Tag: Hyderabad

  • ಬೀದಿ ನಾಯಿಗಳ ಅಟ್ಟಹಾಸಕ್ಕೆ 4ರ ಬಾಲಕ ಬಲಿ

    ಬೀದಿ ನಾಯಿಗಳ ಅಟ್ಟಹಾಸಕ್ಕೆ 4ರ ಬಾಲಕ ಬಲಿ

    ಹೈದರಾಬಾದ್: ಇತ್ತೀಚೆಗೆ ಬೀದಿ ನಾಯಿಗಳ (Stray Dog) ಉಪಟಳ ಹೆಚ್ಚಾಗುತ್ತಿದ್ದು, ಜನರ ಮೇಲೆ ದಾಳಿ ಮಾಡುವಂತಹ ಘಟನೆಗಳು ಆಗಾಗ ಕೇಳಿ ಬರುತ್ತಲೇ ಇರುತ್ತವೆ. ಇದೀಗ 4ರ ಪುಟ್ಟ ಬಾಲಕನೊಬ್ಬ (Boy) ಬೀದಿ ನಾಯಿಗಳ ಅಟ್ಟಹಾಸಕ್ಕೆ ಬಲಿಯಾಗಿರುವ ಮನಕಲಕುವ ಘಟನೆ ತೆಲಂಗಾಣದಲ್ಲಿ (Telangana) ವರದಿಯಾಗಿದೆ.

    ವರದಿಗಳ ಪ್ರಕಾರ ಮೃತ ಬಾಲಕನ ತಂದೆ ಗಂಗಾಧರ್ ಘಟನೆ ನಡೆದ ವಸತಿ ಪ್ರದೇಶದ ಆವರಣದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಬಾಲಕ ಅದೇ ವಸತಿ ಪ್ರದೇಶದಲ್ಲಿ ಆಟವಾಡುತ್ತಾ ಸಾಗುತ್ತಿದ್ದಾಗ ಏಕಾಏಕಿ ಕೆಲ ಬೀದಿ ನಾಯಿಗಳು ಬಾಲಕನ ಮೇಲೆ ದಾಳಿ ನಡೆಸಿವೆ. ಇದನ್ನೂ ಓದಿ: ಹಳೆಯ ಪೀಠೋಪಕರಣ ನೀಡಿದ್ದಕ್ಕೆ ಮದುವೆಯನ್ನು ರದ್ದುಪಡಿಸಿದ ವರ

    ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಾಲಕ ನಡೆದುಕೊಂಡು ಹೋಗುತ್ತಿದ್ದಾಗ 3 ನಾಯಿಗಳು ಆತನನ್ನು ಸುತ್ತುವರಿದಿವೆ. ಬಾಲಕ ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಬಳಿಕ ಆತನನ್ನು ನಾಯಿಗಳು ಬೀಳಿಸಿ, ಬಟ್ಟೆಯನ್ನು ಎಳೆದಾಡಿವೆ. ಬಾಲಕ ಎಷ್ಟೇ ಪ್ರಯತ್ನಪಟ್ಟರೂ ಅಲ್ಲಿಂದ ಏಳಲು ಸಾಧ್ಯವಾಗದೇ ಹೋಗುತ್ತಾನೆ. ಬಳಿಕ ನಾಯಿಗಳು ಬಾಲಕನ ಇಡೀ ದೇಹಕ್ಕೆ ಕಚ್ಚಿರುವುದು ಸಿಸಿಟಿವಿ ದೃಶ್ಯದಲ್ಲಿ ಕಂಡುಬಂದಿದೆ. ಇದನ್ನೂ ಓದಿ: ಕಡಬದಲ್ಲಿ ಕಾಡಾನೆ ಹಿಡಿಯುವ ಕಾರ್ಯಾಚರಣೆ ಆರಂಭ

    ಬಳಿಕ ಬಾಲಕನ ಚೀರಾಟ ಕೇಳಿದ ಗಂಗಾಧರ್ ಸ್ಥಳಕ್ಕೆ ದಾವಿಸಿದ್ದಾರೆ. ತಕ್ಷಣವೇ ಅವರು ಮಗನನ್ನು ಆಸ್ಪತ್ರೆಗೆ ದಾಖಲಿಸಿದರೂ ಅಷ್ಟರಲ್ಲೇ ಬಾಲಕ ಸಾವನ್ನಪ್ಪಿದ್ದಾನೆ. ಘಟನೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆಂಧ್ರ ಸಿಎಂ ಸಹೋದರಿ ಅರೆಸ್ಟ್; ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕೇಸ್ ದಾಖಲು

    ಆಂಧ್ರ ಸಿಎಂ ಸಹೋದರಿ ಅರೆಸ್ಟ್; ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕೇಸ್ ದಾಖಲು

    ಹೈದರಬಾದ್: ಆಡಳಿತ ಪಕ್ಷ ಭಾರತೀಯ ರಾಷ್ಟ್ರೀಯ ಸಮಿತಿಯ ಶಾಸಕರೊಬ್ಬರ (BRS) ವಿರುದ್ಧ ಅವಹೇಳನಕಾರಿ ಪದ ಬಳಕೆ ಆರೋಪದ ಮೇಲೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‍ಮೋಹನ್ ರೆಡ್ಡಿ (Y.S.Jagan Mohan Reddy) ಸಹೋದರಿ ಹಾಗೂ ವೈಎಸ್‍ಆರ್ ತೆಲಂಗಾಣ ಪಾರ್ಟಿಯ (YSRTP) ಅಧ್ಯಕ್ಷೆ ವೈ.ಎಸ್.ಶರ್ಮಿಳಾ ಅವರನ್ನು ತೆಲಂಗಾಣದ ಮೆಹಬೂಬಾಬಾದ್‍ನ ಬೆತೋಲ್‍ನಲ್ಲಿ ಬಂಧಿಸಲಾಗಿದೆ. ಅಲ್ಲದೇ ಶರ್ಮಿಳಾ ವಿರುದ್ಧ ಎಸ್‍ಸಿ-ಎಸ್‍ಟಿ ದೌರ್ಜನ್ಯ ತಡೆ ಕಾಯ್ದೆ (SC, ST atrocities case) ಅಡಿ ಪ್ರಕರಣ ದಾಖಲಿಸಲಾಗಿದೆ.

