Tag: Hyderabad

  • ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಮಹಿಳೆಯನ್ನು ಕೊಲೆಗೈದು ದೇಹದ ಭಾಗಗಳನ್ನು ಫ್ರಿಡ್ಜ್‌ನಲ್ಲಿಟ್ಟ!

    ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಮಹಿಳೆಯನ್ನು ಕೊಲೆಗೈದು ದೇಹದ ಭಾಗಗಳನ್ನು ಫ್ರಿಡ್ಜ್‌ನಲ್ಲಿಟ್ಟ!

    ಹೈದರಾಬಾದ್: ವ್ಯಕ್ತಿಯೊಬ್ಬ ತನ್ನ ಮಹಿಳಾ ಪಾರ್ಟ್‌ ನರ್‌ಳನ್ನು ಬರ್ಬರವಾಗಿ ಕೊಲೆ ಮಾಡಿ, ದೇಹವನ್ನು ಪೀಸ್ ಪೀಸ್ ಮಾಡಿ ಫ್ರಿಡ್ಜ್ (Body Fridge) ನಲ್ಲಿಟ್ಟ ಆಘಾತಕಾರಿ ಘಟನೆ ನಡೆದಿರುವುದು ಹೈದರಾಬಾದ್‍ (Hyderabad Woman Murder)  ನಲ್ಲಿ ಬೆಳಕಿಗೆ ಬಂದಿದೆ.

    ಮೃತಳನ್ನು ಅನುರಾಧ ರೆಡ್ಡಿ(55) ಎಂದು ಗುರುತಿಸಲಾಗಿದೆ. ಈಕೆಯನ್ನು ಚಂದ್ರ ಮೋಹನ್(48) ಕೊಲೆ ಮಾಡಿದ್ದಾನೆ. ಸದ್ಯ ಈತನನ್ನು ಪೊಲೀಸರು ಬಂಧಿಸಿದ್ದಾರೆ. ಅನುರಾಧಳನ್ನು ಆರೋಪಿ ಚಂದ್ರ ಮೋಹನ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ನಂತರ ಆಕೆಯ ದೇಹವನ್ನು ವಿಲೇವಾರಿ ಮಾಡುವ ಸಲುವಾಗಿ ಹಲವು ತುಂಡುಗಳನ್ನಾಗಿ ಕತ್ತರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೇ 17ರಂದು ಮೂಸಿ ನದಿ ಸಮೀಪವಿರುವ ಅಫ್ಜಲ್ ನಗರದ ಸಮುದಾಯ ಭವನದ ಬಳಿ ಇರುವ ತೀಗಲ್‍ಗಢ ಪ್ರದೇಶದಲ್ಲಿ ಕಪ್ಪು ಕವರಿನಲ್ಲಿ ಮಹಿಳೆಯೊಬ್ಬರ ತಲೆ ಪತ್ತೆಯಾಗಿತ್ತು. ಇದನ್ನು ಪೌರ ಕಾರ್ಮಿಕರೊಬ್ಬರು ಗಮನಿಸಿದ್ದು ನಂತರ ಪೊಲೀಸರಿಗೆ ದೂರು ನೀಡಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು 8 ತಂಡಗಳನ್ನು ರಚಿಸಿ ತನಿಖೆಗೆ ಇಳಿದರು. ಈ ವೇಳೆ ಆರೋಪಿ ಸಿಕ್ಕಿಬಿದ್ದಿದ್ದಾನೆ. ಬಳಿಕ ಆತನನ್ನು ವಿಚಾರಣೆ ನಡೆಸಿದಾಗ ಆರೋಪಿ ಚಂದ್ರ ಮೋಹನ್ ಹಾಗೂ ಮೃತ ಮಹಿಳೆ ಅನುರಾಧ ರೆಡ್ಡಿ ನಡುವೆ ಅಕ್ರಮ ಸಂಬಂಧ ಇರುವುದು ಬಯಲಾಗಿದೆ ಎಂದು ಆಗ್ನೇಯ ವಲಯ ಡಿಸಿಪಿ ರೂಪೇಶ್ ತಿಳಿಸಿದ್ದಾರೆ.

    2018ರಲ್ಲಿ ಅನುರಾಧಗೆ ಚಂದ್ರ ಮೋಹನ್ ತನ್ನ ಮನೆಯ ನೆಲ ಮಹಡಿಯಲ್ಲಿ ವಾಸಿಸಲು ಜಾಗ ನೀಡಿದ್ದಾನೆ. ಈ ವೇಳೆ ಆರೋಪಿ ಮೃತಳಿಂದ 7 ಲಕ್ಷ ರೂ. ಹಣವನ್ನು ಪಡೆದು ಹಿಂದಿರುಗಿಸದೆ ಆಟವಾಡಿಸುತ್ತಿದ್ದ. ಮಹಿಳೆ ಹಣ ನೀಡುವಂತೆ ಚಂದ್ರಮೋಹನ್ ನನ್ನು ಪೀಡಿಸುತ್ತಿದ್ದಳು. ಮಹಿಳೆಯ ಒತ್ತಡದಿಂದ ಸಿಟ್ಟಿಗೆದ್ದ ಚಂದ್ರಮೋಹನ್ ಆಕೆಯನ್ನು ಮುಗಿಸುವ ಚಿಂತನೆ ಮಾಡಿದ್ದಾನೆ. ಅಂತೆಯೇ ಮೇ 12ರಂದು ಹಣ ಹಿಂದಿರುಗಿಸುವ ನೆಪದಲ್ಲಿ ಆರೋಪಿ, ಮೃತಳ ಜೊತೆ ಗಲಾಟೆ ತೆಗೆದಿದ್ದಾನೆ. ಇದನ್ನೂ ಓದಿ: ಪತ್ನಿ ಜೊತೆ ಅನೈತಿಕ ಸಂಬಂಧ ಶಂಕೆ – ಪಾರ್ಟಿ ನೆಪದಲ್ಲಿ ಸ್ನೇಹಿತನ ಮರ್ಡರ್

    ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಮನ ಬಂದಂತೆ ಇರಿದು ಹತ್ಯೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಸಾಗಿಸುವ ಸಲುವಾಗಿ ಆರೋಪಿಯೂ ಕಲ್ಲು ಕತ್ತರಿಸುವ 2 ಮೆಷಿನ್‍ಗಳನ್ನು ಖರೀದಿಸಿದ್ದಾನೆ. ನಂತರ ದೇಹದ ಭಾಗಗಳನ್ನ ಮನಬಂದಂತೆ ತುಂಡರಿಸಿ ಪ್ಲಾಸ್ಟಿಕ್ ಕವರಿನಲ್ಲಿ ತುಂಬಿಸಿ ನಗರದ ವಿವಿಧೆಡೆ ಎಸೆದಿದ್ದಾನೆ.

    ಇಷ್ಟೇ ಅಲ್ಲದೆ ಮೃತಳ ಕೈ-ಕಾಲುಗಳನ್ನು ಫ್ರಿಡ್ಜ್‍ನಲ್ಲಿ ಇರಿಸಿದ್ದಾನೆ. ಉಳಿದ ಭಾಗಗಳನ್ನು ಬಿಸಾಕಲೆಂದು ಸೂಟ್‍ಕೇಸ್ ಕೂಡ ತಂದಿದ್ದಾನೆ. ಬಳಿಕ ಅನುರಾಧ ಮೊಬೈಲ್‍ನಿಂದ ಆಕೆಯ ಪರಿಚಯಸ್ಥರಿಗೆ ಮೆಸೇಜ್ ಮಾಡಿ ಜೀವಂತ ಇರುವುದಾಗಿ ನಂಬುವಂತೆ ಮಾಡಿದ್ದ. ಇನ್ನು ಮೃತ ದೇಹದಿಂದ ದುರ್ವಾಸನೆ ಬರದಂತೆ ಅದರ ಮೇಲೆ ವಿವಿಧ ದ್ರವಗಳನ್ನು ಸಿಂಪಡಿಸಿದ್ದಾನೆ ಎಂದು ರೂಪೇಶ್ ವಿವರಿಸಿದ್ದಾರೆ.

  • ಸಹೋದರನಿಗಾಗಿ ಪ್ಯಾನ್ ಇಂಡಿಯಾ ಸಿನಿಮಾ ಒಪ್ಪಿಕೊಂಡೆ : ರಾಧಿಕಾ ಕುಮಾರಸ್ವಾಮಿ

    ಸಹೋದರನಿಗಾಗಿ ಪ್ಯಾನ್ ಇಂಡಿಯಾ ಸಿನಿಮಾ ಒಪ್ಪಿಕೊಂಡೆ : ರಾಧಿಕಾ ಕುಮಾರಸ್ವಾಮಿ

    ಲವು ತಿಂಗಳುಗಳ ನಂತರ ರಾಧಿಕಾ ಕುಮಾರಸ್ವಾಮಿ (Radhika Kumaraswamy) ಮತ್ತೆ ಕ್ಯಾಮೆರಾ ಮುಂದೆ ನಿಂತಿದ್ದಾರೆ. ತೀರಾ ಅಪರೂಪಕ್ಕೆ ಎನ್ನುವಂತೆ ಸಿನಿಮಾಗಳನ್ನು ಮಾಡುವ ರಾಧಿಕಾ, ಈ ಬಾರಿ ಪ್ಯಾನ್ ಇಂಡಿಯಾ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಸಿನಿಮಾಗೆ ಸಹಿ ಮಾಡಲು ಕಾರಣ ತಮ್ಮ ಸಹೋದರ ಎಂದು ಹೇಳಿದ್ದಾರೆ. ಈ ಸಿನಿಮಾಗೆ ಸಹೋದರ ಹಣ ಹೂಡುತ್ತಿರುವುದರಿಂದ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

    ರಾಧಿಕಾ ಕುಮಾರಸ್ವಾಮಿ ಅವರು ನಾಯಕಿಯಾಗಿ ನಟಿಸುತ್ತಿರುವ ‘ಅಜಾಗ್ರತ’ (Ajagrata) ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಹೈದರಾಬಾದ್ (Hyderabad) ನ ರಾಮನಾಯ್ಡು ಸ್ಟುಡಿಯೋದಲ್ಲಿ ನೆರವೇರಿದೆ. ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಎ.ಎಂ.ರತ್ನಂ ಚಿತ್ರದ ಪ್ರಥಮ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರೆ, ಹೆಸರಾಂತ ವಿತರಕ ಟ್ಯಾಗೋರ್ ಮಧು ಕ್ಯಾಮೆರಾ ಚಾಲನೆ ಮಾಡಿದ್ದರು. ಚಿತ್ರರಂಗದ ವಿವಿಧ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದ್ದಾರೆ.

