Tag: Hyderabad

  • ಸೀರೆ ಉಟ್ಟ ನಾರಿಯ ಸ್ಪೋರ್ಟ್ಸ್ ಬೈಕ್ ರೈಡಿಂಗ್-ವಿಡಿಯೋ ವೈರಲ್

    ಸೀರೆ ಉಟ್ಟ ನಾರಿಯ ಸ್ಪೋರ್ಟ್ಸ್ ಬೈಕ್ ರೈಡಿಂಗ್-ವಿಡಿಯೋ ವೈರಲ್

    ಹೈದರಾಬಾದ್: ಸಾಂಪ್ರದಾಯಿಕವಾಗಿ ಸೀರೆ ಉಟ್ಟ ಮಹಿಳೆಯೊಬ್ಬರು ಆರ್ 15 ಸ್ಪೋರ್ಟ್ಸ್ ಬೈಕ್ ಓಡಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ತೆಲಂಗಾಣದ ಹಾಯತ್‍ನಗರ್ ನಲ್ಲಿ ಈ ಘಟನೆ ನಡೆದಿದೆ. ವಿಡಿಯೋದಲ್ಲಿ ಬೈಕ್ ಓಡಿಸುತ್ತಿರೋ ಮಹಿಳೆ ಜೊತೆಗೆ ಇನ್ನಿಬ್ಬರು ಮಹಿಳೆಯರು ಕುಳಿತಿದ್ದು, ತ್ರಿಬಲ್ ರೈಡಿಂಗ್ ಮಾಡ್ತಿರೋದನ್ನ ಕಾಣಬಹುದು.

    ಮಹಿಳೆಯ ಬೈಕ್ ಹಿಂದೆಯೇ ಬರುತ್ತಿದ್ದ ವ್ಯಕ್ತಿಯೊಬ್ಬರು ಇದನ್ನ ವಿಡಿಯೋ ಮಾಡಿದ್ದಾರೆ. ವಿಡಿಯೋ ಮಾಡ್ತಿರೋದನ್ನ ಕಂಡ ಕೂಡಲೇ ಮಹಿಳೆ ಬೈಕ್ ವೇಗ ಹೆಚ್ಚಿಸಿ ಸ್ವಲ್ಪ ಮುಂದೆ ಹೋಗಿದ್ದಾರೆ. ನಂತರ ಎಲ್ಲಾ ಮೂವರು ಮಹಿಳೆಯರು ನಕ್ಕು ಸುಮ್ಮನಾಗಿದ್ದಾರೆ.

    ಮಹಿಳೆ ಇಬ್ಬರು ಹಿಂಬದಿ ಸವಾರರನ್ನು ಕೂರಿಸಿಕೊಂಡು, ಪರಿಣಾಮಗಳ ಅರಿವಿಲ್ಲದೆ ಬೈಕ್ ಚಲಾಯಿಸಿದ್ದಾರೆ. ಅದರಲ್ಲೂ ಸಾಂಪ್ರದಾಯಿಕ ಸೀರೆಯಲ್ಲಿ ಟ್ರೆಂಡಿ ಸ್ಪೋರ್ಟ್ಸ್ ಬೈಕ್ ಓಡಿಸಿರೋದು ನೋಡುಗರ ಹುಬ್ಬೇರಿಸಿದೆ.

  • ಕೃಷ್ಣ ನದಿ ದಾಟುವಾಗ ಬಿದ್ದು ವಿದ್ಯಾರ್ಥಿ, ವಿದ್ಯಾರ್ಥಿಯ ಗೆಳತಿ ಸಾವು

    ಕೃಷ್ಣ ನದಿ ದಾಟುವಾಗ ಬಿದ್ದು ವಿದ್ಯಾರ್ಥಿ, ವಿದ್ಯಾರ್ಥಿಯ ಗೆಳತಿ ಸಾವು

    ಹೈದರಾಬಾದ್: ವಿದ್ಯಾರ್ಥಿ, ವಿದ್ಯಾರ್ಥಿಯ ಗೆಳತಿ ಕೃಷ್ಣನದಿಯನ್ನು ದಾಟುವ ವೇಳೆ ಅಕಸ್ಮಾತಾಗಿ ಬಿದ್ದು, ಸಾವನ್ನಪ್ಪಿರುವ ಘಟನೆ ಗದ್ವಾಲ್ ಜೋಗುಲಂಬಾ ಜಿಲ್ಲೆಯ ರೆಕುಲಪಲ್ಲಿಯಲ್ಲಿ ಶನಿವಾರ ಸಂಜೆ ನಡೆದಿದೆ.

    ವಾರಿಸ್ (17) ಮತ್ತು ಸಾನಾ ಜಬೀನ್ (17) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ವಾರಿಸ್ ಕುರ್ನೂಲ್ ಜಿಲ್ಲೆಯ ಎಮ್ಮಿಗನೂರ್ ನಿವಾಸಿಯಾಗಿದ್ದು, ಎರ್ರಾಕೋಟಾದಲ್ಲಿರುವ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಬಿ.ಫಾರ್ಮಸಿ ವ್ಯಾಸಂಗ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ಶನಿವಾರ ವಾರಿಸ್ ತನ್ನ ಪೋಷಕರಾದ ಮೊಹಮ್ಮದ್ ರಫಿ ಮತ್ತು ಮುನಿರಾಬಾ ಅವರಿಗೆ ಕಾಲೇಜಿಗೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೊರಟಿದ್ದಾನೆ. ನಂತರ ಗದ್ವಾಲ್‍ಗೆ ಹೋಗಿ ತನ್ನ ಚಿಕ್ಕಪ್ಪನ ಮಗಳಾದ ಸಾನಾ ಜಬೀನ್ ನನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದಾನೆ.

