Tag: Hyderabad

  • ಲವ್ ಫೇಲಾಗಿದ್ದಕ್ಕೆ ಸಾಯೋಕೆ ಈತ ಏನ್ಮಾಡಿದ ಗೊತ್ತಾ?

    ಲವ್ ಫೇಲಾಗಿದ್ದಕ್ಕೆ ಸಾಯೋಕೆ ಈತ ಏನ್ಮಾಡಿದ ಗೊತ್ತಾ?

    ಹೈದರಾಬಾದ್: ಪ್ರೇಮ ವೈಫಲ್ಯದಿಂದ ಬೇಸತ್ತ ಯುವಕನೊಬ್ಬ ತನಗೆ ತಾನೇ ಉಸಿರುಗಟ್ಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಕಟಪಲ್ಲಿಯಲ್ಲಿ ನಡೆದಿದೆ.

    ಕುಕಟಪಲ್ಲಿ ಹೌಸಿಂಗ್ ಬೋರ್ಡ್ ಕಾಲೋನಿಯ ಮಲೇಷ್ಯನ್ ಟೌನ್ ಶಿಪ್ ನಿವಾಸಿ ದಿನೇಶ್ ಮೃತ ದುರ್ದೈವಿ. ತನ್ನ ಕಾರಿನಲ್ಲೇ ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರೇಮ ವೈಫಲ್ಯದಿಂದ ನೊಂದಿದ್ದ ದಿನೇಶ್ ಕಾರಿನ ಹಿಂಭಾಗದ ಸೀಟಿನಲ್ಲಿ ಕೂತು ಮೊದಲು ತನ್ನ ಮುಖಕ್ಕೆ ಪ್ಲಾಸ್ಟಿಕ್ ಕವರ್ ಹಾಕಿಕೊಂಡಿದ್ದಾನೆ. ಬಳಿಕ ಕಾರಿನ ಗಾಜುಗಳನ್ನೆಲ್ಲಾ ಕ್ಲೋಸ್ ಮಾಡಿ ಗ್ಯಾಸ್ ಪೈಪ್ ಕತ್ತರಿಸಿಕೊಂಡಿದ್ದಾನೆ. ಇದರಿಂದಾಗಿ ಉಸಿರುಗಟ್ಟಿ ದಿನೇಶ್ ಸಾವನ್ನಪ್ಪಿದ್ದಾನೆ.

    ಕಾರಿನಲ್ಲೇ ಸೂಸೈಡ್ ನೋಟ್ ಪತ್ತೆಯಾಗಿದ್ದು ಪ್ರೇಮ ವೈಫಲ್ಯದಿಂದಲೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

     

  • ಬರ್ತ್‍ಡೇ ಪಾರ್ಟಿಯಲ್ಲಿ ಸಹಪಾಠಿಗಳೇ ಗ್ಯಾಂಗ್‍ರೇಪ್ ಎಸಗಿ ವಿಡಿಯೋ ಮಾಡಿದ್ರು!

    ಬರ್ತ್‍ಡೇ ಪಾರ್ಟಿಯಲ್ಲಿ ಸಹಪಾಠಿಗಳೇ ಗ್ಯಾಂಗ್‍ರೇಪ್ ಎಸಗಿ ವಿಡಿಯೋ ಮಾಡಿದ್ರು!

    ಹೈದ್ರಾಬಾದ್: ಇಲ್ಲಿನ ಖಮ್ಮಾಮ್ ನಗರದಲ್ಲಿ ಬರ್ತ್‍ಡೇ ಪಾರ್ಟಿಗೆಂದು ಹೋಗಿದ್ದ ಯುವತಿಯ ಮೇಲೆ ಆಕೆಯ ನಾಲ್ವರು ಸಹಪಾಠಿಗಳು ಸಾಮೂಹಿಕ ಅತ್ಯಾಚಾರವೆಸಗಿ ವಿಡಿಯೋ ಮಾಡಿದ ಆರೋಪವೊಂದು ಕೇಳಿಬಂದಿದೆ.

    17 ವರ್ಷದ ಯುವತಿ ಈ ಆರೋಪವನ್ನು ಮಾಡಿದ್ದು, ಈ ಘಟನೆ ಭಾನುವಾರ ನಡೆದಿದೆ ಅಂತಾ ಪೊಲಿಸರು ತಿಳಿಸಿದ್ದಾರೆ.

    ಏನಿದು ಘಟನೆ?: ಬರ್ತ್‍ಟೇ ಪಾರ್ಟಿಗೆ ಹೋಗಿದ್ದ ಸಂದರ್ಭದಲ್ಲಿ ನಾಲ್ವರು ಸಹಪಾಠಿಗಳು ಸೇರಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಅಂತಾ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿಯಾಗಿರೋ ಯುವತಿ ಖಮ್ಮಾಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಅಲ್ಲದೇ ಸಾಮೂಹಿಕ ಅತ್ಯಾಚಾರದ ವಿಡಿಯೋ ಕೂಡ ಮಾಡಿದ್ದಾರೆ. ಬಳಿಕ ಈ ಬಗ್ಗೆ ಹೊರಗಡೆ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದಾರೆ ಅಂತಾ ಯುವತಿ ದೂರಿನಲ್ಲಿ ತಿಳಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಯುವತಿಯ ದೂರಿನ ಆಧಾರದ ಮೇಲೆ ನಾಲ್ವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಲಾಗಿದೆ.