    ಬಾಲಿವುಡ್ ನ ಖ್ಯಾತ ನಟ ಶ್ರೇಯಸ್ ತಲ್ಪಾಡೆ (Shreyas Talpade) ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ರಾವ್ ರಮೇಶ್‌, ಸುನೀಲ್, ಆದಿತ್ಯ ಮೆನನ್, ರಾಘವೇಂದ್ರ ಶ್ರವಣ್, ದೇವರಾಜ್, ಜಯಪ್ರಕಾಶ್, ವಿನಯಾಪ್ರಸಾದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಇದನ್ನೂ ಓದಿ:ಅಜಯ್ ರಾವ್ ಚಿತ್ರಕ್ಕೆ ಕೆಜಿಎಫ್ ನಟಿ ಅರ್ಚನಾ ಜೋಯಿಸ್ ನಾಯಕಿ

    ತೆಲುಗು, ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ರವಿರಾಜ್ ನಿರ್ಮಿಸುತ್ತಿದ್ದಾರೆ.  ಎಂ.ಶಶಿಧರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸಂದೀಪ್ ವಲ್ಲೂರಿ ಛಾಯಾಗ್ರಹಣ, ಶ್ರೀಹರಿ ಸಂಗೀತ ನಿರ್ದೇಶನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

    ಏಳು ಭಾಷೆಗಳಲ್ಲಿ ಈ ಚಿತ್ರ ಬರಲಿದೆ. ಡಬ್ ಮಾಡದೆ, ಆಯಾ ಭಾಷೆಗಳಲ್ಲಿ ಪ್ರತ್ಯೇಕವಾಗಿ ಚಿತ್ರೀಕರಣ ನಡೆಯಲಿರುವುದು ಈ ಚಿತ್ರದ ವಿಶೇಷ . ಹಲವು ದಿನಗಳ ನಂತರ ಮತ್ತೆ ರಾಧಿಕಾ ಕುಮಾರಸ್ವಾಮಿ ಸಿನಿಮಾ ರಂಗಕ್ಕೆ ಬಂದಿರುವುದು ಅವರ ಅಭಿಮಾನಿಗಳಿಗೆ ಸಹಜವಾಗಿಯೇ ಸಂಭ್ರಮ ತಂದಿದೆ.

  • ರಾಧಿಕಾ ಕುಮಾರಸ್ವಾಮಿ ಹೊಸ ಚಿತ್ರಕ್ಕೆ ಹೈದರಾಬಾದ್ ನಲ್ಲಿ ಮುಹೂರ್ತ

    ರಾಧಿಕಾ ಕುಮಾರಸ್ವಾಮಿ ಹೊಸ ಚಿತ್ರಕ್ಕೆ ಹೈದರಾಬಾದ್ ನಲ್ಲಿ ಮುಹೂರ್ತ

    ರಾಧಿಕಾ ಕುಮಾರಸ್ವಾಮಿ (Radhika Kumaraswamy) ಅವರು ನಾಯಕಿಯಾಗಿ ನಟಿಸುತ್ತಿರುವ ‘ಅಜಾಗ್ರತ’ (Ajagrata) ಚಿತ್ರದ ಮುಹೂರ್ತ (Muhurta) ಸಮಾರಂಭ ಇತ್ತೀಚೆಗೆ ಹೈದರಾಬಾದ್ (Hyderabad) ನ ರಾಮನಾಯ್ಡು ಸ್ಟುಡಿಯೋದಲ್ಲಿ ನೆರವೇರಿತು. ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಎ.ಎಂ.ರತ್ನಂ ಚಿತ್ರದ ಪ್ರಥಮ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಹೆಸರಾಂತ ವಿತರಕ ಟ್ಯಾಗೋರ್ ಮಧು ಕ್ಯಾಮೆರಾ ಚಾಲನೆ ಮಾಡಿದರು. ಚಿತ್ರರಂಗದ ವಿವಿಧ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

    ಬಾಲಿವುಡ್ ನ ಖ್ಯಾತ ನಟ ಶ್ರೇಯಸ್ ತಲ್ಪಾಡೆ (Shreyas Talpade) ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ರಾವ್ ರಮೇಶ್‌, ಸುನೀಲ್, ಆದಿತ್ಯ ಮೆನನ್, ರಾಘವೇಂದ್ರ ಶ್ರವಣ್, ದೇವರಾಜ್, ಜಯಪ್ರಕಾಶ್, ವಿನಯಾಪ್ರಸಾದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    ತೆಲುಗು, ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ರವಿರಾಜ್ ನಿರ್ಮಿಸುತ್ತಿದ್ದಾರೆ.  ಎಂ.ಶಶಿಧರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸಂದೀಪ್ ವಲ್ಲೂರಿ ಛಾಯಾಗ್ರಹಣ, ಶ್ರೀಹರಿ ಸಂಗೀತ ನಿರ್ದೇಶನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಹುಟ್ಟುಹಬ್ಬಕ್ಕೆ ವಿಶ್ ಮಾಡಲಿಲ್ಲ ರಶ್ಮಿಕಾ

    ಏಳು ಭಾಷೆಗಳಲ್ಲಿ ಈ ಚಿತ್ರ ಬರಲಿದೆ. ಡಬ್ ಮಾಡದೆ, ಆಯಾ ಭಾಷೆಗಳಲ್ಲಿ ಪ್ರತ್ಯೇಕವಾಗಿ ಚಿತ್ರೀಕರಣ ನಡೆಯಲಿರುವುದು ಈ ಚಿತ್ರದ ವಿಶೇಷ . ಹಲವು ದಿನಗಳ ನಂತರ ಮತ್ತೆ ರಾಧಿಕಾ ಕುಮಾರಸ್ವಾಮಿ ಸಿನಿಮಾ ರಂಗಕ್ಕೆ ಬಂದಿರುವುದು ಅವರ ಅಭಿಮಾನಿಗಳಿಗೆ ಸಹಜವಾಗಿಯೇ ಸಂಭ್ರಮ ತಂದಿದೆ.