    ಇಬ್ಬರು ದ್ವಿ ಚಕ್ರ ವಾಹದ ಮೇಲೆ ಜುರಾಲಾದ ಕೆಳಭಾಗದ ಪ್ರದೇಶಗಳಿಗೆ ಹೊರಟಿದ್ದಾರೆ. ಬಳಿಕ ಕೃಷ್ಣನದಿಯ ತೀರದಲ್ಲಿ ಸ್ವಲ್ಪ ಸಮಯ ಕಳೆದಿದ್ದಾರೆ. ಬಳಿಕ ಕತ್ತಲಾಗುತ್ತಿದ್ದಂತೆ ಇಬ್ಬರು ಮನೆಗೆ ಹಿಂದಿರುಗಲು ನದಿಯನ್ನು ದಾಟಲು ಪ್ರಯತ್ನಿಸಿದ್ದಾರೆ. ಆದರೆ ನೀರಿನ ರಭಸ ಜಾಸ್ತಿ ಇದ್ದ ಕಾರಣ ದಾಟಲು ಸಾಧ್ಯವಾಗದೇ ನದಿಯಲ್ಲಿ ಬಿದ್ದಿದ್ದಾರೆ.

    ಮಕ್ಕಳು ಇಷ್ಟು ಹೊತ್ತಾದರೂ ಮನೆಗೆ ಬರಲಿಲ್ಲ ಎಂದು ಗಾಬರಿಗೊಂಡು ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ನದಿಯ ಬಳಿ ಹೋಗಿ ಕಾರ್ಯಚರಣೆಯನ್ನು ನಡೆಸಿ ರೆಕುಲಪಲ್ಲಿಯಿಂದ ಸುಮಾರು ದೂರದಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ.

  • 2018 ಕ್ಕೆ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡ್ತಾರಾ ಪ್ರಭಾಸ್-ಅನುಷ್ಕಾ ಜೋಡಿ?

    2018 ಕ್ಕೆ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡ್ತಾರಾ ಪ್ರಭಾಸ್-ಅನುಷ್ಕಾ ಜೋಡಿ?

    ಹೈದರಾಬಾದ್: ಸೌಥ್ ಸಿನಿ ಇಂಡಸ್ಟ್ರಿಯ ಪ್ರಸಿದ್ಧ ಜೋಡಿ, ಕ್ಯೂಟ್ ಹೀರೋ-ಹೀರೋಯಿನ್ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಯಾವಾಗಲು ಒಂದಲ್ಲಾ ಒಂದು ವಿಷಯಕ್ಕೆ ಸುದ್ದಿ ಆಗುತ್ತಿರುತ್ತಾರೆ. ಅದರಲ್ಲೂ `ಬಾಹುಬಲಿ 2′ ಚಿತ್ರ ತೆರೆಕಂಡ ನಂತರ ಇವರಿಬ್ಬರ ಆಫ್‍ಸ್ಕ್ರೀನ್ ಕೆಮಿಸ್ಟ್ರಿ ಬಗ್ಗೆ ಗಾಸಿಪ್‍ಗಳು ಹೆಚ್ಚಾಗುತ್ತಲೇ ಇವೆ.

    ಬಾಹುಬಲಿಯ ನಂತರ ಈ ಜೋಡಿಯ ಮೇಲೆ ಅಭಿಮಾನಿಗಳು ಒಂದು ಕಣ್ಣನ್ನು ಇಡುವಷ್ಟು ಮೋಡಿ ಮಾಡಿದೆ ಈ ಜೋಡಿ. ಸದ್ಯಕ್ಕೆ ಇಬ್ಬರ ನಡುವಿನ ಹೊಸ ಸಮಾಚಾರವೊಂದು ಟಾಲಿವುಡ್ ನಲ್ಲಿ ಹರಿದಾಡುತ್ತಿದೆ.

    ಪ್ರಭಾಸ್ ಅನುಷ್ಕಾ ಅಭಿಮಾನಿಗಳಿಗೆ ಮುಂದಿನ ವರ್ಷ ಸರ್ಪ್ರೈಸ್ ಸಿಗಲಿದೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ ಸೆನ್ಸಾರ್ ಬೋರ್ಡ್‍ನ ಉಮೈರ್ ಸಂಧು ಟ್ವೀಟ್ ಮಾಡಿ ಹೇಳಿದ್ದಾರೆ. ಸದ್ಯಕ್ಕೆ ಅವರು ಮಾಡಿರುವ ಟ್ವೀಟ್ ನಿಂದ ಎಲ್ಲರಲ್ಲೂ ಕುತೂಹಲ ಕೆರಳಿದೆ.

    ನಂಬಿ ಅಥವಾ ಬಿಡಿ ಆದರೆ ಇದು 100% ಸತ್ಯ. ಸೂಪರ್ ಸ್ಟಾರ್ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಇಬ್ಬರೂ ಒಬ್ಬರನ್ನೊಬ್ಬರು ಇಷ್ಟ ಪಡುತ್ತಿದ್ದಾರೆ. ಅವರು ರಿಲೇಷನ್‍ಶಿಪ್‍ನಲ್ಲಿದ್ದಾರೆ. ಮುಂದಿನ ವರ್ಷ ಅಂದರೆ 2018 ಇವರ ಅಭಿಮಾನಿಗಳಿಗೆ ಸರ್ಪ್ರೈಸ್ ಸಿಗಲಿದೆ ಎಂದು ಬರೆದು ಅನುಷ್ಕಾ ಮತ್ತು ಪ್ರಭಾಸ್ ಫೋಟೋವನ್ನು ಹಾಕಿ ಟ್ವೀಟ್ ಮಾಡಿದ್ದಾರೆ.

