Tag: Hyderabad

  • ಫಾದರ್ಸ್ ಡೇ ದಿನವೇ ಕಲಬುರಗಿಯಲ್ಲಿ ಮನಕಲಕುವ ಘಟನೆ – ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿದ ತಂದೆ

    ಫಾದರ್ಸ್ ಡೇ ದಿನವೇ ಕಲಬುರಗಿಯಲ್ಲಿ ಮನಕಲಕುವ ಘಟನೆ – ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿದ ತಂದೆ

    ಕಲಬುರಗಿ: ಇಬ್ಬರು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿಯಲ್ಲಿ ನಡೆದಿದೆ.

    ಮೃತರನ್ನು ಚಿಂಚೋಳಿಯ ಕುಂಚಾವರಂನ ಹಣಮಂತ (36), ಅಕ್ಷತಾ (6) ಹಾಗೂ ಓಕಾಂ (9) ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಇದನ್ನೂ ಓದಿ: ನನ್ನ ಲಿವರ್ ಏನು ಕಬ್ಬಿಣದ್ದಾ? ಹಗಲು ರಾತ್ರಿ ಮದ್ಯಪಾನ ಆರೋಪಕ್ಕೆ ಭಗವಂತ್ ಮಾನ್ ತಿರುಗೇಟು

    ಹಣಮಂತ ಪತ್ನಿ ಹಾಗೂ ಮಕ್ಕಳೊಂದಿಗೆ ಹೈದ್ರಾಬಾದ್‍ನಲ್ಲಿ ವಾಸಿಸುತ್ತಿದ್ದ. ಒಂದು ವಾರದ ಹಿಂದಷ್ಟೆ ಪತಿ ಹಾಗೂ ಪತ್ನಿ ನಡುವೆ ಗಲಾಟೆ ನಡೆದು ಕುಂಚಾವರಂಗೆ ಬಂದಿದ್ದರು. ಅಲ್ಲದೇ ಈ ವಿಚಾರವಾಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತ್ನಿ ದೂರು ದಾಖಲಿಸಿದ್ದಳು. ಬಳಿಕ ಪೊಲೀಸರು ಇಬ್ಬರನ್ನೂ ಕರೆಸಿ ಬುದ್ದಿ ಹೇಳಿ ಕಳಿಸಿದ್ದರು. ನಂತರ ಮತ್ತೆ ವಾಪಾಸ್ ಹೈದ್ರಾಬಾದ್‍ಗೆ ತೆರಳಿದ್ದರು.

    ಹಣಮಂತ ಶನಿವಾರ ಮಕ್ಕಳೊಂದಿಗೆ ಸ್ವಗ್ರಾಮಕ್ಕೆ ಬಂದಿದ್ದ. ಭಾನುವಾರ ತಂದೆ ಮತ್ತು ಮಕ್ಕಳ ಶವ ಬಾವಿಯಲ್ಲಿ ಪತ್ತೆಯಾಗಿದೆ. ಈ ಸಂಬಂಧ ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪ್ರೇಮಿಗಳನ್ನ ಹತ್ಯೆ ಮಾಡಿ ಮೊಸಳೆ ಬಾಯಿಗೆ ಎಸೆದ ಯುವತಿ ಪೋಷಕರು

  • ಉನ್ನತ ವ್ಯಾಸಂಗಕ್ಕೆ ತೆರಳಿದ್ದ ಹೈದರಾಬಾದ್ ಯುವತಿ ಲಂಡನ್‌ನಲ್ಲಿ ಭೀಕರ ಕೊಲೆ

    ಉನ್ನತ ವ್ಯಾಸಂಗಕ್ಕೆ ತೆರಳಿದ್ದ ಹೈದರಾಬಾದ್ ಯುವತಿ ಲಂಡನ್‌ನಲ್ಲಿ ಭೀಕರ ಕೊಲೆ

    ಲಂಡನ್: ಉನ್ನತ ವ್ಯಾಸಂಗಕ್ಕೆ ತೆರಳಿದ್ದ ಹೈದರಾಬಾದ್‌ನ (Hyderabad) ಯುವತಿಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಲಂಡನ್‌ನ ವೆಂಬ್ಲಿಯ (London) ನೀಲ್ಡ್ ಕ್ರೆಸೆಂಟ್‌ನಲ್ಲಿ ನಡೆದಿದೆ.

    ಉನ್ನತ ವ್ಯಾಸಂಗಕ್ಕಾಗಿ ಲಂಡನ್‌ಗೆ ತೆರಳಿದ್ದ ಕೋತಂ ತೇಜಸ್ವಿನಿ (27) ಯುವತಿಯನ್ನು ಮಂಗಳವಾರ ಬ್ರೆಜಿಲ್‌ನ ವ್ಯಕ್ತಿಯೊಬ್ಬ ವಸತಿಗೃಹದಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ತೇಜಸ್ವಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಜೊತೆಗೆ 28 ವರ್ಷ ವಯಸ್ಸಿನ ಇನ್ನೊಬ್ಬ ಯುವತಿಗೂ ಚಾಕುವಿನಿಂದ ಇರಿದಿದ್ದು, ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ 24 ಮತ್ತು 23 ವರ್ಷದ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಮೆಟ್ರೋಪಾಲಿಟನ್ ಪೊಲೀಸರು (Metropolitan Police) ತಿಳಿಸಿದ್ದಾರೆ.