  • ರಿಯಾದ್‌ನಿಂದ ಹೈದರಾಬಾದ್‌ಗೆ ಅಕ್ರಮ ಚಿನ್ನ ಸಾಗಾಟ – 67 ಲಕ್ಷ ರೂ. ಮೌಲ್ಯದ ಚಿನ್ನ ವಶ

    ರಿಯಾದ್‌ನಿಂದ ಹೈದರಾಬಾದ್‌ಗೆ ಅಕ್ರಮ ಚಿನ್ನ ಸಾಗಾಟ – 67 ಲಕ್ಷ ರೂ. ಮೌಲ್ಯದ ಚಿನ್ನ ವಶ

    ಹೈದರಾಬಾದ್: ರಿಯಾದ್‌ನಿಂದ (Riyadh) ಹೈದರಾಬಾದ್‌ಗೆ (Hyderabad) ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕನೊಬ್ಬನನ್ನು ಬಂಧಿಸಿ ಸುಮಾರು 67 ಲಕ್ಷ ರೂ. ಮೌಲ್ಯದ 14 ಚಿನ್ನದ ಬಾರ್‌ಗಳನ್ನು (Gold Bar) ವಶಪಡಿಸಿಕೊಂಡ ಘಟನೆ ತೆಲಂಗಾಣದಲ್ಲಿ (Telangana) ನಡೆದಿದೆ.

    ಹೈದರಾಬಾದ್‌ನ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ರಿಯಾದ್‌ನಿಂದ ಬಹ್ರೇನ್ ಮೂಲಕ ಹೈದರಾಬಾದ್‌ಗೆ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ. ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಹೈದರಬಾದ್ ಕಸ್ಟಮ್ಸ್ ಮತ್ತು ಆರ್‌ಜಿಐನ ಕಸ್ಟಮ್ಸ್ ಏರ್ ಇಂಟಲಿಜೆನ್ಸ್ ತಂಡವು ವಿಮಾನದಲ್ಲಿ ಬಂದಿಳಿದ ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಪತಿಯನ್ನು ಕೊಂದು ಸ್ನೇಹಿತರಿಗೆ ಪಾರ್ಟಿ ಕೊಟ್ಟಿದ್ದ ಕಿಲ್ಲರ್ ಲೇಡಿ

    ವಿಮಾನ ನಿಲ್ದಾಣದಲ್ಲಿ ಆರೋಪಿಯನ್ನು ತಡೆದು ಅವರ ಬ್ಯಾಗ್‌ಗಳನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಆರೋಪಿ ತಂದಿದ್ದ ಲೈಟ್‌ನ ಬ್ಯಾಟರಿಯೊಳಗೆ 24 ಕ್ಯಾರೆಟ್‌ನ 14 ಚಿನ್ನದ ಬಾರ್‌ಗಳು ಪತ್ತೆಯಾಗಿದೆ. ಚಿನ್ನದ ಬಾರ್‌ಗಳನ್ನು ಕಸ್ಟಮ್ಸ್ ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಚಿನ್ನದ ಬಾರ್‌ಗಳು ಸುಮಾರು 1287.6 ಗ್ರಾಂ ತೂಕ ಹೊಂದಿದ್ದು, ಅದರ ಮೌಲ್ಯ 67,96,133 ರೂ.ಗಳಾಗಿವೆ. ಇದನ್ನೂ ಓದಿ: 12 ಸಾವಿರ ಕೋಟಿ ಮೌಲ್ಯದ 2.5 ಟನ್ ಡ್ರಗ್ಸ್ ಜಪ್ತಿ – ಪಾಕ್ ಆರೋಪಿಯ ಬಂಧನ

    ಭಾರತೀಯ ಕಸ್ಟಮ್ಸ್ ಆ್ಯಕ್ಟ್ (Indian Customs Act) 1962ರ ಅಡಿಯಲ್ಲಿ ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಕೆಲಸದ ನೆಪದಲ್ಲಿ ಕರೆದೊಯ್ದು ಕಾರಿನಲ್ಲಿ ಕಿರುಕುಳ- ಬೈಕಲ್ಲಿ ಬಂದವ್ರಿಂದ ಮಹಿಳೆ ರಕ್ಷಣೆ

  • ಮತ್ತೊಂದು ಹೊಸ ಮನೆ ಖರೀದಿಸಿದ ಸಮಂತಾ : ಟ್ರೋಲ್ ಆಗಿದ್ದು ಯಾಕೆ?

    ಮತ್ತೊಂದು ಹೊಸ ಮನೆ ಖರೀದಿಸಿದ ಸಮಂತಾ : ಟ್ರೋಲ್ ಆಗಿದ್ದು ಯಾಕೆ?

    ಕ್ಷಿಣ ಭಾರತದ ಖ್ಯಾತ ತಾರೆ ಸಮಂತಾ ಮೊನ್ನೆಯಷ್ಟೇ ಮುಂಬೈನಲ್ಲಿ  ಐಷಾರಾಮಿ ಮನೆಯೊಂದನ್ನು (Home) ಖರೀದಿಸಿ ಆ ಖುಷಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಆ ಖುಷಿ ಅಭಿಮಾನಿಗಳ ಮುಖದಲ್ಲಿ ಹಾಗೆಯೇ ಇದೆ, ಅಷ್ಟರಲ್ಲೇ ಹೈದರಾಬಾದ್ (Hyderabad) ನಲ್ಲಿ ಮತ್ತೊಂದು ಮನೆ ಕೊಂಡಿದ್ದಾರೆ. ಮನೆಯು ಕೂಡ ಭಾರೀ ಮೊತ್ತದಲ್ಲೇ ಖರೀದಿಯಾಗಿದೆ ಎನ್ನುವುದು ವಿಶೇಷ.