    ಉಮೈರ್ ಸಂಧು ಈ ರೀತಿಯಲ್ಲಿ ಬರೆದು ಟ್ವೀಟ್ ಮಾಡಿದ ಸ್ವಲ್ಪ ಸಮಯದ ನಂತರ ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಆದರೆ ಇದು ಸತ್ಯನಾ ಅಥವಾ ಬರಿ ವದಂತಿನಾ ಅಂತಾ ಖಚಿತವಾಗಿ ತಿಳಿದುಬಂದಿಲ್ಲ. ಆದರೆ ಈ ಮಾಹಿತಿಯಿಂದ ಟಾಲಿವುಡ್‍ನಲ್ಲಿ ಈ ಜೋಡಿಯ ಬಗ್ಗೆ ಗಾಸಿಪ್ ಹೆಚ್ಚಾಗಿದೆ.

    ಸದ್ಯಕ್ಕೆ ಅನುಷ್ಕಾ `ಭಾಗಮತಿ’ ಸಿನಿಮಾದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದು, ಮುಂದಿನ ವರ್ಷ ಜನವರಿ 26 ರಂದು ಚಿತ್ರ ತೆರೆಕಾಣಲಿದೆ. ಪ್ರಭಾಸ್ `ಸಾಹೋ’ ಸಿನಿಮಾದ ಶೂಟಿಂಗ್ ಅಲ್ಲಿ ಬ್ಯುಸಿಯಾಗಿದ್ದಾರೆ.

  • 7ನೇ ಕ್ಲಾಸ್ ವಿದ್ಯಾರ್ಥಿನಿ ಮೇಲೆ 83 ವರ್ಷದ ವಾಚ್‍ಮ್ಯಾನ್‍ನಿಂದ ಅತ್ಯಾಚಾರ

    7ನೇ ಕ್ಲಾಸ್ ವಿದ್ಯಾರ್ಥಿನಿ ಮೇಲೆ 83 ವರ್ಷದ ವಾಚ್‍ಮ್ಯಾನ್‍ನಿಂದ ಅತ್ಯಾಚಾರ

    ಹೈದರಾಬಾದ್: 7ನೇ ಕ್ಲಾಸ್ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ 83 ವರ್ಷದ ವೃದ್ಧನನ್ನು ಬುಧವಾರದಂದು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

    ಇಲ್ಲಿನ ಕಾಪ್ರಾ ಪ್ರದೇಶದಲ್ಲಿ ಎರಡು ತಿಂಗಳ ಹಿಂದಷ್ಟೇ 6 ವರ್ಷದ ಬಾಲಕಿ ಮೇಲೆ 60 ವರ್ಷದ ವ್ಯಕ್ತಿ ಅತ್ಯಾಚಾರವೆಸಗಿದ್ದ ಬಗ್ಗೆ ವರದಿಯಾಗಿತ್ತು. ಇದೀಗ ಇದೇ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ.

    ಶಾಲೆಯ ವಾಚ್‍ಮ್ಯಾನ್ ಆಗಿ ಕೆಲಸ ಮಾಡ್ತಿದ್ದ ವೃದ್ಧ ಸತ್ಯನಾರಾಯಣ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಮಂಗಳವಾರದಂದು ಬಾಲಕಿ ಪೋಷಕರ ಬಳಿ ಹೇಳಿದ್ದಳು. ಈ ಹಿನ್ನೆಲೆಯಲ್ಲಿ ಪೋಷಕರು ಕುಶೈಗುಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

     

    ಬಂಧಿತ ಆರೋಪಿ ಹಲವು ತಿಂಗಳಿನಿಂದ ಶಾಲಾ ಆವರಣದಲ್ಲಿ ಸಾಕಷ್ಟು ಹುಡುಗಿಯರ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ರೈಲ್ವೆ ಸೇವೆಯಿಂದ ನಿವೃತ್ತಿಗೊಂಡಿದ್ದ ವೃದ್ಧನನ್ನು ಕೆಲವು ವರ್ಷಗಳ ಹಿಂದಷ್ಟೇ ವಾಚ್‍ಮ್ಯಾನ್ ಆಗಿ ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು. ಪೊಲೀಸರು ಇತರೆ ದೂರುಗಳ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

    ವಾಚ್‍ಮ್ಯಾನ್ ನಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಇತರೆ ದೂರುಗಳ ತನಿಖೆಯ ಭಾಗವಾಗಿ ಪೊಲೀಸರು 7 ಹುಡುಗಿಯರನ್ನು ವೈದ್ಯಕೀಯ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ಕಳಿಸಿದ್ದಾರೆ ಎಂದು ವರದಿಯಾಗಿದೆ.

    ಸೆಪ್ಟೆಂಬರ್‍ನಲ್ಲಿ ಇದೇ ಕಾಪ್ರಾದಲ್ಲಿ 6 ವರ್ಷದ ಬಾಲಕಿಯೊಬ್ಬಳು ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆಂದು ದೂರಿದ ನಂತರ 60 ವರ್ಷದ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಲಾಗಿತ್ತು.