    ಶರ್ಮಿಳಾ ಅವರು ಮೆಹಬೂಬಾಬಾದ್ ನಗರದ ಶಾಸಕ ಶಂಕರ್ ನಾಯ್ಕ್ ವಿರುದ್ಧ ಪಕ್ಷದ ಸಭೆಯೊಂದರಲ್ಲಿ ಮಾನಹಾನಿ ಪದಗಳ ಬಳಕೆ ಮಾಡಿದ್ದರು. ದರೋಡೆ, ಅಕ್ರಮ, ಭೂ ಒತ್ತುವರಿ, ಭ್ರಷ್ಟಾಚಾರದ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಿಆರ್‍ಎಸ್ ಮಂಡಲ್ ಅಧ್ಯಕ್ಷ ಲುನಾವತ್ ಅಶೋಕ್ ಅವರು ಪೊಲೀಸ್ ಠಾಣೆಯಲ್ಲಿ ಶರ್ಮಿಳಾ ವಿರುದ್ಧ ದೂರು ದಾಖಲಿಸಿದ್ದರು. ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುವಾಗ ಶಂಕರ್ ನಾಯ್ಕ್ ವಿರುದ್ಧ ಶರ್ಮಿಳಾ ಕಠಿಣ ಪದಗಳನ್ನು ಬಳಸಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮೆಹಬೂಬಾಬಾದ್ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮನುಷ್ಯತ್ವ ಇರೋರು ಜನ ಸಾಯುತ್ತಿದ್ದಾಗ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿಕೊಳ್ತಾರಾ – ಫೇಸ್‌ಬುಕ್‌ನಲ್ಲಿ ರೋಹಿಣಿ ವಿರುದ್ಧ ರೂಪಾ ಕಿಡಿ

    ಬೆತೋಲ್‍ನಲ್ಲಿ ಅವರು ಪಾದಯಾತ್ರೆ ನಡೆಸುತ್ತಿದ್ದ ವೇಳೆ ಅಡಳಿತ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಪರಿಣಾಮ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಶರ್ಮಿಳಾ ಅವರನ್ನು ಬಂಧಿಸಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಅವರನ್ನು ಹೈದ್ರಾಬಾದ್‍ಗೆ (Hyderabad) ಕರೆದೊಯ್ಯಲಾಯಿತು.

    ಈ ಹಿಂದೆ ಸಹ ಶರ್ಮಿಳಾ ಅವರ ಬೆಂಬಲಿಗರು ಹಾಗೂ ಬಿಆರ್‍ಎಸ್ ಪಕ್ಷದ ಕಾರ್ಯಕರ್ತರೊಂದಿಗಿನ ಗಲಾಟೆ ವಿಚಾರವಾಗಿ ಹೈದ್ರಾಬಾದ್ ಪೊಲೀಸರು ಆಕೆಯನ್ನು ಬಂಧಿಸಿದ್ದರು. ಶರ್ಮಿಳಾ ಅವರು ಕಾರಿನಲ್ಲಿರುವಾಗಲೇ ಪೊಲೀಸರು ಕಾರನ್ನು ಕ್ರೈನ್ ಮೂಲಕ ಎಳೆದೊಯ್ದಿದ್ದರು. ಇದನ್ನು ತೀವ್ರವಾಗಿ ಖಂಡಿಸಿದ್ದ ಶರ್ಮಿಳಾ ಅವರು ಜನರ ಸಂಕಷ್ಟಗಳ ಬಗ್ಗೆ ಬೆಳಕು ಚೆಲ್ಲುವ ಶಾಂತಿಯುತ ಪಾದಯಾತ್ರೆ ನಡೆಸುತ್ತಿದ್ದೇವೆ. ನಮ್ಮ ಜನಪ್ರಿಯತೆಯನ್ನು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ (K. Chandrashekar Rao) ಹಾಗೂ ಅವರ ಬೆಂಬಲಿಗರು ಸಹಿಸುತ್ತಿಲ್ಲ ಎಂದು ಆರೋಪಿಸಿದ್ದರು. ಇದನ್ನೂ ಓದಿ: ನಟ ತಾರಕ ರತ್ನ ಅಂತಿಮ ದರ್ಶನಕ್ಕೆ ತೆಲುಗು ಫಿಲ್ಮ್ ಚೇಂಬರ್ ವ್ಯವಸ್ಥೆ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕತ್ತಲಲ್ಲಿ ಸ್ಮಾರ್ಟ್ ಫೋನ್ ಬಳಸಿ ದೃಷ್ಟಿ ಕಳೆದುಕೊಂಡ ಮಹಿಳೆ

    ಕತ್ತಲಲ್ಲಿ ಸ್ಮಾರ್ಟ್ ಫೋನ್ ಬಳಸಿ ದೃಷ್ಟಿ ಕಳೆದುಕೊಂಡ ಮಹಿಳೆ

    ಹೈದರಾಬಾದ್: ಅತಿಯಾದ ಸ್ಮಾರ್ಟ್ ಫೋನ್ (Smartphone) ಬಳಕೆಯಿಂದ ಮಹಿಳೆಯೊಬ್ಬಳು ಕಣ್ಣು ಕಳೆದುಕೊಂಡಿದ್ದ ಘಟನೆ ಹೈದರಾಬಾದ್‍ನಲ್ಲಿ (Hyderabad) ನಡೆದಿದೆ.