  • 64ನೇ ಫಿಲ್ಮ್ ಫೇರ್ ಅವಾರ್ಡ್: ಅನಂತ್‍ನಾಗ್ ಅತ್ಯುತ್ತಮ ನಟ, ಶ್ರದ್ಧಾ ಶ್ರೀನಾಥ್ ಬೆಸ್ಟ್ ನಟಿ

    64ನೇ ಫಿಲ್ಮ್ ಫೇರ್ ಅವಾರ್ಡ್: ಅನಂತ್‍ನಾಗ್ ಅತ್ಯುತ್ತಮ ನಟ, ಶ್ರದ್ಧಾ ಶ್ರೀನಾಥ್ ಬೆಸ್ಟ್ ನಟಿ

    ಹೈದರಾಬಾದ್: ದಕ್ಷಿಣ ಭಾರತದ 64ನೇ ಫಿಲ್ಮ್ ಫೇರ್ ಅವಾರ್ಡ್ ವರ್ಣರಂಜಿತ ಕಾರ್ಯಕ್ರಮಕ್ಕೆ ಹೈದರಾಬಾದ್ ನಲ್ಲಿ ಚಾಲನೆ ಸಿಕ್ಕಿದೆ. 2016-2017ನೇ ಸಾಲಿನ ಚಿತ್ರಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಸ್ಯಾಂಡಲ್‍ವುಡ್ ವಿಭಾಗದ ಪ್ರಶಸ್ತಿಗಳೂ ಪ್ರಕಟಗೊಂಡಿವೆ.

    ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಮನೋಜ್ಞ ಅಭಿನಯಕ್ಕೆ ನಟ ಅನಂತ್‍ನಾಗ್ ಅವರಿಗೆ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಸಂದಿದೆ. ಇದೇ ಚಿತ್ರ ವಸಿಷ್ಟ ಸಿಂಹರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದ್ರೆ, ಶೃತಿ ಹರಿಹರನ್ ವಿಮರ್ಶಕರ ಅತ್ಯುತ್ತಮ ನಟಿ ಪ್ರಶಸ್ತಿ ಬಾಚಿಕೊಂಡಿದ್ದಾರೆ.

    ಕಿರಿಕ್ ಪಾರ್ಟಿ ತಂಡವೂ ಪ್ರಶಸ್ತಿಗಳನ್ನ ಹಲವು ವಿಭಾಗಗಳಲ್ಲಿ ಬಾಚಿಕೊಂಡಿದೆ. ವಿಮರ್ಶಕರ ಅತ್ಯುತ್ತಮ ನಾಯಕ ನಟ ಪ್ರಶಸ್ತಿಗೆ ರಕ್ಷಿತ್ ಶೆಟ್ಟಿ ಭಾಜನರಾದ್ರೆ, ಸಂಯುಕ್ತ ಹೆಗ್ಡೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ. ವಿಜಯ್ ಪ್ರಕಾಶ್‍ಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ಸಂದಿದೆ.

  • ಬಡವರಿಗಾಗಿ ವಿನ್ಯಾಸಗೊಂಡಿದೆ ಬೈಕ್ ಅಂಬುಲೆನ್ಸ್!

    ಬಡವರಿಗಾಗಿ ವಿನ್ಯಾಸಗೊಂಡಿದೆ ಬೈಕ್ ಅಂಬುಲೆನ್ಸ್!

    ಹೈದರಾಬಾದ್: ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯ ಅವಶ್ಯಕತೆಗಳಾದ ನೀರು, ಬಟ್ಟೆ, ವಸತಿಯೇ ಇರುವುದಿಲ್ಲ. ಅಂತಹದರಲ್ಲಿ ರಸ್ತೆಗಳು, ಆಸ್ಪತ್ರೆಗಳು ಎಲ್ಲಿ ಇರಬೇಕು. ಇಂತಹ ವಿಷಯನ್ನು ಮನಗೊಂಡು ವ್ಯಕ್ತಿಯೊಬ್ಬರು ಬೈಕ್ ಅಂಬುಲೆನ್ಸ್ ವಿನ್ಯಾಸಗೊಳಿಸಿದ್ದಾರೆ.

    ಹೈದರಾಬಾದಿನ ಮಹಮ್ಮದ್ ಶಾರೋಝ್ ಖಾನ್ ಎಂಬುವವರು ಬೈಕ್‍  ಅಂಬುಲೆನ್ಸ್ ತಯಾರಿಸಿದ್ದಾರೆ.