    ಈಗಾಗಲೇ ಹೈದರಾಬಾದ್ ನಲ್ಲಿ ಸಮಂತಾಗೆ (Samantha) ಒಂದು ಮನೆಯಿದೆ. ಅದೇ ಮನೆಯಲ್ಲೇ ಮಾಜಿಪತಿ ನಾಗ ಚೈತನ್ಯ ಜೊತೆ ವಾಸವಿದ್ದರು. ವಿಚ್ಚೇದನದ ನಂತರ ನಾಗ ಚೈತನ್ಯ ಆ ಮನೆಯನ್ನು ಸಮಂತಾಗೆ ಬಿಟ್ಟುಕೊಟ್ಟಿದ್ದಾರೆ. ಆದರೂ, ಹೈದರಾಬಾದ್ ನಲ್ಲಿ ಮತ್ತೊಂದು ಐಷಾರಾಮಿ ಮನೆ ಖರೀದಿಸಿದ್ದಾರಂತೆ ಸಮಂತಾ. ಆ ಮನೆಗೆ 7.8 ಕೋಟಿ ರೂಪಾಯಿ ನೀಡಿದ್ದಾರೆ ಎನ್ನುತ್ತಿವೆ ಮೂಲಗಳು. ಇದನ್ನೂ ಓದಿ:‘ಹಾಸಿಗೆಯಲ್ಲಿ ರೋಷನ್ ಇರಬೇಕು’ ಡೈಲಾಗ್ ಬಿಟ್ಟ ನಿಹಾರಿಕಾ ವಿರುದ್ಧ ಕಿಡಿಕಾರಿದ ನೆಟ್ಟಿಗರು

    ಮುಂಬೈನಲ್ಲಿ (Mumbai) ಖರೀದಿಸಿದ್ದ ಮನೆಗೆ ಮೂರು ಬೆಡ್ ರೂಮ್ ಗಳನ್ನು ಒಳಗೊಂಡಿದೆ. ಹಾಗೂ ಸೀ ವ್ಯೂವ್ ಇರುವಂಥದ್ದು. ಹೈದರಾಬಾದ್ ನ ಜಯಭೇರಿ ಆರೆಂಜ್ ಕೌಂಟಿನಲ್ಲಿ ಖರೀದಿಸಿದ ಮನೆಯು ಮೂರು ಬೆಡ್ ರೂಮ್ ಗಳನ್ನು ಒಳಗೊಂಡಿದೆಯಂತೆ. ಅಪಾರ್ಟ್ ಮೆಂಟ್ ನ 13 ಹಾಗೂ 14ನೇ ಮಹಡಿಯಲ್ಲಿ ಈ ಮನೆಯಿದೆ ಎಂದು ವರದಿಯಾಗಿದೆ.

    ಹೊಸ ಮನೆಯ ಮತ್ತಷ್ಟು ವಿಶೇಷಗಳೆಂದರೆ, ಒಟ್ಟು ಆರು ಪಾರ್ಕಿಂಗ್ ಸ್ಟಾಟ್ ಗಳಿವೆ. 13ನೇ ಮಹಡಿಯಲ್ಲಿ 3,920 ಚದರ ಅಡಿ ಮತ್ತು 14ನೇ ಮಹಡಿಯಲ್ಲಿ 4024 ಚದರ ಅಡಿ ಜಾಗವಿದೆ. ಒಟ್ಟು ಇದರ ವಿಸ್ತೀರ್ಣ 7944  ಚದರ ಅಡಿ ಇದೆ ಎಂದು ಹೇಳಲಾಗುತ್ತಿದೆ. ಅತ್ಯುತ್ತಮ ಈಜುಕೊಳವನ್ನು ಮನೆಯು ಹೊಂದಿದೆ. ಯಾರೋ ಈ ಮನೆಯ ಬಗ್ಗೆ ‘ಹೈದರಾಬಾದ್ ಮನೆಯ ಸೀ ವ್ಯೂ ಹೊಂದಿದೆ’ ಎಂದು ತಪ್ಪಾಗಿ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದಾರೆ. ಹಾಗಾಗಿ ಈ ಮನೆಯ ಬಗ್ಗೆ ಟ್ರೋಲ್ ಆಗುತ್ತಿದೆ.

  • ನಟ ಶರತ್ ಬಾಬು ಆರೋಗ್ಯ ಮತ್ತಷ್ಟು ಗಂಭೀರ: ಹಿರಿಯ ವೈದ್ಯರಿಂದ ಚಿಕಿತ್ಸೆ

    ನಟ ಶರತ್ ಬಾಬು ಆರೋಗ್ಯ ಮತ್ತಷ್ಟು ಗಂಭೀರ: ಹಿರಿಯ ವೈದ್ಯರಿಂದ ಚಿಕಿತ್ಸೆ

    ನ್ನಡದ ಅಮೃತವರ್ಷಿಣಿ (Amrutavarshini) ಸೇರಿದಂತೆ ದಕ್ಷಿಣದ ನಾನಾ ಭಾಷೆಗಳ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟ ಶರತ್ ಬಾಬು (Sharat Babu) ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ ಅವರ ಕಿಡ್ನಿ, ಲಿವರ್, ಲಂಗ್ಸ್ ಸೇರಿದಂತೆ ಮತ್ತಿತರ ಅಂಗಾಂಗ ತೊಂದರೆಯಿಂದ ಅವರು ಬಳಲುತ್ತಿದ್ದಾರಂತೆ. ನುರಿತ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆಯಂತೆ.

