್ಯೂಟಿಪಾರ್ಲರ್‌ಗೆ (Beauty Parlour) ತೆರಳಿದ್ದ 50 ವರ್ಷದ ಮಹಿಳೆಯೊಬ್ಬರು ಪಾರ್ಶ್ವವಾಯುಗೆ ತುತ್ತಾದ ಘಟನೆ ಹೈದ್ರಾಬಾದ್‍ನಲ್ಲಿ (Hyderabad) ನಡೆದಿದೆ.
ಬ್ಯೂಟಿಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್‍ಗೆ (Stroke Syndrom) ತುತ್ತಾಗಿರುವ ಮಹಿಳೆಯನ್ನು ಇದೀಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಬ್ಯೂಟಿಪಾರ್ಲರ್‌ನಲ್ಲಿ ಕತ್ತನ್ನು ಹಿಂದಕ್ಕೆ ಬಾಗಿಸಿ ಬೇಸ್‍ನಲ್ಲಿಟ್ಟುಕೊಂಡು ತಲೆಗೂದಲು ತೊಳೆಯಲಾಗುತ್ತದೆ. ಕೆಲವೊಮ್ಮೆ ಒತ್ತಡದಿಂದಾಗಿ ಕತ್ತಿನ ಅಪಧಮನಿಗೆ ಏಟು ಬಿದ್ದು, ಅದು ರಕ್ತ ಹೆಪ್ಪುಗಟ್ಟುವಿಕೆ ಅಥವಾ ಪಾರ್ಶ್ವವಾಯುವಿಗೂ ಕಾರಣವಾಗುತ್ತದೆ. ಇದನ್ನೇ ಬ್ಯೂಟಿಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್ ಎನ್ನಲಾಗುತ್ತದೆ. ಇದರಿಂದಾಗಿ ತಕ್ಷಣ ತಲೆಸುತ್ತುವುದು, ವಾಕರಿಕೆ ಅಥವಾ ವಾಂತಿಯಾಗುವುದು ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಹೈದರಾಬಾದ್‍ನ ವೈದ್ಯರು ಹೇಳಿದ್ದಾರೆ. ಇದನ್ನೂ ಓದಿ: ATM ಕಳ್ಳರ ಖತರ್ನಾಕ್ ಪ್ಲಾನ್- ಯೂಟ್ಯೂಬ್‍ನಲ್ಲಿ ವೀಡಿಯೋ ನೋಡಿ ಟ್ರೈನಿಂಗ್
ಈ ಕುರಿತಂತೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ವೈದ್ಯರು, ಆರಂಭದಲ್ಲಿ ಮಹಿಳೆಯನ್ನು ಗ್ಯಾಸ್ಟ್ರೋಎಂಟರಾಲಜಿಸ್ಟ್‌ಗೆ ಕರೆದೊಯ್ಯಲಾಯಿತು. ಆದರೂ ರೋಗಲಕ್ಷಣಗಳು ಸುಧಾರಿಸಲಿಲ್ಲ. ಅಲ್ಲದೇ ಮರುದಿನ ಮಹಿಳೆ ನಡೆಯುವಾಗ ಸ್ವಲ್ಪ ಅಸಮತೋಲನವನ್ನು ಕಾಣಿಸಿಕೊಂಡಿತು. ನಂತರ ಅವರನ್ನು ನರವಿಜ್ಞಾನಿಗಳ ಅಭಿಪ್ರಾಯಕ್ಕಾಗಿ ಉಲ್ಲೇಖಿಸಲಾಯಿತು, ಅವರು ಸೌಮ್ಯವಾದ ಬಲ ಸೆರೆಬೆಲ್ಲಾರ್ ಚಿಹ್ನೆಗಳನ್ನು ಹೊಂದಿದ್ದಾರೆಂದು ತಿಳಿಸಿದರು. ಎಂಆರ್‍ಐ ಮೆದುಳಿನ ಬಲ ಹಿಂಭಾಗದ ಕೆಳಮಟ್ಟದ ಸೆರೆಬೆಲ್ಲಾರ್ ಪ್ರದೇಶದಲ್ಲಿ ಇನ್ಫಾಕ್ರ್ಟ್ ಅನ್ನು ಬಹಿರಂಗಪಡಿಸಿತು. ಎಂಆರ್ ಆಂಜಿಯೋಗ್ರಾಮ್ ಎಡ ಕಶೇರುಖಂಡಗಳ ಹೈಪೋಪ್ಲಾಸಿಯಾವನ್ನು ತೋರಿಸಿದೆ. ಬಲ ಪಿಐಸಿಎ ಪ್ರದೇಶವನ್ನು ಒಳಗೊಂಡಿರುವ ಬ್ಯೂಟಿ ಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್‍ನ ರೋಗನಿರ್ಣಯವನ್ನು ಮಾಡಲಾಯಿತು. ಮಹಿಳೆ ತಲೆತಿರುಗುವಿಕೆ, ವಾಕರಿಕೆ ಮತ್ತು ವಾಂತಿಯ ಲಕ್ಷಣಗಳನ್ನು ಅನುಭವಿಸಿದ್ದಾರೆ ಎಂದು ತಿಳಿಸಿದ್ದಾರೆ.