    ಈ ಕುರಿತು ಮಾಹಿತಿ ನೀಡಿರುವ ಹೈದರಾಬಾದ್ ಪೊಲೀಸ್ ಅಧಿಕಾರಿ ವಿ. ಸತ್ಯನಾರಾಯಣ, ತೇಜಸ್ವಿನಿ ಅವರ ಕುಟುಂಬ ಹೈದರಾಬಾದ್‌ನ ಚಂಪಾಪೇಟ್‌ನಲ್ಲಿ ವಾಸವಿದೆ. ತಂದೆ ಎಲೆಕ್ಟ್ರಿಕಲ್ ಕೆಲಸ ಮಾಡಿಕೊಂಡಿದ್ದು, ಸ್ವಂತ ಕೃಷಿ ಭೂಮಿಯನ್ನೂ ಹೊಂದಿದ್ದಾರೆ. ಆಕೆ ಇತ್ತೀಚೆಗೆ ಲಂಡನ್ನಿನಲ್ಲಿ ತನ್ನ ಎಂಎಸ್ಸಿ ಪದವಿ ಪೂರ್ಣಗೊಳಿಸಿದ್ದಳು. ಒಂದು ತಿಂಗಳ ಹಿಂದೆಯಷ್ಟೇ ಭಾರತಕ್ಕೆ ಭೇಟಿ ನೀಡಿದ್ದಳು. ಒಂದು ತಿಂಗಳ ಬಳಿಕ ಲಂಡನ್‌ಗೆ ಮರಳಿದ್ದಳು. ಈ ವರ್ಷದ ಮೇ ತಿಂಗಳಲ್ಲಿ ವಾಪಸ್ ಬರಬೇಕಿತ್ತು ಎಂದು ಪೋಷಕರು ತಿಳಿಸಿರುವುದಾಗಿ ಹೇಳಿದ್ದಾರೆ.

    ಬಂಧಿತ ಆರೋಪಿಯು ಮಾದಕ ವ್ಯಸನಿಯಾಗಿದ್ದು, ತೇಜಸ್ವಿನಿಯಿಂದ ಹಣ ವಸೂಲಿ ಮಾಡಲು ಯತ್ನಿಸಿದ್ದ. ಆಕೆ ನಿರಾಕರಿಸಿದಾಗ ಆತ ಚಾಕುವಿನಿಂದ ಇರಿದಿದ್ದಾನೆ ಎಂದು ತಿಳಿದುಬಂದಿದೆ ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಹೇಳಿದ್ದಾರೆ.

    ಲಂಡನ್‌ನಿಂದ ಮರಳಿದ ಬಳಿಕ ಈ ವರ್ಷ ವಿವಾಹ ಆಗುತ್ತೇನೆ ಎಂದು ತೇಜಸ್ವಿನಿ ಪೋಷಕರಿಗೆ ಹೇಳಿದ್ದಳು. ತನ್ನ ಕೆಲಸಕ್ಕೂ ರಾಜೀನಾಮೆ ನೀಡಿದ್ದ ಆಕೆ, ಇನ್ನೊಂದು ತಿಂಗಳು ಕೆಲಸ ಮಾಡಿ ಬರುವುದಾಗಿ ಪೋಷಕರಿಗೆ ಹೇಳಿದ್ದಳು. ಅಷ್ಟರಲ್ಲೇ ದುರ್ಘಟನೆ ನಡೆದಿದೆ ಎಂದು ಪೋಷಕರು ಅಲವತ್ತುಕೊಂಡಿದ್ದಾರೆ.

    ಯುವತಿಯ ಪಾರ್ಥಿವ ಶರೀರವನ್ನು ಲಂಡನ್‌ನಿಂದ ಹೈದರಾಬಾದ್‌ಗೆ ತರಲು ಅಗತ್ಯ ವ್ಯವಸ್ಥೆ ಮಾಡುವಂತೆ ಮೃತಳ ಚಿಕ್ಕಪ್ಪ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ದಾಳಿ ಹಿಂದಿನ ಶಂಕಿತ ವ್ಯಕ್ತಿ ಪತ್ತೆ ಹಚ್ಚಲು ಸಾರ್ವಜನಿಕರ ಸಹಾಯ ಕೋರಲು ಮೆಟ್ರೋಪಾಲಿಟನ್ ಪೊಲೀಸರು ಬ್ರೆಜಿಲ್ ಪ್ರಜೆ ಕೆವೆನ್ ಚಿತ್ರವನ್ನು ಮಂಗಳವಾರ ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ.

  • ಕಣ್ಣು ಕಿತ್ತು, ಕತ್ತು ಕೊಯ್ದು ನರ್ಸಿಂಗ್‌ ವಿದ್ಯಾರ್ಥಿನಿಯ ಕೊಲೆ – ಕರಾಳ ರಾತ್ರಿಯಲ್ಲಿ ನಡೆದಿದ್ದೇನು?

    ಕಣ್ಣು ಕಿತ್ತು, ಕತ್ತು ಕೊಯ್ದು ನರ್ಸಿಂಗ್‌ ವಿದ್ಯಾರ್ಥಿನಿಯ ಕೊಲೆ – ಕರಾಳ ರಾತ್ರಿಯಲ್ಲಿ ನಡೆದಿದ್ದೇನು?