    ಸಿದ್ದಯ್ಯ ಎಂಬಾತ ಬಾಲಕಿಯನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದ. ಬಾಲಕಿ ತೀವ್ರ ನೋವಿನಿಂದ ಅಳುತ್ತಾ ಮನೆಗೆ ಬಂದು ನಡೆದ ಘಟನೆಯನ್ನು ಪೋಷಕರಿಗೆ ವಿವರಿಸಿದ್ದಳು. ನಂತರ ಸ್ಥಳೀಯರು ವೃದ್ಧನನ್ನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು.

  • ವಿಡಿಯೋ: ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಕಾಲಿಗೆ ಬಿದ್ದು ಕ್ಷಮೆ ಕೇಳುವಂತೆ ಮಾಡಿದ ಇಂಡಿಗೋ ಸಿಬ್ಬಂದಿ

    ವಿಡಿಯೋ: ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಕಾಲಿಗೆ ಬಿದ್ದು ಕ್ಷಮೆ ಕೇಳುವಂತೆ ಮಾಡಿದ ಇಂಡಿಗೋ ಸಿಬ್ಬಂದಿ

     

    ಹೈದರಾಬಾದ್: ಅಸಭ್ಯವಾಗಿ ವರ್ತಿಸಿದ್ದಕ್ಕೆ ಯುವಕನನ್ನ ಇಂಡಿಗೋ ಏರ್ ಲೈನ್ಸ್ ಸಿಬ್ಬಂದಿಯೊಬ್ಬರು ತನ್ನ ಕಾಲಿಗೆ ಬಿದ್ದು ಕ್ಷಮೆ ಕೇಳುವಂತೆ ಮಾಡಿದ ಘಟನೆ ಹೈದರಾಬಾದ್‍ನಲ್ಲಿ ನಡೆದಿದ್ದು, ಇದರ ವಿಡಿಯ ಈಗ ವೈರಲ್ ಆಗಿದೆ.

    ಶನಿವಾರದಂದು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಮಹಿಳಾ ಸಿಬ್ಬಂದಿಯ ಕಾಲಿಗೆ ಬಿದ್ದ ಯುವಕ ಮದ್ಯಪಾನ ಮಾಡಿದ್ದ ಎಂದು  ಏರ್ ಲೈನ್ಸ್ ಆರೋಪಿಸಿದೆ. ಮಹಿಳೆ ಆತನಿಗೆ “ನನ್ನ ಕಾಲಿಗೆ ಬೀಳು” ಎಂದು ತೆಲುಗಿನಲ್ಲಿ ಹೇಳೋದನ್ನ ವಿಡಿಯೋದಲ್ಲಿ ಕಾಣಬಹುದು.

    ನಡೆದಿದ್ದೇನು: ಮಹಿಳೆ ತನ್ನ ಬೆಳಗ್ಗಿನ ಶಿಫ್ಟ್ ಕೆಲಸಕ್ಕೆ ರಿಪೋರ್ಟ್ ಮಾಡಿಕೊಳ್ಳಲು ಪಾರ್ಕಿಂಕ್‍ನಿಂದ ವಿಮಾನ ನಿಲ್ದಾಣದ ಒಳಗೆ ಹೋಗುತ್ತಿದ್ರು. ಈ ವೇಳೆ ಯುವಕ ಮತ್ತು ಆತನ ಗೆಳೆಯ ಆಕೆಯನ್ನು ಹಿಂಬಾಲಿಸಿದ್ದಾರೆ. ನಂತರ ಮಹಿಳೆ ಟ್ರಾಫಿಕ್ ಪೊಲೀಸ್‍ಗೆ ಈ ಬಗ್ಗೆ ದೂರು ನೀಡಿದ್ದಾರೆ. ಆಗ ಟ್ರಾಫಿಕ್ ಪೊಲೀಸ್ ಇಬ್ಬರನ್ನೂ ವಿಮಾನ ನಿಲ್ದಾಣದ ಪೊಲೀಸ್ ಪೋಸ್ಟ್ ಗೆ ಎಳೆದೊಯ್ದಿದ್ದಾರೆ. ಈ ವೇಳೆ ಒಬ್ಬಾತ, ನಿಮ್ಮ ಕಾಲಿಗೆ ಬೇಕದ್ರೂ ಬೀಳ್ತೀನಿ, ಬಿಟ್ಟುಬಿಡಿ ಎಂದು ಮಹಿಳೆಯ ಬಳಿ ಮನವಿ ಮಾಡಿಕೊಂಡಿದ್ದಾನೆ.

    ಇಬ್ಬರೂ ವಿದ್ಯಾರ್ಥಿಗಳು ಎಂದು ಗೊತ್ತಾದ ಬಳಿಕ ಮಹಿಳೆ ಯಾವುದೇ ದೂರು ದಾಖಲಿಸಲಿಲ್ಲ. ಆದರೆ ಸಾರ್ವನಿಕ ಸ್ಥಳದಲ್ಲಿ ಈ ರೀತಿ ಮಾಡಿದ್ದರಿಂದ ಅವರನ್ನ ಕೆಲವು ಗಂಟೆಗಳ ಕಾಲ ವಶದಲ್ಲಿರಿಸಿಕೊಂಡು ನಂತರ ಬಿಟ್ಟು ಕಳಿಸಲಾಯ್ತು ಎಂದು ಪೊಲೀಸ್ ಅಧಿಕಾರಿ ರಮೇಶ್ ನಾಯ್ಕ್ ಹೇಳಿದ್ದಾರೆ.