    30 ವರ್ಷದ ಮಂಜು ಒಂದೂವರೆ ವರ್ಷಗಳಿಂದ ದೃಷ್ಟಿ ದೋಷದ ಲಕ್ಷಣಗಳನ್ನು ಹೊಂದಿದ್ದರು. ಮಂಜು ಕತ್ತಲೆಯಲ್ಲಿ ತನ್ನ ಸ್ಮಾರ್ಟ್‍ಫೋನ್ ಅನ್ನು ಅತಿಯಾಗಿ ಬಳಸುತ್ತಿದ್ದಳು. ಇದರಿಂದಾಗಿ ಆಕೆ ದೃಷ್ಟಿ ಕಳೆದುಕೊಂಡಿದ್ದಳು.

    ತನ್ನ ಮಗುವನ್ನು ನೋಡಿಕೊಳ್ಳುವ ಸಲುವಾಗಿ ಆಕೆ ಬ್ಯೂಟಿಷಿಯನ್ ಕೆಲಸವನ್ನು ತೊರೆದಿದ್ದಾಳೆ. ನಂತರ ತನ್ನ ಮೊಬೈಲ್‍ನಲ್ಲೇ ಗಂಟೆಗಟ್ಟಲೆ ಕಳೆಯಲು ಪ್ರಾರಂಭಿಸಿದಳು. ಅದಾದ ಬಳಿಕ ಆಕೆಗೆ ಈ ರೋಗಲಕ್ಷಣಗಳು ಪ್ರಾರಂಭವಾದವು.

    ಅದಾದ ಬಳಿಕ ಆಕೆ ವೈದ್ಯರನ್ನು ಸಂಪರ್ಕಿಸಿದಳು. ಅ ಸಂದರ್ಭದಲ್ಲಿ ಆ ವೈದ್ಯರು (Doctor) ಯಾವುದೇ ಮಾತ್ರೆಯನ್ನು ನೀಡಿಲ್ಲ. ಜೊತೆಗೆ ಚಿಕಿತ್ಸೆಯನ್ನು ನೀಡಲಿಲ್ಲ. ಬದಲಾಗಿ ಮೊಬೈಲ್ ಬಳಕೆ ಕಡಿಮೆ ಮಾಡಲು ತಿಳಿಸಿದರು. ಇದಾದ ಬಳಿಕ ಆಕೆ ಸಂಪೂರ್ಣವಾಗಿ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿದ್ದರಿಂದ ಒಂದೂವರೆ ವರ್ಷದ ಬಳಿಕ ಆಕೆಯ ಕಣ್ಣು ಸಹಜ ಸ್ಥಿತಿಗೆ ಮರಳಿತು. ಇದನ್ನೂ ಓದಿ: ರಿಯಾಯ್ತಿ ದಂಡ ವಸೂಲಿಗಿಂದು ಕೊನೆ ದಿನ- ಬೆಂಗ್ಳೂರಲ್ಲಿ ನಕಲಿ ನಂಬರ್ ಜಾಲ ಬೆಳಕಿಗೆ

    ಅತಿಯಾದ ಸ್ಮಾರ್ಟ್‍ಫೋನ್ ಬಳಕೆಯಿಂದ ಕೆಲವರು ದೃಷ್ಟಿದೋಷದ ಸಮಸ್ಯೆಗೆ ಒಳಗಾಗುತ್ತಾರೆ. ಇದನ್ನು ಸ್ಮಾರ್ಟ್‍ಫೋನ್ ಮಿಷನ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಅದರಲ್ಲೂ ರಾತ್ರಿ ಹೊತ್ತು ಲೈಟ್ ಆಫ್ ಮಾಡಿಕೊಂಡು ಸ್ಮಾರ್ಟ್‍ಫೊನ್ ನೋಡುವುದರಿಂದ ಈ ರೋಗ ಹೆಚ್ಚಾಗಿ ಬರುತ್ತದೆ. ಈ ಬಗ್ಗೆ ಹೈದರಾಬಾದ್ ಮೂಲದ ಡಾ. ಸುಧೀರ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಹತ್ಯೆ ಮಾಡಲು ಬಂದವನೇ ಭೀಕರವಾಗಿ ಕೊಲೆಯಾದ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿಜೆಪಿ ಅಧಿಕಾರಕ್ಕೆ ಬಂದ್ರೆ ಸರ್ಕಾರಿ ಕಟ್ಟಡದ ಮೇಲಿನ ಗುಮ್ಮಟ ಕೆಡವುತ್ತೇವೆ – ಬಂಡಿ ಸಂಜಯ್

    ಬಿಜೆಪಿ ಅಧಿಕಾರಕ್ಕೆ ಬಂದ್ರೆ ಸರ್ಕಾರಿ ಕಟ್ಟಡದ ಮೇಲಿನ ಗುಮ್ಮಟ ಕೆಡವುತ್ತೇವೆ – ಬಂಡಿ ಸಂಜಯ್

    ಹೈದರಾಬಾದ್: ಈ ಬಾರಿ ತೆಲಂಗಾಣ (Telangana) ರಾಜ್ಯದಲ್ಲಿ ಬಿಜೆಪಿ (BJP) ಅಧಿಕಾರಕ್ಕೆ ಬಂದ್ರೆ ನಿಜಾಮರ ಸಂಸ್ಕೃತಿ ಬಿಂಬಿಸುವ ರಚನೆಗಳನ್ನ ಅಳಿಸಿ ಹಾಕ್ತೇವೆ. ರಾಜ್ಯ ಕಾರ್ಯದರ್ಶಿಗಳ ಭವನದ ಮೇಲೆ ನಿರ್ಮಿಸಿರುವ ಗುಮ್ಮಟವನ್ನೂ ಕೆಡವುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್‌ (Bandi Sanjay Kumar) ಹೇಳಿದ್ದಾರೆ.