1. I recently saw a 50-year old woman with symptoms of dizziness, nausea & vomiting, which started during her hair wash with shampoo in a beauty parlor. Initially, she was taken to a gastroenterologist, who treated her symptomatically.#Medtwitter
— Dr Sudhir Kumar MD DM???????? (@hyderabaddoctor) October 30, 2022
ಕೂದಲನ್ನು ಶಾಂಪೂವಿನಿಂದ ತೊಳೆಯುವಾಗ ನಮ್ಮ ತಲೆಯನ್ನು ವಾಶ್-ಬೇಸಿನ್ ಕಡೆಗೆ ಹಿಂದಕ್ಕೆ ತಿರುಗಿಸಲಾಗುತ್ತದೆ. ಈ ವೇಳೆ ಕುತ್ತಿಗೆಯ ಹೈಪರ್ ಎಕ್ಸ್‌ಟೆನ್ಶನ್ ಮೆದುಳಿನಲ್ಲಿ ಆಮ್ಲಜನಕದ ಪರಿಚಲನೆಯನ್ನು ಬದಲಾಯಿಸಬಹುದು. ಈ ವೇಳೆ ಕುತ್ತಿಗೆಯಲ್ಲಿರುವ ಬೆನ್ನುಮೂಳೆ ಅಪಧಮನಿಗಳು ಮೆದುಳು ಮತ್ತು ಬೆನ್ನುಮೂಳೆಗೆ ರಕ್ತ ಪೂರೈಕೆಗೆ ಅಡ್ಡಿಯುಂಟಾಗುವುದು ಸಿಂಡ್ರೋಮ್‍ಗೆ ಕಾರಣವಾಗಬಹುದು ಎಂದು ತಿಳಿಸಿದ್ದಾರೆ.
ಹಿಂದಿನ 1993 ರಲ್ಲಿ, ಬ್ಯೂಟಿ ಪಾರ್ಲರ್ ಸಿಂಡ್ರೋಮ್ ಅನ್ನು ಜರ್ನಲ್ ಆಫ್ ದಿ ಅಮೇರಿಕನ್ ಮೆಡಿಕಲ್ ಅಸೋಸಿಯೇಷನ್‍ನಲ್ಲಿ ಡಾ ಮೈಕೆಲ್ ವೈಂಟ್ರಾಬ್ ಅವರು, ಹೇರ್ ಸಲೂನ್‍ಗಳಲ್ಲಿನ ಶಾಂಪೂಗಳನ್ನು ಬಳಸಿದ್ದರಿಂದ ಗಂಭೀರವಾದ ಪಾರ್ಶ್ವವಾಯು ರೋಗಲಕ್ಷಣಗಳನ್ನು ಹೊಂದಿದ್ದ ಐವರು ಮಹಿಳೆಯರು ಅನುಭವಿಸಿರುವುದನ್ನು ನೋಡಿರುವುದಾಗಿ ಹೇಳಿಕೊಂಡಿದ್ದಾರೆ.
ಸ್ಟ್ರೋಕ್ ಸಿಂಡ್ರೋಮ್ ಗುಣಲಕ್ಷಣಗಳು
ಅಸ್ಥಿರತೆ, ಮೈಗ್ರೇನ್-ರೀತಿಯ ತಲೆನೋವು, ದೃಷ್ಟಿ ಕಳೆದುಕೊಳ್ಳುವುದು ಅಥವಾ ಮಸುಕಾಗಿರುವ ದೃಷ್ಟಿ, ಕುತ್ತಿಗೆ ಊತ ಮತ್ತು ರುಚಿಯ ಬದಲಾವಣೆಯನ್ನು ಹೊಂದಿರುತ್ತದೆ. ಅದರ ನಂತರ, ರೋಗಲಕ್ಷಣಗಳು ಸಾಮಾನ್ಯ ಸ್ಟ್ರೋಕ್‍ಗೆ ಹೊಂದಿಕೆಯಾಗುತ್ತವೆ. ಇವುಗಳಲ್ಲಿ ಮರಗಟ್ಟುವಿಕೆ, ಸಮತೋಲನದ ನಷ್ಟ, ಅಸ್ಪಷ್ಟ ಮಾತು, ದೌರ್ಬಲ್ಯ, ಮೂರ್ಛೆ ಮತ್ತು ಹಠಾತ್ ವರ್ತನೆಯ ಬದಲಾವಣೆಗಳು ಸೇರಿವೆ.
Live Tv
[brid partner=56869869 player=32851 video=960834 autoplay=true]