    ಮಹಿಳಾ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿದ್ದರಿಂದ ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಲಾಯ್ತು ಎಂದು ಇಂಡಿಗೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    https://www.youtube.com/watch?v=-d9rlBdRhpA

  • 5 ವರ್ಷದ ಬಾಲಕನಿಗೆ ಬಾಸುಂಡೆ ಬರುವಂತೆ ಹೊಡೆದ ಟೀಚರ್ ಬಂಧನ

    5 ವರ್ಷದ ಬಾಲಕನಿಗೆ ಬಾಸುಂಡೆ ಬರುವಂತೆ ಹೊಡೆದ ಟೀಚರ್ ಬಂಧನ

    ಹೈದರಾಬಾದ್: ಇಲ್ಲಿನ ಟರ್ನಾಕಾದಲ್ಲಿರೋ ಸೇಕ್ರೆಡ್ ಹಾರ್ಟ್ ಶಾಲೆಯ 5 ವರ್ಷದ ಬಾಲಕನಿಗೆ ಚಡಿ ಏಟು ಕೊಟ್ಟ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಯುಕೆಜಿ ಓದುತ್ತಿದ್ದ ಮೊಹಮ್ಮದ್ ಖಾಜಾ ಲತೀಫ್ ಟೀಚರ್ ಕೈಯಿಂದ ಹೊಡೆತ ತಿಂದ ಬಾಲಕ. ಶಿಕ್ಷಕಿಯನ್ನು ಕುಮುಧಿನಿ ಎಂದು ಗುರುತಿಸಲಾಗಿದ್ದು, ಸದ್ಯ ಈಕೆಯನ್ನು ಪೊಲೀಸರು ಬಂಧಿಸಿದ್ದಾರೆ.

    ಶಾಲೆಯಲ್ಲಿ ಟೀಚರ್ ಕೈಯಿಂದ ಹೊಡೆತ ತಿಂದ ಪರಿಣಾಮ ಬಾಲಕನ ಬೆನ್ನಲ್ಲಿ ಗಾಯಗಳಾಗಿದ್ದು, ಮನೆಗೆ ಬಂದು ತನ್ನ ಪೋಷಕರ ಬಳಿ ನಡೆದ ಘಟನೆಯನ್ನು ವಿವರಿಸಿದ್ದಾನೆ. ಮಗನ ದೂರನ್ನು ಆಲಿಸಿದ ಪೋಷಕರು ಶಿಕ್ಷಕಿ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಇನ್ಸ್ ಪೆಕ್ಟರ್ ವಿ.ಅಶೋಕ್ ರೆಡ್ಡಿ ತಿಳಿಸಿದ್ದಾರೆ.

    ಬೆಳಗ್ಗೆ ತರಗತಿ ನಡೆಯುತ್ತಿದ್ದ ವೇಳೆ ಬಾಲಕ ಲತೀಫ್ ಯಾವುದೋ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಸಹಪಾಠಿ ಜೊತೆ ಗಲಾಟೆ ಮಾಡಿದ್ದಾನೆ. ಅಲ್ಲದೆ ಆತನಿಗೆ ಕಚ್ಚಿದ್ದಾನೆ. ಹೀಗಾಗಿ ಶಿಕ್ಷಕಿ ಕುಮುಧಿನಿ ಕೋಲಿನಿಂದ ಬಾಲಕನಿಗೆ ಹೊಡೆದಿದ್ದಾರೆ ಅಂತ ಪೊಲೀಸರು ಹೇಳಿದ್ದಾರೆ.

    ಆದ್ರೆ ಬಾಲಕನ ವಿರುದ್ಧ ಶಿಕ್ಷಕಿಯ ಕ್ರೂರ ವರ್ತನೆಗೆ ಶಿಕ್ಷೆಯಾಗಬೇಕು ಎಂದು ಮಕ್ಕಳ ಹಕ್ಕುಗಳಿಗಾಗಿ ಕಾರ್ಯ ನಿರ್ವಹಿಸುತ್ತಿರೋ ಎನ್‍ ಜಿಒವೊಂದು ಪಟ್ಟು ಹಿಡಿದಿದೆ.

    ಸದ್ಯ ಬಾಲಕನ ತಾಯಿ ನೀಡಿದ ದೂರಿನನ್ವಯ ಐಪಿಸಿಯ ಸೂಕ್ತ ಸೆಕ್ಷನ್‍ಗಳಡಿ ಹಾಗೂ ಬಾಲ ನ್ಯಾಯ ಕಾಯ್ದೆಯಡಿ ಶಿಕ್ಷಕಿ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

  • ಆರತಕ್ಷತೆಯ ಸಂಭ್ರಮದಲ್ಲಿದ್ದ ನಾಗಾರ್ಜುನ್ ಕುಟುಂಬಕ್ಕೆ ಮರುದಿನವೇ ದೊಡ್ಡ ಶಾಕ್: ಹೊತ್ತಿ ಉರಿದ ಸ್ಟುಡಿಯೋ

    ಆರತಕ್ಷತೆಯ ಸಂಭ್ರಮದಲ್ಲಿದ್ದ ನಾಗಾರ್ಜುನ್ ಕುಟುಂಬಕ್ಕೆ ಮರುದಿನವೇ ದೊಡ್ಡ ಶಾಕ್: ಹೊತ್ತಿ ಉರಿದ ಸ್ಟುಡಿಯೋ

    ಹೈದರಾಬಾದ್: ನಗರದ ಬಂಜಾರ ಹಿಲ್ಸ್ ನಲ್ಲಿರುವ ತೆಲುಗು ನಟ ಅಕ್ಕಿನೇನಿ ನಾಗಾರ್ಜುನ್ ಒಡೆತನದ ಅನ್ನಪೂರ್ಣ ಸ್ಟುಡಿಯೋ ಆಕಸ್ಮಿಕವಾಗಿ ಬೆಂಕಿಗಾಹುತಿಯಾಗಿದೆ.