    ಇಲ್ಲಿನ ಕುಕಟ್‌ಪಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಓವೈಸಿ ಅವರನ್ನ ಸಮಾಧಾನಪಡಿಸುವುದಕ್ಕಾಗಿ ಸಿಎಂ ಕೆ.ಚಂದ್ರಶೇಖರ ರಾವ್ (K. Chandrashekar Rao), ಸರ್ಕಾರಿ ಭವನಗಳನ್ನು ತಾಜ್‌ಮಹಲ್‌ನಂತಹ (Taj Mahal) ಸಮಾಧಿ ರೀತಿಯಾಗಿ ಪರಿವರ್ತಿಸಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಕರ್ನಾಟಕಕ್ಕೆ 100 ರೂ. ನೀಡಿದರೆ, ದೇಶಕ್ಕೆ ಕರ್ನಾಟಕ ಸಾವಿರ ರೂ. ನೀಡಲಿದೆ: ತೇಜಸ್ವಿ ಸೂರ್ಯ

    ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ನಿಜಾಮರ ಸಂಸ್ಕೃತಿ ಬಿಂಬಿಸುವ, ನಿಜಾಮ್ ಆಡಳಿತ ಸಂಕೇತಗಳಾಗಿರುವ ಎಲ್ಲಾ ರೀತಿಯ ರಚನೆಗಳನ್ನು ಅಳಿಸಿ ಹಾಕುತ್ತೇವೆ. ಅಲ್ಲದೇ ರಾಜ್ಯ ಕಾರ್ಯದರ್ಶಿ ಆಡಳಿತ ಭವನದ ಮೇಲೆ ನಿರ್ಮಿಸಲಾದ ಗುಮ್ಮಟವನ್ನೂ ಕೆಡವುತ್ತೇವೆ. ಮುಖ್ಯಮಂತ್ರಿಗಳ ಅಧಿಕೃತ ಬಂಗಲೆಯಾದ ಪ್ರಗತಿ ಭವನವನ್ನು ಪ್ರಜಾ ದರ್ಬಾರ್ ಆಗಿ ಬದಲಾಯಿಸುತ್ತೇವೆ ಎಂದು ಘೋಷಣೆ ಮಾಡಿದರು. ಇದನ್ನೂ ಓದಿ: ವಾಲ್ಮೀಕಿ ಜಾತ್ರೆಯಲ್ಲಿ ಕಿಚ್ಚನ ಫ್ಯಾನ್ಸ್ ಗಲಾಟೆ : ಸುದೀಪ್ ಬೆನ್ನಿಗೆ ನಿಂತ ಶಾಸಕ ರಾಜುಗೌಡ

    ಇದೇ ವೇಳೆ `ರಸ್ತೆ ಅಗಲೀಕರಣಕ್ಕೆ ಅಡ್ಡಿ ಉಂಟುಮಾಡುವ ಪ್ರಾರ್ಥನಾ ಮಂದಿರಗಳನ್ನ ಸರ್ಕಾರ ಕೆಡವಲಿದೆ’ ಎಂಬ ಸಿಎಂ ಕೆಸಿಆರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಸಾಧ್ಯವಾದರೇ ರಸ್ತೆ ಮಧ್ಯೆ ನಿರ್ಮಿಸಿರುವ ಮಸೀದಿಗಳನ್ನ ಕೆಡವಲಿ ಎಂದು ಸವಾಲು ಹಾಕಿದರು.

    ಹೈದರಾಬಾದ್ ನಗರದ ಕುಕಟ್ ಪಲ್ಲಿಯಲ್ಲಿ ಆಡಳಿತ ಪಕ್ಷದ ನಾಯಕರು ಬಡವರ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಜನರು ಇದರ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕೆ ಅವರನ್ನ ಬಂಧಿಸಿ, ಸುಳ್ಳು ಕೇಸ್‌ಗಳನ್ನ ದಾಖಲಿಸಿದ್ದಾರೆ. ಅಂಥಹವರ ವಿರುದ್ಧ ಮೊದಲು ಕ್ರಮ ಕೈಗೊಳ್ಳಿ ಎಂದು ತಿರುಗೇಟು ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮುಂಬೈಗೆ ಶಿಫ್ಟ್ ಆದ ಸಮಂತಾ : 15 ಕೋಟಿ ಬೆಲೆಯ ಮನೆಯಲ್ಲಿ ವಾಸ

    ಮುಂಬೈಗೆ ಶಿಫ್ಟ್ ಆದ ಸಮಂತಾ : 15 ಕೋಟಿ ಬೆಲೆಯ ಮನೆಯಲ್ಲಿ ವಾಸ

    ಕ್ಷಿಣದ ಖ್ಯಾತ ತಾರೆ ಸಮಂತಾ ರುತ್ ಪ್ರಭು ಹೈದರಾಬಾದ್ ತೊರೆದಿದ್ದಾರೆ. ಇನ್ಮುಂದೆ ಅವರು ಮುಂಬೈನಲ್ಲಿ ನೆಲೆಸಲಿದ್ದಾರೆ. ಅದಕ್ಕಾಗಿ ಸಮಂತಾ ದುಬಾರಿಯ ಬೆಲೆಯ ಫ್ಲ್ಯಾಟ್ ಖರೀದಿ ಮಾಡಿದ್ದು, ಅದಕ್ಕೆ 15 ಕೋಟಿ ರೂಪಾಯಿ ನೀಡಿದ್ದಾರೆ. ಅದು ಮೂರು ಬೆಡ್ ರೂಮ್ ವುಳ್ಳ ಮನೆಯಾಗಿದೆ ಎಂದು ವರದಿ ಆಗಿದೆ. ಇನ್ಮುಂದೆ ಸಮಂತಾ ಅದೇ ಮನೆಯಲ್ಲಿ ವಾಸವಿರಲಿದ್ದಾರೆ.