    ಸದ್ಯ ವೆಂಟಿಲೇಟರ್ ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯದ ಪರಿಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಈ ಹಿಂದೆ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆಯುತ್ತಿದ್ದರು. ದಿಢೀರ್ ಅಂತ ಮತ್ತೆ ಆರೋಗ್ಯದಲ್ಲಿ ಏರುಪೇರಾದ ಕಾರಣದಿಂದಾಗಿ ಅವರನ್ನು ಹೈದರಾಬಾದ್ (Hyderabad) ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.  ಇದನ್ನೂ ಓದಿ:ಎಲೋನ್ ಮಸ್ಕ್ ಬಗ್ಗೆ ಸಿಟ್ಟಾದ ಬಿಗ್ ಬಿ: ಹಣ ಕಳೆದುಕೊಂಡ ಬಗ್ಗೆ ಅಮಿತಾಭ್ ಕಿಡಿಕಿಡಿ

    ಹೈದರಾಬಾದ್ ನ ಎಐಜಿ ಆಸ್ಪತ್ರೆಗೆ ಶಿಫ್ಟ್ ಮಾಡಿದ ನಂತರ ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು, ಅಲ್ಲದೇ ಚಿಕಿತ್ಸೆಗೆ ಅವರು ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದರು. ಸಾಮಾನ್ಯ ವಾರ್ಡ್ ಗೆ ಸ್ಥಳಾಂತರ ಮಾಡುವ ಕುರಿತು ವೈದ್ಯರು ನಿರ್ಧಾರ ತಗೆದುಕೊಂಡಿದ್ದಾರೆ ಎನ್ನುವ ಮಾಹಿತಿಯೂ ಇತ್ತು. ಆದರೆ, ಮತ್ತೆ ದಿಢೀರ್ ಅಂತ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆಯಂತೆ.

    ನಾಲ್ಕು ದಶಕಗಳ ಕಾಲ ಚಿತ್ರೋದ್ಯಮದಲ್ಲಿ ಕಲಾವಿದರಾಗಿ ಗುರುತಿಸಿಕೊಂಡಿರುವ ಶರತ್ ಬಾಬು, ಹುಟ್ಟಿದ್ದು ಆಂಧ್ರಪ್ರದೇಶದಲ್ಲಿ. ಆದರೂ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಅವರು ನಟಿಸಿದ್ದಾರೆ. ಕನ್ನಡದಲ್ಲಿ ಅವರು ಅಮೃತವರ್ಷಿಣಿ ಶರತ್ ಬಾಬು ಎಂದೇ ಫೇಮಸ್ ಆಗಿದ್ದಾರೆ. ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಅವರದ್ದು

  • ನಟ ಚಲಕಿ ಛಂಟಿಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

    ನಟ ಚಲಕಿ ಛಂಟಿಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

    ತೆಲುಗು (Telugu) ಸಿನಿಮಾ ರಂಗದ ಜನಪ್ರಿಯ ಹಾಸ್ಯನಟ ಚಲಕಿ ಛಂಟಿಗೆ (Chalaki Chanti) ಹೃದಯಾಘಾತವಾಗಿದ್ದು (Heart Attack), ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರವೇ ಅವರಿಗೆ ಹಾರ್ಟ್ ಅಟ್ಯಾಕ್ ಆಗಿದ್ದು ಕೂಡಲೇ ಅವರನ್ನು ಹೈದರಾಬಾದ್ (Hyderabad) ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

    ವೈದ್ಯರ ಮಾಹಿತಿಯ ಪ್ರಕಾರ ಚಲಕಿ ಆರೋಗ್ಯ ಸ್ಥಿರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಿದ್ದಾರಂತೆ. ಮೊದಲು ಚಲಕಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರು ಆಸ್ಪತ್ರೆಗೆ ಧಾವಿಸಿದ್ದಾರೆ. ವೈದ್ಯರು ತಪಾಸಣೆ ವೇಳೆ ಹಾರ್ಟ್ ಅಟ್ಯಾಕ್ ಆಗಿರುವುದು ದೃಢಪಟ್ಟಿದೆ. ಕೂಡಲೇ ಅವರಿಗೆ ವೈದ್ಯರು ಚಿಕಿತ್ಸೆ ಪ್ರಾರಂಭಿಸಿದ್ದಾರೆ.  ಇದನ್ನೂ ಓದಿ:ಕುಟುಂಬ ಸಮೇತ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶಿಲ್ಪಾ ಶೆಟ್ಟಿ ಭೇಟಿ

    ಸಿನಿಮಾ ಮತ್ತು ಕಿರುತೆರೆಯಲ್ಲಿ ಸಕ್ರಿಯರಾಗಿರುವ ಚಲಕಿ ಅವರ ನಿಜವಾದ ಹೆಸರು ವಿನಯ್ ಮೋಹನ್. ನಟನೆ ಕಾರಣದಿಂದಾಗಿ ಹೆಸರು ಬದಲಾಯಿಸಿಕೊಂಡಿದ್ದಾರೆ. ಬಿಗ್ ಬಾಸ್ (Bigg Boss)ತೆಲುಗು 6ನೇ ಆವೃತ್ತಿಯಲ್ಲಿ ಇವರು ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಅಲ್ಲದೇ, ಹಲವಾರು ಕಾಮಿಡಿ ಟಿವಿ ಶೋಗಳನ್ನು ಇವರು ಮಾಡಿದ್ದಾರೆ.

  • ಅಮೃತವರ್ಷಿಣಿ ನಟ ಶರತ್ ಬಾಬು ಆರೋಗ್ಯದಲ್ಲಿ ಮತ್ತೆ ಏರುಪೇರು

    ಅಮೃತವರ್ಷಿಣಿ ನಟ ಶರತ್ ಬಾಬು ಆರೋಗ್ಯದಲ್ಲಿ ಮತ್ತೆ ಏರುಪೇರು

    ನ್ನಡದ ಹಿಟ್ ಸಿನಿಮಾ ಅಮೃತವರ್ಷಿಣಿ (Amrutavarshini) ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟ ಶರತ್ ಬಾಬು (Sharat Babu) ಅವರ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆಯುತ್ತಿದ್ದರು. ದಿಢೀರ್ ಅಂತ ಮತ್ತೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಹೈದರಾಬಾದ್ (Hyderabad) ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎನ್ನುವ ಮಾಹಿತಿ ಇದೆ.

    ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯ ಮತ್ತಷ್ಟು ಹದಗೆಟ್ಟ ಪರಿಣಾಮ ಹೈದರಾಬಾದ್ ನ ಎಐಜಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೇ ಸಾಮಾನ್ಯ ವಾರ್ಡ್ ಗೆ ಸ್ಥಳಾಂತರ ಮಾಡುವ ಕುರಿತು ವೈದ್ಯರು ನಿರ್ಧಾರ ತಗೆದುಕೊಂಡಿದ್ದಾರೆ ಎನ್ನುವ ಮಾತೂ ಇದೆ. ಇದನ್ನೂ ಓದಿ:ನಯನತಾರಾ ಬಗ್ಗೆ ಕನ್ನಡದ ‘ಗೂಳಿ’ ನಟಿ ಶಾಕಿಂಗ್ ಹೇಳಿಕೆ

    ನಾಲ್ಕು ದಶಕಗಳ ಕಾಲ ಚಿತ್ರೋದ್ಯಮದಲ್ಲಿ ಕಲಾವಿದರಾಗಿ ಗುರುತಿಸಿಕೊಂಡಿರುವ ಶರತ್ ಬಾಬು, ಹುಟ್ಟಿದ್ದು ಆಂಧ್ರಪ್ರದೇಶದಲ್ಲಿ. ಆದರೂ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಅವರು ನಟಿಸಿದ್ದಾರೆ. ಕನ್ನಡದಲ್ಲಿ ಅವರು ಅಮೃತವರ್ಷಿಣಿ ಶರತ್ ಬಾಬು ಎಂದೇ ಫೇಮಸ್ ಆಗಿದ್ದಾರೆ. ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಅವರದ್ದು.

  • ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ: ಮೂವರು ಅಂತರರಾಜ್ಯ ಬೈಕ್ ಕಳ್ಳರ ಬಂಧನ

    ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ: ಮೂವರು ಅಂತರರಾಜ್ಯ ಬೈಕ್ ಕಳ್ಳರ ಬಂಧನ

    ಬೀದರ್: ಖಚಿತ ಮಾಹಿತಿ ಮೇರೆಗೆ ಬೀದರ್ (Bidar) ಪೊಲೀಸರು ತಾಲೂಕಿನ ಬಾವಗಿ ಬಳಿ ದಾಳಿ ನಡೆಸಿ ಮೂವರು ಅಂತರರಾಜ್ಯ ಬೈಕ್ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 14 ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಬೀದರ್‍ನ ಐದು ಬೈಕ್‍ಗಳು, ಹೈದರಾಬಾದ್‍ನ (Hyderabad) ಎಂಟು ಬೈಕ್‍ಗಳು ಹಾಗೂ ಜಹೀರಾಬಾದ್‍ನ (Zahirabad) ಒಂದು ಬೈಕ್ (Bike) ಸೇರಿದಂತೆ ಸುಮಾರು 7.20 ಲಕ್ಷ ರೂ. ಮೌಲ್ಯದ ಬೈಕ್‍ಗಳನ್ನು ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ವಾಕಿಂಗ್‌ಗೆ ಬಿಟ್ಟಿದ್ದ ನಾಯಿಯನ್ನು ಕದ್ದು ಪರಾರಿಯಾದ ಕಳ್ಳರು

    ಹಲವು ದಿನಗಳಿಂದ ಜಿಲ್ಲೆಯಲ್ಲಿ ಅತಿ ಹೆಚ್ಚು ಬೈಕ್ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಎಸ್ಪಿ ಚೆನ್ನಬಸವಣ್ಣ ಲಂಗೋಟೆ ವಿಶೇಷ ತಂಡ ರಚನೆ ಮಾಡಿದ್ದರು. ಇದನ್ನೂ ಓದಿ: ಬಿಜೆಪಿ ಶಾಸಕ ಅನಿಲ್ ಬೆನಕೆಗೆ ನಡು ರಸ್ತೆಯಲ್ಲೇ ಮತದಾರರಿಂದ ಕ್ಲಾಸ್

  • ‘ಆಸ್ಕರ್’ ಪಡೆದ ನಂತರ ತವರಿಗೆ ಬಂದ ಜ್ಯೂನಿಯರ್ ಎನ್.ಟಿ.ಆರ್ : ಅದ್ಧೂರಿ ಸ್ವಾಗತ

    ‘ಆಸ್ಕರ್’ ಪಡೆದ ನಂತರ ತವರಿಗೆ ಬಂದ ಜ್ಯೂನಿಯರ್ ಎನ್.ಟಿ.ಆರ್ : ಅದ್ಧೂರಿ ಸ್ವಾಗತ

    ಳೆದೊಂದು ವಾರದಿಂದ ಅಮೆರಿಕಾದಲ್ಲಿ ಬೀಡು ಬಿಟ್ಟಿದ್ದ ಆರ್.ಆರ್.ಆರ್ (RRR) ಚಿತ್ರತಂಡ ಆಸ್ಕರ್ (Oscar) ಪ್ರಶಸ್ತಿ ಸಮಾರಂಭ ಮುಗಿಸಿಕೊಂಡು ಇಂದು ಬೆಳಗ್ಗೆ ಹೈದರಾಬಾದ್ ಗೆ (Hyderabad) ಆಗಮಿಸಿದೆ. ಹೈದರಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವ ವಿಷಯವನ್ನು ತಿಳಿದ ಅಭಿಮಾನಿಗಳು ಏರ್ ಪೋರ್ಟ್ ಮುಂದೆ ಜಮಾಯಿಸಿದ್ದರು. ಜ್ಯೂನಿಯರ್ ಎನ್.ಟಿ.ಆರ್ (Jr NTR), ರಾಮ್ ಚರಣ್ ತೇಜ ಸೇರಿದಂತೆ ಹಲವರಿಗೆ ಜಯಘೋಷ ಹಾಕಿ, ಅಭಿನಂದಿಸಿದ್ದರು. ಮುಗಿ ಬಿದ್ದು ಸೆಲ್ಫಿ ಕೂಡ ತಗೆದುಕೊಂಡರು.