    ಸುಮಾರು 14 ಸಾವಿರ 800 ಚದರ ಅಡಿ ವಿಸ್ತೀರ್ಣ ಹೊಂದಿರುವ ಸ್ಟುಡಿಯೋ ಬೆಂಕಿಗಾಹುತಿ ಆಗಿದೆ. ಸೋಮವಾರ ಸಂಜೆ ಬೆಂಕಿ ಕಾಣಿಸಿಕೊಂಡ ಕೇವಲ ಎರಡು ಗಂಟೆಗಳಲ್ಲಿ ಅಗ್ನಿಶಾಮಕ ಸಿಬ್ಬಂದಿ ನಂದಿಸುವಲ್ಲಿ ಯಶಸ್ವಿಯಾದರೂ, ಬೆಂಕಿಯ ಕೆನ್ನಾಲಿಗೆಗೆ ಸ್ಟುಡಿಯೋದಲ್ಲಿದ್ದ ಎಲ್ಲಾ ಸಾಮಗ್ರಿಗಳು ಭಸ್ಮವಾಗಿವೆ.

    1975 ರಲ್ಲಿ ನಾಗಾರ್ಜುನ್ ತಂದೆ ನಾಗೇಶ್ವರ್ ರಾವ್ ಸ್ಟುಡಿಯೋವನ್ನು ನಿರ್ಮಾಣ ಮಾಡಿದ್ದರು. ಅಕ್ಕಿನೇನಿ ಕುಟುಂಬದವರ ಸಿನಿಮಾ ಸೇರಿದಂತೆ ಅನೇಕ ನಟರ ಸಿನಿಮಾಗಳ ಚಿತ್ರೀಕರಣ ನಡೆದಿವೆ.

    ಸಂಜೆ ಸುಮಾರು 6 ಗಂಟೆ ವೇಳೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಟುಡಿಯೋದಲ್ಲಿದ್ದ ಸಿಬ್ಬಂದಿ ಬೆಂಕಿ ನಂದಿಸುವ ಪ್ರಯತ್ನವನ್ನು ಮಾಡಿದ್ದಾರೆ. ಆದರೂ ಬೆಂಕಿ ಸ್ಟುಡಿಯೋದ ಎಲ್ಲ ಭಾಗಗಳಲ್ಲಿ ವ್ಯಾಪಿಸಿದ್ದು, ಭಯಭೀತರಾದ ಸಿಬ್ಬಂದಿ ಹೊರಗಡೆ ಓಡಿ ಬಂದಿದ್ದಾರೆ. ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

    ನಾಗಾರ್ಜುನ್ ಭಾನುವಾರ ಮಗನ ಆರತಕ್ಷತೆಯನ್ನು ಅದ್ಧೂರಿಯಾಗಿ ಮಾಡಿ ಸಂಭ್ರಮಿಸಿದ್ದರು. ನಾಗಾರ್ಜುನ ಕುಟುಂಬಕ್ಕೆ ಆರತಕ್ಷತೆಯ ಮರುದಿನವೇ ದೊಡ್ಡ ಶಾಕ್ ಎದುರಾಗಿದೆ. ಆರತಕ್ಷತೆಯ ಸಂಭ್ರಮದಲ್ಲಿ ನಿರತವಾಗಿದ್ದ ಅಕ್ಕಿನೇನಿ ಕುಟುಂಬಕ್ಕೆ ಈ ಘಟನೆ ಅತೀವ ನೋವುಂಟು ಮಾಡಿದೆ.

    https://twitter.com/BCC_movienews/status/930084452016910336

  • ಪಕ್ಕದ ಮನೆಯವಳ ಜೊತೆ ಗಂಡನ ಲವ್ವಿ ಡವ್ವಿ – ಕುದಿಯುವ ಬಿಸಿ ನೀರು ಹಾಕಿ ಪ್ರೇಯಸಿಯ ಕೊಂದ ಹೆಂಡತಿ!

    ಪಕ್ಕದ ಮನೆಯವಳ ಜೊತೆ ಗಂಡನ ಲವ್ವಿ ಡವ್ವಿ – ಕುದಿಯುವ ಬಿಸಿ ನೀರು ಹಾಕಿ ಪ್ರೇಯಸಿಯ ಕೊಂದ ಹೆಂಡತಿ!

    ಹೈದರಾಬಾದ್: ತಾಳಿ ಕಟ್ಟಿದ ಗಂಡನ ಇನ್ನೊಂದು ಪ್ರೇಮದಾಟ ತಿಳಿದ ಪತ್ನಿಯೊಬ್ಬಳು ಗಂಡನ ಪ್ರಿಯತಮೆಯನ್ನು ಕೊತ ಕೊತ ಕುದಿಯುವ ಬಿಸಿ ನೀರು ಸುರಿದು ಹತ್ಯೆ ಮಾಡಿದ್ದಾಳೆ. ಉಪ್ಪಾರಪಳ್ಳಿಯ ಸತ್ಸಂಗ ವಿಹಾರ ಕಾಲೋನಿಯಲ್ಲಿ ನವೆಂಬರ್ 7ರಂದು ಈ ಘಟನೆ ನಡೆದಿದ್ದು, ಸುಟ್ಟ ಗಾಯಗಳೊಂದಿಗೆ ಮಹಿಳೆಯನ್ನು ಒಸ್ಮಾನಿಯಾ ಆಸ್ಪತೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಕಳೆದ ಶನಿವಾರ ಮೃತಪಟ್ಟಿದ್ದಾಳೆ.

    ಘಟನೆ ವಿವರ: ಉಪ್ಪಾರಪಳ್ಳಿಯ ಸತ್ಸಂಗ ವಿಹಾರ ಕಾಲೋನಿಯಲ್ಲಿ ಛತ್ತೀಸ್ ಗಢ ಮೂಲದ ರಾಜು ಮತ್ತು ರೆಹಮತ್ ಮದುವೆಯಾಗಿ ವಾಸ ಮಾಡುತ್ತಿದ್ದರು. ಇಬ್ಬರೂ ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು. ಒಂದು ಬಾರಿ ರೆಹಮತ್ ತನ್ನ ತವರು ಮನೆಗೆ ತೆರಳಿದ್ದಾಗ ಆಕೆಯ ಪತಿಗೆ ಪಕ್ಕದ ಮನೆಯ 25 ವರ್ಷದ ಚಂದ್ರಿಕಾಳ ಪರಿಚಯವಾಗಿದೆ. ರೆಹಮತ್ ವಾಪಸ್ ಬಂದರೂ ಇವರಿಬ್ಬರ ಪ್ರಣಯ, ಚಕ್ಕಂದ ನಿಂತಿರಲಿಲ್ಲ. ಇದರಿಂದ ರೆಹಮತ್ ತನ್ನ ಪತಿ ರಾಜು ಹಾಗೂ ಚಂದ್ರಿಕಾ ಮೇಲೆ ತೀವ್ರ ಸಿಟ್ಟಾಗಿದ್ದಳು.

    ನವೆಂಬರ್ 7ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ರೆಹಮತ್ ಚಂದ್ರಿಕಾಳನ್ನು ಮನೆಗೆ ಆಹ್ವಾನಿಸುತ್ತಾಳೆ. ಚಂದ್ರಿಕಾ ಮೇಲೆ ಪ್ರತೀಕಾರ ಮಾಡಲೆಂದೇ ಸಿದ್ಧಳಾಗಿದ್ದ ರೆಹಮತ್ ಆಗಲೇ ಕೊತ ಕೊತ ಕುದಿಯುವ ಬಿಸಿ ನೀರು ರೆಡಿ ಮಾಡಿಟ್ಟಿದ್ದಳು.

    ಚಂದ್ರಿಕಾ ಮನೆಯೊಳಗೆ ಬಂದು ಕೂರುತ್ತಿದ್ದಂತೆಯೇ ರೆಹಮತ್ ಬಿಸಿ ನೀರನ್ನು ಚಂದ್ರಿಕಾ ಮೇಲೆ ಸುರಿದಿದ್ದಾಳೆ. ಇದರಿಂದಾಗಿ ಚಂದ್ರಿಕಾ ಮೈಯೆಲ್ಲಾ ಸುಟ್ಟು ಹೋಗಿತ್ತು. ಕಿರುಚಾಟ ಕೇಳಿ ಬಂದ ಕಾಲೋನಿ ನಿವಾಸಿಗಳು ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಚಿಂತಾಜನಕ ಸ್ಥಿತಿಯಲ್ಲಿದ್ದ ಚಂದ್ರಿಕಾ ಶನಿವಾರ ಸಾವನ್ನಪ್ಪಿದ್ದಾಳೆ. ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

  • ಪೊಲೀಸ್ ಅಧಿಕಾರಿಗೆ ಮಹಿಳಾ ಗೃಹರಕ್ಷಕಿಯಿಂದ ಮಸಾಜ್!

    ಪೊಲೀಸ್ ಅಧಿಕಾರಿಗೆ ಮಹಿಳಾ ಗೃಹರಕ್ಷಕಿಯಿಂದ ಮಸಾಜ್!

    ಹೈದರಾಬಾದ್: ತೆಲಂಗಾಣದ ಪೊಲೀಸ್ ಅಧಿಕಾರಿಯೊಬ್ಬರು ಮಹಿಳಾ ಗೃಹರಕ್ಷಕಿಯಿಂದ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.

    ವಿಡಿಯೋದಲ್ಲಿ ಸಮವಸ್ತ್ರದಲ್ಲಿರುವ ಗೃಹರಕ್ಷಕ ದಳದ ಮಹಿಳೆಯು ತನ್ನ ಬಾಸ್ ಗೆ ಮಸಾಜ್ ಮಾಡುತ್ತಿದ್ದಾರೆ. ಅವರು ಕಣ್ಣು ಮುಚ್ಚಿಕೊಂಡು ಮಸಾಜ್ ಮಾಡಿಸಿಕೊಳ್ಳುತ್ತಿದ್ದು, ಈ ವ್ಯಕ್ತಿಯ ಬಗ್ಗೆ ತನಿಖೆ ನಡೆಸಿದ್ದಾಗ ಅವರು ಗಡ್ವಾಲ್ ನ ಸಹಾಯಕ ಸಬ್ ಇನ್ಸ್ ಪೆಕ್ಟರ್ ಹಾಸನ್ ಎಂದು ತಿಳಿದುಬಂದಿದೆ.