    ಅನಾರೋಗ್ಯದ ಕಾರಣದಿಂದಾಗಿ ಸ್ವಲ್ಪ ದಿನ ಸಿನಿಮಾ ರಂಗದಿಂದ ದೂರವಿದ್ದ ಸಮಂತಾ, ಇದೀಗ ಸಾಲು ಸಾಲು ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮತ್ತಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ವೆಬ್ ಸೀರಿಸ್ ಒಂದಕ್ಕೆ ಸಹಿ ಮಾಡಿರುವುದರಿಂದ ಮುಂಬೈನಲ್ಲೇ ಉಳಿಯಲಿದ್ದಾರೆ. ಅಲ್ಲಿಂದಲೇ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನುತ್ತಿವೆ ಮೂಲಗಳು. ಇದನ್ನೂ ಓದಿ:ಮದುವೆ ಫೋಟೋ ಹಂಚಿಕೊಂಡ ಬೆನ್ನಲ್ಲೇ ವೈರಲಾಯ್ತು ಸಿದ್- ಕಿಯಾರಾ ಆಮಂತ್ರಣ ಪತ್ರಿಕೆ

    ಸಮಂತಾ ಎರಡನೇ ಹಿಂದಿ ಸಿನಿಮಾವನ್ನು ಒಪ್ಪಿಕೊಂಡಿದ್ದು, ಈ ಸಿನಿಮಾದ ಶೂಟಿಂಗ್ ಗಾಗಿಯೇ ಅವರು ಹೆಚ್ಚು ದಿನಗಳ ಕಾಲ ಮುಂಬೈನಲ್ಲಿ ಇರಬೇಕಾದ ಸನ್ನಿವೇಶ ಎದುರಾಗಿದೆ. ವರುಣ್ ಧವನ್ ಜೊತೆಗಿನ ಆ ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಎಲ್ಲ ಕಾರಣದಿಂದಾಗಿಯೇ ಅವರು ಮುಂಬೈಗೆ ಶಿಫ್ಟ್ ಆಗಿದ್ದಾರಂತೆ. ಜೊತೆಗೆ ಹೊಸ ವಾತಾವರಣವೂ ಅವರಿಗೆ ಬೇಕಾಗಿದ್ದರಿಂದ ಮುಂಬೈ ಸೂಕ್ತ ಎನಿಸಿದೆಯಂತೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿಶಾಖಪಟ್ಟಣಂ ಆಂಧ್ರಪ್ರದೇಶದ ಹೊಸ ರಾಜಧಾನಿ: ಜಗನ್ ಮೋಹನ್ ರೆಡ್ಡಿ ಘೋಷಣೆ

    ವಿಶಾಖಪಟ್ಟಣಂ ಆಂಧ್ರಪ್ರದೇಶದ ಹೊಸ ರಾಜಧಾನಿ: ಜಗನ್ ಮೋಹನ್ ರೆಡ್ಡಿ ಘೋಷಣೆ

    ಹೈದರಾಬಾದ್: ವಿಶಾಖಪಟ್ಟಣಂ (Visakhapatnam) ಆಂಧ್ರಪ್ರದೇಶ (Andhrapradesh) ದ ಹೊಸ ರಾಜಧಾನಿಯಾಗಲಿದೆ ಎಂದು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ (‌Jagan Mohan Reddy) ಘೋಷಿಸಿದರು.

    ದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ರಾಜತಾಂತ್ರಿಕ ಒಕ್ಕೂಟದ ಸಭೆಯಲ್ಲಿ ಮಾತನಾಡಿದ ಅವರು, ಅಮರಾವತಿ ಬದಲು ವಿಶಾಖಪಟ್ಟಣಂ ರಾಜಧಾನಿಯಾಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದ ಎರಡನೇ ಅಧಿಕೃತ ಭಾಷೆಯಾಗುತ್ತಾ ತುಳು? – ಅಧ್ಯಯನಕ್ಕೆ ಸಮಿತಿ ರಚನೆ

    cm jagan mohan reddy

    ಮುಂದಿನ ದಿನಗಳಲ್ಲಿ ನಮ್ಮ ರಾಜಧಾನಿಯಾಗಲಿರುವ ವಿಶಾಖಪಟ್ಟಣಕ್ಕೆ ನಾನು ನಿಮ್ಮನ್ನು ಆಹ್ವಾನಿಸುತ್ತಿದ್ದೇನೆ. ಮುಂಬರುವ ತಿಂಗಳುಗಳಲ್ಲಿ ನಾನೇ ವಿಶಾಖಪಟ್ಟಣಂಗೆ ಶಿಫ್ಟ್ ಆಗಲಿದ್ದೇನೆ. ನಾವು ಮಾರ್ಚ್ 3 ಮತ್ತು 4 ರಂದು ಜಾಗತಿಕ ಹೂಡಿಕೆದಾರರ ಶೃಂಗಸಭೆಯನ್ನು ಆಯೋಜಿಸುತ್ತಿದ್ದೇವೆ ಎಂದರು.

    ನಾನು ನಿಮ್ಮೆಲ್ಲರನ್ನು ವಿಶಾಖಪಟ್ಟಣಂ ಬರಲು ಹೇಳುವುದು ಮಾತ್ರವಲ್ಲದೆ ವಿದೇಶದಲ್ಲಿರುವ ನಿಮ್ಮ ಸಹೋದ್ಯೋಗಿಗಳಿಗೆ ನಮ್ಮನ್ನು ಭೇಟಿ ವೈಯಕ್ತಿಕವಾಗಿ ಆಹ್ವಾನಿಸುತ್ತೇನೆ. ನಮ್ಮ ಆಂಧ್ರಪ್ರದೇಶದಲ್ಲಿ ವ್ಯಾಪಾರ ಮಾಡುವುದು ಎಷ್ಟು ಸುಲಭ ಎಂದು ನೀವೇ ನೋಡಿ ಎಂದು ಅವರು ಹೇಳಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕನ್ನಡದ ಖ್ಯಾತ ಕತೆಗಾರ, ಕವಿ ತಿರುಮಲೇಶ್ ನಿಧನ

    ಕನ್ನಡದ ಖ್ಯಾತ ಕತೆಗಾರ, ಕವಿ ತಿರುಮಲೇಶ್ ನಿಧನ

    ಬೆಂಗಳೂರು: ಕನ್ನಡದ ಖ್ಯಾತ ಕತೆಗಾರ, ಕವಿ ವಿಮರ್ಶಕ ಕೆ.ವಿ. ತಿರುಮಲೇಶ್ (KV Tirumalesh) ನಿಧನರಾಗಿದ್ದಾರೆ.

    ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ತಿರುಮಲೇಶ್‌(82) ಇಂದು ಮುಂಜಾನೆ ಹೈದರಾಬಾದಿನ ತಮ್ಮ ಮಗಳ ನಿವಾಸದಲ್ಲಿ ವಿಧಿವಶರಾಗಿದ್ದಾರೆ.

    ಇತ್ತೀಚೆಗೆ ತಿರುಮಲೇಶ್ ಅವರಿಗೆ ಹೃದಯದ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಕಳೆದ ವಾರದವರೆಗೂ ಆಸ್ಪತ್ರೆಯಲ್ಲಿದ್ದ ಅವರು ಭಾನುವಾರ ಡಿಸ್ಚಾರ್ಜ್‌ ಆಗಿ ಮನೆಗೆ ಬಂದಿದ್ದರು.  ಪತ್ನಿ, ಮೂವರು ಹೆಣ್ಣು ಮಕ್ಕಳನ್ನು ತಿರುಮಲೇಶ್‌ ಅಗಲಿದ್ದಾರೆ.

    ಕೇರಳದ ಕಾಸರಗೋಡು (Kasaragod) ಜಿಲ್ಲೆಯ ಕಾರಡ್ಕ ಗ್ರಾಮದಲ್ಲಿ 1940ರ ಸೆಪ್ಟೆಂಬರ್ 12ರಂದು ಜನಿಸಿದ ತಿರುಮಲೇಶ್ ಇವರು ಕನ್ನಡ ಭಾಷೆಯ ಬಹು ಮುಖ್ಯ ಕವಿ, ಕತೆಗಾರ, ಭಾಷಾ ವಿಜ್ಞಾನಿ, ವಿದ್ವಾಂಸ ಹಾಗೂ ವಿಮರ್ಶಕರಾಗಿ ಗುರುತಿಸಿಕೊಂಡಿದ್ದರು. ಇದನ್ನೂ ಓದಿ: ವಿಷ್ಣುವರ್ಧನ್ ಗೆ ‘ಕರ್ನಾಟಕ ರತ್ನ’: ಭರವಸೆ ನೀಡಿದ ಸಿಎಂ ಬೊಮ್ಮಾಯಿ

    1975ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಹೈದರಾಬಾದಿಗೆ ತೆರಳಿದ ತಿರುಮಲೇಶರು ಅಲ್ಲಿ ಭಾಷಾ ವಿಜ್ಞಾನದಲ್ಲಿ ಪಿಎಚ್.ಡಿ ಗಳಿಸಿದರು. ಹೈದರಾಬಾದಿನ ಸೆಂಟ್ರಲ್ ಇನ್ಸಿಟ್ಯೂಟ್ ಆಫ್ ಇಂಗ್ಲೀಷ್ ಆಂಡ್ ಫಾರಿನ್ ಲಾಂಗ್ವಿಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತಿ ಹೊಂದಿದ್ದರು. ನಂತರ ಯೆಮನ್ ದೇಶದಲ್ಲಿ ಕೆಲಕಾಲ ಇಂಗ್ಲಿಷ್‌ ಅಧ್ಯಾಪನ ಮಾಡಿದ್ದರು. ಅಮೇರಿಕದ ಅಯೋವ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.

    ಹೈದರಾಬಾದಿನಲ್ಲಿ ತಮ್ಮ ನಿವೃತ್ತಿ ಜೀವನವನ್ನು ಕಳೆಯುತ್ತಿದ್ದ ಅವರು ವಿವಿಧ ಪತ್ರಿಕೆಗಳಿಗೆ, ಜಾಲತಾಣಗಳಿಗೆ ನಿರಂತರವಾಗಿ ಅಂಕಣಗಳನ್ನು ಬರೆಯುತ್ತಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಂಗಳೂರು ವ್ಯಕ್ತಿ ಬಳಿಯಿದ್ದ Caucasian Shepherd ಶ್ವಾನಕ್ಕೆ ಬರೋಬ್ಬರಿ 20 ಕೋಟಿ ಆಫರ್

    ಬೆಂಗಳೂರು ವ್ಯಕ್ತಿ ಬಳಿಯಿದ್ದ Caucasian Shepherd ಶ್ವಾನಕ್ಕೆ ಬರೋಬ್ಬರಿ 20 ಕೋಟಿ ಆಫರ್

    ಬೆಂಗಳೂರು/ಹೈದರಾಬಾದ್: ನಾಯಿ ನಿಯತ್ತಿನ ಪ್ರಾಣಿ. ಹಾಗಾಗಿ ಬಹುತೇಕರು ಶ್ವಾನವನ್ನು ಮನೆಯಲ್ಲಿ ಸಾಕುತ್ತಾರೆ, ಮುದ್ದಿಸುತ್ತಾರೆ. ಕೆಲವರು ಶ್ವಾನಗಳ ಸಾಕಾಣಿಕೆಯನ್ನೇ ಉದ್ಯಮವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ವಿಶ್ವದಾದ್ಯಂತ ಹಲವು ತಳಿಯ ಶ್ವಾನಗಳನ್ನ ನಾವು ನೋಡುತ್ತೇವೆ. ಒಂದಕ್ಕಿಂತ ಒಂದು ದುಬಾರಿ ಬೆಲೆಯದ್ದು ಇವೆ. ಈಗ 20 ಕೋಟಿ ಆಫರ್‌ನಿಂದಾಗಿ ಬೆಂಗಳೂರಿನ (Bengaluru) ಶ್ವಾನ ಸುದ್ದಿಯಾಗಿದೆ.