    ನಾಟು ನಾಟು (Natu Natu) ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಗುತ್ತಿದ್ದಂತೆಯೇ ಜಗತ್ತೇ ಆರ್.ಆರ್.ಆರ್ ತಂಡವನ್ನು ಅಭಿನಂದಿಸಿದೆ. ಈ ನಡುವೆ ಆರ್.ಆರ್.ಆರ್ ಅನ್ನು ವಿರೋಧಿಸಿದ್ದ ಹಲವರಿಗೆ ಪ್ರಶ್ನೆ ಕೇಳುವ ಮೂಲಕ ಟಾಂಗ್ ಕೊಡುವ ಪ್ರಯತ್ನವನ್ನೂ ಮಾಡಿದ್ದಾರೆ ನಟ ಪ್ರಕಾಶ್ ರೈ ಮತ್ತು ರಮ್ಯಾ. ‘ನಾಟು ನಾಟು’ ಹಾಡಿಗೆ ಆಸ್ಕರ್ ಬರುತ್ತಿದ್ದಂತೆಯೇ ಮತ್ತೆ ಬಾಲಿವುಡ್ ಮೇಲೆ ಹಲವರು ಮುಗಿ ಬಿದ್ದಿದ್ದಾರೆ. ಪ್ರಕಾಶ್ ರೈ ಸೇರಿದಂತೆ ಕೆಲ ನಟರು ಆಸ್ಕರ್ ‍ಪ್ರಶಸ್ತಿಯನ್ನಿಟ್ಟುಕೊಂಡು ಬೇರೆ ಬೇರೆ ರೀತಿಯಲ್ಲಿ ಟಾಂಗ್ ನೀಡುತ್ತಿದ್ದಾರೆ. ಆರ್.ಆರ್.ಆರ್ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದವರ ವಿರುದ್ಧ ವಾಗ್ದಾಳಿ ಮಾಡಿರುವ ಅವರು, ಆಸ್ಕರ್ ಪ್ರಶಸ್ತಿ ಬಂದಿದ್ದಕ್ಕೆ ಈಗ ಏನ್ ಹೇಳ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ನನ್ನ ಸಾವಿಗೆ ಇವರೇ ಕಾರಣವೆಂದು ಸೂಸೈಡ್‌ ನೋಟ್‌ ಬರೆದಿಟ್ಟ ʻವರ್ಷಧಾರೆʼ ನಟಿ ಪಾಯಲ್‌

    ನಟಿ ರಮ್ಯಾ ಕೂಡ ಹಿಂದಿ ಹೇರಿಕೆ ಹಾಗೂ ಬಾಲಿವುಡ್ ಬಗ್ಗೆ ವಿಭಿನ್ನವಾದ ರೀತಿಯಲ್ಲೇ ಟ್ವೀಟ್ ಮಾಡಿದ್ದು, ಹಿಂದಿ ಮಾತಾಡಲ್ಲ ಎಂದು ವೈರಲ್ ಆಗಿದ್ದ ಆಟೋಡ್ರೈವರ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ.  ಭಾರತ ಹಲವು ಭಾಷೆಗಳನ್ನು, ನಾನಾ ರೀತಿಯ ಸಂಸ್ಕೃತಿಯನ್ನು ಹೊಂದಿರುವ ದೇಶ. ಯಾರೂ ಯಾರ ಮೇಲೆ ಹೇರಿಕೆ ಸಲ್ಲ. ಭಾರತ ಅಂದರೆ ಬಾಲಿವುಡ್ ಅಲ್ಲ, ಭಾರತ ಅಂದರೆ ಹಿಂದಿಯಲ್ಲ’ ಎಂದು ಟಾಂಗ್ ನೀಡಿದ್ದಾರೆ.

    ಭಾಷಾ ವಿಚಾರವಾಗಿ ನಟಿ ರಮ್ಯಾ ಆಗಾಗ್ಗೆ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಲೇ ಇರುತ್ತಾರೆ. ಅದರಲ್ಲೂ ದಕ್ಷಿಣ ಸಿನಿಮಾಗಳ ಬಗ್ಗೆಯೂ ಮೆಚ್ಚುಗೆ ನುಡಿಗಳನ್ನು ಆಡಿದ್ದಾರೆ. ನಾಟು ನಾಟು ತೆಲುಗಿನ ಸಿನಿಮಾ. ಆಸ್ಕರ್ ವೇದಿಕೆಯ ಮೇಲೆ ತೆಲುಗು ಗೀತೆಯನ್ನೇ ಹಾಡಿದ್ದು ಎಂದು ಬರೆಯುವ ಮೂಲಕ ಹಿಂದಿ ಹೇರಿಕೆಯನ್ನು ಬೇರೆ ಬೇರೆ ರೀತಿಯಲ್ಲಿ ವಿರೋಧಿಸಿದ್ದಾರೆ. ರಮ್ಯಾ ಟ್ವೀಟ್ ಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.