    ಹೈದರಾಬಾದ್‌: ತನ್ನ ಸೋದರ ಮಾವನೊಂದಿಗೆ ಜಗಳವಾಡಿಕೊಂಡು ಮನೆಯಿಂದ ಹೊರಗೆ ಹೋಗಿದ್ದ ನರ್ಸಿಂಗ್‌ ವಿದ್ಯಾರ್ಥಿನಿಯೊಬ್ಬಳು (Nursing Student) ಭೀಕರವಾಗಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ತೆಲಂಗಾಣದಲ್ಲಿ (Telangana) ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ತೆಲಂಗಾಣದ ವಿಕಾರಾಬಾದ್‌ (Vikarabad) ಜಿಲ್ಲೆಯ ಕಾಲಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೃತ ಯುವತಿಯನ್ನ ಕಂಡ್ಲಾಪುರ ನಿವಾಸಿ ಸಿರಿಶಾ (19) ಎಂದು ಗುರುತಿಸಲಾಗಿದೆ. ತನ್ನ ಸೋದರ ಮಾವನೊಂದಿಗೆ ಜಗಳವಾಡಿಕೊಂಡು ಮನೆಬಿಟ್ಟು ಹೋಗಿದ್ದ ಸಿರಿಶಾ ಭಾನುವಾರ ನೀರಿನ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಸಿರಿಶಾಳನ್ನ ಅಪರಿಚಿತ ದುಷ್ಕರ್ಮಿಗಳು ಕೊಲೆ ಮಾಡಿ ಮೃತದೇಹವನ್ನು ಗ್ರಾಮದ ನೀರಿನ ಹೊಂಡಕ್ಕೆ ಎಸೆದಿದ್ದಾರೆ. ಶವ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಭೇಟಿ ನೀಡಿ ಶವವನ್ನ ಹೊರತೆಗೆಯಲಾಗಿದೆ ಎಂದು ಪರಿಗಿ ಸಬ್ ಇನ್ಸ್‌ಪೆಕ್ಟರ್ (SI) ವಿಠ್ಠಲ್ ರೆಡ್ಡಿ ತಿಳಿಸಿದ್ದಾರೆ.

    ಘಟನೆ ನಂತರ ವಿಕಾರಾಬಾದ್ ಎಸ್ಪಿ ಎನ್.ಕೋಟಿ ರೆಡ್ಡಿ ಅವರು ತನಿಖೆ ನಡೆಸಲು ವಿಶೇಷ ತಂಡ ರಚಿಸಿದ್ದಾರೆ. ಮೃತ ಸಿರಿಶಾಳ ಸೋದರ ಮಾವನನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಆ ರಾತ್ರಿ ನಡೆದಿದ್ದೇನು?
    ಮೃತ ಸಿರಿಶಾ ಜೂನ್‌ 10 ರಂದು ರಾತ್ರಿ 10 ಗಂಟೆ ಸುಮಾರಿಗೆ ತನ್ನ ಸೋದರ ಮಾವನೊಂದಿಗೆ ಜಗಳ ಮಾಡಿಕೊಂಡು ಮನೆಯಿಂದ ಹೊರಗೆ ಹೋಗಿದ್ದಾಳೆ. ಆಕೆ ಮನೆಯಿಂದ ಹೊರಬಂದ ಕೆಲವೇ ನಿಮಿಷಗಳಲ್ಲಿ ದುಷ್ಕರ್ಮಿಗಳು ಕೊಂದು ನೀರಿನ ಹೊಂಡಕ್ಕೆ ಎಸೆದು ಎಸ್ಕೇಪ್‌ ಆಗಿದ್ದಾರೆ. ಕಣ್ಣುಗಳಿಗೆ ಕಬ್ಬಿಣದ ರಾಡ್‌ನಿಂದ ಬಲವಾಗಿ ಹೊಡೆದಿದ್ದಾರೆ, ಹರಿತವಾದ ಚಾಕುವಿನಿಂದ ದೇಹದ ಇತರ ಭಾಗಗಳನ್ನ ಕೊಯ್ದು ಭೀಕರವಾಗಿ ಹತ್ಯೆ ಮಾಡಿದ್ದಾರೆ.

    ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಶಂಕಿತರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ರ‍್ಯಾಂಪ್‌ವಾಕ್‌ ಮಾಡ್ತಿದ್ದಾಗ ಕಬ್ಬಿಣದ ಪಿಲ್ಲರ್‌ ಬಿದ್ದು 24ರ ಮಾಡೆಲ್‌ ದುರ್ಮರಣ

    ನರ್ಸಿಂಗ್‌ ಓದುತ್ತಿದ್ದ ಸಿರಿಶಾ ತನ್ನ ತಾಯಿ ಹೃದಯಾಘಾತದಿಂದ ಆಸ್ಪತ್ರೆ ಸೇರಿದ್ದರಿಂದಾಗಿ ಕಳೆದ ಎರಡು ತಿಂಗಳಿಂದ ಕಾಲೇಜಿಗೆ ಹೋಗುವುದನ್ನೇ ನಿಲ್ಲಿಸಿದ್ದಳು. ಇದನ್ನೂ ಓದಿ: ಜೊತೆಯಾಗಿ ಸ್ನಾನಕ್ಕೆ ಹೋದವರು ಹೆಣವಾದ್ರು – ಹಸೆಮಣೆ ಏರಬೇಕಿದ್ದ ಜೋಡಿಯ ದುರಂತ ಅಂತ್ಯ

  • ಪ್ರೇಯಸಿಯನ್ನು ಕೊಲೆಗೈದು ಮ್ಯಾನ್‍ಹೋಲ್‍ಗೆ ಬಿಸಾಕಿದ ಅರ್ಚಕ!

    ಪ್ರೇಯಸಿಯನ್ನು ಕೊಲೆಗೈದು ಮ್ಯಾನ್‍ಹೋಲ್‍ಗೆ ಬಿಸಾಕಿದ ಅರ್ಚಕ!