    ಯಾಕೆ ಈ ಅಂಬುಲೆನ್ಸ್ ತಯಾರಿಸಿದ್ದೀರಿ ಎಂದು ಕೇಳಿದ್ದಕ್ಕೆ, ನಾನು ಬೈಕ್, ಕಾರ್ ಮತ್ತು ಸ್ಕೂಟರ್‍ಗಳಂತಹ ವಾಹನಗಳನ್ನು ವಿನ್ಯಾಸಗೊಳಿಸುತ್ತಿದ್ದೆ. ಹಾಗಾಗಿ ಗ್ರಾಮೀಣ ಪ್ರದೇಶದಲ್ಲಿನ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಬೈಕಿನಿಂದ ಆಂಬುಲೆನ್ಸ್ ತಯಾರಿಸಬಾರದು ಯಾಕೆ ಎಂದು ಯೋಚಿಸಿ, ಈ ವಿಶೇಷ ಅಂಬುಲೆನ್ಸ್ ತಯಾರಿಸಿದೆ ಎಂದು ಹೇಳಿದರು.

    ಅಂಬುಲೆನ್ಸ್ ನಲ್ಲಿ ಏನಿದೆ?
    ಸಾಮಾನ್ಯವಾಗಿ ಅಂಬುಲೆನ್ಸ್ ಒದಗಿಸುವ ಎಲ್ಲಾ ಸೌಲಭ್ಯಗಳನ್ನು ಮಿನಿ ಅಂಬುಲೆನ್ಸ್ ಒದಗಿಸುತ್ತದೆ. ಆಮ್ಲಜನಕದ ಸಿಲಿಂಡರ್, ಹಾಸಿಗೆ, ಚಿಕ್ಕ ಫ್ಯಾನ್, ಫಸ್ಟ್ ಎಡ್ ಬಾಕ್ಸ್, ಸ್ಟ್ರೇಚರ್‍ನ್ನು ಒಳಗೊಂಡಿದೆ. ಸರ್ಕಾರದಿಂದ ಅನುಮತಿ ಪಡೆದ ನಂತರ ಮಾರುಕಟ್ಟೆಗೆ ಪರಿಚಯಿಸಲು ಮಹಮ್ಮದ್ ತೀರ್ಮಾನಿಸಿದ್ದಾರೆ.

     

  • ಲವ್ ಮಾಡು ಅಂತಾ ಬೆನ್ನು ಬಿದ್ದ ಪೊಲೀಸ್ ಪೇದೆ- ಯುವತಿ ಆತ್ಮಹತ್ಯೆ

    ಲವ್ ಮಾಡು ಅಂತಾ ಬೆನ್ನು ಬಿದ್ದ ಪೊಲೀಸ್ ಪೇದೆ- ಯುವತಿ ಆತ್ಮಹತ್ಯೆ

    ಹೈದರಾಬಾದ್: 22 ವರ್ಷದ ಯುವತಿಯೊಬ್ಬಳು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್ ಸಮೀಪದ ಎಚರಾಮ್ ಬಳಿ ನಡೆದಿದೆ.

    ಮೃತ ಯುವತಿಯನ್ನು ಎಂ ಶ್ಯಾಮಲಾ ಎಂದು ಗುರುತಿಸಲಾಗಿದೆ. ಈಕೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಪೊಲೀಸ್ ಪೇದೆಯೊಬ್ಬರು ಲವ್ ಮಾಡು ಅಂತಾ ಶ್ಯಾಮಲಾ ಬೆನ್ನು ಬಿದ್ದಿದ್ದೇ ಆತ್ಮಹತ್ಯೆಗೆ ಕಾರಣವೆಂದು ಪೋಷಕರು ಆರೋಪಿಸಿದ್ದಾರೆ. ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಪೊಲೀಸ್ ಪೇದೆ ಎಸ್ ನರಸಿಂಹ ಪೀಡಿಸುತ್ತಿದ್ದರು. ಆದ್ರೆ ಶ್ಯಾಮಾಲಾಳಿಗೆ ಮಾತ್ರ ಇದು ಇಷ್ಟವಿರಲಿಲ್ಲ. ಹೀಗಾಗಿ ಪೇದೆಯ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತಾ ಯುವತಿಯ ಪೋಷಕರು ಆರೋಪ ಮಾಡಿದ್ದಾರೆ.

    ಯುವತಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡ ನಂತರ ಜೋರಾಗಿ ಕಿರುಚಾಡಿದ್ದು, ಈ ವೇಳೆ ಅಕ್ಕಪಕ್ಕದ ಮನೆಯವರು ತೆರಳಿ ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಅದಾಗಲೇ ಆಕೆ ಮೃತಪಟ್ಟಿದ್ದಾಳೆ ಅಂತಾ ವೈದ್ಯರು ತಿಳಿಸಿದ್ದಾರೆ.

    ಸದ್ಯ ಯುವತಿಯ ಪೋಷಕರು ಎಚರಾಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೇದೆ ಎಸ್ ನರಸಿಂಹ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

    ದೂರಿನಲ್ಲಿ ಪೊಲೀಸ್ ಪೇದೆ ತನ್ನ ಲವ್ ಪ್ರಪೋಸಲನ್ನು ಒಪ್ಪಿಕೊಳ್ಳುವಂತೆ ಆಕೆಗೆ ಕಿರುಕುಳ ಕೊಡುತ್ತಿದ್ದನು. ಇದರಿಂದ ಮನನೊಂದು ಶ್ಯಾಮಲಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತಾ ಉಲ್ಲೇಖಿಸಿರುವುದಾಗಿ ಪೊಲೀಸ್ ಇನ್ಸ್ ಪೆಕ್ಟರ್ ಜೆ ಮದನ್ ಮೋಹನ್ ರೆಡ್ಡಿ ತಿಳಿಸಿದ್ದಾರೆ.

    ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಅವನಿಗೆ ಅವಳ್ಮೇಲೆ, ಅವಳಿಗೆ ಇನ್ನೊಬ್ಬನ್ಮೇಲೆ ಲವ್: ನೀನಿಲ್ಲದ ಬದುಕು ಯಾಕೆಂದು ಸತ್ತೇ ಹೋದ!

    ಅವನಿಗೆ ಅವಳ್ಮೇಲೆ, ಅವಳಿಗೆ ಇನ್ನೊಬ್ಬನ್ಮೇಲೆ ಲವ್: ನೀನಿಲ್ಲದ ಬದುಕು ಯಾಕೆಂದು ಸತ್ತೇ ಹೋದ!

    ಹೈದರಾಬಾದ್: ಪ್ರೀತಿ ಮಾಯೆ ಹುಷಾರು ಎಂದು ನೀವೆಲ್ಲರೂ ಕೇಳಿರುತ್ತೀರಿ. ಅದೇ ಸ್ಟೋರಿ ಇದು. ಪ್ರೀತಿಯ ಹುಚ್ಚುತನಕ್ಕೆ ಸಿಲುಕಿ, ತಾನು ಇಷ್ಟಪಟ್ಟ ಹುಡುಗಿ ತನಗೆ ದಕ್ಕಲಿಲ್ಲ ಎಂದು ಸಾಫ್ಟ್ ವೇರ್ ಎಂಜಿನಿಯರ್ ಒಬ್ಬ ಅಪಾರ್ಟ್ ಮೆಂಟ್ ನಿಂದ ಹಾರಿ ಪ್ರಾಣ ಬಿಟ್ಟಿದ್ದಾನೆ.

    ಮೆಹಬೂಬಾಬಾದ್ ಜಿಲ್ಲೆಯ ದೋರ್ಣಕಲ್ ಮಂಡಲ್‍ನ ಗೊಲ್ಲಚೆಲ್ಲ ಗ್ರಾಮದ ಜಗದೀಶ್ ಮೃತ ಸಾಫ್ಟ್ ವೇರ್ ಎಂಜಿನಿಯರ್. ಈತ ಮಿಯಾಪುರ್ ಎಂಬಲ್ಲಿನ ಜನಪ್ರಿಯ ಅಪಾರ್ಟ್‍ಮೆಂಟ್ ನಲ್ಲಿ ವಾಸವಾಗಿದ್ದ. ಇದೇ ವೇಳೆ ನೆರೆಹೊರೆಯ ಹುಡುಗಿಯೊಬ್ಬಳಿಗೆ ಲವ್ ಪ್ರಪೋಸ್ ಮಾಡಿದ್ದಾನೆ. ಆದರೆ ಇದಕ್ಕೂ ಮೊದಲೇ ಇನ್ನೊಬ್ಬನ ಜೊತೆ ಲವ್ ಆಗಿದ್ದ ಹುಡುಗಿ ಈತನ ಪ್ರೇಮ ನಿವೇದನೆಯನ್ನು ತಿರಸ್ಕರಿಸುತ್ತಾನೆ. ಆದರೂ ಆತ ಮತ್ತೆ ಮತ್ತೆ ಆಕೆಯನ್ನು ಕಾಡುತ್ತಿದ್ದಿದ್ದರಿಂದ ಬೇಸತ್ತ ಆಕೆ ಬೇರೆ ಕಡೆ ವಾಸ ಬದಲಾಯಿಸುತ್ತಾಳೆ.

    ಇದನ್ನೂ ಓದಿ: 2 ವರ್ಷ ಪ್ರೀತಿಸಿದವಳನ್ನ ನದಿಗೆ ತಳ್ಳಿದ ಪ್ರಿಯತಮ – ಕಾರಣ ಕೇಳಿದ್ರೆ ಶಾಕ್ ಆಗ್ತೀರ!

    ಆದರೆ ಆಕೆಯ ಗೆಳೆಯರ ಮೂಲಕ ಆತ ಆಕೆಯ ಫೋನ್ ನಂಬರ್ ಪಡೆದುಕೊಂಡು ಆಕೆಗೆ ಮತ್ತೆ ಕಾಲ್ ಮಾಡುತ್ತಾನೆ. ಫೋನಲ್ಲಿ ಮಾತಾಡ್ತಾ ನೀನಿಲ್ಲದೆ ಈ ಬದುಕೇ ವ್ಯರ್ಥ ಎಂದೆಲ್ಲಾ ಅಂಗಾಲಾಚಿದ್ದಾನೆ. ಈ ವೇಳೆ ಆತ ಏನಾದರೂ ಅನಾಹುತ ಮಾಡಿಕೊಳ್ಳಬಹುದು ಎಂದು ಎಚ್ಚೆತ್ತ ಆಕೆ ಆತನಿಗೆ ವಿಷಯದ ಮನವರಿಕೆ ಮಾಡಲು ಪ್ರಯತ್ನಿಸುತ್ತಾಳೆ. ಆದರೆ ಆತ ನಾನು ಅಪಾರ್ಟ್ ಮೆಂಟ್ ನ 5ನೇ ಅಂತಸ್ತಿನಿಂದ ಹಾರಿ ಸಾಯುತ್ತೇನೆ ಎಂದು ಬೆದರಿಕೆ ಹಾಕಿ ಕಟ್ಟಡದಿಂದ ಹಾರುತ್ತಾನೆ. ತಕ್ಷಣ ಆಕೆ ಸ್ಥಳಕ್ಕೆ ಬಂದರೂ ಆತ ರಕ್ತದ ಮಡುವಿನಲ್ಲಿ ಬಿದ್ದು ನಿಶ್ಚಲವಾಗಿದ್ದ. ಇಲ್ಲಿಗೆ ಹುಚ್ಚು ಪ್ರೇಮಕ್ಕೆ ಆತ ತನ್ನ ಪ್ರಾಣವನ್ನೇ ತ್ಯಜಿಸಿದ್ದಾನೆ.