     

    View this post on Instagram

     

    A post shared by S Sathish (@satishcadaboms)

    ಬೆಂಗಳೂರಿನ (Bengaluru) ವ್ಯಕ್ತಿಗೆ ಹೈದರಾಬಾದ್ ಬಿಲ್ಡರ್‌ವೊಬ್ಬರು (Hyderabad Builder) ಬರೋಬ್ಬರಿ 20 ಕೋಟಿ ಆಫರ್ ನೀಡಿದ್ದಾರೆ. ಆದ್ರೆ ಭಾರತೀಯ ಶ್ವಾನ ತಳಿಗಾರರ ಸಂಘದ ಅಧ್ಯಕ್ಷ ಎಸ್. ಸತೀಶ್ ತಮ್ಮ ಪ್ರೀತಿಯ ಶ್ವಾನವನ್ನು ತಾವೇ ಸಾಕುವ ಯೋಜನೆಯಿಂದ ಆಫರ್ ಅನ್ನು ನಿರಾಕರಿಸಿದ್ದಾರೆ. ಇದನ್ನೂ ಓದಿ: ಭಾರತೀಯ ಚಿತ್ರರಂಗದಲ್ಲೇ ಫಸ್ಟ್ ಟೈಂ ತನ್ನ ಪಾತ್ರಕ್ಕೆ ತಾನೇ ಡಬ್ ಮಾಡಿತು ಶ್ವಾನ!

    ಕಕೇಷ್ಯನ್ ಶೆಫರ್ಡ್ ವಿಶೇಷತೆ ಏನು?
    `ಕ್ಯಾಡಾಬೊಮ್ಸ್ ಹೇಡರ್’ ಹೆಸರಿನ ಒಂದೂವರೆ ವರ್ಷದ ಕಕೇಷ್ಯನ್ ಶೆಫರ್ಡ್ (Caucasian Shepherd) ಶ್ವಾನವು ಬರೋಬ್ಬರಿ 100 ಕೆ.ಜಿ ತೂಕವಿದೆ. ನೋಡಲು ಸಿಂಹದಂತೆಯೇ ಕಾಣುವ ಈ ಶ್ವಾನದ ತಲೆಬುರುಡೆ ಗಾತ್ರವು 38 ಇಂಚುಗಳಿದ್ದು, ಭುಜಗಳು 34 ಇಂಚುಗಳಿವೆ. ಅಲ್ಲದೇ ಶ್ವಾನದ ಕಾಲುಗಳು 2 ಲೀಟರ್ ಜ್ಯೂಸ್ ಬಾಟಲಿ ಗಾತ್ರದಷ್ಟು ದೊಡ್ಡದಾಗಿದೆ.

    ತಿರುವನಂತಪುರಂ ಕೆನಲ್ ಕ್ಲಬ್ (Trivandrum Kennel Club) ಸ್ಪರ್ಧೆಯಲ್ಲಿ ಭಾಗವಹಿಸಿರುವ ಕಕೇಷ್ಯನ್ ಶ್ವಾನವು ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ. ಅಲ್ಲದೇ ಅತ್ಯುತ್ತಮ ಶ್ವಾನವಾಗಿ 32 ಪದಗಳನ್ನು ಬಾಚಿಕೊಂಡಿದೆ. ಇದನ್ನೂ ಓದಿ: ಕಾಂಗ್ರೆಸ್, ಬಿಜೆಪಿ ತಲೆ ಬಾಗುವಂತೆ ಮಾಡುತ್ತೇನೆ – ಜನಾರ್ದನ ರೆಡ್ಡಿ ಸವಾಲ್

    ಕ್ಯಾಸ್ಪಿಯನ್ ಮತ್ತು ಕಪ್ಪು ಸಮುದ್ರ ಮಧ್ಯೆ ಇರುವ ಕಕೇಷ್ಯಾ ಪ್ರಾಂತ್ಯದ ಬಳಿ ಇರುವ ಕಕೇಷಿಯನ್ ಶೆಫರ್ಡ್ ಶ್ವಾನವನ್ನು (Caucasian Shepherd Dog) ಜಾನುವಾರುಗಳ ರಕ್ಷಣೆಗೆ ನೋಡಿಕೊಳ್ಳಲು ಸಾಕುತ್ತಾರೆ. ಈ ತಳಿಯ ಶ್ವಾನವು ಜಾರ್ಜಿಯಾ, ಅರ್ಮೇನಿಯಾ, ಅಜೆರ್ಬೈಜಾನ್, ಒಸ್ಸೆಟಿಯಾ, ಸರ್ಕಾಸಿಯಾ, ಟರ್ಕಿ, ರಷ್ಯಾ ಮತ್ತು ಡಾಗೆಸ್ತಾನ್ ದೇಶಗಳಲ್ಲಿ ಕಾಣಸಿಗುತ್ತವೆ. ಭಾರತ ದೇಶದಲ್ಲಿ ನೋಡಲು ಸಿಗೋದು ಅಪರೂಪ ಎಂದು ಸತೀಶ್ ವಿವರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಪ್ರಾಪ್ತ ಬಾಲಕಿಗೆ ಕಿರುಕುಳ – ಕೆಸಿಆರ್ ಪಕ್ಷದ ನಾಯಕ ಬಂಧನ

    ಅಪ್ರಾಪ್ತ ಬಾಲಕಿಗೆ ಕಿರುಕುಳ – ಕೆಸಿಆರ್ ಪಕ್ಷದ ನಾಯಕ ಬಂಧನ

    ಹೈದರಾಬಾದ್: ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಭಾರತೀಯ ರಾಷ್ಟ್ರೀಯ ಸಮಿತಿಯ (BRS) ಸ್ಥಳೀಯ ಮುಖಂಡನೊಬ್ಬನನ್ನು ಹೈದರಾಬಾದ್‌ನಲ್ಲಿ (Hyderabad) ಪೊಲೀಸರು ಬಂಧಿಸಿದ್ದಾರೆ.