    ಹೈದರಾಬಾದ್: ವಿವಾಹೇತರ ಸಂಬಂಧ ಹೊಂದಿದ್ದ ಅರ್ಚಕ (Priest) ರೊಬ್ಬರು ತನ್ನ ಪ್ರೇಯಸಿಯನ್ನು ಕೊಂದು ಮ್ಯಾನ್‌ಹೋಲ್ (Manhole) ಗೆ ಎಸೆದಿರುವ ಘಟನೆ ಹೈದರಾಬಾದ್‌ ಬಳಿಯ ಸರೂರ್‌ನಗರದಲ್ಲಿ ನಡೆದಿದೆ‌. ಆರೋಪಿಯನ್ನುಆರೋಪಿಯನ್ನು ಅರ್ಚಕ ಅಯ್ಯಗಾರಿ ಸಾಯಿಕೃಷ್ಣ ಎಂದು ಗುರುತಿಸಲಾಗಿದ್ದು ಪೊಲೀಸರು ಬಂಧಿಸಿದ್ದಾರೆ.

    ಮೃತಳನ್ನು ಕುರುಗಂಟಿ ಅಪ್ಸರಾ (Kuruganti Apsara) ಎಂದು ಗುರುತಿಸಲಾಗಿದೆ. ಅಪ್ಸರಾ ಜೊತೆಗೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳನ್ನು ಹೊಂದಿದ್ದ ಅರ್ಚಕ ಅಯ್ಯಗಾರಿ ಸಾಯಿಕೃಷ್ಣ (Ayyagari Saikrishna) ವಿವಾಹೇತರ ಸಂಬಂಧ ಹೊಂದಿದ್ದರು. ಯುವತಿ ಮದುವೆಯಾಗುವಂತೆ ಒತ್ತಡ ಹಾಕಿದ ಹಿನ್ನೆಲೆ  ತಾನು ಆಕೆಯನ್ನು ಹತ್ಯೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.

    ಹತ್ಯೆ ಮಾಡಿ ಪೊಲೀಸರಿಗೆ ದೂರು: ಅಪ್ಸರಾಳನ್ನ ಹತ್ಯೆ ಮಾಡಿದ್ದ ಅರ್ಚಕ ಅಯ್ಯಗಾರಿ ಸಾಯಿಕೃಷ್ಣ ಪೊಲೀಸರಿಗೆ ದೂರು ನೀಡಿದ್ದ, ತನ್ನ ಸೋದರ ಸೊಸೆ ಅಪ್ಸರಾ ನಾಪತ್ತೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದ. ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಬಳಿಕ ಸಾಯಿಕೃಷ್ಣ ಮೇಲೆಯೇ ಅನುಮಾನ ಬಂದಿದೆ.

    ಸಾಯಿಕೃಷ್ಣ ಕರೆಸಿ ಪೊಲೀಸರು ವಿಚಾರಣೆ ನಡೆಸಿದಾಗ ಹತ್ಯೆ ಮಾಡಿರುವುದಾಗಿ ತಪ್ಲೊಪ್ಪಿಕೊಂಡಿದ್ದಾನೆ. ಆರೋಪಿ ಸಾಯಿಕೃಷ್ಣ ಶಂಶಾಬಾದ್‌ನಲ್ಲಿ ಅಪ್ಸರಾಳನ್ನು ಕೊಂದು, ಸರೂರ್‌ ನಗರಕ್ಕೆ ಸಾಗಿಸುವ ಮೊದಲು ಶವವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಪ್ಯಾಕ್ ಮಾಡಿದ್ದನು. ಬಳಿಕ ತಾನು ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ದೇವಸ್ಥಾನದ ಸಮೀಪವಿರುವ ಎಂಆರ್‌ಒ ಕಚೇರಿಯ ಹಿಂಭಾಗದ ಮ್ಯಾನ್‌ಹೋಲ್‌ಗೆ ಶವವನ್ನು ಎಸೆದಿದ್ದ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಸಾಯಿಕೃಷ್ಣ ವಿರುದ್ಧ ಪ್ರಕರಣ ದಾಖಲಾಗಿದ್ದು, ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಮದ್ವೆ ಖುಷಿಯಲ್ಲಿ ಊರಿಗೆ ಬರ್ತಿದ್ದ ಯೋಧ ರೈಲಿನಿಂದ ಕಾಲು ಜಾರಿ ಬಿದ್ದು ದುರ್ಮರಣ

      

  • ಮತ್ತೆ ಲಿಂಗಾಯತ ಸ್ವತಂತ್ರ ಧರ್ಮದ ಕೂಗು – ಹೈದರಾಬಾದ್‌ನಲ್ಲಿ ಸಮಾವೇಶ

    ಮತ್ತೆ ಲಿಂಗಾಯತ ಸ್ವತಂತ್ರ ಧರ್ಮದ ಕೂಗು – ಹೈದರಾಬಾದ್‌ನಲ್ಲಿ ಸಮಾವೇಶ

    ಹೈದರಾಬಾದ್‌: ಮತ್ತೆ ಲಿಂಗಾಯತ ಸ್ವತಂತ್ರ ಧರ್ಮದ (Lingayat Separate Religion) ಕೂಗು ಮುನ್ನೆಲೆಗೆ ಬಂದಿದೆ.

    ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡುವಂತೆ ಆಗ್ರಹಿಸಿ ಭಾನುವಾರ ಹೈದರಾಬಾದ್‌ನಲ್ಲಿ (Hyderabad) 10 ಸಾವಿರಕ್ಕೂ ಹೆಚ್ಚು ಲಿಂಗಾಯತರು ರಣಕಹಳೆ ಮೊಳಗಿಸಿದ್ದಾರೆ. ಬಸವ ಪೀಠದ ಗಂಗಾಮಾತೆ ನೇತೃತ್ವದಲ್ಲಿ ನಾಗನಪಲ್ಲಿ ವಸ್ತು ಪ್ರದರ್ಶನ ಮೈದಾನದಲ್ಲಿ ಪ್ರತ್ಯೇಕ ಧರ್ಮಕ್ಕೆ ಹಕ್ಕೋತ್ತಾಯ ಮಾಡಲಾಗಿದೆ. ಇದನ್ನೂ ಓದಿ: ಬಿಜೆಪಿಯವರು ಯಾರೂ ಮನೆಯಲ್ಲಿ ಒಂದು ಆಕಳು ಕಟ್ಟಿಲ್ಲ, ಮಾತಾಡ್ತಾರೆ ಅಷ್ಟೇ: ವಿನಯ್ ಕುಲಕರ್ಣಿ

    ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಬಸವಲಿಂಗ ಪಟ್ಟದ್ದೇವರ , ಹೂಲಸೂರು ಶ್ರೀ, ರಾಜೇಶ್ವರ್ ಶಿವಾಚಾರ್ಯರು ಸೇರಿದಂತೆ ಹತ್ತಾರು ಲಿಂಗಾಯತ ಮುಖಂಡರು ಭಾಗಿಯಾಗಿದ್ದಾರೆ. ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೀದರ್‌ನಿಂದ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಕಿಚ್ಚು ಪ್ರಾರಂಭವಾಗಿತ್ತು.

  • ತೆಲಂಗಾಣದಲ್ಲಿ ವಿಶ್ವದ ಮೊದಲ 3ಡಿ ಪ್ರಿಂಟ್ ದೇವಾಲಯ ನಿರ್ಮಾಣ

    ತೆಲಂಗಾಣದಲ್ಲಿ ವಿಶ್ವದ ಮೊದಲ 3ಡಿ ಪ್ರಿಂಟ್ ದೇವಾಲಯ ನಿರ್ಮಾಣ

    ಹೈದರಾಬಾದ್: ವಿಶ್ವದ ಮೊದಲ 3ಡಿ ಪ್ರಿಂಟ್ ದೇವಾಲಯವೊಂದು (3D Printed Temple) ತೆಲಂಗಾಣದಲ್ಲಿ (Telangana) ನಿರ್ಮಾಣಗೊಳ್ಳುತ್ತಿದೆ. ಈ ಮೂಲಕ ದೇಶದ ಮುಡಿಗೆ ಹೊಸ ಗರಿಯೊಂದು ಸೇರಿದೆ.

    ಸಿದ್ದಿಪೇಟೆ ಜಿಲ್ಲೆಯ ಚಾರ್ವಿತಾ ಮೆಡೋಸ್‍ನಲ್ಲಿ 3,800 ಚದರ ಅಡಿ ಪ್ರದೇಶದಲ್ಲಿ ಈ ದೇವಾಲಯ ನಿರ್ಮಿಸಲಾಗುತ್ತಿದೆ. ಹೈದರಾಬಾದ್ (Hyderabad) ಮೂಲದ ಕಟ್ಟಡ ನಿರ್ಮಾಣ ಕಂಪನಿ ಅಪ್ಸುಜಾ ಇನ್ಫ್ರಾಟೆಕ್ ಮತ್ತು ಸಿಂಪ್ಲಿಫೋರ್ಜ್ ಕ್ರಿಯೇಷನ್ಸ್ ಸಹಯೋಗದಲ್ಲಿ ದೇವಾಲಯ ನಿರ್ಮಾಣ ಕಾರ್ಯ ನಡೆದಿದೆ. ದೇವಾಲಯವನ್ನು ನಿರ್ಮಿಸಲು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 3ಡಿ ತಂತ್ರಜ್ಞಾನ ಮತ್ತು ಸಾಫ್ಟ್‍ವೇರ್‍ಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ನಿರ್ಮಾಣ ಸಂಸ್ಥೆ ಹೇಳಿಕೊಂಡಿದೆ. ಇದನ್ನೂ ಓದಿ: 23 ವರ್ಷ ಸೇವೆ ಸಲ್ಲಿಸಿ ತಾಯ್ನಾಡಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ

    ಅಪ್ಸುಜಾ ಇನ್ಫ್ರಾಟೆಕ್ ವ್ಯವಸ್ಥಾಪಕ ನಿರ್ದೇಶಕ ಹರಿ ಕೃಷ್ಣ ಅವರು ಈ ಬಗ್ಗೆ ಮಾತನಾಡಿ, ದೇವಾಲಯವು ಮೂರು ಗರ್ಭಗುಡಿಗಳನ್ನು ಹೊಂದಿದೆ. ಅದರಲ್ಲಿ ಎರಡು ಮೋದಕ ಆಕಾರದ (ಗಣೇಶನಿಗೆ ಇಷ್ಟವಾದ ಸಿಹಿ) ಗುಡಿಗಳು, ಭಗವಾನ್ ಶಿವನಿಗೆ (ಶಿವಾಲಯ) ಮೀಸಲಾದ ಚೌಕಾಕಾರದ ಸ್ಥಳ ಮತ್ತು ಪಾರ್ವತಿ ದೇವಿಗೆ ಕಮಲದ ಆಕಾರದ ಆಸನ ರಚಿಸಲಾಗಿದೆ ಎಂದಿದ್ದಾರೆ.

