Tag: Hyderabad

  • ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ- ಗ್ಯಾಂಗ್ ಲೀಡರ್ ಮೇಲೆ ಫೈರಿಂಗ್

    ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ- ಗ್ಯಾಂಗ್ ಲೀಡರ್ ಮೇಲೆ ಫೈರಿಂಗ್

    ಯಾದಗಿರಿ: ಪೊಲೀಸರ ಮೇಲೆ ಪಿಸ್ತೂಲ್ ಹಾಗೂ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಡಕಾಯಿತಿ (Robbery) ಗ್ಯಾಂಗ್ ಲೀಡರ್ ಮೇಲೆ ಪೊಲೀಸರು ಫೈರಿಂಗ್ ಮಾಡಿ ಬಂಧಿಸಿರುವ ಘಟನೆ ಯಾದಗಿರಿಯಲ್ಲಿ (Yadgiri) ನಡೆದಿದೆ.

    ಆರೋಪಿ ಮಹಮ್ಮದ್ ರಫಿಯನ್ನು ಬಂಧಿಸಲು ಪೊಲೀಸರು ತೆರಳಿದ್ದಾಗ ಆತ ಪಿಸ್ತೂಲ್ ಹಾಗೂ ಚಾಕುವಿನಿಂದ ಹೆದರಿಸಿದ್ದಾನೆ. ಈ ವೇಳೆ ಸಿಪಿಐ ಸುನೀಲ್ ವಿ.ಮೂಲಿಮನಿ, ಪಿಸಿ ಅಬ್ದುಲ್ ಭಾಷ ಹಾಗೂ ಹರಿನಾಥರೆಡ್ಡಿಯವರು ಆರೋಪಿಯನ್ನು ಹಿಡಿಯಲು ಯತ್ನಿಸಿದ್ದಾರೆ. ಆಗ ಆರೋಪಿ ಮೂವರ ಮೇಲೂ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಆತ್ಮರಕ್ಷಣೆಗಾಗಿ ಸಿಪಿಐ ಸುನೀಲ್ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಇದನ್ನೂ ಓದಿ: ಪರೀಕ್ಷಾ ಕೇಂದ್ರದಲ್ಲಿ ಎಡವಟ್ಟು- ಮೊಬೈಲ್ ಕೊಂಡೊಯ್ದು ಸೆಲ್ಫಿ ಕ್ಲಿಕ್ಕಿಸಿದ ಮೇಲ್ವಿಚಾರಕಿ

    ಪ್ರಕರಣದ ಹಿನ್ನೆಲೆ: ಫೆ. 24ರಂದು ಯಾದಗಿರಿ ನಗರದಲ್ಲಿ ಉದ್ಯಮಿ ದೀಪಕ್ ನಂದಕಿಶೋರ್ ಮನೆಯಲ್ಲಿ ಕಳ್ಳತನ ನಡೆದಿತ್ತು. ಎಂಟರಿಂದ ಹತ್ತು ಜನರ ತಂಡದಲ್ಲಿ ನಾಲ್ಕು ಜನ ದೀಪಕ್ ನಂದಕಿಶೋರ್ ಮನೆಯೊಳಗೆ ನುಗ್ಗಿ ಪಿಸ್ತೂಲ್ ತೋರಿಸಿ ಚಿನ್ನ, ಬೆಳ್ಳಿ, ಮೊಬೈಲ್ ಹಾಗೂ ಹಣವನ್ನು ದೋಚಿದ್ದರು.

    ದೀಪಕ್ ಕುಟುಂಬಸ್ಥರು ವಿರೋಧಿಸಿದಾಗ ಕಾರದಪುಡಿ ಎರಚಿ ವಿಕೃತಿ ಮರೆದಿದ್ದರು. ಈ ವೇಳೆ ದೀಪಕ್ ಸಹೋದರ ಮನೆಯ ಮಹಡಿಯಿಂದ ಹಾರಿ ಕಿರುಚಾಡಿ ಜನರನ್ನ ಸೇರಿಸಿದ್ದರು. ಜನ ಬರುವಷ್ಟರಲ್ಲಿ ಕಳ್ಳರು ತಪ್ಪಿಸಿಕೊಂಡಿದ್ದರು. ನಗರದ ಪ್ರಮುಖ ಸರ್ಕಲ್ ಬಳಿ ಇರುವ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪೊಲೀಸರಿಗೆ ಸಂಪೂರ್ಣ ಮಾಹಿತಿ ಸಿಕ್ಕಿತ್ತು.

    ಪ್ರಕರಣ ಸಂಬಂಧ ಯಾದಗಿರಿ ಎಸ್ಪಿ ಸಿಬಿ ವೇದಮೂರ್ತಿ, ಎಸ್ಪಿ ಸುನೀಲ್ ವಿ ಮೂಲಿಮನಿ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು.

    CRIME 2

    ಸತತ 15 ದಿನಗಳ ಕಾಲ ಹೈದ್ರಾಬಾದ್ (Hyderabad), ನಾರಾಯಣಪೇಟೆ ಹಾಗೂ ರಾಯಚೂರು (Raichur) ಜಿಲ್ಲೆಗಳಲ್ಲಿ ಕಾರ್ಯಾಚರಣೆ ಮಾಡಿದ್ದ ಪೊಲೀಸರ ತಂಡ ಭಾನುವಾರ ನಾಲ್ವರು ಆರೋಪಿಗಳನ್ನ ಬಂಧಿಸಿದ್ದರು. ಮಹ್ಮದ್ ಸಾಜೀದ್, ಸೈಯದ್ ಮುಕ್ತಿಯಾರ್, ಮಹೆಬೂಬ್, ಶಹಬಾಜ್ ಹೈಯಾಸ್ ಬಂಧಿತ ಆರೋಪಿಗಳು. ಆದರೆ ಗ್ಯಾಂಗ್ ಲೀಡರ್ ಮಹಮ್ಮದ್ ರಫೀ ಹಾಗೂ ಸಲೀಂ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಳ್ಳುತ್ತಿದ್ದರು.