    ತೆಲಂಗಾಣದ (Telangana) ಸಿಎಂ ಕೆ. ಚಂದ್ರಶೇಖರ್ ರಾವ್ (KCR) ಅವರ ಪಕ್ಷದ ನಾಯಕ, ಆರೋಪಿ ಅಖೀಲ್ ಅಹ್ಮದ್ 10 ವರ್ಷದ ಬಾಲಕಿಗೆ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸುನಿಲ್ ಕುಮಾರ್ ವಿರುದ್ಧ ಸಿಡಿದ ಹಿಂದೂ ಕಾರ್ಯಕರ್ತರು

    ವರದಿಗಳ ಪ್ರಕಾರ ಘಟನೆ ಭಾನುವಾರ ನಡೆದಿದೆ. 10 ವರ್ಷದ ಬಾಲಕಿ ಮೆಡಿಕಲ್ ಶಾಪ್‌ಗೆ ಹೋಗಿದ್ದಾಗ ಅಲ್ಲಿ ಅಖೀಲ್ ಅಹ್ಮದ್ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಬಳಿಕ ಬಾಲಕಿ ತನ್ನ ಮನೆಗೆ ಬಂದು ಪೋಷಕರಲ್ಲಿ ನಡೆದ ಘಟನೆ ತಿಳಿಸಿದ್ದಾಳೆ. ಬಾಲಕಿಯ ಪೋಷಕರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಓದಿದ್ದು 8ನೇ ತರಗತಿ, ಆದ್ರೆ IPS ಅಧಿಕಾರಿ ಎಂದು ಮಹಿಳೆಯರನ್ನು ನಂಬಿಸಿ ಲಕ್ಷ ಲಕ್ಷ ಹಣ ದೋಚಿದ

    ದೂರನ್ನು ಪಡೆದ ಬಳಿಕ ನಾವು ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಧ್ಯರಾತ್ರಿ ಫೋನ್‍ನಲ್ಲಿ ಮಾತನಾಡಿದ್ದಕ್ಕೆ ಮಗಳನ್ನೇ ಕೊಂದ ತಂದೆ

    ಮಧ್ಯರಾತ್ರಿ ಫೋನ್‍ನಲ್ಲಿ ಮಾತನಾಡಿದ್ದಕ್ಕೆ ಮಗಳನ್ನೇ ಕೊಂದ ತಂದೆ

    ಹೈದರಾಬಾದ್: ಮಧ್ಯರಾತ್ರಿ ಫೋನ್‍ನಲ್ಲಿ ಮಾತನಾಡುತ್ತಿದ್ದ ಮಗಳನ್ನು (Daughter) ತಂದೆಯೊಬ್ಬ (Father) ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ಹೈದರಾಬಾದ್‍ನ (Hyderabad) ಬಕರಂ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೃತಳನ್ನು ಯಾಸ್ಮಿನ್ ಉನಿಸ್ಸಾ (17) ಎಂದು ಗುರುತಿಸಲಾಗಿದೆ. ಆಕೆಯ ತಂದೆ ಮೊಹಮ್ಮದ್ ತಾಫಿಕ್ ಆಟೋ ಚಾಲಕನಾಗಿದ್ದ. ಈತ ಮಧ್ಯರಾತ್ರಿ ತನ್ನ ಮಗಳು ಯಾಸ್ಮೀನ್ ಫೋನ್‍ನಲ್ಲಿ (Mobile) ಮಾತನಾಡುವುದನ್ನು ಗಮನಿಸಿದ್ದಾನೆ.

    crime

    ಇದರಿಂದ ಕೋಪಗೊಂಡ ಮೊಹಮ್ಮದ್ ತನ್ನ ಮಗಳ ಫೋನ್ ಅನ್ನು ಕಸಿದು ಆಕೆಗೆ ಕಪಾಳ ಮೋಕ್ಷ ಮಾಡಿದ್ದಾನೆ. ಈ ವೇಳೆ ಅಲ್ಲಿಗೆ ಬಂದ ಆಕೆಯ ಹಿರಿಯ ಸಹೋದರಿ ನೌಸೀನು ತನ್ನ ತಂದೆಯನ್ನು ತಡೆಯಲು ಪ್ರಯತ್ನಿಸಿದ್ದಾಳೆ. ಆದರೆ ಮೊಹಮ್ಮದ್ ಆಕೆಯನ್ನು ಪಕ್ಕಕ್ಕೆ ತಳ್ಳಿ, ಯಾಸ್ಮೀನ್‍ನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: 16ರ ಬಾಲಕಿ ಮೇಲೆ 8 ಕಾಮುಕರಿಂದ ಸತತ 12 ಗಂಟೆ ಗ್ಯಾಂಗ್ ರೇಪ್

    ಘಟನೆಗೆ ಸಂಬಂಧಿಸಿ ನೌಸೀನುನಿಸ್ಸಾ ಪೊಲೀಸರಿಗೆ ಕರೆ ಮಾಡಿ ಘಟನೆ ಕುರಿತು ವಿವರಿಸಿದ್ದಾಳೆ. ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತೌಫಿಕ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಇಂದಿರಾ ಕ್ಯಾಂಟೀನ್‍ಗಳ ಹೊಣೆಹೊತ್ತ BBMP ಆರೋಗ್ಯ ವಿಭಾಗ

    Live Tv
    [brid partner=56869869 player=32851 video=960834 autoplay=true]