    ಕೆಲ ದಿನಗಳ ಹಿಂದೆ ಇನ್ಸ್ ಪೆಕ್ಟರ್ ಒಬ್ಬರು ತಮ್ಮ ಮನೆಯಲ್ಲೇ ಪುರುಷ ಪೇದೆಯಿಂದ ಮಸಾಜ್ ಮಾಡಿಕೊಂಡಿದ್ದರು. ಮಸಾಜ್ ಮಾಡಿಕೊಳ್ಳುತ್ತಿರುವ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

    https://www.youtube.com/watch?time_continue=1&v=TVNXkr9ZW1w

  • 1 ತಿಂಗಳ ನಂತರ ಅದ್ಧೂರಿಯಾಗಿ ನಡೆದ ನಾಗ ಚೈತನ್ಯ-ಸಮಂತಾ ಆರತಕ್ಷತೆ

    1 ತಿಂಗಳ ನಂತರ ಅದ್ಧೂರಿಯಾಗಿ ನಡೆದ ನಾಗ ಚೈತನ್ಯ-ಸಮಂತಾ ಆರತಕ್ಷತೆ

    ಹೈದರಾಬಾದ್: ಟಾಲಿವುಡ್ ನ ಖ್ಯಾತ ಜೋಡಿ ನಾಗ ಚೈತನ್ಯ ಹಾಗೂ ಸಮಂತಾ ಜೋಡಿ ಈಗಾಗಲೇ ವಿವಾಹ ನಡೆದು ತಿಂಗಳು ಕಳೆದಿದೆ. ಆದರೆ ಭಾನುವಾರದಂದು ಅದ್ಧೂರಿಯಾಗಿ ತಮ್ಮ ಆರತಕ್ಷತೆ ಕಾರ್ಯವ್ನನು ಆಚರಿಸಿಕೊಂಡಿದ್ದಾರೆ.

    ಅಕ್ಟೋಬರ್ 6 ರಂದು ಈ ಜೋಡಿ ಗೋವಾದ ಡಬ್ಲ್ಯು ರೆಸಾರ್ಟ್ ನಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಬರೋಬ್ಬರಿ ಒಂದು ತಿಂಗಳ ನಂತರ ಮುತ್ತಿನ ನಗರಿ ಹೈದರಾಬಾದ್ ನಲ್ಲಿರುವ ಎನ್-ಕನ್ವೆಷನ್ ಸೆಂಟರ್ ನಲ್ಲಿ ಆರತಕ್ಷತೆ ನಡೆದಿದೆ.

    ನಾಗ ಚೈತನ್ಯ ಅವರು ಸುಮಾರು 2 ವಾರಗಳಿಂದ ಆರತಕ್ಷತೆಗಾಗಿ ಕಾಯುತ್ತಿದ್ದು, ಸಮಂತಾ ಅಕ್ಕಿನೇನಿ ಅವರು ತಮಿಳಿನ ಸಿನಿಮಾದ ಶೂಟಿಂಗ್‍ನಲ್ಲಿ ಬ್ಯೂಸಿ ಇದ್ದರು. ಜೊತೆಗೆ ಮಾವ ನಾಗರ್ಜುನ ಅವರ ಜೊತೆ ಅಭಿನಯಿಸಿರುವ `ರಾಜು ಗಾರಿ ಗಾಧಿ-2′ ಸಿನಿಮಾದ ಪ್ರಚಾರದ ಕಾರ್ಯದಲ್ಲಿ ತೊಡಗಿದ್ದರು. ಈ ಎಲ್ಲಾ ಕಾರಣಗಳಿಂದ ಆರತಕ್ಷತೆ ತಡವಾಗಿ ನಡೆದಿದೆ. ಇನ್ನೂ ಮದುವೆ ಆಯಿತು, ಆರತಕ್ಷತೆನೂ ನಡೆದಿದೆ. ಆರತಕ್ಷತೆ ಬಳಿಕ ಚೆನ್ನೈ ನಲ್ಲಿರುವ ಚೈತನ್ಯರ ತಾಯಿಯ ಮನೆಗೆ ಭೇಟಿ ನೀಡಲಿದ್ದಾರೆ.

    ಭಾನುವಾರ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಸಮಂತಾ-ನಾಗಚೈತನ್ಯ ಜೋಡಿಗೆ ಟಾಲಿವುಡ್‍ನ ಗಣ್ಯರು ಬಂದು ಶುಭಹಾರೈಸಿದ್ದಾರೆ. ಆರತಕ್ಷತೆ ಕಾರ್ಯಕ್ರಮದಲ್ಲಿ ನಾಗಚೈತನ್ಯ ಸ್ನೇಹಿತ ನಟ ರಾಮಚರಣ್ ತೇಜ, ನಿರ್ದೇಶಕ ಎಸ್‍ಎಸ್ ರಾಜಮೌಳಿ, ನಂದಮೂರಿ ಹರಿಕೃಷ್ಣ, ನಟ ಚಿರಂಜೀವಿ, ವೆಂಕಟೇಶ್ ಸೇರಿದಂತೆ ಅನೇಕ ನಟರು ಆಗಮಿಸಿದ್ದರು. ಒಟ್ಟಿನಲ್ಲಿ ಆರತಕ್ಷತೆಯಲ್ಲಿ ಸಿನಿಮಾ ತಾರೆಯರ ರಂಗಿನಿಂದ ಮಿಂಚುತ್ತಿತ್ತು.