    ಇದನ್ನೂ ಓದಿ: ಬಾಯ್ ಫ್ರೆಂಡ್ ಮೀಟ್ ಆಗದ್ದಕ್ಕೆ 4ನೇ ಫ್ಲೋರ್‍ನಿಂದ ಹಾರಿ ಟೆಕ್ಕಿ ಆತ್ಮಹತ್ಯೆ

    ಇದೇ ವೇಳೆ ವಿಷಯ ತಿಳಿದ ಜಗದೀಶ್ ಸಂಬಂಧಿಕರು, ಇದು ಆತ್ಮಹತ್ಯೆಯಲ್ಲ ಕೊಲೆ. ಈ ಬಗ್ಗೆ ಸೂಕ್ತ ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

    ಇದನ್ನೂ ಓದಿ: ಲವ್ವರ್ ಬಿಟ್ಟು ಆತನ ಸ್ನೇಹಿತನ ಜೊತೆ ಲವ್: ಬೆಂಗಳೂರಿನ ಟೆಕ್ಕಿ ಆತ್ಮಹತ್ಯೆ

    ಇದನ್ನೂ ಓದಿಪ್ರೀತ್ಸೋ ಎಂದು ಬೆನ್ನು ಬಿದ್ದ ಯುವತಿಯ ಕಾಟಕ್ಕೆ ಸುಸ್ತಾದ ಟೆಕ್ಕಿ!- ಪೊಲೀಸ್ ಠಾಣೆಯಲ್ಲಿ ದೂರು

  • ವಿಮಾನ ನಿಲ್ದಾಣದಲ್ಲಿ ಬುಸ್ ಬುಸ್: ಆತಂಕಗೊಂಡಿದ್ದ ಪ್ರಯಾಣಿಕರು

    ವಿಮಾನ ನಿಲ್ದಾಣದಲ್ಲಿ ಬುಸ್ ಬುಸ್: ಆತಂಕಗೊಂಡಿದ್ದ ಪ್ರಯಾಣಿಕರು

    ಹೈದ್ರಾಬಾದ್: ಬಿಸಿಲಿನ ತೀವ್ರತೆಗೆ ಹಾವುಗಳು ಎಲ್ಲಂದ್ರಲ್ಲಿ ಕಾಣಿಸಿಕೊಳ್ಳುತ್ತಿವೆ. ಇನ್ನೂ ಪ್ರಾಣಿಗಳ ವಾಸಸ್ಥಾನವನ್ನು ಮಾನವ ಸಂಕುಲ ದಿನೇ ದಿನೇ ಅತಿಕ್ರಮಿಸಿಕೊಳ್ಳುತ್ತಿದ್ದಾನೆ. ಆಹಾರ ಅರಸಿ ಪ್ರಾಣಿಗಳು ನಾಡಿನತ್ತ ಬರಲು ಆರಂಭಿಸಿವೆ. ಅದೇ ರೀತಿ ಹೈದ್ರಾಬಾದ್ ವಿಮಾನ ನಿಲ್ದಾಣದಲ್ಲಿ ಹಾವೊಂದು ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಟಿ ಮಾಡಿತ್ತು.

    ಇದನ್ನೂ ಓದಿ: ಟಾಯ್ಲೆಟ್‍ನಲ್ಲಿ ಕಾಣಿಸಿದ್ದು 1 ಹಾವು, ಉರಗ ತಜ್ಞರು ಬಂದ್ಮೇಲೆ ಮನೆಯಲ್ಲೇ ಪತ್ತೆಯಾದ್ವು 24 ಹಾವುಗಳು!

    ಹೈದ್ರಾಬಾದ್‍ನ ಜಿಎಂಆರ್ ಏರ್‍ಪೋರ್ಟ್‍ನ ವಿಮಾನಗಳ ನಿಲುಗಡೆ ಸ್ಥಳದಲ್ಲಿ ಹಾವು ಕಾಣಿಸಿಕೊಂಡಿತ್ತು. ಇದರಿಂದ ಸ್ಥಳದಲ್ಲಿದ್ದ ಪ್ರಯಾಣಿಕರನ್ನು ಭಯ ಬೀಳುವಂತೆ ಮಾಡಿತ್ತು.