    ಗ್ಯಾಂಗಸ್ಟರ್ ಮಹಮ್ಮದ್ ರಪಿ, ಉದ್ಯಮಿ ದೀಪಕ್ ನಂದಕಿಶೋರ್ ಕಾರ್ ಡ್ರೈವರ್ ಆಗಿ ಕೆಲಸ ಮಾಡಿದ್ದ. ನಂದಕಿಶೋರ್ ಸಿಗರೇಟ್ ಸೇರಿದಂತೆ ಸಗಟು ವ್ಯಾಪಾರದ ವ್ಯಾಪರಸ್ಥನಾಗಿದ್ದ. ಕೆಲ ದಿನಗಳ ಹಿಂದೆ ದೀಪಕ್ ನಂದಕಿಶೋರ್ ಮನೆಯಲ್ಲಿ ಸಿಗರೇಟ್ ಬಾಕ್ಸ್ ಗಳನ್ನ ರಫಿ ಕದ್ದು ಸಿಕ್ಕಿಬಿದ್ದಿದ್ದ. ಆಗ ಪೊಲೀಸರಿಗೆ ದೂರು ನೀಡದೇ ಬುದ್ಧಿ ಹೇಳಿ ಕೆಲಸದಿಂದ ತೆಗೆದಿದ್ದರು. ಇದೇ ಸಿಟ್ಟಿಗೆ ಕಳ್ಳತನದ ಪ್ಲಾನ್ ಮಾಡಿದ್ದ. ಸಲೀಂ ಹಾಗೂ ರಫಿ ಯಾದಗಿರಿ ನಗರದ ವರ್ಕನಳ್ಳಿ ಭಾಗದಲ್ಲಿ ಒಂದೇ ಕಡೆ ಅಡಗಿ ಕುಳಿತಿದ್ದ ಖಚಿತ ಮಾಹಿತಿ ಪಡೆದ ಸಿಪಿಐ ಸುನೀಲ್ ನೇತೃತ್ವದ ತಂಡ ಬೆಳ್ಳಂಬೆಳ್ಳಗ್ಗೆ ದಾಳಿ ನಡೆಸಿದೆ.

    ಗಾಯಗೊಂಡಿದ್ದ ಆರೋಪಿಗೆ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆರೋಪಿಯ ಪ್ರತಿದಾಳಿಯಲ್ಲಿ ಗಾಯಗೊಂಡ ಪೊಲೀಸರಿಗೂ ಚಿಕಿತ್ಸೆ ನೀಡಲಾಗಿದೆ ಎಂದು ಎಸ್‍ಪಿ ವೇದಮೂರ್ತಿ ತಿಳಿಸಿದ್ದಾರೆ. ಇದನ್ನೂ ಓದಿ: ಹೇ ನಡೀಯಪ್ಪ ನೀನು, ನಮಗೆ ತಲೆ ಬಿಸಿಯಾಗಿದೆ: ಸಿದ್ದರಾಮಯ್ಯ ಇನ್ ಟೆನ್ಶನ್

  • ಹೊಟ್ಟೆನೋವಿನಿಂದಾಗಿ ತೆಲಂಗಾಣದ ಸಿಎಂ ಕೆಸಿಆರ್ ಆಸ್ಪತ್ರೆ ದಾಖಲು

    ಹೊಟ್ಟೆನೋವಿನಿಂದಾಗಿ ತೆಲಂಗಾಣದ ಸಿಎಂ ಕೆಸಿಆರ್ ಆಸ್ಪತ್ರೆ ದಾಖಲು

    ಹೈದರಾಬಾದ್: ತೆಲಂಗಾಣದ ಮುಖ್ಯಮಂತ್ರಿ (Telangana CM) ಕೆ ಚಂದ್ರಶೇಖರ್ ರಾವ್ (K Chandrashekar Rao) ಅವರು ಭಾನುವಾರ ಹೊಟ್ಟೆನೋವಿನ (Abdominal Pain) ಹಿನ್ನೆಲೆ ಹೈದರಾಬಾದ್‌ನ (Hyderabad) ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಭಾರತ್ ರಾಷ್ಟ್ರ ಸಮಿತಿ (BRS) ಪಕ್ಷದ ಮುಖ್ಯಸ್ಥ ಕೆಸಿಆರ್ ಅವರು ಹೊಟ್ಟೆನೋವಿನ ಹಿನ್ನೆಲೆ ನಗರದ ಎಐಜಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಹೊಟ್ಟೆಯಲ್ಲಿ ಸಣ್ಣ ಹುಣ್ಣು ಕಾಣಿಸಿಕೊಂಡಿದ್ದು, ಚಿಕಿತ್ಸೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಹೊಟ್ಟೆಯಲ್ಲಿ ಕಂಡುಬಂದಿರುವ ಹುಣ್ಣಿಗೆ ಚಿಕಿತ್ಸೆ ಆರಂಭಿಸಲಾಗಿದೆ. ಇದನ್ನು ಹೊರತುಪಡಿಸಿ ಅವರು ಆರೋಗ್ಯವಾಗಿದ್ದಾರೆ. ಅವರಿಗೆ ಸೂಕ್ತವಾದ ಔಷಧಿ ನೀಡಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಉದ್ಯಮಿ ಪ್ರದೀಪ್ ಶೂಟೌಟ್ ಕೇಸ್- A3 ಆರೋಪಿ ಲಿಂಬಾವಳಿ ಹೇಳಿಕೆ ಕೂಡ ದಾಖಲು

    ಕೆಸಿಆರ್ (KCR) ಆಸ್ಪತ್ರೆ ದಾಖಲಾಗಿರುವ ಹಿನ್ನೆಲೆ ಟ್ವೀಟ್ ಮಾಡಿರುವ ತೆಲಂಗಾಣದ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್, ಕೆ ಚಂದ್ರಶೇಖರ್ ರಾವ್ ಅವರು ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: RRR-ನಾಟು ನಾಟು ಹಾಡಿಗೆ ಆಸ್ಕರ್ : ಸಂತಸ ವ್ಯಕ್ತ ಪಡಿಸಿದ ಲಹರಿ ವೇಲು