    ತೆಲಂಗಾಣ ರಚನೆಯ ದಿನಾಚರಣೆ ಒಂದು ದಿನದ ಮುಂಚೆ ಈ ವಿಷಯ ಪ್ರಕಟವಾಗಿದೆ. 2014ರ ಜೂನ್ 2 ರಂದು ಆಂಧ್ರಪ್ರದೇಶದಿಂದ ಹೊರ ಬಂದು 29 ನೇ ರಾಜ್ಯವಾಗಿ ತೆಲಂಗಾಣ ರಚನೆಯಾಗಿತ್ತು.‌ ಇದನ್ನೂ ಓದಿ: ಫ್ರೀ ಎಜುಕೇಷನ್ ಕೊಡಿಸ್ತೀನಿ ಅಂತ ವಿದ್ಯಾರ್ಥಿಗಳಿಗೆ 18 ಕೋಟಿ ವಂಚನೆ – ಆರೋಪಿ ಅರೆಸ್ಟ್

  • ಆದಾಯ ತೆರಿಗೆ ಅಧಿಕಾರಿಗಳಂತೆ ನಟಿಸಿ ಚಿನ್ನ ಕಳವು – ನಾಲ್ವರ ಬಂಧನ

    ಆದಾಯ ತೆರಿಗೆ ಅಧಿಕಾರಿಗಳಂತೆ ನಟಿಸಿ ಚಿನ್ನ ಕಳವು – ನಾಲ್ವರ ಬಂಧನ

    ಹೈದರಾಬಾದ್: ಆದಾಯ ತೆರಿಗೆ ಅಧಿಕಾರಿಗಳಂತೆ (Income Tax Officer) ವೇಷ ಧರಿಸಿ ಹೈದರಾಬಾದ್‌ನ (Hyderabad) ಅಂಗಡಿಯೊಂದರಲ್ಲಿ 60 ಲಕ್ಷ ರೂ. ಮೌಲ್ಯದ ಚಿನ್ನದ ಬಿಸ್ಕತ್‌ಗಳನ್ನು (Gold Biscuit) ಕದ್ದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ರೆಹಮಾನ್ ಗಫೂರ್ ಅಥರ್, ಜಾಕಿರ್ ಗನಿ ಅಥರ್, ಪ್ರವೀಣ್ ಯಾದವ್ ಹಾಗೂ ಆಕಾಶ್ ಅರುಣ್ ಎಂದು ಗುರುತಿಸಲಾಗಿದೆ. ಆರೋಪಿಗಳು ಸೇರಿದಂತೆ 8ರಿಂದ 10 ಜನರಿದ್ದ ತಂಡವು ಮೇ 27ರಂದು ಹೈದರಾಬಾದ್‌ನ ಮೋಂಡಾ ಮಾರ್ಕೆಟ್‌ನಲ್ಲಿರುವ ಸಿದ್ದಿವಿನಾಯಕ ಎಂಬ ಅಂಗಡಿಯಿಂದ ಆದಾಯ ತೆರಿಗೆ ಅಧಿಕಾರಿಗಳಂತೆ ನಟಿಸಿ 60 ಲಕ್ಷ ರೂ. ಮೌಲ್ಯದ 17 ಚಿನ್ನದ ಬಿಸ್ಕತ್‌ಗಳನ್ನು ಕಳವು ಮಾಡಿದ್ದಾರೆ. ಇದನ್ನೂ ಓದಿ: ಒಂದೇ ವಾರದಲ್ಲಿ 2,000 ರೂ. ನೋಟುಗಳ 14,000 ಕೋಟಿ ಡೆಪಾಸಿಟ್: SBI

    ಬಂಧಿತ ಆರೋಪಿಗಳಿಂದ 7 ಚಿನ್ನದ ಬಿಸ್ಕತ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತರ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಪಶ್ಚಾತ್ತಾಪವಿಲ್ಲ, ನನ್ನ ತಿರಸ್ಕರಿಸಿದ್ದಕ್ಕೆ ಆಕೆಯನ್ನು ಕೊಂದೆ- ತಪ್ಪೊಪ್ಪಿಕೊಂಡ ಸಾಹಿಲ್

  • ಕಾರು ಅಪಘಾತ: ಆರೋಗ್ಯವಾಗಿದ್ದೇನೆ ಭಯ ಬೇಡ ಎಂದ ನಟ ಶರ್ವಾನಂದ್

    ಕಾರು ಅಪಘಾತ: ಆರೋಗ್ಯವಾಗಿದ್ದೇನೆ ಭಯ ಬೇಡ ಎಂದ ನಟ ಶರ್ವಾನಂದ್

    ತೆಲುಗಿನ ಖ್ಯಾತ ನಟ ಶರ್ವಾನಂದ್ ಅವರ ಕಾರು ಅಪಘಾತವಾಗಿ ಅಭಿಮಾನಿಗಳಿಗೆ ಸಾಕಷ್ಟು ಆತಂಕ ಮೂಡಿಸಿತ್ತು. ಶರ್ವಾನಂದ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿತ್ತು.  ಅಪಘಾತಕ್ಕೆ ಸಂಬಂಧಿಸಿದಂತೆ ನಾನಾ ರೀತಿಯ ಗೊಂದಲಗಳು ಕೂಡ ಮೂಡಿದ್ದವು. ಈ ಕುರಿತು ಸ್ವತಃ ಶರ್ವಾನಂದ್ ಅವರೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ‘ರವಿವಾರ ಆಗಿದ್ದು ಸಣ್ಣ ಅಪಘಾತ. ಅದರಿಂದ ನನಗೆ ಸಣ್ಣ ಪುಟ್ಟ ಗಾಯಗಳಾಗಿವೆ ಅಷ್ಟೆ. ಆತಂಕ ಪಡುವಂಥದ್ದು ಏನೂ ಆಗಿಲ್ಲ. ನಾನು ಆರೋಗ್ಯವಾಗಿದ್ದೇನೆ. ತಾವೆಲ್ಲ ನನ್ನ ಬಗ್ಗೆ ಕಾಳಜಿ ತೋರಿಸಿದ್ದಕ್ಕೆ ಧನ್ಯವಾದಗಳು’ ಎಂದು ಶರ್ವಾನಂದ್ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ಜೂನ್‌ನಲ್ಲಿ ಅಂಬಿ ಪುತ್ರನ ಅದ್ದೂರಿ ಮದುವೆ- ಆಮಂತ್ರಣ ಪತ್ರಿಕೆ ಇಲ್ಲಿದೆ