    ಕೂಡಲೇ ಸ್ಥಳಕ್ಕಾಗಮಿಸಿದ ವಿಮಾನ ನಿಲ್ದಾಣದ ಸಿಬ್ಬಂದಿ ಹಾವನ್ನು ಹಿಡಿದು ಪ್ರಯಾಣಿಕರ ಆತಂಕವನ್ನು ನಿವಾರಣೆ ಮಾಡಿದ್ದಾರೆ.

    ಇದನ್ನೂ ಓದಿ: ಕಾಳಿಂಗ ಸರ್ಪ ನೀರು ಕುಡಿಯುವುದನ್ನ ನೋಡಿ

    ಇದನ್ನೂ ಓದಿ: ನೀರಿನ ಮೂಲ ಹುಡುಕಿ ನಾಡಿಗೆ ಬಂದ 14 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ 

     

  • ಬಸ್‍ನಲ್ಲಿ ಮಹಿಳಾ ಟೆಕ್ಕಿಗೆ ಲೈಂಗಿಕ ಕಿರುಕುಳ- ಫೋಟೋ ಕ್ಲಿಕ್ಕಿಸಿ ದೂರು ನೀಡಿದ 30 ನಿಮಿಷದಲ್ಲಿ ಕಾಮುಕ ಅರೆಸ್ಟ್

    ಬಸ್‍ನಲ್ಲಿ ಮಹಿಳಾ ಟೆಕ್ಕಿಗೆ ಲೈಂಗಿಕ ಕಿರುಕುಳ- ಫೋಟೋ ಕ್ಲಿಕ್ಕಿಸಿ ದೂರು ನೀಡಿದ 30 ನಿಮಿಷದಲ್ಲಿ ಕಾಮುಕ ಅರೆಸ್ಟ್

    ಬೆಂಗಳೂರು: ಚಲಿಸುತ್ತಿದ್ದ ಬಸ್‍ನಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪಿಯ ಫೋಟೋ ಕ್ಲಿಕ್ಕಿಸಿ ಮಹಿಳಾ ಟೆಕ್ಕಿ ಆ್ಯಪ್ ಮೂಲಕ ಪೊಲೀಸರಿಗೆ ದೂರು ನೀಡಿದ್ದು, ಸದ್ಯ ಆರೋಪಿಯನ್ನು ಬಂಧಿಸಲಾಗಿದೆ.

    47 ವರ್ಷದ ಮಧುಸೂದನ್ ರಾವ್ ಬಂಧಿತ ಆರೋಪಿ. ಚಲಿಸುತ್ತಿದ್ದ ವೋಲ್ವೋ ಬಸ್‍ನಲ್ಲಿ ಆರೋಪಿ ಬೆಂಗಳೂರಿನ ಇಬ್ಬಲೂರು ರಿಂಗ್‍ರೋಡ್ ಬಳಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವೇಳೆ ಮಹಿಳೆ ಬಸ್‍ನಲ್ಲಿಯೇ ಆತನ ಫೋಟೋ ತೆಗೆದು ಬೆಳ್ಳಂದೂರು ಇನ್ಸ್‍ಪೆಕ್ಟರ್‍ಗೆ ನೋ ಯುವರ್ ಪೊಲೀಸ್ ಸ್ಟೇಷನ್ ಆ್ಯಪ್ ಮೂಲಕ ಮಾಹಿತಿ ರವಾನಿಸಿದ್ದಾರೆ.

    ಮಾಃಇತಿ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಹೊಯ್ಸಳ ಪೊಲೀಸರು ಬಸ್ ಅಡ್ಡ ನಿಲ್ಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಘಟನೆ ಬುಧವಾರ ನಡೆದಿದ್ದು, ಮಹಿಳೆ ವೋಲ್ವೋ ಬಸ್ ನಲ್ಲಿ ಹೈದರಾಬಾದ್‍ಗೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.

  • ಅತೀ ವೇಗದ ಚಾಲನೆಗೆ ಸಚಿವರ ಪುತ್ರನ ದುರ್ಮರಣ!

    ಅತೀ ವೇಗದ ಚಾಲನೆಗೆ ಸಚಿವರ ಪುತ್ರನ ದುರ್ಮರಣ!

    ಹೈದ್ರಾಬಾದ್: ಇಲ್ಲಿನ ಪ್ರತಿಷ್ಟಿತ ಜುಬಿಲಿ ಹಿಲ್ಸ್ ನಲ್ಲಿರುವ ರೋಡ್ ನಂಬರ್ 36ರಲ್ಲಿ ನಡೆದ ಅಪಘಾತದಲ್ಲಿ ಸಚಿವರೊಬ್ಬರ ಪುತ್ರ ಸೇರಿದಂತೆ ಇಬ್ಬರು ಮೃತರಾದ ಘಟನೆ ಇಂದು ನಸುಕಿನ ಜಾವ ನಡೆದಿದೆ.

    ಆಂಧ್ರ ಪ್ರದೇಶದ ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವ ನಾರಾಯಣ್ ಅವರ ಪುತ್ರ ನಿಶಿತ್ ನಾರಾಯಣ್ ಹಾಗೂ ಅವರ ಸ್ನೇಹಿತ ಸಾವಿಗೀಡಾಗಿದ್ದಾರೆ. ಮೃತ ನಿಶಿತ್ ನಾರಾಯಣ ವಿದ್ಯಾಸಂಸ್ಥೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

    ನಡೆದಿದ್ದೇನು?: ಕುಡಿದು ಮತ್ತಿನಲ್ಲಿ ನಿಶಿತ್ ತನ್ನ ಮರ್ಸಿಡಿಸ್ ಬೆಂಜ್ ಕಾರನ್ನು ವೇಗವಾಗಿ ಚಲಾಯಿಸಿದ್ದಾರೆ. ಹೀಗಾಗಿ ಕಾರು ನಿಯಂತ್ರಣ ತಪ್ಪಿ ಮೆಟ್ರೋ ರೈಲಿಗಾಗಿ ಹಾಕಲಾಗಿದ್ದ ಪಿಲ್ಲರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರಿಗೂ ಗಂಭೀರ ಗಾಯಗಳಾದವು. ಕೂಡಲೇ ಸ್ಥಳೀಯರ ಸಹಾಯದಿಂದ ನಿಷಿತ್ ಹಾಗೂ ರಾಜಾ ರವಿವರ್ಮ ಅವರನ್ನು ಉಸ್ಮಾನಿಯಾ ವೈದ್ಯಕೀಯ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ನಿಷಿತ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

    ಸದ್ಯ ಮಗನ ಸಾವಿನ ಸುದ್ದಿ ಕೇಳಿ ಅಮೆರಿಕ ಪ್ರವಾಸದಲ್ಲಿದ್ದ ಸಚಿವ ನಾರಾಯಣ್ ಹೈದ್ರಾಬಾದ್‍ಗೆ ವಾಪಾಸ್ಸಾಗಿದ್ದಾರೆ.

  • ಟ್ರಂಪ್ ವೀಸಾ ನೀತಿಯಿಂದ ಭಾರತಕ್ಕೆ ಮರಳಿದ್ದ ಟೆಕ್ಕಿ ಪತ್ನಿ ನೇಣಿಗೆ ಶರಣು

    ಟ್ರಂಪ್ ವೀಸಾ ನೀತಿಯಿಂದ ಭಾರತಕ್ಕೆ ಮರಳಿದ್ದ ಟೆಕ್ಕಿ ಪತ್ನಿ ನೇಣಿಗೆ ಶರಣು

    ಹೈದರಾಬಾದ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವೀಸಾ ನೀತಿಯಿಂದಾಗಿ ಅಮೆರಿಕದಿಂದ ಭಾರತಕ್ಕೆ ಹಿಂದಿರುಗಿದ್ದ ಟೆಕ್ಕಿಯೊಬ್ಬರ ಪತ್ನಿಯೊಬ್ಬರು ನೇಣಿಗೆ ಶರಣಾಗಿದ್ದಾರೆ.

    ಹೈದರಾಬಾದ್ ನ ಅಲ್ಕಾಪುರ ಕಾಲೋನಿಯ ಪಪ್ಪಲಗುಡದ ನಿವಾಸಿಯಾದ ಟೆಕ್ಕಿ ಸಂಜಯ್ ಶರ್ಮಾ ಅವರ ಪತ್ನಿ ರಶ್ಮಿ(39) ತಮ್ಮ ನಿವಾಸದಲ್ಲಿ ಗುರುವಾರ ನೇಣಿಗೆ ಶರಣಾಗಿದ್ದಾರೆ. ಸಂಜಯ್ ಮತ್ತು ಅವರ ಮಕ್ಕಳು ಲ್ಯಾಪ್ ಟಾಪ್ ರಿಪೇರಿ ಮಾಡಿಸಲು ಮನೆಯಿಂದ ಹೊರಗಡೆಗೆ ತೆರಳಿದ್ದಾಗ ರಶ್ಮಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಸಂಜಯ್ ಶರ್ಮಾ ಉತ್ತರ ಪ್ರದೇಶದ ಫರೀದಾಬಾದ್ ಮೂಲದವರಾಗಿದ್ದು, ಕಳೆದ 8 ವರ್ಷಗಳಿಂದ ಅವರು ಬ್ಯಾಂಕ್ ಆಫ್ ಅಮೆರಿಕದಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದರು. ಅಮೆರಿಕದ ನೂತನ ನೀತಿಯಿಂದಾಗಿ ಸಂಜಯ್ ಶರ್ಮಾ ಅವರ ಎಚ್-1ಬಿ ವೀಸಾ ಅವಧಿಯನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಇದರಿಂದಾಗಿ ಸಂಜಯ್ ಶರ್ಮಾ ಉದ್ಯೋಗ ಕಳೆದುಕೊಂಡಿದ್ದರು.

    ಅನಿವಾರ್ಯವಾಗಿ ಭಾರತಕ್ಕೆ ಮರಳಲೇಬೇಕಾಗಿದ್ದರಿಂದ ಸಂಜಯ್ ಶರ್ಮಾ ಮಾರುಕಟ್ಟೆಯ ಬೆಲೆಗಿಂತಲೂ ಕಡಿಮೆ ಬೆಲೆಗೆ ಆಸ್ತಿ ಮತ್ತು ಪಿಠೋಪಕರಣಗಳನ್ನು ಮಾರಾಟ ಮಾಡಿದ್ದರು. ಅಮೆರಿಕದಿಂದ ಬಂದ ಬಳಿಕ ಹೈದರಾಬಾದ್‍ನ ರಹೇಜಾ ಐಟಿ ಪಾರ್ಕ್ ನಲ್ಲಿರುವ ಕಂಪೆನಿಯೊಂದರಲ್ಲಿ ಸಂಜಯ್ ಶರ್ಮಾ ಉದ್ಯೋಗಕ್ಕೆ ಸೇರಿಕೊಂಡಿದ್ದರು.

    ಪತಿ ಅಮೆರಿಕದಲ್ಲಿ ಉದ್ಯೋಗ ಕಳೆದುಕೊಂಡಿದ್ದರಿಂದ ರಶ್ಮಿ ಬೇಸರಗೊಂಡಿದ್ದರು. ಅಷ್ಟೇ ಅಲ್ಲದೇ ಭಾರತಕ್ಕೆ ವಾಪಸ್ ಆಗಲು ಇಷ್ಟವಿರಲಿಲ್ಲ. ಭಾರೀ ಮನನೊಂದಿದ್ದ ರಶ್ಮಿ ಈಗ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ರಶ್ಮಿಗೆ ದೆಹಲಿ ಸೇರಿದಂತೆ ಭಾರತದ ಯಾವ ಭಾಗದಲ್ಲೂ ನೆಲೆಸಲು ಇಷ್ಟವಿರಲಿಲ್ಲ. ಭಾರತಕ್ಕೆ ಮರಳಿದ ಬಳಿಕ ಆಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎಂದು ಸಂಬಂಧಿಕರ ಹೇಳಿಕೆಯನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿವೆ.

    ಇದನ್ನೂ ಓದಿ: ಭಾರತೀಯ ಮೂಲದ ಸಿಇಒ ಸುಂದರ್ ಪಿಚೈಗೆ ಗೂಗಲ್ 2016ರಲ್ಲಿ ನೀಡಿದ ಸಂಬಳ ಎಷ್ಟು ಗೊತ್ತೆ?

    ಕನಿಷ್ಠ ಸಂಬಳ ಈಗ ಎಷ್ಟಿರಬೇಕು?
    ಕನಿಷ್ಠ 1,30,000 ಡಾಲರ್(ಅಂದಾಜು 88.17 ಲಕ್ಷ ರೂ.) ಸಂಬಳ ಹೊಂದಿದ ಉದ್ಯೋಗಿಗಳಿಗೆ ಮಾತ್ರ ಎಚ್-1ಬಿ ವೀಸಾ ನೀಡಲು ಅಮೆರಿಕ ಸರ್ಕಾರ ಮುಂದಾಗಿದೆ. ಎಚ್-1ಬಿ ವೀಸಾದ ಕಾನೂನು ತಿದ್ದುಪಡಿಯಾಗಿದ್ದು, ಎಚ್-1ಬಿ ವೀಸಾ ಪಡೆಯಲು ಉದ್ಯೋಗಿಗಳಿಗೆ ಕನಿಷ್ಠ 1.30 ಲಕ್ಷ ಡಾಲರ್ ಸಂಬಳ ನೀಡಬೇಕೆಂಬ ಅಂಶವಿದೆ.

    ಇಲ್ಲಿಯವರೆಗೆ ಎಚ್-1ಬಿ ವೀಸಾ ಹೊಂದಿದವರಿಗೆ ಕನಿಷ್ಠ ಸಂಬಳದ ಮಿತಿ 60 ಸಾವಿರ ಡಾಲರ್(40.69 ಲಕ್ಷ ರೂ.) ಇತ್ತು. 1989ರ ಜಾರಿಗೆ ಬಂದಿದ್ದ ಈ ವೀಸಾ ನಿಯಮದಲ್ಲಿ ಇದೂವರೆಗೆ ಯಾವುದೇ ಬದಲಾವಣೆ ಆಗಿರಲಿಲ್ಲ. ಹೀಗಾಗಿ ಭಾರತೀಯ ಸಾಫ್ಟ್ ವೇರ್ ಕಂಪೆನಿಗಳು ಟೆಕ್ಕಿಗಳನ್ನು ಎಚ್-1ಬಿ ವೀಸಾದ ಅಡಿಯಲ್ಲಿ ಅಮೆರಿಕ ದೇಶಕ್ಕೆ ಕಳುಹಿಸಿಕೊಡುತಿತ್ತು. ಆದರೆ ಈಗ ಈ ವೀಸಾದ ಅಡಿ ಅಮೆರಿಕಕ್ಕೆ ತೆರಳುವ ಉದ್ಯೋಗಿಗಳ ಸಂಬಳದ ಮಿತಿ ಡಬಲ್ ಆಗಿದೆ.

    ಇದನ್ನೂ ಓದಿ: ಉದ್ಯೋಗ ನೀಡುವಂತೆ ಗೂಗಲ್‍ಗೆ 7ರ ಬಾಲಕಿಯಿಂದ ಪತ್ರ: ಸಿಇಒ ಪಿಚೈ ನೀಡಿದ ಉತ್ತರ ಇದು