  • ವಧುದಕ್ಷಿಣೆ ಕಡಿಮೆ ಆಯ್ತು ಅಂತಾ ಮದುವೆ ಬೇಡವೆಂದ ಯುವತಿ – ಪ್ರಕರಣ ದಾಖಲಿಸದ ಪೊಲೀಸರು

    ವಧುದಕ್ಷಿಣೆ ಕಡಿಮೆ ಆಯ್ತು ಅಂತಾ ಮದುವೆ ಬೇಡವೆಂದ ಯುವತಿ – ಪ್ರಕರಣ ದಾಖಲಿಸದ ಪೊಲೀಸರು

    ಹೈದರಾಬಾದ್: ವರದಕ್ಷಿಣೆ ವಿಚಾರಕ್ಕೆ ಬಹಳಷ್ಟು ಮದುವೆಗಳು ಮುರಿದಿರುವುದನ್ನು ನಾವು ಕಂಡಿದ್ದೇವೆ. ಆದರೆ ಹೈದರಾಬಾದ್ (Hyderabad) ಹೊರವಲಯ ಘಟ್‍ಕೇಸರ್‌ನಲ್ಲಿ (Ghatkesar) ನಡೆಯುತ್ತಿದ್ದ ಮದುವೆಯೊಂದು (Marriage) ವಧುದಕ್ಷಿಣೆ (Dowry) ವಿಚಾರಕ್ಕೆ ಮುರಿದು ಹೋಗಿದೆ.

    ಮದುವೆಗೂ ಮುನ್ನ ವಧುದಕ್ಷಿಣೆಯಾಗಿ ಎರಡು ಲಕ್ಷ ರೂ. ನೀಡಲು ಮಾತುಕತೆ ನಡೆದಿತ್ತು. ಇದಕ್ಕೆ ಒಪ್ಪಿದ್ದ ವರನ ಕುಟುಂಬಸ್ಥರು ಹಣವನ್ನು ವಧುವಿನ ಕುಟುಂಬಕ್ಕೆ ಹಸ್ತಾಂತರ ಮಾಡಿದ್ದರು. ಮದುವೆಗೆ ಎಲ್ಲಾ ತಯಾರಿಗಳೂ ನಡೆದಿದ್ದವು. ಆದರೆ ಕಡೆ ಕ್ಷಣದಲ್ಲಿ ಮನಸ್ಸು ಬದಲಿಸಿದ ಯುವತಿ ವಧುದಕ್ಷಿಣೆ ಕಡಿಮೆಯಾಗಿದೆ ಎಂದು ಆರೋಪಿಸಿ ಮದುವೆಗೆ ನಿರಾಕರಿಸಿದ್ದಾಳೆ. ಇದನ್ನೂ ಓದಿ: ಮದುವೆಗೆ ವಿರೋಧ – ಬೆಟ್ಟದಿಂದ ಹಾರಿ ಯುವ ಪ್ರೇಮಿಗಳು ಆತ್ಮಹತ್ಯೆ

    ಅಶ್ವರಾವ್‍ಪೇಟೆಯಿಂದ (Aswaraopeta) ವಿವಾಹ ಸ್ಥಳಕ್ಕೆ ತೆರಳಬೇಕಿದ್ದ ವಧು ಮದುವೆಗೆ ನಿರಾಕರಿಸಿ ಮನೆಯಲ್ಲೆ ಉಳಿದುಕೊಂಡಿದ್ದಾಳೆ. ಯುವತಿಯ ನಿರ್ಧಾರ ತಿಳಿಯುತ್ತಿದ್ದಂತೆ ವರನ ಮನೆಯವರು ಆಘಾತಗೊಂಡಿದ್ದಾರೆ. ಪೊಲೀಸ್ ಠಾಣೆಗೆ ತೆರಳಿ ವಧುವಿನ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ.

    ಪೊಲೀಸರು ವಧುವಿನ (Bride) ಕುಟುಂಬಸ್ಥರನ್ನು ಕರೆಸಿ ಮಾತುಕತೆ ನಡೆಸಿದ್ದಾರೆ. ನಂತರ ಯುವತಿ ಮದುವೆಗೆ ಆಸಕ್ತಿ ಹೊಂದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡು ಸಂಧಾನ ನಡೆಸಿದ್ದಾರೆ. ದೂರು ದಾಖಲಿಸದೇ ಪ್ರಕರಣ ಅಂತ್ಯಗೊಳಿಸಿದ್ದಾರೆ. ಇದನ್ನೂ ಓದಿ: ಅಭಿವೃದ್ಧಿ ಅಂದ್ರೆ ಬೊಜ್ಜು ಕಡಿಮೆ ಮಾಡಿಕೊಳ್ಳಲು ಭಾರತ್ ಜೋಡೋ ಹೆಸರಲ್ಲಿ ವಾಕಿಂಗ್ ಮಾಡಿದಂತಲ್ಲ: ತೇಜಸ್ವಿ

  • 10ನೇ ಕ್ಲಾಸ್ ವಿದ್ಯಾರ್ಥಿಯೊಂದಿಗೆ 26 ವರ್ಷದ ಶಿಕ್ಷಕಿ ಪರಾರಿ

    10ನೇ ಕ್ಲಾಸ್ ವಿದ್ಯಾರ್ಥಿಯೊಂದಿಗೆ 26 ವರ್ಷದ ಶಿಕ್ಷಕಿ ಪರಾರಿ

    ಹೈದರಾಬಾದ್: ಪ್ರೇಮದಲ್ಲಿ ಬಿದ್ದು ಶಾಲಾ (school) ಶಿಕ್ಷಕಿಯೊಬ್ಬರು (Teacher) ವಿದ್ಯಾರ್ಥಿಯೊಂದಿಗೆ (Student) ಪರಾರಿಯಾದ ಘಟನೆ ಚಂದಾನಗರದಲ್ಲಿ ನಡೆದಿದೆ.

    ಕಳೆದ ಫೆ.16 ರಂದು 26 ವರ್ಷದ ಶಿಕ್ಷಕಿ ಹಾಗೂ 10ನೇ ತರಗತಿ ವಿದ್ಯಾರ್ಥಿ ಇಬ್ಬರೂ ನಗರದಿಂದ ಬೆಂಗಳೂರಿಗೆ ತೆರಳಿದ್ದರು. ಈ ಬಗ್ಗೆ ಬಾಲಕನ ಪೋಷಕರು ಗಚಿಬೌಲಿ (Gachibowli) ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲಿಸಿದ್ದರು. ಶಿಕ್ಷಕಿಯ ಅಜ್ಜಿ ಚಂದಾನಗರ (Chandanagar) ಠಾಣೆಯಲ್ಲಿ ಕಾಣೆ ಪ್ರಕರಣ ದಾಖಲಿಸಿದ್ದರು. ಇದನ್ನೂ ಓದಿ: ನಿಯಂತ್ರಣ ತಪ್ಪಿ ಕಾರು ಪಲ್ಟಿ – ಚಾಲಕನಿಗೆ ಗಾಯ

    ತನಿಖೆ ಆರಂಭಗೊಳ್ಳುತ್ತಿದ್ದಂತೆ ಶಿಕ್ಷಕಿ ಹಾಗೂ ವಿದ್ಯಾರ್ಥಿ ಮನೆಗೆ ಮರಳಿದ ಹಿನ್ನೆಲೆಯಲ್ಲಿ ಎರಡು ಕುಟುಂಬಗಳು ನೀಡಿದ್ದ ದೂರನ್ನು ವಾಪಸ್ ಪಡೆದಿದ್ದಾರೆ.