    ಜೂನ್ 2 ರಂದು ಶರ್ವಾನಂದ್ ಪ್ರಯಾಣಿಸುತ್ತಿದ್ದ ಐಷಾರಾಮಿ ಕಾರು ಹೈದರಾಬಾದ್ ನ ಜೂಬ್ಲಿ ಹಿಲ್ಸ್ ಬಳಿ ಅಪಘಾತಕ್ಕೀಡಾಗಿತ್ತು (Accident). ಶರ್ವಾನಂದ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು. ಶರ್ವಾನಂದ್ ಅವರ ಡ್ರೈವರ್ ಆ ಕಾರು ಓಡಿಸುತ್ತಿದ್ದರು ಎಂದು ಹೇಳಲಾಗುತ್ತಿದ್ದು, ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿತ್ತು. ಪರಿಣಾಮ ಕಾರು ಪಲ್ಟಿಯಾಗಿದೆ. ಅದು ಐಷಾರಾಮಿ ಕಾರು ಆಗಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದರು.

    ಶರ್ವಾನಂದ್ (Sharwanand) ತಮ್ಮ ಬಹುಕಾಲದ ಗೆಳತಿ ರಕ್ಷಿತಾ ರೆಡ್ಡಿ ಜೊತೆ ಕೆಲ ತಿಂಗಳ ಹಿಂದೆಯಷ್ಟೇ ಎಂಗೇಜ್‌ಮೆಂಟ್ (Engagement) ಮಾಡಿಕೊಂಡಿದ್ದರು. ಇದೀಗ ಜೂನ್ 2 ಮತ್ತು 3 ರಂದು ರಾಜಸ್ಥಾನದ ಜೈಪುರದಲ್ಲಿರುವ ಲೀಲಾ ಪ್ಯಾಲೇಸ್ ನಲ್ಲಿ ಮದುವೆ ಆಗುತ್ತಿದ್ದಾರೆ. ಈಗವರು ಮದುವೆ ಸಿದ್ಧತೆಯಲ್ಲಿದ್ದರು.

    ಶರ್ವಾನಂದ್ ಕೈ ಹಿಡಿಯುತ್ತಿರುವ ಹುಡುಗಿಯ ಹೆಸರು ರಕ್ಷಿತಾ ರೆಡ್ಡಿ (Raskshitha Reddy). ಸಾಫ್ಟ್ ವೇರ್ ಇಂಜಿನಿಯರ್ ಆಗಿ ಆಕೆ ಕೆಲಸ ಮಾಡುತ್ತಿದ್ದಾರೆ. ತಂದೆ ಮಧುಸೂದನ ರೆಡ್ಡಿ ತೆಲಂಗಾಣ ಹೈಕೋರ್ಟ್‌ನಲ್ಲಿ ವಕೀಲರಾಗಿದ್ದಾರೆ. ಇವರ ಮದುವೆಗೆ ರಾಮ್ ಚರಣ್ (Ramcharan) ದಂಪತಿ, ಸಿದ್ಧಾರ್ಥ್- ಅದಿತಿ ಜೋಡಿ, ನಟ ಚಿರಂಜೀವಿ, ನಾನಿ, ನಟ ನಾಗಾರ್ಜುನ ದಂಪತಿ ಸೇರಿದಂತೆ ಹಲವರು ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

  • ಜಗ್ಗೇಶ್ ನಟನೆಯ ‘ಸರ್ವರ್ ಸೋಮಣ್ಣ’ ನಿರ್ದೇಶಕ ಕೆ.ವಾಸು ನಿಧನ

    ಜಗ್ಗೇಶ್ ನಟನೆಯ ‘ಸರ್ವರ್ ಸೋಮಣ್ಣ’ ನಿರ್ದೇಶಕ ಕೆ.ವಾಸು ನಿಧನ

    ತೆಲುಗಿನ ಖ್ಯಾತ ನಟ ಚಿರಂಜೀವಿ ಅವರನ್ನು ಸಿನಿಮಾ ರಂಗಕ್ಕೆ ಪರಿಚಯಿಸಿದ ಹಾಗೂ ಕನ್ನಡದಲ್ಲಿ ಜಗ್ಗೇಶ್ ನಟನೆಯ ಸರ್ವರ ಸೋಮಣ್ಣ ಚಿತ್ರವನ್ನು ನಿರ್ದೇಶನ ಮಾಡಿದ್ದ ಖ್ಯಾತ ದಕ್ಷಿಣ ಭಾರತದ ಸಿನಿಮಾ ನಿರ್ದೇಶಕ ಕೆ.ವಾಸು (K.Vasu) ನಿಧನರಾಗಿದ್ದಾರೆ (Passed Away). ಹಲವು ವರ್ಷಗಳಿಂದ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು.