    ಈ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರಿಗೆ, ಶಿಕ್ಷಕಿ ಹಾಗೂ ವಿದ್ಯಾರ್ಥಿ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಬೇರೆಡೆ ತೆರಳಲು ಯೋಜಿಸಿದ್ದರು ಎಂದು ತಿಳಿದು ಬಂದಿದೆ. ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆಸಿ ಆಪ್ತ ಸಮಾಲೋಚನೆ (Counselling) ಕೊಡಿಸಿ ಕಳುಹಿಸಿದ್ದಾರೆ. ಇದನ್ನೂ ಓದಿ: ಮಾ.9 ರಂದು ಕರ್ನಾಟಕ ಬಂದ್‌ಗೆ ಕರೆ ಕೊಟ್ಟ ಡಿಕೆಶಿ

  • ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಕುಸಿದು ಬಿದ್ದು 38 ವರ್ಷದ ವ್ಯಕ್ತಿ ದುರ್ಮರಣ

    ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಕುಸಿದು ಬಿದ್ದು 38 ವರ್ಷದ ವ್ಯಕ್ತಿ ದುರ್ಮರಣ

    ಹೈದರಾಬಾದ್: ಹಠಾತ್ ಹೃದಯಾಘಾತಕ್ಕೆ ಸಂಬಂಧಿಸಿದಂತೆ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹೈದರಾಬಾದ್‍ನಲ್ಲಿ (Hyderabad) ನಡೆದಿದೆ.

    38 ವರ್ಷದ ಪರಮೇಶ್ ಯಾದವ್ ಅಲಿಯಾಸ್ ಶ್ಯಾಮ್ ಯಾದವ್ ಹೃದಯಾಘಾತದಿಂದ (Heart attack) ಮೃತಪಟ್ಟ ವ್ಯಕ್ತಿ. ಮಂಗಳವಾರ ತಡರಾತ್ರಿ ನಗರದ ಲಾಲಾಪೇಟ್ ಪ್ರದೇಶದ ಪ್ರೊ.ಜಯಶಂಕರ್ ಇಂಡೋರ್ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ (Badminton) ಆಡುತ್ತಿದ್ದ ಸಂದರ್ಭ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಎ.ಮಂಜು ಜೊತೆ ಅಡ್ಜಸ್ಟ್ ಸಾಬೀತುಪಡಿಸಿದ್ರೆ ರಾಮಸ್ವಾಮಿ ಹೇಳುವ ಶಿಕ್ಷೆಗೆ ಗುರಿಯಾಗ್ತೀನಿ: ರೇವಣ್ಣ

    ಖಾಸಗಿ ಉದ್ಯೋಗಿಯಾಗಿದ್ದ ಅವರು ಖಾಯಂ ಆಗಿ ಬ್ಯಾಡ್ಮಿಂಟನ್ ಆಡಲು ಕ್ರೀಡಾಂಗಣಕ್ಕೆ ಬರುತ್ತಿದ್ದರು. ಕುಸಿದು ಬಿದ್ದ ತಕ್ಷಣವೇ ಅವರನ್ನು ಗಾಂಧಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅಷ್ಟು ಹೊತ್ತಿಗಾಗಲೇ ಅವರ ಉಸಿರು ನಿಂತು ಹೋಗಿತ್ತು.

    ಸಾಂದರ್ಭಿಕ ಚಿತ್ರ

    ಘಟನೆಯ ಬಗ್ಗೆ ಲಾಲಾಗುಡ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಶ್ಯಾಮ್ ಯಾದವ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದರು. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ. ಕಳೆದ 8 ದಿನಗಳಲ್ಲಿ ಸಂಭವಿಸಿದ ಹಠಾತ್ ಹೃದಯಾಘಾತ ಪ್ರಕರಣಗಳಲ್ಲಿ ಇದು ನಾಲ್ಕನೇ ಘಟನೆ ಎಂದು ವರದಿಯಾಗಿದೆ.

    ಇದಕ್ಕೂ ಮೊದಲು, 19 ವರ್ಷದ ಯುವಕ ತನ್ನ ಸಂಬಂಧಿಕರ ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಸಂದರ್ಭ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಫೆಬ್ರವರಿ 27ರಂದು ನಿರ್ಮಲ್ ಜಿಲ್ಲೆಯ ಪಾರ್ಡಿ ಗ್ರಾಮದಲ್ಲಿ ನಡೆದಿದೆ. ಫೆಬ್ರವರಿ 23ರಂದು 24 ವರ್ಷದ ಪೊಲೀಸ್ ಪೇದೆಯೊಬ್ಬ ಹೈದರಾಬಾದ್‍ನಲ್ಲಿ ಜಿಮ್ ಮಾಡುತ್ತಿದ್ದ ಸಂದರ್ಭ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

    ಈ ತರಹದ ಪ್ರಕರಣವು ಇತ್ತೀಚಿಗೆ ನಗರದ ಕಲಾಪತ್ಥರ್‍ನಲ್ಲಿ ಫೆಬ್ರವರಿ 20ರಂದು ವರದಿಯಾಗಿದೆ. ಈ ಪ್ರಕರಣದಲ್ಲಿ ಮಧ್ಯವಯಸ್ಕ ವ್ಯಕ್ತಿಯೊಬ್ಬರು ವರನಿಗೆ ಅರಶಿಣ ಹಚ್ಚುವ ಸಂದರ್ಭ ಹಠಾತ್ ಕುಸಿದು ಬಿದ್ದು ಸಾವನ್ನಪಿದ್ದಾರೆ. ಇದನ್ನೂ ಓದಿ: ಎಷ್ಟೇ ಪೌಡರ್ ಹಾಕಿದ್ರೂ ನೀನು ಬೆಳ್ಳಗಾಗಲ್ಲ – ಪತ್ನಿಯ ಕತ್ತು ಹಿಸುಕಿ ಕೊಂದ ಪತಿ

  • ತರಗತಿಯಲ್ಲೇ ವಿದ್ಯಾರ್ಥಿ ಆತ್ಮಹತ್ಯೆ- ತೆಲಂಗಾಣದಲ್ಲಿ ಮುಂದುವರಿದ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ

    ತರಗತಿಯಲ್ಲೇ ವಿದ್ಯಾರ್ಥಿ ಆತ್ಮಹತ್ಯೆ- ತೆಲಂಗಾಣದಲ್ಲಿ ಮುಂದುವರಿದ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ

    ಹೈದರಾಬಾದ್: ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ (Student) ತರಗತಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ನಗರದ ಕಾಲೇಜೊಂದರಲ್ಲಿ ಮಂಗಳವಾರ ನಡೆದಿದೆ.

    ಸ್ಪರ್ಧಾತ್ಮಕ ಪರೀಕ್ಷಗೆ ತಯಾರಿ ನಡೆಸುತ್ತಿದ್ದ 16 ವರ್ಷದ ವಿದ್ಯಾರ್ಥಿ ರಾತ್ರಿ 10 ಗಂಟೆಯ ನಂತರ ಕಣ್ಮರೆಯಾಗಿದ್ದ. ಶಾಲಾ ಕಟ್ಟಡದ ಎಲ್ಲಾ ಕೊಠಡಿಗಳಲ್ಲಿ ತೀವ್ರ ಶೋಧ ನಡೆಸಿದಾಗ ಆತನ ಮೃತದೇಹ ಪತ್ತೆಯಾಗಿತ್ತು. ವಿದ್ಯಾರ್ಥಿಯ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಇದನ್ನೂ ಓದಿ: ಸರ್ಕಾರಿ ನೌಕರರಿಗೆ 17% ವೇತನ ಹೆಚ್ಚಳ: ಸಿಎಂ

    ತೆಲಂಗಾಣದಲ್ಲಿ (Telangana) ಕಳೆದ ಒಂದು ವಾರದಿಂದ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ಮುಂದುವರಿದಿದ್ದು ಪೋಷಕರು ಮತ್ತು ಅಧಿಕಾರಿಗಳಲ್ಲಿ ಆತಂಕ ಮೂಡಿಸಿದೆ. ಸ್ನೇಹಿತನೊಬ್ಬ ವೈಯಕ್ತಿಕ ಫೋಟೋಗಳನ್ನು ಸೋರಿಕೆ ಮಾಡಿದ್ದ ಹಿನ್ನೆಲೆಯಲ್ಲಿ ಭಾನುವಾರ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ವಾರಂಗಲ್‍ನಲ್ಲಿ (Warangal) ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು.

    ಕಳೆದ ಡಿಸೆಂಬರ್‍ನಲ್ಲಿ ಹಿರಿಯ ವಿದ್ಯಾರ್ಥಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ವೈದ್ಯಕೀಯ ವಿದ್ಯಾರ್ಥಿನಿ ಭಾನುವಾರ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಮತ್ತೊಂದು ಘಟನೆಯಲ್ಲಿ ಕಳೆದ ಶನಿವಾರ ನಿಜಾಮಾಬಾದ್‍ನ (Nizamabad) ಹಾಸ್ಟೆಲ್ ಕೋಣೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇತ್ತೀಚಿನ ಅಧಿಕೃತ ಅಂಕಿ ಅಂಶಗಳ ಪ್ರಕಾರ 2021ರಲ್ಲಿ ಭಾರತದ 1,64,033 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಎಎಪಿಗೆ ಗುಡ್‌ಬೈ; ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಬಿಜೆಪಿ ಸೇರ್ಪಡೆ

  • ಸ್ನೇಹಿತನಿಂದಲೇ ಪರ್ಸನಲ್ ಫೋಟೋ ಲೀಕ್ – ವಿದ್ಯಾರ್ಥಿನಿ ಆತ್ಮಹತ್ಯೆ

    ಸ್ನೇಹಿತನಿಂದಲೇ ಪರ್ಸನಲ್ ಫೋಟೋ ಲೀಕ್ – ವಿದ್ಯಾರ್ಥಿನಿ ಆತ್ಮಹತ್ಯೆ

    ಹೈದರಾಬಾದ್: ತೆಲಂಗಾಣದಲ್ಲಿ (Telangana) ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು (Student) ರ‍್ಯಾಂಗಿಂಗ್‌ಗೆ ಒಳಗಾಗಿ ಮನನೊಂದು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಬೆನ್ನಲ್ಲೇ ಇನ್ನೊಬ್ಬ ವಿದ್ಯಾರ್ಥಿನಿ ತನ್ನ ವೈಯಕ್ತಿಕ ಫೋಟೋಗಳು (Private Photo) ಲೀಕ್ ಆಗಿರುವ ಹಿನ್ನೆಲೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಮೂಲಗಳ ಪ್ರಕಾರ ವಾರಂಗಲ್‌ನಲ್ಲಿ ಎಂಜಿನಿಯರ್ ವಿದ್ಯಾರ್ಥಿನಿ ತನ್ನ ಸ್ನೇಹಿತನಿಂದಲೇ ಖಾಸಗಿ ಫೋಟೋಗಳು ಲೀಕ್ ಆಗಿರುವುದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿದ್ಯಾರ್ಥಿನಿಗೆ ಯುವಕನೊಂದಿಗೆ ಕೇವಲ ಸ್ನೇಹ ಮಾತ್ರವೇ ಇದ್ದು, ಆತ ಮಾತ್ರ ಆಕೆಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.

    ವಿದ್ಯಾರ್ಥಿನಿ ಕೆಲ ದಿನಗಳ ಹಿಂದೆ ಮತ್ತೊಬ್ಬ ಎಂಜಿನಿಯರ್ ವಿದ್ಯಾರ್ಥಿಯನ್ನು ಪರಿಚಯ ಮಾಡಿಕೊಂಡಿದ್ದಳು. ಇದರಿಂದ ಕೆರಳಿದ್ದ ಆಕೆಯ ಸ್ನೇಹಿತ ವಿದ್ಯಾರ್ಥಿನಿಯ ಖಾಸಗಿ ಫೋಟೋಗಳನ್ನು ತನ್ನ ಇತರ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾನೆ. ಇದರಿಂದ ಮನನೊಂದ ವಿದ್ಯಾರ್ಥಿನಿ ಭಾನುವಾರ ಸಂಜೆ ತನ್ನ ಸಂಬಂಧಿಕರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರ‍್ಯಾಗಿಂಗ್‍ನಿಂದ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ

    ಘಟನೆಯ ಬಳಿಕ ವಿದ್ಯಾರ್ಥಿನಿಯು ಇಬ್ಬರು ಯುವಕರಿಂದ ಕಿರುಕುಳ ಅನುಭವಿಸುತ್ತಿದ್ದಳು. ಇದರಿಂದ ಆಕೆ ಆತ್ಮಹತ್ಯೆಯ ನಿರ್ಧಾರ ಮಾಡಿಕೊಂಡಿದ್ದಾಳೆ ಎಂದು ಆಕೆಯ ಪೋಷಕರು ತಿಳಿಸಿದ್ದಾರೆ. ಇದೀಗ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: UP ಉಮೇಶ್ ಪಾಲ್ ಕೊಲೆ ಕೇಸ್ – ಎನ್‍ಕೌಂಟರ್‌ಗೆ ಆರೋಪಿ ಬಲಿ

  • ತೆಲುಗಿನ ಖ್ಯಾತ ನಿರ್ದೇಶಕ ಕೆ.ವಿಶ್ವನಾಥ್ ಪತ್ನಿ ಕೆ.ಜಯಲಕ್ಷ್ಮಿ ನಿಧನ

    ತೆಲುಗಿನ ಖ್ಯಾತ ನಿರ್ದೇಶಕ ಕೆ.ವಿಶ್ವನಾಥ್ ಪತ್ನಿ ಕೆ.ಜಯಲಕ್ಷ್ಮಿ ನಿಧನ

    ಶಂಕರಾಭರಣಂ  ಸೇರಿದಂತೆ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವ ತೆಲುಗಿನ (Telugu) ಹೆಸರಾಂತ ನಿರ್ದೇಶಕ ಕೆ.ವಿಶ್ವನಾಥ್ (K. Vishwanath) ಪತ್ನಿ ಕೆ.ಜಯಲಕ್ಷ್ಮಿ (Jayalakshmi) ನಿಧನರಾಗಿದ್ದಾರೆ (Passed Away). ಕೆ.ವಿಶ್ವನಾಥ್ ವಿಧಿವಶರಾಗಿ 24 ದಿನಗಳ ನಂತರ ಪತ್ನಿಯೂ ನಿಧನರಾಗಿದ್ದಾರೆ. ಹಾಗಾಗಿ ವಿಶ್ವನಾಥ್ ಕುಟುಂಬಕ್ಕೆ ಎರಡೆರಡು ಆಘಾತ ಎದುರಿಸಬೇಕಾಗಿದೆ. ಜಯಲಕ್ಷ್ಮಿಗೆ 88 ವರ್ಷ. ವಯೋಸಹಜ ಕಾಯಿಲೆಗಳಿಂದ ಅವರು ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ.

    ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಗ್ರಾಮವೊಂದರಲ್ಲಿ ಹುಟ್ಟಿದ್ದ ಜಯಲಕ್ಷ್ಮಿ, 22ನೇ ವಯಸ್ಸಿನಲ್ಲಿ ವಿಶ್ವನಾಥ್ ಅವರ ಜೊತೆ ಸಪ್ತಪದಿ ತುಳಿದಿದ್ದರು. 60ಕ್ಕೂ ಹೆಚ್ಚು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದಾರೆ. ಪತಿಯ ನಿಧನಾನಂತರ ಅವರ ಆರೋಗ್ಯ ಮತ್ತಷ್ಟು ಹದೆಗೆಟ್ಟಿತ್ತು ಎಂದು ಹೇಳಲಾಗುತ್ತಿದೆ. ಇಂದು ಹೈದರಾಬಾದ್ (Hyderabad) ನಲ್ಲಿರುವ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

    ಸಾಗರ ಸಂಗಮಂ, ಸ್ವರ್ಣ ಕಮಲಂ ಚಿತ್ರಗಳನ್ನು ಪತಿಯು ನಿರ್ದೇಶನ ಮಾಡಿದಾಗ, ಸದಾ ಅವರ ಬೆಂಬಲವಾಗಿ ನಿಂತವರು ಜಯಲಕ್ಷ್ಮಿ. ಪತಿಯು ಸಿನಿಮಾ ರಂಗದಲ್ಲಿ ಬ್ಯುಸಿಯಾದಾಗ ಇಡೀ ಕುಟುಂಬವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದರಂತೆ. ಪತಿಯ ಬೇಕು ಬೇಡಿಕೆಗಳಿಗೆ ಜಯಲಕ್ಷ್ಮಿ ಇರಲೇಬೇಕು ಎನ್ನುವಂತಹ ದಾಂಪತ್ಯ ಜೀವನ ಇವರದ್ದಾಗಿತ್ತು ಎನ್ನುತ್ತಾರೆ ಅವರ ಆಪ್ತರು.

  • ವರದಕ್ಷಿಣೆಯಾಗಿ ಹಳೆಯ ಬೆಡ್ ನೀಡಿದ್ದಕ್ಕೆ ಮದುವೆ ಕ್ಯಾನ್ಸಲ್ ಮಾಡ್ಕೊಂಡ ವರ!

    ವರದಕ್ಷಿಣೆಯಾಗಿ ಹಳೆಯ ಬೆಡ್ ನೀಡಿದ್ದಕ್ಕೆ ಮದುವೆ ಕ್ಯಾನ್ಸಲ್ ಮಾಡ್ಕೊಂಡ ವರ!

    ಹೈದರಾಬಾದ್: ಇತ್ತೀಚೆಗೆ ಸಣ್ಣ-ಪುಟ್ಟ ವಿಚಾರಕ್ಕೆಲ್ಲ ಮದುವೆಗಳು ಮುರಿದಿರುವುದನ್ನು ನಾವು ಕಾಣುತ್ತೇವೆ. ಅಂತೆಯೇ ಹೈದರಾಬಾದ್‍ನಲ್ಲಿ ವರನೊಬ್ಬ ತನಗೆ ವಧು ಕಡೆಯವರು ವರದಕ್ಷಿಣೆ ಎಂದು ಹಳೆಯ ಬೆಡ್ (Old Bed) ನೀಡಿದ್ದಕ್ಕೆ ಮದುವೆಯನ್ನೇ ಕ್ಯಾನ್ಸಲ್ (Marriage Cancel) ಮಾಡಿಕೊಂಡ ಪ್ರಸಂಗ ನಡೆದಿದೆ.

    ಇತ್ತ ಮದುವೆ ಮುರಿದ ವರನ ವಿರುದ್ಧ ವಧುವಿನ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ವರ ಮೋಸ (Groom Cheating) ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ವರದಕ್ಷಿಣೆ ನೀಡದ್ದಕ್ಕೆ ಮಹಿಳೆಗೆ ಆ್ಯಸಿಡ್ ಕುಡಿಸಿದ ಅತ್ತೆ

    ಏನಿದು ಘಟನೆ..?: ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಯುವಕನ ಜೊತೆ ಬಂದ್ಲಗುಡ ನಿವಾಸಿ ಯುವತಿಯ ಮದುವೆ ನಿಶ್ಚಯವಾಗಿತ್ತು. ಅಲ್ಲದೆ ಫೆಬ್ರವರಿ 19 ಕ್ಕೆ ಮದುವೆ ದಿನಾಂಕವೂ ನಿಗದಿಯಾಗಿತ್ತು. ವಿಶೇಷ ಅಂದರೆ ಇಬ್ಬರಿಗೂ ಇದು ಎರಡನೇ ಮದುವೆಯಾಗಿತ್ತು. ಈ ಹಿನ್ನೆಲೆಯಲ್ಲಿ ಹಳೆಯ ಪೀಠೋಪಕರಣಗಳನ್ನು ವರದಕ್ಷಿಣೆಯಾಗಿ ನೀಡುವುದಾಗಿ ವಧುವಿನ ತಂದೆ ಮೊದಲೇ ಹೇಳಿದ್ದಾರೆ. ಈ ಎಲ್ಲಾ ಷರತ್ತುಗಳನ್ನು ವರನೂ ಕೂಡ ಒಪ್ಪಿದ್ದು, ಬೆಡ್ ಮಾತ್ರ ಹೊಸದಾಗಿರಬೇಕು ಎಂದು ಹೇಳಿದ್ದನು.

    ಇತ್ತ ಮದುವೆ ದಿನ ವಧುವಿನ ಮನೆಯವರು ಪೀಠೋಪಕರಣಗಳನ್ನು ವರನ ಮನೆಗೆ ಕಳುಹಿಸಿದ್ದಾರೆ. ಈ ವೇಳೆ ಬೆಡ್ ಕೂಡ ಕಳುಹಿಸಿದ್ದು, ಆದರೆ ಬೆಡ್ ಸರಿಪಡಿಲು ಹೋದಾಗ ಅದು ಸ್ವಲ್ಪ ಹರಿದು ಹೋಯಿತು. ಮದುವೆಯ ದಿನದಂದು ವರ ಮತ್ತು ಅವರ ಮನೆಯವರು ಬರಲಿಲ್ಲ. ಇನ್ನು ವಧುವಿನ ಮನೆಯವರು ಅವರ ಮನೆಗೆ ಹೋದಾಗ, ಅವರು ಹಳೆಯ ಹಾಸಿಗೆಯ ಬಗ್ಗೆ ಆಕೆಯ ತಂದೆಗೆ ತಿಳಿಸಿ ಜಗಳವಾಡಿದರು. ಅಲ್ಲದೆ ಅನುಚಿತವಾಗಿ ವರ್ತಿಸಿದರು.

    ಮದುವೆಯ ಔತಣಕ್ಕೆ ಸಕಲ ವ್ಯವಸ್ಥೆ ಮಾಡಿ ಬಂಧುಗಳು, ಅತಿಥಿಗಳು ಕಾಯುತ್ತಿದ್ದರು. ಈ ಹಿನ್ನೆಲೆಯಲ್ಲಿ ವರನ ಬಳಿ ಮನವಿ ಮಾಡಿದರೂ ಆತ ಮದುವೆಗೆ ಬರಲು ನಿರಾಕರಿಸಿದ್ದಾನೆ. ಹಳೆಯ ಹಾಸಿಗೆಯನ್ನು ನೀಡಿದ್ದಕ್ಕಾಗಿ ವರ ಸಿಟ್ಟುಮಾಡಿಕೊಂಡಿದ್ದಾನೆ. ಅಲ್ಲದೆ ಹೊಸ ಹಾಸಿಗೆ ತರುವಂತೆ ತಾಕೀತು ಮಾಡಿದ್ದು, ಮದುವೆಯನ್ನೇ ಕ್ಯಾನ್ಸಲ್ ಮಾಡಿಕೊಂಡಿದ್ದಾನೆ.

    ಇತ್ತ ವರ ಮದುವೆ ಕ್ಯಾನ್ಸಲ್ ಮಾಡಿಕೊಂಡಿದ್ದಕ್ಕಾಗಿ ವಧುವಿನ ತಂದೆ ಪೊಲೀಸರಿಗೆ ವರ ಮೋಸ ಮಾಡಿರುವುದಾಗಿ ಕಂಪ್ಲೆಂಟ್ ಕೊಟ್ಟಿದ್ದಾರೆ. ಇದನ್ನೂ ಓದಿ: ಪತ್ನಿಯನ್ನು ಕೊಂದು ಬ್ಯಾರಲ್‍ಗೆ ತುಂಬಿದ್ದವ ಅರೆಸ್ಟ್

  • ಮಿತ್ರನ ತಲೆಯನ್ನೇ ಕಡಿದು, ಹೃದಯ ಕಿತ್ತು ಕೊನೆಗೆ ಪೊಲೀಸರಿಗೆ ಶರಣಾದ

    ಮಿತ್ರನ ತಲೆಯನ್ನೇ ಕಡಿದು, ಹೃದಯ ಕಿತ್ತು ಕೊನೆಗೆ ಪೊಲೀಸರಿಗೆ ಶರಣಾದ

    ಹೈದರಾಬಾದ್: ತನ್ನ ಗೆಳತಿಗೆ (Girlfriend) ಸಂದೇಶ ಕಳುಹಿಸಿದ್ದಕ್ಕಾಗಿ ಯುವಕನೊಬ್ಬ ತನ್ನ ಸ್ನೇಹಿತನನ್ನೇ (Friend) ಭೀಕರವಾಗಿ ಕೊಲೆಗೈದು (Murder), ಶಿರಚ್ಛೇದ ಮಾಡಿ (Beheading), ದೇಹದ ಆಂತರಿಕ ಭಾಗಗಳನ್ನು ಕಿತ್ತು ಹಾಕಿ, ಕೊನೆಗೆ ಪೊಲೀಸರಿಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ (Telangana) ನಡೆದಿದೆ.

    ವರದಿಗಳ ಪ್ರಕಾರ ಆರೋಪಿಯ ಗೆಳತಿ ಈ ಹಿಂದೆ ಆತನ ಸ್ನೇಹಿತನೊಂದಿಗೆ ಸಂಬಂಧ ಹೊಂದಿದ್ದಳು. ಆಕೆಗೆ ಸಂತ್ರಸ್ತ ಯುವಕ ಸಂದೇಶ ಕಳುಹಿಸುತ್ತಿದ್ದ. ಇದರಿಂದ ಕೋಪಗೊಂಡಿದ್ದ ಆರೋಪಿ, ಸ್ನೇಹಿತನ ಶಿರಚ್ಛೇದ ಮಾಡಿದ್ದಾನೆ. ಬಳಿಕ ಆತನ ಹೃದಯ, ಖಾಸಗಿ ಭಾಗಗಳನ್ನು ಕಿತ್ತಿದ್ದು, ಬೆರಳುಗಳನ್ನೂ ಕತ್ತರಿಸಿದ್ದಾನೆ ಎನ್ನಲಾಗಿದೆ.

    ಘಟನೆಯೇನು?
    ಆರೋಪಿ ಹರಿಹರ ಕೃಷ್ಣ ಹಾಗೂ ಕೊಲೆಯಾದ ಯುವಕ ನವೀನ್ ಗೆಳೆಯರಾಗಿದ್ದು, ಈ ಹಿಂದೆ ದಿಲ್‌ಸುಖ್‌ನಗರದ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಇಬ್ಬರೂ ಅದೇ ಕಾಲೇಜಿನಲ್ಲಿ ಓದುತ್ತಿದ್ದ ಯುವತಿಯನ್ನು ಪ್ರೀತಿಸುತ್ತಿದ್ದರು. ಆದರೆ ನವೀನ್ ಮೊದಲು ತನ್ನ ಪ್ರೇಮವನ್ನು ಯುವತಿಗೆ ತಿಳಿಸಿದ್ದ. ಈ ಪ್ರಸ್ತಾಪವನ್ನು ಆಕೆ ಒಪ್ಪಿಕೊಂಡಿದ್ದು, 1-2 ವರ್ಷದ ಬಳಿ ಅವರಿಬ್ಬರೂ ಬೇರೆಯಾಗಿದ್ದರು. ಬಳಿಕ ಯುವತಿ ಹರಿಹರ ಕೃಷ್ಣನೊಂದಿಗೆ ಸಂಬಂಧ ಬೆಳೆಸಿದ್ದಳು. ಇದನ್ನೂ ಓದಿ: ಆಸ್ತಿ ಮುಟ್ಟುಗೋಲು ಹಾಕಲು ಬಂದಿದ್ದಕ್ಕೆ ಬೆಂಕಿ ಹಚ್ಚಿಕೊಂಡು ವ್ಯಕ್ತಿ ಆತ್ಮಹತ್ಯೆ

    ಆದರೆ ಯುವತಿ ನವೀನ್ ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಳು. ಆಕೆಗೆ ನವೀನ್ ಯಾವಾಗಲೂ ಸಂದೇಶ ಹಾಗೂ ಕರೆ ಮಾಡುತ್ತಿದ್ದ. ಆದರೆ ಇದರಿಂದ ಕೃಷ್ಣ ತೀವ್ರ ಅಸಮಾಧಾನಗೊಂಡಿದ್ದ. ಈ ಹಿನ್ನೆಲೆ ಕೃಷ್ಣ ನವೀನ್ ಹತ್ಯೆ ನಡೆಸಲು ಸುಮಾರು 3 ತಿಂಗಳು ಕಾದು ಕುಳಿತಿದ್ದ.

    ಫೆಬ್ರವರಿ 17ರಂದು ಇಬ್ಬರೂ ಗೆಳೆಯರು ಮದ್ಯಪಾನ ಮಾಡಿ ಜಗಳವಾಡಿಕೊಂಡಿದ್ದರು. ಈ ವೇಳೆ ಕೃಷ್ಣ ನವೀನ್ ಕೊಲೆ ಮಾಡಿ, ಆತನ ತಲೆಯನ್ನು ದೇಹದಿಂದ ಬೇರ್ಪಡಿಸಿದ್ದ. ಆಂತರಿಕ ಅಂಗಾಂಗಗಳನ್ನೂ ಕಿತ್ತಿದ್ದ. ಬಳಿಕ ಆತನ ಮೃತದೇಹದ ಫೋಟೋ ಕ್ಲಿಕ್ಕಿಸಿ, ತನ್ನ ಗೆಳತಿಗೆ ವಾಟ್ಸಪ್‌ನಲ್ಲಿ ಕಳುಹಿಸಿದ್ದ.

    ಹರಿಹರ ಕೃಷ್ಣ ಕೃತ್ಯ ನಡೆಸಿದ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಆತನ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸಿದ್ದಾರೆ. ಮೃತ ಯುವಕನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ಸಿಲಿಂಡರ್ ಬ್ಲಾಸ್ಟ್- ಗುಡಿಸಲು ಬೆಂಕಿಗಾಹುತಿ, ಮಗಳ ಚಿಕಿತ್ಸೆಗೆ ತೆಗೆದಿಟ್ಟ ಹಣವೂ ಭಸ್ಮ