    ಕೆಲ ದಿನಗಳಿಂದ ಅವರು ಆರೋಗ್ಯ ತೀರಾ ಹದಗೆಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅಲ್ಲದೇ, ಕಳೆದ ಕೆಲ ತಿಂಗಳಿಂದ ಅವರಿಗೆ ಡಯಾಲಿಸಸ್ ಕೂಡ ಮಾಡಿಸಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಂಜೆ ಹೈದರಾಬಾದ್ (Hyderabad) ನ ಫಿಲ್ಮ್ ನಗರದಲ್ಲಿರುವ ಅವರ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ:ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಹೊಯ್ಸಳ’ ಬಲಿ- ಫ್ಯಾನ್ಸ್‌ಗೆ ಸಿಕ್ತು ಸಿಹಿಸುದ್ದಿ

    ಕೆ.ವಾಸು ನಿಧನಕ್ಕೆ ಚಿರಂಜೀವಿ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಚಿರಂಜೀವಿ ಟ್ವೀಟ್ ಕೂಡ ಮಾಡಿದ್ದಾರೆ. ಕೆ.ವಾಸು ನಿರ್ದೇಶನದ ಪ್ರಣಾಮ್ ಖರೀದು ಚಿತ್ರದ ಮೂಲಕ ತಾವು ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದನ್ನೂ ಚಿರಂಜೀವಿ ನೆನಪಿಸಿಕೊಂಡಿದ್ದಾರೆ. ಅಲ್ಲದೇ ವಾಸು ಜೊತೆಗಿನ ಒಡನಾಟವನ್ನೂ ಅವರು ಹಂಚಿಕೊಂಡಿದ್ದಾರೆ.

    22ನೇ ವಯಸ್ಸಿಗೆ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದ ಕೆ.ವಾಸು, ಸಹಾಯಕ ನಿರ್ದೇಶಕರಾಗಿ, ನಿರ್ದೇಶಕರಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಕೊತ್ತಲ ರಾಯುಡು, ಶ್ರೀ ಶಿರಡಿ ಸಾಯಿಬಾಬಾ ಮಹಾತ್ಯಮ್, ಸರ್ವರ್ ಸೋಮಣ್ಣ ಹೀಗೆ ಸಾಕಷ್ಟು ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ.

  • ಪಾರ್ಕಿಂಗ್ ಲಾಟ್‌ನಲ್ಲಿ ಮಲಗಿದ್ದ ಮಗುವಿನ ಮೇಲೆ ಹರಿದ ಕಾರು – ಕಲಬುರಗಿಯ ಕಂದಮ್ಮ ಸ್ಥಳದಲ್ಲೇ ಸಾವು

    ಪಾರ್ಕಿಂಗ್ ಲಾಟ್‌ನಲ್ಲಿ ಮಲಗಿದ್ದ ಮಗುವಿನ ಮೇಲೆ ಹರಿದ ಕಾರು – ಕಲಬುರಗಿಯ ಕಂದಮ್ಮ ಸ್ಥಳದಲ್ಲೇ ಸಾವು

    ಕಲಬುರಗಿ: ಪಾರ್ಕಿಂಗ್ ಲಾಟ್‌ನಲ್ಲಿ (Parking Lot) ಮಲಗಿದ್ದ 3 ವರ್ಷದ ಮಗುವಿನ (Child) ಮೇಲೆ ಕಾರು (Car) ಹರಿದು ಕಂದಮ್ಮ ಸ್ಥಳದಲ್ಲೇ ಸಾವನ್ನಪ್ಪಿರುವ ಮನಕಲುಕುವ ಘಟನೆ ಹೈದರಾಬಾದ್‌ನಲ್ಲಿ (Hyderabad) ನಡೆದಿದೆ.

    ಹೈದರಾಬಾದ್‌ನ ಹೈಯತ್ ನಗರದ ಲೆಕ್ಚರ್ಸ್ ಕಾಲೋನಿಯಲ್ಲಿ ದುರ್ಘಟನೆ ನಡೆದಿದೆ. ಕಲಬುರಗಿ (Kalaburagi) ಮೂಲದ ದಾರುಣ್ಯ (3) ಘಟನೆಯಲ್ಲಿ ಸಾವನ್ನಪ್ಪಿರುವ ಬಾಲಕಿ.

    ಮಗುವಿನ ತಾಯಿ ಕೆಲಸ ಹುಡುಕಿಕೊಂಡು 3 ಮಕ್ಕಳೊಂದಿಗೆ ಹೈದರಾಬಾದ್ ತೆರಳಿದ್ದಳು. ನಗರದಲ್ಲಿ ವಿಪರೀತ ತಾಪಮಾನವಿದ್ದ ಕಾರಣ ತನ್ನ 3 ವರ್ಷದ ಮಗುವನ್ನು ಬೇಸ್ಮೆಂಟ್ ಮೇಲೆ ಮಲಗಿಸಿದ್ದಳು. ಆದರೆ ಚಾಲಕ ಮಗು ಮಲಗಿದ್ದನ್ನು ಗಮನಿಸದೇ ತಲೆ ಮೇಲೆ ಕಾರನ್ನು ಹತ್ತಿಸಿದ್ದಾನೆ. ಈ ವೇಳೆ ಮಗು ಸ್ಥಳದಲ್ಲೇ ಪ್ರಾಣ ಬಿಟ್ಟಿದೆ. ಇದನ್ನೂ ಓದಿ: ಬಲೂನ್ ಕಟ್ಟಿಕೊಂಡು ಕುಮಾರಧಾರ ನದಿಗೆ ಹಾರಿ ಉದ್ಯಮಿ ಆತ್ಮಹತ್ಯೆ

    ಮಗುವಿನ ಮೇಲೆ ಕಾರು ಹತ್ತಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯವನ್ನು ಆಧರಿಸಿ ಚಾಲಕನ ವಿರುದ್ಧ ಹೈದರಾಬಾದ್ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಧಾರವಾಡದಲ್ಲಿ ಡಬಲ್ ಮರ್ಡರ್ – ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು